Tag: Bengaluru Bomb Blast

  • ನಾಲ್ಕು ಹೋಟೆಲ್‌.. ನಾನಾ ವೇಷ; ಪಶ್ಚಿಮ ಬಂಗಾಳದಲ್ಲಿ ಕೆಫೆ ಬಾಂಬರ್‌ಗಳ ಕಣ್ಣಾಮುಚ್ಚಾಲೆ ಆಟ!

    ನಾಲ್ಕು ಹೋಟೆಲ್‌.. ನಾನಾ ವೇಷ; ಪಶ್ಚಿಮ ಬಂಗಾಳದಲ್ಲಿ ಕೆಫೆ ಬಾಂಬರ್‌ಗಳ ಕಣ್ಣಾಮುಚ್ಚಾಲೆ ಆಟ!

    – ಬಂಗಾಳದ ಹೋಟೆಲ್‌ನಲ್ಲಿ ಶಂಕಿತ ಉಗ್ರರು ಲಾಕ್‌ ಆಗಿದ್ಹೇಗೆ?

    ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್‌ (Rameshwaram Cafe) ಸ್ಫೋಟ ಪ್ರಕರಣದಲ್ಲಿ ಪಶ್ಚಿಮ ಬಂಗಾಳದಲ್ಲಿ (West Bengal) ತಲೆಮರೆಸಿಕೊಂಡಿದ್ದ ಶಂಕಿತ ಉಗ್ರರು ಪೊಲೀಸರ ಕಣ್ತಪ್ಪಿಸಲು ನಾನಾ ತಂತ್ರಗಳನ್ನು ರೂಪಿಸಿದ್ದರು. ಪಶ್ಚಿಮ ಬಂಗಾಳದ 4 ಹೋಟೆಲ್‌ಗಳಲ್ಲಿ ಒಂದೊಂದು ಹೆಸರು, ಕಾರಣ ನೀಡಿ ವಾಸ್ತವ್ಯ ಹೂಡಿದ್ದರು.

    ಹೋಟೆಲ್‌ನಲ್ಲಿ ಉಳಿದುಕೊಳ್ಳಲು ಬೇರೆ ಬೇರೆ ಹೆಸರುಗಳನ್ನು ಬಳಸಿಕೊಂಡಿದ್ದರು. ಅದರಲ್ಲಿ ಕಲಬುರಗಿಯ ವ್ಯಕ್ತಿಯೊಬ್ಬರ ಹೆಸರು ಕೂಡ ಇದೆ. ಹಾಗಾದ್ರೆ, ಎಲ್ಲೆಲ್ಲಿ, ಏನೇನು ಹೆಸರು ನೀಡಿ ಉಳಿದುಕೊಳ್ಳುತ್ತಿದ್ದರು? ಎನ್‌ಐಎ ಅಧಿಕಾರಿಗಳಿಗೆ ಲಾಕ್‌ ಆಗಿದ್ದು ಹೇಗೆ ಎಂಬ ಇಂಟರೆಸ್ಟಿಂಗ್‌ ಸ್ಟೋರಿ ಇಲ್ಲಿದೆ. ಇದನ್ನೂ ಓದಿ:  ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ – ಶಂಕಿತರು ಎನ್‍ಐಎ ಕಸ್ಟಡಿಗೆ

    1) ಮಾರ್ಚ್‌ 13: ಶಂಕಿತ ಉಗ್ರರು ಲೆನಿನ್‌ ಸರಾನಿ ಬಳಿಯ ಹೋಟೆಲ್‌ ಪ್ಯಾರಡೈಸ್‌ನಲ್ಲಿ ಮೊದಲು ಉಳಿದುಕೊಂಡಿದ್ದರು. 700 ರೂ. ರೂಮ್‌ ಬಾಡಿಗೆಯಾಗಿ ಪಾವತಿಸಿದ್ದರು. ಡಾರ್ಜಿಲಿಂಗ್‌ನಿಂದ ಚೆನ್ನೈಗೆ ಹೊರಟಿರುವ ಪ್ರವಾಸಿಗರು ಎಂದು ಹೋಟೆಲ್‌ ದಾಖಲೆಗಳಲ್ಲಿ ನಮೂದಿಸಿದ್ದಾರೆ. ವಿಘ್ನೇಶ್‌ ಎಂದು ಹೆಸರು ಬರೆದು ನಂತರ ಅಳಿಸಿ ಅನ್ಮೋಲ್‌ ಕುಲಕರ್ಣಿ ಎಂದು ನಮೂದು ಮಾಡಿದ್ದಾರೆ. ಮಹಾರಾಷ್ಟ್ರದ ಥಾಣೆಯ ಯುಶಾ ಶಾನವಾಜ್‌ ಪಟೇಲ್‌ ಹಾಗೂ ಕರ್ನಾಟಕ ಕಲಬುರಗಿಯ ಅನ್ಮೋಲ್‌ ಕುಲಕರ್ಣಿ ಎಂಬ ದಾಖಲೆ ಇರುವ ಆಧಾರ್‌ ಸಲ್ಲಿಕೆ ಮಾಡಿದ್ದರು.

