Tag: beluru

  • ಹಾಸನಾಂಬೆ ದರ್ಶನಕ್ಕೆ ಹೊರಟಿದ್ದ ದಂಪತಿಯ ಕಾರು ಕೆರೆಗೆ ಪಲ್ಟಿ – ಪತ್ನಿ ಸಾವು

    ಹಾಸನಾಂಬೆ ದರ್ಶನಕ್ಕೆ ಹೊರಟಿದ್ದ ದಂಪತಿಯ ಕಾರು ಕೆರೆಗೆ ಪಲ್ಟಿ – ಪತ್ನಿ ಸಾವು

    ಚಿಕ್ಕಮಗಳೂರು: ಹಾಸನಾಂಬೆ ದೇವಿ (Hasanamba Devi) ದರ್ಶನಕ್ಕೆ ಹೊರಟ್ಟಿದ್ದ ದಂಪತಿಯ ಕಾರು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಪಲ್ಟಿಯಾಗಿ ಪತ್ನಿ ಸಾವನ್ನಪ್ಪಿರುವ ಘಟನೆ ಹಾಸನ (Hassan) ಜಿಲ್ಲೆಯ ಬೇಲೂರು ತಾಲೂಕಿನ ಕಲ್ಕೆರೆ ಗ್ರಾಮದಲ್ಲಿ ನಡೆದಿದೆ.

    ಮೃತ ಮಹಿಳೆಯನ್ನು ಚಿಕ್ಕಮಗಳೂರು (Chikkamagaluru) ತಾಲೂಕಿನ ಗವನಹಳ್ಳಿ ಗ್ರಾಮದ ನಿವಾಸಿ ವನಿತಾ (38) ಗುರುತಿಸಲಾಗಿದೆ. ಪತ್ನಿ ವನಿತಾ ಅಪಘಾತದಲ್ಲಿ ಸಾವನ್ನಪ್ಪಿದ್ದು, ಪತಿ ಮಂಜು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಇದನ್ನೂ ಓದಿ: 5 ತಿಂಗಳ ಬಳಿಕ ಜೈಲಿಂದ ದರ್ಶನ್ ರಿಲೀಸ್ – ಹೈಕೋರ್ಟ್‌ನಿಂದ ಜಾಮೀನು ಮಂಜೂರು

    ಇಂದು (ಅ.30) ಬೆಳಗಿನ ಜಾವ ನಾಲ್ಕು ಗಂಟೆಗೆ ಚಿಕ್ಕಮಗಳೂರಿನಿಂದ ಹಾಸನದ ಹಾಸನಾಂಬೆ ದೇವಿ ದರ್ಶನಕ್ಕೆ ಹೊರಟಿದ್ದ ಮಂಜು-ವನಿತಾ ದಂಪತಿಯ ಕಾರು ಬೇಲೂರು ತಾಲೂಕಿನ ಕಲ್ಕೆರೆ ಗ್ರಾಮದ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಪಲ್ಟಿಯಾಗಿದೆ.

    ಕೂಡಲೇ ಗ್ರಾಮಸ್ಥರು ಇಬ್ಬರನ್ನು ಬದುಕಿಸಲು ಹರಸಾಹಸಪಟ್ಟಿದ್ದಾರೆ. ಬೆಳಗಿನ ಜಾವದ ಕತ್ತಲಲ್ಲು ಕೂಡ ಕಲ್ಕೆರೆ ಗ್ರಾಮಸ್ಥರು ಕೆರೆಗೆ ಇಳಿದು ಕಾರಿಗೆ ಹಗ್ಗ ಕಟ್ಟಿ ಎಳೆದಿದ್ದಾರೆ. ಕಾರಿನ ಚಾಲಕ ಮಂಜು ಪ್ರಾಣಾಪಾಯದಿಂದ ಪಾರಾಗಿದ್ದು, ಮಂಜು ಪತ್ನಿ ವನಿತಾ ಸಾವನ್ನಪ್ಪಿದ್ದಾರೆ. ಕಾರಿನಿಂದ ಮಹಿಳೆಯನ್ನು ಹೊರತಂತ ಗ್ರಾಮಸ್ಥರು ಅವರನ್ನ ಬದುಕಿಸಲು ತೀವ್ರ ಹರಸಾಹಸಪಟ್ಟಿದ್ದಾರೆ. ಎದೆ ಬಡಿದು, ಬಾಯಿಗೆ ಉಸಿರು ನೀಡಿ, ಕೈಕಾಲು ಉಜ್ಜಿ ಜೀವ ಉಳಿಸಲು ಪ್ರಯತ್ನಿಸಿದ್ದಾರೆ. ಆದರೆ, ಕಾರು ಕೆರೆಯಲ್ಲಿ ಮುಳುಗಿ ನೀರು ಕುಡಿದಿದ್ದ ವನಿತಾ ಉಸಿರುಗಟ್ಡಿ ಸಾವನ್ನಪ್ಪಿದ್ದಾರೆ.

    ಬೇಲೂರು (Beluru) ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: Hyderabad | ಮಗನ ಮೃತದೇಹದೊಂದಿಗೆ ನಾಲ್ಕು ದಿನ ಕಳೆದ ಅಂಧ ದಂಪತಿ

  • Hassan | ಲಾಡ್ಜ್‌ನಲ್ಲಿ ನೇಣಿಗೆ ಶರಣಾದ ಸರ್ಕಾರಿ ಶಾಲೆ ಶಿಕ್ಷಕ – ಕಾರಣ ನಿಗೂಢ

    Hassan | ಲಾಡ್ಜ್‌ನಲ್ಲಿ ನೇಣಿಗೆ ಶರಣಾದ ಸರ್ಕಾರಿ ಶಾಲೆ ಶಿಕ್ಷಕ – ಕಾರಣ ನಿಗೂಢ

    ಹಾಸನ: ನಗರದ (Hassan) ಲಾಡ್ಜ್ ಒಂದರಲ್ಲಿ ಸರ್ಕಾರಿ ಶಾಲೆ ಶಿಕ್ಷಕರೊಬ್ಬರು (Teacher) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

    ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ರಂಗಸ್ವಾಮಿ (57) ಎಂದು ಗುರುತಿಸಲಾಗಿದೆ. ಹಾಸನ ನಗರದ ಬಿ.ಎಂ ರಸ್ತೆಯಲ್ಲಿರುವ ಲಾಡ್ಜ್‌ನಲ್ಲಿ ಅವರು ನೇಣಿಗೆ ಶರಣಾಗಿದ್ದಾರೆ. ಶನಿವಾರ ಅವರು ಲಾಡ್ಜ್‌ನಲ್ಲಿ ರೂಮ್ ಪಡೆದು ಉಳಿದುಕೊಂಡಿದ್ದರು. ಇದನ್ನೂ ಓದಿ: HSR ಲೇಔಟ್ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ ಕೇಸ್‌ – 555 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ

    ಬೇಲೂರು (Beluru ) ತಾಲೂಕಿನ ತೊಳಲು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಅವರು ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ನಿವೃತ್ತಿಯಾಗಲು ಕೇವಲ ಮೂರು ವರ್ಷಗಳು ಮಾತ್ರ ಬಾಕಿ ಇತ್ತು. ರಂಗಸ್ವಾಮಿಯವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

    ಕೆ.ಆರ್.ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಬೀದರ್‌ ಪೊಲೀಸರ ಭರ್ಜರಿ ಕಾರ್ಯಾಚರಣೆ – 2 ಕೋಟಿಗೂ ಅಧಿಕ ಮೌಲ್ಯದ ಗಾಂಜಾ ಸೀಜ್‌

  • ಕೆರೆ ಕೋಡಿ ಕೆಲಸ ಮಾಡುವಾಗ ಮಣ್ಣು ಕುಸಿತ- ಮಣ್ಣಿನಡಿ ಸಿಲುಕಿ ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ

    ಕೆರೆ ಕೋಡಿ ಕೆಲಸ ಮಾಡುವಾಗ ಮಣ್ಣು ಕುಸಿತ- ಮಣ್ಣಿನಡಿ ಸಿಲುಕಿ ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ

    ಹಾಸನ: ಕೆರೆ ಕೋಡಿ ಕೆಲಸ ಮಾಡುವಾಗ ಮಣ್ಣು ಕುಸಿದಿದ್ದು, ಮಣ್ಣಿನಡಿ ಸಿಲುಕಿ ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾಸನ (Hasan) ಜಿಲ್ಲೆ ಬೇಲೂರು (Beluru) ತಾಲ್ಲೂಕಿನ ಹನಿಕೆ ಗ್ರಾಮದ ಬಳಿ ನಡೆದಿದೆ.

    ಹೊಳೆನರಸೀಪುರದ ದರ್ಶನ್‌ಕುಮಾರ್ (29) ಮೃತ ದುರ್ದೈವಿ. ವಸಂತ್‌ಕುಮಾರ್ ಹಾಗೂ ಲೋಕಪ್ಪ ಗಾಯಾಳುಗಳು. ಇದನ್ನೂ ಓದಿ: ತಿರುಪತಿ ಲಡ್ಡು ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಬಳಕೆ ವಿವಾದ – ಇಂದಿನಿಂದ ಟಿಟಿಡಿ ದೇವಾಲಯ ಪವಿತ್ರೋತ್ಸವ

    ಹಾಸನದ ಪ್ರಕಾಶ್ ಎಂಬುವವರು ಕೆರೆ ಕೋಡಿ ದುರಸ್ತಿ ಗುತ್ತಿಗೆ ಪಡೆದಿದ್ದು, ದರ್ಶನ್‌ಕುಮಾರ್, ವಸಂತ್‌ಕುಮಾರ್ ಹಾಗೂ ಲೋಕಪ್ಪ ಹನಿಕೆ ಗ್ರಾಮದ ಕೆರೆ ಕೋಡಿ ಕೆಲಸ ಮಾಡುತ್ತಿದ್ದ ವೇಳೆ ದಿಢೀರ್ ಮಣ್ಣು ಕುಸಿದಿದೆ. ದರ್ಶನ್‌ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಲೋಕಪ್ಪ ಹಾಗೂ ವಸಂತ್‌ಕುಮಾರ್ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಮಹಿಷ ದಸರಾದಿಂದ ಮೈಸೂರು ಹೆಸರೇ ಚೇಂಜ್ – ಮೈಸೂರು ಅಲ್ಲ, ‘ಮಹಿಷೂರು’ ಅಂತಾ ಬದಲಾವಣೆ

    ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ರಾಜ್ಯದ 2 ಕಡೆಗಳಲ್ಲಿ ತುಪ್ಪ ಸೇಫ್ ಅಲ್ಲ – ಆಹಾರ ಸುರಕ್ಷತಾ ಇಲಾಖೆ ಎಚ್ಚರಿಕೆ

  • ಬೆಳ್ಳಂಬೆಳಿಗ್ಗೆ ಗ್ರಾಮದೊಳಗೆ ದೈತ್ಯಾಕಾರದ ಒಂಟಿಸಲಗ: ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ

    ಬೆಳ್ಳಂಬೆಳಿಗ್ಗೆ ಗ್ರಾಮದೊಳಗೆ ದೈತ್ಯಾಕಾರದ ಒಂಟಿಸಲಗ: ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ

    ಹಾಸನ: ಬೆಳ್ಳಂಬೆಳಿಗ್ಗೆ ಗ್ರಾಮದೊಳಗೆ ದೈತ್ಯಾಕಾರದ ಒಂಟಿಸಲಗ ಓಡಾಡಿದರೆ, ಇನ್ನೊಂದು ಕಡೆ ಗ್ರಾಮದೊಳಗೆಲ್ಲಾ ಕಾಡಾನೆಗಳ ಹಿಂಡು ಓಡಾಡುತ್ತಿರುವ ಘಟನೆ ಜಿಲ್ಲೆಯ ಬೇಲೂರು (Beluru) ತಾಲ್ಲೂಕಿನ ಬಿಕ್ಕೋಡು (Bikkodu) ಗ್ರಾಮದಲ್ಲಿ ನಡೆದಿದೆ.ಇದನ್ನೂ ಓದಿ: ಲೈಂಗಿಕ ಕಿರುಕುಳ: ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ವಿರುದ್ಧ ಕೇಸ್

    ಬೇಲೂರು ತಾಲೂಕಿನಲ್ಲಿ ಬೀಟಮ್ಮ ಗ್ಯಾಂಗ್ (Beetamma And Gang) ಹಾವಳಿ ಹೆಚ್ಚಾಗಿದ್ದು, ಬೆಳಿಗ್ಗೆ, ಸಂಜೆಯಾದರೆ ಸಾಕು ಗಜಪಡೆ ಗ್ರಾಮದೊಳಗೆ ಬರುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕಾಡಾನೆಗಳ ಕಾಟದಿಂದ ರೈತರು ಕಂಗಾಲಾಗಿದ್ದಾರೆ. ಇದರಿಂದ ಜಮೀನು, ಕಾಫಿ ತೋಟಕ್ಕೆ ತೆರಳಲು ರೈತರು ಹಾಗೂ ಕಾಫಿ ಬೆಳೆಗಾರರು ಭಯಪಡುತ್ತಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ.

    ಸುಮಾರು ಇಪ್ಪತ್ತಕ್ಕೂ ಹೆಚ್ಚಿರುವ ಕಾಡಾನೆಗಳ ಹಿಂಡು ಗ್ರಾಮಕ್ಕೆ ಬರುತ್ತಿರುವುದು ಅಪಾಯ ಉಂಟು ಮಾಡುತ್ತಿದ್ದು, ಭತ್ತ, ಅಡಿಕೆ, ಬಾಳೆ, ಕಾಫಿ ಬೆಳೆಗಳನ್ನು ನಾಶಪಡಿಸಿವೆ. ಅರಣ್ಯ ಇಲಾಖೆಯ (Forest Dapertment) ಇಟಿಎಫ್ (Elephant Task Force) ಸಿಬ್ಬಂದಿಗಳು ಸ್ಥಳಕ್ಕೆ ಮೊಕ್ಕಾಂ ಹೂಡಿದ್ದಾರೆ. ಮೈಕ್ ಮೂಲಕ ಪ್ರಕಟಣೆ ನೀಡುತ್ತಾ ಗ್ರಾಮಸ್ಥರು ಎಚ್ಚರಿಕೆಯಿಂದ ಓಡಾಡುವಂತೆ ಸೂಚನೆ ನೀಡುತ್ತಿದ್ದಾರೆ.ಇದನ್ನೂ ಓದಿ: ಹೇಮಾ ಸಮಿತಿ ರೀತಿ ಕನ್ನಡ ಚಿತ್ರರಂಗಕ್ಕೆ ಕಮಿಟಿ ಬೇಡ- ‘ಫೈರ್’ ಸಂಸ್ಥೆ ವಿರುದ್ಧ ಭಾವನಾ ಗರಂ

     

  • ಹಾಸನದಲ್ಲಿ ಮುಂದುವರಿದ ಆನೆಗಳ ಹಾವಳಿ – ಅಪಾರ ಪ್ರಮಾಣದ ಬೆಳೆ ನಾಶ

    ಹಾಸನದಲ್ಲಿ ಮುಂದುವರಿದ ಆನೆಗಳ ಹಾವಳಿ – ಅಪಾರ ಪ್ರಮಾಣದ ಬೆಳೆ ನಾಶ

    ಹಾಸನ: ಜಿಲ್ಲೆಯಲ್ಲಿ ಆನೆಗಳ (Elephant) ಹಾವಳಿ ಮುಂದುವರಿದಿದ್ದು, ಬೇಲೂರಿನ (Beluru) ಮಲಸಾವರ ಗ್ರಾಮದಲ್ಲಿ ರೈತರು ಬೆಳೆದ ಅಪಾರ ಪ್ರಮಾಣದ ಬೆಳೆಯನ್ನು ನಾಶಮಾಡಿವೆ. ಗಜಪಡೆ ಬೆಳೆಗಳ ಮೇಲೆ ದಾಳಿ ಮಾಡುವುದನ್ನು ರೈತರು ಮೊಬೈಲ್‍ನಲ್ಲಿ ವೀಡಿಯೋ ಮಾಡಿ ಅರಣ್ಯಾಧಿಕಾರಿಗಳ ಮುಂದಿಟ್ಟು ಅಳಲು ತೋಡಿಕೊಂಡಿದ್ದಾರೆ.

    20ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದು, ಕಾಫಿ, ಮೆಣಸು, ಏಲಕ್ಕಿ, ಅಡಕೆ ಗಿಡಗಳು ಹಾಗೂ ನಾಟಿ ಮಾಡಿದ್ದ ಭತ್ತದ ಗದ್ದೆಯನ್ನು ತುಳಿದು ಸಂಪೂರ್ಣವಾಗಿ ನಾಶ ಮಾಡಿವೆ. ಗ್ರಾಮದ ತೀರ್ಥಕುಮಾರ್, ಕಲ್ಲೇಶ್, ವಿಜಯ್, ಮಲ್ಲೇಶ್ ಹಾಗೂ ಇನ್ನಿತರ ರೈತರಿಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಈ ದೃಶ್ಯವನ್ನು ರೈತರೊಬ್ಬರು ಎತ್ತರದ ಮರದ ಮೇಲೆ ಕುಳಿತು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಇದನ್ನೂ ಓದಿ: ಕರುನಾಡ ಮಂದಿಗೆ ಮತ್ತೊಂದು ಶಾಕ್- ಬೇಳೆ, ತರಕಾರಿ ಬಳಿಕ ಅಕ್ಕಿ ಬೆಲೆಯೂ ದುಬಾರಿ

