Tag: Bengaluru Cops

  • ಬೀದಿ ಕಾಮಣ್ಣ ಎಸ್ಕೇಪ್‌ ಆಗಿದ್ದರ ಹಿಂದಿದೆ ಲವ್‌ ಕಹಾನಿ – ಆರೋಪಿಗೆ ಹೋಮ್‌ ಗಾರ್ಡ್ ಪ್ರೇಯಸಿ ಸಾಥ್

    ಬೀದಿ ಕಾಮಣ್ಣ ಎಸ್ಕೇಪ್‌ ಆಗಿದ್ದರ ಹಿಂದಿದೆ ಲವ್‌ ಕಹಾನಿ – ಆರೋಪಿಗೆ ಹೋಮ್‌ ಗಾರ್ಡ್ ಪ್ರೇಯಸಿ ಸಾಥ್

    ಬೆಂಗಳೂರು: ಯುವತಿಯನ್ನ ತಬ್ಬಿಕೊಂಡು ಅಸಭ್ಯ ವರ್ತನೆ ತೋರಿ ಎಸ್ಕೇಪ್‌ ಆಗಿದ್ದ ಆರೋಪಿಯನ್ನು 10 ದಿನಗಳ ನಂತರ ಸುದ್ದಗುಂಟೆಪಾಳ್ಯ ಪೊಲೀಸರು (Suddagunte Palya Police) ಕೇರಳದಲ್ಲಿ ಬಂಧಿಸಿದ್ದಾರೆ. ಆದ್ರೆ ಕೃತ್ಯ ಎಸಗಿದ ಬಳಿಕ ಆರೋಪಿ ಕೇರಳಕ್ಕೆ (Kerala) ಹೋಗೋದಕ್ಕೆ ಆತನ ಪ್ರೇಯಸಿ ಹೋಮ್‌ ಗಾರ್ಡ್‌ ಸಾಥ್‌ ನೀಡಿದ್ದಾಳೆ ಎಂದು ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ.

    ಹೌದು. ಭಾನುವಾರ (ಏ.13) ಕೇರಳದ ಹಳ್ಳಿಯೊಂದರಲ್ಲಿ ಆರೋಪಿ ಸಂತೋಷ್ ಡೇನಿಯಲ್‌ನನ್ನು ಬಂಧಿಸಿದ್ದ ಪೊಲೀಸರು ಬೆಳಗ್ಗೆ ಬೆಂಗಳೂರಿಗೆ ಕರೆತಂದಿದ್ದರು. ಕೋರ್ಟ್‌ಗೆ ಹಾಜರುಪಡಿಸುವುದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ ಆರೋಪಿ ಕೃತ್ಯ ಎಸಗಿದ್ದು ತಾನೇ ಎಂಬುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಡುವೆ ಆರೋಪಿ ಸಂತೋಷ್ ಮೇಲೆ ಜಯನಗರ ಪೊಲೀಸ್ ಠಾಣೆಯಲ್ಲಿ (Jayanagara Police Station) ಈ ಹಿಂದೆ ದಾಖಲಾಗಿದ್ದ ಕಳ್ಳತನ ಕೇಸ್ ಪತ್ತೆ ಮಾಡಿ ಫೋನ್ ನಂಬರ್ ಟ್ರ್ಯಾಕ್ ಮಾಡೋಕೆ ಶುರುಮಾಡಿದ್ದಾರೆ. ದನ್ನೂ ಓದಿ: ಯುವತಿಯನ್ನ ತಬ್ಬಿಕೊಂಡು ಅಸಭ್ಯ ವರ್ತನೆ ಪ್ರಕರಣ – 10 ದಿನಗಳ ಬಳಿಕ ಬೀದಿ ಕಾಮಣ್ಣ ಅರೆಸ್ಟ್‌

