Tag: bengaluru airport

  • ದಕ್ಷಿಣ ಭಾರತದ ಏವಿಯೇಷನ್‌ ಹಬ್‌ ಆಗುತ್ತಾ ಬೆಂಗ್ಳೂರು ಏರ್‌ಪೋರ್ಟ್‌?- ಏನಿದು ಏವಿಯೇಷನ್‌ ಹಬ್‌?

    ದಕ್ಷಿಣ ಭಾರತದ ಏವಿಯೇಷನ್‌ ಹಬ್‌ ಆಗುತ್ತಾ ಬೆಂಗ್ಳೂರು ಏರ್‌ಪೋರ್ಟ್‌?- ಏನಿದು ಏವಿಯೇಷನ್‌ ಹಬ್‌?

    – ಬೆಂಗಳೂರು ವಿಮಾನ ನಿಲ್ದಾಣವನ್ನು ಏರ್‌ ಇಂಡಿಯಾ ಹೇಗೆ ಪರಿವರ್ತಿಸುತ್ತೆ?

    ಬೆಂಗಳೂರು ವಿಮಾನ ನಿಲ್ದಾಣವನ್ನು ದಕ್ಷಿಣ ಭಾರತದ ಪ್ರಮುಖ ಏವಿಯೇಷನ್ ಹಬ್ (ವಾಯುಯಾನ ಕೇಂದ್ರ) ಆಗಿ ಅಭಿವೃದ್ಧಿಪಡಿಸುವುದಾಗಿ ಏರ್ ಇಂಡಿಯಾ ಘೋಷಿಸಿದೆ. ಈ ಸಂಬಂಧ ಏರ್ ಇಂಡಿಯಾ ಜೊತೆ ಬೆಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ಒಪ್ಪಂದಕ್ಕೆ ಸಹಿ ಹಾಕಿದೆ. ಪ್ರಸ್ತುತ, ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇಂಡಿಗೋ ಮತ್ತು ಏರ್ ಇಂಡಿಯಾದಂತಹ ಪ್ರಮುಖ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ದೇಶದ ಅತಿದೊಡ್ಡ ಅಂತಾರಾಷ್ಟ್ರೀಯ ಕೇಂದ್ರವಾಗಿದೆ. ಆ ಸಾಲಿಗೆ ಬೆಂಗಳೂರು ಏರ್‌ಪೋರ್ಟ್ ಸೇರಿಸುವ ಪ್ರಯತ್ನ ನಡೆದಿದೆ.

    ಅಷ್ಟಕ್ಕೂ ಏನಿದು ಏವಿಯೇಷನ್ ಹಬ್? ಭಾರತದಲ್ಲಿ ಈಗ ಎಷ್ಟು ವಾಯುಯಾನ ಕೇಂದ್ರಗಳಿವೆ? ಏವಿಯೇಷನ್ ಹಬ್‌ನಿಂದ ಪ್ರಯೋಜನವೇನು ಎಂಬ ಪ್ರಶ್ನೆಗಳಿಗೆ ವಿವರ ಇಲ್ಲಿದೆ.

    ಏವಿಯೇಷನ್ ಹಬ್
    ಪ್ರಯಾಣಿಕರ ದಟ್ಟಣೆ ಮತ್ತು ವಿಮಾನ ಕಾರ್ಯಾಚರಣೆಗಳನ್ನು ಕೇಂದ್ರೀಕರಿಸಲು ಒಂದು ಅಥವಾ ಹೆಚ್ಚಿನ ವಿಮಾನಯಾನ ಸಂಸ್ಥೆಗಳು ಬಳಸುವ ವಿಮಾನ ನಿಲ್ದಾಣವೇ ಏವಿಯೇಷನ್ ಹಬ್. ಇದನ್ನ ಏರ್‌ಲೈನ್ ಹಬ್ ಅಥವಾ ಹಬ್ ವಿಮಾನ ನಿಲ್ದಾಣ ಅಂತಲೂ ಕರೆಯಲಾಗುತ್ತದೆ. ಪ್ರಯಾಣಿಕರು ತಾವು ಹೋಗಬಯಸುವ ವಿಶ್ವದ ವಿವಿಧ ನಗರಗಳಿಗೆ ನೇರ ಸಂಪರ್ಕ ಕಲ್ಪಿಸುವ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ. ಇದು ಹಬ್ ಮತ್ತು ಸ್ಪೋಕ್ ವ್ಯವಸ್ಥೆಯ ಭಾಗವಾಗಿದೆ. ಪ್ರಮುಖ ಅಂತಾರಾಷ್ಟ್ರೀಯ ನಗರಗಳ ನಡುವೆ ನೇರ ಸಂಪರ್ಕವನ್ನು ಒದಗಿಸುವ ಒಂದು ಅಥವಾ ಎರಡು ಪ್ರಮುಖ ವಿಮಾನಯಾನ ಸಂಸ್ಥೆಗಳೊಂದಿಗೆ ಈ ಹಬ್‌ಗಳನ್ನು ಗುರುತಿಸಲಾಗಿದೆ.

    ವಿಮಾನ ನಿಲ್ದಾಣದಲ್ಲಿ ದಕ್ಷ ಹಾಗೂ ಸುರಕ್ಷಿತ ಕಾರ್ಯಾಚರಣೆ ನಡೆಸುವುದು ಇದರ ಮುಖ್ಯ ಉದ್ದೇಶ. ಆಗ ಗ್ರಾಹಕರಿಗೆ ಉತ್ತಮ ಅನುಭವ ಸಿಗುತ್ತದೆ. ಈ ಉದ್ದೇಶದಿಂದ ಭಾರತದಲ್ಲಿ ವಾಯು ಸಂಪರ್ಕ ವಿಸ್ತರಿಸಲು ಏರ್ ಇಂಡಿಯಾ ಮುಂದಾಗಿದೆ.

    ವಿಮಾನಯಾನ ಸಂಶೋಧನಾ ಸಂಸ್ಥೆಯಾದ ಒಎಜಿ, ಲಂಡನ್ ಹೀಥ್ರೂವನ್ನು (2023 ಕ್ಕೆ) ವಿಶ್ವದ ಅತ್ಯಂತ ಹೆಚ್ಚು ಸಂಪರ್ಕಿತ ವಿಮಾನ ನಿಲ್ದಾಣವೆಂದು ಗುರುತಿಸಿದೆ. ಇದರ ಜೊತೆಗೆ ನ್ಯೂಯಾರ್ಕ್‌ನ ಜೆಎಫ್‌ಕೆ ವಿಮಾನ ನಿಲ್ದಾಣ, ನೆದರ್‌ಲ್ಯಾಂಡ್‌ನ ಆಮ್‌ಸ್ಟರ್‌ಡ್ಯಾಮ್ ವಿಮಾನ ನಿಲ್ದಾಣ, ಮಲೇಷ್ಯಾದ ಕೌಲಾಲಂಪುರ್ ವಿಮಾನ ನಿಲ್ದಾಣ ಮತ್ತು ಟೋಕಿಯೊದ ಹನೇಡಾ ವಿಮಾನ ನಿಲ್ದಾಣವನ್ನೂ ಗುರುತಿಸಲಾಗಿದೆ.

    ಹಬ್ ಅನ್ನು ಸ್ಥಾಪಿಸುವ ಪ್ರಮುಖ ಅಂಶವೆಂದರೆ, ಕನಿಷ್ಠ ಒಂದು ಏರ್‌ಲೈನ್‌ನ ಪ್ರಾಬಲ್ಯವನ್ನು ಹೊಂದಿರುವುದು. ಉದಾಹರಣೆಗೆ: ಹೀಥ್ರೂ ವಿಮಾನ ನಿಲ್ದಾಣದಲ್ಲಿ ಲಂಡನ್ ಹೀಥ್ರೂನಿಂದ ಕಾರ್ಯನಿರ್ವಹಿಸುವ ಒಟ್ಟು ವಿಮಾನಗಳ ಸಂಖ್ಯೆಯಲ್ಲಿ ಬ್ರಿಟಿಷ್ ಏರ್ವೇಸ್ 50% ಪಾಲನ್ನು ಹೊಂದಿದೆ. ಜೆಕೆಎಫ್ ವಿಮಾನ ನಿಲ್ದಾಣದಲ್ಲಿ ಡೆಲ್ಟಾ ಏರ್‌ಲೈನ್ 34% ಪಾಲನ್ನು ಹೊಂದಿದೆ. ಕೆಎಲ್‌ಎಂ-ರಾಯಲ್ ಏರ್‌ಲೈನ್, ಆಮ್‌ಸ್ಟರ್‌ಡ್ಯಾಮ್ ಶಿಪೋಲ್ ವಿಮಾನ ನಿಲ್ದಾಣದಲ್ಲಿ 53% ಪಾಲನ್ನು ಹೊಂದಿದೆ. ಕೌಲಾಲಂಪುರದಿಂದ ವಿಮಾನಗಳಲ್ಲಿ ಏರ್ ಏಷ್ಯಾ 34% ಪಾಲನ್ನು ಹೊಂದಿದೆ.

