Tag: Bengaluru Fridge Case

  • ಮಹಾಲಕ್ಷ್ಮಿ ಕೊಲೆ ಬಳಿಕ ಬೆಂಗಳೂರಿನಿಂದ ಒಡಿಶಾಗೆ ಬೈಕ್‌ನಲ್ಲೇ ಪ್ರಯಾಣ – ಮೂರು ದಿನ 1,550 ಕಿಮೀ ಬೈಕ್ ಓಡಿಸಿದ್ದ ಹಂತಕ!

    ಮಹಾಲಕ್ಷ್ಮಿ ಕೊಲೆ ಬಳಿಕ ಬೆಂಗಳೂರಿನಿಂದ ಒಡಿಶಾಗೆ ಬೈಕ್‌ನಲ್ಲೇ ಪ್ರಯಾಣ – ಮೂರು ದಿನ 1,550 ಕಿಮೀ ಬೈಕ್ ಓಡಿಸಿದ್ದ ಹಂತಕ!

    – ಕೊಲೆ ಮಾಡಿದ್ದು ಒಂದು ದಿನ, ದೇಹ ಪೀಸ್‌ ಮಾಡಿದ್ದು ಇನ್ನೊಂದು ದಿನ

    ಬೆಂಗಳೂರು: ಮಹಾಲಕ್ಷ್ಮಿ ಕೊಲೆ ಮಾಡಿದ ಹಂತಕ ಆತ್ಮಹತ್ಯೆಯ ಬಳಿಕ ಒಂದೊಂದೇ ವಿಚಾರಗಳು ರಿವೀಲ್ ಆಗುತ್ತಿವೆ. ಕೊಲೆ ಬಳಿಕ ತನ್ನ ಬೈಕ್‌ನಲ್ಲೇ ಮೂರು ರಾಜ್ಯಗಳನ್ನ ಮೂರು ದಿನಗಳ ಕಾಲ ಕ್ರಾಸ್ ಮಾಡಿ ಹುಟ್ಟೂರು ಸೇರಿಕೊಂಡಿದ್ದ.

    ವೈಯಾಲಿಕಾವಲ್‌ನ ಮಹಾಲಕ್ಷ್ಮಿ ಹಂತಕ ಪೊಲೀಸರಿಗೆ ಸಿಕ್ಕಿ ಬೀಳುವ ಭಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಅರೆಸ್ಟ್ ಮಾಡುವ ಹುಮ್ಮಸ್ಸಿನಲ್ಲಿ ಪೊಲೀಸರು ಹಂತಕ ಮುಕ್ತಿ ರಾಜನ್ ರಾಯ್ ಹುಟ್ಟೂರಾದ ಒಡಿಶಾದ ಭದ್ರಕ್ ಬಳಿಯ ಬೋನಿಪುರ ಗ್ರಾಮ ತಲುಪಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು. ಸಾಯುವ ಮುನ್ನ ಡೆತ್‌ನೋಟ್ ಬರೆದಿಟ್ಟಿದ್ದ ಹಂತಕ ಮಹಾಲಕ್ಷ್ಮಿ ಕೆಲಸ ಮಾಡುವ ಸ್ಥಳದಲ್ಲಿ ನಾನು ಸ್ಟೋರ್ ಮ್ಯಾನೇಜರ್ ಆಗಿದ್ದೆ. ಇಬ್ಬರೂ ಸ್ನೇಹಿತರಾಗಿದ್ದೆವು. ಬಳಿಕ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದೆವು ಎಂದು ಬರೆದುಕೊಂಡಿದ್ದಾನೆ. ಇದನ್ನೂ ಓದಿ: ಮಹಾಲಕ್ಷ್ಮಿ ಭೀಕರ ಕೊಲೆ ಮಾಡಲು ಹಂತಕನಿಗೆ ಯಾರಾದ್ರು ಸಹಾಯ ಮಾಡಿದ್ರಾ? – ತನಿಖೆಗೆ ಮುಂದಾದ ಪೊಲೀಸರು

