ಚೆನ್ನೈ: ತಮಿಳುನಾಡಿನಿಂದ (Tamil Nadu) ಬೆಂಗಳೂರಿಗೆ ಬರುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ, ಕಂದಕಕ್ಕೆ ಉರುಳಿದ ಪರಿಣಾಮ 40 ಮಂದಿ ಗಾಯಗೊಂಡಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಹೊಸೂರು (Hosur) ಬಳಿ ನಡೆದಿದೆ.
ಮಧುರೈನಿಂದ ಬೆಂಗಳೂರಿಗೆ (Bengaluru) ಬರುತ್ತಿದ್ದ ಬಸ್ ಇದಾಗಿತ್ತು. ಬಸ್‌ನಲ್ಲಿದ್ದ ಬಹುತೇಕ ಮಂದಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಅತಿ ವೇಗವಾಗಿ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಬಸ್ ಕರುಕಂಪಟ್ಟಿ ಬಳಿ ರಸ್ತೆ ಬದಿಯ ಕಂದಕಕ್ಕೆ ಉರುಳಿದ ಬಿದ್ದಿದೆ. ಇದನ್ನೂ ಓದಿ: ಮೋಟೆಬೆನ್ನೂರಿನಲ್ಲಿ ಖಾಸಗಿ ಬಸ್ ಪಲ್ಟಿ – ಇಬ್ಬರು ಸಾವು, 6 ಜನರಿಗೆ ಗಂಭೀರ ಗಾಯ
ಪರಿಣಾಮ ಬಸ್‌ನಲ್ಲಿದ್ದ 40 ಮಂದಿ ಗಾಯಗೊಂಡಿದ್ದು, ಮೂವರು ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನ ಹೊಸೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಉತ್ತನಪಲ್ಲಿ ಪೊಲೀಸ್ (Uttanapalli Police) ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಬೆಂಗಳೂರು: ಕೆ.ಆರ್ ಪುರದಿಂದ ಮೇಖ್ರಿ ಸರ್ಕಲ್‌ಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳ ವಿಸ್ತರಿತ ಮೇಲ್ಸೆತುವೆಯನ್ನು (Hebbal Flyover) ಸೋಮವಾರ (ಇಂದು) ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಉದ್ಘಾಟಿಸಿದರು.
700 ಮೀ. ಉದ್ದದ ಕೆ.ಆರ್ ಪುರನಿಂದ ಮೇಖ್ರಿ ಸರ್ಕಲ್‌ಗೆ ಸಂಪರ್ಕ ಕಲ್ಪಿಸುವ ಈ ಫ್ಲೈಓವರ್ ಆರಂಭ ಸ್ಥಳದಲ್ಲಿ ಡಿಕೆಶಿ ಉದ್ಘಾಟಸಿದರು. ಫ್ಲೈಓವರ್ ಅಂತ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿಸದ್ದಾರೆ. ಬಳಿಕ ಹೊಸ ಮೇಲ್ಸೇತುವೆಯಲ್ಲಿ ಡಿಕೆಶಿ ಬೈಕ್ ರೈಡ್ ಮಾಡಿ ಖುಷಿಪಟ್ಟರು. ಇದನ್ನೂ ಓದಿ: ಸಂಜೆಯೊಳಗೆ ಮಹೇಶ್ ಶೆಟ್ಟಿ ತಿಮರೋಡಿ ಅರೆಸ್ಟ್ ಮಾಡಲು ಪರಮೇಶ್ವರ್ ಸೂಚನೆ
