Tag: bengalore

  • ಬೆಂಗಳೂರಿನಲ್ಲಿ ಕೊರೊನಾ ಸ್ಫೋಟ – ಹೈ ರಿಸ್ಕ್ ಪಟ್ಟಿಯಲ್ಲಿದೆ 9 ವಾರ್ಡ್‌ಗಳು

    ಬೆಂಗಳೂರಿನಲ್ಲಿ ಕೊರೊನಾ ಸ್ಫೋಟ – ಹೈ ರಿಸ್ಕ್ ಪಟ್ಟಿಯಲ್ಲಿದೆ 9 ವಾರ್ಡ್‌ಗಳು

    ಬೆಂಗಳೂರು: ದಿನೇ ದಿನೇ ಕೊರೋನಾ ಹೆಚ್ಚಳವಾಗುತ್ತಿದ್ದು ರಾಜ್ಯದಲ್ಲೇ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಜಾಸ್ತಿಯಿದೆ.

    ಜ.13ರ ಕೋವಿಡ್ ಬುಲೆಟಿನ್ ಪ್ರಕಾರ ರಾಜ್ಯದಲ್ಲಿ ಒಟ್ಟು 1,15,733 ಸಕ್ರಿಯ ಪ್ರಕರಣಗಳಿದೆ. ಈ ಪೈಕಿ ಬೆಂಗಳೂರಿನಲ್ಲೇ 90,893 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರಿನ 9 ನಗರಗಳು ಹೈ ರಿಸ್ಕ್ ಪಟ್ಟಿಗೆ ಸೇರಿವೆ. ಪ್ರತಿನಿತ್ಯ ಈ ವಾರ್ಡ್‌ಗಳಲ್ಲಿ ಸೋಂಕು ಹೆಚ್ಚುತ್ತಿದೆ.

    ಬೆಂಗಳೂರಿನಲ್ಲಿ ಶುಕ್ರವಾರ ಒಂದೇ ದಿನ 20121 ಕೇಸ್ ದಾಖಲಾಗುವ ಸಾಧ್ಯತೆಯಿದೆ. ಬೆಂಗಳೂರು ನಗರ ಮತ್ತು ಬಿಬಿಎಂಪಿ ವ್ಯಾಪ್ತಿ ಸೇರಿ 20 ಸಾವಿರಕ್ಕೂ ಹೆಚ್ಚು ಕೇಸ್ ದಾಖಲಾಗಲಿದೆ. ಇದನ್ನೂ ಓದಿ: ಉತ್ತುಂಗದಲ್ಲಿರುವ ಕೋವಿಡ್‌ ಸೋಂಕು: ಮೂರನೇ ಅಲೆ ಶೀಘ್ರವೇ ಅಂತ್ಯ?

    ಗುರುವಾರ ಎಷ್ಟು ಕೇಸ್?
    ಬೆಳ್ಳಂದೂರು – 356, ಬೇಗೂರು – 214, ನ್ಯೂ ತಿಪ್ಪಸಂದ್ರ – 181, ಎಚ್‌ಎಸ್‌ಆರ್ ಲೇಔಟ್ – 159, ಹೊರಮಾವು – 159, ದೊಡ್ಡನೆಕುಂದಿ – 150, ಕೋರಮಂಗಲ – 143, ಶಾಂತಲನಗರ – 141, ಆರ್‌ಆರ್ ನಗರ – 124 ಕೇಸ್‌ಗಳು ವರದಿಯಾಗಿವೆ. ಇದನ್ನೂ ಓದಿ: ಎಲ್ಲಾ ಸಿಬ್ಬಂದಿಗೂ ಕೊರೊನಾ – ಬ್ಯಾಂಕ್ ಸೀಲ್‌ಡೌನ್

  • ಕೊರೊನಾ ಜಾಗೃತಿ – ಪವರ್ ಸ್ಟಾರ್ ಹೇಳಿದ 5 ಸೂತ್ರಗಳ್ಯಾವುದು ಗೊತ್ತಾ?

    ಕೊರೊನಾ ಜಾಗೃತಿ – ಪವರ್ ಸ್ಟಾರ್ ಹೇಳಿದ 5 ಸೂತ್ರಗಳ್ಯಾವುದು ಗೊತ್ತಾ?

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕೊರೊನಾದಿಂದ ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುವುದಕ್ಕೆ 5 ಸಲಹೆ ನೀಡಿದ್ದಾರೆ.

    ಕೊರೊನಾ ಎರಡನೇ ಅಲೆಯಿಂದಾಗಿ ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಲವರು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ರಾಜ್ಯದಲ್ಲಿ ಕೊರೊನಾ ಲಾಕ್‍ಡೌನ್ ಘೋಷಿಸಿದ್ದರೂ, ದಿನದಿಂದ ದಿನ ಅತೀ ವೇಗವಾಗಿ ಹರಡುತ್ತಿರುವ ಕೊರೊನಾದಿಂದ ಮುಕ್ತಿ ಪಡೆಯಲು ಜನರು ಕೆಲವು ನಿಯಮಗಳನ್ನು ಪಾಲಿಸಬೇಕು ಎಂದು ನಟ ಪುನೀತ್ ರಾಜ್ ಕುಮಾರ್ ವೀಡಿಯೋವೊಂದನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಮನವಿ ಮಾಡಿದ್ದಾರೆ. ಜೊತೆಗೆ ಕೊರೊನಾ ಎರಡನೆ ಅಲೆಯು ಎಲ್ಲರ ಮೇಲೂ ಪರಿಣಾಮ ಬೀರುತ್ತಿದೆ. ಈ ಮಾರಕ ವೈರಸ್ ವಿರುದ್ಧ ಹೋರಾಡಲು ನಾವೆಲ್ಲರೂ ಒಟ್ಟಾಗಿ ಸೇರಬೇಕಾಗಿದೆ. ನಾವು ಸುರಕ್ಷಿತವಾಗಿರೋಣ ಮತ್ತು ನಮ್ಮ ಸುತ್ತಲಿರುವವರನ್ನು ಸುರಕ್ಷಿತವಾಗಿರಿಸೋಣ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ಕೊರೊನಾ ಜಾಗೃತಿ ಅಭಿಯಾನಕ್ಕೆ ಕೈ ಜೋಡಿಸಿರುವ ಪುನೀತ್ ರಾಜ್ ಕುಮಾರ್‍ರವರು ಕೆಲವು ಸಾಕ್ಷ್ಯ ಚಿತ್ರಗಳ ಮೂಲಕ 5 ಸೂತ್ರಗಳನ್ನು ತಿಳಿಸಿದ್ದಾರೆ. ವೀಡಿಯೋದಲ್ಲಿ, ಕೊರೊನಾ ಟೆಸ್ಟ್ ರಿಪೋರ್ಟ್‍ಗಾಗಿ ಕಾಯುತ್ತಿದ್ದೀರಾ ಅಥವಾ ಕೊರೊನಾ ಇರುವುದು ದೃಢವಾಗಿದ್ಯಾ? ಹಾಗಾದರೆ ಪ್ರತಿ ಮನೆಯಲ್ಲಿಯೂ ಜೊತೆಯಾಗಿ ಕೊರೊನಾ ಗೆಲ್ಲಿ ಎಂದಿದ್ದಾರೆ. ಈ ವೇಳೆ ಇಬ್ಬರು ಮಕ್ಕಳನ್ನು ಸಂಯಮ ಹಾಗೂ ಎಚ್ಚರದ ಮಾತಿನಂತೆ ಬಿಂಬಿಸಿ 5 ಸೂತ್ರಗಳನ್ನು ತಿಳಿಸಿದ್ದಾರೆ.

