Tag: bengaluru airport

  • ವಿಮಾನ ನಿಲ್ದಾಣದಲ್ಲಿ 55 ಪ್ರಯಾಣಿಕರನ್ನು ಬಿಟ್ಟು ಹೋಗಿದ್ದ ʼGo First’ಗೆ 10 ಲಕ್ಷ ದಂಡ

    ವಿಮಾನ ನಿಲ್ದಾಣದಲ್ಲಿ 55 ಪ್ರಯಾಣಿಕರನ್ನು ಬಿಟ್ಟು ಹೋಗಿದ್ದ ʼGo First’ಗೆ 10 ಲಕ್ಷ ದಂಡ

    ನವದೆಹಲಿ: ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru Airport) 55 ಪ್ರಯಾಣಿಕರನ್ನು ಬಿಟ್ಟು ಹೋಗಿದ್ದಕ್ಕಾಗಿ ‘ಗೋ ಫಸ್ಟ್‌’ (Go First Flight) ವಿಮಾನಯಾನ ಸಂಸ್ಥೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯವು (DGCA) 10 ಲಕ್ಷ ರೂ. ದಂಡವನ್ನು ವಿಧಿಸಿದೆ.

    ಈ ಅಚಾತುರ್ಯ ಸಂಭವಿಸಿದ ಬೆನ್ನಲ್ಲೇ ಗೋ ಫಸ್ಟ್‌ಗೆ ಡಿಜಿಸಿಎ ನೋಟಿಸ್‌ ನೀಡಿತ್ತು. “ಸಂವಹನ, ಸಮನ್ವಯದ ಕೊರತೆ ಮತ್ತು ದೃಢಪಡಿಸಿಕೊಳ್ಳುವಲ್ಲಿ ಆಗಿರುವ ತಪ್ಪುಗಳಿಂದ ಈ ಲೋಪ ಸಂಭವಿಸಿದೆ. ಈ ನಿರ್ಲಕ್ಷ್ಯಕ್ಕೆ ತಮ್ಮ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಬಾರದು” ಎಂದು ‘ಗೋ ಫಸ್ಟ್‌’ನ ಅಕೌಂಟೆಬಲ್‌ ಮ್ಯಾನೇಜರ್‌/ ಚೀಫ್‌ ಆಪರೇಷನ್‌ ಆಫೀಸರ್‌ಗೆ ಡಿಜಿಸಿಎ ನೋಟಿಸ್‌ ನೀಡಿತ್ತು. ನೋಟಿಸ್‌ಗೆ ಉತ್ತರಿಸಲು ಎರಡು ವಾರಗಳ ಕಾಲಾವಕಾಶವನ್ನು ನೀಡಿತ್ತು. ಇದನ್ನೂ ಓದಿ: 50 ಪ್ರಯಾಣಿಕರನ್ನು ಬಿಟ್ಟುಹೋದ ವಿಮಾನ – ಗೋ ಫಸ್ಟ್‌ಗೆ DGCA ನೋಟಿಸ್

    ಏನಿದು ಘಟನೆ?
    ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಜ.9 ರಂದು ಬೆಳಗ್ಗೆ ಚಲಿಸಿದ ‘ಗೋ ಫಸ್ಟ್‌’ ಸಂಸ್ಥೆಯ ವಿಮಾನವು (ಜಿ8–116), ವಿಮಾನ ನಿಲ್ದಾಣದಲ್ಲಿ ಪ್ಯಾಸೆಂಜರ್‌ ಕೋಚ್‌ನಲ್ಲಿ (ಬಸ್‌) 55 ಪ್ರಯಾಣಿಕರನ್ನು ಬಿಟ್ಟು ಹೋಗಿತ್ತು.

    ಸಿಬ್ಬಂದಿಯಿಂದ ಆದ ಆಚಾತುರ್ಯಕ್ಕಾಗಿ ‘ಗೋ ಫಸ್ಟ್‌’ ವಿಮಾನಯಾನ ಸಂಸ್ಥೆಯು ಪ್ರಯಾಣಿಕರಲ್ಲಿ ಕ್ಷಮೆ ಕೋರಿತ್ತು. ಪ್ರಯಾಣಿಕರಿಗೆ ದೆಹಲಿ ಮತ್ತು ಇತರ ಸ್ಥಳಗಳಿಗೆ ಪರ್ಯಾಯ ವಿಮಾನಗಳಲ್ಲಿ ವ್ಯವಸ್ಥೆ ಕಲ್ಪಿಸಲಾಯಿತು ಎಂದೂ ಅದು ಹೇಳಿಕೊಂಡಿತ್ತು. ಇದನ್ನೂ ಓದಿ: ಏರ್ ಇಂಡಿಯಾದಲ್ಲಿ ಮೂತ್ರವಿಸರ್ಜನೆ ಪ್ರಕರಣ ಬಳಿಕ ಗೋ ಫಸ್ಟ್‌ನಲ್ಲಿ ಗಗನಸಖಿಗೆ ವಿದೇಶಿಗನಿಂದ ಕಿರುಕುಳ

    ಸಮಸ್ಯೆಗೆ ಒಳಗಾದ ಪ್ರಯಾಣಿಕರಿಗೆ ಮುಂದಿನ 12 ತಿಂಗಳಲ್ಲಿ ದೇಶದ ಯಾವುದೇ ಸ್ಥಳಕ್ಕೆ ಪ್ರಯಾಣಿಸಲು ಒಂದು ಉಚಿತ ಟಿಕೆಟ್ ನೀಡಲು ನಿರ್ಧರಿಸಲಾಗಿದೆ ಎಂದು ಗೋ ಫಸ್ಟ್‌ ತಿಳಿಸಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Top Performing Airports 2022 – ವಿಶ್ವದಲ್ಲೇ ಬೆಂಗಳೂರು ನಂ.2

    Top Performing Airports 2022 – ವಿಶ್ವದಲ್ಲೇ ಬೆಂಗಳೂರು ನಂ.2

    ಲಂಡನ್‌: ವಿಶ್ವದ ಆನ್-ಟೈಮ್ ಪರ್ಫಾರ್ಮೆನ್ಸ್‌ಗೆ (OTP) ಸಂಬಂಧಿಸಿದಂತೆ ಅಗ್ರ ಹತ್ತು ಜಾಗತಿಕ ವಿಮಾನ ನಿಲ್ದಾಣಗಳ (Top Performing Global Airports In 2022) ಪೈಕಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ (Bengaluru Kempegowda International Airport) ಎರಡನೇ ಸ್ಥಾನ ಸಿಕ್ಕಿದೆ.

