Tag: Bengaluru Metro

  • ಯೆಲ್ಲೋ ಮೆಟ್ರೋ ಸವಾರರಿಗೆ ಗುಡ್‌ನ್ಯೂಸ್ – ಶೀಘ್ರವೇ 15 ನಿಮಿಷಕ್ಕೊಂದು ರೈಲು ಸಂಚಾರ

    ಯೆಲ್ಲೋ ಮೆಟ್ರೋ ಸವಾರರಿಗೆ ಗುಡ್‌ನ್ಯೂಸ್ – ಶೀಘ್ರವೇ 15 ನಿಮಿಷಕ್ಕೊಂದು ರೈಲು ಸಂಚಾರ

    -ಇದೇ ವಾರದಿಂದ ಹೊಸ ರೈಲು ಟೆಸ್ಟಿಂಗ್ ಆರಂಭ ಸಾಧ್ಯತೆ

    ಬೆಂಗಳೂರು: ಯೆಲ್ಲೋ ಮಾರ್ಗ ಮೆಟ್ರೋ (Yellow Metro) ಓಪನ್ ಆಗಿ ಒಂದು ವಾರ ಕಳೆದಿದೆ. ಆದರೆ ಅರ್ಧಗಂಟೆಗೊಂದು ರೈಲು ಸಂಚಾರವಿರುವ ಕಾರಣ ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿದೆ. ಶೀಘ್ರವೇ ಈ ಸಮಸ್ಯೆಗೆ ಮುಕ್ತಿ ಸಿಗಲಿದ್ದು, 15 ನಿಮಿಷಕ್ಕೊಂದು ರೈಲು ಸಂಚರಿಸಲಿವೆ.

    ಕಳೆದೊಂದು ವಾರದ ಹಿಂದಷ್ಟೇ ಬಹುನಿರೀಕ್ಷಿತ ಯೆಲ್ಲೋ ಲೈನ್ ಮೆಟ್ರೋ ಮಾರ್ಗ ಓಪನ್ ಆಗಿದೆ. ಮಾರ್ಗ ಓಪನ್ ಆದರೂ ಪೂರ್ಣ ಪ್ರಮಾಣದ ರೈಲುಗಳು ಬರದಿರುವ ಕಾರಣ ಅರ್ಧ ಗಂಟೆಗೊಮ್ಮೆ ಸಿಗುವ ರೈಲಿನಲ್ಲೇ ಸವಾರರು ಹೈರಾಣಾಗಿ ಓಡಾಟ ಮಾಡುತ್ತಿದ್ದಾರೆ. ಹೀಗಾಗಿ ಈ ಮಾರ್ಗದ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಗುಡ್‌ನ್ಯೂಸ್ ನೀಡಿದ್ದು, ಶೀಘ್ರದಲ್ಲೇ ಹೆಚ್ಚುವರಿ ರೈಲಿನ ಟೆಸ್ಟಿಂಗ್ ಆರಂಭಿಸಲಿದೆ.ಇದನ್ನೂ ಓದಿ: ಥಮಾ ಬಗ್ಗೆ ಬಿಗ್ ಅಪ್ ಡೇಟ್ ಕೊಟ್ಟ ರಶ್ಮಿಕಾ ಮಂದಣ್ಣ

    ಹೌದು. ಸದ್ಯ ಈ ಮಾರ್ಗದಲ್ಲಿ ಮೂರು ಸೆಟ್ ರೈಲು ಮಾತ್ರ ಓಡಾಟ ಮಾಡುತ್ತಿರುವ ಕಾರಣ ಪ್ರತಿ 25 ನಿಮಿಷಕ್ಕೊಂದು ರೈಲು ಸಂಚರಿಸುತ್ತಿವೆ. ಇದರಿಂದಲೇ ಈ ಮಾರ್ಗದಲ್ಲಿ ಅತಿ ಹೆಚ್ಚು ಜನಸಂದಣಿ ಉಂಟಾಗುತ್ತಿದೆ. ಸದ್ಯ ನಾಲ್ಕನೇ ರೈಲಿನ ಆರು ಬೋಗಿಗಳು ಹೆಬ್ಬಗೋಡಿ ಡಿಪೋ ತಲುಪಿವೆ. ರೈಲನ್ನು ಸ್ಥಿರ ಪರೀಕ್ಷೆಗಳಿಗಾಗಿ ಇನ್ಸ್ಪೆಕ್ಷನ್ ಬೇಲೈನ್‌ಗೆ ಕೊಂಡೊಯ್ಯಲಾಗಿದೆ. ಇದೇ ವಾರ ಡೈನಾಮಿಕ್ ಪರೀಕ್ಷೆಗಾಗಿ ಇದನ್ನು ಹಳದಿ ಮಾರ್ಗದ ಹಳಿಗಳಲ್ಲಿ ಓಡಿಸುವ ಸಾಧ್ಯತೆ ಇದೆ. ಕನಿಷ್ಠ ಎರಡು ವಾರಗಳ ಕಾಲ ಹೊಸ ರೈಲಿನ ಪರೀಕ್ಷೆಗೆ ಸಮಯ ಬೇಕಿದೆ. ಟ್ರ‍್ಯಾಕ್ ಪರೀಕ್ಷೆ ಸಂಪೂರ್ಣವಾಗಿ ಯಶಸ್ಸು ಕಂಡರೆ ಮುಂದಿನ ವಾರಂತ್ಯಕ್ಕೆ ಹೊಸ ರೈಲು ಕೂಡ ಮಾರ್ಗಕ್ಕೆ ಇಳಿಯುವ ಸಾಧ್ಯತೆ ಇದೆ.

    ಈ ಮೂಲಕ ಪ್ರತಿ 15 ನಿಮಿಷಕ್ಕೊಂದು ರೈಲು ಸಂಚರಿಸಲಿದ್ದು, ರೈಲಿಗೆ ಕಾಯುವ ಪ್ರಯಾಣಿಕರ ಸಮಸ್ಯೆಗೆ ಬ್ರೇಕ್ ಬೀಳಲಿದೆ. ಸಮಯ ಕಡಿತವಾದರೆ ಪ್ರಯಾಣಿಕರ ಸಂಖ್ಯೆ ಕೂಡ ಏರಿಕೆಯಾಗುವ ಸಾಧ್ಯತೆಯಿದೆ.ಇದನ್ನೂ ಓದಿ: ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ – ಮತ್ತಿಬ್ಬರ ಬಂಧನ, ಒಟ್ಟು 9 ಯುವಕರು ಅರೆಸ್ಟ್

  • ಸಾಲು ಸಾಲು ರಜೆ – ಸೋಮವಾರ ಬೆಳಿಗ್ಗೆ 5ರಿಂದ್ಲೇ ಯೆಲ್ಲೋ ಮೆಟ್ರೋ ಆರಂಭ

    ಸಾಲು ಸಾಲು ರಜೆ – ಸೋಮವಾರ ಬೆಳಿಗ್ಗೆ 5ರಿಂದ್ಲೇ ಯೆಲ್ಲೋ ಮೆಟ್ರೋ ಆರಂಭ

    ಬೆಂಗಳೂರು: ಸಾಲು ಸಾಲು ರಜೆಯಿದ್ದ ಹಿನ್ನೆಲೆ ಜನದಟ್ಟಣೆ ಜಾಸ್ತಿಯಾಗುವ ಸಾಧ್ಯತೆಯಿದ್ದು, ಹಳದಿ ಮಾರ್ಗದ ಮೆಟ್ರೋ (Yellow Metro) ಸೋಮವಾರ (ಆ.18) ಬೆಳಿಗ್ಗೆ 5 ಗಂಟೆಯಿಂದಲೇ ಕಾರ್ಯಾರಂಭಿಸಲಿದೆ.ಇದನ್ನೂ ಓದಿ: ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು – ಮತ್ತೆ ಒಂದಾಗೋಕೆ ಬಯಸಿದ ಪತ್ನಿ ಸಪ್ನ

