Tag: Bellary Police

  • ನಕಲಿ ಇ-ಮೇಲ್ ಬಳಸಿ ಕಲ್ಲಿದ್ದಲು ಸರಬರಾಜು ಕಂಪನಿಗೆ 2.11 ಕೋಟಿ ಪಂಗನಾಮ – ಸಿಕ್ಕಿಬಿದ್ದ ಸೈಬರ್‌ ವಂಚಕ

    ನಕಲಿ ಇ-ಮೇಲ್ ಬಳಸಿ ಕಲ್ಲಿದ್ದಲು ಸರಬರಾಜು ಕಂಪನಿಗೆ 2.11 ಕೋಟಿ ಪಂಗನಾಮ – ಸಿಕ್ಕಿಬಿದ್ದ ಸೈಬರ್‌ ವಂಚಕ

    ಬಳ್ಳಾರಿ: ಇಲ್ಲಿನ ಸೈಬರ್ ಕ್ರೈಮ್ ಇತಿಹಾಸದಲ್ಲಿ ಸೈಬರ್ ಪೋಲಿಸರು (Bellary Cyber Police) ಅತಿದೊಡ್ಡ ಭೇಟೆಯಾಡಿದ್ದು, ಮಧ್ಯಪ್ರದೇಶದವರೆಗೂ (Madhya Pradesh) ಹೋಗಿ ಕೋಟಿ ಕೋಟಿ ವಂಚನೆ ಮಾಡಿದ್ದ ಆರೋಪಿಯನ್ನ ಖೆಡ್ಡಕ್ಕೆ ಕೆಡುವುದರಲ್ಲಿ ಸಫಲರಾಗಿದ್ದಾರೆ. ನಕಲಿ ಈ ಮೇಲ್ ಬಳಸಿ ಕಲ್ಲಿದ್ದಲು ಸರಬರಾಜು ಕಂಪನಿಗೆ 2 ಕೋಟಿ 11 ಲಕ್ಷದ 50 ಸಾವಿರ ರೂ. ವಂಚಿಸಿದ್ದ ಮಧ್ಯಪ್ರದೇಶ ಮೂಲದ ಆರೋಪಿ ಅಜಯ್ ಕುಮಾರ್ ಜೈಸ್ವಾಲ್ ಹಣದ ಸಮೇತ ಅರೆಸ್ಟ್ ಆಗಿದ್ದಾನೆ.

    ಬಳ್ಳಾರಿಯ (Bellary) ಹಿಂದೂಸ್ತಾನ್ ಕ್ಯಾಲ್ಸೀನ್ಡ್ ಮೆಟಲ್ ಪ್ರೈವೇಟ್ ಲಿಮಿಟೆಟ್ ಕಂಪನಿ ಅಗರ್ವಾಲ್ ಕೋಲ್ ಕಾರ್ಪೋರೇಷನ್ ಕಂಪನಿಯಿಂದ ಕಲ್ಲಿದ್ದಲು ಖರೀದಿಸಿತ್ತು. ಹೀಗಾಗಿ ಹಿಂದುಸ್ತಾನ್ ಕಂಪನಿ ಅಗರ್ವಾಲ್ ಕಂಪನಿಗೆ 2.11 ಕೋಟಿ ರೂ. ಕೊಡಬೇಕಿತ್ತು. ಆರೋಪಿ ಅಜಯ್ ಕುಮಾರ್ ಜೈಸ್ವಾಲ್ ಇದರ ಬಗ್ಗೆ ಮಾಹಿತಿ ಪಡೆದಿದ್ದ. ಅಗರ್ವಾಲ್ ಕಂಪನಿಯ ನಕಲಿ ಇ-ಮೇಲ್‌ ಕ್ರಿಯೇಟ್‌ ಮಾಡಿ ಕಂಪನಿಯ ಬ್ಯಾಂಕ್ ಅಕೌಂಟ್ ನಂಬರ್ ಚೇಜ್ ಆಗಿದೆ ಅಂತಾ ಹಿಂದುಸ್ತಾನ್‌ಗೆ ಕಳಿಸಿದ್ದ. ಹೀಗಾಗಿ ಹಿಂದುಸ್ತಾನ್ ಕಂಪನಿಯವರು ಅಜಯ್ ಕುಮಾರ್ ಜೈಸ್ವಾಲ್ ಕಳಿಸಿದ್ದ ಅಕೌಂಟ್ ನಂಬರ್‌ಗೆ ಹಣ ಹಾಕಿದ್ದರು. ಅನುಮಾನ ಬರಬಾರದು ಅನ್ನೋ ಕಾರಣಕ್ಕೆ ತನ್ನ ಖಾತೆಗೆ ಬಂದ ಹಣವನ್ನ ಇತರೆ 18 ಖಾತೆಗಳಿಗೆ ಹಾಕಿ ಡ್ರಾ ಮಾಡಿದ್ದ. ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ ದುರಂತ: ಮತ್ತೆ ಶವಗಳಿಗೆ ಶೋಧ – ಕಾರವಾರ ಬಂದರಿಗೆ ಡ್ರಜ್ಜಿಂಗ್ ಬೋಟ್!

