Tag: bengalueu

  • ಕರಾವಳಿ, ಕೊಡಗಿನಲ್ಲಿ ಧಾರಾಕಾರ ಮಳೆ- ಮಂಗ್ಳೂರಲ್ಲಿ ಫ್ಲ್ಯಾಟ್ ಹಿಂಭಾಗದ ಮಣ್ಣು ಕುಸಿತ

    ಕರಾವಳಿ, ಕೊಡಗಿನಲ್ಲಿ ಧಾರಾಕಾರ ಮಳೆ- ಮಂಗ್ಳೂರಲ್ಲಿ ಫ್ಲ್ಯಾಟ್ ಹಿಂಭಾಗದ ಮಣ್ಣು ಕುಸಿತ

    ಬೆಂಗಳೂರು: ರಾಜ್ಯದಲ್ಲಿ ಮತ್ತೊಮ್ಮೆ ಮಳೆ ಭೀತಿ ಹುಟ್ಟಿಸಿದೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಗುರುವಾರ ರಾತ್ರಿ, ಇಂದು ಧಾರಾಕಾರ ಮಳೆಯಾಗಿದೆ.

    ಬೆಳಗಾವಿಯ ಬೈಲಹೊಂಗಲ ತಾಲೂಕಿನ ವಿವಿಧೆಡೆ ಭಾರೀ ಮಳೆಯಾಗಿದ್ದು, ಇಂಗಳಗಿ ಗ್ರಾಮದ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಕಾರವಾರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲೂ ಮಳೆಯಾಗ್ತಿದೆ. ಮೀನುಗಾರಿಕೆ ನಿಷೇಧಿಸಲಾಗಿದೆ. ಕಾರವಾರ, ಕುಮಟಾ, ಹೊನ್ನಾವರ ಸೇರಿದಂತೆ ಬಹುತೇಕ ಭಾಗದಲ್ಲಿ ಇನ್ನೆರೆಡು ದಿನ ಇದೇ ಸ್ಥಿತಿ ಇರಲಿದೆ.

    ಭಟ್ಕಳದ ಬಳಿ ಸಮುದ್ರದ ಮಧ್ಯೆ ಬಿರುಗಾಳಿಗೆ ಸಿಕ್ಕಿದ್ದ ಬೋಟ್‍ನಲ್ಲಿದ್ದ 24 ಮಂದಿಯನ್ನು ರಕ್ಷಿಲಾಗಿದೆ. ಮಂಗಳೂರು ಹೊರವಲಯದ ಜಪ್ಪಿನಮೊಗರು ಬಳಿ ನೂರಾರು ಮನೆಗಳು ಪ್ರವಾಹ ಸಿಲುಕಿವೆ. ಮಂಗಳೂರಿನ ಕೊಂಚಾಡಿಯಲ್ಲಿರುವ 12 ಅಂತಸ್ತಿನ ಎಸೆಲ್ ಹೈಟ್ಸ್ ಎಂಬ ಫ್ಲ್ಯಾಟ್ ಹಿಂಭಾಗದ ಧರೆ ಕುಸಿತವಾಗಿದ್ದು, ಮಣ್ಣಿನಡಿಯಲ್ಲಿ ಹಲವು ವಾಹನಗಳು ಸಿಲುಕಿವೆ. ಫ್ಲ್ಯಾಟ್ ನಲ್ಲಿದ್ದ ನೂರಾರು ಮಂದಿ ನಿವಾಸಿಗಳ ಸ್ಥಳಾಂತರಗೊಳಿಸಲಾಗಿದೆ. ಮುನ್ನಚ್ಚೆರಿಕಾ ಕ್ರಮವಾಗಿ ಫ್ಲಾಟ್ ನ ಮುಂಭಾಗದ ರಸ್ತೆ ಬಂದ್ ಮಾಡಲಾಗಿದ್ದು, ಸ್ಥಳದಲ್ಲಿ ಎಸ್‍ಡಿಆರ್‍ಎಫ್, ಎನ್‍ಡಿಆರ್‍ಫ್ ಸಿಬ್ಬಂದಿ ಮೊಕ್ಕಾಂ ಹೂಡಿದ್ದಾರೆ.

    ಕೊಡಗಿನಲ್ಲಿ ಕಳೆದ ರಾತ್ರಿ ಧಾರಾಕಾರ ಮಳೆಯಾಗಿದ್ದು, ತಲಕಾವೇರಿ, ಭಾಗಮಂಡಲ, ತ್ರಿವೇಣಿ ಸಂಗಮದ ಬಳಿ ಪ್ರವಾಹ ಸೃಷ್ಟಿಯಾಗೋ ಆತಂಕ ಮನೆ ಮಾಡಿದೆ. ಕೋಳಿಕಾಡು, ಚೇರಂಗಾಲ, ಕೋರಂಗಾಲ ಗ್ರಾಮಗಳಲ್ಲಿ ಭೂಕುಸಿತ ಆತಂಕ ಎದ್ದಿದೆ.

