Tag: Bengaluru city police

  • ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್‌ – ಬಂಧಿತರಲ್ಲಿ ಓರ್ವ ʻಡಿ ಬಾಸ್‌ʼ ಅಭಿಮಾನಿ

    ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್‌ – ಬಂಧಿತರಲ್ಲಿ ಓರ್ವ ʻಡಿ ಬಾಸ್‌ʼ ಅಭಿಮಾನಿ

    ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರಮ್ಯಾ (Actress Ramya) ಪೋಸ್ಟ್‌ಗೆ ಅಶ್ಲೀಲ ಕಾಮೆಂಟ್‌ ಮಾಡಿದ ಕಿಡಿಗೇಡಿಗಳು ಯಾರು ಎಂಬುದು ಬಹಿರಂಗವಾಗಿದೆ.

    ಸೋಷಿಯಲ್‌ ಮೀಡಿಯಾ (Social Media) ಪೋಸ್ಟ್‌ಗೆ ಅಶ್ಲೀಲ ಕಾಮೆಂಸ್ಟ್‌ ಹಾಕಿದವರಲ್ಲಿ ಒಬ್ಬ ದರ್ಶನ್ ಫ್ಯಾನ್, ಮತ್ತೊಬ್ಬ ನಟ ಧನ್ವೀರ್ ಫ್ಯಾನ್ ಎಂಬುದು ಪೊಲೀಸರ (Bengaluru City Police) ತನಿಖೆಯಲ್ಲಿ ಬಯಲಾಗಿದೆ. ಇದನ್ನೂ ಓದಿ: ಕಲಬುರಗಿ ಕೇಂದ್ರಿಯ ವಿವಿ ಆವರಣದಲ್ಲಿ ಗೋರಿ – ರಾತ್ರೋರಾತ್ರಿ ಕಾಂಪೌಂಡ್‌ ನಿರ್ಮಾಣ

    ಅಶ್ಲೀಲ ಕಾಮೆಂಟ್ ಜೊತೆಗೆ ಏನ್ ಮಾಡ್ಕೊಳಕ್ಕೆ ಆಗುತ್ತೆ ಅಂತಾ? ಇಬ್ಬರು ನಟರ ಅಭಿಮಾನಿಗಳಾದ ಓಬಣ್ಣ ಮತ್ತು ಗಂಗಾಧರ್ ಧಮ್ಕಿ ಹಾಕಿ ಕೆಟ್ಟ ಕಾಮೆಂಟ್ಸ್ ಹಾಕಿದ್ರು. ಇದನ್ನೂ ಓದಿ: ಕೊಪ್ಪಳ| ನಡುರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ಯುವಕನ ಭೀಕರ ಕೊಲೆ

    ಏನಿದು ಪ್ರಕರಣ?
    ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿಗೆ ನ್ಯಾಯ ಸಿಗುವ ಬಗ್ಗೆ ರಮ್ಯಾ ಪೋಸ್ಟ್ ಹಾಕಿದ್ದಕ್ಕೆ ಅಶ್ಲೀಲ ಕಾಮೆಂಟ್ ಮಾಡಿರುವುದು ಪೊಲೀಸರ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಇದಲ್ಲದೇ ಅಶ್ಲೀಲ ಮೆಸೇಜ್ ಹಾಕಿದ್ದ ಇನ್ನೂ ಮೂವರನ್ನ ಸಿಸಿಬಿ ಪೊಲೀಸ್ರು ಲಾಕ್ ಮಾಡಿದ್ದಾರೆ. ಉಳಿದ ಕಿಡಿಗೇಡಿಗಳ ಪತ್ತೆಗೆ 6 ತಂಡವನ್ನ ರಚನೆ ಮಾಡಲಾಗಿದೆ.

    ಬೆಂಗಳೂರು, ಮೈಸೂರು, ಹಾವೇರಿ, ಚಿಕ್ಕಮಗಳೂರು ಸೇರಿದಂತೆ ಹಲವು ಕಡೆ ಕಿಡಿಗೇಡಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇನ್ನೂ ಅಶ್ಲೀಲ ಕಾಮೆಂಟ್‌ ಹಾಕಿ ವಿಕೃತಿ ಮೆರೆದರೆ ಸಿಸಿಬಿ ಪೊಲೀಸರಂಥೂ ಸರಿಯಾಗಿಯೇ ಬಿಸಿ ಮುಟ್ಟಿಸುತ್ತಿದ್ದಾರೆ. ಇದನ್ನೂ ಓದಿ: ಗ್ರೌಂಡ್‌ ಪೆನೆಟೇರಿಂಗ್ ರೇಡಾರ್‌ನಿಂದ ಅಸ್ಥಿಪಂಜರ ಪತ್ತೆ ಕಾರ್ಯ ನಡೆಸಿ – ಎಸ್‌ಐಟಿಗೆ ದೂರುದಾರ ಹೊಸ ರಿಕ್ವೆಸ್ಟ್‌

  • ಚಿಕ್ಕಪ್ಪನಿಂದಲೇ ಅಣ್ಣನ ಮಕ್ಕಳ ಕ್ರೂರ ಹತ್ಯೆ – ಇಬ್ಬರು ಸಾವು, 5 ವರ್ಷದ ಮಗು ಜೀವನ್ಮರಣ ಹೋರಾಟ

    ಚಿಕ್ಕಪ್ಪನಿಂದಲೇ ಅಣ್ಣನ ಮಕ್ಕಳ ಕ್ರೂರ ಹತ್ಯೆ – ಇಬ್ಬರು ಸಾವು, 5 ವರ್ಷದ ಮಗು ಜೀವನ್ಮರಣ ಹೋರಾಟ

    ಬೆಂಗಳೂರು: ಸ್ವಂತ ಚಿಕ್ಕಪ್ಪನೇ ಅಣ್ಣನ ಮಕ್ಕಳನ್ನು ಕ್ರೂರವಾಗಿ ಹತ್ಯೆಗೈದಿರುವ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣಾ (Hebbagodi Police Station) ವ್ಯಾಪ್ತಿಯ ಕಮ್ಮಸಂದ್ರದಲ್ಲಿ ನಡೆದಿದೆ.

    ಖಾಸೀಂ (35) ಮಕ್ಕಳನ್ನು ಕೊಲೆ ಆರೋಪಿ. ಮಹಮ್ಮದ್ ಇಶಾಕ್ (9) ಮಹಮ್ಮದ್ ಜುನೇದ್ (7) ಹಲ್ಲೆಯಿಂದ ಮೃಪಟ್ಟ ಮಕ್ಕಳು. ಆರೋಪಿ ಸ್ವಂತ ಅಣ್ಣನ ಮೂವರು ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾನೆ. ಇಬ್ಬರು ಸಾವನ್ನಪ್ಪಿದ್ರೆ, 5‌ ವರ್ಷದ ಮಗು (ಮಹಮದ್ ರೋಹನ್) ಆಸ್ಪತ್ರೆಯಲ್ಲಿ (Hospital) ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದೆ.

    ಮನೆಯಲ್ಲಿ ಮಕ್ಕಳನ್ನ ಅಜ್ಜಿಯೊಂದಿಗೆ ಬಿಟ್ಟು ಪೋಷಕರು ಕೆಲಸಕ್ಕೆ ಹೋಗಿದ್ದರು. ಅಜ್ಜಿ ತರಕಾರಿ ತರಲು ಮಾರ್ಕೆಟ್‌ಗೆ ಹೋಗಿದ್ದ ವೇಳೆ ಮಾನಸಿಕ ಅಸ್ವಸ್ಥನಂತೆ ವರ್ತಿಸಿರುವ ಖಾಸೀಂ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ. ಮೂರು ಮಕ್ಕಳ ಗುಪ್ತಾಂಗಗಳಿಗೆ ಕಬ್ಬಿಣದ ರಾಡ್‌ ಮತ್ತು ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

    ಮೃತ ಮಕ್ಕಳ ತಂದೆ ಚಾಂದ್‌ ಪಾಷ 5 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದರು. ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಎಲ್ಲವೂ ಚೆನ್ನಾಗಿತ್ತು, ಆದ್ರೆ ಇದ್ದಕ್ಕಿಂತೆ ಏನಾಯ್ತೋ ಗೊತ್ತಿಲ್ಲ, ಇಷ್ಟೊಂದು ಕ್ರೂರವಾಗಿ ಹಲ್ಲೆ ಮಾಡಿ, ನಮ್ಮ ಮಕ್ಕಳನ್ನ ಕೊಂದಿದ್ದಾನೆಂದು ಚಾಂದ್ ಪಾಷ ಹೇಳಿದ್ದಾರೆ.

