Tag: beluru gopalakrishna

  • ಈಶ್ವರಪ್ಪ ವರ್ತನೆಯಿಂದ ಬಿಜೆಪಿಗಂತೂ ಒಳ್ಳೆಯದಾಗಲ್ಲ: ಬೇಳೂರು ಗೋಪಾಲಕೃಷ್ಣ

    ಈಶ್ವರಪ್ಪ ವರ್ತನೆಯಿಂದ ಬಿಜೆಪಿಗಂತೂ ಒಳ್ಳೆಯದಾಗಲ್ಲ: ಬೇಳೂರು ಗೋಪಾಲಕೃಷ್ಣ

    ಶಿವಮೊಗ್ಗ: ಸಚಿವ ಕೆ.ಎಸ್.ಈಶ್ವರಪ್ಪ ವರ್ತನೆಯಿಂದ ಬಿಜೆಪಿಗಂತೂ ಒಳ್ಳೆಯದಾಗಲ್ಲ. ಸಾರ್ವಜನಿಕ ಜೀವನದಲ್ಲಿ ಇರುವಂತಹವರು ನೀವು ಈ ರೀತಿ ಮಾತನಾಡಿದರೆ ನಿಮಗೆ ಶೋಭೆ ತರುವುದಿಲ್ಲ ಎಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಚಾಟಿ ಬೀಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಈಶ್ವರಪ್ಪ ರಾಜಕಾರಣದಲ್ಲಿ ಹಿರಿಯರಿದ್ದಾರೆ. ಹಲವು ಬಾರಿ ಸಚಿವರಾಗಿದ್ದಾರೆ. ಅವರ ಹಾಗೆ ನನಗೂ ಮಾತನಾಡಲು ಬರುತ್ತದೆ. ಆದರೆ ನಾನು ಹಾಗೆ ಮಾತನಾಡುವುದಿಲ್ಲ. ಪದೇ ಪದೇ ಪ್ರಚೋದನಕಾರಿ ಭಾಷಣ ಮಾಡುವ ಮೂಲಕ ಕೋಮು ದಳ್ಳುರಿ ಸೃಷ್ಟಿಸುತ್ತಿರುವ ಹಾಗೂ ಕಾಂಗ್ರೆಸ್ ವಿರುದ್ಧ ಅವಾಚ್ಯ ಪದ ಬಳಸಿ ನಿಂದಿಸಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ರಾಜ್ಯಪಾಲರು ತಕ್ಷಣ ವಜಾಗೊಳಿಸಬೇಕು ಎಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಆಗ್ರಹಿಸಿದ್ದಾರೆ.

    ರಾಜ್ಯಪಾಲರು ಬಿಜೆಪಿಯ ಕೈಗೊಂಬೆ ಅಲ್ಲ ಎಂದಾದಲ್ಲಿ, ತಕ್ಷಣ ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಲಿ. ಈಶ್ವರಪ್ಪ ಅವರಿಗೆ ವಯಸ್ಸಾಗಿದೆ. ಮುಂದೆ ಶಾಸಕ ಸ್ಥಾನಕ್ಕೆ ಟಿಕೆಟ್ ಸಿಗುವುದಿಲ್ಲ ಎಂದು ಹತಾಷರಾಗಿ ಈ ರೀತಿ ಮಾತನಾಡುತ್ತಿರಬಹುದು. ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಅವರ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದರು. ಅವರನ್ನ ಕೆಳಗೆ ಇಳಿಸಿದರೇ ತಾವೇ ಸಿಎಂ ಆಗಬಹುದು ಎಂದುಕೊಂಡರು. ಆದರೆ ಅವರನ್ನು ಕೆಳಗೆ ಇಳಿಸುವಲ್ಲಿ ಸಫಲರಾದ ಈಶ್ವರಪ್ಪ, ಮುಖ್ಯಮಂತ್ರಿ ಆಗಲು ಸಾಧ್ಯವಾಗಲಿಲ್ಲ ಎಂದರು. ಇದನ್ನೂ ಓದಿ: ನಾನು ಹೇಳಿದ್ದು ಹೌದು, ಆ ಒಂದು ಪದ ಬಳಸಿದ್ದು ತಪ್ಪು: ಈಶ್ವರಪ್ಪ

    ಬಿಜೆಪಿ, ಆರ್‍ಎಸ್‍ಎಸ್ ಹಿನ್ನೆಲೆಯುಳ್ಳ ಪಕ್ಷ ನಮ್ಮದು. ಸಂಸ್ಕೃತಿ, ಸಂಸ್ಕಾರ ಇರುವ ಪಕ್ಷ ಅಂತಾರೆ. ಇದೇನಾ ನಿಮ್ಮ ಸಂಸ್ಕೃತಿ, ಸಂಸ್ಕಾರ. ಇನ್ನಾದರೂ ಆರ್‍ಎಸ್‍ಎಸ್ ಮುಖಂಡರು ಈಶ್ವರಪ್ಪ ಅವರಿಗೆ ಬುದ್ಧಿ ಹೇಳಲಿ ಎಂದು ಹೇಳಿದರು. ಇದನ್ನೂ ಓದಿ: ‘ಬೀಪ್’ ಹಾಕುವ ಪದ ಬಳಸಿದ ಮಂತ್ರಿ ಈಶ್ವರಪ್ಪ- ಕಾಂಗ್ರೆಸ್‍ನವರು ಕುಡುಕ ….. ಮಕ್ಕಳು ಎಂದ ಸಚಿವ

  • ಮೋದಿಯವರ ಡಿಜಿಟಲ್ ಇಂಡಿಯಾ ಎಲ್ಲಿ ಹೋಗಿದೆ? – ಬೇಳೂರು ಕಿಡಿ

    ಮೋದಿಯವರ ಡಿಜಿಟಲ್ ಇಂಡಿಯಾ ಎಲ್ಲಿ ಹೋಗಿದೆ? – ಬೇಳೂರು ಕಿಡಿ

    ಶಿವಮೊಗ್ಗ: ದೇಶದಲ್ಲಿ ನಾಲ್ಕು ಬಲಿಷ್ಠ ಕಂಪನಿಗಳಿದ್ದರೂ, ಶರಾವತಿ ಮುಳುಗಡೆ ಭಾಗದ ಗ್ರಾಮಸ್ಥರಿಗೆ ನೆಟ್‍ವರ್ಕ್ ಸಮಸ್ಯೆ ಇದೆ. ಮಲೆನಾಡು ಭಾಗದ ಮಕ್ಕಳು ಇಂಟರ್ನೆಟ್ ಇಲ್ಲದೇ, ಆನ್‍ಲೈನ್ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಭಾರತ ವಿಶ್ವಗುರು ಎನ್ನುವ ಬಿಜೆಪಿ ನಾಯಕರು, ಇಲ್ಲಿ ಸರಿಯಾಗಿ ನೆಟ್‍ವರ್ಕ್ ನೀಡಲು ಯೋಗ್ಯತೆ ಇಲ್ಲ ಎಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

    ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬೇಳೂರು ಗೋಪಾಲಕೃಷ್ಣ ಅವರು, ಸಾಗರದ ತುಮರಿ, ಹೊಸನಗರ, ತೀರ್ಥಹಳ್ಳಿ ಭಾಗದಲ್ಲಿ ನೆಟ್‍ವರ್ಕ್ ಇಲ್ಲದೇ, ಜನರಿಗೆ ತೊಂದರೆಯಾಗಿದೆ. ಮೋದಿಯವರ ಡಿಜಿಟಲ್ ಇಂಡಿಯಾ ಎಲ್ಲಿ ಹೋಗಿದೆ ಎಂದು ಪ್ರಶ್ನೆ ಮಾಡಿದ್ದಾರೆ.

    ಮಲೆನಾಡು ಜಿಲ್ಲೆಯ ಅಭಿವೃದ್ಧಿಗಾಗಿ ಯಡಿಯೂರಪ್ಪ ಮುಂದುವರೆಯಬೇಕು. ಆದರೆ, ರಾಜ್ಯದ ಜನರ ಸಮಸ್ಯೆ ಆಲಿಸುವ ಬದಲು ಬಿಜೆಪಿ ಸರ್ಕಾರ ತಮ್ಮದೇ ಆದ ಸಮಸ್ಯೆಯಲ್ಲಿದೆ. ಬರೀ ನಿಮ್ಮದೇ ಕಷ್ಟ ಹೇಳಿಕೊಳ್ಳುತ್ತಾ ಕೂರಬೇಡಿ, ಜನರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು. ಅದು ಬಿಟ್ಟು ತಮ್ಮದೇ ಸಮಸ್ಯೆ ಹೇಳುತ್ತಿದ್ದಾರೆ. ಜನರು ಇವರ ಕಷ್ಟ ಕೇಳಲು ರೆಡಿ ಇಲ್ಲ ಎಂದರು. ಇದನ್ನೂ ಓದಿ: ಬಡತನದಿಂದ ಶಿಕ್ಷಣ ನಿಲ್ಲಿಸಬಾರದು – ಆನ್‍ಲೈನ್ ಪಾಠ ಸಿಗದ್ದಕ್ಕೆ ಹೈಕೋರ್ಟ್ ಕಳವಳ

    ನಳಿನ್ ಕುಮಾರ್ ಕಟೀಲ್ ಆಡಿಯೋ ವೈರಲ್ ವಿಚಾರವಾಗಿ ಮಾತನಾಡಿ, ಕಟೀಲ್ ಧ್ವನಿ ಕೇಳಿಸಿಕೊಂಡರೆ, ರಾಜೀನಾಮೆ ನೀಡುವುದು ಪಕ್ಕಾ ಅನಿಸುತ್ತದೆ. ಅದು ಕಟೀಲ್ ಅವರ ಧ್ವನಿಯೇ ಆಗಿದೆ. ಅವರ ನಗು ಅನುಕರಣೆ ಮಾಡಲು ಆಗುವುದಿಲ್ಲ. ಅವರ ನಗುವನ್ನು ಮಿಮಿಕ್ರಿ ಮಾಡಲು ಸಾಧ್ಯವಿಲ್ಲ. ಅದು ಅವರ ಧ್ವನಿ ಎಂದು ಈಶ್ವರಪ್ಪರಿಗೆ ತಿಳಿದಿದೆ. ಅದಕ್ಕೇ ಈಶ್ವರಪ್ಪ, ನಾನೇನು ಗೂಟ ಹೊಡೆದುಕೊಂಡು ಕೂರಲು ಬಂದಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಶಾಸಕ ಹರತಾಳು ಹಾಲಪ್ಪ, ಈ ವಿಚಾರದಲ್ಲಿ ಅಪರಾಧಿ ಎನ್ನುತ್ತಾರೆ. ಬಸ್ಟ್ಯಾಂಡ್ ರಾಘು, ಎಂ.ಪಿ ಆಗಿ ಕೇವಲ ಶೋ ಕೊಡುವುದೇ ಕೆಲಸವಾಗಿದೆ. ಕೇವಲ ಶೋಕಿ ಹೇಳಿಕೆಗಳನ್ನು ಸಂಸದ ರಾಘವೇಂದ್ರ ನೀಡುತ್ತಾರೆ. ಎಲ್ಲಿಯೂ ಸರಿಯಾಗಿ ಕೊರೊನಾ ಲಸಿಕೆ ಸಿಗುತ್ತಿಲ್ಲ. ಆದರೆ, ನರೇಂದ್ರ ಮೋದಿಯವರು, ಲಸಿಕೆ ತೆಗೆದುಕೊಂಡವರು ಬಾಹುಬಲಿ ಎನ್ನುತ್ತಾರೆ ಎಂದು ಕಿಡಿಕಾರಿದರು.

  • ಈಗೇನು ಬಾಯಿಗೆ ಕಡುಬು ಹಾಕ್ಕೊಂಡಿದ್ದೀಯಾ: ಶೋಭಾ ವಿರುದ್ಧ ಬೇಳೂರು ಕಿಡಿ

    ಈಗೇನು ಬಾಯಿಗೆ ಕಡುಬು ಹಾಕ್ಕೊಂಡಿದ್ದೀಯಾ: ಶೋಭಾ ವಿರುದ್ಧ ಬೇಳೂರು ಕಿಡಿ

    ಶಿವಮೊಗ್ಗ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದೆ ಶೋಭಾ ಕರಂದ್ಲಾಜೆ ಏಕೆ ಮಾತನಾಡುತ್ತಿಲ್ಲ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಸಂಸದೆ ವಿರುದ್ಧ ಗುಡುಗಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪ್ರಕರಣ ಸಂಬಂಧ ಶೋಭಾ ಕರಂದ್ಲಾಜೆ ಏಕೆ ಪ್ರಶ್ನೆ ಮಾಡುತ್ತಿಲ್ಲ ಅಂತ ಏಕವಚನದಲ್ಲಿ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಶೋಭಾ ಮೇಡಂ ಬಾಯಿ ಹರಿದುಕೊಳ್ಳುತ್ತಿದ್ದಳು. ಆದರೆ ಈಗ ಆಯಮ್ಮ ಸುಮ್ಮನಿದ್ದಾಳೆ.