  • ಮಂಗ್ಳೂರು ಗಲಭೆ ಯಾಕೆ ನಿಯಂತ್ರಣ ಆಗ್ಲಿಲ್ಲ- ಐಪಿಎಸ್ ಅಧಿಕಾರಿಗಳಿಗೆ ಸಿಎಂ ಕ್ಲಾಸ್

    ಮಂಗ್ಳೂರು ಗಲಭೆ ಯಾಕೆ ನಿಯಂತ್ರಣ ಆಗ್ಲಿಲ್ಲ- ಐಪಿಎಸ್ ಅಧಿಕಾರಿಗಳಿಗೆ ಸಿಎಂ ಕ್ಲಾಸ್

    ಬೆಂಗಳೂರು: ಯಾರ್ರಿ ಕೋಮುಗಲಭೆಗೆ ಸ್ಕೆಚ್ ಹಾಕಿದ್ದು? ಸ್ಕೆಚ್ ಗೊತ್ತಿದ್ದು ನಾಟಕ ಆಡೋ ಯಾರನ್ನೂ ಬಿಡೋದಿಲ್ಲ ಅಂತ ಮಾಧ್ಯಮದ ಮುಂದೆ ಹೇಳ್ತೀರಿ. ಕಳೆದ ಒಂದೂವರೆ ತಿಂಗಳಿನಿಂದ ಏನ್ ಏನ್ ಕೆಲ್ಸಾ ಮಾಡಿದ್ದೀರಿ ಹೇಳಿ ಎಂದು ಮಂಗಳೂರು ಪೊಲೀಸ್ ಅಧಿಕಾರಿಗಳನ್ನು ಸಿಎಂ ಪ್ರಶ್ನಿಸಿದ್ದಾರೆ.

     

    ಇಂದು ನಗರದ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ಕೋಮು ದಳ್ಳುರಿ ಹೆಸರಲ್ಲಿ ಬೇಳೆ ಬೇಯಿಸಿ ಕೊಳ್ತಿರೋರ ಮೇಲೆ ಎಷ್ಟು ಕೇಸ್ ಹಾಕಿದ್ದೀರಾ.? ಕಲ್ಲು ತೂರಾಟ, ಲಾಠಿಚಾರ್ಜ್, ಹಲ್ಲೆ, ಕೊಲೆ ನಡೆಸಿದವ್ರರಲ್ಲಿ ಎಷ್ಟು ಜನರನ್ನ ಬಂಧಿಸಿದ್ದಿರಾ..? ಕರಾವಳಿಯಲ್ಲಿ ನಡೆದ ಗಲಭೆಯಲ್ಲಿ ರಾಜಕೀಯ ಮುಖಂಡರ ಕೈವಾಡ ಎಷ್ಟು..?. ನಿಮಗೆಲ್ಲಾ ಹೋಲಿಸಿಕೊಂಡ್ರೆ ಬೆಂಗಳೂರಿನ ಅಧಿಕಾರಿಗಳು ಪರವಾಗಿಲ್ಲ. ಏನಾದ್ರೂ ಆಯ್ತು ಅಂದ ಕೂಡ್ಲೆ ಸ್ಪಾಟ್ ಗೆ ಹೋಗ್ತಾರೆ. ಎಸ್‍ಪಿಗಳು ಸ್ಪಾಟ್‍ಗೆ ಹೋಗ್ಬೇಕು ಅಂದ್ರೆ ಐದು ಹೆಣ ಬೀಳ್ಬೇಕಾ..?. ಇಲ್ಲ ಅಂದ್ರೆ ಆಫೀಸಲ್ಲೇ ಕೂತು ಕಾಲ ಕಳಿತೀರಾ. ವಾರಕ್ಕೆ ಎಷ್ಟು ರೌಂಡ್ಸ್ ಮಾಡ್ತೀರಿ ಹೇಳಿ? ಗಲಭೆ ಬಗ್ಗೆ ವರದಿ ಮಾಡುತ್ತಿರುವ ಮಾಧ್ಯಮಗಳಿಗೆ ಸೂಚನೆ ನೀಡಿದ್ದೀರಾ..? ನಿಮ್ಮ ಬೇಕಾಬಿಟ್ಟಿ ಕೆಲಸವನ್ನು ಇನ್ಮುಂದೆ ಸಹಿಸಲು ಸಾಧ್ಯವೇ ಇಲ್ಲ ಅಂತಾ ಸಭೆಯಲ್ಲಿ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.

    ಸಭೆಯಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಅಪರಾಧ ಬಗ್ಗೆ ಮಾಹಿತಿ ಹಾಗೂ ಕೃತ್ಯಗಳ ಸಮಾಲೋಚನೆ ನಡೆಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೋಮು ಗಲಭೆಯಿಂದಾಗಿ ಮಂಗಳೂರು ಐಜಿಪಿ ಹರಿಶೇಖರನ್, ಎಸ್‍ಪಿ ಸುದೀರ್ ಕುಮಾರ್ ರೆಡ್ಡಿ, ಮಂಗಳೂರು ಕಮಿಷನರ್ ಟಿ.ಆರ್ ಸುರೇಶ್ ಅವರನ್ನು ನೋಡುತ್ತಿದ್ದಂತೆಯೇ ಸಿಎಂ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

     

    ಮಾಧ್ಯಮಗಳು ಸುದ್ದಿ ತೋರಿಸ್ತವೆ ಅವರಿಗೇನಾದ್ರೂ ಸೂಚನೆ ನೀಡಿದ್ದೀರಾ? ಅವರಿಗೆ ಯಾವುದಾದ್ರೂ ಆದೇಶವೇನಾದ್ರೂ ಕೊಟ್ಟಿದ್ದೀರಾ? ಕಾವೇರಿ ಗಲಾಟೆಯಾದಾಗ ಪೊಲೀಸ್ ಕಮಿಷನರ್ ಖುದ್ದಾಗಿ ಮನವಿ ಮಾಡಿದ್ರು. ನೀವು ಇದೂವರೆಗೂ ಮಾಧ್ಯಮಗಳ ಬಗ್ಗೆ ಯೋಚನೆಯಾದ್ರೂ ಮಾಡಿದ್ದೀರಾ? ಅಂತಾ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿದ್ದಾರೆ.

    ಪೊಲೀಸ್ ಮಹಾ ನಿರ್ದೇಶಕ ಆರ್‍ಕೆ ದತ್ತಾ, ಹಿರಿಯ ಅಧಿಕಾರಿಗಳಾದ ಡಿಜಿ ರೂಪ್ ಕುಮಾರ್ ದತ್ತಾ, ಎಂಎನ್ ರೆಡ್ಡಿ, ಅಲೋಕ್ ಮೋಹನ್, ಗಗನ್ ದೀಪ್ ಸೇರಿದಂತೆ ಎಲ್ಲಾ ಐಪಿಎಸ್ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಈ ಸಭೆಯಲ್ಲಿ ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ಉಪಸ್ಥಿತರಿದ್ದರು.

  • ರಾಜ್ಯಾದ್ಯಂತ `ಚಕ್ರವರ್ತಿ’ ಚಾಲೆಂಜಿಂಗ್ ಸ್ಟಾರ್ ದರ್ಶನ – ಬಾಕ್ಸ್ ಆಫೀಸ್ ಸುಲ್ತಾನನ ಸಿನಿಮಾಕ್ಕೆ ಫಿದಾ

    ರಾಜ್ಯಾದ್ಯಂತ `ಚಕ್ರವರ್ತಿ’ ಚಾಲೆಂಜಿಂಗ್ ಸ್ಟಾರ್ ದರ್ಶನ – ಬಾಕ್ಸ್ ಆಫೀಸ್ ಸುಲ್ತಾನನ ಸಿನಿಮಾಕ್ಕೆ ಫಿದಾ

    – ರಾತ್ರಿಯಿಂದಲೇ ಅಭಿಮಾನಿಗಳಿಗೆ ಸಡಗರ

    ಬೆಂಗಳೂರು: ಸ್ಯಾಂಡಲ್ ವುಡ್‍ನಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ಚಕ್ರವರ್ತಿ’ ಸಿನಿಮಾ ತೆರೆಗೆ ಅಪ್ಪಳಿಸಿದೆ. ಗುರುವಾರ ರಾತ್ರಿಯಿಂದಲೇ ಎಲ್ಲೆಲ್ಲೂ ಸದ್ದು ಮಾಡುತ್ತಿದೆ. ಬೆಂಗಳೂರಿನ ಮಲ್ಟಿಪ್ಲೆಕ್ಸ್ ಗಳಲ್ಲಿ ಇದೇ ಮೊದಲ ಬಾರಿಗೆ ಮಧ್ಯರಾತ್ರಿ 12 ಗಂಟೆ ಚಿತ್ರ ಪ್ರದರ್ಶನಗೊಂಡಿದೆ. ಕೇವಲ ಕರ್ನಾಟಕ ಮಾತ್ರವಲ್ಲದೇ ದೆಹಲಿ ಮತ್ತು ಗುಜರಾತ್‍ನಲ್ಲಿ ತೆರೆ ಕಂಡಿದೆ. ದೇಶದ ಒಟ್ಟು 500 ಚಿತ್ರಮಂದಿರಗಳಲ್ಲಿ ಅಭಿಮಾನಿಗಳಿಗೆ ಚಕ್ರವರ್ತಿ ದರ್ಶನ ನೀಡುತ್ತಿದ್ದಾರೆ.

