Tag: benagluru

  • ಬೆಂಗಳೂರಲ್ಲಿ 10 ಲಕ್ಷ ವೆಚ್ಚದಲ್ಲಿ ಕಟ್ಟಿದ ಬಸ್ ಸ್ಟ್ಯಾಂಡ್ ನಾಪತ್ತೆ!

    ಬೆಂಗಳೂರಲ್ಲಿ 10 ಲಕ್ಷ ವೆಚ್ಚದಲ್ಲಿ ಕಟ್ಟಿದ ಬಸ್ ಸ್ಟ್ಯಾಂಡ್ ನಾಪತ್ತೆ!

    ಬೆಂಗಳೂರು: ಕೆಲ ತಿಂಗಳ ಹಿಂದಷ್ಟೇ 10 ಲಕ್ಷ ರೂ. ವೆಚ್ಚದಲ್ಲಿ ಕಟ್ಟಲಾಗಿದ್ದ ಬಸ್ ಸ್ಟ್ಯಾಂಡ್ (Bus Stand) ಅನ್ನು ಕಳವು ಮಾಡಿರುವ ಘಟನೆ ಬೆಂಗಳೂರಿನಲ್ಲಿ (Benagluru) ನಡೆದಿದೆ.

    ವಿಧಾನಸೌಧದ ಬಳಿಯಿರುವ ಕನ್ನಿಂಗ್ ಹ್ಯಾಂ ರಸ್ತೆಯಲ್ಲಿ (Cunningham Road) ಇದ್ದ ಬಸ್ ಸ್ಟ್ಯಾಂಡ್ ಗಾಯಬ್ ಆಗಿದೆ. ಆಗಸ್ಟ್ ತಿಂಗಳಿನಲ್ಲಿ ಬಿಬಿಎಂಪಿಯಿಂದ ನಿರ್ಮಾಣವಾಗಿದ್ದ ಬಸ್ ಸ್ಟ್ಯಾಂಡ್ ಒಂದೇ ವಾರದಲ್ಲಿ ಕಳುವಾಗಿದೆ. ಈ ಬಗ್ಗೆ 4 ದಿನಗಳ ಹಿಂದೆ ಹೈಗ್ರೌಂಡ್ ಸ್ಟೇಷನ್‌ನಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಚುನಾವಣೆ ಬಂದರೆ ಬಿಜೆಪಿಯವರಿಗೆ ಮಸೀದಿ, ಪಾಕಿಸ್ತಾನ ನೆನಪಾಗುತ್ತದೆ: ಶಿವರಾಜ್ ತಂಗಡಗಿ

    ಅತಿ ಹೆಚ್ಚು ಪ್ರಯಾಣಿಕರಿರುವ ಕಾರಣಕ್ಕೆ ಕನ್ನಿಂಗ್ ಹ್ಯಾಂ ರಸ್ತೆಯ ಬಳಿ 2 ಬಸ್ ಸ್ಟ್ಯಾಂಡ್‌ಗಳನ್ನು ನಿರ್ಮಿಸಲಾಗಿತ್ತು. ಆದರೆ ಅದರಲ್ಲಿ ಒಂದು ಬಸ್ ಸ್ಟ್ಯಾಂಡ್ ನಿರ್ಮಾಣವಾದ ವಾದರದಲ್ಲೇ ಅದರ ಸುಳಿವೇ ಇಲ್ಲದಂತೆ ಗಾಯಬ್ ಆಗಿದೆ. ಈ ಬಗ್ಗೆ 4 ದಿನಗಳ ಹಿಂದೆ ರವಿ ರೆಡ್ಡಿ ಎಂಬವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಸಂಘರ್ಷ – ಮನೆಗಳಿಗೆ ಹೊತ್ತಿದ ಬೆಂಕಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಂಗ್ರೆಸ್ ಅಂದ್ರೆ ಹಿಂದೂ ವಿರೋಧಿ ಅನ್ನೋದು ಸ್ಪಷ್ಟವಾಗಿದೆ: ಅಶ್ವಥ್ ನಾರಾಯಣ್

    ಕಾಂಗ್ರೆಸ್ ಅಂದ್ರೆ ಹಿಂದೂ ವಿರೋಧಿ ಅನ್ನೋದು ಸ್ಪಷ್ಟವಾಗಿದೆ: ಅಶ್ವಥ್ ನಾರಾಯಣ್

    ಬೆಂಗಳೂರು: ಕಾಂಗ್ರೆಸ್ (Congress) ಎಂದರೆ ಹಿಂದೂ ವಿರೋಧಿ ಅನ್ನೋದನ್ನು ಆ ಪಕ್ಷದ ನಾಯಕರೇ ಸ್ಪಷ್ಟವಾಗಿ ವ್ಯಕ್ತಪಡಿಸುತ್ತಿದ್ದಾರೆ ಎಂದು ಮಾಜಿ ಸಚಿವ ಅಶ್ವಥ್ ನಾರಾಯಣ್ (Ashwath Narayan) ಹೇಳಿಕೆ ನೀಡಿದ್ದಾರೆ.

    ಶಿವಮೊಗ್ಗ (Shivamogga) ಗಲಭೆ ಪ್ರಕರಣದ ಹಿನ್ನೆಲೆ ಸ್ಥಳಕ್ಕೆ ಬಿಜೆಪಿ (BJP) ಸತ್ಯ ಶೋಧನೆ ತಂಡ ಭೇಟಿ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ವಾಸ್ತವತೆ ಮತ್ತು ನೊಂದ ನಾಗರಿಕರನ್ನು ಮಾತನಾಡಿಸಿ ವಾಸ್ತವ ಸ್ಥಿತಿ ಪರಿಶೀಲನೆ ಮಾಡುತ್ತೇವೆ. ಬಳಿಕ ಸರ್ಕಾರದ ಮೇಲೆ ಸೂಕ್ತ ಕ್ರಮ ವಹಿಸುವ ಬಗ್ಗೆ ಸಮಾಲೋಚನೆ ಮಾಡುತ್ತೇವೆ ಎಂದು ತಿಳಿಸಿದರು.

    ಭಯದ ಭಾವನೆ ಪರಿಸ್ಥಿತಿಯನ್ನು ಗಂಭೀರವಾಗಿ ತೆಗೆದುಕೊಂಡು ಸ್ಥಳೀಯರ ಹಿತ ಸಂರಕ್ಷಣೆ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ. ಅಧಿಕಾರಿಗಳಿಗೂ ಜನರಿಗೆ ನಿರ್ಭೀತಿಯಾಗಿ ವ್ಯವಸ್ಥೆ ಮಾಡಲು ಜನರ ಪ್ರತಿನಿಧಿಗಳಾಗಿ ಒತ್ತಾಯ ಮಾಡುತ್ತೇವೆ. ಆಸ್ಪತ್ರೆಗೆ ಭೇಟಿ ಕೊಡುತ್ತೇವೆ, ಗಾಯಳುಗಳನ್ನು ಭೇಟಿ ಮಾಡಿ ಬರುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಬಂದೇ ಬಿಡ್ತು ದಸರಾ – ಮೈಸೂರು ಅರಮನೆಯಲ್ಲಿ ಯಾವ ದಿನ ಏನು ಕಾರ್ಯಕ್ರಮ?