    ದೇಶದ್ರೋಹಿಗಳು ಹಿಂದೂಗಳು ಇದ್ದಾರೆ, ಮುಸ್ಲಿಮರು ಇದ್ದಾರೆ. ಬಾಂಬ್ ಇಟ್ಟವನು ಹಿಂದೂ ಅಂತ ಸುಮ್ಮನಾದ್ರಾ ಶೋಭಮ್ಮ ಎಂದು ಲೇವಡಿ ಮಾಡಿದ್ದಾರೆ. ಈಗೇನು ಬಾಯಿಗೆ ಕಡುಬು ಹಾಕಿಕೊಂಡಿದ್ದೀಯಾ ನೀನು. ನಿಮ್ಮದೇ ಸರ್ಕಾರ ಇದೆ ಕ್ರಮ ಕೈಗೊಳ್ಳಬೇಕು ಅಲ್ಲವಾ ಅಂತ ಶೋಭಾ ಕರಂದ್ಲಾಜೆ ವಿರುದ್ಧ ಬೇಳೂರು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಸೂಲಿಬೆಲೆ, ತೇಜಸ್ವಿ ವಿರುದ್ಧ ಕೆಟ್ಟ ಪದ ಬಳಸಿ ಬೇಳೂರು ವಾಗ್ದಾಳಿ

  • ಕ್ಷಮೆಯಾಚಿಸಿದ ಬೇಳೂರು ಗೋಪಾಲಕೃಷ್ಣ

    ಕ್ಷಮೆಯಾಚಿಸಿದ ಬೇಳೂರು ಗೋಪಾಲಕೃಷ್ಣ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ನನಗೆ ಗೌರವವಿದೆ. ಅವರನ್ನು ಉದ್ದೇಶಿಸಿ ನಾನು ಗುಂಡಿಕ್ಕಿ ಕೊಲ್ಲಿ ಅಂತ ಹೇಳಲಿಲ್ಲ. ಪೂಜಾ ಪಾಂಡೆಯವರ ವಿಚಾರ ಮಾತನಾಡುವಾಗ ಮೋದಿ ಅವರ ಹೆಸರನ್ನು ಹೇಳಿದೆ ಅಷ್ಟೆ. ನನ್ನ ಹೇಳಿಕೆ ಪ್ರಧಾನಿ ಅವರ ಗೌರವಕ್ಕೆ ಧಕ್ಕೆ ತಂದಿದ್ದರೆ ಅದಕ್ಕೆ ನಾನು ಕ್ಷಮೆಯಾಚಿಸುತ್ತೇನೆ ಎಂದು ಕಾಂಗ್ರೆಸ್ ನಾಯಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ತಿಂಗಳ ಹಿಂದೆ ಹೇಳಿದ ವಿಚಾರವಿದು. ನಮ್ಮ ಕಾಂಗ್ರೆಸ್ ಪಕ್ಷದ ಪ್ರತಿಭಟನಾ ಸಭೆಯಲ್ಲಿ ನಾನು ಈ ಮಾತನ್ನು ಹೇಳಿದ್ದೆ. ನಾನು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೇಳಿಕೆ ನೀಡುವಾಗ ಅಲ್ಲಿ ಎಲ್ಲಾ ಮೀಡಿಯಾ ಹಾಗೂ ಪತ್ರಿಕೆಗಳು ಇತ್ತು. ಮಹಾಸಭಾದ ಪ್ರಧಾನ ಕಾರ್ಯದರ್ಶಿ ಪೂಜಾ ಪಾಂಡೆ ಎನ್ನುವವರು ಗಾಂಧಿ ಭಾವಚಿತ್ರವನ್ನು ಸುಟ್ಟುಹಾಕಿ, ಗಾಂಧೀಜಿ ಇಂದು ಬದುಕಿದ್ದರೆ ಅವರನ್ನು ನಾನೇ ಗುಂಡು ಹೋಡೆದು ಕೊಲ್ಲುತ್ತಿದ್ದೆ ಅಂತ ಹೇಳಿದ್ದರು. ಗೋಡ್ಸೆಗೆ ಜೈಕಾರ ಹಾಕಿ ದೇಶದಲ್ಲಿ ಅಶಾಂತಿ ತಂದಿದ್ದರು. ಹೀಗೆ ರಾಷ್ಟ್ರಪಿತರಿಗೆ ಗನ್ ತೋರಿಸಿ ಕೊಲ್ಲುತ್ತಿದ್ದೆ ಎನ್ನುವವರಿಗೆ ನಿಮ್ಮ ಪಕ್ಷದ ನಾಯಕ ಮೋದಿಯವರಿಗೆ ಗುಂಡಿಕ್ಕಿ ಕೊಲ್ಲುವ ತಾಖತ್ ಇದೆಯಾ? ಅಂತ ನಾನು ಕೇಳಿದ್ದು ಅಷ್ಟೇ ಎಂದು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದರು.ಇದನ್ನೂ ಓದಿ:‘ಮೋದಿಯನ್ನು ಗುಂಡಿಟ್ಟು ಕೊಲ್ಲಿ’ – ವಿವಾದ ಸೃಷ್ಟಿಸಿದ ಬೇಳೂರು ಗೋಪಾಲಕೃಷ್ಣ

    ನಾನು ಯಾವತ್ತು ಮೋದಿಗೆ ಗುಂಡಿಕ್ಕಿ ಕೊಲೆ ಮಾಡುತ್ತೇನೆ ಅಂದಿಲ್ಲ. ಪ್ರಧಾನಿಗಳ ಮೇಲೆ ನನಗೆ ಗೌರವವಿದೆ. ನಾನು ಮೋದಿಯನ್ನ ಕೊಲ್ಲಿ ಎಂಬ ಉದ್ದೇಶದಿಂದ ಆ ಮಾತನ್ನು ಹೇಳಿಲ್ಲ. ಹಾಗೇ ಮಾತಿನ ಭರದಲ್ಲಿ ರಾಷ್ಟ್ರಪಿತರ ಬಗ್ಗೆ ಮಾತನಾಡೋ ನಿಮಗೆ ನಿಮ್ಮ ಪಕ್ಷದ ನಾಯಕನಿಗೆ ಗುಂಡು ಹೊಡೆಯುವ ತಾಖತ್ ಇದಿಯಾ ಅಂತ ಪ್ರಶ್ನಿಸಿದೆ ಅಷ್ಟೇ. ನಾನು ಮಾತಿನ ಅರ್ಥ ಮೋದಿಯನ್ನ ಕೊಲ್ಲಿ ಅನ್ನೋದು ಆಗಿರಲಿಲ್ಲ ಎಂದು ತಮ್ಮ ಮಾತಿನ ಅರ್ಥವನ್ನು ವಿವರಿಸಿದ್ದಾರೆ.

