Tag: Bengaluru Court

  • ನಟ ದರ್ಶನ್ & ಗ್ಯಾಂಗ್‌ ಇಂದು ಕೋರ್ಟ್‌ಗೆ – ದೋಷಾರೋಪ ಹೊರಿಸಲಿರುವ ಕೋರ್ಟ್‌

    ನಟ ದರ್ಶನ್ & ಗ್ಯಾಂಗ್‌ ಇಂದು ಕೋರ್ಟ್‌ಗೆ – ದೋಷಾರೋಪ ಹೊರಿಸಲಿರುವ ಕೋರ್ಟ್‌

    ಬೆಂಗಳೂರು: ನಟ ದರ್ಶನ್, ಪವಿತ್ರಾ ಗೌಡ (Pavithra Gowda) ಸೇರಿದಂತೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) 17 ಆರೋಪಿಗಳು ಇಂದು ಸಿಸಿಎಚ್ 64ರ ನ್ಯಾಯಾದೀಶರ (CCH 64 Court) ಮುಂದೆ ಹಾಜರಾಗಲಿದ್ದಾರೆ.

    ಎಲ್ಲಾ ಆರೋಪಿಗಳ ಹಾಜರಾತಿ ಬಳಿಕ ಚಾರ್ಜಸ್ ಫ್ರೇಮ್ ಪ್ರಕ್ರಿಯೆ ಶುರುವಾಗಲಿದೆ. ಎ೧ ಆರೋಪಿ ಪವಿತ್ರಾಗೌಡ (Pavithra Gowda) ಅಂತಾ ಕೂಗಿದಾಗ ಕಟಕಟೆಗೆ ಬರಬೇಕಿದೆ, ನಿಮ್ಮ ಮೇಲೆ ಐಪಿಸಿ ಸೆಕ್ಷನ್ 302 ಕೊಲೆಯತ್ನ, 364 ಕಿಡ್ನ್ಯಾಪ್, 202 ಸಾಕ್ಷಿನಾಶ ಕೇಸ್ ದಾಖಲಾಗಿದೆ. ಇದನ್ನ ನೀವು ಒಪ್ಕೊತೀರಾ ಅಥವಾ ಅಲ್ಲಗೆಳೆಯುತ್ತೀರಾ ಅಂತಾ ನ್ಯಾಯಾದೀಶರು ಕೇಳಲಿದ್ದಾರೆ.‌ ಇದನ್ನೂ ಓದಿ: ದೆಹಲಿಯಲ್ಲಿ ಅಕ್ರಮ ವಾಸ – 25 ಬಾಂಗ್ಲಾ ಪ್ರಜೆಗಳು ಅರೆಸ್ಟ್‌

    ಇಲ್ಲ ಸ್ವಾಮಿ ಇದೆಲ್ಲಾ ಸುಳ್ಳು ವಿಚಾರಣೆ ನಡೆಯಲಿ ಅಂತಾ ಆರೋಪಿಗಳು ಹೇಳಿಕೆ ನೀಡುವ ಸಾಧ್ಯತೆ ಇದೆ. ಇದೇ ರೀತಿ ಎಲ್ಲಾ 17 ಆರೋಪಿಗಳನ್ನ ಕರೆದು ಅವರ ಮೇಲೆ ದಾಖಲಾಗಿರೊ ಸೆಕ್ಷನ್ ಬಗ್ಗೆ ನ್ಯಾಯಾಧೀಶರು ವಿವರಣೆ ಕೇಳಲಿದ್ದಾರೆ. ಈ ಪ್ರಕ್ರಿಯೆ ಮುಗಿದ ಮೇಲೆ ದೊಷಾರೋಪ ನಿಗದಿ ಬಳಿಕ ಮುಂದೊಂದು ದಿನ ಟ್ರಯಲ್‌ಗೆ ದಿನಾಂಕ ನ್ಯಾಯಾಧೀಶರು ನಿಗದಿಪಡಿಸಲಿದ್ದಾರೆ. ಇದೇ ವೇಳೆ ಹಾಸಿಗೆ ತಲೆದಿಂಬು ನೀಡುವ ವಿಚಾರ ಕೂಡ ಚರ್ಚೆಗೆ ಬರುವ ಸಾಧ್ಯತೆ ಇದೆ. ಇದನ್ನೂ ಓದಿ: ಛತ್ತೀಸ್‌ಗಢ ಮದ್ಯ ಹಗರಣ | ಮಾಜಿ ಸಿಎಂ ಭೂಪೇಶ್ ಬಘೇಲ್ ಪುತ್ರ ಎಸಿಬಿ ಕಸ್ಟಡಿಗೆ

  • ಅತ್ಯಾಚಾರ ಕೇಸಲ್ಲಿ ಅಪರಾಧಿ; ತೀರ್ಪು ಪ್ರಕಟವಾಗುತ್ತಿದ್ದಂತೆ ಕೋರ್ಟ್‌ನಲ್ಲಿ ಕಣ್ಣೀರಿಟ್ಟ ಪ್ರಜ್ವಲ್ ರೇವಣ್ಣ

    ಅತ್ಯಾಚಾರ ಕೇಸಲ್ಲಿ ಅಪರಾಧಿ; ತೀರ್ಪು ಪ್ರಕಟವಾಗುತ್ತಿದ್ದಂತೆ ಕೋರ್ಟ್‌ನಲ್ಲಿ ಕಣ್ಣೀರಿಟ್ಟ ಪ್ರಜ್ವಲ್ ರೇವಣ್ಣ

    ಬೆಂಗಳೂರು: ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಕೋರ್ಟ್ ತೀರ್ಪು ನೀಡಿದ್ದು, ಕೋರ್ಟ್ನಲ್ಲೇ ಪ್ರಜ್ವಲ್ ರೇವಣ್ಣ (Prajwal Revanna) ಕಣ್ಣೀರಿಟ್ಟಿದ್ದಾರೆ.

    ಜನಪ್ರತಿನಿಧಿಗಳ ಕೋರ್ಟ್ ತೀರ್ಪು ಪ್ರಕಟಿಸಿದೆ. ಪ್ರಜ್ವಲ್ ರೇವಣ್ಣ ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ. ಶಿಕ್ಷೆ ಪ್ರಮಾಣವನ್ನು ನಾಳೆಗೆ ಪ್ರಕಟಿಸಲಿದೆ. ಇದನ್ನೂ ಓದಿ: ಕೆಲಸದಾಕೆಯ ಮೇಲೆ ರೇಪ್‌ – ಪ್ರಜ್ವಲ್‌ ರೇವಣ್ಣ ಅತ್ಯಾಚಾರಿ ಎಂದು ಕೋರ್ಟ್‌ ತೀರ್ಪು

    ಕೋರ್ಟ್ ತೀರ್ಪು ಪ್ರಕಟವಾಗುತ್ತಿದ್ದಂತೆ, ಪ್ರಜ್ವಲ್ ರೇವಣ್ಣ, ನ್ಯಾಯಾಧೀಶರ ಮುಂದೆ ಕಣ್ಣೀರು ಹಾಕಿದ್ದಾರೆ. ಬಳಿಕ ಕಣ್ಣೀರು ಒರೆಸಿಕೊಂಡು ಕೋರ್ಟ್ನಿಂದ ಹೊರಬಂದಿದ್ದಾರೆ.

