Tag: Ben Stokes

  • ಮೊದಲ ದಿನವೇ ʻಯಶಸ್ವಿʼ ಶತಕದ ಹೋರಾಟ – ಭರ್ಜರಿ ಮೊತ್ತದತ್ತ ಭಾರತ

    ಮೊದಲ ದಿನವೇ ʻಯಶಸ್ವಿʼ ಶತಕದ ಹೋರಾಟ – ಭರ್ಜರಿ ಮೊತ್ತದತ್ತ ಭಾರತ

    – ಮೊದಲ ದಿನದಾಟಕ್ಕೆ ಭಾರತ 336ಕ್ಕೆ 6 ವಿಕೆಟ್‌
    – 179 ರನ್‌ ಬಾರಿಸಿ ಯಶಸ್ವಿ ಜೈಸ್ವಾಲ್‌ ಏಕಾಂಗಿ ಹೋರಾಟ

    ವಿಶಾಖಪಟ್ಟಣಂ: ಭಾರತ ಮತ್ತು ಇಂಗ್ಲೆಂಡ್ (Ind vs Eng) ನಡುವಿನ 2ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮುಕ್ತಾಯಗೊಂಡಿದೆ. 336 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡಿರುವ ಭಾರತ (Team India) ಬೃಹತ್‌ ಮೊತ್ತದತ್ತ ದಾಪುಗಾಲಿಟ್ಟಿದೆ.

    ವಿಶಾಖಪಟ್ಟಣಂನ ಡಾ.ವೈ.ಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಭಾರತ ಮೊದಲ ದಿನದಾಟದಲ್ಲಿ 93 ಓವರ್‌ಗಳಲ್ಲಿ 336 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡಿದೆ. ಇದನ್ನೂ ಓದಿ: ಆಂಗ್ಲರ ವಿರುದ್ಧ ಯಶಸ್ವಿ ಜೈಸ್ವಾಲ್‌ ಬೊಂಬಾಟ್‌ ಶತಕ – ಬೃಹತ್‌ ಮೊತ್ತದತ್ತ ಭಾರತ

    ಆರಂಭಿಕರಾಗಿ ರೋಹಿತ್ ಶರ್ಮಾ (Rohit Sharma) ಹಾಗೂ ಯಶಸ್ವಿ ಜೈಸ್ವಾಲ್ (Yashasvi Jaiswal) ಜೋಡಿ ಮೊದಲ ವಿಕೆಟ್‌ಗೆ 17.3 ಓವರ್‌ಗಳಲ್ಲಿ 40 ರನ್‌ ಕಲೆಹಾಕಿತ್ತು. ರೋಹಿತ್‌ 41 ಎಸೆತಗಳಲ್ಲಿ ಎದುರಿಸಿ 14 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಅಲ್ಪ,ಮೊತ್ತಕ್ಕೆ ಔಟಾಗಿ ಪೆವಿಲಿಯನ್‌ನತ್ತ ಮುಖ ಮಾಡಿದರು. ಶುಭಮನ್‌ ಗಿಲ್‌ 46 ಎಸೆತಗಳಲ್ಲಿ 34 ರನ್‌, ಶ್ರೇಯಸ್‌ ಅಯ್ಯರ್‌ 59 ಎಸೆತಗಳಲ್ಲಿ 27 ರನ್‌, ರಜತ್‌ ಪಾಟಿದಾರ್‌ 72 ಎಸೆತಗಳಲ್ಲಿ 32 ರನ್‌, ಅಕ್ಷರ್‌ ಪಟೇಲ್‌ 51 ಎಸೆತಗಳಲ್ಲಿ 27 ರನ್‌ ಗಳಿಸಿ ಔಟಾದರು. ಇನ್ನೂ ಯುವ ಆರಂಭಿಕ ಯಶಸ್ವಿ ಜೈಸ್ವಾಲ್‌ 179 ರನ್‌ (257 ಎಸೆತ, 17 ಬೌಂಡರಿ, 5 ಸಿಕ್ಸರ್‌) ಹಾಗೂ ರವಿಚಂದ್ರನ್‌ ಅಶ್ವಿನ್‌ 5 ರನ್‌ ಗಳಿಸಿದ್ದು, ಶನಿವಾರ ಕ್ರೀಸ್‌ ಮುಂದುವರಿಸಲಿದ್ದಾರೆ.

    ದ್ವಿಶತಕದತ್ತ ಯಶಸ್ವಿ ಚಿತ್ತ:
    ಟೀಂ ಇಂಡಿಯಾದ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದ ನಡುವೆಯೂ ಏಕಾಂಗಿ ಹೋರಾಟದ ಜೊತೆಗೆ ಆಕರ್ಷಕ ಬ್ಯಾಟಿಂಗ್ ನಡೆಸಿದ ಜೈಸ್ವಾಲ್ ಮೊದಲ ದಿನದಾಟದಲ್ಲೇ ಅಜೇಯ ಶತಕ ಸಿಡಿಸಿ ಮಿಂಚಿದ್ದಾರೆ. ಶನಿವಾರದ ಆಟದಲ್ಲಿ ದ್ವಿಶತಕ ಸಿಡಿಸಿ ಹಲವು ದಿಗ್ಗಜರ ದಾಖಲೆಗಳನ್ನ ಮುರಿಯುವ ಸನಿಹದಲ್ಲಿದ್ದಾರೆ. ಇದನ್ನೂ ಓದಿ: RCB ಸ್ಟಾರ್‌ ಎಲ್ಲಿಸ್‌ ಪೆರ್ರಿ, ಮಿಚೆಲ್‌ ಮಾರ್ಷ್‌ ಸೇರಿದಂತೆ ಹಲವರಿಗೆ Cricketer Of The year-2023 ಪ್ರಶಸ್ತಿ

    151 ಎಸೆತಗಳಲ್ಲಿ 11 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ ಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್, 224 ಎಸೆತಗಳಲ್ಲಿ 150 ರನ್ ಬಾರಿಸಿದ್ದರು. ಬಳಿಕ ಇನ್ನಿಂಗ್ಸ್‌ ಮುಕ್ತಾಯದ ವೇಳೆಗೆ 257 ಎಸೆತಗಳಲ್ಲಿ 179 ರನ್‌ ಬಾರಿಸಿ ಕ್ರೀಸ್‌ ಉಳಿಸಿಕೊಂಡಿದ್ದಾರೆ. ಇದು ಯಶಸ್ವಿ ಜೈಸ್ವಾಲ್ ಅವರ 2ನೇ ಟೆಸ್ಟ್ ಶತಕವಾಗಿದೆ. ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಮೊದಲ ಟೆಸ್ಟ್ ಶತಕ ಸಿಡಿಸಿದ್ದರು.

    ಇನ್ನೂ ಇಂಗ್ಲೆಂಡ್‌ ತಂಡದ ಪರ ಬೌಲಿಂಗ್‌ನಲ್ಲಿ ಪ್ರಾಬಲ್ಯ ಮೆರೆದ ರೆಹಾನ್ ಅಹ್ಮದ್, ಶೋಯೆಬ್ ಬಶೀರ್ ತಲಾ 2 ವಿಕೆಟ್‌ ಪಡೆದರೆ, ಟಾಮ್ ಹಾರ್ಟ್ಲಿ, ಜೇಮ್ಸ್ ಆಂಡರ್ಸನ್ ತಲಾ ಒಂದೊಂದು ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು. ಇದನ್ನೂ ಓದಿ: ICUನಲ್ಲಿ ಮಯಾಂಕ್ ಅಗರ್ವಾಲ್ – ಆರೋಗ್ಯದ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ILS ಆಸ್ಪತ್ರೆ

  • ಆಂಗ್ಲರ ವಿರುದ್ಧ ಯಶಸ್ವಿ ಜೈಸ್ವಾಲ್‌ ಬೊಂಬಾಟ್‌ ಶತಕ – ಬೃಹತ್‌ ಮೊತ್ತದತ್ತ ಭಾರತ

    ಆಂಗ್ಲರ ವಿರುದ್ಧ ಯಶಸ್ವಿ ಜೈಸ್ವಾಲ್‌ ಬೊಂಬಾಟ್‌ ಶತಕ – ಬೃಹತ್‌ ಮೊತ್ತದತ್ತ ಭಾರತ

    ವಿಶಾಖಪಟ್ಟಣಂ: ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾದ (Team India) ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಆಕರ್ಷಕ ಶತಕ ಬಾರಿಸಿ ಮಿಂಚಿದ್ದಾರೆ. ಜೈಸ್ವಾಲ್ ಬಾರಿಸಿದ 2ನೇ ಟೆಸ್ಟ್ ಶತಕದ ನೆರವಿನಿಂದ ಟೀಂ ಇಂಡಿಯಾ, ಮೊದಲ ದಿನದಾಟದಲ್ಲೇ 300 ರನ್‌ಗಳ ಗಡಿ ದಾಟಿದೆ.

    ವಿಶಾಖಪಟ್ಟಣಂನ ಡಾ.ವೈ.ಎಸ್‌ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್‌ ಆಯ್ದುಕೊಂಡು ಬೌಲಿಂಗ್‌ ಮಾಡುವ ಅವಕಾಶವನ್ನು ಇಂಗ್ಲೆಂಡ್‌ಗೆ ಬಿಟ್ಟುಕೊಟ್ಟಿತು. ಆರಂಭಿಕರಾದ ರೋಹಿತ್ ಶರ್ಮಾ (Rohit Sharma) ಹಾಗೂ ಯಶಸ್ವಿ ಜೈಸ್ವಾಲ್ 17.3 ಓವರ್‌ಗಳಲ್ಲಿ 40 ರನ್‌ಗಳ ಜೊತೆಯಾಟವಾಡಿದರು. ಈ ವೇಳೆ ಹಿಟ್‌ಮ್ಯಾನ್‌ 41 ಎಸೆತಗಳನ್ನು ಎದುರಿಸಿ 14 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ಬೆನ್ನಲ್ಲೇ ಶುಭಮನ್‌ ಗಿಲ್‌ 34 ರನ್‌, ಶ್ರೇಯಸ್‌ ಅಯ್ಯರ್‌ 27 ರನ್‌ ಹಾಗೂ ರಜತ್‌ ಪಾಟಿದಾರ್‌ 32 ರನ್‌ ಬಾರಿಸಿ ಪೆಲಿಯನ್‌ನತ್ತ ಮುಖ ಮಾಡಿದರು. ಇದನ್ನೂ ಓದಿ: RCB ಸ್ಟಾರ್‌ ಎಲ್ಲಿಸ್‌ ಪೆರ್ರಿ, ಮಿಚೆಲ್‌ ಮಾರ್ಷ್‌ ಸೇರಿದಂತೆ ಹಲವರಿಗೆ Cricketer Of The year-2023 ಪ್ರಶಸ್ತಿ