    ಶಿವಮೊಗ್ಗದ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಕ್ರವರ್ತಿ ಸಿನೆಮಾ ಮಧ್ಯರಾತ್ರಿಯೇ ಬಿಡುಗಡೆಗೊಂಡಿದೆ. ಮಧ್ಯ ರಾತ್ರಿ ಶೋ ನೋಡಲು 8 ಗಂಟೆಯಿಂದಲೇ ಟಿಕೇಟ್ ಗಾಗಿ ಕ್ಯೂನಿಂತಿದ್ದರು. ಕೆಲ ಮಿತಿಮೀರಿದ ವರ್ತನೆ ತೋರುತ್ತಿದ್ದ ಪ್ರೇಕ್ಷಕರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

    ಹಲವು ಬಾರಿ ಲಘು ಲಾಠಿ ಪ್ರಹಾರವನ್ನೂ ಮಾಡಲಾಯಿತು. ಚಿತ್ರಮಂದಿರದ ಆವರಣದ ತುಂಬಾ ಅಭಿಮಾನಿಗಳು ದರ್ಶನ್ ಪರ ಘೋಷಣೆ ಕೂಗುತ್ತಿದ್ದರು. ಸಿನೆಮಾ ಪ್ರದರ್ಶನ ಆರಂಭವಾದ ನಂತರ ದರ್ಶನ್ ಎಂಟ್ರಿ ವೇಳೆ ಅಭಿಮಾನಿಗಳ ಘೋಷಣೆ ಮುಗಿಲು ಮುಟ್ಟಿತ್ತು.

    ತುಮಕೂರಿನಲ್ಲಿ ರಾತ್ರಿಯಿಂದಲೇ ಚಿತ್ರ ತೆರೆ ಕಂಡಿದೆ. ಗಾಯತ್ರಿ ಮತ್ತು ಮಾರುತಿ ಚಿತ್ರ ಮಂದಿರಗಳಲ್ಲಿ ಚಿತ್ರ ಪ್ರದರ್ಶನಗೊಂಡಿದ್ದು ಮಾರುತಿ ಚಿತ್ರ ಮಂದಿರದಲ್ಲಿ ರಾತ್ರಿ 12 ಗಂಟೆ ಮತ್ತು ಬೆಳಗಿನ ಜಾವ 4-30 ಕ್ಕೆ ವಿಶೇಷ ಪ್ರದರ್ಶನ ನಡೆಸಲಾಯಿತು. ಮಧ್ಯರಾತ್ರಿ 12 ರ ಶೋಗೂ ಅಭಿಮಾನಿಗಳು ಮುಗಿಬಿದ್ದು ಚಿತ್ರ ವೀಕ್ಷಿಸಿದರು. ಇನ್ನೂ ಕೆಲ ಅಭಿಮಾನಿಗಳು ತಮ್ಮ ಹೇರ್‍ಸ್ಟೈಲ್‍ನಲ್ಲಿಯೇ ಚಕ್ರವರ್ತಿ ಎಂಬ ಹೆಸರು ಮೂಡುವ ಹಾಗೆ ಹೇರ್‍ಕಟ್ ಮಾಡಿಸಿಕೊಂಡು ಗಮನ ಸೆಳೆದರು.

    ಇದನ್ನೂ ಓದಿ: ಸ್ಯಾಂಡಲ್‍ವುಡ್‍ನಲ್ಲಿ ದಾಖಲೆ ಬರೆದ ಚಕ್ರವರ್ತಿ: ಧೂಳೆಬ್ಬಿಸಿದೆ ದಚ್ಚು ದರ್ಬಾರ್

    ಇದನ್ನೂ ಓದಿ: ಯುಗಾದಿಗೆ ‘ಚಕ್ರವರ್ತಿ’ ಸಿನಿಮಾದ ಟ್ರೇಲರ್ ರಿಲೀಸ್

    ಇದನ್ನೂ ಓದಿ: ನಾವ್ ಲಾಂಗ್ ಇರೋದ್ರಿಂದ ಲಾಂಗ್ ನಮ್ಗೆ ಮ್ಯಾಚಾಗುತ್ತೆ: ಫೇಸ್ ಬುಕ್ ಲೈವ್‍ನಲ್ಲಿ ನಟ ದರ್ಶನ್