    ಪ್ರಕರಣ ಏನು?
    ಶಾಸಕ ಹೆಚ್.ಡಿ.ರೇವಣ್ಣ ಮತ್ತು ಅವರ ಪುತ್ರ ಪ್ರಜ್ವಲ್ ರೇವಣ್ಣ 2019ರ ಜನವರಿ 1ರಿಂದ 2022ರ ಜ.1 ರ ಮಧ್ಯದ ಅವಧಿಯಲ್ಲಿ ಹಲವು ಬಾರಿ ನಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮತ್ತು ಆಕೆಯ ಮಗಳು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ವಿರುದ್ಧ ರೇಪ್ ಕೇಸ್ – ಇಂದೇ ತೀರ್ಪು

  • ಗುರುಪ್ರಸಾದ್‌ ನಿರ್ದೇಶನದ ಎದ್ದೇಳು ಮಂಜುನಾಥ 2 ಸಿನಿಮಾ ಬಿಡುಗಡೆಗೆ ತಡೆ

    ಗುರುಪ್ರಸಾದ್‌ ನಿರ್ದೇಶನದ ಎದ್ದೇಳು ಮಂಜುನಾಥ 2 ಸಿನಿಮಾ ಬಿಡುಗಡೆಗೆ ತಡೆ

    ಬೆಂಗಳೂರು: ನಿರ್ದೇಶಕ ಗುರುಪ್ರಸಾದ್ (Guruprasad) ನಟಿಸಿ ನಿರ್ದೇಶನ ಮಾಡಿರುವ ಎದ್ದೇಳು ಮಂಜುನಾಥ್ 2 (Eddelu Manjunatha 2) ಸಿನಿಮಾ ಬಿಡುಗಡೆಗೆ ಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್‌ ತಡೆಯಾಜ್ಞೆ (Stay) ನೀಡಿದೆ.

    ಮೈಸೂರು ರಮೇಶ್ ಮತ್ತು ರವಿ ದೀಕ್ಷಿತ್ ನಿರ್ಮಾಣ ಮಾಡಿದ ಸಿನಿಮಾ ನಾಳೆ(ಫೆ.21) ಬಿಡುಗಡೆಯಾಗಬೇಕಿತ್ತು. ಈ ಚಿತ್ರ ಬಿಡುಗಡೆಯಾಗದಂತೆ ಗುರುಪ್ರಸಾದ್‌ 2ನೇ ಪತ್ನಿ ಸುಮಿತ್ರಾ (Sumithra) ನ್ಯಾಯಾಲಯದಿಂದ ಸ್ಟೇ ತಂದಿದ್ದಾರೆ.

    ಸಿನಿಮಾದಲ್ಲಿ ಬಂದ ಲಾಭದಿಂದ ಶೇ.50 ರಷ್ಟು ಹಣವನ್ನು ಗುರುಪ್ರಸಾದ್ ಕುಟುಂಬಕ್ಕೆ ನೀಡುವುದಾಗಿ ಹೇಳಿದ್ದೆವು. ಆದರೆ ಬಿಡುಗಡೆಗೂ ಮುನ್ನ 4 ಲಕ್ಷ ರೂ.ಗೆ ಸುಮಿತ್ರಾ ಬೇಡಿಕೆ ಇಟ್ಟಿದ್ದಾರೆ. ಸುಮಿತ್ರಾಗೆ ಮುಂಗಡ ಹಣ ನೀಡದ್ದಕ್ಕೆ ತಡೆಯಾಜ್ಞೆ ತಂದಿದ್ದಾರೆ ಎಂದು ನಿರ್ಮಾಪಕ ರಮೇಶ್ ತಿಳಿಸಿದ್ದಾರೆ.

     

    ಈ ಬಗ್ಗೆ ಪಬ್ಲಿಕ್‌ ಟಿವಿಗೆ ಪ್ರತಿಕ್ರಿಯಿಸಿ ಸುಮಿತ್ರಾ, ಸಿನಿಮಾ ಪೂರ್ಣ ಮಾಡಬೇಕು ಎಂದು ಕಂಟೆಂಟ್ ತೆಗೆದುಕೊಂಡಿದ್ದಾರೆ. ನನ್ನ ಪತಿ ಮೃತದೇಹದ ಅಂತ್ಯಕ್ರಿಯೆಯೂ ಆಗಿರಲಿಲ್ಲ. ಆಗಲೇ ಕಂಟೆಂಟ್ ಕೊಡಿ ಎಂದು ಕೇಳಿದ್ದರು. ಸಿನಿಮಾ ಮುಗಿಸಲಿ ಎಂದು ನಾನು ಕೂಡ ಕಂಟೆಂಟ್ ನೀಡಿದೆ. ಗುರುಪ್ರಸಾದ್ ಬ್ಯಾನರ್‌ನಲ್ಲಿ ಸಿನಿಮಾ ಮಾಡುವುದಾಗಿ ನಿರ್ಮಾಪಕರು ಹೇಳಿದ್ದರು. ಆದರೆ ಈಗ ಎಲ್ಲವನ್ನೂ ತಮ್ಮ ಬ್ಯಾನರ್‌ನಲ್ಲೇ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಕೆ ಮಂಜು ಪುತ್ರ ನಟ, ಶ್ರೇಯಸ್ ಕಾರು ಅಪಘಾತ- ಅಪಾಯದಿಂದ ಪಾರು

    ಕಥೆ, ಚಿತ್ರಕಥೆ ಎಲ್ಲಾ ನನ್ನ ಪತಿಯದ್ದು. ಆದ್ರೆ ಸಿನಿಮಾ ಮುಗಿದ ಮೇಲೆ 51% ರಷ್ಟು ಲಾಭ ತೆಗೆದುಕೊಳ್ಳಿ ಎಂದು ಹೇಳಿದರು. ನನ್ನ ಮಗು ಭವಿಷ್ಯಕ್ಕೆ ನಾನೆಲ್ಲಿ ಹೋಗಲಿ?. ಸಿನಿಮಾ ಆಡಿಯೋ ರಿಲೀಸ್ ವೇಳೆಯೇ ನನಗೆ ಈ ವಿಚಾರ ಗೊತ್ತಾಗಿದೆ ಎಂದು ಹೇಳಿದರು.