ಇತ್ತೀಚೆಗೆ ಡಿಸಿಎಂ ಬೈಕ್ ಓಡಿಸಿ ಫ್ಲೈಓವರ್ ವೀಕ್ಷಣೆ ಮಾಡಿದ್ದರು, ಈ ವೇಳೆ ದಂಡ ಬಾಕಿಯಿರುವ ಬೈಕ್ ಓಡಿಸಿರೋದಾಗಿ ಬಿಜೆಪಿ ಕಾಲೆಳೆದಿತ್ತು. ಹಾಗಾಗಿ ಕಳೆದ ಬಾರಿಯ ಎಡವಟ್ಟು ಮರು ಕಳಿಸದಂತೆ ಎಚ್ಚರವಹಿಸಿ, ತನ್ನ ಪ್ರೀತಿಯ Yezdi ಬೈಕ್ ತರಿಸಿಕೊಂಡು, ಹೊಸ ಹೆಲ್ಮಟ್ ಖರೀದಿ ಮಾಡಿ ಬೈಕ್ ಓಡಿಸಿದರು. ಇದನ್ನೂ ಓದಿ: Video Viral | ಯೋಧನನ್ನ ಕಂಬಕ್ಕೆ ಕಟ್ಟಿ ಟೋಲ್ ಪ್ಲಾಜಾ ಸಿಬ್ಬಂದಿಯಿಂದ ಥಳಿತ; ನಾಲ್ವರು ಅರೆಸ್ಟ್
ನಂತರ ಮಾತನಾಡಿ, ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡಲು ಈ ಫ್ಲೈಓವರ್ ನಿರ್ಮಾಣ ಮಾಡಲಾಗಿದೆ. ಈ ಹಿಂದೆ ಪ್ಲಾನ್ ಆಗಿತ್ತು. ಕಾರ್ಯರೂಪಕ್ಕೆ ಬಂದಿರಲಿಲ್ಲ. ನಾನು ಬಂದ ಮೇಲೆ ಹಣ ಕೊಟ್ಟು, ಅನುಮತಿ ನೀಡಿದೆ. 80 ಕೋಟಿ ರೂ. ವೆಚ್ಚದಲ್ಲಿ ಈ ಫ್ಲೈಓವರ್ ಮಾಡಲಾಗಿದೆ. ಇನ್ನೊಂದು ಜಂಕ್ಷನ್ ರೋಡ್ ಮಾಡಲಾಗುತ್ತದೆ. 6 ಲೇನ್ ನವೆಂಬರ್ ಒಳಗೆ ಆಗುತ್ತದೆ. 3 ತಿಂಗಳಲ್ಲಿ ಇನ್ನೊಂದು ಲೂಪ್ ಬರಲಿದೆ. ಎಸ್ಟಿಮ್ ಮಾಲ್‌ನಿಂದ ಒಂದೂವರೆ ಕಿ.ಮೀ ತನಕ ಟನಲ್ ಮಾಡಲಾಗುತ್ತದೆ. ಎಮೆರ್ಜೆನ್ಸಿಗೆ ಇದರ ಬಳಕೆಯಾಗುತ್ತದೆ. ಏರ್ಪೋರ್ಟ್ನಿಂದ ಬರುವವರಿಗೆ ಅನುಕೂಲವಾಗಲಿದೆ. ಟನಲ್ ಯೋಜನೆಗೆ ಹೊಸ ಟೆಂಡರ್ ಸದ್ಯದಲ್ಲಿಯೇ ಶುರುವಾಗುತ್ತದೆ ಹೇಳಿದ್ದಾರೆ.
ಉದ್ಘಾಟನೆ ವೇಳೆ ಸಚಿವ ಕೃಷ್ಣ ಬೈರೇಗೌಡ, ಬೈರತಿ ಸುರೇಶ್, ಬಿ.ಡಿ.ಎ ಅಧ್ಯಕ್ಷ, ಶಾಸಕ ಎನ್ ಎ ಹ್ಯಾರಿಸ್, ಮಾಜಿ ಸಂಸದೆ, ನಟಿ ರಮ್ಯಾ, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಬಿ.ಡಿ.ಎ. ಕಮಿಷನರ್ ಮಣಿವಣ್ಣನ್, ಬಿಬಿಎಂಪಿ ಮುಖ್ಯ ಆಯುಕ್ತ ಡಾ ಮಹೇಶ್ವರರಾವ್, ಡಿಸಿಎಂ ಕಾರ್ಯದರ್ಶಿ ರಾಜೇಂದ್ರ ಚೋಳನ್ ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರು: ಮೇ ಬಳಿಕ ಕರ್ನಾಟಕದಲ್ಲಿ (Karnataka) ಲೋಕಲ್ ಫೈಟ್ ಜೋರಾಗಲಿದೆ. ಆ ಚುನಾವಣೆಗೂ (Election) ಹೈಕಮಾಂಡ್‌ನಿಂದ ಜೋಡೆತ್ತುಗಳ ಸೂತ್ರ ರೆಡಿಯಾದರೆ, ಸಿದ್ದು ಟೀಂನಿಂದ ಮಾಸ್ ಪ್ಲಸ್ ಅಹಿಂದ ಕ್ಲೈಮ್ ತಂತ್ರ ಇದೆ ಎನ್ನಲಾಗ್ತಿದೆ.
