ಬ್ರಿಟನ್: ಇಂಗ್ಲೆಂಡ್ ಮತ್ತು ಭಾರತ ನಡುವಿನ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳು ಮಹತ್ವದ ಬದಲಾವಣೆ ಮಾಡಿಕೊಂಡಿವೆ. ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ (Ben Stokes) ಮತ್ತು ಭಾರತದ ವೇಗಿ ಜಸ್ಪ್ರಿತ್ ಬುಮ್ರಾ (Jasprit Bumrah) ಇಬ್ಬರೂ ಓವಲ್‌ನಲ್ಲಿ ಸರಣಿ ನಿರ್ಣಾಯಕ ಪಂದ್ಯದಿಂದ ಹೊರಗುಳಿದಿದ್ದಾರೆ.
ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಭುಜದ ಗಾಯದಿಂದಾಗಿ ಸ್ಟೋಕ್ಸ್ ಅಂತಿಮ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಬುಧವಾರ ದೃಢಪಡಿಸಿದೆ. ಉಪನಾಯಕ ಓಲಿ ಪೋಪ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ತಂಡವನ್ನು ಮುನ್ನಡೆಸಲಿದ್ದಾರೆ. ಇಂಗ್ಲೆಂಡ್ ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆಯಲ್ಲಿದೆ. ಇದನ್ನೂ ಓದಿ: ವಾಂಖೆಡೆಯಲ್ಲಿ 6.5 ಲಕ್ಷ ಮೌಲ್ಯದ 261 ಐಪಿಎಲ್ ಜೆರ್ಸಿ ಕಳವು – ಸೆಕ್ಯುರಿಟಿ ಗಾರ್ಡ್ ಅರೆಸ್ಟ್
ಇಂಗ್ಲೆಂಡ್ ಪರ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಸ್ಟೋಕ್ಸ್, ಸರಣಿಯಲ್ಲಿ 17 ವಿಕೆಟ್‌ಗಳನ್ನು ಪಡೆದಿದ್ದರು. ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಕೂಡ ಆಗಿದ್ದಾರೆ.
ಮ್ಯಾಚೆಂಸ್ಟರ್: ಇಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಟೀಂ ಇಂಡಿಯಾ ಆಂಗ್ಲರಿಗೆ ತಿರುಗೇಟು ನೀಡುವ ಪ್ರಯತ್ನ ಮಾಡಿತು. 4ನೇ ದಿನದ ಕೊನೇವರೆಗೂ ವಿಕೆಟ್ ಬಿಟ್ಟುಕೊಡದ ಕೆ.ಎಲ್ ರಾಹುಲ್, ಶುಭಮನ್ ಗಿಲ್ (Shubman Gill) ಜೋಡಿ 377 ಎಸೆತಗಳಲ್ಲಿ 174 ರನ್‌ಗಳ ಜೊತೆಯಾಟ ನೀಡಿ ವಿಕೆಟ್ ಉಳಿಸಿಕೊಂಡಿದೆ. ಆದಾಗ್ಯೂ ಇಂಗ್ಲೆಂಡ್ 137 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ಜೋ ರೂಟ್, ಬೆನ್‌ಸ್ಟೋಕ್ಸ್ ಅವರ ಅಮೋಘ ಶತಕ, ಬೆನ್ ಡಕೆಟ್, ಓಲಿ ಪೋಪ್ ಅವರ ಅರ್ಧಶತಕಗಳ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 669 ರನ್ ಕಲೆಹಾಕಿತ್ತು.
3ನೇ ದಿನದಾಟದಲ್ಲಿ 134 ಎಸೆತಗಳಲ್ಲಿ 77 ರನ್ ಗಳಿಸಿದ್ದ ನಾಯಕ ಬೆನ್ ಸ್ಟೋಕ್ಸ್ (Ben Stokes) 4ನೇ ದಿನ ಕಣಕ್ಕಿಳಿದು ಸ್ಪೋಟಕ ಬ್ಯಾಟಿಂಗ್ ನಡೆಸಿದರು. 198 ಎಸೆತಗಳಲ್ಲಿ 141 ರನ್ (3 ಸಿಕ್ಸರ್, 11 ಬೌಂಡರಿ) ಚಚ್ಚಿದರು ಇದರೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 7,000 ರನ್ ಪೂರೈಸಿದ ಸಾಧನೆಯನ್ನೂ ಮಾಡಿದರು. ಇದರೊಂದಿಗೆ ಬ್ರ್ಯಾಂಡನ್ ಕಾರ್ಸ್ (47 ರನ್), ಲಿಯಾಮ್ ದಾವ್ಸನ್ (26 ರನ್) ಅವರ ಸಣ್ಣ ಕೊಡುಗೆ ತಂಡದ ಮೊತ್ತ ಹೆಚ್ಚಿಸುವಲ್ಲಿ ಸಹಕಾರಿಯಾಯಿತು.
ಕೈಕೊಟ್ಟ ಸುದರ್ಶನ್, ಜೈಸ್ವಾಲ್
ಇನ್ನೂ 4ನೇ ದಿನ ತನ್ನ 2ನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾಕ್ಕೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್ ಶೂನ್ಯ ಸುತ್ತಿ ಪೆವಿಲಿಯನ್‌ಗೆ ಮರಳಿದ್ರು. ಬಳಿಕ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಕೆ.ಎಲ್ ರಾಹುಲ್ (KL Rahul ) 87 ರನ್ (210 ಎಸೆತ, 8 ಬೌಂಡರಿ) ಗಳಿಸಿದ್ರೆ, ನಾಯಕ ಶುಭಮನ್ ಗಿಲ್ 78 ರನ್ (167 ಎಸೆತ, 10 ಬೌಂಡರಿ) ಗಳಿಸಿದರು. ಭಾನುವಾರ ಈ ಜೋಡಿ 5ನೇ ದಿನದ ಕ್ರೀಸ್ ಆರಂಭಿಸಲಿದೆ.
ಮ್ಯಾಚೆಂಸ್ಟರ್: ಜೋ ರೂಟ್ (Joe Root) ಅವರ ಶತಕ, ಬೆನ್ ಸ್ಟೋಕ್ಸ್ ಮತ್ತು ಓಲಿ ಪೋಪ್ ಅವರ ಅರ್ಧಶತಕದ ನೆರವಿನಿಂದ ಭಾರತದ (India) ವಿರುದ್ಧ ನಡೆಯುತ್ತಿರುವ 4ನೇ ಟೆಸ್ಟ್ ಕ್ರಿಕೆಟ್‌ನ ಮೂರನೇ ದಿನ ಇಂಗ್ಲೆಂಡ್ (England) 186 ರನ್‌ಗಳ ಭರ್ಜರಿ ಮುನ್ನಡೆ ಸಾಧಿಸಿದೆ.
ಭಾರತದ 358 ರನ್‌ಗಳಿಗೆ ಪ್ರತಿಯಾಗಿ ಇಂಗ್ಲೆಂಡ್ 135 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 544 ರನ್ ಹೊಡೆದಿದೆ. ಎರಡನೇ ದಿನ 2 ವಿಕೆಟ್ ನಷ್ಟಕ್ಕೆ 225 ರನ್ ಹೊಡೆದಿದ್ದ ಇಂಗ್ಲೆಂಡ್ ಇಂದು 5 ವಿಕೆಟ್‌ಗಳ ಸಹಾಯದಿಂದ 319 ರನ್ ಹೊಡೆಯಿತು. ಇಂದು 89 ಓವರ್ ಎಸೆದ ಭಾರತ ಬೌಲರ್‌ಗಳಿಗೆ ದಕ್ಕಿದ್ದು ಕೇವಲ 5 ವಿಕೆಟ್‌ಗಳು ಮಾತ್ರ.