    ಘಟನೆ ಏನಾಯ್ತು?
    ಸೆ.2 ರಂದು ಮಹಾಲಕ್ಷ್ಮಿಯ ಮನೆಗೆ ತೆರಳಿದ್ದ ಹಂತಕ ಹಾಗೂ ಮಹಾಲಕ್ಷ್ಮಿಯ ನಡುವೆ ಜಗಳವಾಗಿದೆ. ಮದುವೆ ಆಗು ಅಂತಾ ಮಹಾಲಕ್ಷ್ಮಿ ಒತ್ತಾಯಿಸಿದ್ದಕ್ಕೆ ನಿನಗೆ ಈಗಾಗಲೇ ಮದುವೆಯಾಗಿ ಮಗುವಿದೆ. ಹೀಗಿದ್ದಂಗೆ ಲೀವಿಂಗ್ ರಿಲೇಶನ್‌ನಲ್ಲೇ ಇರೋಣ ಅಂತಾ ಹಂತಕ ಹೇಳಿದ್ದನಂತೆ. ಈ ನಡುವೆ ಜಗಳವಾಗಿ ಮಹಾಲಕ್ಷ್ಮಿ, ಮುಕ್ತಿ ರಂಜನ್ ರಾಯ್ ಮೇಲೆ ಹಲ್ಲೆ ಮಾಡಿದ್ದಳಂತೆ. ಕೋಪದಿಂದ ಮಹಾಲಕ್ಷ್ಮಿ ಕಪಾಳಕ್ಕೆ ಮುಕ್ತಿ ಹೊಡೆದಾಗ ಪ್ರಜ್ಞೆ ತಪ್ಪಿ ಮಹಾಲಕ್ಷಿ ಬಿದ್ದಿದ್ದಾಳೆ.

    ಪ್ರಜ್ಞೆ ತಪ್ಪಿ ಬಿದ್ದ ಮಹಾಲಕ್ಷ್ಮಿಯನ್ನ ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಹಂತಕ ಮಲ್ಲೇಶ್ವರದಲ್ಲಿ ಆ್ಯಕ್ಸೆಲ್ ಬ್ಲೇಡ್ ಮತ್ತು ಚಾಕು ಖರೀದಿಸಿ ಹಾಲ್‌ನಲ್ಲಿದ್ದ ಶವವನ್ನ ಸ್ನಾನದ ಮನೆಗೆ ಎಳೆದೊಯ್ದು 59 ಪೀಸ್‌ಗಳನ್ನಾಗಿ ಕತ್ತರಿಸಿದ್ದ. ಬಳಿಕ ಹೆಬ್ಬಗೋಡಿಯ ಸಹೋದರನ ಮನೆಗೆ ಹೋಗಿ ನಡೆದ ಕೃತ್ಯ ಹೇಳಿದ್ದ. ಅದಾದ ಬಳಿಕ ತನ್ನ ಬೈಕ್‌ನಲ್ಲೇ ಮೂರು ದಿನಗಳ ಕಾಲ 1,550 ಕಿಮೀ ಸಂಚಾರ ಮಾಡಿ ಮೂರು ರಾಜ್ಯಗಳಾದ ಕರ್ನಾಟಕ, ಆಂಧ್ರ, ಒಡಿಶಾ ಕ್ರಾಸ್ ಮಾಡಿ ತನ್ನೂರಾದ ಬೋನಿಪುರ ತಲುಪಿದ್ದ. ಹಂತಕನನ್ನ ಪೊಲೀಸರು ಹುಡುಕ್ತಿದ್ದಾರೆ ಅಂತಾ ಗೊತ್ತಾದಾಗ ತಾಯಿ ಬಳಿ ಎಲ್ಲವನ್ನೂ ಹೇಳಿದ್ದನಂತೆ. ಬೆಳಗಿನ ಜಾವ ಮನೆಯಿಂದ ಹೊರಗೆ ಬಂದು ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಇದನ್ನೂ ಓದಿ: ಮಹಿಳೆಯ ಭಯಾನಕ ಹತ್ಯೆ ಕೇಸ್ | ಮಹಾಲಕ್ಷ್ಮಿ ಮಗನನ್ನು ಟ್ರ್ಯಾಪ್ ಮಾಡಿದ್ದಳು: ಆರೋಪಿಯ ತಾಯಿ

    ಸದ್ಯ ಹಂತಕ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆ ವೈಯಾಲಿಕಾವಲ್ ಪೊಲೀಸರು ಒಡಿಸ್ಸಾದಿಂದ ವಾಪಸ್ಸಾಗಿದ್ದಾರೆ. ಯುಡಿಆರ್ ರಿಪೋರ್ಟ್ ಆಧಾರದ ಮೇಲೆ ಅಬೇಟೆಡ್ ಚಾರ್ಜ್‌ಶೀಟ್ ಹಾಕಲು ಪೊಲೀಸರು ತಯಾರಿ ನಡೆಸಿದ್ದಾರೆ.

