ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ತನ್ನ ವ್ಯಾಪ್ತಿಯಲ್ಲಿರುವ ಹೋಟೆಲ್, ಪಬ್, ಬಾರ್, ರೆಸ್ಟೋರೆಂಟ್ (Bar And Restaurant) ಹಾಗೂ ಕಾಫಿ ಬಾರ್‌ಗಳಿಗೆ ಹೊಸ ನಿಯಮಗಳನ್ನ ಜಾರಿಗೊಳಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿನ ಹೋಟೆಲ್, ಬಾರ್ & ರೆಸ್ಟೋರೆಂಟ್‌ಗಳಲ್ಲಿ ಧೂಮಪಾನ ವಲಯ ಮಾಡದೇ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವ ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತಿತ್ತು. ಆಗಾಗ್ಗೆ ನಿಯಮ ಉಲ್ಲಂಘನೆ ಪ್ರಕರಣಗಳೂ ದಾಖಲಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಬಿಬಿಎಂಪಿ ಹೋಟೆಲ್, ಪಬ್, ಬಾರ್ ಗಳಿಗೆ ಹೊಸ ನಿಯಮ ಜಾರಿಗೊಳಿಸಿದೆ.
ಬಿಬಿಎಂಪಿ ಹೊಸ ನಿಯಮ ಏನು?
30 ಕೊಠಡಿಗಳಿಗಿಂತ ಮೇಲ್ಪಟ್ಟ ಹೋಟೆಲ್ (Bengaluru Hotels), ಬಾರ್ & ರೆಸ್ಟೋರೆಂಟ್, ಪಬ್ ಇದ್ರೆ 30 ಕುರ್ಚಿ ಇರುವ ಧೂಮಪಾನ ಪ್ರದೇಶ ನಿಗದಿ ಮಾಡಬೇಕು
ಧೂಮಪಾನ ವಲಯ (Smoking zone) ನಿರ್ಮಾಣ ಮಾಡಿ ಪೋಟೋ ಸಮೇತ ಸ್ಮೋಕಿಂಗ್ ಝೂನ್‌ಗೆ ಪರವಾನಗಿಗೆ ಅರ್ಜಿ ಹಾಕಬೇಕು
ಅಧಿಕಾರಿಗಳು ಸ್ಥಳಕ್ಕೆ ಭೇಟಿ ನಿಯಮಾನುಸಾರ ಸ್ಮೋಕಿಂಗ್ ಝೂನ್ ಇದೆಯೇ ಅಂತ ರಿಪೋರ್ಟ್ ಕೊಟ್ಟರೆ, ಆಮೇಲೆ ಎನ್‌ಒಸಿ ವಿತರಣೆಗೆ ಸೂಚನೆ ನೀಡಲಾಗುತ್ತದೆ.