    ಶುಕ್ರವಾರದಿಂದ ಭಾನುವಾರದವರೆಗೆ ಮೂರು ದಿನ ಸಾಲು ಸಾಲು ರಜೆಯಿದ್ದ ಹಿನ್ನೆಲೆ ಹೆಚ್ಚಿನವರು ಊರಿಗೆ ತೆರಳಿರುತ್ತಾರೆ. ಈ ಹಿನ್ನೆಲೆ ಸೋಮವಾರ ಬೆಳಿಗ್ಗೆ ಮೆಟ್ರೋ ನಿಲ್ದಾಣಗಳಲ್ಲಿ ಜನದಟ್ಟಣೆ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಬೆಳಿಗ್ಗೆ 6:30ಕ್ಕೆ ಪ್ರಾರಂಭವಾಗುವ ಯೆಲ್ಲೋ ಮೆಟ್ರೋ ಸೋಮವಾರ ಬೆಳಿಗ್ಗೆ 5 ಗಂಟೆಯಿಂದಲೇ ಪ್ರಾರಂಭವಾಗಲಿದೆ. ಮೊದಲ ಮೆಟ್ರೋ ರೈಲು ಸೇವೆ ಆರ್.ವಿ ರಸ್ತೆಯಿಂದ ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ನಿಲ್ದಾಣಗಳಿಂದ ಹೊರಡಲಿವೆ.

    ಪ್ರಯಾಣಿಕರು ತಮ್ಮ ಪ್ರಯಾಣವನ್ನು ಸುಗಮಗೊಳಿಸಲು ಈ ಬೆಳಗಿನ ಸೇವೆಯ ಲಾಭವನ್ನು ಪಡೆದುಕೊಳ್ಳಬೇಕು. ಇನ್ನೂ ಈ ಹಿಂದೆ ಘೋಷಿಸಿದಂತೆ, ನೇರಳೆ ಮಾರ್ಗ ಮತ್ತು ಹಸಿರು ಮಾರ್ಗದ ಮೆಟ್ರೋಗಳು ಸೋಮವಾರದಂದು ಸಾಮಾನ್ಯವಾಗಿ ಬೆಳಿಗ್ಗೆ 4:15 ರಿಂದಲೇ ಕಾರ್ಯನಿರ್ವಹಿಸುತ್ತವೆ. ಹಳದಿ ಮಾರ್ಗದ ಮೆಟ್ರೋ ಮಂಗಳವಾರ (ಆ.19) ಎಂದಿನಂತೆ ಬೆಳಿಗ್ಗೆ 6:30ಕ್ಕೆ ಕಾರ್ಯರಂಭಿಸಲಿದೆ ಎಂದು ಬಿಎಂಆರ್‌ಸಿಎಲ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.ಇದನ್ನೂ ಓದಿ: ರಿಸಲ್ಟ್‌ ಪ್ರಕಟವಾದ ಬಳಿಕ ದೂರು ದಾಖಲಿಸದೇ ಆರೋಪ ಮಾಡೋದು ಸಂವಿಧಾನಕ್ಕೆ ಮಾಡೋ ಅವಮಾನ: ಚುನಾವಣಾ ಆಯೋಗ

  • ಬಹುನಿರೀಕ್ಷಿತ ಯೆಲ್ಲೋ ಲೈನ್ ಮೆಟ್ರೋ ಇಂದಿನಿಂದ ಸಾರ್ವಜನಿಕ ಸಂಚಾರಕ್ಕೆ ಮುಕ್ತ

    ಬಹುನಿರೀಕ್ಷಿತ ಯೆಲ್ಲೋ ಲೈನ್ ಮೆಟ್ರೋ ಇಂದಿನಿಂದ ಸಾರ್ವಜನಿಕ ಸಂಚಾರಕ್ಕೆ ಮುಕ್ತ

    – ಆರ್‌ವಿ ರೋಡ್ ಟು ಬೊಮ್ಮಸಂದ್ರ ಮಾರ್ಗದ ಮೆಟ್ರೋ

    ಬೆಂಗಳೂರು: ಸಿಲಿಕಾನ್ ಸಿಟಿ (Silicon City) ಜನರ ಸಂಚಾರ ಜೀವನಾಡಿಯಾಗಿರುವ ನಮ್ಮ ಮೆಟ್ರೋದ (Namma Metro) ಹಳದಿ ಮಾರ್ಗ (Yellow Line) ಇಂದಿನಿಂದ ಕಾರ್ಯಾರಂಭಿಸಿದೆ. ಭಾನುವಾರ (ಆ.10) ಪ್ರಧಾನಿ ಮೋದಿಯವರಿಂದ (PM Modi) ಚಾಲನೆಯಾದ ಬಳಿಕ ಸೋಮವಾರ (ಆ.11) ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದೆ.

    ಬೆಂಗಳೂರಿನ ಟ್ರಾಫಿಕ್ ಜಂಗುಳಿಗೆ ಕೊಂಚ ಬ್ರೇಕ್ ಹಾಕಿರೋ ರೈಲುಗಾಡಿಯೇ ನಮ್ಮ ಮೆಟ್ರೋ. ಇದೀಗ ಸುಗಮ ಸಂಚಾರದ ಮತ್ತೊಂದು ಕನಸು ನನಸಾಗಿದೆ. ಭಾನುವಾರ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ಅದರ ಬೆನ್ನಲ್ಲೇ ಸೋಮವಾರ ಬೆಳಿಗ್ಗೆ 6:30ರಿಂದಲೇ ಮೊದಲ ಮೆಟ್ರೋ ರೈಲು ಕಾರ್ಯಾಚರಣೆ ಆರಂಭಿಸಿದೆ.ಇದನ್ನೂ ಓದಿ: ಮೆಟ್ರೋ ಕ್ರೆಡಿಟ್‌ ವಾರ್‌ – ಕೇಂದ್ರದ್ದೆಷ್ಟು? ರಾಜ್ಯದ್ದೆಷ್ಟು?

    ಬೆಳಿಗ್ಗೆ 6:30ಕ್ಕೆ ಬೊಮ್ಮಸಂದ್ರದಿಂದ ಮೊದಲ ಮೆಟ್ರೋ ಪ್ರಾರಂಭವಾದರೆ, ಬೆಳಿಗ್ಗೆ 7:10ಕ್ಕೆ ಆರ್‌ವಿ ರಸ್ತೆಯಿಂದ ಮೊದಲ ಮೆಟ್ರೋ ಆರಂಭವಾಗಿದೆ. ಪ್ರತಿ 25 ನಿಮಿಷಕ್ಕೊಂದರಂತೆ ಮೆಟ್ರೋ ರೈಲು ಆರ್‌ವಿ ರಸ್ತೆ ಟು ಬೊಮ್ಮಸಂದ್ರದವರೆಗೆ ಸಂಚರಿಸಲಿವೆ. ರಾತ್ರಿ 10:42ಕ್ಕೆ ಬೊಮ್ಮಸಂದ್ರದಿಂದ ಹಾಗೂ ರಾತ್ರಿ 11:55ಕ್ಕೆ ಆರ್‌ವಿ ರಸ್ತೆಯಿಂದ ಕೊನೆಯ ರೈಲು ಸಂಚರಿಸಲಿದೆ. ಇನ್ನೂ ಪ್ರತಿದಿನ ರಾತ್ರಿ 10 ಗಂಟೆ ನಂತರ ರೈಲು ಸಂಚಾರದ ಅವಧಿ ಕಡಿಮೆಯಾಗಲಿದೆ.

    ಪ್ರತಿ ಭಾನುವಾರದಂದು ಬೆಳಿಗ್ಗೆ 6:30ರ ಬದಲಾಗಿ 7ಕ್ಕೆ ಹಳದಿ ಮಾರ್ಗದ ಮೆಟ್ರೋ ಪ್ರಾರಂಭವಾಗಲಿದ್ದು, ಈ ನಿಲ್ದಾಣಗಳ ನಡುವಿನ ಪ್ರಯಾಣ ದರ 60 ರೂ. ನಿಗದಿಪಡಿಸಲಾಗಿದೆ.