    ಗಲಭೆ ವಿಚಾರವಾಗಿ ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡುತ್ತಿದೆ. ದೊಡ್ಡ ಬಹುಮತ ಬಂದಿದೆ, ನಾವು ಏನು ಬೇಕಾದರೂ ಮಾಡಬಹುದು. ನಮಗೆ ಲೈಸೆನ್ಸ್ ಕೊಟ್ಟಿದ್ದಾರೆ ಅನ್ನೋ ಮನಸ್ಥಿತಿ ಇದು. ಸಣ್ಣ ಗಲಾಟೆಯಾದಾಗ ರಾಹುಲ್ ಗಾಂಧಿ, ರಾಷ್ಟ್ರೀಯ ನಾಯಕರು, ಮತ್ತೊಬ್ಬರು ಎಲ್ಲಾರು ಭೇಟಿ ಮಾಡುತ್ತಾರೆ. ಆದರೆ ಇಲ್ಲಿಗ್ಯಾಕೆ ಯಾರು ಬರ್ತಿಲ್ಲ? ಶಿವಮೊಗ್ಗಕ್ಕೆ ಭೇಟಿ ಮಾಡಿ, ಸ್ಥಳ ಪರಿಶೀಲನೆ ಮಾಡಿ ನೊಂದವರನ್ನು ಯಾಕೆ ಭೇಟಿ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.

    ಹೊಡೆಯುವುದು, ಗಲಭೆ ನಿರ್ಮಾಣಕ್ಕೆ ಪೂರಕವಾದ ಕೆಲಸ ಮಾಡುವುದೇ ಕಾಂಗ್ರೆಸ್ ಪಕ್ಷ. ಅನೇಕ ಬಾರಿ ಜನ ಕಾಂಗ್ರೆಸ್‌ಗೆ ಬುದ್ಧಿ ಕಲಿಸಿದ್ದರು. ಅವರು ಮಾತ್ರ ಹಳೇ ಬುದ್ಧಿ ಬಿಡುತ್ತಿಲ್ಲ. ರಾಮಲಿಂಗಾರೆಡ್ಡಿಯವರ ಹೇಳಿಕೆ ಕೂಡ ಮೊಂಡುತನವನ್ನು ಪ್ರದರ್ಶನ ಮಾಡುತ್ತಿದೆ. ಉದ್ದಟತನದ ಮಾತುಗಳು ಇದು. ಕಾಂಗ್ರೆಸ್ ಎಂದರೆ ಆ್ಯಂಟಿ ಹಿಂದೂ ಅನ್ನೋದನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತಿದ್ದಾರೆ ಅಷ್ಟೇ ಎಂದು ಅಶ್ವಥ್ ನಾರಾಯಣ್ ಗುಡುಗಿದರು. ಇದನ್ನೂ ಓದಿ: ಸಿಕ್ಕಿಂ ಪ್ರವಾಹ – 102 ಜನ ನಾಪತ್ತೆ, ಸಾವಿನ ಸಂಖ್ಯೆ 14ಕ್ಕೆ ಏರಿಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮನೆ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ಕಲ್ಲು ತೂರಿ ಪುಂಡಾಟ – 6 ಕಾರುಗಳಿಗೆ ಹಾನಿ

    ಮನೆ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ಕಲ್ಲು ತೂರಿ ಪುಂಡಾಟ – 6 ಕಾರುಗಳಿಗೆ ಹಾನಿ

    ಬೆಂಗಳೂರು: ಮದ್ಯದ ಅಮಲಿನಲ್ಲಿ ಪುಂಡರು ತಡರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ (Cars) ಕಲ್ಲು ತೂರಿ (Stone Pelting) ಹಾನಿ ಮಾಡಿರುವ ಘಟನೆ ಬೆಂಗಳೂರಿನ (Bengaluru) ಶ್ರೀನಿವಾಸನಗರದಲ್ಲಿ (Srinivasnagar) ನಡೆದಿದೆ.

    ತಡರಾತ್ರಿ 2:50ರ ವೇಳೆಗೆ ಬೈಕ್‌ನಲ್ಲಿ ಬಂದಿದ್ದ ಇಬ್ಬರು ಪುಂಡರು 6ಕ್ಕೂ ಹೆಚ್ಚು ಕಾರುಗಳಿಗೆ ಕಲ್ಲು ತೂರಿ ಹಾನಿ ಮಾಡಿದ್ದಾರೆ. ಕಾರುಗಳ ಕಿಟಕಿ ಗಾಜುಗಳು ಪುಡಿಪುಡಿಯಾಗಿದ್ದು, ಆರೋಪಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಕೈ ಟಿಕೆಟ್‌ ಆಕಾಂಕ್ಷಿಯ ಮೇಲೆ ಹಣದ ಮಳೆ ಸುರಿದ ಅಭಿಮಾನಿಗಳು

    ಘಟನೆಯಲ್ಲಿ ಐ20, ಹ್ಯೂಂಡೈ, ಓಮ್ನಿ ಕಾರುಗಳು ಸೇರಿದಂತೆ 6ಕ್ಕೂ ಹೆಚ್ಚು ಕಾರುಗಳಿಗೆ ಹಾನಿಯಾಗಿದೆ. ಘಟನೆ ಬಗ್ಗೆ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ರಾಜ್ಯ ಬಿಜೆಪಿ ನಾಯಕರಿಗೆ ಶಾ ಶಾಕ್‌ – ಬೆಂಗಳೂರು ಗೆಲ್ಲಲು ಬಿಗ್ ಟಾಸ್ಕ್‌

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಜ್ಯದ 7 ಭ್ರಷ್ಟರ ಮೇಲೆ ಎಸಿಬಿ ದಾಳಿ – ಕಂತೆ ಕಂತೆ ಹಣ ಎಣಿಸಿ ಅಧಿಕಾರಿಗಳು ಸುಸ್ತು

