Tag: Bengaluru Crime

  • Bengaluru | ಸಾಫ್ಟ್‌ವೇರ್‌ ಹ್ಯಾಕ್‌ ಮಾಡಿ ಡೋರ್‌ಲಾಕ್‌ ಓಪನ್‌ – ಐಷಾರಾಮಿ ಕಾರುಗಳ್ಳರ ಬಂಧನ

    Bengaluru | ಸಾಫ್ಟ್‌ವೇರ್‌ ಹ್ಯಾಕ್‌ ಮಾಡಿ ಡೋರ್‌ಲಾಕ್‌ ಓಪನ್‌ – ಐಷಾರಾಮಿ ಕಾರುಗಳ್ಳರ ಬಂಧನ

    ಬೆಂಗಳೂರು: ಐಷಾರಾಮಿ ಕಾರುಗಳನ್ನು (Luxury Cars) ಕಳವು ಮಾಡುತ್ತಿದ್ದ ಮೂವರು ಖತರ್ನಾಕ್‌ಗಳನ್ನು ಬೆಂಗಳೂರಿನ (Bengaluru) ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.

    ರಾಜಸ್ಥಾನದಿಂದ ಬೆಂಗಳೂರಿಗೆ ಬಂದಿದ್ದ ಕಳ್ಳರು ಐಷಾರಾಮಿ ಕಾರುಗಳನ್ನೇ ಟಾರ್ಗೆಟ್‌ ಮಾಡುತ್ತಿದ್ದರು. ಸಾಫ್ಟ್‌ವೇರ್‌ ಮೂಲಕ ಹ್ಯಾಕ್‌ ಮಾಡಿ ಕಾರುಗಳ ಡೋರ್‌ ಓಪನ್‌ ಮಾಡುತ್ತಿದ್ದರು. ಇದರಿಂದ ಸುಲಭವಾಗಿ ಕಾರು ಕದ್ದು ಎಸ್ಕೇಪ್‌ ಆಗುತ್ತಿದ್ದರು. ಸದ್ಯ ಮೂವರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: 10,000 ಹೆಕ್ಟೇರ್ ಬೆಳೆ ಹಾನಿ – ಪಾತಾಳಕ್ಕೆ ಕುಸಿದ ಈರುಳ್ಳಿ ಬೆಲೆ, ರೈತರ ಕಣ್ಣಲ್ಲಿ ನೀರು

    ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದಾಗ, ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಕಾರು ಕಳವು ಮಾಡಿರುವುದು ಗೊತ್ತಾಗಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ. ಇದನ್ನೂ ಓದಿ:  ಬೆಂಗಳೂರು ಹೊರವಲಯದ ಹೆಮ್ಮಿಗೆಪುರದಲ್ಲಿ ಸ್ಕೈಡೆಕ್ ನಿರ್ಮಾಣಕ್ಕೆ ಜಾಗ ಅಂತಿಮ

  • ಅಮೃತಹಳ್ಳಿಯ ದಾಸರಹಳ್ಳಿಯಲ್ಲಿ ಜೋಡಿ ಕೊಲೆ – ಮಲತಂದೆಯಿಂದಲೇ ಇಬ್ಬರು ಹೆಣ್ಣು ಮಕ್ಕಳ ಹತ್ಯೆ!

    ಅಮೃತಹಳ್ಳಿಯ ದಾಸರಹಳ್ಳಿಯಲ್ಲಿ ಜೋಡಿ ಕೊಲೆ – ಮಲತಂದೆಯಿಂದಲೇ ಇಬ್ಬರು ಹೆಣ್ಣು ಮಕ್ಕಳ ಹತ್ಯೆ!

    ಬೆಂಗಳೂರು: ಮಲತಂದೆಯಿಂದಲೇ ಇಬ್ಬರು ಹೆಣ್ಣುಮಕ್ಕಳ ದಾರುಣ ಕೊಲೆಯಾಗಿರುವ ಘಟನೆ ಬೆಂಗಳೂರಿನ (Bengaluru) ಅಮೃತಹಳ್ಳಿ ದಾಸರಹಳ್ಳಿಯಲ್ಲಿ (Amruthahalli Dasarahalli) ನಡೆದಿದ್ದು, ಸ್ಥಳೀಯರನ್ನು ಬೆಚ್ಚಿಬೀಳುವಂತೆ ಮಾಡಿದೆ.

    ದಾಸರಹಳ್ಳಿಯ ಕಾವೇರಿ ಬಡಾವಣೆಯಲ್ಲಿ ನೆಲೆಸಿರುವ ಉತ್ತರ ಭಾರತ (North India) ಮೂಲದ ಮಹಿಳೆಯ ಮನೆಯಲ್ಲಿ ಘಟನೆ ನಡೆದಿದೆ. ಸ್ವತಃ ಮಲತಂದೆಯೇ ಸುಮಾರು 14 ಹಾಗೂ 16 ವರ್ಷದ ಹೆಣ್ಣು ಮಕ್ಕಳನ್ನು ಕೊಚ್ಚಿ ಕೊಲೆ ಮಾಡಿ, ಎಸ್ಕೇಪ್‌ ಆಗಿದ್ದಾನೆ. ಸುಮಿತ್‌ ಕೊಲೆ ಮಾಡಿ ಎಸ್ಕೇಪ್‌ ಆಗಿರುವ ಮಲತಂದೆ. ಸೃಷ್ಠಿ (14) ಮತ್ತು ಸೋನಿಯಾ(16) ಕೊಲೆಯಾದ ಅಪ್ರಾಪ್ತ ಮಕ್ಕಳು ಪೊಲೀಸ್‌ ಮೂಲಗಳು ತಿಳಿಸಿವೆ.

    ಸದ್ಯ ಸ್ಥಳಕ್ಕೆ ಅಮೃತಹಳ್ಳಿ ಪೊಲೀಸರು, ಈಶಾನ್ಯ ವಿಭಾಗ ಡಿಸಿಪಿ ಸಜೀತ್, ಡಾಗ್ ಸ್ಕ್ವಾಡ್, ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಹಾಗೂ ಸೊಕೊ ಟೀಂ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಇಬ್ಬರು ಹೆಣ್ಣುಮಕ್ಕಳ ಜೋಡಿ ಜೊಲೆ ಏರಿಯಾ ಜನರನ್ನ ಭಯಭೀತಗೊಳಿಸಿದೆ.

