Tag: Ben Stokes

  • ಬೆನ್ ಸ್ಟೋಕ್ಸ್‌ಗೆ ಒಲಿಯುವುದೇ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವ?

    ಬೆನ್ ಸ್ಟೋಕ್ಸ್‌ಗೆ ಒಲಿಯುವುದೇ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವ?

    ಲಂಡನ್: ಜೋ ರೂಟ್ ಇಂಗ್ಲೆಂಡ್ ತಂಡದ ಟೆಸ್ಟ್ ನಾಯಕತ್ವ ತೊರೆದ ಬಳಿಕ ಹೊಸ ನಾಯಕನ ಹುಡುಕಾಟದಲ್ಲಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಇದೆ. ಈ ನಡುವೆ ಇಂಗ್ಲೆಂಡ್ ತಂಡದಲ್ಲಿರುವ ಆಲ್‍ರೌಂಡರ್ ಬೆನ್ ಸ್ಟೋಕ್ಸ್‌ಗೆ ನಾಯಕನ ಪಟ್ಟ ಕಟ್ಟಬೇಕೆಂಬ ಕೂಗು ಕೇಳಿಬರುತ್ತಿದೆ.

    5 ವರ್ಷಗಳ ಕಾಲ ಇಂಗ್ಲೆಂಡ್ ಟೆಸ್ಟ್ ತಂಡವನ್ನು ನಾಯಕನಾಗಿ ಮುನ್ನಡೆಸಿದ ಜೋ ರೂಟ್ ನಿನ್ನೆ ನಾಯಕತ್ವಕ್ಕೆ ಗುಡ್ ಬೈ ಹೇಳಿದರು. ಬಳಿಕ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ನೂತನ ನಾಯಕನನ್ನು ನೇಮಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ. ಈ ನಡುವೆ ತಂಡದಲ್ಲಿರುವ ಆಲ್‍ರೌಂಡರ್ ಬೆನ್ ಸ್ಟೋಕ್ಸ್‌ರನ್ನು ನಾಯಕನ್ನಾಗಿ ನೇಮಿಸಬೇಕೆಂಬ ಅಭಿಪ್ರಾಯವನ್ನು ಮಾಜಿ ಆಟಗಾರರು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹಿಟ್‌ಮ್ಯಾನ್ ರೋಹಿತ್ ಶರ್ಮಾ ಬೆನ್ನೇರಿದ ಬ್ಯಾನ್ ಭೀತಿ

    ಬೆನ್ ಸ್ಟೋಕ್ಸ್ ಹೊರತು ಪಡಿಸಿ ಇಂಗ್ಲೆಂಡ್ ತಂಡದಲ್ಲಿರುವ ಹಿರಿಯ ಆಟಗಾರ ಸ್ಟುವರ್ಟ್ ಬ್ರಾಡ್‍ಗೆ ನಾಯಕತ್ವ ವಹಿಸಬಹುದು ಎಂಬ ಅಭಿಪ್ರಾಯವು ಇದೆ. ಇದೀಗ ಆಸ್ಟ್ರೇಲಿಯಾ ತಂಡ ವೇಗಿ ಪ್ಯಾಟ್ ಕಮ್ಮಿನ್ಸ್‌ಗೆ ನಾಯಕತ್ವ ವಹಿಸಿಕೊಟ್ಟು ಯಶಸ್ವಿಯಾಗಿದೆ. ಹಾಗಾಗಿ ಇಂಗ್ಲೆಂಡ್ ತಂಡ ಕೂಡ ಬೌಲರ್‌ಗೆ ನಾಯಕತ್ವವನ್ನು ವಹಿಸಿ ಪ್ರಯೋಗ ನಡೆಸಲು ಮನಸು ಮಾಡಿದೆ ಎಂಬ ಮಾತು ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಸ್ಟ್ರಾಂಗ್ ಕಮ್‍ಬ್ಯಾಕ್ – ಐಪಿಎಲ್‍ನಲ್ಲಿ ಬುಲೆಟ್ ಥ್ರೋ, ವಿಕೆಟ್ ಕಟ್

    ಕ್ರಿಕೆಟ್ ಪಂಡಿತರ ಲೆಕ್ಕಾಚಾರದ ಪ್ರಕಾರ ಬೆನ್ ಸ್ಟೋಕ್ಸ್ ಉತ್ತಮ ಆಯ್ಕೆ ಎಂಬ ಮಾತು ಕೇಳಿ ಬರುತ್ತಿದೆ. ಇದಕ್ಕೆ ಪ್ರಮುಖ ಕಾರಣ ಸ್ಟೋಕ್ಸ್ ತಂಡದಲ್ಲಿ ಉತ್ತಮ ಆಟಗಾರನಾಗಿದ್ದು ಇನ್ನಷ್ಟು ಕಾಲ ತಂಡದಲ್ಲಿ ಖಾಯಂ ಸದಸ್ಯನಾಗಿ ಇರುವ ಸಾಮರ್ಥ್ಯವಿದೆ. ಸ್ಟೋಕ್ಸ್ ಈಗಾಗಲೇ 79 ಟೆಸ್ಟ್ ಪಂದ್ಯಗಳಿಂದ 26 ಅರ್ಧಶತಕ, 11 ಶತಕ, 1 ದ್ವೀಶತಕ ಸಹಿತ 5,061 ರನ್ ಮತ್ತು 174 ವಿಕೆಟ್ ಕಿತ್ತು ಮಿಂಚಿದ್ದಾರೆ.

     

     

  • ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರಾ ಬೆನ್ ಸ್ಟೋಕ್ಸ್?

    ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರಾ ಬೆನ್ ಸ್ಟೋಕ್ಸ್?

    ಲಂಡನ್: ಇಂಗ್ಲೆಂಡ್ ಕ್ರಿಕೆಟ್ ತಂಡದ ನಂಬರ್ ಒನ್ ಆಲ್‍ರೌಂಡರ್ ಬೆನ್ ಸ್ಟೋಕ್ಸ್ ಭಾರತ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರ ನಡೆದಿದ್ದಾರೆ. ಮಾನಸಿಕ ಆರೋಗ್ಯದ ಸುಧಾರಣೆಗಾಗಿ ನಾನು ಸರಣಿಯಿಂದ ಹೊರನಡೆದಿರುವುದಾಗಿ ತಿಳಿಸಿದ್ದು ಈಗ ಚರ್ಚೆಗೆ ಕಾರಣವಾಗಿದೆ.

    ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಆರಂಭಕ್ಕೆ ಕೆಲದಿನಗಳಷ್ಟೆ ಬಾಕಿ ಉಳಿದುಕೊಂಡಿದೆ. ಈ ನಡುವೆ ಅಂತಿಮ ಕ್ಷಣದಲ್ಲಿ ಮಾನಸಿಕ ಆರೋಗ್ಯದ ಸುಧಾರಣೆಗಾಗಿ ಮತ್ತು ಬೆರಳಿನ ಗಾಯಕ್ಕೆ ಚಿಕಿತ್ಸೆ ಪಡೆಯಲು ನಾನು ಹೊರಗುಳಿಯುದಾಗಿ ಸ್ಟೋಕ್ಸ್ ಹೇಳಿದ್ದಾರೆ. ಇದನ್ನು ಗಮನಿಸುತ್ತಿದ್ದಂತೆ ಸ್ಟೋಕ್ಸ್ ಮಾನಸಿಕ ಖಿನ್ನತೆಗೆ ಒಳಗಾಗಿರುವುದು ಯಾಕೆ ಎಂಬ ಪ್ರಶ್ನೆ ಉದ್ಭವಿಸಿದೆ.

