Tag: Bengaluru Lockdown
-

ಬೆಂಗಳೂರಿನಲ್ಲಿ ಲಾಕ್‍ಡೌನ್ ಮುಂದುವರಿಯುತ್ತಾ? ಸರ್ಕಾರದಿಂದ ಬರುತ್ತಾ ಹೊಸ ಆದೇಶ
ಬೆಂಗಳೂರು: ವೈದ್ಯಕೀಯ ಅವಸ್ಥೆ, ಕೊರೊನಾ ಅಬ್ಬರದ ನಡುವೆ ಬೆಂಗಳೂರಲ್ಲಿ ಮತ್ತೆ ಲಾಕ್‍ಡೌನ್ ಬೇಕಾ ಮತ್ತು ಬೇಡ್ವಾ ಅನ್ನೋದು ಇಂದು ತೀರ್ಮಾನ ಆಗುವ ಸಾಧ್ಯತೆಗಳಿವೆ.
ಬುಧವಾರ ಬೆಳಗ್ಗೆ 5 ಗಂಟೆಗೆ ಕೊನೆ ಆಗುವ ಲಾಕ್‍ಡೌನ್‍ನ್ನು ಮತ್ತಷ್ಟು ದಿನ ಮುಂದುವರಿಸಬೇಕಾ? ಒಂದು ವೇಳೆ ಮುಂದುವರಿಸಿದ್ರೆ ಎಷ್ಟು ದಿನ? ಅಥವಾ ಇನ್ಮುಂದೆ ಲಾಕ್‍ಡೌನ್ ಬೇಕೇ ಬೇಡ್ವಾ ಅನ್ನೋದು ಇಂದು ತೀರ್ಮಾನ ಆಗುವ ಸಾಧ್ಯತೆಗಳಿವೆ. ಇಂದು ಸಿಎಂ ಬಿಎಸ್‍ವೈ ನೇತೃತ್ವದಲ್ಲಿ ಕೊರೊನಾ ನಿಯಂತ್ರಣ ಕುರಿತಂತೆ ಟಾಸ್ಕ್ ಫೋರ್ಸ್ ಸಭೆ ನಡೆಯಲಿದೆ.

ಇಂದು ಸಂಜೆ 4 ಗಂಟೆಗೆ ಸಿಎಂ ಬಿಎಸ್‍ವೈ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಸಭೆ ನಡೆಯಲಿದೆ. ಬೆಂಗಳೂರಲ್ಲಿ ಮತ್ತೆ ಲಾಕ್‍ಡೌನ್ ಬೇಕೇ ಬೇಡ್ವೇ ಎಂಬ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಹಾಗೆ ಬೆಂಗಳೂರಲ್ಲಿ ಮತ್ತೆ ಲಾಕ್‍ಡೌನ್‍ನ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಯಲಿದೆ. ಜೊತೆಗೆ ಸೋಂಕು ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಯಲಿದೆ. ರೋಗ ನಿರೋಧಕ ಶಕ್ತಿ ವರ್ಧಿಸಲು ಆರ್ಯುವೇದ ಚಿಕಿತ್ಸಾ ಕ್ರಮದ ಬಗ್ಗೆ ಅಂತಿಮ ನಿರ್ಧಾರ ಮತ್ತು ಸೋಂಕಿನ ಲಕ್ಷಣ ಇಲ್ಲದವರಿಗೆ ಹೋಂ ಐಸೋಲೇಷನ್ ಬಗ್ಗೆ ಸ್ಪಷ್ಟ ನಿರ್ಧಾರ ಇವತ್ತು ಪ್ರಕಟವಾಗಬಹುದು.

ಇತ್ತ ಲಾಕ್‍ಡೌನ್ ಮಂಗಳವಾರಕ್ಕೆ ಮುಗಿಯಲಿದೆ. ರಾಜ್ಯದಲ್ಲಿ ಮತ್ತೆ ಎಲ್ಲೂ ಲಾಕ್‍ಡೌನ್ ಮಾಡಲ್ಲ ಎಂದು ಈಗಾಗ್ಲೇ ಸಿಎಂ ಹೇಳಿದ್ದಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮತ್ತು ಮೈಸೂರು ಉಸ್ತುವಾರಿ ಸಚಿವ ಎಸ್‍ಟಿ ಸೋಮಶೇಖರ್ ಹೇಳಿದ್ದಾರೆ. ಕೊರೊನಾ ಪಾಸಿಟಿವ್ ಕೇಸ್ ಬಂದ ಮನೆಯನ್ನಷ್ಟೇ ಸೀಲ್‍ಡೌನ್ ಮಾಡ್ತೇವೆ. ಎರಡ್ಮೂರು ಮನೆಗಳಲ್ಲಿ ಕೇಸ್ ಬಂದ್ರಷ್ಟೇ ರೋಡ್ ಸೀಲ್‍ಡೌನ್ ಮಾಡ್ತೇವೆ ಎಂದು ಎಸ್‍ಟಿ ಸೋಮಶೇಖರ್ ಹೇಳಿದ್ದಾರೆ. ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಕೂಡಾ ಮತ್ತೆ ಲಾಕ್‍ಡೌನ್ ಇಲ್ಲ ಎಂದಿದ್ದಾರೆ.
-