    ವಿಮಾನ ನಿಲ್ದಾಣ ಕೇಂದ್ರವು ಅಂತಾರಾಷ್ಟ್ರೀಯ-ಅಂತಾರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ-ದೇಶೀಯ ಸಂಪರ್ಕಕ್ಕೆ (2 ಮಾರ್ಗಗಳ ನಡುವೆ) ಕನಿಷ್ಠ ಸಾರಿಗೆ ಸಮಯ ಒದಗಿಸಬೇಕು. ಪ್ರತಿ ವರ್ಷ 90% ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿರುವ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 50 ಗೇಟ್‌ಗಳನ್ನು ಹೊಂದಿರುವ ಮೂರು ಪ್ರಮುಖ ಟರ್ಮಿನಲ್‌ಗಳನ್ನು ಹೊಂದಿದೆ. ಪ್ರತಿಯೊಂದು ಟರ್ಮಿನಲ್‌ಗಳ ನಡುವೆ 30 ನಿಮಿಷಗಳ ವರೆಗೆ ಟ್ರಾನ್ಸ್‌ಫರ್‌ ಸಮಯವನ್ನು ಸುಗಮಗೊಳಿಸುತ್ತದೆ.

    ದಕ್ಷಿಣ ಭಾರತದಲ್ಲಿ ಏವಿಯೇಷನ್ ಹಬ್ ಯಾಕೆ?
    ದಕ್ಷಿಣ ಭಾರತದಿಂದ ನೇರ ದೀರ್ಘ ಪ್ರಯಾಣದ ಮಾರ್ಗಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ಪೂರೈಸಲು ಏರ್ ಇಂಡಿಯಾ ಉದ್ದೇಶಿಸಿದೆ. ಈ ಪಾಲುದಾರಿಕೆಯು ಎಂಆರ್‌ಓ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲಿದೆ. ಜೊತೆಗೆ ಹೊಸ ಉದ್ಯೋಗಾವಕಾಶಗಳನ್ನೂ ಸೃಷ್ಟಿಸುತ್ತದೆ.

    ಬೆಂಗಳೂರು ಏರ್‌ಪೋರ್ಟ್‌ಗೆ ಒಲಿದ ಅವಕಾಶ!
    ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಪ್ರಯಾಣಿಕರು ಪ್ರಯಾಣಿಸುವ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಹೊಂದಿದೆ. ಈ ಒಪ್ಪಂದದೊಂದಿಗೆ ವಿಶ್ವದ ದೊಡ್ಡ ದೊಡ್ಡ ನಗರಗಳಿಗೆ ನೇರ ವಿಮಾನ ಸಂಪರ್ಕ ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೇ, ಪ್ರಯಾಣಿಕರಿಗೆ ಉತ್ತಮ ಪ್ರಯಾಣದ ಅನುಭವ ಕೂಡ ದೊರೆಯಲಿದೆ.

    1,200 ಹೊಸ ಉದ್ಯೋಗ ಸೃಷ್ಟಿ
    ಈ ಕಾರಣದಿಂದಾಗಿ ಏರ್ ಇಂಡಿಯಾವು ಕರ್ನಾಟಕ ಸರ್ಕಾರದೊಂದಿಗೆ ಸಹಿ ಹಾಕಿದೆ. ವಿಮಾನ ನಿಲ್ದಾಣದಲ್ಲಿ ನಿರ್ವಹಣೆ, ದುರಸ್ತಿ ಮತ್ತು ಉತ್ತಮ ಸೌಲಭ್ಯ ಒದಗಿಸುವ ಕೆಲಸ ಮಾಡಲಿದೆ. ಈ ಒಪ್ಪಂದದಿಂದಾಗಿ ರಾಜ್ಯದಲ್ಲಿ ಹೆಚ್ಚು ನುರಿತ ವ್ಯಕ್ತಿಗಳಿಗೆ 1,200 ಹೊಸ ಉದ್ಯೋಗಾವಕಾಶಗಳನ್ನೂ ಒದಗಿಸಲು ಸಾಧ್ಯವಾಗಲಿದೆ. 2023 ರಲ್ಲಿ ಬೆಂಗಳೂರು ವಿಮಾನ ನಿಲ್ದಾಣವು 3.72 ಕೋಟಿ ಪ್ರಯಾಣಿಕರನ್ನು ಹೊಂದಿತ್ತು.

    ಭಾರತದಲ್ಲಿ ಹಬ್‌
    ಭಾರತದ ಮೂಲಕ ವಿದೇಶಗಳ ವಿವಿಧ ಪ್ರಮುಖ ನಗರಗಳಿಗೆ ನೇರ ಸಂಪರ್ಕ ಸಾಧಿಸಲು ಕೇಂದ್ರ ಸರ್ಕಾರವು ದೇಶದಲ್ಲಿ ಏವಿಯೇಷನ್ ಹಬ್‌ಗಳನ್ನು ಅಭಿವೃದ್ಧಿಪಡಿಸಲು ಕ್ರಮಕೈಗೊಂಡಿದೆ. ಭಾರತದ ಅತಿ ದೊಡ್ಡ ಮತ್ತು ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿರುವ ದೆಹಲಿಯಲ್ಲಿ ಈ ಯೋಜನೆ ಜಾರಿಯಲ್ಲಿದೆ. 2022-23 (ಏಪ್ರಿಲ್-ಮಾರ್ಚ್) 4,29,964 ವಿಮಾನಗಳ ಕಾರ್ಯಾಚರಣೆ ಮತ್ತು 6.52 ಕೋಟಿ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಿದೆ.

    ಕೇಂದ್ರದ ರಾಷ್ಟ್ರೀಯ ವಿಮಾನಯಾನ ಹಬ್ ನೀತಿಯ ಪ್ರಕಾರ, ದುಬೈ ಮತ್ತು ದೋಹಾ ವಿಮಾನ ನಿಲ್ದಾಣಗಳಿಗೆ ಅನುಗುಣವಾಗಿ ದೆಹಲಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಕೇಂದ್ರವಾಗಿಸಲು ಸರ್ಕಾರವು ಸಮಿತಿಯನ್ನು ರಚಿಸಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ನಡುವೆ ತಡೆರಹಿತ ಸಂಪರ್ಕ ಸಾಧಿಸಲು, ಭದ್ರತಾ ತಪಾಸಣೆ ಹಾಗೂ ವಲಸೆಯ ಅಡಚಣೆಯಂತಹ ಸವಾಲುಗಳಿಗೆ ಈ ನೀತಿಯು ಪರಿಹಾರವಾಗಿದೆ.

  • ಅಯೋಧ್ಯೆ ಕಡೆಗೆ ರಾಮಭಕ್ತರು – ಬೆಂಗಳೂರು ಏರ್‌ಪೋರ್ಟ್‌ನಲ್ಲಿ ‘ಶ್ರೀರಾಮ.. ಜಯರಾಮ..’ ಹಾಡಿಗೆ ಯುವತಿ ನೃತ್ಯ

    ಅಯೋಧ್ಯೆ ಕಡೆಗೆ ರಾಮಭಕ್ತರು – ಬೆಂಗಳೂರು ಏರ್‌ಪೋರ್ಟ್‌ನಲ್ಲಿ ‘ಶ್ರೀರಾಮ.. ಜಯರಾಮ..’ ಹಾಡಿಗೆ ಯುವತಿ ನೃತ್ಯ

    ಬೆಂಗಳೂರು: ಅಯೋಧ್ಯೆಗೆ (Ayodhya) ಪ್ರಯಾಣ ಬೆಳೆಸುವ ಮುನ್ನ ಬೆಂಗಳೂರು ವಿಮಾನ ನಿಲ್ದಾಣದ (Bengaluru Airport) ಟರ್ಮಿನಲ್‌-2ನಲ್ಲಿ (Terminal 2) ‘ಶ್ರೀರಾಮ.. ಜಯರಾಮ..’ ಹಾಡಿಗೆ ಯುವತಿ ನೃತ್ಯ ಪ್ರದರ್ಶಿಸಿ ಗಮನ ಸೆಳೆದಿದ್ದಾರೆ. ಈ ದೃಶ್ಯದ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

    ರಘುಲೀಲಾ ಸ್ಕೂಲ್ ಆಫ್ ಮ್ಯೂಸಿಕ್, ಸೋಷಿಯಲ್‌ ಮೀಡಿಯಾದ ಎಕ್ಸ್‌ ಖಾತೆಯಲ್ಲಿ ಈ ವೀಡಿಯೋ ಹಂಚಿಕೊಂಡಿದೆ. ಟರ್ಮಿನಲ್‌ 2 ನಲ್ಲಿ ವಿಮಾನ ಪ್ರಯಾಣಕ್ಕಾಗಿ ಕುಳಿತಿರುವ ತಂಡವು ತಾಳ ಹಾಕುತ್ತಾ ‘ಶ್ರೀರಾಮ.. ಜಯರಾಮ..’ ಹಾಡು ಹಾಡಿದ್ದಾರೆ. ಲಯಕ್ಕೆ ತಕ್ಕಂತೆ ಯುವತಿ ನೃತ್ಯ ರೂಪಕ ಪ್ರದರ್ಶಿಸಿದ್ದಾರೆ. ಇದು ಎಲ್ಲರ ಗಮನ ಸೆಳೆದಿದೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದಲ್ಲಿ ರಾಜರಾಮ ‘ದರ್ಬಾರ್’ ಈ ವರ್ಷದ ಅಂತ್ಯದಲ್ಲಿ ಪೂರ್ಣ

    ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ನೆರವೇರಿದ ಬಳಿಕ ದೇಶಾದ್ಯಂತ ಭಗವಾನ್‌ ರಾಮಭಕ್ತರು ಅಯೋಧ್ಯೆ ಕಡೆಗೆ ಮುಖ ಮಾಡಿದ್ದಾರೆ. ರಾಮಮಂದಿರಕ್ಕೆ ತೆರಳಿ ರಾಮಲಲ್ಲಾನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಇದುವರೆಗೆ ಲಕ್ಷಾಂತರ ಮಂದಿ ರಾಮಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ.