  • ಮಹಾಲಕ್ಷ್ಮಿ ಭೀಕರ ಕೊಲೆ ಮಾಡಲು ಹಂತಕನಿಗೆ ಯಾರಾದ್ರು ಸಹಾಯ ಮಾಡಿದ್ರಾ? – ತನಿಖೆಗೆ ಮುಂದಾದ ಪೊಲೀಸರು

    ಮಹಾಲಕ್ಷ್ಮಿ ಭೀಕರ ಕೊಲೆ ಮಾಡಲು ಹಂತಕನಿಗೆ ಯಾರಾದ್ರು ಸಹಾಯ ಮಾಡಿದ್ರಾ? – ತನಿಖೆಗೆ ಮುಂದಾದ ಪೊಲೀಸರು

    – ಮೃತ ರಂಜನ್ ಮೊಬೈಲ್, ಫಿಂಗರ್ ಪ್ರಿಂಟ್, ಬ್ಲಡ್ ಸ್ಯಾಂಪಲ್ ಸಂಗ್ರಹ
    – ನ್ಯಾಯಾಲಯಕ್ಕೆ ಅಬಟೇಡ್ ಚಾರ್ಜ್‌ಶೀಟ್‌ ಸಲ್ಲಿಕೆಗೆ ಪೊಲೀಸರ ಸಿದ್ಧತೆ

    ಬೆಂಗಳೂರು: ವೈಯಾಲಿಕಾವಲ್‌ನ ಮಹಾಲಕ್ಷ್ಮಿ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಂಧನಕ್ಕೆ ಒಡಿಶಾಗೆ ತೆರಳಿದ್ದ ರಾಜ್ಯದ ಪೊಲೀಸರ ತಂಡ ಬೆಂಗಳೂರಿಗೆ ಇಂದು ವಾಪಸ್ ಆಗಲಿದೆ. ಕೊಲೆ ಪ್ರಕರಣದಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿರುವ ಪೊಲೀಸರು ಚಾರ್ಜ್‌ಶೀಟ್‌ ಸಿದ್ಧಪಡಿಸಲು ಮುಂದಾಗಿದೆ.

    ಆರೋಪಿ ರಂಜನ್ ಬಗ್ಗೆ ಹಾಗೂ ಮರಣೋತ್ತರ ಪರೀಕ್ಷೆ ಬಗ್ಗೆ ಪ್ರಾಥಮಿಕವಾಗಿ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದು ಆತನ ಮೊಬೈಲ್, ಫಿಂಗರ್ ಪ್ರಿಂಟ್, ಬ್ಲಡ್ ಸ್ಯಾಂಪಲ್ ಕೂಡ ಸಂಗ್ರಹ ಮಾಡಲಾಗಿದೆ. ಮೃತ ರಂಜನ್ ಫಿಂಗರ್ ಪ್ರಿಂಟ್, ಬ್ಲಡ್ ಸ್ಯಾಂಪಲ್ ಪ್ರಮುಖ ಸಾಕ್ಷ್ಯ ಆಗಲಿದೆ. ತನಿಖಾ ತಂಡ ಮನೆಯಲ್ಲಿ ಸಿಕ್ಕಿರುವ ಬ್ಲಡ್ ಸ್ಯಾಂಪಲ್, ಫಿಂಗರ್ ಪ್ರಿಂಟ್ ಸ್ಯಾಂಪಲ್ ಜೊತೆ ಇದನ್ನು ಹೋಲಿಕೆ ಮಾಡಲಿದ್ದಾರೆ. ಹೋಲಿಕೆ ಮಾಡಿ ಆತನೇ ಕೊಲೆಗಾರನಾ ಎಂದು ಸಾಕ್ಷ್ಯ ಸಂಗ್ರಹಿಸಲಿದ್ದಾರೆ.

