Tag: Bengaluru Crime

  • ಮದ್ವೆಯಾಗಿದ್ರೂ ಮತ್ತಿಬ್ಬರೊಂದಿಗೆ ಲವ್ವಿ ಡವ್ವಿ; ಪ್ರಿಯಕರನಿಂದಲೇ ತಾಯಿ-ಮಗುವಿನ ಹತ್ಯೆ

    ಮದ್ವೆಯಾಗಿದ್ರೂ ಮತ್ತಿಬ್ಬರೊಂದಿಗೆ ಲವ್ವಿ ಡವ್ವಿ; ಪ್ರಿಯಕರನಿಂದಲೇ ತಾಯಿ-ಮಗುವಿನ ಹತ್ಯೆ

    ಬೆಂಗಳೂರು: ಇಲ್ಲಿನ ಬಾಗಲಗುಂಟೆ ಠಾಣಾ (Bagalagunte Police Station) ವ್ಯಾಪ್ತಿಯಲ್ಲಿ ನಡೆದಿದ್ದ ತಾಯಿ-ಮಗು ಹತ್ಯೆ ಪ್ರಕರಣದಲ್ಲಿ ಸ್ಫೋಟಕ ಸತ್ಯ ಬಯಲಾಗಿದ್ದು, ಮೃತಳ ಪ್ರಿಯಕರ ಶೇಖರ್‌ನನ್ನ ಪೊಲೀಸರು ಬಂಧಿಸಿದ್ದಾರೆ.

    ಕಳೆದ ಎರಡು ದಿನಗಳ ಹಿಂದೆಯಷ್ಟೇ ನವನೀತ (35) ಹಾಗೂ ಪುತ್ರ ಸಾಯಿ ಸೃಜನ್ (8) ಹತ್ಯೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ಪ್ರಿಯಕರ ಶೇಖರ್‌ನನ್ನ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

    CRIME

    ಮದುವೆಯಾದ್ಮೇಲೂ ಮತ್ತಿಬ್ಬರೊಂದಿಗೆ ಪ್ರೇಮ:
    ಕೊಲೆಯಾದ ಮಹಿಳೆ (Women) ನವನೀತ ತನ್ನ ಪತಿ ಚಂದ್ರುವಿನಿಂದ ಬೇರ್ಪಟ್ಟು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಕಳೆದ 2 ವರ್ಷಗಳಿಂದ ಮಗ ಸಾಯಿ ಸೃಜನ್ ಜೊತೆಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ನವನೀತ ಗಂಡಿನಿಂದ ದೂರಾದ ಮೇಲೆ ಆರೋಪಿ ಶೇಖರ್ ಜೊತೆಗೆ ಸ್ನೇಹ ಬೆಳೆಸಿದ್ದಳು. ಬಳಿಕ ಇಬ್ಬರು ಪ್ರೀತಿ ಮಾಡೋಕೆ ಶುರು ಮಾಡಿದ್ದರು. ಆದ್ರೆ ನವನೀತ ಇತ್ತೀಚೆಗೆ ಶೇಖರ್ ಬಿಟ್ಟು ಲೋಕೇಶ್ ಎಂಬಾತನೊಂದಿಗೆ ಸಂಪರ್ಕ ಹೊಂದಿದ್ದಳು. ಇದನ್ನ ಕಂಡ ಮೊದಲ ಪ್ರಿಯಕರ ಶೇಖರ್ ನವನೀತಳಿಗೆ ವಾರ್ನಿಂಗ್ ಕೊಟ್ಟಿದ್ದಾನೆ. ಲೋಕೇಶ್ ಸಹವಾಸ ಬಿಡುವಂತೆ ಎಚ್ಚರಿಕೆ ಕೊಟ್ಟಿದ್ದಾನೆ, ಆಕೆ ಮೇಲೆ ಹಲ್ಲೆಯನ್ನೂ ಮಾಡಿದ್ದಾನೆ. ಆದರೂ ನನವನೀತ ಲೋಕೇಶ್ ಜೊತೆಗೆ ಸಂಪರ್ಕ ಹೊಂದಿದ್ದಳು.