ಬೆಂಗಳೂರಲ್ಲಿ ಲಾಕ್‍ಡೌನ್ ಮುಂದುವರಿಯುತ್ತಾ?- ಸಚಿವರಲ್ಲಿ ಗೊಂದಲವೋ, ಗೊಂದಲ
– ಲಾಕ್‍ಡೌನ್ ಬಗ್ಗೆ ಸರ್ಕಾರದ ಪ್ಲ್ಯಾನ್ ಏನು?
ಬೆಂಗಳೂರು: ಲಂಗು ಲಗಾಮಿಲ್ಲದೇ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಕೊರೊನಾ ಮಾರಿ ಬೆಂಗಳೂರಲ್ಲಿ ಕಂಟ್ರೋಲ್ ಸಿಗುತ್ತಿಲ್ಲ. ಒಂದು ವಾರ ಸಾವಿರ ರೇಂಜ್‍ನಲ್ಲಿದ್ದ ಸೋಂಕು ಈಗ 2 ಸಾವಿರ ರೇಂಜ್‍ಗೆ ಬಂದಿದೆ. ಕಳೆದ ಮೂರು ದಿನಗಳಿಂದ 2 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗ್ತಿವೆ. ಇದನ್ನರಿತ ಸರ್ಕಾರ ಒಂದು ವಾರ ಬೆಂಗಳೂರಿಗೆ ಬೀಗ ಜಡಿದಿದೆ. ಅದರಲ್ಲಿ ಈಗ 3 ದಿನ ಕಳೆದು ಹೋಗಿದೆ. ಉಳಿದಿರೋದು ಇನ್ನೂ ನಾಲ್ಕು ದಿನ ಮಾತ್ರ. ಅಷ್ಟರಲ್ಲಿ ಕೊರೊನಾ ಕಂಟ್ರೋಲ್‍ಗೆ ಸಿಗುತ್ತಾ? ಚೈನ್ ಲಿಂಕ್ ಕಟ್ ಮಾಡೋಕೆ ಆಗುತ್ತಾ? ಲಾಕ್‍ಡೌನ್ ಮುಂದುವರಿಯುತ್ತಾ? ಈ ಪ್ರಶ್ನೆ ನಿಮಗಂತೂ ಕಾಡುತ್ತಿದೆದೆ. ಆದ್ರೆ ಇದಕ್ಕೆ ಸ್ವತಃ ಸರ್ಕಾರದಲ್ಲೂ ಗೊಂದಲ ಇದೆ.

ಬೆಂಗಳೂರಲ್ಲಿ ಕೊರೊನಾ ಕಂಟ್ರೋಲ್‍ಗೆ ಬರ್ತಿಲ್ಲ. ಸಿಎಂ ಸದ್ಯ ಒಂದು ವಾರ ಲಾಕ್‍ಡೌನ್ ಮಾಡಿದ್ದಾರೆ. ಲಾಕ್‍ಡೌನ್ ವಿಸ್ತರಿಸುವ ಸಂದರ್ಭ ಬಂದರೂ ಬರಬಹುದು ಅನ್ನೋ ಮೂಲಕ ಸಚಿವ ನಾರಾಯಣಗೌಡ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ. ಪರೋಕ್ಷವಾಗಿ ಲಾಕ್‍ಡೌನ್ ಇದೆ ಅನ್ನೋ ಸುಳಿವು ನೀಡಿದ್ದಾರೆ. ಆದರೆ ಸಚಿವ ಆರ್ ಅಶೋಕ್ ಇವರ ಮಾತನ್ನ ಅಲ್ಲಗೆಳೆದಿದ್ದಾರೆ.

ಲಾಕ್‍ಡೌನ್ ಮೊದಲು ಕೂಡ ಆರ್. ಅಶೋಕ್ ಹೀಗೆ ಸ್ಪಷ್ಟವಾಗಿಯೇ ಹೇಳಿದ್ರು. ಆದ್ರೆ ಕೊನೆಗೆ ಒಂದು ವಾರ ಲಾಕ್‍ಡೌನ್ ಮಾಡಿದರು. ಈಗಲೂ ಕೂಡ ಸಚಿವ ಆರ್.ಅಶೋಕ್ ಅದನ್ನೇ ಹೇಳ್ತಿದ್ದಾರೆ. ಬೆಂಗಳೂರಲ್ಲಿ ಲಾಕ್‍ಡೌನ್ ಮುಂದುವರಿಕೆ ಇಲ್ಲ. ಸಿಎಂ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ಸೀಲ್‍ಡೌನ್ ಬಗ್ಗೆ ಜಿಲ್ಲಾಧಿಕಾರಿಗಳ ಅಭಿಪ್ರಾಯ ಪಡೆಯುತ್ತಾರೆ ಎಂದು ಆರ್.ಅಶೋಕ್ ತಿಳಿಸಿದರು. ಆರ್. ಅಶೋಕ್ ಬೆನ್ನಿಗೆ ಮತ್ತೊಬ್ಬ ಸಚಿವ ಎಸ್. ಟಿ ಸೋಮಶೇಖರ್ ಕೂಡ ಲಾಕ್‍ಡೌನ್ ಇಲ್ಲ ಎಂದಿದ್ದಾರೆ. ಸೋಂಕಿರುವ ಕಡೆ ಸೀಲ್‍ಡೌನ್ ಮಾಡಬಹುದು ಅಷ್ಟೇ ಅಂದಿದ್ದಾರೆ. ಲಾಕ್‍ಡೌನ್ ವಿಸ್ತರಣೆ ಸಂಬಂಧ ಬಿಎಸ್‍ವೈ ಸಂಪುಟದ ಸಚಿವರಲ್ಲೇ ಗೊಂದಲಗಳಿವೆ. ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡಲು ಶುರು ಮಾಡಿದ್ದಾರೆ.

