Tag: Bengaluru Bandh

  • ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸುವ ಮೋದಿಗೆ ಕಾವೇರಿ ವಿವಾದ ಬಗೆಹರಿಸಲು ಸಾಧ್ಯವಿಲ್ವಾ?: ಪ್ರಿಯಾಂಕ್ ಖರ್ಗೆ

    ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸುವ ಮೋದಿಗೆ ಕಾವೇರಿ ವಿವಾದ ಬಗೆಹರಿಸಲು ಸಾಧ್ಯವಿಲ್ವಾ?: ಪ್ರಿಯಾಂಕ್ ಖರ್ಗೆ

    ಚಿಕ್ಕಬಳ್ಳಾಪುರ: ರಷ್ಯಾ-ಉಕ್ರೇನ್ ಯುದ್ಧ (Russia-Ukraine War) ನಿಲ್ಲಿಸುವ ಪ್ರಧಾನಿ ನರೇಂದ್ರ ಮೋದಿ (Narendra Modi) ಕಾವೇರಿ (Cauvery) ವಿವಾದ ಬಗೆಹರಿಸಲು ಸಾಧ್ಯವಿಲ್ಲವೇ? ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಬಿಜೆಪಿ ನಾಯಕರಿಗೆ ಪ್ರಶ್ನೆ ಮಾಡಿದ್ದಾರೆ.

    ಕಾವೇರಿ ವಿವಾದ ಸಮಸ್ಯೆ ಬಗೆಹರಿಸಲು ಪ್ರಧಾನಿ ಭೇಟಿಗೆ ಬಿಜೆಪಿ (BJP) ನಾಯಕರು ಅವಕಾಶ ಕೇಳಲಿ. ಅದು ಬಿಟ್ಟು ಬಿಜೆಪಿಯವರು ಏನು ಮಾಡ್ತಿದ್ದಾರೆ? ಮೋದಿಯವರ ಬಳಿ ಹೋಗಿ ಮಾತನಾಡಬಹುದಿತ್ತಲ್ಲ? ಮೋದಿಯವರ ಅಪಾಯಿಂಟ್‌ಮೆಂಟ್ ಕೊಡಿಸಿ ಅಂತ ನಾವು ಕೇಳಿಲ್ವಾ? ಸುಮ್ನೆ ರಾಜಕೀಯ ಮಾಡೋದಾದ್ರೆ ನಾವು ಮಾಡ್ತೀವಿ. ನಾವು ಸರ್ವ ಪಕ್ಷಗಳ ಸಭೆ ಕರೆದಿಲ್ಲವಾ? ವಿರೋಧ ಪಕ್ಷದವರಿಗೂ ಗೌರವ ಕೊಟ್ಟಿದ್ದೇವೆ ಎಂದರು.

    ನೆಲ, ಜಲ, ಭಾಷೆ ವಿಚಾರದಲ್ಲಿ ರಾಜಕೀಯ ಮಾಡೋದು ಬೇಡ. ಸಭೆ ನಡೆಸಿ ಅಪಾಯಿಂಟ್‌ಮೆಂಟ್ ಕೊಡಿಸಿ ಅಂತ ಕೇಳಿಲ್ವಾ? ಬಿಜೆಪಿ ನಾಯಕರು ಅಸಹಾಯಕತೆ ವ್ಯಕ್ತಪಡಿಸಿರಲಿಲ್ವಾ? ಇದರಲ್ಲಿ ಪ್ರಧಾನಮಂತ್ರಿಗಳನ್ನು ಮಧ್ಯೆ ತರಬಾರದು ಅಂತ ಹೇಳಿದ್ರು. ಉಕ್ರೇನ್ ಯುದ್ಧ ನಿಲ್ಲಿಸುವ ಮೋದಿ ಕರ್ನಾಟಕ-ತಮಿಳುನಾಡು ಸಮಸ್ಯೆ ಬಗೆಹರಿಸಲು ಆಗಲ್ವಾ? ರಾಜಕೀಯಕ್ಕೆ ಮಾತಾಡೋದು ಬೇಡ. ಸಕಾರಾತ್ಮಕವಾಗಿ ಸರ್ಕಾರದ ಜೊತೆ ಸ್ಪಂದಿಸಿ ಎಂದರು. ಇದನ್ನೂ ಓದಿ: ಬೆಂಗಳೂರು ಬಂದ್ – ಹೋಟೆಲ್ ತೆರೆದಿದ್ದಕ್ಕೆ ಮಾಲೀಕನ ಮೇಲೆ ಹಲ್ಲೆ

    ಕಾವೇರಿ ವಿಚಾರದಲ್ಲಿ ಸರ್ಕಾರ ಹಾಗೂ ಸಂಘಟನೆಗಳ ಅಭಿಪ್ರಾಯ ಒಂದೇ ಆಗಿದೆ. ಸರ್ಕಾರದ ಜೊತೆ ಎಲ್ಲರೂ ನಿಂತರೆ ಶಕ್ತಿ ಬರಲಿದೆ. ಸುಪ್ರೀಂಕೋರ್ಟ್ ಬಳಿ ಹನಿ ನೀರು ಕೊಡಲು ಸಾಧ್ಯವಿಲ್ಲ ಅಂತ ಈಗಾಗಲೇ ಲಿಖಿತ ರೂಪದಲ್ಲೇ ತಿಳಿಸಿದ್ದೇವೆ. ಬಂದ್ ಮಾಡೋದ್ರಿಂದ ಯಾವುದೇ ಪ್ರಯೋಜನವಾಗಲ್ಲ. ನಮ್ಮ ಭಿನ್ನಾಭಿಪ್ರಾಯಗಳು ಬೇರೆ ಇದ್ದು ಸರ್ಕಾರ ಸಕಾರಾತ್ಮಕವಾಗಿ ಕೆಲಸ ಮಾಡುತ್ತಿಲ್ಲ ಅಂದಾಗ ಪ್ರತಿಭಟನೆ ಮಾಡಬಹುದು. ನಾವೆಲ್ಲರೂ ಸೇರಿ ಸುಪ್ರೀಂಕೋರ್ಟ್ ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರೋಣ ಎಂದರು.