    ಪ್ರಕರಣದ ಕುರಿತು ಮಾಹಿತಿ ನೀಡಿದ ಈಶಾನ್ಯ ವಿಭಾಗ ಡಿಸಿಪಿ ಸುಜೀತ್, ಶನಿವಾರ ಮಧ್ಯಾಹ್ನ 3:30ರ ಸುಮಾರಿಗೆ ಈ ಘಟನೆ ನಡೆದಿದೆ. ಇಬ್ಬರು ಅಪ್ರಾಪ್ತ ಮಕ್ಕಳನ್ನು ಮಲತಂದೆಯೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ತಾಯಿ ಅನಿತಾ ದೂರು ಕೊಟ್ಟಿದ್ದಾರೆ. ಅಮೃತಹಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ತಾಯಿ ಅನಿತಾ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಮಲ ತಂದೆ ಸುಮಿತ್ ಪುಡ್ ಡಿಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದ ಎಂದು ತಿಳಿಸಿದ್ದಾರೆ.

    ಅಲ್ಲದೇ ಆರೋಪಿ ಯಾವ ಕಾರಣಕ್ಕೆ ಮಕ್ಕಳನ್ನ ಕೊಲೆ ಮಾಡಿದ್ದಾನೆ ಅನ್ನೋದು ತಿಳಿದುಬಂದಿಲ್ಲ. ಸದ್ಯ ಆರೋಪಿ ತಲೆಮರಿಸಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ ಎಂದು ತಿಳಿಸಿದ್ದಾರೆ.

  • ಮಾದಕ ವ್ಯಸನಿಗಳಿಂದ ಸಿಲಿಕಾನ್ ಸಿಟಿಯ ಸ್ಮಶಾನದಲ್ಲಿ ಗಾಂಜಾ ಕೃಷಿ!

    ಮಾದಕ ವ್ಯಸನಿಗಳಿಂದ ಸಿಲಿಕಾನ್ ಸಿಟಿಯ ಸ್ಮಶಾನದಲ್ಲಿ ಗಾಂಜಾ ಕೃಷಿ!

    ಬೆಂಗಳೂರು: ಮಾದಕ ವ್ಯಸನಿಗಳು ಬೆಂಗಳೂರಲ್ಲಿ ಗಾಂಜಾ ಕೃಷಿ (Ganja Farming In Bengaluru) ನಡೆಸಿದ್ದಾರೆ. ಅದೂ ನರಪಿಳ್ಳೆಯೂ ಸುಳಿಯದಂತ ಸ್ಮಶಾನದಲ್ಲಿ.. ನಿರ್ಜನ ಪ್ರದೇಶದಲ್ಲಿರೊ ಸ್ಮಶಾನವನ್ನೇ ಗಾಂಜಾ (Ganja) ಸೇದುವ ಅಡ್ಡವನ್ನಾಗಿ ಮಾಡ್ಕೊಂಡು ಜಾಂಜಾ ಕೃಷಿ ಮಾಡಿರುವ ಇಂಟ್ರೆಸ್ಟಿಂಗ್‌ ಸ್ಟೋರಿ ಇಲ್ಲಿದೆ.

    ಗಾಂಜಾ ಖರೀದಿ ಕಷ್ಟ ಅಂತ ಸ್ಮಶಾನದಲ್ಲಿ ಗಾಂಜಾ ಕೃಷಿ ಮಾಡ್ತಿದ್ದಾರ ವ್ಯಸನಿಗಳು? ಇದು ಯಾವುದೋ ದೂರದ ಊರಿನ ಸ್ಟೋರಿಯಲ್ಲ. ಸಿಲಿಕಾನ್ ಸಿಟಿಯದ್ದೇ ಕಥೆ. ಯಾವ ಏರಿಯಾಗೆ ಹೋದ್ರು, ಗಾಂಜ ಘಾಟು ಇದ್ದೇ ಇದೆ. ಪೊಲೀಸರು (Bengaluru Police), ಸರ್ಕಾರ ಗಾಂಜಾ ನಿರ್ಮೂಲನೆಗೆ ಪಣ ತೊಟ್ಟು ನಿಂತಿದೆ. ಆದ್ರೂ ಗಾಂಜಾ ಘಾಟು ಮಾತ್ರ ಕಮ್ಮಿಯಾಗಿಲ್ಲ. ನಿನ್ನೆ ಮೊನ್ನೆ ರಿಲೀಸ್ ಆದ ಭೀಮಾ ಸಿನಿಮಾದ‌ ಕಥಾವಸ್ತುವು ಇದೇ ವಿಷಯಕ್ಕೆ ಸಂಬಂಧಿಸಿದ್ದೇ ಆಗಿದೆ.

    ಹೊರ ರಾಜ್ಯಗಳಿಂದ ನಗರಕ್ಕೆ ಗಾಂಜಾ ಸಪ್ಲೈ ಆಗುತ್ತೆ. ಪೆಡ್ಲರ್ ಗಳಿಂದ ಬರೋ ಗಾಂಜವನ್ನ ವ್ಯಸನಿಗಳಿಗೆ ತಲುಪಿಸೋದು ಒಂದು ಸವಾಲಿನ ಕೆಲಸ. ಇದೇ ಕಾರಣಕ್ಕೆ ಕೆಲವೊಂದಷ್ಟು ಜನ ಗಾಂಜಾ ಕೃಷಿಗೆ ಮುಂದಾಗಿದ್ದಾರೆ ಅನ್ನೋ ಅನುಮಾನ ಮೂಡಿದೆ. ಯಲಹಂಕ ಬಳಿಯ ಅಟ್ಟೂರು ಸ್ಮಶಾನದಲ್ಲಿ ಸದ್ದಿಲ್ಲದೇ ಗಾಂಜಾ ಕೃಷಿ ನಡೆದಿದ್ಯಾ ಅನ್ನೋ ಅನುಮಾನ ಅಲ್ಲಿನ ಗಾಂಜಾ ಗಿಡಗಳನ್ನ ಮೋಡಿದ್ರೆ ಮೂಡುತ್ತೆ. ಆಗೊಮ್ಮೆ ಈಗೊಮ್ಮೆ ಬರೋ‌ ರುದ್ರಭೂಮಿ ಗಾಂಜಾವ್ಯಸನಿಗಳ ಅಡ್ಡೆಯಾಗಿದೆ ಅನ್ನೋದಕ್ಕೆ ಇಲ್ಲಿನ ಗಾಂಜ ಗಿಡಗಳೇ ಸಾಕ್ಷಿ. ಸ್ಮಶಾನದ ಎರಡು ರೌಂಡ್ ಹಾಕಿದ್ರೆ ಹತ್ತಾರು ಗಾಂಜಾ ಗಿಡಗಳ ಘಾಟು ಮೂಗಿ ರಾಚುತ್ತೆ. ಇನ್ನೂ ಸ್ಮಶಾನದ ಮೂಲೆ ಮೂಲೆ ಪರೀಕ್ಷೆ ಮಾಡಿದ್ರೆ ಅದೆಷ್ಟು ಗಾಂಜಾ ಗಿಡಗಳು ಕಾಣುತ್ತೋ ಗೊತ್ತಿಲ್ಲ. ಇನ್ನೂ ಸ್ಮಶಾನದಲ್ಲಿ ಗಾಂಜಾ ಸೇದುವಾಗ ಉದುರಿರೋ ಬೀಜದಿಂದ ಗಿಡ ಬೆಳದಿದ್ಯೋ ಇಲ್ಲ ಸ್ಮಶಾನ ಯಾರೂ ಬರೋಲ್ಲ ಅಂತ ಬೇಕೆಂದೇ ಗಾಂಜಾ ಕೃಷಿ ಮಾಡಿದ್ದಾರೊ‌ ಗೊತ್ತಿಲ್ಲ.