ಮೇ ಒಳಗೆ ಜಿ.ಪಂ, ತಾ.ಪಂ ಚುನಾವಣೆ ನಡೆಸುವ ಸಂಬಂಧ ರಾಜ್ಯ ಸರ್ಕಾರ ಸುಳಿವು ನೀಡಿದೆ. ಲೋಕಲ್ ಎಲೆಕ್ಷನ್ ಮುಗಿಯುವ ತನಕ ಬಣ ಬಡಿದಾಡ ಸೈಲೆಂಟ್ ಆಗುವ ಸಾಧ್ಯತೆಯೂ ಇದೆ. ಈ ನಡುವೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿಯುವ ತನಕ ಯಾವ ಬದಲಾವಣೆಗಳು ಇಲ್ಲ ಎಂದು ಹೈಕಮಾಂಡ್ ಸಂದೇಶ ಕಳುಹಿಸುವ ಸಾಧ್ಯತೆ. ಸಿಎಂ, ಡಿಸಿಎಂ ನೇತೃತ್ವದಲ್ಲಿ ಚುನಾವಣೆ ನಡೆಯಲಿ, ಆ ಬಳಿಕ ಬದಲಾವಣೆಗಳ ಬಗ್ಗೆ ಮಾತಾಡೋಣ ಎನ್ನಬಹುದು. ಇದನ್ನೂ ಓದಿ : ಮುಂದಿನ 5-6 ತಿಂಗಳಲ್ಲಿ ಮಹಿಳೆರಿಗೆ ಕ್ಯಾನ್ಸರ್ ಲಸಿಕೆ ಲಭ್ಯ: ಕೇಂದ್ರ ಸಚಿವ ಜಾಧವ್
ಆದರೆ ಲೋಕಲ್ ಬಾಡಿ ಚುನಾವಣೆಯಲ್ಲಿ ಸಿದ್ದರಾಮಯ್ಯ ಮಾಸ್ ಲೀಡರ್, ಅವರದ್ದೇ ನಾಯಕತ್ವ ಎಂಬುದನ್ನು ಬಿಂಬಿಸಲು ಪ್ಲ್ಯಾನ್ ಸಿದ್ಧವಾಗಿದೆ ಅಂತೆ. ಈ ಸಲ ಸಿದ್ದರಾಮಯ್ಯ ಅವರ ಕಾರಣದಿಂದಲೇ ಲೋಕಲ್ ಎಲೆಕ್ಷನ್ ಗೆಲುವು ಎಂಬುದೇ ಸಿದ್ದು ಟೀಂ ತಂತ್ರ ಇದೆ ಎಂಬ ಚರ್ಚೆ ಜೋರಾಗಿದೆ. ಮುಂದೆ ಪವರ್ ಶೇರ್ ಪ್ರಸ್ತಾಪ ಬಂದರೆ ಲೋಕಲ್ ಎಲೆಕ್ಷನ್ ಅಸ್ತ್ರ ಪ್ರಯೋಗಿಸಿ ಸೇಫ್ ಗೇಮ್‌ಗೆ ಪ್ಲ್ಯಾನ್ ಅಂತೆ. ಇದಕ್ಕೆ ಹೈಕಮಾಂಡ್ ಹೇಗೆ ರಿಯಾಕ್ಟ್ ಮಾಡುತ್ತದೆ ಕಾದುನೋಡಬೇಕಿದೆ. ಇದನ್ನೂ ಓದಿ : ನ್ಯಾಟ್ ಸ್ಕೀವರ್ ಸ್ಫೋಟಕ ಫಿಫ್ಟಿ – ಗುಜರಾತ್ ವಿರುದ್ಧ ಮುಂಬೈಗೆ 5 ವಿಕೆಟ್‌ಗಳ ಭರ್ಜರಿ ಜಯ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು, ಹಿರಿಯ ಮುತ್ಸದ್ಧಿ ರಾಜಕಾರಣಿ ಎಸ್.ಎಂ ಕೃಷ್ಣಾ ಅವರ ಅಂತಿಮ ದರ್ಶನ ಪಡೆದರು. ಬೆಂಗಳೂರಿನ ಸದಾಶಿವ ನಗರದ ಎಸ್‌ಎಂ ಕೃಷ್ಣ (SM Krishna) ಅವರ ನಿವಾಸಕ್ಕೆ ಆಗಮಿಸಿ, ಅಂತಿಮ ನಮನ ಸಲ್ಲಿಸಿದರು.
ಮುಖ್ಯಮಂತ್ರಿ @siddaramaiah ಅವರು ಇಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ವಿದೇಶಾಂಗ ಸಚಿವರಾಗಿದ್ದ ಎಸ್.ಎಂ. ಕೃಷ್ಣರವರ ಪ್ರಾರ್ಥಿವ ಶರೀರದ ದರ್ಶನ ಪಡೆದು, ಅಂತಿಮ ನಮನ ಸಲ್ಲಿಸಿ, ಕುಟುಂಬದವರಿಗೆ ಸಾಂತ್ವನ ಹೇಳಿದರು. pic.twitter.com/bcKb5ikvNd
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಸ್‌ಎಂಕೆ ಅವರು ಕರ್ನಾಟಕ ಹಾಗೂ ದೇಶದ ರಾಜಕಾರಣದಲ್ಲಿ ದೀರ್ಘಕಾಲ ತೊಡಗಿಸಿಕೊಂಡಿದ್ದರು. ಆರು ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿದ್ದರು. ವಿಧಾನಸಭೆ, ಪರಿಷತ್, ಲೋಕಸಭೆ, ರಾಜ್ಯಸಭೆಯಲ್ಲಿ ಸದಸ್ಯರಾಗಿದ್ದರು. ಐದು ವರ್ಷಗಳ ಕಾಲ ರಾಜ್ಯದ ಸಿಎಂ ಆಗಿದ್ದರು. ಬೆಂಗಳೂರನ್ನು ಸಿಂಗಾಪುರ ಮಾಡಬೇಕೆನ್ನುವ ಕನಸನ್ನು ಕಂಡಿದ್ದರು. ಐಟಿ ಬೆಳವಣಿಗೆ ಅಪಾರವಾದ ಕೊಡಗೆ ಕೊಟ್ಟಿದ್ದಾರೆ. ಬೆಂಗಳೂರು ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಪಡೆದುಕೊಂಡಿರುವುದರಲ್ಲಿ ಎಸ್‌ಎಂಕೆ ಪಾತ್ರ ದೊಡ್ಡದಿದೆ ಎಂದು ಸ್ಮರಿಸಿದರು.ಇದನ್ನೂ ಓದಿ: ರಾಜ್ಯದ ರಾಜಕಾರಣದಲ್ಲಿ ಬದಲಾವಣೆ ತಂದವರು ಎಸ್‌ಎಂಕೆ: ಅಭಿಷೇಕ್ ಅಂಬರೀಶ್
ಸಿಎಂ ಆಗಿದ್ದ ಅವಧಿಯಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದರು. ಬರಗಾಲ, ಡಾ.ರಾಜ್ ಕುಮಾರ್ ಕಿಡ್ನಾಪ್, ಕಾವೇರಿ ವಿವಾದ ಹೀಗೆ ಹಲವು ಸಮಸ್ಯೆಗಳನ್ನು ಜಾಣ್ಮೆಯಿಂದ ನಿರ್ವಹಿಸಿದ್ದರು. ಮಹಾರಾಷ್ಟ್ರದ ರಾಜ್ಯಪಾಲರಾಗಿ ಕೆಲಸ ಮಾಡಿದ್ದರು ಎಂದು ಸ್ಮರಿಸಿದರು.