    *ಜಾಗರೂಕತೆಯಿಂದ ಒಂದು ಪ್ರತ್ಯೇಕ ಕೊಠಡಿಯಲ್ಲಿ ಕನಿಷ್ಠ ಪಕ್ಷ ಒಬ್ಬರೇ ಉಳಿದು ಬಿಡಿ.
    *ಸ್ವತಃ ಚಿಕಿತ್ಸೆ ಮಾಡಿಕೊಳ್ಳದೇ ವೈದ್ಯರನ್ನು ಸಂಪರ್ಕಿಸಿ.
    *ಮನೆಯಲ್ಲಿರುವವರು ಕಾಲಕಾಲಕ್ಕೆ ಸೋಪಿನಿಂದ ಕೈ ತೋಳಿಯುವಂತೆ ನೋಡಿಕೊಳ್ಳಿ.
    *ನೀವು ಕೊರೊನಾ ಸೋಂಕಿತರನ್ನು ಮನೆಯಲ್ಲಿಯೇ ನೋಡಿಕೊಳ್ಳುತ್ತಿದ್ದರೆ, ಮಾಸ್ಕ್‍ನನ್ನು ಮೂಗು ಹಾಗೂ ಬಾಯಿಯನ್ನು ಮುಚ್ಚುವಂತೆ ಸರಿಯಾಗಿ ಧರಿಸಿ.
    *ಮುಂದಿನ ಕೆಲವು ದಿನಗಳಲ್ಲಿ ಜ್ವರ ಕಡಿಮೆಯಾಗದಿದ್ದರೆ ಹಾಗೂ ಉಸಿರಾಟದ ತೊಂದರೆಯಾಗುತ್ತಿದ್ದರೆ, ನಿಮ್ಮ ವೈದ್ಯರನ್ನು ಸಂಪರ್ಕಿಸಿ, ವೈದ್ಯರು ಸೂಚಿಸಿದರೆ ಮಾತ್ರ ಹತ್ತಿರ ಆಸ್ಪತ್ರೆಯನ್ನು ಸಂಪರ್ಕಿಸಿ.

    ಹೀಗೆ ಸಂಯಮ ಹಾಗೂ ಎಚ್ಚರವನ್ನು ತಿಳಿಸುತ್ತಿರುವ ಈ 5 ಸೂತ್ರಗಳನ್ನು ಪಾಲಿಸಿದರೆ ನಾವು ಖಂಡಿತ ಕೊರೊನಾವನ್ನು ಸೋಲಿಸಬಹುದು. ಪ್ರತಿ ಮನೆಯು ಪಣ ತೊಟ್ಟಿದೆ ಎಂದ ಮೇಲೆ ಕೊರೊನಾ ಖಂಡಿತ ಸೋಲುತ್ತದೆ ಎಂದಿದ್ದಾರೆ.

     

  • ಕೊರೊನಾ ಟೆಸ್ಟ್ ಗೆ ಹೆದರಿ ಹಾಸ್ಟೆಲ್ ಕಾಂಪೌಂಡ್ ಹಾರಿ ವಿದ್ಯಾರ್ಥಿನಿಯರು ಗ್ರೇಟ್ ಎಸ್ಕೇಪ್

    ಕೊರೊನಾ ಟೆಸ್ಟ್ ಗೆ ಹೆದರಿ ಹಾಸ್ಟೆಲ್ ಕಾಂಪೌಂಡ್ ಹಾರಿ ವಿದ್ಯಾರ್ಥಿನಿಯರು ಗ್ರೇಟ್ ಎಸ್ಕೇಪ್

    ಬೆಂಗಳೂರು: ನಗರದ ಜಿಕೆವಿಕೆ ಕಾಲೇಜಿನಲ್ಲಿ ಕೊರೊನಾ ಸ್ಪೋಟಗೊಂಡಿದೆ. ಹಾಸ್ಟೆಲ್‍ನಲ್ಲಿದ್ದ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಂಡುಬಂದಿದೆ. ಹಾಗಾಗಿ ಹಾಸ್ಟೆಲ್‍ನಲ್ಲಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಮಾಡಲು ವಿಶ್ವವಿದ್ಯಾಲಯ ಮುಂದಾಗಿದೆ. ಆದರೆ ವಿದ್ಯಾರ್ಥಿನಿಯರು ಮಾತ್ರ ಕೊರೊನಾ ಟೆಸ್ಟ್ ಗೆ ಹೆದರಿ ಹಾಸ್ಟೆಲ್‍ನ ಕಾಂಪೌಂಡ್ ಹಾರಿ ಪರಾರಿಯಾಗಿದ್ದಾರೆ.

    ನಗರದ ಜಿಕೆವಿಕೆ ಕೃಷಿ ವಿವಿಯಲ್ಲಿ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಕಂಡು ಬಂದ ಹಿನ್ನೆಲೆ ಎರಡು ದಿನಗಳಿಂದ ಆಫ್ ಲೈನ್ ತರಗತಿ ಸ್ಥಗಿತ ಮಾಡಿ, ಆನ್ ಲೈನ್ ಕ್ಲಾಸ್ ಮಾಡಲಾಗುತ್ತಿತ್ತು. ಹಾಗಾಗಿ ಎಲ್ಲಾ ವಿದ್ಯಾರ್ಥಿಗಳು ಹಾಸ್ಟೆಲ್‍ನಲ್ಲೇ ಇದ್ದರು. ಈ ವೇಳೆ ಹಾಸ್ಟಲ್‍ನಲ್ಲಿದ್ದ ವಿದ್ಯಾರ್ಥಿಗಳಲ್ಲೂ ಸೋಂಕು ಕಂಡುಬಂದಿದೆ.

    ಇದರಿಂದ ಎಚ್ಚೆತ್ತುಕೊಂಡ ಕೃಷಿ ವಿವಿ, ಹಾಸ್ಟೆಲ್‍ನಲ್ಲಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಮಾಡಲು ಮುಂದಾಗಿದೆ. ಆದರೆ ವಿದ್ಯಾರ್ಥಿನಿಯರು ಮಾತ್ರ ಕೊರೊನಾ ಟೆಸ್ಟ್ ಮಾಡಿಸದೇ ಹಾಸ್ಟೆಲ್‍ನಿಂದ ಗ್ರೇಟ್ ಎಸ್ಕೇಪ್ ಆಗಿದ್ದಾರೆ.

    ಕೊರೊನಾ ಸೋಂಕಿನಿಂದಾಗಿ ಕೃಷಿ ವಿವಿಯಲ್ಲಿ ಹೊಸ ನಿಯಮ ತರಲಾಗಿತ್ತು. ಯಾರೇ ತಮ್ಮ ಮನೆಗೆ ಹೋಗಬೇಕಾದರು ಕೂಡ ಕೊರೊನಾ ಟೆಸ್ಟ್ ಮಾಡಿಸಿಕೊಂಡು ಹೋಗಬೇಕು. ಅಲ್ಲದೆ ಸ್ವ ಇಚ್ಚೆಯಿಂದ ಮನೆಗೆ ಹೋಗುತ್ತಿದ್ದೇವೆ ಎಂದು ಪತ್ರ ಬರೆದು ಕೊಡುವಂತೆ ವಿವಿ ಆದೇಶ ಹೊರಡಿಸಿತ್ತು. ಇದಲ್ಲದೆ ಸೋಂಕು ಇಲ್ಲದೆ ಇದ್ದ ವಿದ್ಯಾರ್ಥಿಗಳನ್ನು ಮಾತ್ರ ಹಾಸ್ಟೆಲ್‍ನಿಂದ ಹೊರಗೆ ಬಿಡುವ ಕ್ರಮ ಕೈಗೊಂಡಿತ್ತು.