    ಜ.22 ರಂದು ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರಾಣ ಪ್ರತಿಷ್ಠೆ ಸಮಾರಂಭ ನೆರವೇರಿತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಪ್ರಾಣ ಪ್ರತಿಷ್ಠೆ ಶಾಸ್ತ್ರೋಕ್ತವಾಗಿ ಜರುಗಿತು. ಇದನ್ನೂ ಓದಿ: 25 ಲಕ್ಷ ಜನರಿಂದ ಬಾಲಕ ರಾಮನ ದರ್ಶನ – 11 ಕೋಟಿ ರೂ. ಕಾಣಿಕೆ ಸಂಗ್ರಹ

  • ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನಿಂದ ಬಾಂಬ್‌ ಬೆದರಿಕೆ – ಆಸಾಮಿ ಅಂದರ್‌!

    ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನಿಂದ ಬಾಂಬ್‌ ಬೆದರಿಕೆ – ಆಸಾಮಿ ಅಂದರ್‌!

    ಬೆಂಗಳೂರು: ಅದೇನೊ ಗಾದೆ ಹೇಳ್ತಾರಲ್ಲ ಇರಲಾರದೇ ಇರುವೆ ಬಿಟ್ಕೊಂಡ್ರು ಅನ್ನೊ ಹಂಗಾಯ್ತು ಈ ಪ್ಯಾಸೆಂಜರ್ ನ ಕಥೆ.

    ಸುಮ್ಮನೇ ಇದ್ದಿದ್ದರೇ ಇವತ್ತು ಊರು ಸೇರ್ಕೊಂಡು ನೆಮ್ಮದಿಯಾಗಿರುತ್ತಿದ್ದ. ಆತ ಮಾಡಿದ ಒಂದು ಚೇಷ್ಟೆ ಇದೀಗ ಪೊಲೀಸರ ಅತಿಥಿಯಾಗುವಂತೆ ಮಾಡಿದೆ.

    ಹೌದು. ಕಳೆದ ಭಾನುವಾರ ರಾತ್ರಿ ಕೆಂಪೇಗೌಡ ವಿಮಾನ ನಿಲ್ದಾಣದಿಂದ (Kempegowda International Airport) ಕೊಚ್ಚಿ ಗೆ ಹೊರಟಿದ್ದ ಯುವಕ ತನ್ನ ಬ್ಯಾಗ್‌ಚೆಕ್‌ ಮಾಡೋ ವೇಳೆ ಅಧಿಕಾರಿಗಳ ಜೊತೆ ಕಿರಿಕ್ ಮಾಡಿಕೊಂಡಿದ್ದಾನೆ. ಈ ವೇಳೆ ಬ್ಯಾಗ್‌ನಲ್ಲಿ ಬಾಂಬ್ ಇದೆ ಅಂದಿದ್ದಾನೆ. ಇದೇನಪ್ಪಾ ಅಂತಾ ಪೊಲೀಸರು ಈತನ ಇಡೀ ಲಗೇಜ್ ಜಾಲಾಡಿದ್ದಾರೆ.

    ಬಾಂಬ್‌ ಬೆದರಿಕೆ (Bomb Threat) ಹಾಕಿದ ಹಿನ್ನೆಲೆಯಲ್ಲಿ ಆಸಾಮಿಯನ್ನ ಬಂಧಿಸಿ, ಅಪರಾಧ ಹಿನ್ನೆಲೆ ಏನಾದ್ರೂ ಇದೆಯಾ ಅನ್ನೋದನ್ನ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ICUನಲ್ಲಿ ಮಯಾಂಕ್ ಅಗರ್ವಾಲ್ – ಆರೋಗ್ಯದ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ILS ಆಸ್ಪತ್ರ

    ನಟ ವಿಷ್ಣು ವಿಶಾಲ್‌ ಅಭಿನಯದ `FIR’ ತಮಿಳು ಸಿನಿಮಾದಲ್ಲೂ ಇದೇ ರೀತಿಯ ಪ್ರಸಂಗ ನಡೆಯುತ್ತದೆ. ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಗುಂಡಿನ ಸುರಿಮಳೆ – ಇಬ್ಬರು ಸಾವು, ಓರ್ವ BJP ಮುಖಂಡನಿಗೆ ಗಂಭೀರ ಗಾಯ

  • ಏರ್‌ಪೋರ್ಟ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 13 ಕೋಟಿ ಮೌಲ್ಯದ ವಜ್ರ, ಫಾರಿನ್ ಕರೆನ್ಸಿ ಸೀಜ್

    ಏರ್‌ಪೋರ್ಟ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 13 ಕೋಟಿ ಮೌಲ್ಯದ ವಜ್ರ, ಫಾರಿನ್ ಕರೆನ್ಸಿ ಸೀಜ್

    ಬೆಂಗಳೂರು: ಡಿಆರ್‌ಐ (ಡೈರೆಕ್ಟೊರೇಟ್ ಆಫ್ ರೆವಿನ್ಯೂ ಇಂಟೆಲಿಜೆನ್ಸ್) ಅಧಿಕಾರಿಗಳು ಭಾರಿ ಕಾರ್ಯಾಚರಣೆ ನಡೆಸಿ ಎರಡು ಏರ್‌ಪೋರ್ಟ್‌ಗಳಲ್ಲಿ (Bengaluru Airport) 13 ಕೋಟಿ ಮೌಲ್ಯದ ವಜ್ರ (Diamond) ಹಾಗೂ ವಿದೇಶಿ ಕರೆನ್ಸಿಯನ್ನ ವಶಕ್ಕೆ ಪಡೆದಿದ್ದಾರೆ.

    ದುಬೈಗೆ ಹೊರಟಿದ್ದ ನಾಲ್ವರು ಪ್ರಯಾಣಿಕರ ತಪಾಸಣೆ ವೇಳೆ ಕೋಟ್ಯಂತರ ಮೌಲ್ಯದ ವಜ್ರ ಹಾಗೂ ವಿದೇಶಿ ಕರೆನ್ಸಿ ಪತ್ತೆಯಾಗಿದೆ. ಬೆಂಗಳೂರು ಹಾಗೂ ಹೈದರಾಬಾದ್ ಏರ್‌ಪೋರ್ಟ್‌ನಿಂದ ನಾಲ್ವರು ಪ್ರಯಾಣಿಕರು ದುಬೈಗೆ ಹೊರಟಿದ್ದರು. ಇದನ್ನೂ ಓದಿ: 4 ಮಕ್ಕಳ ತಂದೆ, 5 ಮಕ್ಕಳಿದ್ದ ಅತ್ತಿಗೆಯೊಂದಿಗೆ ಜೂಟ್‌ – ಆರೋಪಿ ಪತ್ನಿ 5ನೇ ಬಾರಿಗೆ ಗರ್ಭಿಣಿ

    ಪ್ರಯಾಣಿಕರ ಬಳಿ ಸ್ವಾಭಾವಿಕವಾಗಿ ಹಾಗೂ ಲ್ಯಾಬ್‌ನಲ್ಲಿ ತಯಾರಿಸಿದ ವಜ್ರಗಳು ಪತ್ತೆಯಾಗಿದ್ದು, ಬೆಂಗಳೂರಿನಲ್ಲಿ 7.77 ಕೋಟಿ ಮೌಲ್ಯದ 8,053 ಕ್ಯಾರೆಟ್ ತೂಕದ ವಜ್ರಗಳು ಹಾಗೂ 4.62 ಲಕ್ಷ ವಿದೇಶಿ ಕರೆನ್ಸಿ ಪತ್ತೆ‌ಯಾಗಿದೆ.