Saddened by the demise of former Chief Minister Shri S.M. Krishna. His unparalleled contributions as a Union Minister, Chief Minister, and leader have left an indelible mark. Karnataka will forever remain indebted to him, especially for his visionary leadership in transforming… pic.twitter.com/r2N3tt9ngA
ನಾನು ಕಾಂಗ್ರೆಸ್ ಸೇರುವ ಮೊದಲು ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಸೇರುವ ವಿಚಾರ ತಿಳಿಸಿದ್ದೆನು. ನೀವು ಕಾಂಗ್ರೆಸ್ ಸೇರುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದಿದ್ದರು. ಸಜ್ಜನ ರಾಜಕಾರಣ, ಎಸ್‌ಎಂಕೆಯಂತಹ ಒಳ್ಳೆಯ ವಾಗ್ಮಿಯನ್ನು ಕಳೆದುಕೊಂಡಿದ್ದು ರಾಜಕೀಯ ಕ್ಷೇತ್ರಕ್ಕೆ ನಷ್ಟವಾಗಿದೆ. ಅವರ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ಸಾವಿನ ದು:ಖ ಭರಿಸುವ ಶಕ್ತಿ ನೀಡಲಿ ಎಂದು ಪಾರ್ಥಿಸಿಕೊಂಡರು.ಇದನ್ನೂ ಓದಿ: ಪ್ರಧಾನಿಯಾಗುವ ಅವಕಾಶವಿದೆ ಅಂದಿದ್ದಕ್ಕೆ ನಕ್ಕಿದ್ದರು – ಮಾಜಿ ಸಚಿವ ಎಂ.ಸಿ ನಾಣಯ್ಯ
ಬೆಂಗಳೂರು: ಮುಡಾ ಕೇಸ್‌ನಲ್ಲಿ (MUDA Scam) ಅಕ್ರಮ ಆಗಿರುವುದು ನಿಜ ಎಂದು ಲೋಕಾಯುಕ್ತಕ್ಕೆ ಇಡಿ ಪತ್ರ ಬರೆದಿರುವುದು ದುರುದ್ದೇಶದಿಂದ ಕೂಡಿದೆ ಎಂದು ಸಚಿವ ಡಾ.ಎಂ.ಸಿ ಸುಧಾಕರ್ (MC Sudhakar) ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಇಡಿ ಯಾರು? ದೇಶದಲ್ಲಿ ಎಲ್ಲಾ ಕಡೆ ಹೀಗೆ ಇಡಿ ತನಿಖೆ ಮಾಡ್ತಿದೆಯಾ? ತನಿಖೆ ಪ್ರಾರಂಭ ಮಾಡಿ ಯರ‍್ಯಾರು ಬಿಜೆಪಿಗೆ ಸೇರುತ್ತಾರೊ? ಅವರ ಮೇಲಿನ ತನಿಖೆ ಪ್ರಗತಿ ಯಾವ ರೀತಿ ಆಗುತ್ತಿದೆ? ಇಡಿ ವರ್ತನೆ ದುರುದ್ದೇಶದಿಂದ ಕೂಡಿದೆ. ಇಡಿ ಅವರು ಮುಡಾ ಕೇಸ್‌ನಲ್ಲಿ ಬಂದಿರುವುದೇ ದುರುದ್ದೇಶ ಎಂದು ಕಿರಿಕಾರಿದ್ದಾರೆ.ಇದನ್ನೂ ಓದಿ: ಸಿಎಂ ಹೇಳಿದ್ದೇ ಫೈನಲ್, ಯಾವುದೇ ತಕರಾರು ಇಲ್ಲ: ಡಿಕೆಶಿ
