Tag: bengaluru city

  • ದಿನ ಭವಿಷ್ಯ: 17-10-2025

    ದಿನ ಭವಿಷ್ಯ: 17-10-2025

    ಶ್ರೀ ವಿಶ್ವಾವಸು ನಾಮ ಸಂವತ್ಸರ,
    ದಕ್ಷಿಣಾಯಣ, ಶರದೃತು,
    ಆಶ್ವಯುಜ ಮಾಸ, ಕೃಷ್ಣ ಪಕ್ಷ,
    ಏಕಾದಶಿ/ದ್ವಾದಶಿ, ಶುಕ್ರವಾರ,
    ಮಖ ನಕ್ಷತ್ರ/ಮಪೂರ್ವ ಪಾಲ್ಗುಣಿ ನಕ್ಷತ್ರ

    ರಾಹುಕಾಲ: 10:39 ರಿಂದ 12:08
    ಗುಳಿಕಕಾಲ: 07:41 ರಿಂದ 09:10
    ಯಮಗಂಡಕಾಲ: 03:06 ರಿಂದ 04:35

    ಮೇಷ: ಪಾಲುದಾರಿಕೆಯಲ್ಲಿ ಅಭಿವೃದ್ಧಿ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಕಲಹ, ಪ್ರೀತಿ ಪ್ರೇಮ, ಭಾವನೆಗಳಲ್ಲಿ ತೊಳಲಾಟ.

    ವೃಷಭ: ಮಾನಸಿಕ ಚಂಚಲತೆ, ಬಂಧು ಬಾಂಧವರೊಂದಿಗೆ ಮನಸ್ತಾಪ, ಆಹಾರ ವ್ಯತ್ಯಾಸದಿಂದ ಆರೋಗ್ಯದಲ್ಲಿ ಸಮಸ್ಯೆ, ದುಸ್ವಪ್ನಗಳು, ಸಾಲದ ಚಿಂತೆ.

    ಮಿಥುನ: ಮಕ್ಕಳಿಂದ ಸಹಾಯ, ಗರ್ಭದೋಷ ಸಮಸ್ಯೆ, ಪ್ರಯಾಣದಲ್ಲಿ ಅನಾನುಕೂಲ, ಮಿತ್ರರಿಂದ ಸಹಕಾರ.

    ಕಟಕ: ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಸ್ಥಿರಾಸ್ತಿ ವಿಷಯವಾಗಿ ಮೋಸ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ಸ್ಥಳದಲ್ಲಿ ನಿಂದನೆ.

    ಸಿಂಹ: ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಅವಕಾಶ, ಸ್ತ್ರೀಯರಿಂದ ನೋವು, ಪ್ರಯಾಣದಲ್ಲಿ ಸಮಸ್ಯೆ, ಕೆಲಸ ಕಾರ್ಯಗಳಲ್ಲಿ ಜಯ.

    ಕನ್ಯಾ: ಸ್ನೇಹಿತರಿಗೋಸ್ಕರ ಖರ್ಚು, ಅಧಿಕ ದುಂದು ವೆಚ್ಚ, ಕುಟುಂಬ ಸಹಕಾರದಲ್ಲಿ ಹಿನ್ನಡೆ, ಅಧಿಕ ಒತ್ತಡ ಅಪಮಾನ ಅಪನಿಂದನೆಗಳು.

    ತುಲಾ: ದಾಂಪತ್ಯದಲ್ಲಿ ಕಿರಿಕಿರಿ, ಆರ್ಥಿಕ ಪ್ರಗತಿಯಲ್ಲಿ ಹಿನ್ನಡೆ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಮಾತಿನಿಂದ ಸಮಸ್ಯೆ ಜಾಗ್ರತೆ.