    ಮತ್ತೆ ತಮಿಳುನಾಡಿಗೆ 3,000 ಕ್ಯೂಸೆಕ್ ನೀರು ಬಿಡುಗಡೆಗೆ ಸಿಡಬ್ಲ್ಯೂಆರ್‌ಸಿ ಆದೇಶ ವಿಚಾರವಾಗಿ ಮಾತನಾಡಿದ ಅವರು, ಮೊದಲು 24,000 ಕ್ಯೂಸೆಕ್ ಕೇಳಿದಾಗ 5,000 ಕ್ಯೂಸೆಕ್ ಬಿಟ್ಟಿದ್ದೇವೆ. ಸುಪ್ರೀಂಕೋರ್ಟ್ ಆದೇಶಕ್ಕೆ ಗೌರವ ಕೊಟ್ಟು ನೀರು ಬಿಟ್ಟಿದ್ದೇವೆ. ಈಗ 3,000 ಕ್ಯೂಸೆಕ್ ಬಿಡಿ ಎಂದರೆ ಹೇಗೆ? ಇದರ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಮಾಡಲಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಪ್ರತಿನಿತ್ಯ 3 ಸಾವಿರ ಕ್ಯೂಸೆಕ್‌ ನೀರು ಹರಿಸಿ – ಕರ್ನಾಟಕಕ್ಕೆ CWRC ಆದೇಶ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗಳೂರು ಬಂದ್ – ಹೋಟೆಲ್ ತೆರೆದಿದ್ದಕ್ಕೆ ಮಾಲೀಕನ ಮೇಲೆ ಹಲ್ಲೆ

    ಬೆಂಗಳೂರು ಬಂದ್ – ಹೋಟೆಲ್ ತೆರೆದಿದ್ದಕ್ಕೆ ಮಾಲೀಕನ ಮೇಲೆ ಹಲ್ಲೆ

    ಬೆಂಗಳೂರು: ಬಂದ್ (Bengaluru Bandh) ವೇಳೆ ಹೋಟೆಲ್ ತೆರೆದಿದ್ದಕ್ಕೆ ಮಾಲೀಕ ಹಾಗೂ ಸಿಬ್ಬಂದಿ ಮೇಲೆ ಎಂಟಕ್ಕೂ ಹೆಚ್ಚು ಹೋರಾಟಗಾರರು ಹಲ್ಲೆ ನಡೆಸಿರುವ ಪ್ರಕರಣ ಜಯನಗರದಲ್ಲಿ (Jayanagara) ನಡೆದಿದೆ.

    ತಮಿಳುನಾಡಿಗೆ ಕಾವೇರಿ ನೀರು (Cauvery Water) ಹರಿಸುವುದನ್ನು ಖಂಡಿಸಿ ನಗರದಲ್ಲಿ ಪ್ರತಿಭಟನೆಯ ಕಾವು ಹೆಚ್ಚಾಗಿದೆ. ಈ ವೇಳೆ ಬಹುತೇಕ ಅಂಗಡಿಗಳು, ಮಾಲ್ ಹಾಗೂ ಹೋಟೆಲ್‍ಗಳು ಮುಚ್ಚಿದ್ದವು. ಆದರೆ ಜಯನಗರದ ಮೂರನೇ ಹಂತದಲ್ಲಿ ಹೋಟೆಲ್‍ನ್ನು ತೆರದಿದ್ದಕ್ಕೆ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೋಟೆಲ್‍ಗೆ ಬೈಕ್‍ನಲ್ಲಿ ಬಂದಿದ್ದ ಹೋರಾಟಗಾರರು ಏಕಾಏಕಿ ಒಳಗೆ ನುಗ್ಗಿದ್ದಾರೆ. ಬಳಿಕ ಚೇರ್ ಹಾಗೂ ಗ್ಲಾಸ್‍ಗಳನ್ನು ಒಡೆದು ಹಾಕಿದ್ದಾರೆ. ಇದನ್ನೂ ಓದಿ: ಬಂದ್ ಶಾಂತಿಯುತವಾಗಿ ಆಗಿದೆ, ಬೆಂಗಳೂರು ನಾಗರಿಕರಿಗೆ ಅಭಿನಂದನೆ: ಡಿಕೆಶಿ

    ಈ ವೇಳೆ ಹೋಟೆಲ್‍ನಲ್ಲಿದ್ದ ಸಿಬ್ಬಂದಿ ಹೋರಾಟಗಾರರ ಕೃತ್ಯವನ್ನು ಮೊಬೈಲ್‍ನಲ್ಲಿ ವೀಡಿಯೋ ಮಾಡಿದ್ದಾರೆ. ಇದರಿಂದ ಕೆರಳಿದ ಗುಂಪು ವೀಡಿಯೋ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ. ಇದಾದ ಬಳಿಕ ಸಿಬ್ಬಂದಿ ಹೋಟೆಲ್‍ನ್ನು ಮುಚ್ಚಿದ್ದಾರೆ.

    ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಬರೋಬ್ಬರಿ 83 ಟಿಎಂಸಿ ನೀರಿಗೆ ಬೇಡಿಕೆ ಇಟ್ಟ ತಮಿಳುನಾಡು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಂದ್ ಶಾಂತಿಯುತವಾಗಿ ಆಗಿದೆ, ಬೆಂಗಳೂರು ನಾಗರಿಕರಿಗೆ ಅಭಿನಂದನೆ: ಡಿಕೆಶಿ

    ಬಂದ್ ಶಾಂತಿಯುತವಾಗಿ ಆಗಿದೆ, ಬೆಂಗಳೂರು ನಾಗರಿಕರಿಗೆ ಅಭಿನಂದನೆ: ಡಿಕೆಶಿ

    ಬೆಂಗಳೂರು: ಬೆಂಗಳೂರು ಬಂದ್ (Bengaluru Bandh) ಶಾಂತಿಯುತವಾಗಿ ಆಗಿದೆ. ಬೆಂಗಳೂರು ನಾಗರಿಕರಿಗೆ ನನ್ನ ಅಭಿನಂದನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

    ಕರ್ನಾಟಕದಲ್ಲಿ (Karnataka) ಬರ ಇದ್ದಾಗಲೂ ತಮಿಳುನಾಡಿಗೆ (Tamil Nadu) ನೀರು ಹರಿಸುತ್ತಿರುವುದನ್ನು ಖಂಡಿಸಿ ರೈತ ಮುಖಂಡರು ಹಾಗೂ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆಶಿ, ಪ್ರತಿಭಟನೆ ಮಾಡಲಿ. ಅವರ ಧ್ವನಿ, ಹೋರಾಟ ನಡೆಯಲಿ. ಎಲ್ಲರೂ ಸಹಕಾರ ಕೊಟ್ಟಿದ್ದಾರೆ. ಸಂಘಟನೆಯವರಿಗೆ ಅಭಿನಂದನೆಗಳು ಎಂದರು. ಇದನ್ನೂ ಓದಿ: ಅನ್ನ ಕೊಟ್ಟ ದೇವ್ರು ನೀನು ಚೆನ್ನಾಗಿರಪ್ಪ- ಸಿಎಂ ಕಂಡು ಕೈ ಮುಗಿದ ಮಹಿಳೆ

    ಕಾವೇರಿ ನಿರ್ವಹಣಾ ಸಮಿತಿ (CWRC) ಸಭೆ ನಡೆಯುತ್ತಿದೆ. ಕಾವೇರಿ ಒಳಹರಿವು ಜಾಸ್ತಿ ಆಗಿದೆ. ಪ್ರಸ್ತುತ 10,000 ಕ್ಯೂಸೆಕ್ ನೀರು ಒಳಹರಿವಿದೆ. ರಾಜ್ಯದ ಹಿತಕ್ಕೆ ನಾವು ಕೆಲಸ ಮಾಡುತ್ತೇವೆ. ಅವರು 12,500 ಕ್ಯೂಸೆಕ್ ನೀರು ಕೇಳಿದ ತಕ್ಷಣ ಕೊಡಲು ಆಗಲ್ಲ. ಅದಕ್ಕೆ ಲೆಕ್ಕಾಚಾರ ಇದೆ. 5,000 ಕ್ಯೂಸೆಕ್ ನೀರು ಬಿಡಲು ಕಷ್ಟವಾಗುತ್ತಿದೆ. 12,500 ಕ್ಯೂಸೆಕ್ ನೀರು ಕೇಳಿದರೆ ಆಗಲ್ಲ. ನಮ್ಮ ಅಫಿಡವಿಟ್ ನಾವು ಹಾಕುತ್ತೇವೆ. ತಾಂತ್ರಿಕ ಸಮಿತಿ ಅದನ್ನು ಮಾಡುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಸತ್ತ ಇಲಿ ಬಾಯಲ್ಲಿಟ್ಟುಕೊಂಡು ಕಾವೇರಿ ನೀರು ಹರಿಸುವಂತೆ ತಮಿಳುನಾಡಿನ ರೈತರು ಪ್ರತಿಭಟನೆ

    ಬಿಜೆಪಿ-ಜೆಡಿಎಸ್ ಕಾವೇರಿ ಹೋರಾಟದಲ್ಲಿ ಭಾಗಿಯಾಗಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜಕಾರಣ ಬಿಡಿ. ರಾಜ್ಯದ ಹಿತ ಕಾಪಾಡಲು ಮುಂದಾಗಲಿ ಎಂದರು. ಇದು ಸ್ಟಾಲಿನ್ ಸರ್ಕಾರ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿ, ಅವರ ತಂದೆಯವರು ಏನು ಹೇಳಿದ್ದಾರೆ ಅದನ್ನು ಮೊದಲು ಅರ್ಥ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಬರೋಬ್ಬರಿ 83 ಟಿಎಂಸಿ ನೀರಿಗೆ ಬೇಡಿಕೆ ಇಟ್ಟ ತಮಿಳುನಾಡು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಜೆಪಿಯವರು ಕಾವೇರಿ ಪ್ರತಿಭಟನೆ ರಾಜಕೀಯಕ್ಕಾಗಿ ಮಾಡುತ್ತಿದ್ದಾರೆ: ಸಿದ್ದರಾಮಯ್ಯ

    ಬಿಜೆಪಿಯವರು ಕಾವೇರಿ ಪ್ರತಿಭಟನೆ ರಾಜಕೀಯಕ್ಕಾಗಿ ಮಾಡುತ್ತಿದ್ದಾರೆ: ಸಿದ್ದರಾಮಯ್ಯ

    ಮೈಸೂರು: ಕಾವೇರಿ ನೀರು ವಿವಾದದ (Cauvery Water Dispute) ಕುರಿತು ಬೆಂಗಳೂರು ಬಂದ್‌ಗೆ (Bengaluru Bandh) ಕರೆ ನೀಡಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ (Siddaramaiah) ಮೈಸೂರಿನಲ್ಲಿ (Mysuru) ಪ್ರತಿಕ್ರಿಯೆ ನೀಡಿದ್ದಾರೆ.

    ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಭಟನೆ ಮಾಡಲು ನಮ್ಮದೇನು ತಕರಾರಿಲ್ಲ. ಆದರೆ ರಾಜಕೀಯ ಮಾಡಬಾರದು. ಕಾವೇರಿ ವಿವಾದವನ್ನು ರಾಜಕೀಯಕ್ಕೆ ಹೋಲಿಸುವುದು ರಾಜ್ಯದ ಹಿತದೃಷ್ಟಿಯಲ್ಲಿ ಒಳ್ಳೆಯದಲ್ಲ. ಬಿಜೆಪಿಯವರು (BJP) ಕಾವೇರಿ ಪ್ರತಿಭಟನೆ ರಾಜಕೀಯಕ್ಕಾಗಿ (Politics) ಮಾಡುತ್ತಿದ್ದಾರೆ ಹೊರತು ಜನರ ಹಿತದೃಷ್ಟಿಗಾಗಲಿ, ನಾಡಿನ ಹಿತದೃಷ್ಟಿಗಾಗಲಿ ಮಾಡುತ್ತಿಲ್ಲ ಎಂದರು. ಇದನ್ನೂ ಓದಿ: ಬೆಂಗಳೂರು ಬಂದ್ ಎಫೆಕ್ಟ್- ಕೊನೆ ಕ್ಷಣದಲ್ಲಿ 13 ವಿಮಾನಗಳ ಹಾರಾಟ ರದ್ದು

    ಕರ್ನಾಟಕ ಬಂದ್ (Karnataka Bandh) ಕುರಿತು ಮಾತನಾಡಿದ ಅವರು, ಯಾವುದೇ ಬಂದ್‌ಗಳನ್ನು ಮಾಡಬಾರದು, ಮೆರವಣಿಗೆ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ಇದೆ. ಆದರೆ ಇದಕ್ಕೆ ನಾವೇನೂ ಅಡ್ಡಿಪಡಿಸಲು ಹೋಗುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರು ಬಂದ್‌ – ಪ್ರತಿಕ್ರಿಯೆ ನೀಡದೇ ತೆರಳಿದ ಸಿಎಂ

    ಕಾವೇರಿ ವಿವಾದದ ಕುರಿತು ದೇವೇಗೌಡರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ನಾನು ಅದನ್ನು ಸ್ವಾಗತಿಸುತ್ತೇನೆ. ರಾಜ್ಯಸರ್ಕಾರ ರಾಜ್ಯದ ಹಿತ್ತಾಸಕ್ತಿ ಕಾಪಾಡಲು ಬದ್ಧವಾಗಿದೆ. ನಮಗೆ ಅಧಿಕಾರ ಮುಖ್ಯ ಅಲ್ಲಾ. ರಾಜ್ಯದ ಜನರ ಹಿತ ಮುಖ್ಯ ಎಂದರು. ಇದನ್ನೂ ಓದಿ: ಇದೇನು ಕನ್ನಡಿಗರ ಸರ್ಕಾರವೋ? ಸ್ಟಾಲಿನ್ ಅಧೀನದಲ್ಲಿರುವ ಬಾಡಿಗೆ ಸರ್ಕಾರವೋ? – ಕಾಂಗ್ರೆಸ್ ವಿರುದ್ಧ ಹೆಚ್‌ಡಿಕೆ ಕಿಡಿ

    ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿಗೆ ವಿರುದ್ಧವಾಗಿದ್ದ ಶಕ್ತಿಗಳು ಈ ಬಾರಿ ಒಂದುಗೂಡಿವೆ. ಬಿಜೆಪಿಯವರು ಕಳೆದ 9 ವರ್ಷಗಳಲ್ಲಿ ಭಾವನಾತ್ಮಕವಾದ ವಿಚಾರಗಳನ್ನು ಮುಂದಿಟ್ಟುಕೊಂಡು ಸಮಾಜವನ್ನು ಒಡೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಅದಕ್ಕೋಸ್ಕರ ಈ ಸತ್ಯ ತಿಳಿದ ಮೇಲೆ ಅನೇಕ ಶಕ್ತಿಗಳು ಇಂದು ಬಿಜೆಪಿಯೇತರ ಗುಂಪುಗಳಲ್ಲಿ ಗುರುತಿಸಿಕೊಳ್ಳುತ್ತಿವೆ ಎಂದು ಹೇಳಿದರು. ಇದನ್ನೂ ಓದಿ: ಕರ್ನಾಟಕ, ತಮಿಳುನಾಡು ನಡುವೆ ಸಾರಿಗೆ ಬಸ್‌ಗಳ ಸಂಚಾರಕ್ಕೆ ಬ್ರೇಕ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗಳೂರು ಬಂದ್ ಎಫೆಕ್ಟ್- ಕೊನೆ ಕ್ಷಣದಲ್ಲಿ 13 ವಿಮಾನಗಳ ಹಾರಾಟ ರದ್ದು

    ಬೆಂಗಳೂರು ಬಂದ್ ಎಫೆಕ್ಟ್- ಕೊನೆ ಕ್ಷಣದಲ್ಲಿ 13 ವಿಮಾನಗಳ ಹಾರಾಟ ರದ್ದು

    ಬೆಂಗಳೂರು: ಕಾವೇರಿ (Cauvery Water Disputes) ಉಳಿವಿಗಾಗಿ ಬೆಂಗಳೂರು ಗ್ರಾಮಾಂತರ-ಬೆಂಗಳೂರು ಬಂದ್‍ನ ಪರಿಣಾಮ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (KempeGowda International Airport) ಮೇಲೆ ಪರಿಣಾಮ ಬೀರಿದೆ.