ಸ್ಮೋಕಿಂಗ್ ಏರಿಯಾ ಕೊಠಡಿಗೆ ಎಂಟ್ರಿ ಆದಾಗ ಸ್ವಯಂಚಾಲಿತವಾಗಿ ಬಾಗಿಲು ಬಂದ್ ಆಗುವ ರೀತಿಯಲ್ಲಿ ಇರಬೇಕು
ಸ್ಮೋಕಿಂಗ್ ಏರಿಯಾ ಅಂತ ನಾಮಫಲಕ ದೊಡ್ಡದಾಗಿ ಇರಬೇಕು. 60-30ರ ನಿಯಮದಲ್ಲಿ ಅಕ್ಷರಗಳು ಇರಬೇಕು
ಸ್ಮೋಕಿಂಗ್ ಝೂನ್‌ಗಳಲ್ಲಿ ಏರ್ ಫ್ಲೋ ಸಿಸ್ಟಂ ಇರಬೇಕು. ಪಕ್ಕದ ಮನೆ ಅಥವಾ ಪಕ್ಕದ ಕಟ್ಟಡಗಳಿಗೆ ಹೊಗೆ ಹೋಗುವಂತೆ ಇರಬಾರದು
ಸ್ಮೋಕಿಂಗ್ ಝೂನ್ ನಿಯಮ ಉಲ್ಲಂಘನೆಯಾದ್ರೆ ಕಾನೂನು ಕ್ರಮ ಮತ್ತು ದಂಡ ವಿಧಿಸಲಾಗುತ್ತದೆ ಎಂದು ಬಿಬಿಎಂಪಿ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು (Bengaluru) ರಾಜ್ಯದ ಜನದಟ್ಟಣೆ ಪ್ರದೇಶವಾಗಿದೆ. ITBT ಕಂಪನಿಗಳ ಸಾಮ್ರಾಜ್ಯ, ಜನನಿಬಿಡ ಪ್ರದೇಶವೂ ಆಗಿರುವುದರಿಂದ ಇಲ್ಲಿ ದಿನದ 24 ಗಂಟೆಗಳ ಕಾಲ ಹೋಟೆಲ್ ತೆರೆಯಲು ಅವಕಾಶ ನೀಡಬೇಕು ಎಂದು ಹೋಟೆಲ್ ಮಾಲೀಕರ ಸಂಘ (Hotel Owners Association) ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಮನವಿ ಮಾಡಿದೆ.
ಬ್ರ್ಯಾಂಡ್ ಬೆಂಗಳೂರು (Brand Bengaluru) ಅಭಿವೃದ್ಧಿಗೆ ಸಲಹೆ ನೀಡಲು ವೆಬ್‌ಪೋರ್ಟಲ್ ಆರಂಭಿಸಿದ ಬೆನ್ನಲ್ಲೇ ಹೋಟೆಲ್ ಮಾಲೀಕರ ನಿಯೋಗ ಡಿಕೆಶಿ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದೆ. 24 ಗಂಟೆಯೂ ಹೋಟೆಲ್ (Hotel) ತೆರೆಯಲು ಇರುವ ಸಮಸ್ಯೆಗಳನ್ನ ಇತ್ಯರ್ಥ ಮಾಡಿ, ರಾತ್ರಿ ವೇಳೆಯೂ ಹೋಟೆಲ್ ತೆರೆಯಲು ಅವಕಾಶ ನೀಡಬೇಕೆಂದು ಕೋರಿದೆ.
ಹೋಟೆಲ್ ಉದ್ಯಮಕ್ಕೆ ಕೈಗಾರಿಕಾ ಸ್ಥಾನಮಾನ ನೀಡಬೇಕು. 