    ರಾಜ್ಯದ 7 ಭ್ರಷ್ಟರ ಮೇಲೆ ಎಸಿಬಿ ದಾಳಿ – ಕಂತೆ ಕಂತೆ ಹಣ ಎಣಿಸಿ ಅಧಿಕಾರಿಗಳು ಸುಸ್ತು

    – ಭ್ರಷ್ಟರ ಆಸ್ತಿ ಅಂದಾಜು 100 ಕೋಟಿ ರೂ.
    – 30 ಕಡೆ ಎಸಿಬಿ ದಾಳಿ

    ಬೆಂಗಳೂರು: ಕೊರೊನಾದಿಂದಾಗಿ ಇಡೀ ದೇಶ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದೆ. ಸಾಕಷ್ಟು ಅಳೆದು ತೂಗಿ ನಿನ್ನೆ ಕೇಂದ್ರ ಸರ್ಕಾರ ಕೊರತೆ ಬಜೆಟ್ ಮಂಡಿಸಿದೆ. ದೇಶಕ್ಕೆ ಆರ್ಥಿಕ ಸಂಕಷ್ಟ ಎದುರಾದರೇನು? ಭ್ರಷ್ಟರಿಗೆ ಮಾತ್ರ ಸುಗ್ಗಿನೇ ಅಲ್ವಾ. ಬರ ಅಥವಾ ಸಂಕಷ್ಟ ಕಾಲ ಎನ್ನುವುದು ಅಧಿಕಾರಿಗಳಿಗೆ ಹುಲುಸಾದ ಹುಲ್ಲುಗಾವಲು ಎಂಬ ಮಾತಿಗೆ ಪೂರಕ ಎಂಬಂತೆ ಇಂದು ಬೆಳ್ಳಂಬೆಳಗ್ಗೆ ರಾಜ್ಯದ 7 ಜಿಲ್ಲೆಗಳಲ್ಲಿ ಎಸಿಬಿ ನಡೆಸಿದ ದಾಳಿಯಲ್ಲಿ ಸಪ್ತ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ.

    7 ಭ್ರಷ್ಟರಿಗೆ ಸಂಬಂಧಿಸಿ ಬೆಂಗಳೂರು, ಕಲಬುರಗಿ, ಹುಬ್ಬಳ್ಳಿ, ಮಂಗಳೂರು, ಬಳ್ಳಾರಿ, ಕೋಲಾರ, ಧಾರವಾಡ ಜಿಲ್ಲೆಗಳ 30 ಕಡೆ ಏಕಕಾಲದಲ್ಲಿ ಎಸಿಬಿ ದಾಳಿ ನಡೆಸಿದೆ. ದಾಳಿ ವೇಳೆ, ಒಬ್ಬೊಬ್ಬ ಅಧಿಕಾರಿ ಬಳಿ ಕೋಟಿ ಕೋಟಿ ಮೌಲ್ಯದ ಆಸ್ತಿ, ರಾಶಿ ರಾಶಿ ಚಿನ್ನಾಭರಣ, ಕಂತೆ ಕಂತೆ ಹಣ ಪತ್ತೆಯಾಗಿದೆ.

    ಹೆಂಡತಿ, ತಂದೆ-ತಾಯಿ, ಅಳಿಯ ಹೀಗೆ ಸಿಕ್ಕಸಿಕ್ಕವರ ಹೆಸರಿನಲ್ಲಿ ಆಸ್ತಿ ಮಾಡಿಕೊಂಡಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲೂ ಬೇನಾಮಿ ಆಸ್ತಿ ಮಾಡಿರುವುದು ಪ್ರಾಥಮಿಕ ಪರಿಶಿಲನೆಯಲ್ಲಿ ದೃಢಪಟ್ಟಿದೆ. ಇದನ್ನ ನೋಡಿ ಎಸಿಬಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ.

    ಬೆಳಗ್ಗೆ 7 ಗಂಟೆಯಿಂದ ನಡೆಯುತ್ತಿರುವ ಶೋಧ ಕಾರ್ಯ, ಕೆಲವು ಕಡೆ ಕತ್ತಲಾದರೂ ನಿಂತಿಲ್ಲ. ಲೆಕ್ಕ ಹಾಕೋ ಕಾರ್ಯ ಈಗಲೂ ಮುಂದುವರೆದಿದೆ. ಲಂಚ ಹೊಡೆಯೋದ್ರಲ್ಲಿ ಇವ್ರೆಲ್ಲಾ ಪೈಪೋಟಿಗೆ ಬಿದ್ದಂತೆ ವರ್ತಿಸಿರೋದು ಕಂಡು ಬಂದಿದೆ.

    ಶ್ರೀನಿವಾಸ್
    ಬಳ್ಳಾರಿ ವಿಮ್ಸ್ ಆಸ್ಪತ್ರೆ ಮಾಜಿ ನಿರ್ದೇಶಕ ಶ್ರೀನಿವಾಸ್ ಸದ್ಯ ಕೊಪ್ಪಳದ ಕಿಮ್ಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಆಸ್ತಿ 20 ಕೋಟಿ ರೂ. ಇರಬಹುದು ಎಂದು ಅಂದಾಜಿಸಲಾಗಿದೆ. 1.94 ಲಕ್ಷ ರೂ. ನಗದು, 800ಗ್ರಾಂ ಚಿನ್ನ, 9.300 ಕೆಜಿ ಬೆಳ್ಳಿ, 3 ಕೋಟಿ ಮೌಲ್ಯದ 4 ನಿವೇಶನ, 2 ಕೋಟಿ ಮೌಲ್ಯದ ಮನೆ. ಪತ್ನಿ, ಮಾವನ ಹೆಸರಲ್ಲಿ 18 ಕೋಟಿ ಮೌಲ್ಯದ ಆಸ್ತಿ ಸೇರಿ 2 ಕಾರು, 2 ಬೈಕ್ ಹೊಂದಿದ್ದಾರೆ.

    ವಿಜಯ್‍ಕುಮಾರ್
    ಕೋಲಾರದ ಡಿಎಚ್‍ಒ ವಿಜಯ್‍ಕುಮಾರ್‌ಗೆ ಸೇರಿದ 6 ಕಡೆ ಏಕಕಾಲದಲ್ಲಿ ದಾಳಿ ನಡೆದಿದ್ದು ಅಂದಾಜು15 ಕೋಟಿ ರೂ. ಆಸ್ತಿ ಪತ್ತೆಯಾಗಿದೆ. ಬ್ಯಾಂಕ್ ಖಾತೆಯಲ್ಲಿ 71 ಲಕ್ಷ ರೂ ನಗದು, 300 ಗ್ರಾಂ ಚಿನ್ನ ಸಿಕ್ಕಿದೆ.

    ಮೂರು ಮನೆ, ಬೆಂಗಳೂರಿನಲ್ಲಿ ಮೂರು ಫ್ಲ್ಯಾಟ್ ಇದ್ದು ಒಂದೊಂದರ ಬೆಲೆಯೂ 2 ರಿಂದ 3 ಕೋಟಿ ರೂ. ಬೆಲೆ ಬಾಳುತ್ತದೆ. ಮುಳಬಾಗಲಿನಲ್ಲಿ 7 ಕೋಟಿ ರೂ.ಮೌಲ್ಯದ ಮನೆ, ಖಾಸಗಿ ಆಸ್ಪತ್ರೆ ಕೋಲಾರ ಬಳಿ ಹೈವೇ ಪಕ್ಕದಲ್ಲೇ 1.13 ಎಕರೆ ಜಮೀನು ಇವರ ಹೆಸರಿನಲ್ಲಿದೆ. ಎರಡು ಕಾರು ಒಂದು ಬೈಕ್ ಪತ್ತೆಯಾಗಿದೆ.