    ಯಶಸ್ವಿ ಬೊಂಬಾಟ್‌ ಶತಕ:
    ಟೀಂ ಇಂಡಿಯಾದ ಅಗ್ರ ಕ್ರಮಾಂದ ಬ್ಯಾಟರ್‌ಗಳ ವೈಫಲ್ಯದ ನಡುವೆಯೂ ಆಕರ್ಷಕ ಬ್ಯಾಟಿಂಗ್‌ ನಡೆಸಿದ 2ನೇ ಪಂದ್ಯದ ಮೊದಲ ಇನ್ನಿಂಗ್ಸ್‌ನ ಮೊದಲ ದಿನವೇ ಭರ್ಜರಿ ಶತಕ ಸಿಡಿಸಿದರು. ಆ ನಂತರವೂ ಜೈಸ್ವಾಲ್‌ ಬ್ಯಾಟಿಂಗ್‌ ಅಬ್ಬರ ಮುಂದುವರಿಯಿತು. ಇದನ್ನೂ ಓದಿ: ICUನಲ್ಲಿ ಮಯಾಂಕ್ ಅಗರ್ವಾಲ್ – ಆರೋಗ್ಯದ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ILS ಆಸ್ಪತ್ರೆ

    151 ಎಸೆತಗಳಲ್ಲಿ 11 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ ಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್‌, 224 ಎಸೆತಗಳಲ್ಲಿ 150 ರನ್‌ ಬಾರಿಸಿ ಕ್ರೀಸ್‌ ಮುಂದುವರಿಸಿದ್ದಾರೆ. ಇದರಲ್ಲಿ 16 ಬೌಂಡರಿ ಹಾಗೂ 4 ಸಿಕ್ಸರ್‌ಗಳೂ ಸೇರಿವೆ. ಅಲ್ಲದೇ ಇದು ಯಶಸ್ವಿ ಜೈಸ್ವಾಲ್‌ ಅವರ 2ನೇ ಟೆಸ್ಟ್‌ ಶತಕವಾಗಿದೆ. ‌ವೆಸ್ಟ್‌ ಇಂಡೀಸ್‌ ವಿರುದ್ಧ ತಮ್ಮ ಮೊದಲ ಟೆಸ್ಟ್‌ ಶತಕ ಸಿಡಿಸಿದ್ದರು. ಸದ್ಯ 238 ಎಸೆತಗಳಲ್ಲಿ 163 ರನ್‌ ಗಳಿಸಿ ಕ್ರೀಸ್‌ ಮುಂದುವರಿಸಿರುವ ಜೈಸ್ವಾಲ್‌ ದ್ವಿಶತಕ ಸಿಡಿಸುವ ಉತ್ಸಾಹದಲ್ಲಿದ್ದು, ಹಲವು ದಾಖಲೆಗಳನ್ನ ಮುರಿಯಲು ಎದುರು ನೋಡುತ್ತಿದ್ದಾರೆ. ಇದನ್ನೂ ಓದಿ: ಕೊಹ್ಲಿ ಜೊತೆಗಿನ ನೆನಪು ಹಂಚಿಕೊಂಡ ಸ್ಟಾರ್‌ ವೇಗಿ – ಮಿಚೆಲ್ ಸ್ಟಾರ್ಕ್ ವಿಶ್ವದ ಅತ್ಯುತ್ತಮ ಆಟಗಾರನಂತೆ

  • ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ಬೆಚ್ಚಿದ ಆಂಗ್ಲ ಪಡೆ – ಮೊದಲ ದಿನದಾಟದಲ್ಲೇ 246 ರನ್‍ಗೆ ಆಲೌಟ್‌ !

    ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ಬೆಚ್ಚಿದ ಆಂಗ್ಲ ಪಡೆ – ಮೊದಲ ದಿನದಾಟದಲ್ಲೇ 246 ರನ್‍ಗೆ ಆಲೌಟ್‌ !

    ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂದಿನಿಂದ ಆರಂಭಗೊಂಡ ಟೀಂ ಇಂಡಿಯಾ (Team India) ಹಾಗೂ ಇಂಗ್ಲೆಂಡ್ (England) ವಿರುದ್ಧದ ಮೊದಲ ಟೆಸ್ಟ್ ಪಂದ್ಯದ (IND vs ENG 1st Test) ಮೊದಲ ಇನ್ನಿಂಗ್ಸ್‌ನ 64.3 ಓವರ್‌ಗಳಲ್ಲಿ 246 ರನ್‍ಗಳಿಗೆ ಪ್ರವಾಸಿ ತಂಡ ಸರ್ವಪತನ ಕಂಡಿದೆ. ಈ ಮೂಲಕ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡಕ್ಕೆ ಟೀಂ ಇಂಡಿಯಾ ಶಾಕ್ ನೀಡಿದೆ.

    ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ (Ben Stokes) ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಪಂದ್ಯದ ಆರಂಭದಿಂದಲೇ ಭಾರತೀಯ ಬೌಲರ್‌ಗಳ ದಾಳಿಗೆ ಬೆಚ್ಚಿದ ಇಂಗ್ಲೆಂಡ್ ತಂಡ ಕೇವಲ 64.3 ಓವರ್‌ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. 246 ರನ್‍ಗೆ ಅಲೌಟ್ ಆಗಿದೆ. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದ ಕೊಹ್ಲಿ

    ಭಾರತದ ಬೌಲರ್‌ಗಳಾದ ಆರ್.ಅಶ್ವಿನ್ 21 ಓವರ್‌ಗಳಿಗೆ 68 ರನ್ ನೀಡಿ 3 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ 18 ಓವರ್‍ಗೆ 88 ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ ಅಕ್ಷರ್ ಪಟೇಲ್ 2 ವಿಕೆಟ್ ಮತ್ತು ಜಸ್ಪ್ರೀತ್ ಬುಮ್ರಾ 2 ವಿಕೆಟ್ ಪಡೆದು ಮಿಂಚಿದರು. ಈ ಮೂಲಕ ಟೀಂ ಇಂಡಿಯಾದ ಸ್ಪಿನ್ನರ್‌ಗಳು ಅಬ್ಬರದ ಬೌಲಿಂಗ್ ರುಚಿಯನ್ನು ಇಂಗ್ಲೆಂಡ್‍ಗೆ ತೋರಿಸಿದ್ದಾರೆ.

    ಇಂಗ್ಲೆಂಡ್ ಪರ ಆರಂಭಿಕ ಜೋಡಿಯಾದ ಜ್ಯಾಕ್ ಕ್ರಾಲಿ ಮತ್ತು ಬೆನ್ ಡಕೆಟ್ ಅರ್ಧಶತಕದ ಆರಂಭ ನೀಡಿದರು. ಬಳಿಕ 20 ರನ್ ಗಳಿಸಿ ಜ್ಯಾಕ್ ಕ್ರಾಲಿ ಔಟಾದರು. ಇವರ ಬೆನ್ನಲ್ಲೇ ಓಲಿ ಪೋಪ್ ಕೇವಲ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬೆನ್ ಡಕೆಟ್ 35 ರನ್ ಗಳಿಸಿ ಪೆವೆಲಿಯನ್‍ಗೆ ಮರಳಿದರು. ಇನ್ನಿಂಗ್ಸ್‍ನ ಅಂತಿಮ ಹಂತದವರೆಗೂ ನಾಯಕ ಬೆನ್ ಸ್ಟೋಕ್ಸ್ ಏಕಾಂಗಿಯಾಗಿ ತಂಡದ ಮೊತ್ತ ಹೆಚ್ಚಿಸಲು ಪ್ರಯತ್ನಿಸಿದರು. ಈ ವೇಳೆ ಸ್ಟೋಕ್ಸ್ 88 ಎಸೆತದಲ್ಲಿ 3 ಸಿಕ್ಸ್ ಮತ್ತು 7 ಬೌಂಡರಿ ಚಚ್ಚುವ ಮೂಲಕ 70 ರನ್ ದಾಖಲಿಸಿದರು. ಉಳಿದ ಆಟಗಾರರಾದ, ಜೋ ರೂಟ್ 29 ರನ್, ಜಾನಿ ಬೈರ್‍ಸ್ಟೋವ್ 37 ರನ್, ಬೆನ್ ಫಾಕ್ಸ್ 4 ರನ್, ರೆಹಾನ್ ಅಹ್ಮದ್ 13 ರನ್, ಟಾಮ್ ಹಾಟ್ರ್ಲೀ 23 ರನ್, ಮಾರ್ಕ್ ವುಡ್ 11 ರನ್ ಗಳಿಸಿದರು.

    ಟೀಂ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್‍ಮನ್ ಗಿಲ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಕೆಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಜಸ್?ಪ್ರೀತ್ ಬುಮ್ರಾ (ಉಪನಾಯಕ), ಮೊಹಮ್ಮದ್ ಸಿರಾಜ್.

    ಇಂಗ್ಲೆಂಡ್: ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಜಾನಿ ಬೈರ್‍ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫಾಕ್ಸ್, ರೆಹಾನ್ ಅಹ್ಮದ್, ಟಾಮ್ ಹಾಟ್ರ್ಲೀ, ಮಾರ್ಕ್ ವುಡ್, ಜಾಕ್ ಲೀಚ್. ಇದನ್ನೂ ಓದಿ: ‘ಜೈ ಶ್ರೀರಾಮ್‌ ಇಂಡಿಯಾ’: ವಿಶೇಷ ಪೋಸ್ಟ್‌ ಮೂಲಕ ರಾಮಮಂದಿರ ಪ್ರಾಣ ಪ್ರತಿಷ್ಠೆ ಆಚರಿಸಿದ ಡೇವಿಡ್‌ ವಾರ್ನರ್‌

  • World Cup 2023: ಗೆದ್ದು ಆಟ ಮುಗಿಸಿದ ಇಂಗ್ಲೆಂಡ್‌ – ಹೀನಾಯ ಸೋಲಿನೊಂದಿಗೆ ಪಾಕ್‌ ಮನೆಗೆ

    World Cup 2023: ಗೆದ್ದು ಆಟ ಮುಗಿಸಿದ ಇಂಗ್ಲೆಂಡ್‌ – ಹೀನಾಯ ಸೋಲಿನೊಂದಿಗೆ ಪಾಕ್‌ ಮನೆಗೆ

    ಕೋಲ್ಕತ್ತಾ: ಸಂಘಟಿತ ಬ್ಯಾಟಿಂಗ್‌, ಬೌಲಿಂಗ್‌ ನೆರವಿನಿಂದ ಇಂಗ್ಲೆಂಡ್‌ (England) ತಂಡ ಪಾಕಿಸ್ತಾನದ ವಿರುದ್ಧ 93 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 2023ರ ವಿಶ್ವಕಪ್‌ ಆವೃತ್ತಿಗೆ ವಿದಾಯ ಹೇಳಿದರೆ, ಭಾರತದಲ್ಲಿ ವಿಶ್ವಕಪ್‌ (World Cup 2023) ಗೆದ್ದು ಬರುತ್ತೇವೆ ಎಂದು ಬೀಗಿದ್ದ ಪಾಕ್‌ ತಂಡ ಹೀನಾಯ ಸೋಲಿನೊಂದಿಗೆ ವಿದಾಯ ಹೇಳಿದೆ.

    ಇಲ್ಲಿನ ಕೋಲ್ಕತ್ತಾ ಈಡನ್‌ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ ತಂಡ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 337 ರನ್‌ ಗಳಿಸಿತ್ತು. 338 ರನ್‌ಗಳ ಗುರಿ ಬೆನ್ನತ್ತಿದ್ದ ಪಾಕ್‌ (Pakistan) ಅಗ್ರಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದ 43.3 ಓವರ್‌ಗಳಲ್ಲಿ 244 ರನ್‌ಗಳಿಸಿ ಸರ್ವಪತನ ಕಂಡಿತು.