24 ಗಂಟೆಯೂ ಹೋಟೆಲ್ ತೆರಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿ ಇದೆ. ಆದರೆ ಪೋಲಿಸ್ ಇಲಾಖೆ ಅವಕಾಶ ಕೊಡ್ತಿಲ್ಲ. ಪೋಲಿಸ್ ಇಲಾಖೆ ಕೇವಲ ರಾತ್ರಿ 1 ಗಂಟೆಯವರೆಗೆ ಮಾತ್ರ ಹೋಟೆಲ್ ತೆರೆಯಲು ಅವಕಾಶ ನೀಡಿದೆ. ಆದ್ದರಿಂದ ನಮಗೂ ಕೇರಳ, ದೆಹಲಿ, ತಮಿಳುನಾಡು, ಗುಜರಾತ್ ಮಾದರಿಯಲ್ಲಿ 24 ಗಂಟೆಯೂ ಹೋಟೆಲ್ ತೆರೆಯಲು ಅವಕಾಶ ನೀಡಬೇಕು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕುರುಕಲು ತಿಂಡಿಗೆ ಹಠ ಹಿಡಿಯೋ ಮಕ್ಕಳಿಗಾಗಿ ಮಾಡಿ ರಿಬ್ಬನ್ ಸೇವ್
ಹಾಲು, ತರಕಾರಿ, ಹೂವು, ಹಣ್ಣು, ದಿನಪತ್ರಿಕೆ ಮಾರುವವರು, ಪೋಲಿಸ್, ವೈದ್ಯಕೀಯ ಸಿಬ್ಬಂದಿ, ಶಿಫ್ಟ್ ನಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ರಾತ್ರಿ ಆಹಾರ ಅಗತ್ಯವಿದೆ. ಜನರಿಗೆ ಕುಡಿಯುವ ನೀರು, ಶೌಚಾಲಯಗಳನ್ನು ಉಚಿತವಾಗಿ ಪೂರೈಸುತ್ತೇವೆ. ರಾತ್ರಿ ಹೋಟೆಲ್ ತೆರೆಯುವುದರಿಂದ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದೆ. ಪ್ರವಾಸೋದ್ಯಮಕ್ಕೂ ಹೆಚ್ಚು ಒತ್ತು ನೀಡಿದಂತಾಗುತ್ತದೆ. ಆದ್ದರಿಂದ ಸರ್ಕಾರ 24 ಗಂಟೆ ಹೋಟೆಲ್ ತೆರೆಯಲು ಅನುವುಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಲಕ್ಷಾಂತರ ಹೃದಯಗಳ ನಡುವೆಯೂ ಜೀವದ ಗೆಳತಿಯನ್ನೇ ಅರಸುವ ಹೃದಯ, ಎಂದೂ ತುಟಿಗೆ ತಾಕಿಸದೇ ಇರುವ ಟೀ ಯನ್ನೇ ಬೈಟು ಮಾಡಿಕೊಂಡು ಕುಡಿಯಬೇಕೆನ್ನಿಸುತ್ತದೆ. ಮುಂಜಾನೆ ತಿಳಿಬಿಸಿಲಿನ ಕಿರಣ ಮೈತಾಕುತ್ತಿದ್ದಂತೆ ಉಂಟಾಗುವ ಬೆಚ್ಚನೆಯ ಅನುಭವಕ್ಕೆ ಗೆಳತಿಯ ಗಟ್ಟಿ ಅಪ್ಪುಗೆ ಬೇಕೆಂದು ಮನ ಬಯಸುತ್ತದೆ. ಪ್ರೀತಿಯ (Love) ಕಾಲದಲ್ಲಿ ಕಳೆದ ತುಂಟತನಗಳನ್ನು ನೆನಪಿಸಿಕೊಂಡರೆ, ಮತ್ತೆ ಸಂಗಾತಿಯ ತೋಳಿನಲ್ಲಿ ಕಳೆದುಹೋಗಬೇಕೆನ್ನಿಸುತ್ತದೆ ಇಂತಹ ಸಂದರ್ಭಗಳನ್ನು ಕೂಡಿಡಲೇಬೇಕಾಗುತ್ತದೆ. ಅದಕ್ಕೆಂದೇ ಒಂದು ದಿನವೂ ಬಂದಿದೆ. ಫೆ.14ರ ಪ್ರೇಮಿಗಳ ದಿನ (Valentine’s Day)- ಪ್ರೀತಿ ಹಂಚಿದ ವ್ಯಾಲಂಟೈನ್ಸ್ ದಿನ.