ಔಟಾಗದೇ ಉಳಿದಿದ್ದ ಜೋ ರೂಟ್ 150 ರನ್(248 ಎಸೆತ, 14 ಬೌಂಡರಿ ಹೊಡೆದು ಔಟಾದರೆ, ಓಲಿ ಪೋಪ್ 71 ರನ್(128 ಎಸೆತ, 7 ಬೌಂಡರಿ) ಹೊಡೆದು ಔಟಾದರು. ಇವರಿಬ್ಬರು ಮೂರನೇ ವಿಕೆಟಿಗೆ 231 ಎಸೆತಗಳಲ್ಲಿ 144 ರನ್ ಜೊತೆಯಾಟವಾಡಿದರು. ಅಷ್ಟೇ ಅಲ್ಲದೇ ಟೆಸ್ಟ್ ಕ್ರಿಕೆಟಿನಲ್ಲಿ ಎರಡನೇ ಅತಿ ಹೆಚ್ಚು ರನ್ ಹೊಡೆದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಜೋ ರೂಟ್ ಪಾತ್ರರಾದರು. ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟಿಗೆ ಕನ್ನಡತಿ ವೇದಾ ಕೃಷ್ಣಮೂರ್ತಿ ವಿದಾಯ
ನಾಯಕ ಬೆನ್ ಸ್ಟೋಕ್ಸ್ (Ben Stokes) 77 ರನ್ (134 ಎಸೆತ, 6 ಬೌಂಡರಿ) ಲಿಯಾಮ್ ಡಾಸನ್ 21 ರನ್‌ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಶನಿವಾರ ಭಾರತದ ಬೌಲರ್‌ಗಳು ಉತ್ತಮವಾಗಿ ಆಡಿ ಬೇಗನೇ ವಿಕೆಟ್ ತೆಗೆದು ನಂತರ ಭಾರತ ಔಟಾಗದೇ ದಿನಪೂರ್ತಿ ಆಡಿದರೆ ಪಂದ್ಯಕ್ಕೆ ರೋಚಕ ತಿರುವು ಸಿಗಬಹುದು. ಹೀಗಾಗಿ 4ನೇ ದಿನದಲ್ಲಿ ಭಾರತದ ಆಟ ಯಾವ ರೀತಿ ಇರಲಿದೆ ಎನ್ನುವುದರ ಪಂದ್ಯ ಡ್ರಾ/ ಜಯದ ಬಗ್ಗೆ ಲೆಕ್ಕಾಚಾರ ಹಾಕಬಹುದು.
ಭಾರತದ ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ತಲಾ ಎರಡು ವಿಕೆಟ್ ಪಡೆದರೆ ಬುಮ್ರಾ, ಸಿರಾಜ್, ಕಾಂಬೋಜ್ ತಲಾ ಒಂದೊಂದು ವಿಕೆಟ್ ಪಡೆದರು.
ಮ್ಯಾಂಚೆಸ್ಟರ್: ಇಂಗ್ಲೆಂಡ್ ಮತ್ತು ಭಾರತ (Eng vs Ind) ನಡುವಿನ 4ನೇ ಟೆಸ್ಟ್ ಪಂದ್ಯಕ್ಕೆ ಐತಿಹಾಸಿಕ ಮ್ಯಾಂಚೆಸ್ಟರ್ (Manchester) ಕ್ರೀಡಾಂಗಣ ಸಜ್ಜಾಗಿದ್ದು, ಉಭಯ ತಂಡಗಳು ಹಲವು ಬದಲಾವಣೆ ಮಾಡಿಕೊಂಡಿವೆ.
ಹೌದು. ಇದೀಗ ನಡೆಯುತ್ತಿರುವ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯಲ್ಲಿ (Anderson–Tendulkar Trophy) ಆತಿಥೇಯ ಇಂಗ್ಲೆಂಡ್ ತಂಡವು 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ಇಂಗ್ಲೆಂಡ್ ಸರಣಿ ಗೆಲ್ಲಲು ಇನ್ನೊಂದು ಗೆಲುವಿನ ಅಗತ್ಯವಿದೆ. ಆದ್ರೆ ಭಾರತ ಸರಣಿ ಗೆಲ್ಲಲು ಇನ್ನುಳಿದ ಎರಡೂ ಪಂದ್ಯಗಳನ್ನೂ ಗೆಲ್ಲಬೇಕಾದ ಅನಿವಾರ್ಯತೆ ಇದೆ. 4ನೇ ಟೆಸ್ಟ್ ಪಂದ್ಯ ಇಂದಿನಿಂದ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಮಧ್ಯಾಹ್ನ 3:30ಕ್ಕೆ ಪಂದ್ಯ ಶುರುವಾಗಲಿದೆ. ಇದನ್ನೂ ಓದಿ: WTC Final | 2031ರ ವರೆಗೆ ಇಂಗ್ಲೆಂಡ್‌ನಲ್ಲೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ
ಬೌಲಿಂಗ್ ಪಡೆಗೆ ಬುಮ್ರಾ ಸಾರಥ್ಯ
ಮ್ಯಾಂಚೆಸ್ಟರ್ ಪಂದ್ಯಕ್ಕೆ ಟೀಂ ಇಂಡಿಯಾದ ಮೂವರು ಆಟಗಾರರು ಅಲಭ್ಯರಾಗಿದ್ದಾರೆ. 3ನೇ ಟೆಸ್ಟ್ (Test Cricket) ಪಂದ್ಯದ ಬಳಿಕ ನಡೆದ ಅಭ್ಯಾಸದ ವೇಳೆ ಟೀಮ್ ಇಂಡಿಯಾದ ಎಡಗೈ ವೇಗಿ ಅರ್ಷ್‌ದೀಪ್ ಸಿಂಗ್ ಅವರ ಕೈಗೆ ಗಾಯವಾಗಿದ್ದು, ಹೀಗಾಗಿ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲೂ ಅವರು ಕಾಣಿಸಿಕೊಳ್ಳುವುದಿಲ್ಲ. ಇನ್ನೂ ಎಜ್‌ಬಾಸ್ಟನ್‌ನಲ್ಲಿ ಐತಿಹಾಸಿಕ ಗೆಲುವಿಗೆ ಕಾರಣವಾಗಿದ್ದ ವೇಗಿ ಆಕಾಶ್ ದೀಪ್ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಲಾರ್ಡ್ಸ್ ಟೆಸ್ಟ್ ಪಂದ್ಯದ 4ನೇ ದಿನದಾಟದಂದು ತೊಡೆಸಂದು ಗಾಯದ ಸಮಸ್ಯೆಗೆ ಒಳಗಾಗಿದ್ದ ಆಕಾಶ್ ದೀಪ್ ದ್ವಿತೀಯ ಇನಿಂಗ್ಸ್‌ನಲ್ಲಿ ಕೇವಲ 8 ಓವರ್ಗಳನ್ನು ಮಾತ್ರ ಎಸೆದಿದ್ದರು ಎಂದು ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ತಿಳಿಸಿದ್ದಾರೆ. ಹೀಗಾಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಅವರು ಟೀಂ ಇಂಡಿಯಾ ಬೌಲಿಂಗ್ ಪಡೆಯನ್ನ ಮುನ್ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೇ ಟೀಮ್ ಇಂಡಿಯಾದ ಯುವ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ (Nitish Kumar Reddy) ಕೂಡ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಜಿಮ್ನಲ್ಲಿನ ತರಬೇತಿ ವೇಳೆ ಅವರ ಮೊಣಕಾಲಿಗೆ ಗಾಯವಾಗಿದ್ದು, ಹೀಗಾಗಿ ಇಂಗ್ಲೆಂಡ್ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಂದ ಅವರು ಹೊರಬಿದ್ದಿದ್ದಾರೆ. ಹೀಗಾಗಿ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ನಿತೀಶ್ ಕುಮಾರ್ ಬದಲಿಗೆ ಅನ್ಶುಲ್ ಕಾಂಬೋಜ್ ಅವರನ್ನು ಕಣಕ್ಕಿಳಿಸಲಿದೆ ಭಾರತ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಪಾಕಿಗೆ ಮತ್ತೆ ಶಾಕ್, ಹಿಂದೆ ಸರಿದ ಟೀಂ ಇಂಡಿಯಾ – ಇಂದಿನ ಪಂದ್ಯವೇ ರದ್ದು
8 ವರ್ಷಗಳ ಬಳಿಕ ಸ್ಪಿನ್ನರ್ ಕಣಕ್ಕಿಳಿಸಲಿದೆ ಆಂಗ್ಲ ಪಡೆ
ಇನ್ನೂ ಸರಣಿ ಗೆಲ್ಲುವ ತವಕದಲ್ಲಿರುವ ಇಂಗ್ಲೆಂಡ್ ತಂಡ ಪ್ಲೇಯಿಂಗ್ 11 ಬಳಗವನ್ನ ಪ್ರಕಟಿಸಿದ್ದು, ಒಂದೇ ಒಂದು ಬದಲಾವಣೆ ಮಾಡಿಕೊಂಡಿದೆ. ಗಾಯಗೊಂಡಿರುವ ಸ್ಪಿನ್ನರ್ ಶೋಯೆಬ್ ಬಶೀರ್ ಬದಲಿಗೆ ಲಿಯಾಮ್ ಡಾಸನ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಬರೋಬ್ಬರಿ 8 ವರ್ಷಗಳ ಬಳಿಕ ಡಾಸನ್ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡಲಿದ್ದಾರೆ. ಇದನ್ನೂ ಓದಿ:BCCI ಅಕೌಂಟ್‌ನಲ್ಲಿದೆ 30,000 ಕೋಟಿ ಹಣ – IPLನಿಂದಲೇ ಅತೀ ಹೆಚ್ಚು ಗಳಿಕೆ!