    ಈ ಆದೇಶದ ಬಳಿಕ ಹಾಸ್ಟೆಲ್‍ನಲ್ಲಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಗೆ ವಿವಿ ಮುಂದದಾಗ ಕೆಲ ವಿದ್ಯಾರ್ಥಿನಿಯರು ಟೆಸ್ಟ್ ನಿಂದ ತಪ್ಪಿಸಿಕೊಳ್ಳಲು ಹೇಳದೆ ಕೇಳದೆ ಹಾಸ್ಟಲ್ ಕಾಂಪೌಂಡ್ ಹಾರಿ ಓಡಿ ಹೋಗಿದ್ದಾರೆ. ಇದೀಗ ವಿದ್ಯಾರ್ಥಿನಿಯರ ಹಾಸ್ಟೆಲ್ ಕಾಂಪೌಂಡ್ ಹಾರಿ ಓಡುತ್ತಿರುವ ವೀಡಿಯೋ ಈಗ ಫುಲ್ ವೈರಲ್ ಆಗಿದೆ.

  • ಕನ್ನಡ ಶಾಲೆಗೆ ಹೊಸ ರೂಪಕೊಟ್ಟ ಯುವ ಬ್ರಿಗೇಡ್ ತಂಡ

    ಕನ್ನಡ ಶಾಲೆಗೆ ಹೊಸ ರೂಪಕೊಟ್ಟ ಯುವ ಬ್ರಿಗೇಡ್ ತಂಡ

    – ಯುವಕರ ನಡೆಗೆ ಪ್ರಶಂಸೆ

    ಬೆಂಗಳೂರು: ರಾಜ್ಯದ ಗಡಿಭಾಗವಾದ ಆನೇಕಲ್ ತಾಲೂಕಿನ ಸೊಲೂರು ಗ್ರಾಮದ ಕನ್ನಡ ಶಾಲೆಗೆ ಹೊಸ ರೂಪ ಕೊಟ್ಟು ನವೀಕರಿಸುವ ಮೂಲಕ ಶಕ್ತಿ ಸೇವಾ ಟ್ರಸ್ಟ್ ಹಾಗೂ ವಿವೇಕಾನಂದ ಯುವ ಬ್ರಿಗೇಡ್ ತಂಡದ ಯುವಕರು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

    ಶಾಲೆಯ ನೂತನ ಕಟ್ಟಡವನ್ನ ಉದ್ಘಾಟನೆ ಮಾಡಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೊಲೂರಿನ ವಿನೋಬ ಭಾವೆ ಸರ್ಕಾರಿ ಶಾಲೆ ಭೇಟಿ ಕೊಟ್ಟು ನೂತನ ಕೊಠಡಿಗಳ ಉದ್ಘಾಟನೆ ನೆರವೇರಿಸಿದರು. ಸುಮಾರು 35 ಲಕ್ಷ ವೆಚ್ಚ ಮಾಡಿ ಶಾಲೆಯ ಮೊದಲ ಮಹಡಿಯಲ್ಲಿ ಮೂರು ಅತ್ಯಾಧುನಿಕ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಜೊತೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಅತ್ಯಾಧುನಿಕ ಶೌಚಾಲಯವನ್ನು ನಿರ್ಮಿಸಲಾಗಿದೆ. ಹೀಗಾಗಿ ಖುದ್ದು ಸಚಿವರೇ ಶಾಲೆಯನ್ನು ವೀಕ್ಷಣೆ ಮಾಡಿ ಯುವ ಬ್ರಿಗೇಡ್ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.

    ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಗಡಿಭಾಗದ ಕನ್ನಡ ಶಾಲೆಗಳು ನಿಜಕ್ಕೂ ಶೋಚನೀಯ ಸ್ಥಿತಿಯಲ್ಲಿದ್ದು ಅವುಗಳನ್ನು ಅಭಿವೃದ್ಧಿ ಮಾಡುವ ಮೂಲಕ ಕನ್ನಡ ಶಾಲೆಗಳನ್ನು ಉನ್ನತೀಕರಿಸುವ ಕೆಲಸ ಇಂದು ಸೊಲೂರಿನಲ್ಲಿ ನಡೆದಿದೆ. ಚಕ್ರವರ್ತಿ ಸೂಲಿಬೆಲೆಯವರ ಯುವ ಬ್ರಿಗೇಡ್ ಸದಸ್ಯರು ರಾಜ್ಯದ ಹಲವು ಕಡೆಗಳಲ್ಲಿ ಕೈಗಾರಿಕೆಗಳ ಜೊತೆಗೂಡಿ ಜನಪರ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರ ಸಮಾಜದ ಮೇಲಿನ ಕಳಕಳಿ ಇದೇ ರೀತಿ ಮುಂದುವರಿಯಲಿ ಎಂದರು.

    ಭಗವಾನ್ ಅವರ ವಿವಾದಾತ್ಮಕ ಪುಸ್ತಕದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸುರೇಶ್ ಕುಮಾರ್, ಚರ್ಚೆ ಬೇಡ ಭಗವಾನ್ ಪುಸ್ತಕ ಖರೀದಿ ಮಾಡಿಲ್ಲ. ಈ ಬಗ್ಗೆ ಫೇಸ್‍ಬುಕ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದೇನೆ ಎಂದು ತಿಳಿಸಿದರು.

    ಯುವ ಬ್ರಿಗೇಡ್ ರಾಜ್ಯಾಧ್ಯಕ್ಷ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಸೋಲೂರಿನ ಸರ್ಕಾರಿ ಶಾಲಾ ಕಟ್ಟ ತೀರಾ ಕೆಟ್ಟ ಸ್ಥಿತಿಯಲ್ಲಿತ್ತು. ನಮ್ಮ ಸದಸ್ಯರೊಬ್ಬರು ಇದನ್ನು ನಮ್ಮ ಗಮನಕ್ಕೆ ತಂದರು. ನಾವು ಕಂಪನಿಯ ಅಡಿಯಲ್ಲಿ 22 ಲಕ್ಷ ಹಾಗೂ ನಮ್ಮ ಯುವ ಬ್ರಿಗೇಡ್ ಸದಸ್ಯರು ಸಾಮಾಜಿಕ ಜಾಲತಾಣದ ಮೂಲಕ ಹಣವನ್ನು ದಾನಿಗಳಿಂದ ಸಂಗ್ರಹಿಸಿ ಒಟ್ಟು 35 ಲಕ್ಷ ವೆಚ್ಚ ಮಾಡಿ ಸರ್ಕಾರಿ ಶಾಲೆಗೆ ಮೂರು ಹೊಸ ಕಟ್ಟಡ ನಿರ್ಮಿಸಿ ಹೊಸ ರೂಪವನ್ನು ನೀಡಿದ್ದೇವೆ. ಶಿಕ್ಷಣ ಸಚಿವರು ನೂತನ ಕಟ್ಟಡವನ್ನು ಉದ್ಘಾಟನೆ ಮಾಡಿರುವುದು ನಿಜಕ್ಕೂ ಇನ್ನು ಹೆಚ್ಚು ಸಂತಸ ನೀಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

  • ಮಗನ ಹಣೆಗೆ ಮುತ್ತಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

    ಮಗನ ಹಣೆಗೆ ಮುತ್ತಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

    – 9 ಲಕ್ಷ ಹಣ ಕಬಳಿಸಿರುವ ಆರೋಪ

    ಬೆಂಗಳೂರು: ಮಗನ ಹಣೆಗೆ ಮುತ್ತಿಟ್ಟು ಕಣ್ಣೀರು ಹಾಕುತ್ತಾ ಮಗನ ಎದುರೇ ತಾಯಿ ಸೆಲ್ಫಿ ವೀಡಿಯೋ ಮಾಡುತ್ತಾ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಚಂದ್ರಲೇಔಟ್ ಆರುಂಧತಿ ನಗರದ 11 ನೇ ಮುಖ್ಯರಸ್ತೆಯ ಮನೆಯೊಂದರಲ್ಲಿ ನಡೆದಿದೆ.