    ಇನ್ನೂ ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಜಂಟಿ ಆಯುಕ್ತ ರಮೇಶ್ ಬಾನೋತ್ ಹೇಳಿಕೆ ನೀಡಿದ್ದು, ಚಾಂದ್‌ ಪಾಷ 5 ವರ್ಷಗಳ ಹಿಂದೆ ಯಾದಗಿರಿಯಿಂದ ಹೆಬ್ಬಗೋಡಿಗೆ ಬಂದು ನೆಲೆಸಿದ್ದ. ಮಡದಿ ಮೂವರು ಮಕ್ಕಳು, ತಾಯಿ ತಮ್ಮನ ಜೊತೆ ವಾಸ ಮಾಡಿಕೊಂಡಿದ್ದ. ಚಾಂದ್‌ ಪಾಷ ಗಾರೆಕೆಲಸ, ಪತ್ನಿ ಗಾರ್ಮೆಂಟ್ಸ್‌ ನಲ್ಲಿ ಕೆಲಸ ಮಾಡಿಕೊಂಡಿದ್ದಳು. ತಮ್ಮ ಖಾಸೀಂ ಮನೆಯಲ್ಲೇ ಇರುತ್ತಿದ್ದ. ಮಾನಸಿಕ ಅಸ್ವಸ್ಥನಂತೆ ಇದ್ದು, ತಿಂಗಳ ಹಿಂದೆ ಕಾಣೆಯಾಗಿದ್ದ. ಅಣ್ಣ ಚಾಂದ್ ಪಾಷ ಹುಡುಕಿ ಮನೆಗೆ ಕರೆತಂದಿದ್ದ. ಆದ್ರೆ ಇಂದು ಮಧ್ಯಾಹ್ನ 1 ಗಂಟೆ ವೇಳೆಯಲ್ಲಿ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾನೆ. ವಿಚಾರಣೆ ನಡೆಸುತ್ತಿದ್ದು, ಭಿನ್ನ ಭಿನ್ನ ಹೇಳಿಕೆ ಕೊಡುತ್ತಿದ್ದಾನೆ ಅಂತ ವಿವರಿಸಿದ್ದಾರೆ.

  • ರೌಡಿಶೀಟರ್ ಕೊಲೆ ಕೇಸಲ್ಲಿ ಬಿಗ್‌ ಟ್ವಿಸ್ಟ್‌ – ಬೈರತಿ ಬಸವರಾಜ್ ವಿರುದ್ಧ ದೂರು ನೀಡಿಲ್ಲ: ಬಿಕ್ಲು ಶಿವ ತಾಯಿ

    ರೌಡಿಶೀಟರ್ ಕೊಲೆ ಕೇಸಲ್ಲಿ ಬಿಗ್‌ ಟ್ವಿಸ್ಟ್‌ – ಬೈರತಿ ಬಸವರಾಜ್ ವಿರುದ್ಧ ದೂರು ನೀಡಿಲ್ಲ: ಬಿಕ್ಲು ಶಿವ ತಾಯಿ

    – ಎಲ್ಲಾ ಆರೋಪಿಗಳು 10 ದಿನ ಪೊಲೀಸ್ ಕಸ್ಟಡಿಗೆ

    ಬೆಂಗಳೂರು: ರೌಡಿಶೀಟರ್ ಶಿವಪ್ರಕಾಶ್ ಕೊಲೆ ಪ್ರಕರಣದ (Shivaprakash Murder Case) ತನಿಖೆಯನ್ನ ಪೊಲೀಸರು ಚುರುಕುಗೊಳಿಸಿದ್ದಾರೆ. ಈ ನಡುವೆ ಕೊಲೆಯಾದ ಬಿಕ್ಲು ಶಿವನ ತಾಯಿ ಹೇಳಿಕೆ ಪ್ರಕರಣಕ್ಕೆ ಟ್ವಿಸ್ಟ್‌ ಕೊಟ್ಟಿದೆ.

    ಬಿಕ್ಲುಶಿವ ಬರ್ಬರ ಹತ್ಯೆಯ ವಿಡಿಯೋ ವೈರಲ್‌ ಆಗಿದೆ. ಹಲ್ಲೆ ವೇಳೆ ಕೆಲ ಆರೋಪಿಗಳು ಹೆಲ್ಮೆಟ್ ಧರಿಸಿದ್ದಾರೆ. ಕೆಳಗೆ ಬಿದ್ದು ನನ್ನನ್ನು ಬಿಟ್ಟು ಬಿಡಿ ಅಂತ ಗೋಗರೆದರೂ ಬಿಡದ ಆರೋಪಿಗಳು ಮನಸೋ ಇಚ್ಚೇ ಕೊಚ್ಚಿ ಕೊಚ್ಚಿ ಕೊಲೆ ಮಾಡಿದ್ದಾರೆ. ಬಿಕ್ಲು ಶಿವನ ಕೊಲೆಯಲ್ಲಿ 8 ಮಂದಿ ಭಾಗಿ ಆಗಿರುವ ಶಂಕೆ ಇದೆ.

    ಬೆಳಗ್ಗೆ ಮಹಾಭದ್ರಕಾಳಿ ಮಹಾಯಾಗದಲ್ಲಿ ಭಾಗಿ
    ಬಿಕ್ಲು ಶಿವ ಕೊಲೆ ಪ್ರಕರಣದ ಮತ್ತೊಂದು ವಿಚಾರ ಬಹಿರಂಗವಾಗಿದೆ. ಮಂಗಳವಾರ ಬೆಳಗ್ಗೆ ಮಹದೇವಪುರದಲ್ಲಿ ನಡೆದ ಮಹಾಭದ್ರಕಾಳಿ ಯಾಗದಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜ್ (Byrathi Basavaraj) ಭಾಗಿ ಆಗಿದ್ರು. ಅಂದೇ ರಾತ್ರಿ ಕೊಲೆ ಕೇಸ್‌ನಲ್ಲಿ ಎಫ್‌ಐಆರ್ ದಾಖಲಾಗಿದೆ. ಸದ್ಯ ಕೊಲೆ ಪ್ರಕರಣದಲ್ಲಿ ಎ5 ಆಗಿರುವ ಶಾಸಕ ಬೈರತಿ ಬಸವರಾಜ್ ಪ್ರಕರಣಕ್ಕೂ. ಆರೋಪಿಗಳು. ಮೃತನಿಗೂ ನನಗೂ ಸಂಬಂಧವಿಲ್ಲ ಅಂತಿದ್ದಾರೆ. ಕೊಲೆ ಆರೋಪಿ ಜೊತೆಯೇ ಬೈರತಿ ಇರುವ ವಿಡಿಯೋ ಫೋಟೋಗಳು ಲಭ್ಯವಾಗಿದೆ.

    ಬಿಜೆಪಿ ಶಾಸಕ ಬೈರತಿ ಬಸವರಾಜ್‌ಗೆ ಪೊಲೀಸ್‌ ನೋಟಿಸ್‌
    ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಕೇಸ್ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಬಿಜೆಪಿ ಶಾಸಕ ಬೈರತಿ ಬಸವರಾಜ್‌ಗೆ ಭಾರತಿ ನಗರ ಪೊಲೀಸರು ನೋಟಿಸ್ ಕೊಟಿದ್ದಾರೆ. ನೋಟಿಸ್ ತಲುಪಿದ ಕೂಡಲೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಪೊಲೀಸ್ ನೋಟಿಸ್‌ನಿಂದ ಸದ್ಯ ಬೈರತಿ ಬಸವರಾಜು ಬಂಧನ ಭೀತಿ ಎದುರಿಸುತ್ತಿದ್ದಾರೆ.

    ಪ್ರಕರಣದ ಬಗ್ಗೆ ಕೊಲೆಯಾದ ರೌಡಿಶೀಟರ್ ಶಿವಪ್ರಕಾಶ್ @ ಬಿಕ್ಲು ಶಿವ ತಾಯಿ ವಿಜಯ್ ಲಕ್ಷ್ಮೀ ಮಾತನಾಡಿದ್ದಾರೆ. ನನಗೆ ಪ್ರಾಣ ಬೆದರಿಕೆ ಇದೆ. ಮಕ್ಕಳನ್ನ ಹೊರಗೆ ಕಳಿಸಬೇಡಿ, ನೀವು ಸಹ ಹೊರಗೆ ಹೋಗಬೇಡಿ.. ಯಾರೇ ಬಂದು ಬಾಗಿಲು ತಟ್ಟಿದ್ರು ತೆಗೆಯಬೇಡಿ ಅಂತ ಶಿವ ಹೇಳಿದ್ದ. ತನಿಖೆ ಮಾಡಿ ಆರೋಪಿಗಳನ್ನು ಪೊಲೀಸರು ಬಂಧಿಸಬೇಕು. ನಮಗೆ ಯಾರ ಮೇಲೂ ಅನುಮಾನ ಇಲ್ಲ. ಪೊಲೀಸರಿಗೆ ಕಂಪ್ಲೆಂಟ್ ಕೊಟಿದ್ದೇನೆ. ನನ್ನ ಮಗನ ಮೊಬೈಲ್‌ನಲ್ಲಿ ಎಲ್ಲ ಮಾಹಿತಿ ಇದೆ ಎಂದಿದ್ದಾರೆ. ಅಲ್ಲದೇ ಬಿಕ್ಲು ಶಿವ ಹಾಗೂ ಜಗ್ಗ ಇಬ್ಬರೂ ಕೂಡ ಆತ್ಮೀಯ ಸ್ನೇಹಿತರು. ಶಿವನಿಗೆ ತನ್ನ ಕೊಲೆ ಬಗ್ಗೆ ಮೊದಲೇ ಸುಳಿವು ಸಿಕ್ಕಿತ್ತು. ನನ್ನ ಹತ್ಯೆಗೆ ಚೆನ್ನೈ ಹುಡುಗರಿಗೆ ಸುಪಾರಿ ಕೊಟ್ಟಿದ್ದಾರೆ ಅಂತ ಹೇಳ್ತಿದ್ದ ಎಂದಿದ್ದಾರೆ.