    2021ರ ವಿಶ್ವಕಪ್‌ ಟೂರ್ನಿ ಹಾಗೂ 2023ರ ಏಷ್ಯಾಕಪ್‌ ಟೂರ್ನಿಯಲ್ಲೂ ಪಾಕ್‌ ತಂಡ ನಾಕೌಟ್‌ ಹಂತದಲ್ಲಿ ಸೋತು ನಿರಾಸೆ ಅನುಭವಿಸಿತ್ತು. 2022ರ ಏಷ್ಯಾಕಪ್‌ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ, 2022ರ T20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಫೈನಲ್‌ ಪಂದ್ಯದಲ್ಲಿ ಸೋತು ತವರಿಗೆ ಮರಳಿತ್ತು. ಆದ್ರೆ 2023ರ ಏಕದಿನ ವಿಶ್ವಕಪ್‌ ಆವೃತ್ತಿಯಲ್ಲಿ ಲೀಗ್‌ ಸುತ್ತಿನಲ್ಲೇ ಹೊರಬಿದ್ದಿರುವುದು ಪಾಕ್‌ಗೆ ತೀವ್ರ ಮುಖಬಂಗವಾಗಿದೆ.

    ಸೆಮಿಸ್‌ ಕನಸು ಕಂಡಿದ್ದ ಪಾಕ್‌ ಆರಂಭದಲ್ಲೇ ಆಘಾತ ಅನುಭವಿಸಿತು. 10 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡಿತ್ತು. ಆದ್ರೆ 3ನೇ ವಿಕೆಟ್‌ಗೆ ಬಾಬರ್‌ ಆಜಂ (Babar Azam) ಮತ್ತು ಮೊಹಮ್ಮದ್‌ ರಿಜ್ವಾನ್‌ (Mohammad Rizwan) ಜೋಡಿ 68 ಎಸೆತಗಳಲ್ಲಿ 51 ರನ್‌ಗಳ ಜೊತೆಯಾಟ ನೀಡಿದರೂ ಪ್ರಯೋಜನವಾಗಲಿಲ್ಲ. ಈ ಜೋಡಿ ಔಟಾಗುತ್ತಿದ್ದಂತೆ ತಂಡದ ಪತನ ಆರಂಭವಾಯಿತು. ಕಳಪೆ ಬೌಲಿಂಗ್‌ ಹಾಗೂ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ನೀರಸ ಪ್ರದರ್ಶನದಿಂದ ಪಾಕ್‌ ಹೀನಾಯ ಸೋಲನುಭವಿಸಿತು.

    ಪಾಕ್‌ ಪರ ಅಬ್ದುಲ್ಲಾ ಶಫೀಕ್‌ ಶೂನ್ಯ ಸುತ್ತಿದ್ದರೆ, ಆಘಾ ಸಲ್ಮಾನ್ 51 ರನ್‌ (45 ಎಸೆತ, 6 ಬೌಂಡರಿ, 1 ಸಿಕ್ಸರ್)‌, ಫಖರ್‌ ಝಮಾನ್‌ 1 ರನ್‌, ಬಾಬರ್‌ ಆಜಂ 38 ರನ್‌ (45 ಎಸೆತ, 6 ಬೌಂಡರಿ), ಮೊಹಮ್ಮದ್‌ ರಿಜ್ವಾನ್‌ 36 (51 ರನ್‌, 2 ಬೌಂಡರಿ), ಸೌದ್‌ ಶಕೀಲ್‌ 29 ರನ್‌, ಇಫ್ತಿಕಾರ್‌ ಅಹ್ಮದ್‌ 3 ರನ್‌, ಶಾದಾಬ್‌ ಖಾನ್‌ 3 ರನ್‌, ಶಾಹೀನ್‌ ಶಾ ಅಫ್ರಿದಿ 25 ರನ್‌ ಗಳಿಸಿದರೆ, ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್‌ ಮಾಡಿದ ಹ್ಯಾರಿಸ್‌ ರೌಫ್‌ 23 ಎಸೆತಗಳಲ್ಲಿ 35 ರನ್‌ (3 ಸಿಕ್ಸರ್‌, 3 ಬೌಂಡರಿ) ಗಳಿಸಿದ್ರೆ, ಮೊಹಮ್ಮದ್‌ ವಸೀಮ್‌ 16 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಇಂಗ್ಲೆಂಡ್‌ ತಂಡ, ಕೊನೆಯ ಪಂದ್ಯದಲ್ಲಿ ಸ್ಪೋಟಕ ಇನ್ನಿಂಗ್ಸ್‌ ಆರಂಭಿಸಿತ್ತು. ಮೊದಲ ವಿಕೆಟ್‌ಗೆ ಡೇವಿಡ್‌ ಮಲಾನ್‌ ಹಾಗೂ ಜಾನಿ ಬೈರ್ಸ್ಟೋವ್‌ ಜೋಡಿ 13.3 ಓವರ್‌ಗಳಲ್ಲಿ 82 ರನ್‌ಗಳ ಜೊತೆಯಾಟ ನೀಡಿತ್ತು. ಅಲ್ಲದೇ 3ನೇ ವಿಕೆಟ್‌ಗೆ ಬೆನ್‌ಸ್ಟೋಕ್ಸ್‌ ಮತ್ತು ಜೋ ರೂಟ್‌ 131 ಎಸೆತಗಳಲ್ಲಿ 132 ರನ್‌ಗಳ ಜೊತೆಯಾಟ ನೀಡುವ ಮೂಲಕ ಇನ್ನಿಂಗ್ಸ್‌ ಕಟ್ಟಿದರು. ಇದರಿಂದ ತಂಡದ ಮೊತ್ತ 300ರ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಅಂತಿಮವಾಗಿ 9 ವಿಕೆಟ್‌ ನಷ್ಟಕ್ಕೆ 337 ರನ್‌ ಗಳಿಸಿತು.

    ಇಂಗ್ಲೆಂಡ್‌ ಪರ ಡೇವಿಡ್‌ ಮಲಾನ್‌ 31 ರನ್‌, ಜಾನಿ ಬೈರ್ಸ್ಟೋವ್ 59 ರನ್‌ (61 ಎಸೆತ, 81 ರನ್‌, 7 ಬೌಂಡರಿ, 1 ಸಿಕ್ಸರ್‌), ಜೋ ರೂಟ್‌ 60 ರನ್‌ (72 ಎಸೆತ, 4 ಬೌಂಡರಿ), ಬೆನ್‌ ಸ್ಟೋಕ್ಸ್‌ (Ben Stokes) 84 ರನ್‌ (76 ರನ್‌, 11 ಬೌಂಡರಿ, 2 ಸಿಕ್ಸರ್‌), ಜೋಸ್‌ ಬಟ್ಲರ್‌ (Jos Buttler) 27 ರನ್‌, ಹ್ಯಾರಿ ಬ್ರೂಕ್‌ 30 ರನ್‌ (17 ಎಸೆತ, 2 ಸಿಕ್ಸರ್‌, 2 ಬೌಂಡರಿ, ಮೊಯಿನ್‌ ಅಲಿ 8 ರನ್‌, ಡೇವಿಡ್‌ ವಿಲ್ಲಿ 15 ರನ್‌ ಬಾರಿಸಿದ್ರೆ, ಗಸ್ ಅಟ್ಕಿನ್ಸನ್ ಶೂನ್ಯ ಸುತ್ತಿದ್ದರು. ಕ್ರಿಸ್‌ವೋಕ್ಸ್‌ 4 ರನ್‌ ಮತ್ತು ಆದಿಕ್‌ ರಶೀದ್‌ ಯಾವುದೇ ರನ್‌ ಗಳಿಸಿದೇ ಅಜೇಯಾಗುಳಿದರು.

    ಪಾಕಿಸ್ತಾನ ಪರ ಹ್ಯಾರಿಸ್‌ ರೌಫ್‌ 3 ವಿಕೆಟ್‌, ಶಾಹೀನ್‌ ಶಾ ಅಫ್ರಿದಿ ಮತ್ತು ಮೊಹಮ್ಮದ್‌ ವಸೀಮ್‌ ತಲಾ 2 ವಿಕೆಟ್‌, ಇಫ್ತಿಕಾರ್‌ ಅಹ್ಮದ್‌ 1 ವಿಕೆಟ್‌ ಪಡೆದರು.

  • ಬಾತುಕೋಳಿ ತಲೆಗೆ ಕೊಹ್ಲಿ ಫೋಟೊ ಹಾಕಿ ತಗ್ಲಾಕ್ಕೊಂಡ ಇಂಗ್ಲೆಂಡ್‌ ಫ್ಯಾನ್ಸ್‌ – ಇಂಗ್ಲೆಂಡ್‌ ಆರ್ಮಿಗೆ ಭಾರತ್‌ ಆರ್ಮಿ ಕೌಂಟರ್‌

    ಬಾತುಕೋಳಿ ತಲೆಗೆ ಕೊಹ್ಲಿ ಫೋಟೊ ಹಾಕಿ ತಗ್ಲಾಕ್ಕೊಂಡ ಇಂಗ್ಲೆಂಡ್‌ ಫ್ಯಾನ್ಸ್‌ – ಇಂಗ್ಲೆಂಡ್‌ ಆರ್ಮಿಗೆ ಭಾರತ್‌ ಆರ್ಮಿ ಕೌಂಟರ್‌

    ನವದೆಹಲಿ: ಭಾನುವಾರ ಇಂಗ್ಲೆಂಡ್‌ (England) ವಿರುದ್ಧದ ಪಂದ್ಯದಲ್ಲಿ ಭಾರತ (India) ತಂಡದ ಆಟಗಾರ ವಿರಾಟ್‌ ಕೊಹ್ಲಿ (Virat Kohli) ಡಕೌಟ್‌ ಆಗಿದ್ದನ್ನು ಲೇವಡಿ ಮಾಡಲು ಹೋಗಿ ಇಂಗ್ಲೆಂಡ್‌ ಅಭಿಮಾನಿಗಳು ಪೇಚಿಗೆ ಸಿಲುಕಿದ್ದಾರೆ. ಇಂಗ್ಲೆಂಡ್‌ ಅಭಿಮಾನಿಗಳಿಗೆ ಎರಡು ಡಕ್‌ (ಬಾತುಕೋಳಿ)ಗಳನ್ನ ಗಿಫ್ಟ್‌ ನೀಡಿ ಭಾರತದ ಅಭಿಮಾನಿಗಳು ಕಾಲೆಳೆದಿದ್ದಾರೆ. ಅಷ್ಟಕ್ಕೂ ನಡೆದಿದ್ದೇನು?