ಬಶೀರ್‌ಗೆ ಏನಾಗಿತ್ತು?
ಶೋಯೆಬ್ ಬಶೀರ್ ಅವರು ಲಾರ್ಡ್ಸ್ ನಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದ 3ನೇ ದಿನದಾಟದ ವೇಳೆ ಎಡಗೈ ಬೆರಳಿಗೆ ಗಾಯ ಮಾಡಿಕೊಂಡರು. ಭಾರತದ ಎಡಗೈ ಬ್ಯಾಟರ್ ರವೀಂದ್ರ ಜಡೇಜಾ ಅವರ ಬಲವಾದ ಹೊಡೆತ ತಡೆಯಲು ಹೋಗಿ ಬೆರಳು ಮುರಿತಕ್ಕೆ ಒಳಗಾಯಿತು. ಹೀಗಾಗಿ ಅವರು ಸರಣಿಯ ಉಳಿದ ಪಂದ್ಯಗಳಿಂದ ಹೊರಗುಳಿಯಬೇಕಾಗಿ ಬಂತು. ನಂತರ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಬಶೀರ್ 3ನೇ ಟೆಸ್ಟ್ ಪಂದ್ಯದಲ್ಲಿ ಕೊನೆಯ ವಿಕೆಟ್ ಪಡೆದು ಇಂಗ್ಲೆಂಡ್‌ಗೆ 22 ರನ್‌ಗಳ ಜಯ ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು.
ಲಾರ್ಡ್ಸ್: ಐತಿಹಾಸಿಕ ಲಾರ್ಡ್ಸ್ (Lords) ಅಂಗಳದಲ್ಲಿ ಆಂಗ್ಲರ ವಿರುದ್ಧ ನಡೆಸಿದ ರವೀಂದ್ರ ಜಡೇಜಾ (Ravindra Jadeja) ಹೋರಾಟ ವ್ಯರ್ಥವಾಗಿದೆ. ರೋಚಕ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ (England) ತಂಡವು ಭಾರತದ ವಿರುದ್ಧ 22 ರನ್‌ಗಳ ಗೆಲುವು ಸಾಧಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದೆ.
ಲಾರ್ಡ್ಸ್‌ನಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ 193 ರನ್‌ಗಳ ಗುರಿ ಬೆನ್ನತ್ತಿದ್ದ ಭಾರತ 4ನೇ ದಿನದ ಅಂತ್ಯಕ್ಕೆ 58 ರನ್‌ಗಳಿಗೆ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು. ಕೊನೆಯ ದಿನದಾಟದಲ್ಲಿ ಭಾರತದ ಗೆಲುವಿಗೆ 135 ರನ್ ಬೇಕಿತ್ತು. ಗೆಲ್ಲುವ ಉತ್ಸಾಹದೊಂದಿಗೆ ಕಣಕ್ಕಿಳಿದಿದ್ದ ಟೀಂ ಇಂಡಿಯಾ ಯುವಪಡೆಗೆ ಇಂಗ್ಲೆಂಡ್ (England) ಬೌಲರ್‌ಗಳು ಮರ್ಮಾಘಾತ ನೀಡಿದರು. ಅಗ್ರ ಬ್ಯಾಟರ್‌ಗಳು ಕೈಕೊಟ್ಟ ಪರಿಣಾಮ ರವೀಂದ್ರ ಜಡೇಜಾ ಅಜೇಯ ಹೋರಾಟದ ಹೊರತಾಗಿಯೂ ಭಾರತ 170 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ 22 ರನ್‌ಗಳ ಗೆಲುವು ಸಾಧಿಸಿತು.
ಟರ್ನಿಂಗ್ ಸಿಕ್ಕಿದ್ದೆಲ್ಲಿ?
ಉತ್ತಮ ಪ್ರದರ್ಶನ ನೀಡುವ ಭರವಸೆಯೊಂದಿಗೆ ಕಣಕ್ಕಿಳಿದಿದ್ದ ರಿಷಭ್ ಪಂತ್ 12 ಎಸೆತಗಳಲ್ಲಿ 9ರನ್ ಗಳಿಸಿದ್ದಾಗ ಜೋಫ್ರಾ ಆರ್ಚರ್‌ಗೆ ಕ್ಲೀನ್ ಬೌಲ್ಡ್ ಆದರು. ಈ ಬೆನ್ನಲ್ಲೇ ಕೆ.ಎಲ್ ರಾಹುಲ್ ಕೂಡ 58 ಎಸೆತಗಳಲ್ಲಿ 39 ರನ್ ಗಳಿಸಿ ಔಟಾದರು. ಅಷ್ಟೇ ಅಲ್ಲ, ಮೊದಲ ಇನ್ನಿಂಗ್ಸ್‌ನಲ್ಲಿ ಕ್ರೀಸ್‌ನಲ್ಲಿ ಭದ್ರವಾಗಿ ನಿಂತಿದ್ದ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಕೇವಲ 4 ಎಸೆಗಳಲ್ಲಿ ಡಕ್‌ಔಟ್ ಆಗಿ ಪೆವಿಲಿಯನ್‌ಗೆ ಮರಳಿದ್ರು. ಇಲ್ಲಿಂದ ಪಂದ್ಯದ ಗತಿಯೇ ಬದಲಾಯಿತು.
