Tag: Beltangadi

  • ಆನ್‍ಲೈನ್ ಕ್ಲಾಸ್‍ಗಾಗಿ ದಟ್ಟಾರಣ್ಯದಲ್ಲಿ ಟೆಂಟ್ ಹಾಕಿ ಕುಳಿತ ವಿದ್ಯಾರ್ಥಿಗಳು

    ಆನ್‍ಲೈನ್ ಕ್ಲಾಸ್‍ಗಾಗಿ ದಟ್ಟಾರಣ್ಯದಲ್ಲಿ ಟೆಂಟ್ ಹಾಕಿ ಕುಳಿತ ವಿದ್ಯಾರ್ಥಿಗಳು

    ಮಂಗಳೂರು: ಆನ್‍ಲೈನ್ ಕ್ಲಾಸ್ ಗಾಗಿ ವಿದ್ಯಾರ್ಥಿಗಳು ದಿನವಿಡೀ ದಟ್ಟ ಅರಣ್ಯದಲ್ಲಿ ಟೆಂಟ್ ಹಾಕಿ ಕುಳಿತು ಶಿಕ್ಷಣ ಕಲಿಯಬೇಕಾದ ಅನಿವಾರ್ಯ ಘಟನೆ ದಕ್ಷಿಣ ಕನ್ನಡದಲ್ಲಿ ನಡೆದಿದೆ.

    ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಆನ್‍ಲೈನ್ ಕ್ಲಾಸ್ ಆರಂಭಿಸಲು ಸೂಚಿಸಿದೆ. ನೆಟ್ ವರ್ಕ್ ಇಲ್ಲದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ವಿದ್ಯಾರ್ಥಿಗಳು ಆನ್ ಲೈನ್ ಕ್ಲಾಸ್ ಗಾಗಿ ಸಮೀಪದ ಪೆರ್ಲ ಬೈಕರ ಗುಡ್ಡದಲ್ಲಿ ಟೆಂಟ್ ಹಾಕಿದ್ದಾರೆ. ಅರಣ್ಯದ ತುತ್ತ ತುದಿಯಲ್ಲಿ ಮಾತ್ರ ನೆಟ್‍ವರ್ಕ್ ಸಿಗೋದ್ರಿಂದ ಅಲ್ಲಿ ಬಟ್ಟೆಗಳಿಂದಲೇ ನಿರ್ಮಿಸಿದ ಟೆಂಟ್ ನಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ ನಾಲ್ಕು ಗಂಟೆಯವರೆಗೂ ವಿದ್ಯಾರ್ಥಿಗಳು ಆನ್‍ಲೈನ್ ಕ್ಲಾಸ್ ಗೆ ಹಾಜರಾಗುತ್ತಿದ್ದಾರೆ.

    ದಟ್ಟ ಅರಣ್ಯದಲ್ಲಿ ಕಾಡಾನೆ ಉಪಟಳದ ಜೊತೆಗೆ ಕಾಡು ಮೃಗಗಳ ದಾಳಿಯ ಭೀತಿಯ ಜೀವ ಭಯದಿಂದ, ಸೊಳ್ಳೆಗಳ ಕಾಟದೊಂದಿಗೆ ವಿದ್ಯಾರ್ಥಿಗಳು ಅನಿವಾರ್ಯವಾಗಿ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಪೋಷಕರು ಆತಂಕದಿಂದಲೇ ಮಕ್ಕಳನ್ನು ಅರಣ್ಯಕ್ಕೆ ಕಳಿಸುತ್ತಿದ್ದು ಊಟ, ತಿಂಡಿಯೊಂದಿಗೆ ಪೋಷಕರೂ ಕಾಡಿಗೆ ಹೋಗುತ್ತಿದ್ದಾರೆ. ಸ್ಥಳೀಯ ಶಾಸಕ ಹರೀಶ್ ಪೂಂಜಾರ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಯದೇ ಕಳೆದ ಕೆಲ ದಿನಗಳಿಂದ ಇದೇ ಪರಿಸ್ಥಿತಿ ಇದೆ.

  • ಬೆಳ್ತಂಗಡಿಯಲ್ಲಿ ಅಪರೂಪದ ಹಾವು ಪತ್ತೆ

    ಬೆಳ್ತಂಗಡಿಯಲ್ಲಿ ಅಪರೂಪದ ಹಾವು ಪತ್ತೆ

    ಮಂಗಳೂರು: ಝೀಬ್ರಾದ ರೀತಿಯ ಬಣ್ಣವನ್ನು ಹೋಲುವ ಅಪರೂಪದ ಹಾವು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಪತ್ತೆಯಾಗಿದೆ.