    ಐಪೋನ್ ಬಳಸುವ ಗ್ರಾಹಕರು ಆಪಲ್ ಸ್ಟೋರ್‌ನಿಂದ ಮೆಟ್ರೋ ಅಧಿಕೃತ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ಕ್ಯೂಆರ್ ಟಿಕೆಟ್ ಖರೀದಿಸಲು ಅವಕಾಶವಿದೆ. ಒಟ್ಟು 16 ಮೆಟ್ರೋ ನಿಲ್ದಾಣಗಳು ಈ ಮಾರ್ಗದ ಅಡಿಯಲ್ಲಿವೆ. ಇನ್ನೂ ಸದ್ಯಕ್ಕೆ ಮೂರು ರೈಲು ಸೆಟ್‌ಗಳು ಸಂಚರಿಸುತ್ತಿದ್ದು, ಹೆಚ್ಚು ರೈಲು ಸೆಟ್‌ಗಳು ಸೇವೆಗೆ ಸೇರ್ಪಡೆಯಾಗುತ್ತಿದ್ದಂತೆ ರೈಲು ಸಂಚಾರದ ಅವಧಿ ಹೆಚ್ಚಳ ಮಾಡಲಾಗುವುದೆಂದು ಬಿಎಂಆರ್‌ಸಿಎಲ್ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

    ಒಟ್ಟಿನಲ್ಲಿ ಬೊಮ್ಮಸಂದ್ರ, ಎಲೆಕ್ಟ್ರಾನಿಕ್ ಸಿಟಿ ಭಾಗದ ಟ್ರಾಫಿಕ್ ಕಿರಿಕಿರಿಗೆ ಈ ಯೆಲ್ಲೋ ಲೈನ್ ಮೆಟ್ರೋ ಬ್ರೇಕ್ ಹಾಕುವ ನಿರೀಕ್ಷೆಯಿದೆ.ಇದನ್ನೂ ಓದಿ: ಶಕ್ತಿ ಯೋಜನೆ ಉಲ್ಲೇಖಿಸಿ ಮೋದಿ ಸಿಡಿಸಿದ ಚಟಾಕಿಗೆ ನಕ್ಕಿದ ಸಿಎಂ, ಡಿಸಿಎಂ

     

  • ಸದ್ಯಕ್ಕಿಲ್ಲ ಯೆಲ್ಲೊ ಲೈನ್ ಮೆಟ್ರೋ – ಸಿಗ್ನಲಿಂಗ್ ಸಮಸ್ಯೆಯಿಂದ ದಿನಾಂಕ ಮುಂದೂಡಿದ BMRCL

    ಸದ್ಯಕ್ಕಿಲ್ಲ ಯೆಲ್ಲೊ ಲೈನ್ ಮೆಟ್ರೋ – ಸಿಗ್ನಲಿಂಗ್ ಸಮಸ್ಯೆಯಿಂದ ದಿನಾಂಕ ಮುಂದೂಡಿದ BMRCL

    ಬೆಂಗಳೂರು: ಬಹುನೀರಿಕ್ಷಿತ ಯಲ್ಲೋ ಲೈನ್ ಮೆಟ್ರೋ (Yellow Line Metro) ಸಂಚಾರಕ್ಕೆ ಇದೀಗ ಮತ್ತೆ ಅಡ್ಡಿ ಉಂಟಾಗಿದ್ದು, ಸಿಗ್ನಲಿಂಗ್‌ನಲ್ಲಿ ಸಮಸ್ಯೆಯಿಂದಾಗಿ ಉದ್ಘಾಟನೆ ಸದ್ಯಕ್ಕಿಲ್ಲ ಎಂದು ಬಿಎಂಆರ್‌ಸಿಎಲ್ (BMRCL) ಸ್ಪಷ್ಟಪಡಿಸಿದೆ.

    ಆರ್‌ವಿ ರೋಡ್‌ನಿಂದ ಬೊಮ್ಮಸಂದ್ರದವರೆಗೆ ಸಂಚರಿಸುವ ಯಲ್ಲೋ ಮಾರ್ಗದ ಮೆಟ್ರೋ ಇದೇ ಜೂನ್‌ಗೆ ಓಪನ್ ಆಗುತ್ತದೆ ಎಂದು ನಿರೀಕ್ಷೆಯಲ್ಲಿದ್ದ ಜನರಿಗೆ ಇದೀಗ ಮತ್ತೆ ನಿರಾಸೆಯುಂಟಾಗಿದೆ. ಸಿಗ್ನಲಿಂಗ್‌ನಲ್ಲಿ ಸಮಸ್ಯೆಯಿಂದಾಗಿ ಇದನ್ನು ಸರಿಪಡಿಸಲು ತಿಂಗಳು ಬೇಕು. ಹೀಗಾಗಿ ಮಾರ್ಗ ಸದ್ಯಕ್ಕೆ ಓಪನ್ ಆಗಲ್ಲ ಎಂದಿದೆ.ಇದನ್ನೂ ಓದಿ: ಭಾರತ ಜಲಯುದ್ಧ; ಇತ್ತ ಅಫ್ಘಾನಿಸ್ತಾನದಿಂದಲೂ ಶಾಕ್‌ ಆತಂಕ, ಪಾಕ್‌ನಲ್ಲಿ ಚೀನಾ ಅಣೆಕಟ್ಟೆ ನಿರ್ಮಾಣ ಯಾಕೆ?

    ಹೌದು, ಅನೇಕ ವಿಳಂಬಗಳ ಬಳಿಕ ಹಳದಿ ಮಾರ್ಗದ ಮೆಟ್ರೋವನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ಲೋಕಾರ್ಪಣೆ ಮಾಡಲು ತಯಾರಿ ನಡೆಸಿತ್ತು. ಮೂರನೇ ರೈಲಿನ ತಪಾಸಣೆ ಕೂಡ ಈಗಾಗಲೇ ಪೂರ್ಣಗೊಂಡಿದೆ. ಮೆಟ್ರೋ ರೋಲಿಂಗ್ ಸ್ಟಾಕ್‌ಗೂ ರೈಲ್ವೆ ಮಂಡಳಿ ಒಪ್ಪಿಗೆ ನೀಡಿದೆ. ಅಂತಿಮ ಹಂತದ ಪರಿಶೀಲನೆಗಾಗಿ ಶೀಘ್ರವೇ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು ಕೂಡ ಬರಬೇಕಿತ್ತು. ಈ ಮಧ್ಯೆ ಉಂಟಾಗಿರುವ ಸಿಗ್ನಲಿಂಗ್ ಸಮಸ್ಯೆಯಿಂದ ಈ ಬಾರಿ ಮತ್ತೆ ಮಾರ್ಗ ಉದ್ಘಾಟನೆ ಮುಂದೂಡಿಕೆಯಾಗಿದೆ.

    ಹಳದಿ ಮಾರ್ಗದ ಸಿಗ್ನಲಿಂಗ್ ಕಾರ್ಯದ ಗುತ್ತಿಗೆಯನ್ನು ವಹಿಸಿಕೊಂಡಿರುವ ಸೀಮೆನ್ಸ್ ಇಂಡಿಯಾ ಲಿಮಿಟೆಡ್ ಇತ್ತೀಚೆಗೆ ಸಿಗ್ನಲಿಂಗ್ ವ್ಯವಸ್ಥೆಯ ಪರಿಶೀಲನೆ ನಡೆಸಿತ್ತು. ಆ ಸಂದರ್ಭದಲ್ಲಿ, ಸಾಫ್ಟ್ವೇರ್ ಡೇಟಾಸೆಟ್‌ಗಳಲ್ಲಿ ದೋಷ ಕಂಡುಬಂದಿತ್ತು. ಇದೇ ಕಾರಣದಿಂದ ಕಾರ್ಯಾಚರಣೆಗೆ ಅನುಮೋದನೆ ನೀಡಲಾಗಿಲ್ಲ. ಹಳದಿ ಮಾರ್ಗದ ಮೆಟ್ರೋ ರೈಲು ಚಲನೆಯನ್ನು ಸಂಪೂರ್ಣವಾಗಿ ಸಾಫ್ಟ್‌ವೇರ್‌ನಿಂದ ನಿಯಂತ್ರಿಸಲಾಗುತ್ತದೆ. ಸಣ್ಣ ದೋಷ ಇದ್ದರೂ ವ್ಯವಸ್ಥೆಯ ಸುರಕ್ಷತೆಗೆ ಧಕ್ಕೆಯಾಗುತ್ತದೆ.