`ಹೇ ಹೃದಯ ಅವಳ ಕಿರುನಗೆ ನೆನಪಿದೆಯ ಧರೆಯ ಮೇಲೆ ಅಂತಹ ಹೆಣ್ಣಿರುವಳೇ ಹೇ ಹೃದಯ ಅವಳ ಸಿಹಿ ನುಡಿ ಕೇಳಿದೆಯ ಶೃತಿಯಲ್ಲಿರೊ ಹೆಣ್ಣು ಹುಟ್ಟಿರುವಳೇ ಅವಳ ನಾನು ಪ್ರೀತಿಸಬೇಕು, ಹೇ ಹೃದಯ…’
ಎಂಬ ಎಸ್‌ಪಿಬಿ ಅವರ ಧನಿಯಲ್ಲಿ ಮೂಡಿದ ಹಂಸಲೇಖ ಅವರ ಗೀತೆಯನ್ನು ಪ್ರೇಮಿಗಳು ಯಾರೂ ಮರೆಯುವಂತಿಲ್ಲ. ಏಕೆಂದರೆ ಈ ಗೀತೆಯ ಪ್ರತಿ ಸಾಲಿನಲ್ಲಿ ಮನಸ್ಸು ಮತ್ತು ಹೃದಯದ ಸಂಬಂಧವನ್ನು ನೆನಪಿಸುತ್ತದೆ. ಪ್ರೇಮಿಗಳ ದಿನಾಚರಣೆಯಲ್ಲಿಯಂತೂ ಎಷ್ಟೋ ಜೀವ ಜೋಡಿಗಳ ಕಾಲರ್ ಟ್ಯೂನ್ ಸಹ ಇದೇ ಆಗಿರುತ್ತದೆ. ಅಷ್ಟೇ ಅಲ್ಲದೇ `ಜಗವೇ ನೀನು ಗೆಳತಿಯೇ…., ಸುಮ್ಮನೆ ಹೀಗೆ ನಿನ್ನನೇ ನೋಡುತಾ ಪ್ರೇಮಿಯಾದೆನೆ..’ ಮತ್ತಿತರ ಗೀತೆಗಳು ಪ್ರೇಮಿಗಳ ಮನಸ್ಸನ್ನು ಆಹ್ಲಾದಗೊಳಿಸುತ್ತವೆ.
ಹೌದು….. ಯುವ ಸಮುದಾಯಕ್ಕೆ ಫೆ.14ರ ಪ್ರೇಮಿಗಳ ದಿನ ಎಂಬುದೇ ವಿಶೇಷ ಅದರಲ್ಲೂ ಬೆಂಗಳೂರಿನಂತಹ (Bengaluru) ಮಹಾನಗರಗಳಲ್ಲಿ ಪ್ರೇಮಿಗಳ ಅಡ್ಡಗಳಿಗೇನು ಕಮ್ಮಿಯಿಲ್ಲ. ಚಿತ್ತಾಕರ್ಷಕ ಉದ್ಯಾನ, ನಂದಿಬೆಟ್ಟ ಕಬ್ಬನ್ ಪಾರ್ಕ್, ಲಾಲ್‌ಬಾಗ್ ಸೇರಿದಂತೆ ಪ್ರತಿಷ್ಟಿತ ಹೋಟೆಲ್‌ಗಳೂ ಪ್ರೇಮಿಗಳ ಪ್ರಮುಖ ಅಡ್ಡಗಳೇ ಆಗಿರುತ್ತವೆ. ಪ್ರೇಮಿಗಳ ದಿನ ಬಂತೆಂದರೆ ಸಾಕು ಇವಿಷ್ಟೂ ತಾಣಗಳಲ್ಲಿ ಯುವ ಪ್ರೇಮಿಗಳ ಕಲರವ ಶುರುವಾಗುತ್ತದೆ. ಕಾಫಿ-ಡೇ ಶಾಫ್‌ಗಳು ಹಾಗೂ ಡಾಲ್ಛಿನ್ ಸೆಂಟರ್‌ಗಳಲ್ಲಿ ಚಳಿ ಬಿಡಿಸುವ ಬಿಸಿ ಕಾಫಿಯೊಂದಿಗೆ ಮನದ ಮಾತನ್ನೂ ಹಂಚಿಕೊಳ್ಳುತ್ತಾರೆ. ಇನ್ನೂ ಕೆಲವರು ಕಿ.