ಸರ್ಕಾರದ ಲಾಕ್‍ಡೌನ್ ಪ್ಲ್ಯಾನ್ ಏನು?
* ಲಾಕ್‍ಡೌನ್ ವಿಸ್ತರಣೆ ಮಾಡಿದ್ರೂ ಮಾಡಬಹುದು.
* ಲಾಕ್‍ಡೌನ್ ಮಾಡದೇ ಬೆಂಗಳೂರು ಬಿಗಿಗೊಳಿಸಬಹುದು.
* ಕಂಟೈನ್ಮೆಂಟ್ ಝೋನ್‍ಗಳಲ್ಲಿ ಮತ್ತಷ್ಟು ಸೀಲ್‍ಡೌನ್ ಮಾಡಬಹುದು.
* ಸಂಡೇ ಲಾಕ್‍ಡೌನ್ ಬದಲು ಶನಿವಾರವೂ ಮಾಡಬಹುದು.
* ಲಾಕ್‍ಡೌನ್ ಬದಲು ಸೋಂಕು ನಿಯಂತ್ರಿಸಬಹುದು.ಲಾಕ್‍ಡೌನ್ ಮಾಡಲು ಕಷ್ಟವ್ಯಾಕೆ?
* ಸದ್ಯದ ಪರಿಸ್ಥಿತಿಯಲ್ಲಿ ಲಾಕ್‍ಡೌನ್ ಮಾಡೋದು ಕಷ್ಟ.
* ಮತ್ತೆ ಲಾಕ್‍ಡೌನ್ ಮಾಡಿದ್ರೆ ರಾಜ್ಯದ ಆರ್ಥಿಕತೆಗೆ ಪೆಟ್ಟು.
* ಬೆಂಗಳೂರು ಆದಾಯವನ್ನೇ ನಂಬಿಕೊಂಡಿರುವ ಸರ್ಕಾರ.
* ರಾಜ್ಯದ ಬೊಕ್ಕಸಕ್ಕೆ ಶೇ.60ರಷ್ಟು ಆದಾಯ ಬೆಂಗಳೂರು ಮೊಲವೇ.
* ಒಂದು ವೇಳೆ ಲಾಕ್‍ಡೌನ್ ಮಾಡಿದ್ರೆ ರಾಜ್ಯದ ಆರ್ಥಿಕತೆಗೆ ಪೆಟ್ಟು. -

ಬೆಂಗಳೂರು ಇನ್ನೊಂದು ವಾರ ಲಾಕ್‍ಡೌನ್- 7 ದಿನ ಏನಿರುತ್ತೆ? ಏನಿರಲ್ಲ?
ಬೆಂಗಳೂರು: ರಾಜಧಾನಿ ಬೆಂಗಳೂರು ಮತ್ತೊಮ್ಮೆ ಲಾಕ್‍ಡೌನ್ ಆಗಿದೆ. ಡೆಡ್ಲಿ ವೈರಸ್ ಕೊರೊನಾ ಕಾರಣಕ್ಕೆ ಸಿಲಿಕಾನ್ ಸಿಟಿಗೆ ಮತ್ತೆ ಬೀಗ ಬಿದ್ದಿದೆ. ಇನ್ನೊಂದು ವಾರ ಬೆಂಗಳೂರಲ್ಲಿ ಯಾರು ಮಿಸುಕಾಡಂಗಿಲ್ಲ. ಅಡ್ಡಾದಿಡ್ಡಿ ಓಡಾಡಂಗಿಲ್ಲ. ತುರ್ತು ಅಂತೇಳಿ ಕಾರಣವನ್ನೂ ನೀಡಂಗಿಲ್ಲ. ಈಗಾಗಲೇ ಪೊಲೀಸರು ಎಲ್ಲಾ ಕಡೆ ಬ್ಯಾರೀಕೇಡ್ ಹಾಕಿ ಬೆಂಗಳೂರನ್ನ ಬಂದ್ ಮಾಡಿದ್ದಾರೆ. ಜುಲೈ 22 ಬೆಳಗ್ಗೆ 5 ಗಂಟೆವರೆಗೆ ಇಡೀ ಬೆಂಗಳೂರು ಕಂಪ್ಲೀಟ್ ಸ್ತಬ್ಧವಾಗಿರಲಿದೆ.

ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 12ಗಂಟೆವರೆಗೆ ಮಾತ್ರ ದಿನಸಿ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಬಹುದು. ಅದು ಮನೆಯ ಹತ್ತಿರದ ಅಂಗಡಿಗಳಲ್ಲಿ ಖರೀದಿಸಬೇಕು. ಅನಗತ್ಯವಾಗಿ ದೂರದ ಶಾಪ್‍ಗಳಿಗೆ ಹೋಗುವಂತಿಲ್ಲ. ಮಧ್ಯಾಹ್ನ 12 ಗಂಟೆ ನಂತರ ಎಲ್ಲವೂ ಬಂದ್ ಆಗಲಿವೆ.