    ಸ್ಟೋಕ್ಸ್ ಅವರ ಈ ನಿರ್ಧಾರದಿಂದಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಶಾಕ್ ಆಗಿದ್ದರು ಕೂಡ, ಅವರಿಗೆ ವಿಶ್ರಾಂತಿ ನೀಡಲು ಒಪ್ಪಿಕೊಂಡಿದೆ. ಈ ನಡುವೆ ತಂಡದ ಸಹ ಆಟಗಾರರು ಕೂಡ ಸ್ಟೋಕ್ಸ್ ಅವರ ನಡೆಗೆ ಬೆಂಬಲ ಸೂಚಿಸಿದ್ದಾರೆ.

    ಸ್ಟೋಕ್ಸ್ ಅವರು ಈ ವರ್ಷದ ಆರಂಭದಲ್ಲಿ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ಬಳಿಕ ಐಪಿಎಲ್‍ಗಾಗಿ ಭಾರತಕ್ಕೆ ಆಗಮಿಸಿದ್ದರು. ರಾಜಸ್ಥಾನ್ ತಂಡದ ಪರ ಆಡುತ್ತಿದ್ದ ಸ್ಟೋಕ್ಸ್ ಬೆರಳಿನ ಗಾಯಕ್ಕೆ ತುತ್ತಾಗಿ 14ನೇ ಆವೃತ್ತಿಯ ಐಪಿಎಲ್‍ನಿಂದ ಹೊರಗುಳಿದಿದ್ದರು. ಇದೆಲ್ಲದರ ನಡುವೆ ಕೊರೊನಾದಿಂದಾಗಿ ತಂಡದಲ್ಲಿರುವ ಬಯೋ ಬಬಲ್‍ನಿಂದಾಗಿ ಸ್ಟೋಕ್ಸ್ ಅವರು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ: ಹಾಕಿಯಲ್ಲಿ ಭಾರತದ ಸಾಧನೆ – 41 ವರ್ಷದ ಬಳಿಕ ಸೆಮಿ ಪ್ರವೇಶ

    ಕ್ರಿಕೆಟ್‍ನಲ್ಲಿ ಈ ಹಿಂದೆ ಆಸ್ಟ್ರೇಲಿಯಾದ ಆಟಗಾರ ಗ್ಲೇನ್ ಮ್ಯಾಕ್ಸ್​ವೆಲ್ ಮಾನಸಿಕ ಖಿನ್ನತೆಗೆ ಒಳಗಾಗಿ ಕ್ರಿಕೆಟ್‍ನಿಂದ ದೂರ ಉಳಿದಿದ್ದರು. ಬಳಿಕ ಇದೀಗ ಮತ್ತೆ ಕ್ರಿಕೆಟ್ ಆಡುತ್ತಿದ್ದಾರೆ. ಇದೀಗ ಸ್ಟೋಕ್ಸ್ ಮಾನಸಿಕ ಖಿನ್ನತೆ ಕುರಿತು ಹೇಳಿಕೊಂಡಿದ್ದು ಅದಷ್ಟು ಬೇಗ ಇದರಿಂದ ಹೊರಬರಲಿ ಎಂಬುದು ಕ್ರಿಕೆಟ್ ಅಭಿಮಾನಿಗಳ ಆಶಯವಾಗಿದೆ.

  • ಐಪಿಎಲ್ ಪ್ರಾರಂಭವಾಗಿ ಒಂದೇ ವಾರದಲ್ಲಿ ರಾಜಸ್ಥಾನ ತಂಡಕ್ಕೆ ಬಹುದೊಡ್ಡ ಆಘಾತ

    ಐಪಿಎಲ್ ಪ್ರಾರಂಭವಾಗಿ ಒಂದೇ ವಾರದಲ್ಲಿ ರಾಜಸ್ಥಾನ ತಂಡಕ್ಕೆ ಬಹುದೊಡ್ಡ ಆಘಾತ

    ಮುಂಬೈ: 14ನೇ ಆವೃತ್ತಿಯ ಐಪಿಎಲ್ ಆರಂಭವಾಗಿ ಪಂದ್ಯಗಳು ಒಂದರ ಮೇಲೊಂದರಂತೆ ಜಿದ್ದಾಜಿದ್ದಿನ ಕಾದಾಟಕ್ಕೆ ಸಾಕ್ಷಿಯಾಗುತ್ತಿದೆ. ಈ ನಡುವೆ ಐಪಿಎಲ್ ಆರಂಭದ ಮೊದಲ ವಾರದಲ್ಲೇ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಬಹುದೊಡ್ಡ ಆಘಾತವೊಂದು ಎದುರಾಗಿದೆ.

    ರಾಜಸ್ಥಾನ್ ರಾಯಲ್ಸ್ ತಂಡ ತನ್ನ ಮೊದಲ ಪಂದ್ಯವನ್ನು ಏಪ್ರಿಲ್ 12 ರಂದು ಪಂಜಾಬ್ ಕಿಂಗ್ಸ್ ಪರ ಆಡಿತ್ತು. ಈ ವೇಳೆ ರಾಜಸ್ಥಾನ ರಾಯಲ್ಸ್ ತಂಡದ ಆಲ್‍ರೌಂಡರ್ ಬೆನ್ ಸ್ಟೋಕ್ಸ್ ಅವರು ಫೀಲ್ಡಿಂಗ್ ವೇಳೆ ಕೈಗೆ ಗಾಯ ಮಾಡಿಕೊಂಡಿದ್ದರು. ನಂತರ ಇದೀಗ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ತಿಳಿಸಿರುವ ಪ್ರಕಾರ ಸ್ಟೋಕ್ಸ್ ಅವರ ಕೈ ಬೆರಳು ಮುರಿತಕ್ಕೆ ಒಳಗಾಗಿದ್ದು, ಹಾಗಾಗಿ ಬೆನ್ ಸ್ಟೋಕ್ಸ್ ಈ ಬಾರಿಯ ಐಪಿಎಲ್‍ನಿಂದಲೇ ಹೊರ ಹೋಗಿದ್ದಾರೆ ಎಂದು ಸ್ಪಷ್ಟಪಡಿಸಿದೆ.

    ರಾಜಸ್ಥಾನ್ ರಾಯಲ್ಸ್ ತಂಡದ ಅಮೂಲ್ಯವಾದ ಮತ್ತು ಬೇಡಿಕೆಯ ಆಟಗಾರ ಬೆನ್ ಅವರು ಕೈ ಬೆರಳು ಮುರಿತದಿಂದಾಗಿ ಈ ಸೀಸನ್‍ನ ಐಪಿಎಲ್‍ನಿಂದ ಹೊರಹೋಗಿದ್ದಾರೆ ಎಂದು ಅಧಿಕೃತವಾಗಿ ಸಾಮಾಜಿಕ ಜಾಲತಾಣದ ಮೂಲಕ ಫ್ರಾಂಚೈಸಿ ತಿಳಿಸಿದ್ದು, ಸ್ಟೋಕ್ಸ್ ಗಾಯಗೊಂಡಿದ್ದರು ಕೂಡ ತಂಡದೊಂದಿಗೆ ಟೂರ್ನಿಯ ಅಂತ್ಯದ ವರೆಗೆ ಆಫ್‍ದಿಫೀಲ್ಡ್ ನಲ್ಲಿ ಜೊತೆಗಿರಲಿದ್ದು ಅವರ ಸೇವೆ ಅಗತ್ಯವಿದೆ ಎಂದು  ಫ್ರಾಂಚೈಸಿ  ತಿಳಿಸಿದೆ.