    ವೃಶ್ಚಿಕ: ಸಾಲ ಮಾಡುವ ಪರಿಸ್ಥಿತಿ, ಅನಾರೋಗ್ಯದಿಂದ ಚಿಂತೆ, ಸಂಗಾತಿ ನಡವಳಿಕೆಯಿಂದ ಬೇಸರ, ಪ್ರೀತಿ ಪ್ರೇಮ ಭಾವನೆಗಳಿಗೆ ಪೆಟ್ಟು.

    ಧನಸ್ಸು: ಆರ್ಥಿಕ ಚೇತರಿಕೆ, ಮಕ್ಕಳಿಂದ ಯೋಗ ಫಲಗಳು, ಸಾಲದಿಂದ ಮುಕ್ತಿ ಪಡೆಯಲು ದಾರಿ, ಮಕ್ಕಳ ವಿದ್ಯಾಭ್ಯಾಸದ ಚಿಂತೆ.

    ಮಕರ: ಉದ್ಯೋಗ ಒತ್ತಡ, ದಾಂಪತ್ಯ ಕಲಹ, ಪಾಲುದಾರಿಕೆಯಲ್ಲಿ ಸಮಸ್ಯೆ, ಹೆಣ್ಣು ಮಕ್ಕಳಿಂದ ಸಹಕಾರ.

    ಕುಂಭ: ಮಾಟ ಮಂತ್ರ ತಂತ್ರದ ಆತಂಕ, ಸ್ತ್ರೀಯರಿಂದ ಅಪಮಾನಕ್ಕೆ ಗುರಿಯಾಗುವಿರಿ, ತಾಯಿಯಿಂದ ಆರ್ಥಿಕ ಸಹಕಾರ, ಪಾಲುದಾರಿಕೆಯಲ್ಲಿ ಉತ್ತಮ ವಾತಾವರಣ.

    ಮೀನ: ಆಕಸ್ಮಿಕ ಅಪಘಾತ ಅವಮಾನಗಳು, ಪ್ರಯಾಣದಲ್ಲಿ ವಿಘ್ನ, ಅನಿರೀಕ್ಷಿತ ಧನಾಗಮನ, ಕುಟುಂಬದ ಸಹಕಾರ.

  • ಬೆಂಗಳೂರಿನ ಈ ಭಾಗದಲ್ಲಿ ಜು.21, 22ರಂದು ವಿದ್ಯುತ್‌ ವ್ಯತ್ಯಯ

    ಬೆಂಗಳೂರಿನ ಈ ಭಾಗದಲ್ಲಿ ಜು.21, 22ರಂದು ವಿದ್ಯುತ್‌ ವ್ಯತ್ಯಯ

    ಬೆಂಗಳೂರು: ಕೆಪಿಟಿಸಿಎಲ್ (KPTCL) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ 66/11ಕೆವಿ ಸಹಕಾರನಗರ ಉಪಕೇಂದ್ರ ವ್ಯಾಪ್ತಿಯಲ್ಲಿ ಇದೇ ಜುಲೈ 21 (ಸೋಮವಾರ), ಜು.22 (ಮಂಗಳವಾರ) ಬೆಂಗಳೂರು ನಗರದ ಹಲವೆಡೆ ವಿದ್ಯುತ್‌ ವ್ಯತ್ಯಯ (Power Outage) ಆಗಲಿದೆ.

    ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್‌ (Electricity) ಪೂರೈಕೆಯಲ್ಲಿ ವ್ಯತ್ತಯ ಉಂಟಾಗಲಿದೆ ಎಂದು ಕೆಪಿಟಿಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಜೆಡಿಎಸ್-ಬಿಜೆಪಿ ಸಂಸದರು ಮೋದಿ ಮುಂದೆ ನಿಂತು ಮಾತಾಡೋಕೆ ನಡುಗುತ್ತಾರೆ: ಸಿದ್ದರಾಮಯ್ಯ ವಾಗ್ದಾಳಿ