    ಬೆಳ್ತಂಗಡಿ ತಾಲೂಕಿನ ಕಲ್ಮಂಜ ಎಂಬಲ್ಲಿನ ಓಡಿಯಪ್ಪ ಎಂಬವರ ಮನೆ ಹಿತ್ತಿಲಿಗೆ ಆಗಮಿಸಿದ ಈ ಹಾವನ್ನು ಕಂಡು ಸ್ಥಳೀಯರು ಅಚ್ಚರಿಗೊಂಡಿದ್ದಾರೆ. ಮೈ ಪೂರ್ತಿ ಝೀಬ್ರಾದಂತೆ ಕಪ್ಪು ಮತ್ತು ಬಿಳಿಯ ಗೆರೆಗಳನ್ನು ಹೊಂದಿರುವ ಈ ಹಾವು, ಎರಡು ಅಡಿ ಉದ್ದ ಇತ್ತು. ಅಪರೂಪದ ಹಾವನ್ನು ಮಂಗಳೂರಿನ ಪಿಲಿಕುಳ ನಿಸರ್ಗಧಾಮಕ್ಕೆ ಬಿಡಲಾಗಿದೆ.

    ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹೊಳೆಮಕ್ಕಿ ಗ್ರಾಮದ ತೋಟದಲ್ಲಿ ನಾಯಿ ಹಾಗೂ ಹಾವಿನ ಕಾಳಗದ ವೇಳೆ ಅಪರೂಪದ ಫೋಟೋ ಪತ್ತೆಯಾಗಿದೆ. ಸೂರ್ಯನ ಕಿರಣಕ್ಕೆ ಹಾವಿನ ತಲೆ ಹೊಳೆಯುತ್ತಿರುವ ಫೋಟೋ ದೇಶಾದ್ಯಂತ ವೈರಲ್ ಆಗಿತ್ತು.

    ಅವಿನಾಶ್ ಎಂಬವರ ತೋಟದಲ್ಲಿ ನಾಯಿ ಮತ್ತು ನಾಗರಹಾವು ಮಧ್ಯೆ ಅರ್ಧ ಗಂಟೆಗಳ ಕಾಲ ಜಗಳ ನಡೆದಿತ್ತು. ಶ್ವಾನದ ಮೇಲೆ ನಾಗರಾಜ ರೋಷಾವೇಷವಾಗಿ ಹೋರಾಡಿದೆ. ಇತ್ತ ನಾಗರ ಹಾವು ನಾಯಿಯ ಜಗಳ ಕಂಡು ಮಾಲೀಕರು ದಂಗಾಗಿದ್ದರು. ಸ್ವಲ್ಪ ಹೊತ್ತಾದ ಬಳಿಕ ನಾಯಿ ಸಹವಾಸವೇ ಬೇಡ ಎಂದು ನಾಗರ ಹಾವು ವಾಪಸ್ ಹೋಗಿದೆ. ಈ ಘಟನೆಯನ್ನು ತೋಟದ ಮಾಲೀಕರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ವಿಡಿಯೋ ವೈರಲ್ ಆಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬುರ್ಖಾ ಧರಿಸಿ ಪರಾರಿಯಾಗಲು ಯತ್ನಿಸಿದ್ದ ಶಿರೂರು ಶ್ರೀ ಆಪ್ತೆ ರಮ್ಯಾ ಶೆಟ್ಟಿ ಬಂಧನ

    ಬುರ್ಖಾ ಧರಿಸಿ ಪರಾರಿಯಾಗಲು ಯತ್ನಿಸಿದ್ದ ಶಿರೂರು ಶ್ರೀ ಆಪ್ತೆ ರಮ್ಯಾ ಶೆಟ್ಟಿ ಬಂಧನ

    ಮಂಗಳೂರು: ಉಡುಪಿ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅಸಹಜ ಸಾವು ಪ್ರಕರಣ ಕುರಿತಂತೆ ಪೊಲೀಸ್ ವಿಚಾರಣೆ ಬಳಿಕ ರಮ್ಯಾ ಶೆಟ್ಟಿ ಪರಾರಿಯಾಗಲು ಯತ್ನಿಸಿದ್ದಾರೆ.

    ಬುರ್ಖಾ ಹಾಕಿ ರಮ್ಯಾ ಪರಾರಿಯಾಗಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಅಳದಂಗಡಿ ಶ್ರೀ ಸತ್ಯದೇವತೆ ದೇವಸ್ಥಾನದ ಎದುರು ಪೊಲೀಸರು ಆಕೆಯನ್ನು ಹಿಡಿದಿದ್ದಾರೆ.

    ಮೂವರು ಮಹಿಳೆಯರೊಂದಿಗೆ ಎರ್ಟಿಗಾ ಕಾರ್ ನಲ್ಲಿ ರಮ್ಯಾ ಶೆಟ್ಟಿ ತೆರಳುತ್ತಿದ್ದಳು. ಈ ವೇಳೆ ಅಳದಂಗಡಿ ದೇವಸ್ಥಾನದ ಬಳಿ ಕಾರ್ ಪಂಕ್ಚರ್ ಆಗಿದೆ. ಸಂಶಯಗೊಂಡ ಸ್ಥಳೀಯರಿಂದ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಉಡುಪಿ ಪೊಲೀಸರ ಸೂಚನೆ ಮೇರೆಗೆ ಕಾರ್ ಫಾಲೋ ಮಾಡಿಕೊಂಡು ಬರುತ್ತಿದ್ದ ವೇಣೂರು ಪೊಲೀಸರು, ಆಕೆಯನ್ನು ಹಿಡಿದು ಉಡುಪಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.