    ಈ ಹೇಳಿಕೆ ನೀಡಿದಾಗ ಬಿಜೆಪಿ ಅವರು ಎಲ್ಲಿದ್ದರು? ಈಗ ಈ ಮಾತನ್ನು ಕೆದಕಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹಕ್ಕಿದೆ. ಬಿಜೆಪಿ ಅವರು ನನ್ನ ಮೇಲೆ ಕಂಪ್ಲೇಂಟ್ ಕೋಡೋದಾದ್ರೆ ಕೊಡಲಿ. ನಾನು ಮುಂದೆ ಈ ವಿಚಾರವನ್ನು ನಮ್ಮ ವಕೀಲರ ಮುಖಾಂತರ ನೋಡಿಕೊಳ್ಳುತ್ತೇನೆ. ರಾಷ್ಟ್ರಪಿತರಿಗೆ ಅವಮಾನ ಮಾಡಿದ್ದು ನನಗೆ ನೋವಾಯ್ತು ಅದಕ್ಕೆ ನಾನು ಈ ಹೇಳಿಕೆ ನೀಡಿದ್ದು, ಪ್ರಧಾನಿ ಬಗ್ಗೆ ನನಗೆ ಗೌರವವಿದೆ. ನನ್ನ ಹೇಳಿಕೆ ತಪ್ಪಾಗಿದ್ರೆ ನಾನು ಅದನ್ನು ವಾಪಾಸ್ ಪಡೆಯುತ್ತೇನೆ. ಪ್ರಧಾನಿಗಳ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡುವುದು ನನ್ನ ಉದ್ದೇಶವಾಗಿರಲಿಲ್ಲ. ನಾನು ಯಾರಿಗೂ ಪ್ರಚೋದನೆ ಮಾಡಿಲ್ಲ ಎಂದು ಬೇಳೂರು ಗೋಪಾಲಕೃಷ್ಣ ಕ್ಷಮೆಯಾಚಿಸಿದ್ದಾರೆ.

    https://www.youtube.com/watch?v=cI5Jed7sDwc

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ‘ಮೋದಿಯನ್ನು ಗುಂಡಿಟ್ಟು ಕೊಲ್ಲಿ’ – ವಿವಾದ ಸೃಷ್ಟಿಸಿದ ಬೇಳೂರು ಗೋಪಾಲಕೃಷ್ಣ

    ‘ಮೋದಿಯನ್ನು ಗುಂಡಿಟ್ಟು ಕೊಲ್ಲಿ’ – ವಿವಾದ ಸೃಷ್ಟಿಸಿದ ಬೇಳೂರು ಗೋಪಾಲಕೃಷ್ಣ

    ಬೆಂಗಳೂರು: ಕಾಂಗ್ರೆಸ್ ನಾಯಕ ಬೇಳೂರು ಗೋಪಾಲಕೃಷ್ಣ ಅವರು ಪಕ್ಷದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುಂಡಿಟ್ಟು ಕೊಲ್ಲಿ ಎಂದು ಹೇಳಿರುವ ಹೇಳಿಕೆ ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.

    ಬೇಳೂರು ಗೋಪಾಲಕೃಷ್ಣ ಅವರು ಒಂದು ತಿಂಗಳ ಹಿಂದೆ ಅಂದರೆ ಫೆ.4 ರಂದು ನೀಡಿದ ಹೇಳಿಕೆಯನ್ನ ಕರ್ನಾಟಕ ಬಿಜೆಪಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಕೇಂದ್ರ ಗೃಹ ಇಲಾಖೆ ಹಾಗೂ ಬೆಂಗಳೂರು ನಗರ ಪೊಲೀಸರ ಟ್ವಿಟ್ಟರ್ ಖಾತೆಗಳನ್ನು ಟ್ಯಾಗ್ ಮಾಡಿ ಕ್ರಮಕೈಗೊಳ್ಳಲು ಮನವಿ ಮಾಡಿಕೊಂಡಿದೆ.

    ರಾಹುಲ್ ಗಾಂಧಿಯವರೇ ನೀವು ಕೆಟ್ಟ ರಾಜಕೀಯವನ್ನು ವಿರೋಧಿಸುತ್ತೀರಿ ಎಂದು ಹೇಳುತ್ತೀರಿ. ಆದರೆ ಈಗ ನಿಮ್ಮ ಪಕ್ಷದ ನಾಯಕರೇ ಮೋದಿ ಅವರನ್ನು ಗುಂಡಿಟ್ಟು ಕೊಲ್ಲಲು ಕರೆ ನೀಡುತ್ತಾರೆ. ಹೀಗಾಗಿ ಇವರ ವಿರುದ್ಧ ಏನು ಕ್ರಮವನ್ನು ಕೈಗೊಳ್ಳುತ್ತೀರಿ ಎಂದು ಕರ್ನಾಟಕ ಬಿಜೆಪಿ ಪ್ರಶ್ನೆಯನ್ನು ಕೇಳಿದೆ.

    ದೇಶದಲ್ಲಿ ಮಹಾತ್ಮ ಗಾಂಧೀಜಿ ಅವರಿಗೆ ನಾವು ಹೆಚ್ಚು ಗೌರವವನ್ನು ನೀಡಿದ್ದೇವೆ. ಆದರೆ ಇಂದು ಗಾಂಧಿಜೀ ಬದುಕಿದ್ದರೆ ಗುಂಡಿಟ್ಟು ಸಾಯಿಸುತ್ತೇವೆ ಎಂದು ಹಿಂದೂ ಮಹಾಸಭಾ ನಾಯಕಿ ಹೇಳುತ್ತಾರೆ. ಹಾಗಾದರೆ ದೇಶಕ್ಕೆ ಅಘಾತ ತರುತ್ತಿರುವ ಪ್ರಧಾನಿ ಮೋದಿ ಅವರನ್ನು ತಾಕತ್ ಇದ್ದರೆ ಗುಂಡಿಟ್ಟು ಸಾಯಿಸಿ ಎಂದು ಹೇಳಿ ಬಿಜೆಪಿಗೆ ಟಾಂಗ್ ನೀಡಿದ್ದರು.