    ಬೆಂಗಳೂರು ಬಂದ್ (Bengaluru Bandh) ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ಪ್ರಯಾಣಿಕರು ಬೆಂಗಳೂರು ಪ್ರಯಾಣ ರದ್ದು ಮಾಡಿರುವ ಹಿನ್ನೆಲೆಯಲ್ಲಿ 13 ದೇಶೀಯ ವಿಮಾನಗಳ ಆಗಮನ ಕೊನೆ ಕ್ಷಣದಲ್ಲಿ ರದ್ದಾಗಿದೆ. ದೆಹಲಿ, ಕೊಚ್ಚಿ, ಮಂಗಳೂರು, ಮುಂಬೈ ಸೇರಿದಂತೆ ಇತರೆ 13 ವಿಮಾನಗಳ ಹಾರಾಟವನ್ನ ಏರ್ ಲೈನ್ಸ್ ನವರು ಕೊನೆ ಕ್ಷಣದಲ್ಲಿ ರದ್ದು ಮಾಡಿದ್ದಾರೆ.

    ಹೀಗಾಗಿ ಸಹಜವಾಗಿ ಏರ್‌ಪೋರ್ಟ್‌ ನಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಕಡಿಮೆಯಾಗಿದ್ದು, ಪರೋಕ್ಷವಾಗಿ ಇದು ಕ್ಯಾಬ್ ಚಾಲಕರ ಮೇಲೂ ಪರಿಣಾಮ ಬೀರಿದೆ. ಪ್ರಯಾಣಿಕರಿಗಾಗಿ ಕ್ಯಾಬ್ ಚಾಲಕರು ಗಂಟೆಗಟ್ಟಲೆ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ. ಇದನ್ನೂ ಓದಿ: ಕರ್ನಾಟಕ, ತಮಿಳುನಾಡು ನಡುವೆ ಸಾರಿಗೆ ಬಸ್‌ಗಳ ಸಂಚಾರಕ್ಕೆ ಬ್ರೇಕ್

    ಇತ್ತ ಏರ್‌ಪೋರ್ಟ್‌ಗೆ ಆಗಮಿಸುವ ಹಾಗೂ ನಿರ್ಗಮಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಕೊಂಚ ಕಡಿಮೆಯಾಗಿದೆ. ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ದೇಶದ ಬೇರೆ ಬೇರೆ ಭಾಗಗಳಿಂದ ಬೆಂಗಳೂರಿಗೆ ಬರುವವರ ಸಂಖ್ಯೆಯಲ್ಲಿ ಕಡಿತಗೊಂಡಿದೆ. ಏರ್‌ಪೋರ್ಟ್‌ ನಿಂದ ಬೇರೆ ಕಡೆಗೆ ತೆರಳುವವರ ಸಂಖ್ಯೆಯಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿದ್ದು, ಕ್ಯಾಬ್ ಚಾಲಕರ ಮೇಲೆ ಪರಿಣಾಮ ಬೀರಿದೆ.

    ಸಹಜವಾಗಿ ಏರ್‌ಪೋರ್ಟ್‌ ನ ಟರ್ಮಿನಲ್ 1 ರಲ್ಲಿ ದೇಶದ ಇತರೆ ಭಾಗಗಳಿಂದ ಬರುವ ಪ್ರಯಾಣಿಕರ ಸಂಖ್ಯೆ ಸರಾಸರಿ 27-24 ಸಾವಿರ ಇದ್ದು ಆದ್ರೆ ಇಂದು 25000 ಕ್ಕೆ ಇಳಿದಿದೆ. ಹೀಗಾಗಿ ಸಹಜವಾಗಿ ಕ್ಯಾಬ್ ಚಾಲಕರಿಗೆ ಇದು ಹಿನ್ನೆಡೆಯಾಗಿದ್ದು ಪ್ರಯಾಣಿಕರು ಬಾರದೆ ಪ್ರಯಾಣಿಕರಿಗಾಗಿ ಕ್ಯಾಬ್ ಚಾಲಕರು ಕಾಯುವಂತಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗಳೂರು ಬಂದ್‌ – ಪ್ರತಿಕ್ರಿಯೆ ನೀಡದೇ ತೆರಳಿದ ಸಿಎಂ

    ಬೆಂಗಳೂರು ಬಂದ್‌ – ಪ್ರತಿಕ್ರಿಯೆ ನೀಡದೇ ತೆರಳಿದ ಸಿಎಂ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮೈಸೂರು ಜಿಲ್ಲಾ ಪ್ರವಾಸಕ್ಕೆ ತೆರಳಿದ್ದಾರೆ.