    ಯಾವಾಗ ʻಪಬ್ಲಿಕ್ ಟಿವಿʼಯಲ್ಲಿ ಈ ಬಗ್ಗೆ ವರದಿ ಬಿತ್ತರವಾಯ್ತೊ ಯಲಹಂಕ ಎಸಿಪಿ ನರಸಿಂಹಮೂರ್ತಿ ಹಾಗೂ ಇನ್ಸ್‌ಪೆಕ್ಟರ್‌ ಸುಧಾಕರ್ ರೆಡ್ಡಿ ಸ್ಮಶಾನಕ್ಕೆ ಭೇಟಿ ನೀಡಿ ಗಾಂಜಾ ಗಿಡಗಳನ್ನ ಸೀಜ್ ಮಾಡಿದ್ದಾರೆ. ಎನ್‌ಡಿಪಿಎಸ್‌ ಆಕ್ಟ್‌ ಅಡಿ ಕೇಸ್ ದಾಖಲು ಮಾಡಲಾಗಿದ್ದು, ಇನ್ನಾದ್ರು ಪೊಲೀಸರು ಈ ಗಾಂಜಾ ಕೃಷಿಗೆ ಮುಕ್ತಿ ನೀಡಿ ಗಾಂಜಾ ಕೃಷಿಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿದೆ.

  • ಹೆತ್ತ ಮಗನ ಮುಂದೆಯೇ ತಾಯಿಯ ಗುಪ್ತಾಂಗಕ್ಕೆ ಖಾರದಪುಡಿ ಹಾಕಿದ ದುರುಳರು!

    ಹೆತ್ತ ಮಗನ ಮುಂದೆಯೇ ತಾಯಿಯ ಗುಪ್ತಾಂಗಕ್ಕೆ ಖಾರದಪುಡಿ ಹಾಕಿದ ದುರುಳರು!

    ಬೆಂಗಳೂರು: ಇವರನ್ನ ಮನುಷ್ಯರು ಅನ್ನೊಬೇಕೊ ರಾಕ್ಷಸರು ಅನ್ನಬೇಕೊ ನಿಜಕ್ಕೂ ಗೊತ್ತಾಗ್ತಿಲ್ಲ. ಯಾಕಂದ್ರೆ ಅಷ್ಟೊಂದು ಕ್ರೂರ ವ್ಯಕ್ತಿಗಳಿವರು. ಈ ಸುದ್ದಿ ಕೇಳಿದ್ರೇನೆ ರಕ್ತ ಕುದಿಯುತ್ತೆ ನೋಡಿ.

    ಚಂದ್ರಾಲೇಔಟ್ ಠಾಣೆಯಲ್ಲಿ (Chandra Layout Police Station) ದಾಖಲಾಗಿರೋ ಲೈಂಗಿಕ ದೌರ್ಜನ್ಯ ಪ್ರಕಣದ ಕ್ರೂರತೆ ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ. ಮೊದಲಿಗೆ ರೌಡಿ ಶೀಟರ್ (Rowdy Sheeter) ಜೊಸೆಫ್ ಹಾಗೂ ಪಾಗಲ್ ಸೀನ ಮೊದಲೇ ಪರಿಚಯವಿದ್ದ ಚೈನ್ ಸ್ನಾಚ್ (Chain Snatching) ಮಾಡ್ತಿದ್ದ 20 ವರ್ಷದ ಯುವಕನನ್ನ ಪೊಲೀಸರ ರೀತಿ ಲಾಕ್ ಮಾಡಿದ್ರು. ಇದಕ್ಕೆ ಆರೋಪಿ ಸೌಮ್ಯಳನ್ನ ಪಿಎಸ್‌ಐ ಅಂತ ತೋರಿಸಿ 20 ವರ್ಷದ ಯುವಕನ್ನ ಚಿನ್ನ ಕಳ್ಳ ಅಂತ ಕಿಡ್ನ್ಯಾಪ್ ಮಾಡಿದ್ರು. ಇದನ್ನೂ ಓದಿ: Bengaluru | ಹಣಕ್ಕಾಗಿ ತಾಯಿ-ಮಗನ ಕಿಡ್ನ್ಯಾಪ್‌ ಮಾಡಿ ಲೈಂಗಿಕ ಕಿರುಕುಳ – ರೌಡಿ ಶೀಟರ್ಸ್‌ ಗ್ಯಾಂಗ್ ಅರೆಸ್ಟ್