    ಬೆನ್ ಸ್ಟೋಕ್ಸ್ ಅವರು ಪಂಜಾಬ್ ವಿರುದ್ಧದ ಪಂದ್ಯದ ವೇಳೆ ಗ್ರಿಸ್ ಗೇಲ್ ಬಾರಿಸಿದ ಚೆಂಡನ್ನು ಹಿಡಿಯಲು ಯತ್ನಿಸಿದ ವೇಳೆ ಎಡಗೈ ಬೆರಳಿನ ಮೂಲೆ ಮುರಿತಕ್ಕೆ ಒಳಗಾಗಿತ್ತು. ಆದರೂ ಕೂಡ ಬೆನ್ ಸ್ಟೋಕ್ ರಾಜಸ್ಥಾನ್ ಪರ ಬ್ಯಾಟ್ ಹಿಡಿದು ಆರಂಭಿಕರಾಗಿ ಕಣಕ್ಕಿಳಿದಿದ್ದರು.

    ಐಪಿಎಲ್ ಆರಂಭಕ್ಕೂ ಮೊದಲೇ ರಾಜಸ್ಥಾನ ತಂಡದ ಇನ್ನೊರ್ವ ಆಲ್‍ರೌಂಡರ್ ಜೋಫ್ರಾ ಆರ್ಚರ್ ತಂಡದಿಂದ ದೂರ ಉಳಿದಿದ್ದರು ಇದೀಗ ಸ್ಟೋಕ್ಸ್ ಕೂಡ ಹೊರಗುಳಿಯುವಂತಾಗಿದೆ. ಇದರಿಂದ ರಾಜಸ್ಥಾನ್ ತಂಡ ಬಲಿಷ್ಠ ಆಲ್‍ರೌಂಡರ್ ಆಟಗಾರನ್ನು ಕಳೆದುಕೊಂಡಂತಾಗಿದೆ.

  • ಶಿಖರ್‌ ಧವನ್‌ಗೆ ನಮಸ್ಕರಿಸಿ ಅಡ್ಡ ಬಿದ್ದ ಹಾರ್ದಿಕ್‌ ಪಾಂಡ್ಯ

    ಶಿಖರ್‌ ಧವನ್‌ಗೆ ನಮಸ್ಕರಿಸಿ ಅಡ್ಡ ಬಿದ್ದ ಹಾರ್ದಿಕ್‌ ಪಾಂಡ್ಯ

    ಪುಣೆ: ಇಂಗ್ಲೆಂಡ್‌ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಶಿಖರ್‌ ಧವನ್‌ ಅವರಿಗೆ ಅಡ್ಡ ಬಿದ್ದು ನಮಸ್ಕರಿಸಿದ್ದಾರೆ.

    ಹಾರ್ದಿಕ್‌ ಪಾಂಡ್ಯ ಸಂತೋಷಗೊಂಡು ಸಂಭ್ರಮಿಸಿ ನಮಸ್ಕರಿಸಲು ಕಾರಣ ಶಿಖರ್‌ ಧವನ್‌ ಹಿಡಿದ ಕ್ಯಾಚ್‌. ಅಪಾಯಕಾರಿ ಆಟಗಾರ ಬೆನ್‌ಸ್ಟೋಕ್ಸ್‌ ಅವರ ಕ್ಯಾಚ್‌ ಹಿಡಿದಿದ್ದಕ್ಕೆ ಸಂಭ್ರಮಿಸಿ ಪಾಂಡ್ಯ ನಮಸ್ಕರಿಸಿದ್ದಾರೆ.

    https://twitter.com/viratian18183/status/1376163494203023367

    ಕ್ಯಾಚ್‌ ಡ್ರಾಪ್‌:
    ಭುವನೇಶ್ವರ್‌ ಕುಮಾರ್‌ ಎಸೆದ 5ನೇ ಓವರಿನಲ್ಲಿ 14 ರನ್‌ ಗಳಿಸಿದ್ದ ಬೆನ್‌ ಸ್ಟೋಕ್ಸ್‌ ಬಲವಾಗಿ ಬೀಸಿದ್ದರು. ಈ ವೇಳೆ ಮಿಡ್‌ ಆಫ್‌ನಲ್ಲಿದ್ದ ಪಾಂಡ್ಯ ಕ್ಯಾಚ್‌ ಹಿಡಿಯುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಪಾಂಡ್ಯ ಸುಲಭವಾಗಿ ಹಿಡಿಯಬೇಕಿದ್ದ ಕ್ಯಾಚ್‌ ಕೈ ಚೆಲ್ಲಿದರು. ಇದನ್ನು ನೋಡಿ ಆಟಗಾರರ ಜೊತೆ ಡಗೌಟ್‌ನಲ್ಲಿ ಕುಳಿತ್ತಿದ್ದ ಟೀಂ ಇಂಡಿಯಾ ಸದಸ್ಯರು ಶಾಕ್‌ ಆದರು.

    https://twitter.com/j_dhillon7/status/1376155566045757440

    ಕಷ್ಟದ ಕ್ಯಾಚ್‌ ಕೈ ಚೆಲ್ಲಿದರೆ ಯಾರೂ ಬೇಸರ ಪಟ್ಟುಕೊಳ್ಳುತ್ತಿರಲಿಲ್ಲ. ಆದರೆ ಸುಲಭವಾಗಿ ಹಿಡಿಯಬಹುದಾಗಿದ್ದ ಕ್ಯಾಚ್‌ ಬಿಟ್ಟದ್ದಕ್ಕೆ ಆಟಗಾರ ಕೈ ತಲೆ ಮೇಲೆ ಹೋಗಿತ್ತು.

    ಕ್ರೀಸಿನಲ್ಲಿ ತಳವುರಲು ಆರಂಭಿಸಿದ್ದ ಬೆನ್‌ಸ್ಟೋಕ್ಸ್‌ ನಟರಾಜ್‌ ಎಸೆದ ಇನ್ನಿಂಗ್ಸ್‌ನ 11ನೇ ಓವರಿನ ಮೂರನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಪ್ರಯತ್ನ ಮಾಡಿದರು. ಆದರೆ ಬಾಲ್‌ ನೇರವಾಗಿ ಸ್ಕ್ವಾರ್‌ ಲೆಗ್‌ನಲ್ಲಿದ್ದ ಶಿಖರ್‌ ಧವನ್‌ ಕೈ ಸೇರಿತು. ಈ ಮೂಲಕ 35 ರನ್‌(39 ಎಸೆತ, 4 ಬೌಂಡರಿ, 1 ಸಿಕ್ಸರ್‌) ಹೊಡೆದಿದ್ದ ಸ್ಟೋಕ್ಸ್‌ ಔಟಾದರು. ಸ್ಟೋಕ್ಸ್‌ ಔಟಾಗುತ್ತಿದ್ದಂತೆ ಪಾಂಡ್ಯ ಕೈ ಮುಗಿದು, ನೆಲಕ್ಕೆ ಅಡ್ಡ ಬಿದ್ದು ನಮಸ್ಕರಿಸಿದರು.

  • ಪಂಜಾಬ್ ಪ್ಲೇ ‘ಆಫ್’ – ಸ್ಟೋಕ್ಸ್, ಸ್ಯಾಮ್ಸನ್ ಆಟಕ್ಕೆ ರಾಹುಲ್ ಪಡೆಗೆ ಸೋಲು

    ಪಂಜಾಬ್ ಪ್ಲೇ ‘ಆಫ್’ – ಸ್ಟೋಕ್ಸ್, ಸ್ಯಾಮ್ಸನ್ ಆಟಕ್ಕೆ ರಾಹುಲ್ ಪಡೆಗೆ ಸೋಲು

    – ಗೇಲ್ 99 ರನ್‍ಗಳ ಆಟ ವ್ಯರ್ಥ
    – ಪಂಜಾಬ್ ಗೆಲುವಿನ ಓಟಕ್ಕೆ ರಾಯಲ್ಸ್ ಬ್ರೇಕ್

    ಅಬುಧಾಬಿ: ಇಂದು ನಡೆದ ಐಪಿಎಲ್-2020ಯ 50ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿ ಇಟ್ಟುಕೊಂಡಿದೆ. ಜೊತೆಗೆ ಪಂಜಾಬ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದೆ. ಜೊತೆಗೆ ಸುಲಭವಾಗಿ ಪ್ಲೇ ಆಫ್ ತಲುಪುವ ದಾರಿಯನ್ನು ಪಂಜಾಬ್ ಕಳೆದುಕೊಂಡಿದೆ.

