Tag: belli Prakash

  • ಕಡೂರು ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅಳಿಯನ ಮೇಲೆ ಹಲ್ಲೆ – ಹಾಲಿ ಶಾಸಕನ ಸಂಬಂಧಿ ವಿರುದ್ಧ ಆರೋಪ

    ಕಡೂರು ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅಳಿಯನ ಮೇಲೆ ಹಲ್ಲೆ – ಹಾಲಿ ಶಾಸಕನ ಸಂಬಂಧಿ ವಿರುದ್ಧ ಆರೋಪ

    ಚಿಕ್ಕಮಗಳೂರು: ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅಳಿಯನ ಮೇಲೆ ಐವರು ಯುವಕರು ನಡು ರಸ್ತೆಯಲ್ಲಿ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ ಘಟನೆ ಕಡೂರಿನ ಬಸವೇಶ್ವರ ವೃತ್ತದಲ್ಲಿ ನಡೆದಿದೆ.

    ಭಾನುವಾರ ರಾತ್ರಿ ಬೆಳ್ಳಿ ಪ್ರಕಾಶ್ ಅಳಿಯ ಸಂದೇಶ್ ಬೆಂಗಳೂರಿನಿಂದ ಹಿಂದಿರುಗುವಾಗ ರಸ್ತೆಯಲ್ಲಿ ಸೈಡ್ ಬಿಡುವ ವಿಚಾರಕ್ಕೆ ಗಲಾಟೆ ನಡೆದಿದೆ, ಈ ವೇಳೆ ಯುವಕರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.ಇದನ್ನೂ ಓದಿ: ವಿದೇಶದಲ್ಲಿ ಕುಳಿತು ಬೆಂಗಳೂರಲ್ಲಿ ಸೈಬರ್ ವಂಚನೆ – ಹ್ಯಾಕರ್ಸ್‌ ಲಿಂಕ್‌ನಲ್ಲಿದ್ದ ಬೆಳಗಾವಿ ಮೂಲದ ಆರೋಪಿ ಅರೆಸ್ಟ್‌

    ಹಲ್ಲೆ ಮಾಡಿದವರು ಕಡೂರು ಶಾಸಕ ಕೆ.ಎಸ್.ಆನಂದ್ ಅವರ ಸಂಬಂಧಿಗಳು ಎಂದು ಬಿಜೆಪಿಗರು ಆರೋಪಿಸಿದ್ದಾರೆ. ಈ ಘಟನೆಯನ್ನು ಖಂಡಿಸಿ ಬೆಳ್ಳೆ ಪ್ರಕಾಶ್ 500 ಜನಕ್ಕಿಂತ ಹೆಚ್ಚಿನ ಕಾರ್ಯಕರ್ತರ ಜೊತೆ ಮಧ್ಯರಾತ್ರಿಯೇ ಪೊಲೀಸ್‌ ಠಾಣೆಯ ಮೂಮದೆ ಪ್ರತಿಭಟನೆ ನಡೆಸಿದ್ದಾರೆ.

    ಹಲ್ಲೆ ನಡೆಸಿದ ಸಂತೋಷ್ ಸೇರಿ ಐವರ ವಿರುದ್ಧ ಕಡೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸ್ನೇಹಿತನೊಂದಿಗೆ ಸಲುಗೆ ಕಂಡು 4 ಮಕ್ಕಳ ತಾಯಿಯ ಹತ್ಯೆ – ಕೊಂದು ಅದೇ ಗೆಳೆಯನ ಜೊತೆ ಎಸ್ಕೇಪ್ ಆಗಿದ್ದ ಲವ್ವರ್‌ ಅರೆಸ್ಟ್

  • ರಾಷ್ಟ್ರದ ಮಹಾಮಂತ್ರಿ ಇರೋದು ಕಾಫಿನಾಡಲ್ಲಿ, ಸಿ.ಟಿ.ರವಿಯಿಂದ ಜಿಲ್ಲೆಯಲ್ಲಿ ಏನು ಬೇಕಾದ್ರು ಆಗಬಹುದು: ಬೆಳ್ಳಿ ಪ್ರಕಾಶ್

    ರಾಷ್ಟ್ರದ ಮಹಾಮಂತ್ರಿ ಇರೋದು ಕಾಫಿನಾಡಲ್ಲಿ, ಸಿ.ಟಿ.ರವಿಯಿಂದ ಜಿಲ್ಲೆಯಲ್ಲಿ ಏನು ಬೇಕಾದ್ರು ಆಗಬಹುದು: ಬೆಳ್ಳಿ ಪ್ರಕಾಶ್

    ಚಿಕ್ಕಮಗಳೂರು: ಇಡೀ ರಾಷ್ಟ್ರದ ಮಹಾಮಂತ್ರಿ ಇರೋದು ನಮ್ಮ ಜಿಲ್ಲೆಯಲ್ಲಿ. ಅವರಿಂದ ಇಡೀ ಜಿಲ್ಲೆಯಲ್ಲಿ ಏನು ಬೇಕಾದರೂ ಆಗಬಹುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬಗ್ಗೆ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಹಾಡಿ ಹೊಗಳಿದ್ದಾರೆ.