    ನಾಯಂಡಹಳ್ಳಿಯ ಜಟಕ ಸ್ಟ್ಯಾಂಡ್‌ ಬಳಿಯಿರುವ ಮನೆಯಲ್ಲಿ ಕೂಡಿ ಹಾಕಿ ರಿಕವರಿ ಕೊಡು ಅಂತ ಇನ್ನಿಲ್ಲದ ಟಾರ್ಚರ್ ನೀಡಿದ್ದಾರೆ. ಪೊಲೀಸ್ರು ನೀಡೋ ಥರ್ಡ್ ಡಿಗ್ರಿ ಟ್ರಿಟ್ಮೆಂಟ್ ಗಿಂತ ಕ್ರೂರವಾಗಿ ಆ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಟಾರ್ಚರ್ ತಾಳಲಾರದೇ ಆ ಯುವಕ ಮನೆಯಲ್ಲಿ ಚಿನ್ನ ಇಟ್ಟಿರೋದಾಗಿ ಸುಳ್ಳು ಹೇಳಿದ್ದ. ನಂತರ ಮನೆಯಲ್ಲಿ ಹೊಗಿ ನೋಡಿದ್ರೆ ಚಿನ್ನ ಇರಲಿಲ್ಲ. ಇದು ಗೊತ್ತಾದಾಗ ಮತ್ತೆ ಟಾರ್ಚರ್ ಮಾಡಿದ್ದಾರೆ. ಈ ವೇಳೆ ಆ ಯುವಕ ನಮ್ಮ ಅಮ್ಮ ಎತ್ತಿ ಇಟ್ಟಿರ್ಬೇಕು ಅಂತ ಮತ್ತೊಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳೋದಕ್ಕೆ ಪ್ರಯತ್ನಿಸಿದ್ದಾನೆ. ಇದನ್ನೂ ಓದಿ: ನಕಲಿ ಎನ್‍ಸಿಸಿ ಶಿಬಿರ ಆಯೋಜಿಸಿ 13 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ – 11 ಮಂದಿ ಅರೆಸ್ಟ್

    ಆ ಬಳಿಕ ಕಿಡ್ನ್ಯಾಪ್ ಗ್ಯಾಂಗ್‌ನ ಅಸಲಿ ಕ್ರೂರತನ ಹೊರ ಬಿದ್ದಿದೆ. ಸೀದಾ ಆ ಯುವಕನ ಮೆನೆಗೆ ಹೋಗಿ ಆತನ ತಾಯಿಯನ್ನ ಕರ್ಕೊಂಡು ಬಂದಿದ್ದಾರೆ. ಇದೇ ನಕಲಿ ಪಿಎಸ್‌ಐ ಸೌಮ್ಯ ಅಂಡ್ ಟೀಮ್ ಆ ಯುವಕನ ತಾಯಿಗೆ ಚಿನ್ನ ಕೊಡುವಂತೆ ಟಾರ್ಚರ್ ಶುರು ಮಾಡಿದ್ದಾಳೆ. ಆ ತಾಯಿ ಯಾವ ಚಿನ್ನ ಗೊತ್ತಿಲ್ಲ ನಮ್ಮನ್ನ ಬಿಟ್ಟು ಬಿಡಿ ಅಂದ್ರು ಕೇಳದೇ ಜೊಸೆಫ್, ಪಾಗಲ್ ಸೀನ ಅಂಡ್ ಟೀಮ್ ಸೇರಿಕೊಂಡು ಆ ತಾಯಿ ಬಾಯಿ ಕಟ್ಟಿ ಮಗನ ಮುಂದೆಯೇ ತಾಯಿ ಗುದದ್ವಾರ ಹಾಗೂ ಖಾಸಗಿ ಅಂಗಕ್ಕೆ ಖಾರದಪುಡಿ ತುರುಕಿದ್ದಾರೆ. ಇನ್ನೂ ಇದಕ್ಕೂ ಮೊದಲೆ ಆ ತಾಯಿ ಚಂದ್ರ ಲೇಔಟ್ ನಲ್ಲಿ ಮಗ ಮಿಸ್ಸಿಂಗ್ ಅಂತ ದೂರು ನೀಡಿದ್ದರು. ಈ ವಿಚಾರ ಗೊತ್ತಾಗಿ ಸೌಮ್ಯಳೇ ಕೆಂಗೇರಿ ಪೊಲೀಸ್ ಠಾಣೆಗೆ ಹೋಗಿ ಪೊಲೀಸರಿಗೆ ಸರ್ ಒಬ್ಬ ಚೈನ್ ಸ್ನಾಚರ್ ಇದ್ದಾನೆ ಅಂತ ಮಾಹಿತಿ ನೀಡಿದ್ದಾಳೆ. ಈ ವೇಳೆ ಚಂದ್ರಲೇಔಟ್ ಪೊಲೀಸರಿಗೆ ಮಾಹಿತಿ ಗೊತ್ತಾಗಿ ಆರೋಪಿಗಳನ್ನ ಅರೆಸ್ಟ್ ಮಾಡಿದ್ದು, ತನಿಖೆ ನಡೆಯುತ್ತಿದೆ‌. ಇದನ್ನೂ ಓದಿ: ಇಂದಿರಾ ಗಾಂಧಿಯಂತೆ ಮಮತಾ ಬ್ಯಾನರ್ಜಿಯನ್ನೂ ಶೂಟ್ ಮಾಡಿ ಎಂದಿದ್ದ ವಿದ್ಯಾರ್ಥಿನಿ ಅರೆಸ್ಟ್

  • Bengaluru | ಹಣಕ್ಕಾಗಿ ತಾಯಿ-ಮಗನ ಕಿಡ್ನ್ಯಾಪ್‌ ಮಾಡಿ ಲೈಂಗಿಕ ಕಿರುಕುಳ – ರೌಡಿ ಶೀಟರ್ಸ್‌ ಗ್ಯಾಂಗ್ ಅರೆಸ್ಟ್

    Bengaluru | ಹಣಕ್ಕಾಗಿ ತಾಯಿ-ಮಗನ ಕಿಡ್ನ್ಯಾಪ್‌ ಮಾಡಿ ಲೈಂಗಿಕ ಕಿರುಕುಳ – ರೌಡಿ ಶೀಟರ್ಸ್‌ ಗ್ಯಾಂಗ್ ಅರೆಸ್ಟ್

    ಬೆಂಗಳೂರು: ಹಣಕ್ಕಾಗಿ ತಾಯಿ ಮಗನನ್ನ ಕಿಡ್ನ್ಯಾಪ್‌ ಮಾಡಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಮೇಲೆ ಇಬ್ಬರು ರೌಡಿಶೀಟರ್ (Rowdy Sheeter Gang) ಸೇರಿ ಒಟ್ಟು 9 ಮಂದಿಯನ್ನ ಚಂದ್ರಲೇಔಟ್ ಪೊಲೀಸರು (Chandra Layout Police) ಬಂಧಿಸಿದ್ದಾರೆ.