    ಇಂದು ಅಬುಧಾಬಿ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕ್ರಿಸ್ ಗೇಲ್ 99 ರನ್ ಮತ್ತು ನಾಯಕ ಕೆಎಲ್ ರಾಹುಲ್ 46 ರನ್ ಸಹಾಯದಿಂದ ನಿಗದಿತ 20 ಓವರಿನಲ್ಲಿ ಬರೋಬ್ಬರಿ 185 ರನ್ ಪೇರಿಸಿತ್ತು. ಆದರೆ ಈ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ಬೆನ್ ಸ್ಟೋಕ್ಸ್ ಮತ್ತು ಸ್ಯಾಮ್ಸನ್ ಅದ್ಭುತ ಆಟದಿಂದ ಇನ್ನೂ 15 ಬಾಲ್ ಉಳಿದಂತೆ 186 ರನ್ ಸಿಡಿಸಿ 7 ವಿಕೆಟ್‍ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.

    ಸ್ಟೋಕ್ಸ್, ಸ್ಯಾಮ್ಸನ್ ಸ್ಫೋಟಕ ಆಟ
    ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಮೊದಲ ಬಾಲಿನಿಂದಲೇ ಪಂಜಾಬ್ ಬೌಲರ್ ಗಳ ಮೇಲೆ ದಾಳಿ ಮಾಡಿತು. ಆರಂಭಿಕನಾಗಿ ಬಂದ ಬೆನ್ ಸ್ಟೋಕ್ಸ್ ಅವರು 24 ಬಾಲ್ ಗೆ ಆರು ಬೌಂಡರಿ ಮತ್ತು ಮೂರು ಸಿಕ್ಸರ್ ಸಮೇತ ಅರ್ಧಶತಕ ಸಿಡಿಸಿ ಪಂದ್ಯಕ್ಕೆ ಉತ್ತಮ ಆರಂಭ ನೀಡಿದರು. ಇವರು ಔಟ್ ಆದ ನಂತರ ಬಂದ ಸಂಜು ಸ್ಯಾಮ್ಸನ್ ಅವರು, 25 ಬಾಲಿಗೆ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್ ಸಮೇತ 48 ರನ್ ಸಿಡಿಸಿ ರಾಜಸ್ಥಾನ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

    ಪಂಜಾಬ್ ನೀಡಿದ 185 ರನ್‍ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಅದ್ಭುತ ಆರಂಭ ದೊರೆಯಿತು. ಆರಂಭಿಕರಾಗಿ ಕಣಕ್ಕಿಳಿದ ರಾಬಿನ್ ಉತ್ತಪ್ಪ ಮತ್ತು ಬೆನ್ ಸ್ಟೋಕ್ಸ್ ಸ್ಫೋಟಕ ಆರಂಭ ನೀಡಿದರು. ಆರಂಭದಿಂದಲೇ ಅಬ್ಬರಿಸಿದ ಬೆನ್ ಸ್ಟೋಕ್ಸ್ 24 ಬಾಲ್ ಗೆ ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ 6ನೇ ಓವರಿನಲ್ಲಿ ಕ್ರಿಸ್ ಜೋರ್ಡಾನ್ ಅವರ ಬೌಲಿಂಗ್ ಕ್ಯಾಚ್ ನೀಡಿ ಹೊರನಡೆದರು.

    ಬೆನ್ ಸ್ಟೋಕ್ಸ್ ಔಟ್ ಆದ ನಂತರ ರಾಜಸ್ಥಾನ್ ರಾಯಲ್ಸ್ ತಂಡ ಆರನೇ ಓವರ್ ಮುಕ್ತಾಯಕ್ಕೆ 66 ರನ್ ಗಳಿಸಿ ಒಂದು ವಿಕೆಟ್ ಕಳೆದುಕೊಂಡಿತ್ತು. ನಂತರ ಜೊತೆಯಾದ ರಾಬಿನ್ ಉತ್ತಪ್ಪ ಮತ್ತು ಸಂಜು ಸ್ಯಾಮ್ಸನ್ ಉತ್ತಮ ಜೊತೆಯಾಟಕ್ಕೆ ಮುಂದಾದರು. ಆದರೆ 10ನೇ ಓವರ್ ಐದನೇ ಬಾಲಿನಲ್ಲಿ ಮುರುಗನ್ ಅಶ್ವಿನ್ ಅವರ ಬೌಲಿಂಗ್‍ನಲ್ಲಿ 30 ರನ್ ಗಳಿಸಿದ್ದ ರಾಬಿನ್ ಉತ್ತಪ್ಪ ಕ್ಯಾಚ್ ನೀಡಿ ಹೊರನಡೆದರು.

    ನಂತರ ನಾಯಕ ಸ್ಟೀವನ್ ಸ್ಮಿತ್ ಅವರು ಕ್ರೀಸಿಗಿಳಿದರು. ಆದರೆ 25 ಬಾಲಿಗೆ 48 ರನ್ ಸಿಡಿಸಿ ಉತ್ತಮವಾಗಿ ಆಡುತ್ತಿದ್ದ ಸಂಜು ಸ್ಯಾಮ್ಸನ್ 14ನೇ ಓವರ್ ಎರಡನೇ ಬಾಲ್ ನಲ್ಲಿ ಬದಲಿ ಆಟಗಾರ ಸುಚೀತ್ ಹೊಡೆದ ಅದ್ಭುತ ರನ್‍ ಔಟ್‍ಗೆ ಬಲಿಯಾದರು. ನಂತರ ಜೊತೆಯಾದ ಸ್ಟೀವನ್ ಸ್ಮಿತ್ ಮತ್ತು ಜೋಸ್ ಬಟ್ಲರ್ ಕೊನೆಯಲ್ಲಿ ಸಿಕ್ಸ್ ಫೋರುಗಳ ಸುರಿಮಳೆಗೈದು ತಂಡಕ್ಕೆ ಏಳು ವಿಕೆಟ್‍ಗಳ ಜಯ ತಂದಿತ್ತರು.

    ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರವಾಗಿ ಕ್ರಿಸ್ ಗೇಲ್ 63 ಎಸೆತದಲ್ಲಿ ಆರು ಬೌಂಡರಿ ಮತ್ತು ಎಂಟು ಭರ್ಜರಿ ಸಿಕ್ಸರ್ ಸಮೇತ ಬರೋಬ್ಬರಿ 99 ರನ್ ಬಾರಿಸಿದ್ದರು. ಇವರಿಗೆ ಉತ್ತಮ ಸಾಥ್ ನೀಡಿದ್ದ ನಾಯಕ ರಾಹುಲ್ 41 ಬಾಲ್ ಗೆ 46 ರನ್ ಸಿಡಿಸಿದ್ದರು. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 185ಗಳ ಗುರಿ ನೀಡಿದ್ದರು.