    ದೇವರಾಜ
    ಹುಬ್ಬಳ್ಳಿಯ ಸಣ್ಣ ನೀರಾವರಿ ಇಲಾಖೆ ಇಇ ದೇವರಾಜ್ ಶಿಗ್ಗಾಂವಿ ಬಳಿ 10 ಕೋಟಿ ರೂ. ಆಸ್ತಿ ಇರಬಹುದು ಎಂದು ಅಂದಾಜಿಸಲಾಗಿದೆ. ಹುಬ್ಬಳ್ಳಿಯಲ್ಲಿ ನಾಲ್ಕು ಮನೆ, 2 ಸೈಟ್, 59.84 ಲಕ್ಷ ನಗದು, ಬ್ಯಾಂಕ್‍ನಲ್ಲಿ 30 ಲಕ್ಷ ಹಣ, 500 ಗ್ರಾಂ ಚಿನ್ನ, 4 ಕೆಜಿ ಬೆಳ್ಳಿ, 3 ಲಕ್ಷ ಮೌಲ್ಯದ ಗೃಹಪಯೋಗಿ ವಸ್ತುಗಳು ಪತ್ತೆಯಾಗಿದೆ.

    ಪತ್ನಿಯ ಬ್ಯಾಂಕ್ ಲಾಕರ್‌ನಲ್ಲಿ 56.50 ಲಕ್ಷ ನಗದು, 400 ಗ್ರಾಂ ಚಿನ್ನ, ಪತ್ನಿ, ಭಾಮೈದನ ಹೆಸರಲ್ಲಿ 30 ಲಕ್ಷ ರೂ. ಡಿಪಾಸಿಟ್‌, ದೇವರಾಜ್ ಮಾವನ ಲಾಕರ್‌ನಲ್ಲಿ 300 ಗ್ರಾಂ ಚಿನ್ನಾಭರಣ, ಹಾನಗಲ್‍ನಲ್ಲಿ 23 ಎಕರೆ, ಹುಬ್ಬಳ್ಳಿ ಬಳಿ 3 ಎಕರೆ ಜಮೀನು ಮತ್ತು 8 ಲಕ್ಷ  ರೂ. ಮೌಲ್ಯದ ಎರಡು ವಾಹನಗಳು ಇರುವುದು ದೃಢಪಟ್ಟಿದೆ.

    ಚನ್ನಬಸಪ್ಪ ಅವುಟೆ
    ಲೋಕೋಪಯೋಗಿ ಇಲಾಖೆ ಜೆಇ ಚನ್ನಬಸಪ್ಪ ಎರಡು ತಿಂಗಳ ಹಿಂದೆಯಷ್ಟೇ ಆಳಂದದಿಂದ ಮಾಗಡಿಗೆ ವರ್ಗಾವಣೆಯಾಗಿದ್ದರು. 10 ಕೋಟಿ ರೂ. ಆಸ್ತಿ ಇರಬಹುದು ಎಂದು ಅಂದಾಜಿಸಲಾಗಿದೆ. ಕಲಬುರಗಿ ನಿವಾಸದಲ್ಲಿ 1.27 ಲಕ್ಷ ರೂ. ನಗದು, 125 ಗ್ರಾಂ ಚಿನ್ನ, 650 ಗ್ರಾಂ ಬೆಳ್ಳಿ, 22 ಲಕ್ಷ ರೂ. ಮೌಲ್ಯದ ಇನ್ನೋವಾ ಸೇರಿ ಎರಡು ಕಾರ್, ಎರಡು ಬೈಕ್ ಪತ್ತೆಯಾಗಿವೆ.

    ಕಲಬುರಗಿ ನಗರದಲ್ಲಿ 8 ಫ್ಲ್ಯಾಟ್, 1 ಸೂಪರ್ ಮಾರ್ಕೆಟ್, 1 ಫಾರ್ಮ್‍ಹೌಸ್, ಚಿಂಚೋಳಿಯಲ್ಲಿ 23 ಎಕರೆ, ಬಸವಕಲ್ಯಾಣದಲ್ಲಿ 3 ಎಕರೆ ಜಮೀನು , ಚನ್ನಬಸಪ್ಪ ಪತ್ನಿ ಹಾಗೂ ಭಾಮೈದನ ಹೆಸರಲ್ಲೂ ಅಪಾರ ಆಸ್ತಿ, ತೆಲಂಗಾಣದ ಸಂಗಾರೆಡ್ಡಿಯಲ್ಲಿ 50 ಲಕ್ಷ ರೂ. ಮೌಲ್ಯದ ಸೈಟ್ ಹೊಂದಿದ್ದಾರೆ.

    ಪಾಂಡುರಂಗ ಗರಗ್‌
    ಸಹಕಾರ ಸಂಘಗಳ ಜಂಟಿ ನಿಬಂಧಕ ಪಾಂಡುರಂಗ ಗರಗ್ ಬಳಿ ಅಂದಾಜು 10 ಕೋಟಿ ರೂ. ಮೌಲ್ಯದ ಆಸ್ತಿಗಳಿದೆ. ಬೆಂಗಳೂರಿನ ನಾಲ್ಕು ಕಡೆ ಮತ್ತು ಚಿತ್ರದುರ್ಗದಲ್ಲಿ ರೇಡ್ ನಡೆದಿದೆ. ವಿಜಯನಗರದಲ್ಲಿ ಐಶಾರಾಮಿ 3 ಅಂತಸ್ತಿನ ಮನೆ, ಮನೆಗೆ ಲಿಫ್ಟ್, ಹೋಂ ಥಿಯೇಟರ್ ವ್ಯವಸ್ಥೆಇದೆ. 4.44 ಲಕ್ಷ  ರೂ ನಗದು, 1.166 ಕೆಜಿ ಚಿನ್ನ, 31 ಕೆಜಿ ಬೆಳ್ಳಿ, 20 ಲಕ್ಷ ರೂ. ವಿಮೆ, ಬೆಂಗಳೂರಲ್ಲಿ 2 ಸೈಟ್, ಚಿತ್ರದುರ್ಗದಲ್ಲಿ 10 ಎಕರೆ ಜಮೀನು, ಮೂರು ಕಾರು, ಒಂದು ಟ್ರಾಕ್ಟರ್, ಮೂರು ದ್ವಿ ಚಕ್ರ ವಾಹನವನ್ನು ಹೊಂದಿದ್ದಾರೆ.