ಒಂದಂಥದಲ್ಲಿ 82 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದ ಭಾರತ 100 ರನ್ ಗಳಿಸುವುದೂ ಕಷ್ಟವೆಂದೇ ಭಾವಿಸಲಾಗಿತ್ತು. ಆದ್ರೆ ನಿತೀಶ್ ರೆಡ್ಡಿ, ರವೀಂದ್ರ ಜಡೇಜಾ ಅವರ ಸಣ್ಣ ಜೊತೆಯಾಟ ಟೀಂ ಇಂಡಿಯಾ ಗೆಲುವಿನ ಭರವಸೆ ಮೂಡಿಸಿತ್ತು. ಹೀಗೆನ್ನುತ್ತಿರುವಾಗಲೇ 53 ಎಸೆತಗಳಲ್ಲಿ 13 ರನ್ ಗಳಿಸಿದ್ದ ನಿತೀಶ್ ರೆಡ್ಡಿ ಔಟಾದರು. ಬಳಿಕ ಕಣಕ್ಕಿಳಿದ ಬುಮ್ರಾ 5 ರನ್ ಗಳಿಸಿದರೂ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ್ದ ಜಡೇಜಾಗೆ ಉತ್ತಮ ಸಾಥ್ ನೀಡಿದ್ದರು. ಈ ವೇಳೆ ಜಡೇಜಾ ಉತ್ತಮ ಬ್ಯಾಟಿಂಗ್ ಕೂಡ ನಡೆಸುತ್ತಿದ್ದರು. ಆದ್ರೆ 54 ಎಸೆತಗಳನ್ನು ಎದುರಿಸಿದ ಬುಮ್ರಾ ಬೆನ್‌ಸ್ಟೋಕ್ಸ್ ಬೌಲಿಂಗ್‌ನಲ್ಲಿ ಕ್ಯಾಚ್ ನೀಡಿ ಔಟಾದರು. ಬಳಿಕ ಬಂದ ಸಿರಾಜ್ (4 ರನ್) ಕೂಡ ಜಡ್ಡುಗೆ ಉತ್ತಮ ಸಾಥ್ ನೀಡಿದ್ದರು. ಆದ್ರೆ ಶೋಯೆಬ್ ಬಶೀರ್ ಅವರ ಒಂದು ಎಸೆತವು ಬ್ಯಾಟ್‌ಗೆ ತಗುಲಿದ ಬಳಿಕ ಸ್ವಿಂಗ್ ಆಗಿ ವಿಕೆಟ್‌ಗೆ ತಗುಲಿತು ಈ ವೇಳೆ ಸಿರಾಜ್ ಚೆಂಡನ್ನು ತಡೆಯಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಜಡ್ಡು ಹೋರಾಟವೂ ವ್ಯರ್ಥವಾಯಿತು.
– 18 ವರ್ಷಗಳ ಬಳಿಕ ಆಂಗ್ಲರ ನೆಲದಲ್ಲಿ ಸರಣಿ ಗೆಲ್ಲುವ ಕನಸು
– ರೋಹಿತ್, ಕೊಹ್ಲಿ ಅನುಪಸ್ಥಿತಿಯಲ್ಲಿ ಸತ್ವಪರೀಕ್ಷೆಗೆ ಸಜ್ಜಾದ ಭಾರತ
ಲಂಡನ್: ಬಹುನಿರೀಕ್ಷಿತ ಭಾರತ ಮತ್ತು ಇಂಗ್ಲೆಂಡ್ (Ind vs Eng) ನಡುವಿನ ‘ಪಟೌಡಿ’ (ತೆಂಡೂಲ್ಕರ್-ಆ್ಯಂಡರ್ಸನ್ ಟ್ರೋಫಿ) ಟ್ರೋಫಿಯ ಐದು ಪಂದ್ಯಗಳ ಟೆಸ್ಟ್ ಸರಣಿ ಇಲ್ಲಿನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾಗಲಿದೆ. ಯುವ ಆಟಗಾರ ಶುಭಮನ್ ಗಿಲ್ ಸಾರಥ್ಯದಲ್ಲಿ ಕಣಕ್ಕಿಳಿಯುತ್ತಿರುವ ಟೀಂ ಇಂಡಿಯಾ (Team India) ಹೊಸ ಅಧ್ಯಾಯಕ್ಕೆ ಬರೆಯಲು ಸಜ್ಜಾಗಿದೆ.
ಸ್ಥಳ: ಲೀಡ್ಸ್ ನಗರದ ಹೆಡಿಂಗ್ಲೆ ಕ್ರೀಡಾಂಗಣ ಸಮಯ: ಮಧ್ಯಾಹ್ನ 3.30 (ಭಾರತೀಯ ಕಾಲಮಾನ) ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್ ವರ್ಕ್ ಚಾನಲ್ ಮತ್ತು ಜಿಯೋ ಸ್ಟಾರ್ ಆ್ಯಪ್
ಇಂದಿನಿಂದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ (Test Series) ಶುರುವಾಗಲಿದೆ. ಮೊದಲ ಟೆಸ್ಟ್ ಪಂದ್ಯ ಹೆಡಿಂಗ್ಲೆ ಲೀಡ್ಸ್ ಮೈದಾನದಲ್ಲಿ ನಡೆಯಲಿದ್ದು, ಮಧ್ಯಾಹ್ನ 3:30ಕ್ಕೆ ಪಂದ್ಯ ಶುರುವಾಗಲಿದೆ. ಜೊಯೋ ಹಾಟ್‌ಸ್ಟಾರ್ ಒಟಿಟಿ, ಸೋನಿ ಸ್ಫೋರ್ಟ್ಸ್ ವಾಹಿನಿಯಲ್ಲಿ ನೇರಪ್ರಸಾರವಾಗಲಿದೆ.
ಇಂಗ್ಲೆಂಡ್‌ನಲ್ಲಿ ಭಾರತ ಗೆದ್ದಿರೋದು ಮೂರೇ ಸರಣಿ
1971ರಲ್ಲಿ ಅಜಿತ್ ವಾಡೇಕರ್, 1986ರಲ್ಲಿ ಕಪಿಲ್ ದೇವ್ ಮತ್ತು 2007ರಲ್ಲಿ ರಾಹುಲ್ ದ್ರಾವಿಡ್ ನೇತೃತ್ವದ ಭಾರತ ತಂಡ, ಮಾತ್ರ ಕಳೆದ 9 ದಶಕಗಳಲ್ಲಿ ಆಂಗ್ಲರ ನಾಡಿನಲ್ಲಿ ಟೆಸ್ಟ್ ಸರಣಿ ಗೆದ್ದಿದೆ. ಕೊಹ್ಲಿ ಮತ್ತು ರೋಹಿತ್ (Rohit Sharma And Virat Kohli) ಉತ್ತಮ ಪ್ರದರ್ಶನ ನೀಡಿದರೂ ಆಂಗ್ಲರ ನಾಡಿನಲ್ಲಿ ಟೆಸ್ಟ್ ಸರಣಿ ಜಯಿಸಲು ಸಾಧ್ಯವಾಗಿಲ್ಲ. 2025-27ರ ಋುತುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಭಾಗವಾಗಿರುವ ಈ ಸರಣಿಯೊಂದಿಗೆ ಟೀಂ ಇಂಡಿಯಾ ಹೊಸ ಅಧ್ಯಾಯ ಆರಂಭಿಸುತ್ತಿದೆ.
ಇಬ್ಬರು ಸ್ಟಾರ್‌ಗಳ ಅನುಪಸ್ಥಿತಿ
ಕಳೆದೊಂದು ದಶಕದಲ್ಲಿ ‘ಟೆಸ್ಟ್ ಕ್ರಿಕೆಟ್’ ಅನ್ನು ಹೊಸ ಎತ್ತರಕ್ಕೇರಿಸಿದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮತ್ತು ಇಂಗ್ಲೆಂಡ್ ವಿರುದ್ಧ ಅತ್ಯಧಿಕ ವಿಕೆಟ್ ಪಡೆದಿರುವ ಆರ್.ಅಶ್ವಿನ್ ಅವರ ಅನುಪಸ್ಥಿತಿ ಭಾರತದ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗವನ್ನು ಸಪ್ಪೆ ಮಾಡಿದಂತೆ ಕಾಣುತ್ತಿದೆ.