    ರಂಜನ್ ಮೊಬೈಲ್ ಈ ಕೊಲೆ ಕೇಸ್‌ನಲ್ಲಿ ಪ್ರಮುಖ ಸಾಕ್ಷ್ಯ. ರಂಜನ್ ಮತ್ತು ಮಹಾಲಕ್ಷ್ಮಿ ನಡುವಿನ ಸಂಬಂಧ ಬಯಲು ಮಾಡಲಿದೆ. ಕೊನೆಯದಾಗಿ ರಂಜನ್ ಕರೆ ಮಾಡಿದ್ದು ಕೂಡ ತನಿಖೆಗೆ ಸಹಕಾರಿಯಾಗಲಿದೆ. ಮತ್ತೊಂದು ಕಡೆ ಆರೋಪಿ ಸಾವನ್ನಪ್ಪಿದ ಹಿನ್ನೆಲೆ ಕೇಸ್ ಕ್ಲೋಸ್ ಆಗಲಿದೆ. ರಂಜನ್ ಕೊಲೆ ಮಾಡಿರೋದಕ್ಕೆ ಪೊಲೀಸರು ಸಾಕ್ಷ್ಯ ಕಲೆಹಾಕಲಿದ್ದಾರೆ.

    ರಂಜನ್ ಕೃತ್ಯಕ್ಕೆ ಯಾರಾದ್ರೂ ಸಹಾಯ ಮಾಡಿದ್ದಾರಾ ಎಂದೂ ತನಿಖೆ ನಡೆಯಲಿದೆ. ಈಗಾಗಲೇ ರಂಜನ್ ಸಹೋದರನ ವಿಚಾರಣೆ ನಡೆಸಲಾಗಿದೆ. ಕೊಲೆಯ ಬಗ್ಗೆ ಆತನಿಗೆ ತಿಳಿದಿದ್ದ ವಿಚಾರಗಳ ಬಗ್ಗೆ ಹೇಳಿಕೆ ದಾಖಲಿಸಲಾಗಿದೆ. ನ್ಯಾಯಾಧೀಶರ ಮುಂದೆ ಆತನ ಸೆ.164 ಅಡಿ ಹೇಳಿಕೆ ಕೂಡ ದಾಖಲಿಸಲಾಗಿದೆ.

    ಈ ಎಲ್ಲಾ ಅಂಶಗಳನ್ನು ಒಳಗೊಂಡ ಚಾರ್ಜ್‌ಶೀಟ್‌ನ್ನು ಪೊಲೀಸರು ತಯಾರಿಸಲಿದ್ದಾರೆ. ಬಳಿಕ ನ್ಯಾಯಾಲಯಕ್ಕೆ ಅಬೇಟೆಡ್ ಚಾರ್ಜ್ಶೀಟ್ ಸಲ್ಲಿಸಲಿದ್ದಾರೆ. ಅಬಟೇಡ್ ಚಾರ್ಜ್‌ಶೀಟ್‌ ಅಂದ್ರೆ ಆರೋಪಿ ಸಾವನ್ನಪ್ಪಿದ ನಂತರ ತನಿಖೆ ನಿಲ್ಲಿಸುವ ಬಗ್ಗೆ ವರದಿ. ನ್ಯಾಯಾಲಯಕ್ಕೆ ಆರೋಪಿ ಸಾವನ್ನಪ್ಪಿದ ಬಗ್ಗೆ ಕೋರ್ಟ್ ಗಮನಕ್ಕೆ ತಂದು ಅಬೇಟೆಡ್ ಚಾರ್ಜ್‌ಶೀಟ್ ಸಲ್ಲಿಕೆ

  • ಉಸಿರುಗಟ್ಟಿಸಿ ಮಹಾಲಕ್ಷ್ಮಿ ಕೊಲೆ; ಆ್ಯಕ್ಸಲ್ ಬ್ಲೇಡ್‌ನಿಂದ ದೇಹ ಪೀಸ್ – ಹಂತಕನ ಡೆತ್‌ನೋಟ್‌ನಲ್ಲಿ ಕೊಲೆ ರಹಸ್ಯ ರಿವೀಲ್

    ಉಸಿರುಗಟ್ಟಿಸಿ ಮಹಾಲಕ್ಷ್ಮಿ ಕೊಲೆ; ಆ್ಯಕ್ಸಲ್ ಬ್ಲೇಡ್‌ನಿಂದ ದೇಹ ಪೀಸ್ – ಹಂತಕನ ಡೆತ್‌ನೋಟ್‌ನಲ್ಲಿ ಕೊಲೆ ರಹಸ್ಯ ರಿವೀಲ್