    ಕೃತ್ಯ ಎಸಗಿದ ಬಳಿಕ ಆರೋಪಿ ಕೇರಳದಲ್ಲಿರುವ ತನ್ನ ಸ್ನೇಹಿತನ ಮನೆಗೆ ಹೋಗಿದ್ದನಂತೆ. ಬೆಂಗಳೂರಲ್ಲಿ ಡ್ರೈವಿಂಗ್ ಕೆಲಸ (Driving Work) ಮಾಡುತ್ತಿದ್ದಾಗ ಪರಿಚಯವಾಗಿದ್ದ ಸ್ನೇಹಿತ‌‌ ಮನೆಗೆ ಹೋಗಿ ಆಶ್ರಯ ಪಡೆದುಕೊಂಡಿದ್ದನಂತೆ. ಅಲ್ಲದೇ ಆರೋಪಿ ಎಸ್ಕೇಪ್ ಆಗಿದ್ದರ ಹಿಂದೆ ಲವ್ ಸ್ಟೋರಿಯ ಮಾತುಗಳು ಕೇಳಿಬರ್ತಿವೆ. ಪ್ರಕರಣ ದಾಖಲಿಸಿದಾಗಿನಿಂದ ಪೊಲೀಸರ ಹುಡುಕಾಟದ ಇಂಚಿಚೂ ಮಾಹಿತಿಯನ್ನ ಸಂತೋಷ್‌ನ ಹೋಮ್‌ ಗಾರ್ಡ್ ಪ್ರೇಯಸಿ ನೀಡಿದ್ದಾಳೆ. ಟಿವಿ ನೋಡಿಕೊಂಡು ಆರೋಪಿ‌ ತಪ್ಪಿಸಿಕೊಳ್ಳಲು ಹೋಮ್‌ ಗಾರ್ಡ್ ಪ್ರೇಯಸಿ ಸಹಾಯ ಮಾಡಿದ್ದಾಳೆ. ಪೊಲೀಸರು ನಿನ್ನನ್ನ ಹುಡುಕುತ್ತಿದ್ದಾರೆ ಹುಷಾರು ಅಂತ ಅಲರ್ಟ್‌ ಮಾಡಿದ್ದಾಳೆ. 2 ದಿನದ ಬಳಿಕ ಹೊಸ ಸಿಮ್ ಖರೀದಿ ಮಾಡಿ ಪ್ರಿಯಕರ ಸಂತೋಷನಿಗೆ ಪ್ರೇಯಸಿ ನೀಡಿದ್ದಾಳೆ. ಸಂತೋಷ್ ಜೊತೆಯೇ ಬಸ್ ಹಿಡಿದು ಕೇರಳಕ್ಕೆ ಕೂಡ ಹೋಗಿದ್ದಾಳೆ. ಹೊಸ ಸಿಮ್‌ನಲ್ಲಿ ತಾಯಿಗೆ ಕರೆ ಮಾಡಿ ಕೇರಳದಲ್ಲಿರೋದಾಗಿ ಸಂತೋಷ್ ತಿಳಿಸಿದ್ದಾನೆ‌. ದನ್ನೂ ಓದಿ: ಶಿವಮೊಗ್ಗದ ಲಾಡ್ಜ್‌ನಲ್ಲಿ ಹುಬ್ಬಳ್ಳಿ ಮೂಲದ ಉದ್ಯಮಿ ಅನುಮಾನಾಸ್ಪದ ಸಾವು

    ಮಾಹಿತಿ ಆಧರಿಸಿ ಆರೋಪಿ ಮೊಬೈಲ್ ನಂಬರ್ ಟ್ರೇಸ್ ಮಾಡಿ ಲೊಕೆಷನ್‌ ಪಡೆದಿಕೊಂಡ ಪೊಲೀಸರು ಕೇರಳದ ಕೋಝಿಕೋಡ್‌ನ ಲಾಡ್ಜ್‌ನಲ್ಲಿದ್ದಾಗ ಇಬ್ಬರನ್ನೂ ಬಂಧಿಸಿದ್ದಾರೆ. ದನ್ನೂ ಓದಿ:  ಗುಜರಾತ್‌ ಕರಾವಳಿಯಲ್ಲಿ ಭರ್ಜರಿ ಬೇಟೆ – 1,800 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ

  • ಯುವತಿಯನ್ನ ತಬ್ಬಿಕೊಂಡು ಅಸಭ್ಯ ವರ್ತನೆ ಪ್ರಕರಣ – 10 ದಿನಗಳ ಬಳಿಕ ಬೀದಿ ಕಾಮಣ್ಣ ಅರೆಸ್ಟ್‌

    ಯುವತಿಯನ್ನ ತಬ್ಬಿಕೊಂಡು ಅಸಭ್ಯ ವರ್ತನೆ ಪ್ರಕರಣ – 10 ದಿನಗಳ ಬಳಿಕ ಬೀದಿ ಕಾಮಣ್ಣ ಅರೆಸ್ಟ್‌

    – ಮೂರು ರಾಜ್ಯ, 700 ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ

    ಬೆಂಗಳೂರು: ಯುವತಿಯೊಂದಿಗೆ ಅಸಭ್ಯ ವರ್ತನೆ ತೋರಿ ಎಸ್ಕೇಪ್‌ ಆಗಿದ್ದ ಕಾಮುಕ ಆರೋಪಿಯನ್ನು 10 ದಿನಗಳ ನಂತರ ಸುದ್ದಗುಂಟೆಪಾಳ್ಯ ಪೊಲೀಸರು (Suddagunte Palya) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬಂಧಿತ ಆರೋಪಿಯನ್ನು ಸಂತೋಷ್ ಡೇನಿಯಲ್ ಎಂದು ಗುರುತಿಸಲಾಗಿದೆ, ಈತ ಬೆಂಗಳೂರಿನ ಶೋರೂಮ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಕಳೆದ ಏಪ್ರಿಲ್‌ 3ರ ಮಧ್ಯರಾತ್ರಿ ಬೆಂಗಳೂರಿನ ಬಿಟಿಎಂ ಲೇಔಟ್‌ನ (BTM Layout) ಓಣಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಹಿಂದಿನಿಂದ ತಬ್ಬಿಕೊಂಡು ಯುವಕ ಅಸಭ್ಯವಾಗಿ ವರ್ತಿಸಿ ಪರಾರಿಯಾಗಿದ್ದ. ಈತನಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಇದನ್ನೂ ಓದಿ: ಮಧ್ಯರಾತ್ರಿ ಎದೆ ಮುಟ್ಟಿ ಯುವಕನ ಅಸಭ್ಯ ವರ್ತನೆ ಕೇಸ್‌ – ಯುವತಿಯನ್ನು ಪತ್ತೆ ಹಚ್ಚೋದೆ ದೊಡ್ಡ ಸವಾಲು

