Tag: Bengaluru International Film Festival

  • 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ರಾಯಭಾರಿಯಾಗಿ ನಟ ಕಿಶೋರ್‌ ನೇಮಕ

    16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ರಾಯಭಾರಿಯಾಗಿ ನಟ ಕಿಶೋರ್‌ ನೇಮಕ

    ಬೆಂಗಳೂರು: 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ರಾಯಭಾರಿಯಾಗಿ ನಟ ಕಿಶೋರ್‌ ನೇಮಕಗೊಂಡಿದ್ದಾರೆ. ರಾಯಭಾರಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

    2025ರ ಮಾ.1 ರಿಂದ 8ರ ವರೆಗೆ ಚಿತ್ರೋತ್ಸವ ನಡೆಯಲಿದೆ. ಸುಮಾರು 8 ದಿನಗಳ ಕಾಲ ಬೆಂಗಳೂರಿನ 13 ಚಿತ್ರಮಂದಿರಗಳಲ್ಲಿ ವಿವಿಧ ಚಿತ್ರಗಳ ಪ್ರದರ್ಶನ ಇರಲಿದೆ.

  • BIFFES 2023- ಬೆಂಗಳೂರು ಚಿತ್ರೋತ್ಸವ SCHEDULE : ಮಾರ್ಚ್ 24 ರಿಂದ 30ರವರೆಗೆ

    BIFFES 2023- ಬೆಂಗಳೂರು ಚಿತ್ರೋತ್ಸವ SCHEDULE : ಮಾರ್ಚ್ 24 ರಿಂದ 30ರವರೆಗೆ

    ಮಾರ್ಚ್ 23 ರಿಂದ 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ (BIFFES) ಆರಂಭವಾಗಲಿದ್ದು, 23 ರಂದು ಉದ್ಘಾಟನೆ ಮತ್ತು ಉದ್ಘಾಟನಾ ಸಿನಿಮಾವಾಗಿ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಚಿತ್ರ ಪ್ರದರ್ಶನವಾಗಲಿದೆ.

    (2023 ಮಾರ್ಚ್ 24)

    ಮಾರ್ಚ್ 24 ರಿಂದ 30ರವರೆಗೆ ಒಟ್ಟು ಎಂಟು ದಿನಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ. ಯಾವ ಸಿನಿಮಾಗಳು, ಯಾವ ದಿನಾಂಕ ಮತ್ತು ಸ್ಥಳದಲ್ಲಿ ನಡೆಯುತ್ತವೆ ಎನ್ನುವ ವಿವರವೂ ಈ ಪಟ್ಟಿಯಲ್ಲಿವೆ.

    (2023 ಮಾರ್ಚ್ 25)

    ಮಾರ್ಚ್ 24 ರಿಂದ ಬೆಂಗಳೂರಿನ ಒರಯನ್ ಮಾಲ್, ಕಲಾವಿದರ ಸಂಘ ಹಾಗೂ ಸುಚಿತ್ರಾ ಫಿಲ್ಮ್ಸ್ ನಲ್ಲಿ ಚಿತ್ರ ಪ್ರದರ್ಶನಗಳು ನಡೆಯಲಿವೆ. ಚಿತ್ರ ಪ್ರದರ್ಶನ, ಗೋಷ್ಠಿಗಳು, ಸಂದರ್ಶನ, ಸಿನಿಮಾ ಸ್ಪರ್ಧೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಚಿತ್ರೋತ್ಸವದ ಭಾಗವಾಗಿ ಆಯೋಜನೆ ಮಾಡಿದ್ದಾರೆ.

    (2023 ಮಾರ್ಚ್ 26)

    ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆರ್.ಆರ್.ಆರ್ ಸೇರಿದಂತೆ ಸಾಕಷ್ಟು ಹಿಟ್ ಚಿತ್ರಗಳಿಗೆ ಕಥೆ, ಚಿತ್ರಕಥೆ ಬರೆದಿರುವ ವಿ.ವಿಜಯೇಂದ್ರ ಪ್ರಸಾದ್ ಬರಲಿದ್ದಾರೆ. ಚಿತ್ರೋತ್ಸವದ ಸ್ಮರಣ ಸಂಚಿಕೆಯನ್ನು ಅವರು ಉದ್ಘಾಟನಾ ಸಮಾರಂಭದಲ್ಲಿ ಬಿಡುಗಡೆಗೊಳಿಸಲಿದ್ದಾರೆ.