    ಭಾನುವಾರ ಲಕ್ನೋದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಹೈವೋಲ್ಟೇಜ್‌ ಪಂದ್ಯ ನಡೆಯಿತು. ಪಂದ್ಯದಲ್ಲಿ ಟಾಸ್‌ ಸೋತು ಭಾರತ ಮೊದಲು ಬ್ಯಾಟಿಂಗ್‌ ಮಾಡಿತು. ಭರವಸೆ ಆಟಗಾರನಾದ ವಿರಾಟ್‌ ಕೊಹ್ಲಿ ಈ ಪಂದ್ಯದಲ್ಲಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. 9 ಬಾಲ್‌ಗಳನ್ನು ಆಡಿದ ಕೊಹ್ಲಿ ಒಂದು ರನ್‌ ಕೂಡ ಕಲೆಹಾಕಲಾಗದೇ ಶೂನ್ಯಕ್ಕೆ ಔಟ್‌ ಆಗಿ ನಿರ್ಗಮಿಸಿದರು. ಕೊಹ್ಲಿ ಡಕೌಟ್‌ ಅನ್ನು ಇಂಗ್ಲೆಂಡ್‌ ಅಭಿಮಾನಿಗಳು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್‌ ವಿರುದ್ಧ 100 ರನ್‌ಗಳ ಭರ್ಜರಿ ಜಯ – 20 ವರ್ಷಗಳ ಬಳಿಕ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತ

    ಇಂಗ್ಲೆಂಡ್ಸ್‌ ಬರ್ಮಿ ಆರ್ಮಿ ತನ್ನ ಎಕ್ಸ್‌ ಖಾತೆಯಲ್ಲಿ, ನೀರಿನಲ್ಲಿ ಈಜುತ್ತಿದ್ದ ಎರಡು ಬಾತುಕೋಳಿಗಳ ಪೈಕಿ ಒಂದರ ತಲೆಗೆ ವಿರಾಟ್‌ ಕೊಹ್ಲಿ ಚಿತ್ರವನ್ನು ಹಾಕಿದ್ದ ಎಡಿಟ್‌ ಫೋಟೊ ಹಾಕಿ ಪೋಸ್ಟ್‌ ಮಾಡಿತ್ತು. ಆ ಫೋಟೊಗೆ ‘ಬೆಳಗ್ಗೆ ವಾಕ್‌ಗೆ ಹೊರಟಾಗ’ ಎಂದು ಶೀರ್ಷಿಕೆ ನೀಡಿತ್ತು. ಇದಕ್ಕೆ ಭಾರತದ ಕ್ರಿಕೆಟ್‌ ಅಭಿಮಾನಿಗಳು ಕೆಂಡಾಮಂಡಲರಾಗಿದ್ದಾರೆ. ಅಲ್ಲದೇ ಭಾರತದ ಫ್ಯಾನ್ಸ್‌, ಇಂಗ್ಲೆಂಡ್‌ ಫ್ಯಾನ್ಸ್‌ಗೆ ಬಿಸಿ ಮುಟ್ಟಿಸಿದ್ದಾರೆ.

    ಅದೇ ಬಾತುಕೋಳಿಗಳ ಫೋಟೊಗೆ ಇಂಗ್ಲೆಂಡ್‌ ಆಟಗಾರರಾದ ಜೋ ರೂಟ್‌ (Joe Root) ಮತ್ತು ಬೆನ್‌ ಸ್ಟೋಕ್ಸ್‌ (Ben Stokes) ತಲೆ ಸೇರಿಸಿ ಇಂಗ್ಲೆಂಡ್‌ ಫ್ಯಾನ್ಸ್‌ಗೆ ದಿ ಭಾರತ್‌ ಆರ್ಮಿ ಕೌಂಟರ್‌ ಕೊಟ್ಟಿದೆ. ಜೋ ರೂಟ್‌ ಇರುವ ಫೋಟೊಗೆ ‘ಸಂಜೆ ವೇಳೆ ವಾಕ್‌ಗೆ ಹೊರಟಾಗ’ ಎಂದು ಶೀರ್ಷಿಕೆ ಕೊಟ್ಟಿದೆ. ಅಲ್ಲದೇ ಬೆನ್‌ ಸ್ಟೋಕ್ಸ್‌ ಇರುವ ಫೋಟೊಗೆ ‘ಎಡಿಟ್‌ ಮಾಡಲು ನಮಗೆ ಸ್ವಲ್ಪ ಸಮಯ ಕೊಡಿ’ ಎಂದು ಶೀರ್ಷಿಕೆ ಕೊಟ್ಟು ಠಕ್ಕರ್‌ ಕೊಟ್ಟಿದೆ.

    ಇಂಗ್ಲೆಂಡ್‌ ಬ್ಯಾಟಿಂಗ್‌ ವೇಳೆ ಜೋ ರೂಟ್‌ ಮತ್ತು ಬೆನ್‌ ಸ್ಟೋಕ್ಸ್‌ ಕೂಡ ಶೂನ್ಯಕ್ಕೆ ಔಟ್‌ ಆಗಿ ನಿರ್ಗಮಿಸಿದ್ದರು. ಹೀಗಾಗಿ ಇಂಗ್ಲೆಂಡ್‌ನ ಒಂದು ಕೌಂಟರ್‌ಗೆ ಭಾರತದ ಫ್ಯಾನ್ಸ್‌ ಎರಡು ಠಕ್ಕರ್‌ ಕೊಟ್ಟಿದ್ದಾರೆ. ಇದನ್ನೂ ಓದಿ: World Cup 2023: ಮಾರಕ ಬೌಲಿಂಗ್‌ ದಾಳಿಗೆ ತಿಣುಕಾಡಿದ ಭಾರತ – ಇಂಗ್ಲೆಂಡ್‌ಗೆ 230 ರನ್‌ ಗುರಿ

    ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ವಿರುದ್ಧ ಭಾನುವಾರ ನಡೆದ ಕ್ರಿಕೆಟ್ ವಿಶ್ವಕಪ್ 2023 ರ ಪಂದ್ಯದಲ್ಲಿ ಭಾರತ 9 ವಿಕೆಟ್‌ ನಷ್ಟಕ್ಕೆ 229 ರನ್‌ ಗಳಿಸಿತ್ತು. ನಾಯಕ ರೋಹಿತ್ ಶರ್ಮಾ ಅವರು ತಂಡದ ಪರ 87 ರನ್‌ ಗಳಿಸಿದ್ದರು. 230 ರನ್‌ಗಳ ಗುರಿ ಬೆನ್ನತ್ತಿದ್ದ ಆಂಗ್ಲರ ಪಡೆ 129 ರನ್‌ಗಳಿಗೆ ಸರ್ವಪತನ ಕಂಡಿತು. ಭಾರತ 100 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಂಗ್ಲೆಂಡ್‌ ವಿರುದ್ಧ 100 ರನ್‌ಗಳ ಭರ್ಜರಿ ಜಯ – 20 ವರ್ಷಗಳ ಬಳಿಕ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತ

    ಇಂಗ್ಲೆಂಡ್‌ ವಿರುದ್ಧ 100 ರನ್‌ಗಳ ಭರ್ಜರಿ ಜಯ – 20 ವರ್ಷಗಳ ಬಳಿಕ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತ

    – 10 ರನ್‌ಗಳ ಅಂತರದಲ್ಲೇ 4 ವಿಕೆಟ್‌ ಉಡೀಸ್‌

    ಲಕ್ನೋ: ಮೊಹಮ್ಮದ್‌ ಶಮಿ (Mohammed Shami), ಜಸ್ಪ್ರೀತ್‌ ಬುಮ್ರಾ (Jasprit Bumrah) ಬೆಂಕಿ ಬೌಲಿಂಗ್‌ ದಾಳಿ ನೆರವಿನಿಂದ ಟೀಂ ಇಂಡಿಯಾ‌, ಇಂಗ್ಲೆಂಡ್‌ ವಿರುದ್ಧ 100 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಬರೋಬ್ಬರಿ 20 ವರ್ಷಗಳ ನಂತ್ರ ವಿಶ್ವಕಪ್‌ ಟೂರ್ನಿಯಲ್ಲಿ ಆಂಗ್ಲರನ್ನ ಸೋಲಿಸಿ ಜಯದ ಮಾಲೆ ಹಾಕಿಕೊಂಡಿದೆ. ಜೊತೆಗೆ ಸತತ 6 ಪಂದ್ಯಗಳಲ್ಲಿ ಜಯ ಸಾಧಿಸಿ, ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದೆ.

    ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತ 2003 ರಲ್ಲಿ ಕೊನೆಯ ಬಾರಿಗೆ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಿತ್ತು. ಉಳಿದಂತೆ 2007, 2011, 2015 ಮತ್ತು 2019ರಲ್ಲಿ ಭಾರತ, ಇಂಗ್ಲೆಂಡ್‌ (England) ಎದುರು ವಿರೋಚಿತ ಸೋಲನುಭವಿಸಿತ್ತು. ಹೀಗಾಗಿ ಕಳೆದ 20 ವರ್ಷಗಳಿಂದ ವಿಶ್ವಕಪ್‌ ಟೂರ್ನಿಯಲ್ಲಿ ಭಾರತಕ್ಕೆ (India) ಗೆಲುವು ಸಿಕ್ಕಿರಲಿಲ್ಲ. ಇಂದು 100 ರನ್‌ಗಳ ಭರ್ಜರಿ ಜಯದೊಂದಿಗೆ ಹೊಸ ಇತಿಹಾಸ ಸೃಷ್ಟಿಸಿದೆ.

    ಚೇಸಿಂಗ್‌ ಆರಂಭಿಸಿದ ಇಂಗ್ಲೆಂಡ್‌ ಮೊದಲ ನಾಲ್ಕು ಓವರ್‌ಗಳಲ್ಲೇ 26 ರನ್‌ ಬಾರಿಸಿ ಸ್ಫೋಟಕ ಆರಂಭ ಪಡೆಯುವ ನಿರೀಕ್ಷೆ ಮೂಡಿಸಿತ್ತು. ಆದ್ರೆ 5ನೇ ಓವರ್‌ನಲ್ಲಿ ಬುಮ್ರಾ ಮಾರಕ ದಾಳಿಯಿಂದ ಎರಡು ವಿಕೆಟ್‌ ಕಿತ್ತರು. ಈ ಬೆನ್ನಲ್ಲೇ ಶಮಿ ಕೂಡ ಮಾರಕದಾಳಿ ಮುಂದುವರಿಸಿದ್ದರಿಂದ ಇಂಗ್ಲೆಂಡ್‌ 10 ರನ್‌ಗಳ ಅಂತರದಲ್ಲೇ ಪ್ರಮುಖ ನಾಲ್ಕು ವಿಕೆಟ್‌ಗಳನ್ನ ಕಳೆದುಕೊಂಡಿತ್ತು. ಇದು ತಂಡಕ್ಕೆ ಸೋಲಿನ ಮುನ್ಸೂಚನೆ ನೀಡಿತು. ಸತತ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಇಂಗ್ಲೆಂಡ್‌ 25 ಓವರ್‌ಗಳಲ್ಲಿ 6 ವಿಕೆಟ್‌ಗೆ ಕೇವಲ 84 ರನ್‌ ಗಳಿಸಿತ್ತು. ಟೀಂ ಇಂಡಿಯಾ ಬೌಲರ್‌ಗಳ ದಾಳಿಯಿಂದ ಚೇತರಿಸಿಕೊಳ್ಳಲು ಸಾಧ್ಯವಾಗದ ಇಂಗ್ಲೆಂಡ್‌ ಅಂತಿಮವಾಗಿ 129 ರನ್‌ಗಳಿಗೆ ಸರ್ವಪತನ ಕಂಡಿತು.