    ಏವಿಯೇಷನ್ ​​ಅನಾಲಿಟಿಕ್ಸ್ ಕಂಪನಿ Cirium ಈ ಅಧ್ಯಯನ ನಡೆಸಿ ವರದಿ ನೀಡಿದ್ದು ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ (Indira Gandhi Airport) ಏಳನೇ ಸ್ಥಾನ ಸಿಕ್ಕಿದೆ. ಏಷ್ಯಾ-ಪೆಸಿಫಿಕ್‌ನ ಅಗ್ರ ಹತ್ತು ಏರ್‌ಲೈನ್ಸ್‌ ಪಟ್ಟಿಯಲ್ಲಿ ಇಂಡಿಗೋ, ಏರ್ ಏಷ್ಯಾ ಇಂಡಿಯಾ ಮತ್ತು ವಿಸ್ತಾರಾಕ್ಕೆ ಅನುಕ್ರಮವಾಗಿ 5, 6, 9ನೇ ಸ್ಥಾನ ಸಿಕ್ಕಿದೆ.  ಇದನ್ನೂ ಓದಿ: ಏಷ್ಯಾದ ಮೊದಲ ಗಾರ್ಡನ್‌ ಟರ್ಮಿನಲ್‌ ಉದ್ಘಾಟನೆ – ಬೆಂಗಳೂರು ವಿಮಾನ ನಿಲ್ದಾಣದ ವಿಶೇಷತೆ ಏನು

    ಆನ್-ಟೈಮ್ arrival ಪರ್ಫಾರ್ಮೆನ್ಸ್‌ (ಪ್ರಯಾಣಿಕರ ವಿಮಾನ ನಿಗದಿತ ಆಗಮನ ಸಮಯದ 15 ನಿಮಿಷದ ಒಳಗಡೆ ಗೇಟ್‌ಗೆ ಬರುವುದು) ಆನ್‌ ಟೈಮ್‌ departure ಪರ್ಫಾರ್ಮೆನ್ಸ್‌ (ಪ್ರಯಾಣಿಕರ ವಿಮಾನ ನಿಗದಿತ ನಿರ್ಗಮನ ಸಮಯದ 15 ನಿಮಿಷದ ಒಳಗಡೆ ಗೇಟ್‌ನಿಂದ ನಿರ್ಗಮಿಸುವುದು) ಆಧಾರದ ಮೇಲೆ ಈ ಅಧ್ಯಯನ ನಡೆದು ಪಟ್ಟಿ ಬಿಡುಗಡೆ ಮಾಡಲಾಗಿದೆ.

    ಪಟ್ಟಿಯಲ್ಲಿ ಜಪಾನ್‌ನ ಟೋಕಿಯೋದಲ್ಲಿರುವ ಹನೆಡಾ ವಿಮಾನ ನಿಲ್ದಾಣ ಮೊದಲ ಸ್ಥಾನ ಪಡೆದರೆ, ಅಮೆರಿಕದ ಸಾಲ್ಟ್‌ ಲೇಕ್‌ ಸಿಟಿ ವಿಮಾನ ನಿಲ್ದಾಣ ಮೂರನೇ ಸ್ಥಾನ ಪಡೆದಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜ್ವರ, ನೆಗಡಿ, ಕೆಮ್ಮು ಇದ್ರೆ ನೋ ಟೆಸ್ಟ್ – ನೇರವಾಗಿ ಏರ್‌ಪೋರ್ಟ್‌ನಿಂದ ಆಸ್ಪತ್ರೆಗೆ: ವಿದೇಶಿ ಪ್ರಯಾಣಿಕರಿಗೆ ಗೈಡ್‍ಲೈನ್

    ಜ್ವರ, ನೆಗಡಿ, ಕೆಮ್ಮು ಇದ್ರೆ ನೋ ಟೆಸ್ಟ್ – ನೇರವಾಗಿ ಏರ್‌ಪೋರ್ಟ್‌ನಿಂದ ಆಸ್ಪತ್ರೆಗೆ: ವಿದೇಶಿ ಪ್ರಯಾಣಿಕರಿಗೆ ಗೈಡ್‍ಲೈನ್

    ಚಿಕ್ಕಬಳ್ಳಾಪುರ: ವಿದೇಶಗಳಿಂದ ಆಗಮಿಸುವ ಪ್ರಯಾಣಿಕರಲ್ಲಿ ಕೋವಿಡ್ (Covid-19) ಗುಣ ಲಕ್ಷಣಗಳಾದ ಜ್ವರ, ನೆಗಡಿ, ಕೆಮ್ಮು ಕಂಡುಬಂದರೆ ಸೀದಾ ವಿಮಾನ (Flight) ನಿಲ್ದಾಣದಿಂದ ಆಸ್ಪತ್ರೆಗೆ (Hospital) ಕಳುಹಿಸಲಾಗುವುದು, ಈ ಹೊಸ ಮಾರ್ಗಸೂಚಿ ನಿನ್ನೆಯಿಂದಲೇ ಜಾರಿಯಾಗಿದೆ ಎಂದು ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲಾಧಿಕಾರಿ ಆರ್. ಲತಾ ತಿಳಿಸಿದರು.

    ಕೋವಿಡ್ ಕಡಿವಾಣ ಸಂಬಂಧ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಹೊಸ ನಿಯಮ ಮಾರ್ಗಸೂಚಿ ಜಾರಿ ಮಾಡಲಾಗಿದೆ. RTPCR ಟೆಸ್ಟ್‌ಗೆ ಗಂಟಲು ದ್ರವ ಸಂಗ್ರಹ ಮಾಡಿಕೊಂಡು ವರದಿ ಬರೋಕು ಮುನ್ನವೇ ಅವರನ್ನು ನೇರವಾಗಿ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಕಳುಹಿಸಲಾಗುವುದು. ಪ್ರಯಾಣಿಕರು ಖಾಸಗಿ ಆಸ್ಪತ್ರೆಗೆ ಹೋಗಲು ಇಚ್ಚೆಪಟ್ಟಲ್ಲಿ ಅವರು ಸ್ವಂತ ಹಣ ವ್ಯಯಿಸಿ ಹೋಗಬಹುದು ಅದಕ್ಕೂ ಅವಕಾಶವಿದೆ ಎಂದರು. ಇದನ್ನೂ ಓದಿ: ಆಸ್ಪತ್ರೆ ಸೇರಿರೋ ಪ್ರಧಾನಿ ತಾಯಿ – ನಿಮ್ಮೊಂದಿಗೆ ನಾನಿದ್ದೇನೆ ಎಂದು ಮೋದಿಗೆ ರಾಹುಲ್‌ ಗಾಂಧಿ ಅಭಯ