    ಈ ಸಮಸ್ಯೆ ಬಗೆಹರಿಸಲು ಸುಮಾರು ಒಂದು ತಿಂಗಳಾದರೂ ಸಮಯ ಬೇಕಾಗಬಹುದು. ಒಂದು ತಿಂಗಳ ಸಮಯಾವಾಕಾಶದ ಬಳಿಕ ಎಲ್ಲವು ಸರಿಯಾದರಷ್ಟೇ ಕೇಂದ್ರ ರೈಲ್ವೆ ಸುರಕ್ಷತಾ ಸಮಿತಿ ಪರಿಶೀಲನೆಗೆ ಆಗಮಿಸಲಿದೆ. ಸಮಿತಿ ಬಂದು ಪರಿಶೀಲಿಸಿ ಎಲ್ಲದಕ್ಕೂ ಒಪ್ಪಿಗೆ ನೀಡಿ, ಮಾರ್ಗ ಉದ್ಘಾಟನೆಗೆ ಸುಮಾರು ಎರಡು ತಿಂಗಳು ಅವಕಾಶ ಬೇಕಾಗಬಹದು. ಹಾಗಾಗಿ ಜುಲೈ ಅಂತ್ಯದ ವೇಳೆ ಮಾರ್ಗ ಮುಕ್ತವಾಗುವ ಸಾಧ್ಯತೆ ಇದೆ.ಇದನ್ನೂ ಓದಿ: ಯೋಧರಿಂದಲೇ `ಆಪರೇಷನ್ ಸಿಂಧೂರ’ ಲೋಗೋ ವಿನ್ಯಾಸ

  • ಸ್ವೈಪ್‌ ಗೇಟ್‌ನಿಂದ ಹೊರಗಿರುವ ಶೌಚಾಲಯಗಳಿಗೆ ಮಾತ್ರ ದುಡ್ಡು – BMRCL ಸ್ಪಷ್ಟನೆ

    ಸ್ವೈಪ್‌ ಗೇಟ್‌ನಿಂದ ಹೊರಗಿರುವ ಶೌಚಾಲಯಗಳಿಗೆ ಮಾತ್ರ ದುಡ್ಡು – BMRCL ಸ್ಪಷ್ಟನೆ

    ಬೆಂಗಳೂರು: ನಮ್ಮ ಮೆಟ್ರೋ (Namma Metro) ನಿಲ್ದಾಣಗಳಲ್ಲಿ ಶೌಚಾಲಯ ಬಳಕೆಗೂ ದುಡ್ಡು ಕೊಡಬೇಕು ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಬಿಎಂಆರ್‌ಸಿಎಲ್ (BMRCL) ಸ್ಪಷ್ಟನೆ ನೀಡಿದ್ದು, ನಿಲ್ದಾಣದ ಹೊರಗಿರುವ ಶೌಚಾಲಯಗಳಿಗೆ ಮಾತ್ರ ಶುಲ್ಕ ನಿಗದಿಪಡಿಸಲಾಗಿದೆ ಎಂದು ತಿಳಿಸಿದೆ.

    ನಮ್ಮ ಮೆಟ್ರೋ ವ್ಯಾಪ್ತಿಯ 12 ಶೌಚಾಲಯ ಬಳಕೆಗೆ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಶುಲ್ಕ ನಿಗದಿಪಡಿಸಿತ್ತು. ಖಾಸಗಿ ಸಂಸ್ಥೆಯ ಜೊತೆಗೆ ಬಿಎಂಆರ್‌ಸಿಎಲ್ ನಿರ್ವಹಣೆ ಒಪ್ಪಂದ ಮಾಡಿಕೊಂಡಿದ್ದು, ಮೂತ್ರ ವಿಸರ್ಜನೆಗೆ 2 ರೂ., ಮಲ ವಿಸರ್ಜನೆಗೆ 5 ರೂ. ದರ ನಿಗದಿ ಮಾಡಿತ್ತು.ಇದನ್ನೂ ಓದಿ: ಮೆಟ್ರೋ ದರ ಏರಿಕೆ ಆಯ್ತು ಈಗ ಶೌಚಾಲಯ ಬಳಕೆಗೂ ಕಟ್ಟಬೇಕು ಕಾಸು!

    ನ್ಯಾಷನಲ್ ಕಾಲೇಜು, ಲಾಲ್‌ಬಾಗ್, ಸೌಥ್ ಆ್ಯಂಡ್ ಸರ್ಕಲ್, ಜಯನಗರ, ರಾಷ್ಟ್ರೀಯ ವಿದ್ಯಾಲಯ ರಸ್ತೆ, ಬನಶಂಕರಿ, ಜಯಪ್ರಕಾಶ ನಗರ, ಯೆಲಚೇನಹಳ್ಳಿ, ಸರ್ ಎಂ.ವಿಶ್ವೇಶ್ವರಯ್ಯ ನಿಲ್ದಾಣ ಸೆಂಟ್ರಲ್ ಕಾಲೇಜು, ಡಾ.ಅಂಬೇಡ್ಕರ್ ನಿಲ್ದಾಣ, ವಿಧಾನಸೌಧ, ಕಬ್ಬನ್ ಪಾರ್ಕ್ ಮತ್ತು ಮೆಜೆಸ್ಟಿಕ್ ನಿಲ್ದಾಣಗಳಲ್ಲಿನ ಶೌಚಾಲಯಗಳನ್ನು ಇನ್ನು ಮುಂದೆ ಪಾವತಿಸಿ ಬಳಸಬೇಕಾಗುತ್ತದೆ ಎಂದು ತಿಳಿಸಿತ್ತು. ಇದರಿಂದಾಗಿ ಪ್ರಯಾಣಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ವಿರೋಧದ ಬೆನ್ನಲ್ಲೇ ಇದೀಗ ಸ್ಪಷ್ಟನೆ ನೀಡಿದೆ.

    ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಶೌಚಾಲಯಗಳ ಬಳಕೆಗೆ ಶುಲ್ಕ ನಿಗದಿ ಮಾಡಿರುವುದಿಲ್ಲ. ಮೆಟ್ರೋ ಸ್ವೈಪ್ ಗೇಟ್ ಒಳಗಿರುವ ಶೌಚಾಲಯಗಳು ಬಳಕೆಗೆ ಉಚಿತವಾಗಿ ಇರುತ್ತದೆ. ಆದರೆ ಮೆಟ್ರೋ ಸ್ವೈಪ್ ಗೇಟ್‌ಗಿಂತ ಹೊರಗಿರುವ ಶೌಚಾಲಯಗಳನ್ನು ಮೆಟ್ರೋ ಪ್ರಯಾಣಿಕರಲ್ಲದೇ ಬೇರೆ ಸಾರ್ವಜನಿಕರು ಬಳಸುತ್ತಾರೆ. ಹೀಗಾಗಿ ಅಂತಹ ಶೌಚಾಲಯಗಳಿಗೆ ಮಾತ್ರ ಶುಲ್ಕ ನಿಗದಿ ಮಾಡಲಾಗಿದೆ ಎಂದು ತಿಳಿಸಿದೆ.