    ಮಾಧ್ಯಮಗಳು ಬೆಂಗಳೂರು ಬಂದ್‌ಗೆ (Bengaluru Bandh) ಸಂಬಂಧಿಸಿದ್ದಂತೆ ಳಿದ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡದೇ ಸಿಎಂ ಎರಡು ದಿನಗಳ ಕಾಲ ಜಿಲ್ಲಾ ಪ್ರವಾಸಕ್ಕೆ ತೆರಳಿದರು. ಇದನ್ನೂ ಓದಿ: ಇದೇನು ಕನ್ನಡಿಗರ ಸರ್ಕಾರವೋ? ಸ್ಟಾಲಿನ್ ಅಧೀನದಲ್ಲಿರುವ ಬಾಡಿಗೆ ಸರ್ಕಾರವೋ? – ಕಾಂಗ್ರೆಸ್ ವಿರುದ್ಧ ಹೆಚ್‌ಡಿಕೆ ಕಿಡಿ

    ಹೆಚ್‌ಎಎಲ್‌ನಿಂದ ವಿಶೇಷ ವಿಮಾನ ಮೂಲಕ ಮೈಸೂರಿಗೆ ಸಿಎಂ ಪ್ರಯಾಣಿಸಿದ್ದಾರೆ. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇದೇನು ಕನ್ನಡಿಗರ ಸರ್ಕಾರವೋ? ಸ್ಟಾಲಿನ್ ಅಧೀನದಲ್ಲಿರುವ ಬಾಡಿಗೆ ಸರ್ಕಾರವೋ? – ಕಾಂಗ್ರೆಸ್ ವಿರುದ್ಧ ಹೆಚ್‌ಡಿಕೆ ಕಿಡಿ

    ಇದೇನು ಕನ್ನಡಿಗರ ಸರ್ಕಾರವೋ? ಸ್ಟಾಲಿನ್ ಅಧೀನದಲ್ಲಿರುವ ಬಾಡಿಗೆ ಸರ್ಕಾರವೋ? – ಕಾಂಗ್ರೆಸ್ ವಿರುದ್ಧ ಹೆಚ್‌ಡಿಕೆ ಕಿಡಿ

    ಬೆಂಗಳೂರು: ಕಾವೇರಿ ನೀರಿಗಾಗಿ (Kaveri Water) ಬೆಂಗಳೂರು ಬಂದ್‌ಗೆ (Bengaluru Bandh) ಕರೆ ನೀಡಿದ ಹಿನ್ನೆಲೆ ರೈತರು ಹಾಗೂ ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂದರ್ಭ ಪೊಲೀಸರು ಹಲವು ಕಾರ್ಯಕರ್ತರನ್ನು ಹಾಗೂ ಮುಖಂಡರನ್ನು ವಶಕ್ಕೆ ಪಡೆದಿದ್ದು, ಈ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಟ್ವೀಟ್ (Tweet) ಮೂಲಕ ಆಕ್ರೋಶ ಹೊರಹಾಕಿದ್ದಾರೆ.

    ಬೆಂಗಳೂರು ಬಂದ್ ಕುರಿತು ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಕಾವೇರಿ ನೀರಿಗಾಗಿ ನಡೆಯುತ್ತಿರುವ ಬೆಂಗಳೂರು ಬಂದ್‌ಗೆ ನನ್ನ ಸಂಪೂರ್ಣ ಬೆಂಬಲವಿದೆ. ಹೋರಾಟ ಶಾಂತಿಯುತವಾಗಿರಲಿ. ಬಂದ್ ಯಶಸ್ವಿಯಾಗಲಿ. ಜನತಾದಳ ಪಕ್ಷದ ಕಾರ್ಯಕರ್ತರೂ ಕೂಡ ಬಂದ್‌ನಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ, ತಮಿಳುನಾಡು ನಡುವೆ ಸಾರಿಗೆ ಬಸ್‌ಗಳ ಸಂಚಾರಕ್ಕೆ ಬ್ರೇಕ್

    ಟ್ವೀಟ್‌ನಲ್ಲಿ ಏನಿದೆ?
    ಇದೆಂಥಾ ಚೋದ್ಯ? ಒಂದು ಕಡೆ ಮೇಕೆದಾಟು ಬೇಕು ಎಂದು ಪಾದಯಾತ್ರೆ ಮಾಡಿದವರು, ಇಂದು ಕಾವೇರಿಗಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದ ರೈತರನ್ನು, ಹೋರಾಟಗಾರರನ್ನು ಬಂಧಿಸಿದ್ದಾರೆ. ರಾತ್ರೋರಾತ್ರಿ ಹೋರಾಟಗಾರರನ್ನು ಬಂಧಿಸಿರುವುದು ಕಾಂಗ್ರೆಸ್ (Congress) ಸರ್ಕಾರದ ಕಿಡಿಗೇಡಿತನದ ಪರಮಾವಧಿ. ಕರ್ನಾಟಕದಲ್ಲಿ ಕಾಂಗ್ರೆಸ್ಸಿಗರಿಗೆ ಒಂದು ನ್ಯಾಯ, ಕನ್ನಡಿಗರಿಗೆ ಇನ್ನೊಂದು ನ್ಯಾಯ ಎನ್ನುವುದು ಇದೆಯಾ? ಇದನ್ನೂ ಓದಿ: ಬೆಂಗಳೂರು ಬಂದ್ – ಕುರುಬೂರು ಶಾಂತಕುಮಾರ್ ಪೊಲೀಸ್ ವಶಕ್ಕೆ

    ಕೋವಿಡ್ ನಿಯಮ ಉಲ್ಲಂಘಿಸಿ ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆ ಮಾಡಬಹುದಾದರೆ, ನಾಡಿನ ಜೀವನಾಡಿ ಕಾವೇರಿಗಾಗಿ ಕನ್ನಡಿಗರು ಪ್ರತಿಭಟನೆ ನಡೆಸಬಾರದೇ? ಶಾಂತವಾಗಿ ಹೋರಾಟ ನಡೆಸುತ್ತಿದ್ದ ರೈತರು, ಹೋರಾಟಗಾರರನ್ನು ಬಂಧಿಸಿರುವುದು ಖಂಡನೀಯ. ಇದೇನು ಕನ್ನಡಿಗರ ಸರ್ಕಾರವೋ? ಸ್ಟಾಲಿನ್ ಅಧೀನದಲ್ಲಿರುವ ಬಾಡಿಗೆ ಸರ್ಕಾರವೋ? ಇಷ್ಟಕ್ಕೂ ಕನ್ನಡಿಗರು ಮತ ಹಾಕಿದ್ದು ಯಾರಿಗೆ? ಇದನ್ನೂ ಓದಿ: ಬೆಂಗಳೂರು ಬಂದ್ – ವಿಮಾನ ನಿಲ್ದಾಣದಲ್ಲಿ ಮುಂಜಾನೆಯಿಂದಲೂ ಸಹಜ ಸ್ಥಿತಿ