    ಲಕ್ಷಾಂತರ ರೂ. ಮೌಲ್ಯದ ಬೆಳೆ ಹಾನಿಯಿಂದ ರೈತರು ಕಂಗಾಲಾಗಿದ್ದಾರೆ. ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ. ಕಾಡಾನೆಗಳು ಹಿಂಡಿನ ದಾಳಿಯಿಂದ ಆತಂಕಗೊಂಡಿರುವ ಸ್ಥಳೀಯರು ಜೀವ ಭಯದಿಂದ ತೋಟ, ಹೊಲ, ಗದ್ದೆಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು (Forest Department) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: KRSನಿಂದ ತಮಿಳುನಾಡಿಗೆ ಗುರುವಾರವೂ ಭಾರೀ ಪ್ರಮಾಣದ ನೀರು – ಇಂದು ರೈತಸಂಘ ಪ್ರತಿಭಟನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಸ್‍ನಲ್ಲಿ ಪ್ರಯಾಣಿಸುತ್ತಿದ್ದವನಿಗೆ ಬಡಿದ ಮರದ ಕೊಂಬೆ- ವ್ಯಕ್ತಿ ದಾರುಣ ಸಾವು

    ಬಸ್‍ನಲ್ಲಿ ಪ್ರಯಾಣಿಸುತ್ತಿದ್ದವನಿಗೆ ಬಡಿದ ಮರದ ಕೊಂಬೆ- ವ್ಯಕ್ತಿ ದಾರುಣ ಸಾವು

    ಹಾಸನ: ಬಸ್‍ನಲ್ಲಿ (Bus) ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬನಿಗೆ ಮರದ ಕೊಂಬೆ ಬಡಿದು ಮೃತಪಟ್ಟ ಘಟನೆ ಬೇಲೂರಿನ  (Beluru) ನಿಡಗೋಡು ಗ್ರಾಮದ ಬಳಿ ನಡೆದಿದೆ.

    ಬೇಲೂರಿನಿಂದ – ಮಂಗಳೂರು (Mangaluru) ಕಡೆಗೆ ಕೆಎ-45 ಎಫ್-0033 ನಂಬರ್‌ನ ಸಾರಿಗೆ ಬಸ್ ತೆರಳುತ್ತಿತ್ತು. ಈ ವೇಳೆ ಎದುರಿನಿಂದ ಬಂದ ಟಿಪ್ಪರ್‌ಗೆ ದಾರಿ ಬಿಡುವಾಗ ಈ ದುರ್ಘಟನೆ ಸಂಭವಿಸಿದೆ. ಮೃತನ ಗುರುತು ಪತ್ತೆಯಾಗಿಲ್ಲ. ವ್ಯಕ್ತಿಯ ಮೃತದೇಹವನ್ನು ಬೇಲೂರಿನ ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಇದನ್ನೂ ಓದಿ: ಬೆಂಗಳೂರು-ತುಮಕೂರು ಫ್ಲೈಓವರ್ ಭಾರೀ ವಾಹನಗಳಿಗೆ ಮುಕ್ತನಾ..?

    ಗ್ರಾಮದ ರಸ್ತೆ ಬದಿಯಲ್ಲಿಯೇ ಬೃಹತ್ ಗಾತ್ರದ ಹಲವಾರು ಮರಗಳಿವೆ. ಈ ರೀತಿಯಲ್ಲಿಯೇ ಮೂರ್ನಾಲ್ಕು ಸಾವುಗಳು ಸಂಭವಿಸಿವೆ. ಮರಗಳನ್ನು ತೆರವುಗೊಳಿಸುವಂತೆ ಮನವಿ ಮಾಡಿದ್ದರು ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಮರಗಳನ್ನು ತೆರವುಗೊಳಿಸಬೇಕು ಇಲ್ಲವಾದಲ್ಲಿ ರಸ್ತೆ ಬಂದ್ ಮಾಡಿ ಮರ ತೆರವು ಮಾಡುವುದಾಗಿ ಸ್ಥಳೀಯರ ಎಚ್ಚರಿಕೆ ನೀಡಿದ್ದಾರೆ.

    ಸ್ಥಳಕ್ಕೆ ಬೇಲೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ರಕ್ಷಣೆ- ಟ್ರಾಫಿಕ್ ಕಾನ್ಸ್‌ಸ್ಟೇಬಲ್ ಕಾರ್ಯಕ್ಕೆ ಮೆಚ್ಚುಗೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೊಯ್ಸಳರ ನಾಡಲ್ಲಿ ತ್ರಿಕೋನ ಸ್ಪರ್ಧೆ – ಯಾರಾಗ್ತಾರೆ ಸಾಮ್ರಾಟ?

    ಹೊಯ್ಸಳರ ನಾಡಲ್ಲಿ ತ್ರಿಕೋನ ಸ್ಪರ್ಧೆ – ಯಾರಾಗ್ತಾರೆ ಸಾಮ್ರಾಟ?

    ಹಾಸನ: ಬೇಲೂರು ಹಾಸನ ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣವಾಗಿದೆ. ಯಗಚಿ ನದಿಯ ದಂಡೆಯಲ್ಲಿರುವ ಬೇಲೂರು ಚನ್ನಕೇಶವ ದೇವಾಲಯಕ್ಕೆ ಪ್ರಸಿದ್ಧಿ. ಹೊಯ್ಸಳರ ಕಾಲದ ಈ ದೇವಾಲಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ತನ್ನದೇ ಆದ ಇತಿಹಾಸ ಹೊಂದಿರುವ ಬೇಲೂರು ಈಗ ರಾಜಕೀಯವಾಗಿ ಸುದ್ದಿಯಲ್ಲಿದೆ. 2023ರ ಚುನಾವಣೆಗೆ ಬೇಲೂರು ಕ್ಷೇತ್ರ ಸಜ್ಜಾಗಿದೆ. ಮೂರು ಪ್ರಮುಖ ರಾಜಕೀಯ ಪಕ್ಷಗಳ ಹುರಿಯಾಳುಗಳು ಅಖಾಡಕ್ಕೆ ಇಳಿದಿದ್ದಾರೆ.