    ಶ್ರೀನಿವಾಸ್
    ಧಾರವಾಡದಲ್ಲಿ ಎಸಿಎಫ್ ಆಗಿರುವ ಶ್ರೀನಿವಾಸ್ ಚಿತ್ರದುರ್ಗದಲ್ಲಿ ವಾಸವಾಗಿದ್ದಾರೆ. ಅಂದಾಜು 7 ಕೋಟಿ ರೂ. ಆಸ್ತಿ ಇದೆ. 2 ಐಶಾರಾಮಿ ಮನೆ, 1 ತೋಟದ ಮನೆ, 63 ಲಕ್ಷ  ರೂ. ಮೌಲ್ಯದ ಗೃಹಪಯೋಗಿ ವಸ್ತುಗಳು, 4.87 ಲಕ್ಷ ರೂ. ನಗದು, ಬ್ಯಾಂಕ್ ಖಾತೆಯಲ್ಲಿ 5 ಲಕ್ಷ ಕ್ಯಾಶ್, 850 ಗ್ರಾಂ ಚಿನ್ನ, 3.500 ಕೆಜಿ ಬೆಳ್ಳಿ, ಎರಡು ಕಾರು, ಒಂದು ಟ್ರಾಕ್ಟರ್, ಒಂದು ಬೈಕ್ ಪತ್ತೆಯಾಗಿದೆ.

    ಜಯರಾಜ
    ಮಂಗಳೂರು ಪಾಲಿಕೆಯಲ್ಲಿ ಟೌನ್ ಪ್ಲಾನಿಂಗ್ ಆಫೀಸರ್ ಆಗಿರುವ ಜಯರಾಜ ಬಳಿ ಅಂದಾಜು 3.50 ಕೋಟಿ ರೂ. ಮೌಲ್ಯದ ಆಸ್ತಿಯಿದೆ. 8 ಲಕ್ಷ ರೂ. ನಗದು, 1.5 ಕೋಟಿ  ರೂ. ಮೌಲ್ಯದ ಆಸ್ತಿ ದಾಖಲೆ ಪತ್ರ, 500 ಮತ್ತು 2 ಸಾವಿರ ಮುಖಬೆಲೆ ನೋಟುಗಳು ಪತ್ತೆಯಾಗಿದೆ. ಪತ್ನಿಯ ಬ್ಯಾಂಕ್ ಅಕೌಂಟ್‍ನಲ್ಲಿ 1 ಕೋಟಿ ರೂ. ನಗದು, 160 ಗ್ರಾಂ ಚಿನ್ನಾಭರಣ, ಮಂಗಳೂರಿನಲ್ಲಿ ಅಪಾರ್ಟ್‍ಮೆಂಟ್, ಪಡೀಲ್‍ನಲ್ಲಿ ಮನೆ, ಕೇರಳದಲ್ಲಿರುವ ಜಯರಾಜ್ ಪತ್ನಿಯ ಕ್ವಾಟ್ರಸ್ ಮೇಲೂ ಎಸಿಬಿ ದಾಳಿ ಮಾಡಿದೆ.

  • ವರ್ತೂರು ಪ್ರಕಾಶ್ ಅಪಹರಣ, ಬಿಡುಗಡೆ- 30 ಕೋಟಿಗೆ ಡಿಮ್ಯಾಂಡ್?

    ವರ್ತೂರು ಪ್ರಕಾಶ್ ಅಪಹರಣ, ಬಿಡುಗಡೆ- 30 ಕೋಟಿಗೆ ಡಿಮ್ಯಾಂಡ್?

    – ಮೂರು ದಿನ ಒತ್ತೆಯಳಾಗಿರಿಸಿಕೊಂಡು ಹಣಕ್ಕೆ ಬೇಡಿಕೆ

    ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಅವರನ್ನ ಅಪಹರಣ ಮಾಡಿ ಮೂರು ದಿನ ಕೂಡಿಟ್ಟು ಬಿಡುಗಡೆಗೊಳಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ತೂರು ಪ್ರಕಾಶ್, ಬೆಳ್ಳಂದೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ನವೆಂಬರ್ 25ರಂದು ಕೋಲಾರದ ಬೇಗ್ಲಿಯ ಹೊಸಹಳ್ಳಿಯಲ್ಲಿ ಸುಮಾರು ಎಂಟು ಜನರು ನನ್ನ ಮೇಲೆ ಹಲ್ಲೆ ಮಾಡಿದರು. ಮೂರು ದಿನಗಳ ಕಾಲ ಒತ್ತೆಯಾಗಿರಿಸಿಕೊಂಡು 30 ಕೋಟಿ ರೂ.ಗೆ ಬೇಡಿಕೆ ಇರಿಸಿದ್ದರು. ನನ್ನ ಕೈ ಮತ್ತು ಕಾಲಿನ ಭಾಗದಲ್ಲಿ ಅಪಹರಣಕಾರರು ಹಲ್ಲೆ ನಡೆಸಿದ್ದಾರೆ. ಜೊತೆಯಲ್ಲಿದ್ದ ಚಾಲಕ ಸುನಿಲ್ ಮೇಲೆಯೂ ಹಲ್ಲೆ ನಡೆದಿದೆ. ಆದ್ರೆ ಸುನಿಲ್ ಘಟನಾ ಸ್ಥಳದಿಂದ ತಪ್ಪಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ಮೂರು ದಿನಗಳ ಬಳಿಕ ನನ್ನನು ಹೊಸಕೋಟೆಯಲ್ಲಿ ಬಿಟ್ಟು ಅಪಹರಣಕಾರರು ಎಸ್ಕೇಪ್ ಆಗಿದ್ದಾರೆ ಎಂದು ವರ್ತೂರು ಪ್ರಕಾಶ್ ದೂರಿನಲ್ಲಿ ದಾಖಲಸಿದ್ದಾರೆ.

    ದೂರು ದಾಖಲಿಸಿ ಹೊರ ಬಂದ ವರ್ತೂರು ಪ್ರಕಾಶ್ ಯಾವುದೇ ಹೇಳಿಕೆ ನೀಡದೇ ಹೋಗಿದ್ದಾರೆ. ಮೂರು ದಿನಗಳ ಹಿಂದೆ ನಂಬರ್ ಪ್ಲೇಟ್ ಇಲ್ಲದ ಕಾರ್ ಜುನ್ನಸಂದ್ರದಲ್ಲಿ ಪತ್ತೆಯಾಗಿತ್ತು. ಸ್ಥಳೀಯರು ಅನುಮಾನಾಸ್ಪದವಾಗಿ ನಿಂತಿದ್ದ ಕಾರಿನ ಬಗ್ಗೆ ಬೆಳ್ಳಂದೂರರು ಠಾಣೆಯ ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು.

  • ಯಲಹಂಕ ವೀರ ಸಾವರ್ಕರ್ ಮೇಲ್ಸೇತುವೆ ಉದ್ಘಾಟನೆ

    ಯಲಹಂಕ ವೀರ ಸಾವರ್ಕರ್ ಮೇಲ್ಸೇತುವೆ ಉದ್ಘಾಟನೆ

    – ಬಿಗಿ ಭದ್ರತೆಯಲ್ಲಿ ನಡೆಯಿತು ಕಾರ್ಯಕ್ರಮ

    ಬೆಂಗಳೂರು: ತೀವ್ರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಯಲಹಂಕ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರನ್ನು ನಾಮಕರಣ ಮಾಡಿದೆ.