    ಇದರಿಂದ ಬೇಸತ್ತಿದ್ದ ಶೇಖರ್ ಶನಿವಾರ ಎಂದಿನಂತೆ ನವನೀತಳ ಮನೆಗೆ ಬಂದಿದ್ದಾನೆ. ನವನೀತಳ ಮಗನಿಗೆ ಜ್ಯೂಸ್ ತೆಗೆದುಕೊಂಡು ಬರುವಂತೆ ಹೇಳಿದ್ದಾನೆ. ಈ ವೇಳೆ ಆಕೆಯೊಂದಿಗೆ ಜಗಳ ಶುರು ಮಾಡಿ, ಚಾಕುವಿನಿಂದ ಕುತ್ತಿಗೆ ಹಿರಿದು ಕೊಲೆ ಮಾಡಿದ್ದಾನೆ. ನಂತರ ಅಂಗಡಿಯಿಂದ ಜ್ಯೂಸ್ ತೆಗೆದುಕೊಂಡುಬಂದ ಮಗುವಿಗೆ ಮ್ಯಾಜಿಕ್ ಹೇಳಿಕೊಡುತ್ತೇನೆ ಎಂದು ನಂಬಿಸಿ, ಸೀರೆಯಿಂದ ಮಗುವಿನ ಎರಡೂ ಕೈಕಾಲುಗಳನ್ನು ಕಟ್ಟಿದ್ದಾನೆ. ತಲೆ ದಿಂಬಿನಿಂದ ಉಸಿರುಗಟ್ಟಿಸಿ ಬಾಲಕನನ್ನೂ ಕೊಲೆ ಮಾಡಿದ್ದಾನೆ. ಎರಡು ಮೃತ ದೇಹಗಳನ್ನ ರೂಮಿನಲ್ಲಿ ಮಂಚದ ಮೇಲೆ ಎಸೆದು ಪರಾರಿಯಾಗಿದ್ದಾನೆ.

    ಅಕ್ಕ ಪಕ್ಕದ ಏರಿಯಾ ಜನರಿಗೆ ನನಗೆ ಮೋಸ ಮಾಡಿದ್ದಾಳೆ ಅದಕ್ಕಾಗಿ ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದ. ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮನೆ ಬಾಡಿಗೆ ಕೊಡುವ ಮುನ್ನ ಹುಷಾರ್; ಲಿವಿಂಗ್ ರಿಲೇಷನ್‌ನಲ್ಲಿ ಇದ್ಕೊಂಡೇ ಮನೆ ದೋಚಿದ ಖತರ್ನಾಕ್ ಜೋಡಿ

    ಮನೆ ಬಾಡಿಗೆ ಕೊಡುವ ಮುನ್ನ ಹುಷಾರ್; ಲಿವಿಂಗ್ ರಿಲೇಷನ್‌ನಲ್ಲಿ ಇದ್ಕೊಂಡೇ ಮನೆ ದೋಚಿದ ಖತರ್ನಾಕ್ ಜೋಡಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದ್ದು ಇದೀಗ ಬಾಡಿಗೆ ಕೊಡುವ ಮನೆ ಮಾಲೀಕರು ಎಚ್ಚೆತ್ತುಕೊಳ್ಳಬೇಕಾಗಿದೆ.

    ಹೌದು, ಬೆಂಗ್ಳೂರಿನಲ್ಲಿ (Bengaluru) ಲಿವಿಂಗ್ ರಿಲೇಷನ್‌ಶಿಪ್‌ನಲ್ಲೇ (Live In Relationship) ಇದ್ದುಕೊಂಡು ಮನೆ ದೋಚಿದ ಖತರ್ನಾಕ್ ಜೋಡಿ ಈಗ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ.

    ಮನೆಯನ್ನೇ ಗುಡಿಸಿ ಗುಂಡಾತರ ಮಾಡಿದ್ದ ಜೋಡಿ ಇದೀಗ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರ (Subramanya Pura Police) ಬಲೆಗೆ ಬಿದ್ದಿದೆ. ಲಿಖಿತಾ ಹಾಗೂ ಸುಮಂತ್ ಬಂಧಿತ ಆರೋಪಿಗಳು. ಇದನ್ನೂ ಓದಿ: ಅಕ್ರಮ ಆಸ್ತಿ ಕೇಸ್‌; ಕೆ.ಆರ್‌. ಪುರಂ ತಹಶೀಲ್ದಾರ್‌ ಸಹೋದರ ಸೇರಿ ನಾಲ್ವರಿಗೆ ಲೋಕಾಯುಕ್ತ ನೋಟಿಸ್‌

    ಈ ಖತರ್ನಾಕ್ ಜೋಡಿ ತಾವು ಬಾಡಿಗೆಗೆ (Rent House) ಇದ್ದ ಮಾಲೀಕರ ಮನೆಯಲ್ಲೇ ಬರೋಬ್ಬರಿ 4 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದರು. ಬೆಂಗಳೂರು ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಎಜಿಎಸ್ ಲೇಔಟ್‌ನಲ್ಲಿ ಘಟನೆ ನಡೆದಿತ್ತು.