    ಚುನಾವಣೆಯ ಸಂದರ್ಭದಲ್ಲಿ ಮೋದಿ ಅವರು ನೀಡಿದ್ದ ಆಶ್ವಾಸನೆಯನ್ನು ಈಡೇರಿಸಿಲ್ಲ ಎಂದು ಟೀಕಿಸಿದ ಬೇಳೂರು ಗೋಪಾಲ ಕೃಷ್ಣ ಅವರು, ಗಾಂಧಿ ಪ್ರತಿಮೆಗೆ ಗುಂಡಿಟ್ಟ ಸಂದರ್ಭವನ್ನು ಉಲ್ಲೇಖಿಸಿ ಈ ಹೇಳಿಕೆ ನೀಡಿದ್ದಾರೆ. ಮೋದಿ ಚುನಾವಣೆಗೂ ಮುನ್ನ ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದ್ದರು. ಆದರೆ ನಿರ್ಮಾಣ ಆಗಿದ್ಯಾ ನಿರ್ಮಾಣ ಆಗಿಲ್ಲ ಎಂದಾದರೆ ಪ್ರಧಾನಿ ಮೋದಿಯನ್ನು ತಾಕತ್ ಇದ್ದರೆ ಗುಂಡಿಟ್ಟು ಸಾಯಿಸಿ ಎಂದಿದ್ದರು.

    ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಸಂಸದೆ ಶೋಭಾ ಕರಂದ್ಲಾಜೆ ಅವರು, ನಮಗೆ ಬೇಳೂರು ಅವರ ಹೇಳಿಕೆ ಬಗ್ಗೆ ಮಾಹಿತಿ ಇರಲಿಲ್ಲ. ಆದರೆ ಇಂದು ವಿಡಿಯೋ ಸಿಕ್ಕಿದೆ. ಆದ್ದರಿಂದಲೇ ಈಗ ಮಾಹಿತಿ ನೀಡಿದ್ದೇವೆ. ಆದ್ದರಿಂದ ರಾಜ್ಯ ಸರ್ಕಾರ ಸೇರಿದಂತೆ ಗೃಹ ಇಲಾಖೆ ಬೇಳೂರು ಅವರನ್ನು ಬಂಧಿಸಿ ಎಂದು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಪರೇಷನ್ ಕಮಲ ಮಾಡಿದ್ರೆ ಆಪರೇಷನ್ ಹಸ್ತವೂ ಆಗುತ್ತೆ- ಬೇಳೂರು ಗೋಪಾಲಕೃಷ್ಣ

    ಆಪರೇಷನ್ ಕಮಲ ಮಾಡಿದ್ರೆ ಆಪರೇಷನ್ ಹಸ್ತವೂ ಆಗುತ್ತೆ- ಬೇಳೂರು ಗೋಪಾಲಕೃಷ್ಣ

    – ಎಂಎಲ್‍ಎಗಳಿಗೆ ರಾಜೀನಾಮೆ ಕೊಟ್ಟು ಮತ್ತೆ ಗೆಲ್ಲುವ ಶಕ್ತಿ ಇಲ್ಲ

    ಬೆಂಗಳೂರು: ಬಿಜೆಪಿಯವರು ಆಪರೇಷನ್ ಕಮಲ ಶುರು ಮಾಡಿದರೆ, ಆಪರೇಷನ್ ಹಸ್ತವೂ ಪ್ರಾರಂಭವಾಗುತ್ತದೆ ಎಂದು ಕಾಂಗ್ರೆಸ್ಸಿನ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಕಿಡಿಕಾರಿದ್ದಾರೆ.

    ಕೇಂದ್ರ ಸಚಿವ ಜಾವ್ಡೇಕರ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಬಿಜೆಪಿಯವರು ನಾವು ಏನು ಮಾಡಿಲ್ಲ. ಇದೆಲವೂ ಕಾಂಗ್ರೆಸ್ಸಿನ ಪಿತೂರಿ ಎಂದು ಹೇಳುತ್ತಾರೆ. ಆದರೆ ಅವರ ಕೇಂದ್ರ ಸಚಿವರು ಡಿಸೆಂಬರ್‍ನಲ್ಲಿ ಕರ್ನಾಟಕದಲ್ಲಿ ಧಮಾಕ ಆಗುತ್ತದೆ ಎನ್ನುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ. ಒಂದು ವೇಳೆ ಆಪರೇಷನ್ ಕಮಲ ಮಾಡಿದರೆ, ನಾವು ಕೂಡ ಆಪರೇಷನ್ ಹಸ್ತ ಮಾಡಬೇಕಾಗುತ್ತದೆ. ಒಂದು ವೇಳೆ ಅವರು ಆಪರೇಷನ್ ಕಮಲ ಮಾಡಿದರೂ, ಶಾಸಕರಿಗೆ ರಾಜೀನಾಮೆ ಕೊಟ್ಟು, ಪುನಃ ಗೆಲ್ಲುವ ಶಕ್ತಿ ಇಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಿಂಗ್‍ಪಿನ್‍ಗಳು ದುಬೈ ಸೇರಿಕೊಂಡಿದ್ದಾರೆ. ಈಗ ಮತ್ತೆ ಅಲ್ಲಿಂದಲೇ ಪ್ಲಾನ್ ಮಾಡುತ್ತಿರಬಹುದು. ಆದರೆ ಇದು ಹೆಚ್ಚು ದಿನ ನಡೆಯುವುದಿಲ್ಲ. ಎರಡು ಸಲ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಸರ್ಕಾರ ರಚನೆಗೆ ಮುಂದಾಗಿ ಕೈ ಸುಟ್ಟುಕೊಂಡಿದ್ದಾರೆ. ಈಗ ಮತ್ತೆ ಮೂರನೇ ಸಲ ಮುಂದಾಗುತ್ತಿದ್ದಾರೆ. ಅವರು ಸುಮ್ಮನೇ ಕುಳಿತುಕೊಳ್ಳುವ ವ್ಯಕ್ತಿಯೇ ಅಲ್ಲ. ಅದಕ್ಕಾಗಿಯೇ ಅವರು ಕೇರಳಕ್ಕೆ ಹೋಗಿರಬಹುದು. ಅಲ್ಲಿ ಪೂಜೆ-ಹವನ, ಮಾಟ-ಮಂತ್ರ ಏನೇನು ಮಾಡಿಸಿದ್ದಾರೋ, ಯಾರಿಗೆ ಗೊತ್ತು. ಯಾವಾಗಲೂ ಜಿಂದಾಲ್‍ಗೆ ಹೋಗುವವರು, ಕೇರಳಕ್ಕೆ ಯಾಕೆ ಹೋದರು ಎನ್ನುವುದೇ ಅನುಮಾನವಾಗಿದೆ ಎಂದು ಹೇಳಿದರು.