ಮಾಂಸ, ಮೀನು ಮಾರಾಟಕ್ಕೆ ಲಾಕ್‍ಡೌನ್ ವೇಳೆಯೂ ಅನುಮತಿ ಇದೆ. ಆದ್ರೆ ಇದಕ್ಕೂ ಕೂಡ ಬೆಳಗ್ಗೆ 5 ರಿಂದ ಮಧ್ಯಾಹ್ನ 12ರವರೆಗೆ ಸಮಯ ನಿಗದಿ ಮಾಡಲಾಗಿದೆ. ಬಾರ್, ಲಿಕ್ಕರ್ ಶಾಪ್‍ಗಳು ಬಂದ್ 7 ದಿನ ಕಂಪ್ಲೀಟ್ ಲಾಕ್ ಆಗಲಿವೆ.
ತುರ್ತು ಅಗತ್ಯಗಳಿಗಾಗಿ ಮಾತ್ರ ಬಿಎಂಟಿಸಿ 134 ಬಸ್‍ಗಳು ರಸ್ತೆಗೆ ಇಳಿಯಲಿವೆ. ಕಂಟೈನ್‍ಮೆಂಟ್ ಝೋನ್ ಹೊರತುಪಡಿಸಿ, ಬೇರೆ ವಲಯಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 7 ಗಂಟೆ ತನಕ ಈ ಬಸ್‍ಗಳು ಓಡಾಡಲಿವೆ. ಆಟೋ, ಕ್ಯಾಬ್, ಟ್ಯಾಕ್ಸಿಗಳು ಯಾವುದೇ ಕಾರಣಕ್ಕೂ ರೋಡಿಗೆ ಇಳಿಯುವಂತಿಲ್ಲ. ದೇವಸ್ಥಾನ, ಮಸೀದಿ, ಚರ್ಚ್‍ಗಳನ್ನು ತೆರೆಯುವವಂತಿಲ್ಲ. ಪಾರ್ಕ್, ಶಾಪಿಂಗ್ ಮಾಲ್‍ಗಳು ಕೂಡ ಬಂದ್ ಆಗಿರಲಿವೆ. ಹೋಟೆಲ್, ರೆಸ್ಟೋರೆಂಟ್‍ಗಳಲ್ಲಿ ಪಾರ್ಸೆಲ್ ಗಷ್ಟೇ ಅವಕಾಶ ಇರಲಿದೆ. ಸ್ವಿಗ್ಗಿ, ಝೋಮ್ಯಾಟೋ ರಾತ್ರಿ 8 ಗಂಟೆಗೆ ಕ್ಲೋಸ್ ಆಗಲಿವೆ.
ವಿಮಾನ ಪ್ರಯಾಣಿಕರಿಗೆ ವಿನಾಯಿತಿ: ಪೆಟ್ರೋಲ್ ಬಂಕ್, ಕ್ಲಿನಿಕ್, ಆಸ್ಪತ್ರೆಗಳು, ಮೆಡಿಕಲ್ಸ್ ಸದಾ ಕಾಲ ಇದ್ದೇ ಇರುತ್ತೆ. ವಿಮಾನ ಪ್ರಯಾಣಿಕರಿಗೆ ವಿನಾಯಿತಿ ಇದ್ದು, ಏರ್‍ಪೋರ್ಟ್ ಗೆ ಹೋಗೋರು ಟಿಕೆಟ್ ತೆಗೆದುಕೊಳ್ಳಬೇಕು. ಊಬರ್, ಓಲಾ, ಏರ್ಪೋಟ್ ಡ್ಯೂಟಿ ಮಾಡುವವರು ಸಂಬಂಧ ಪಟ್ಟವರಿಂದ ಸಂಚಾರ ಅನುಮತಿಯ ಪತ್ರ ಪಡೆದಿರಬೇಕು. ಯಾರು ಬೇಕಾದ್ರು ಬೆಂಗಳೂರಿಂದ ಹೊರಗಡೆ ಹೋಗಬಹುದು. ಆದ್ರೆ ಸೇವಾ ಸಿಂಧು ಅಡಿಯಲ್ಲಿ ಬರಬೇಕು. ತುರ್ತು ಸೇವೆಯಲ್ಲಿ ಒಡಾಡುವರು ಕಡ್ಡಾಯವಾಗಿ ಐಡಿ ಕಾರ್ಡ್ ತೊರಿಸಬೇಕು. ಖಾಸಗಿ ವಾಹನಗಳಿಗೆ ಅನುಮತಿ ಇಲ್ಲ.
ಬಿಬಿಎಂಪಿ ಕಚೇರಿಗಳು ಎಂದಿನಂತೆ ತೆರೆಯುತ್ತವೆ. ಅಂಚೆ ಕಚೇರಿ, ಬ್ಯಾಂಕ್, ಎಟಿಎಂ ಎಂದಿನಂತೆ ಇರುತ್ತವೆ. ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡಗಳಲ್ಲಿ ಶೇ.50ರಷ್ಟು ಸಿಬ್ಬಂದಿಯೊಂದಿಗೆ ಕೆಲಸ ನಡೆಯಲಿವೆ. ಖಾಸಗಿ ಕಚೇರಿ, ವಾಣಿಜ್ಯ ಕಚೇರಿ/ಚಟುವಟಿಕೆ ಇರಲ್ಲ. ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಅನುಮತಿ ಇವೆ. ಕೈಗಾರಿಕೆ, ಕಾರ್ಖಾನೆ ತೆರೆಯಲು ಲಾಕ್‍ಡೌನ್‍ನಿಂದ ರಿಲೀಫ್ ಕೊಡಲಾಗಿದೆ. ಹಾರ್ಡ್‍ವೇರ್, ಸಿಮೆಂಟ್ ಅಂಗಡಿಗಳನ್ನು ತೆರೆಯಲು ಅನುಮತಿ ಇದೆ. ಆಹಾರ ಸಂಸ್ಕರಣೆ, ಔಷಧ ತಯಾರಿಕಾ ಕಾರ್ಖಾನೆ ಓಪನ್ ಇರಲಿವೆ. ಆನ್‍ಲೈನ್ ಕಂಪನಿಗಳಿಂದ ಹೋಂ ಡೆಲಿವರಿಗೆ ಅನುಮತಿ ನೀಡಲಾಗಿದೆ
-