    ನಡೆದಿದ್ದು ಹೇಗೆ..?
    ಆರೋಪಿಗಳಾದ ಲಿಖಿತಾ, ಸುಮಂತ್, ಎಜಿಎಸ್ ಬಡಾವಣೆಯ ಪ್ರೇಮಲತಾ ಎಂಬವರ ಮನೆಯಲ್ಲಿ ಬಾಡಿಗೆಗೆ ಇದ್ದರು. ಬಾಡಿಗೆ ಜಾಸ್ತಿ ಬರುತ್ತೆ ಅಂತಾ ಲಿವಿಂಗ್ ರಿಲೇಷನ್‌ನಲ್ಲಿರಲು ಮಾಲೀಕರು ಅನುಮತಿಸಿದ್ದರು. ಕಳೆದ ನಾಲ್ಕೂವರೆ ತಿಂಗಳಿನಿಂದ ಬಾಡಿಗೆ ಮನೆಯಲ್ಲಿದ್ದುಕೊಂಡೇ ಮಾಲೀಕರ ಚಲನವಲನ ವೀಕ್ಷಿಸುತ್ತಿದ್ದರು. ಇದ್ದಕ್ಕಿದ್ದಂತೆ ಮನೆ ಖಾಲಿ ಮಾಡಿದರು. ಮನೆ ಖಾಲಿ ಮಾಡಿದ ಕೆಲವೇ ದಿನಗಳಲ್ಲಿ ಮಾಲೀಕರ ಮನೆಯಲ್ಲಿ ಕಳ್ಳತನವಾಯಿತು. ಆರೋಪಿಗಳ ಕೈಚಳಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದನ್ನೂ ಓದಿ: ಚಾಮುಂಡಿಬೆಟ್ಟದಲ್ಲಿ ಆಷಾಢ 2ನೇ ಶುಕ್ರವಾರವೂ ಭಕ್ತರ ದಂಡು – 60 ವರ್ಷ ಮೇಲ್ಪಟ್ಟವರಿಗೆ ನೇರ ದರ್ಶನ

    ಚಿನ್ನಾಭರಣಗಳನ್ನ ಕದ್ದು ಮಾರಾಟ ಮಾಡಿದ್ದ ಜೋಡಿ, ಬೆಂಗಳೂರಿನಿಂದ ಎಸ್ಕೇಪ್ ಆಗಿ ಶಿವಮೊಗ್ಗದಲ್ಲಿ ಸೆಟಲ್ ಆಗಿತ್ತು. ಕೈಯಲ್ಲಿದ್ದ ಹಣ ಖಾಲಿಯಾಗಿ ಮತ್ತೊಂದು ಕಡೆ ಕೃತ್ಯವೆಸಗಲು ಈ ಜೋಡಿ ಸಿದ್ಧವಾಗಿತ್ತು. ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

    ಸದ್ಯ ಆರೋಪಿಗಳನ್ನ ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗಳೂರಲ್ಲಿ ಸಿಗರೇಟ್‌ ವಿಚಾರಕ್ಕೆ ನಡೆದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯ

    ಬೆಂಗಳೂರಲ್ಲಿ ಸಿಗರೇಟ್‌ ವಿಚಾರಕ್ಕೆ ನಡೆದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯ

    ಬೆಂಗಳೂರು: ಸಿಗರೇಟ್ ವಿಚಾರಕ್ಕೆ ಮೂವರ ನಡುವೆ ಜಗಳ ಶುರುವಾಗಿ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ (Bengaluru) ಉಪ್ಪಾರಪೇಟೆಯಲ್ಲಿ ನಡೆದಿದೆ.