  • 82 ಬಾಲಿಗೆ 152 ರನ್ ಸ್ಟೋಕ್ಸ್, ಸ್ಯಾಮ್ಸನ್ ಜೊತೆಯಾಟಕ್ಕೆ ತಲೆಬಾಗಿದ ಮುಂಬೈ

    82 ಬಾಲಿಗೆ 152 ರನ್ ಸ್ಟೋಕ್ಸ್, ಸ್ಯಾಮ್ಸನ್ ಜೊತೆಯಾಟಕ್ಕೆ ತಲೆಬಾಗಿದ ಮುಂಬೈ

    – ಐಪಿಎಲ್‍ನಲ್ಲಿ ಸ್ಟೋಕ್ಸ್ ಎರಡನೇ ಶತಕ

    ಅಬುಧಾಬಿ: ಇಂದು ನಡೆದ ಸಂಡೇ ಧಮಾಕದ ಎರಡನೇ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಆಡಿದ ರಾಜಸ್ಥಾನ್ ರಾಯಲ್ಸ್ ತಂಡ ಎಂಟು ವಿಕೆಟ್‍ಗಳ ಅಂತರದಲ್ಲಿ ಗೆದ್ದು ಬೀಗಿದೆ.

    ಇಂದು ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಮೊದಲು ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಉತ್ತಮ ಜೊತೆಯಾಟ ಮತ್ತು ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಅವರ ಅಬ್ಬರದ ಬ್ಯಾಟಿಂಗ್‍ನಿಂದ ನಿಗದಿತ 20 ಓವರಿನಲ್ಲಿ ರಾಜಸ್ಥಾನ್ ರಾಯಲ್ಸ್ ಗೆ 195 ರನ್‍ಗಳ ಟಾರ್ಗೆಟ್ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿ ರಾಜಸ್ಥಾನ್ ತಂಡ ಬೆನ್ ಸ್ಟೋಕ್ಸ್ ಮತ್ತು ಸಂಜು ಸ್ಯಾಮ್ಸನ್ ಅವರ ಶತಕ ಜೊತೆಯಾಟದಿಂದ ಇನ್ನೂ 10 ಬಾಲ್ ಉಳಿಸಿ ಪಂದ್ಯವನ್ನು ಗೆದ್ದುಕೊಂಡಿತು.

    ಸ್ಟೋಕ್ಸ್ ಸ್ಯಾಮ್ಸನ್ ಸ್ಫೋಟಕ ಆಟ
    ಐದು ಓವರಿಗೆ 45 ರನ್‍ಗಳಿಸಿ ಎರಡು ವಿಕೆಟ್ ಕಳೆದುಕೊಂಡು ರಾಜಸ್ಥಾನ್ ರಾಯಲ್ಸ್ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಜೊತೆಯಾದ ಬೆನ್ ಸ್ಟೋಕ್ಸ್ ಮತ್ತು ಸಂಜು ಸ್ಯಾಮ್ಸನ್ ರಾಜಸ್ಥಾನವನ್ನು ಗೆಲುವಿನ ದಡ ಸೇರಿಸಿದರು. ಈ ವೇಳೆ ಉತ್ತಮ ಜೊತೆಯಾಟವಾಡಿದ ಅವರು, 82 ಬಾಲಿಗೆ 152 ರನ್‍ಗಳ ಜೊತೆಯಾಟವಾಡಿದರು. ಇದರಲ್ಲಿ ಉತ್ತಮವಾಗಿ ಆಡಿದ ಸ್ಟೋಕ್ಸ್ ಅವರು 60 ಬಾಲಿಗೆ 107 ರನ್ ಸಿಡಿಸಿ ಐಪಿಎಲ್‍ನಲ್ಲಿ ಎರಡನೇ ಶತಕ ಬಾರಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಸಂಜು 31 ಬಾಲಿಗೆ 54 ರನ್ ಸಿಡಿಸಿದರು.

    ಮುಂಬೈ ಇಂಡಿಯನ್ಸ್ ನೀಡಿದ ದೊಡ್ಡ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮುಂಬೈ ವೇಗಿ ಜೇಮ್ಸ್ ಪ್ಯಾಟಿನ್ಸನ್ ಆರಂಭಿಕ ಆಘಾತ ನೀಡಿದರು. ಎರಡನೇ ಓವರಿನಲ್ಲೇ ಆರಂಭಿಕ ರಾಬಿನ್ ಉತ್ತಪ್ಪ ಅವರನ್ನು ಔಟ್ ಮಾಡಿದರು. ನಂತರ ನಾಯಕ ಸ್ಟೀವನ್ ಸ್ಮಿತ್ ಮತ್ತು ಬೆನ್ ಸ್ಟೋಕ್ಸ್ ಉತ್ತಮ ಆಟಕ್ಕೆ ಮುಂದಾದರು. ಆದರೆ ಮತ್ತೆ ದಾಳಿಗಿಳಿದ ಜೇಮ್ಸ್ ಪ್ಯಾಟಿನ್ಸನ್ ಅವರು 11 ರನ್ ಗಳಿಸಿದ್ದ ಸ್ಮಿತ್ ಅವರನ್ನು ಬೌಲ್ಡ್ ಮಾಡಿದರು.

    ನಂತರ ಜೊತೆಯಾದ ಬೆನ್ ಸ್ಟೋಕ್ಸ್ ಮತ್ತು ಸಂಜು ಸ್ಯಾಮ್ಸನ್ 33 ಬಾಲಿಗೆ ಅರ್ಧಶತಕ ಜೊತೆಯಾಟವಾಡಿದರು. ಇದರ ಬೆನ್ನಲ್ಲೆ ಬೆನ್ ಸ್ಟೋಕ್ಸ್ 28 ಬಾಲಿಗೆ ಅರ್ಧಶತಕ ಸಿಡಿಸಿ ಮಿಂಚಿದರು. ನಂತರವೂ ಕೂಡ ಔಟ್ ಆಗದೆ ಬ್ಯಾಟ್ ಬೀಸಿದ ಈ ಜೋಡಿ 57 ಬಾಲಿಗೆ ಶತಕ ಜೊತೆಯಾಟವಾಡಿತು. ಈ ನಡುವೆ ಕೇವಲ 27 ಬಾಲಿಗೆ ಸಂಜು ಸ್ಯಾಮ್ಸನ್ ಅವರು ಅರ್ಧಶತಕ ಸಿಡಿಸಿ ಮಿಂಚಿದರು.

  • ಚಹಲ್‍ಗೆ ಮ್ಯಾನ್ ಆಫ್ ದಿ ಮ್ಯಾಚ್ ಕೊಡ್ಬೇಕಿತ್ತು: ಬೆನ್ ಸ್ಟೋಕ್ಸ್

    ಚಹಲ್‍ಗೆ ಮ್ಯಾನ್ ಆಫ್ ದಿ ಮ್ಯಾಚ್ ಕೊಡ್ಬೇಕಿತ್ತು: ಬೆನ್ ಸ್ಟೋಕ್ಸ್

    ನವದೆಹಲಿ: ಸೋಮವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ  ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರಿಗೆ ಮ್ಯಾನ್ ಆಫ್ ದಿ ಮ್ಯಾಚ್ ಕೊಡಬೇಕಿತ್ತು ಎಂದು ರಾಜಸ್ಥಾನ್ ರಾಯಲ್ಸ್ ತಂಡದ ಬೆನ್ ಸ್ಟೋಕ್ಸ್ ಹೇಳಿದ್ದಾರೆ.