ಬಿಜೆಪಿಯವರಿಗೆ (BJP) ಮುಡಾದಲ್ಲಿ ಹಿಂದೆ ಏನಾಗಿತ್ತು ಎಂದು ಗೊತ್ತಿರಲಿಲ್ಲವಾ? ಬಿಜೆಪಿ, ಜೆಡಿಎಸ್ ಶಾಸಕರು ಇದರಲ್ಲಿ ಭಾಗಿಯಾಗಿರಲಿಲ್ವಾ? ಮುಡಾ ಕೇಸ್ ಇಂದಿನದಾ? ಸಿದ್ದರಾಮಯ್ಯರ ಪ್ರಕರಣಕ್ಕೆ ಜೋಡಣೆ ಮಾಡಲು ಇಡಿ ಬಂದಿದೆ. ಇಡಿ ಅವರಿಗೆ ಲೋಕಾಯುಕ್ತದವರು ವರದಿ ಕೊಡಿ ಎಂದು ಕೇಳಿದ್ದರಾ? ಲೋಕಾಯುಕ್ತ ತನಿಖೆ ಮಾಡಿ ಎಂದು ಕೋರ್ಟ್ ಹೇಳಿದೆ. ಲೋಕಾಯುಕ್ತವೇ ಒಂದು ತನಿಖಾ ಸಂಸ್ಥೆ. ಲೋಕಾಯುಕ್ತದವರು ಅವರ ತನಿಖೆ ನಿಷ್ಪಕ್ಷಪಾತವಾಗಿ ಮಾಡಿ, ವರದಿ ಕೊಡಬೇಕು. ನಮ್ಮ ಸರ್ಕಾರದ ಮೇಲೆ ಪ್ರತ್ಯೇಕವಾಗಿ ಇಡಿಯವರು ತನಿಖೆ ಮಾಡಿ ಗೂಬೆ ಕೂರಿಸಲು ಕೇಂದ್ರ ಸರ್ಕಾರ, ಬಿಜೆಪಿ-ಜೆಡಿಎಸ್ ಅವರೆಲ್ಲ ಸೇರಿ ಇದನ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇಡಿ ಅವರು ಪ್ರತ್ಯೇಕವಾಗಿ ತನಿಖೆ ಮಾಡಲಿ ನಾವೇನು ಬೇಡ ಎನ್ನುವುದಿಲ್ಲ. ಇಡಿ ಅವರು ನ್ಯಾಯಾಲಯದ ಮುಂದೆ ಸಾಕ್ಷಿ ಕೊಡಲಿ. 3 ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ಹಿನ್ನೆಲೆ ವಿಪಕ್ಷದವರು ಹತಾಶೆಯಾಗಿದ್ದಾರೆ. ಜನರ ಗಮನ ಬೇರೆಡೆಗೆ ಸೆಳೆಯಲು ಇಡಿ ಅವರು ಪತ್ರ ಬರೆದಿದ್ದಾರೆ. ಇಡಿ ಯಾಕೆ ಲೋಕಾಯುಕ್ತಗೆ ಪತ್ರ ಬರೆಯಬೇಕು. ಲೋಕಾಯುಕ್ತದವರು ಅವರ ಕೆಲಸ ಅವರು ಮಾಡುತ್ತಾರೆ. ಇಡಿ ಅವರು ನಿಮ್ಮ ಕೆಲಸ ನೀವು ಮಾಡಿ ಎಂದಿದ್ದಾರೆ.
ಇಡಿ ಅವರು ಯಡಿಯೂರಪ್ಪ, ಬೊಮ್ಮಾಯಿ, ಕುಮಾರಸ್ವಾಮಿ ಅವರನ್ನು ಬಿಟ್ಟು ಬಿಡಿ. ದೇವೇಗೌಡ ಕುಟುಂಬದವರು 48 ಸೈಟ್ ತೆಗೆದುಕೊಂಡಿರುವುದನ್ನ ಬಿಟ್ಟು ಬಿಡಿ. ನಿಮಗೆ ಯಾವುದು ಬೇಕೋ ಅದನ್ನು ಆಯ್ಕೆ ಮಾಡಿಕೊಂಡು ಅದರ ಬಗ್ಗೆ ಮಾತ್ರ ನೀವು ಮಾತಾಡಿ. ದೇಶದ ನ್ಯಾಯಾಲಯದ ಮೇಲೆ ನಮಗೆ ನಂಬಿಕೆ ಇದೆ. ರಾಜಕೀಯ ದುರುದ್ದೇಶದಿಂದ ಇಡಿ ಹೀಗೆ ಮಾಡುತ್ತಿದೆ. ಇದನ್ನು ನಾವು ಒಪ್ಪುವುದಿಲ್ಲ. ನಮ್ಮ ಲೀಗಲ್ ಟೀಂ ಇದನ್ನು ನೋಡುತ್ತದೆ. ಜನರ ಗಮನ ಬೇರೆಡೆಗೆ ಸೆಳೆಯಲು ಹೀಗೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಅವರು ವಕ್ಫ್ ವಿಚಾರ ತಂದರು ಅದರಲ್ಲಿ ಯಶಸ್ವಿಯಾಗಲಿಲ್ಲ. ಅವರಲ್ಲಿಯೇ ಕಿತ್ತಾಟ ಶುರುವಾಗಿದೆ. ಅವರಲ್ಲಿಯೇ ಮನೆಯೊಂದು ಮೂರು ಬಾಗಿಲು ಆಗಿದೆ. ಅವರ ಗಾಯಕ್ಕೆ ಔಷಧಿ ಹಾಕಿಕೊಳ್ಳಲು ಆಗುತ್ತಿಲ್ಲ. ಬಿಜೆಪಿ ಒಡಕಿನ ಚರ್ಚೆ ಆಗುವುದನ್ನು ದಾರಿ ತಪ್ಪಿಸಲು