    ಕಲಬುರಗಿ ಮೂಲದ ಮಲ್ಲಿನಾಥ್ ಬಿರಾದರ್ (33), ಗಣೇಶ್ ಹಾಗೂ ಮತ್ತೋರ್ವ ಮೂವರು ಅಡುಗೆ ಕೆಲಸ ಮಾಡಿಕೊಂಡಿದ್ದರು. ಪ್ರತಿದಿನ ಬೆಂಗಳೂರಿನ ಬೇರೆ ಬೇರೆ ಕಡೆ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಉಪ್ಪಾರಪೇಟೆಯ ಭಾಗ್ಯ ವಿನಾಯಕ ದೇವಸ್ಥಾನದ ಪಕ್ಕದಲ್ಲಿ ಬಂದು ಮೂವರು ಕೂತಿದ್ದಾರೆ. ಹೀಗೆ ಕುಳಿತಿದ್ದವರ ಮಧ್ಯೆ ಸಿಗರೇಟ್ ವಿಚಾರಕ್ಕೆ ಕಿರಿಕ್ ಆಗಿದೆ. ನೋಡ ನೋಡ್ತಿದ್ದಂತೆ ಆರೋಪಿ ಗಣೇಶ್, ಮಲ್ಲಿನಾಥ್ ಬಿರಾದರ್ ಮತ್ತು ಮತ್ತೋರ್ವನ ಮೇಲೆ ಚಾಕುವಿನಿಂದ ಇರಿದಿದ್ದಾನೆ. ಘಟನೆಯಲ್ಲಿ ಗಣೇಶ್‌ಗೂ ಗಾಯವಾಗಿದ್ದು, ಸ್ಥಳೀಯರ ಸಹಾಯದಿಂದ ಮೂವರನ್ನು ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ: ಮೆಡಿಕಲ್ ಸ್ಟೋರ್ ಮಾಲೀಕನಿಂದ ಶಸ್ತ್ರ ಚಿಕಿತ್ಸೆ – ರೋಗಿ ಸಾವು

    ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರಲ್ಲಿ ಮಲ್ಲಿನಾಥ್ ಬಿರಾದರ್ ಸಾವನ್ನಪ್ಪಿದ್ದಾನೆ. ಮತ್ತೋರ್ವನ ಮರ್ಮಾಂಗಕ್ಕೆ ಚಾಕು ಇರಿತವಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಆರೋಪಿ ಗಣೇಶ್‌ಗೂ ಗಾಯಗಳಾಗಿವೆ. ಮೇಲ್ನೋಟಕ್ಕೆ ಸಿಗರೇಟ್ ವಿಚಾರಕ್ಕೆ ನಡೆದ ಗಲಾಟೆ ಎನ್ನಲಾಗುತ್ತಿದೆ. ಸದ್ಯ ಯಾರು ಹೇಳಿಕೆ ಕೊಡುವ ಸ್ಥಿತಿಯಲ್ಲಿ ಇಲ್ಲ. ಹಾಗಾಗಿ ನಿಖರ ಕಾರಣ ಇನ್ನಷ್ಟೇ ಗೊತ್ತಾಗಬೇಕಿದೆ.

    ಘಟನೆ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಇದನ್ನೂ ಓದಿ: ಸಿಧು ಪತ್ನಿಗೆ ಸ್ತನ ಕ್ಯಾನ್ಸರ್- ನಿಮ್ಮ ಬರುವಿಕೆಗಾಗಿ ಕಾಯ್ತಿದ್ದೇನೆಂದು ಭಾವುಕ ಪತ್ರ

  • ಅಕ್ಕನ ಅನೈತಿಕ ಸಂಬಂಧ ವಿರೋಧಿಸಿದ್ದಕ್ಕೆ ತಮ್ಮನ ಕೊಲೆ ಪ್ರಕರಣ – 8 ವರ್ಷಗಳ ಬಳಿಕ ಆರೋಪಿಗಳು ಅರೆಸ್ಟ್

    ಅಕ್ಕನ ಅನೈತಿಕ ಸಂಬಂಧ ವಿರೋಧಿಸಿದ್ದಕ್ಕೆ ತಮ್ಮನ ಕೊಲೆ ಪ್ರಕರಣ – 8 ವರ್ಷಗಳ ಬಳಿಕ ಆರೋಪಿಗಳು ಅರೆಸ್ಟ್

    – ಪ್ರಿಯಕರನೊಂದಿಗೆ ಸೇರಿ ಸಹೋದರನ ದೇಹ ಪೀಸ್‌ ಮಾಡಿ ಎಸೆದಿದ್ದ ಅಕ್ಕ

    ಬೆಂಗಳೂರು: ಅಕ್ಕನ ಅನೈತಿಕ ಸಂಬಂಧ ವಿರೋಧಿಸಿದ್ದಕ್ಕೆ ತಮ್ಮನನ್ನೇ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ವರ್ಷಗಳ ಬಳಿಕ ಆರೋಪಿಗಳನ್ನು ಬಂಧಿಸಲಾಗಿದೆ.