    (2023 ಮಾರ್ಚ್ 27)

    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಜಂಟಿಯಾಗಿ ಆಯೋಜಿಸಿರುವ ಈ ಚಿತ್ರೋತ್ಸವ ಮಾರ್ಚ್ 23 ರಿಂದ ಆರಂಭವಾಗಿ 30ನೇ ತಾರೀಖಿನವರೆಗೂ ನಡೆಯಲಿದೆ. ನೂರಕ್ಕೂ ಹೆಚ್ಚು ಚಿತ್ರಗಳು ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ.

    (2023 ಮಾರ್ಚ್ 28)

    ಈ ಚಿತ್ರೋತ್ಸವದಲ್ಲಿ ಒಟ್ಟು ಮೂರು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಕನ್ನಡ ವಿಭಾಗ, ಇಂಡಿಯನ್ ವಿಭಾಗ ಹಾಗೂ ಏಷನ್ ವಿಭಾಗಗಳಲ್ಲಿ ಸ್ಪರ್ಧೆಗಳಿದ್ದು ಹತ್ತು ಲಕ್ಷ ರೂಪಾಯಿ ಬಹುಮಾನ ಕೂಡ ಇದೆ. ಚಿತ್ರೋತ್ಸವದ ಕೊನೆಯ ದಿನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

    (2023 ಮಾರ್ಚ್ 29)

    ಈ ಬಾರಿ ಖ್ಯಾತ ಫೋಟೋಗ್ರಾಫರ್ ಮೂರ್ತಿ ಅವರ ನೆನಪಿನಲ್ಲಿ ಹಲವು ಕಾರ್ಯಕ್ರಮಗಳು ನಡೆಯಲಿವೆ. ವಿಶೇಷವಾಗಿ ಫೋಟೋಗ್ರಫಿ ಮೇಲೆ ಕ್ಲಾಸ್ ಗಳನ್ನು ಆಯೋಜನೆ ಮಾಡಲಾಗಿದೆ. ಅಲ್ಲದೇ, ಮೂರ್ತಿ ಅವರ ಕುರಿತಾದ ಉಪನ್ಯಾಸ ಕೂಡ ಇದೆ.

    (2023 ಮಾರ್ಚ್ 30)

    ಚಿತ್ರೋತ್ಸವದ ಸಮಾರೋಪ ಸಮಾರಂಭವು ವಿಧಾನಸೌಧದಲ್ಲಿ ನಡೆಯಲಿದ್ದು, ಸಮಾರಂಭದ ಅತಿಥಿಯಾಗಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಭಾಗಿಯಾಗಲಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಸಚಿವರು ಮತ್ತು ಚಿತ್ರೋದ್ಯಮದ ಗಣ್ಯರು ಉಪಸ್ಥಿತರಿರಲಿದ್ದಾರೆ.

  • ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ – ಯಾವೆಲ್ಲ ಚಿತ್ರಗಳು ಸ್ಪರ್ಧಾ ಕಣದಲ್ಲಿ?

    ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ – ಯಾವೆಲ್ಲ ಚಿತ್ರಗಳು ಸ್ಪರ್ಧಾ ಕಣದಲ್ಲಿ?

    ಬೆಂಗಳೂರು: ಕರ್ನಾಟಕ ಚಲನಚಿತ್ರ ಅಕಾಡೆಮಿಯ ಆಶ್ರಯದಲ್ಲಿ ನಡೆಯುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್ 3 ರಿಂದ ಮಾ.10ವರೆಗೆ ಏಳು ದಿನಗಳ ಕಾಲ ಬೆಂಗಳೂರಿನ ನಡೆಯಲಿದೆ. ಸಿನಿಮಾ ಪ್ರದರ್ಶನದ ಜತೆಗೆ ಹಲವು ವಿಭಾಗಗಳಲ್ಲಿ ಸ್ಪರ್ಧೆ ಕೂಡ ನಡೆಯಲಿದ್ದು, ಈ ಸ್ಪರ್ಧೆಗಾಗಿ ಆಯ್ಕೆಯಾದ ಕನ್ನಡ ಚಿತ್ರಗಳಿವು.