    ವಂಚನೆ ಕುರಿತು ಸೆಪ್ಟೆಂಬರ್ 3 ರಂದು ಹಣ ವಂಚನೆ ಗೊತ್ತಾಗಿ, ಬಳ್ಳಾರಿ ಸೈಬರ್ ಠಾಣೆಗೆ ಹಿಂದೂಸ್ತಾನ್ ಕಂಪನಿಯಿಂದ ದೂರು ದಾಖಲಿಸಲಾಗಿತ್ತು. ಕೂಡಲೇ ಬಳ್ಳಾರಿ ಎಸ್ಪಿ ಶೊಭಾರಾಣಿ ಅವರಿಂದ ಪ್ರಕರಣ ಭೇದಿಸಲು ಸೈಬರ್ ಕ್ರೈಮ್ ಡಿಎಸ್‌ಪಿ ಸಂತೋಷ್ ನೇತೃತ್ವದ ತಂಡ ರಚನೆ ಮಾಡಿದ್ರು. ಕೆವೈಸಿ ಹಾಗೂ ಹಣ ವರ್ಗಾವಣೆಯಾದ ಖಾತೆ ಜಾಡು ಹಿಡಿದು ಮಧ್ಯಪ್ರದೇಶದ ಸಿದ್ದಿ ಜಿಲ್ಲೆಯಲ್ಲಿ ಅಡಗಿದ್ದ ಆರೋಪಿಯನ್ನ ಬಂಧಿಸಿದ್ದು, ಬಂಧಿತ ಆರೋಪಿಯಿಂದ 1 ಕೋಟಿ, 21 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ.

    ಅಲ್ಲದೇ ಆರೋಪಿ ಬೇರೆ ಬೇರೆ ಖಾತೆಗೆ ಹಾಕಿದ್ದ 27.97 ಲಕ್ಷ ಹಣ ಫ್ರೀಜ್ ಮಾಡಿಸಿದ್ದಾರೆ. ಇನ್ನೂ ಆರೋಪಿ ಅಜಯ್ ಕುಮಾರ್ ಜೈಸ್ವಾಲ್ ಹಿಂದೆ ದೆಹಲಿ ಮೂಲದ ಕುಖ್ಯಾತ ವ್ಯಕ್ತಿಯ ಕೈವಾಡ ಶಂಕೆ ಇದೆ ಎನ್ನಲಾಗಿದ್ದು, ಪೊಲೀಸರ ತನಿಖೆ ಚುರುಕುಗೊಳಿಸಿದ್ದಾರೆ. ಇದನ್ನೂ ಓದಿ: ಇಂದಿನಿಂದ ಭಾರತ v/s ಬಾಂಗ್ಲಾ ಟೆಸ್ಟ್‌ ಸರಣಿ ಶುರು – ವರ್ಕೌಟ್‌ ಆಗುತ್ತಾ ಗಂಭೀರ್‌ ಪ್ಲ್ಯಾನ್‌?

  • ಬಹಿರ್ದೆಸೆಗೆ ತೆರಳಿದ್ದ ಬಾಲಕಿ ಅನುಮಾನಸ್ಪದ ಸಾವು – ಪೋಷಕರಿಂದ ಕೊಲೆ ಆರೋಪ!

    ಬಹಿರ್ದೆಸೆಗೆ ತೆರಳಿದ್ದ ಬಾಲಕಿ ಅನುಮಾನಸ್ಪದ ಸಾವು – ಪೋಷಕರಿಂದ ಕೊಲೆ ಆರೋಪ!

    ಬಳ್ಳಾರಿ: ಬಹಿರ್ದೆಸೆಗೆ ತೆರಳಿದ್ದ 10 ವರ್ಷದ ಬಾಲಕಿ ಅನುಮಾನಾಸ್ಪದವಾಗಿ ಸಾವನ್ನಪಿರುವ ಘಟನೆ ವಿಜಯನಗರ (Vijayanagara) ಜಿಲ್ಲೆ ಹಡಗಲಿ ತಾಲೂಕಿನ ದುಂಗಾವತಿ ತಾಂಡಾದಲ್ಲಿ ಬೆಳಕಿಗೆ ಬಂದಿದೆ.

    ಅನಸೂಯಾ (10) ಮೃತ ಬಾಲಕಿ. ತಂದೆ ರವಿ ಹಾಗೂ ತಾಯಿ ಲಕ್ಷ್ಮಿ ದಂಪತಿಗೆ ಅನಸೂಯಾ ಒಬ್ಬಳೇ ಮಗಳು. ಬಾಲಕಿಯ ಮೃತ ದೇಹ ಕಂಡು ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಹೊಂಡದ ಪಕ್ಕದಲ್ಲಿ ಮೃತ ದೇಹ, ಮತ್ತೊಂದು ಕಡೆ ನೀರಿನ ತಂಬಿಗೆ ಪತ್ತೆಯಾಗಿದೆ. ಇದರಿಂದ ಅನುಮಾನಗೊಂಡ ಪೋಷಕರು ಕೊಲೆ ಆರೋಪ ಮಾಡಿದ್ದಾರೆ. ನನ್ನ ಮಗಳ ಕೊಲೆಯಾಗಿದೆ, ನಮಗೆ ನ್ಯಾಯಾ ಸಿಗಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ.