    ಎಂಟು ವರ್ಷಗಳ ಹಿಂದೆ ಏರ್‌ಬ್ಯಾಗ್‌ನಲ್ಲಿ ತುಂಡರಿಸಿದ ಕೈ-ಕಾಲು ಮತ್ತು ರುಂಡವಿಲ್ಲದ ಮುಂಡಾ ಪ್ರತ್ಯೇಕ ಕಡೆ ಪತ್ತೆಯಾಗಿತ್ತು. ಮೂರು ವರ್ಷಗಳ ತನಿಖೆ ಬಳಿಕವು ಆರೋಪಿಗಳು ಪತ್ತೆಯಾಗದ ಹಿನ್ನೆಲೆ ಪೊಲೀಸರು ಪತ್ತೆಯಾಗದ ಪ್ರಕರಣ ಎಂದು ಕ್ಲೋಸ್ ಮಾಡಿದ್ದರು. ಆದರೆ ಎಂಟು ವರ್ಷಗಳ ಬಳಿಕ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ತನ್ನದೇ ಕತ್ತು ಸೀಳಿ, ಚಾಕು, ಗನ್ ಹಿಡ್ಕೊಂಡು ದೆಹಲಿ ಬೀದಿಯಲ್ಲಿ ಓಡಾಡಿದ ವ್ಯಕ್ತಿ – ಜನ ಚೆಲ್ಲಾಪಿಲ್ಲಿ

    ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತನ್ನ ಆಕ್ಕನಾದ ಭಾಗ್ಯಶ್ರೀ ಮತ್ತು ಆಕೆಯ ಪ್ರಿಯಕರ ಸುಪುತ್ರ ಶಂಕರಪ್ಪ ತಳವಾರ್‌ನಿಂದ ಕೊಲೆಯಾಗಿದ್ದ. ಆರೋಪಿಗಳಾದ ಸುಪುತ್ರ ಮತ್ತು ಭಾಗ್ಯಶ್ರೀ ಕಾಲೇಜು ದಿನಗಳಲ್ಲಿ ಪ್ರೀತಿಸುತ್ತಿದ್ದರು. ಆದರೆ ಪೋಷಕರು ಒಪ್ಪದ ಹಿನ್ನೆಲೆ ಇಬ್ಬರು ಪ್ರತ್ಯೇಕವಾಗಿ ಮದುವೆಯಾಗಿ ಜೀವನ ನಡೆಸುತ್ತಿದ್ದರು. ಈ ನಡುವೆ ಸಂಸಾರದಲ್ಲಿ ವಿರಸ ಮೂಡಿ ಸುಪುತ್ರ ಬೆಂಗಳೂರು ಸೇರಿದ್ದ. ಜೊತೆಗೆ ಭಾಗ್ಯಶ್ರೀಯನ್ನೂ ಬೆಂಗಳೂರಿಗೆ ಬರುವಂತೆ ಹೇಳಿದ್ದಾನೆ. ಗಂಡನನ್ನು ಬಿಟ್ಟ ಭಾಗ್ಯಶ್ರೀ ತಮ್ಮ ಲಿಂಗರಾಜನ ಜೊತೆ ಬೆಂಗಳೂರಿಗೆ ಬಂದಿದ್ದಳು. ಮೂರು ಜನ ಜಿಗಣಿ ಕೈಗಾರಿಕಾ ಪ್ರದೇಶದ ಯಜಾಕಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದು, ಜಿಗಣಿ ಸಮೀಪದ ವಡೇರ ಮಂಚನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ಮೂರು ಮಂದಿ ವಾಸವಾಗಿದ್ದರು. ದಿನ ಕಳೆದಂತೆ ಭಾಗ್ಯಶ್ರೀ ಮತ್ತು ಸುಪತ್ರ ನಡುವಿನ ಸಲುಗೆಯು ಆಕೆಯ ಸಹೋದರ ಲಿಂಗರಾಜುಗೆ ಬೇಸರ ಮೂಡಿಸಿತ್ತು. ಅದೊಂದು ದಿನ ಸುಪುತ್ರನ ಸಂಬಂಧ ಮುರಿದುಕೊಳ್ಳುವಂತೆ ಅಕ್ಕ ಭಾಗ್ಯಶ್ರೀಗೆ ಲಿಂಗರಾಜು ತಾಕೀತು ಮಾಡಿದ್ದ. ಇದಕ್ಕೆ ಒಪ್ಪದಿದ್ದಾಗ ಕಪಾಳಕ್ಕೆ ಹೊಡೆದಿದ್ದ. ಮಧ್ಯಪ್ರವೇಶಿಸಿದ ಅಕ್ಕನ ಪ್ರಿಯಕರ ಲಿಂಗರಾಜುನನ್ನು ಪ್ರಶ್ನಿಸಿದ್ದ. ಈ ವೇಳೆ ಕೋಪಗೊಂಡ ಲಿಂಗರಾಜು ಅಕ್ಕನ ಪ್ರಿಯಕರ ಸುಪುತ್ರನ ಮೇಲೆ ಹಲ್ಲೆ ಮಾಡಿದ್ದ.