    ಕಡೂರು ತಾಲೂಕಿನ ಸಖರಾಯಪಟ್ಟಣದ ಐತಿಹಾಸಿಕ ಅಯ್ಯನಕೆರೆ ಕೆರೆಗೆ ಬಾಗಿಣ ಅರ್ಪಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಬೆಳ್ಳಿ ಪ್ರಕಾಶ್ ಅವರು, ಇಡೀ ರಾಷ್ಟ್ರದ ಮಹಾಮಂತ್ರಿ ಇರೋದೆ ನಮ್ಮ ಜಿಲ್ಲೆಯಲ್ಲಿ. ಆ ಮಹಾಮಂತ್ರಿ ಜಿಲ್ಲೆ, ರಾಜ್ಯ, ರಾಷ್ಟ್ರದ ಸಮಗ್ರ ಅಭಿವೃದ್ಧಿ ಬಗ್ಗೆ ಯೋಚನೆ ಮಾಡುತ್ತಾರೆ. ಸಿ.ಟಿ.ರವಿ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿದ್ದಾರೆ. ಅವರ ವಿಶೇಷ ಪ್ರಯತ್ನದಿಂದ ಜಿಲ್ಲೆಯಲ್ಲಿ ಏನು ಬೇಕಾದರೂ ಆಗಬಹುದು ಅನ್ನೋ ಸನ್ನಿವೇಶ ನಿರ್ಮಾಣವಾಗಿದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಬಾರ್ ಬೇಕು, ಬೇಡ -ಡಿಸಿ ಕಚೇರಿ ಮುಂದೆ ಮಹಿಳೆಯರು, ಪುರುಷರ ಹೈಡ್ರಾಮಾ

    ರಾಜ್ಯದಲ್ಲಿ ಚಿಕ್ಕಮಗಳೂರು ಜಿಲ್ಲೆ ಬಲಿಷ್ಠ ಜಿಲ್ಲೆಯಾಗುತ್ತಿದೆ. ಸಂಪುಟ ರಚಿಸುವಾಗ ಚಿಕ್ಕಮಗಳೂರು ಜಿಲ್ಲೆಯನ್ನು ಕಡೆಗಣಿಸಿಲ್ಲ. ನಾನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷನಾಗಿದ್ದೇನೆ. ತರೀಕೆರೆ ಶಾಸಕ ಡಿ.ಎಸ್. ಸುರೇಶ್ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ. ಎಂ.ಕೆ. ಪ್ರಾಣೇಶ್ ವಿಧಾನ ಪರಿಷತ್ ಉಪ ಸಭಾಪತಿಗಳಾಗಿದ್ದಾರೆ. ಮೂಡಿಗೆರೆ ಶಾಸಕ ಕುಮಾರಸ್ವಾಮಿಗೂ ಅಧಿಕಾರ ಸಿಗುತ್ತದೆ. ಸಚಿವ ಸಂಪುಟ ರಚನೆ ವೇಳೆ ಸಹಜವಾಗಿ ಕೆಲವರಿಗೆ ಅಸಮಾಧಾನ ಆಗಿದೆ. ಅವರೆಲ್ಲರನ್ನು ಸಮಾಧಾನ ಮಾಡುವ ಶಕ್ತಿ ಪಕ್ಷ ಹಾಗೂ ಮುಖ್ಯಮಂತ್ರಿಗಳಿಗಿದೆ. ಚಿಕ್ಕಮಗಳೂರು ಜಿಲ್ಲೆಗೆ ಸಂಪುಟದಲ್ಲಿ ಅನ್ಯಾಯವಾಗಿಲ್ಲ ಎಂದು ಬೆಳ್ಳಿ ಪ್ರಕಾಶ್ ಪಕ್ಷವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

  • ನಾನಿನ್ನೂ ಬೆಳೆಯುತ್ತಿರೋನು, ರಿಯಾಕ್ಷನ್ ಬೇಡ: ಗಲಾಟೆ ಬಗ್ಗೆ ಪ್ರತಿಕ್ರಿಯೆಗೆ ಬೆಳ್ಳಿ ಪ್ರಕಾಶ್ ನಕಾರ