    ಸೋಮವಾರ ನಡೆದ ಐಪಿಎಲ್-2020ಯ 28ನೇ ಮ್ಯಾಚಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬರೋಬ್ಬರಿ 87 ರನ್‍ಗಳಿಂದ ಗೆದ್ದು ಬೀಗಿದೆ. ಎಬಿಡಿ ವಿಲಿಯರ್ಸ್ ಅವರು ಬ್ಯಾಟಿಂಗ್‍ನಲ್ಲಿ ಅಬ್ಬರಿಸಿದರೆ, ಬೆಂಗಳೂರು ತಂಡದ ಬೌಲರ್ ಗಳು ಬೌಲಿಂಗ್‍ನಲ್ಲಿ ಮ್ಯಾಜಿಕ್ ಮಾಡಿ ತಂಡ ಗೆಲುವಿನ ನಗೆ ಬೀರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

    ಸೋಮವಾರದ ಆರ್‌ಸಿಬಿ  ಮತ್ತು ಕೆಕೆಆರ್ ಮ್ಯಾಚ್ ಮುಗಿದ ನಂತರ ಟ್ವೀಟ್ ಮಾಡಿರುವ ಬೆನ್ ಸ್ಟೋಕ್ಸ್, ಬ್ಯಾಟ್ಸ್ ಮ್ಯಾನ್‍ಗಳ ಗೇಮಿನಲ್ಲಿ ಇಂದು ಯಜೇಂದ್ರ ಚಹಲ್ ಅವರಿಗೆ ಮ್ಯಾನ್ ಆಫ್ ದಿ ಮ್ಯಾಚ್ ನೀಡಬೇಕಿತ್ತು. ಏಕೆಂದರೆ ಶಾರ್ಜಾದಂತ ಮೈದಾನದಲ್ಲಿ ಆತ ಉತ್ತಮವಾಗಿ ಬೌಲ್ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಆದರೆ ನಿನ್ನೆಯ ಪಂದ್ಯದಲ್ಲಿ 33 ಬಾಲಿಗೆ 73 ರನ್ ಹೊಡೆದ ಎಬಿಡಿ ವಿಲಿಯರ್ಸ್ ಅವರಿಗೆ ಮ್ಯಾನ್ ಆಫ್ ದಿ ಮ್ಯಾಚ್ ನೀಡಲಾಗಿದೆ.

    ಐಪಿಎಲ್‍ನಲ್ಲಿ ಕಳೆದ ಕೆಲ ಆವೃತ್ತಿಗಳಿಂದ ಆರ್‌ಸಿಬಿ ತಂಡದಲ್ಲಿ ಬೌಲಿಂಗ್ ಸರಿಯಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ ಈ ಆವೃತ್ತಿಯಲ್ಲಿ ಬೆಂಗಳೂರು ಬೌಲರ್ಸ್ ಗಳು ಮ್ಯಾಚಿಕ್ ಮೇಲೆ ಮ್ಯಾಜಿಕ್ ಮಾಡುತ್ತಿದ್ದಾರೆ. ಕೆಕೆಆರ್ ವಿರುದ್ಧ ಪಂದ್ಯದಲ್ಲಿ ಸೂಪರ್ ಆಗಿ ಬೌಲ್ ಮಾಡಿದ ಯುಜ್ವೇಂದ್ರ ಚಹಲ್, ತಮ್ಮ ಕೋಟಾದ ನಾಲ್ಕು ಓವರ್ ಬೌಲ್ ಮಾಡಿ ಕೇವಲ 12 ರನ್ ನೀಡಿ ಒಂದು ವಿಕೆಟ್ ಕಿತ್ತು ಮಿಂಚಿದ್ದಾರೆ.

    ಕೋಲ್ಕತ್ತಾ ವಿರುದ್ಧ ಪಂದ್ಯದಲ್ಲಿ ಎಬಿಡಿಯವರ ಸ್ಫೋಟಕ ಆಟದಿಂದ ಆರ್‌ಸಿಬಿ ತಂಡ ಕೆಕೆಆರ್ ತಂಡಕ್ಕೆ 195 ರನ್‍ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತಾ ತಂಡಕ್ಕೆ ಬೆಂಗಳೂರು ಬೌಲರ್ ಗಳು ಆರಂಭಿಕ ಆಘಾತ ನೀಡಿದರು. ಚಹಲ್ ಮತ್ತು ಸುಂದರ್ ಅವರ ಸ್ಪಿನ್ ದಾಳಿಗೆ ಕೆಕೆಆರ್ ಬ್ಯಾಟ್ಸ್ ಮ್ಯಾನ್‍ಗಳು ಪೆವಿಲಿಯನ್ ಪರೇಡ್ ನಡೆಸಿದರು. ಜೊತೆಗೆ ನಿಗದಿ 20 ಓವರಿನಲ್ಲಿ ಕೇವಲ 112 ರನ್ ಸಿಡಿಸಿ 87 ರನ್‍ಗಳಿಂದ ಕೋಲ್ಕತ್ತಾ ಸೋತಿತು.

  • ಮಾರ್ಗನ್ ಬದಲು ನರೈನ್?- ಬೆನ್ ಸ್ಟೋಕ್ಸ್ ಕಾಲೆಳೆದ ಯುವಿ

    ಮಾರ್ಗನ್ ಬದಲು ನರೈನ್?- ಬೆನ್ ಸ್ಟೋಕ್ಸ್ ಕಾಲೆಳೆದ ಯುವಿ

    ಮುಂಬೈ: ಯುವರಾಜ್ ಸಿಂಗ್ ನಿವೃತ್ತಿ ಘೋಷಣೆ ಮಾಡಿರುವುದರಿಂದ ಐಪಿಎಲ್ ಆಡುತ್ತಿಲ್ಲ. ಇತ್ತ ಬೆನ್ ಸ್ಟೋಕ್ಸ್ ಕೂಡ ಐಪಿಎಲ್‍ನಿಂದ ದೂರವಿದ್ದಾರೆ. ಆದರೂ ಬೆನ್ ಸ್ಟೋಕ್ಸ್ ಮುನ್ನ ಯುವರಾಜ್ ಸಿಂಗ್ ಬ್ಯಾಟಿಂಗ್ ಎಂದು ಯುವಿ ಟ್ವೀಟ್ ಮಾಡಿ ಸ್ಟೋಕ್ಸ್ ಕಾಲೆಳೆದಿದ್ದಾರೆ.

    ಕೋಲ್ಕತ್ತಾ ತಂಡದಲ್ಲಿ ಸುನಿಲ್ ನರೈನ್ ಆರಂಭಿಕನಾಗಿ ಕಣಕ್ಕಿಳಿಯುತ್ತಿದ್ದರು. ಆದರೆ ಚೆನ್ನೈ ವಿರುದ್ಧ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ನಲ್ಲಿ ಇಳಿದಿದ್ದರು. ಪರಿಣಾಮ ರಾಹುಲ್ ತ್ರಿಪಾಠಿ ಆರಂಭಿಕರಾಗಿ ಕಣಕ್ಕೆ ಇಳಿದಿದ್ದರು. 5ನೇ ಸ್ಥಾನದಲ್ಲಿ ಇಯಾನ್ ಮಾರ್ಗನ್ ಬ್ಯಾಟ್ ಮಾಡುವ ಅವಕಾಶ ಪಡೆದಿದ್ದರು. ಸತತ ವೈಪಲ್ಯಗಳ ನಡುವೆಯೂ ನೈರನ್ ಅವಕಾಶ ಪಡೆದಿದ್ದು ಹಲವರಿಗೆ ಅಚ್ಚರಿ ತಂದಿತ್ತು.

    ಈ ಕುರಿತು ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ಬೆನ್ ಸ್ಟೋಕ್ಸ್ ಪ್ರತಿಕ್ರಿಯೆ ನೀಡಿದ್ದು, ಮಾರ್ಗನ್ ಮುನ್ನ ನರೈನ್? ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿದ್ದ ಯುವರಾಜ್ ಸಿಂಗ್, ಸ್ಟೋಕ್ಸ್ ಮುನ್ನ ಯುವರಾಜ್ ಸಿಂಗ್ ಹೇಳಿದ್ದರು.