ಟೀಂ ಇಂಡಿಯಾಕ್ಕೆ 37ನೇ ಟೆಸ್ಟ್ ಕ್ಯಾಪ್ಟನ್ ಆಗಿರುವ ಯುವ ಆಟಗಾರ ಶುಭಮನ್ ಗಿಲ್ ಅವರ ನಾಯಕತ್ವಕ್ಕೂ ಇದು ಅಗ್ನಿಪರೀಕ್ಷೆಯಾಗಿದೆ. ಬ್ಯಾಟಿಂಗ್ ಸಂಪ್ರದಾಯ ಬದಲಾಯಿಸಿರುವ ಬ್ರೆಂಡನ್ ಮೆಕಲ್ಲಂ ಅವರ ಗರಡಿಯಲ್ಲಿ ಪಳಗಿರುವ ಬೆನ್ ಸ್ಟೋಕ್ಸ್ ಸಾರಥ್ಯದ ಇಂಗ್ಲೆಂಡ್, ಸರಣಿಯಲ್ಲಿ ಫೇವರಿಟ್ ತಂಡವಾಗಿ ಕಣಕ್ಕಿಳಿಯುತ್ತಿದೆ.
ಇಂಗ್ಲೆಂಡ್ ಪಡೆ ಬಲಿಷ್ಠ
36 ಶತಕಗಳು ಒಳಗೊಂಡಂತೆ 13 ಸಾವಿರಕ್ಕೂ ಅಧಿಕ ರನ್ ಕಲೆಹಾಕಿರುವ ಜೋ ರೂಟ್ ಅವರನ್ನು ಹೊಂದಿರುವ ಇಂಗ್ಲೆಂಡ್‌ನ ಬ್ಯಾಟಿಂಗ್ ಘಟಕ ಭಾರತಕ್ಕೆ ಹೋಲಿಸಿದರೆ, ಉತ್ತಮ ಎಂದು ಕಾಣುತ್ತದೆ. ಏಕೆಂದರೆ ಪ್ರವಾಸಿ ತಂಡದ ಅನುಭವಿ ಎನಿಸಿರುವ ಬ್ಯಾಟರ್ ಕೆ.ಎಲ್ ರಾಹುಲ್, 58 ಟೆಸ್ಟ್‌ಗಳಲ್ಲಿ 3,257 ರನ್‌ಗಳನ್ನು ಮಾತ್ರ ಕಲೆ ಹಾಕಿದ್ದಾರೆ. ಆದರೆ ಭಾರತೀಯ ಬೌಲಿಂಗ್ ಘಟಕವು ವೇಗಿ ಜಸ್ಪ್ರಿತ್ ಬುಮ್ರಾ ಅವರ ಲಭ್ಯತೆಯಿಂದ ಬಲಿಷ್ಠವಾಗಿದೆ.
ಕೇವಲ 3 ಪಂದ್ಯಗಳಿಗೆ ಬುಮ್ರಾ ಲಭ್ಯವಿದ್ದರೂ ಆತಿಥೇಯರನ್ನು ಸಂಕಷ್ಟಕ್ಕೆ ಸಿಲುಕಿಸುವ ಅವಕಾಶ ಭಾರತಕ್ಕಿದೆ. ಕೊಹ್ಲಿ ಮತ್ತು ರೋಹಿತ್ ಅನುಪಸ್ಥಿತಿಯಲ್ಲಿ ಯುವ ಬ್ಯಾಟಿಂಗ್ ತಾರೆಗಳನ್ನು ಒಳಗೊಂಡಿರುವ ಟೀಂ ಇಂಡಿಯಾ, ದಿಗ್ಗಜ ಜೇಮ್ಸ್ ಆ್ಯಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಅವರು ಎರಡು ದಶಕಗಳಿಂದ ಕಾಯ್ದಿರಿಸಿದ್ದ ಗುಣಮಟ್ಟವನ್ನು ಹೊಂದಿರದ ಇಂಗ್ಲೆಂಡ್ ಬೌಲಿಂಗ್ ಮೇಲೆ ಪ್ರಭಾವ ಬೀರುವ ಅತ್ಯುತ್ತಮ ಅವಕಾಶವಿದೆ. ಕ್ರಿಸ್ ವೋಕ್ಸ್, ಬ್ರೈಡನ್ ಕಾರ್ಸ್ ಅವರ ದಾಳಿ ಪರಿಣಾಮಕಾರಿಯಾಗಿರದ ಕಾರಣ ಭಾರತೀಯರು ಮೇಲುಗೈ ಸಾಧಿಸಬಹುದು. ಆದ್ರೆ ಶೋಯೆಬ್ ಬಷೀರ್ ಅವರ ಸ್ಪಿನ್ ದಾಳಿ ಎದುರಿಸುವುದು ಕೊಂಚ ಸವಾಲಿನ ಕೆಲಸವಾಗಿಯೂ ಕಾಣಬಹುದು.
ಇತ್ತ ಭಾರತ ತಂಡದಲ್ಲಿ ಯುವ ಬ್ಯಾಟರ್‌ಗಳೊಂದಿಗೆ ಸ್ಪಿನ್ನರ್‌ಗಳಾದ ಕುಲ್ದೀಪ್ ಯಾದವ್ ಮತ್ತು ಅನುಭವಿ ರವೀಂದ್ರ ಜಡೇಜಾ ಸಹ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲು ಪೈಪೋಟಿಯಲ್ಲಿದ್ದಾರೆ.
ಧರ್ಮಶಾಲಾ: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಯಶಸ್ವಿ ಜೈಸ್ವಾಲ್ (Yashasvi Jaiswal), ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಹೆಸರಲ್ಲಿದ್ದ ಅಪರೂಪದ ದಾಖಲೆಯನ್ನ ನುಚ್ಚುನೂರು ಮಾಡಿದ್ದಾರೆ.
ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ (England) ತಂಡ 218 ರನ್‌ಗಳಿಗೆ ಆಲೌಟ್ ಆಯಿತು. ಬಳಿಕ ತನ್ನ ಸರದಿಯ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ 30 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 135 ರನ್‌ಗಳಿಗೆ ಮೊದಲ ದಿನದಾಟ ಅಂತ್ಯಗೊಳಿಸಿತು. ಇದನ್ನೂ ಓದಿ: ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ಹಲವು ದಾಖಲೆ ಮುರಿದ ಯಶಸ್ವಿ ಜೈಸ್ವಾಲ್
ಹಿಟ್‌ಮ್ಯಾನ್ (Rohit Sharma) ಜೊತೆಗೆ ಕ್ರೀಸ್ ಆರಂಭಿಸಿದ ಯುವ ಬ್ಯಾಟರ್ ಯಶಸ್ವಿ ಜಸ್ವಾಲ್ ಮತ್ತೊಮ್ಮೆ ಸ್ಫೋಟಕ ಪ್ರದರ್ಶನ ನೀಡಿದರು. ಆಕರ್ಷಕ ಅರ್ಧಶತಕ ಗಳಿಸುವ ಜೊತೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 1 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರು. ಹಾಗೂ ಸಚಿನ್ ತೆಂಡೂಲ್ಕರ್ ಬಳಿಕ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್ ಹಾಗೂ ಸರಣಿಯೊಂದರಲ್ಲಿ ಅತಿಹೆಚ್ಚು ರನ್ ಗಳಿಸಿದ 3ನೇ ಭಾರತೀಯ ಎಂಬ ವಿಶೇಷ ಸಾಧನೆಗೆ ಪಾತ್ರರಾದರು. ಸಚಿನ್ 25 ಸಿಕ್ಸರ್ ಸಿಡಿಸಿದ್ದರೆ, ಯಶಸ್ವಿ ಜೈಸ್ವಾಲ್ 26 ಸಿಕ್ಸರ್ ಸಿಡಿಸಿದ್ದಾರೆ.
