Tag: Bengalauru

  • ಅಭಿಷೇಕ್ ಶೆಟ್ಟಿ ಸಹೋದರಿಯ ಕೈ ಹಿಡಿದ ತೆಲುಗಿನ ನಟ ನಾಗ ಶೌರ್ಯ

    ಅಭಿಷೇಕ್ ಶೆಟ್ಟಿ ಸಹೋದರಿಯ ಕೈ ಹಿಡಿದ ತೆಲುಗಿನ ನಟ ನಾಗ ಶೌರ್ಯ

    ಟಾಲಿವುಡ್‌ನಲ್ಲಿ ಸದ್ಯ ತೆಲುಗಿನ ನಟ ನಾಗ ಶೌರ್ಯ ಮತ್ತು ಕನ್ನಡತಿ ಅನುಷಾ ಶೆಟ್ಟಿ ಅವರದ್ದೇ ಸುದ್ದಿ. ಸೌತ್ ನಟ ನಾಗ್ ಕನ್ನಡದ ಹುಡುಗಿಯನ್ನ ಮದುವೆಯಾಗಿರುವ ಬೆನ್ನಲ್ಲೇ ಮತ್ತೊಂದು ಇಂಟರೆಸ್ಟಿಂಗ್ ಸುದ್ದಿಯೊಂದು ಹೊರಬಿದ್ದಿದೆ. ನಾಗ್ ಪತ್ನಿ ಅನುಷಾ ಕನ್ನಡದ ಹುಡುಗಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಷ್ಯ. ಆದರೆ ಅನುಷಾ ಯಾರ ಸಹೋದರಿ ಎಂಬುದು ಹಲವರಿಗೆ ತಿಳಿದಿಲ್ಲ.

    ಕನ್ನಡದ ಪ್ರತಿಭಾನ್ವಿತ ನಟ ಕಮ್ ನಿರ್ದೇಶಕ ಅಭಿಷೇಕ್ ಶೆಟ್ಟಿ `ನಮ್ ಗಣಿ ಬಿಕಾಂ ಪಾಸ್’ ಚಿತ್ರದ ಮೂಲಕ ನಟ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದರು. ಇತ್ತೀಚೆಗಷ್ಟೇ `ಗಜಾನನ ಗ್ಯಾಂಗ್’ ಸಿನಿಮಾಗೆ ನಿರ್ದೇಶನ ಕೂಡ ಮಾಡಿದ್ದರು. ಸದ್ಯದ ವಿಷ್ಯ, ಅಭಿಷೇಕ್‌ ಅವರ ಅಕ್ಕ ಅನುಷಾ ಶೆಟ್ಟಿ ಜೊತೆ ತೆಲುಗಿನ ನಟ ನಾಗ ಶೌರ್ಯ ಮದುವೆ ನಡೆದಿದೆ.

    ಅಭಿಷೇಕ್ ಶೆಟ್ಟಿ ಮತ್ತು ಅನುಷಾ ಮೂಲತಃ ಕುಂದಾಪುರದವರು. ಇಬ್ಬರು ಒಂದೇ ಕುಟುಂಬದವರು. ಅಭಿಷೇಕ್ ಸಿನಿರಂಗದಲ್ಲಿ ಸುದ್ದಿ ಮಾಡಿದ್ರೆ, ಅನುಷಾ ಶೆಟ್ಟಿ ಇಂಟೀರಿಯರ್ ಡಿಸೈನರ್ ಆಗಿ ಗುರುತಿಸಿಕೊಂಡಿದ್ದಾರೆ. ಅನುಷಾ ಮತ್ತು ನಾಗ್ ಒಬ್ಬರನ್ನೊಬ್ಬರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಕುಟುಂಬಸ್ಥರನ್ನ ಒಪ್ಪಿಸಿ, ಇಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ದಕ್ಷಿಣ ಭಾರತದ ಶೈಲಿಯಲ್ಲಿ ನಾಗ್‌, ಅನುಷಾ ವಿವಾಹ ನಡೆದಿದೆ. ಈ ಮೂಲಕ ನಾಗ ಶೌರ್ಯ ಕರ್ನಾಟಕದ ಅಳಿಯ ಆಗಿದ್ದಾರೆ.