    ಫಾತೀಮಾ (30) ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ತಾಯಿ ರಫೀಕಾ ಬೇಗಂ, ಅಣ್ಣ ಜಾಫರ್, ಅತ್ತಿಗೆ ಸಮೀನಾ, ಅಕ್ಕ ಆಯೇಷಾ ಬಾನು, ಆಕೆ ಪುತ್ರ ಸೈಯದ್ ಕಲೀಲ್ ವಿರುದ್ಧ ಹಣ ದುರ್ಬಳಕೆ ಆರೋಪ ಕೇಳಿ ಬಂದಿದೆ.

    ಕಳೆದ ಐದಾರು ವರ್ಷಗಳಿಂದ ದುಬೈ, ಕುವೈತ್ ಮನೆಗೆಲಸ ಮಾಡಿ ಹಣ ಕೂಡಿಟ್ಟಿದ್ದೆ. 9 ಲಕ್ಷಕ್ಕೂ ಹೆಚ್ಚು ಹಣವನ್ನು ಸಂಬಂಧಿಕರೇ ಕಬಳಿಸಿದ್ದಾರೆ ಎಂದು ಫಾತಿಮಾ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಯಾವುದೇ ಪ್ರಯೋಜನ ಆಗಲಿಲ್ಲವೆಂದು ಮನನೊಂದು ಆತ್ಮಹತ್ಯೆಗೆ ಯತ್ನಸಿದ್ದಾರೆ.

    ವಿಷ ಸೇವಿಸಿ ಅಸ್ವಸ್ಥರಾದ ಫಾತೀಮಾರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಫಾತೀಮಾ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ. ಈ ಘಟನೆ ಚಂದ್ರಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಎರಡು ದೇಹಗಳು ಒಂದೇ ಧ್ವನಿ – ವಿಷ್ಣು, ಎಸ್‍ಪಿಬಿ ಬಾಂಧವ್ಯದ ಬಗ್ಗೆ ಅನಿರುದ್ಧ್ ಮಾತು

    ಎರಡು ದೇಹಗಳು ಒಂದೇ ಧ್ವನಿ – ವಿಷ್ಣು, ಎಸ್‍ಪಿಬಿ ಬಾಂಧವ್ಯದ ಬಗ್ಗೆ ಅನಿರುದ್ಧ್ ಮಾತು

    – ಇಬ್ಬರು ಏಕವಚನದಲ್ಲಿ ಮಾತನಾಡುತ್ತಿದ್ರು
    – ಕಪ್ಪು ಬಣ್ಣ ಹಾಕಿ ಕಂಬನಿ

    ಬೆಂಗಳೂರು: ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಯಣ್ಯಂ ಇಂದು ಇಹಲೋಕ ತ್ಯಜಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಿರುತೆರೆ ನಟ ಅನಿರುದ್ಧ್ ಅತ್ಯಂತ ಕೆಟ್ಟ ದಿನವಿದು ಎಂದು ಹೇಳುವ ಮೂಲಕ ಕಪ್ಪು ಬಣ್ಣ ಹಾಕಿ ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ: ಕನ್ನಡದಲ್ಲಿ ಕೊನೆಯ ಬಾರಿ ಕೊರೊನಾ ಜಾಗೃತಿ ಗೀತೆಗೆ ದನಿಯಾಗಿದ್ರು ಎಸ್‍ಪಿಬಿ

    ನಟ ಅನಿರುದ್ಧ್ ತಮ್ಮ ಫೇಸ್‍ಬುಕ್ ಪ್ರೊಫೈಲ್ ಫೋಟೋವನ್ನು ಡಿಲೀಟ್ ಮಾಡಿ ಕಪ್ಪು ಬಣ್ಣ ಹಾಕುವ ಮೂಲಕ ಎಸ್.ಪಿ.ಬಾಲಸುಬ್ರಹ್ಯಣ್ಯಂ ಅಗಲಿಗೆ ಸಂತಾಪ ಸೂಚಿಸಿದ್ದಾರೆ. ಜೊತೆಗೆ ತಮ್ಮ ಎಸ್‍ಪಿಬಿ ಅವರ ಮಧ್ಯೆ ಇದ್ದ ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ.

    ಎಲ್ಲರಿಗೂ ನಮಸ್ಕಾರ ಎಸ್‍ಪಿಬಿ ಸರ್ ಇಂದು ನಮ್ಮನೆಲ್ಲಾ ಶಾರೀರಿಕವಾಗಿ ಬಿಟ್ಟು ಹೋಗಿದ್ದಾರೆ. ಇದರಿಂದ ತುಂಬಾ ಬೇಸರ, ದುಃಖ, ಸಂಕಟ ಆಗುತ್ತಿದೆ. ಬಾಲಸುಬ್ರಹ್ಮಣ್ಯಂ ಮತ್ತು ಡಾ.ವಿಷ್ಣುವರ್ಧನ್ ಅವರ ಸಂಬಂಧ ಯಾವ ರೀತಿ ಇತ್ತು ಎಂದು ನಿಮ್ಮೆಲ್ಲರಿಗೂ ಗೊತ್ತಿದೆ. ಅವರಿಬ್ಬರು ತುಂಬಾ ಒಳ್ಳೆಯ ಸ್ನೇಹಿತರು. ಪರಸ್ಪರ ಏಕವಚನದಲ್ಲಿ ಮಾತನಾಡುತ್ತಿದ್ದರು. ಅವರ ಬಾಂಧವ್ಯ ಎರಡು ದೇಹಗಳು ಒಂದೇ ಧ್ವನಿ ಆಗಿತ್ತು ಎಂದು ಹೇಳಿದರು.

    ನನ್ನ ಕೆಲ ಸಿನಿಮಾಗಳಿಗೆ ಅವರು ಧ್ವನಿಯಾಗಿದ್ದುದ್ದು ನನ್ನ ಅದೃಷ್ಟ. ಅಪ್ಪ ಅವರು ಶಾರೀರಿಕವಾಗಿ ಬಿಟ್ಟು ಹೋದ ಮೇಲೂ ಸಹ ಎಸ್‍ಪಿಬಿ ಸರ್ ನಮ್ಮ ಕುಟುಂಬದವರ ಜೊತೆ ತುಂಬಾ ಪ್ರೀತಿಯಿಂದ ಗೌರವದಿಂದ ಇದ್ದರು. 2011ರಲ್ಲಿ ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ವಿ. ಆ ಕಾರ್ಯಕ್ರಮದಲ್ಲಿ ಅಪ್ಪ ಅವರನ್ನು ನೆನಪಿಸಿಕೊಂಡು ಅನೇಕ ಹಾಡಗಳನ್ನು ಹಾಡಿದ್ದರು. ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂದು ಅನಿರುದ್ಧ್ ನೋವಿನಿಂದ ಹೇಳಿದ್ದಾರೆ.

    https://www.facebook.com/Anirudhofficialpage/photos/a.107512207315687/400945701305668/

    ಎಸ್‍ಪಿಬಿ ಸರ್ ಭೇಟಿ ಮಾಡಿದಾಗಲೆಲ್ಲಾ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಅಂತಹ ಮಹಾನ್ ವ್ಯಕ್ತಿ, ಗಾಯಕರು ಸಿಗುವುದು ತುಂಬಾನೇ ವಿರಳ. ಎಷ್ಟು ಹಾಡು, ಎಷ್ಟು ಭಾಷೆಯಲ್ಲಿ ಹಾಡಿದ್ದಾರೆ. ಅತ್ಯಂತ ಉನ್ನತ ಮಟ್ಟಕ್ಕೆ ತಲುಪಿರುವ ಗಾಯಕರು. ಅಂತಹ ಗಾಯಕರನ್ನು ಮತ್ತೆ ನೋಡುತ್ತೇವೆ ಎಂದು ನಮಗನಿಸುತ್ತಿಲ್ಲ. ಇವತ್ತು ನಾವು ಅವರನ್ನು ಶಾರೀರಿಕವಾಗಿ ಕಳೆದುಕೊಂಡಿದ್ದೇವೆ. ಹೀಗಾಗಿ ನನಗೆ ಮಾತುಗಳೇ ಬರುತ್ತಿಲ್ಲ ಎಂದು ಭಾವುಕರಾದರು.