    ನಿನ್ನೆಯಷ್ಟೇ ಬೈರತಿ ಬಸವರಾಜ್ ಕುಮ್ಮಕ್ಕಿನಿಂದಲೇ ಮಗನ ಹತ್ಯೆ ಆಗಿದೆ ಎಂದಿದ್ದ ಮೃತನ ತಾಯಿ ವಿಜಯಲಕ್ಷ್ಮಿ ಈಗ ಉಲ್ಟಾ ಹೊಡೆದಿದ್ದಾರೆ. ನಾನು ಬೈರತಿ ಬಸವರಾಜ್ ವಿರುದ್ಧ ದೂರು ನೀಡಿಲ್ಲ. ಪೊಲೀಸರು ಹೆಸರು ಸೇರಿಸಿಕೊಂಡಿದ್ದಾರೆ. ಈ ಬಗ್ಗೆ ನಮಗೆ ಜ್ಞಾಪಕವೇ ಇಲ್ಲ. ನನ್ನ ಮಗ ನೀಡಿರೋ ದೂರಿನ ಆಧಾರದ ಮೇಲೆ ಹೆಸರು ಹಾಕಿಕೊಂಡಿದ್ದಾರೆ ಅಂತ ಬಿಕ್ಲು ಶಿವ ತಾಯಿ ವಿಜಯ ಲಕ್ಷ್ಮಿ ಹೇಳಿದ್ದಾರೆ.

    ಎಲ್ಲಾ ಆರೋಪಿಗಳು 10 ದಿನ ಪೊಲೀಸ್ ಕಸ್ಟಡಿಗೆ
    ಇನ್ನೂ ಪ್ರಕರಣ ಸಂಬಂಧ ಎಲ್ಲಾ ಆರೋಪಿಗಳನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ 29ನೇ ಎಸಿಎಂಎಂ ಕೋರ್ಟ್ ಆದೇಶ ಹೊರಡಿಸಿದೆ. ಜೊತೆಗೆ ಬೆಳಗ್ಗೆ 7 ರಿಂದ 9 ಗಂಟೆ ತನಕ ಆರೋಪಿಗಳ ಕುಟುಂಬ ಭೇಟಿಗೆ ಅವಕಾಶ ನೀಡಬೇಕೆಂದು ತಿಳಿಸಿದೆ.

  • ಬೆಂಗಳೂರಿನಲ್ಲಿ ಪಬ್‌ಗಳಿಗೆ ಮಧ್ಯರಾತ್ರಿ 1 ಗಂಟೆವರೆಗೂ ಅವಕಾಶ? – ಡಿಕೆಶಿ ಸುಳಿವು

    ಬೆಂಗಳೂರಿನಲ್ಲಿ ಪಬ್‌ಗಳಿಗೆ ಮಧ್ಯರಾತ್ರಿ 1 ಗಂಟೆವರೆಗೂ ಅವಕಾಶ? – ಡಿಕೆಶಿ ಸುಳಿವು

    ಬೆಂಗಳೂರು: ನಗರದಲ್ಲಿ ಪಬ್‌ಗಳಿಗೆ (Pub) ಮಧ್ಯರಾತ್ರಿ 1 ಗಂಟೆವರೆಗೂ ಅನುಮತಿ ‌ಕೊಡೋ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಪರೋಕ್ಷ ಸುಳಿವು ಕೊಟ್ಟಿದ್ದಾರೆ‌. ಆದಷ್ಟು ಬೇಗ ಈ ಬಗ್ಗೆ ನಿರ್ಧಾರ ಮಾಡೋದಾಗಿ ತಿಳಿಸಿದ್ದಾರೆ.

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಸದಸ್ಯ ಗೋಪಿನಾಥ್ ಪ್ರಶ್ನೆ ಕೇಳಿದ್ರು. ಬೆಂಗಳೂರಿನಲ್ಲಿ (Bengaluru) ಪಬ್‌ಗಳು ರಾತ್ರಿ 11.30ಕ್ಕೆ ಮುಚ್ಚುವ ನಿಯಮ ಇದೆ. ಆದ್ರೆ ಮಧ್ಯರಾತ್ರಿವರೆಗೂ ಪಬ್ ಗಳು ನಡೆಯುತ್ತಿವೆ. ಇಂದಿರಾ‌ನಗರ ಸೇರಿ ಅನೇಕ ಕಡೆ ನಿಯಮ ಮೀರಿ ಪಬ್ ನಡೆಯುತ್ತಿವೆ. ಇದನ್ನೇ ನೆಪ ಇಟ್ಟುಕೊಂಡು ಪೊಲೀಸರು ಪಬ್ ಅವರಿಗೆ ಕಿರುಕುಳಕೊಡುವ ಕೆಲಸ ಮಾಡ್ತಿದ್ದಾರೆ. ರೆಸ್ಟೋರೆಂಟ್‌ಗಳಿಗೆ ರಾತ್ರಿ 1 ಗಂಟೆವರೆಗೂ ಸರ್ಕಾರ ಅವಕಾಶ ಕೊಟ್ಟಿದೆ. ಅದರಂತೆ ಬೆಂಗಳೂರಿನಲ್ಲಿ ಪಬ್ ಗಳಿಗೂ ರಾತ್ರಿ 1 ಗಂಟೆವರೆಗೂ ಅವಕಾಶ ಕೊಡಿ ಎಂದು ಮನವಿ ಮಾಡಿದರು.‌ ಇದನ್ನೂ ಓದಿ: ಅಪ್ಪ-ಮಗನ ಮೇಲೆ ಹನಿಟ್ರ್ಯಾಪ್‌ ಯತ್ನ – ಸಿಎಂಗೆ ದೂರು ನೀಡಿದ ಸಚಿವ ರಾಜಣ್ಣ ಪುತ್ರ

    ಇದಕ್ಕೆ ಅಬಕಾರಿ ಸಚಿವ ತಿಮ್ಮಾಪುರ್ ಉತ್ತರ ನೀಡಿ, ಅಬಕಾರಿ ಇಲಾಖೆಯಲ್ಲಿ ಎರಡು ರೀತಿ ಪಬ್ ಗಳಿಗೆ ನಾವು ಅನುಮತಿ ಕೊಡ್ತೀವಿ. ಸ್ವತಂತ್ರ ಪಬ್ ಗಳಿಗೆ ರಾತ್ರಿ 11.30ವರೆಗೆ ಅವಕಾಶ ಇದೆ‌. CL9 ಜೊತೆ ಹೊಂದುಕೊಂಡಿರೋ ಪಬ್ ಗಳಿಗೆ ಮಧ್ಯರಾತ್ರಿ 1 ಗಂಟೆ ಒಳಗೆ ಅವಕಾಶ ಕೊಡಲಾಗಿದೆ. ಒಂದು ವೇಳೆ ನಿಯಮ ಮೀರಿ ಪಬ್ ನಡೆಸುತ್ತಿದ್ದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು‌. ಇದನ್ನೂ ಓದಿ: ನನ್ನ ಮೇಲೆ ಹನಿಟ್ರ್ಯಾಪ್‌ಗೆ ಯತ್ನ ಆಗಿದೆ – ಸದನದಲ್ಲೇ ಸಚಿವ ಕೆ.ಎನ್‌ ರಾಜಣ್ಣ ಬಾಂಬ್‌

    ಸಚಿವ ತಿಮ್ಮಾಪುರ್ ಮಾತಿಗೆ ಡಿಸಿಎಂ ಡಿಕೆಶಿವಕುಮಾರ್ ಮಧ್ಯ ಪ್ರವೇಶ ಮಾಡಿ ಮಾತನಾಡಿದರು. ಅಬಕಾರಿ ಸಚಿವರು ಅಬಕಾರಿ ನಿಯಮದ ಆದೇಶದ ಬಗ್ಗೆ ಮಾತಾಡ್ತಿದ್ದಾರೆ. ಸಚಿವರು ಹೇಳಿದಂತೆ ಈಗ ಯಾರು ರಾತ್ರಿ 11.30ಕ್ಕೆ ಪಬ್ ಕ್ಲೋಸ್ ಮಾಡೊಲ್ಲ. ಇದನ್ನೇ ಪೊಲೀಸರು ಬಂಡವಾಳ ಮಾಡಿಕೊಂಡು ಕಿರುಕುಳ ‌ಕೊಡ್ತಿದ್ದಾರೆ‌. ಬೆಂಗಳೂರು ಇಂಟರ್ ನ್ಯಾಷನಲ್ ಸಿಟಿ. ಬೆಂಗಳೂರನ್ನ ಲೈವ್ ಆಗಿ ಇಡಬೇಕು. ನನಗೂ ಕೂಡ ಪಬ್ ಅವಧಿ ವಿಸ್ತರಣೆ ಮಾಡೊ ಬಗ್ಗೆ ಡಿಮ್ಯಾಂಡ್ ಬಂದಿವೆ. ರಾತ್ರಿ ಒಂದು ಗಂಟೆವರೆಗೂ ಪಬ್‌ಗಳಿಗೆ ಅವಕಾಶ ಕೊಡುವ ಗೋಪಿನಾಥ್ ಸಲಹೆ ಕರೆಕ್ಟ್ ಇದೆ. ನಾನು ಅದನ್ನ ಒಪ್ಪುತ್ತೇನೆ. ನಾನು, ಗೃಹ ಸಚಿವರು ಅಬಕಾರಿ ಸಚಿವರು ಸಭೆ ಮಾಡಿ ಇದಕ್ಕೆ ಒಂದು ಪರಿಹಾರ ಮಾಡ್ತೀವಿ ಅನ್ನೋ ಮೂಲಕ ಪಬ್ ಗಳ ಅವಧಿ ವಿಸ್ತರಣೆ ಮಾಡೋ ಬಗ್ಗೆ ಪರೋಕ್ಷ ಸುಳಿವು ಕೊಟ್ಟರು. ಇದನ್ನೂ ಓದಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ವೈಟಿಪಿಎಸ್‌ನ 1,500 ಗುತ್ತಿಗೆ ನೌಕರರಿಂದ ಉಗ್ರ ಹೋರಾಟ

  • ಅಟ್ರಾಸಿಟಿ ಕೇಸ್‌ನಲ್ಲಿ ದೌರ್ಜನ್ಯಕ್ಕೀಡಾದವರಿಗೆ ನ್ಯಾಯ ಒದಗಿಸಿ – ಸಿಎಂ ಖಡಕ್‌ ಸೂಚನೆ

    ಅಟ್ರಾಸಿಟಿ ಕೇಸ್‌ನಲ್ಲಿ ದೌರ್ಜನ್ಯಕ್ಕೀಡಾದವರಿಗೆ ನ್ಯಾಯ ಒದಗಿಸಿ – ಸಿಎಂ ಖಡಕ್‌ ಸೂಚನೆ

    ಬೆಂಗಳೂರು: ಅಟ್ರಾಸಿಟಿ ಪ್ರಕರಣಗಳಲ್ಲಿ ಸರ್ಕಾರಿ ಪ್ರಾಸಿಕ್ಯೂಟರ್‌ಗಳು (Public Prosecutor) ಸರಿಯಾಗಿ ವಾದಿಸಿ ದೌರ್ಜನ್ಯಕ್ಕೀಡಾದವರಿಗೆ ನ್ಯಾಯ ಒದಗಿಸಬೇಕು ಅಂತ ಸಿಎಂ ಸಿದ್ದರಾಮಯ್ಯ (Siddaramaiah) ಅಧಿಕಾರಿಗಳಿಗೆ ಸೂಚನೆ ನೀಡಿದರು.