5ನೇ ಟೆಸ್ಟ್ ಪಂದ್ಯದ ಮೊದಲನೇ ದಿನದಾಟದಲ್ಲಿ 58 ಎಸೆತಗಳಲ್ಲಿ 57 ರನ್ (5 ಬೌಂಡರಿ, 3 ಸಿಕ್ಸರ್) ಗಳಿಸಿದ ಯಶಸ್ವಿ ಜೈಸ್ವಾಲ್ ಪ್ರಸಕ್ತ ಸರಣಿಯಲ್ಲಿ 712 ರನ್ ಗಳಿಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನ ಸರಣಿಯೊಂದರಲ್ಲಿ 692 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ನುಚ್ಚುನೂರು ಮಾಡಿದರು. 2014-15ರ ಸಾಲಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ವಿರಾಟ್ 692 ರನ್ ಗಳಿಸಿದ್ದರು. ಈ ಮೂಲಕ ಸರಣಿಯೊಂದರಲ್ಲಿ ಹೆಚ್ಚು ರನ್ ಗಳಿಸಿದ್ದ 2ನೇ ಭಾರತೀಯ ಎಂಬ ಖ್ಯಾತಿ ಗಳಿಸಿದ್ದರು. ಇದೀಗ ವಿರಾಟ್ ಅವರ ದಾಖಲೆಯನ್ನು ಹಿಂದಿಕ್ಕಿರುವ ಯಶಸ್ವಿ ಜೈಸ್ವಾಲ್, ಸುನೀಲ್ ಗವಾಸ್ಕರ್ ಅವರ 774 ರನ್‌ಗಳ ದಾಖಲೆ ಮುರಿಯುವ ಸನಿಹದಲ್ಲಿದ್ದಾರೆ. ಇದನ್ನೂ ಓದಿ: India vs England, 5th Test Day 1: ಕುಲ್ದೀಪ್‌ಗೆ 5 ವಿಕೆಟ್; 218 ರನ್‌ಗಳಿಗೆ ಇಂಗ್ಲೆಂಡ್ ಆಲೌಟ್
ಸ್ಪಿನ್ ಮಾಂತ್ರಿಕರ ದಾಳಿಗೆ ನೆಲಕಚ್ಚಿದ ಇಂಗ್ಲೆಂಡ್:
ಈಗಾಗಲೇ ಸರಣಿಯನ್ನು ಸೋತಿರುವ ಇಂಗ್ಲೆಂಡ್ ತಂಡ ಅಂತಿಮ ಟೆಸ್ಟ್ ಪಂದ್ಯದಲ್ಲಾದರೂ ಸುಧಾರಿತ ಪ್ರದರ್ಶನ ನೀಡುವ ಉತ್ಸಾಹದಲ್ಲಿ ಕಣಕ್ಕಿಳಿದಿತ್ತು. ಆದ್ರೆ ಭಾರತೀಯ ಸ್ಪಿನ್ ಮಾಂತ್ರಿಕರ ದಾಳಿಗೆ ತತ್ತರಿಸಿಹೋದರು. 57 ಓವರ್‌ಗಳಲ್ಲೇ 218 ರನ್ ಗಳಿಸಿ ಇಂಗ್ಲೆಂಡ್ ಆಲೌಟ್ ಆಯಿತು. ಭಾರತದ ಪರ ಸ್ಪಿನ್ ದಾಳಿ ನಡೆಸಿದ ಕುಲ್ದೀಪ್ ಯಾದವ್ 5 ವಿಕೆಟ್ ಕಿತ್ತರೆ, 100ನೇ ಟೆಸ್ಟ್ ಪಂದ್ಯವನ್ನಾಡಿದ ಅಶ್ವಿನ್ 4 ವಿಕೆಟ್ ಪಡೆದು ಮಿಂಚಿದರು. ರವೀಂದ್ರ ಜಡೇಜಾ 1 ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.
ಟೆಸ್ಟ್ ಸರಣಿಯೊಂದರಲ್ಲಿ ಅತಿಹೆಚ್ಚು ರನ್ ಗಳಿಸಿದ ಟಾಪ್-5 ಲಿಸ್ಟ್
* ಡಾನ್ ಬ್ರಾಡ್ಮನ್ – 974 ರನ್ (5 ಪಂದ್ಯ, 7 ಇನ್ನಿಂಗ್ಸ್)
* ವಾಲಿ ಹ್ಯಾಮಂಡ್ – 905 ರನ್ (5 ಪಂದ್ಯ, 9 ಇನ್ನಿಂಗ್ಸ್)
* ರಾಸ್ ಟೇಲರ್ – 839 ರನ್ (6 ಪಂದ್ಯ, 11 ಇನ್ನಿಂಗ್ಸ್)
* ನೀಲ್ ಹಾರ್ವೆ – 834 ರನ್ (5 ಪಂದ್ಯ, 9 ಇನ್ನಿಂಗ್ಸ್)
* ವಿವ್ ರಿಚರ್ಡ್ಸ್ – 829 (4 ಪಂದ್ಯ, 7 ಇನ್ನಿಂಗ್ಸ್)
ಟೆಸ್ಟ್ ಸರಣಿಯೊಂದರಲ್ಲಿ ಅತಿಹೆಚ್ಚು ರನ್ ಗಳಿಸಿದ ಭಾರತೀಯರು
* ಸುನೀಲ್ ಗವಾಸ್ಕರ್ – 774 (4 ಪಂದ್ಯ, 8 ಇನ್ನಿಂಗ್ಸ್) – 1970-71
* ಸುನೀಲ್ ಗವಾಸ್ಕರ್ – 732 (6 ಪಂದ್ಯ, 9 ಇನ್ನಿಂಗ್ಸ್) – 1978/79
* ಯಶಸ್ವಿ ಜೈಸ್ವಾಲ್ – 712 – (5 ಪಂದ್ಯ, 9 ಇನ್ನಿಂಗ್ಸ್) – 2024
* ವಿರಾಟ್ ಕೊಹ್ಲಿ – 692 – (4 ಪಂದ್ಯ, 8 ಇನ್ನಿಂಗ್ಸ್) – 2014/15
ರಾಜ್‌ಕೋಟ್: ಟೆಸ್ಟ್ ಇತಿಹಾಸದಲ್ಲಿ ಟೀಂ ಇಂಡಿಯಾ ಹೊಸ ದಾಖಲೆ ಬರೆದಿದೆ. ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಅಂತರದ ಗೆಲುವನ್ನು ಇಂಗ್ಲೆಂಡ್ ವಿರುದ್ಧ ದಾಖಲಿಸಿದೆ. ಈ ಗೆಲುವಿನ ಮೂಲಕ ಮತ್ತೊಂದು ವಿಶೇಷ ಸಾಧನೆಗೂ ಪಾತ್ರವಾಗಿದೆ.
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆ ಸಾಧಿಸುವ ಮೂಲಕ ಸರಣಿ ಗೆಲುವಿನ ವಿಶ್ವಾಸದಲ್ಲಿದೆ. 3ನೇ ಟೆಸ್ಟ್ ಪಂದ್ಯದಲ್ಲಿ 434 ರನ್‌ಗಳ ಗೆಲುವು ಸಾಧಿಸಿದ ಭಾರತ ಅತಿಹೆಚ್ಚು ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸಿದ ಟಾಪ್-10 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಸ್ಥಾನ ಗಿಟ್ಟಿಸಿಕೊಂಡಿದೆ. ಇದನ್ನೂ ಓದಿ: ಟೀಂ ಇಂಡಿಯಾಗೆ 434 ರನ್‌ಗಳ ದಾಖಲೆ ಜಯ – ಭಾರತದ ಟಾಪ್-5 ಟೆಸ್ಟ್ ಲಿಸ್ಟ್!