    ಹೈದರಾಬಾದ್‌ನಲ್ಲಿ 6.03 ಕೋಟಿ ಮೌಲ್ಯದ 5569 ಕ್ಯಾರೆಟ್ ತೂಕದ ವಜ್ರಗಳು ಹಾಗೂ 9.83 ಲಕ್ಷ ವಿದೇಶಿ ಕರೆನ್ಸಿ ಪತ್ತೆಯಾಗಿದೆ. ಚಾಕ್ಲೇಟ್‌ ಪಾಕೇಟ್‌ಗಳಲ್ಲಿ ಸೀಲ್ ಮಾಡಿ ವಜ್ರಗಳ ಸಾಗಾಟ ಮಾಡುತ್ತಿದ್ದರು. ಪ್ರಯಾಣಿಕರನ್ನ ವಶಕ್ಕೆ ಪಡೆದು ಡಿಆರ್‌ಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅಪಹರಣಕಾರರೆಂದು ಸಾಧುಗಳಿಗೆ ಹಿಗ್ಗಾಮುಗ್ಗ ಥಳಿತ – ಪಶ್ಚಿಮ ಬಂಗಾಳದ 12 ಮಂದಿ ಅರೆಸ್ಟ್‌

  • ಪ್ಯಾಂಟ್‌ ಜಿಪ್‌ನಲ್ಲಿ ಚಿನ್ನ ಕಳ್ಳಸಾಗಣೆ – ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ ತಗ್ಲಾಕ್ಕೊಂಡ ಪ್ರಯಾಣಿಕ

    ಪ್ಯಾಂಟ್‌ ಜಿಪ್‌ನಲ್ಲಿ ಚಿನ್ನ ಕಳ್ಳಸಾಗಣೆ – ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ ತಗ್ಲಾಕ್ಕೊಂಡ ಪ್ರಯಾಣಿಕ

    ಬೆಂಗಳೂರು: ಪ್ಯಾಂಟ್‌ ಜಿಪ್‌ ಲೈನ್‌ನಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಪ್ರಯಾಣಿಕ ಬೆಂಗಳೂರು ಏರ್‌ಪೋರ್ಟ್‌ನಲ್ಲಿ (Bengaluru Airport) ಸಿಕ್ಕಿಬಿದ್ದಿದ್ದಾನೆ. ಪ್ರಯಾಣಿಕನನ್ನು ಏರ್‌ ಕಸ್ಟಮ್ಸ್‌ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಪ್ರಯಾಣಿಕ ಶಾರ್ಜಾದಿಂದ ಬಂದಿದ್ದ. ಪೇಸ್ಟ್‌ ರೂಪದಲ್ಲಿ ಚಿನ್ನ ಕಳ್ಳಸಾಗಣೆ (Gold Smuggling) ಮಾಡುತ್ತಿದ್ದ. ಈತನನ್ನು ಏರ್‌ಪೋರ್ಟ್‌ನಲ್ಲಿ ಏರ್‌ ಕಸ್ಟಮ್ಸ್‌ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಪ್ಯಾಂಟ್‌ ಜಿಪ್‌ನಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದುದು ಪತ್ತೆಯಾಗಿದೆ. ಇದನ್ನೂ ಓದಿ: ಮುರುಘಾಶ್ರೀಗೆ ಜೈಲಾ? ಬೇಲಾ? ಇಂದು ಹೈಕೋರ್ಟ್ ನಿರ್ಧಾರ

    ಸುಮಾರು 18.57 ಲಕ್ಷ ರೂ. ಮೌಲ್ಯದ 284 ಗ್ರಾಂ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪ್ರಯಾಣಿಕನನ್ನ ವಶಕ್ಕೆ ಪಡೆದು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

    ಚಿನ್ನದ ಜೊತೆ ಪ್ರಯಾಣಿಕ ಸಿಗರೇಟ್ ಸ್ಟಿಕ್ ಹಾಗೂ ಸೌಂದರ್ಯವರ್ಧಕ ಪಾಕೇಟ್ ಸಾಗಾಟ ಮಾಡುತ್ತಿದ್ದ. 3,300 ಸಿಗರೇಟ್ ಸ್ಟಿಕ್ ಮತ್ತು 324 ಸೌಂದರ್ಯವರ್ಧಕ ಪಾಕೇಟ್‌ಗಳನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮುಂದಿನ 3 ದಿನ ಭಾರೀ ಮಳೆ

  • ಬ್ಯಾಂಕಾಕ್‌ನಿಂದ ಬೆಂಗ್ಳೂರಿಗೆ ಸಾಗಿಸ್ತಿದ್ದ ಹೆಬ್ಬಾವು, ಉಡ, ಮೊಸಳೆ ಇನ್ನಿತರ ಪ್ರಾಣಿಗಳು ವಶ

    ಬ್ಯಾಂಕಾಕ್‌ನಿಂದ ಬೆಂಗ್ಳೂರಿಗೆ ಸಾಗಿಸ್ತಿದ್ದ ಹೆಬ್ಬಾವು, ಉಡ, ಮೊಸಳೆ ಇನ್ನಿತರ ಪ್ರಾಣಿಗಳು ವಶ

    ಚಿಕ್ಕಬಳ್ಳಾಪುರ: ಬ್ಯಾಂಕಾಕ್ ‌ನಿಂದ (Bangkok) ಬೆಂಗಳೂರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ಹೆಬ್ಬಾವು, ಉಡ, ಮೊಸಳೆ, ಆಮೆ, ಗೋಸುಂಬೆ ಕಾಂಗರೂ ಮರಿ ಸೇರಿದಂತೆ ಅನೇಕ ಪ್ರಾಣಿ ಹಾಗೂ ಸರಿಸೃಪಗಳನ್ನ ವಶಕ್ಕೆ‌ ಪಡೆಯಲಾಗಿದೆ.

    ಬೆಂಗಳೂರಿನ ಕೇಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru International Airport) ತಪಾಸಣೆ ವೇಳೆ 234 ವನ್ಯ ಜೀವಿಗಳು ಪತ್ತೆಯಾಗಿವೆ. ಇದನ್ನೂ ಓದಿ: 146 ಪ್ರಯತ್ನಗಳ ಪೈಕಿ 69 ಚಂದ್ರಯಾನಗಳು ಯಶಸ್ವಿ – ಸಾವಿರಾರು ಕೋಟಿ ಖರ್ಚು ಮಾಡುವ ಯೋಜನೆಯ ಪ್ರಮುಖ ಉದ್ದೇಶವೇನು?

    ಪ್ರಯಾಣಿಕನೊರ್ವ ಲಗೇಜ್ ಬ್ಯಾಗ್‌ನಲ್ಲಿ ಬಾಕ್ಸ್‌ಗಳ ಮೂಲಕ ಉಡ, ಮೊಸಳೆ ಮರಿ, ಅಮೆ, ಹೆಬ್ಬಾವು ಮರಿ, ಗೋಸುಂಬೆ ಸೇರಿದಂತೆ ಒಂದು ಕಾಂಗರೂ ಮರಿಯನ್ನೂ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಪ್ರಯಾಣಿಕನೊಬ್ಬನನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ ಮಾಧ್ಯಮಗಳು ಚಂದ್ರಯಾನ-3 ಲ್ಯಾಂಡಿಂಗ್‌ ಕಾರ್ಯಕ್ರಮ ಪ್ರಸಾರ ಮಾಡಲಿ: ಪಾಕ್‌ ಮಾಜಿ ಸಚಿವ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆ.31 ರಿಂದ ಬೆಂಗಳೂರಿನ ಗಾರ್ಡನ್‌ ಟರ್ಮಿನಲ್‌ನಿಂದ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳ ಟೇಕಾಫ್‌, ಲ್ಯಾಂಡಿಂಗ್‌

    ಆ.31 ರಿಂದ ಬೆಂಗಳೂರಿನ ಗಾರ್ಡನ್‌ ಟರ್ಮಿನಲ್‌ನಿಂದ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳ ಟೇಕಾಫ್‌, ಲ್ಯಾಂಡಿಂಗ್‌

    ಬೆಂಗಳೂರು: ಆಗಸ್ಟ್‌ 31 ರಿಂದ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳು (International Flight) ಕೆಂಪೇಗೌಡ ವಿಮಾನ ನಿಲ್ದಾಣದ  (Kempegowda Airport) ಟರ್ಮಿನಲ್‌ 2ನಿಂದ (Terminal-2) ಟೇಕಾಫ್‌ ಮತ್ತು ಲ್ಯಾಂಡಿಂಗ್‌ ಆಗಲಿದೆ.

    ಆಗಸ್ಟ್ 31, 2023 ರಂದು ಬೆಳಗ್ಗೆ 10:45 ರಿಂದ ಎಲ್ಲಾ ನಿಗದಿತ ಅಂತರರಾಷ್ಟ್ರೀಯ ವಿಮಾನಗಳು ಟರ್ಮಿನಲ್ 2 ರಿಂದ ಆಗಮಿಸುತ್ತವೆ ಮತ್ತು ನಿರ್ಗಮಿಸುತ್ತವೆ ಎಂದು ಘೋಷಿಸಲು ನಾವು ಸಂತೋಷಪಡುತ್ತೇವೆ ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ (BIAL) ಹೇಳಿದೆ.