    ಜೋಸೆಫ್ (ರೌಡಿ ಶೀಟರ್), ಶ್ರೀನಿವಾಸ್ @ ಪಾಗಲ್ ಸೀನ (ರೌಡಿಶೀಟರ್), ಸೌಮ್ಯಾ, ಪ್ರತಾಪ್, ಜತಿನ್, ವಿಘ್ನೇಶ್, ಸೈಯದ್ ಶಹಬುದ್ದೀನ್, ಸ್ವಾತಿ, ಮಾದೇಶ ಬಂಧಿತ ಆರೋಪಿಗಳು. ದನ್ನೂ ಓದಿ: TB Dam | ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಯಶಸ್ವಿ – ತಾಂತ್ರಿಕ ತಂಡಕ್ಕೆ 2 ಲಕ್ಷ ಬಹುಮಾನ

    ಇದೇ ತಿಂಗಳ ಆ.13 ರಂದು ಜೋಸೆಫ್‌ ಮತ್ತು ಶ್ರೀನಿವಾಸ್ ಹಣ ವಸೂಲಿ ಮಾಡಲು ತಾಯಿ-ಮಗನನ್ನ ಕಿಡ್ನ್ಯಾಪ್‌ (Kidnap) ಮಾಡಿದ್ದರು. ಬಳಿಕ ಇಬ್ಬರನ್ನೂ ಪರಿಚಯಸ್ಥ ಪ್ರತಾಪ್ ಮನೆಯಲ್ಲಿ ಅಕ್ರಮವಾಗಿ ಇರಿಸಿ ಟಾರ್ಚರ್ ಮಾಡಿದ್ದರು. ದೈಹಿಕ ಮತ್ತು ಲೈಂಗಿಕ ದೌರ್ಜನ್ಯ ಎಸಗಿ 2 ಲಕ್ಷ ರೂ. ಕೊಡುವಂತೆ ಕಿರುಕುಳ ನೀಡಿದ್ದರು. ಇಬ್ಬರ ಬಳಿ ಹಣ ಇಲ್ಲ ಎಂದು ಗೊತ್ತಾದಾಗ ಬಿಟ್ಟು ಕಳಿಸಿದ್ದಾರೆ. ದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಸದ್ಯಕ್ಕೆ ಪೊಲಿಟಿಕಲ್ ಸೇಫ್ – ಆದ್ರೆ ಮುಂದೇನು?

    ಗ್ಯಾಂಗ್‌ನಿಂದ ಪಾರಾದ ಮಹಿಳೆ ಚಂದ್ರಲೇಔಟ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನೆಗೆ ಕಾರಣ ಕರ್ತರಾಗಿದ್ದ ಇಬ್ಬರು ರೌಡಿಶೀಟರ್‌ಗಳು, ಇಬ್ಬರು ಮಹಿಳೆಯರು ಸೇರಿ 9 ಮಂದಿಯನ್ನ ಬಂಧನ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಗಳಾದ ಜೋಸೆಫ್ ಮತ್ತು ಪಾಗಲ್ ಸೀನ ಚಂದ್ರಾ ಲೇಔಟ್ ರೌಡಿ ಶೀಟರ್ ಗಳಾಗಿದ್ದು, ಶಹಬುದ್ದೀನ್ ಮತ್ತು ವಿಘ್ನೇಶ್ ವಿರುದ್ಧ ಈ ಹಿಂದೆ ಹಲ್ಲೆ ಪ್ರಕರಣಗಳಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಸದ್ಯ ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

  • ಬೆಂಗಳೂರಲ್ಲಿ 17ರ ಯುವಕನ ಬರ್ಬರ ಹತ್ಯೆ!

    ಬೆಂಗಳೂರಲ್ಲಿ 17ರ ಯುವಕನ ಬರ್ಬರ ಹತ್ಯೆ!

    ಬೆಂಗಳೂರು: 17 ವರ್ಷದ ಯುವಕನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಗಂಗಮ್ಮ ಗುಡಿ ಪೊಲೀಸ್ ಠಾಣಾ (Gangamma Gudi Police Station) ವ್ಯಾಪ್ತಿಯಲ್ಲಿ ನಡೆದಿದೆ.

    ಬೆಂಗಳೂರಿನ (Bengaluru) ಗಂಗಮ್ಮ ಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ವೈಮ್ಯಾಕ್ಸ್ ಸರ್ಕಲ್ ಬಳಿ ಘಟನೆ ನಡೆದಿದೆ. ಮಂಜುನಾಥ್ ಕೊಲೆಯಾದ ಯುವಕ. ಇದನ್ನೂ ಓದಿ: ಮೃತ ಹಜ್ ಯಾತ್ರಿಕರ ಸಂಖ್ಯೆ 1,300ಕ್ಕೆ ಏರಿಕೆ – ಘಟನೆಗೆ ಕಾರಣ ತಿಳಿಸಿದ ಸೌದಿ!

    ತಡರಾತ್ರಿ ವೈಮ್ಯಾಕ್ಸ್ ವೃತ್ತದ ಬಳಿ ಬಂದಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಸದ್ಯ ಸ್ಥಳಕ್ಕೆ ಗಂಗಮ್ಮ ಗುಡಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

    ಯುವಕನ ಭೀಕರ ಕೊಲೆ ನಿಖರ ಕಾರಣ ತಿಳಿದು ಬಂದಿಲ್ಲ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸೂರಜ್‌ ಪರ ಇಂದು ಜಾಮೀನು ಅರ್ಜಿ ಸಲ್ಲಿಕೆ – ವಕೀಲ ನಿಖಿಲ್ ಕಾಮತ್ 

  • ಮಗು ಮಾಡಿಕೊಳ್ಳುವ ವಿಚಾರಕ್ಕೆ ಗಲಾಟೆ – ಪತ್ನಿಯ ಉಸಿರುಗಟ್ಟಿಸಿ ಹತ್ಯೆಗೈದ ಪತಿ

    ಮಗು ಮಾಡಿಕೊಳ್ಳುವ ವಿಚಾರಕ್ಕೆ ಗಲಾಟೆ – ಪತ್ನಿಯ ಉಸಿರುಗಟ್ಟಿಸಿ ಹತ್ಯೆಗೈದ ಪತಿ

    ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ಪತ್ನಿಯನ್ನು ಉಸಿರುಗಟ್ಟಿಸಿ ಹತ್ಯೆಗೈದ ಘಟನೆ ನಗರದ (Bengaluru) ಹೆಚ್‍ಎಎಲ್ ಪೊಲೀಸ್ ಠಾಣಾ (HAL Police Station) ವ್ಯಾಪ್ತಿಯಲ್ಲಿ ನಡೆದಿದೆ.