     

  • `ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆ’ ಎಂದಿದ್ದ ಉದಯನಿಧಿ – ಇಂದು ಬೆಂಗ್ಳೂರು ಕೋರ್ಟ್‌ಮುಂದೆ ಹಾಜರ್‌ ಸಾಧ್ಯತೆ

    `ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆ’ ಎಂದಿದ್ದ ಉದಯನಿಧಿ – ಇಂದು ಬೆಂಗ್ಳೂರು ಕೋರ್ಟ್‌ಮುಂದೆ ಹಾಜರ್‌ ಸಾಧ್ಯತೆ

    ಬೆಂಗಳೂರು: ಸನಾತನ ಧರ್ಮ (Sanatan Dharma) ಡೆಂಗ್ಯೂ, ಮಲೇರಿಯಾ ಇದ್ದಂತೆ ಅಂತ ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ (Udhayanidhi Stalin) ಅವರಿಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ (Representatives Speical Court) ಮುಂದೆ ಹಾಜರಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

    ಸನಾತನ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ಹಿನ್ನೆಲೆಯಲ್ಲಿ 5 ತಿಂಗಳ ಹಿಂದೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್‌ ನೀಡಿತ್ತು. ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಕಳೆದ ಮಾರ್ಚ್ 4 ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ನೀಡಿತ್ತು. ಆದ್ರೆ ಕಾರಣಾಂತರದಿಂದ ಗೈರಾಗಿದ್ದ ಉದಯನಿಧಿ ಸ್ಟಾಲಿನ್‌ ಅವರಿಂದು ಬೆಳಗ್ಗೆ 10:30ರ ವೇಳೆಗೆ ಬೆಂಗಳೂರಿನ 42ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಎದುರು ಹಾಜರಾಗಲಿದ್ದಾರೆ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸನಾತನ ಧರ್ಮದ ಬಗ್ಗೆ ಮಾತನಾಡಿದ್ದಕ್ಕೆ ಚಿಕ್ಕ ಮಗುವನ್ನ ಬೇಟೆಯಾಡ್ತಿದ್ದಾರೆ; ಉದಯನಿಧಿ ಸ್ಟಾಲಿನ್‌ ಬೆಂಬಲಿಸಿದ ಕಮಲ್‌

    ಬೆಂಗಳೂರಿನ ಪರಮೇಶ್ ಎಂಬುವವರು ಉದಯನಿಧಿ ಹೇಳಿಕೆ ವಿರುದ್ಧ ಖಾಸಗಿ ದೂರು ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ್ದ 42ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರಾದ ಜೆ. ಪ್ರೀತ್ ಅವರಿದ್ದ ಪೀಠ 5 ತಿಂಗಳ ಹಿಂದೆ ಸಮನ್ಸ್‌ ಜಾರಿಗೊಳಿಸಿತ್ತು.

    ಏನಿದು ಪ್ರಕರಣ?
    2023ರ ಸೆಪ್ಟೆಂಬರ್‌ 3 ರಂದು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಸನಾತನನ ಧರ್ಮವು ಡೆಂಗ್ಯೂ, ಮಲೇರಿಯಾ ಇದ್ದಂತೆ. ಅದನ್ನು ನಿರ್ಮೂಲನೆ ಮಾಡಬೇಕೇ ಹೊರತು, ವಿರೋಧಿಸಬಾರದು ಎಂದು ಉದಯನಿಧಿ ಸ್ಟಾಲಿನ್‌ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ – ಉದಯನಿಧಿ ಸ್ಟಾಲಿನ್‌ಗೆ ಹೈಕೋರ್ಟ್‌ ರಿಲೀಫ್‌

    ಸನಾತನ ಧರ್ಮದ ನಿರ್ಮೂಲನೆ ಆಗಬೇಕು. ಅದು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ ಎಂದು ಕರೆ ನೀಡಿದ್ದರು. “ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ. ಅದನ್ನು ನಿರ್ಮೂಲನೆ ಮಾಡಬೇಕು. ನಾವು ಡೆಂಗ್ಯೂ, ಸೊಳ್ಳೆಗಳು, ಮಲೇರಿಯಾ ಅಥವಾ ಕೊರೊನಾ ವೈರಸ್ ಅನ್ನು ವಿರೋಧಿಸಲು ಸಾಧ್ಯವಿಲ್ಲ. ಇದನ್ನು ನಿರ್ಮೂಲನೆ ಮಾಡಬೇಕು. ಅದೇ ರೀತಿ ಸನಾತನವನ್ನು ನಿರ್ಮೂಲನೆ ಮಾಡಬೇಕು ಎಂದು ಕರೆ ಕೊಟ್ಟಿದ್ದರು. ಈ ಸಂಬಂಧ ದೇಶಾದ್ಯಂತ ಪ್ರತಿಪಕ್ಷ ನಾಯಕರಿಂದ ವಿರೋಧ ವ್ಯಕ್ತವಾಗಿತ್ತು. ಇದರ ಹೊರತಾಗಿಯೂ ಉದಯನಿಧಿ ಸ್ಟಾಲಿನ್‌ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.

  • ಬಿಜೆಪಿ ವಿರುದ್ಧ ಸುಳ್ಳು ಜಾಹೀರಾತು ಆರೋಪ ಕೇಸ್‌ – ರಾಹುಲ್ ಗಾಂಧಿಗೆ ಷರತ್ತುಬದ್ಧ ಜಾಮೀನು, ಡಿಕೆಸು ಪ್ರಾಪರ್ಟಿ ಶ್ಯೂರಿಟಿ

    ಬಿಜೆಪಿ ವಿರುದ್ಧ ಸುಳ್ಳು ಜಾಹೀರಾತು ಆರೋಪ ಕೇಸ್‌ – ರಾಹುಲ್ ಗಾಂಧಿಗೆ ಷರತ್ತುಬದ್ಧ ಜಾಮೀನು, ಡಿಕೆಸು ಪ್ರಾಪರ್ಟಿ ಶ್ಯೂರಿಟಿ

    ಬೆಂಗಳೂರು: ಬಿಜೆಪಿ ವಿರುದ್ಧ ಸುಳ್ಳು ಜಾಹೀರಾತು ಆರೋಪ ಪ್ರಕರಣದಲ್ಲಿ (40 Percent Commission Advertisement Case) ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿಗೆ (Rahul Gandi) ರಿಲೀಫ್ ಸಿಕ್ಕಿದೆ. ಖುದ್ದು ಹಾಜರಾಗಿದ್ದ ರಾಹುಲ್ ಗಾಂಧಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿ, ಜುಲೈ 30ಕ್ಕೆ ವಿಚಾರಣೆ ಮುಂದೂಡಿದೆ. ರಾಹುಲ್ ಜಾಮೀನಿಗೆ ಡಿಕೆಸು ಪ್ರಾಪರ್ಟಿ ಶ್ಯೂರಿಟಿ ನೀಡಿದ್ದಾರೆ.