    ಸೆಪ್ಟೆಂಬರ್ 1 ರಂದು ಅಂತರಾಷ್ಟ್ರೀಯ ಕಾರ್ಯಾಚರಣೆಗಳನ್ನು ಪ್ರಾರಂಭಿಸಲು ಬಿಐಎಎಲ್‌ ಯೋಜಿಸಿತ್ತು. ಆದರೆ ಈಗ ಒಂದು ದಿನ ಮೊದಲೇ ಆರಂಭಿಸಲು ನಿರ್ಧರಿಸಿದೆ.

    ಇನ್ನು ಮುಂದೆ ಅಂತಾರಾಷ್ಟ್ರೀಯ ಕಾರ್ಯಾಚರಣೆಗಳನ್ನು ಸಂಪೂರ್ಣವಾಗಿ ಟರ್ಮಿನಲ್‌-2ಗೆ ಸ್ಥಳಾಂತರವಾಗಲಿದೆ. ಟರ್ಮಿನಲ್-1 ಪ್ರತ್ಯೇಕವಾಗಿ ದೇಶೀಯ ಟರ್ಮಿನಲ್ (Domestic Operations) ಆಗಿ ಕಾರ್ಯನಿರ್ವಹಿಸಲಿದೆ. ಸಿಂಗಾಪುರ್ ಏರ್‌ಲೈನ್ಸ್ ಆಗಸ್ಟ್ 31 ರಂದು ಟರ್ಮಿನಲ್- 2 ನಲ್ಲಿ ಇಳಿಯುವ ಮೊದಲ ಅಂತರರಾಷ್ಟ್ರೀಯ ವಿಮಾನವಾಗಿದೆ. ಇದನ್ನೂ ಓದಿ: ಚಂದ್ರಯಾನ ವ್ಯಂಗ್ಯ: ನಟ ಪ್ರಕಾಶ್ ರಾಜ್ ವಿರುದ್ಧ ದೂರು ದಾಖಲು

    ಕಳೆದ ವರ್ಷದ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸುಮಾರು 5,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್‌-2 ಉದ್ಘಾಟಿಸಿದ್ದರು. ಈ ವರ್ಷದ ಜನವರಿ 15 ದಿಂದ ದೇಶೀಯ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.

    ಟರ್ಮಿನಲ್-2 ಅನ್ನು ಗಾರ್ಡನ್ ಟರ್ಮಿನಲ್(Garden Terminal) ಎಂದು ಕರೆಯಲಾಗುತ್ತದೆ. ಏಕೆಂದರೆ ಇದು ದೊಡ್ಡ ಕೃತಕ ಒಳಾಂಗಣ ಉದ್ಯಾನವನ್ನು ಹೊಂದಿದೆ. ಬೆಂಗಳೂರನ್ನು ಭಾರತದ ʼಗಾರ್ಡನ್‌ ಸಿಟಿʼಎಂದು ಕರೆಯಲಾದ ಬಿರುದನ್ನು ಎತ್ತಿಹಿಡಿಯಲಿದೆ ಎಂದೇ ವ್ಯಾಖ್ಯಾನಿಸಲಾಗಿದೆ. ಪ್ರಯಾಣಿಕರಿಗೆ ಉದ್ಯಾನವನದ ಅನುಭವ ನೀಡಲು ಕೃತಕ ಮರಗಿಡಗಳು, ಹಕ್ಕಿಗಳ ಕಲರವ-ಚಿಲಿಪಿಲಿ ನಾದವನ್ನು ಇಲ್ಲಿ ಕೇಳಬಹುದು.

     

     

    ಹೊಸದಾಗಿ ಟರ್ಮಿನಲ್ 2 (Bengaluru Terminal 2) ಎರಡನೇ ರನ್‌ ವೇ, ಮಲ್ಟಿಮೋಡಲ್ ಸಾರಿಗೆ ಕೇಂದ್ರ, ಪ್ರವೇಶ ರಸ್ತೆಗಳ ವಿಸ್ತರಣೆ ಮತ್ತು ಆಂತರಿಕ ರಸ್ತೆ ಮೂಲಸೌಕರ್ಯಗಳು ಪ್ರಯಾಣಿಕರಿಗೆ ಲಭ್ಯವಾಗಲಿವೆ. ಏರ್‌ಪೋರ್ಟ್‌ ಒಳಾಂಗಣವು ಸಂಪೂರ್ಣ ವುಡ್ ಡಿಸೈನ್, ಹಸಿರಿನೊಂದಿಗೆ ವಿನ್ಯಾಸಗೊಂಡಿದೆ. ಗ್ರೌಂಡ್ ಎಸಿ ಆಟೋಮ್ಯಾಟಿಕ್‌ ಪಾಸ್‍ಪೋರ್ಟ್ ವೆರಿಫಿಕೇಷನ್, ಆಕರ್ಷಕ ಫ್ಲೋರಿಂಗ್ ಹಾಗೂ ಅತ್ಯಾಧುನಿಕ ಟೆಕ್ನಾಲಜಿಯನ್ನು ಹೊಂದಿದೆ.

    ವಿಮಾನ ಪ್ರಯಾಣಿಕರು ಬೋರ್ಡಿಂಗ್ ಮತ್ತು ಡಿಬೋರ್ಡಿಂಗ್ ಸಂದರ್ಭದಲ್ಲಿ ವ್ಯಕ್ತಿಯನ್ನು ಗುರುತಿಸಲು ಫೇಸ್ ರೆಕಗ್ನಿಷನ್, ಫಿಂಗರ್ ಪ್ರಿಂಟ್ ಸೆನ್ಸರ್ ಸೌಲಭ್ಯವಿದೆ. ಕೆಐಎಎಲ್ ನೂತನ ಟರ್ಮಿನಲ್‍ನಲ್ಲಿ ವಿಮಾನ ನಿಲ್ದಾಣದಲ್ಲಿನ ಸೌಲಭ್ಯಗಳ ಬಗ್ಗೆ ಪ್ಯಾಸೆಂಜರ್‌ಗಳಿಗೆ ಮಾಹಿತಿ ಪಡೆಯಲು ಇನ್ ಬಿಲ್ಟ್ ಸ್ಮಾರ್ಟ್ ಫೋನ್ ಅಪ್ಲಿಕೇಷನ್ ತಂತ್ರಜ್ಞಾನ ರೂಪಿಸಲಾಗಿದೆ.

    ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ಸುಮಾರು 5-6 ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಬೆಂಗಳೂರು ವಿಮಾನ ನಿಲ್ದಾಣದ ಕ್ಯಾಂಪಸ್‌ ಅನ್ನು  ನವೀಕರಿಸಬಹುದಾದ ಶಕ್ತಿಯನ್ನು ಬಳಸಿಕೊಂಡು 100% ಸುಸ್ಥಿರತೆಯೊಂದಿಗೆ ರಚಿಸಲಾಗಿದೆ.

    ಅಮೆರಿಕದ ವಾಸ್ತುಶಿಲ್ಪ ಸಂಸ್ಥೆ ಸ್ಕಿಡ್‌ಮೋರ್, ಓವಿಂಗ್ಸ್ & ಮೆರಿಲ್ (SOM) ಕಂಪನಿ ಟರ್ಮಿನಲ್‌ ವಿನ್ಯಾಸ ಮಾಡಿದೆ. ಏಕಕಾಲದಲ್ಲಿ 6 ಸಾವಿರ ಮಂದಿಗೆ ಕುಳಿತುಕೊಳ್ಳುವ ವ್ಯವಸ್ಥೆ ಇಲ್ಲಿ ಇರುವುದು ವಿಶೇಷ. ಹೊಸ ಟರ್ಮಿನಲ್‌ನ ಮೊದಲ ಹಂತವು ಒಂದು ವರ್ಷದಲ್ಲಿ 2.5 ಕೋಟಿ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ನಿರೀಕ್ಷೆಯಿದೆ. ವರದಿಗಳ ಪ್ರಕಾರ ಎರಡನೇ ಟರ್ಮಿನಲ್‌ನ ಮೊದಲ ಹಂತದ ನಿರ್ಮಾಣದ ಅಂದಾಜು ವೆಚ್ಚ 13,000 ಕೋಟಿ ರೂ. ಆಗಿದ್ದು ಈ ಟರ್ಮಿನಲ್ ಸರಿಸುಮಾರು 2.5 ಲಕ್ಷ ಚದರ ಮೀಟರ್‌ನ ಪ್ರದೇಶವನ್ನು ಹೊಂದಿದೆ. ಎರಡನೇ ಹಂತದಲ್ಲಿ ಈ ಟರ್ಮಿನಲ್‌ಗೆ ಇನ್ನೂ 4.41 ಲಕ್ಷ ಚ.ಮೀ ಹೊಸದಾಗಿ ಸೇರ್ಪಡೆಗೊಳ್ಳಲಿದೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 10 ನಿಮಿಷ ತಡವಾಗಿದ್ದಕ್ಕೆ ರಾಜ್ಯಪಾಲರ ಬಿಟ್ಟುಹೋದ ವಿಮಾನ – ಗೆಹ್ಲೋಟ್‌ ಗರಂ

    10 ನಿಮಿಷ ತಡವಾಗಿದ್ದಕ್ಕೆ ರಾಜ್ಯಪಾಲರ ಬಿಟ್ಟುಹೋದ ವಿಮಾನ – ಗೆಹ್ಲೋಟ್‌ ಗರಂ

    ಬೆಂಗಳೂರು: ಹೈದರಾಬಾದ್‌ಗೆ (Hyderabad) ತೆರಳಬೇಕಿದ್ದ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ (Thawarchand Gehlot) ಅವರು 10 ನಿಮಿಷ ತಡವಾಗಿ ಏರ್‌ಪೋರ್ಟ್‌ಗೆ (Bengaluru Airport) ಆಗಮಿಸಿದ್ದಕ್ಕೆ, ಅವರನ್ನೇ ವಿಮಾನ ಬಿಟ್ಟು ಹೋಗಿರುವ ಘಟನೆ ನಡೆದಿದೆ.