    ಈ ಕ್ಷೇತ್ರದಲ್ಲಿ 8 ಬಾರಿ ಕಾಂಗ್ರೆಸ್, ತಲಾ ಮೂರು ಬಾರಿ ಜನತಾ ಪಕ್ಷ ಮತ್ತು ಜೆಡಿಎಸ್, ಒಮ್ಮೊಮ್ಮೆ ಬಿಜೆಪಿ ಮತ್ತು ಸ್ವತಂತ್ರರು ಗೆದ್ದಿದ್ದಾರೆ. ಇದನ್ನೂ ಓದಿ: ‘ಹೊಳೆ’ಯನ್ನು ಈಜಿ ‘ನರಸೀಪುರ’ ದಡ ಸೇರುವವರ‍್ಯಾರು?

    ಕಣದಲ್ಲಿರುವ ಪೈಲ್ವಾನರು
    ಕೆ.ಎಸ್.ಲಿಂಗೇಶ್ (ಜೆಡಿಎಸ್)
    ಬಿ.ಶಿವರಾಂ (ಕಾಂಗ್ರೆಸ್)
    ಹುಲ್ಲಹಳ್ಳಿ ಸುರೇಶ್ (ಬಿಜೆಪಿ)

    ಅಭ್ಯರ್ಥಿಗಳ ಪ್ಲಸ್‌, ಮೈನಸ್‌
    ಕೆ.ಎಸ್.ಲಿಂಗೇಶ್: ವೀರಶೈವ ಸಮುದಾಯದ ಪ್ರತಿನಿಧಿ. ಕಳೆದ ಬಾರಿ ಮೊದಲ ಬಾರಿಗೆ ಶಾಸಕರಾಗಿ ಪರವಾಗಿಲ್ಲ ಎಂಬಂತೆ ಕೆಲಸ ಮಾಡಿರುವುದು. ಬಂಡಾಯ ಇಲ್ಲದೇ ಇರುವುದು. ರಣಘಟ್ಟ ಯೋಜನೆ ಕಾರ್ಯಗತ ಮಾಡಿದ್ದು ಇವರಿಗೆ ಚುನಾವಣೆಯಲ್ಲಿ ಮತ ಸೆಳೆಯಲು ಪ್ಲಸ್‌ ಪಾಯಿಂಟ್‌ ಆಗಿದೆ. ಇನ್ನು ಮೈನಸ್‌ ಅಂಶವೆಂದರೆ, ರಬ್ಬರ್ ಸ್ಟಾಂಪ್ ರೀತಿ ಕೆಲಸ ಮಾಡುತ್ತಾರೆ. ವೈಯಕ್ತಿಕ ನಿರ್ಧಾರ ತೆಗೆದುಕೊಳ್ಳಲ್ಲ ಎಂಬುದಾಗಿದೆ.

    ಬಿ.ಶಿವರಾಂ: ಹಿರಿಯ ರಾಜಕಾರಣಿ, ಮಾಜಿ ಸಚಿವರು, ಪಕ್ಷದ ಹಿನ್ನೆಲೆ ಇವರಿಗೆ ವರದಾನವಾಗಲಿದೆ. ನಕಾರಾತ್ಮಕ ಅಂಶಗಳೆಂದರೆ, ಹೊರಗಿನವರು ಎಂಬ ದೂರು. ಎಲ್ಲರಿಗೂ ಸ್ಪಂದಿಸಲ್ಲ, ಎಲ್ಲರೊಂದಿಗೂ ಬೆರೆಯಲ್ಲ ಎಂಬ ಆರೋಪವಿದೆ. ಅಲ್ಲದೇ ಎಲ್ಲಕ್ಕಿಂತ ಮುಖ್ಯವಾಗಿ ಕ್ಷೇತ್ರದಲ್ಲಿ ಇವರ ವಿರುದ್ಧವಾಗಿ ಬಂಡಾಯ ಪ್ರಬಲ ಆಗಿದೆ. ಇದನ್ನೂ ಓದಿ: ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿಯಿಲ್ಲ – ಯಾರ ಪಾಲಾಗಲಿದೆ ಅರಕಲಗೂಡು ಕ್ಷೇತ್ರ?

    ಹುಲ್ಲಹಳ್ಳಿ ಸುರೇಶ್: ಕಳೆದ ಬಾರಿಯ ಸೋಲಿನ ಅನುಕಂಪ, ಕೊರೊನಾ ಇತ್ಯಾದಿ ಸಂದರ್ಭದಲ್ಲಿ ಸಹಾಯ ಮಾಡಿರುವುದು ಇವರಿಗೆ ಪ್ಲಸ್‌ ಪಾಯಿಂಟ್‌ ಆಗಿದೆ. ಮೈನಸ್‌ ಅಂಶವೆಂದರೆ, ಬಂಡಾಯದ ಬೇಗುದಿ. ಹೊರಗಿನವರು ಎಂಬ ಕೂಗಿದೆ. ಈ ಕ್ಷೇತ್ರದಲ್ಲಿ ಹೊರಗಿನವರು ಮತ್ತು ಒಳಗಿನವರು ಎಂಬ ವಿಷಯ ಮತ್ತು ಅಭಿವೃದ್ಧಿ ವಿಚಾರವೇ ಮುಖ್ಯವಾಗಲಿದೆ.