ರೋಹಿತ್ ಶರ್ಮಾ ನಾಯಕದ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್‌ಗಳ ಅಂತರದಿಂದ ಗೆಲುವು ಸಾಧಿಸಿದ ಟಾಪ್-10 ಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಜಿಗಿದಿದೆ. ಅಲ್ಲದೇ ಭಾರತ ತಂಡ ಇದುವರೆಗೆ ಒಟ್ಟು 577 ಟೆಸ್ಟ್ ಪಂದ್ಯಗಳನ್ನಾಡಿದ್ದು, ಇಂಗ್ಲೆಂಡ್ ವಿರುದ್ಧ ಸಾಧಿಸಿದ ಈ ಗೆಲುವು ಭಾರತದ ಪಾಲಿಗೆ ಐತಿಹಾಸಿಕ ಸಾಧನೆಯಾಗಿದೆ. ಇದಕ್ಕೂ ಮುನ್ನ ಟೀಂ ಇಂಡಿಯಾ 2021ರಲ್ಲಿ ನ್ಯೂಜಿಲೆಂಡ್ ವಿರುದ್ಧ 372 ರನ್‌ಗಳಿಂದ ಗೆದ್ದಿದ್ದೇ ಇದುವರೆಗಿನ ಬೃಹತ್ ಅಂತರದ ಗೆಲುವಿನ ದಾಖಲೆಯಾಗಿತ್ತು. ಇದನ್ನೂ ಓದಿ: ಜೈಸ್ವಾಲ್, ಜಡೇಜಾ ಶೈನ್; ಆಂಗ್ಲರ ವಿರುದ್ಧ ಭಾರತಕ್ಕೆ 434 ರನ್ ಗೆಲುವು – ಟೆಸ್ಟ್ ಸರಣಿ ಕೈವಶಕ್ಕೆ ಇನ್ನೊಂದೇ ಹೆಜ್ಜೆ
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್‌ಗಳ ಅಂತರದಲ್ಲಿ ಗೆದ್ದ ಟಾಪ್-10 ತಂಡಗಳ ಲಿಸ್ಟ್
1. ಇಂಗ್ಲೆಂಡ್ – 675 ರನ್‌ಗಳಿಂದ ಗೆಲುವು (1928 ರಲ್ಲಿ)
2. ಆಸ್ಟ್ರೇಲಿಯಾ – 562 ರನ್‌ಗಳಿಂದ ಗೆಲುವು (1934 ರಲ್ಲಿ)
3. ಬಾಂಗ್ಲಾದೇಶ – 546 ರನ್‌ಗಳಿಂದ ಗೆಲುವು (2023 ರಲ್ಲಿ)
4. ಆಸ್ಟ್ರೇಲಿಯಾ – 530 ರನ್‌ಗಳಿಂದ ಗೆಲುವು (1911 ರಲ್ಲಿ)
5. ದಕ್ಷಿಣ ಆಫ್ರಿಕಾ – 492 ರನ್‌ಗಳಿಂದ ಗೆಲುವು (2018 ರಲ್ಲಿ)
6. ಆಸ್ಟ್ರೇಲಿಯಾ – 491 ರನ್‌ಗಳಿಂದ ಗೆಲುವು (2004 ರಲ್ಲಿ)
7. ಶ್ರೀಲಂಕಾ – 465 ರನ್‌ಗಳಿಂದ ಗೆಲುವು (2009 ರಲ್ಲಿ)
8. ಭಾರತ – 434 ರನ್‌ಗಳಿಂದ ಗೆಲುವು – (2024 ರಲ್ಲಿ)
9. ವೆಸ್ಟ್ ಇಂಡೀಸ್ – 425 ರನ್‌ಗಳಿಂದ ಗೆಲುವು – (1976 ರಲ್ಲಿ)
10. ನ್ಯೂಜಿಲೆಂಡ್ – 423 ರನ್‌ಗಳಿಂದ ಗೆಲುವು – (2018 ರಲ್ಲಿ)
ಭಾರತದ ಟಾಪ್ 5 ಟೆಸ್ಟ್ ಗೆಲುವುಗಳು
1. 434 ರನ್ ಗೆಲುವು – ಇಂಗ್ಲೆಂಡ್ ವಿರುದ್ಧ – ರಾಜ್‌ಕೋಟ್ – 2024ರಲ್ಲಿ
2. 372 ರನ್ ಗೆಲುವು – ನ್ಯೂಜಿಲೆಂಡ್ ವಿರುದ್ಧ – ಮುಂಬೈ – 2021ರಲ್ಲಿ
3. 337 ರನ್ ಗೆಲುವು – ದಕ್ಷಿಣ ಆಫ್ರಿಕಾ ವಿರುದ್ಧ – ದೆಹಲಿ – 2015ರಲ್ಲಿ
4. 321 ರನ್ ಗೆಲುವು – ನ್ಯೂಜಿಲೆಂಡ್ ವಿರುದ್ಧ – ಇಂದೋರ್ – 2016ರಲ್ಲಿ
5. 320 ರನ್ ಗೆಲುವು – ಆಸ್ಟ್ರೇಲಿಯಾ ವಿರುದ್ಧ – ಮೊಹಾಲಿ – 2008ರಲ್ಲಿ
ರಾಜ್‌ಕೋಟ್: ಟೆಸ್ಟ್ ಇತಿಹಾಸದಲ್ಲಿ ಟೀಂ ಇಂಡಿಯಾ ಮತ್ತೊಂದು ದಾಖಲೆ ಬರೆದಿದೆ. ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದ ಅತಿ ಹೆಚ್ಚು ರನ್ ಅಂತರದ ಗೆಲುವನ್ನು ಇಂಗ್ಲೆಂಡ್ ವಿರುದ್ಧ ದಾಖಲಿಸಿದೆ.
ಭಾರತ ತಂಡ ಇದುವರೆಗೆ ಒಟ್ಟು 577 ಟೆಸ್ಟ್ ಪಂದ್ಯಗಳನ್ನಾಡಿದ್ದು ಇಂಗ್ಲೆಂಡ್ ವಿರುದ್ಧ ಇಂದು ನಡೆದ ಪಂದ್ಯವನ್ನು 434 ರನ್‌ಗಳಿಂದ ಗೆದ್ದಿದೆ. ಇದು ಭಾರತದ ಪಾಲಿಗೆ ಐತಿಹಾಸಿಕ ಸಾಧನೆಯಾಗಿದೆ.
ಇದಕ್ಕೂ ಮುನ್ನ ಟೀಂ ಇಂಡಿಯಾ 2021ರಲ್ಲಿ ನ್ಯೂಜಿಲೆಂಡ್ ವಿರುದ್ಧ 372 ರನ್‌ಗಳಿಂದ ಗೆದ್ದಿದ್ದೇ ಇದುವರೆಗಿನ ಬೃಹತ್ ಅಂತರದ ಗೆಲುವಿನ ದಾಖಲೆಯಾಗಿತ್ತು.