    ಇದಕ್ಕೂ ಮುನ್ನ ಬಿಎಂಆರ್‌ಸಿಎಲ್ ಮೆಟ್ರೋ ಟಿಕೆಟ್ ದರವನ್ನು ಏರಿಕೆ ಮಾಡಿತ್ತು.ಇದನ್ನೂ ಓದಿ: ಮೇ 25ರಂದು UPSC ಪೂರ್ವಭಾವಿ ಪರೀಕ್ಷೆ – 1 ಗಂಟೆ ಮುಂಚಿತವಾಗಿ ಮೆಟ್ರೋ ಸೇವೆ ಶುರು

  • ನಮ್ಮ ಮೆಟ್ರೋದಲ್ಲಿ 6 ತಿಂಗಳಲ್ಲಿ 27,000 ನಿಯಮ ಉಲ್ಲಂಘನೆ ಪ್ರಕರಣ ದಾಖಲು

    ನಮ್ಮ ಮೆಟ್ರೋದಲ್ಲಿ 6 ತಿಂಗಳಲ್ಲಿ 27,000 ನಿಯಮ ಉಲ್ಲಂಘನೆ ಪ್ರಕರಣ ದಾಖಲು

    ಬೆಂಗಳೂರು: ನಮ್ಮ ಮೆಟ್ರೋದಲ್ಲಿ (Namma Metro) ಕಳೆದ 6 ತಿಂಗಳಲ್ಲಿ ಒಟ್ಟು 27 ಸಾವಿರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿವೆ.ಇದನ್ನೂ ಓದಿ: ಅತ್ಯಾಚಾರ ಪ್ರಕರಣದಿಂದ ಕೈಬಿಡುವಂತೆ ಸಲ್ಲಿಸಿದ್ದ ಅರ್ಜಿ ವಜಾ – ನ್ಯಾಯಾಧೀಶರ ಮುಂದೆ ಕಣ್ಣೀರು ಹಾಕಿದ ಪ್ರಜ್ವಲ್ ರೇವಣ್ಣ

    ಮೆಟ್ರೋದಲ್ಲಿ ಪ್ರಯಾಣಿಸುವಾಗ ನಿಯಮ ಉಲ್ಲಂಘಿಸಿದ್ದು, ಕಳೆದ 6 ತಿಂಗಳಲ್ಲಿ ಒಟ್ಟು 27 ಸಾವಿರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು, ನಿಯಮ ಉಲ್ಲಂಘನೆ ಮಾಡಿದವರಿಗೆ ಭದ್ರತಾ ಸಿಬ್ಬಂದಿ ದಂಡ ವಿಧಿಸದೇ ಎಚ್ಚರಿಕೆ ನೀಡಿದ್ದಾರೆ.

    ಒಟ್ಟು 27 ಸಾವಿರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು, ಆ ಪೈಕಿ ಮೊಬೈಲ್‌ನಲ್ಲಿ ಜೋರಾಗಿ ಸಂಗೀತ ಹಾಕಿದ್ದಕ್ಕಾಗಿ 11,922 ಪ್ರಕರಣಗಳು, ವಿಶೇಷ ಚೇತನರು, ಗರ್ಭಿಣಿಯರು, ಹಿರಿಯ ನಾಗರಿಕರಿಗೆ ಆಸನ ನೀಡದಿದ್ದಕ್ಕಾಗಿ 14,162 ಪ್ರಕರಣಗಳು, ಮೆಟ್ರೋದಲ್ಲಿ ಆಹಾರ ಸೇವಿಸಿದ್ದಕ್ಕಾಗಿ 554 ಹಾಗೂ ದೊಡ್ಡ ಗಾತ್ರದ ಲಗೇಜ್ ಸಾಗಿಸಿದ್ದಕ್ಕೆ 474 ಪ್ರಕರಣಗಳು ದಾಖಲಾಗಿವೆ.ಇದನ್ನೂ ಓದಿ: ಶೀಘ್ರದಲ್ಲೇ ಸುಪ್ರೀಂ ಕೋರ್ಟ್ ಜಡ್ಜ್‌ಗಳ ಆಸ್ತಿ ವಿವರ ಬಹಿರಂಗ – ವೆಬ್‍ಸೈಟ್‌ಲ್ಲಿ ಮಾಹಿತಿ ಅಪ್ಲೋಡ್‍ಗೆ ನಿರ್ಧಾರ

  • ಪೀಣ್ಯ ಮೆಟ್ರೋ ನಿಲ್ದಾಣ ಸ್ಥಳಾಂತರಕ್ಕೆ BMRCL ಚಿಂತನೆ

    ಪೀಣ್ಯ ಮೆಟ್ರೋ ನಿಲ್ದಾಣ ಸ್ಥಳಾಂತರಕ್ಕೆ BMRCL ಚಿಂತನೆ

    ಬೆಂಗಳೂರು: ಪೀಣ್ಯದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿರುವ ಆರೆಂಜ್ ಲೈನ್‌ನ ನಮ್ಮ ಮೆಟ್ರೋ (Namma Metro) ರೈಲು ನಿಲ್ದಾಣವನ್ನು ಹೊರ ವರ್ತುಲ ರಸ್ತೆ ಗೊರಗುಂಟೆಪಾಳ್ಯ ಸಿಗ್ನಲ್ ಬಳಿಗೆ ಸ್ಥಳಾಂತರಿಸುವ ಬಗ್ಗೆ ಬಿಎಂಆರ್‌ಸಿಎಲ್ (BMRCL) ಚಿಂತನೆ ನಡೆಸಿದೆ.

    ನಮ್ಮ ಮೆಟ್ರೋ ಯೋಜನೆಯ 3ನೇ ಹಂತದಲ್ಲಿ ನಿರ್ಮಾಣವಾಗಲಿರುವ ಜೆಪಿ ನಗರ, 4ನೇ ಹಂತದ ಕೆಂಪಾಪುರವರೆಗಿನ 32.15 ಕಿ.ಮೀ ಆರೆಂಜ್ ಲೈನ್ ಅನ್ನು 300 ಮೀ.ಗಳಷ್ಟು ಕಡಿಮೆ ಮಾಡುವ ಉದ್ದೇಶದಿಂದ ಈ ಚಿಂತನೆಗೆ ಮುಂದಾಗಿದೆ. ಹೊಸ ನಿಲ್ದಾಣವು ಪೀಣ್ಯ ಮತ್ತು ಗೊರಗುಂಟೆಪಾಳ್ಯದಲ್ಲಿ ಅಸ್ತಿತ್ವದಲ್ಲಿರುವ ಮೆಟ್ರೋ ನಿಲ್ದಾಣಗಳಿಗೆ ಎರಡು ಪ್ರತ್ಯೇಕ ಪಾದಚಾರಿ ಮೇಲ್ಸೇತುವೆಗಳ ಮೂಲಕ ಸಂಪರ್ಕ ಕಲ್ಪಿಸಲಿದೆ.ಇದನ್ನೂ ಓದಿ: Delhi Election 2025 Results | ಮಾಜಿ ಸಿಎಂ ಕೇಜ್ರಿವಾಲ್‌ಗೆ ಸೋಲು

    ಇತ್ತೀಚೆಗಷ್ಟೇ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಮೆಟ್ರೋ ನಿರ್ಮಾಣ ಸ್ಥಳಗಳಿಗೆ ಗುರುವಾರ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಬಿಎಂಆರ್‌ಸಿಎಲ್ ಅಧಿಕಾರಿಗಳು ಡಿಸಿಎಂ ಅವರ ಬಳಿ ಈ ಪ್ರಸ್ತಾವನೆಯನ್ನು ಮಂಡಿಸಿದ್ದಾರೆ.