    ವಿಧಾನಸೌಧದಲ್ಲಿ (Vidhana Soudha) ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳು ಜಾಗೃತ ಮತ್ತು ಉಸ್ತುವಾರಿ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಸಿಎಂ, ಡಿಸಿಗಳು, ಎಸ್ಪಿಗಳು, ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ರು.

    ಅಟ್ರಾಸಿಟಿ ಪ್ರಕರಣಗಳಲ್ಲಿ (Atrocity Case) ಸರ್ಕಾರಿ ಪ್ರಾಸಿಕ್ಯೂಟರ್‌ಗಳು ಸರಿಯಾಗಿ ವಾದಿಸಿ ದೌರ್ಜನ್ಯಕ್ಕೀಡಾದವರಿಗೆ ನ್ಯಾಯ ಒದಗಿಸಬೇಕು. ದೌರ್ಜನ್ಯ ಮಾಡಿದವರು ಸುಲಭವಾಗಿ ಜಾಮೀನು ಪಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಒದಗಿಸುವುದು ಎಲ್ಲರ ಜವಾಬ್ದಾರಿ. ದೌರ್ಜನ್ಯ ಪ್ರಕರಣಗಳಲ್ಲಿ ದೋಷಾರೋಪಣೆ ಪಟ್ಟಿಯನ್ನು ನಿಗದಿತ ಅವಧಿಯ ಒಳಗಾಗಿ ಸಲ್ಲಿಸಬೇಕು ಅಂತ ಸೂಚನೆ ನೀಡಿದ್ರು.

    ಸಿಎಂ ಸಭೆ ಹೈಲೈಟ್ಸ್…

    • ಬ್ಯಾಕ್‌ಲಾಗ್‌, ನೇಮಕಾತಿ ಮತ್ತು ಮುಂಬಡ್ತಿ ಪ್ರಕರಣಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಬೇಕು. ಈ ಕುರಿತು ಇಲಾಖೆವಾರು ಸಭೆ ನಡೆಸಲು ಮುಖ್ಯಕಾರ‍್ಯದರ್ಶಿಯವರಿಗೆ ಸೂಚನೆ.
    • ದೇವದಾಸಿ ಪದ್ದತಿ ಯಾವುದೇ ಜಿಲ್ಲೆಗಳಲ್ಲಿ ನಡೆದರೆ ಅದಕ್ಕೆ ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ವರಿಷ್ಠಾಧಿಕಾರಿ ಅವರೇ ನೇರ ಹೊಣೆ. ದೇವದಾಸಿಯರಿಗೆ ಪುನರ್ವಸತಿ ಕಲ್ಪಿಸುವುದು ಜಿಲ್ಲಾಡಳಿತದ ಜವಾಬ್ದಾರಿ. ಈ ಕುರಿತು ಯಾವುದೇ ದೂರಿಗೆ ಅವಕಾಶವಿಲ್ಲದಂತೆ ಕಾರ್ಯ ನಿರ್ವಹಿಸಬೇಕು.
    • ಅರಣ್ಯ ಹಕ್ಕು ಸಮಿತಿ ನಿಗದಿತವಾಗಿ ಸಭೆಗಳನ್ನು ನಡೆಸಿ, ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ನೀಡುವ ಪ್ರಕ್ರಿಯೆ ತ್ವರಿತಗೊಳಿಸಬೇಕು. 3,430 ಪ್ರಕರಣಗಳಲ್ಲಿ ಹಕ್ಕುಪತ್ರ ನೀಡಲು ಇನ್ನೂ ಬಾಕಿಯಿದ್ದು, ಇದನ್ನು ಒಂದು ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು.
    • ಹಕ್ಕುಪತ್ರ ನೀಡಿದ ಬಳಿಕ ಪಹಣಿಯಲ್ಲಿ‌ ಅವರ ಹೆಸರು ನಮೂದಿಸುವ ಕಾರ್ಯ ತ್ವರಿತಗೊಳಿಸಬೇಕು. ಕಂದಾಯ ಇಲಾಖೆ ಅಧಿಕಾರಿಗಳು ಇದನ್ನು ಆದ್ಯತೆ ಮೇಲೆ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಬಾರದು.
    • ಎಸ್ಸಿ/ಎಸ್ಟಿ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳಲ್ಲಿ ನ್ಯಾಯಾಲಯಗಳು ನೀಡಿರುವ ತಡೆಯಾಜ್ಞೆ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. 60 ದಿನಗಳ ಒಳಗಾಗಿ ಆರೋಪಪಟ್ಟಿ ದಾಖಲಿಸಬೇಕು. ಇನ್ನೂ 665 ಪ್ರಕರಣಗಳು ತನಿಖೆಗೆ ಬಾಕಿಯಿದ್ದು, ಇದನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ನ್ಯಾಯಾಲಯಗಳಲ್ಲಿ ಶಿಕ್ಷೆ ಪ್ರಮಾಣ ಕಡಿಮೆಯಾಗುವುದನ್ನು ಒಪ್ಪಲು ಸಾಧ್ಯವಿಲ್ಲ.
    • ಪ್ರತಿ ಜಿಲ್ಲೆಯಲ್ಲಿ ಡಿಸಿಆರ್‌ಇ ಕೋಶವನ್ನು‌ ಸ್ಥಾಪಿಸುವ ಕುರಿತು ಈಗಾಗಲೇ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
    • ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಸಬೇಕು. ಪ್ರಾಸಿಕ್ಯೂಶನ್ ಸಹ ಪರಿಶೀಲನೆ ನಡೆಸಬೇಕು. ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು ಈ ಸಭೆಯಲ್ಲಿ ಭಾಗವಹಿಸಬೇಕು.
    • ಮೃತಪಟ್ಟ ಪ್ರಕರಣಗಳಲ್ಲಿ ಅನುಕಂಪ ಆಧಾರದ ಉದ್ಯೋಗಕ್ಕಾಗಿ ಮೃತಪಟ್ಟ ದಿನಾಂಕದಿಂದ 3 ವರ್ಷದ ಒಳಗೆ, ಅಪ್ರಾಪ್ತ ವಯಸ್ಸಿನ ಮಕ್ಕಳು 18 ವರ್ಷಗಳನ್ನು ಪೂರೈಸತಕ್ಕದ್ದು, ಎಂಬ ಮಿತಿಯನ್ನು ತೆಗೆದು ಹಾಕುವ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
    • ಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣಗಳಲ್ಲಿ ಅಂತಹ ಪ್ರಮಾಣ ಪತ್ರ ನೀಡುವ ಅಧಿಕಾರಿಯನ್ನು ಸಹ ಆರೋಪಿಯನ್ನಾಗಿ ಮಾಡಲಾಗುತ್ತದೆ. ಜಾತಿ ಪ್ರಮಾಣ ಪತ್ರ ನೀಡುವ ಸಂದರ್ಭದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಬೇಕು ಎಂದು ಸಿಎಂ ತಾಕೀತು ಮಾಡಿದರು.

  • ಹೊಸ ವರ್ಷಕ್ಕೆ ಸ್ಟೋರ್ ಮಾಡಲಾಗಿದ್ದ 24 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್!

    ಹೊಸ ವರ್ಷಕ್ಕೆ ಸ್ಟೋರ್ ಮಾಡಲಾಗಿದ್ದ 24 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್!