    ಗುರುವಾರ ಮಧ್ಯಾಹ್ನ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಘಟನೆ ನಡೆದಿದ್ದು, ರಾಜ್ಯಪಾಲರು (Karnataka Governor) ಗರಂ ಆಗಿದ್ದಾರೆ. ನಾನು ರಾಜ್ಯದ ಪ್ರಥಮ ಪ್ರಜೆ. ನನಗೆ ಅಗೌರವ ಉಂಟಾಗಿದೆ. ನನ್ನ ವಿಚಾರದಲ್ಲಿ ಶಿಷ್ಟಾಚಾರ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಿ. 10 ನಿಮಿಷ ತಡವಾದರೆ, ಕಾಯಬೇಕಿತ್ತು. ಹಾಗಂಥ ನನ್ನ ಬಿಟ್ಟು ಹೋಗ್ತಾರಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸ್ಪಂದಿಸುವುದು ನಿಮ್ಮ ಕರ್ತವ್ಯ, ಎಷ್ಟು ಸಾಧ್ಯವೋ ಅಷ್ಟು ಶಾಸಕರ ಕೆಲಸ ಮಾಡಿಕೊಡಿ: ಸಿದ್ದರಾಮಯ್ಯ

    ಗೆಹ್ಲೋಟ್ ಅವರು ಕಾರ್ಯಕ್ರಮದ ನಿಮಿತ್ತ ಬೆಂಗಳೂರಿನಿಂದ ಹೈದರಾಬಾದ್‌ಗೆ ಹೊರಟ್ಟಿದ್ದರು. ಮಧ್ಯಾಹ್ನ 2 ಗಂಟೆಗೆ ಏರ್‌ಏಶಿಯಾ ವಿಮಾನದ ಮೂಲಕ ಹೋಗಬೇಕಿತ್ತು. ಆದರೆ 15 ನಿಮಿಷ ತಡವಾಗಿ ಏರ್‌ಪೋರ್ಟ್ ತಲುಪಿದ್ದಾರೆ.

    ಅಷ್ಟರಲ್ಲಿ ವಿಮಾನ ರಾಜ್ಯಪಾಲರ ಬಿಟ್ಟು ಹಾರಾಟ ನಡೆಸಿತ್ತು. ಇದರಿಂದ ಕೋಪಗೊಂಡ ರಾಜ್ಯಪಾಲರು ಅಧಿಕಾರಗಳ ಕರೆಸಿ ಮಾತನಾಡಿದ್ದಾರೆ. ಅಲ್ಲದೇ ಶಿಷ್ಟಾಚಾರ ಉಲ್ಲಂಘನೆ ಮಾಡಿದ ವಿಮಾನ ಕಂಪನಿಯ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರು ಬ್ಲಾಸ್ಟ್ ಪ್ರಕರಣ – ಪ್ರಮುಖ ಆರೋಪಿ ಸಿಸಿಬಿ ವಶಕ್ಕೆ

    ಇಷ್ಟೆಲ್ಲಾ ಆದ ಬಳಿಕ 3:30 ರ ವಿಮಾನದಲ್ಲಿ ಹೈದರಾಬಾದ್‌ ತಲುಪಿದ್ದಾರೆ. ಈ ಬೆಳವಣಿಗೆಯಿಂದ ರಾಜ್ಯಪಾಲರು ಕಾರ್ಯಕ್ರಮದಲ್ಲಿ ತಡವಾಗಿ ಭಾಗಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ‌.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಮಾನದಲ್ಲಿ ಬೀಡಿ ಸೇದಿದ ಪ್ರಯಾಣಿಕ – ಬೆಂಗ್ಳೂರಲ್ಲಿ ಇಳಿಯುತ್ತಿದ್ದಂತೆ ಪೊಲೀಸರಿಗೆ ಲಾಕ್‌

    ವಿಮಾನದಲ್ಲಿ ಬೀಡಿ ಸೇದಿದ ಪ್ರಯಾಣಿಕ – ಬೆಂಗ್ಳೂರಲ್ಲಿ ಇಳಿಯುತ್ತಿದ್ದಂತೆ ಪೊಲೀಸರಿಗೆ ಲಾಕ್‌

    – ಬೀಡಿ ಸೇದಿದ ಬಗ್ಗೆ ಪೊಲೀಸರ ಬಳಿ ಪ್ರಯಾಣಿಕ ಹೇಳಿದ್ದೇನು ಗೊತ್ತಾ?

    ನವದೆಹಲಿ: ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣ ಮಾಡುವಾಗ ಬೀಡಿ ಸೇದಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ಪೊಲೀಸರು ಬಂಧಿಸಿದ್ದಾರೆ.

    ಬೆಂಗಳೂರಿಗೆ (Bengaluru) ಹೊರಟಿದ್ದ ಆಕಾಶ ಏರ್‌ಫ್ಲೈಟ್‌ನಲ್ಲಿ (Akasa Air flight) ಬೀಡಿ ಸೇದಿ ನಿಯಮ ಉಲ್ಲಂಘಿಸಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಈತ ರಾಜಸ್ಥಾನದಿಂದ ಮೊದಲ ಬಾರಿಗೆ ಪ್ರಯಾಣಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ವಿದ್ಯುತ್‌ ಬಿಲ್‌ ನೀಡಲು ಬಂದ ಸಿಬ್ಬಂದಿಗೆ ಮಹಿಳೆ ಹಿಗ್ಗಾಮುಗ್ಗ ಕ್ಲಾಸ್‌

    ಮಾರ್ವಾರ್ ಪ್ರದೇಶದ 56 ವರ್ಷದ ವ್ಯಕ್ತಿ, ಮಂಗಳವಾರ ಅಹಮದಾಬಾದ್‌ನಿಂದ ವಿಮಾನ ಪ್ರಯಾಣ ಕೈಗೊಂಡಿದ್ದರು. ಹಾರಾಟದ ವೇಳೆ ವಿಮಾನದಲ್ಲಿ ಪ್ರಯಾಣಿಕ ಶೌಚಾಲಯಕ್ಕೆ ಹೋಗಿ ಧೂಮಪಾನ ಮಾಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಫ್ಲೈಟ್ ಅಟೆಂಡೆಂಟ್‌ಗಳು ತಕ್ಷಣ ಕಾರ್ಯಪ್ರವೃತ್ತರಾಗಿ, ಆತನನ್ನು ವಶಕ್ಕೆ ಪಡೆದು ಬೆಂಗಳೂರು ತಲುಪಿದ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಚಾರಣೆ ವೇಳೆ ಪ್ರಯಾಣಿಕ, ತಾನು ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೆ. ನಿಯಮಗಳ ಬಗ್ಗೆ ತಿಳಿದಿರಲಿಲ್ಲ ಎಂದು ಪೊಲೀಸರಿಗೆ ಹೇಳಿದ್ದಾನೆ. ಇದನ್ನೂ ಓದಿ: ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷೆಗೆ ಕಿರುಕುಳ – ಬಿವಿ ಶ್ರೀನಿವಾಸ್‍ಗೆ ಸುಪ್ರೀಂ ಜಾಮೀನು

    ರೈಲು ಪ್ರಯಾಣದ ವೇಳೆ ಶೌಚಾಲಯದಲ್ಲಿ ಧೂಮಪಾನ ಮಾಡಿದ್ದೆ. ವಿಮಾನದಲ್ಲಿಯೂ ಅದೇ ರೀತಿ ಮಾಡಿದೆ ಎಂದು ಪ್ರಯಾಣಿಕ ತಿಳಿಸಿದ್ದಾನೆ. ಇತರರ ಜೀವಕ್ಕೆ ಅಪಾಯ ತಂದೊಡ್ಡಿದ ಆರೋಪದ ಮೇಲೆ ಪ್ರಯಾಣಿಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • 2.75 ಕೋಟಿ ಮಂದಿ ಪ್ರಯಾಣ – ದಾಖಲೆ ಬರೆದ BLR, ಸರಕು ಸಾಗಣೆಯಲ್ಲೂ ಚೇತರಿಕೆ