    3 ಹಂತದ ವಿಸ್ತೃತ ಯೋಜನಾ ವರದಿಯನ್ನು ರಾಜ್ಯ ಸರ್ಕಾರ ಈಗಾಗಲೇ ಅನುಮೋದಿಸಿದೆ. 3ನೇ ಹಂತವು ಎರಡು ಕಾರಿಡಾರ್‌ಗಳನ್ನು ಒಳಗೊಂಡಿದೆ. ಅವುಗಳೆಂದರೆ, ಆರೆಂಜ್ ಲೈನ್ ಮತ್ತು 12.5 ಕಿ.ಮೀ ಹೊಸಹಳ್ಳಿಯಿಂದ ಕಡಬಗೆರೆವರೆಗಿನ ಎರಡನೇ ಕಾರಿಡಾರ್‌ನ್ನು ಒಳಗೊಂಡಿದೆ.

    ಜೆಪಿ ನಗರ, ಮೈಸೂರು ರಸ್ತೆ, ಸುಮನಹಳ್ಳಿ ಮತ್ತು ಪೀಣ್ಯದಲ್ಲಿ ಇಂಟರ್‌ಚೇಂಜ್ ನಿಲ್ದಾಣಗಳನ್ನು ಯೋಜಿಸಲಾಗಿತ್ತು. ಆದರೆ ಪೀಣ್ಯ ಇಂಟರ್‌ಚೇಂಜ್‌ಗೆ ಸಂಬಂಧಿಸಿದಂತೆ ಮರುಪರಿಶೀಲನೆ ನಡೆಯುತ್ತಿದೆ. ಕಾರಣ ಪೀಣ್ಯದಲ್ಲಿ ಇಂಟರ್ ಚೇಂಜ್ ನಿರ್ಮಾಣಕ್ಕೆ ಅತಿ ಹೆಚ್ಚು ಎತ್ತರಿಸಬೇಕಾದ ಅಗತ್ಯವಿದೆ. ಹೀಗಾಗಿ ದೂರ ಕಡಿಮೆ ಮಾಡುವ ಉದ್ದೇಶದಿಂದ ಗೊರಗುಂಟೆಪಾಳ್ಯಕ್ಕೆ ಸ್ಥಳಾಂತರಿಸಲು ಬಿಎಂಆರ್‌ಸಿಎಲ್ ಚಿಂತನೆ ನಡೆಸುತ್ತಿದೆ.ಇದನ್ನೂ ಓದಿ: ಕೇಜ್ರಿವಾಲ್ ತಮ್ಮ ಕ್ರೇಜ್ ಕಳೆದುಕೊಂಡಿದ್ದಾರೆ: ಜಗದೀಶ್ ಶೆಟ್ಟರ್

     

  • Namma Metro | ಒಂದೇ ದಿನ ದಾಖಲೆಯ 9.20 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚಾರ

    Namma Metro | ಒಂದೇ ದಿನ ದಾಖಲೆಯ 9.20 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚಾರ

    ಬೆಂಗಳೂರು: ನಮ್ಮ ಮೆಟ್ರೋ (Namma Metro) ಪ್ರಯಾಣಿಕರ ಓಡಾಟದಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ. ಒಂದೇ ದಿನ ಮೆಟ್ರೋದಲ್ಲಿ ಸಂಚರಿಸುವವರ ಸಂಖ್ಯೆ ಭಾರೀ ಏರಿಕೆ ಕಂಡಿದ್ದು, ಗರಿಷ್ಠ ಪ್ರಮಾಣ ತಲುಪಿದೆ.

    ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ನಮ್ಮ ಮೆಟ್ರೋ, ಡಿಸೆಂಬರ್ 06 ರಂದು ಒಂದೇ ದಿನ ಬೆಂಗಳೂರು ನಮ್ಮ ಮೆಟ್ರೋ ರೈಲಿನಲ್ಲಿ ಬರೋಬ್ಬರಿ 9,20,562 ಲಕ್ಷಕ್ಕೂ ಅಧಿಕ ಮಂದಿ ಸಂಚಾರ ಮಾಡಿದ್ದಾರೆ. ಇದು ಈವರೆಗಿನ ಅತೀ ಹೆಚ್ಚು ಪ್ರಯಾಣಿಕರು ಓಡಾಟ ಮಾಡಿದ ಸಂಖ್ಯೆಯಾಗಿದೆ ಎಂದು ತಿಳಿಸಿದೆ.ಇದನ್ನೂ ಓದಿ: ನಾನು ರಾಜಕೀಯ ಕೊನೆಗಾಲದಲ್ಲಿದ್ದೇನೆ: ಸಿಎಂ ಸಿದ್ದರಾಮಯ್ಯ ಅಚ್ಚರಿ ಹೇಳಿಕೆ

    ನೇರಳೆ ಮಾರ್ಗದಲ್ಲಿ 4,39,616 ಜನ ಪ್ರಯಾಣಿಸಿದ್ದು, ಹಸಿರು ಮಾರ್ಗದಲ್ಲಿ 3,12,248 ಜನ ಪ್ರಯಾಣಿಸಿದ್ದಾರೆ. ಕೆಂಪೇಗೌಡ ನಿಲ್ದಾಣದಿಂದ ಮಾರ್ಗ ಬದಲಿಸುವ ಮೂಲಕ 1,67,617 ಜನ ಪ್ರಯಾಣಿಸಿದ್ದಾರೆ ಎಂದು ಬಿಎಂಆರ್‌ಸಿಎಲ್ (BMRCL) ಮಾಹಿತಿ ಹಂಚಿಕೊಂಡಿದೆ.

    ಕಳೆದ ಆಗಸ್ಟ್ 14ರಂದು ನಮ್ಮ ಮೆಟ್ರೋದಲ್ಲಿ ಒಂದೇ ದಿನ ಬರೋಬ್ಬರಿ 9.17 ಲಕ್ಷ ಮಂದಿ ಸಂಚರಿಸುವ ಮೂಲಕ ದಾಖಲೆ ಸೃಷ್ಟಿಸಿತ್ತು. ಇದೀಗ ನಮ್ಮ ಮೆಟ್ರೋದಲ್ಲಿ 9.20 ಲಕ್ಷಕ್ಕೂ ಅಧಿಕ ಜನ ಪ್ರಯಾಣಿಸುವ ದಾಖಲೆಯನ್ನು ಮುರಿದಿದೆ.ಇದನ್ನೂ ಓದಿ: ಮಣಿಪಾಲ ಬಾಣಸಿಗನ ಸಾವಿಗೆ ಬಿಗ್ ಟ್ವಿಸ್ಟ್ – ಬಾಟಲಿಯಿಂದ ಕತ್ತು ಇರಿದುಕೊಂಡು ಆತ್ಮಹತ್ಯೆ?

  • ಸರ್ಜಾಪುರದಿಂದ ಹೆಬ್ಬಾಳದವರೆಗೆ ‘ನಮ್ಮ ಮೆಟ್ರೋ 3ಎ ಹಂತ’ – ಸಚಿವ ಸಂಪುಟ ಅನುಮೋದನೆ

    ಸರ್ಜಾಪುರದಿಂದ ಹೆಬ್ಬಾಳದವರೆಗೆ ‘ನಮ್ಮ ಮೆಟ್ರೋ 3ಎ ಹಂತ’ – ಸಚಿವ ಸಂಪುಟ ಅನುಮೋದನೆ

    * 28,405 ಕೋಟಿ ರೂ. ವೆಚ್ಚದಲ್ಲಿ 36.59 ಕಿಮೀ ಮೆಟ್ರೋ ಮಾರ್ಗ
    * ಈವರೆಗಿನ ಹಂತಗಳ ಪೈಕಿ ಅತೀ ದುಬಾರಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮೆಟ್ರೋ ಮಾರ್ಗ

    ಬೆಂಗಳೂರು: ಸರ್ಜಾಪುರದಿಂದ (Sarjapura) ಹೆಬ್ಬಾಳದವರೆಗೆ (Hebbal) ಸಂಪರ್ಕ ಕಲ್ಪಿಸುವ ಮಹತ್ವದ ಯೋಜನೆ `ನಮ್ಮ ಮೆಟ್ರೋ 3ಎ’ (Namma Metro) ಹಂತಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.