    ಸ್ಥಳಕ್ಕೆ ವಿಜಯನಗರ ಎಸ್ಪಿ ಶ್ರೀಹರಿಬಾಬು ಹಾಗೂ ಶಾಸಕ ಕೃಷ್ಣಾ ನಾಯ್ಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: AR Wedding Celebrations: ಉದ್ಯಮಿ ಅಂತ ಹೇಳ್ಕೊಂಡು ಆಹ್ವಾನವಿಲ್ಲದೇ ಬಂದಿದ್ದ ಇಬ್ಬರ ವಿರುದ್ಧ ಕೇಸ್‌!

    ತಂಬ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕಿಯ FSL ವರದಿ ಬಂದ ಬಳಿಕ ಸತ್ಯಾಸತ್ಯತೆ ಬೇಳಕಿಗೆ ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಂಬಾನಿ ಮದುವೆಯಲ್ಲಿ ಯಶ್ ಜೊತೆ ‘ಜವಾನ್’ ಡೈರೆಕ್ಟರ್ ಮಾತುಕತೆ- ವಿಡಿಯೋ ವೈರಲ್

  • ಭರ್ಜರಿ ಬೇಟೆ – 5.60 ಕೋಟಿ ರೂ. ಹಣ, 3 ಕೆಜಿ ಚಿನ್ನ, 103 ಕೆಜಿ ಬೆಳ್ಳಿ ಜಪ್ತಿ

    ಭರ್ಜರಿ ಬೇಟೆ – 5.60 ಕೋಟಿ ರೂ. ಹಣ, 3 ಕೆಜಿ ಚಿನ್ನ, 103 ಕೆಜಿ ಬೆಳ್ಳಿ ಜಪ್ತಿ

    ಬಳ್ಳಾರಿ: ಇಲ್ಲಿನ ಬ್ರೂಸ್ ಪೇಟೆ ಪೊಲೀಸರು (Bellary Police) ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ದಾಖಲೆ ಇಲ್ಲದ 5.60 ಕೋಟಿ ರೂ. ನಗದು ಮತ್ತು ಅಪಾರ ಪ್ರಮಾಣದ ಚಿನ್ನ, ಬೆಳ್ಳಿ ಆಭರಣಗಳನ್ನ (Gold and Silver Jewellery) ಜಪ್ತಿ ಮಾಡಲಾಗಿದೆ.

    ಬಳ್ಳಾರಿಯ (Bellary) ಬ್ರೂಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಂಬಳಿ ಬಜಾರ್‌ನಲ್ಲಿರುವ ಹೇಮಾ ಜ್ಯೂವೆಲರಿ ಶಾಪ್ ಮಾಲೀಕರ ಮನೆಯಲ್ಲಿ ಹಣ, ಆಭರಣಗಳನ್ನು ಜಪ್ತಿ ಮಾಡಲಾಗಿದೆ. ಇದನ್ನೂ ಓದಿ: ಭರ್ಜರಿ ಕಾರ್ಯಾಚರಣೆಯಲ್ಲಿ 5 ಕೆಜಿ ಚಿನ್ನಾಭರಣ ಜಪ್ತಿ!

    ಒಟ್ಟು 5.60 ಕೋಟಿ ರೂ. ನಗದು, 3 ಕೆಜಿ ಬಂಗಾರ 103 ಕೆಜಿ ಬೆಳ್ಳಿ ಆಭರಣ, 21 ಕೆಜಿ ಕಚ್ಚಾ ಬೆಳ್ಳಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಜಪ್ತಿ ಮಾಡಿದ ನಗದು ಹವಾಲಾಕ್ಕೆ ಸಂಬಂಧಿಸಿದ ಹಣ ಎನ್ನಲಾಗಿದೆ. ಇದನ್ನೂ ಓದಿ: ರಾಜ್ಯಾದ್ಯಂತ ಒಟ್ಟು 15.78 ಕೋಟಿ ಹಣ, 1.27 ಕೋಟಿ ರೂ. ಮೌಲ್ಯದ ಚಿನ್ನಾಭರಣ ಜಪ್ತಿ

    ಪ್ರಕರಣ ಸಂಬಂಧ ಆರೋಪಿ ನರೇಶ್ ಎಂಬಾತನನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿ 98.52 ಕೋಟಿ ರೂ. ಮೊತ್ತದ ಬಿಯರ್ ಜಪ್ತಿ