ಲೋ ಮೀಟರ್‌ಗಳವರೆಗೆ ಜಾಲಿರೈಡ್ ಮಾಡಿ ಪ್ರಕೃತಿ ಸೌಂದರ್ಯದಲ್ಲೇ ಲೀನವಾಗಿಬಿಡುತ್ತಾರೆ. ಇದನ್ನ ಯಾರಾದ್ರೂ ಪ್ರಶ್ನೆ ಮಾಡಿದ್ರೆ ಪ್ರೇಮವನ್ನೂ ಹೀಗೂ ಅರ್ಥಮಾಡಿಕೊಳ್ಳಬಹುದು ಅಂತಾ ಹೇಳಿಬಿಡ್ತಾರೆ. ಇನ್ನೂ ಕೆಲ ಯುವಕರಂತೂ ತೀರಾ ಅತಿರೇಖಕ್ಕೆ ಹೋಗಿ ರಕ್ತದಲ್ಲೇ ತಮ್ಮ ಪ್ರೇಯಸಿಗೆ ಕವಿತೆ ಬರೆದುಕೊಡುತ್ತಾರೆ. ಈ ಹುಚ್ಚಾಟಗಳಿಂದ ಕೆಲವರು ಆಸ್ಪತ್ರೆ ಸೇರಿದ್ದೂ ಉಂಟೂ..
ಹಿಂದೆಲ್ಲಾ ಪ್ರೇಮಕ್ಕಾಗಿ ಹಂಬಲಿಸುತ್ತಿದ್ದ ಯುವ ಸಮೂಹದಲ್ಲಿ ಕೆಲವರು ಪತ್ರಗಳನ್ನು ಬರೆದು ತಿಂಗಳಾನುಗಟ್ಟಲೇ ಅವರ ಮನೆಯ ಬಳಿಯೆಲ್ಲಾ ಅಲೆದು ಸರ್ಕಸ್ ಮಾಡಿ ಸುಸ್ತಾಗುತ್ತಿದ್ದರು. ಕೊನೆಯಲ್ಲಿ `ಅವಳು ನಮ್ಮಂಥವರಿಗೆಲ್ಲ ಸಿಗಲ್ಲ ಬಿಡು’ ಎಂದು ಬೈದುಕೊಂಡು ಸಮಾಧಾನ ಮಾಡಿಕೊಳ್ತಿದ್ರು. ಆದರೀಗ ಆಧುನಿಕತೆ ಬದಲಾಗಿದ್ದು, ಪ್ರೀತಿ ಹೇಳುವುದು ಕ್ಷಣಮಾತ್ರ ಸುಖವಾಗಿದೆ. ವಾಟ್ಸಾಪ್, ಇ-ಮೇಲ್ ಸಂದೇಶಗಳನ್ನು ಕಳುಹಿಸಿ ಪ್ರೀತಿ ಹಂಚಿಕೊಳ್ಳುತ್ತಾರೆ. ಕೆಲವರು ಮದುವೆಗೆ ಮುನ್ನ ಒಂದಷ್ಟು ದಿನಗಳು ಮಾತ್ರವೇ ಪ್ರೇಮಕಾಲವೆಂದು ಭಾವಿಸುತ್ತಾರೆ. ಆ ದಿನಗಳಲ್ಲಂತೂ ತಾವೂ ಪ್ರೇಮಿಗಳಾಗಿ ಕೈ-ಕೈ ಹಿಡಿದು ಸುತ್ತಾಡುವುದೇನು? ಭವಿಷ್ಯದ ಬಗ್ಗೆ ವಿಚಾರವನ್ನೂ ವಿನಿಮಯವೇನು ಅಬ್ಬಾ! ಹೇಳಲಸಾಧ್ಯ ನಮ್ಮ ಪಡ್ಡೆ ಹುಡುಗರಂತೂ `ಪ್ರಿಯೆ ನಿನಗಾಗಿ ಚಂದ್ರನನ್ನೇ ತಂದುಕೊಡುವೆ’ ಎಂದೂ ಹೇಳಿ ಮರ ಹತ್ತಿಸುವುದು ಉಂಟೂ.. ಈ ದಿನಗಳು ಮನಸ್ಸುಗಳಲ್ಲಿ ತುಂಬುವ ಮರೆಯದ ಕ್ಷಣಗಳೆಂದರೆ ತಪ್ಪಾಗಲಾರದು.