    ಇಂದು ನಾಮಕರಣದ ಕಾರ್ಯಕ್ರಮವನ್ನು ಸಿಎಂ ಯಡಿಯೂರಪ್ಪನವರು ಉದ್ಘಾಟನೆ ಮಾಡಿದ್ದಾರೆ. ಯಲಹಂಕದ ಡೈರಿ ಸರ್ಕಲ್ ಬಳಿ ಇರುವ ಮೇಲ್ಸೇತುವೆಗೆ ವೀರ ಸಾವರ್ಕರ್ ಅವರ ಹೆಸರನ್ನು ಇಡಲಾಗಿದೆ. 388.35 ಮೀಟರ್ ಉದ್ದದ ಈ ಮೇಲ್ಸೇತುವೆಯನ್ನು ಬಿಬಿಎಂಪಿಯಿಂದ 34 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.

    ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡಲು ಕಾಂಗ್ರೆಸ್, ಜೆಡಿಎಸ್ ವಿರೋಧಿಸಿತ್ತು. ಹೀಗಾಗಿ ಯಾವುದೇ ಪ್ರತಿಭಟನೆ ನಡೆಯದಂತೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಎಸ್‍ಆರ್ ವಿಶ್ವನಾಥ್, ಸಚಿವರಾದ ಸಿಟಿ ರವಿ, ಡಿಸಿಎಂ ಅಶ್ವಥ್ ನಾರಾಣ್, ಗೃಹ ಸಚಿವ ಬಸವರಾಜ್ ಬೊಮ್ಮಯಿ ಮತ್ತು ಬೈರತಿ ಬಸವರಾಜು ಉಪಸ್ಥಿತರಿದ್ದರು.

    ಬೆಂಗಳೂರಿನ ಯಲಹಂಕ ಮೇಲ್ಸೇತುವೆಗೆ ವೀರ್ ಸಾವರ್ಕರ್ ಹೆಸರಿಡಲು ಸರ್ಕಾರ ಈ ಹಿಂದೆಯೇ ಮುಂದಾಗಿತ್ತು. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಆಕ್ಷೇಪ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆ ಸರ್ಕಾರ ಮೇಲ್ಸೇತುವೆ ಉದ್ಘಾಟನೆ ಕಾರ್ಯಕ್ರಮವನ್ನು ಮುಂದೂಡಿತ್ತು. ಮೇಲ್ಸೇತುವೆಗೆ ಸಾವರ್ಕರ್ ಹೆಸರು ಬೇಡ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ವಿರೋಧ ಮಾಡಿದ್ದರು. ಜೊತೆಗೆ ಕಾಂಗ್ರೆಸ್ ಪಕ್ಷದ ನಾಯಕರು ಕೂಡ ಸರ್ಕಾರದ ನಡೆಗೆ ವಿರೋಧ ವ್ಯಕ್ತಪಡಿಸಿದ್ದರು.

  • ನಿನ್ನೆ ಹುಟ್ಟುಹಬ್ಬ ಆಚರಣೆ – ಇಂದು ಹೃದಯಾಘಾತದಿಂದ ಹಿರಿಯ ನಟ ಸಿದ್ಧರಾಜ್ ನಿಧನ

    ನಿನ್ನೆ ಹುಟ್ಟುಹಬ್ಬ ಆಚರಣೆ – ಇಂದು ಹೃದಯಾಘಾತದಿಂದ ಹಿರಿಯ ನಟ ಸಿದ್ಧರಾಜ್ ನಿಧನ

    ಬೆಂಗಳೂರು: ಕನ್ನಡ ಹಿರಿಯ ಕಲಾವಿದ ಮತ್ತು ಪೋಷಕ ನಟ ಸಿದ್ಧರಾಜ್ ಕಲ್ಯಾಣಕರ್ ಅವರು ತಡರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

    ಕನ್ನಡದಲ್ಲಿ ಸುಮಾರು 70ಕ್ಕೂ ಹೆಚ್ಚು ಸಿನಿಮಾದಲ್ಲಿ ಅಭಿನಯಿಸಿರುವ ಸಿದ್ಧರಾಜ್ ಅವರು, ಮೂಲತಃ ಹುಬ್ಬಳ್ಳಿಯವರಾಗಿದ್ದಾರೆ. ಸೋಮವಾರ ತಾನೇ ಧಾರಾವಾಹಿ ಸೆಟ್‍ವೊಂದರಲ್ಲಿ ತಮ್ಮ 60 ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಆದರೆ ತಡರಾತ್ರಿ ಆಸ್ಪತ್ರೆಯಲ್ಲಿ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಹುಬ್ಬಳ್ಳಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

    ಸಿದ್ಧರಾಜ್ ಅವರು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಗಿಣಿರಾಮ ಮತ್ತು ಪ್ರೇಮಲೋಕ ಧಾರಾವಾಹಿಗಳಲ್ಲಿ ಅಭಿನಯ ಮಾಡುತ್ತಿದ್ದರು. 60 ವರ್ಷದ ಸಿದ್ದರಾಜ್ ತಮ್ಮ ಪತ್ನಿ ಮತ್ತು ಮಗನನ್ನು ಆಗಲಿದ್ದಾರೆ. ಹಿರಿಯ ನಟನ ಸಾವಿಗೆ ನಿರ್ದೇಶಕ ಬಿ ಸುರೇಶ್ ಮತ್ತು ಸೃಜನ್ ಲೋಕೇಶ್ ಅವರು ಸೇರಿದಂತೆ ಹಲವಾರು ಗಣ್ಯರು ಕಂಬನಿ ಮಿಡಿದಿದ್ದಾರೆ. ಸಿದ್ಧರಾಜ್ ಅವರು, ಶ್ರೀಮಂಜುನಾಥ, ಸೂಪರ್, ಬುದ್ಧಿವಂತ ಸೇರಿದಂತೆ ಹಲವಾರು ಜನಪ್ರಿಯ ಸಿನಿಮಾದಲ್ಲಿ ನಟಿಸಿದ್ದರು.