    ಎಸ್.ಪಿ.ಬಾಲಸುಬ್ರಹ್ಯಣ್ಯಂ ಹಾಡುಗಳನ್ನು ಕೇಳುತ್ತಲೇ ಬೆಳೆದಿದ್ದೇನೆ. ಅವರ ಹಾಡುಗಳು ಮೂಲಕ ಯಾವಾಗಲೂ ಶಾಶ್ವತವಾಗಿ ಉಳಿದುಕೊಳ್ಳುತ್ತಾರೆ. ಎಸ್‍ಪಿಬಿ ಅಗಲಿಕೆ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರಿಗೆ ಮೋಕ್ಷ ಸಿಗಲಿ. ತಮ್ಮ ಹಾಡುಗಳ ಮೂಲಕ ಎಸ್‍ಪಿಬಿ ಯಾವಾಗಲೂ ಅಮರರಾಗಿರುತ್ತಾರೆ ಎಂದು ಅನಿರುದ್ಧ್ ಹೇಳಿದರು.

  • ಕರ್ನಾಟಕ ಕ್ರಿಕೆಟ್ ಪ್ರೇಮಿಗಳಿಗೆ ಬಹಳ ಕಠಿಣ – ಇಂದಿನ ಪಂದ್ಯದ ಬಗ್ಗೆ ಕಿಚ್ಚ ಮಾತು

    ಕರ್ನಾಟಕ ಕ್ರಿಕೆಟ್ ಪ್ರೇಮಿಗಳಿಗೆ ಬಹಳ ಕಠಿಣ – ಇಂದಿನ ಪಂದ್ಯದ ಬಗ್ಗೆ ಕಿಚ್ಚ ಮಾತು

    ಬೆಂಗಳೂರು: ಲಾಕ್‍ಡೌನ್ ಬಳಿಕ ಶುರುವಾಗಿರುವ ಐಪಿಎಲ್ 2020 ದಿನದಿಂದ ದಿನಕ್ಕೆ ರೋಚಕತೆ ಹೆಚ್ಚಿಸುತ್ತಿದೆ. ಇದೀಗ 2020ರ ಐಪಿಎಲ್ ಆವೃತ್ತಿಯ ಇಂದಿನ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಇದಕ್ಕಾಗಿ ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ. ಇತ್ತ ಕಿಚ್ಚ ಸುದೀಪ್ ಕೂಡ ಇಂದು ನಡೆಯುವ ಪಂದ್ಯದ ಬಗ್ಗೆ ಟ್ವೀಟ್ ಮಾಡುವ ಮೂಲಕ ಮಾತನಾಡಿದ್ದಾರೆ.

    “ಇಂದಿನ ಪಂದ್ಯವು ಕರ್ನಾಟಕದ ಕ್ರಿಕೆಟ್ ಪ್ರಿಯರಿಗೆ ಬಹಳ ಕಠಿಣವಾಗಲಿದೆ. ಯಾಕೆಂದರೆ ಒಂದು ಕಡೆ ನಮ್ಮೂರಿನ ತಂಡ ಆರ್‌ಸಿಬಿ. ಎದುರಾಳಿಯಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ (ಹೆಚ್ಚು ಕರ್ನಾಟಕದ ಆಟಗಾರರು) ಆಡುತ್ತಿದ್ದಾರೆ. ಆದ್ದರಿಂದ ನಾವು ಹಿಂದೆ ಕುಳಿತುಕೊಂಡು ಆಟವನ್ನು ನೋಡಿ ಎಂಜಾಯ್ ಮಾಡುವ ಸಮಯ ಅಷ್ಟೇ” ಎಂದು ನಟ ಸುದೀಪ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕನ್ನಡಿಗರ ನಡ್ವೆ ಬಿಗ್‍ಫೈಟ್- ಇತ್ತಂಡಗಳ ಬಲಾಬಲ ಇಂತಿದೆ

    ಇಂದಿನ ಪಂದ್ಯದಲ್ಲಿ ಇಬ್ಬರು ಆಟಗಾರರ ಮೇಲೆ ಸುದೀಪ್ ಹೆಚ್ಚಿನ ಭರವಸೆ ಇಟ್ಟಿದ್ದಾರೆ. ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ಕಳೆದ ಪಂದ್ಯದಲ್ಲಿ ಶತಕ ಮಿಸ್ ಮಾಡಿಕೊಂಡ ಪಂಜಾಬ್ ಆಟಗಾರ ಕನ್ನಡಿಗ ಮಾಯಾಂಕ್ ಅಗರ್ವಾಲ್ ಮೇಲೆ ಸುದೀಪ್ ಭರವಸೆ ಇಟ್ಟುಕೊಂಡಿದ್ದಾರೆ. ಇದನ್ನೂ ಓದಿ: ಡೇವಿಡ್ ವಾರ್ನರ್ ದಾಖಲೆ ಮುರಿದ ರೋಹಿತ್ ಶರ್ಮಾ

    ಪಂಜಾಬ್ ತಂಡದಲ್ಲಿ ಕನ್ನಡಿಗರು ಪ್ರಮುಖ ಪಾತ್ರ ವಹಿಸಿದ್ದು, ಅನಿಲ್ ಕುಂಬ್ಳೆ ಅವರ ಮಾರ್ಗದರ್ಶನದಲ್ಲಿ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆರಂಭಿಕರಾಗಿ ಮಯಾಂಕ್ ತಮ್ಮ ಸಾಮರ್ಥ್ಯವನ್ನು ಮೊದಲ ಪಂದ್ಯದಲ್ಲೇ ಸಾಬೀತು ಪಡಿಸಿದ್ದು, ಡೆಲ್ಲಿ ವಿರುದ್ಧ 60 ಎಸೆತಗಳಲ್ಲಿ 89 ರನ್ ಸಿಡಿಸಿ ಮಿಂಚಿದ್ದರು.

    ಇತ್ತ ಆರ್‌ಸಿಬಿ ಪರ ಕನ್ನಡಿಗ, ಯುವ ಆಟಗಾರ ದೇವದತ್ ಪಡಿಕ್ಕಲ್ ಎಲ್ಲರ ಗಮನ ಸೆಳೆದಿದ್ದು, ಡೆಬ್ಯು ಪಂದ್ಯದಲ್ಲೇ ಅರ್ಧ ಶತಕ ಸಿಡಿಸಿದ್ದರು. ಸದ್ಯ ಪಂಜಾಬ್ ವಿರುದ್ಧ ದೇವದತ್ ಪಡಿಕ್ಕಲ್ ಯಾವ ರೀತಿ ಬ್ಯಾಟ್ ಬೀಸಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

  • ಲಿಂಗನಮಕ್ಕಿಯಿಂದ ನೀರು ತರೋ ಬದಲು ಬೆಂಗಳೂರಿಗೆ ಪರ್ಯಾಯ ವ್ಯವಸ್ಥೆ ಮಾಡಿ: ಬಿಎಸ್‍ವೈ

    ಲಿಂಗನಮಕ್ಕಿಯಿಂದ ನೀರು ತರೋ ಬದಲು ಬೆಂಗಳೂರಿಗೆ ಪರ್ಯಾಯ ವ್ಯವಸ್ಥೆ ಮಾಡಿ: ಬಿಎಸ್‍ವೈ

    ಬೆಂಗಳೂರು: ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ತರುವ ಯೋಜನೆ ಕುರಿತು ವಿಸ್ತೃತ ಯೋಜನಾ ವರದಿ(ಡಿಪಿಆರ್) ತಯಾರಿಸುವುದನ್ನು ರಾಜ್ಯ ಸರ್ಕಾರ ಕೈಬಿಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ.

    ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಡಾ.ಶ್ಯಾಮಪ್ರಸಾದ್ ಮುಖರ್ಜಿ ಬಲಿದಾನ ಸಂಸ್ಮರಣಾ ದಿನಾಚರಣೆ ವೇಳೆ ಮಾತನಾಡಿದ ಅವರು, ಲಿಂಗನಮಕ್ಕಿಯಿಂದ ನೀರು ಹರಿಸುವ ಯೋಜನೆ ಅಸಮಂಜಸವಾಗಿದ್ದು, ಬೆಂಗಳೂರಿಗೆ ನೀರು ತರಲು ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಬೇಕು. ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸರ್ಕಾರ ವಿಶೇಷ ಗಮನ ಕೊಡಬೇಕು. ವಾಸ್ತವ ಸಮಸ್ಯೆ ಬಗೆಹರಿಸದೇ ಹಳ್ಳಿ ವಾಸ್ತವ್ಯ ಮಾಡುತ್ತೇನೆ. ಶಾಲೆಯಲ್ಲಿ ಮಲಗುತ್ತೇನೆ ಎಂಬುದು ಮೂರ್ಖತನ. ಇದು ಮುಖ್ಯಮಂತ್ರಿಗಳಿಗೆ ಶೋಭೆ ತರುವಂಥದ್ದಲ್ಲ ಎಂದು ಕಿಡಿಕಾರಿದರು.

    ಈ ಹಿಂದೆ ಮುಖ್ಯಮಂತ್ರಿಗಳು ವಾಸ್ತವ್ಯ ಮಾಡಿದ ಗ್ರಾಮಗಳ ಸ್ಥಿತಿ ಹೇಗಿದೆ ಎಂದು ತಿಳಿದಿದೆ. ನಾನು ಪ್ರವಾಸ ಕೈಗೊಂಡ ಸಂದರ್ಭದಲ್ಲಿ ವಿಪಕ್ಷ ನಾಯಕನಾಗಿಯೂ ಒಳ್ಳೆಯ ಕೆಲಸ ಮಾಡಿದ ಅಧಿಕಾರಿಗಳನ್ನು ಶ್ಲಾಘಿಸಿದ್ದೇನೆ. ಕೆಲಸ ಮಾಡದ ಕಡೆಗಳಲ್ಲಿ ಛೀಮಾರಿ ಹಾಕಿದ್ದೇನೆ. ವಿಪಕ್ಷ ನಾಯಕನಾಗಿ ನಾನು ಹೇಗೆ ಇರಬೇಕು ಎಂದು ಮುಖ್ಯಮಂತ್ರಿಗಳಿಂದ ಕಲಿಯಬೇಕಿಲ್ಲ. ಟೀಕೆ ಮಾಡುವ ಬದಲು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಭಿವೃದ್ಧಿ ಕೆಲಸದ ಕಡೆ ಗಮನಹರಿಸಲಿ. ಕಬ್ಬು ಬೆಲೆ ಬಾಕಿಗೆ ರೈತರು ಹೋರಾಟ ಮಾಡುತ್ತಿದ್ದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದ್ದು, ಇನ್ನಾದರೂ ರೈತರ ಬಾಕಿ ಕೊಟ್ಟು ರೈತರ ನೆರವಿಗೆ ಬರಲಿ ಎಂದು ಟೀಕಿಸಿದ್ದಾರೆ.

    ಖುದ್ದಾಗಿ ಮಾತನಾಡುತ್ತೇನೆ: ಜನೌಷಧಿ ಅಂಗಡಿ ಮುಂದಿದ್ದ ಬಿಜೆಪಿ ಬಾವುಟ ತೆರವುಗೊಳಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪರಮೇಶ್ವರ್ ಹಿರಿಯರು, ಅನುಭವಿಗಳು ಈ ರೀತಿ ಮಾಡಿರಲು ಸಾಧ್ಯವಿಲ್ಲ. ಒಂದು ವೇಳೆ ಮಾಡಿದ್ದರೆ ಅದು ಅಸಮಂಜಸ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು.

    ಬಿಜೆಪಿ ರಾಷ್ಟ್ರೀಯ ಪಕ್ಷ, ಪರಮೇಶ್ವರ್ ಅವರು ಆ ರೀತಿ ಹೇಳಲು ಸಾಧ್ಯವಿಲ್ಲ. ಅವರು ಹಿರಿಯ ಮತ್ತು ಅನುಭವಿ ರಾಜಕಾರಣಿ. ಒಂದು ವೇಳೆ ಈ ರೀತಿ ಮಾಡಿದ್ದರೆ ಅದು ಸಮಂಜಸವಲ್ಲ. ಈ ಕುರಿತು ನಾನೇ ಖುದ್ದಾಗಿ ಅವರೊಂದಿಗೆ ಮಾತನಾಡುತ್ತೇನೆ ಎಂದು ಯಡಿಯೂರಪ್ಪ ಪ್ರತಿಕ್ರಿಯಿಸಿದರು.

    ಕಾಂಗ್ರೆಸ್ಸಿನಿಂದ ಅವಮಾನ: ಡಾ.ಶ್ಯಾಮಪ್ರಸಾದ್ ಮುಖರ್ಜಿಯವರಿಗೆ ಕಾಂಗ್ರೆಸ್ ಎಲ್ಲ ಸಂದರ್ಭದಲ್ಲೂ ಅವಮಾನಿಸಿದೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್, ಸರ್ದಾರ್ ವಲ್ಲಭಬಾಯ್ ಪಟೇಲ್ ರೀತಿಯಲ್ಲೇ ಕಾಂಗ್ರೆಸ್‍ನಿಂದ ಶ್ಯಾಮಪ್ರಸಾದ್ ಮುಖರ್ಜಿಯವರಿಗೆ ಅನ್ಯಾಯ ಮಾಡಲಾಲಾಗಿದೆ ಎಂದರು.

    ಮುಖರ್ಜಿಯವರ ಅನುಮಾನಾಸ್ಪದ ಸಾವಿನ ಕುರಿತು ಅಂದಿನ ಕಾಂಗ್ರೆಸ್ ಸರ್ಕಾರ ತನಿಖೆಯನ್ನು ನಡೆಸಲಿಲ್ಲ. ನೆಹರು ಅವರಿಗೆ ಪರ್ಯಾಯ ನಾಯಕರಾಗಿ ಹೊರಹೊಮ್ಮುತ್ತಿದ್ದ ಕಾರಣ ಮುಖರ್ಜಿಯವರನ್ನು ತುಳಿಯುವ ಪ್ರಯತ್ನ ಮಾಡಲಾಯಿತು. ಜೂನ್ 23 ರಂದು ಶಾಮಪ್ರಸಾದ್ ಮುಖರ್ಜಿಯವರ ಪುಣ್ಯತಿಥಿ. ಅವರ ಜೀವನ, ಸಾಧನೆ ಹಾಗೂ ಬಲಿದಾನ ನಮ್ಮೆಲ್ಲ ಕಾರ್ಯಕರ್ತರಿಗೆ ಪ್ರೇರಣೆ. ಕಾಂಗ್ರೆಸ್‍ಗೆ ಪರ್ಯಾಯ ರಾಜಕೀಯ ಪಕ್ಷ ಕಟ್ಟಿದವರು ಶ್ಯಾಮಪ್ರಸಾದ್. ಭಾರತದ ಏಕತೆಗೆ ಪೂರಕವಲ್ಲದ 370 ವಿಧಿ ರದ್ದಾಗಬೇಕು ಎಂದು ಹೋರಾಟ ಮಾಡಿದ್ದರು. ಈಗ ಜಮ್ಮು ಕಾಶ್ಮೀರದ ಪರಿಸ್ಥಿತಿ ನೋಡಿದರೆ, ಅವರ ಹೋರಾಟದ ಮಹತ್ವ ತಿಳಿಯುತ್ತದೆ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು.