ಭಾರತದ ಟಾಪ್ 5 ಟೆಸ್ಟ್ ಗೆಲುವುಗಳು
1. 434 ರನ್ ಗೆಲುವು – ಇಂಗ್ಲೆಂಡ್ ವಿರುದ್ಧ – ರಾಜ್‌ಕೋಟ್ – 2024ರಲ್ಲಿ
2. 372 ರನ್ ಗೆಲುವು – ನ್ಯೂಜಿಲೆಂಡ್ ವಿರುದ್ಧ – ಮುಂಬೈ – 2021ರಲ್ಲಿ
3. 337 ರನ್ ಗೆಲುವು – ದಕ್ಷಿಣ ಆಫ್ರಿಕಾ ವಿರುದ್ಧ – ದೆಹಲಿ – 2015ರಲ್ಲಿ
4. 321 ರನ್ ಗೆಲುವು – ನ್ಯೂಜಿಲೆಂಡ್ ವಿರುದ್ಧ – ಇಂದೋರ್ – 2016ರಲ್ಲಿ
5. 320 ರನ್ ಗೆಲುವು – ಆಸ್ಟ್ರೇಲಿಯಾ ವಿರುದ್ಧ – ಮೊಹಾಲಿ – 2008ರಲ್ಲಿ
– ಭಾರತದ ಪರ ದ್ವಿಶತಕ ಸಿಡಿಸಿದ 3ನೇ ಕಿರಿಯ ಆಟಗಾರ
– 400 ರನ್‌ಗಳ ಗಡಿ ಸಮೀಪಿಸಿದ ಟೀಂ ಇಂಡಿಯಾ
ವಿಶಾಖಪಟ್ಟಣಂ: ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಆಕರ್ಷಕ ದ್ವಿಶತಕ ಬಾರಿಸಿ ಮಿಂಚಿದ್ದಾರೆ.
Maiden DOUBLE HUNDRED for Yashasvi Jaiswal ????????
ಈವೆರೆಗೆ ರಣಜಿ ಟ್ರೋಫಿ, ದುಲೀಪ್ ಟ್ರೋಫಿ, ಇರಾನಿ ಕಪ್ ಟೂರ್ನಿಗಳಲ್ಲಿ ದ್ವಿಶತಕ ಸಿಡಿಸಿದ್ದ 22 ವರ್ಷ ವಯಸ್ಸಿನ ಯಶಸ್ವಿ ಜೈಸ್ವಾಲ್ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ದ್ವಿಶತಕದ ಖಾತೆ ತೆರೆದಿದ್ದಾರೆ. 277 ಎಸೆತಗಳಲ್ಲಿ 200 ರನ್ (18 ಬೌಂಡರಿ, 7 ಸಿಕ್ಸರ್) ಬಾರಿಸಿದ್ದು, ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಕಿರಿಯ ವಯಸ್ಸಿಗೆ ಈ ಸಾಧನೆ ಮಾಡಿದ ಭಾರತದ (Team India) 3ನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಜೈಸ್ವಾಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ಟೀಂ ಇಂಡಿಯಾ 400 ರನ್‌ಗಳ ಗಡಿ ಸಮೀಪಿಸಿದೆ.
ವಿಶಾಖಪಟ್ಟಣಂನ ಡಾ. ವೈ.ಎಸ್.ರಾಜಶೇಖರ್ ರೆಡ್ಡಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ (England) ವಿರುದ್ಧದ 2ನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಆರಂಭಿಸಿದ ಜೈಸ್ವಾಲ್ 209 ರನ್ ಗಳಿಸಿ ಔಟಾದರು. ಮೊದಲ ದಿನದಾಟದಲ್ಲಿ 179 ರನ್ ಗಳಿಸಿದ ಜೈಸ್ವಾಲ್ 2ನೇ ದಿನದಾಟದಲ್ಲಿ 290 ಎಸೆತಗಳಲ್ಲಿ 209 ರನ್ ಬಾರಿಸಿ ಮಿಂಚಿದ್ದಾರೆ. ಇದನ್ನೂ ಓದಿ: ಆಂಗ್ಲರ ವಿರುದ್ಧ ಯಶಸ್ವಿ ಜೈಸ್ವಾಲ್ ಬೊಂಬಾಟ್ ಶತಕ – ಬೃಹತ್ ಮೊತ್ತದತ್ತ ಭಾರತ
ವಿಶೇಷ ಸಾಧನೆ ಮಾಡಿದ ಕಿರಿಯ ಆಟಗಾರ:
ಆಂಗ್ಲರ ವಿರುದ್ಧ ಬ್ಯಾಟಿಂಗ್ ಪ್ರಾಬಲ್ಯ ಮೆರೆದ ಯಶಸ್ವಿ ಜೈಸ್ವಾಲ್ ಟೆಸ್ಟ್ ಕ್ರಿಕೆಟ್‌ನಲ್ಲಿ (Test Cricket) ದ್ವಿಶತಕ ಸಿಡಿಸಿದ 3ನೇ ಕಿರಿಯ ಭಾರತೀಯ ಕ್ರಿಕೆಟಿಗ ಎಂಬ ವಿಶೇಷ ಸಾಧನೆಗೆ ಪಾತ್ರರಾಗಿದ್ದಾರೆ. 1993ರಲ್ಲಿ ವಾಂಖೆಡೆ ಮೈದಾನದಲ್ಲಿ ವಿನೋಂದ್ ಕಾಂಬ್ಳಿ (21 ವರ್ಷ, 32 ದಿನಗಳು), ನಂತರ ಸುನೀಲ್ ಗವಾಸ್ಕರ್ 21 ವರ್ಷ 277 ದಿನಗಳಿದ್ದಾಗ ಈ ಸಾಧನೆ ಮಾಡಿದ್ದರು. ಆದ್ರೆ ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲೇ ದ್ವಿಶತಕ ಬಾರಿಸಿದ ಸಾಧನೆ ಜಾವೇದ್ ಮಿಯಾಂದಾದ್ ಹೆಸರಿನಲ್ಲಿದೆ. ಜಾವೇದ್ 19 ವರ್ಷ, 140 ದಿನಗಳ ವಯಸ್ಸಿನಲ್ಲಿ ತಮ್ಮ ಸಾಧನೆ ಮಾಡಿದ್ದರು. ಇದನ್ನೂ ಓದಿ: ಮೊದಲ ದಿನವೇ ʻಯಶಸ್ವಿʼ ಶತಕದ ಹೋರಾಟ – ಭರ್ಜರಿ ಮೊತ್ತದತ್ತ ಭಾರತ
ದಿಗ್ಗಜರ ಎಲೈಟ್ ಪಟ್ಟಿಗೆ ಜೈಸ್ವಾಲ್:
ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿರುವ ಜೈಸ್ವಾಲ್ ಮೊದಲ ದಿನದ ಆಟದಲ್ಲೇ ಅತಿಹೆಚ್ಚು ರನ್‌ಗಳಿಸಿದ ದಿಗ್ಗಜರ ಎಲೈಟ್ ಪಟ್ಟಿ ಸಹ ಸೇರಿದ್ದಾರೆ.
* 228 ವಿರೇಂದ್ರ ಸೆಹ್ವಾಗ್ ವಿರುದ್ಧ ಪಾಕ್ ಮುಲ್ತಾನ್ – 2004
* 195 ವಿರೇಂದ್ರ ಸೆಹ್ವಾಗ್ ವಿರುದ್ಧ ಆಸ್ ಮೆಲ್ಬೋರ್ನ್ – 2003
* 192 ವಾಸಿಂ ಜಾಫರ್ ವಿರುದ್ಧ ಪಾಕ್ ಕೋಲ್ಕತ್ತಾ – 2007
* 190 ಶಿಖರ್ ಧವನ್ ವಿರುದ್ಧ ಎಸ್ಎಲ್ ಗಾಲೆ – 2017
* 180 ವೀರೇಂದ್ರ ಸೆಹ್ವಾಗ್ vs WI ಗ್ರೋಸ್ ಐಲೆಟ್ – 2006
* 179 ಯಶಸ್ವಿ ಜೈಸ್ವಾಲ್ ವಿರುದ್ಧ ಇಂಗ್ಲೆಂಡ್ ವೈಜಾಗ್ – 2024