    ಬಿಜೆಪಿ ನಾಯಕರು ಸಮ್ಮಿಶ್ರ ಸರ್ಕಾರ 6 ತಿಂಗಳಲ್ಲಿ ಏನು ಅಭಿವೃದ್ಧಿ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಕೇಂದ್ರದಲ್ಲಿನ ಅವರ ಸರ್ಕಾರ ನಾಲ್ಕೂವರೆ ವರ್ಷದಲ್ಲಿ ಏನು ಮಾಡಿದೆ ಎನ್ನುವುದನ್ನು ಮೊದಲು ಹೇಳಲಿ. ನಮ್ಮ ಸಮ್ಮಿಶ್ರ ಸರ್ಕಾರ ರಾಜ್ಯದ ರೈತರ ಸಾಲವನ್ನು ಮನ್ನಾಮಾಡಿದೆ. ಈಗಾಗಲೇ ಹಂತ ಹಂತವಾಗಿ ಸಿಎಂ ಕುಮಾರಸ್ವಾಮಿಯವರು ಹಣ ಬಿಡುಗಡೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಮಮಂದಿರಕ್ಕೆ ನಾವ್ ಕೈ ಜೋಡಿಸ್ತೀವಿ, ಆದ್ರೆ ಒಂದು ಕಂಡೀಷನ್: ಕೈ ಮುಖಂಡ

    ರಾಮಮಂದಿರಕ್ಕೆ ನಾವ್ ಕೈ ಜೋಡಿಸ್ತೀವಿ, ಆದ್ರೆ ಒಂದು ಕಂಡೀಷನ್: ಕೈ ಮುಖಂಡ

    -ಹಿಂದೂಪರ ಸಂಘಟನೆಗಳೂ ಮೊದಲು ಮೋದಿಯವರನ್ನು ಮಕಾಡೆ ಮಲಗಿಸಿ

    ಶಿವಮೊಗ್ಗ: ಆರ್‍ಎಸ್‍ಎಸ್, ಬಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಒಟ್ಟಾಗಿ ಸೇರಿ ಪ್ರಧಾನಿ ಮೋದಿಯವರನ್ನು ಸೋಲಿಸಿದರೆ, ರಾಮಮಂದಿರ ನಿರ್ಮಾಣಕ್ಕೆ ನಾವು ನಿಮ್ಮೊಂದಿಗೆ ಬರುತ್ತೇವೆಂದು ಕಾಂಗ್ರೆಸ್ ನಾಯಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.

    ನಗರದಲ್ಲಿ ರಾಮಮಂದಿರ ನಿರ್ಮಾಣ ಕುರಿತು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲಾ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಮಮಂದಿರ ಕಟ್ಟಲು ಮುಂದಾಗಲಿ. ನಾವೂ ಸಹ ರಾಮಮಂದಿರ ನಿರ್ಮಾಣಕ್ಕೆ ಬರುತ್ತೇವೆ. ಅಲ್ಲದೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಿಂದೂಪರ ಸಂಘನೆಗಳಾದ ಆರ್‍ಎಸ್‍ಎಸ್, ಬಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಒಟ್ಟಾಗಿ ನರೇಂದ್ರ ಮೋದಿಯವರನ್ನು ಮಕಾಡೆ ಮಲಗಿಸಿ. ನಂತರ ನಾವು ನಿಮ್ಮೊಂದಿಗೆ ಬರುತ್ತೇವೆ. ಹಿಂದೂಗಳು-ಮುಸಲ್ಮಾನರು ಸೇರಿ ಒಟ್ಟಿಗೆ ರಾಮಮಂದಿರ ನಿರ್ಮಾಣ ಮಾಡೋಣ ಎಂದು ಹೇಳಿದ್ದಾರೆ.

    ಈ ನಿಟ್ಟಿನಲ್ಲಿ ಸ್ವಾಮೀಜಗಳ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಎಲ್ಲಾ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಮಮಂದಿರ ನಿರ್ಮಾಣ ಮಾಡಬೇಕು. ಆದರೆ ಈಗ ಚುನಾವಣಾ ಸಮಯದಲ್ಲಿ ಮಾತ್ರ ರಾಮಮಂದಿರ ನಿರ್ಮಾಣ ಕಾರ್ಯ ನೆನಪಾಗುತ್ತಿದೆ. ಘರ್ಷಣೆಗೆ ಅವಕಾಶ ನೀಡದೇ ರಾಮಮಂದಿರ ಮಾಡಲಿ. ಅದನ್ನು ಬಿಟ್ಟು ಚುನಾವಣೆಗಾಗಿ ರಾಮಮಂದಿರ ವಿಷಯವನ್ನು ಚರ್ಚೆಗೆ ತರುವುದನ್ನು ನಾವು ಒಪ್ಪುವುದಿಲ್ಲವೆಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂಟೆಲಿಜೆನ್ಸ್ ಮೂಲಕ ಬಿಎಸ್‍ವೈ ಎಲ್ಲಿದ್ದಾರೆಂಬುದನ್ನು ತಿಳಿದುಕೊಳ್ಳಿ: ಕರಂದ್ಲಾಜೆ

    ಇಂಟೆಲಿಜೆನ್ಸ್ ಮೂಲಕ ಬಿಎಸ್‍ವೈ ಎಲ್ಲಿದ್ದಾರೆಂಬುದನ್ನು ತಿಳಿದುಕೊಳ್ಳಿ: ಕರಂದ್ಲಾಜೆ

    ಉಡುಪಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಎಲ್ಲಿದ್ದಾರೆ ಎಂಬುದನ್ನು ತಮ್ಮ ಇಂಟೆಲಿಜೆನ್ಸ್ ಮೂಲಕ ಮಾಹಿತಿ ಪಡೆಯಿರಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಬೇಳೂರು ವಿರುದ್ಧ ಕಿಡಿಕಾರಿದ್ದಾರೆ.

    ಮಾಟ ಮಾಡಿಸಲು ಬಿಎಸ್‍ವೈ ಕೇರಳಕ್ಕೆ ಹೋಗಿದ್ದಾರೆ ಎನ್ನುವ ಬೇಳೂರು ಗೋಪಾಲಕೃಷ್ಣ ಹೇಳಿಕೆಗೆ ಪ್ರತಿಕ್ರಿಯಿಸಿ, ಬೇಳೂರು ಒಬ್ಬ ಹಗುರ ಮಾತಿನ ವ್ಯಕ್ತಿ. ಹೀಗಾಗಿ ಅವರ ಹೇಳಿಕೆಗೆ ಯಾವುದೇ ಉತ್ತರ ನೀಡಲ್ಲ. ಯಡಿಯೂರಪ್ಪನವರ ಕೇರಳದ ಭೇಟಿ ಬಗ್ಗೆ ಇಂಟೆಲಿಜೆನ್ಸ್ ಮೂಲಕ ಮಾಹಿತಿ ಪಡೆದುಕೊಳ್ಳಿ. ಅಲ್ಲದೇ ನಿಮ್ಮ ಸರ್ಕಾರದ ಪೊಲೀಸರು ಸಹ ಅವರ ಜೊತೆಯಲ್ಲಿದ್ದಾರೆ. ಅವರನ್ನೇ ಕೇಳಿ ತಿಳಿದುಕೊಳ್ಳಿ ಎಂದು ಹೇಳಿದರು.