ಪ್ರೇಮಿಗಳ ದಿನ ಆಚರಿಸುವುದೇಕೆ?
ಪ್ರೇಮಿಗಳ ದಿನಾಚರಣೆಯು ಕ್ರಿ.ಶ.270ರಲ್ಲಿ 2ನೇ ಕ್ಲಾಡಿಯಸ್‌ನ ಅವಧಿಯಲ್ಲಿ ಜಾರಿಗೆ ಬಂದಿತು. ಕ್ಲಾಡಿಯಸ್‌ಗೆ ತಮ್ಮ ಯುವಕರು ಯುದ್ಧದ ಸಂದರ್ಭದಲ್ಲಿ ಮದುವೆಯಾಗುವುದು ಇಷ್ಟವಿರಲಿಲ್ಲ. ಏಕೆಂದರೆ ಆತನ ಪ್ರಕಾರ ಯುವಕರು ಮದುವೆಯಾಗದೇ ಒಂಟಿಯಾಗಿದ್ದಷ್ಟೂ ಯುದ್ಧದಲ್ಲಿ ಉತ್ತಮ ರೀತಿಯಲ್ಲಿ ಹೋರಾಡುತ್ತಾರೆ ಎಂಬ ಭಾವನೆಯಾಗಿತ್ತು. ಹೀಗಿದ್ದಾಗ ಬಿಷಪ್ ವ್ಯಾಲೇಂಟಿನ್ ಕ್ಲಾಡಿಯಸ್‌ನ ಈ ನಿರ್ಧಾರದ ಬಗ್ಗೆ ಅಸಮಾಧಾನ ಹೊಂದಿದ್ದನು. ಆತನು ಮದುವೆಯಾಗಲು ಇಚ್ಛಿಸುವವರನ್ನು ರಹಸ್ಯವಾಗಿ ಮದುವೆ ಮಾಡಿಸುತ್ತಿದ್ದ. ಈ ಅಪರಾಧಕ್ಕಾಗಿ ಅವನನ್ನು ಫೆ.14ರಂದು ಸೆರೆಮನೆಗೆ ತಳ್ಳಲಾಯಿತು. ಈ ಬಿಷಪ್ ತನ್ನ ಸಾವಿಗೆ ಮೊದಲು `ಇಂತಿ ನಿಮ್ಮ ವ್ಯಾಲೇಂಟಿನ್’ ಎಂದು ಸಹಿ ಮಾಡಿದ ಪ್ರೇಮ ಪತ್ರವನ್ನು ಬರೆದು ಮೃತಪಟ್ಟರು. ಅಂದಿನಿಂದ ಪ್ರತಿ ವರ್ಷದ ಫೆ.14ರ ದಿನವನ್ನು `ವ್ಯಾಲೇಂಟಿನ್ಸ್ ಡೇ’ (ಪ್ರೇಮಿಗಳ ದಿನ) ಎಂದು ಆಚರಣೆ ಮಾಡುತ್ತಾರೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: 30ಕ್ಕೂ ಹೆಚ್ಚು ಹಾಸನಗಳಿರುವ ಹೋಟೆಲ್‌ಗಳಲ್ಲಿ ಸ್ಮೋಕಿಂಗ್ ಝೋನ್ (Smoking Zone) ನಿರ್ಮಿಸದೇ ನಿಯಮ ಉಲ್ಲಂಘನೆ ಮಾಡಿರುವ ನಗರದ 378 ಹೋಟೆಲ್‌ಗಳಿಗೆ ಬೃಹತ್ ಬೆಂಗಳೂರು ಮಹಾನಗರಪಾಲಿಕೆ (BBMP) ನೋಟಿಸ್ ಜಾರಿಗೊಳಿಸಿದೆ.