    ಬೆಂಗಳೂರು: ನ್ಯೂ ಇಯರ್‌ಗೆ ಕಿಕ್ಕೇರಿಸಲು ಸ್ಟೋರ್ ಮಾಡಲಾಗಿದ್ದ 24 ಕೋಟಿ ರೂ. ಮೌಲ್ಯದ ಬಾಂಬೆ ಡ್ರಗ್ಸ್ ಸಿಸಿಬಿ ಕೈಗೆ ಸಿಕ್ಕಿದೆ. ನೈಜಿರಿಯಾದ ಖತರ್ನಾಕ್ ಲೇಡಿ (Nigerian Women) ದಿನಸಿ ಐಟಂ ಜೊತೆ ಡ್ರಗ್ಸ್ ಇಟ್ಟು ಮಾರಾಟ ಮಾಡ್ತಿದ್ದಾಗಲೇ ಸಿಸಿಬಿ (CCB) ಬಲೆಗೆ ಬಿದ್ದಿರೊ ಸ್ಟೋರಿ ಇದೆ ನೋಡಿ…

    ಹೊಸ ವರ್ಷಕ್ಕೆ ಕೌಂಟ್ ಡೌನ್ ಶುರುವಾಗಿದೆ. ನ್ಯೂ ಇಯರ್ ಸೆಲೆಬ್ರೆಷನ್‌ಗೆ ಭರ್ಜರಿ ಪ್ಲ್ಯಾನಿಂಗ್‌ ನಡೀತಿದೆ. ಈ ಮಧ್ಯೆ ಯುವ ಪೀಳಿಗೆ ಹಾದಿ ತಪ್ಪಿಸಿ ಡ್ರಗ್ ಕಿಕ್ಕೇರಿಸಲು ಪೆಡ್ಲರ್‌ಗಳು ತಯಾರಾಗಿದ್ದಾರೆ. ಕೋಟಿ ಕೋಟಿ ಬೆಲೆಯ ಡ್ರಗ್ಸ್ ಸ್ಟೋರ್‌ ಮಾಡಿದ್ದ ಲೇಡಿ ಪೆಡ್ಲರ್ ಸಿಸಿಬಿ ಬಲೆಗೆ ಬಿದ್ದಿದ್ದಾಳೆ. ಇದನ್ನೂ ಓದಿ: ಬೈಕ್‌ಗಳ ಮೇಲೆ ಭತ್ತದ ಹೊಟ್ಟು ತುಂಬಿದ್ದ ಲಾರಿ ಪಲ್ಟಿ – ಮೂವರು ಸ್ಥಳದಲ್ಲೇ ಸಾವು

    ಸೋಪ್‌ನಲ್ಲಿ ಬಾಂಬೆಯಿಂದ ಬರ್ತಿತ್ತು ಎಂಡಿಎಂಎ

    ಸಿಸಿಬಿಯ ಮಾದಕ ದ್ರವ್ಯ ನಿಗ್ರಹದಳ ಪೊಲೀಸ್ರ ಕೈಗೆ ಈ ವಿದೇಶಿ ಲೇಡಿ ಲಾಕ್ ಆಗಿದ್ದಾಳೆ. ಕೆ.ಆರ್ ಪುರದ ಟಿಸಿ ಪಾಳ್ಯದ ತನ್ನ ಅಂಗಡಿಯಲ್ಲಿ 24 ಕೋಟಿ ರೂ. ಮೌಲ್ಯದ 12 ಕೆಜಿ ಎಂಡಿಎಂಎ ವೈಟ್ ಮತ್ತು ಯೆಲ್ಲೊ ಕ್ರಿಸ್ಟಲ್ ಶೇಖರಣೆ ಮಾಡಿದ್ಳು. ಕರ್ನಾಟಕದ ಮಟ್ಟಿಗೆ ಇಷ್ಟು ದೊಡ್ಡಮಟ್ಟದ ಡ್ರಗ್ಸ್ ಪತ್ತೆಯಾಗಿರೋದು ಇದೆ ಮೊದಲು ಎಂದು ಹೇಳಲಾಗ್ತಿದೆ. ಇದನ್ನೂ ಓದಿ: ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಓಡೋಡಿ ಕಾರು ಹತ್ತಿದ ಲಕ್ಷ್ಮಣ್‌

    ನೈಜಿರಿಯನ್ ಮೂಲದ ಮಹಿಳೆ ತನ್ನ ಅಂಗಡಿಯನ್ನ ಡ್ರಗ್ಸ್ ಶಾಪ್ ಆಗಿ ಪರಿವರ್ತಿಸಿದ್ಳು. ಮುಂಬೈನಿಂದ ಗ್ರಾಸರಿ ಐಟಂಗಳ ಪ್ಯಾಕೇಟ್‌ನಲ್ಲಿ ಡ್ರಗ್ಸ್ ತರಿಸ್ತಿದ್ದ ನೈಜಿರಿಯನ್ ಮೂಲದ ರೋಜ್ಲೈಮ್ (40)ನ ಸಿಸಿಬಿ ಪೊಲೀಸ್ರು ಬಂಧಿಸಿದ್ದಾರೆ. ಮುಂಬೈನ ಮಹಿಳೆಯೊಬ್ಬಳು ಗ್ರಾಸರಿ ಐಟಂ ಹಾಗೂ ಡೆಟಾಲ್ ಸೋಪ್‌ನಲ್ಲಿ ಡ್ರಗ್ಸ್ ಅಡಗಿಸಿ ಬೆಂಗಳೂರಿಗೆ ಡ್ರಗ್ಸ್ ಸಫ್ಲೈ ಮಾಡ್ತಿದ್ಳು. ಮುಂಬೈನಲ್ಲಿರೋ ವಿದೇಶಿ ಮಹಿಳೆ ಜುಲೀಯಟ್ ಇಲ್ಲಿನ ನೈಜಿರೀಯಾ ಮಹಿಳೆಗೆ ಡ್ರಗ್ಸ್ ಸಪ್ಲೈ ಮಾಡ್ತಿದ್ಳು. ಈ ಡ್ರಗ್ಸ್ ಅನ್ನ ಸ್ಥಳೀಯ ನಿವಾಸಿಗಳು ಹಾಗೂ ಕೆಲ ಸಪ್ಲೈಯರ್ಸ್ ಗೆ ನೈಜಿರಿಯನ್ ಪ್ರಜೆಗಳಿಗೆ ಮಹಿಳೆ ರಿಟೇಲ್ ನಲ್ಲಿ ಮಾರಾಟ ಮಾಡ್ತಿದ್ಳು. ಈ ಬಗ್ಗೆ ಮಾಹಿತಿ ತಿಳಿದು ಶುಕ್ರವಾರ ಅಂಗಡಿ ಬಳಿ ಸಿಸಿಬಿ ಟೀಂ ಹೋಗಿತ್ತು. ಈ ವೇಳೆ ದೆಹಲಿಯಿಂದ ಡ್ರಗ್ಸ್ ತಂದು ಕೊಡಬೇಕಾದ್ರೆ ರೆಡ್ ಹ್ಯಾಂಡಗಿ ರೋಜ್ಲೈಮ್ ಸಿಕ್ಕಿ ಬಿದ್ದಿದ್ದಾಳೆ.

    ಇನ್ನೂ ದೆಹಲಿಯಿಂದ ಡ್ರಗ್ಸ್ ತಂದಿದ್ದ ಜೂಲಿಯಟ್ ಎಂಬ ಮಹಿಳೆ ಪರಾರಿಯಾಗಿದ್ದು, ಸದ್ಯ ಸಿಸಿಬಿ ಪೊಲೀಸ್ರು 24 ಕೋಟಿ ಡ್ರಗ್ಸ್‌ ಜೊತೆಗೆ 70 ಸಿಮ್‌ಗಳನ್ನು ಸೀಜ್ ಮಾಡಿದ್ದಾರೆ. 5 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ರೋಜ್ಲೈಮ್ ವೀಸಾ ಅವಧಿ ಮುಗಿದರೂ ಬೆಂಗಳೂರಿನಲ್ಲಿ ವಾಸವಿದ್ದಾಳೆ. ಸದ್ಯ ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪರಾರಿಯಾಗಿರೋ ಜೂಲಿಯೇಟ್‌ಗಾಗಿ ಶೋಧ ನಡೆಸಿದ್ದಾರೆ. ಇದನ್ನೂ ಓದಿ: ಅಭಿಮಾನದಿಂದ ನಟರನ್ನು ನಂಬಿ ಯಾರೂ ಮೋಸಹೋಗಬೇಡಿ: ಎ6 ಜಗದೀಶ್ ತಾಯಿ ಕಣ್ಣೀರು

  • ದಿನ ರಾತ್ರಿ 2-3 ಹುಡುಗರನ್ನ ಕರೆದುಕೊಂಡು ಬರುತ್ತಿದ್ದಳು – ಅಪಾರ್ಟ್ಮೆಂಟ್‌ ಮಾಲೀಕ ಕೆಂಪೇಗೌಡ

    ದಿನ ರಾತ್ರಿ 2-3 ಹುಡುಗರನ್ನ ಕರೆದುಕೊಂಡು ಬರುತ್ತಿದ್ದಳು – ಅಪಾರ್ಟ್ಮೆಂಟ್‌ ಮಾಲೀಕ ಕೆಂಪೇಗೌಡ

    – ಯುವತಿ ಮೇಲಿನ ಹಲ್ಲೆ ಕೇಸ್‌ಗೆ ಟ್ವಿಸ್ಟ್‌

    ಬೆಂಗಳೂರು: ಸಂಜಯನಗರ ಅಪಾರ್ಟ್ಮೆಂಟ್‌ವೊಂದರ (Apartment) ಮಾಲೀಕನ ಮಗ ಕಂಠಪೂರ್ತಿ ಕುಡಿದು ಯುವತಿಯೊಬ್ಬಳ ಜೊತೆ ಅಸಭ್ಯವಾಗಿ ವರ್ತಿಸಿರುವ ಬಗ್ಗೆ ದೂರು ದಾಖಲಾಗಿದೆ. ಈ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್‌ ಸಿಕ್ಕಿದೆ. ಅಪಾರ್ಟ್‌ಮೆಂಟ್‌ ಮಾಲೀಕರೂ ಆಗಿರುವ ಕೆಂಪೇಗೌಡ (Kempegowda) ಅವರು ನೀಡಿದ ಹೇಳಿಕೆ‌ಯಲ್ಲಿ ಹಲವು ರಹಸ್ಯಗಳು ಬೆಳಕಿಗೆ ಬಂದಿವೆ.