    ಜಮ್ಮು ಕಾಶ್ಮೀರಕ್ಕೆ ಆರ್ಟಿಕಲ್ 370 ಅಡಿ ನೀಡಿರುವ ವಿಶೇಷ ಸ್ಥಾನಮಾನ ರದ್ದು ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ, ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಕಾರ್ಯತತ್ಪರರಾಗಿದ್ದಾರೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮಾಡಿ, ಬದಲಾವಣೆಯ ಗಾಳಿ ಬೀಸುವಂತೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಬಿಜೆಪಿ ಉಪಾಧ್ಯಕ್ಷ ಗೋವಿಂದ ಕಾರಜೋಳ ಮಾತನಾಡಿ, ಕಾಂಗ್ರೆಸ್‍ನವರು ಅಸ್ಪೃಶ್ಯತೆಯನ್ನು ಜೀವಂತವಾಗಿಟ್ಟು ದಲಿತರನ್ನು ಮತ ಬ್ಯಾಂಕ್ ಮಾಡಿಕೊಂಡರು. ಅದರೆ ಆರ್‍ಎಸ್‍ಎಸ್ ಮತ್ತು ಬಿಜೆಪಿ ದೀನದಲಿತರ ಏಳಿಗೆಗೆ ಶ್ರಮಿಸುತ್ತಿದೆ. ಸಮಾನ ಭಾವನೆಯಿಂದ ನೋಡುತ್ತಿದೆ ಎಂದು ತಿಳಿಸಿದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಶೌಚಾಲಯದಲ್ಲಿ ಕಾಳಿಂಗ ಸರ್ಪ: ಕಕ್ಕಾಬಿಕ್ಕಿಯಾದ ಮನೆ ಮಾಲೀಕ

    ಶೌಚಾಲಯದಲ್ಲಿ ಕಾಳಿಂಗ ಸರ್ಪ: ಕಕ್ಕಾಬಿಕ್ಕಿಯಾದ ಮನೆ ಮಾಲೀಕ

    ಬೆಂಗಳೂರು: ಶೌಚಾಲಯದ ಸೀಟ್ ಒಳಗಡೆ ಕಾಳಿಂಗ ಸರ್ಪ ಕಂಡು ಮನೆ ಮಾಲೀಕ ಕಕ್ಕಾಬಿಕ್ಕಿಯಾಗಿದ್ದು, ತಕ್ಷಣ ಬಿಬಿಎಂಪಿಯ ಉರಗ ತಜ್ಞರಿಗೆ ಕರೆ ಮಾಡಿ ವಿಷಯ ತಿಳಿಸಿ, ಹಾವನ್ನು ರಕ್ಷಿಸಲಾಗಿದೆ.

    ಜೂನ್ 9ರಂದು ಬೆಳಗ್ಗೆ ಶೌಚಾಲಯಕ್ಕೆ ತೆರಳಿದಾಗ ಸುಮಾರು 5 ಅಡಿ ಉದ್ದದ ಕಾಳಿಂಗ ಸರ್ಪ ಶೌಚಾಲಯದ ಶೀಟ್‍ನ ಬೌಲ್ ಒಳಗಡೆ ಸುತ್ತಿಕೊಂಡಿರುವುದು ಕಂಡಿದೆ. ಹಾವು ಕಂಡ ಜೆಪಿ ನಗರ 7ನೇ ಹಂತದ ನಿವಾಸಿ ಪ್ರಮೋದ್ ಕುಮಾರ್ ಗಾಬರಿಯಾಗಿದ್ದು, ತಕ್ಷಣವೇ ಬಿಬಿಎಂಪಿಯ ಉರಗ ತಜ್ಞರ ಸ್ವಯಂ ಸೇವಕ ತಂಡಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಉರಗ ತಜ್ಞ ರಾಜೇಶ್ ಕುಮಾರ್ ಕಾಳಿಂಗವನ್ನು ರಕ್ಷಿಸಿದ್ದಾರೆ.

    ಬಿಬಿಎಂಪಿ ಉರಗ ತಜ್ಞರಿಗೆ ಕರೆ ಮಾಡುವುದಕ್ಕೂ ಮೊದಲು ಪ್ರಮೋದ್ ಕುಮಾರ್ ಅವರು ವಿವಿಧ ಸಲಕರಣೆಗಳ ಮೂಲಕ ಕಾಳಿಂಗ ಸರ್ಪವನ್ನು ಹೊರತೆಗೆಯಲು ಯತ್ನಿಸಿದ್ದಾರೆ. ಆದರೆ, ಹೊರತೆಗೆಯಲು ಸಾಧ್ಯವಾಗದ್ದರಿಂದ ಬಿಬಿಎಂಪಿಯ ಉರಗ ತಜ್ಞರಿಗೆ ಕರೆ ಮಾಡಿ ತಿಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    https://www.facebook.com/InTheKnowPresentsAOL/videos/2369515699989782/?v=2369515699989782

    ರಕ್ಷಿಸಲಾದ ಕಾಳಿಂಗವನ್ನು ಉರಗ ತಜ್ಞರು ವನ್ಯ ಜೀವಿಗಳ ತಾಣಕ್ಕೆ ಬಿಟ್ಟಿದ್ದಾರೆ. ಅತ್ಯಂತ ವಿಷಕಾರಿಯಾದ ಕಾಳಿಂಗ ಸರ್ಪಗಳು ಭೇಟೆ ಸಿಗದ ಕಾರಣ ಕಚ್ಚಿ ವಿಷವನ್ನು ಹೊರಸೂಸುವ ಮೂಲಕ ತಮ್ಮ ಆಕ್ರೋಶವನ್ನು ತೀರಿಸಿಕೊಳ್ಳುತ್ತವೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಬಿಎಸ್‍ವೈ ಡೈರಿ ಡಿಕೆಶಿ ಮನೆ ಸೇರಿದ್ದು ಹೇಗೆ?

    ಬಿಎಸ್‍ವೈ ಡೈರಿ ಡಿಕೆಶಿ ಮನೆ ಸೇರಿದ್ದು ಹೇಗೆ?

    ಬೆಂಗಳೂರು: ಬಿಜೆಪಿಯ ನಾಯಕರ ಒಳ ಜಗಳದಿಂದಾಗಿ ಯಡಿಯೂರಪ್ಪ ಬರೆದಿದ್ದ ಡೈರಿ ಡಿಕೆ ಶಿವಕುಮಾರ್ ಕೈ ಸೇರಿತ್ತು ಎಂದು ಕಾಂಗ್ರೆಸ್ ಹೇಳಿದೆ.

    ಬಿಜೆಪಿಯ ಮೂವರು ನಾಯಕರ ಒಳ ಜಗಳದಿಂದಾಗಿ ಡೈರಿ ಡಿಕೆ ಶಿವಕುಮಾರ್ ಕೈ ಸೇರಿತ್ತು. ಆದಾಯ ತೆರಿಗೆ ಇಲಾಖೆಯವರು ದಾಳಿ ನಡೆಸಿ ಈ ಡೈರಿ ವಶಪಡಿಸಿಕೊಂಡಿತ್ತು. 2017 ರಿಂದ ಈ ಡೈರಿ ಆದಾಯ ತೆರಿಗೆ ಇಲಾಖೆಯಲ್ಲೇ ಇದ್ದು, ನಂತರ ಈ ಡೈರಿಯ ಬಗ್ಗೆ ಯಾವುದೇ ತನಿಖೆ ನಡೆಸಿಲ್ಲ ಎಂದು ಕಾಂಗ್ರೆಸ್ ‘ಕ್ಯಾರವಾನ್’ ವರದಿಯನ್ನು ಉಲ್ಲೇಖಿಸಿ ಆರೋಪಿಸಿದೆ.