ಲಾಕ್‍ಡೌನ್ ಎಫೆಕ್ಟ್ – 2 ದಿನದಲ್ಲಿ 410 ಕೋಟಿ ಮೌಲ್ಯದ ಎಣ್ಣೆ ಸೇಲ್
ಬೆಂಗಳೂರು: ನಾಳೆಯಿಂದ ಬೆಂಗಳೂರು ಸೇರಿದಂತೆ ಏಳು ಜಿಲ್ಲೆಗಳು ಲಾಕ್‍ಡೌನ್ ಆಗಲಿವೆ. ಲಾಕ್‍ಡೌನ್ ಅವಧಿ ಡ್ರೈ ಡೇ ಅಗೋದ ಬೇಡ ಅಂತ ಮದ್ಯಪ್ರಿಯರು ಎಣ್ಣೆ ಖರೀದಿಗೆ ಮುಗಿಬಿದ್ದಿದ್ದರು. ಎರಡು ದಿನಗಳಲ್ಲಿ ಅಬಕಾರಿ ಇಲಾಖೆ 410 ಕೋಟಿ ರೂ. ಮೌಲ್ಯದ ಮದ್ಯವನ್ನು ಮಾರಾಟ ಮಾಡಿ ಬೊಕ್ಕಸ ತುಂಬಿಕೊಂಡಿದೆ.

ಸೋಮವಾರ ಒಂದೇ ದಿನ ಬರೋಬ್ಬರಿ 230 ಕೋಟಿ ಮೌಲ್ಯದ ಮದ್ಯವನ್ನು ಕೆಎಸ್‍ಬಿಎಲ್ (ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ) ಮಾರಿದೆ. ಸೋಮವಾರ 215 ಕೋಟಿ ಮೌಲ್ಯದ 4.89 ಲಕ್ಷ ಲೀಟರ್ ಐಎಂಎಲ್ ಮತ್ತು 15 ಕೋಟಿ ರೂ. ಮೌಲ್ಯದ 0.83 ಲಕ್ಷ ಲೀಟರ್ ಬೀರ್ ಮಾರಾಟವಾಗಿದೆ.

ಇಂದು ಸಹ 179 ಕೋಟಿ ಮೌಲ್ಯದ ಮದ್ಯ ಮಾರಾಟಗೊಂಡಿದೆ. ಸೋಮವಾರ ಮತ್ತು ಮಂಗಳವಾರ ಎರಡು ದಿನ ಅಂದಾಜು 410 ಕೋಟಿ ರೂ. ಅಬಕಾರಿ ಇಲಾಖೆ ಬೊಕ್ಕಸ ತುಂಬಿಕೊಂಡಿದೆ. ಬೆಂಗಳೂರು ಸೇರಿದಂತೆ ಲಾಕ್‍ಡೌನ್ ಪ್ರದೇಶಗಳಲ್ಲಿ ಏಳು ದಿನಗಳ ಮದ್ಯದಂಗಡಿಗಳು ಬಾಗಿಲು ತೆಗೆಯಲಿವೆ.
-

ಬೆಂಗಳೂರಿಗೆ ಏಳು ದಿನ ಬೀಗ – ರಾಜಧಾನಿ ಸಂಪರ್ಕಿಸುವ ರಸ್ತೆ ಬಂದ್
ಬೆಂಗಳೂರು: ಕೊರೊನಾ ತಡೆಗಾಗಿ ಬೆಂಗಳೂರಿಗೆ ಸರ್ಕಾರ ಏಳು ದಿನ ಬೀಗ ಹಾಕಿದೆ. ರಾತ್ರಿ 8 ಗಂಟೆಯಿಂದಲೇ ಬೆಂಗಳೂರಿನಲ್ಲಿ ಲಾಕ್‍ಡೌನ್ ಆರಂಭಗೊಂಡಿದ್ದರೂ ವಲಸೆ ಹೋಗುತ್ತಿರೋ ಜನರ ಸಂಖ್ಯೆ ಕಡಿಮೆ ಆಗ್ತಿಲ್ಲ. ಕೊರೊನಾ ಭೀತಿಯಿಂದಾಗಿ ಕಳೆದ 10 ದಿನಗಳಲ್ಲಿ ಸುಮಾರು ಎಂಟು ಲಕ್ಷ ಜನರು ಮಹಾನಗರಿ ಬೆಂಗಳೂರಿಗೆ ವಿದಾಯ ಹೇಳಿದ್ದಾರೆ.