    ಜಾತಿ ಲೆಕ್ಕಾಚಾರ ಏನು?
    ಕ್ಷೇತ್ರದಲ್ಲಿ ಮೊದಲ ಸ್ಥಾನದಲ್ಲಿ ಲಿಂಗಾಯತ ಸಮುದಾಯದ 54,000 ಮತದಾರರಿದ್ದಾರೆ. ಎರಡನೇ ಸ್ಥಾನದಲ್ಲಿ ಎಸ್‌ಸಿ 28,000, ಎಸ್ಟಿ 17,000 ಸಾವಿರ ಸೇರಿ ಪರಿಶಿಷ್ಟ ಜಾತಿ/ಪಂಗಡದ 45 ಸಾವಿರ ಮತದಾರರಿದ್ದಾರೆ. ನಂತರದ ಸ್ಥಾನದಲ್ಲಿ 30 ಸಾವಿರ ಒಕ್ಕಲಿಗ ಮತದಾರರಿದ್ದಾರೆ. ಉಳಿದಂತೆ ಕುರುಬ 15,000, ಮುಸ್ಲಿಮರ ಮತ 10,000 ಇದೆ. ಒಟ್ಟು 1,79,330 ಮತದಾರರಿರುವ ಕ್ಷೇತ್ರದಲ್ಲಿ 91,236 ಮಂದಿ ಪುರುಷ, 88,094 ಮಂದಿ ಮಹಿಳಾ ಮತದಾರರಿದ್ದಾರೆ.

  • ಬೇಲೂರಿನ ರಥೋತ್ಸವದ ವೇಳೆ ಕುರಾನ್ ಪಠಣ ಮಾಡಬೇಕೆಂದು ಎಲ್ಲೂ ಇಲ್ಲ: ರಾಜ್ಯ ಪುರಾತತ್ವ ಇಲಾಖೆ

    ಬೇಲೂರಿನ ರಥೋತ್ಸವದ ವೇಳೆ ಕುರಾನ್ ಪಠಣ ಮಾಡಬೇಕೆಂದು ಎಲ್ಲೂ ಇಲ್ಲ: ರಾಜ್ಯ ಪುರಾತತ್ವ ಇಲಾಖೆ

    ಹಾಸನ: ಕುರಾನ್  (Quran) ಪಠಣ ಮಾಡಬೇಕು ಎಂದು ಎಲ್ಲಿಯೂ ಇಲ್ಲ. ಇದನ್ನ ನಾನು ವರದಿಯಲ್ಲಿ ಕೊಡುತ್ತೇನೆ. ಕೈಪಿಡಿಯಲ್ಲಿ ಏನು ಹೇಳಿದೆ ಯಾರು ಏನೇನು ಮಾಡುತ್ತಿದ್ದಾರೆ, ಏನು ತಪ್ಪು ಆಗಿದೆ ಎನ್ನುವ ಬಗ್ಗೆ ಪರಿಶೀಲನೆ ಮಾಡಲಾಗಿದೆ. ಇನ್ನು 2-3 ದಿನದಲ್ಲಿ ನಮ್ಮ ವರದಿಯನ್ನು ನೀಡುತ್ತೇವೆ ಎಂದು ಪುರಾತತ್ವ ಇಲಾಖೆಯ (Archaeology Department) ಹಿರಿಯ ಆಗಮ ಪಂಡಿತ್‌ ಜಿ.ಎ.ವಿಜಯ್ ಕುಮಾರ್ ಹೇಳಿದರು.

    ಜಿಲ್ಲೆಯ ಬೇಲೂರಿನ (Beluru) ಐತಿಹಾಸಿಕ ಚನ್ನಕೇಶವಸ್ವಾಮಿ ರಥೋತ್ಸವದ ವೇಳೆ ಕುರಾನ್ ಪಠಣ ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ ರಾಜ್ಯ ಪುರಾತತ್ವ ಇಲಾಖೆಯ ಹಿರಿಯ ಆಗಮ ಪಂಡಿತರ ತಂಡ ದೇವಾಲಯಕ್ಕೆ (Temple) ಭೇಟಿ ನೀಡಿ ಮಾಹಿತಿ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಥೋತ್ಸವದ ದಿನ ಯಾರ‍್ಯಾರು, ಯಾವ ಕರ್ತವ್ಯ ನಿರ್ವಹಿಸಬೇಕು ಏನೇನು ವ್ಯತ್ಯಾಸ ಆಗಿದೆ. ಜನರಲ್ಲಿ ಏನು ಗೊಂದಲ ಆಗಿದೆ? ಅವುಗಳ ಪರಿಶೀಲನೆಗೆ ಮೇಲಧಿಕಾರಿಗಳು ಸೂಚನೆ ನೀಡಿದ್ದಾರೆ. ಹಾಗಾಗಿ ಗುರುವಾರ ಭೇಟಿ ನೀಡಲಾಗಿದೆ. ದೇವಾಲಯದಲ್ಲಿ ಯಾರು, ಯಾವ ಸಂದರ್ಭದಲ್ಲಿ ಯಾವ ಕರ್ತವ್ಯ ಹೇಗೆ ಮಾಡಬೇಕು ಎಂದು ಕೈಪಿಡಿಯಲ್ಲಿದೆ. ಇದು ಮೈಸೂರು ಮಹಾರಾಜರ ಸಂಸ್ಥಾನದಿಂದ ಬಿಡುಗಡೆ ಆಗಿದೆ‌. ಅದರಂತೆ ಎಲ್ಲಾ ವಿಧಿವಿಧಾನ, ಪೂಜಾ, ಕೈಂಕರ್ಯ, ಕರ್ತವ್ಯ ನಡೆಯುತ್ತಿದೆ ಎಂದರು.