    ಪ್ರಿಯಕರನ ಮೇಲೆ ತಮ್ಮ ಲಿಂಗರಾಜು ಹಲ್ಲೆ ಮಾಡುತ್ತಿರುವುದನ್ನು ಕಂಡು ವ್ಯಾಘ್ರಗೊಂಡ ಭಾಗ್ಯಶ್ರೀ ಮತ್ತು ಪ್ರಿಯಕರ ಸುಪುತ್ರ ಸೇರಿಕೊಂಡು ನಿಂಗರಾಜು ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ನಿತ್ರಾಣಗೊಂಡು ಲಿಂಗರಾಜು ಸ್ಥಳದಲ್ಲಿಯೇ ಮೃತಪಟ್ಟಿದ್ದ. ಕೊಲೆ ರಹಸ್ಯವಾಗಿಡಲು ಲಿಂಗರಾಜು ಕೈ-ಕಾಲು, ರುಂಡ-ಮುಂಡಾವನ್ನು ಕತ್ತರಿಸಿ ಬೇರ್ಪಡಿಸಿದ ಭಾಗ್ಯಶ್ರೀ ಮತ್ತು ಸುಪುತ್ರ ಮೂರು ಬ್ಯಾಗ್‌ಗಳಲ್ಲಿ ತುಂಬಿ ಪ್ರತ್ಯೇಕ ಕಡೆಗಳಲ್ಲಿ ಎಸೆದು ಪರಾರಿಯಾಗಿದ್ದರು. ಇದನ್ನೂ ಓದಿ: ಪೊಲೀಸರಿಗೆ ಮಾಹಿತಿ ನೀಡಿದ್ರೆ ನಿಮ್ಮ ಮನೆ ಸರ್ವನಾಶವಾಗುತ್ತೆ – ವಿಚಿತ್ರ ಡೆತ್‌ನೋಟ್ ಬರೆದು ಯುವಕ ಆತ್ಮಹತ್ಯೆ