ಇಂದು ಸುದ್ದಿಗೋಷ್ಠಿ ನಡೆಸಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಅನವಶ್ಯಕವಾಗಿ ಮನೆಯಿಂದ ಹೊರಗೆ ಬರುವಂತಿಲ್ಲ. ರಾತ್ರಿ ಎಂಟು ಗಂಟೆಯಿಂದ ನಗರದಲ್ಲಿ 144 ಸೆಕ್ಷನ್ ಜಾರಿಯಾಗಲಿದೆ. ಸಾರಿಗೆ ಬಸ್ ಸೇರಿದಂತೆ ಯಾವುದೇ ಖಾಸಗಿ ವಾಹನಗಳ ಸಂಚಾರ ಇರಲ್ಲ. ನಗರದ ಎಲ್ಲ ಫ್ಲೈಓವರ್ ಬಂದ್ ಮಾಡಲಾಗುತ್ತಿದೆ. ಪ್ರತಿದಿನ ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ದಿನಸಿ, ತರಕಾರಿ ಅಂಗಡಿಗಳಿಗೆ ಅನುಮತಿ ನೀಡಲಾಗಿದೆ ಎಂದು ಹೇಳಿದ್ದಾರೆ.

ಯಾರು ಬೇಕಾದ್ರೂ ಬೆಂಗಳೂರಿನಿಂದ ಹೊರಗಡೆ ಹೋಗಬಹುದು. ಆದ್ರೆ ಬರುವಾಗ ಸೇವಾಸಿಂದುವಿನಡಿಯಲ್ಲಿ ಬರಬೇಕು. ಇನ್ನು ವಿಮಾನ ನಿಲ್ದಾಣಕ್ಕೆ ಹೋಗುವರರು ಕಡ್ಡಾಯವಾಗಿ ತಮ್ಮ ಟಿಕೆಟ್ ತೆಗೆದುಕೊಂಡು ಹೋಗಬೇಕು. ಚೆಕ್‍ಪೋಸ್ಟ್ ಗಳಲ್ಲಿ ವಿಮಾನ ಪ್ರಯಾಣದ ಟಿಕೆಟ್ ನ್ನು ಪಾಸ್ ನಂತೆ ಪರಿಗಣಿಸಲಾಗುವುದು. ತುರ್ತುಸೇವೆಗಳಿಗೆ ಅನುಮತಿ ನೀಡಲಾಗಿದ್ದು, ಅನಗತ್ಯ ಸಂಚಾರ ಕಂಡು ಬಂದ್ರೆ ಲಾಠಿ ಬಳಸಬೇಕಾಗುತ್ತದೆ ಎಂದು ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ.
-

ಲಾಕ್‍ಡೌನ್ ಮಾರ್ಗಸೂಚಿ ಮಾರ್ಪಾಡು- ಮದ್ಯ ಮಾರಾಟಕ್ಕಿಲ್ಲ ಅವಕಾಶ
ಬೆಂಗಳೂರು: ಲಾಕ್‍ಡೌನ್ ಮಾರ್ಗಸೂಚಿಯನ್ನು ಸರ್ಕಾರ ಮಾರ್ಪಾಡು ಮಾಡಿದ್ದು, ಮದ್ಯ ಮಾರಾಟಕ್ಕೆ ನೀಡಿದ ಅನುಮತಿಯನ್ನು ಹಿಂಪಡೆದಿದೆ.
ಮಂಗಳವಾರ ರಾತ್ರಿ 8 ಗಂಟೆಯಿಂದ ಬೆಂಗಳೂರು ಲಾಕ್ ಆಗಲಿದೆ. ಈ ಸಂಬಂಧ ಸರ್ಕಾರ ಪ್ರಕಟಿಸಿದ ಮೊದಲ ಮಾರ್ಗಸೂಚಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿತ್ತು. ಬೆಳಗ್ಗೆ 10 ರಿಂದ ಸಂಜೆ 5ರವೆರೆಗೆ ಮದ್ಯದ ಮಳಿಗೆಗಳನ್ನು ತೆರೆಯಲು ಅನುಮತಿ ನೀಡಿತ್ತು. ಕೇವಲ ಪಾರ್ಸೆಲ್ ನೀಡಬೇಕೆಂದು ಮಾರ್ಗಸೂಚಿಯಲ್ಲಿ ಹೇಳಿತ್ತು.

ಸರ್ಕಾರದ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಲೇ ಎಚ್ಚೆತ್ತ ಸರ್ಕಾರ ಮಾರ್ಗಸೂಚಿಯಲ್ಲಿ ಬದಲಾವಣೆ ತಂದಿದೆ. ಮಂಗಳವಾರ ರಾತ್ರಿ 8 ಗಂಟೆಯಿಂದ ರಾಜಧಾನಿಯಲ್ಲಿ ಮದ್ಯದ ಮಳಿಗೆಗಳು ಮುಚ್ಚಲಿವೆ. ಮೊದಲಿನ ಮಾರ್ಗಸೂಚಿ ನೋಡಿದ್ದ ಖುಷಿಯಾಗಿದ್ದ ಗುಂಡೈಕ್ಳಿಗೆ ಸರ್ಕಾರ ಶಾಕ್ ನೀಡಿದೆ.
-