    – ಮಹಾಲಕ್ಷ್ಮಿ ವರ್ತನೆಯಿಂದ ಬೇಸತ್ತು ಕೃತ್ಯ ಎಸಗಿದ್ದೇನೆಂದು ಕೊಲೆ ಆರೋಪಿ ಉಲ್ಲೇಖ

    ಬೆಂಗಳೂರು: ವೈಯಾಲಿಕಾವಲ್‌ನಲ್ಲಿ ಮಹಾಲಕ್ಷ್ಮಿ ಭೀಕರ ಕೊಲೆ (Mahalakshmi Murder Case) ಆರೋಪಿ ಆತ್ಮಹತ್ಯೆಗೆ ಶರಣಾಗಿದ್ದು, ಹತ್ಯೆಗೆ ಕಾರಣ ತಿಳಿಸಿ ಆತ ಬರೆದಿಟ್ಟಿರುವ ಡೆತ್‌ನೋಟ್ ಪೊಲೀಸರಿಗೆ ಸಿಕ್ಕಿದೆ.

    ಕೊಲೆ ಆರೋಪಿ ಮುಕ್ತಿ ರಂಜನ್ ರಾಯ್ ಒಡಿಶಾದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನ ಮಹಾಲಕ್ಷ್ಮಿ ಕೊಲೆಗೆ ಕಾರಣವನ್ನು ಡೆಟ್‌ನೋಟ್‌ನಲ್ಲಿ ಬರೆದಿಟ್ಟಿದ್ದ. ಡೈರಿಯಲ್ಲಿ ಡೆತ್‌ನೋಟ್ ಇರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇದನ್ನೂ ಓದಿ: ಮಹಾಲಕ್ಷ್ಮಿ ಪ್ರಕರಣದಲ್ಲಿ ಟ್ವಿಸ್ಟ್‌ – ಶಂಕಿತ ಕೊಲೆ ಆರೋಪಿ ಒಡಿಶಾದಲ್ಲಿ ಆತ್ಮಹತ್ಯೆ

    ಡೆತ್‌ನೋಟ್‌ನಲ್ಲಿ ಏನಿದೆ?
    ಸೆಪ್ಟಂಬರ್ 3 ರಂದು ಪ್ರೇಯಸಿ ಮಹಾಲಕ್ಷ್ಮೀಯನ್ನು ಹತ್ಯೆ ಮಾಡಿದ್ದೇನೆ ಎಂದು ಆರೋಪಿ ಮುಕ್ತಿ ರಂಜನ್ ರಾಯ್ ಉಲ್ಲೇಖಿಸಿದ್ದಾನೆ. ಸೆ.3 ರಂದು ಆಕೆಯ ಮನೆಗೆ ಹೋದಾಗ ಕೃತ್ಯ ಎಸಗಿದ್ದೇನೆ. ವೈಯಕ್ತಿಕ ವಿಚಾರಗಳಿಗೆ ಆಕೆ ಜೊತೆ ಜಗಳವಾಯಿತು. ಆಗ ಆಕೆ ಹಲ್ಲೆ ನಡೆಸಿದಳು. ಇದರಿಂದ ಕೋಪಗೊಂಡು ಆಕೆಯನ್ನು ಕೊಂದೆ. ಆ ಬಳಿಕ 59 ಪೀಸ್ ಮಾಡಿ ಫ್ರಿಡ್ಜ್ನಲ್ಲಿ ಇರಿಸಿದ್ದೆ. ಆಕೆಯ ವರ್ತನೆಯಿಂದ ಬೇಸತ್ತು ಕೃತ್ಯ ಎಸಗಿದ್ದೇನೆ.

    ಕೊಲೆ ನಡೆದಿದ್ದು ಹೇಗೆ?
    ಮೊದಲು ಮಹಾಲಕ್ಷ್ಮಿಯನ್ನ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ಆಕೆಯನ್ನ ಆ್ಯಕ್ಸಲ್ ಬ್ಲೇಡ್‌ನಿಂದ ಕತ್ತರಿಸಿದ್ದಾನೆ. ಬಾತ್ ರೂಂನಲ್ಲಿ ಆಕೆ ದೇಹವನ್ನ ಪೀಸ್ ಪೀಸ್ ಮಾಡಿದ್ದಾನೆ. ನಂತರ ಫ್ರಿಡ್ಜ್‌ಗೆ ಮಹಾಲಕ್ಷ್ಮಿ ಮೃತದೇಹದ 53 ಪೀಸ್‌ಗಳನ್ನು ತುಂಬಿದ್ದಾನೆ. ಸಾಕ್ಷಿ ನಾಶಪಡಿಸಲು ಬಾತ್ ರೂಂನಲ್ಲಿ ಆ್ಯಸಿಡ್ ಹಾಕಿ ಕ್ಲೀನ್ ಮಾಡಿದ್ದಾನೆ ಕೊಲೆ ಆರೋಪಿ. ಇದನ್ನೂ ಓದಿ: ವಾರದ ರಜೆ ದಿನ ಮಹಾಲಕ್ಷ್ಮಿ ಕೊಲೆ? – ಸೆಪ್ಟೆಂಬರ್ 1, 2, 3ರ ಮರ್ಡರ್ ಮಿಸ್ಟ್ರಿಯ ಎಕ್ಸ್‌ಕ್ಲೂಸಿವ್‌ ಮಾಹಿತಿ