    ಎಲ್ಲೆಲ್ಲಿ ವಿದ್ಯುತ್‌ ವ್ಯತ್ಯಯ?
    ಬೆಂಗಳೂರು ನಗರದ ಎ ಬ್ಲಾಕ್, ಇ ಬ್ಲಾಕ್, ಬಳ್ಳಾರಿ ಮುಖ್ಯ ರಸ್ತೆ, ಜಿ-ಬ್ಲಾಕ್, ಎಫ್ ಬ್ಲಾಕ್, ತಲಕಾವೇರಿ ಲೇಔಟ್, ಅಮೃತಹಳ್ಳಿ, ಬಿಜಿಎಸ್ ಲೇಔಟ್, ನವ್ಯನಗರ ಬ್ಲಾಕ್, ಶಬರಿ ನಗರ, ಬೈತರಾಯನಪುರ ಜಕ್ಕೂರು ಬಡಾವಣೆ, ಜಿಕೆವಿಕೆ ಲೇಔಟ್, ಜಕ್ಕೂರು ಪ್ಲಾಂಟೇಶನ್, ಯೋಷಾದ ನಗರಾಮೃತಹಳ್ಳಿ, ಅಮೃತಹಳ್ಳಿ ಬಿ ಬ್ಲಾಕ್, ಸಿ ಬ್ಲಾಕ್, ಸಿಕ್ಯುಎಎಲ್ ಲೇಯೋಟ್, ಡಿ ಬ್ಲಾಕ್, ಇ ಬ್ಲಾಕ್, ಸಂಪಿಗೆಹಳ್ಳಿ, ಅಗ್ರಹಾರ ಗ್ರಾಮ, ಜಯಸೂರ್ಯ ಲೇಔಟ್, ವಿಧಾನಸೌಧ ಲೇಔಟ್ ಸಾಯಿಬಾಬಾ ಲೇಔಟ್, ಟೆಲಿಕಾಂ ಲೇಔಟ್, ಎಂಸಿಇಸಿಎಚ್ಎಸ್ ಲೇಔಟ್, ಎಂಸಿಇಸಿಎಚ್ಎಸ್ ಲೇಔಟ್, ಎಂಸಿ ಪಿಎಚ್‌ಎಸ್ ಲೇಔಟ್, ಸೂರ್ಯೋನಗರ, ಅಗ್ರಹಾರ ಲೇಔಟ್, ಕೋಗಿಲು ಲೇಔಟ್, ಶ್ರೀನಿವಾಸಪುರಜಕ್ಕೂರು, ವಿಆರ್‌ಎಲ್‌ ರಸ್ತೆ (ಸಂತೆ ರಸ್ತೆ), ಐಎಎಸ್ ರಸ್ತೆ, ಅರ್ಕಾವತಿ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಆಗಲಿದೆ. ಇದನ್ನೂ ಓದಿ: ಜೆಡಿಎಸ್ ಶಾಸಕರಿಗೆ ಅನುದಾನ ಬಿಡುಗಡೆ ಮಾಡದೇ ರಾಜ್ಯ ಸರ್ಕಾರ ಅನ್ಯಾಯ: ಸುರೇಶ್ ಬಾಬು

  • New Year 2024 – ಪಾನಮತ್ತರಾಗಿ ಬಿದ್ದರೆ ನೇರ ಆಸ್ಪತ್ರೆಗೆ ಶಿಫ್ಟ್‌

    New Year 2024 – ಪಾನಮತ್ತರಾಗಿ ಬಿದ್ದರೆ ನೇರ ಆಸ್ಪತ್ರೆಗೆ ಶಿಫ್ಟ್‌

    ಬೆಂಗಳೂರು: ಸಂಜೆ ಆಗುತ್ತಿದ್ದಂತೆ ಬೆಂಗಳೂರು ನಗರ (Bengaluru City) ಹೊಸ ವರ್ಷವನ್ನು (New Year) ಸ್ವಾಗತಿಸಲು ಸಜ್ಜಾಗುತ್ತಿದೆ.

    ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಇಂದಿರಾನಗರ, ಕೋರಮಂಗಲದಲ್ಲಿ ನಿಧಾನವಾಗಿ ಜನ ಸೇರುತ್ತಿದ್ದಾರೆ.