    ಬಿಜೆಪಿ ವಿರುದ್ಧ 40% ಕಮಿಷನ್ ಆರೋಪ ಜಾಹೀರಾತು ಸೇರಿದಂತೆ ಸುಳ್ಳು ಜಾಹೀರಾತುಗಳನ್ನು ನೀಡಿದ ಆರೋಪ ಪ್ರಕರಣದಲ್ಲಿ ರಾಹುಲ್ ಗಾಂಧಿ ಖುದ್ದು ನ್ಯಾಯಾಲಯಕ್ಕೆ ಹಾಜರಾಗಿದ್ದರು. 42ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ (Special Court of Representatives) ಮುಂದೆ ಹಾಜರಾಗಿ ಕಟಕಟೆಯಲ್ಲಿ ನಿಂತಿದ್ದರು. ರಾಹುಲ್ ಅರ್ಜಿಯನ್ನ ಪುರಸ್ಕರಿಸಿದ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿತು. ಅಲ್ಲದೇ ಜುಲೈ 30ಕ್ಕೆ ವಿಚಾರಣೆ ಮುಂದೂಡಿದೆ. ಮಾಜಿ ಸಂಸದ ಡಿ.ಕೆ ಸುರೇಶ್‌ (DK Suresh),  ರಾಹುಲ್‌ ಗಾಂಧಿ ಅವರಿಗೆ 50 ಸಾವಿರ ರೂ. ಮೌಲ್ಯದ ಪ್ರಾಪರ್ಟಿ ಶ್ಯೂರಿಟಿ ನೀಡಿದ್ದು, ಜಾಮೀನು ಮಂಜೂರು ಮಾಡಲಾಗಿದೆ. ನ್ಯಾಯಾಲಯಕ್ಕೆ ರಾಹುಲ್ ಜೊತೆಗೆ ಡಿಕೆಶಿ, ಸಿದ್ದರಾಮಯ್ಯ ಜೊತೆಯಾಗಿ ಆಗಮಿಸಿ ಪ್ರಕ್ರಿಯೆ ಮುಗಿಸಿ ಜೊತೆಯಲ್ಲಿ ತೆರಳಿದ್ದು ವಿಶೇಷವಾಗಿತ್ತು.

    ಅಂದಹಾಗೆ ಬಿಜೆಪಿ ಪರಿಷತ್ ಸದಸ್ಯ ಕೇಶವ ಪ್ರಸಾದ್ ನೀಡಿದ್ದ ಖಾಸಗಿ ದೂರನ್ನ ಜನಪ್ರತಿನಿಧಿಗಳ ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಿತ್ತು. ಈ ಹಿನ್ನೆಲೆಯಲ್ಲಿ ಆರೋಪಗಳಿಗೆ ಸಮನ್ಸ್ ಜಾರಿಗೊಳಿಸಲಾಗಿತ್ತು. ಜೂ.1ರಂದು ವಿಚಾರಣೆ ನಡೆಸಿದ್ದ 42ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಆದ್ರೆ ಎರಡು ಬಾರಿ ವಿಚಾರಣೆಗೆ ವಿನಾಯಿತಿ ಪಡೆದು ಗೈರಾಗಿದ್ದ ರಾಹುಲ್ ಗಾಂಧಿಗೆ ಜೂನ್ 7 ರಂದು ಕಡ್ಡಾಯವಾಗಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕೆಂದು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್‌ಗೆ ಖುದ್ದು ಹಾಜರಾದ ರಾಹುಲ್ ಗಾಂಧಿ ಜಾಮೀನು ಪ್ರಕ್ರಿಯೆ‌ ಮುಗಿಸಿದ್ದಾರೆ.

    ರಾಹುಲ್ ಕೋರ್ಟ್ ಆಗಮಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆವರಣ, ಕೋರ್ಟ್ ಹಾಲ್ ನಲ್ಲಿ ಜನ ಕಿಕ್ಕಿರಿದಿದ್ದರು. ಅಲ್ಲದೆ ನ್ಯಾಯಾಲಯದ ಹೊರಗೆ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿ ರಾಹುಲ್ ಪರ ಘೋಷಣೆಗಳನ್ನ ಕೂಗಿದ್ರು. ಇನ್ನೊಂದೆಡೆ ರಾಹುಲ್ ಖುದ್ದು ಹಾಜರಾದ ಹಿನ್ನೆಲೆಯಲ್ಲಿ ಸಿವಿಲ್ ಕೋರ್ಟ್ ಸುತ್ತಮುತ್ತ ಹೆಚ್ಚಿನ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

    2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಮುನ್ನಾದಿನದಂದು ಕಾಂಗ್ರೆಸ್ ಪಕ್ಷದ ಜಾಹೀರಾತುಗಳು ಮತ್ತು ಪ್ರಚಾರದ ಘೋಷಣೆಗಳನ್ನು ವಿರೋಧಿಸಿ ಸಿದ್ದರಾಮಯ್ಯ, ಶಿವಕುಮಾರ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕ ಕೇಶವ ಪ್ರಸಾದ್ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

    ಬಿಜೆಪಿಯು ಸಾರ್ವಜನಿಕ ಕಾಮಗಾರಿಗಳ ನಿರ್ವಹಣೆಗಾಗಿ ಗುತ್ತಿಗೆದಾರರು ಮತ್ತು ಇತರರಿಂದ 40% ಕಮಿಷನ್ ಮಾಡುತ್ತಿದೆ ಎಂದು ಜಾಹೀರಾತುಗಳಲ್ಲಿ ಕಾಂಗ್ರೆಸ್ ಪಕ್ಷವು ಆರೋಪಿಸಿತ್ತು. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ತನ್ನ ಪಕ್ಷದ ಸದಸ್ಯರನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ನಾಯಕರು ಸುಳ್ಳು ಜಾಹೀರಾತನ್ನು ಪ್ರಕಟಿಸಿದೆ ಎಂದು ಬಿಜೆಪಿ ತನ್ನ ದೂರಿನಲ್ಲಿ ಆರೋಪಿಸಿತ್ತು.

  • ನನಗೆ ಕೊಟ್ಟಿರುವ ರೂಂ ಸರಿಯಿಲ್ಲ, ಕೆಟ್ಟ ವಾಸನೆ ಬರುತ್ತಿದೆ: ಜಡ್ಜ್‌ ಮುಂದೆ ಪ್ರಜ್ವಲ್‌ ಅಳಲು

    ನನಗೆ ಕೊಟ್ಟಿರುವ ರೂಂ ಸರಿಯಿಲ್ಲ, ಕೆಟ್ಟ ವಾಸನೆ ಬರುತ್ತಿದೆ: ಜಡ್ಜ್‌ ಮುಂದೆ ಪ್ರಜ್ವಲ್‌ ಅಳಲು

    ಬೆಂಗಳೂರು: ಲೈಂಗಿಕ ದೌಜರ್ನ್ಯ, ರೇಪ್‌ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಆರೋಪಿ ಪ್ರಜ್ವಲ್‌ ರೇವಣ್ಣ (Prajwal Revanna) ಅವರನ್ನು ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್‌ 6 ದಿನದ ಮಟ್ಟಿಗೆ ವಿಶೇಷ ತನಿಖಾ ತಂಡದ (SIT) ಕಸ್ಟಡಿಗೆ ನೀಡಿದೆ.