    ಆರೋಪಿ ಪತ್ತೆ ಹೇಗಾಯ್ತು?
    ಭೀಕರ ಕೊಲೆಯ ಪ್ರಮುಖ ಶಂಕಿತ ಆರೋಪಿಯಾಗಿದ್ದ ರಂಜನ್. ಈತನ ಮೇಲೆ ತನಿಖಾ ತಂಡಕ್ಕೆ ಹೆಚ್ಚು ಅನುಮಾನ ಇತ್ತು. ಮಹಾಲಕ್ಷ್ಮಿ ಜೊತೆ ಶೋರೂಂನಲ್ಲಿ ಸ್ಟೋರ್ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದ. ಮಹಾಲಕ್ಷ್ಮಿ ಕೊಲೆ ದಿನವಾದ ಸೆ.3 ರಿಂದ ಈತನ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆಗಿತ್ತು. ಬೆಂಗಳೂರನ್ನೂ ಬಿಟ್ಟು ಈತ ಬೇರೆ ಕಡೆ ಎಸ್ಕೇಪ್ ಆಗಿದ್ದ. ಕಾಲ್ ಡಿಟೇಲ್ಸ್ನಲ್ಲೂ ಮಹಿಳೆ ಈತನ ಜೊತೆ ಹೆಚ್ಚು ಸಂಪರ್ಕವಿರೋದು ಗೊತ್ತಾಗಿತ್ತು. ಆದರೆ, ತನಿಖೆ ಪ್ರಾರಂಭವಾದ ವೇಳೆ ಈತನ ಸುಳಿವು ಇರಲಿಲ್ಲ. ಹೀಗಾಗಿ, ಈತನ ಫೋನ್ ಕಾಲ್ ಜಾಡು ಹಿಡಿದು ಪೊಲೀಸರ ತಂಡ ಹೊರಟಿತ್ತು. ಆದರೆ, ಪೊಲೀಸರಿಗೆ ಸಿಗುವ ಮುನ್ನವೇ ತನ್ನ ಊರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಒಡಿಸಾದ ಭೂನಿಪುರ ಎಂಬ ಗ್ರಾಮದಲ್ಲಿ ನೇಣಿಗೆ ಶರಣಾಗಿದ್ದಾನೆ. ಆತ್ಮಹತ್ಯೆ ಬಗ್ಗೆ ದುಸೂರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವಾರದ ರಜೆ ದಿನ ಮಹಾಲಕ್ಷ್ಮಿ ಕೊಲೆ? – ಸೆಪ್ಟೆಂಬರ್ 1, 2, 3ರ ಮರ್ಡರ್ ಮಿಸ್ಟ್ರಿಯ ಎಕ್ಸ್‌ಕ್ಲೂಸಿವ್‌ ಮಾಹಿತಿ

    ವಾರದ ರಜೆ ದಿನ ಮಹಾಲಕ್ಷ್ಮಿ ಕೊಲೆ? – ಸೆಪ್ಟೆಂಬರ್ 1, 2, 3ರ ಮರ್ಡರ್ ಮಿಸ್ಟ್ರಿಯ ಎಕ್ಸ್‌ಕ್ಲೂಸಿವ್‌ ಮಾಹಿತಿ

    ಬೆಂಗಳೂರು: ವೈಯಾಲಿಕಾವಲ್‌ನಲ್ಲಿ ಮಹಾಲಕ್ಷ್ಮಿ (Mahalakshmi) ಭೀಕರ ಹತ್ಯೆ ಪ್ರಕರಣದ ತನಿಖೆಯನ್ನ ಪೊಲೀಸರು ತೀವ್ರಗೊಳಿಸಿದ್ದಾರೆ. ಸೆಪ್ಟೆಂಬರ್ ಮೂರು ಅಥವಾ ನಾಲ್ಕರಂದು ಮಹಾಲಕ್ಷ್ಮಿಯನ್ನ ಹಂತಕ ಹತ್ಯೆ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