    ಸ್ವಲ್ಪ ವ್ಯತ್ಯಾಸ ಉಂಟಾಗಿ ಜನರಲ್ಲಿ ಗೊಂದಲ ಆಗಿದೆ. ಹಾಗಾಗಿ ನಾವು ಬಂದು ಆ ಗ್ರಂಥ ಪರಿಶೀಲನೆ ಮಾಡಿದ್ದೇವೆ. ವ್ಯವಸ್ಥಾಪನಾ ಸಮಿತಿ, ಆಡಳಿತ ಅಧಿಕಾರಿ, ಧಾರ್ಮಿಕ ಪರಿಷತ್ ಸದಸ್ಯರ ಸಮ್ಮುಖದಲ್ಲಿ ಪರಿಶೀಲನೆ ಮಾಡಲಾಗಿದೆ. ಈ ಬಗ್ಗೆ ಇನ್ನೂ ಅನೇಕ ಗ್ರಂಥಗಳನ್ನು ಅಧ್ಯಯನ ಮಾಡಿ ಎಲ್ಲವನ್ನೂ ತಿಳಿದು ನಾನು ಹಿರಿಯ ಅಧಿಕಾರಿಗಳಿಗೆ ವರದಿ ಕೊಡಬೇಕಾಗುತ್ತದೆ. ಕೈಪಿಡಿಯಲ್ಲಿ ಏನಿದೆ ಅದನ್ನ ಮಾಡಬೇಕು, ಆಗಿರುವ ಲೋಪದೋಷ ಸರಿಪಡಿಸಿಕೊಳ್ಳಬೇಕು. ಕೈಪಿಡಿ ಪ್ರಕಾರ ಎಲ್ಲರೂ ಹಿಂದೂ ಧಾರ್ಮಿಕ ದತ್ತಿ ಕಾಯಿದೆ ಸೆಕ್ಷನ್ 58ರ ಪ್ರಕಾರ ದೇವಾಲಯದ ಸಂಪ್ರದಾಯ ನಡೆಸಿಕೊಂಡು ಹೋಗಬೇಕು ಎಂದಿದೆ‌. ಅದರಂತೆ ಸರ್ಕಾರ ಮುಂದಿನ ಕ್ರಮ ವಹಿಸುತ್ತದೆ ಎಂದು ಹೇಳಿದರು.

    ರಥದ ಮುಂದೆ ಕುರಾನ್ ಪಠಣ ಮಾಡಬೇಕು ಎಂದು ಎಲ್ಲಿಯು ಹೇಳಿಲ್ಲ. ನಾನು ಓದಿದ ಪ್ರಕಾರ ರಥದ ಮುಂದೆಯಾಗಲಿ, ದೇವಾಲಯದ ಮುಂದೆಯಾಗಲಿ ಮಾಡಬೇಕು ಎಂದು ಹೇಳಿಲ್ಲ. ಅವರಿಗೆ ಗೌರವ ಸಲ್ಲಿಸಬೇಕು, ಅವರು ನಮಸ್ಕರಿಸಬೇಕು ಎಂದು ಹೇಳಲಾಗಿದೆ. ಈ ಬಗ್ಗೆ ಕೈಪಿಡಿ ಪ್ರತಿಯನ್ನು ಪಡೆಯಲಾಗಿದೆ. ಮುಂದೆ ಏನು ಮಾಡಬೇಕು ಎಂದು ಆಯುಕ್ತರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ರಾಮನವಮಿ ಆಚರಣೆ ವೇಳೆ ದೇವಾಲಯದ ನೆಲ ಕುಸಿತ – 13 ಮಂದಿ ಸಾವು

    ಪ್ರತಿವರ್ಷ ರಥೋತ್ಸವದ ವೇಳೆ ಕುರಾನ್ ಪಠಣ ನಡೆಸಿ ನಂತರ ತೇರನ್ನು ಎಳೆಯುತ್ತಿದ್ದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವರ್ಷದಿಂದ ಕುರಾನ್ ಪಠಣ ಸಂಪ್ರದಾಯ ನಿಲ್ಲಿಸಬೇಕೆಂದು ಹಿಂದೂಪರ ಸಂಘಟನೆಗಳು ಹೋರಾಟ ಮಾಡಿದ್ದವು. ಹಿಂದೂಪರ ಸಂಘಟನೆಗಳ ಹೋರಾಟ ಹಿನ್ನೆಲೆಯಲ್ಲಿ ವಾಸ್ತವಾಂಶ ಅರಿಯಲು ಆಗಮಿಕರ ತಂಡ ಭೇಟಿ ನೀಡಿತ್ತು. ಏಪ್ರಿಲ್ 4 ಮತ್ತು 5ರಂದು ಚನ್ನಕೇಶವ ಸ್ವಾಮಿ ರಥೋತ್ಸವ ನಡೆಯಲಿದೆ. ಇದನ್ನೂ ಓದಿ: ಧಮ್ ಇದ್ರೆ ಡಿಕೆಶಿ ಮೀಸಲಾತಿ ನಿರ್ಧಾರವನ್ನು ವಾಪಸ್ ಪಡೆಯಲಿ – ಯತ್ನಾಳ್ ಸವಾಲ್

  • ಹಿಂದೂ ಸಂಘಟನೆಗಳ ಪ್ರತಿಭಟನೆ ವೇಳೆ ಕುರಾನ್ ಜಿಂದಾಬಾದ್ ಘೋಷಣೆ – ಯುವಕನ ಬಂಧನ

    ಹಿಂದೂ ಸಂಘಟನೆಗಳ ಪ್ರತಿಭಟನೆ ವೇಳೆ ಕುರಾನ್ ಜಿಂದಾಬಾದ್ ಘೋಷಣೆ – ಯುವಕನ ಬಂಧನ

    ಹಾಸನ: ಬೇಲೂರಿನ (Beluru) ಐತಿಹಾಸಿಕ ಶ್ರೀ ಚನ್ನಕೇಶವ ಸ್ವಾಮಿ ರಥೋತ್ಸವದ ವೇಳೆ ಕುರಾನ್ (Quran) ಪಠಣ ವಿರೋಧಿಸಿ ಮಂಗಳವಾರ ಬೇಲೂರಿನಲ್ಲಿ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಪ್ರತಿಭಟನೆ (Protest) ನಡೆಸಿದರು.