ಬೆಂಗಳೂರು ಲಾಕ್‍ಡೌನ್ ಮಾರ್ಗಸೂಚಿ ಪ್ರಕಟ – ಏನಿರುತ್ತೆ? ಏನಿರಲ್ಲ?
ಬೆಂಗಳೂರು: ಮಂಗಳವಾರ ರಾತ್ರಿ 8 ಗಂಟೆಯಿಂದ ಬೆಂಗಳೂರು ಲಾಕ್ ಆಗಲಿದೆ. ಸಿಲಿಕಾನ್ ಸಿಟಿ ಲಾಕ್‍ಡೌನ್‍ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಕಂಟೈನ್‍ಮೆಂಟ್ ಝೋನ್ ಹೊರತುಪಡಿಸಿ ಉಳಿದು ಭಾಗಗಳಲ್ಲಿ ಕೆಲವು ವಿನಾಯ್ತಿಗಳನ್ನು ಸರ್ಕಾರ ನೀಡಿದೆ.

ಏನಿರುತ್ತೆ?
* ಈಗಾಗಲೇ ಬುಕ್ ಮಾಡಿರುವ ವಿಮಾನ ಮತ್ತು ರೈಲು ಸೇವೆ ಇರಲಿದ್ದು, ಪ್ರಯಾಣಿಕರು ತಮ್ಮ ಪ್ರಯಾಣದ ಟಿಕೆಟ್ ತೋರಿಸಿ ಮನೆ ಸೇರಿಕೊಳ್ಳಬಹುದು.
* ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಆಟೋ, ಕ್ಯಾಬ್ ಬಳಕೆಗೆ ಅವಕಾಶ
* ಲಾಕ್‍ಡೌನ್ ಆದೇಶಕ್ಕೂ ಮುನ್ನ ನಿಗದಿಯಾಗದ ಪರೀಕ್ಷೆಗಳು ನಡೆಯಲಿವೆ.
* ಕೃಷಿ ಮಳಿಗೆಗಳು ತೆರೆಯಲು ಅವಕಾಶ
* ಸರಕು ಸಾಗಾಟದ ವಾಹನಗಳಿಗೆ ಅನುಮತಿ
* ಆರೋಗ್ಯ ಸೇವೆಗಳು
* ಔಷಧಿ, ತರಕಾರಿ, ಹಣ್ಣು, ದಿನ ಪತ್ರಿಕೆ, ಆನ್‍ಲೈನ್ ಫುಡ್, ಮಾಂಸದಂಗಡಿ
* ಮದ್ಯದಂಗಡಿಗಳು ಓಪನ್ ಪಾರ್ಸೆಲ್‍ಗೆ ಮಾತ್ರ ಅವಕಾಶ (ಬೆಳಗ್ಗೆ 10 ರಿಂದ ಸಂಜೆ 5ರವೆರೆಗೆ)
* ಪಡಿತರ ಅಂಗಡಿಗಳು, ದಿನಸಿ ಅಂಗಡಿಗಳು
* ಬ್ಯಾಂಕ್ ಮತ್ತು ಎಟಿಎಂ
ಏನಿರಲ್ಲ?
* ಹೊಸ ವಿಮಾನ ಸಂಚಾರ, ರೈಲು ಸೇವೆ ಇರಲ್ಲ. ಮೆಟ್ರೋ ರೈಲು ಸೇವೆ, ಆಟೋ, ಖಾಸಗಿ ವಾಹನ, ಸಾರಿಗೆ ಬಸ್ ಬಂದ್ ಆಗಿರಲಿದೆ.
* ಶಾಲಾ- ಕಾಲೇಜುಗಳು ಬಂದ್.
* ಹೋಟೆಲ್, ಬಾರ್, ರೆಸ್ಟೋರೆಂಟ್ ಇರಲ್ಲ (ಪಾರ್ಸೆಲ್ ಗೆ ಮಾತ್ರ ಅವಕಾಶ)
* ಶಾಪಿಂಗ್ ಮಾಲ್, ಸಿನಿಮಾ ಥಿಯೇಟರ್, ಜಿಮ್ ಸೆಂಟರ್, ಕ್ರೀಡಾ ಸಂಕೀರ್ಣ, ಈಜುಕೊಳ, ಮನರಂಜನಾ ಕೇಂದ್ರಗಳು, ಸಭಾ ಭವನ
* ರಾಜಕೀಯ, ಧಾರ್ಮಿಕ, ಮದುವೆ, ಸಮಾರಂಭಗಳಿಗೆ ಅವಕಾಶವಿಲ್ಲ
* ಎಲ್ಲ ಧಾರ್ಮಿಕ ಕೇಂದ್ರಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧ.ಬೆಂಗಳೂರು ಪ್ರದೇಶ ಲಾಕ್ಡೌನ್ಗಾಗಿ ಮಾರ್ಗಸೂಚಿಗಳು.
Guidelines for Lockdown. pic.twitter.com/pVSb463MJ1— Karnataka Health Department (@DHFWKA) July 13, 2020
-