    ಕೋರಮಂಗಲದಲ್ಲಿ ಸಂಭ್ರಮಾಚರಣೆ ವೇಳೆ ಪಾನಮತ್ತರಾಗಿ ಪ್ರಜ್ಞೆ ತಪ್ಪುವವರಿಗೆ ಖಾಸಗಿ ಆಸ್ಪತ್ರೆಯಲ್ಲಿ (Private Hospital) ಬೆಡ್ ಬುಕ್ಕಿಂಗ್ (Bed Booking) ಮಾಡಲಾಗಿದೆ. ಪಾನಮತ್ತರಾಗಿ ಬಿದ್ದವರನ್ನು ಆಸ್ಪತ್ರೆಗೆ ಸಾಗಿಸಲು ಅಂಬುಲೆನ್ಸ್‌ (Ambulance) ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ಪಬ್ಲಿಕ್ ಟಿವಿಗೆ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ ಬಾಬಾ ತಿಳಿಸಿದ್ದಾರೆ.  ಇದನ್ನೂ ಓದಿ: ಸಿದ್ದರಾಮಯ್ಯ, ಕಾಂಗ್ರೆಸ್‌ನವರ ರಕ್ತದ ಕಣಕಣದಲ್ಲೂ ಹಿಂದೂ ವಿರೋಧಿ ಭಾವನೆ: ಆರ್ ಅಶೋಕ್

     

    ಇಂದಿರಾನಗರದ 80 ಫೀಟ್, 100 ಫೀಟ್ ರಸ್ತೆಗಳು ಜಗಮಗವಾಗುತ್ತಿದ್ದು, ಪ್ರತಿ ರಸ್ತೆಯಲ್ಲೂ ಮಹಿಳಾ ಸುರಕ್ಷತಾ ತಾಣ ನಿರ್ಮಿಸಲಾಗಿದೆ.

    ಮಹಿಳಾ‌ ಸುರಕ್ಷತೆಗೆ ಈ ಬಾರಿ ಪೊಲೀಸ್ ಇಲಾಖೆ ಹೆಚ್ಚು ಒತ್ತು ನೀಡಿದೆ. ಮಹಿಳಾ ಸುರಕ್ಷತೆಗಾಗಿ ಐ ಲ್ಯಾಂಡ್ ಸ್ಥಾಪನೆ ಮಾಡಿ ಯಾವುದೇ ಅಹಿತಕರ ಘಟನೆ‌ ನಡೆಯದಂತೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ರಸ್ತೆಯ ಎರಡೂ ಕಡೆ ಫೋಕಸ್ ಲೈಟ್‌ಗಳನ್ನು ಅಳವಡಿಸಲಾಗಿದೆ.

     

