Tag: Bengali fish Curry

  • ಕ್ಲಾಸಿಕ್ ಬೆಂಗಾಲಿ ಮೀನು ಸಾರು – ಹೆಚ್ಚು ಮಸಾಲೆ ಇಲ್ಲದಿದ್ರೂ ಸೂಪರ್ ಸ್ವಾದ

    ಕ್ಲಾಸಿಕ್ ಬೆಂಗಾಲಿ ಮೀನು ಸಾರು – ಹೆಚ್ಚು ಮಸಾಲೆ ಇಲ್ಲದಿದ್ರೂ ಸೂಪರ್ ಸ್ವಾದ

    ಹೆಚ್ಚು ಖಾರ ಹಾಗೂ ಮಸಾಲೆ ಪದಾರ್ಥಗಳನ್ನು ಇಷ್ಟಪಡದವರು ಹೆಚ್ಚಾಗಿ ನಾನ್‌ವೆಜ್ ಖಾದ್ಯವನ್ನು ದೂರವಿಡುತ್ತಾರೆ. ಏಕೆಂದರೆ ನಾನ್‌ವೆಜ್ ಖಾದ್ಯವನ್ನು ಹೆಚ್ಚು ಮಸಾಲೆಯುಕ್ತವಾಗಿಯೇ ಮಾಡಲಾಗುತ್ತದೆ. ಆದರೆ ಬಂಗಾಳದ ಫೇಮಸ್ ಡೋಯಿ ಮಾಚ್ (Doi Maach) ಹಾಗಲ್ಲ. ಕನಿಷ್ಠ ಮಸಾಲೆ ಪದಾರ್ಥಗಳನ್ನು ಬಳಸಿ ಈ ಮೀನು ಸಾರನ್ನು ಮಾಡಲಾಗುತ್ತದೆ. ಡೋಯಿ ಎಂದರೆ ಮೊಸರು ಹಾಗೂ ಮಾಚ್ ಎಂದರೆ ಮೀನು. ಹೆಸರೇ ಹೇಳಿದಂತೆ ಈ ಮೀನು ಸಾರಿಗೆ ಬೇಕಾದ ಮುಖ್ಯ ಪದಾರ್ಥವೇ ಮೊಸರು. ಹಾಗಿದ್ದರೆ ಬೆಂಗಾಲಿ ಸ್ಟೈಲ್‌ನ ಮೀನು ಸಾರು ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಮ್ಯಾರಿನೇಷನ್‌ಗೆ:
    ಉಪ್ಪು – ಕಾಲು ಟೀಸ್ಪೂನ್
    ಅರಿಶಿನ – ಕಾಲು ಟೀಸ್ಪೂನ್
    ಮೀನು – 4-5 ತುಂಡುಗಳು
    ಮೊಸರು ಮಿಶ್ರಣಕ್ಕೆ:
    ಮೊಸರು – 2 ಕಪ್
    ಕಡಲೆ ಹಿಟ್ಟು – ಅರ್ಧ ಟೀಸ್ಪೂನ್
    ಈರುಳ್ಳಿ ರಸ – ಅರ್ಧ
    ಕರಿ ತಯಾರಿಸಲು:
    ಸಾಸಿವೆ ಎಣ್ಣೆ – 2 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಗರಂ ಮಸಾಲೆ ಪುಡಿ – ಕಾಲು ಟೀಸ್ಪೂನ್
    ತುಪ್ಪ – 1 ಟೀಸ್ಪೂನ್
    ಕರಿಬೇವಿನ ಎಲೆ – ಕೆಲವು
    ಲವಂಗ -2
    ಏಲಕ್ಕಿ – 2
    ಹಸಿರು ಮೆಣಸಿನಕಾಯಿ – 3
    ದಾಲ್ಚಿನಿ – 1 ಇಂಚು ಇದನ್ನೂ ಓದಿ: ಬರೀ 15 ನಿಮಿಷ – ಎಗ್ ಡ್ರಾಪ್ ಸೂಪ್ ಮನೆಯಲ್ಲೇ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಮೀನಿನ ತುಂಡುಗಳಿಗೆ ಅರಿಶಿನ ಹಾಗೂ ಉಪ್ಪು ಹಚ್ಚಿ ಮ್ಯಾರಿನೇಟ್ ಮಾಡಿ.
    * ಬಾಣಲೆ ಬಿಸಿ ಮಾಡಿ ಸಾಸಿವೆ ಎಣ್ಣೆ ಸೇರಿಸಿ ಅದರಲ್ಲಿ ಮೀನಿನ ತುಂಡುಗಳನ್ನು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಎರಡೂ ಬದಿ ಫ್ರೈ ಮಾಡಿಕೊಳ್ಳಿ.
    * ಈಗ ಬಾಣಲೆಯನ್ನು ತೆಗೆದು ಹೆಚ್ಚುವರಿ ಎಣ್ಣೆಯನ್ನು ಪೇಪರ್ ಟವಲ್‌ಗೆ ಹರಿಸಿ, ಪಕ್ಕಕ್ಕಿಡಿ.
    * ಒಂದು ಬಟ್ಟಲು ತೆಗೆದುಕೊಂಡು, ಅದಕ್ಕೆ ಮೊಸರು ಹಾಕಿ ಕಡಲೆ ಹಿಟ್ಟು ಹಾಗೂ ಈರುಳ್ಳಿ ರಸ ಸೇರಿಸಿ ಉಂಡೆಗಳಿಲ್ಲದಂತೆ ಚೆನ್ನಾಗಿ ಮಿಶ್ರಣ ಮಾಡಿ ಪಕ್ಕಕ್ಕಿಡಿ.
    * ಈಗ ಮೀನು ಹುರಿದಿಟ್ಟಿದ್ದ ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಏಲಕ್ಕಿ, ಕರಿಬೇವಿನ ಎಲೆ, ಲವಂಗ ಹಾಗೂ ದಾಲ್ಚಿನಿ ಸೇರಿಸಿ.
    * ಬಳಿಕ ಮೊಸರನ್ನು ಸೇರಿಸಿ, ಮಿಶ್ರಣ ಮಾಡಿ, 1 ನಿಮಿಷ ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಿ.
    * ರುಚಿಗೆ ತಕ್ಕಷ್ಟು ಉಪ್ಪು ಹಸಿರು ಮೆಣಸಿನಕಾಯಿ ಹಾಗೂ ಗರಂ ಮಸಾಲೆ ಸೇರಿಸಿ ನಿಧಾನವಾಗಿ ಮಿಶ್ರಣ ಮಾಡಿ.
    * ಮೀನನ್ನು ಹೆಚ್ಚು ಬೆರೆಸಬೇಡಿ, ಇದರಿಂದ ಮೀನಿನ ತುಂಡು ಮುರಿಯುವ ಸಾಧ್ಯತೆಯಿರುತ್ತದೆ. ಉರಿಯನ್ನು ಹೆಚ್ಚು ಮಾಡಿ ಮತ್ತೆ 1 ನಿಮಿಷ ಬೇಯಿಸಿಕೊಳ್ಳಿ.
    * ಇದೀಗ ಬೆಂಗಾಲಿ ಸ್ಟೈಲ್ ಮೊಸರಿನ ಮೀನು ಸಾರು ತಯಾರಾಗಿದ್ದು, ಬಿಸಿಬಿಸಿ ಅನ್ನದೊಂದಿಗೆ ಸವಿಯಿರಿ. ಇದನ್ನೂ ಓದಿ: ದಕ್ಷಿಣ ಭಾರತದ ರುಚಿಕರ ಏಡಿ ಕರಿ ರೆಸಿಪಿ