    2020ನೇ ಸಾಲಿನಲ್ಲಿ ಬಿಡುಗಡೆಯಾದ ಸಿನಿಮಾಗಳಲ್ಲಿ ‘ಕನ್ನಡ ಸಿನಿಮಾ ಕಾಂಪಿಟೇಶನ್’ ವಿಭಾಗದಲ್ಲಿ ಸಿದ್ದು ಪೂರ್ಣಚಂದ್ರ ನಿರ್ದೇಶನದ ‘ದಾರಿ ಯಾವುದಯ್ಯ ವೈಕುಂಠಕ್ಕೆ’, ವಿಶಾಲ್ ರಾಜ್ ನಿರ್ದೇಶನದ ‘ದಂತಪೂರ್ಣ’, ಆಕಾಶ್ ಗುಬ್ಬಿ ನಿರ್ದೇಶನದ ‘ಗವಿಸಿದ್ಧ’, ರಾಮ್ ಪ್ರಸಾದ್ ನಾಯ್ಡು ನಿರ್ದೇಶನದ ‘ಗಿಳಿಯು ಪಂಜರದೊಳಿಲ್ಲ’, ಸಿತೇಶ್ ಗೋವಿಂದ್ ನಿರ್ದೇಶನದ ‘ಇದು ಎಂತಹ ಲೋಕವಯ್ಯ’, ಶಿವಾನಂದ್.ಬಿ ನಿರ್ದೇಶನದ ‘ಜಿಹಾದ್’, ಸಮರ್ಥ ನಿರ್ದೇಶನದ ‘ಕಾಡುಮಲೆ’, ರಶ್ಮಿ ಮತ್ತು ಪೂರ್ಣಶ್ರೀ.ಆರ್ ನಿರ್ದೇಶನದ ‘ಮನೆ’, ಅಮರ್ ನಿರ್ದೇಶನದ ‘ಮಸಣದ ಹೂವು’, ಸುರೇಶ್ ಶೆಟ್ಟಿ ನಿರ್ದೇಶನದ ‘ಮುನ್ನುಡಿ’, ಶ್ರೀಧರ್ ಸಿಯಾ ನಿರ್ದೇಶನದ ‘ಓ ನನ್ನ ಚೇತನ’, ಪೃಥ್ವಿ ಕೊನಾನೂರು ನಿರ್ದೇಶನದ ‘ಪಿಂಕಿ ಎಲ್ಲಿ?’, ಆರ್ನ ಸಾಧ್ಯ ನಿರ್ದೇಶನದ “ಸಾರ ವಜ್ರ’ ಚಿತ್ರಗಳು ಆಯ್ಕೆಯಾಗಿವೆ. ಇದನ್ನೂ ಓದಿ:  ಮಾರ್ಚ್‌ನಲ್ಲಿ ಬೆಲ್ ಬಾಟಮ್ 2 ಪಕ್ಕಾ