    ಹೋರಾಟಗಾರರು, ರೈತರನ್ನು ಕೂಡಲೇ ಬಂಧಮುಕ್ತಗೊಳಿಸಬೇಕು. ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸಬೇಕು. ಕಾಂಗ್ರೆಸ್ ಪಕ್ಷವು ಡಿಎಂಕೆ ಪಕ್ಷದ ಬಿ ಟೀಮ್ ಆಗಿ ಪರಿವರ್ತನೆ ಆದ ಪರಿಣಾಮವೇ ಈ ಕಾವೇರಿ ಬಿಕ್ಕಟ್ಟು ಎನ್ನುವುದು ಕನ್ನಡಿಗರಿಗೆ ಈಗ ಸ್ಪಷ್ಟವಾಗಿ ಅರ್ಥವಾಗಿದೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಬೆಂಗಳೂರು ಬಂದ್‌- ಎಂದಿನಂತೆ ಸಂಚರಿಸುತ್ತಿವೆ ಬಿಎಂಟಿಸಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕರ್ನಾಟಕ, ತಮಿಳುನಾಡು ನಡುವೆ ಸಾರಿಗೆ ಬಸ್‌ಗಳ ಸಂಚಾರಕ್ಕೆ ಬ್ರೇಕ್

    ಕರ್ನಾಟಕ, ತಮಿಳುನಾಡು ನಡುವೆ ಸಾರಿಗೆ ಬಸ್‌ಗಳ ಸಂಚಾರಕ್ಕೆ ಬ್ರೇಕ್

    ಚಾಮರಾಜನಗರ: ಮಂಗಳವಾರ ಬೆಂಗಳೂರು ಬಂದ್ (Bengaluru Bandh) ಹಿನ್ನೆಲೆ ಕರ್ನಾಟಕ (Karnataka) ಹಾಗೂ ತಮಿಳುನಾಡಿನ (Tamil Nadu) ನಡುವೆ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು (KSRTC Bus) ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

    ಚಾಮರಾಜನಗರ ಜಿಲ್ಲೆಯ ಮೂಲಕ ತಮಿಳುನಾಡಿಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಪುಣಜನೂರು, ಕೆಕ್ಕನಹಳ್ಳ, ಪಾಲಾರ್, ನಾಲಾರೋಡ್ ಅರ್ಧನಾರೀಪುರ ಚೆಕ್‌ಪೋಸ್ಟ್‌ಗಳ ಮೂಲಕ ಹೋಗುವ ಬಸ್‌ಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ಪೊಲೀಸರ ಸೂಚನೆ ಹಿನ್ನೆಲೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಬೆಂಗಳೂರು ಬಂದ್‌- ಎಂದಿನಂತೆ ಸಂಚರಿಸುತ್ತಿವೆ ಬಿಎಂಟಿಸಿ

    ಈ ಬಗ್ಗೆ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿರುವ ಚಾಮರಾಜನಗರ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್, ಎರಡೂ ರಾಜ್ಯಗಳ ನಡುವೆ ಸಾರಿಗೆ ಬಸ್‌ಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ಕರ್ನಾಟಕಕ್ಕೆ ಬರುವ ತಮಿಳುನಾಡಿನ ಸಾರಿಗೆ ಬಸ್‌ಗಳ ಸಂಚಾರವು ಸಹ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಬಂದ್ – ಕುರುಬೂರು ಶಾಂತಕುಮಾರ್ ಪೊಲೀಸ್ ವಶಕ್ಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗಳೂರು ಬಂದ್ – ವಿಮಾನ ನಿಲ್ದಾಣದಲ್ಲಿ ಮುಂಜಾನೆಯಿಂದಲೂ ಸಹಜ ಸ್ಥಿತಿ

    ಬೆಂಗಳೂರು ಬಂದ್ – ವಿಮಾನ ನಿಲ್ದಾಣದಲ್ಲಿ ಮುಂಜಾನೆಯಿಂದಲೂ ಸಹಜ ಸ್ಥಿತಿ

    ಬೆಂಗಳೂರು: ಕಾವೇರಿ (Cauvery) ವಿಚಾರವಾಗಿ ಕರೆ ನೀಡಲಾಗಿರುವ ಬೆಂಗಳೂರು ಬಂದ್ (Bengaluru Bandh) ಹಿನ್ನೆಲೆಯಲ್ಲಿ ಬೆಂಗಳೂರಿನ ದೇವನಹಳ್ಳಿ ಬಳಿಯ ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport Bengaluru) ಮುಂಜಾನೆಯಿಂದಲೂ ಸಹಜ ಸ್ಥಿತಿಯಿದೆ.