    ಇಂಗ್ಲೆಂಡ್‌ ಪರ ಜಾನಿ ಬೈರ್ಸ್ಟೋವ್ 14 ರನ್‌, ಡೇವಿಡ್‌ ಮಲಾನ್‌ 16 ರನ್‌ ಗಳಿಸಿದ್ರೆ ಜೋ ರೂಟ್‌, ಬೆನ್‌ಸ್ಟೋಕ್ಸ್‌ ಶೂನ್ಯಕ್ಕೆ ಔಟಾಗಿ ಪೆವಿಲಿಯನ್‌ಗೆ ಮರಳಿದರು. ನಂತರ ಜೋಸ್‌ ಬಟ್ಲರ್‌ (Jos Buttler) 10 ರನ್‌, ಮೊಯಿನ್‌ ಅಲಿ 15 ರನ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌ 27 ರನ್‌, ಕ್ರಿಸ್‌ವೋಕ್ಸ್‌ 10 ರನ್‌ ಗಳಿಸಿದ್ರೆ, ಕೊನೆಯಲ್ಲಿ ಆದಿಲ್‌ ರಶೀದ್‌ 13 ರನ್‌ ಗಳಿಸಿದ್ರೆ, ಮಾರ್ಕ್‌ವುಡ್‌ ಶೂನ್ಯಕ್ಕೆ ಔಟಾದರು. ಡೇವಿಡ್‌ ವಿಲ್ಲಿ (David Willey) 13 ರನ್‌ ಗಳಿಸಿ ಅಜೇಯರಾಗುಳಿದರು.

    ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಟೀಂ ಇಂಡಿಯಾ (Team India), ಇಂಗ್ಲೆಂಡ್‌ ತಂಡಕ್ಕೆ 230 ರನ್‌ಗಳ ಗುರಿ ನೀಡಿತ್ತು. ಬೃಹತ್‌ಮೊತ್ತ ಕಲೆಹಾಕುವ ಗುರಿ ಹೊಂದಿದ್ದ ಭಾರತಕ್ಕೆ ಆರಂಭದಲ್ಲೇ ನಿರಾಸೆಯಾಯಿತು. ಅಗ್ರಕ್ರಮಾಂಕದ ಬ್ಯಾಟರ್‌ಗಳಾದ ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ (Virat Kohli), ಶ್ರೇಯಸ್‌ ಅಯ್ಯರ್‌ ಅಲ್ಪ ಮೊತ್ತಕ್ಕೆ ಕೈಕೊಟ್ಟ ಪರಿಣಾಮ ಟೀಂ ಇಂಡಿಯಾ 50 ಓವರ್‌ಗಳಲ್ಲಿ ಕೇವಲ 229 ರನ್‌ ಗಳಿಸಲಷ್ಟೇ ಸಾಧ್ಯವಾಯಿತು.

    ಶುಭಮನ್‌ ಗಿಲ್‌ 9 ರನ್‌, ಶ್ರೇಯಸ್‌ ಅಯ್ಯರ್‌ 4 ರನ್‌ ಗಳಿಸಿದ್ರೆ, ವಿರಾಟ್‌ ಕೊಹ್ಲಿ 9 ಎಸೆತಗಳಲ್ಲಿ ಒಂದೂ ರನ್‌ ಗಳಿಸದೇ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಆದ್ರೆ 4ನೇ ವಿಕೆಟ್‌ಗೆ ಜೊತೆಯಾದ ಕೆ.ಎಲ್‌ ರಾಹುಲ್‌ ಹಾಗೂ ರೋಹಿತ್‌ ಶರ್ಮಾ ಜೋಡಿ 111 ಎಸೆತಗಳಲ್ಲಿ 91 ರನ್‌ಗಳ ಜೊತೆಯಾಟ ನೀಡಿ ಚೇತರಿಕೆ ಕಂಡಿತ್ತು. ಕೆ.ಎಲ್‌ ರಾಹುಲ್‌ 58 ಎಸೆತಗಳಲ್ಲಿ 39 ರನ್‌ ಗಳಿಸಿ ಔಟಾಗುತ್ತಿದ್ದಂತೆ ಟೀಂ ಇಂಡಿಯಾ ಒಂದೊಂದೇ ವಿಕೆಟ್‌ ಕಳೆದುಕೊಂಡಿತು.

    ಆಂಗ್ಲರ ವಿರುದ್ಧ ಹೋರಾಡಿದ ರೋಹಿತ್‌ ಶರ್ಮಾ 101 ಎಸೆತಗಳಲ್ಲಿ 87 ರನ್‌ (3 ಸಿಕ್ಸರ್‌, 10 ಬೌಂಡರಿ) ಗಳಿಸಿದ್ರೆ, ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್‌ ಯಾದವ್‌ 47 ಎಸೆತಗಳಲ್ಲಿ 49 ರನ್‌ (1 ಸಿಕ್ಸರ್‌, 4 ಬೌಂಡರಿ) ಗಳಿಸಿ ಅರ್ಧಶತಕದಿಂದ ವಂಚಿತರಾದರು. ಕೊನೆಯಲ್ಲಿ ಜಸ್ಪ್ರೀತ್‌ ಬುಮ್ರಾ 16 ರನ್‌, ರವೀಂದ್ರ ಜಡೇಜಾ 8 ರನ್‌, ಮೊಹಮ್ಮದ್‌ ಶಮಿ 1 ರನ್‌ ಗಳಿಸಿದ್ರೆ, ಕುಲ್ದೀಪ್‌ ಯಾದವ್ ‌9 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

    ಇಂಗ್ಲೆಂಡ್‌ ಪರ ಡೇವಿಡ್‌ ವಿಲ್ಲಿ 3 ವಿಕೆಟ್‌ ಕಿತ್ತರೆ, ಕ್ರಿಸ್‌ ವೋಕ್ಸ್‌ ಮತ್ತು ಆದಿಲ್‌ ರಶೀದ್‌ ತಲಾ 2 ವಿಕೆಟ್‌ ಹಾಗೂ ಮಾರ್ಕ್‌ವುಡ್‌ ಒಂದು ವಿಕೆಟ್‌ ಪಡೆದು ಮಿಂಚಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • World Cup 2023: ಮಾರಕ ಬೌಲಿಂಗ್‌ ದಾಳಿಗೆ ತಿಣುಕಾಡಿದ ಭಾರತ – ಇಂಗ್ಲೆಂಡ್‌ಗೆ 230 ರನ್‌ ಗುರಿ

    World Cup 2023: ಮಾರಕ ಬೌಲಿಂಗ್‌ ದಾಳಿಗೆ ತಿಣುಕಾಡಿದ ಭಾರತ – ಇಂಗ್ಲೆಂಡ್‌ಗೆ 230 ರನ್‌ ಗುರಿ

    ಲಕ್ನೋ: ಮಾರಕ ಬೌಲಿಂಗ್‌ ದಾಳಿ ನಡುವೆಯೂ ಸವಾಲಿನ ಮೊತ್ತ ಕಲೆಹಾಕಿರುವ ಟೀಂ ಇಂಡಿಯಾ (Team India) 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 229 ರನ್‌ ಗಳಿಸಿ ಎದುರಾಳಿ ಇಂಗ್ಲೆಂಡ್‌ (England) ತಂಡಕ್ಕೆ 230 ರನ್‌ಗಳ ಗುರಿ ನೀಡಿದೆ.

    ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌ ತಂಡವು ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಟೀಂ ಇಂಡಿಯಾಕ್ಕೆ ಬಿಟ್ಟುಕೊಟ್ಟಿತು. ಉತ್ತಮ ಫಾರ್ಮ್‌ ಹೊಂದಿರುವ ಟೀಂ ಇಂಡಿಯಾ ಸ್ಪಿನ್‌ ಪಿಚ್‌ನಲ್ಲಿ ಬೃಹತ್‌ಮೊತ್ತ ಕಲೆಹಾಕುವ ಗುರಿ ಹೊಂದಿತ್ತು. ಆದ್ರೆ ಅಗ್ರಕ್ರಮಾಂಕದ ಬ್ಯಾಟರ್‌ಗಳಾದ ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ (Virat Kohli), ಶ್ರೇಯಸ್‌ ಅಯ್ಯರ್‌ ಅಲ್ಪ ಮೊತ್ತಕ್ಕೆ ಕೈಕೊಟ್ಟ ಪರಿಣಾಮ ಟೀಂ ಇಂಡಿಯಾ 50 ಓವರ್‌ಗಳಲ್ಲಿ ಕೇವಲ 229 ರನ್‌ ಗಳಿಸಲಷ್ಟೇ ಸಾಧ್ಯವಾಯಿತು.

    ಶುಭಮನ್‌ ಗಿಲ್‌ 9 ರನ್‌, ಶ್ರೇಯಸ್‌ ಅಯ್ಯರ್‌ 4 ರನ್‌ ಗಳಿಸಿದ್ರೆ, ವಿರಾಟ್‌ ಕೊಹ್ಲಿ 9 ಎಸೆತಗಳಲ್ಲಿ ಒಂದೂ ರನ್‌ ಗಳಿಸದೇ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಆದ್ರೆ 4ನೇ ವಿಕೆಟ್‌ಗೆ ಜೊತೆಯಾದ ಕೆ.ಎಲ್‌ ರಾಹುಲ್‌ ಹಾಗೂ ರೋಹಿತ್‌ ಶರ್ಮಾ (Rohit Sharma) ಜೋಡಿ 111 ಎಸೆತಗಳಲ್ಲಿ 91 ರನ್‌ಗಳ ಜೊತೆಯಾಟ ನೀಡಿ ಚೇತರಿಕೆ ಕಂಡಿತ್ತು. ಕೆ.ಎಲ್‌ ರಾಹುಲ್‌ (KL Rahul) 58 ಎಸೆತಗಳಲ್ಲಿ 39 ರನ್‌ ಗಳಿಸಿ ಔಟಾಗುತ್ತಿದ್ದಂತೆ ಟೀಂ ಇಂಡಿಯಾ ಒಂದೊಂದೇ ವಿಕೆಟ್‌ ಕಳೆದುಕೊಂಡಿತು.