    ಕನ್ನಡ ಸಿನಿಮಾ ಪಾಪ್ಯುಲರ್ ಎಂಟರ್ ಟೈನ್ಮೆಂಟ್ ಕಾಂಪಿಟೇಷನ್ ವಿಭಾಗ 2020ರಲ್ಲಿ ಆಯ್ಕೆಯಾದ ಚಿತ್ರಗಳು : ಮಂಸೋರೆ ನಿರ್ದೇಶನದ ‘ಆಕ್ಟ್ 1978’, ಅಶೋಕ್ ಕೆ.ಎಸ್ ನಿರ್ದೇಶನದ ‘ದಿಯಾ’, ಜಗದೀಶ್ ಕುಮಾರ್ ಹಂಪಿ ನಿರ್ದೇಶನದ ‘ಜಂಟಲ್ ಮೆನ್’, ಡಾರ್ಲಿಂಗ್ ಕೃಷ್ಣ ನಿರ್ದೇಶನದ ‘ಲವ್ ಮಾಕ್ಟೈಲ್’, ದುನಿಯಾ ಸೂರಿ ನಿರ್ದೇಶನದ ‘ಪಾಪ್ ಕಾರ್ನ್ ಮಂಕಿ ಟೈಗರ್’, ಆಕಾಶ್ ಶ್ರೀವತ್ಸ ನಿರ್ದೇಶನದ ‘ಶಿವರಾಜಿ ಸುರತ್ಕಲ್’, ಎನ್.ಎನ್. ಪ್ರಭು ನಿರ್ದೇಶನದ ‘5 ಅಡಿ 7 ಅಂಗುಲ’, ನವೀನ್ ಶೆಟ್ಟಿ ನಿರ್ದೇಶನದ ‘ಗಂಜಾಲ್’ ಚಿತ್ರಗಳು ಆಯ್ಕೆಯಾಗಿವೆ. ಇದನ್ನೂ ಓದಿ: ವಿಷ್ಣುವರ್ಧನ್ ಅವರ ಸಿನಿಮಾಗೆ ಬಪ್ಪಿ ಲಹರಿ ಹಾಡು

    2021ನೇ ಸಾಲಿನಲ್ಲಿ ಬಿಡುಗಡೆಯಾದ ಸಿನಿಮಾಗಳಲ್ಲಿ ‘ಕನ್ನಡ ಸಿನಿಮಾ ಕಾಂಪಿಟೇಶನ್’ ವಿಭಾಗದಲ್ಲಿ ಕಿಶೋರ್ ಮೂಡಬಿದರಿ ನಿರ್ದೇಶನದ ‘ಕೇಕ್’, ವಿಶಾಲ್ ರಾಜ್ ನಿರ್ದೇಶನದ ‘ದಂಡಿ’, ಅಮರ್.ಎಲ್ ನಿರ್ದೇಶನದ ‘ದೇವರ ಕಾಡು’, ರಘು ಕೆ.ಎಂ ನಿರ್ದೇಶನದ ‘ದೊಡ್ಡಹಟ್ಟಿ ಬೋರೇಗೌಡ’, ಅಭಿಷೇಕ್ ಶೆಟ್ಟಿ ನಿರ್ದೇಶನದ ‘ಗಜಾನನ ಅಂಡ್ ಗ್ಯಾಂಗ್’, ಡೆವಿಡ್ ನಿರ್ದೇಶನದ ‘ಮಾನ’, ಮಂಜು ಪಾಂಡವಪುರ ನಿರ್ದೇಶನದ ‘ಮಾತಂಗಿ ದೇವಟಿಗೆ’, ನಂಜುಂಡೇ ಗೌಡ ಎನ್.ಆರ್ ನಿರ್ದೇಶನದ ‘ನಮ್ಮ ಚಿಲ್ಡ್ರನ್ಸ್ ಇಂಡಿಯಾ.ಕಾಮ್’, ಸುಮುಖ.ಎಸ್ ನಿರ್ದೇಶನದ ‘ಫಿಸಿಕ್ಸ್ ಟೀಚರ್’, ರಬಿ ನಿರ್ದೇಶನದ ‘ರಕ್ತ ಗುಲಾಬಿ’, ರೋಹಿತ್ ಪದವಿ ನಿರ್ದೇಶನದ ‘ರತ್ನನ್ ಪ್ರಪಂಚ’, ಸುನೀಲ್ ಭಾರದ್ವಾಜ್ ನಿರ್ದೇಶನದ ‘ರುಗ್ನ’, ಎಸ್. ದಿನೇಶ್ ನಿರ್ದೇಶನದ ‘ಸಾವಿತ್ರಿ’, ಮಧುಸೂದನ್ ಹವಾಲ್ದಾರ್ ನಿರ್ದೇಶನದ ‘ಶ್ರೀ ಜಗನ್ನಾಥ ದಾಸರು’ ಆಯ್ಕೆಯಾಗಿವೆ.