    ಸಹೋದರಿ ಅನುಷಾ ಶೆಟ್ಟಿ ಮದುವೆಯಲ್ಲಿ ನಿರ್ದೇಶಕ ಅಭಿಷೇಕ್ ಶೆಟ್ಟಿ ಮಿಂಚಿದ್ದಾರೆ. ನವಜೋಡಿಗೆ ಶುಭಹಾರೈಸಿ, ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಸದ್ಯ ವೀಡಿಯೋ ಸಖತ್ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಕನ್ನಡತಿ ಅನುಷಾ ಶೆಟ್ಟಿ ಜೊತೆ ಹಸೆಮಣೆ ಏರಿದ ತೆಲುಗು ನಟ ನಾಗಶೌರ್ಯ

    ಇನ್ನೂ ಅಭಿಷೇಕ್ ಶೆಟ್ಟಿ ನಿರ್ದೇಶನದ `ಆರಾಮ್ ಅರವಿಂದ್ ಸ್ವಾಮಿ’ ಚಿತ್ರದಲ್ಲಿ ಅನೀಶ್ ತೇಜೇಶ್ವರ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಪ್ರಮುಖ ಅಪ್‌ಡೇಟ್ ಅನ್ನು ಮುಂದಿನ ಡಿಸೆಂಬರ್‌ನಲ್ಲಿ ಚಿತ್ರತಂಡ ಅನೌನ್ಸ್ ಮಾಡಲಿದೆ.

    Live Tv
    [brid partner=56869869 player=32851 video=960834 autoplay=true]

  • ವರ್ಷ ಭವಿಷ್ಯ : 01-01-2022

    ವರ್ಷ ಭವಿಷ್ಯ : 01-01-2022

    ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯಣ,
    ಹಿಮಂತ ಋತು, ಮಾರ್ಗಶಿರ ಮಾಸ,
    ಕೃಷ್ಣಪಕ್ಷ,ತ್ರಯೋದಶಿ/ಉಪರಿ ಚತುರ್ದಶಿ,
    ಜೇಷ್ಠ ನಕ್ಷತ್ರ
    ರಾಹುಕಾಲ : 9.30 ರಿಂದ 11:01
    ಗುಳಿಕಕಾಲ : 6.44 ರಿಂದ 08:09
    ಯಮಗಂಡಕಾಲ : 01:52 ರಿಂದ 03:18

    ಮೇಷ : ಅಧಿಕ ಲಾಭ, ಆರ್ಥಿಕ ಸಮಸ್ಯೆಗೆ ಮುಕ್ತಿ, ಮಿತ್ರರಿಂದ ಸಹಕಾರ, ಆಸ್ತಿ ಸಮಸ್ಯೆಗೆ ಮುಕ್ತಿ, ಪ್ರಯಾಣದಲ್ಲಿ ಯಶಸ್ಸು, ಶುಭ ಕಾರ್ಯದಲ್ಲಿ ಯಶಸ್ಸು, ಉದ್ಯೋಗದಲ್ಲಿ ಆಲಸ್ಯ ಮಂದತ್ವಆರೋಗ್ಯ ಸುಧಾರಣೆ, ತಂದೆಯಿಂದ ಸಹಾಯ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಪಾಲುದಾರಿಕೆಯಲ್ಲಿ ಲಾಭ,ಸಂಗಾತಿಯಿಂದ ಅನುಕೂಲ, ಅತಿ ಬುದ್ಧಿವಂತಿಕೆಯಿಂದ ಸೋಲು, ನಷ್ಟದ ಸಾಧ್ಯತೆ.

    ವೃಷಭ : ಆರ್ಥಿಕ ಚೇತರಿಕೆ, ಆರೋಗ್ಯ ಸುಧಾರಣೆ, ಉದ್ಯೋಗ ಬದಲಾವಣೆಯಿಂದ ತೊಂದರೆ, ಒತ್ತಡ, ಅನಗತ್ಯ ತಿರುಗಾಟ, ಸ್ವಂತ ಉದ್ಯಮ ವ್ಯಾಪಾರದ ನಿರೀಕ್ಷೆ, ದುಃಸ್ವಪ್ನಗಳು, ಗುಪ್ತ ಶತ್ರುಕಾಟ, ಅನಾರೋಗ್ಯ, ಪಿತ್ರಾರ್ಜಿತ ಆಸ್ತಿಯಿಂದ ನಷ್ಟ, ತಂದೆಯೊಂದಿಗೆ ಮನಸ್ತಾಪ, ಕೋಪ, ಆತುರ, ಅಹಂಭಾವಗಳು.

    ಮಿಥುನ : ಆರ್ಥಿಕ ಸುಧಾರಣೆಗಳು, ಸಂಗಾತಿಯಿಂದ ಸಹಾಯ, ಉದ್ಯೋಗ ನಷ್ಟದ ಚಿಂತೆ, ದೂರ ಪ್ರಯಾಣದ, ಸಾಲ ಹೆಚ್ಚಾಗುವ ಭಯ, ಅಪಘಾತಗಳು, ಸೋಲು ನಷ್ಟ ನಿರಾಸೆಗಳು, ಅಪಮಾನ, ಸೇವಕರಿಂದ ತೊಂದರೆ, ಕೋರ್ಟ್ ಕೇಸ್‍ಗಳು, ಪಿತ್ರಾರ್ಜಿತ ಸ್ವತ್ತಿನಿಂದ ನಷ್ಟ,ವಿದ್ಯಾಭ್ಯಾಸದಲ್ಲಿ ಪ್ರಗತಿ, ಅಧರ್ಮದ ಸಂಪಾದನೆ, ಸರ್ಕಾರಿ ಕಾರ್ಯಜಯ.