    ಹಲ್ಲೆ ಆರೋಪಕ್ಕೆ ಒಳಗಾಗಿರುವ ಮಂಜುನಾಥ್ ಗೌಡನ ತಂದೆ ಕೆಂಪೇಗೌಡ ಮಾಧ್ಯಮಗಳೊಂದಿಗೆ ಮಾತನಾಡಿ, ಯುವತಿ ಹಲವು ತಿಂಗಳಿಂದ ಫ್ಲಾಟ್‌ನಲ್ಲಿ ವಾಸವಾಗಿದ್ದಾಳೆ. ಆಕೆ ಮನೆ ಬಾಡಿಗೆ ಕೊಡುವಾಗಲೇ ಬೇರೆ ಗಂಡಸರನ್ನು ಕರೆದುಕೊಂಡು ಬರದಂತೆ ಹೇಳಿದ್ದೆವು. ಆರಂಭದಲ್ಲಿ ಒಂದು ತಿಂಗಳು ಸುಮ್ಮನಿದ್ದಳು. ನಂತರ ಗಂಡಸರನ್ನ ಕರೆದುಕೊಂಡು ಬರೋದಕ್ಕೆ ಶುರು ಮಾಡಿದಳು ಎಂದಿದ್ದಾರೆ.

    ಅಪಾರ್ಟ್‌ಮೆಂಟ್‌ ಮುಂಭಾಗಕ್ಕೆ ಬಂದು, ಸಿಗರೇಟ್‌ ಸೇದುತ್ತಿದ್ದಳು, ಹುಡುಗರೊಂದಿಗೆ ಸೇರಿಕೊಂಡು ಶಬದ್ಧ ಮಾಡುತ್ತಿದ್ದಳು. ಸಾಕು ನಾಯಿಯನ್ನು ಮನೆಯಲ್ಲೇ ಗಲೀಜುಮಾಡಿಸುತ್ತಿದ್ದಳು. ಇದರಿಂದ ಸ್ಥಳೀಯರು ರೋಹಿಹೋಗಿದ್ದರು ಬಂದ 6 ತಿಂಗಳಲ್ಲೇ ಇಷ್ಟೊಂದು ರಂಪಾಟ ಮಾಡಿದ್ದಾಳೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕುಡಿದು ಬಂದು ಯುವತಿ ಜೊತೆ ಅಸಭ್ಯ ವರ್ತನೆ – ಅಪಾರ್ಟ್ಮೆಂಟ್ ಮಾಲೀಕನ ಪುತ್ರನ ವಿರುದ್ಧ ದೂರು

    ರಾತ್ರಿ ಆದ್ರೆ ಹುಡುಗರು ಬರ್ತಾ ಇದ್ದರು, ದಿನ ರಾತ್ರಿ ಇಬ್ಬರು, ಮೂವರು ಹುಡುಗರನ್ನ ಕರೆದುಕೊಂಡು ಬರ್ತಿದ್ಲು. ರಾತ್ರಿ ವೇಳೆ ತುಂಬಾ ಲೇಟಾಗಿ ಮನೆಗೆ ಬರ್ತಿದ್ಲು. ಸೆಕ್ಯೂರಿಟಿಗೆ ಬಾಯಿಗೆ ಬಂದ ಹಾಗೆ ಬೈದು ಗೇಟ್ ಓಪನ್ ಮಾಡಿಸ್ತಿದ್ಲು. ಹುಡುಗರ ಜೊತೆ ಮನೆಯಲ್ಲೇ ಕುಡಿದು ಗಲಾಟೆ ಮಾಡ್ತಾ ಇದ್ದಳು. ಅಕ್ಕಪಕ್ಕದ ಫ್ಲ್ಯಾಟ್ ನವರು ನಮಗೆ ಹೇಳಿದ್ರು. ಹಾಗಾಗಿ ಈ ಹಿಂದೆಯೂ ಮನೆ ಕಾಲಿ ಮಾಡುವಂತೆ ತಿಳಿಸಿದ್ವಿ. ಖಾಲಿ ಮಾಡಲ್ಲ ಅಂತ ಗಲಾಟೆ ಮಾಡಿದ್ಲು, ಹಲ್ಲೆ ಮಾಡೋಕೆ ಬರ್ತಿದ್ಲು ಎಂದು ಯುವತಿ ರಂಪಾಟಗಳನ್ನ ಬಿಚ್ಚಿಟ್ಟಿದ್ದಾರೆ.

    ಡಿಸೆಂಬರ್ 3ರ ರಾತ್ರಿ ನನ್ನ ಮಗನ ಮೇಲೆ ಆಕೆಯೇ ಮೊದಲು ಹಲ್ಲೆ ಮಾಡಿದ್ದಾಳೆ. ಕೆನ್ನೆಗೆ ಹೊಡೆದು ಹಲ್ಲೆ ಮಾಡಿದ್ದಾಳೆ. ನಂತರ ನನ್ನ ಮಗ ಕೈಹಿಡಿದಾಗ ತರಚಿರೋ ಗಾಯ ಆಗಿದೆ. ಅದನ್ನೇ ನೆಪವಾಗಿಟ್ಟುಕೊಂಡು ಪೊಲೀಸರಿಗೆ ದೂರು ಕೊಟ್ಟಿದ್ದಾಳೆ. ನಮ್ಮ ಮನೆಯ ಸಿಸಿಟಿವಿ ಕೊಟ್ಟು ಯುವತಿ ಮೇಲೆ ಕೌಂಟರ್ ಕಂಪ್ಲೆಂಟ್‌ ಕೊಡ್ತೀವಿ ಅಂತ ಹೇಳಿದ್ದಾರೆ. ಇದನ್ನೂ ಓದಿ: ಕರ್ನಾಟಕ-ಲಕ್ಷದ್ವೀಪ ವ್ಯಾಪಾರ ಮಾರ್ಗ ಪುನರುಜ್ಜೀವನಗೊಳಿಸಲು ಕೆಎಂಬಿ ಪೂರ್ವ ಭಾವಿಯಾಗಿ ಕೆಲಸ ಮಾಡಲಿದೆ: ಸಚಿವ ವೈದ್ಯ

    ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಪ್ರತಿಕ್ರಿಯೆ ನೀಡಿದ್ದು, ಮನೆ ಮಾಲೀಕ ಯುವತಿಯ ಮೇಲೆ ಹಲ್ಲೆ ಮಾಡಿದ್ದಾರೆಂದು ದಾಖಲೆ ಸಮೇತ ದೂರು ಕೊಟ್ಟಿದ್ದಾರೆ. ಯುವತಿಕೊಟ್ಟ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಮಂಜುನಾಥ ಗೌಡನನ್ನ ಬಂಧನ ಮಾಡಲಾಗಿದೆ. ಆರೋಪಿ ಯುವತಿ ಬೇರೆ ಹುಡುಗರನ್ನ ಕರೆದುಕೊಂಡು ಪಾರ್ಟಿ ಮಾಡ್ತಾ ಇದ್ದರು, ಪಾರ್ಟಿ ಮಾಡಿ ಗಲಾಟೆ ಮಾಡಿದ್ದನ್ನ ಅಕ್ಕಪಕ್ಕದ ಮನೆಯವರು ನಮಗೆ ದೂರು ಹೇಳ್ತಾ ಇದ್ದರು. ಹಾಗಾಗಿ ಹೇಳಲು ಹೋದಾಗ ನನಗೆ ತಳ್ಳಿದ್ದರಿಂದ ನಾನು ಕೇಳಗಡೆ ಬಿದ್ದೆ, ಆದಾದ ಬಳಿಕ ನಾನು ಹಲ್ಲೆ ಮಾಡಿದ್ದಾಗಿ ಪೊಲೀಸರ ತನಿಖೆಯ ವೇಳೆ ಆರೋಪಿ ಹೇಳಿದ್ದು ತನಿಖೆ ಮುಂದುವರೆಸಲಾಗಿದೆ ಎಂದು ತಿಳಿಸಿದ್ದಾರೆ.

  • ಬೆಂಗ್ಳೂರಲ್ಲಿ ಪಾಕ್ ಪ್ರಜೆಗಳ ಬಂಧನ ಕೇಸ್‌ – 1,350ಕ್ಕೂ ಹೆಚ್ಚು ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ

    ಬೆಂಗ್ಳೂರಲ್ಲಿ ಪಾಕ್ ಪ್ರಜೆಗಳ ಬಂಧನ ಕೇಸ್‌ – 1,350ಕ್ಕೂ ಹೆಚ್ಚು ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ

    ಬೆಂಗಳೂರು: ನಗರದ ಹೊರವಲಯದಲ್ಲಿ ಪಾಕ್ ಪ್ರಜೆಗಳ (Pakistanis) ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಳಿಸಿದ ಜಿಗಣಿ ಪೊಲೀಸರು (Jigani Police) ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

    ಸುಮಾರು 1,350ಕ್ಕೂ ಹೆಚ್ಚು ಪುಟಗಳ ಚಾರ್ಜ್‌ಶೀಟ್‌ (ChargeSheet) ಸಲ್ಲಿಕೆ ಮಾಡಲಾಗಿದ್ದು.. 18 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ಇನ್ನು ಪೊಲೀಸರ ತನಿಖೆ ವೇಳೆ ಹಲವು ಮಹತ್ವದ ವಿಚಾರಗಳು ಬೆಳಕಿಗೆ ಬಂದಿದೆ. ಹಣ ವರ್ಗಾವಣೆ, ಅಕ್ರಮವಾಗಿ ಭಾರತಕ್ಕೆ ಎಂಟ್ರಿ, ಉದ್ಯೋಗ, ಧರ್ಮ ಬೋಧನೆ ವಿಚಾರಗಳನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಇದನ್ನೂ ಓದಿ: ನಿಗೂಢವಾಗಿ ನೆಲೆಸಿದ್ದ ಪಾಕ್‌ ದಂಪತಿ; ಬೆಂಗಳೂರಲ್ಲಿದ್ದುಕೊಂಡೇ ಧರ್ಮ ಪ್ರಚಾರ, ಪ್ರಚೋದಕರಾಗಿ ಕೆಲಸ