    ನಮ್ಮ ಮೆಟ್ರೋ ಜಾಲವನ್ನು ವಿಸ್ತರಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ನಮ್ಮ ಮೆಟ್ರೋದ 3ಎ ಹಂತವಾಗಿರುವ ಕೆಂಪು ಮಾರ್ಗ (Red Line) ಸರ್ಜಾಪುರದಿಂದ ಪ್ರಾರಂಭವಾಗಿ ಕೋರಮಂಗಲ (Koramangala) ಮೂಲಕ ಹೆಬ್ಬಾಳಕ್ಕೆ ತಲುಪುವ 36.59 ಕಿ.ಮೀ ಇದಾಗಿದೆ. ಈವರೆಗಿನ ಹಂತಗಳ ಪೈಕಿ ಅತೀ ದುಬಾರಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮೆಟ್ರೋ ಮಾರ್ಗ ಇದಾಗಿದೆ.ಇದನ್ನೂ ಓದಿ: ಸಿರಿಯಾದಲ್ಲಿ ಹೆಚ್ಚಿದ ಹಿಂಸಾಚಾರ – ಕೂಡಲೇ ದೇಶವನ್ನು ತೊರೆಯಿರಿ; ಭಾರತೀಯರಿಗೆ ಸೂಚನೆ

    ಕೆಂಪು ಮಾರ್ಗದ ಪ್ರತಿ ಕಿ.ಮೀ ನಿರ್ಮಾಣಕ್ಕೆ 776 ರೂ. ಕೋಟಿ ತಗುಲಲಿದ್ದು, ಒಟ್ಟು 28,405 ಕೋಟಿ ರೂ. ವೆಚ್ಚದಲ್ಲಿ 36.59 ಕಿಮೀ ಮೆಟ್ರೋ ಮಾರ್ಗ ನಿರ್ಮಿಸಲು ಸಂಪುಟ ತೀರ್ಮಾನಿಸಿದೆ. ಕೆಂಪು ಮಾರ್ಗದ ಮೆಟ್ರೋ ನಿರ್ಮಾಣಗೊಂಡರೆ ನಮ್ಮ ಮೆಟ್ರೋದ ಒಟ್ಟು 258 ಕಿ.ಮೀ. ಮಾರ್ಗ ಸಿದ್ಧವಾಗುತ್ತದೆ.

    ಈ ಯೋಜನೆ ರಾಜ್ಯ ಸಚಿವ ಸಂಪುಟದ ಅನುಮೋದನೆ ಪಡೆದಿದ್ದು, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ. ಮುಂದಿನ ಒಂದು ವರ್ಷದೊಳಗೆ ಕೇಂದ್ರದ ಅನುಮೋದನೆ ಸಿಗುವ ಸಾಧ್ಯತೆ ಇದೆ. ಬಳಿಕ 2026ರಲ್ಲಿ ಇದರ ಕಾಮಗಾರಿ ಆರಂಭವಾಗಿ 2031ಕ್ಕೆ ಕಾಮಗಾರಿ ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ.

    ಸರ್ಜಾಪುರದಿಂದ ಹೆಬ್ಬಾಳದ ವರೆಗೆ 36.59 ಕಿ.ಮೀ ಉದ್ದದ ಮೆಟ್ರೋ ಮಾರ್ಗ ಇದಾಗಿದ್ದು, 36.59 ಕಿ.ಮೀ ಪೈಕಿ 22.14 ಕಿ.ಮೀ ಫ್ಲೈಓವರ್ ಮಾರ್ಗವಾಗಿದೆ. ಇನ್ನುಳಿದ 14.45 ಕಿ.ಮೀ ಸುರಂಗ ಮಾರ್ಗವಾಗಿರಲಿದೆ. ಒಟ್ಟು 28 ಸ್ಟೇಷನ್‌ಗಳಿದ್ದು, ಅದರಲ್ಲಿ 17 ಮಹಡಿ ನಿಲ್ದಾಣಗಳು ಹಾಗೂ 11 ಸುರಂಗ ಮಾರ್ಗ ನಿಲ್ದಾಣಗಳು ಇರಲಿವೆ. ಇಬ್ಬಲೂರು, ಅಗರ, ಡೈರಿ ಸರ್ಕಲ್, ಕೆಆರ್ ಸರ್ಕಲ್ ಹಾಗೂ ಹೆಬ್ಬಾಳದಲ್ಲಿ 5 ಇಂಟರ್ ಚೇಂಜ್ ಸ್ಟೇಷನ್‌ಗಳ ನಿರ್ಮಾಣವಾಗಲಿದೆ.

    ಮೆಟ್ರೋ ನಿಲ್ದಾಣಗಳು ಯಾವವು?
    ಸರ್ಜಾಪುರದಿಂದ ಪ್ರಾರಂಭವಾಗಿ ಕಾಡ ಅಗ್ರಹಾರ ರೋಡ್ – ಸೋಂಪುರ – ದೊಮ್ಮಸಂದ್ರ – ಮುತ್ತನಲ್ಲೂರು ಕ್ರಾಸ್ – ಕೊಡತಿ ಗೇಟ್ – ಅಂಬೇಡ್ಕರ್ ನಗರ – ಕಾರ್ಮಲ್ ರಾಂ – ದೊಡ್ಡಕನ್ನೆಲ್ಲಿ – ಕೈಕೊಂಡ್ರಹಳ್ಳಿ – ಬೆಳ್ಳಂದೂರು ಗೇಟ್ – ಇಬ್ಬಲೂರು – ಅಗರ – ಜಕ್ಕಸಂದ್ರ – ಕೋರಮಂಗಲ 3ನೇ ಬ್ಲಾಕ್ – ಕೋರಮಂಗಲ 2ನೇ ಬ್ಲಾಕ್ – ಡೈರಿ ಸರ್ಕಲ್ – ನಿಮ್ಹಾನ್ಸ್ – ಶಾಂತಿನಗರ – ಟೌನ್ ಹಾಲ್ – ಕೆಆರ್ ಸರ್ಕಲ್ – ಬಸವೇಶ್ವರ ಸರ್ಕಲ್ – ಬೆಂಗಳೂರು ಗಾಲ್ಫ್ ಕೋರ್ಸ್ – ಮೇಖ್ರಿ ಸರ್ಕಲ್ – ಪ್ಯಾಲೇಸ್ ಗುಟ್ಟಹಳ್ಳಿ – ವೆಟರ್ನರಿ ಕಾಲೇಜು – ಗಂಗಾನಗರ – ಹೆಬ್ಬಾಳವರೆಗೆ ಪ್ರಯಾಣಿಸಲಿದೆ.ಇದನ್ನೂ ಓದಿ: ಪವರ್ ಶೇರಿಂಗ್ – ಹೈಕಮಾಂಡ್‌ನಲ್ಲಿ ಆಗಿರೋ ತೀರ್ಮಾನದ ವಿಚಾರ ಅವರಿಬ್ಬರಿಗೆ ಗೊತ್ತು: ಮುನಿಯಪ್ಪ

  • `ನಮ್ಮ ಮೆಟ್ರೋ’ದಿಂದ ಬಿಗ್ ಅಪ್ಡೇಟ್ – ಒಂದೂವರೆ ವರ್ಷದೊಳಗೆ ಬರಲಿದ್ಯಾ ಹೆಬ್ಬಾಳ-ಏರ್‌ಪೋರ್ಟ್ ಮೆಟ್ರೋ?

    `ನಮ್ಮ ಮೆಟ್ರೋ’ದಿಂದ ಬಿಗ್ ಅಪ್ಡೇಟ್ – ಒಂದೂವರೆ ವರ್ಷದೊಳಗೆ ಬರಲಿದ್ಯಾ ಹೆಬ್ಬಾಳ-ಏರ್‌ಪೋರ್ಟ್ ಮೆಟ್ರೋ?