    ಕಾಂಗ್ರೆಸ್ ಆರೋಪ ಏನು?
    2017 ರಿಂದ ಡೈರಿ ಐಟಿ ಇಲಾಖೆಯ ಬಳಿ ಈ ಡೈರಿಯಲ್ಲಿ ನೀಡಿರುವ ಮಾಹಿತಿಯಂತೆ ಬಿಜೆಪಿ ರಾಜ್ಯದಲ್ಲಿ ಆಡಳಿತದಲ್ಲಿ ಇದ್ದ ವೇಳೆ ಸಿಎಂ ಆಗಿದ್ದ ಬಿಎಸ್ ಯಡಿಯೂರಪ್ಪ ಭಾರೀ ಮೊತ್ತದ ಹಣವನ್ನು ಹೈಕಮಾಂಡ್‍ಗೆ ರವಾನೆ ಮಾಡಿದ್ದರು ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

    ಸೂಕ್ತ ಸಮಯದಲ್ಲಿ ಡೈರಿಯ ವಿಚಾರವನ್ನು ಬಹಿರಂಗ ಪಡಿಸುವಂತೆ ಕಾಂಗ್ರೆಸ್ ನಾಯಕರಿಗೆ ಸೂಚಿಸಲಾಗಿತ್ತು. ಇದರಂತೆ ಈಗ ಬಹಿರಂಗ ಪಡಿಸಲಾಗಿದೆ. ಆದರೆ ಐಟಿ ಅಧಿಕಾರಿಗಳ ಬಳಿ ಡೈರಿ ಇದ್ದರೂ ಕೂಡ ಏಕೆ ಕ್ರಮಕೈಗೊಳ್ಳಲಿಲ್ಲ ಎಂಬುದು ಕಾಂಗ್ರೆಸ್ ನಾಯಕರು ಪ್ರಶ್ನಿಸಿದ್ದಾರೆ.

    ಡಿಕೆಶಿಗೆ ಸಿಕ್ಕಿದ್ದು ಹೇಗೆ?
    ಬಿಎಸ್‍ವೈ ನಿವಾಸದಲ್ಲಿ ಇದ್ದ ಡೈರಿಯನ್ನು ಕಳವು ಮಾಡಿ ಅದರ ಜೆರಾಕ್ಸ್ ಪ್ರತಿಯನ್ನು ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರಿಗೆ ನೀಡಲಾಗಿತ್ತು. ಬಿಎಸ್ ಯಡಿಯೂರಪ್ಪ ಅವರ ಆಪ್ತ ಸಿಬ್ಬಂದಿಯೇ ಈ ಡೈರಿಯನ್ನು ಕಳ್ಳತನ ಮಾಡಿದ್ದರು. ಬಿಜೆಪಿಯಿಂದ ಹೊರಬಂದ ಬಿಎಸ್‍ವೈ ಅವರು ಕೆಜೆಪಿ ಪಕ್ಷ ಬಲ ಪಡಿಸುವ ನಿಟ್ಟಿನಲ್ಲಿ ಇದ್ದರು. ಈ ವೇಳೆ ಅನಂತಕುಮಾರ್, ಈಶ್ವರಪ್ಪ, ಆರ್. ಅಶೋಕ್ ಅವರೊಂದಿಗಿನ ಸಂಬಂಧಗಳು ಹದೆಗೆಟ್ಟಿದ್ದ ಕಾರಣ ಅವರೇ ಡೈರಿ ಕಳ್ಳತನದ ಹಿಂದೆ ಶಾಮೀಲಾಗಿದ್ದರು.

    ರಾಜಕೀಯವಾಗಿ ಬಿಎಸ್‍ವೈ ಅವರಿಗೆ ಹಿನ್ನಡೆ ಉಂಟು ಮಾಡಲು ಬಿಜೆಪಿ ನಾಯಕರೇ ಈ ಡೈರಿಯನ್ನು ತೆಗೆದಿದ್ದಾರೆ. ಕಾಂಗ್ರೆಸ್ಸಿನ ಪ್ರಭಾವಿ ರಾಜಕಾರಣಿಗೆ ಡೈರಿಯ ಜೆರಾಕ್ಸ್ ಪ್ರತಿ ರವಾನೆ ಮಾಡಿ ಆ ಮೂಲಕ ಬಿಎಸ್‍ವೈರನ್ನು ಸಕ್ರೀಯ ರಾಜಕಾರಣವನ್ನು ಅಂತ್ಯ ಮಾಡುವುದು ಇದರ ಉದ್ದೇಶವಾಗಿತ್ತು. ಹೀಗಾಗಿ ಡೈರಿಯ ಜೆರಾಕ್ಸ್ ಪ್ರತಿಯನ್ನು ಡಿಕೆ ಶಿವಕುಮಾರ್ ಮಾತ್ರವಲ್ಲದೇ ಇತರೇ ನಾಯಕರಿಗೂ ತಲುಪಿಸಿದ್ದರು ಎಂದು ಕಾಂಗ್ರೆಸ್ ಹೇಳಿದೆ.

    ಕಾಂಗ್ರೆಸ್ ಪ್ರಶ್ನೆ:
    ಐಟಿ ಅಧಿಕಾರಿಗಳಿಗೆ ಸಿಕ್ಕ ಡೈರಿಯಲ್ಲಿ ಇಷ್ಟೆಲ್ಲಾ ಮಾಹಿತಿ ಇದ್ದರು ಕೂಡ ಡೈರಿ ಸತ್ಯಾಂಶ ಏಕೆ ಹೊರಬೀಳಲಿಲ್ಲ? ಐಟಿ ಏಕೆ ಯಾವುದೇ ಸ್ಪಷ್ಟ ತನಿಖೆ ನಡೆಸಿಲ್ಲ? ಇದು ಅಸಲಿಯೋ? ನಕಲಿಯೋ? ಎಂದು ಐಟಿ ಏಕೆ ಕ್ರಮಕ್ಕೆ ಮುಂದಾಗಿಲ್ಲ ಎಂದು ಕಾಂಗ್ರೆಸ್ ವಕ್ತಾರ ಸುರ್ಜೆವಾಲಾ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.

    ಬಿಎಸ್‍ವೈ ಸ್ಪಷ್ಟನೆ:
    ಕಾಂಗ್ರೆಸ್ ಪಕ್ಷದ ಆರೋಪವನ್ನು ಅಲ್ಲಗೆಳೆದಿರುವ ಬಿಎಸ್‍ವೈ ರಾಜಕೀಯ ಲಾಭಕ್ಕಾಗಿ ಮಾತ್ರ ಈ ಆರೋಪ ಮಾಡಲಾಗಿದೆ. ಡೈರಿ ಬಗ್ಗೆ ಈ ಹಿಂದೆಯೇ ತನಿಖೆ ನಡೆಸಲಾಗಿದ್ದು, ನನ್ನ ಕೈ ಬರಹ ಕೂಡ ಪಡೆದು ಪರೀಕ್ಷೆ ನಡೆಸಲಾಗಿದೆ. ಬಳಿಕವೇ ಇದು ನಕಲಿ ಡೈರಿ ಎಂದು ದೃಢವಾಗಿದೆ ಎಂದು ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದಾರೆ. ಅಲ್ಲದೇ ಕಾಂಗ್ರೆಸ್ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.