    Man molests woman on isolated Bengaluru street a big challenge to find the young woman

    3 ರಾಜ್ಯ, 700 ಸಿಸಿಟಿವಿ ಪರಿಶೀಲನೆ:
    ಘಟನೆ ಸಂಬಂಧ ಪ್ರಕರಣದ ದಾಖಲಿಸಿಕೊಂಡಿದ್ದ ಪೊಲೀಸರು ಬೀದಿ ಕಾಮಣ್ಣನಿಗಾಗಿ ತೀವ್ರ ಹುಡುಕಾಟ ನಡೆಸಿದ್ದರು. 4 ವಿಶೇಷ ತಂಡಗಳನ್ನು ರಚಿಸಿ ಆರೋಪಿ ಮತ್ತು ಸಂತ್ರಸ್ತ ಯುವತಿಯ ಪತ್ತೆಗೆ ಇಳಿದಿದ್ದರು. ತನಿಖೆ ವೇಳೆ ಸುಮಾರು 700 ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಕೊನೆಗೆ ಕೇರಳದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೃತ್ಯ ಎಸಗಿದ ಬಳಿಕ ಆರೋಪಿ ತಮಿಳುನಾಡಿನ ಹೊಸೂರಿಗೆ ಪರಾರಿಯಾಗಿದ್ದ, ನಂತರ ಸೇಲಂ, ಬಳಿಕ ಕೇರಳದ ಕೋಝಿಕೋಡ್‌ಗೆ ಪರಾರಿಯಾಗಿದ್ದ. ಕೊನೆಗೆ ಕೇರಳದ ಹಳ್ಳಿಯೊಂದರಲ್ಲಿ ಭಾನುವಾರ (ಏ.13) ಸಿಕ್ಕಿಬಿದ್ದಿದ್ದಾನೆ.

    ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಕೋರಮಂಗಲ ನ್ಯಾಯಾಧೀಶರ ನಿವಾಸಕ್ಕೆ ಹಾಜರು ಪಡಿಸಿ ಕಸ್ಟಡಿಗೆ ಪಡೆದುಕೊಳ್ಳಲು ಸಿದ್ಧತೆ ನಡೆಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಕೊಲೆ ಪ್ರಕರಣ – ಮೃತ ಬಾಲಕಿ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 10 ಲಕ್ಷ ಪರಿಹಾರ

    ಏನಿದು ಪ್ರಕರಣ?
    ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಹಿಂಬಾಲಿಸಿ ಬಂದ ಯುವಕನೊಬ್ಬ ಬಲವಂತವಾಗಿ ತಬ್ಬಿಕೊಳ್ಳಲು ಯತ್ನಿಸಿ ಎದೆಯ ಭಾಗವನ್ನು ಮುಟ್ಟಿ ಪರಾರಿಯಾಗಿದ್ದ. ಸುದ್ದಗುಂಟೆಪಾಳ್ಯದ ಭಾರತಿ ಲೇಔಟ್‌ನ 1ನೇ ಕ್ರಾಸ್‌ನಲ್ಲಿ ಏಪ್ರಿಲ್ 3ರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಈ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಘಟನೆ ಸಂಬಂಧ ಸ್ಥಳೀಯ ನಿವಾಸಿಯೊಬ್ಬರ ದೂರು ಆಧರಿಸಿ, ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಘಟನೆ ಸಂಬಂಧ ಸಂತ್ರಸ್ತ ಯುವತಿಯರು ದೂರು ನೀಡಿಲ್ಲ. ಆದರೆ ಸ್ಥಳೀಯ ನಿವಾಸಿಯೊಬ್ಬರು ಸಿಸಿಟಿವಿ ಕ್ಯಾಮೆರಾ ದೃಶ್ಯದೊಂದಿಗೆ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಸುಳ್ಳು ಕೇಸ್‌ ಹಾಕಿ ಪತ್ನಿಯಿಂದ ಕಿರುಕುಳ ಆರೋಪ – ರಾಜಭವನದ ಮುಂಭಾಗ ಟೆಕ್ಕಿ ಆತ್ಮಹತ್ಯೆಗೆ ಯತ್ನ