    ಕನ್ನಡ ಸಿನಿಮಾ ಪಾಪ್ಯುಲರ್ ಎಂಟರ್ ಟೈನ್ಮೆಂಟ್ ಕಾಂಪಿಟೇಷನ್ ವಿಭಾಗ 2021ರಲ್ಲಿ ಆಯ್ಕೆಯಾದ ಚಿತ್ರಗಳು : ನಂದಕಿಶೋರ್ ನಿರ್ದೇಶನದ ‘ಪೊಗರು’, ತರುಣ್ ಸುಧೀರ್ ನಿರ್ದೇಶನದ ‘ರಾಬರ್ಟ್’, ಸಂತೋಷ್ ಆನಂದ್ ರಾಮ್ ನಿರ್ದೇಶನದ ‘ಯುವರತ್ನ’, ಶಿವ ಕಾರ್ತಿಕ್ ನಿರ್ದೇಶನದ ‘ಕೋಟಿಗೊಬ್ಬ 3’, ದುನಿಯಾ ವಿಜಯ್ ನಿರ್ದೇಶನದ ‘ಸಲಗ’, ರಾಜ್ ಬಿ. ಶೆಟ್ಟಿ ನಿರ್ದೇಶನದ ‘ಗರುಡ ಗಮನ ವೃಷಭ ವಾಹನ’, ಗುರು ಶಂಕರ್ ನಿರ್ದೇಶನದ ‘ಬಡವ ರಾಸ್ಕಲ್’, ಎ.ಹರ್ಷ ನಿರ್ದೇಶನದ ‘ಭಜರಂಗಿ 2’ ಚಿತ್ರಗಳು ಆಯ್ಕೆಯಾಗಿವೆ.

  • ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ವಿದೇಶಿ ಚಿತ್ರ ತಂಡಗಳನ್ನು ಆಹ್ವಾನಿಸಲು ಸಿಎಂ ಸಲಹೆ

    ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ವಿದೇಶಿ ಚಿತ್ರ ತಂಡಗಳನ್ನು ಆಹ್ವಾನಿಸಲು ಸಿಎಂ ಸಲಹೆ

    ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ವಿದೇಶಿ ಚಿತ್ರಗಳ ಪ್ರದರ್ಶನದೊಂದಿಗೆ, ಆ ಚಿತ್ರ ತಂಡದವರನ್ನೂ ಆಹ್ವಾನಿಸುವ ಮೂಲಕ ಚಿತ್ರೋತ್ಸವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಲಹೆ ನೀಡಿದರು.

    ಅವರು ಇಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರು ಹಾಗೂ ಅಧಿಕಾರಿಗಳೊಂದಿಗೆ ಅಕಾಡೆಮಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಕನ್ನಡ ಚಿತ್ರರಂಗ ಬೆಳೆದು ಬಂದ ಬಗ್ಗೆ ಒಂದು ಕಿರುಚಿತ್ರ ನಿರ್ಮಿಸಿ, ಚಿತ್ರೋತ್ಸವದಲ್ಲಿ ಪ್ರದರ್ಶಿಸಿ, ನಮ್ಮ ಚಿತ್ರರಂಗದ ಸಾಧನೆಯನ್ನು ಜಗತ್ತಿನ ಮುಂದಿಡಬೇಕು ಎಂದು ಅವರು ತಿಳಿಸಿದರು. ಇದನ್ನೂ ಓದಿ: ಅ.7ಕ್ಕೆ ರಾಷ್ಟ್ರಪತಿ ಆಗಮನ – ಎಸ್.ಟಿ.ಸೋಮಶೇಖರ್ ಸ್ಥಳ ಪರಿಶೀಲನೆ

    ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಮಾನ್ಯತೆ ದೊರಕಿಸುವ ನಿಟ್ಟಿನಲ್ಲಿ ಇದರಿಂದ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು

    ಸಭೆಯಲ್ಲಿ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್, ವಾರ್ತಾ ಇಲಾಖೆ ಆಯುಕ್ತ ಜಿ. ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.