    ಆಂಗ್ಲರ ವಿರುದ್ಧ ಹೋರಾಡಿದ ರೋಹಿತ್‌ ಶರ್ಮಾ 101 ಎಸೆತಗಳಲ್ಲಿ 87 ರನ್‌ (3 ಸಿಕ್ಸರ್‌, 10 ಬೌಂಡರಿ) ಗಳಿಸಿದ್ರೆ, ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್‌ ಯಾದವ್‌ (Suryakumar Yadav) 47 ಎಸೆತಗಳಲ್ಲಿ 49 ರನ್‌ (1 ಸಿಕ್ಸರ್‌, 4 ಬೌಂಡರಿ) ಗಳಿಸಿ ಅರ್ಧಶತಕದಿಂದ ವಂಚಿತರಾದರು. ಕೊನೆಯಲ್ಲಿ ಜಸ್ಪ್ರೀತ್‌ ಬುಮ್ರಾ 16 ರನ್‌, ರವೀಂದ್ರ ಜಡೇಜಾ 8 ರನ್‌, ಮೊಹಮ್ಮದ್‌ ಶಮಿ 1 ರನ್‌ ಗಳಿಸಿದ್ರೆ, ಕುಲ್ದೀಪ್‌ ಯಾದವ್ ‌9 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

    ಇಂಗ್ಲೆಂಡ್‌ ಪರ ಡೇವಿಡ್‌ ವಿಲ್ಲಿ (David Willey) 3 ವಿಕೆಟ್‌ ಕಿತ್ತರೆ, ಕ್ರಿಸ್‌ ವೋಕ್ಸ್‌ ಮತ್ತು ಆದಿಲ್‌ ರಶೀದ್‌ ತಲಾ 2 ವಿಕೆಟ್‌ ಹಾಗೂ ಮಾರ್ಕ್‌ವುಡ್‌ ಒಂದು ವಿಕೆಟ್‌ ಪಡೆದು ಮಿಂಚಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 27 ರನ್‌ ಅಂತರದಲ್ಲಿ 5 ವಿಕೆಟ್‌ ಉಡೀಸ್‌, ಇಂಗ್ಲೆಂಡ್‌ಗೆ ಹೀನಾಯ ಸೋಲು – ಲಂಕಾಗೆ 8 ವಿಕೆಟ್‌ಗಳ ಜಯ

    27 ರನ್‌ ಅಂತರದಲ್ಲಿ 5 ವಿಕೆಟ್‌ ಉಡೀಸ್‌, ಇಂಗ್ಲೆಂಡ್‌ಗೆ ಹೀನಾಯ ಸೋಲು – ಲಂಕಾಗೆ 8 ವಿಕೆಟ್‌ಗಳ ಜಯ

    ಬೆಂಗಳೂರು: ಸಂಘಟಿತ ಬೌಲಿಂಗ್‌ ಹಾಗೂ ಪಾಥುಮ್‌ ನಿಸ್ಸಾಂಕ (Pathum Nissanka) ಭರ್ಜರಿ ಬ್ಯಾಟಿಂಗ್‌ನಿಂದ ಶ್ರೀಲಂಕಾ ತಂಡವು, ಇಂಗ್ಲೆಂಡ್‌ (England) ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಪಾಯಿಂಟ್ಸ್‌ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಜಿಗಿದಿದೆ.

    5 ಪಂದ್ಯಗಳ ಪೈಕಿ 2ರಲ್ಲಿ ಗೆಲುವು ಸಾಧಿಸಿದ್ದ ಪಾಕಿಸ್ತಾನ (Pakistan) ತಂಡವು 4 ಅಂಕ, -0.400 ರನ್‌ ರೇಟ್‌ನೊಂದಿಗೆ 5ನೇ ಸ್ಥಾನದಲ್ಲಿತ್ತು. ಆದ್ರೆ ಆಂಗ್ಲರ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಲಂಕಾ (Sri Lanka) 4 ಅಂಕ, -0.205 ರನ್‌ರೇಟ್‌ನೊಂದಿಗೆ 5ನೇ ಸ್ಥಾನಕ್ಕೆ ಜಿಗಿದು, ಪಾಕ್‌ ತಂಡವನ್ನು ಹಿಂದಿಕ್ಕಿದೆ. ಇದನ್ನೂ ಓದಿ: 2036ರ ಜಾಗತಿಕ ಕ್ರೀಡಾಹಬ್ಬಕ್ಕೆ ಭಾರತ ತಯಾರಿ ಶುರು – ಮುಂದಿರುವ ಸವಾಲುಗಳೇನು?

    ಬ್ಯಾಟಿಂಗ್‌ ಸ್ನೇಹಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌ 33.2 ಓವರ್‌ಗಳಲ್ಲೇ 156 ರನ್‌ಗಳಿಗೆ ಸರ್ವಪತನ ಕಂಡಿತು. ಈ ಗುರಿ ಬೆನ್ನತ್ತಿದ್ದ ಶ್ರೀಲಂಕಾ ತಂಡವು 25.4 ಓವರ್‌ಗಳಲ್ಲೇ 2 ವಿಕೆಟ್‌ ನಷ್ಟಕ್ಕೆ 160 ರನ್‌ ಗಳಿಸಿ ಗೆಲುವಿನ ನಗೆ ಬೀರಿತು. ಇದನ್ನೂ ಓದಿ: ಅಭಿಮಾನಿಗಳಿಗೆ ಅದ್ಭುತ, ಆಟಗಾರರಿಗೆ ಭಯಾನಕ: ಮೂಕ ಕಲ್ಪನೆ ಎಂದು ಮ್ಯಾಕ್ಸ್‌ವೆಲ್‌ ಕೆಂಡ

    ಚೇಸಿಂಗ್‌ ಆರಂಭಿಸಿದ್ದ ಲಂಕಾ ತಂಡವೂ ಸಹ 9 ರನ್‌ಗಳಿಗೆ ಮೊದಲ ವಿಕೆಟ್‌, 23 ರನ್‌ಗಳಿಗೆ 2ನೇ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಬಳಿಕ ಜೊತೆಯಾದ ನಿಸ್ಸಾಂಕ ಹಾಗೂ ಸದೀರ ಸಮರವಿಕ್ರಮ ಜೋಡಿ ಮುರಿಯದ 3ನೇ ವಿಕೆಟ್‌ಗೆ 122 ಎಸೆತಗಳಲ್ಲಿ 137 ರನ್‌ಗಳ ಜೊತೆಯಾಟ ನೀಡುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಪಾಥುಮ್‌ ನಿಸ್ಸಾಂಕ 83 ಎಸೆತಗಳಲ್ಲಿ ಅಜೇಯ 77 ರನ್‌ (7 ಬೌಂಡರಿ, 2 ಸಿಕ್ಸರ್)‌ ಚಚ್ಚಿದರೆ, ಸಮರವಿಕ್ರಮ 54 ಎಸೆತಗಳಲ್ಲಿ 65 ರನ್‌ (7 ಬೌಂಡರಿ, 1 ಸಿಕ್ಸರ್‌) ಸಿಡಿಸಿ ಮಿಂಚಿದರು. ಇಂಗ್ಲೆಂಡ್‌ ಪರ ಡೇವಿಡ್ ವಿಲ್ಲಿ 2 ವಿಕೆಟ್‌ ಕಿತ್ತರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಹಾಲಿ ಚಾಂಪಿಯನ್ಸ್‌ ಇಂಗ್ಲೆಂಡ್‌ ತಂಡ ಲಂಕಾ ಬೌಲರ್‌ಗಳ ದಾಳಿಗೆ ಕಂಗಾಲಾಯಿತು. ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ಗಳು ಸಿಂಹಳಿಯರ ದಾಳಿಗೆ ತರಗೆಲೆಗಳಂತೆ ಉದುರಿದರು. 16 ಓವರ್‌ಗಳಲ್ಲಿ 80 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿದ್ದ ಇಂಗ್ಲೆಂಡ್‌ ಬಳಿಕ ಬೆನ್‌ಸ್ಟೋಕ್ಸ್‌ (Ben Stokes) ಬ್ಯಾಟಿಂಗ್‌ ನೆರವಿನಿಂದ ಚೇತರಿಸಿಕೊಳ್ಳುತ್ತಿತ್ತು. 119 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡಿದ್ದ ಇಂಗ್ಲೆಂಡ್‌ ಕೊನೆಯ 27 ರನ್‌ಗಳ ಅಂತರದಲ್ಲೇ ಉಳಿದ 5 ವಿಕೆಟ್‌ಗಳನ್ನೂ ಕಳೆದುಕೊಂಡು 156 ರನ್‌ಗಳಿಗೆ ಆಲೌಟ್‌ ಆಯಿತು. ಇದನ್ನೂ ಓದಿ: ಏಷ್ಯನ್ ಪ್ಯಾರಾ ಗೇಮ್ಸ್ – ಮೂಡಿಗೆರೆಯ ಯುವತಿಗೆ ಚಿನ್ನ, ಗ್ರಾಮಸ್ಥರಿಂದ ಸಿಹಿ ಹಂಚಿ ಸಂಭ್ರಮ

    ಇಂಗ್ಲೆಂಡ್‌ ಪರ ಜಾನಿ ಬೈರ್ಸ್ಟೋವ್ 30 ರನ್‌, ಡೇವಿಡ್‌ ಮಲಾಬ್‌ 28 ರನ್‌ ಹಾಗೂ ಬೆನ್‌ಸ್ಟೋಕ್ಸ್‌ 43 ರನ್‌ ಗಳಿಸಿದ್ರೆ ಉಳಿದವರು ನಿರೀಕ್ಷಿತ ಬ್ಯಾಟಿಂಗ್‌ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಲಂಕಾ ಪರ ಲಹಿರು ಕುಮಾರ 3 ವಿಕೆಟ್‌ ಕಿತ್ತರೆ, ಕಸುನ್ ರಜಿತಾ, ಏಂಜೆಲೊ ಮ್ಯಾಥ್ಯೂಸ್ ತಲಾ 2 ವಿಕೆಟ್‌ ಹಾಗೂ ಮಹೇಶ್ ತೀಕ್ಷಣ 1 ವಿಕೆಟ್‌ ಪಡೆದು ಮಿಂಚಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 69 ರನ್‌ಗಳ ಭರ್ಜರಿ ಜಯ – ಇಂಗ್ಲೆಂಡ್ ಶಾಕ್, ಅಫ್ಘಾನ್ ರಾಕ್

    69 ರನ್‌ಗಳ ಭರ್ಜರಿ ಜಯ – ಇಂಗ್ಲೆಂಡ್ ಶಾಕ್, ಅಫ್ಘಾನ್ ರಾಕ್

    ನವದೆಹಲಿ: ರಹ್ಮನುಲ್ಲಾ ಗುರ್ಬಾಝ್‌ ಬೆಂಕಿ ಬ್ಯಾಟಿಂಗ್‌ ಹಾಗೂ ಮುಜೀಬ್ ಉರ್ ರೆಹಮಾನ್, ರಶೀದ್ ಖಾನ್ ಮಾರಕ ಬೌಲಿಂಗ್‌ ದಾಳಿಯಿಂದಾಗಿ ಇಂಗ್ಲೆಂಡ್‌ ವಿರುದ್ಧ ಆಫ್ಘಾನಿಸ್ತಾನ (England vs Afghanistan) 69 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಐತಿಹಾಸಿಕ ಗೆಲುವು ದಾಖಲಿಸಿದೆ.

    ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ (Cricket World Cup 2023) 13ನೇ ಪಂದ್ಯದಲ್ಲಿ ಟಾಸ್‌ ಗೆದ್ದಿದ್ದ ಇಂಗ್ಲೆಂಡ್‌ (England) ಫೀಲ್ಡಿಂಗ್‌ ಆಯ್ದುಕೊಂಡಿತ್ತು. ಉತ್ತಮ ಬ್ಯಾಟಿಂಗ್‌ ಪ್ರದರ್ಶನದೊಂದಿಗೆ ಆಂಗ್ಲ ಬೌಲರ್‌ಗಳನ್ನು ಚೆಂಡಾಡಿದ ಆಫ್ಘಾನಿಸ್ತಾನ (Afghanistan) ತಂಡ ಆಲೌಟ್‌ ಆಗಿ ಇಂಗ್ಲೆಂಡ್‌ಗೆ 285 ರನ್‌ಗಳ ಗುರಿ ನೀಡಿತ್ತು. ಗುರಿ ಬೆನ್ನತ್ತಿದ ಇಂಗ್ಲೆಂಡ್‌ 40.3 ಓವರ್‌ಗಳಲ್ಲೇ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 215 ರನ್‌ಗಳನ್ನಷ್ಟೇ ಗಳಿಸಿ ಸೋಲನುಭವಿಸಿತು. ಇದನ್ನೂ ಓದಿ: ಹೈವೋಲ್ಟೇಜ್ ಪಂದ್ಯದ ಬಳಿಕ ಪಾಕ್ ನಾಯಕನಿಗೆ ಜೆರ್ಸಿ ಗಿಫ್ಟ್ ಮಾಡಿದ ಕೊಹ್ಲಿ: ವಾಸಿಂ ಅಕ್ರಮ್ ಗರಂ

    ಆರಂಭಿಕರಾಗಿ ಕಣಕ್ಕಿಳಿದಿದ್ದ ಜಾನಿ ಬೈರ್‌ಸ್ಟೋವ್‌ ಕೇವಲ 2 ರನ್‌ ಗಳಿಸಿ ಎಲ್‌ಬಿಡಬ್ಲ್ಯೂ ಆಗಿ ಇಂಗ್ಲೆಂಡ್‌ಗೆ ಆರಂಭಿಕ ಆಘಾತ ನೀಡಿದರು. ನಂತರ ಜೊತೆಯಾದ ಡೇವಿಡ್ ಮಲನ್ ಮತ್ತು ಜೋ ರೂಟ್‌ ಜೊತೆಯಾಗಿ ತಂಡಕ್ಕೆ ಚೇತರಿಕೆ ನೀಡಲು ಯತ್ನಿಸಿದರು. ಡೇವಿಡ್ ಮಲನ್ 32 ರನ್‌ ಗಳಿಸಿ (39 ಬಾಲ್‌, 4 ಫೋರ್‌) ಕ್ಲೀನ್‌ ಬೌಲ್ಡ್‌ ಆದರು. ಜೋ ರೂಟ್‌ ಕೇವಲ 11 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ಈ ವೇಳೆ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದ್ದ ಹ್ಯಾರಿ ಬ್ರೂಕ್‌ ಮೈದಾನದಲ್ಲಿ 61 ಬಾಲ್‌ಗಳಿಗೆ 66 ರನ್‌ ಗಳಿಸಿ (7 ಫೋರ್‌, 1 ಸಿಕ್ಸ್‌) ಉತ್ತಮ ಪ್ರದರ್ಶನ ನೀಡಿದರು. ಆದರೆ ಅವರಿಗೆ ಜೊತೆಯಾಗಿ ಸಾಥ್‌ ಕೊಡುವಲ್ಲಿ ಇತರೆ ಆಟಗಾರರು ವಿಫಲರಾದರು. ಆಫ್ಘನ್ನರ ಸ್ಪಿನ್‌ ದಾಳಿಗೆ ಆಂಗ್ಲ ಬ್ಯಾಟರ್‌ಗಳು ತರಗೆಲೆಯಂತೆ ಉದುರಿ ಹೋದರು.

    ಪರಿಣಾಮವಾಗಿ ಇಂಗ್ಲೆಂಡ್‌ ತಂಡದ ನಾಯಕ ಜೋಸ್‌ ಬಟ್ಲರ್‌ ಕೇವಲ 9 ರನ್‌ ಗಳಿಸಿ ಔಟಾದರು. ಲಿಯಾಮ್ ಲಿವಿಂಗ್ಸ್ಟೋನ್ 10 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ಸ್ಯಾಮ್ ಕರ್ರನ್ ಕೂಡ ಕೇವಲ 10 ರನ್‌ ಗಳಿಸಲಷ್ಟೇ ಶಕ್ತರಾದರು. ಕ್ರಿಸ್ ವೋಕ್ಸ್ 9 ರನ್‌ಗಳಿಸಿ ಔಟಾದರು. ಆದಿಲ್ ರಶೀದ್ 20 ರನ್‌, ಮಾರ್ಕ್ ವುಡ್ 18 ರನ್‌ ಗಳಿಸಿ ಪೆವಿಲಿಯನ್‌ನತ್ತ ನಡೆದರು. ಇದನ್ನೂ ಓದಿ: ಸಿಕ್ಸ್‌ ಸಿಡಿಸಿ ದಾಖಲೆ ಬರೆದ ರೋಹಿತ್‌ ಶರ್ಮಾ

    ಇಂಗ್ಲೆಂಡ್‌ ವಿರುದ್ಧ ಆಫ್ಘನ್‌ ಬೌಲರ್‌ಗಳು ಅಮೋಘ ಪ್ರದರ್ಶನ ತೋರಿದರು. ಮುಜೀಬ್ ಉರ್ ರೆಹಮಾನ್ ಹಾಗೂ ರಶೀದ್ ಖಾನ್ 3 ವಿಕೆಟ್‌ ಕಿತ್ತು ಗಮನ ಸೆಳೆದರು. ಮೊಹಮ್ಮದ್ ನಬಿ 2, ಫಜಲ್ಹಕ್ ಫಾರೂಕಿ ಹಾಗೂ ನವೀನ್-ಉಲ್-ಹಕ್ ತಲಾ 1 ಕಿತ್ತು ತಂಡದ ಗೆಲುವಿಗೆ ಸಹಕಾರಿಯಾದರು.

    ಗುರ್ಬಾಝ್‌ ಬೆಂಕಿ ಬ್ಯಾಟಿಂಗ್‌
    ಟಾಸ್ ಗೆದ್ದ ಇಂಗ್ಲೆಂಡ್‌ ತಂಡ ಅಫ್ಘಾನಿಸ್ತಾನಕ್ಕೆ ಬ್ಯಾಟಿಂಗ್ ಆಹ್ವಾನ ನೀಡಿತು. ಬ್ಯಾಟಿಂಗ್‌ಗೆ ಇಳಿದ ಅಫ್ಘಾನ್ ಭರ್ಜರಿ ಆರಂಭ ಪಡೆಯಿತು. ರಹ್ಮನುಲ್ಲಾ ಗುರ್ಬಾಝ್ ಮತ್ತು ಇಬ್ರಾಹಿಂ ಝರ್ದಾನ್ ತಂಡಕ್ಕೆ 114 ರನ್‌ಗಳ ಉತ್ತಮ ಜೊತೆಯಾಟ ನೀಡಿದರು. 16.4 ಓವರ್‌ನಲ್ಲಿ ಸ್ಪಿನ್ನರ್ ಆದಿಲ್ ರಶೀದ್ ಬೌಲಿಂಗ್‌ನಲ್ಲಿ ಇಬ್ರಾಹಿಂ ಝರ್ದಾನ್ (28) ಔಟ್ ಆಗುವುದರೊಂದಿಗೆ ಅಫ್ಘಾನ್ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ರಹ್ಮನುಲ್ಲಾ ಗುರ್ಬಾಝ್ 57 ಎಸೆತಗಳಲ್ಲಿ 80 ರನ್ ಸಿಡಿಸಿ (8 ಬೌಂಡರಿ, 4 ಸಿಕ್ಸರ್) ಸಿಡಿಸಿ ಆಂಗ್ಲರನ್ನು ಚೆಂಡಾಡಿದರು. ನಂತರ ಗುರ್ಬಾಝ್‌ ರನ್‌ಔಟ್‌ ಆದರು. ಇದನ್ನೂ ಓದಿ: Record… Record… Record: ಇಂಡೋ-ಪಾಕ್‌ ಕದನದಲ್ಲಿ ಎಲ್ಲಾ ದಾಖಲೆ ಉಡೀಸ್‌!

    ಬಳಿಕ ಬಂದ ಯಾವೊಬ್ಬ ಬ್ಯಾಟರ್ ಕೂಡ ಇಂಗ್ಲೆಂಡ್‌ ಬಲಿಷ್ಟ ಬೌಲಿಂಗ್ ಎದುರು ಹೆಚ್ಚು ಸಮಯ ಕ್ರೀಸಿನಲ್ಲಿ ನಿಲ್ಲಲು ಸಾಧ್ಯವಾಗದೇ ದಿಢೀರ್ ಕುಸಿತ ಕಂಡಿತು. ರಹಮತ್ ಶಾ 3 ರನ್ ಗಳಿಸಿ ಆದಿಲ್ ರಶೀದ್ ಬೌಲಿಂಗ್‌ನಲ್ಲಿ ಸ್ಟಂಪ್ ಔಟ್ ಆದರೆ, ನಾಯಕ ಹಶ್ಮತುಲ್ಲಾ ಶಾಹಿದಿ 14 ರನ್ ಗಳಿಸಿ ಜೊ ರೂಟ್ ಬೌಲಿಂಗ್‌ನಲ್ಲಿ ಬೌಲ್ಡ್ ಆಗಿ ನಿರಾಸೆ ಮೂಡಿಸಿದರು. ಅಝ್ಮತುಲ್ಲಾ ಓಮರ್ಝೈ, ಮೊಹಮ್ಮದ್ ನಬಿ ಕ್ರಮವಾಗಿ 19, 9 ಗಳಿಸಿ ಪೆವಿಲಿಯನ್ ಪರೇಡ್‌ ನಡೆಸಿದರು. ಬಳಿಕ ಕೊಂಚ ಚೇತರಿಸಿಕೊಂಡ ಅಫ್ಘಾನ್ ಇಕ್ರಂ ಅಲಿಖಿಲ್ ಮತ್ತು ರಶೀದ್ ಖಾನ್ ಜೋಡಿ 43 ರನ್‌ಗಳ ಜೊತೆಯಾಟ ನೀಡಿ ಮೊತ್ತ ಹೆಚ್ಚಿಸುವ ಯೋಜನೆಯಲ್ಲಿ ಇದ್ದರು. ಆದರೆ ರಶೀದ್ ಖಾನ್ 23 ರನ್ ಗಳಸಿ ಕ್ಯಾಚ್ ನೀಡಿ ಔಟಾದರು. ಇಕ್ರಂ ಅಲಿಖಿಲ್ 58 ಗಳಿಸಿ ಅರ್ಧಶತಕ ಬಾರಿಸಿ (3 ಬೌಂಡರಿ, 2 ಸಿಕ್ಸರ್) ಮಿಂಚಿದರು. ಮುಜೀಬ್ ಉರ್ ರಹ್ಮಾನ್ 28 ರನ್ ಗಳ ಉಪಯುಕ್ತ ಕೊಡುಗೆ ನೀಡಿದರು. ಅಂತಿಮ ಜೋಡಿಯಾದ ನವೀನ್ 5 ರನ್‌ಗೆ ರನೌಟ್ ಆದರು. ಫಝಲ್ ಹಕ್ ಫಾರೂಕಿ 2 ರನ್ ಗಳಿಸಿದರು.

