Tag: Belsgavi

  • ಅನಾರೋಗ್ಯಕ್ಕೀಡಾದ ನಾಯಿಗೆ ಚಿತ್ರಹಿಂಸೆ- ಹಗ್ಗ ಕಟ್ಟಿ ಬೈಕ್‍ನಲ್ಲಿ ಎಳೆದೊಯ್ದ ಮಾಲೀಕ!

    ಅನಾರೋಗ್ಯಕ್ಕೀಡಾದ ನಾಯಿಗೆ ಚಿತ್ರಹಿಂಸೆ- ಹಗ್ಗ ಕಟ್ಟಿ ಬೈಕ್‍ನಲ್ಲಿ ಎಳೆದೊಯ್ದ ಮಾಲೀಕ!

    ಬೆಳಗಾವಿ: ನಿಷ್ಠೆ ಅಂದರೆ ನಾಯಿ ಎಂದು ಥಟ್ಟನೆ ಹೇಳುತ್ತಾರೆ. ಆದರೆ ಇಲ್ಲೊಂದು ಕಡೆ ವರ್ಷಗಟ್ಟಲೆ ಸ್ವಾಮಿನಿಷ್ಠೆ ಮೆರೆದ ನಾಯಿಗೆ ಕ್ರೂರ ಶಿಕ್ಷೆ ಕೊಡಲಾಗಿದೆ.

    ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದ ಹೃದಯವಿದ್ರಾವಕ ಘಟನೆ ನಡೆದಿದ್ದು, ಅನಾರೋಗ್ಯಕ್ಕೆ ತುತ್ತಾದ ಶ್ವಾನವನ್ನು ಅದರ ಮಾಲೀಕ ಬೈಕ್ ಗೆ ಕಟ್ಟಿ ಒಂದು ಕಿಲೋಮೀಟರ್ ಗಿಂತ ಹೆಚ್ಚು ದೂರ ಎಳೆದೊಯ್ಯುವ ಮೂಲಕ ಅಮಾನವೀಯತೆ ಮೆರೆದಿದ್ದಾನೆ.

    ಜೀವಂತ ನಾಯಿಯನ್ನು ಎಳೆದೊಯ್ಯುತ್ತಿದ್ದ ಘಟನೆ ನೋಡಿ ಶ್ವಾನ ಪ್ರಿಯರು ಅದರ ರಕ್ಷಣೆ ಮಾಡಿದ್ದಾರೆ. ಅನಾರೋಗ್ಯಕ್ಕೆ ತುತ್ತಾದ ನಾಯಿಗೆ ಚಿಕಿತ್ಸೆ ಕೊಡಿಸಿ ಗುಣಮುಖವಾಗಿಸುವ ಬದಲು ಹೀಗೆ ಎಳೆದೊಯ್ದಿರುವುದಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕಿದ್ದಾರೆ.

    ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಪ್ರಾಣಿ ಪ್ರಿಯರಿಂದ ಆಕ್ರೋಶವ್ಯಕ್ತವಾಗಿದ್ದು, ನಾಯಿ ಮಾಲೀಕ ಯಾರೇ ಆಗಿದ್ದರೂ ಅವರ ಮೇಲೆ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.