  • ಬೆಂಗ್ಳೂರಿನಲ್ಲಿ ನಿಲ್ಲದ ವೀಲ್ಹಿಂಗ್ ಪುಂಡರ ಹಾವಳಿ – ಪೊಲೀಸರಿಗೂ ಡೋಂಟ್‌ ಕೇರ್‌

    ಬೆಂಗ್ಳೂರಿನಲ್ಲಿ ನಿಲ್ಲದ ವೀಲ್ಹಿಂಗ್ ಪುಂಡರ ಹಾವಳಿ – ಪೊಲೀಸರಿಗೂ ಡೋಂಟ್‌ ಕೇರ್‌

    ಬೆಂಗಳೂರು: ಬೈಕ್ ಕ್ರೇಜ್ ಅನ್ನೋದು ಎಲ್ಲ ಯುವಕರಿಗೂ ಇದ್ದೆ ಇರುತ್ತೆ. ತಂದೆ ತಾಯಿ ಬಳಿ ಹೇಗೋ ಕಾಡಿ ಬೇಡಿ ಬೈಕ್ ತಗೆಸಿಕೊಳ್ಳುತ್ತಾರೆ. ಆದರೇ ಅದರಲ್ಲಿ ಅದೆಷ್ಟೋ ಯುವಕರು ಬೈಕ್ ನಲ್ಲಿ ಸ್ಟಂಟ್ಸ್ ಮಾಡೋ ಹುಚ್ಚು ಸಾಹಸಕ್ಕೆ ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಅದ್ರೂ ಇನ್ನೂ ಬುದ್ಧಿ ಕಲಿಯದ ಇತಂಹ ಯುವಕರು ವೀಲ್ಹಿಂಗ್ ಮಾಡಿ ಬೇರೆ ವಾಹನ ಸವಾರರಿಗೂ ಕಿರಿಕಿರಿ ಮಾಡ್ತಿದ್ದಾರೆ.

    ಪುಂಡ ಯುವಕರು ವೀಲ್ಹಿಂಗ್ ಮಾಡೋ ಸಮಯದಲ್ಲಿ ಸಾರ್ವಜನಿಕರು ಆರ್ನ್ ಸಹ ಮಾಡುವಂತಿಲ್ಲ. ಮಾಡಿದ್ರೂ ಅವರ ವಿರುದ್ಧವೇ ಮುಗಿ ಬೀಳ್ತಾರೆ. ದನ್ನೂ ಓದಿ: ಕಾರಿಗೆ ಡಿಕ್ಕಿ ಹೊಡೆದಿದ್ದಕ್ಕೆ ರಿಕ್ಷಾ ಚಾಲಕನ ಕಾಲರ್ ಎಳೆದಾಡಿ ಕಪಾಳಮೋಕ್ಷ ಮಾಡಿದ್ಲು

    ಪೊಲೀಸರ ಭಯವಿಲ್ಲದೇ ವೀಲ್ಹಿಂಗ್‌: ಬೈಕ್‌ಗಳಿಗೆ ಎರಡು ವೀಲ್ ಕೊಟ್ಟಿರೋದು ಯಾಕೇ ಅನ್ನೋ ಪ್ರಶ್ನೆ ಇತಂಹ ಯುವಕರು ಬೈಕ್ ಓಡಿಸುವಾಗ ಮೂಡದೇ ಇರದು. ತಮ್ಮ ಹುಚ್ಚಾಟಕ್ಕೆ ಅಕ್ಕಪಕ್ಕ ಬರೋ ವಾಹನ ಸವಾರರಿಗೂ ಆತಂಕ ಮೂಡಿಸುತ್ತಾ ಬೈಕ್ ರೈಡ್ ಮಾಡ್ತಾರೆ. ವೀಲ್ಹಿಂಗ್ ಮಾಡಿ ಅದೆಷ್ಟೋ ಯುವಕರು ಕೈಕಾಲು ಮುರಿದುಕೊಂಡಿದ್ದಾರೆ, ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇನ್ನೂ ಬೇರೆ ವಾಹನಗಳಿಗೂ ಸಮಸ್ಯೆ ಉಂಟುಮಾಡಿದ್ದಾರೆ.

    ಹೌದು ನಿನ್ನೆ ಮಧ್ಯಾಹ್ನ ಯಶವಂತಪುರದಿಂದ ವಿಜಯನಗರಕ್ಕೆ ಹೋಗುವ ವೆಸ್ಟ್ ಆಫ್ ಗಾರ್ಡ್ ರೋಡ್ ನಲ್ಲಿ ಎರಡು ಬೈಕ್ ಗಳಲ್ಲಿ ಹೋಗ್ತಿದ್ದ ನಾಲ್ವರು ಯುವಕರ ತಂಡ ವೀಲ್ಹಿಂಗ್ ಮಾಡ್ತಾ ರಸ್ತೆಯಲ್ಲಿ ಹುಚ್ಚಾಟ ಆಡ್ತ ಹೋಗಿದ್ದಾರೆ. ಇದನ್ನೂ ಓದಿ: 5,000 ರೂಪಾಯಿಯಿಂದ ಕೋಟ್ಯಧಿಪತಿಯಾದ ಜುಂಜುನ್‌ವಾಲ ಜೀವನ ರೋಚಕ