    ನಾನಿನ್ನೂ ಬೆಳೆಯುತ್ತಿರೋನು, ರಿಯಾಕ್ಷನ್ ಬೇಡ: ಗಲಾಟೆ ಬಗ್ಗೆ ಪ್ರತಿಕ್ರಿಯೆಗೆ ಬೆಳ್ಳಿ ಪ್ರಕಾಶ್ ನಕಾರ

    ಬೆಂಗಳೂರು: ವಿಧಾನಸೌಧದ ಲಾಂಜ್‍ನಲ್ಲಿರುವ ಕ್ಯಾಂಟೀನ್‍ನಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಶಾಸಕ ಬೆಳ್ಳಿ ಪ್ರಕಾಶ್ ನಿರಾಕರಿಸಿದ್ದಾರೆ.

    ಮಾಧ್ಯಮಗಳನ್ನು ಕಂಡ ಕೂಡಲೇ ಅಣ್ಣತಮ್ಮಂದಿರ ಗಲಾಟೆ ಬಿಡ್ರಣ್ಣ, ನಾನು ಇನ್ನೂ ಬೆಳೆಯುತ್ತಿರೋನು, ರಿಯಾಕ್ಷನ್ ಬೇಡ ಎಂದು ಹೇಳಿ ಹೊರಟಿದ್ದಾರೆ.

    ಏನಿದು ಗಲಾಟೆ?:
    ಕ್ಯಾಂಟೀನ್ ನಲ್ಲಿ ಇಂದು ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಮತ್ತು ಸಚಿವ ನಾರಾಯಣಗೌಡ ನಡುವೆ ಜಗಳ ನಡೆದಿದೆ. ಈ ಗಲಾಟೆ ಹೊಡೆದಾಟದ ಹಂತಕ್ಕೂ ಹೋಗಿದೆ. ಈ ಗಲಾಟೆ ಮಾಜಿ ಸಿಎಂ ಸಿದ್ದರಾಮಯ್ಯ, ಈಶ್ವರಪ್ಪ, ಸೋಮಣ್ಣ, ಸಿ.ಡಿ.ರವಿ ಎಲ್ಲರ ಸಮ್ಮುಖದಲ್ಲಿ ನಡೆದಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಕಡೂರು ಕ್ಷೇತ್ರಕ್ಕೆ ತೋಟಗಾರಿಕೆ ಇಲಾಖೆಯಿಂದ ನೀಡಬೇಕಿದ್ದ ಅನುದಾನ ತಾರತಮ್ಯವಾದ ಹಿನ್ನೆಲೆಯಲ್ಲಿ ಗಲಾಟೆ ನಡೆದಿದೆ. ಗಲಾಟೆಯಲ್ಲಿ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಅವರು ಸಚಿವ ನಾರಾಯಣಗೌಡ ಅವರಿಗೆ ಏಕವಚನದಲ್ಲಿ ಬೈದಿದ್ದಾರೆ ಎನ್ನಲಾಗಿದೆ. ಬೆಳ್ಳಿ ಪ್ರಕಾಶ್ ಮೊದಲ ಬಾರಿ ಗೆದ್ದು ಕಡೂರು ಶಾಸಕರಾಗಿದ್ದಾರೆ. ಅನೇಕ ತಿಂಗಳ ಹಿಂದೆಯೇ ತಮ್ಮ ಕ್ಷೇತ್ರಕ್ಕೆ ಅನುದಾನ ಕೊಡಿ ಎಂದು ಮನವಿ ಮಾಡಿಕೊಂಡಿದ್ದರು. ಆದರೆ ಸಚಿವರು ಅನುದಾನ ಕೊಡದೇ ಸತಾಯಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಅಸಮಾಧನಾಗೊಂಡಿದ್ದ ಶಾಸಕ ಬೆಳ್ಳಿ ಕ್ಯಾಂಟೀನ್‍ನಲ್ಲಿ ಅನುದಾನ ಬಿಡುಗಡೆಯ ಮಾಡದ್ದಕ್ಕೆ ಆಕ್ರೋಶ ವ್ಯಕ್ತಪಿಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ಗಲಾಟೆಯಲ್ಲಿ ಸಚಿವ ನಾರಾಯಣ ಗೌಡರಿಗೆ ಏಟು ಬಿದ್ದಿದ್ದು, ಶಾಸಕ ಬೆಳ್ಳಿ ಪ್ರಕಾಶ್ ಅವರ ಹೊಟ್ಟೆಗೆ ಗುದ್ದಿದ್ದಾರೆ ಎನ್ನಲಾಗಿದೆ. ಈ ವೇಳೆ ಜೆಡಿಎಸ್ ಶಾಸಕ ಅನ್ನಧಾನಿ ಬಂದು ಹೊಡೆದಾಟ ಬಿಡಿಸಿದ್ದಾರೆ. ಸಿದ್ದರಾಮಯ್ಯ ಕಣ್ಣ ಮುಂದೆಯೇ ಶಾಸಕ ಬೆಳ್ಳಿ ಪ್ರಕಾಶ್ ಮುಷ್ಟಿ ಬಿಗಿ ಹಿಡಿದು ನಾರಾಯಣ ಗೌಡರ ಹೊಟ್ಟೆಗೆ ಬಲವಾಗಿ ಗುದ್ದಿದ್ದಾರೆ ಎಂದು ಹೇಳಲಾಗುತ್ತಿದೆ.