    ಈ ಸಂಬಂಧ 8 ಮಂದಿ ಆರೋಗ್ಯ ನಿರೀಕ್ಷಕರು ಸೇರಿದಂತೆ ಹೆಚ್ಚುವರಿ ಸಿಬ್ಬಂದಿಯನ್ನು ಏರ್‌ಪೋರ್ಟ್‌ನಲ್ಲಿ ನಿಯೋಜನೆ ಮಾಡಲಾಗಿದೆ. ರೋಗ ಲಕ್ಷಣಗಳುಳ್ಳ ಪ್ರಯಾಣಿಕರನ್ನು ಆಸ್ಪತ್ರೆಗೆ ಕರೆದೊಯ್ಯಲು ಎರಡು ಅಂಬುಲೆನ್ಸ್‌ಗಳನ್ನು ಸಹ ಏರ್‌ಪೋರ್ಟ್‌ನಲ್ಲಿ ಮೀಸಲಿಡಲಾಗಿದೆ ಎಂದು ಡಿಸಿ ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಮತ್ತೆ ಟೆಸ್ಟಿಂಗ್ ಎಡವಟ್ಟು- ಕೋವಿಡ್ ಟೆಸ್ಟ್ ಮಾಡಿಸದಿದ್ರೂ ಬಂತು ಮೆಸೇಜ್

    Live Tv
    [brid partner=56869869 player=32851 video=960834 autoplay=true]

  • ಗಂಡಸರ ಸುದ್ದಿ ನನಗೆ ಬೇಡಪ್ಪ – ಅಶ್ವಥ್ ನಾರಾಯಣಗೆ ಡಿಕೆಶಿ ತಿರುಗೇಟು

    ಗಂಡಸರ ಸುದ್ದಿ ನನಗೆ ಬೇಡಪ್ಪ – ಅಶ್ವಥ್ ನಾರಾಯಣಗೆ ಡಿಕೆಶಿ ತಿರುಗೇಟು

    ಬೆಂಗಳೂರು: `ಕೆಂಪೇಗೌಡ ಪ್ರತಿಮೆ (Kempegowda Statue) ಲೋಕಾರ್ಪಣೆ ಕಾರ್ಯಕ್ರಮಕ್ಕೆ ಎಲ್ಲರನ್ನೂ ಕರೆದಿದ್ದೇವೆ’ ಎನ್ನುವ ಸಚಿವ ಅಶ್ವಥ್ ನಾರಾಯಣ (Ashwath Narayan) ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar, ದೊಡ್ಡವರ ಸುದ್ದಿ ಮಾತಾಡೋದು ಬೇಡಪ್ಪ, ಗಂಡಸರ ಸುದ್ದಿ ನನಗೆ ಬೇಡಪ್ಪ ಎಂದು ಟಾಂಗ್ ಕೊಟ್ಟಿರು.

    ಬೆಂಗಳೂರಿನ (Bengaluru) ತಮ್ಮ ನಿವಾಸದಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡುತ್ತಾ, ಬಿಜೆಪಿಯವರಿಗೆ (BJP) ಸಂಸ್ಕಾರನೇ ಇಲ್ಲ. ಪ್ರೋಟೋಕಾಲ್ ಹೇಗೆ ಮೆಂಟೇನ್ ಮಾಡಬೇಕು ಅಂತಾ ಗೊತ್ತಿಲ್ಲ. ಮಾಜಿ ಪ್ರಧಾನಿಗಳು, ಮಾಜಿ ಮುಖ್ಯಮಂತ್ರಿ ಯಾರನ್ನ ಹೇಗೆ ಕರೆಯಬೇಕು ಯಾವುದೂ ಗೊತ್ತಿಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ಟಿಪ್ಪು ಪ್ರತಿಮೆ ಸ್ವಂತ ಜಾಗದಲ್ಲಿ ಕಟ್ತೀವಿ ಅಂದ್ರೂ ಬಿಡಲ್ಲ, ಬಾಬ್ರಿ ಮಸೀದಿ ರೀತಿ ಧ್ವಂಸ ಮಾಡ್ತೇವೆ – ಮುತಾಲಿಕ್

    ಈ ವೇಳೆ ಅಶ್ವಥ್ ನಾರಾಯಣ ಎಲ್ಲರನ್ನೂ ಕರೆದ್ದೇವೆ ಅಂದಿದ್ದಾರೆ ಅನ್ನೋ ಪ್ರಶ್ನೆಗೆ ಉತ್ತರಿಸಿ, ನೋಡಪ್ಪ ದೊಡ್ಡವರು, ಗಂಡಸರ ಸುದ್ದಿ ಮಾತಾಡೋದು ಬೇಡಪ್ಪ. ಗಂಡಸರ ಸುದ್ದಿ ನನಗೆ ಬೇಡಪ್ಪ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಟಿಪ್ಪು ಪ್ರತಿಮೆ ಪ್ರತಿಷ್ಠಾಪಿಸಿ ಊದುಬತ್ತಿ ಹಚ್ಚಿ, ಆರತಿ ಬೆಳಗ್ತಾರಾ ನೋಡೋಣ – ಪ್ರಹ್ಲಾದ್‌ ಜೋಶಿ ಟಾಂಗ್‌