    ಕೆಲವು ಭಾರೀ ಉತ್ತಮ ಬ್ಯಾಟ್ಸ್‍ಮನ್ ಮುನ್ನ ಬೌಲಿಂಗ್ ಮಾಡೋ ಆಲ್‍ರೌಂಡರ್ ಕಣಕ್ಕಿಳುವ ಅವಕಾಶ ನೀಡಬೇಕು ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ. ಯುವಿ, ಸ್ಟೋಕ್ಸ್ ಉತ್ತಮ ಆಲ್‍ರೌಂಡರ್ ಆಗಿದ್ದು, ಬೌಲಿಂಗ್ ಹಾಗೂ ಬ್ಯಾಟಿಂಗ್‍ನಲ್ಲೂ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ. ಈ ಟ್ವೀಟ್ ಮೂಲಕ ಯುವರಾಜ್ ಸಿಂಗ್ ಬೆನ್ ಸ್ಟೋಕ್ಸ್ ಕಾಲೆಳೆಯಲು ಪ್ರಯತ್ನಿಸಿದ್ದಾರೆ.

    ಬೆನ್‍ಸ್ಟೋಕ್ಸ್ ತಂದೆ ಅನಾರೋಗ್ಯ ಕಾರಣದಿಂದ ಐಪಿಎಲ್‍ನ ಮೊದಲ 5 ಪಂದ್ಯಗಳಿಂದ ದೂರ ಉಳಿದಿದ್ದರು. ಆದರೆ ಮತ್ತೆ ಬುಧವಾರ ಯುಎಇಗೆ ಸ್ಟೋಕ್ಸ್ ವಾಪಸ್ ಆಗಿದ್ದು, ಕ್ವಾರಂಟೈನ್‍ಗೆ ಒಳಗಾಗಿದ್ದಾರೆ. ರಾಜಸ್ಥಾನ ತಂಡ ಕಳೆದ ಮೂರು ಪಂದ್ಯಗಳಲ್ಲಿ ಸೋಲುಂಡಿದ್ದು, ಈ ವೇಳೆ ಸ್ಟೋಕ್ಸ್ ತಂಡಕ್ಕೆ ವಾಪಸ್ ಆಗುತ್ತಿರುವುದು ಮತ್ತಷ್ಟು ಬಲ ನೀಡುವ ಸಾಧ್ಯತೆ ಇದೆ.

  • ಭಾರತದ ಮೂಲದ ವೈದ್ಯರಿಗೆ ವಿಶೇಷ ಗೌರವ ಸಲ್ಲಿಸಿದ ಇಂಗ್ಲೆಂಡ್ ಕ್ರಿಕೆಟ್

    ಭಾರತದ ಮೂಲದ ವೈದ್ಯರಿಗೆ ವಿಶೇಷ ಗೌರವ ಸಲ್ಲಿಸಿದ ಇಂಗ್ಲೆಂಡ್ ಕ್ರಿಕೆಟ್

    ಸೌತಾಂಪ್ಟನ್: ಬರೋಬ್ಬರು 117 ದಿನಗಳ ಬಳಿಕ ಕ್ರಿಕೆಟ್ ಚಟುವಟಿಕೆಗಳು ಆರಂಭವಾಗಿದ್ದು, ಇಂಗ್ಲೆಂಡ್ ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಪಂದ್ಯ ಮಳೆಯ ಅಡೆತಡೆಯ ನಡುವೆಯೂ ಸಾಗುತ್ತಿದೆ. ಇತ್ತ ಇಂಗ್ಲೆಂಡ್ ಕ್ರಿಕೆಟ್ ತಂಡ ಭಾರತ ಮೂಲದ ನಾಲ್ವರು ವೈದ್ಯರಿಗೆ ವಿಶೇಷವಾಗಿ ಗೌರವ ಸಲ್ಲಿಸಿದೆ.

    ಕೋವಿಡ್-19 ಸಂದಿಗ್ಧ ಸಂದರ್ಭದಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸಿದ್ದ ವೈದ್ಯರ ಹೆಸರಗಳನ್ನು ತಮ್ಮ ಜೆರ್ಸಿ ಮೇಲೆ ಮುದ್ರಿಸಿ ಕಣಕ್ಕೆ ಇಳಿಯುವ ಮೂಲಕ ವಿಶೇಷ ಗೌರವ ಅರ್ಪಿಸಿದೆ. ‘ರೈಸ್ ದಿ ಬ್ಯಾಟ್’ ಅಭಿಯಾನಕ್ಕೆ ಡಾ. ವಿಕಾಸ್ ಕುಮಾರ್ ಅವರು ನಾಮನಿರ್ದೇಶನ ಮಾಡಲಾಗಿದೆ. ವಿಕಾಸ್ ಕುಮಾರ್ ನ್ಯಾಷನಲ್ ಹೆಲ್ತ್ ಸರ್ವಿಸ್ (ಎನ್‍ಎಚ್‍ಎಸ್) ಟಸ್ಟ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿದ್ದರು.

    35 ವರ್ಷದ ವಿಕಾಸ್ ಅವರ ಹೆಸರು ಮುದ್ರಿಸಿರುವ ಜೆರ್ಸಿಯನ್ನು ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಧರಿಸಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಕಾಸ್ ಅವರು, ಸ್ಟೋಕ್ಸ್ ಹಾಗೂ ಇತರೇ ಆಟಗಾರರು ವೈದ್ಯರ ಸಂದೇಶದ ಜೆರ್ಸಿ ಧರಿಸಿದ್ದನ್ನು ಕಂಡಾಗ ಸಂತಸವಾಗಿತ್ತು. ಈ ಸಂದರ್ಭ ನಮಗೆಲ್ಲರಿಗೂ ತುಂಬಾ ಕಷ್ಟಕರವಾಗಿದೆ. ಎನ್‍ಎಚ್‍ಎಸ್ ಸಿಬ್ಬಂದಿ ಸಾಕಷ್ಟು ತ್ಯಾಗ ಮಾಡಿದ್ದಾರೆ. ಈ ಗೌರವ ಭಾರತದ ವೈದ್ಯ ಸ್ನೇಹಿತರು ಸೇರಿದಂತೆ ಎಲ್ಲ ಸಿಬ್ಬಂದಿಗೂ ಸಲ್ಲುತ್ತದೆ ಎಂದು ಹೇಳಿದ್ದಾರೆ.

    ವಿಕಾಸ್ ಕುಮಾರ್ ದೆಹಲಿಯ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದು, ಮೌಲಾನಾ ಅಜಾದ್ ಮೆಡಿಕಲ್ ಕಾಲೇಜಿನಲ್ಲಿ ಅರಿವಳಿಕೆ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪೂರೈಸಿದ್ದರು. 2019ರಲ್ಲಿ ಇಂಗ್ಲೆಂಡ್‍ಗೆ ಕುಟುಂಬದೊಂದಿಗೆ ತೆರಳಿದ್ದ ವಿಕಾಶ್ ಕುಮಾರ್ ಅಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ.

    ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ವಿಡಿಯೋ ಸಂದೇಶದ ಮೂಲಕ ವೈದ್ಯ ವಿಕಾಸ್ ಕುಮಾರ್ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ವಿಕಾಸ್ ಕುಮಾರ್ ಅವರೊಂದಿಗೆ ಭಾರತದ ಮೂಲದ ಡಾ.ಜಮಾಸ್ಲ್ ಕೈಕುಸ್ರೂ ದಸ್ತೂರ್, ಡಾ. ಹರಿಕೃಷ್ಣ ಶಾ, ಕ್ರಿಶನ್ ಅಘಾದಾ ಅವರ ಹೆಸರುಗಳನ್ನು ಆಟಗಾರರ ಜೆರ್ಸಿ ಮೇಲೆ ಮುದ್ರಿಸಿ ಗೌರವ ಸೂಚಿಸಲಾಗಿತ್ತು.