    ಸದ್ಯ ಪ್ರಜ್ವಲ್ ರೇವಣ್ಣರನ್ನು ಸಿಐಡಿ ಕಚೇರಿಯಲ್ಲಿ ಇರಿಸಿಕೊಂಡಿರುವ ಎಸ್‌ಐಟಿ, ವಿಚಾರಣೆ ಶುರು ಮಾಡಿದೆ. ಮುಂದೆ ನಡೆಯುವ ಬೆಳವಣಿಗೆಗಳು ಕುತೂಹಲ ಕೆರಳಿಸಿದೆ. ಈ ನಡುವೆ ಪ್ರಕರಣ ತನಿಖಾ ಹಂತದಲ್ಲಿದ್ದು, ಯಾವುದೇ ರೀತಿ ನಕಾರಾತ್ಮಕ ಪ್ರಚಾರ ಮಾಡ್ಬೇಡಿ ಎಂದು ಪ್ರಜ್ವಲ್ ಪರ ವಕೀಲರು ಮಾಧ್ಯಮದವರನ್ನು ಕೋರಿದರು.

     

    ವಿಚಾರಣೆ ಸಂದರ್ಭದಲ್ಲಿ ಜಡ್ಜ್‌ ಮುಂದೆ ಪ್ರಜ್ವಲ್ ನನಗೆ ಕೊಟ್ಟಿರುವ ರೂಂ ಸರಿಯಿಲ್ಲ. ಕೆಟ್ಟ ವಾಸನೆ ಬರುತ್ತಿದ್ದು ಉಸಿರಾಟಕ್ಕೆ ತೊಂದರೆ ಆಗುತ್ತಿದೆ. ಇಲ್ಲಿ ಇರುವುದಕ್ಕೆ ಆಗುತ್ತಿಲ್ಲ, ನನಗೆ ಹಿಂಸೆ ಆಗುತ್ತಿದೆ ಎಂದು ಹೇಳಿದರು.  ಇದನ್ನೂ ಓದಿ: ಪ್ರಧಾನಿ ಹುದ್ದೆಗೆ ನನ್ನ ಆಯ್ಕೆ ರಾಹುಲ್‌ ಗಾಂಧಿ – ಬೆಂಬಲಿಸಿದ ಮಲ್ಲಿಕಾರ್ಜುನ ಖರ್ಗೆ

    ಎಸ್‌ಐಟಿಯಿಂದ ನನಗೆ ಬೇರೆ ಟಾರ್ಚರ್ ಇಲ್ಲ, ಆದರೆ ದಿನ ಮೀಡಿಯಾ ಟ್ರಯಲ್ ನಡೆಯುತ್ತಿದೆ. ನನ್ನನ್ನ ಕ್ರಿಮಿನಲ್ ರೀತಿ ಬಿಂಬಿಸುತ್ತಿದ್ದಾರೆ. ಫಲಿತಾಂಶ ನೋಡಲು ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದರು.

  • ಭೂಕಬಳಿಕೆ ಆರೋಪ ಪ್ರಕರಣ – ಜೇಡ್ರಳ್ಳಿ ಕೃಷ್ಣಪ್ಪಗೆ ಜಾಮೀನು ಮಂಜೂರು!

    ಭೂಕಬಳಿಕೆ ಆರೋಪ ಪ್ರಕರಣ – ಜೇಡ್ರಳ್ಳಿ ಕೃಷ್ಣಪ್ಪಗೆ ಜಾಮೀನು ಮಂಜೂರು!

    ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಭೂಕಬಳಿಕೆ (Land Grab) ಮಾಡಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಮಾಜಿ ಡಾನ್ ಜೇಡ್ರಳ್ಳಿ ಕೃಷ್ಣಪ್ಪ (Jedralli Krishnappa) ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ.

    ಹೌದು. 16 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಸೇಲ್ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಮಾಜಿ ಡಾನ್ ಜೇಡ್ರಳ್ಳಿ ಕೃಷ್ಣಪ್ಪರನ್ನ ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದರು. ಹೆಚ್ಚಿನ ತನಿಖೆಗಾಗಿ 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಎಸಿಜಿಎಂ ಕೋರ್ಟ್‌ಗೆ ಪೊಲೀಸರು ಮನವಿ ಮಾಡಿದ್ದರು. ಇದನ್ನೂ ಓದಿ: UCC ಬಿಲ್‌ ಪಾಸ್‌ – ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಉತ್ತರಾಖಂಡ

    ಕೃಷ್ಣಪ್ಪ ಪರ ಹಿರಿಯ ವಕೀಲ ಶ್ಯಾಮ್‌ ಸುಂದರ್ ಹಾಜರಾಗಿ ಬ್ಯಾಡರಹಳ್ಳಿ ಪೊಲೀಸರ (Byadarahalli Police) ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು. ಸಿವಿಲ್ ಕೇಸ್‌ನಲ್ಲಿ ಪೊಲೀಸರಿಗೇನು ಕೆಲಸ? ನಮ್ಮ ಕಕ್ಷಿದಾರ ರಿಜಿಸ್ಟರ್ಡ್ ಸೇಲ್ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ. ನರಸಿಂಹಯ್ಯ ಹಾಗೂ ಆತನ ಹೆಣ್ಣು ಮಕ್ಕಳು ರಿಜಿಸ್ಟರ್ ಆಫೀಸ್‌ಗೆ ಬಂದು ಸಹಿ ಮಾಡಿದ್ದಾರೆ. ಜಮೀನು ತಮ್ಮದಲ್ಲ ಅಂದ್ರೆ ಯಾರಾದ್ರೂ ಬರೋದಕ್ಕೆ ಸಾಧ್ಯನಾ? ಎಫ್‌ಐಆರ್‌ನಲ್ಲಿರುವ ಸೆಕ್ಷನ್‌ಗಳನ್ನ ದುರುದ್ದೇಶಪೂರ್ವಕವಾಗಿ ಹಾಕಿದ್ದಾರೆ ಎಂದು ವಾದಿಸಿದರು. ಇದನ್ನೂ ಓದಿ: ಕರ್ನಾಟಕದ GSTಯ ಒಂದು ಪೈಸೆಯೂ ಬಾಕಿ ಉಳಿಸಿಕೊಂಡಿಲ್ಲ – ನಿರ್ಮಲಾ ಸೀತಾರಾಮನ್