    2) ನಂತರ ಡೈಮಂಡ್‌ ಹಾರ್ಬರ್‌ ರಸ್ತೆ ಬಳಿಕ ಗಾರ್ಡನ್‌ ಗೆಸ್ಟ್‌ ಹೌಸ್‌ನಲ್ಲಿ ಸಂಜು ಅಗರ್ವಾಲ್‌ (36) ಎಂದು ಹೆಸರು ನಮೂದಿಸಿದ್ದರು. ಸ್ನೇಹಿತನ ಜೊತೆ ಜಮ್ಮು-ಕಾಶ್ಮೀರದಿಂದ ಚಿಕಿತ್ಸೆಗೆ ಬಂದಿದ್ದೇವೆ. ಇಲ್ಲಿಂದ ನಾವು ಮತ್ತೆ ಜಾರ್ಖಂಡ್‌ಗೆ ಹೋಗಬೇಕು. ಈ ಗೆಸ್ಟ್‌ಹೌಸ್‌ನಲ್ಲಿದ್ದ ವೇಳೆ ಲೋಕಲ್‌ ಮಾರ್ಕೆಟ್‌ಗೆ ತೆರಳಿದ್ದರು. ಲಿಫ್ಟ್‌ ಇದ್ದರೂ ಪ್ರತಿ ಬಾರಿ ಸ್ಟೇರ್‌ಕೇಸ್‌ ಮೂಲಕವೇ ಓಡಾಡುತ್ತಿದ್ದರು. ಇದನ್ನೂ ಓದಿ: ಬೆಂಗಳೂರು ಕೆಫೆ ಬ್ಲಾಸ್ಟ್‌ ಪ್ರಕರಣ; ಶಂಕಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ ಎನ್‌ಐಎ

    3) ಇಕ್ಬಾಲ್‌ಪುರದ ಡ್ರೀಮ್‌ ಗೆಸ್ಟ್‌ ಹೌಸ್‌ಗೆ ಮಾರ್ಚ್‌ 25 ರಂದು ಬಂದಿದ್ದರು. 1000 ರೂ. ಬಾಡಿಗೆ ನೀಡಿ ಉಳಿದುಕೊಂಡಿದ್ದರು. ನಂತರ ಮಾ.28 ರಂದು ಹೋಟೆಲ್‌ ರೂಂ ಖಾಲಿ ಮಾಡಿದ್ದರು. ಪ್ರವಾಸಿಗರ ಸೋಗಿನಲ್ಲಿ ರೂಂ ಬುಕ್‌ ಮಾಡಿದ್ದ ಇವರು ಬಾಡಿಗೆಯನ್ನು ನಗದು ಮೂಕಲವೇ ಪಾವತಿಸಿದ್ದರು.

    4) ದಿಘಾ ಎಂಬ ಸ್ಥಳದ ಆಯುಷ್‌ ಇಂಟರ್‌ನ್ಯಾಷನಲ್‌ ಹೋಟೆಲ್‌ಗೆ ಏ.10 ರಂದು ಶಂಕಿತರು ಎಂಟ್ರಿ ಕೊಟ್ಟಿದ್ದರು. ಇಲ್ಲಿ 3ನೇ ಮಹಡಿಯ ರೂಂ ನಂಬರ್‌ 404 ರಲ್ಲಿ ವಾಸ್ತವ್ಯ ಹೂಡಿದ್ದರು. ಖಚಿತ ಸುಳಿವಿನ ಮೇರೆಗೆ ಎನ್‌ಐಎ ಅಧಿಕಾರಿಗಳು ಹೋಟೆಲ್‌ಗೆ ಎಂಟ್ರಿ ಕೊಟ್ಟರು. ಅಧಿಕಾರಿಗಳು ರೂಂ ನಂಬರ್‌ 404ರ ಎದುರಿನ ರೂಂ ಬುಕ್‌ ಮಾಡಿದ್ದರು. ತಡರಾತ್ರಿ ಪ.ಬಂಗಾಳ ಪೊಲೀಸರ ಜೊತೆ ಸೇರಿ ಎನ್‌ಐಎ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಇದನ್ನೂ ಓದಿ: ಲಾಡ್ಜ್‌ಗಳಲ್ಲಿ ತಂಗಲು ಕಲಬುರಗಿ ಯುವಕನ ಆಧಾರ್ ನಕಲು ಮಾಡಿದ್ದ ಬಾಂಬರ್; ಸ್ಫೋಟಕ ರಹಸ್ಯ ಬಯಲು