    ಮೃತ ಮಹಿಳೆಯನ್ನು ಗಿರಿಜಾ ಎಂದು ಗುರುತಿಸಲಾಗಿದೆ. ಆಕೆಯ ಪತಿ ನವೀನ್ ಹತ್ಯೆಗೈದ ಆರೋಪಿಯಾಗಿದ್ದಾನೆ. ಪತಿ ಹಾಗೂ ಪತ್ನಿಯ ನಡುವೆ ಮಗು ಮಾಡಿಕೊಳ್ಳುವ ವಿಚಾರಕ್ಕೆ ಗಲಾಟೆ ನಡೆದಿದೆ ಎಂದು ತಿಳಿದು ಬಂದಿದೆ. ಇದೇ ಕಾರಣಕ್ಕೆ ಮಹಿಳೆ ಮಲಗಿದ್ದ ವೇಳೆ ಆರೋಪಿ ಆಕೆಯನ್ನು ಉಸಿರುಗಟ್ಟಿಸಿ ಹತ್ಯೆಗೈದಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಇಬ್ಬರು ಮಕ್ಕಳನ್ನು ಕೊಂದಿದ್ದ ತಾಯಿ ಜೈಲಿನಲ್ಲೇ ನೇಣಿಗೆ ಶರಣು

    ಗಿರಿಜಾ ಮತ್ತು ನವೀನ್, ಕಳೆದ 8 ತಿಂಗಳ ಹಿಂದಷ್ಟೇ ಮದುವೆ ಆಗಿದ್ದರು. ಆರೋಪಿ ನವೀನ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

    ಈ ಸಂಬಂಧ ಹೆಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ – ಶಂಕಿತರು 10 ದಿನ ಎನ್‍ಐಎ ಕಸ್ಟಡಿಗೆ

  • ಶೋಕಿಯಿಂದ ಚಿನ್ನ ಖರೀದಿಸಿ ಫೇಕ್ ಪೇಮೆಂಟ್ – ಖತರ್ನಾಕ್‌ ಜೋಡಿ ಸಿಕ್ಕಿಬಿದ್ದದ್ದೇ ರೋಚಕ

    ಶೋಕಿಯಿಂದ ಚಿನ್ನ ಖರೀದಿಸಿ ಫೇಕ್ ಪೇಮೆಂಟ್ – ಖತರ್ನಾಕ್‌ ಜೋಡಿ ಸಿಕ್ಕಿಬಿದ್ದದ್ದೇ ರೋಚಕ

    ಬೆಂಗಳೂರು: ‌ಶ್ರೀಮಂತರ ರೀತಿಯಲ್ಲೇ ಶೋಕಿಯಿಂದ ಬಂದು, ಚಿನ್ನ ಖರೀದಿಸಿ ವಂಚಿಸುತ್ತಿದ್ದ ಖತರ್ನಾಕ್‌ ಜೋಡಿಯೊಂದನ್ನು ಬ್ಯಾಡರಹಳ್ಳಿ ಪೊಲೀಸರು (Byadarahalli Police) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಹೌದು. ಶ್ರೀಮಂತರಂತೆ ಟಿಪ್‌ಟಾಪ್‌ ಆಗಿ ಚಿನ್ನದ ಅಂಗಡಿಗೆ ಬಂದ ಜೋಡಿ, ಚಿನ್ನ ಖರೀದಿಸೋದ್ರಲ್ಲೇ (Gold Purchase) ಬ್ಯುಸಿಯಾಗಿರುತ್ತಿತ್ತು. ಅಂಗಡಿ ಮಾಲೀಕರು ಈ ಜೋಡಿ ಕೇಳಿದ್ದನ್ನೆಲ್ಲಾ ಕೊಡುತ್ತಿದ್ದರು. ಒಳ್ಳೆಯ ವ್ಯಾಪಾರ ಆಗ್ತಿತ್ತು ಅಂದುಕೊಳ್ಳುತ್ತಿದ್ದ ಚಿನ್ನದಂಗಡಿ ಮಾಲೀಕನ ಖುಷಿ ಇರುತ್ತಿದ್ದದ್ದು ಕೇವಲ ಅರ್ಧಗಂಟೆ ಮಾತ್ರ. ಈ ಜೋಡಿ ಶಾಪಿಂಗ್‌ ಮಾಡ್ತಿದ್ದ ರೀತಿ ನೋಡಿ, ಅಂಗಡಿ ಮಾಲೀಕರೇ ಬೆಚ್ಚಿ ಬೀಳುತ್ತಿದ್ದರು. ಇಂತಹ ಜೋಡಿ ತಗಲಾಕ್ಕೊಂಡಿದ್ದು ಹೇಗೆ ಅನ್ನೋ ಸ್ಟೋರಿ ಇಲ್ಲಿದೆ.