    ಅಲ್ಲದೇ 7 ವರ್ಷಗಳ ಶಿಕ್ಷೆ ಒಳಗಿನ ಕೇಸ್‌ಗಳಲ್ಲಿ ಅರೆಸ್ಟ್ ಮಾಡಬಾರದು ಅಂತಿದೆ. ಆದರೂ ಅರೆಸ್ಟ್ ಮಾಡಿ, ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನಿಯಮಗಳನ್ನ ಗಾಳಿಗೆ ತೂರಿದ್ದಾರೆ. ಬಿಟ್ರೆ ಇವರು ಬ್ಯಾಡರಹಳ್ಳಿ ಸ್ಟೇಷನ್‌ ಅನ್ನೇ ರಿಜಿಸ್ಟರ್ ಆಫೀಸ್ ಮಾಡ್ಕೊತಾರೆ. ಯಾರದ್ದು ಅಸಲಿ ನಕಲಿ ಅಂತ ತೀರ್ಮಾನ ಮಾಡಬೇಕಿರೋದು ತಹಶೀಲ್ದಾರ್. ಸಿವಿಲ್ ವ್ಯಾಜ್ಯದಲ್ಲಿ ಒಬ್ಬ ವ್ಯಕ್ತಿಯ ಪರವಾಗಿ ಪೊಲೀಸರು ಸಹಾಯ ಮಾಡಿದ್ದಾರೆ. ಅರೆಸ್ಟ್ ಮಾಡಿದ ಅಧಿಕಾರಿ ವಿರುದ್ಧ ನಿಂದನೆ ಹಾಕುವಂತೆ ಮನವಿ ಮಾಡಿದರು.

    ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ ನ್ಯಾಯಾಧೀಶರು ಒಬ್ಬರ ಶ್ಯೂರಿಟಿ ಪಡೆದು ಜಾಮೀನು ಮಂಜೂರು ಮಾಡಿದ್ದಾರೆ. ಇದನ್ನೂ ಓದಿ: ಚೆನ್ನೈ ತಲುಪಿದ ಚಾಲಕ ರಹಿತ ಹಳದಿ ಮೆಟ್ರೋ- ಕಸ್ಟಮ್ಸ್ ಕ್ಲಿಯರೆನ್ಸ್ ಬಳಿಕ ಬೆಂಗಳೂರಿಗೆ ರವಾನೆ 

  • `ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆ’ ಎಂದಿದ್ದ ಉದಯನಿಧಿಗೆ ಬೆಂಗ್ಳೂರು ಕೋರ್ಟ್‌ನಿಂದ ಸಮನ್ಸ್

    `ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆ’ ಎಂದಿದ್ದ ಉದಯನಿಧಿಗೆ ಬೆಂಗ್ಳೂರು ಕೋರ್ಟ್‌ನಿಂದ ಸಮನ್ಸ್

    – ಖುದ್ದು ವಿಚಾರಣೆಗೆ ಹಾಜರಾಗಲು ಸೂಚನೆ

    ಬೆಂಗಳೂರು: ಸನಾತನ ಧರ್ಮ (Sanatan Dharma) ಡೆಂಗ್ಯೂ, ಮಲೇರಿಯಾ ಇದ್ದಂತೆ ಅಂತ ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ಗೆ ಬೆಂಗಳೂರು ಕೋರ್ಟ್ (Bengaluru Court) ಸಮನ್ಸ್ ನೀಡಿದೆ.

    ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ಗೆ (Udhayanidhi Stalin) ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್‌ ನೀಡಿದ್ದು, ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಮಾರ್ಚ್ 4 ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ನೀಡಲಾಗಿದೆ. ಇದನ್ನೂ ಓದಿ: ಸನಾತನ ಧರ್ಮವನ್ನು ಕೊನೆವರೆಗೂ ವಿರೋಧಿಸುತ್ತೇನೆ: ಉದಯನಿಧಿ ಸ್ಟಾಲಿನ್‌

    ಬೆಂಗಳೂರಿನ ಪರಮೇಶ್ ಎಂಬುವವರು ಉದಯನಿಧಿ ಹೇಳಿಕೆ ವಿರುದ್ಧ ಖಾಸಗಿ ದೂರು ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ 42ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರಾದ ಜೆ. ಪ್ರೀತ್ ಅವರಿದ್ದ ಪೀಠ ಸಮನ್ಸ್‌ ಜಾರಿಗೊಳಿಸಿದೆ. ಇದನ್ನೂ ಓದಿ: ಸನಾತನ ಧರ್ಮದ ಬಗ್ಗೆ ಮಾತನಾಡಿದ್ದಕ್ಕೆ ಚಿಕ್ಕ ಮಗುವನ್ನ ಬೇಟೆಯಾಡ್ತಿದ್ದಾರೆ; ಉದಯನಿಧಿ ಸ್ಟಾಲಿನ್‌ ಬೆಂಬಲಿಸಿದ ಕಮಲ್‌

    ಏನಿದು ಪ್ರಕರಣ?
    2023ರ ಸೆಪ್ಟೆಂಬರ್‌ 3 ರಂದು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಸನಾತನನ ಧರ್ಮವು ಡೆಂಗ್ಯೂ, ಮಲೇರಿಯಾ ಇದ್ದಂತೆ. ಅದನ್ನು ನಿರ್ಮೂಲನೆ ಮಾಡಬೇಕೇ ಹೊರತು, ವಿರೋಧಿಸಬಾರದು ಎಂದು ಉದಯನಿಧಿ ಸ್ಟಾಲಿನ್‌ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಬಿಜೆಪಿ 400ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲಲಿದೆ- ಖರ್ಗೆ ಹೇಳಿಕೆಗೆ ಜೋರಾಗಿ ನಕ್ಕ ಪ್ರಧಾನಿ

    ಸನಾತನ ಧರ್ಮದ ನಿರ್ಮೂಲನೆ ಆಗಬೇಕು. ಅದು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ ಎಂದು ಕರೆ ನೀಡಿದ್ದರು. “ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ. ಅದನ್ನು ನಿರ್ಮೂಲನೆ ಮಾಡಬೇಕು. ನಾವು ಡೆಂಗ್ಯೂ, ಸೊಳ್ಳೆಗಳು, ಮಲೇರಿಯಾ ಅಥವಾ ಕೊರೊನಾ ವೈರಸ್ ಅನ್ನು ವಿರೋಧಿಸಲು ಸಾಧ್ಯವಿಲ್ಲ. ಇದನ್ನು ನಿರ್ಮೂಲನೆ ಮಾಡಬೇಕು. ಅದೇ ರೀತಿ ಸನಾತನವನ್ನು ನಿರ್ಮೂಲನೆ ಮಾಡಬೇಕು ಎಂದು ಕರೆ ಕೊಟ್ಟಿದ್ದರು. ಈ ಸಂಬಂಧ ದೇಶಾದ್ಯಂತ ಪ್ರತಿಪಕ್ಷ ನಾಯಕರಿಂದ ವಿರೋಧ ವ್ಯಕ್ತವಾಗಿತ್ತು.