    ಏರ್‌ಪೋರ್ಟ್‌ನಲ್ಲಿ ಯಾವುದೇ ಬಂದ್‌ನ ಪರಿಸ್ಥಿತಿ ಇಲ್ಲ. ನಿಲ್ದಾಣದಲ್ಲಿ ಎಂದಿನಂತೆ ಕ್ಯಾಬ್‌ಗಳು ಸಂಚಾರ ಮಾಡುತ್ತಿದ್ದು, ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗಿಲ್ಲ. ಇದನ್ನೂ ಓದಿ: ಬೆಂಗಳೂರು ಬಂದ್‌- ಎಂದಿನಂತೆ ಸಂಚರಿಸುತ್ತಿವೆ ಬಿಎಂಟಿಸಿ

    ಓಲಾ, ಊಬರ್, ಕೆಎಸ್‌ಟಿಡಿಸಿ ಪ್ರಯಾಣಿಕರಿಗೆ ಸೌಲಭ್ಯ ಸಿಗುತ್ತಿದೆ. ಎಂದಿನಂತೆ ಪ್ರಯಾಣಿಕರು ಯಾವುದೇ ಪರದಾಟವಿಲ್ಲದೇ ಪ್ರಯಾಣ ಮಾಡುತ್ತಿದ್ದು, ಏರ್‌ಪೋರ್ಟ್‌ನಲ್ಲಿ ಸಹಜ ಸ್ಥಿತಿಯಿದೆ. ಬಿಎಂಟಿಸಿ ವಾಯುವಜ್ರ ವಾಹನಗಳು ಸಹ ರಸ್ತೆಗಿಳಿದಿದ್ದು ಪ್ರಯಾಣಿಕರಿಗೂ ಯಾವುದೇ ಸಮಸ್ಯೆ ಆಗಿಲ್ಲ. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಮೂವರು ಕೇಂದ್ರ ಸಚಿವರಿಗೆ ಬಿಜೆಪಿ ಟಿಕೆಟ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗಳೂರು ಬಂದ್‌- ಎಂದಿನಂತೆ ಸಂಚರಿಸುತ್ತಿವೆ ಬಿಎಂಟಿಸಿ

    ಬೆಂಗಳೂರು ಬಂದ್‌- ಎಂದಿನಂತೆ ಸಂಚರಿಸುತ್ತಿವೆ ಬಿಎಂಟಿಸಿ

    ಬೆಂಗಳೂರು: ಕಾವೇರಿಗಾಗಿ (Cauvery) ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಕರೆ ನೀಡಿದ ಬೆಂಗಳೂರಿಗೆ ಬಂದ್‌ಗೆ (Bengalruu Bandh) ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಬೆಂಗಳೂರಿನ ಜೀವನಾಡಿಯಾಗಿರುವ ಬಿಎಂಟಿಸಿ ಬಸ್ಸುಗಳು (BMTC Bus) ಎಂದಿನಂತೆ ರಸ್ತೆಯಲ್ಲಿ ಸಂಚರಿಸುತ್ತಿವೆ. ಇದರ ಜೊತೆಗೆ ರಾಜಧಾನಿಯಿಂದ ಉಳಿದ ಜಿಲ್ಲೆಗಳಿಗೆ ತೆರಳುವ ಎಲ್ಲಾ ಸರ್ಕಾರಿ ಬಸ್ಸುಗಳು ಸಹ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಸಂಚಾರದಲ್ಲಿ ಯಾವುದೇ ವ್ಯತ್ಯಯ ಕಂಡು ಬಂದಿಲ್ಲ. ಸ್ಯಾಟಲೈಟ್‌ ಬಸ್‌ ನಿಲ್ದಾಣದಲ್ಲಿ ತಮಿಳುನಾಡು ಕಡೆಗೆ ಸಂಚರಿಸುವ ಬಸ್ಸುಗಳ ಸಂಖ್ಯೆ ವಿರಳವಾಗಿದೆ.

    ಬಿಎಂಟಿಸಿ ಬಸ್ಸುಗಳು ಸಂಚಾರ ಇರುವುದರಿಂದ ರಿಕ್ಷಾಗಳು ಸಂಚರಿಸುತ್ತಿವೆ. ಬೆಳ್ಳಂಬಳಗ್ಗೆ ಎಂದಿನಿಂತೆ ವ್ಯಾಪಾರ ವಹಿವಾಟು ನಡೆಯುತ್ತಿದೆ.  ಬೆಂಗಳೂರು ಬಂದ್‌ಗೆ ಕನ್ನಡ ಸಂಘಟನೆಗಳು ಬೆಂಬಲ ವ್ಯಕ್ತಪಡಿಸದ ಕಾರಣ ಬಂದ್‌ ಬಿಸಿ ಇನ್ನೂ ತಟ್ಟಿಲ್ಲ.  ಇದನ್ನೂ ಓದಿ: ನಟ-ನಟಿಯರನ್ನ ಆರತಿ ಎತ್ತಿ ಕಾವೇರಿ ಹೋರಾಟಕ್ಕೆ ಕರೆಯಬೇಕಾ? – ಶಾಸಕ ಯತ್ನಾಳ್‌ ವಾಗ್ದಾಳಿ

    ಏನಿರುತ್ತೆ?
    ಹೋಟೆಲ್, ಮದ್ಯದಂಗಡಿ, ಓಲಾ, ಊಬರ್, ನಮ್ಮ ಮೆಟ್ರೋ, ರೈಲು, ಸರ್ಕಾರಿ ಕಚೇರಿಗಳು, ಬ್ಯಾಂಕ್, ಪೋಸ್ಟ್ ಆಫೀಸ್, ಆಸ್ಪತ್ರೆ, ಮೆಡಿಕಲ್ ಸ್ಟೋರ್, ದಿನಸಿ, ಹಾಲು, ಹಣ್ಣು, ತರಕಾರಿ ಅಂಗಡಿ, ಬೀದಿಬದಿ ವ್ಯಾಪಾರ.