    ಡಿಜಿಟಲ್‌ ಪೇಮೆಂಟ್‌ ಆ್ಯಪ್‌ಗಳನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದ ಈ ಜೋಡಿ, ಫೇಕ್‌ ಪೇಮೆಂಟ್‌ ಆ್ಯಪ್‌ ( Fake Payment App) ಮೂಲಕ ಹಣ ಪಾವತಿ ಮಾಡಿರುವುದಾಗಿ ತೋರಿಸಿ, ವಂಚಿಸುತ್ತಿದ್ದರು. ಅದೇ ರೀತಿ ಬ್ಯಾಡರಹಳ್ಳಿ ವ್ಯಾಪ್ತಿಯ ಆಭರಣದ ಅಂಗಡಿಯಲ್ಲೂ ಅದೇ ರೀತಿ ನಾಟಕ ಮಾಡಿ ಎಸ್ಕೇಪ್‌ ಆಗಿದ್ದರು. 15 ದಿನಗಳ ಬಳಿಕ ಬ್ಯಾಡರಹಳ್ಳಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಇದನ್ನೂ ಓದಿ: ಗುಜರಾತ್‌ನ ಹಾಸ್ಟೆಲ್‌ನಲ್ಲಿ ನಮಾಜ್‌ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಗುಂಪಿನಿಂದ ಹಲ್ಲೆ

    ಹೇಗಿದೆ ನೋಡಿ ಥ್ರಿಲ್ಲಿಂಗ್‌ ಸ್ಟೋರಿ:
    15 ದಿನದ ಹಿಂದೆ ಗೊಲ್ಲರಹಟ್ಟಿಯಲ್ಲಿರುವ ಪರಮೇಶ್ವರ ಬ್ಯಾಂಕರ್ಸ್ ಅಂಡ್‌ ಜ್ಯೂವೆಲರ್ಸ್‌ ಆಭರಣ ಅಂಗಡಿಗೆ ಈ ಜೋಡಿ ಬಂದಿತ್ತು. 1.65 ಲಕ್ಷ ರೂ. ಮೌಲ್ಯದ 36 ಗ್ರಾಂ ಚಿನ್ನಾಭರಣ ಖರೀದಿ ಮಾಡಿದ್ದಾರೆ. ಬಳಿಕ ಆನ್‌ಲೈನ್‌ ಮೂಲಕ ಹಣ ಪಾವತಿಸಿ ಹೊರಟಿದ್ದಾರೆ. ಹಣ ಪಾವತಿಸಿದ ಸಂದೇಶವನ್ನು ಮಾಲೀಕರಿಗೆ ತೋರಿಸಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಅಂಗಡಿ ಮಾಲೀಕ ತಮ್ಮ ಖಾತೆಯನ್ನು ಪರಿಶೀಲಿಸಿದಾಗ ಮೋಸ ಹೋಗಿರುವುದು ಗೊತ್ತಾಗಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಎಎಸ್‌ಐ ಸಾವು – ಪಿಎಸ್‌ಐ ಸಸ್ಪೆಂಡ್

    ಘಟನೆ ಸಂಬಂಧ ಅಂಗಡಿ ಮಾಲೀಕ ದೂರಿನ ಮೇರೆಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರತು ತನಿಖೆ ಆರಂಭಿಸಿದ್ದ ಪೊಲೀಸರು 15 ದಿನಗಳ ಬಳಿಕ ಆರೋಪಿಗಳನ್ನ ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು 1.30 ಲಕ್ಷ ಚಿನ್ನ ಅಡಮಾನ ಇಟ್ಟಿರೋದು ಗೊತ್ತಾಗಿದೆ. ಅಷ್ಟೇ ಅಲ್ಲ, ಇದೇ ರೀತಿ ಹಲವು ಚಿನ್ನದ ಅಂಗಡಿಗಳಲ್ಲಿ ವಂಚಿಸಿರುವ ಸಂಗತಿ ಬೆಳಕಿಗೆ ಬಂದಿದೆ.

  • ಡಾನ್ಸ್‌ ಮಾಡುವಾಗ ಮೈ ತಾಕಿದ್ದಕ್ಕೆ ಯುವಕನ ಕೊಲೆ – ಮೂವರು ಅಂದರ್‌

    ಡಾನ್ಸ್‌ ಮಾಡುವಾಗ ಮೈ ತಾಕಿದ್ದಕ್ಕೆ ಯುವಕನ ಕೊಲೆ – ಮೂವರು ಅಂದರ್‌

    ಬೆಂಗಳೂರು: ದೇವರ ಉತ್ಸವದಲ್ಲಿ ಡಾನ್ಸ್‌ ಮಾಡುತ್ತಿದ್ದ ವೇಳೆ ಮೈ ತಾಕಿದ್ದಕ್ಕೆ ಯುವಕನನ್ನ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಬ್ಯಾಟರಾಯನಪುರ ಪೊಲೀಸರು (Byatarayanapura Police) ಬಂಧಿಸಿದ್ದಾರೆ.

    ಬೈಕ್‌ ಸರ್ವೀಸ್‌ ಸೆಂಟರ್‌ನಲ್ಲಿ (Bike Service Center) ಕೆಲಸ ಮಾಡುತ್ತಿದ್ದ 23 ವರ್ಷದ ಯುವಕ ಯೋಗೀಶ್‌ನನ್ನು ಹತ್ಯೆಗೈದ ಆರೋಪಿಗಳನ್ನ ಬಂಧಿಸಿದ್ದಾರೆ. ಕೊಲೆ ಆರೋಪಿಗಳನ್ನು ಚೇತನ್, ರಂಗ, ಪವನ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಬ್ಯಾಡಗಿಯಲ್ಲಿ ಸಿಡಿದ ರೈತರು – ಮೆಣಸಿನ ಮಾರುಕಟ್ಟೆ ಕಚೇರಿ, ಅಗ್ನಿಶಾಮಕ ವಾಹನಕ್ಕೆ ಬೆಂಕಿ

    ಕಳೆದ ಮೂರು ದಿನಗಳ ಹಿಂದೆಯಷ್ಟೇ ನಡೆದ ದೇವರ ಉತ್ಸವದಲ್ಲಿ ಡಾನ್ಸ್‌ ಮಾಡುತ್ತಿದ್ದ ವೇಳೆ ಯೋಗೀಶ್‌ ಮೈ ತಾಕಿಸಿದ್ದಾನೆ. ಈ ವಿಚಾರಕ್ಕೆ ಯೋಗೀಶ್‌ ಮತ್ತು ಆರೋಪಿಗಳ ನಡುವೆ ಗಲಾಟೆ ನಡೆದು ವಿಕೋಪಕ್ಕೆ ತಿರುಗಿದೆ. ನಂತರ ಚೇತನ್, ರಂಗ, ಪವನ್ ಸೇರಿ ಕೊಲೆ ಮಾಡಿ, ಎಸ್ಕೇಪ್‌ ಆಗಿದ್ದರು. ಮೂವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಹಳೆಯ ದ್ವೇಷಕ್ಕೆ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕೊಲೆಯಾದ ಯೋಗೀಶ್ ಹಾಗೂ ಆರೋಪಿಗಳ ನಡುವೆ ಈ ಹಿಂದೆ ಗಲಾಟೆ ನಡೆದಿತ್ತು. ಅದಕ್ಕಾಗಿಯೇ ಯೋಗೀಶ್‌ನನ್ನ ಕೊಲೆ ಮಾಡೋದಕ್ಕೆ ಸಂಚು ರೂಪಿಸಿದ್ದರು ಎಂಬುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ. ಇದನ್ನೂ ಓದಿ: PublicTV Explainer: ಕರ್ನಾಟಕದಲ್ಲಿ ಕಲರ್ ಕಾಟನ್ ಕ್ಯಾಂಡಿ ಬ್ಯಾನ್; ‘ಕಲರ್’ ಗೋಬಿ, ಪಾನಿಪುರಿ, ಕಬಾಬ್ ಖಾದ್ಯಗಳಿಗೂ ಬ್ರೇಕ್ – ಯಾಕೆ ಗೊತ್ತಾ?