    ಪ್ರತಿಭಟನೆ ವೇಳೆ ಮೆರವಣಿಗೆಗೆ ಎದುರಾಗಿ ಮುಸ್ಲಿಂ ಯುವಕನೊಬ್ಬ (Muslim Boy) ಬೈಕ್‌ನಲ್ಲಿ ಬಂದು ಏಕಾಏಕಿ ಕುರಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾನೆ. ಯುವಕ ಘೋಷಣೆ ಕೂಗುತ್ತಿದ್ದಂತೆ ಪ್ರತಿಭಟನಾಕಾರರು ಯುವಕನನ್ನು ಬೆನ್ನಟ್ಟಿಕೊಂಡು ಹೋಗಿದ್ದಾರೆ.

    ತಕ್ಷಣ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ಅನಾಹುತ ತಪ್ಪಿಸಿದ್ದಾರೆ. ಬಂಧಿತ ಯುವಕನನ್ನು ಶಾಕಿಬ್ ಹುಸೇನ್ ಎಂದು ಗುರುತಿಸಲಾಗಿದೆ. ಬೇಲೂರು ಪಟ್ಟಣದ ಮೀನು ಮಾರುಕಟ್ಟೆ ಪ್ರದೇಶದ ನಿವಾಸಿಯಾಗಿರುವ ಶಾಕಿಬ್ ಹುಸೇನ್ ಗುಜರಿ ಅಂಗಡಿ ನಡೆಸುತ್ತಿದ್ದಾನೆ. ಇದನ್ನೂ ಓದಿ: ಮೀಸಲಾತಿ ವಿಚಾರಕ್ಕೆ ಜೈಲಿಗೋದರೂ ಚಿಂತೆಯಿಲ್ಲ ; SDPI ಎಚ್ಚರಿಕೆ

    ಯುವಕನನ್ನು ವಶಕ್ಕೆ ಪಡೆದಿರುವ ಪೊಲೀಸರು ಐಪಿಸಿ ಸೆಕ್ಷನ್ 107ರ ಅಡಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬಂಧನ ಮಾಡಿ ತಹಸೀಲ್ದಾರ್ ಮುಂದೆ ಹಾಜರುಪಡಿಸಿದ್ದಾರೆ. ಏಪ್ರಿಲ್ 4ರ ಬೇಲೂರು ಜಾತ್ರೆಯ ವರೆಗೆ ಯಾವುದೇ ಅನಾಹುತ ಆಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಶಾಕೀಬ್‌ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಕ್ಷಮೆ ಕೇಳದಿದ್ರೆ ಮತ್ತೊಂದು FIR ದಾಖಲಿಸುತ್ತೇನೆ: ರಂಜಿತ್ ಸಾವರ್ಕರ್

  • ಚನ್ನಕೇಶವ ದೇವಾಲಯಕ್ಕೆ ಭೇಟಿ ನೀಡಿದ ರಾಜ್ಯಪಾಲ ಗೆಹ್ಲೋಟ್

    ಚನ್ನಕೇಶವ ದೇವಾಲಯಕ್ಕೆ ಭೇಟಿ ನೀಡಿದ ರಾಜ್ಯಪಾಲ ಗೆಹ್ಲೋಟ್

    ಹಾಸನ: ಜಿಲ್ಲೆಯ ಬೇಲೂರು ತಾಲೂಕಿನ ವಿಶ್ವವಿಖ್ಯಾತ ಚನ್ನಕೇಶವ ದೇವಾಲಯಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ ನೀಡಿದರು.

    ಹಾಸನ ಜಿಲ್ಲೆಯ ಬೇಲೂರಿನಲ್ಲಿರುವ ದೇವಾಲಯಕ್ಕೆ ಭೇಟಿ ನೀಡಿದ ಗೆಹ್ಲೋಟ್ ಅವರನ್ನು ಅಲ್ಲಿನ ಅಧಿಕಾರಿಗಳು ಸ್ವಾಗತಿಸಿದ್ದು, ಶಾಸಕ ಕೆ.ಎಸ್.ಲಿಂಗೇಶ್ ಹಾರ ಹಾಕಿ ಸನ್ಮಾನಿಸಿದ್ದಾರೆ. ಜೊತೆಗೆ ಅಲ್ಲಿನ ಅರ್ಚಕರು ಪೂರ್ಣಕುಂಭ ಸ್ವಾಗತದೊಂದಿಗೆ ಚನ್ನಕೇಶವನ ದರ್ಶನಕ್ಕೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ‘ಅಗ್ನಿಪಥ್’ ವಿರೋಧ- ಮತ್ತೇ ಪ್ಯಾಸೆಂಜರ್ ರೈಲಿನ 2 ಬೋಗಿಗೆ ಬೆಂಕಿ

    ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ ಹಿನ್ನೆಲೆಯಲ್ಲಿ ಬೇಲೂರು ತಾಲೂಕಿನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈ ಸಂದರ್ಭದಲ್ಲಿ ಶಾಸಕರಾದ ಲಿಂಗೇಶ್, ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಆರ್. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಂತರಾಜು, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಎನ್ ನಂದಿನಿ, ಸಕಲೇಶಪುರ ಉಪ ವಿಭಾಗಾಧಿಕಾರಿ ಪ್ರತೀಕ್ ಭಾಯಲ್, ತಹಸೀಲ್ದಾರ್ ಮೋಹನ್, ಇತರರಿದ್ದರು.ಇದನ್ನೂ ಓದಿ: ಚಿಟುಗು ಮಲ್ಲೇಶ್ವರ ಮಠದ ಸ್ವಾಮೀಜಿ ಅಸಹಜ ಸಾವು

    Live Tv