    ಕೇರಳದಲ್ಲಿ ನಿಮ್ಮ ಮಹಾಘಟಬಂಧನ ಸರ್ಕಾರವಿದೆ. ಯಡಿಯೂರಪ್ಪ ಎಲ್ಲಿದ್ದಾರೆ? ಯಾವ ವಿಮಾನದಲ್ಲಿ ಹೊರಟರು? ಎಲ್ಲಿಗೆ ಹೋಗಿದ್ದಾರೆ ಎನ್ನುವ ಬಗ್ಗೆ ಇಂಟೆಲಿಜೆನ್ಸ್ ಮೂಲಕ ತನಿಖೆ ಮಾಡಿಸಿ ಎಂದು ಕಿಡಿಕಾರಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಗಂಧೂರು ಅಷ್ಟೇ ಅಲ್ಲ, ಯಾವುದೇ ದೇವಾಲಯದಲ್ಲಿ ಪ್ರಮಾಣ ಮಾಡಲು ಸಿದ್ಧ: ಹರತಾಳು ಹಾಲಪ್ಪ

    ಸಿಗಂಧೂರು ಅಷ್ಟೇ ಅಲ್ಲ, ಯಾವುದೇ ದೇವಾಲಯದಲ್ಲಿ ಪ್ರಮಾಣ ಮಾಡಲು ಸಿದ್ಧ: ಹರತಾಳು ಹಾಲಪ್ಪ

    -ಶಿವಮೊಗ್ಗದಲ್ಲಿ ಅನೈತಿಕ ಸಂಬಂಧದ ಕೆಸರೆರಚಾಟ

    ಶಿವಮೊಗ್ಗ: ಸಿಗಂಧೂರು ದೇವಾಲಯ ಅಷ್ಟೇ ಅಲ್ಲ, ದೇಶದ ಯಾವುದೇ ದೇವಾಲಯದಲ್ಲಿ ಪತ್ನಿ ಸಹಿತ ಬಂದು ಪ್ರಮಾಣ ಮಾಡುಲು ಸಿದ್ಧವೆಂದು ಶಾಸಕ ಹರತಾಳ ಹಾಲಪ್ಪ ಅವರು ಬೇಳೂರು ಗೋಪಾಲಕೃಷ್ಣರಿಗೆ ಸವಾಲು ಹಾಕಿದ್ದಾರೆ.

    ಬೇಳೂರು ಗೋಪಾಲಕೃಷ್ಣ ಹೇಳಿಕೆಗೆ ನಗರದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣಾ ಕಾರ್ಯದ ಹಿನ್ನೆಲೆಯಲ್ಲಿ ಗೋಪಾಲಕೃಷ್ಣ ಹೇಳಿಕೆಗೆ ಉತ್ತರಿಸುವುದಕ್ಕೆ ತಡವಾಗಿದೆ. ಆದರೆ ಈಗ ಚುನಾವಣೆ ಮುಗಿದಿದೆ. ಈಗ ನಾನು ಪ್ರಮಾಣ ಮಾಡಲು ಸಿದ್ಧನಿದ್ದೇನೆ. ಮೊದಲು ಶರಾವತಿ ಡೆಂಟಲ್ ಕಾಲೇಜು ಈಡಿಗ ಸಮುದಾಯಕ್ಕೆ ಸೇರಿದ್ದು, ಇದು ಸುಳ್ಳು ಎಂದು ಮಧು ಬಂಗಾರಪ್ಪನವರು ಪ್ರಮಾಣ ಮಾಡಲಿ ಎಂದು ಹಾಕಿದ್ದ ಸವಾಲಿಗೆ, ಬೇಳೂರು ನನ್ನ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಿದರು.

    ಸಿಗಂಧೂರು ದೇವಾಲಯದಲ್ಲಿ ಪ್ರಮಾಣ ಮಾಡುವಂತೆ ಸವಾಲು ಹಾಕಿದ್ದಾರೆ. ಸಿಂಗಧೂರ ಅಷ್ಟೇ ಅಲ್ಲ, ದೇಶದ ಯಾವುದೇ ದೇವಾಲಯಕ್ಕೆ ಪತ್ನಿ ಸಹಿತ ಬಂದು ಪ್ರಮಾಣ ಮಾಡಲು ನಾನು ಸಿದ್ಧ. ಆದರೆ ಬೇಳೂರು ಮೊದಲು ಡೆಂಟಲ್ ಕಾಲೇಜು ವಿಷಯಕ್ಕೆ ಸಂಬಂಧಿಸಿದಂತೆ ಮಧು ಬಂಗಾರಪ್ಪರನ್ನು ಕರೆತರಲಿ. ಗೋಪಾಲಕೃಷ್ಣ ತಮ್ಮ ಪತ್ನಿ ಸಹಿತ ಬರಲಿ, ನಾನೂ ನನ್ನ ಪತ್ನಿಯನ್ನು ಕರೆದುಕೊಂಡು ಬರುತ್ತೀನಿ. ಬೇಳೂರು ಅವರ ಪಟ್ಟಿಯನ್ನು ತರುತ್ತೇನೆ. ಆ ಪಟ್ಟಿಯಲ್ಲಿ ಇರುವವರ ಜೊತೆ ಸಂಬಂಧ ಇಲ್ಲವೆಂದು ಬೇಳೂರು ಮೊದಲು ಪ್ರಮಾಣ ಮಾಡಲಿ ಎಂದು ಕಿಡಿಕಾರಿದರು.

    ನನ್ನ ಮೇಲಿನ ಪ್ರಕರಣ ಸುಳ್ಳು ಎಂದು ದೇವಿಯ ಎದುರು ಪ್ರಮಾಣ ಮಾಡಲು ನಾನು ಸಿದ್ಧ. ಅದರಂತೆ ನೈತಿಕತೆಯ ಬಗ್ಗೆ ಮಾತನಾಡುವ ಅವರು, ಆ ಪಟ್ಟಿ ದೇವರ ಮುಂದಿಟ್ಟು ಪ್ರಮಾಣ ಮಾಡಲಿ. ಅಲ್ಲದೇ ನನ್ನ ಪ್ರಕರಣದಲ್ಲಿ ನಮ್ಮದೇನೂ ಪಾತ್ರ, ಸಂಚು ಇಲ್ಲವೆಂದು ಬೇಳೂರು ಮತ್ತು ಮಧು ಬಂಗಾರಪ್ಪ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.