  • ಕೆಜಿಎಫ್‌ ಮ್ಯೂಸಿಕ್‌ ಬಳಕೆ – ಕಾಂಗ್ರೆಸ್‌ ಟ್ವಿಟ್ಟರ್‌ ಖಾತೆ ಬ್ಲಾಕ್‌ ಮಾಡುವಂತೆ ಕೋರ್ಟ್‌ ಆದೇಶ

    ಕೆಜಿಎಫ್‌ ಮ್ಯೂಸಿಕ್‌ ಬಳಕೆ – ಕಾಂಗ್ರೆಸ್‌ ಟ್ವಿಟ್ಟರ್‌ ಖಾತೆ ಬ್ಲಾಕ್‌ ಮಾಡುವಂತೆ ಕೋರ್ಟ್‌ ಆದೇಶ

    ಬೆಂಗಳೂರು: ಕಾಪಿರೈಟ್‌ ಉಲ್ಲಂಘನೆ Copyright Infringement) ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್‌(Congress) ಪಕ್ಷದ ಟ್ವಿಟ್ಟರ್‌ ಖಾತೆಯನ್ನು ತಾತ್ಕಾಲಿಕವಾಗಿ ಬ್ಲಾಕ್‌ ಮಾಡುವಂತೆ ಬೆಂಗಳೂರಿನ ಸಿಟಿ ಸಿವಿಲ್‌  ಕೋರ್ಟ್‌ ಟ್ವಿಟ್ಟರ್‌(Twitter) ಕಂಪನಿಗೆ ಆದೇಶ ನೀಡಿದೆ.

    ಭಾರತ್‌ ಜೋಡೋ(Bharat Jodo Yatra) ಯಾತ್ರೆಯ ಪ್ರಚಾರದಲ್ಲಿ ಕೆಜಿಎಫ್‌ ಚಾಪ್ಟರ್‌-2 (KGF Chapter 2) ಸಿನಿಮಾದ ಆಡಿಯೋವನ್ನು ಬಳಸಲಾಗಿದೆ ಎಂದು ಆರೋಪಿಸಿ ಎಂಆರ್‌ಟಿ ಸ್ಟುಡಿಯೋ(MRT Studios) ಕೋರ್ಟ್‌ ಮೊರೆ ಹೋಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್‌ ಕಾಂಗ್ರೆಸ್‌ ಮತ್ತು ಭಾರತ್‌ ಜೋಡೋ ಯಾತ್ರೆಯ ಟ್ವಿಟ್ಟರ್‌ ಖಾತೆಯನ್ನು ತಾತ್ಕಾಲಿಕವಾಗಿ ಬ್ಲಾಕ್‌ ಮಾಡುವಂತೆ ಆದೇಶಿಸಿದೆ.

    https://twitter.com/INCIndia/status/1579838167217188865?ref_src=twsrc%5Etfw%7Ctwcamp%5Etweetembed%7Ctwterm%5E1579838167217188865%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Flaw%2Fstory%2Fcongress-twitter-handle-kgf-copyright-violation-bharat-jodo-yatra-rahul-gandhi-2294447-2022-11-07

    ಮೂಲಹಾಡನ್ನು ಸಿಂಕ್ರೊನೈಸ್ ಮಾಡಿದ ಆವೃತ್ತಿಯೊಂದಿಗೆ ಸೇರಿಸಲಾಗಿದೆ. ಈ ಕೃತ್ಯಕ್ಕೆ ಪ್ರೋತ್ಸಾಹ ನೀಡಿದರೆ ಛಾಯಾಗ್ರಹಣ ಚಲನಚಿತ್ರಗಳು, ಹಾಡುಗಳು, ಸಂಗೀತ ಆಲ್ಬಮ್‌ಗಳನ್ನು ಸ್ವಾಧೀನಪಡಿಸಿಕೊಳ್ಳುವ ವ್ಯವಹಾರದಲ್ಲಿ ತೊಡಗಿರುವ ಉದ್ಯಮಗಳಿಗೆ ಸಮಸ್ಯೆಯಾಗಬಹುದು. ಅಲ್ಲದೇ ಇದು ಪೈರಸಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ವೀರ್ ದಾಸ್ ಕಾರ್ಯಕ್ರಮಕ್ಕೆ ಅನುಮತಿ ಕೊಡಬೇಡಿ – ಹಿಂದೂ ಸಂಘಟನೆಗಳಿಂದ ದೂರು

    ಎಂಆರ್‌ಟಿ ಪರ ವಕೀಲರು, ನಮ್ಮ ಸಂಗೀತವನ್ನು ಕಾನೂನುಬಾಹಿರವಾಗಿ ಬಳಸಿ ನಮ್ಮ ಹಕ್ಕುಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಭಾರತ್‌ ಜೋಡೋ ಯಾತ್ರೆಯ ಟ್ವಿಟ್ಟರ್‌, ಫೇಸ್‌ಬುಕ್‌, ಯೂಟ್ಯೂಬ್‌, ಇನ್‌ಸ್ಟಾಗ್ರಾಮ್‌ ಖಾತೆಯ ಎಲೆಕ್ಟ್ರಾನಿಕ್ ಆಡಿಟ್ ಅನ್ನು ಪರಿಶೀಲಿಸಲು ಆಯುಕ್ತರನ್ನು ನೇಮಿಸುವುದು ಅಗತ್ಯ ಎಂದು ವಾದಿಸಿದರು.

    ಈ ವಾದಕ್ಕೆ ಒಪ್ಪಿಗೆ ಸೂಚಿಸಿದ ನ್ಯಾಯಾಲಯ, ಆಯುಕ್ತರನ್ನು ನೇಮಿಸದಿದ್ದರೆ ತಡೆಯಾಜ್ಞೆ ನೀಡುವ ಉದ್ದೇಶ ಸೋಲುತ್ತದೆ ಎಂದು ಅಭಿಪ್ರಾಯಪಟ್ಟಿತು.  ಕೋರ್ಟ್‌ ಮುಂದಿನ ವಿಚಾರಣೆಯನ್ನು ನ.21ಕ್ಕೆ ಮುಂದೂಡಿತು.