  • ಹೋಟೆಲ್‌ಗೆ ಊಟಕ್ಕೆ ಹೋಗೋಣ ಎಂದ ಮ್ಯಾನೇಜರ್ ಮನೆಗೆ ಕರೆದೊಯ್ದು ರೇಪ್‌ ಮಾಡ್ದ!

    ಹೋಟೆಲ್‌ಗೆ ಊಟಕ್ಕೆ ಹೋಗೋಣ ಎಂದ ಮ್ಯಾನೇಜರ್ ಮನೆಗೆ ಕರೆದೊಯ್ದು ರೇಪ್‌ ಮಾಡ್ದ!

    – ಹೊಸ ವರ್ಷದ ಮುನ್ನಾ ದಿನ ಬೆಂಗಳೂರಿನಲ್ಲಿ ಅತ್ಯಾಚಾರ

    ಬೆಂಗಳೂರು: ಹೋಟೆಲ್‌ಗೆ ಊಟಕ್ಕೆ ಹೋಗೋಣ ಎಂದು ಹೇಳಿ ಕಂಪೆನಿ ವ್ಯವಸ್ಥಾಪಕನೇ ಮಹಿಳಾ ಸಹೋದ್ಯೋಗಿಯನ್ನು ಮನೆಗೆ ಕರೆದೊಯ್ದು ಅತ್ಯಾಚಾರ ನಡೆಸಿದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಹೊಸ ವರ್ಷದ ಮುನ್ನಾ ದಿನ ಡಿಸೆಂಬರ್‌ 31ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅತ್ಯಾಚಾರಕ್ಕೀಡಾದ ಸಂತ್ರಸ್ತೆಯ ಪತಿಯೂ ಇದೇ ಕಂಪೆನಿಯಲ್ಲಿ (Private Company) ಕೆಲಸ ಮಾಡುತ್ತಿದ್ದರು ಎಂಬ ವಿಚಾರವೂ ಬೆಳಕಿಗೆ ಬಂದಿದೆ.

    ಘಟನೆ ವಿವರ: ಡಿಸೆಂಬರ್‌ 31ರಂದು ಊಟಕ್ಕೆ ಕರೆದೊಯ್ದು ಮಹಿಳಾ ಸಹೋದ್ಯೋಗಿ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಬಸವೇಶ್ವರ ನಗರದಲ್ಲಿರುವ ಕಾಲ್ ಸೆಂಟರ್ ಕಂಪೆನಿ ವ್ಯವಸ್ಥಾಪಕ ಕೆ.ಆರ್ .ಪುರಂ ನಿವಾಸಿ ಸೈಯದ್ ಅಕ್ರಂ ಬಂಧಿತ ಆರೋಪಿ. 32 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಬಸವೇಶ್ವರ ನಗರ ಪೊಲೀಸರು (Basaveshwaranagara Police) ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾನೆ. ಇದನ್ನೂ ಓದಿ: ಮೆಟ್ರೋ ರೈಲು ಬಂದಾಗ ಏಕಾಏಕಿ ಹಳಿಗೆ ಧುಮುಕಿ ಆತ್ಮಹತ್ಯೆಗೆ ಯತ್ನ- ICUವಿನಲ್ಲಿ ಚಿಕಿತ್ಸೆ

    STOP RAPE

    ದೂರಿನಲ್ಲೇನಿದೆ?
    ನಾನು ಮತ್ತು ನನ್ನ ಪತಿ ಬಸವೇಶ್ವರನಗರದ ಕಂಪನಿಯಲ್ಲಿ ಟೆಲಿ ಕಾಲಿಂಗ್ ಕೆಲಸ ಮಾಡಿಕೊಂಡಿದ್ದೇವೆ. ನಮ್ಮ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಸೈಯದ್ ಅಕ್ರಂ ಎಂಬುವವರು ಕೆಲಸ ಮಾಡಿಕೊಂಡಿರುತ್ತಾರೆ. 31 ಡಿಸೆಂಬರ್‌ 2023 ರಂದು ಮಧ್ಯಾಹ್ನ ಸುಮಾರು 1 ಗಂಟೆಯ ಸಮಯಕ್ಕೆ ಊಟ ಮಾಡಲು ಹೋಟೆಲ್ ಗೆ ಹೋಗೋಣವೆಂದು ಹೇಳಿದ್ದಾರೆ. ಬಳಿಕ ತನ್ನ ಬೈಕಿನಲ್ಲಿ ಆತನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರವನ್ನು ಮಾಡಿದ್ದಾರೆ. ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುದಾಗಿ ಬೆದರಿಕೆಯನ್ನು ಹಾಕಿದ್ದಾರೆ. ಇದನ್ನೂ ಓದಿ: ಧೋನಿಗೆ 15 ಕೋಟಿ ರೂ. ದೋಖಾ – ಮಾಜಿ ಪಾಲುದಾರರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಿದ ಮಹಿ

    ಘಟನೆ ನಡೆದ ಎರಡು ದಿನಗಳ ಬಳಿಕ ಜನವರಿ 2ರಂದು ಬೆಂಗಳೂರಿನ ಬಸವೇಶ್ವರ ನಗರ ಠಾಣೆಯಲ್ಲಿ ಸೈಯದ್‌ ಅಕ್ರಂ ವಿರುದ್ಧ ಪ್ರಕರಣ ದಾಖಲಾಗಿದೆ.