ಬೆಂಗಳೂರಿನಲ್ಲಿ ಒಂದು ವಾರವಷ್ಟೇ ಲಾಕ್‍ಡೌನ್: ಸಿಎಂ ಬಿಎಸ್‍ವೈ
ಬೆಂಗಳೂರು: ಸದ್ಯ ಸಿಲಿಕಾನ್ ಸಿಟಿಯಲ್ಲಿ ವಿಧಿಸಲಾಗುತ್ತಿರುವ ಲಾಕ್‍ಡೌನ್ ಒಂದು ವಾರವಷ್ಟೇ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಇಂದು ಟಾಸ್ಕ್ ಫೋರ್ಸ್, ಜಿಲ್ಲಾಧಿಕಾರಿಗಳ ಜೊತೆ ಮುಖ್ಯಮಂತ್ರಿಗಳು ಸಭೆ ನಡೆಸಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ವಿಧಿಸಲಾಗಿರುವ 1 ವಾರದ ಲಾಕ್ ಡೌನ್ ಅನ್ನು ವಿಸ್ತರಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಜನರು ಆತಂಕಪಡದೆ, ವದಂತಿಗಳಿಗೆ ಕಿವಿಗೊಡದೆ, ಸರ್ಕಾರದೊಂದಿಗೆ ಸಹಕರಿಸಬೇಕೆಂದು ಮುಖ್ಯಮಂತ್ರಿಗಳು ಕೋರಿದ್ದಾರೆ.

ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ನಿಯಂತ್ರಣಕ್ಕಾಗಿ ಲಾಕ್ ಡೌನ್ ವಿಧಿಸಲಾಗಿದೆ. 1 ವಾರದೊಳಗೆ ವ್ಯವಸ್ಥೆಗಳನ್ನು ಸರಿಪಡಿಸಿಕೊಂಡು, ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳು ಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಇಂದು ಮುಖ್ಯಮಂತ್ರಿ ಶ್ರೀ@BSYBJPರವರು ಕೋವಿಡ್ ಟಾಸ್ಕ್ ಫೋರ್ಸ್ ಸಭೆ ನಡೆಸಿದರು. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ವಿಧಿಸಲಾಗಿರುವ 1 ವಾರದ ಲಾಕ್ ಡೌನ್ ಅನ್ನು ವಿಸ್ತರಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಜನರು ಆತಂಕಪಡದೆ, ವದಂತಿಗಳಿಗೆ ಕಿವಿಗೊಡದೆ, ಸರ್ಕಾರದೊಂದಿಗೆ ಸಹಕರಿಸಬೇಕೆಂದು ಮುಖ್ಯಮಂತ್ರಿಗಳು ಕೋರಿದ್ದಾರೆ (1/2) pic.twitter.com/Gy5Xp4W6Z7
— CM of Karnataka (@CMofKarnataka) July 13, 2020
-

ಬೆಂಗಳೂರು ಲಾಕ್‍ಡೌನ್-800 ಹೆಚ್ಚುವರಿ ಬಸ್‍ಗಳ ವ್ಯವಸ್ಥೆ
ಬೆಂಗಳೂರು: ಮಂಗಳವಾರ ರಾತ್ರಿ 8 ಗಂಟೆಯಿಂದ ರಾಜಧಾನಿ ಸಂಪೂರ್ಣ ಲಾಕ್‍ಡೌನ್ ಆಗಲಿದೆ. ಈ ಹಿನ್ನೆಲೆ ಬೆಂಗಳೂರಿನಿಂದ ಹೊರ ಹೋಗುತ್ತಿರುವ ಜನ ಅನಕೂಲಕ್ಕಾಗಿ 800 ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಇಂದು (ಸೋಮವಾರ) ಮತ್ತು ನಾಳೆ (ಮಂಗಳವಾರ) ಪ್ರತಿದಿನ 800 ಹೆಚ್ಚುವರಿ ಬಸ್ಸುಗಳನ್ನು ಅಂದರೆ ಒಟ್ಟು 1600 ಬಸ್ಸುಗಳನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಕಾರ್ಯಾಚರಣೆಗೊಳಿಸಲಾಗುತ್ತಿದೆ. ಇದಲ್ಲದೇ ಅಗತ್ಯವಿದ್ದರೆ ಮತ್ತಷ್ಟು (200) ಬಸ್ಸುಗಳನ್ನು ಕಾರ್ಯಾಚರಣೆಗೆ ಸಜ್ಜುಗೊಳಿಸಲಾಗಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಜೊತೆಗೆ ಪ್ರಯಾಣಿಕರ ಹಿತದೃಷ್ಟಿಯಿಂದ ಇತರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಉಪಮುಖ್ಯಮಂತ್ರಿಗಳು ಮಾಹಿತಿ ನೀಡಿದ್ದಾರೆ.

ಕೊರೊನಾ ಆತಂಕ ಮತ್ತು ಲಾಕ್‍ಡೌನ್ ನಿಂದಾಗಿ ಇಂದು ಬೆಳಗ್ಗೆಯಿಂದಲೇ ಬೆಂಗಳೂರು ಬಿಡುತ್ತಿದ್ದಾರೆ. ಸಿಕ್ಕ ಸಿಕ್ಕ ವಾಹನಗಳಲ್ಲಿ ಊರು ಸೇರಿಕೊಳ್ಳುವ ಅವಸರದಲ್ಲಿ ಜನರಿದ್ದಾರೆ. ಇನ್ನು ಕೆಲವರು ಮನೆಗಳನ್ನು ಖಾಲಿ ಮಾಡಿಕೊಂಡು ಗಂಟು ಮೂಟೆ ಸಹಿತ ಊರಿನತ್ತ ಪ್ರಯಾಣ ಬೆಳೆಸುತ್ತಿದ್ದಾರೆ.