    ಇತಂಹ ವೀಲ್ಹಿಂಗ್ ನಿಂದ ಅವ್ರ ಜೀವಕ್ಕೆ ಮಾತ್ರವಲ್ಲ ರಸ್ತೆಯಲ್ಲಿ ಸಂಚಾರ ಮಾಡೋ ಇತರ ವಾಹನ ಸವಾರರಿಗೂ ಜೀವ ಭಯ ಸೃಷ್ಟಿಯಾಗ್ತಿದೆ. ಹೌದು ಹೀಗೆ ವೀಲ್ಹಿಂಗ್ ಮಾಡೋದನ್ನ ತಡೆಯಲು ಪೊಲೀಸ್ರು ಸಾಕಷ್ಟು ಕ್ರಮ ಕೈಗೊಂಡಿದ್ರು. ಇತಂಹ ಯುವಕರು ಮಾತ್ರ ಯಾವುದಕ್ಕೂ ಕ್ಯಾರೇ ಎನ್ನುತ್ತಿಲ್ಲ. ಇವರಿಗೆ ಪೊಲೀಸರು ಫೈನ್ ಹಾಕೋದರ ಜೊತೆಗೆ ಕಠಿಣ ಶಿಕ್ಷೆ ನೋಡೋ ಕಾನೂನು ಜಾರಿಗೆ ತಂದ್ರೇ ಆಗಲಾದ್ರು ಕಡಿವಾಣ ಬೀಳಬಹುದು ಅನ್ನೋದು ಸಾರ್ವಜನಿಕರ ಅಭಿಪ್ರಾಯವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ನಾಳೆಯಿಂದ ಲಾಲ್‌ಬಾಗ್‌ನಲ್ಲಿ ಅಪ್ಪು ನೆನಪಿನ ಫಲಪುಷ್ಪ ಪ್ರದರ್ಶನ

    ನಾಳೆಯಿಂದ ಲಾಲ್‌ಬಾಗ್‌ನಲ್ಲಿ ಅಪ್ಪು ನೆನಪಿನ ಫಲಪುಷ್ಪ ಪ್ರದರ್ಶನ

    ಬೆಂಗಳೂರು: ನಾಳೆಯಿಂದ 10 ದಿನಗಳ ಕಾಲ ಲಾಲ್‌ಬಾಗ್‌ನಲ್ಲಿ ಪುಷ್ಪ ಲೋಕ ಅನಾವರಣಗೊಳ್ಳಲಿದೆ. ದಿವಂಗತ ಡಾ.ಪುನೀತ್ ರಾಜ್‌ಕುಮಾರ್ ನೆನಪಿನಾರ್ಥವಾಗಿ ಈ ಬಾರಿ ಫ್ಲವರ್ ಶೋ ನಡೆಯುತ್ತಿದ್ದು, 10 ಲಕ್ಷಕ್ಕೂ ಹೆಚ್ಚು ಹೂವುಗಳಿಂದ ವಿವಿಧ ಆಕೃತಿಗಳನ್ನು ಸಿಂಗರಿಸಲಾಗಿದೆ.