  • ದೀದಿ ಆಡಳಿತದ ಬಂಗಾಳ ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗ: ರಾಮೇಶ್ವರಂ ಕೆಫೆ ಬಾಂಬರ್‌ ಅರೆಸ್ಟ್‌ ಬಗ್ಗೆ ಅಮಿತ್‌ ಮಾಳವಿಯ ಮಾತು

    ದೀದಿ ಆಡಳಿತದ ಬಂಗಾಳ ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗ: ರಾಮೇಶ್ವರಂ ಕೆಫೆ ಬಾಂಬರ್‌ ಅರೆಸ್ಟ್‌ ಬಗ್ಗೆ ಅಮಿತ್‌ ಮಾಳವಿಯ ಮಾತು

    ನವದೆಹಲಿ: ಮಮತಾ ಬ್ಯಾನರ್ಜಿ (Mamata Banerjee) ಆಡಳಿತದಲ್ಲಿ ಭಯೋತ್ಪಾದಕರಿಗೆ ಪಶ್ಚಿಮ ಬಂಗಾಳ (West Bengal) ಸುರಕ್ಷಿತ ಸ್ವರ್ಗವಾಗಿದೆ ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವಿಯ (Amit Malviya) ಗಂಭೀರ ಆರೋಪ ಮಾಡಿದ್ದಾರೆ.

    ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್‌ (Rameshwaram Cafe Blast) ಪ್ರಕರಣದ ಬಾಂಬರ್‌ ಪಶ್ಚಿಮ ಬಂಗಾಳದಲ್ಲಿ ಬಂಧನಕ್ಕೊಳಗಾಗಿರುವ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿದ ಅಮಿತ್‌, ಸ್ಫೋಟಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಕೊಲ್ಕತ್ತಾದಲ್ಲಿ ಬಂಧಿಸಲಾಗಿದೆ. ದುರದೃಷ್ಟವಶಾತ್ ಮಮತಾ ಬ್ಯಾನರ್ಜಿ ಆಡಳಿತದಲ್ಲಿ ಭಯೋತ್ಪಾದಕರಿಗೆ ಪ.ಬಂಗಾಳ ಸುರಕ್ಷಿತ ಸ್ವರ್ಗವಾಗಿದೆ ಎಂದು ದೀದಿ ಸರ್ಕಾರವನ್ನು ಟೀಕಿಸಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬರ್ ಪಶ್ಚಿಮ ಬಂಗಾಳದಲ್ಲಿ ಅರೆಸ್ಟ್

    ಅಮಿತ್ ಮಾಳವಿಯ ಟೀಕೆಗೆ ಬಂಗಾಳ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳವು ಎಂದಿಗೂ ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗವಾಗಿಲ್ಲ. ರಾಜ್ಯ ಪೊಲೀಸರು ತನ್ನ ಜನರನ್ನು ಕೆಟ್ಟ ಚಟುವಟಿಕೆಗಳಿಂದ ಸುರಕ್ಷಿತವಾಗಿರಿಸುವಲ್ಲಿ ಸದಾ ಜಾಗರೂಕತೆಯಿಂದ ಕೆಲಸ ಮಾಡುತ್ತಿದ್ದಾರೆ. ಅಸತ್ಯವು ಅತ್ಯಂತ ಕೆಟ್ಟದಾಗಿದೆ. ಆರೋಪಿಗಳ ಬಂಧನಕ್ಕೆ ಬಂಗಾಳ ಪೊಲೀಸರೂ ಕೆಲಸ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಶ್ಚಿಮ ಬಂಗಾಳ ಪೊಲೀಸರು ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳ ಜಂಟಿ ಕಾರ್ಯಾಚರಣೆಯಲ್ಲಿ ಪುರ್ಬಾ ಮೇದಿನಿಪುರದಿಂದ ಆರೋಪಿಗಳನ್ನು ಬಂಧಿಸಲಾಗಿದೆ. ಪಶ್ಚಿಮ ಬಂಗಾಳ ಸುರಕ್ಷಿತವಾಗಿಲ್ಲ ಎಂಬ ಬಿಜೆಪಿ ಆರೋಪಕ್ಕೆ ಸಿಎಂ ಮಮತಾ ಬ್ಯಾನರ್ಜಿ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣ- ತಲೆಮರೆಸಿಕೊಂಡಿದ್ದ ಇಬ್ಬರ ಬಂಧನ