ಇಡಿ ಹೀಗೆ ಮಾಡಿದೆ. ಲೋಕಾಯುಕ್ತ ಮೇಲೆ ಇಡಿ ಯಾಕೆ ಪ್ರಭಾವ ಬೀರುತ್ತದೆ? ಲೋಕಾಯುಕ್ತ ಸ್ವತಂತ್ರ ಸಂಸ್ಥೆ ನೀವು ಯಾಕೆ ಪ್ರಭಾವ ಬೀರುತ್ತೀರಾ? ಇಡಿ ಅವರು ನಿಮ್ಮ ಕೆಲಸ ನೀವು ಮಾಡಿ. ಲೋಕಾಯುಕ್ತ ವರದಿ ಕೇಳಿಲ್ಲ ನೀವು ಯಾಕೆ ವರದಿ ಕೊಟ್ಟಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಪವರ್ ಶೇರಿಂಗ್: ಡಿಕೆಶಿ, ನಮ್ಮ ನಡುವೆ ಯಾವುದೇ ಒಪ್ಪಂದ ಆಗಿಲ್ಲ: ಸಿಎಂ ಸ್ಪಷ್ಟನೆ
ಲೋಕಾಯುಕ್ತ ತನಿಖೆ (Lokayuktha Enquiry) ವಿಚಾರಣೆಗೆ ಸಿಎಂ ಹಾಜರಾದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಅವರು ಎಲ್ಲದರಲ್ಲಿಯೂ ಸಿಎಂ ಹೆಸರನ್ನು ಹಾಳು ಮಾಡಬೇಕು ಎಂದು ನೋಡುತ್ತಿದ್ದಾರೆ. ಅದಕ್ಕಾಗಿಯೇ ಸಿಎಂ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಕೇಂದ್ರದ ಏಜೆನ್ಸಿಗಳನ್ನು ಬಿಟ್ಟು ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಮಾಧ್ಯಮದವರು, ರಾಜಕಾರಣಿಗಳು, ಎನ್‌ಜಿಓ ಯಾರನ್ನು ಬಿಜೆಪಿಯವರು ಬಿಟ್ಟಿಲ್ಲ. ಅಧಿಕಾರ ಬಳಸಿ ಹೆದರಿಕೆ, ಬೆದರಿಕೆ ಹಾಕುತ್ತಿದ್ದಾರೆ. ಇದು ಮೋದಿ ಸರ್ಕಾರ ದೇಶದ ಪರಿಸ್ಥಿತಿ ಎಂದು ಕಿಡಿಕಾರಿದರು.
ನೆಲಮಂಗಲದಿಂದ ಯಶವಂತಪುರ ಕಡೆಗೆ ಬರುತ್ತಿದ್ದ ಬಸ್‌ನ್ನು ಕಿರಣ್ ಚಲಾಯಿಸುತ್ತಿದ್ದರು. ಚಲಿಸುತ್ತಿರುವಾಗಲೇ ಎದೆ ನೋವು ಕಾಣಿಸಿಕೊಂಡಿತ್ತು. ಈ ವೇಳೆ ಬಸ್ ಅಡ್ಡಾದಿಡ್ಡಿ ನುಗುತ್ತಾ ಎದುರಾಗಿದ್ದ ಇನ್ನೊಂದು ಬಿಎಂಟಿಸಿ ಬಸ್‌ಗೆ ಡಿಕ್ಕಿ ಹೊಡೆದು ಹಾಗೆಯೇ ಮುಂದೆ ಸಾಗಿದೆ. ಕಂಡಕ್ಟರ್ ಸಮಯಪ್ರಜ್ಞೆಯಿಂದಾಗಿ ಭಾರಿ ಅನಾಹುತ ತಪ್ಪಿದೆ.
ಎದೆ ನೋವಿನಿಂದಾಗಿ ಚಾಲಕ ಕುಸಿದು ಬೀಳುತ್ತಿದ್ದಂತೆ, ಕಂಡಕ್ಟರ್ ತಕ್ಷಣ ಬ್ರೇಕ್ ಹಾಕಿ ಬಸ್ ನಿಲ್ಲಿಸಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರು ಬಸ್‌ನಲ್ಲಿದ್ದು, ಕಂಡಕ್ಟರ್ ಸಮಯಪ್ರಜ್ಞೆಯಿಂದಾಗಿ ಯಾವುದೇ ಅವಘಡ ಸಂಭವಿಸಿಲ್ಲ. ಚಾಲಕ ಕುಸಿದು ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಇದನ್ನೂ ಓದಿ: ಎರಡನೇ ಬಾರಿ ಅಧ್ಯಕ್ಷರಾಗಿ ಟ್ರಂಪ್ ಕಮಾಲ್ – ಭಾರತಕ್ಕೆ ಏನು ಲಾಭ?