    ಸಿದ್ಧರಾಜ್ ಅವರ ಸಾವಿನ ಬಗ್ಗೆ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿರುವ ನಿರ್ದೇಶಕ ಟಿ.ಎನ್ ಸೀತಾರಾಮ್ ಅವರು, ಇದು ಅತ್ಯಂತ ದುರಿತ ಕಾಲ. ಮುಕ್ತದಲ್ಲಿ ತಾತನ ಪಾತ್ರ ಮಾಡಿದ್ದರು. ಭಾರ್ಗವಿ ನಾರಾಯಣ್ ಅಜ್ಜಿ, ಇವರು ತಾತ. ಈ ಧಾರಾವಾಹಿಯಲ್ಲಿ ಈ ಜೋಡಿಯ ದೃಶ್ಯಗಳನ್ನು ವೀಕ್ಷಕರು ತುಂಬಾ ಇಷ್ಟ ಪಡುತ್ತಿದ್ದರು. ಅನನ್ಯ ರೀತಿಯ ಕಲಾವಿದ. ತುಂಬಾ ಸಜ್ಜನ. ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದವರಲ್ಲ, ಕೋಪ ಮಾಡಿಕೊಂಡವರಲ್ಲ. ಮುಖದ ಮೇಲೆ ಸದಾ ಮುಗುಳುನಗೆ. ಅಪರೂಪದ ಮನುಷ್ಯರಲ್ಲಿ ಒಬ್ಬ ಎಂದಿದ್ದಾರೆ.

    https://www.facebook.com/talagavar.seetaram/posts/10223678134520836

    ಜೊತೆಗೆ ನಿನ್ನೆಯ ದಿನವೇ ಅವರ ಹುಟ್ಟುಹಬ್ಬ. ನಮ್ಮ ಸಂಸ್ಥೆಯಲ್ಲಿ ಶುರುವಾಗಲಿರುವ ಹೊಸ ಧಾರಾವಾಹಿಯಲ್ಲೂ ಇವರಿಗೆ ಒಂದು ಮುಖ್ಯ ಪಾತ್ರ ಕೊಡಬೇಕೆಂದು ತೀರ್ಮಾನ ವಾಗಿತ್ತು. ಅಷ್ಟರಲ್ಲಿ ಈ ಹೃದಯಾಘಾತ ಬಹಳ ಕೆಟ್ಟ ಕಾಲ. ತೀರಾ ಬೇಸರ ನೋವು ಆಗುತ್ತಿದೆ. ಹೋಗಿ ಬನ್ನಿ ಸಿದ್ಧರಾಜ್ ಕಲ್ಯಾಣಕರ್ ಎಂದು ಬರೆದುಕೊಂಡಿದ್ದಾರೆ.

  • ಪ್ರೀತಿಸುವ ನಾಟಕವಾಡಿ ಸುಲಿಗೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್

    ಪ್ರೀತಿಸುವ ನಾಟಕವಾಡಿ ಸುಲಿಗೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್

    ಬೆಂಗಳೂರು: ಕೊರೊನಾ ಸಮಯದಲ್ಲಿ ಪ್ರೀತಿ ನಾಟಕವಾಡಿ ಸುಲಿಗೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಸದಸ್ಯರನ್ನು ಬಂಧಿಸುವಲ್ಲಿ ಆನೇಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬಂಧಿತರನ್ನು ಮುನೇಂದ್ರ, ನಾಗೇಶ್, ನವೀನ್, ಶಂಶಾಕ್, ಮಹೇಂದ್ರ ಹಾಗೂ ಅಣ್ಣಮ್ಮ ಎಂದು ಗುರುತಿಸಲಾಗಿದೆ. ಈ ಗ್ಯಾಂಗ್ ಯುವತಿಯಿಂದ ಕರೆ ಮಾಡಿಸಿ ಯುವಕರನ್ನು ಯಾರು ಇಲ್ಲದ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ನಂತರ ಅವರನ್ನು ಹೆದರಿಸಿ ಅವರ ಹತ್ತಿರ ಇದ್ದ ಹಣವನ್ನು ಕಸಿದುಕೊಂಡು ಕಳುಹಿಸುತ್ತಿತ್ತು.

    ಇತ್ತೀಚೆಗೆ ಈ ಗ್ಯಾಂಗ್ ಆನೇಕಲ್‍ನ ಕಿರಣ್‍ಗೆ ಯುವತಿಯಿಂದ ಕರೆ ಮಾಡಿಸಿ. ಪ್ರೀತಿ ಪ್ರೇಮದ ನಾಟಕವಾಡಿಸಿದ್ದಾರೆ. ನಂತರ ಒಂದು ದಿನ ಯುವತಿ ಕಾಲ್ ಮಾಡಿ ಆತನನ್ನು ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡಿದ್ದಾಳೆ. ಅಲ್ಲಿ ಈ ಗ್ಯಾಂಗ್‍ನ ಯುವಕರು ಕಿರಣ್‍ನನ್ನು ಹೆದರಿಸಿ ಸುಲಿಗೆ ಮಾಡಿದ್ದರು. ಈ ವಿಚಾರವಾಗಿ ಕಿರಣ್ ಆನೇಕಲ್ ಪೊಲೀಸರಿಗೆ ದೂರು ನೀಡಿದ್ದು, ಈ ದೂರಿನ ಮೇರೆಗೆ ಕಾರ್ಯಾಚರಣೆಗೆ ಇಳಿದ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ.

  • ಸಂಕಷ್ಟದಲ್ಲಿರೋರಿಗೆ 1,610 ಕೋಟಿಯ ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ

    ಸಂಕಷ್ಟದಲ್ಲಿರೋರಿಗೆ 1,610 ಕೋಟಿಯ ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ

    – ಕ್ಷೌರಿಕ, ಆಟೋ, ಟ್ಯಾಕ್ಸಿ ಚಾಲಕರಿಗೆ 5 ಸಾವಿರ ರೂ
    – ಒಂದು ಹೆಕ್ಟೇರ್ ಗೆ 25 ಸಾವಿರ ರೂ.
    – ಕೈ ಮಗ್ಗ ನೇಕಾರರಿಗೆ ವರ್ಷಕ್ಕೆ 2 ಸಾವಿರ

    ಬೆಂಗಳೂರು: ಲಾಕ್‍ಡೌನ್‍ನಿಂದಾಗಿ ಸಂಕಷ್ಟದಲ್ಲಿರೋರಿಗಾಗಿ ಸಿಎಂ ಯಡಿಯೂರಪ್ಪ ಸರ್ಕಾರ 1,610 ಕೋಟಿಯ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.

    ಲಾಕ್‍ಡೌನ್ ನಿಂದಾಗಿ ಸಭೆ ಸಮಾರಂಭ, ಮದುವೆ ನಡೆಸದ ಇರೋದರಿಂದ ಹೂವು ಬೆಳೆದವರು ನಷ್ಟ ಅನುಭವಿಸಿದ್ದಾರೆ 11,687 ಹೆಕ್ಟೆರ್ ವಿಸ್ತೀರ್ಣದಲ್ಲಿ ಬೆಳೆದ ಹೂ ಮಾರಾಟ ಆಗದೆ ರೈತರಿಗೆ ನಷ್ಟವಾಗಿದೆ. ಹಾಗಾಗಿ ಹೂ ಬೆಳೆಗಾರರಿಗೆ ಒಂದು ಹೆಕ್ಟೇರ್ ಗೆ 25 ಸಾವಿರ ರೂ. ಪರಿಹಾರ ನೀಡಲಾಗುತ್ತದೆ. ಒಂದು ತಿಂಗಳಿನಿಂದ ಕೆಲಸವಿಲ್ಲದೇ ಕುಳಿತಿರುವ ಕ್ಷೌರಿಕ, ಆಟೋ, ಟ್ಯಾಕ್ಸಿ ಚಾಲಕರು, ಅಗಸರಿಗೆ 5 ಸಾವಿರ ರೂ. ಪರಿಹಾರ ಸರ್ಕಾರ ಘೋಷಣೆ ಮಾಡಿದೆ. ಅಂದಾಜು 60,000 ಅಗಸರು, 2,30,000 ಕ್ಷೌರಿಕರು, ಆಟೋ ಹಾಗೂ ಟ್ಯಾಕ್ಸಿ ಚಾಲಕರು ಒಟ್ಟು 7,75000 ಜನ ಇದ್ದಾರೆ .