    ಸೆಪ್ಟೆಂಬರ್ ಮೂರು ಅಥವಾ ನಾಲ್ಕುರಂದು ಹತ್ಯೆ ಮಾಡಿರುವ ಬಗ್ಗೆ ಪೊಲೀಸರು ತೀರ್ಮಾನಕ್ಕೆ ಬರಲು ಕೆಲವೊಂದು ಸಾಕ್ಷ್ಯಗಳು ಕಾರಣವಾಗಿದೆ. ಸೆ.1ರ ಭಾನುವಾರ ಹಂತಕನ ಕೃತ್ಯಕ್ಕೆ ಬಲಿಯಾಗಿರುವ ಮಹಾಲಕ್ಷ್ಮಿ ಮಲ್ಲೇಶ್ವರನಲ್ಲಿರುವ ಬಟ್ಟೆ ಅಂಗಡಿಗೆ ಕೆಲಸಕ್ಕೆ ಹೋಗಿರುತ್ತಾರೆ. ಬಟ್ಟೆ ಅಂಗಡಿಯ ಹಾಜರಾತಿಯಲ್ಲಿ ದಾಖಲೆ ಇದೆ. ಸೆ.2 ಅಂದರೆ ಸೋಮವಾರ ವಾರದ ರಜೆ ಪಡೆದುಕೊಂಡಿದ್ದಾರೆ. ಇದು ಮಲ್ಲೇಶ್ವರಂನಲ್ಲಿರುವ ಫ್ಯಾಷನ್ ಪ್ಯಾಕ್ಟ್ರಿಯ ಹಾಜರಾತಿಯಲ್ಲಿದೆ. ಇದನ್ನೂ ಓದಿ: ಮಹಾಲಕ್ಷ್ಮಿ ಮರ್ಡರ್‌ ಕೇಸ್‌ಗೆ ಟ್ವಿಸ್ಟ್‌ – ಫ್ರಿಡ್ಜ್‌ ಮೇಲೆ ಹಲವು ಕಡೆ ಹಲವು ಬೆರಳಚ್ಚು ಗುರುತು ಪತ್ತೆ!

    ಅದೇ ಶಾಪ್‌ನಲ್ಲಿ ಹಂತಕ ಮುಕ್ತಿ ರಂಜನ್ ರಾಯ್ ಕೂಡ ಟೀಂ ಲೀಡರ್ ಆಗಿ ಕೆಲಸ ಮಾಡಿಕೊಂಡಿದ್ದಾನೆ. ಕಳೆದ ಎರಡು ವರ್ಷದಿಂದ ಆದೇ ಶಾಪ್‌ನಲ್ಲಿ ಹಂತಕ ಕೆಲಸ ಮಾಡಿಕೊಂಡಿದ್ದ. ಕಳೆದ 9 ತಿಂಗಳಿಂದ ಕೊಲೆಯಾಗಿರುವ ಮಹಾಲಕ್ಷ್ಮಿ ಕೆಲಸ ಮಾಡಿಕೊಂಡಿದ್ದರು.

    ಸೆಪ್ಟೆಂಬರ್ ಮೂರರಿಂದ ಇಬ್ಬರು ಕೂಡ ಕೆಲಸಕ್ಕೆ ಬಂದಿಲ್ಲ. ಹಾಗಾಗಿ ಸೆಪ್ಟೆಂಬರ್ ಮೂರು ಅಥವಾ ನಾಲ್ಕರಂದು ಹತ್ಯೆ ಮಾಡಿರುವ ಸಾಧ್ಯತೆ ಹೆಚ್ಚಾಗಿದೆ ಎನ್ನುತ್ತಿದೆ ಪೊಲೀಸ್ ಮೂಲಗಳು. ಇದನ್ನೂ ಓದಿ: ಮಹಾಲಕ್ಷ್ಮಿ ಕೊಲೆ ಪ್ರಕರಣ – ವೈದ್ಯರಿಂದ ಇಂದು ಮರಣೋತ್ತರ ಪರೀಕ್ಷಾ ವರದಿ ಸಲ್ಲಿಕೆ