ಬೆಂಗಳೂರು: ಮೈಸೂರು ರಸ್ತೆಯ ಸ್ಯಾಟಲೈಟ್ ನಿಲ್ದಾಣದಿಂದ (Satellite Bus Stand) ಪ್ರವಾಹ ಪೀಡಿತ ವಯನಾಡಿಗೆ (Wayanad LandSlide) ಬಸ್ ಸಂಚಾರ (Bus Service) ಗುರುವಾರ ರಾತ್ರಿಯಿಂದ ಆರಂಭವಾಗಿದೆ.
ಬೆಂಗಳೂರು: ಸಿದ್ದರಾಮಯ್ಯ (Siddaramaiah) ಮಂಡಿಸಿದ ದಾಖಲೆಯ 15ನೇ ಬಜೆಟ್ ರಾಜ್ಯದ 7 ಕೋಟಿ ಜನರ ಕಿವಿ ಮೇಲೆ ಹೂವು ಮುಡಿಸಿದ ಬಜೆಟ್ (Budget) ಅಂತ ಮಾಜಿ ಸಿಎಂ ಕುಮಾರಸ್ವಾಮಿ (KumaraSwamy) ಲೇವಡಿ ಮಾಡಿದ್ದಾರೆ.
ಬಜೆಟ್ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕಳೆದ ಬಿಜೆಪಿ ಅವಧಿಯಲ್ಲಿ ಬೊಮ್ಮಾಯಿ ಬಜೆಟ್ ಮಂಡಿಸುವಾಗಿ ಹೂವು ಕಿವಿಗೆ ಇಟ್ಟುಕೊಂಡು ಸಿದ್ದರಾಮಯ್ಯ ಬಂದಿದ್ದರು. ಅ ಹೂವನ್ನ 7 ಕೋಟಿ ಜನರ ಕಿವಿಗೆ ಈಗ ಮುಡಿಸಿದ್ದಾರೆ ಸಿದ್ದರಾಮಯ್ಯ. ಈ ಬಜೆಟ್ ನೋಡಿದರೆ ಇದು ನಾಳೆ ಬಾ ಸರ್ಕಾರ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಕಿಕ್ ಪ್ರಿಯರಿಗೆ ಶಾಕ್- ಅಬಕಾರಿಗೆ ಬಿಗ್ ಟಾರ್ಗೆಟ್: ಹಿಂದಿನ ಬಜೆಟ್‌ನಲ್ಲಿ ಗುರಿ ಎಷ್ಟಿತ್ತು?
ಸಿದ್ದರಾಮಯ್ಯ ಅವರ 15ನೇ ಬಜೆಟ್ ಇದು. ರಾಜ್ಯದ ಇತಿಹಾಸದಲ್ಲಿ 15 ಬಜೆಟ್ ಮಂಡಿಸೋರು ಮುಂದೆ ಬರುತ್ತಾರೋ ಗೊತ್ತಿಲ್ಲ. ಸಿದ್ದರಾಮಯ್ಯಗೆ ಅನುಭವ, ಆಡಳಿತದ ಅನುಭವ ಇದೆ. ಆದರೆ ಅವರು ಬಜೆಟ್ ಓದುವಾಗಲೇ ನನಗೆ ಅನಿಸಿದ್ದು ಅವರಲ್ಲಿ ವಿಶ್ವಾಸದ ಕೊರತೆ ಎದ್ದು ಕಾಣುತ್ತಿದೆ ಅಂತ. ಗ್ಯಾರಂಟಿಯ ಗುಂಗಿನಿಂದ ಈ ಸರ್ಕಾರ ಹೊರಗೆ ಬಂದಿಲ್ಲ. 10 ತಿಂಗಳು ಕಳೆದರೂ ಗ್ಯಾರಂಟಿ ಬಗ್ಗೆ ಕನವರಿಗೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: State Budget 2024- ರಾಜ್ಯ ಬಜೆಟ್ ನಲ್ಲಿ ಕನ್ನಡ ಮತ್ತು ಸಂಸ್ಕೃತಿ
ಸರ್ಕಾರ ಖಜಾನೆ ಖಾಲಿ ಆಗಿದೆ ಅಂತ ನಾವು ಹೇಳಿಲ್ಲ. ರಾಜ್ಯದ ಜನರು ಸಮೃದ್ಧಿಯಾಗಿ ಖಜಾನೆ ತುಂಬಿಸಿದ್ದಾರೆ. ಈ ಬಜೆಟ್ ನೋಡಿದರೆ ಜನರು ನಾವು ಎಷ್ಟು ತಪ್ಪು ಮಾಡಿದ್ದೇವೆ. ಇವರನ್ನ ಗೆಲ್ಲಿಸಿ ಅಂತ ಜನ ಅಂದುಕೊಂಡಿದ್ದಾರೆ. ಕೇಂದ್ರ ಸರ್ಕಾರ ತಮ್ಮ ಬಜೆಟ್‌ನಲ್ಲಿ ಅಮೃತಕಾಲ ಅಂದರೆ ಇದು ವಿನಾಶಕಾಲ ಅಂತ ಸಿದ್ದರಾಮಯ್ಯ ಹೇಳಿದ್ದರು. ಆದರೆ ಇವತ್ತಿನ ಸಿಎಂ ಬಜೆಟ್ ರಾಜ್ಯದ ವಿನಾಶಕಾಲಕ್ಕೆ ಬುನಾದಿ ಹಾಕಿದ್ದಾರೆ ಎಂದು ಹೆಚ್‌ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವನ್ನು ಆಯುಕ್ತಾಲಯವನ್ನಾಗಿ ಉನ್ನತೀಕರಣ – ಸಿಎಂಗೆ ಅಭಿನಂದನೆ ಸಲ್ಲಿಸಿದ ಡಾ.ಶರಣಪ್ರಕಾಶ್ ಪಾಟೀಲ್