    ಬೆಂಗಳೂರು: ಬೆಂಗಳೂರಿನ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ (Bengaluru International Airport)  ಮತ್ತು ಸಿಟಿಯ ನಡುವಿನ ಸಂಚಾರಕ್ಕಾಗಿ ಇದೀಗ ನಮ್ಮ ಮೆಟ್ರೋ (Namma Metro) ಒಂದು ಬಿಗ್ ಅಪ್ಡೇಟ್ ನೀಡಿದೆ.

    ಏರ್‌ಪೋರ್ಟ್‌ನಿಂದ ಸಿಟಿಯವರೆಗೂ ಮೆಟ್ರೋ ಮಾರ್ಗದ ಸಂಚಾರಕ್ಕಾಗಿ ಲಕ್ಷಾಂತರ ಬೆಂಗಳೂರಿಗರು ಕಾಯುತ್ತಿದ್ದಾರೆ. ಇದೀಗ ಬಿಎಂಆರ್‌ಸಿಎಲ್ (BMRCL) ಬಿಗ್ ಅಪ್ಡೇಟ್ ಕೊಟ್ಟಿದ್ದು, 2026ರ ಜೂನ್‌ನಲ್ಲಿ ವಿಮಾನ ನಿಲ್ದಾಣ ಮಾರ್ಗವನ್ನು ಹೆಬ್ಬಾಳದವರೆಗೆ ಸಂಚಾರ ಮುಕ್ತಗೊಳಿಸುವ ಬಗ್ಗೆ ಮಾಹಿತಿ ನೀಡಿದೆ.ಇದನ್ನೂ ಓದಿ: ‌ಭಾರತದಲ್ಲಿ ಬ್ರಿಟಿಷರ ಆಡಳಿತ ವಿರೋಧಿಸಿದ ಕೀರ್ತಿ ಟಿಪ್ಪುವಿನದ್ದು: ವಿದೇಶಾಂಗ ಸಚಿವ ಜೈಶಂಕರ್

    ಸಿಲಿಕಾನ್ ಸಿಟಿಯ ಹಲವೆಡೆ ಮೆಟ್ರೋ ಕಾಮಗಾರಿ ಭರದಿಂದ ಸಾಗುತ್ತಿದೆ. ಜೊತೆಗೆ ಅನೇಕ ಹೊಸ ಮಾರ್ಗಗಳಿಗೆ ಪ್ಲ್ಯಾನ್ ಕೂಡ ಆಗುತ್ತಿದೆ. ಈ ಮಧ್ಯೆ ನಗರದ ಬಹುನಿರೀಕ್ಷಿತ ಏರ್‌ಪೋರ್ಟ್ ಮಾರ್ಗ ಸಂಬಂಧ ನಮ್ಮ ಮೆಟ್ರೋ ಸಿಹಿ ಸುದ್ದಿಯನ್ನು ನೀಡಿದೆ. ಇದರಿಂದ ಲಕ್ಷಾಂತರ ಜನರ ಬಹುವರ್ಷಗಳ ಕನಸು ನನಸಾಗಲಿದೆ.

    ಬೆಂಗಳೂರು ನಗರ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ನಿತ್ಯ ಲಕ್ಷಾಂತರ ಜನ ಓಡಾಟ ಮಾಡುತ್ತಾರೆ. ಈ ಭಾಗದ ಸವಾರರು ಟ್ರಾಫಿಕ್ ಕಿರಿಕಿರಿಗಳಿಂದ ಬೇಸತ್ತಿದ್ದಾರೆ. ಹೀಗಾಗಿ ಮೆಟ್ರೋ ಯಾವಾಗ ಆರಂಭ ಆಗುತ್ತದೆ ಎಂದು ಜನ ಕಾಯುತ್ತಿದ್ದರು. ಈ ಮಧ್ಯೆ ಮೆಟ್ರೋ ಮಾರ್ಗ ಶುರುವಾಗುವ ಬಗ್ಗೆ ಬಿಎಂಆರ್‌ಸಿಎಲ್ ಪಬ್ಲಿಕ್ ಟಿವಿ ಮೂಲಕ ಅಪ್ಡೇಟ್ ನೀಡಿದೆ.

    ಇನ್ನೂ ಒಂದೂವರೆ ವರ್ಷದೊಳಗೆ ಸಂಚಾರ ಮುಕ್ತವಾಗುವ ಸಾಧ್ಯತೆ ಇದೆ. ಇದು ಕೆಆರ್‌ಪುರ ಮತ್ತು ವಿಮಾನ ನಿಲ್ದಾಣ ನಡುವಿನ 38 ಕಿ.ಮೀ ಉದ್ದದ ಮಾರ್ಗವಾಗಿದ್ದು, ಹೆಬ್ಬಾಳದ ಮೂಲಕ ಹಾದು ಹೋಗಲಿದೆ. ಸದ್ಯ ಹೆಬ್ಬಾಳದವರೆಗೂ ಮೆಟ್ರೋ ಓಪನ್ ಆಗುವ ಸಾಧ್ಯತೆ ಇದೆ. ಹೆಬ್ಬಾಳದಿಂದ ಕೆಆರ್‌ಪುರವರೆಗೆ ಮಾರ್ಗ ಪೂರ್ಣಗೊಳ್ಳಲು ಮತ್ತಷ್ಟು ಕಾಲವಾಕಾಶ ಬೇಕಿದ್ದು, 2026ರ ಜೂನ್‌ನಲ್ಲಿ ವಿಮಾನ ನಿಲ್ದಾಣ ಮಾರ್ಗವನ್ನು ಹೆಬ್ಬಾಳದವರೆಗೆ ಸಂಚಾರ ಮುಕ್ತಗೊಳಿಸುವ ಬಗ್ಗೆ ಮಾಹಿತಿ ನೀಡಿದೆ.

    ಸದ್ಯ ಈ ಮಾರ್ಗವನ್ನು ಅಂದುಕೊಂಡಂತೆ ಆರಂಭಗೊಳಿಸುವ ನಿಟ್ಟಿನಲ್ಲಿ ಕಾಮಗಾರಿಗಳಿಗೆ ಮತ್ತಷ್ಟು ವೇಗ ನೀಡುವಂತೆ ಗುತ್ತಿಗೆ ಕಂಪನಿಗೆ ಬಿಎಂಆರ್‌ಸಿಎಲ್ ಸೂಚನೆ ನೀಡಿದೆ. ಅದರಂತೆ ಸಿವಿಲ್ ಕೆಲಸಗಳಿಗೆ ವೇಗ ಸಿಗಲಿದೆ. ಮಾರ್ಗದಲ್ಲಿ ಸಿವಿಲ್ ಕಾಮಗಾರಿ ಶೇಕಡಾ 50ರಷ್ಟು ಮುಗಿದಿದೆ. ಮಾರ್ಗದಲ್ಲಿ ಟ್ರ‍್ಯಾಕ್‌ನ ವಯಾಡಕ್ಟ್ಗಳನ್ನ ಕೂಡ ಜೋಡಿಸುವ ಕಾರ್ಯ ವೇಗವಾಗಿ ಸಾಗುತ್ತಿದೆ. ಯಾವುದೇ ಸಮಸ್ಯೆ ಇಲ್ಲದೇ ಕಾಮಗಾರಿ ವೇಗವಾಗಿ ಮುಗಿದರೆ 2026ರ ಜೂನ್‌ನಲ್ಲಿ ಸಂಚಾರ ಮುಕ್ತವಾಗಿ ಈ ಭಾಗದ ಜನರ ಟ್ರಾಫಿಕ್ ಜಂಜಾಟಕ್ಕೆ ಬ್ರೇಕ್ ಬೀಳಲಿದೆ.ಇದನ್ನೂ ಓದಿ: Cyclone Fengal | ಚಂಡಮಾರುತಕ್ಕೆ ಮೂವರು ಬಲಿ – 100ಕ್ಕೂ ಹೆಚ್ಚು ಮಂದಿ ರಕ್ಷಣೆ