    ಬೇಳೂರು ತನ್ನ ಅಸ್ತಿತ್ವವನ್ನು ತೋರಿಸಿಕೊಳ್ಳಲು, ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇವರ ಹೇಳಿಕೆ ಬಗ್ಗೆ ಕಾನೂನು ಪ್ರಕಾರ ಕ್ರಮವನ್ನು ಕೈಗೊಳ್ಳುತ್ತೇನೆ. ಈಗಾಗಲೇ ದೇವಾಲಯ, ನ್ಯಾಯಾಲಯ ಹಾಗೂ ಜನತಾ ನ್ಯಾಯಾಲಯದಲ್ಲಿ ನಾನು ಗೆದ್ದಿದ್ದೆನೆ. ನೈತಿಕವಾಗಿ ನಾನು ಸರಿ ಇದ್ದೇನೆ. ಬೇಳೂರು ಗೋಪಾಲಕೃಷ್ಣ ಆರೋಪಕ್ಕೆ ಇನ್ನು ಮುಂದೆ ಯಾವುದೇ ಉತ್ತರ ನೀಡಲ್ಲ. ಅವರಷ್ಟೇ ಮುತ್ಸದ್ಧಿಯಿಂದ ಉತ್ತರ ಕೊಡಿಸುತ್ತೇನೆ ಎಂದು ಹೇಳಿದರು.

    ಡೆಂಟಲ್ ಕಾಲೇಜು ವಿಷಯ ಚುನಾವಣೆ ಸಂದರ್ಭದಲ್ಲಿ ಬಳಸಿಕೊಂಡಿದ್ದೇನೆ. ಏಕೆಂದರೆ ನಾನೂ ಸಹ ಈಡಿಗ ಸಮಾಜಕ್ಕಾಗಿ ಕೆಲಸ ಮಾಡಿದ್ದೇನೆ. ಆದರೆ ಶರಾವತಿ ಡೆಂಟಲ್ ಕಾಲೇಜು ಈಡಿಗ ಸಮಾಜದ್ದು ಎಂಬ ಬಗ್ಗೆ ಯಾವುದೇ ದಾಖಲೆ ಇಲ್ಲ. ಅಲ್ಲದೇ ಬಂಗಾರಪ್ಪ ಈ ಬಗ್ಗೆ ನನ್ನ ಬಳಿ ಹೇಳಿದ್ದು ಸತ್ಯವೆಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಾಗರದಲ್ಲಿ ಬಿಜೆಪಿ ಟಿಕೆಟ್‍ಗಾಗಿ ಹರತಾಳು ಹಾಲಪ್ಪ, ಬೇಳೂರು ಗೋಪಾಲಕೃಷ್ಣ ನಡುವೆ ಪೈಪೋಟಿ

    ಸಾಗರದಲ್ಲಿ ಬಿಜೆಪಿ ಟಿಕೆಟ್‍ಗಾಗಿ ಹರತಾಳು ಹಾಲಪ್ಪ, ಬೇಳೂರು ಗೋಪಾಲಕೃಷ್ಣ ನಡುವೆ ಪೈಪೋಟಿ

    ಶಿವಮೊಗ್ಗ: ಸಾಗರದಿಂದ ಬಿಜೆಪಿ ಟಿಕೆಟ್ ಕೈ ತಪ್ಪುತ್ತೆ ನಾನು ಪಕ್ಷ ಬಿಡುತ್ತೇನೆ ಎಂದಿದ್ದ ಮಾಜಿ ಸಚಿವ ಹರತಾಳು ಹಾಲಪ್ಪ ಈಗ ಯೂಟರ್ನ್ ಹೊಡೆದಿದ್ದಾರೆ.

    ಸೊರಬಕ್ಕು ಹೋಗಲ್ಲ ಬಿಜೆಪಿಯನ್ನೂ ಬಿಡಲ್ಲ ಸಾಗರದಿಂದಲೇ, ಅದೂ ಬಿಜೆಪಿಯಿಂದಲೆ ಸ್ಪರ್ಧಿಸ್ತೀನಿ. ಸಾಗರ ಹಾಗೂ ಹೊಸನಗರದಲ್ಲಿ ಚುನಾವಣೆ ಕಚೇರಿ ತೆರೆಯಲು ಎರಡು ಜಾಗ ನೋಡಿ ಎಂದು ತಮ್ಮ ಬೆಂಬಲಿಗರಿಗೆ ಸೂಚಿಸಿದ್ದಾರೆ. ಇಂದು ಸಾಗರಕ್ಕೆ ಎಂಟ್ರಿ ಕೊಡುವ ಹಾಲಪ್ಪ ಇಂದಿನಿಂದಲೇ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ. ಇದನ್ನೂ ಓದಿ:  ಬಿಎಸ್‍ವೈ, ಬಿಜೆಪಿ, ಆರ್ ಎಸ್‍ಎಸ್ ಬೈದವ್ರಿಗೆ ಟಿಕೆಟ್ – ಮಾಜಿ ಸಚಿವ ಹರತಾಳು ಹಾಲಪ್ಪ ಆಕ್ರೋಶ

    2 ದಿನದ ಹಿಂದೆ ಬಿಜೆಪಿ ನಾಯಕರ ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಹಾಲಪ್ಪ ಈ ಹೊಸ ವರಸೆ ಆರಂಭಿಸಿದ್ದಾರೆ. ಇತ್ತ ಸಾಗರದಿಂದ ನನಗೆ ಬಿಜೆಪಿ ಟಿಕೆಟ್ ಸಿಗುತ್ತೆ ಎಂದು ಪಟಾಕಿ ಹೊಡೆದು ಸಂಭ್ರಮಿಸಿದ್ದ ಬೇಳೂರು ಗೋಪಾಲ ಕೃಷ ಅವರಿಗೆ ಈಗ ಹೊಸ ಸಂಕಷ್ಟ ಎದುರಾಗಿದೆ.

    ಬಿಜೆಪಿ ನಾಯಕರು ಹಾಲಪ್ಪ ಹಾಗೂ ಬೇಳೂರು ಗೋಪಾಲ ಕೃಷ್ಣ ಇಬ್ಬರಿಗೂ ಟಿಕೆಟ್ ಭರವಸೆ ನೀಡಿ ಕ್ಷೇತ್ರದಲ್ಲಿ ಜಂಗಿ ಕುಸ್ತಿಗೆ ಬಿಟ್ಟಂತಿದೆ. ಇಂದಿನಿಂದ ಸಾಗರ ಕ್ಷೇತ್ರದಲ್ಲಿ ಹಾಲಪ್ಪ ಹಾಗೂ ಬೇಳೂರು ಗೋಪಾಲಕೃಷ್ಣ ನಡುವೆ ಬಿಜೆಪಿ ಟಿಕೆಟ್‍ಗಾಗಿ ಭರ್ಜರಿ ಫೈಟ್ ಅಂತು ಆರಂಭವಾಗಲಿದೆ.