    ಬಂಧಿತ 18 ಮಂದಿಯೂ ಪಾಕ್‌ ಮೂಲದ ಪ್ರಜೆಗಳಾಗಿದ್ದು, ದೇಶದಿಂದ ಬಹಿಷ್ಕರಿಸಲ್ಪಟ್ಟಿದ್ದರು. ಹಾಗಾಗಿಯೇ ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆಯೇ ಭಾರತಕ್ಕೆ ಬಂದು ಬೇರೆ ಬೇರೆ ರಾಜ್ಯಗಳಲ್ಲಿ ವಾಸ ಮಾಡುತ್ತಿದ್ದರು. ಹೆಚ್ಚಾಗಿ ದೆಹಲಿ, ಕರ್ನಾಟಕದ ಬೆಂಗಳೂರು (ಆನೇಕಲ್ ಸಮೀಪದ ಜಿಗಣಿ ಹಾಗೂ ಪೀಣ್ಯದಲ್ಲಿ) ಮತ್ತು ದಾವಣಗೆರೆಯಲ್ಲಿ ನೆಲೆಸಿದ್ದರು. ಇದನ್ನೂ ಓದಿ: ಬೆಂಗ್ಳೂರಲ್ಲಿ ಬಂಧನವಾಗಿದ್ದ ಶಂಕಿತ ಉಗ್ರನಿಂದ ರಹಸ್ಯ ಸ್ಫೋಟ – ಆ.15ರಂದು ಸ್ಫೋಟಿಸಲು ಇರಿಸಿದ್ದ ಜೀವಂತ IED ವಶ

    ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಇವರು, ತಮ್ಮದೇ ಯೂಟ್ಯೂಬ್‌ ಚಾನೆಲ್‌ ತೆರೆದು ಧರ್ಮ ಬೋಧನೆ ಮಾಡುತ್ತಿದ್ದರು. ಈ ಎಲ್ಲಾ ಅಂಶಗಳನ್ನು ಆಧರಿಸಿ ತನಿಖೆ ನಡೆಸಿದ್ದ ಪೊಲೀಸರು ಹಲವು ಮಹತ್ವದ ಸಾಕ್ಷ್ಯಗಳನ್ನು ಕಲೆಹಾಕಿದ್ದರು. ಈ ವೇಳೆ ಪಾಕ್ ಪ್ರಜೆಗಳು ಸೇರಿದಂತೆ ಹಲವು ಮಂದಿಯ ಹೇಳಿಕೆ ದಾಖಲು ಮಾಡಲಾಗಿದೆ. ತಾಂತ್ರಿಕ ಸಾಕ್ಷ್ಯಗಳು, ಸಿಡಿಆರ್ ರಿಪೋರ್ಟ್, ಟವರ್ ಡಂಪ್, ಯೂಟ್ಯೂಬ್ ಚಾನೆಲ್ ವಿವರಗಳನ್ನ ಕಲೆಹಾಕಿದ್ದು, ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಮರಕ್ಕೆ ಕಾರು ಡಿಕ್ಕಿ – ಇಬ್ಬರು ಎಂಬಿಎ ವಿದ್ಯಾರ್ಥಿಗಳ ದುರ್ಮರಣ, ಮೂವರು ಗಂಭೀರ

  • ಗುರು ಆತ್ಮಹತ್ಯೆಗೆ ಅಸಲಿ ಕಾರಣ ಇನ್ನೂ ನಿಗೂಢ – ಮೊಬೈಲ್‌, ಟ್ಯಾಬ್‌ FSLಗೆ ಕಳಿಸಲು ತಯಾರಿ

    ಗುರು ಆತ್ಮಹತ್ಯೆಗೆ ಅಸಲಿ ಕಾರಣ ಇನ್ನೂ ನಿಗೂಢ – ಮೊಬೈಲ್‌, ಟ್ಯಾಬ್‌ FSLಗೆ ಕಳಿಸಲು ತಯಾರಿ

    – ತನಿಖೆ ವೇಳೆ 4 ಮೊಬೈಲ್‌, ಲ್ಯಾಪ್‌ಟಾಪ್‌, ಟ್ಯಾಬ್‌ ಪತ್ತೆ

    ಬೆಂಗಳೂರು: ಮಠ ಖ್ಯಾತಿಯ ಸ್ಯಾಂಡಲ್‌ವುಡ್ ನಿರ್ದೇಶಕ, ನಟ ಗುರುಪ್ರಸಾದ್ (Guruprasad) ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಮಾದನಾಯಕನಹಳ್ಳಿ ಅಪಾರ್ಟ್ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗುರುಪ್ರಸಾದ್ ಶವ ಪತ್ತೆಯಾಗಿದೆ. ಆದ್ರೆ ಆತ್ಮಹತ್ಯೆಗೆ ಅಸಲಿ ಕಾರಣ ಇನ್ನೂ ನಿಗೂಢವಾಗಿಯೇ ಇದೆ.

    ಗುರುಪ್ರಸಾದ್‌ ಆತ್ಮಹತ್ಯೆ ಮಾಡಿಕೊಂಡಿದ್ದ ಫ್ಲಾಟ್‌ನಲ್ಲಿ ಪೊಲೀಸರು ತಡಕಾಡಿದ್ರೂ ಡೆತ್‌ನೋಟ್‌ ಸಿಕ್ಕಿಲ್ಲ. 4 ಮೊಬೈಲ್, ಎರಡು ಟ್ಯಾಬ್, ಒಂದು ಲ್ಯಾಪ್‌ಟಾಪ್ (Mobile, Laptop And Tab) ಪತ್ತೆಯಾಗಿದೆ. ಕಳೆದ ನಾಲ್ಕು ದಿನಗಳಿಂದ ಚಾರ್ಜ್‌ ಮಾಡದ ಹಿನ್ನೆಲೆ ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ. ಈ ಮೊಬೈಲ್‌, ಟ್ಯಾಬ್‌ ಹಾಗೂ ಲ್ಯಾಪ್‌ಟಾಪ್‌ಗಳನ್ನ ಎಫ್‌ಎಸ್‌ಎಲ್‌ಗೆ ಕಳುಹಿಸಲು ಪೊಲೀಸ್‌ ಅಧಿಕಾರಿಗಳು ತಯಾರಿ ಶುರು ಮಾಡಿದ್ದಾರೆ. ಒಂದು ವೇಳೆ ಸಾಯುವ ಮುನ್ನ ಮೊಬೈಲ್‌ನಲ್ಲಿ ವೀಡಿಯೋ ಮಾಡಿಕೊಂಡಿದ್ದರೆ, ಅದಕ್ಕೆ ಕಾರಣ ತಿಳಿಯಲಿದೆ. ಅಲ್ಲಿಯ ವರೆಗೂ ಸಾಲದ ಸುಳಿಗೆ ಸಿಲುಕಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂಬ ಪತ್ನಿಯ ಹೇಳಿಕೆಯನ್ನೇ ಪರಿಗಣಿಸಲಾಗುತ್ತದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮರಣೋತ್ತರ ಪರೀಕ್ಷೆಯಲ್ಲಿ ಗುರುಪ್ರಸಾದ್‌ ಸಾವಿನ ಸತ್ಯ ಸ್ಫೋಟ!

    ಗುರುಪ್ರಸಾದ್ ಇತ್ತೀಚಿಗೆ ನಿರ್ದೇಶಿಸಿದ್ದ ರಂಗನಾಯಕ ಹೀನಾಯ ಸೋಲು ಕಂಡಿತ್ತು. ಇದರಿಂದ ಗುರುಪ್ರಸಾದ್ ಸಾಲದ ಸುಳಿಗೆ ಸಿಲುಕಿದ್ರು. ಅವರ ವಿರುದ್ಧ ಚೆಕ್‌ಬೌನ್ಸ್ ಕೇಸ್ ಕೂಡ ದಾಖಲಾಗಿತ್ತು. ಅಲ್ಲದೇ ಅವರ ಆರೋಗ್ಯ ಕೂಡ ಕೈಕೊಟ್ಟಿತ್ತು. ಇದ್ರ ನಡುವೆಯೂ ಗುರುಪ್ರಸಾದ್ 2ನೇ ಮದ್ವೆ ಮಾಡಿಕೊಂಡಿದ್ರು. ಈ ಎಲ್ಲವನ್ನೂ ಸಂಭಾಳಿಸಲಾಗದೇ ಖಿನ್ನತೆಗೆ ಒಳಗಾಗಿದ್ದ ಗುರುಪ್ರಸಾದ್, ಅಕ್ಟೋಬರ್ 28 ರಿಂದ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. 4-5 ದಿನಗಳ ಹಿಂದೆ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ವಿಷಯ ಗೊತ್ತಾಗಿದೆ. ಅಷ್ಟೊತ್ತಿಗೆ ಗುರುಪ್ರಸಾದ್ ಶವ ಕೊಳೆತು ಹೋಗಿತ್ತು. ತವರು ಮನೆಯಲ್ಲಿದ್ದ 2ನೇ ಪತ್ನಿಯನ್ನು ಕರೆಯಿಸಿದ ಪೊಲೀಸರು, ಅವರ ಸಮ್ಮುಖದಲ್ಲಿ ಮುಂದಿನ ಪ್ರಕ್ರಿಯೆ ಮುಗಿಸಿದ್ರು.

    ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೀತು. ಕುಟುಂಬಸ್ಥರ ಸಮಕ್ಷಮದಲ್ಲಿ ಸಂಜೆಯೇ ವಿಲ್ಸನ್‌ಗಾರ್ಡನ್ ವಿದ್ಯುತ್ ಚಿತಾಗಾರದಲ್ಲಿ ಗುರುಪ್ರಸಾದ್ ಅಂತ್ಯಕ್ರಿಯೆ ನಡೀತು. ನಟ ಧನಂಜಯ್, ದುನಿಯಾ ವಿಜಿ ಸೇರಿ ಹಲವರು ಅಂತಿಮ ನಮನ ಸಲ್ಲಿಸಿದ್ರು.. ಗುರುಪ್ರಸಾದ್ 2ನೇ ಪತ್ನಿಯ ದೂರು ಆಧರಿಸಿ ಪೊಲೀಸರು ತನಿಖೆ ನಡೆಸಿದ್ದಾರೆ.

    1972ರಲ್ಲಿ ಕನಕಪುರದಲ್ಲಿ ಜನಿಸಿದ ಗುರುಪ್ರಸಾದ್ ರಾಮಚಂದ್ರ ಶರ್ಮಾ 2006 ರಲ್ಲಿ ತೆರೆಕಂಡ `ಮಠ’ ಚಿತ್ರದ ಮೂಲಕ ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ಸಿನಿಪಯಣ ಆರಂಭಿಸಿದರು. ಇದು ನವರಸ ನಾಯಕ ಜಗ್ಗೇಶ್‌ರ 100ನೇ ಚಿತ್ರ. ಇದನ್ನೂ ಓದಿ: ಕಾರವಾರ | ಖಿನ್ನತೆಯಿಂದ ಬಳಲುತಿದ್ದ ವ್ಯಕ್ತಿಗೆ ಹೊಸ ಬಟ್ಟೆ ಕೊಡಿಸಿ ಮಾನವೀಯತೆ ಮೆರೆದಿದ್ದ ಗುರುಪ್ರಸಾದ್!

    2009 ರಲ್ಲಿ ಇದೇ ಜೋಡಿ `ಎದ್ದೇಳು ಮಂಜುನಾಥ’ ಚಿತ್ರದ ಮೂಲಕ ಮತ್ತೊಂದು ಸಮಾಜಿಕ ಚಿತ್ರ ನೀಡಿತು. ಈ ಚಿತ್ರಕ್ಕೆ ಫಿಲ್ಮಫೇರ್ ಪ್ರಶಸ್ತಿ ದೊರಕಿತು. ನಂತರ `ಡೈರೆಕ್ಟರ್ ಸ್ಪೇಷಲ್’,`ಎರಡನೇ ಸಲ’ ಚಿತ್ರಗಳನ್ನು ನಿರ್ದೇಶಿಸಿದರು. ನಿರ್ದೇಶಕ ಮಾತ್ರವಲ್ಲದೇ ನಟನಾಗಿ `ಮಠ’, `ಎದ್ದೇಳು ಮಂಜುನಾಥ’,`ಮೈಲಾರಿ’, `ಹುಡುಗರು’,`ಅನಂತು v/s ನುಸ್ರತ್’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

    ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್‌ಬಾಸ್ ಅವತರಣಿಕೆಯಲ್ಲಿ ಭಾಗವಹಿಸಿದ್ದ ಇವರು ಹಲವು ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದಾರೆ. ಇದನ್ನೂ ಓದಿ: ಏಕಾಂಗಿಯಾಗಿ ಬದುಕನ್ನು ಅಂತ್ಯ ಮಾಡಿಕೊಂಡಿರೋದು ಬೇಜಾರಿನ ಸಂಗತಿ: ಮಾಳವಿಕಾ

  • ನಿಗೂಢವಾಗಿ ನೆಲೆಸಿದ್ದ ಪಾಕ್‌ ದಂಪತಿ; ಬೆಂಗಳೂರಲ್ಲಿದ್ದುಕೊಂಡೇ ಧರ್ಮ ಪ್ರಚಾರ, ಪ್ರಚೋದಕರಾಗಿ ಕೆಲಸ

    ನಿಗೂಢವಾಗಿ ನೆಲೆಸಿದ್ದ ಪಾಕ್‌ ದಂಪತಿ; ಬೆಂಗಳೂರಲ್ಲಿದ್ದುಕೊಂಡೇ ಧರ್ಮ ಪ್ರಚಾರ, ಪ್ರಚೋದಕರಾಗಿ ಕೆಲಸ

    – ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು

    ಬೆಂಗಳೂರು: ಕಳೆದ ಮೂರು ವರ್ಷಗಳಿಂದಲೂ ಬೆಂಗಳೂರಿನ ಪೀಣ್ಯದಲ್ಲಿ (Peenya) ನಿಗೂಢವಾಗಿ ನೆಲೆಸಿದ್ದ ಪಾಕ್‌ ದಂಪತಿಯನ್ನು ಬಂಧಿಸಿರುವ ಬೆಂಗಳೂರು ಪೊಲೀಸರು ತನಿಖೆಯಲ್ಲಿ ಹಲವು ಸ್ಫೋಟಕ ಮಾಹಿತಿಗಳನ್ನು ಬಯಲಿಗೆಳೆದಿದ್ದಾರೆ.

    ಇದೇ ಅಕ್ಟೋಬರ್‌ 3ರಂದು ಜಿಗಣಿ ಪೊಲೀಸರ (Jigani Police) ಬಲೆಗೆ ಬಿದ್ದಿದ್ದ ಪಾಕ್‌ ದಂಪತಿಯ ಬಗ್ಗೆ ಇದೀಗ ಬೆಂಗಳೂರು ನಗರ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ದಂಪತಿಯ ಪೂರ್ವಪರ ಮಾಹಿತಿ ಕಲೆ ಹಾಕುತ್ತಿದ್ದಾರೆ. ಪೊಲೀಸರ ತನಿಖೆ ವೇಳೆ ಕೆಲವು ರೋಚಕ ವಿಚಾರಗಳು ಬೆಳಕಿಗೆ ಬಂದಿವೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಬಂಧನವಾಗಿದ್ದ ಶಂಕಿತ ಉಗ್ರನಿಂದ ರಹಸ್ಯ ಸ್ಫೋಟ – ಆ.15ರಂದು ಸ್ಫೋಟಿಸಲು ಇರಿಸಿದ್ದ ಜೀವಂತ IED ವಶ

    ಕಳೆದ 3 ವರ್ಷಗಳಿಂದ ಪೀಣ್ಯದ ಆಂದ್ರಹಳ್ಳಿ ಮುಖ್ಯರಸ್ತೆ ಮನೆಯಲ್ಲಿ ವಾಸವಾಗಿದ್ದ ದಂಪತಿ ನಿಗೂಢವಾಗಿ ನೆಲೆಸಿದ್ದರು. ಮನೆಯಿಂದ ಹೊರಗೆ ಬಾರದೇ ಒಳಗಡೆಯೆ ಇರುತ್ತಿದ್ದರು. ಪಾಕಿಸ್ತಾನ ಮೂಲದ ಸೈಯದ್ ತಾರೀಕ್ ತನ್ನ ಪತ್ನಿ ಹಾಗೂ ಮಗಳೊಂದಿಗೆ ಹೆಸರು ಬದಲಿಸಿಕೊಂಡು ಇಲ್ಲಿ ನೆಲೆಸಿದ್ದ. ಪೊಲೀಸರ ತನಿಖೆ ವೇಳೆ ರಹಸ್ಯವಾಗಿ ನೆಲೆಯೂರಿದ್ದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದ್ರಾಕ್ಷಿ ಬೆಳೆಗಾರರ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆದ ಡಾ.ಕೆ.ಸುಧಾಕರ್‌

    2014ರಲ್ಲಿ ಭಾರತಕ್ಕೆ ಎಂಟ್ರಿಯಾಗಿದ್ದ ಈ ದಂಪತಿ, 2019 ರಲ್ಲಿ ಬೆಂಗಳೂರಿಗೆ ಬಂದಿದ್ದರು. ಹೆಸರು ಬದಲಿಸಿಕೊಂಡು, ನಕಲಿ ಆಧಾರ್‌ ಕಾರ್ಡ್‌ ಸಹ ಮಾಡಿಸಿಕೊಂಡಿದ್ದರು. ಅಂದಿನಿಂದ ಮನೆಯಲ್ಲಿ ಧರ್ಮ ಪ್ರಚಾರ ಮತ್ತು ಧಾರ್ಮಿಕ ಪ್ರಚೋದಕರಾಗಿ ಕೆಲಸ ಮಾಡುತ್ತಿದ್ದರು. ಯೂಟ್ಯೂಬ್‌ನಲ್ಲಿ ಪ್ರಚಾರ ಕಾರ್ಯ ನಡೆಸುತ್ತಾ ಇದ್ದರು. ಖರ್ಚು ವೆಚ್ಚಕ್ಕೆ ಸಂಸ್ಥೆಯೊಂದರಿಂದ ಹಣಕಾಸು ನೆರವು ಬರುತ್ತಿತ್ತು ಎಂಬೆಲ್ಲಾ ಮಾಹಿತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪ್ರವಾಸಿಗರ ಮಿನಿ ಬಸ್ ಏರಿದ ಚಿರತೆ