    ಏನಿದು ಪ್ರಕರಣ?
    ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು, ಸಂಸ್ಥೆಯ ಅನುಮತಿ ಇಲ್ಲದೇ ಹಾಡುಗಳನ್ನು ಯಾತ್ರೆಯಲ್ಲಿ ಬಳಸಿದ್ದಾರೆ. ಕೆಜಿಎಫ್ ಸಿನಿಮಾದ ‘ಸುಲ್ತಾನಾ..’ ಹಾಡನ್ನು ಯಾತ್ರೆಯಲ್ಲಿ ಬಳಸಿದ್ದಕ್ಕಾಗಿ ಕೆಜಿಎಫ್ ಚಿತ್ರದ ಹಾಡುಗಳ ಪ್ರಸಾರ ಹಕ್ಕು ಹೊಂದಿರುವ MRT ಸಂಸ್ಥೆಯು ರಾಹುಲ್ ಗಾಂಧಿ (Rahul Gandhi) , ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಸುಪ್ರಿಯಾ (Supriya) ಹಾಗೂ ಭಾರತ್ ಜೋಡೋ ಯಾತ್ರೆಯ ಉಸ್ತುವಾರಿ ವಹಿಸಿಕೊಂಡಿರುವ ಜೈರಾಂ ರಮೇಶ್ (Jairam Ramesh) ವಿರುದ್ಧ ದೂರು ದಾಖಲಿಸಿತ್ತು. ನ್ಯಾಯಾಲಯದ ನಿರ್ದೇಶನದ ಮೇರೆಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ (FIR) ದಾಖಲಾಗಿತ್ತು.

    ಕೆಜಿಎಫ್‌ ಹಾಡನ್ನು ಕಾಗ್ರೆಸ್ ಪಕ್ಷದ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಾದ ಟ್ಟಿಟ್ಟರ್‌, ಯೂಟ್ಯೂಬ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಬಳಸಲಾಗಿದೆ. ನಮ್ಮ ಸಂಸ್ಥೆಯ ಅನುಮತಿ ಪಡೆಯದೇ ಕಾಪಿರೈಟ್‌ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ಎಂಆರ್‌ಟಿ ಸಂಸ್ಥೆ ಕೋರ್ಟ್‌ ಮೊರೆ ಹೋಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಪುಲ್ವಾಮಾ ದಾಳಿಯನ್ನು ಸಂಭ್ರಮಿಸಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿಗೆ 5 ವರ್ಷ ಜೈಲು

    ಪುಲ್ವಾಮಾ ದಾಳಿಯನ್ನು ಸಂಭ್ರಮಿಸಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿಗೆ 5 ವರ್ಷ ಜೈಲು

    ಬೆಂಗಳೂರು: ಪುಲ್ವಾಮಾ ದಾಳಿಯನ್ನು(Pulwama Attack) ಸಂಭ್ರಮಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದ ಬೆಂಗಳೂರಿನ(Bengaluru) ಎಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬನಿಗೆ ವಿಶೇಷ ಕೋರ್ಟ್‌(A Special Court ) 10 ಸಾವಿರ ರೂ. ದಂಡ ಮತ್ತು 5 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

    ಕಚರಕನಹಳ್ಳಿ ನಿವಾಸಿ, ಮೂರನೇ ವರ್ಷದ ಎಂಜಿನಿಯರಿಂಗ್‌ ವಿದ್ಯಾರ್ಥಿ ಫೈಜ್‌ ರಶೀದ್‌ ಶಿಕ್ಷೆಗೆ ಒಳಗಾದ ಅಪರಾಧಿ. 2019ರ ಫೆಬ್ರವರಿ 14 ರಂದು ಪುಲ್ವಾಮದಲ್ಲಿ ಉಗ್ರನ ಆತ್ಮಹುತಿ ದಾಳಿಗೆ 40 ಮಂದಿ ಸಿಆರ್‌ಪಿಎಫ್‌ ಯೋಧರು ಹುತಾತ್ಮರಾಗಿದ್ದರು. ಈ ದಾಳಿ ಬಳಿಕ ಸಾಮಾಜಿಕ ಜಾಲತಾಣದಲ್ಲಿ ರಶೀದ್‌ ಪೋಸ್ಟ್‌ ಮಾಡಿ ಸಂಭ್ರಮಿಸಿದ್ದ. ಇದನ್ನೂ ಓದಿ: ರಾಜ್ಯೋತ್ಸವ ದಿನವೇ ಕೋಪ: ಬಿಗ್ ಬಾಸ್ ಮನೆಯಿಂದ ಹೊರಟ ರೂಪೇಶ್ ರಾಜಣ್ಣ

    ಪೋಸ್ಟ್‌ ಪ್ರಕಟಗೊಂಡ ಬಳಿಕ ಸಿಸಿಬಿ ಪೊಲೀಸರು ಆತನನ್ನು 2019ರಲ್ಲಿ ಬಂಧಿಸಿದ್ದರು. ಆತನ ಜಾಮೀನು ಅರ್ಜಿ ವಜಾಗೊಂಡಿದ್ದು, ಈಗಲೂ ಜೈಲಿನಲ್ಲೇ ಕಾಲ ಕಳೆಯುತ್ತಿದ್ದಾನೆ.

    ಪೊಲೀಸರು ಆತನ ಮೊಬೈಲ್ ಫೋನ್‌ ವಶಪಡಿಸಿಕೊಂಡು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಐಪಿಸಿ ಸೆಕ್ಷನ್ 153 ಎ (ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 124 ಎ (ದೇಶದ್ರೋಹ) ಮತ್ತು 201 (ಅಪರಾಧದ ಸಾಕ್ಷ್ಯವನ್ನು ಕಣ್ಮರೆಯಾಗುವಂತೆ ಮಾಡುವುದು) ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯ ಸೆಕ್ಷನ್ 13 ರ ಅಡಿಯಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಿದ್ದರು.

    ಅಂದು ಏನಾಗಿತ್ತು?
    2019ರ ಫೆ. 14 ರಂದು ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರಿದ್ದ ಬಸ್ಸಿಗೆ ಜೈಷ್ ಉಗ್ರ ಅದಿಲ್ ಅಹ್ಮದ್ ದಾರ್ ಇಕೋ ಕಾರನ್ನು ಗುದ್ದಿಸಿದ್ದ. ಪರಿಣಾಮ 40 ಮಂದಿ ಸೈನಿಕರು ಹುತಾತ್ಮರಾಗಿದ್ದರು. ಸ್ಫೋಟದ ತೀವ್ರತೆಗೆ ಯೋಧರ ದೇಹದ ಭಾಗಗಳು ಛಿದ್ರ ಛಿದ್ರವಾಗಿ ದೂರದವರೆಗೆ ಚಿಮ್ಮಿತ್ತು. ಈ ದಾಳಿಗೆ ಪ್ರತೀಕಾರವಾಗಿ ಭಾರತದ ವಾಯುಸೇನೆ ಮೊದಲ ಬಾರಿಗೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರ ಶಿಬಿರಗಳ ಮೇಲೆ ಬಾಂಬ್ ದಾಳಿ ನಡೆಸಿತ್ತು.

    Live Tv
    [brid partner=56869869 player=32851 video=960834 autoplay=true]