  • ಕ್ಯಾಂಟೀನ್‍ನಲ್ಲಿ ಸಚಿವರು, ಶಾಸಕರ ಗಲಾಟೆ – ಹೊಡೆದಾಟದ ಹಂತಕ್ಕೆ ಹೋದ ಜಗಳ

    ಕ್ಯಾಂಟೀನ್‍ನಲ್ಲಿ ಸಚಿವರು, ಶಾಸಕರ ಗಲಾಟೆ – ಹೊಡೆದಾಟದ ಹಂತಕ್ಕೆ ಹೋದ ಜಗಳ

    ಬೆಂಗಳೂರು: ಒಂದೆಡೆ ಕೊರೊನಾ ನಡುವೆಯೂ ಇಂದಿನಿಂದ ಅಧಿವೇಶನ ಶುರುವಾಗಿದೆ. ಮತ್ತೊಂದೆಡೆ ಭೂ ಸುಧಾರಣೆ, ವಿದ್ಯುತ್ ಮತ್ತು ಎಪಿಎಂಸಿ ಕಾಯ್ದೆ ವಿರೋಧಿಸಿ ರೈತ ಮುಖಂಡರು ರಸ್ತೆಗಿಳಿದಿದ್ದು, ಸಿಲಿಕಾನ್ ಸಿಟಿಯಲ್ಲಿ ಸುಮಾರು ಒಂದೂವರೆ ಕಿಲೋ ಮೀಟರ್ ಟ್ರಾಫಿಕ್ ಜಾಮ್ ಉಂಟಾಗಿದೆ. ಈ ಮಧ್ಯೆ ಕ್ಯಾಂಟೀನ್‍ನಲ್ಲಿ ಸಚಿವರು ಮತ್ತು ಶಾಸಕರ ಗಲಾಟೆ ನಡೆದಿದೆ.

    ವಿಧಾನಸೌಧದ ಲಾಂಜ್‍ನಲ್ಲಿರುವ ಕ್ಯಾಂಟೀನ್‍ನಲ್ಲಿ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಮತ್ತು ಸಚಿವ ನಾರಾಯಣಗೌಡ ನಡುವೆ ಜಗಳ ನಡೆದಿದೆ. ಈ ಗಲಾಟೆ ಹೊಡೆದಾಟದ ಹಂತಕ್ಕೂ ಹೋಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

     

    ಕಡೂರು ಕ್ಷೇತ್ರಕ್ಕೆ ತೋಟಗಾರಿಕೆ ಇಲಾಖೆಯಿಂದ ನೀಡಬೇಕಿದ್ದ ಅನುದಾನ ತಾರತಮ್ಯವಾದ ಹಿನ್ನೆಲೆಯಲ್ಲಿ ಗಲಾಟೆ ನಡೆದಿದೆ. ಗಲಾಟೆಯಲ್ಲಿ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಅವರು ಸಚಿವ ನಾರಾಯಣಗೌಡ ಅವರಿಗೆ ಏಕವಚನದಲ್ಲಿ ಬೈದಿದ್ದಾರೆ ಎನ್ನಲಾಗಿದೆ. ಈ ಗಲಾಟೆ ಮಾಜಿ ಸಿಎಂ ಸಿದ್ದರಾಮಯ್ಯ, ಈಶ್ವರಪ್ಪ, ಸೋಮಣ್ಣ, ಸಿ.ಡಿ.ರವಿ ಎಲ್ಲರ ಸಮ್ಮುಖದಲ್ಲಿ ನಡೆದಿದೆ.