    ಕಟಕ : ವಿದ್ಯಾಭ್ಯಾಸದಲ್ಲಿ ಅಡೆತಡೆಗಳು, ದಾಂಪತ್ಯದಲ್ಲಿ ನಿರಾಸೆ, ಸಂಶಯಗಳ ಸುಳಿದಾಟ, ಸೇವಕರಿಂದ ಶತ್ರುಗಳಿಂದ ಸಾಲಗಾರರಿಂದ ತೊಂದರೆಗಳು, ಆರ್ಥಿಕ ಅಡೆತಡೆಗಳು ಪಾಲುದಾರಿಕೆಯಲ್ಲಿ ಸಮಸ್ಯೆ, ತಂದೆಯೊಂದಿಗೆ ಮನಸ್ತಾಪ ಮತ್ತು ಕಿರಿಕಿರಿ, ಸ್ವಂತ ಉದ್ಯಮ ವ್ಯಾಪಾರ-ವ್ಯವಹಾರದಲ್ಲಿ ನಷ್ಟಗಳು, ಉದ್ಯೋಗ ಸ್ಥಳದಲ್ಲಿ ಸಮಸ್ಯೆಗಳು, ಅಧಿಕಾರಿಗಳಿಂದ ತೊಂದರೆ, ಮಕ್ಕಳಿಂದ ಸಹಾಯದ ನಿರೀಕ್ಷೆ, ಅನಗತ್ಯ ಸಂಬಂಧಗಳಿಂದ ಕುಟುಂಬಕ್ಕೆ ಆಪತ್ತು

    ಸಿಂಹ : ಉದ್ಯೋಗದಲ್ಲಿ ಪ್ರಗತಿಮ, ಆರ್ಥಿಕವಾಗಿ ಚೇತ ಶುಭಕಾರ್ಯದಲ್ಲಿ ಅನುಕೂಲ, ಸಂಗಾತಿಯಿಂದ ಸಹಾಯ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಯಲ್ಲಿ ನಷ್ಟ, ಶತ್ರು ದಮನ, ತಂದೆಯ ಅಸಹಾಯಕತೆ, ಬಂಧು-ಬಾಂಧವರು ದೂರ, ಆರೋಗ್ಯ ಸುಧಾರಣೆ, ಧಾರ್ಮಿಕ ಕಾರ್ಯದಲ್ಲಿ ನಿರ್ವಿಘ್ನತೆ

    ಕನ್ಯಾ : ಪ್ರೀತಿ ಪ್ರೇಮ ಭಾವನೆಗಳಿಗೆ ಪೆಟ್ಟು, ವಿದ್ಯಾಭ್ಯಾಸದಲ್ಲಿ ಅಡತಡೆಗಳು, ಸ್ಥಿರಾಸ್ತಿ ನಷ್ಟ, ಅನಿರೀಕ್ಷಿತ ಧನಾಗಮನ ಮತ್ತು ಆಪತ್ತು, ಮಾತಿನಿಂದ ತೊಂದರೆಗಳು, ಕುಟುಂಬ ಕಲಹಗಳು, ದಾಂಪತ್ಯದಿಂದ ದೂರ,ಸಂಗಾತಿಯಿಂದ ಬೇಸರ, ಪಾಲುದಾರಿಕೆಯಲ್ಲಿ ನಷ್ಟ, ಮಹಿಳೆಯರಿಂದ ಸಹಾಯದ ನಿರೀಕ್ಷೆ.

    ತುಲಾ : ಆರ್ಥಿಕ ಸಮತೋಲನ, ಆರೋಗ್ಯ ಸುಧಾರಣೆ, ಗುರು ಮತ್ತು ದೈವ ಆಶೀರ್ವಾದಗಳು, ಮಾನಸಿಕ ಅಸಮತೋಲನ, ಸೋಮಾರಿತನ, ತಾಯಿಯೊಂದಿಗೆ ಬೇಸರ, ಸ್ಥಿರಾಸ್ತಿ ವಾಹನ ಖರೀದಿ, ಸ್ನೇಹಿತರೊಂದಿಗೆ ಮನಸ್ತಾಪ, ಪಾಲುದಾರಿಕೆಯಲ್ಲಿ ತಪ್ಪು ನಿರ್ಧಾರ, ಆಧ್ಯಾತ್ಮದ ಚಿಂತೆ, ಉದ್ಯೋಗ ನಷ್ಟಗಳು, ಮಕ್ಕಳಿಂದ ತೊಂದರೆಗಳು