    2.75 ಕೋಟಿ ಮಂದಿ ಪ್ರಯಾಣ – ದಾಖಲೆ ಬರೆದ BLR, ಸರಕು ಸಾಗಣೆಯಲ್ಲೂ ಚೇತರಿಕೆ

    ಬೆಂಗಳೂರು:  2022ನೇ ಕ್ಯಾಲೆಂಡರ್‌ ವರ್ಷದಲ್ಲಿ 2.75 ಕೋಟಿ ಪ್ರಯಾಣಿಕರು ಪ್ರಯಾಣಿಸುವ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIAL) ದಾಖಲೆ ಬರೆದಿದೆ. ಇದು 2019ರ ಕೋವಿಡ್‌ ಪೂರ್ವ ಅವಧಿಗಿಂತಲೂ ಹೆಚ್ಚು. ದೇಶಿಯ ವಲಯದಲ್ಲಿ ಶೇ.85ರಷ್ಟು ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಶೇ.65ರಷ್ಟು ಚೇತರಿಕೆ ಕಂಡಿದೆ.

    2.75 ಕೋಟಿ ಪ್ರಯಾಣಿಕರ ಪೈಕಿ 2.43 ಕೋಟಿ ದೇಶೀಯ ಹಾಗೂ 31.4 ಲಕ್ಷ ಅಂತಾರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ.  ಡಿಸೆಂಬರ್ ತಿಂಗಳಲ್ಲಿಯೇ ಅತ್ಯಧಿಕ ಜನರು ವಿಮಾನ ಪ್ರಯಾಣವನ್ನು ಆಯ್ಕೆ ಮಾಡುವ ಮೂಲಕ ಈ ದಾಖಲೆ ನಿರ್ಮಾಣವಾಗಿದೆ. ಪ್ರಮುಖ ದೇಶಿಯ ಹಾಗೂ ವಿದೇಶಿಯ ವ್ಯಾಪಾರ ಕೇಂದ್ರಗಳ ಮಾರ್ಗ ಮರುಪ್ರಾರಂಭ ಹಾಗೂ ಹೊಸಮಾರ್ಗಗಳ ಪರಿಚಯ ಈ ತ್ವರಿತ ಸುಧಾರಣೆ ಹಾಗೂ ವಿಮಾನ ನಿಲ್ದಾಣದಲ್ಲಿ (Bengaluru Airport) ಪ್ರಯಾಣಿಕರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.

     

    ವರ್ಷಾಂತ್ಯದ ಚೇತರಿಕೆ:
    ಡಿಸೆಂಬರ್‌ ತಿಂಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡಿದೆ. ಈ ಒಂದು ತಿಂಗಳಲ್ಲಿಯೇ 31.3 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ. 2019ರ ಡಿಸೆಂಬರ್‌ನಲ್ಲಿ 3.06 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದರು. ಆದರೆ 2022ರ ಡಿಸೆಂಬರ್‌ ಹಿಂದಿನ ಎಲ್ಲಾ ದಾಖಲೆಗಳನ್ನು ಹಿಂದಿಟ್ಟಿದ್ದು, ಡಿ.23 ಒಂದೇ ದಿನದಂದು ಬರೋಬ್ಬರಿ 1,07,825 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಕೋವಿಡ್ ಪೂರ್ವಕ್ಕೆ ಹೋಲಿಸಿದರೆ, ವಿಮಾನ ಸಾರಿಗೆ ಚಲನೆಗಳಲ್ಲಿ (ಎಟಿಎಂ) ಶೇ. 98ರಷ್ಟು ಚೇತರಿಕೆ ಕಂಡಿದೆ.  ಇದನ್ನೂ ಓದಿ: Top Performing Airports 2022 – ವಿಶ್ವದಲ್ಲೇ ಬೆಂಗಳೂರು ನಂ.2

    ಪ್ರಮುಖ ವಿಸ್ತರಣೆ:
    ಕೋವಿಡ್‌ ಸಾಂಕ್ರಾಮಿಕದ ಬಳಿಕ, ಬಹುತೇಕ ವಿಮಾನಯಾನ ಸಂಸ್ಥೆಗಳು ತಮ್ಮ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಪುನರಾರಂಭಿಸಿವೆ ಹಾಗೂ 2022ರಲ್ಲಿ ಹೆಚ್ಚಿನ ಸಂಖ್ಯೆಯ ನಗರಗಳಿಗೆ ಸಂಪರ್ಕ ಕಲ್ಪಿಸಿವೆ. ಪ್ರಸ್ತುತ BLR ವಿಮಾನ ನಿಲ್ದಾಣವು ಭಾರತಾದ್ಯಂತ 75 ಸ್ಥಳಗಳಿಗೆ ಸಂಪರ್ಕ ಹೊಂದಿದ್ದು, ಪೂರ್ವ ಕೋವಿಡ್‌ಗೆ ಹೋಲಿಸಿದರೆ 16 ಸ್ಥಳಗಳು ಹೊಸದಾಗಿ ಸೇರ್ಪಡೆಗೊಂಡಿದೆ. ಆಕಾಶ ಏರ್‌ಲೈನ್‌ ಸಂಸ್ಥೆಯ ಬೆಳವಣಿಗೆ ಗಮನಾರ್ಹವಾಗಿದ್ದು, ಬಿಎಲ್‌ಆರ್‌ ವಿಮಾನ ನಿಲ್ದಾಣದಲ್ಲಿ ತಮ್ಮ ಉಪಸ್ಥಿತಿಯನ್ನು ಹೆಚ್ಚಿಸಿಕೊಂಡಿದ್ದಾರೆ. ಈ ಏರ್‌ಲೈನ್‌ ಪ್ರಾರಂಭಗೊಂಡ 6 ತಿಂಗಳೊಳಗೆ 11 ಸ್ಥಳಗಳಿಗೆ ಪ್ರತಿದಿನ 30 ಬಾರಿ ವಿಮಾನಯಾನ ನಡೆಸುತ್ತಿದೆ.

    ಮಾರ್ಚ್ 2022 ರಲ್ಲಿ ನಿಗದಿತ ಅಂತರಾಷ್ಟ್ರೀಯ ಕಾರ್ಯಾಚರಣೆಗಳ ಪುನರಾರಂಭದ ನಂತರ, ಕ್ವಾಂಟಾಸ್ ಏರ್‌ವೇಸ್‌ನಿಂದ ಬೆಂಗಳೂರು ಮತ್ತು ಸಿಡ್ನಿ ನಡುವೆ ನೇರ ಮಾರ್ಗವನ್ನು (ನಾಲ್ಕು ಸಾಪ್ತಾಹಿಕ ವಿಮಾನಗಳು) ಪರಿಚಯಿಸಲಾಗಿದೆ. ಇದು ದಕ್ಷಿಣ ಭಾರತದಿಂದ ಆಸ್ಟ್ರೇಲಿಯಾಕ್ಕೆ ಮೊದಲ ನೇರ ಸಂಪರ್ಕವಾಗಿದೆ. ಬಿಎಲ್‌ಆರ್‌ ಮತ್ತು ದಕ್ಷಿಣ ಭಾರತದಿಂದ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಎಮಿರೇಟ್ಸ್ A380 (ವಿಶ್ವದ ಅತಿ ದೊಡ್ಡ ವಿಮಾನ) ಸೇವೆಯನ್ನು ದುಬೈಗೆ ಪ್ರಾರಂಭಿಸಲಾಗಿದೆ. ಜೊತೆಗೆ, ಏರ್ ಇಂಡಿಯಾ ತನ್ನ ಬೆಂಗಳೂರು – ಸ್ಯಾನ್ ಫ್ರಾನ್ಸಿಸ್ಕೊ ಮೂರು-ಸಾಪ್ತಾಹಿಕ ಮಾರ್ಗವನ್ನು ಡಿಸೆಂಬರ್ 2022ರಲ್ಲಿ ಪುನರ್‌ ಪ್ರಾರಂಭ ಮಾಡಿದೆ. ಈ ವಿಮಾನಯಾನದಿಂದ BLR ವಿಮಾನನಿಲ್ದಾಣವು ಉತ್ತರ ಅಮೆರಿಕಕ್ಕೆ ನೇರ ಸಂಪರ್ಕ ಹೊಂದುವ ದಕ್ಷಿಣ ಮತ್ತು ಮಧ್ಯ ಭಾರತದ ಮೊದಲ ವಿಮಾನ ನಿಲ್ದಾಣವಾಗಿದೆ. ಇದು BLR ಮಾರುಕಟ್ಟೆಯ ವಿಕಾಸ / ಅಭಿವೃದ್ಧಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಇದೇ ಮಾದರಿ ಇತರ ಅಂತರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಸಹ 2022 ರಲ್ಲಿ BLR ವಿಮಾನ ನಿಲ್ದಾಣದಿಂದ ವಿಮಾನಯಾನವನ್ನು ಪುನರಾರಂಭಿಸಿವೆ.