    ಕರ್ನಾಟಕ ರಾಜ್ಯದ ಇತಿಹಾಸ `ಕೆಂಪೇಗೌಡರ’ ಹೆಸರು ಇಡಲು ಕೇಂದ್ರ ಸಚಿವರಾದ ವೀರಪ್ಪ ಮೊಯ್ಲಿ ಹಾಗೂ ಎಸ್.ಎಂ.ಕೃಷ್ಣ (SM Krishna) ಅವರು ಶ್ರಮಪಟ್ಟಿದ್ದರು. ಏರ್‌ಪೋರ್ಟ್ (Bengaluru Airport) ಅಥಾರಿಟಿಯವರೇ ಪ್ರತಿಮೆ ಮಾಡುತ್ತಿದ್ದರು. ಆದ್ರೆ ಇವರು ಕಮಿಷನ್ ಆಸೆಗೆ ಏನೋ ಮಾಡಿದ್ದಾರೆ. ಆ ಸಮಾಜದ ಜನರಿಗೆ ಈ ಡಬಲ್ ಇಂಜಿನ್ ಸರ್ಕಾರ ಆದಾಯ ಡಬಲ್ ಮಾಡಿದ್ರೆ ಹೊಟ್ಟೆ ತುಂಬುತ್ತಿತ್ತು. ಅದರ ಬದಲಾಗಿ ಮಾಲಾರ್ಪಣೆ ಮಾಡಿ ಹೋಗಿದ್ದಾರೆ. ಇದರಿಂದ ಏನು ಪ್ರಯೋಜನ? ಗ್ಲೋಬಲ್ ಸಿಟಿ ಬೆಂಗಳೂರಿಗೆ ಕೊಟ್ಟ ಸಂದೇಶವೇನು ಎಂದು ಪ್ರಶ್ನಿಸಿದರು.

    ಸ್ವಾಮೀಜಿಗಳನ್ನು ರಾಜಕೀಯಕ್ಕೆ ಎಳೆದು ತರಲ್ಲ: ಆರ್.ಅಶೋಕ್ ನಿನ್ನೆ ಸ್ವಾಮೀಜಿ ಅವರ ಹೆಗಲ ಮೇಲೆ ಕೈಹಾಕಿಕೊಂಡಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿ, ಸ್ವಾಮೀಜಿಯವರ ಹೆಗಲ ಮೇಲೆ ಕೈ ಹಾಕಿದ್ದರ ಬಗ್ಗೆ ಕಾಮೆಂಟ್ ಮಾಡಲ್ಲ. ಸ್ವಾಮೀಜಿಗೂ, ಭಕ್ತರಿಗೂ ಭಗವಂತನಿಗೂ ಇರುವ ಸಂಬಂಧ ಇರಬೇಕು. ಹಿಂದೆ ಬಾಲಗಂಗಾಧರನಾಥ ಸ್ವಾಮೀಜಿಯನ್ನು ಹಾಗೇ ನೋಡುತ್ತಿದ್ದೆವು. ಇವರನ್ನೂ ಹಾಗೇ ನೋಡುತ್ತೇವೆ. ರಾಜಕೀಯದ ಮಧ್ಯೆ ಸ್ವಾಮೀಜಿಗಳನ್ನ ಎಳೆದು ತರಲು ನಾನು ಸಿದ್ಧನಿಲ್ಲ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • 5,000 ಕೋಟಿ ವೆಚ್ಚದ ಬೆಂಗಳೂರು ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಫೋಟೋ ಬಿಡುಗಡೆ

    5,000 ಕೋಟಿ ವೆಚ್ಚದ ಬೆಂಗಳೂರು ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಫೋಟೋ ಬಿಡುಗಡೆ

    ನವದೆಹಲಿ: ಸುಮಾರು 5000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ (Bengaluru Airport) ದ ನಿಲ್ದಾಣದ ಟರ್ಮಿನಲ್ -2 ಅನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಶುಕ್ರವಾರ ಉದ್ಘಾಟಿಸಲಿದ್ದಾರೆ.

    ಬೆಂಗಳೂರು ವಿಮಾನ ನಿಲ್ದಾಣದ ಪ್ರಯಾಣಿಕರ ದಟ್ಟಣೆ ಇಳಿಸಲು ಹೊಸ ಟರ್ಮಿನಲ್ ನಿರ್ಮಾಣ ಮಾಡಿದ್ದು, ಪ್ರಸ್ತುತ 2.5 ಕೋಟಿಯಿಂದ ವಾರ್ಷಿಕವಾಗಿ ಸುಮಾರು 5-6 ಕೋಟಿ ಪ್ರಯಾಣಿಕರನ್ನು ನಿಭಾಯಿಸಲು ಸಾಧ್ಯವಾಗಲಿದೆ. ಟರ್ಮಿನಲ್ 2 ಉದ್ಘಾಟನೆಯಿಂದ ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯ ಮತ್ತು ಚೆಕ್-ಇನ್ ದ್ವಿಗುಣಗೊಳ್ಳುತ್ತವೆ ಇದು ಪ್ರಯಾಣಿಕರಿಗೆ ಸಹಾಯವಾಗಲಿದೆ. ಇದನ್ನೂ ಓದಿ: ಕಾಫಿನಾಡಲ್ಲಿ ದತ್ತಮಾಲಾ ಅಭಿಯಾನ – ಕೇಸರಿ ಬಾವುಟ ವಿಚಾರಕ್ಕೆ 2 ಕೋಮುಗಳ ಮಧ್ಯೆ ಗಲಾಟೆ

    ಟರ್ಮಿನಲ್ 2 ಅನ್ನು ಉದ್ಯಾನ ನಗರಿ ಬೆಂಗಳೂರಿನ ಗೌರವಾರ್ಥವಾಗಿ ವಿನ್ಯಾಸಗೊಳಿಸಲಾಗಿದೆ. ಪ್ರಯಾಣಿಕರ ಅನುಭವವನ್ನು “ಉದ್ಯಾನವನದಲ್ಲಿ ನಡಿಗೆ” ಎಂದು ಅರ್ಥೈಸಲಾಗಿದೆ. ಪ್ರಯಾಣಿಕರು 10,000+ ಚದರ ಮೀಟರ್ ಗಳಷ್ಟು ಹಸಿರು ಗೋಡೆಗಳು, ನೇತಾಡುವ ಉದ್ಯಾನಗಳು ಮತ್ತು ಹೊರಾಂಗಣ ಉದ್ಯಾನಗಳ ಮೂಲಕ ಪ್ರಯಾಣಿಸುತ್ತಾರೆ.