ಕೇಂದ್ರ ಸರ್ಕಾರಕ್ಕೆ ನಿತ್ಯ ಬೈತಾರೆ. ಆದರೆ ಕೇಂದ್ರಕ್ಕೆ ಮನವಿ ಮಾಡ್ತೀವಿ ಅಂತ ಹೇಳಿದ್ದಾರೆ. ಪ್ರತಿ ಪುಟದಲ್ಲಿ ಕೇಂದ್ರವನ್ನು ಬೈದಿದ್ದಾರೆ. ಸತ್ಯ ನಿರೂಪಿಸಬೇಕಾದ್ರು ನೂರು ಬಾರಿ ಸುಳ್ಳು ಹೇಳು ಅಂತ ಗಾದೆ ಇದೆ. ಈಗ ಸಿದ್ದರಾಮಯ್ಯ ಇದನ್ನೇ ಮಾಡ್ತಿದ್ದಾರೆ. ಇಂತಹ ಸರ್ಕಾರ ಈ ದೇಶದಲ್ಲಿ ಯಾವತ್ತು ಬಂದಿರಲಿಲ್ಲ. ಸಿದ್ದರಾಮಯ್ಯಗೆ ಜೆಡಿಎಸ್, ಬಿಜೆಪಿ, ಕೇಂದ್ರದ ಮೇಲೆ ಇಷ್ಟು ದಿನ ಆಕ್ರೋಶ ಇತ್ತು ಅಂತ ಅಂದುಕೊಂಡಿದ್ದೆ. ಆದರೆ ಈ ಬಜೆಟ್ ನೋಡಿದ್ರೆ ಸಿದ್ದರಾಮಯ್ಯಗೆ 7 ಕೋಟಿ ಕನ್ನಡಿಗರ ಮೇಲೆ ಆಕ್ರೋಶ ಇದೆ ಅಂತ ಈ ಬಜೆಟ್‌ನಿಂದ ಗೊತ್ತಾಗುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲೇ ಪ್ರಥಮ- ಮೀನುಗಾರರ ರಕ್ಷಣೆಗೆ ಸಮುದ್ರ ಅಂಬುಲೆನ್ಸ್ ಖರೀದಿ: ಸಿಎಂ ಘೋಷಣೆ
ಆನೇಕಲ್: ಅತ್ತಿಬೆಲೆಯಲ್ಲಿ (Attibele) ನಡೆದ ಭೀಕರ ಪಟಾಕಿ ದುರಂತದಲ್ಲಿ (Fireworks Tragedy) ಇಲ್ಲಿಯವರೆಗೆ 14 ಮಂದಿ ಸಾವನ್ನಪ್ಪಿದ್ದಾರೆ. ಇದೀಗ ದುರ್ಘಟನೆ ನಡೆದ ಸ್ಥಳಕ್ಕೆ ಸಿಎಂ ಡಿಸಿಎಂ ಆಗಮಿಸಿ ಸ್ಥಳ ಪರಿಶೀಲಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸ್ಥಳಕ್ಕೆ ಆಗಮಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಬಳಸುವ ಶೂ ಧರಿಸಿಕೊಂಡು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸಿಎಂ, ಡಿಸಿಎಂಗೆ ಮಾಜಿ ಸಚಿವ ಎಸ್‌ಟಿ ಸೋಮಶೇಖರ್ ಸಾಥ್ ನೀಡಿದ್ದಾರೆ.
ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋದಾಮು ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಪಟಾಕಿ ಸಂಗ್ರಹಕ್ಕೆ ಲೈಸೆನ್ಸ್ ಇರಲಿಲ್ಲ. ಕೇವಲ ಬೇರೆಡೆಗೆ ರವಾನಿಸುವ ಪ್ರೊಸೆಸಿಂಗ್ ಯೂನಿಟ್‌ಗೆ ಮಾತ್ರ ಪರವಾನಗಿ ನೀಡಲಾಗಿತ್ತು. ಆದರೆ ಮಾಲೀಕ ಭಾರೀ ಪ್ರಮಾಣದ ಪಟಾಕಿ ಸಂಗ್ರಹಿಸುವ ದಾಸ್ತಾನು ಮಳಿಗೆಯನ್ನಾಗಿ ಬಳಕೆ ಮಾಡುತ್ತಿದ್ದ. ಇದನ್ನೂ ಓದಿ: ಅತ್ತಿಬೆಲೆ ಪಟಾಕಿ ದುರಂತ- ಗೋದಾಮು ಮಾಲೀಕ ಅರೆಸ್ಟ್