ಈ ನಿಯಮದ ಅನ್ವಯ 30ಕ್ಕಿಂತ ಹೆಚ್ಚು ಹಾಸನಗಳಿರುವ ಹೋಟೆಲ್ ರೆಸ್ಟೋರೆಂಟ್‌ಗಳು ಕಡ್ಡಾಯವಾಗಿ ಸ್ಮೋಕಿಂಗ್ ಝೂನ್ ನಿರ್ಮಾಣ ಮಾಡಲೇಬೇಕು. ಗ್ರಾಹಕರು ಧೂಮಪಾನ ಮಾಡಬೇಕಿದ್ರೆ ಅಲ್ಲಿಯೇ ಮಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡಬಾರದು ಎಂಬ ನಿಯಮ ಜಾರಿ ಮಾಡಿತು. ಆದ್ರೆ ಹೋಟೆಲ್ ಗಳು ನಿಯಮವನ್ನು ಕಡೆಗಣಿಸಿವೆ. ಈ ಹಿನ್ನೆಲೆಯಲ್ಲಿ ನಿಯಮ ಪಾಲನೆ ಮಾಡದ 378 ಹೋಟೆಲ್‌ಗಳಿಗೆ ನೋಟೀಸ್ ಜಾರಿಗೊಳಿಸಿದೆ. ಇದನ್ನೂ ಓದಿ: ನಾನು ಆಡಿದ ಮಾತು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ: ವಿವಾದಗಳ ಬಗ್ಗೆ ರಶ್ಮಿಕಾ ಪ್ರತಿಕ್ರಿಯೆ
ನಿಯಮ ಉಲ್ಲಂಘಿಸಿದ 400ಕ್ಕೂ ಹೆಚ್ಚು ಹೋಟೆಲ್ ಗಳಿಗೆ ಈಗಾಗಲೇ 1,10,680 ರೂ. ದಂಡ ವಿಧಿಸಲಾಗಿದೆ. ಹುಕ್ಕಾ ಬಾರ್‌ಗಳು ಕೂಡ ಕಡ್ಡಾಯವಾಗಿ ನಿಯಮ ಪಾಲನೆ ಮಾಡಲೇಬೇಕು. ಅನಧಿಕೃತ ಚಟುವಟಿಕೆ ನಡೆಸಬಾರದು ಮತ್ತು ಹುಕ್ಕಾಬಾರ್ ಗಳನ್ನ ನಿಷೇಧ ಮಾಡೋದರ ಬಗ್ಗೆ ಚರ್ಚೆ ಆಗ್ತಾ ಇದ್ದು ಖ್ಯಾತ ವೈದ್ಯರು. ಪರಿಸರ ತಙ್ಞರ ಅಭಿಪ್ರಾಯ ಸಂಗ್ರಹ ಮಾಡ್ತಾ ಇದ್ದಾರೆ ಎಂದು ಬಿಬಿಎಂಪಿ ತಿಳಿಸಿದೆ.
ಒಟ್ಟಾರೆ ಬಿಬಿಎಂಪಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಕ್ಕೆ ಸ್ಮೋಕಿಂಗ್ ಝೂನ್ ನಿಯಮ ಜಾರಿ ಮಾಡಿದೆ. ಸದ್ಯ ನಿಯಮ ಪಾಲನೆ ಮಾಡದ ಹೋಟೆಲ್‌ಗಳಿಗೆ ದಂಡ ವಿಧಿಸಲಾಗಿದೆ. ಇದು ಹೀಗೆ ಮುಂದುವರಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
Live Tv
[brid partner=56869869 player=32851 video=960834 autoplay=true]