    ಈ ಉದ್ಯಾನಗಳನ್ನು ಸ್ಥಳೀಯ ತಂತ್ರಜ್ಞಾನವನ್ನು ಬಳಸಿಕೊಂಡು ಭಾರತ (India) ದಲ್ಲಿ ನಿರ್ಮಿಸಿದೆ. ಈ ವಿಮಾನ ನಿಲ್ದಾಣವು ನವೀಕರಿಸಬಹುದಾದ ಶಕ್ತಿಯ 100% ಬಳಕೆ ಮಾಡಿಕೊಂಡಿದೆ. ಹೊಸ ಟರ್ಮಿನಲ್ ಫೋಟೋಗಳು ಬಿಡುಗಡೆಯಾಗಿದ್ದು ಎಲ್ಲರನ್ನು ಹುಬ್ಬೇರಿಸುವಂತೆ ಕಂಗೊಳಿಸುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರು ವಿಮಾನ ನಿಲ್ದಾಣದ ಹಿಂದಿನ ಖ್ಯಾತಿ ಹಾಳಾಗುತ್ತಿದೆ: ಕಿರಣ್ ಮಜುಂದಾರ್ ಶಾ

    ಬೆಂಗಳೂರು ವಿಮಾನ ನಿಲ್ದಾಣದ ಹಿಂದಿನ ಖ್ಯಾತಿ ಹಾಳಾಗುತ್ತಿದೆ: ಕಿರಣ್ ಮಜುಂದಾರ್ ಶಾ

    ಬೆಂಗಳೂರು: ಸಿಲಿಕಾನ್ ಸಿಟಿ ವಿಮಾನ ನಿಲ್ದಾಣ ಹಾಗೂ ನಮ್ಮ ನಗರದ ಬಗ್ಗೆ ಈ ಹಿಂದೆ ಇದ್ದ ದಕ್ಷತೆ ಹಾಗೂ ಖ್ಯಾತಿ ಇತ್ತೀಚೆಗೆ ಹಾಳಾಗುತ್ತಿದೆ ಎಂದು ಖ್ಯಾತ ಉದ್ಯಮಿ ಹಾಗೂ ಬೆಂಗಳೂರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಮಾಜಿ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಟ್ವಿಟ್ಟರ್‌ನಲ್ಲಿ ಟೀಕೆ ಮಾಡಿದ್ದಾರೆ.

    ಟ್ವಿಟ್ಟರ್‌ನಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಬಗ್ಗೆ ಟೀಕಿಸಿರುವ ಕಿರಣ್, ನಮ್ಮ ಪ್ರಯಾಣ ಯಾವಾಗಲೂ ಸ್ಮಾರ್ಟ್ ಹಾಗೂ ಡಿಜಿಟಲ್ ಆಗಿರಬೇಕು. ಮುಖವನ್ನು ಗುರುತಿಸುವ ತಂತ್ರಜ್ಞಾನ, ಬಯೋಮೆಟ್ರಿಕ್ಸ್ ಪ್ರವೇಶ ಹಾಗೂ ನಿರ್ಗಮನವನ್ನು ಪರಿಣಾಮಕಾರಿಯಾಗಿ ಮಾಡಬೇಕು. ಆದರೆ ಪ್ರಯಾಣದ ಬಗ್ಗೆ ಇರುವ ಈ ತಂತ್ರಜ್ಞಾನದ ನಮ್ಮ ನಿರೀಕ್ಷೆ ದುಃಸ್ವಪ್ನವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಮರು ಪರೀಕ್ಷೆ ನಡೆದರೆ ಜ್ಞಾನೇಂದ್ರರಂತಹ ಅಸಮರ್ಥರು ಪಿಎಸ್‍ಐಗಳಾಗಿ ನೇಮಕಗೊಂಡರೂ ಆಶ್ಚರ್ಯ ಇಲ್ಲ: ಸಿದ್ದು

    ಈ ಟೀಕೆಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ವಿಮಾನ ನಿಲ್ದಾಣದ ಅಧಿಕೃತ ಖಾತೆ, ಪತ್ರ ಬರೆದಿರುವುದಕ್ಕಾಗಿ ಧನ್ಯವಾದಗಳು. ನಾವು ಖಂಡಿತವಾಗಿಯೂ ನಿಮ್ಮ ಪ್ರತಿಕ್ರಿಯೆಯನ್ನು ನಮ್ಮ ಕಾರ್ಯಾಚರಣೆ ತಂಡದೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ಬರೆದಿದೆ. ಇದನ್ನೂ ಓದಿ: ಶೀಘ್ರದಲ್ಲೇ ಪಿಎಸ್‍ಐ ಮರುಪರೀಕ್ಷೆ ದಿನಾಂಕ ಪ್ರಕಟ: ಆರಗ ಜ್ಞಾನೇಂದ್ರ

  • ವಿಮಾನ ನಿಲ್ದಾಣದಲ್ಲಿ ಸೋಂಕಿತರಿಬ್ಬರು ಎಸ್ಕೇಪ್ ಆಗಲು ಯತ್ನ- ಹಿಡಿದು ಆಸ್ಪತ್ರೆಗೆ ಸೇರಿಸಿದ ಪೊಲೀಸರು!

    ವಿಮಾನ ನಿಲ್ದಾಣದಲ್ಲಿ ಸೋಂಕಿತರಿಬ್ಬರು ಎಸ್ಕೇಪ್ ಆಗಲು ಯತ್ನ- ಹಿಡಿದು ಆಸ್ಪತ್ರೆಗೆ ಸೇರಿಸಿದ ಪೊಲೀಸರು!

    ಬೆಂಗಳೂರು: ಇಲ್ಲಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪರಾರಿಯಾಗಲು ಯತ್ನಿಸಿದ ಇಬ್ಬರು ಸೋಂಕಿತರನ್ನು ಹಿಡಿದು ಆಸ್ಪತ್ರೆಗೆ ದಾಖಲಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬೆಂಗಳೂರಿನಲ್ಲಿ ನಿನ್ನೆ ಒಮಿಕ್ರಾನ್ ಬ್ಲಾಸ್ಟ್ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಅಂತರಾಷ್ಟ್ರೀಯ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಟ್ಟು ಪ್ರತಿಯೊಬ್ಬರಿಗೂ ಕಡ್ಡಾಯ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಕೋವಿಡ್ ಟೆಸ್ಟ್‌ನಲ್ಲಿ ನೆಗಟಿವ್ ಬಂದವ್ರಿಗೆ ಮಾತ್ರ ಹೊರ ಬರಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಕೋವಿಡ್ ಟೆಸ್ಟ್‌ನಲ್ಲಿ ಪಾಸಿಟಿವ್ ಕಂಡುಬಂದರೆ ಕೂಡಲೇ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ 8ಕ್ಕೇರಿದ ಓಮಿಕ್ರಾನ್- ಸೋಂಕಿತರ ಟ್ರಾವೆಲ್ ಹಿಸ್ಟರಿ ಇಂತಿದೆ