    ಸಣ್ಣ ಹಾಗೂ ಮಧ್ಯಮ ವರ್ಗದ ಕೈಗಾರಿಕೆ ಹಾಗೂ ಉದ್ಯಮಗಳ ವಿದ್ಯುತ್ ಬಿಲ್ಲಿನ ಫಿಕ್ಸೆಡ್ ಚಾರ್ಜ್ ನಲ್ಲಿ 2 ತಿಂಗಳ ಬಿಲ್ ಮನ್ನಾ ಮಾಡಲಾಗಿದೆ. ಬೃಹತ್ ಕೈಗಾರಿಕೆಗಳ ವಿದ್ಯುತ್ ಬಿಲ್ ಪಾವತಿ ಬಡ್ಡಿ ರಹಿತವಾಗಿ 2 ತಿಂಗಳಿಗೆ ಮುಂದೂಡಲಾಗಿದೆ. ನೇಕಾರರಿಗೆ 109 ಕೋಟಿ ಸಾಲಮನ್ನ ಘೋಷಿಸಲಾಗಿದೆ. ಮೊದಲು 29 ಕೋಟಿ ಮನ್ನ ಮಾಡಲಾಗಿತ್ತು ಉಳಿದ ಹಣವನ್ನ ಸರ್ಕಾರ ಕೂಡಲೇ ಬಿಡುಗಡೆ ಮಾಡಲಾಗುತ್ತದೆ.

    1 ಲಕ್ಷದ ಒಳಗಿನ ಸಾಲ ಕಟ್ಟಿದ ನೇಕಾರರಿಗೆ ಕಟ್ಟಿದ ಹಣವನ್ನ ವಾಪಸ್ ಕೊಡಲು ಸರ್ಕಾರ ತೀರ್ಮಾನಿಸಿದೆ. ನೇಕಾರ್ ಸಮ್ಮಾನ್ ಯೋಜನೆ ಅಡಿಯಲ್ಲಿ 54 ಸಾವಿರ ಕೈ ಮಗ್ಗ ನೇಕಾರರಿಗೆ ವರ್ಷಕ್ಕೆ 2 ಸಾವಿರ ಹಣ ಅವರ ಖಾತೆಗೆ ಹಾಕಲಾಗುವುದು.

  • ಕೊರೊನಾ ಭೀತಿ – ನಾಳೆ ಪ್ರಧಾನಿ ಜೊತೆ ಸಿಎಂ ವಿಡಿಯೋ ಸಂವಾದ

    ಕೊರೊನಾ ಭೀತಿ – ನಾಳೆ ಪ್ರಧಾನಿ ಜೊತೆ ಸಿಎಂ ವಿಡಿಯೋ ಸಂವಾದ

    ಬೆಂಗಳೂರು: ದೇಶಾದ್ಯಂತ ಕೂರೊನಾ ವೈರಸ್ ಸೋಂಕಿನ ಭೀತಿ ಹೆಚ್ಚಾಗುತ್ತಿರುವುದು ಕೇಂದ್ರ ಸರ್ಕಾರದ ನೆಮ್ಮದಿಯನ್ನು ಕೆಡಿಸಿದೆ. ಈ ನಿಟ್ಟಿನಲ್ಲಿ ಕೇಂದ್ರವು ಹಲವು ಗಂಭೀರ ಮತ್ತು ಪರಿಣಾಮಕಾರಿ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ರಾಜ್ಯಗಳ ಮಟ್ಟದಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಪಡೆಯಲು ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಮುಂದಾಗಿದ್ದಾರೆ.

    ನಾಳೆ ಪ್ರಧಾನಿ ಮೋದಿಯವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರುಗಳ ಜೊತೆ ವಿಡಿಯೋ ಸಂವಾದ ನಡೆಸಲಿದ್ದು, ಕೊರೊನಾ ನಿಯಂತ್ರಣ ಕುರಿತು ಮಹತ್ವದ ಚರ್ಚೆ ನಡೆಸಲಿದ್ದಾರೆ. ನಾಳೆ ಸಂಜೆ 4 ಗಂಟೆಗೆ ಪ್ರಧಾನಮಂತ್ರಿಗಳಿಂದ ದೇಶದ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರುಗಳೊಂದಿಗೆ ಏಕಕಾಲದಲ್ಲಿ ವಿಡಿಯೋ ಕಾನ್ಫರೆನ್ಸ್ ನಡೆಯಲಿದೆ.

    ಮುಖ್ಯಮಂತ್ರಿ ಯಡಿಯೂರಪ್ಪ ಸಹ ಪ್ರಧಾನಿಗಳ ವಿಡಿಯೋ ಸಂವಾದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಗೂ ಮುನ್ನ ಸಿಎಂ ಯಡಿಯೂರಪ್ಪ ಅವರು ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹಾಗೂ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸಭೆ ಕರೆದಿದ್ದಾರೆ. ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸಚಿವರು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ನಾಳೆ ಮಧ್ಯಾಹ್ನ 3.30ಕ್ಕೆ ಸಿಎಂ ಪೂರ್ವಭಾವಿ ಸಭೆ ನಡೆಸಲಿದ್ದಾರೆ.

    ಈ ಸಭೆಯಲ್ಲಿ ರಾಜ್ಯದಲ್ಲಿ ಕೊರೊನಾ ಪೀಡಿತರು, ಶಂಕಿತರು, ನಿಯಂತ್ರಣ ಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಿಎಂ ಪಡೆಯಲಿದ್ದಾರೆ. ನಂತರ ಸಂಜೆ 4 ಗಂಟೆಗೆ ಪ್ರಧಾನಮಂತ್ರಿಗಳು ನಡೆಸುವ ವಿಡಿಯೋ ಕಾನ್ಫರೆನ್ಸ್ ನಲ್ಲಿ ಸಿಎಂ ಪಾಲ್ಗೊಳ್ಳಲಿದ್ದಾರೆ. ಪ್ರಧಾನಿಗಳು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಯಾವ ಸಲಹೆ-ಸೂಚನೆಗಳನ್ನು ಕೊಡುತ್ತಾರೆ ಕಾದು ನೋಡಬೇಕಿದೆ.