    ಸಾಂದರ್ಭಿಕ ಚಿತ್ರ

    ಗಾಜಿನಮನೆಯಲ್ಲಿ ಮೈಸೂರಿನ ಶಕ್ತಿಧಾಮ, ಗಾಜನೂರು ಮನೆ, ಡಾ.ರಾಜ್, ಡಾ.ಪುನೀತ್ ರಾಜ್‌ಕುಮಾರ್ ಪ್ರತಿಮೆಗಳನ್ನು ಪುಷ್ಪಗಳಲ್ಲಿ ಅರಳಿಸಲಾಗಿದೆ. ನಾಳೆಯಿಂದ ಆಗಸ್ಟ್ 15ರ ವರೆಗೂ ಫಲಪುಷ್ಪ ಪ್ರದರ್ಶನ ಇರಲಿದ್ದು, ಪ್ರತಿದಿನ ನಿತ್ಯ 12 ಗಂಟೆಗಳ ಕಾಲ ಸಾರ್ವಜನಿಕರ ವೀಕ್ಷಣೆಗೆ ಅವಕಾಶವಿರಲಿದೆ. ಇದನ್ನೂ ಓದಿ: ಅಥ್ಲೆಟಿಕ್ ಚಾಂಪಿಯನ್‍ಶಿಪ್‍ನಲ್ಲಿ ಬೆಳ್ಳಿ ಗೆದ್ದ ಪ್ರಿಯಾ ಮೋಹನ್‍ಗೆ 5 ಲಕ್ಷ ನಗದು ಪುರಸ್ಕಾರ: ನಾರಾಯಣಗೌಡ

    ಸಾಮಾನ್ಯ ದಿನಗಳಲ್ಲಿ 70 ರೂಪಾಯಿ, ರಜಾ ದಿನಗಳಲ್ಲಿ 75 ರೂ.ಪಾಯಿ ಪ್ರವೇಶ ಶುಲ್ಕ ಇದೆ ಎಂದು ತೋಟಗಾರಿಕಾ ಇಲಾಖೆ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದ ಹವಾಮಾನ ವರದಿ: 27-12-2021

    ರಾಜ್ಯದ ಹವಾಮಾನ ವರದಿ: 27-12-2021

    ದಿನದಂತೆ ಇಂದು ಸಹ ಹವಾಮಾನ ಮುಂದುವರಿಯಲಿದೆ. ಮಧ್ಯಾಹ್ನದ ವೇಳೆ ಶುಷ್ಕ ಹವಾಮಾನ ಇರಲಿದ್ದು, ಬೆಳಗ್ಗೆ ಹಾಗೂ ಸಂಜೆ ಶೀತಗಾಳಿ ಜನರನ್ನು ನಡುಗಿಸುತ್ತಿದೆ. ಕರ್ನಾಟಕದಲ್ಲಿ ಮಳೆಗಾಲ ಮುಗಿದು ಚಳಿಗಾಲ ಆವರಿಸಿದೆ. ಉತ್ತರ ಭಾರತದಿಂದ ದಕ್ಷಿಣ ಭಾರತದತ್ತ ಶೀತಗಾಳಿ ಬೀಸತೊಡಗಿದ್ದು, ಬೆಂಗಳೂರು, ಮಲೆನಾಡು, ಕರಾವಳಿ ಹಾಗೂ ಉತ್ತರ ಕರ್ನಾಟಕದಲ್ಲೂ ದಾಖಲೆಯ ಚಳಿ ಉಂಟಾಗಿದೆ. ವರ್ಷಾಂತ್ಯಕ್ಕೆ ರಾಜ್ಯದ ಹಲವು ಭಾಗಗಳಲ್ಲಿ ಚಳಿ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 15 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ, ಉಡುಪಿ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಇಂದಿನ ಹವಾಮಾನ ವರದಿ:
    ಬೆಂಗಳೂರು: 27-15
    ಮಂಗಳೂರು: 31-22
    ಶಿವಮೊಗ್ಗ: 32-16
    ಬೆಳಗಾವಿ: 31-16
    ಮೈಸೂರು: 29-16

    ಮಂಡ್ಯ: 29-15
    ರಾಮನಗರ: 21-11
    ಮಡಿಕೇರಿ: 28-13
    ಹಾಸನ: 28-14
    ಚಾಮರಾಜನಗರ: 29-16

    ಚಿಕ್ಕಬಳ್ಳಾಪುರ: 28-14
    ಕೋಲಾರ: 27-15
    ತುಮಕೂರು: 29-15
    ಉಡುಪಿ: 31-22
    ಕಾರವಾರ: 31-22