    ಜಿಗಣಿ ಟೌನ್ ವಿ ಇನ್ ಹೋಟೆಲ್ ಬಳಿ ತುಂಡರಿಸಿ ಕೈ-ಕಾಲುಗಳು ತುಂಬಿದ ಬ್ಯಾಗ್ ಪತ್ತೆಯಾದರೆ, ರುಂಡವಿಲ್ಲದ ಮುಂಡಾ ವಡೇರ ಮಂಚನಹಳ್ಳಿ ಕೆರೆಯಲ್ಲಿ ಪತ್ತೆಯಾಗಿತ್ತು. ರುಂಡ ಮಾತ್ರ ಇಲ್ಲಿಯವರೆಗೆ ಪತ್ತೆಯಾಗುವುದಿಲ್ಲ. ಆದರೆ ಸ್ಥಳೀಯರ ಮಾಹಿತಿ ಆಧರಿಸಿ ಜಿಗಣಿ ಪೊಲೀಸ್ ಠಾಣೆಯಲ್ಲಿ ಎರಡು ಕೊಲೆ ಪ್ರಕರಣಗಳು ದಾಖಲಾಗುತ್ತವೆ. ಮೂರು ವರ್ಷ ಕಳೆದರೂ ಪ್ರಕರಣ ಬೇಧಿಸಲು ಸಾಧ್ಯವಾಗದೇ ಪತ್ತೆಯಾಗದ ಪ್ರಕರಣ ಎಂದು ನ್ಯಾಯಾಲಯಕ್ಕೆ 2018ರಲ್ಲಿ ಜಿಗಣಿ ಪೊಲೀಸರು ಸಿ ರಿಪೋರ್ಟ್ ಸಲ್ಲಿಸಿದ್ದರು. ಇತ್ತೀಚೆಗೆ ಕೇಂದ್ರ ವಲಯ ಐಜಿ ರವಿಕಾಂತೇ ಗೌಡರು ಕ್ರೈಮ್ ರಿವೀವ್ ಸಭೆ ವೇಳೆ 2015 ಕೊಲೆ ಪ್ರಕರಣ ತಾರ್ಕಿಕ ಅಂತ್ಯ ಕಾಣಿಸುವಂತೆ ಜಿಗಣಿ ಪೊಲೀಸರಿಗೆ ಸೂಚಿಸಿದ್ದರು. ಪ್ರಕರಣದ ಮರುತನಿಖೆಗೆ ಇಳಿದ ಜಿಗಣಿ ಪೊಲೀಸರಿಗೆ ಆರೋಪಿಗಳ ಸುಳಿವು ಅಷ್ಟು ಸುಲಭವಾಗಿ ದೊರೆಯುವುದಿಲ್ಲ. ಕೊನೆಗೆ ಮೂರು ತಿಂಗಳ ನಿರಂತರ ಪರಿಶ್ರಮದ ಫಲವಾಗಿ ಅದೊಂದು ದಿನ ಬಾತ್ಮೀದಾರರಿಂದ ಮಾಹಿತಿ ಲಭ್ಯವಾಗುತ್ತದೆ. ಮಹಾರಾಷ್ಟ್ರದ ನಾಸಿಕ್‌ನಲ್ಲಿ ಸುಪುತ್ರ ಮತ್ತು ಭಾಗ್ಯಶ್ರೀ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ದೊರೆಯುತ್ತದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ತಲಾಷೆಗಿಳಿದಾಗ ಆರೋಪಿ ಭಾಗ್ಯಶ್ರೀ, ಪ್ರಿಯಾಂಕಾ ವಿನೋದ್ ರೆಡ್ಡಿ ಎಂದು ಹೆಸರು ಬದಲಿಸಿಕೊಂಡು ನಾಸಿಕ್ ನಗರದಲ್ಲಿ ಸುಪುತ್ರನ ಜೊತೆ ವಾಸವಾಗಿರುವುದು ಪತ್ತೆಯಾಗುತ್ತದೆ. ಅಂತಿಮವಾಗಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಲಿಂಗರಾಜು ಕೊಲೆ ವೃತ್ತಾಂತ ಬಯಲಾಗಿದೆ.

    ಲಿಂಗರಾಜು ಕೊಲೆ ಬಳಿಕ ಸ್ವಗ್ರಾಮಕ್ಕೂ ತೆರಳದ ಆರೋಪಿಗಳು ಯಾರೊಬ್ಬರ ಸಂಪರ್ಕಕ್ಕೂ ಬಾರದೆ, ಮೊಬೈಲ್ ಪೋನ್ ಸಹ ಬಳಸದೇ ತಲೆ ಮರೆಸಿಕೊಂಡಿದ್ದರು. ಟೆಕ್ನಿಕಲ್ ಎವಿಡೆನ್ಸ್ ಮತ್ತು ಭಾತ್ಮೀದಾರರ ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸುವಲ್ಲಿ ಜಿಗಣಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ ಸುದರ್ಶನ್ ಮತ್ತು ತಂಡ ಯಶಸ್ವಿಯಾಗಿದ್ದು, ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ವಿಶೇಷ ಬಹುಮಾನ ಘೋಷಿಸಿದ್ದಾರೆ. ಇದನ್ನೂ ಓದಿ: ವ್ಹೀಲಿಂಗ್ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ

  • ಮದುವೆ ವಿಚಾರಕ್ಕೆ ಸಲಿಂಗಕಾಮಿಗಳ ನಡುವೆ ಗಲಾಟೆ – ಬೆಂಗಳೂರಲ್ಲಿ ಒಬ್ಬನ ಕೊಲೆಯಲ್ಲಿ ಅಂತ್ಯ

    ಮದುವೆ ವಿಚಾರಕ್ಕೆ ಸಲಿಂಗಕಾಮಿಗಳ ನಡುವೆ ಗಲಾಟೆ – ಬೆಂಗಳೂರಲ್ಲಿ ಒಬ್ಬನ ಕೊಲೆಯಲ್ಲಿ ಅಂತ್ಯ

    ಬೆಂಗಳೂರು: ವೈಯಕ್ತಿಕ ಜೀವನ ವಿಚಾರಕ್ಕೆ ಸಲಿಂಗಕಾಮಿಗಳ (Homosexuals Bengaluru) ನಡುವೆ ಗಲಾಟೆಯಾಗಿ ಒಬ್ಬನ ಕೊಲೆಯಲ್ಲಿ ಜಗಳ ಅಂತ್ಯವಾಗಿರುವ ಘಟನೆ ಬೆಂಗಳೂರಿನ (Bengaluru) ಚಂದ್ರಲೇಔಟ್‌ನಲ್ಲಿ ನಡೆದಿದೆ.

    ಲಿಯಾಕತ್‌ ಅಲಿಖಾನ್‌ ಕೊಲೆಯಾದ ವ್ಯಕ್ತಿ. ಇಲಿಯಾಸ್‌ ಕೊಲೆ ಮಾಡಿದ ಆರೋಪಿ. ಈತನನ್ನು ಚಂದ್ರಲೇಔಟ್‌ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ರೈಲ್ವೆ ನಿಲ್ದಾಣದಲ್ಲಿ ಮೂರು ವರ್ಷದ ಬಾಲಕಿ ಮೇಲೆ ರೇಪ್

    ಕಳೆದ ಎರಡು ವರ್ಷಗಳಿಂದ ಲಿಯಾಕತ್‌ ಮತ್ತು ಇಲಿಯಾಸ್‌ ಇಬ್ಬರೂ ಹೋಮೊ ಸೆಕ್ಸ್‌ನಲ್ಲಿದ್ದರು. ಕೊಲೆಯಾದ ಎರಡು ದಿನಗಳ ಹಿಂದೆ ಲಿಯಾಕತ್‌ ಎರಡನೇ ಮದುವೆಯಾಗಿದ್ದ. ಆದರೆ ಲಿಯಾಕತ್ ಜೊತೆ ಇದ್ದ ಸಂಬಂಧದಿಂದಾಗಿ ಇಲಿಯಾಸ್‌ ಎಂಗೇಜ್‌ಮೆಂಟ್ ಕ್ಯಾನ್ಸಲ್‌ ಮಾಡಿದ್ದ.

    ಇತ್ತೀಚೆಗೆ ಇಲಿಯಾಸ್‌ಗೆ ಮನೆಯಲ್ಲಿ ಹುಡುಗಿ ಹುಡುಕುತ್ತಿದ್ದರು. ತನ್ನ ಸಲಿಂಗಕಾಮದ ಬಗ್ಗೆ ಮನೆಯವರಿಗೆ ಗೊತ್ತಾದರೆ ಏನು ಗತಿ ಎಂದು ಇಲಿಯಾಸ್‌ ಚಿಂತೆಯಲ್ಲಿದ್ದ. ಇದೇ ವಿಚಾರವಾಗಿ ಲಿಯಾಕತ್‌ ಜೊತೆ ಜಗಳ ಮಾಡಿಕೊಂಡಿದ್ದ. ಕೊಲೆಯಾಗುವ ಸಮಯದಲ್ಲೂ ಇಬ್ಬರೂ ಹೋಮೊ ಸೆಕ್ಸ್‌ನಲ್ಲಿದ್ದರು. ಇದನ್ನೂ ಓದಿ: ಮುಸ್ಲಿಂ ಯುವತಿಯರು ಐಬ್ರೋ ಮಾಡುವಂತಿಲ್ಲ – ಫತ್ವಾ ಹೊರಡಿಸಿದ ಬರೇಲಿ ಧಾರ್ಮಿಕ ಕೇಂದ್ರ

    ಇಲಿಯಾಸ್ ತನ್ನ ಭವಿಷ್ಯದ ವಿಚಾರವಾಗಿ ಲಿಯಾಕತ್‌ ಜೊತೆ ಗಲಾಟೆ ತೆಗೆದಿದ್ದ. ಈ ವೇಳೆ ಸುತ್ತಿಗೆಯಲ್ಲಿ ಲಿಯಾಕತ್ ತಲೆಗೆ ಹೊಡೆದು, ಕತ್ತರಿಯಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಸದ್ಯ ಆರೋಪಿ ಇಲಿಯಾಸ್‌ನನ್ನು ಪೊಲೀಸರು ಬಂಧಿಸಿದ್ದಾರೆ.