    ವರ್ಗಾವಣೆ ಕೇಂದ್ರ:
    BLR ವಿಮಾನ ನಿಲ್ದಾಣವು ಬೌಗೋಳಿಕವಾಗಿ ಪ್ರಾದೇಶಿಕ ಸಂಪರ್ಕದ ಕೇಂದ್ರವಾಗಿದ್ದು, ಈ ಕಾರಣದಿಂದಾಗಿ ವರ್ಗಾವಣೆ ಪ್ರಯಾಣಿಕರ ಸಂಖ್ಯೆ ಹೆಚ್ಚಳಕ್ಕೂ ಕಾರಣವಾಗಿದೆ. 100 ಕ್ಕೂ ಹೆಚ್ಚು ದೈನಂದಿನ ನಿರ್ಗಮನಗಳೊಂದಿಗೆ, ವರ್ಗಾವಣೆ ಪ್ರಯಾಣಿಕರ ಪಾಲು ಶೇ.15ಕ್ಕೆ ಏರಿದೆ. ಪೂರ್ವ ಕೋವಿಡ್ ವರ್ಷಗಳಿಗೆ ಹೋಲಿಸಿದರೆ ಶೇ.5ರಷ್ಟು ಏರಿಕೆಯಾಗಿದೆ. ಇದು ದಕ್ಷಿಣ ಮತ್ತು ಮಧ್ಯ ಭಾರತದಲ್ಲಿ ಆದ್ಯತಾ ವರ್ಗಾವಣೆ / ಸಾರಿಗೆ ವಿಮಾನ ನಿಲ್ದಾಣವಾಗಿ BLR ವಿಮಾನ ನಿಲ್ದಾಣ ಸ್ಥಾನ ಪಡೆದುಕೊಂಡಿದೆ.

    2022 ವರ್ಷದಲ್ಲಿ ದೆಹಲಿ, ಮುಂಬೈ, ಕೋಲ್ಕತ್ತಾ, ಕೊಚ್ಚಿ ಮತ್ತು ಹೈದರಾಬಾದ್‌ ಅಗ್ರ ದೇಶೀಯ ಮಾರ್ಗಗಳಾಗಿ, ದೇಶೀಯ ಟ್ರಾಫಿಕ್‌ಗೆ ಸರಿಸುಮಾರು ಶೇ.40ರಷ್ಟು ಕೊಡುಗೆ ನೀಡಿವೆ. ದುಬೈ, ಮಾಲೆ, ಸಿಂಗಾಪುರ್, ದೋಹಾ ಮತ್ತು ಅಬುಧಾಬಿಗಳು BLR ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಸಂಚಾರಕ್ಕೆ ಸರಿಸುಮಾರು ಶೇ.47ರಷ್ಟು ಕೊಡುವ ಅಗ್ರ ಅಂತಾರಾಷ್ಟ್ರೀಯ ಮಾರ್ಗಗಳಾಗಿವೆ.

    “ಕೋವಿಡ್ ವರ್ಷಗಳು ನಮಗೆ ತುಂಬಾ ಸವಾಲಾಗಿತ್ತು. ಅದರ ಹೊರತಾಗಿಯೂ, ಪ್ರಯಾಣಿಕರ ದಟ್ಟಣೆಯಲ್ಲಿ ಸ್ಥಿರವಾದ ಚೇತರಿಕೆಯಿಂದ ಸಂತಸವಾಗಿದೆ. ಪ್ರಯಾಣಿಕರ ಸೌಕರ್ಯ ಮತ್ತು ತಡೆರಹಿತ ಪ್ರಯಾಣವು ಆದ್ಯತೆಯಾಗಿ ಮುಂದುವರಿಯುತ್ತದೆ. ಇದರ ಜೊತೆಗೆ, ನಮ್ಮ ಸರಕು ಪಾಲುದಾರಿಕೆಗಳು ನಮ್ಮ ವ್ಯಾಪಾರದ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿವೆ. BLR ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ 2 (T2) ಉದ್ಘಾಟನೆಯೊಂದಿಗೆ ನಮ್ಮ ಕಾರ್ಯಾಚರಣೆಯ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿರುವುದರಿಂದ 2022 ವರ್ಷವು ನಮಗೆ ಮಹತ್ವದ ಮೈಲಿಗಲ್ಲು ಸಾಧಿಸಲು ಸಾಧ್ಯವಾಗಿದೆ. T2 ಕಾರ್ಯಾಚರಣೆಯೊಂದಿಗೆ, ನಾವು ದಕ್ಷಿಣ ಮತ್ತು ಮಧ್ಯ ಭಾರತಕ್ಕೆ ನೈಸರ್ಗಿಕ ಹೆಬ್ಬಾಗಿಲಾಗಿ ಸೇವೆ ಸಲ್ಲಿಸುವ ಮೂಲಕ ಇನ್ನಷ್ಟು ಉತ್ತಮ ಸ್ಥಾನವನ್ನು ಪಡೆದುಕೊಳ್ಳುತ್ತೇವೆ ಎಂಬ ಭರವಸೆ ಇದೆ ಎಂದು ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ (BIAL) ಮುಖ್ಯ ಕಾರ್ಯತಂತ್ರ ಮತ್ತು ಅಭಿವೃದ್ಧಿ ಅಧಿಕಾರಿ ಸಾತ್ಯಕಿ ರಘುನಾಥ್ ತಿಳಿಸಿದ್ದಾರೆ.

    ಕಾರ್ಗೋ ಬೆಳವಣಿಗೆ:
    BLR ಕಾರ್ಗೋ ಸತತ ಎರಡನೇ ವರ್ಷ, ಪೆರಿಷೆಬಲ್‌ ಸರಕುಗಳ ಸಾಗಾಟಣೆಯಲ್ಲಿ ಮೊದಲ ವಿಮಾನ ನಿಲ್ದಾಣವಾಗಿ ಗುರುತಿಸಿಕೊಂಡಿದೆ. ಜೊತೆಗೆ, ಅಂತಾರಾಷ್ಟ್ರೀಯ ಸರಕು ಸಾಗಣೆಯಲ್ಲಿ ಮೂರನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿಯೂ ಹೆಸರು ಪಡೆದುಕೊಂಡಿದೆ. ಇದಲ್ಲದೆ UPS, DHL ಮತ್ತು FedEx ಎಂಬ ವಿಶ್ವದ ಮೂರು ಬಹು ದೊಡ್ಡ ಎಕ್ಸ್‌ಪ್ರೆಸ್ ಸರಕು ಸಾಗಣೆದಾರರನ್ನು ಹೊಂದಿರುವ ಭಾರತದ ಎರಡನೇ ವಿಮಾನ ನಿಲ್ದಾಣವೂ ಆಗಿದೆ.

    14 ದೇಶೀಯ ಮತ್ತು ವಿದೇಶಿ ಸರಕು ವಾಹಕಗಳು 41 ನೇರ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. BLR ಕಾರ್ಗೋ, ದೇಶದ ಅಗ್ರ ಕಾರ್ಗೋ ವಿಮಾನ ನಿಲ್ದಾಣಗಳಲ್ಲಿ BLR ವಿಮಾನ ನಿಲ್ದಾಣದ ಸ್ಥಾನವನ್ನು ಭದ್ರಮಾಡಿಕೊಂಡಿದೆ.

    2022 ವರ್ಷದಲ್ಲಿ ಸರಕು ಪ್ರಮಾಣವು 412,668 MT ಆಗಿದ್ದು, ಇದು ವಿಮಾನ ನಿಲ್ದಾಣದ ಪ್ರಾರಂಭದ ದಿನದಿಂದ ನಿರ್ವಹಿಸಲಾದ ಅತ್ಯಧಿಕ ಪ್ರಮಾಣದ ಸರಕಾಗಿದೆ. ಜುಲೈ ತಿಂಗಳಲ್ಲಿ ಅತಿ ಹೆಚ್ಚು ಟನ್‌ ಸರಕು ಸಾಗಣೆ ಆಮದು ಮಾಡಿಕೊಳ್ಳುವ ಮೂಲಕ 2022ರಲ್ಲಿ ದೇಶೀಯ ಸರಕು ಶೇ.8ರಷ್ಟು ಹೆಚ್ಚಳವಾಗಿದೆ. ಸೆಪ್ಟೆಂಬರ್ 29 ರಂದು ಒಂದೇ ದಿನದಲ್ಲಿ 1,612 MT ಅತ್ಯಧಿಕ ಸರಕು ಸಾಗಣೆಯಾಗುವ ಮೂಲಕ ದಾಖಲೆ ನಿರ್ಮಿಸಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k