  • ಬರ್ತ್‍ಡೇ ಬಾಯ್ ಬೆನ್ ಸ್ಟೋಕ್ಸ್ ಕಾಲೆಳೆಯುತ್ತಿರುವ ಕೊಹ್ಲಿ ಅಭಿಮಾನಿಗಳು!

    ಬರ್ತ್‍ಡೇ ಬಾಯ್ ಬೆನ್ ಸ್ಟೋಕ್ಸ್ ಕಾಲೆಳೆಯುತ್ತಿರುವ ಕೊಹ್ಲಿ ಅಭಿಮಾನಿಗಳು!

    ಮುಂಬೈ: ಇಂಗ್ಲೆಂಡ್ ತಂಡದ ಆಲ್‍ರೌಂಡರ್ ಬೆನ್ ಸ್ಟೋಕ್ಸ್ ಇಂದು ತಮ್ಮ 29ನೇ ವಸಂತಕ್ಕೆ ಕಾಲಿಟ್ಟಿದ್ದು, ವಿಶ್ವ ಹಲವು ಕ್ರಿಕೆಟ್ ಅಭಿಮಾನಿಗಳು ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭ ಕೋರುತ್ತಿದ್ದಾರೆ. ಆದರೆ ಕೊಹ್ಲಿ ಅಭಿಮಾನಿಗಳು ಮಾತ್ರ ಶುಭ ಕೋರುವ ಮೂಲಕ ಬೆನ್ ಸ್ಟೋಕ್ಸ್ ಕಾಲೆಳೆಯುತ್ತಿದ್ದಾರೆ.

    ಪಂದ್ಯವೊಂದರಲ್ಲಿ ಬೆನ್ ಸ್ಟೋಕ್ಸ್ ವಿಕೆಟ್ ಉರುಳಿದ ಸಂದರ್ಭದಲ್ಲಿ ಕೊಹ್ಲಿ ಒಂದು ಅಸಭ್ಯ ಶಬ್ದ ಬಳಸಿ ಇತರೇ ಆಟಗಾರರೊಂದಿಗೆ ಸಂಭ್ರಮ ನಡೆಸಿದ್ದರು. ಸದ್ಯ ಈ ವಿಡಿಯೋವನ್ನೇ ಟ್ವೀಟ್ ಮಾಡುವ ಮೂಲಕ ಕೊಹ್ಲಿ ಅಭಿಮಾನಿಗಳು ಸ್ಟೋಕ್ಸ್ ಕಾಲೆಳೆಯುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ 2019ರ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸೋಲಿಗೆ ನಾಯಕ ವಿರಾಟ್ ಕೊಹ್ಲಿಯೇ ಪ್ರಮುಖ ಕಾರಣ ಎಂದು ಸ್ಟೋಕ್ಸ್ ತಮ್ಮ ಪುಸ್ತಕವೊಂದರಲ್ಲಿ ನಮೂದಿಸಿದ್ದರು. ಆ ವೇಳೆ ಕೊಹ್ಲಿ ಅಭಿಮಾನಿಗಳು ಸ್ಟೋಕ್ಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

    ಸ್ಟೋಕ್ಸ್ ವಿರುದ್ಧ ಅಸಮಾಧಾನ ಹೊಂದಿದ್ದ ಅಭಿಮಾನಿಗಳು ಅವರ ಹುಟ್ಟುಹಬ್ಬದ ದಿನ ಶುಭ ಕೋರುವ ಮೂಲಕ ಕಾಲೆಳೆಯುತ್ತಿದ್ದಾರೆ. ಅಂದಹಾಗೇ ಕೊಹ್ಲಿ ವಿಶ್ವಕಪ್ ಪಂದ್ಯದ ಸೋಲಿಗೆ ಕಾರಣ ಎಂದಿದ್ದ ಸ್ಟೋಕ್ಸ್, ಭಾರತ ತಂಡ ಪಂದ್ಯದಲ್ಲಿ ಗೆಲ್ಲುವ ಯಾವುದೇ ರೀತಿ ಪ್ರಯತ್ನವನ್ನು ತೋರಿಸಿರಲಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಲ್ಲದೇ ಹಲವು ಸಂದರ್ಭದಲ್ಲಿ ಸ್ಟೋಕ್ಸ್, ಕೊಹ್ಲಿ ವಿರುದ್ಧ ವಿಮರ್ಶೆಗಳನ್ನು ಮಾಡಿದ್ದರು.

    ಅಭಿಮಾನಿಗಳು ಶೇರ್ ಮಾಡುತ್ತಿರುವ ವಿಡಿಯೋ ಬಗ್ಗೆ ಈ ಹಿಂದೆಯೇ ಸ್ಪಷ್ಟನೆ ನೀಡಿದ್ದ ಬೆನ್ ಸ್ಟೋಕ್ಸ್, ವಿಡಿಯೋದಲ್ಲಿ ಕೊಹ್ಲಿ ಅಸಭ್ಯ ಪದ ಬಳಕೆ ಮಾಡಿಲ್ಲ. ತಮ್ಮ ಹೆಸರನ್ನೇ ಹೇಳಿದ್ದಾರೆ ಅಷ್ಟೇ. ಇಂತಹ ಟ್ವೀಟನ್ನು ನಾನು ಮತ್ತೊಮ್ಮೆ ನೋಡಲು ಬಯಸುವುದಿಲ್ಲ. ಆದ್ದರಿಂದ ನಾನು ಟ್ವಿಟ್ಟರ್ ಖಾತೆಯನ್ನೇ ತೊರೆಯಬೇಕೆನೋ. ಸದ್ಯ ಇದು ತಮಾಷೆ ಎನಿಸಿದರೂ ಕೋಪಗೊಳ್ಳುವಂತೆ ಮಾಡುತ್ತಿದೆ ಎಂದು ಕಳೆದ ವರ್ಷ ಟ್ವೀಟ್ ಮಾಡಿದ್ದರು. ಆದರೆ ವಿಡಿಯೋ ನೋಡಿದ ಸಂದರ್ಭದಲ್ಲಿ ಕೊಹ್ಲಿ ಅಸಭ್ಯ ಪದ ಬಳಕೆ ಮಾಡಿರುವುದು ಸ್ಪಷ್ಟವಾಗಿ ಅರಿವಾಗುತ್ತದೆ.

    ಕಳೆದ ವರ್ಷ ಇಂಗ್ಲೆಂಡ್ ತಂಡದ ಪರ ಅತ್ಯುತ್ತಮ ಪ್ರದರ್ಶನ ತೋರಿದ್ದ ಬೆನ್ ಸ್ಟೋಕ್ಸ್ 2020ರ ವಿಸ್ಡನ್ ಕ್ರಿಕೆಟ್ ಆಟಗಾರನಾಗಿ ಆಯ್ಕೆಯಾಗಿದ್ದರು. ಅಲ್ಲದೆ ಇಂಗ್ಲೆಂಡ್ ಕ್ರಿಕೆಟ್ ತಂಡದ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೇ ಆ್ಯಶಸ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ತಂಡಕ್ಕೆ ಜಯ ತಂದುಕೊಟ್ಟಿದ್ದರು. ಸ್ಟೋಕ್ಸ್ ಕಳೆದ ವರ್ಷ ಟೆಸ್ಟ್ ಕ್ರಿಕೆಟ್‍ನಲ್ಲಿ 821 ರನ್, ಏಕದಿನ ಕ್ರಿಕೆಟ್‍ನಲ್ಲಿ 719 ರನ್ ಸಿಡಿಸಿದ್ದರು. 2019ರ ಐಸಿಸಿ ಪ್ಲೇಯರ್ ಆಫ್ ಇಯರ್ ಪ್ರಶಸ್ತಿಯನ್ನು ಪಡೆದಿದ್ದರು.