     

    ಬೆಳ್ಳಿ ಪ್ರಕಾಶ್ ಮೊದಲ ಬಾರಿ ಗೆದ್ದು ಕಡೂರು ಶಾಸಕರಾಗಿದ್ದಾರೆ. ಅನೇಕ ತಿಂಗಳ ಹಿಂದೆಯೇ ತಮ್ಮ ಕ್ಷೇತ್ರಕ್ಕೆ ಅನುದಾನ ಕೊಡಿ ಎಂದು ಮನವಿ ಮಾಡಿಕೊಂಡಿದ್ದರು. ಆದರೆ ಸಚಿವರು ಅನುದಾನ ಕೊಡದೇ ಸತಾಯಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಅಸಮಾಧನಾಗೊಂಡಿದ್ದ ಶಾಸಕ ಬೆಳ್ಳಿ ಕ್ಯಾಂಟೀನ್‍ನಲ್ಲಿ ಅನುದಾನ ಬಿಡುಗಡೆಯ ಮಾಡದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

     

    ಶಾಸಕ-ಸಚಿವರ ಮಾತಿನ ಜಗಳ:
    ಬೆಳ್ಳಿ ಪ್ರಕಾಶ್: ನನ್ನ ಕ್ಷೇತ್ರದ ಕೆಲಸ ಮಾಡಿಕೊಡದವ ನೀನು ಎಂಥಾ ಸಚಿವ.
    ಸಚಿವ ನಾರಾಯಣ ಗೌಡ: ಆಫೀಸ್‍ಗೆ ಬಂದು ಮಾತಾಡು. ಇಲ್ಲಿ ಹೀಗೆ ಮಾತಾಡೊದಲ್ಲ. ಮೊದಲು ಮಾಸ್ಕ್ ಹಾಕ್ಕೊಂಡು ಮಾತಾಡು.
    ಬೆಳ್ಳಿ ಪ್ರಕಾಶ್: ಮಾಸ್ಕ್ ಹಾಕಿಕೊಳ್ಳುವುದು ನನಗೆ ಗೊತ್ತು. ನಿನ್ನ ಆಫೀಸ್‍ಗೆ ಏನ್ ಬರೋದು!
    ಸಚಿವ ನಾರಾಯಣ ಗೌಡ: ಸರಿಯಾಗಿ ಮಾತಾಡು. ಇಲ್ಲಿ ಹೀಗೆಲ್ಲ ಮಾತಾಡ್ತಿಯಾ, ನಾನು ಒಬ್ಬ ಸಚಿವ. ನನಗೂ ಮಾತಾಡೊಕೆ ಬರುತ್ತೆ.

     

    ಈ ಗಲಾಟೆಯಲ್ಲಿ ಸಚಿವ ನಾರಾಯಣ ಗೌಡರಿಗೆ ಏಟು ಬಿದ್ದಿದ್ದು, ಶಾಸಕ ಬೆಳ್ಳಿ ಪ್ರಕಾಶ್ ಅವರ ಹೊಟ್ಟೆಗೆ ಗುದ್ದಿದ್ದಾರೆ ಎನ್ನಲಾಗಿದೆ. ಈ ವೇಳೆ ಜೆಡಿಎಸ್ ಶಾಸಕ ಅನ್ನದಾನಿ ಬಂದು ಹೊಡೆದಾಟ ಬಿಡಿಸಿದ್ದಾರೆ. ಸಿದ್ದರಾಮಯ್ಯ ಕಣ್ಣ ಮುಂದೆಯೇ ಶಾಸಕ ಬೆಳ್ಳಿ ಪ್ರಕಾಶ್ ಮುಷ್ಟಿ ಬಿಗಿಹಿಡಿದು ನಾರಾಯಣ ಗೌಡರ ಹೊಟ್ಟೆಗೆ ಬಲವಾಗಿ ಗುದ್ದಿದ್ದಾರೆ ಎಂದು ಹೇಳಲಾಗುತ್ತಿದೆ.

    ಶಾಸಕರು ಕೇಳಿದರೂ ಕ್ಷೇತ್ರಕ್ಕೆ ಅನುದಾನ ನೀಡದೆ ಸಚಿವರು ಸತಾಯಿಸುತ್ತಿರುವುದರಿಂದ ಇನ್ನೂ ಸಾಮಾನ್ಯ ಜನರು ಮನವಿ ಮಾಡಿದರೆ ಕೆಲಸ ಮಾಡಿಕೊಡುತ್ತಾರ ಎಂಬ ಪ್ರಶ್ನೆ ಎದ್ದಿದೆ.