    ವಿಮಾನ ನಿಲ್ದಾಣದ ಒಳಭಾಗದಲ್ಲಿ ಖಾಸಗಿ ಲ್ಯಾಬೋರೇಟರಿಯಿಂದ ಕೋವಿಡ್ ಟೆಸ್ಟ್ ನಡೆಯುತ್ತಿದೆ. ಪಾಸಿಟಿವ್ ಬಂದವರನ್ನು ಪ್ರತ್ಯೇಕವಾಗಿ ಹೊರಭಾಗಕ್ಕೆ ಕರೆದೊಯ್ದು ಸ್ಯಾನಿಟೈಸ್ ಮಾಡುತ್ತಾ, ಹೊರ ಕರೆದುಕೊಂಡು ಬರಲಾಗುತ್ತೆ. ಈ ವೇಳೆ ಆರೋಗ್ಯ ಸಿಬ್ಬಂದಿ ಎಕ್ಸಿಟ್ ಆಗುವ ಪ್ರಯಾಣಿಕರನ್ನ ತಡೆದು ಸೋಂಕಿತರನ್ನ ಆಸ್ಪತ್ರೆಗೆ ಶಿಫ್ಟ್ ಮಾಡುತ್ತಿದ್ದಾರೆ.

    ಅಂತೆಯೇ ಈಗಾಗಲೇ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಾಲ್ವರಲ್ಲಿ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಅಂಬುಲೆನ್ಸ್ ಕೂಡ ಬಂದಿತ್ತು. ಈ ವೇಳೆ ಇಬ್ಬರು ಸೋಂಕಿತರು ಅಲ್ಲಿಂದ ಎಸ್ಕೇಪ್ ಆಗಲು ಯತ್ನಿಸಿದ್ದರು. ಪರಿಣಾಮ ಈ ಇಬ್ಬರನ್ನು ಹಿಡಿಯಲು ಪೊಲೀಸರು ಹರಸಾಹಸ ಪಟ್ಟರು. ಇದನ್ನೂ ಓದಿ: ಭಾರತದ ಸ್ಪರ್ಧಿ ಸೇರಿ 17 ಮಂದಿಗೆ ಕೊರೊನಾ- Miss World 2021 ಫೈನಲ್‌ ಮುಂದೂಡಿಕೆ

    ಇಬ್ಬರು ಸೋಂಕಿತರಿಂದಾಗಿ ಏರ್ ಪೋರ್ಟ್‌ನಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಸೋಂಕಿತರನ್ನು ಹಿಡಿಯಲು ಪೊಲೀಸರು ಸರ್ಕಸ್ ಮಾಡಿದರು. ಕೊನೆಗೆ ಇಬ್ಬರನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾದರು. ನಂತರ ನಾಲ್ವರನ್ನು ಕೂಡ ಬೌರಿಂಗ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು.

  • ದಕ್ಷಿಣ ಅಫ್ರಿಕಾದಿಂದ ಬಂದವರಲ್ಲಿ ಇಬ್ಬರಿಗೆ ಸೋಂಕು- ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಹೈ ಅಲರ್ಟ್‌

    ದಕ್ಷಿಣ ಅಫ್ರಿಕಾದಿಂದ ಬಂದವರಲ್ಲಿ ಇಬ್ಬರಿಗೆ ಸೋಂಕು- ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಹೈ ಅಲರ್ಟ್‌

    ಬೆಂಗಳೂರು: ದಕ್ಷಿಣ ಆಫ್ರಿಕಾದಿಂದ ಬಂದವರಲ್ಲಿ ಇಬ್ಬರಿಗೆ ಕೋವಿಡ್‌ ದೃಢಪಟ್ಟಿದ್ದು, ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಅಲ್ಲದೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಹೈ ಅಲರ್ಟ್‌ ಆಗಿದ್ದಾರೆ.

    ದಕ್ಷಿಣ ಆಫ್ರಿಕಾ ಸೇರಿದಂತೆ 10 ಹೈರಿಸ್ಕ್ ದೇಶಗಳ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ಇಡಲಾಗಿದ್ದು, 10 ದೇಶಗಳಿಂದ ಕಳೆದ ಹತ್ತು ದಿನಗಳಲ್ಲಿ 584 ಜನ ಬಂದಿದ್ದಾರೆ. ಅವರಲ್ಲಿ ದಕ್ಷಿಣ ಆಫ್ರಿಕಾದಿಂದ 94 ಜನ ಪ್ರಯಾಣಿಕರು ಬೆಂಗಳೂರಿಗೆ ಆಗಮಿಸಿದ್ದಾರೆ. ಅವರ ಪೈಕಿ ಇಬ್ಬರಲ್ಲಿ ಕೊರೊನಾ ಸೊಂಕು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಕ್ವಾರಂಟೈನ್‌ ಮಾಡಿ ನಿಗಾವಹಿಸಲಾಗಿದೆ. ಇಬ್ಬರಿಂದ ಸ್ಯಾಂಪಲ್ಸ್‌ ಪಡೆದು ರೂಪದ ತಳಿ ಎಂಬುದನ್ನು ಖಾತರಿಪಡಿಸಿಕೊಳ್ಳಲು ಪರೀಕ್ಷೆಗೆ ರವಾನಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಡಿಸಿ ಶ್ರೀನಿವಾಸ್ ತಿಳಿಸಿದ್ದಾರೆ. ಇದನ್ನೂ ಓದಿ: ಕೋವಿಡ್ ಹೊಸ ರೂಪಾಂತರಿ ವೈರಾಣು ನಿಯಂತ್ರಣಕ್ಕೆ ಕ್ರಮ: ಸುಧಾಕರ್