    ವೃಶ್ಚಿಕ : ವ್ಯಾಪಾರದಲ್ಲಿ ಅನುಕೂಲ, ಶತ್ರು ನಾಶ, ಆರೋಗ್ಯದಲ್ಲಿ ಗಂಭೀರ ಸ್ವರೂಪಗಳು, ಆರ್ಥಿಕ ಮುಗ್ಗಟ್ಟುಗಳು, ವಿದ್ಯಾಭ್ಯಾಸದಲ್ಲಿ ಅನುಕೂಲ, ಹಿರಿಯರಿಂದ ಸಹಕಾರ, ಪ್ರಯಾಣದಿಂದ ಕಾರ್ಯಜಯ, ಸರ್ಕಾರದಿಂದ ಸಹಾಯ, ಸ್ಥಿರಾಸ್ತಿ ವಾಹನ ಯೋಗ, ತಾಯಿಯಿಂದ ಸಹಾಯ, ಮಕ್ಕಳಿಗಾಗಿ ಅಧಿಕ ಖರ್ಚು.

    ಧನಸ್ಸು : ಸ್ವಯಂಕೃತ ಅಪರಾಧಿಗಳು, ಪ್ರೀತಿ ಪ್ರೇಮಗಳಿಂದ ನೋವು, ಜೂಜು ರೇಸ್ ಲಾಟರಿ ದುಶ್ಚಟಗಳಿಂದ ನಷ್ಟ, ಮಕ್ಕಳ ಭವಿಷ್ಯದ ಚಿಂತೆ, ಆರ್ಥಿಕ ಮಂದಗತಿ, ಕೌಟುಂಬಿಕ ತೊಂದರೆ, ಸ್ಥಿರಾಸ್ತಿ ವಾಹನ ನಷ್ಟ, ಶುಭ ಕಾರ್ಯದಲ್ಲಿ ಯಶಸ್ಸು, ಸಂಗಾತಿಯಿಂದ ಸಹಾಯ, ಪಾಲುದಾರಿಕೆಯಲ್ಲಿ ಉತ್ತಮ ಬಾಂಧವ್ಯದ ನಿರೀಕ್ಷೆ.

    ಮಕರ : ಸೋಲು ಅವಮಾನ ಅಪವಾದ, ಅನಾರೋಗ್ಯಗಳು, ಕುಟುಂಬದಲ್ಲಿ ಅಸಮಾಧಾನ, ಸ್ಥಿರಾಸ್ತಿ ವಾಹನದಲ್ಲಿ ಮೋಸ, ವಿದ್ಯಾಭ್ಯಾಸದಲ್ಲಿ ಗೊಂದಲಗಳು, ಆರ್ಥಿಕ ಸುಧಾರಣೆ, ಕುಟುಂಬದ ಸಹಕಾರ, ಉದ್ಯೋಗದಲ್ಲಿ ಒತ್ತಡಗಳು

    ಕುಂಭ : ಧೈರ್ಯದಿಂದ ಮುನ್ನುಗ್ಗುವ ಸ್ವಭಾವ, ಮನೋರೋಗಗಳು, ಸಾಲದ ಸುಳಿಗೆ ಸಿಲುಕುವಿರಿ, ಸ್ವಂತ ವ್ಯಾಪಾರದಲ್ಲಿ ನಷ್ಟ, ಪಾಲುದಾರಿಕೆಯಲ್ಲಿ ಸಮಸ್ಯೆ, ದೈವ ಕಾರ್ಯದಲ್ಲಿ ವಿಘ್ನ, ಶುಭಕಾರ್ಯ, ಆದಾಯಕ್ಕಿಂತ ಖರ್ಚು ಜಾಸ್ತಿ, ದಾಯಾದಿ ಕಲಹಗಳು, ಪ್ರಯಾಣ ವಿಘ್ನ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ.

    ಮೀನ : ಆರ್ಥಿಕ ವ್ಯವಹಾರದಲ್ಲಿ ತೊಂದರೆಗಳು, ಉದ್ಯೋಗ ಬಡ್ತಿ, ವಿದೇಶ ಪ್ರಯಾಣ, ಮಕ್ಕಳಿಂದ ಸಹಾಯ ಮತ್ತು ಸಹಕಾರ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಶುಭಕಾರ್ಯದಲ್ಲಿ ಅಡತಡೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಭವಿಷ್ಯದ ಚಿಂತೆಗಳು, ಅನಾರೋಗ್ಯ ಸಮಸ್ಯೆ, ಕುಟುಂಬ ಕಲಹಗಳು.