    ಕೂಚ್‌ಬೆಹಾರ್‌ನಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಆ ಜನರು ಬಂಗಾಳ ಸುರಕ್ಷಿತವಲ್ಲ ಎಂದು ಹೇಳುತ್ತಾರೆ. ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ ಮತ್ತು ದೆಹಲಿ ಸುರಕ್ಷಿತವಾಗಿದೆಯೇ? ಅವರು ಏನು ಕೆಲಸ ಮಾಡಿದ್ದಾರೆಂದು ಅವರನ್ನು ಕೇಳಿ ಎಂದು ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.

  • ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಕೇಸ್‌ – ಓರ್ವ ವಶಕ್ಕೆ

    ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಕೇಸ್‌ – ಓರ್ವ ವಶಕ್ಕೆ

    ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣಕ್ಕೆ (Rameshwaram Cafe Blast Case) ಸಂಬಂಧಿಸಿದಂತೆ ಓರ್ವನನ್ನು ವಶಕ್ಕೆ ಪಡೆಯಲಾಗಿದೆ.

    ಕೆಫೆಯ ಒಳಗಡೆ ಸ್ಫೋಟಕವನ್ನು ಇರಿಸಿದ ಬಳಿಕ ಬಾಂಬರ್‌ ಬೈಕ್‌ನಲ್ಲಿ (Bike) ತೆರಳಿದ್ದ. ಬೈಕ್‌ ನಂಬರ್‌ ಆಧಾರಿಸಿ ಮಾಲೀಕನನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂಬ ವಿಚಾರ ಪೊಲೀಸ್‌ ಮೂಲಗಳಿಂದ ಬಂದಿದೆ.

     

    ಕಪ್ಪು ಬ್ಯಾಗ್ (Black Bag) ಬೆನ್ನಿಗೆ ಹಾಕಿಕೊಂಡು ಹೋಟೆಲಿಗೆ ಬಂದಿದ್ದ ಬಾಂಬರ್ ತಿಂಡಿ ತಿಂದ ಬಳಿಕ ಹ್ಯಾಂಡ್‌ವಾಶ್‌ ಮಾಡುವ ಜಾಗದಲ್ಲಿ ಬ್ಯಾಗ್‌ ಇಟ್ಟು ಹೋಗಿದ್ದ. ಸಿಸಿಟಿವಿಯಲ್ಲಿ(CCTV) ಆರೋಪಿಯ ಪ್ರತಿಯೊಂದು ಚಲನವಲನ ಸೆರೆಯಾಗಿದೆ. ಈ ದೃಶ್ಯವನ್ನು ಆಧಾರಿಸಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಇದನ್ನೂ ಓದಿ: ರವೆ ಇಡ್ಲಿ ತಿಂದು ಬಾಂಬ್‌ ಇಟ್ಟ ಬಾಂಬರ್‌ – ಡಿಕೆಶಿ

     

    ಬಾಂಬ್ ಬ್ಲಾಸ್ಟ್ ಸಮಯ
    11:35 – ಹೋಟೆಲ್‌ಗೆ ಬಾಂಬರ್‌ ಆಗಮನ
    11:35 – ಕ್ಯಾಶ್ ಕೌಂಟರ್ ಅಲ್ಲಿ ರವೆ ಇಡ್ಲಿ ಟೋಕನ್‌ ಖರೀದಿ
    11:42 – ಇಡ್ಲಿ ತಿಂದು ಕೈ ತೊಳೆಯುವ ಜಾಗಕ್ಕೆ ಬಂದ ಆರೋಪಿ
    11:44 – ಕೈತೊಳೆಯುವ ಜಾಗದಲ್ಲೇ ಬ್ಯಾಗ್ ಇರಿಸಿ ಪರಾರಿ
    12:55 – ಬಾಂಬ್‌ ಸ್ಫೋಟ

     

  • ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ – ಗಾಯಗೊಂಡವರ ಪೂರ್ಣ ವಿವರ ಓದಿ

    ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ – ಗಾಯಗೊಂಡವರ ಪೂರ್ಣ ವಿವರ ಓದಿ

    ಬೆಂಗಳೂರು: ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯ (Rameshwaram Cafe) ಗ್ರಾಹಕರ ಏರಿಯಾದಲ್ಲಿ ಬಾಂಬ್‌ ಸ್ಫೋಟಗೊಂಡು (Bengaluru Bomb Blast) 9 ಮಂದಿ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಶುಕ್ರವಾರ ಮಧ್ಯಾಹ್ನ 12:55ಕ್ಕೆ 10 ಸೆಕಂಡ್‌ಗಳ ಅಂತರದಲ್ಲಿ ಎರಡು ಬಾಂಬ್ ಸ್ಫೋಟ ಸಂಭವಿಸಿದೆ. ಹೋಟೆಲ್‌ನಲ್ಲಿ (Hotel) ಊಟ ತಿಂಡಿ ತಿನ್ನುತ್ತಿದ್ದ ಜನ ಎದ್ನೋಬಿದ್ನೋ ಎಂದು ಓಡಿದ್ದಾರೆ.

    ಮಹಿಳೆಯೊಬ್ಬರ ಸ್ಥಿತಿ ಗಂಭೀರವಾಗಿದೆ. ಮೂವರ ಕಿವಿಗಳಿಗೆ, ಒಬ್ಬರ ಕಣ್ಣಿಗೆ ಹಾನಿಯಾಗಿದೆ. ಸ್ಥಳದಲ್ಲಿ ಬ್ಯಾಟರಿ, ನಟ್, ಬೋಲ್ಟ್ ಪತ್ತೆಯಾಗಿದೆ. ಪೊಲೀಸರು ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ರವೆ ಇಡ್ಲಿ ತಿಂದು ಬಾಂಬ್‌ ಇಟ್ಟ ಬಾಂಬರ್‌ – ಡಿಕೆಶಿ


    ಯಾರಿಗೆಲ್ಲಾ ಗಾಯ?
    * ಫಾರೂಖ್ – 19 ವರ್ಷ – ಹೋಟೆಲ್ ಸಿಬ್ಬಂದಿ
    * ದೀಪಾಂಶು – 23 ವರ್ಷ – ಗ್ರಾಹಕ (ಅಮೆಜಾನ್ ಕಂಪನಿ ಉದ್ಯೋಗಿ)
    * ಸ್ವರ್ಣಾಂಬಾ – 40 ವರ್ಷ – ಗ್ರಾಹಕ (40% ಸುಟ್ಟ ಗಾಯ)
    * ಮೋಹನ್ – 41 ವರ್ಷ – ಗ್ರಾಹಕ
    * ನಾಗಶ್ರೀ – 35 ವರ್ಷ – ಗ್ರಾಹಕ (ಕಣ್ಣಿಗೆ ಹಾನಿ)
    * ಮೋಮಿ – 30 ವರ್ಷ – ಗ್ರಾಹಕ
    * ಬಲರಾಮ್ ಕೃಷ್ಣನ್ – 31 ವರ್ಷ – ಗ್ರಾಹಕ
    * ನವ್ಯಾ – 25 ವರ್ಷ – ಗ್ರಾಹಕ
    * ಶ್ರೀನಿವಾಸ್ – 67 ವರ್ಷ – ಗ್ರಾಹಕ   ಇದನ್ನೂ ಓದಿ: ಐದನೇ ಬಾರಿಗೆ ಬೆಂಗಳೂರಿನಲ್ಲಿ ಬಾಂಬ್‌ ಸ್ಟೋಟ: ಹಿಂದೆ ಎಲ್ಲೆಲ್ಲಿ ಸಂಭವಿಸಿತ್ತು?

    ಬಾಂಬ್ ಬ್ಲಾಸ್ಟ್ ಸಮಯ
    11:35 – ಹೋಟೆಲ್‌ಗೆ ಬಾಂಬರ್‌ ಆಗಮನ
    11:35 – ಕ್ಯಾಶ್ ಕೌಂಟರ್ ಅಲ್ಲಿ ರವೆ ಇಡ್ಲಿ ಟೋಕನ್‌ ಖರೀದಿ
    11:42 – ಇಡ್ಲಿ ತಿಂದು ಕೈ ತೊಳೆಯುವ ಜಾಗಕ್ಕೆ ಬಂದ
    11:44 – ಕೈತೊಳೆಯುವ ಜಾಗದಲ್ಲೇ ಬ್ಯಾಗ್ ಇರಿಸಿ ಪರಾರಿ
    12:55 – ಬಾಂಬ್‌ ಸ್ಫೋಟ