    ಚಿಕ್ಕಮಗಳೂರು: 29-14
    ದಾವಣಗೆರೆ: 32-17
    ಚಿತ್ರದುರ್ಗ: 30-16
    ಹಾವೇರಿ: 32-17
    ಬಳ್ಳಾರಿ: 32-17

    ಗದಗ: 31-17
    ಕೊಪ್ಪಳ: 31-17
    ರಾಯಚೂರು: 32-18
    ಯಾದಗಿರಿ: 31-17

    ವಿಜಯಪುರ: 31-18
    ಬೀದರ್: 29-17
    ಕಲಬುರಗಿ: 31-17
    ಬಾಗಲಕೋಟೆ: 32-17

  • ಅಂದು ಆಡಿ ಕಾರಲ್ಲಿ ಬಂದ ಕೆಜಿಎಫ್ ಬಾಬು, ಇಂದು ಸೋತು ಆಟೋ ಹತ್ತಿ ಹೋದ್ರು..!

    ಅಂದು ಆಡಿ ಕಾರಲ್ಲಿ ಬಂದ ಕೆಜಿಎಫ್ ಬಾಬು, ಇಂದು ಸೋತು ಆಟೋ ಹತ್ತಿ ಹೋದ್ರು..!

    ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ಗೆ ನಡೆದ ಚುನಾವಣೆಯಲ್ಲಿ ಬೆಂಗಳೂರು ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಚ್.ಎಸ್.ಗೋಪಿನಾಥ್ ರೆಡ್ಡಿ ಗೆಲುವು ಸಾಧಿಸಿದ್ದಾರೆ. ಹೀನಾಯ ಸೋಲು ಕಂಡ ಕೆಜಿಎಫ್ ಬಾಬು ಆಟೋ ಹತ್ತಿ ಮನೆಗೆ ತೆರಳಿದರು.

    1,277 ಮತಗಳ ಅಂತರದಿಂದ ಗೋಪಿನಾಥ್ ರೆಡ್ಡಿ ಗೆಲುವು ಸಾಧಿಸಿದ್ದು, ಕೆಜಿಎಫ್ ಬಾಬು ಸೋಲನುಭವಿಸಿದ್ದಾರೆ. ಇವರು 830 ಮತಗಳನ್ನಷ್ಟೇ ಪಡೆಯಲು ಶಕ್ತರಾದರು. ಒಟ್ಟು 2057 ಮತಗಳು ಚಲಾವಣೆಯಾಗಿದ್ದು, 13 ಮತಗಳು ತಿರಸ್ಕೃತಗೊಂಡಿವೆ. ಇದನ್ನೂ ಓದಿ: 1,743 ಕೋಟಿ ಆಸ್ತಿಯ ಒಡೆಯ ಕೆಜಿಎಫ್‌ ಬಾಬುಗೆ ಸೋಲು

    ನಾಮಪತ್ರ ಸಲ್ಲಿಕೆ ವೇಳೆ ಐಷರಾಮಿ ಕಾರಲ್ಲಿ (ಆಡಿ ಕಾರು) ಬಂದಿದ್ದ ಕೆಜಿಎಫ್ ಬಾಬು, ಸೋಲಿನ ನಂತರ ಯಾರ ಬಳಿಯೂ ಮಾತನಾಡದೇ ಕೈ ಮುಗಿದು ಆಟೋ ಹತ್ತಿ ತೆರಳಿದರು. ಬೆಂಬಲಿಗರು, ಕಾರ್ಯಕರ್ತರು ಯಾರೂ ಇಲ್ಲದೇ ಒಬ್ಬಂಟಿಯಾಗಿ ತೆರಳಿದರು. ಇದನ್ನೂ ಓದಿ: ಕೊಂಡಯ್ಯಗೆ ಸೋಲು – ಬಳ್ಳಾರಿ, ಕೊಡಗು, ಉತ್ತರ ಕನ್ನಡದಲ್ಲಿ ಬಿಜೆಪಿಗೆ ಗೆಲುವು