    ಇಂಗ್ಲೆಂಡ್‌ ಪರ ಆದಿಲ್ ರಶೀದ್ 3 ವಿಕೆಟ್ ಪಡೆದರೆ, ಮಾರ್ಕ್ ವುಡ್ 2, ಲಿಯಾಮ್ ಲಿವಿಂಗ್‌ಸ್ಟೋನ್‌, ಜೋ ರೂಟ್, ರೀಸ್ ಟೋಪ್ಲಿ ತಲಾ ಒಂದೊಂದು ವಿಕೆಟ್ ಕಬಳಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕ್ಯಾಚ್ ವಿವಾದ; ಮತ್ತೆ ಮೋಸದಾಟ ಆಡಲು ಪ್ರಯತ್ನಿಸಿತಾ ಆಸೀಸ್? – ಅಭಿಮಾನಿಗಳು ಕೆಂಡ

    ಕ್ಯಾಚ್ ವಿವಾದ; ಮತ್ತೆ ಮೋಸದಾಟ ಆಡಲು ಪ್ರಯತ್ನಿಸಿತಾ ಆಸೀಸ್? – ಅಭಿಮಾನಿಗಳು ಕೆಂಡ

    ಲಂಡನ್: ಇತ್ತೀಚಿನ ಕ್ರಿಕೆಟ್ ಟೂರ್ನಿಗಳಲ್ಲಿ ಅಂಪೈರ್ ತೆಗೆದುಕೊಳ್ಳುವ ನಿರ್ಧಾರಗಳು ಕ್ರಿಕೆಟ್ ಲೋಕದಲ್ಲಿ ಭಾರೀ ವಿವಾದಗಳನ್ನ ಸೃಷ್ಟಿಸುತ್ತಿವೆ. ಆದ್ರೆ ಇಂಗ್ಲೆಂಡ್-ಆಸೀಸ್ ನಡುವಿನ ಆಶಸ್ (Ashes 2023) ಟೂರ್ನಿಯ 2ನೇ ಟೆಸ್ಟ್ ಪಂದ್ಯದಲ್ಲಿ ವಿವಾದಕ್ಕೀಡಾಗುತ್ತಿದ್ದ ಇಂಗ್ಲೆಂಡ್ ಬ್ಯಾಟ್ಸ್‌ಮ್ಯಾನ್‌ ಬೆನ್ ಡಕೆಟ್ (Ben Duckett) ಅವರ ಕ್ಯಾಚ್ 3ನೇ ಅಂಪೈರ್‌ನ ಸಮಯ ಪ್ರಜ್ಞೆಯಿಂದ ತಪ್ಪಿದೆ.

    ಹೌದು. ಆಶಸ್ ಟೂರ್ನಿಯಲ್ಲಿ 2ನೇ ಟೆಸ್ಟ್‌ನ 4ನೇ ದಿನದಾಟದಲ್ಲಿ ಆಸ್ಟ್ರೇಲಿಯಾ (Australia) ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಬೌಲಿಂಗ್‌ನಲ್ಲಿ ಬೆನ್ ಡಕೆಟ್ ಅವರು ಬಾರಿಸಿದ ಹೊಡೆತ ಬೌಂಡರಿ ಲೈನ್‌ನಲ್ಲಿ ಕ್ಯಾಚ್ ಆಗಿತ್ತು. ವೇಗಿ ಮಿಚೆಲ್ ಸ್ಟಾರ್ಕ್ ಕ್ಯಾಚ್ ಹಿಡಿಯುತ್ತಿದ್ದಂತೆ ಇಡೀ ತಂಡ ಕುಣಿದು ಕುಪ್ಪಳಿಸಿತ್ತು. ಇದರಿಂದ ಬಾಡಿದ ಮುಖಹೊತ್ತು ಪೆವಿಲಿಯನ್‌ನತ್ತ ಹೊರಟಿದ್ದರು. ಆಗ ಕ್ರೀಸ್‌ನಲ್ಲಿದ್ದ ನಾಯಕ ಬೆನ್‌ಸ್ಟೋಕ್ಸ್ (Ben Stokes) 3ನೇ ಅಂಪೈರ್ ಪರಿಶೀಲನೆಗೆ ತೆಗೆದುಕೊಂಡರು. ನಂತರ ಸ್ಟಾರ್ಕ್ ಕ್ಯಾಚ್ ಹಿಡಿದು ನಿಯಂತ್ರಿಸಲಾಗದೇ ಚೆಂಡನ್ನು ನೆಲಕ್ಕೆ ತಾಕಿಸಿದ್ದದ್ದು ಕಂಡುಬಂದಿತು. ಇದರಿಂದ 3ನೇ ಅಂಪೈರ್ ನಾಟೌಟ್ ತೀರ್ಪು ನೀಡಿದರು.

    ಈ ಬಗ್ಗೆ ಮೈದಾನದಲ್ಲಿ ಭಾರೀ ಚರ್ಚೆ ಸಹ ನಡೆಯಿತು. ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಅವರು ಆನ್-ಫೀಲ್ಡ್ ಅಂಪೈರ್‌ನೊಂದಿಗೆ ಏಕೆ ಔಟ್ ಇಲ್ಲ ಎಂದು ವಾಗ್ವಾದಕ್ಕಿಳಿದರು. ಆದ್ರೆ ಕ್ಯಾಚ್ ಹಿಡಿದ ನಂತರ ಸ್ಟಾರ್ಕ್ ಚೆಂಡನ್ನು ನೆಲಕ್ಕೆ ತಾಕಿಸಿದ್ದಾರೆ. ಕ್ಯಾಚ್ ಅನ್ನು ಸಂಪೂರ್ಣವಾಗಿ ನಿಯಂತ್ರಿಸದ ಕಾರಣ, ಬ್ಯಾಟರ್ ಪರವಾಗಿ ನಿರ್ಧಾರ ನೀಡಬೇಕಾಯಿತು ಎಂದು ಅಂಪೈರ್ ಸಮಾಧಾನಪಡಿಸಿದರು. ಹಾಗಾಗಿ ಆಸ್ಟ್ರೇಲಿಯಾ ತಂಡ ನಿರಾಶೆಗೊಂಡಿತು. ಇದನ್ನೂ ಓದಿ: 48 ವರ್ಷಗಳ ಇತಿಹಾಸದಲ್ಲೇ ಫಸ್ಟ್‌ ಟೈಂ ವಿಶ್ವಕಪ್‌ ಟೂರ್ನಿಯಿಂದಲೇ ವೆಸ್ಟ್‌ ಇಂಡೀಸ್‌ ಔಟ್‌

    ಇತ್ತೀಚೆಗೆ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ನಲ್ಲಿ ಟೀಂ ಇಂಡಿಯಾ (Team India) ಆಟಗಾರ ಶುಭಮನ್ ಗಿಲ್ ಅವರ ಕ್ಯಾಚ್ ವಿಚಾರ ಭಾರೀ ವಿವಾದ ಹುಟ್ಟುಹಾಕಿತ್ತು. ದೇಶ-ವಿದೇಶ ಕ್ರಿಕೆಟ್ ದಿಗ್ಗಜರಿಂದಲೂ ಟೀಕೆಗಳು ಕೇಳಿಬಂದಿತ್ತು. ಅಲ್ಲದೇ ಸ್ಟೀವ್ ಸ್ಮಿತ್ ತೆಗೆದುಕೊಂಡಿದ್ದ ಜೋ ರೂಟ್ ಅವರ ಕ್ಯಾಚ್ ಸಹ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದನ್ನೂ ಓದಿ: ಕೊಹ್ಲಿ ಮತ್ತು ಬಾಬರ್‌ ಇಬ್ಬರಲ್ಲಿ ಯಾರು ಶ್ರೇಷ್ಠ? – ಭಜ್ಜಿ ಪ್ರಶ್ನೆಗೆ ಶಾಕಿಂಗ್‌ ಉತ್ತರ ಕೊಟ್ಟ ಅಖ್ತರ್‌

    ಆಶಸ್ ಟೂರ್ನಿಯ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಮೊದಲ ಇನಿಂಗ್ಸ್‌ನ 47ನೇ ಓವರ್‌ನಲ್ಲಿ ವೇಗಿ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಇಂಗ್ಲೆಂಡ್ ಸ್ಟಾರ್ ಬ್ಯಾಟರ್ ಜೋ ರೂಟ್ ಪುಲ್ ಮಾಡಲು ಪ್ರಯತ್ನಿಸಿದರು. ಚೆಂಡು ಬ್ಯಾಟ್ ಸರಿಯಾಗಿ ಸಿಗದ ಬ್ಯಾಕ್‌ವಾರ್ಡ್ ಪಾಯಿಂಟ್ ಕಡೆ ಹಾರಿತು. ಈ ವೇಳೆ ಸ್ಟೀವ್ ಸ್ಮಿತ್ ಕ್ಯಾಚ್ ಪಡೆದರು. ಕ್ಯಾಚ್ ಪಡೆದ ತಕ್ಷಣ ಸ್ಮಿತ್ ಕುಣಿದು ಕುಪ್ಪಳಿಸಿದರು. ಈ ವೇಳೆ ಗೊಂದಲಕ್ಕೆ ಒಳಗಾದ ಫೀಲ್ಡ್ ಅಂಪೈರ್‌ಗಳು 3ನೇ ಅಂಪೈರ್ ಸಹಾಯಕ್ಕೆ ಮೊರೆ ಹೋದರು. ಇದನ್ನೂ ಓದಿ: ಇಷ್ಟಕ್ಕೆ ಮುಗಿದಿಲ್ಲ – ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಸೋಲಿನ ಬಳಿಕ ಗಿಲ್ ಖಡಕ್ ರಿಯಾಕ್ಷನ್

    3ನೇ ಅಂಪೈರ್‌ಗಳು ಹಲವು ಬಾರಿ ವಿಡಿಯೋ ರೀಪ್ಲೇ ವೀಕ್ಷಿಸಿದ ಬಳಿಕ ಅಂತಿಮವಾಗಿ ಜೋ ರೂಟ್ ಔಟ್ ಎಂದು ತೀರ್ಪು ನೀಡಲಾಯಿತು. ಈ ಬೆನ್ನಲ್ಲೇ ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿಗಳು ಆಸೀಸ್ ತಂಡ ಹಾಗೂ 3ನೇ ಅಂಪೈರ್ ವಿರುದ್ಧ ಕಿಡಿ ಕಾರಿದರು. ಸ್ಟೀವ್ ಸ್ಮಿತ್ ಚೆಂಡನ್ನು ಪಡೆಯುವಾಗ ನೆಲಕ್ಕೆ ತಾಗಿಸಿದ್ದಾರೆಂದು ಫೋಟೋ ಸಹಿತ ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ. ಈ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಅಲ್ಲದೇ 2ನೇ ಟೆಸ್ಟ್ನ ನಾಲ್ಕನೇ ದಿನದಾಟದಲ್ಲಿ ಮಿಚೆಲ್ ಸ್ಟಾರ್ಕ್ ಹಿಡಿದ ಬೆನ್ ಡಕೆಟ್ ಅವರ ಕ್ಯಾಚರ್ ಡಿಆರ್‌ಎಸ್‌ಗೆ ಮನವಿ ಮಾಡಲಾಗಿತ್ತು. ಆದ್ರೆ, ಅಂಪೈರ್ ನಿಗಾ ವಹಿಸಿ ನಾಟೌಟ್ ತೀರ್ಪು ಪ್ರಕಟಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]