    ಕೊರೊನಾ ವೈರಸ್‌ ಹೊಸ ರೂಪಾಂತರಿ “ಓಮಿಕ್ರಾನ್” ವಿಶ್ವವನ್ನು ತಲ್ಲಣಗೊಳಿಸಿದೆ. ಇದೇ ಸಂದರ್ಭದಲ್ಲಿ ಬೆಂಗಳೂರು ಸೇರಿದಂತೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್‌ ಆಗಿದ್ದು, ಪ್ರಯಾಣಿಕರ ಮೇಲೆ ನಿಗಾವಹಿಸಲಾಗಿದೆ. ಇದನ್ನೂ ಓದಿ: ಓಮಿಕ್ರಾನ್‌ ಆತಂಕ- ಅಂತಾರಾಷ್ಟ್ರೀಯ ವಿಮಾನಯಾನ ನಿರ್ಬಂಧ ಸಡಿಲಗೊಳಿಸುವ ಯೋಜನೆ ಪರಾಮರ್ಶಿಸಲು ಪ್ರಧಾನಿ ಸೂಚನೆ

  • ದಕ್ಷಿಣ ಏಷ್ಯಾದಲ್ಲೇ ಮೊದಲು- ರೋಸೆನ್‌ಬೌರ್ ಫೈರ್‌ಫೈಟಿಂಗ್ ಸಿಮ್ಯುಲೇಟರ್ ಪರಿಚಯಿಸಿದ ಬೆಂಗಳೂರು ಏರ್‌ಪೋರ್ಟ್‌

    ದಕ್ಷಿಣ ಏಷ್ಯಾದಲ್ಲೇ ಮೊದಲು- ರೋಸೆನ್‌ಬೌರ್ ಫೈರ್‌ಫೈಟಿಂಗ್ ಸಿಮ್ಯುಲೇಟರ್ ಪರಿಚಯಿಸಿದ ಬೆಂಗಳೂರು ಏರ್‌ಪೋರ್ಟ್‌

    ಚಿಕ್ಕಬಳ್ಳಾಪುರ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಂಭವಿಸುವ ಅಗ್ನಿ ಅವಘಡವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲು ಇದೇ ಮೊದಲ ಬಾರಿಗೆ “ರೋಸೆನ್‌ಬೌರ್ ಫೈರ್‌ಫೈಟಿಂಗ್ ಸಿಮ್ಯುಲೇಟರ್” ಅನ್ನು ಪರಿಚಯಸಲಾಗಿದೆ. ಇದು ದಕ್ಷಿಣ ಏಷ್ಯಾದಲ್ಲೇ ಮೊದಲ ಬಾರಿಗೆ ಪರಿಚಯಿಸಿದ ಅತ್ಯಾಧುನಿಕ ಅಗ್ನಿಶಾಮಕ ತಂತ್ರಜ್ಞಾನವಾಗಿದೆ.

    ಈ ಬಗ್ಗೆ ಮಾತನಾಡಿರುವ ಬಿಐಎಎಲ್ ಸಿಇಒ ಜಯರಾಜ್ ಷಣ್ಮುಗಂ, ಬೆಂಗಳೂರು ವಿಮಾನ ನಿಲ್ದಾಣದ ಸುರಕ್ಷತೆಯ ದೃಷ್ಟಿಯಿಂದ ದಕ್ಷಿಣ ಏಷ್ಯಾದಲ್ಲೇ ಮೊದಲ ಬಾರಿಗೆ ರೋಸೆನ್‌ಬೌರ್ ಫೈರ್‌ಫೈಟಿಂಗ್ ಸಿಮ್ಯುಲೇಟರ್‌ನನ್ನು ಪರಿಚಯಿಸಲಾಗುತ್ತಿದೆ. ಇದು ಯಾವುದೇ ರೀತಿಯ ಅಗ್ನಿ ಅವಘಡವಾದರೂ ಕೂಡಲೇ ಅದನ್ನು ಆರಿಸುವ ಕೆಲಸದಲ್ಲಿ ನಿಪುಣತೆ ಹೊಂದಿದೆ. ಈ ಅತ್ಯಾಧುನಿಕ ತಂತ್ರಜ್ಞಾನದ ಅಗ್ನಿಶಾಮಕವನ್ನು ಭಾರತದ ಯಾವುದೇ ವಿಮಾನ ನಿಲ್ದಾಣದ ತಂಡ ಇಲ್ಲಿಗೆ ಆಗಮಿಸಿ ಇದರ ತರಬೇತಿ ಪಡೆಯಲು ಸಹ ಮುಕ್ತ ಅವಕಾಶವನ್ನು ಒದಗಿಸಿಕೊಡಲಾಗಿದೆ. ಇದನ್ನೂ ಓದಿ: ಪುನೀತ್ ರಾಜ್ ಕುಮಾರ್ ಫ್ಲೆಕ್ಸ್ ಹರಿದವನಿಗೆ ಹಿಗ್ಗಾಮುಗ್ಗ ಥಳಿತ

    ವಿಮಾನ ನಿಲ್ದಾಣ ಅಥವಾ ವಿಮಾನಗಳ ಅಪಘಾತದ ಸಂದರ್ಭದಲ್ಲಿ ಹೊತ್ತಿಕೊಳ್ಳುವ ಅಗ್ನಿ ಅವಘಡವನ್ನು ತುರ್ತಾಗಿ ಆರಿಸುವಲ್ಲಿ ಈ ಅತ್ಯಾಧುನಿಕ ಸಿಮ್ಯುಲೇಟರ್ ಕೆಲಸ ಮಾಡಲಿದೆ. ರೋಸನ್‌ಬೌರ್ ಸಿಮ್ಯುಲೇಟರ್‌ನ ಎರಡು ಫ್ಯಾಂಥರ್ 6 ಟ್ರಕ್‌ಗಳು ಹಾಗೂ 8 ಟ್ರಕ್‌ಗಳನ್ನು ಇರಿಸಲಾಗಿದೆ. ಈ ಟ್ರಕ್‌ಗಳಲ್ಲಿ ಎರಡು ಹೈರೀಚ್ ಎಕ್ಸ್ಟೆಂಡೆಬಲ್ ಟರೆಟ್ಸ್ (ಎಚ್‌ಆರ್‌ಇಟಿ)ಯನ್ನು ಒಳಗೊಂಡಿದ್ದು, ಈ ಮಟ್ಟದ ಸುಸಜ್ಜಿತ ಟ್ರಕ್‌ಗಳನ್ನು ದಕ್ಷಿಣ ಏಷ್ಯಾದಲ್ಲಿಯೇ ಯಾವ ವಿಮಾನ ನಿಲ್ದಾಣಗಳು ಒಳಗೊಂಡಿಲ್ಲ ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ಕಾಂಗ್ರೆಸ್ ಎಲ್ಲಿದೆ?: ಈಶ್ವರಪ್ಪ ಪ್ರಶ್ನೆ

    ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸುರಕ್ಷತೆ ಕಾಯ್ದುಕೊಳ್ಳುವುದು ನಮ್ಮ ಮೊದಲ ಆದ್ಯತೆ. ರೋಸೆನ್‌ಬೌರ್ ಸಿಎಫ್‌ಟಿ ಮೂಲಕ ಕಠಿಣವಾದ ಅಗ್ನಿ ಅವಘಡದ ಸಂದರ್ಭದಲ್ಲಿ ಈ ಸಿಮ್ಯುಲೇಟರ್ ಚಾರ್ತುಯದಿಂದ ಅಗ್ನಿಯನ್ನು ಶಮನ ಮಾಡಲಿದೆ. ವಿಮಾನ ನಿಲ್ದಾಣದಲ್ಲಿರುವ ಅಗ್ನಿಶಾಮಕ ದಳದವರಿಗೆ ಈ ಸಿಮ್ಯುಲೇಟರ್‌ನನ್ನು ಬಳಸುವ ವಿಧಾನವನ್ನು ತರಬೇತಿ ನೀಡಲಾಗಿದೆ. ಅದರಲ್ಲೂ ಕಮಾಂಡ್ ನಿಯಂತ್ರಕರು, ಮೂಲ ಚಾಲಕರು, ಪೋಸಿಶನಿಂಗ್ ಇನ್ಸಿಡೆಂಟ್ ಕಮಾಂಡರ್‌ಗಳು, ಕ್ಯೂ ಕಮಾಂಡರ್‌ಗಳು ಹಾಗೂ ಅಗ್ನಿಶಾಮಕ ಮುಂಚೂಣಿ ಸಿಬ್ಬಂದಿಗೆ ಈ ತರಬೇತಿಯನ್ನು ಕಡ್ಡಾಯವಾಗಿ ನೀಡಲಾಗುವುದು ಎಂದು ವಿವರಿಸಿದ್ದಾರೆ.

  • ಕೆಂಪೇಗೌಡರ ಪುತ್ಥಳಿ ಕಾರ್ಯ- ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ, ಪರಿಶೀಲನೆ

    ಕೆಂಪೇಗೌಡರ ಪುತ್ಥಳಿ ಕಾರ್ಯ- ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ, ಪರಿಶೀಲನೆ

    ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಾಣವಾಗುತ್ತಿರುವ ಕೆಂಪೇಗೌಡ ಪಾರ್ಕ್ ಗೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಶ್ರೀಗಳು ಭೇಟಿ ನೀಡಿ ಕಾಮಗಾರಿ ಸ್ಥಳ ವೀಕ್ಷಣೆ ಮಾಡಿದರು.

    ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕೇಂಪೇಗೌಡ ಪಾರ್ಕ್ ನಲ್ಲಿ ಸರ್ಕಾರದ ವತಿಯಿಂದ ಬೃಹತ್ ಪುತ್ಥಳಿ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ಥಾಣದಲ್ಲಿ ರಾಜ್ಯ ಸರ್ಕಾರದ ವತಿಯಿಂದ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಬೃಹತ್ ಪುತ್ಧಳಿ ಮತ್ತು ಪಾರ್ಕ್ ನಿರ್ಮಾಣಕ್ಕೆ ಕಳೆದ ವರ್ಷ ಸಿಎಂ ಬಿ.ಎಸ್ ಯಡಿಯೂರಪ್ಪ ಚಾಲನೆ ನೀಡಿದ್ದರು. ಹೀಗಾಗಿ ಕೆಂಪೇಗೌಡರ ಬೃಹತ್ ಪುತ್ಥಳಿ ಮತ್ತು ಪಾರ್ಕ್ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದ್ದು ಇಂದು ಆ ಸ್ಥಳಕ್ಕೆ ಸ್ವಾಮೀಜಿಗಳು ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

    ದೆಹಲಿಯಲ್ಲಿ ಕೆಂಪೇಗೌಡರ ಬೃಹತ್ ಪ್ರತಿಮೆಯನ್ನ ನಿರ್ಮಾಣ ಮಾಡ್ತಿದ್ದು, ಇಂದು ಪ್ರತಿಮೆಯ ಮೊದಲ ಭಾಗವಾಗಿ ನಿರ್ಮಾಣವಾಗಿರವ ಪ್ರತಿಮೆಯ ಕಾಲುಗಳು ದೆಹಲಿಯಿಂದ ಪ್ರತಿಮೆ ಸ್ಥಳಕ್ಕೆ ಬಂದು ತಲುಪಿದೆ. ಹೀಗಾಗಿ ಪ್ರತಿಮೆಯ ಪಾದಗಳನ್ನ ಸ್ವಾಮೀಜಿ ಸೇರಿದಂತೆ ಅಧಿಕಾರಿಗಳು ಬಂದು ವೀಕ್ಷಣೆ ಮಾಡಿದ್ರು. ಅಲ್ಲದೆ ಮುಂದಿನ 2022 ರ ವೇಳೆಗೆ ಪಾರ್ಕ್ ಮತ್ತು ಪುತ್ಥಳಿ ನಿರ್ಮಾಣಕ್ಕೆ ಗಡುವು ನೀಡಿದ್ದು ನಿರ್ಮಾಣದ ಕಾರ್ಯ ಸಹ ಭರದಿಂದ ಸಾಗಿದೆ.

    ಬೆಂಗಳೂರಿನಿಂದ ದೇಶ ಮತ್ತು ವಿದೇಶಗಳಿಗೆ ತೆರಳಲು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಏರ್ಪೋಟ್ ಪ್ರವೇಶಿಸುತ್ತಿದ್ದಂತೆ, ಬೆಂಗಳೂರು ಮಹಾನಗರದ ನಿರ್ಮಾತೃ, ಬೃಹತ್ ನಾಡಪ್ರಭು ಕೇಂಪೇಗೌಡರ ಪುತ್ಥಳಿ ಮತ್ತು ಪಾರ್ಕ್ ಕಾಣಿಸುವ ರೀತಿಯಲ್ಲಿ ಪ್ಲಾನ್ ರೂಪಿಸಲಾಗಿದೆ. ನಾಡಪ್ರಭುವಿನ ಪುತ್ಥಳಿ ದೇಶ ವಿದೇಶಿ ಪ್ರಯಾಣಿಕರ ಕಣ್ಮನ ಸೆಳೆಯಲಿದೆ.