Tag: Bellary Jail

  • ಹೊರರಾಜ್ಯದ ಯುವತಿಯರನ್ನ ಕರೆಸಿ ಬೆಂಗ್ಳೂರಲ್ಲಿ ಹೈಟೆಕ್ ವೇಶ್ಯವಾಟಿಕೆ ದಂಧೆ – ಆರೋಪಿ ಅಂದರ್‌

    ಹೊರರಾಜ್ಯದ ಯುವತಿಯರನ್ನ ಕರೆಸಿ ಬೆಂಗ್ಳೂರಲ್ಲಿ ಹೈಟೆಕ್ ವೇಶ್ಯವಾಟಿಕೆ ದಂಧೆ – ಆರೋಪಿ ಅಂದರ್‌

    ಬೆಂಗಳೂರು: ಹೊರರಾಜ್ಯದಿಂದ ಯುವತಿಯರನ್ನ ಕರೆಸಿ ಬೆಂಗಳೂರಿನಲ್ಲಿ ಹೈಟೆಕ್‌ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನ ಗೂಂಡಾ ಕಾಯ್ದೆಯಡಿ ಸಿಸಿಬಿ ಪೊಲೀಸರು (CCB Police) ಬಂಧಿಸಿದ್ದಾರೆ.

    ಅನಿಲ್‌ ಕುಮಾರ್‌ ರೆಡ್ಡಿ ಬಂಧಿತ ಆರೋಪಿ. ಈತ ಸ್ಪಾಗಳಲ್ಲಿ ದಂಧೆ ನಡೆಸುತ್ತಿದ್ದ, ಹೊರರಾಜ್ಯಗಳಿಂದ ಯುವತಿಯರನ್ನ ಕರೆಸಿ, ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ. ಸದ್ಯ ಆರೋಪಿ ವಿರುದ್ಧ ಮಾನವ ಕಳ್ಳಸಾಗಣೆ ಸೇರಿ ಹಲವು ಪ್ರಕರಣ ದಾಖಲಿಸಲಾಗಿದೆ. ಗೂಂಡಾಕಾಯ್ದೆ ಅಡಿ ಬಂಧಿಸಿದ್ದು, ಬಳ್ಳಾರಿ ಜೈಲಿಗಟ್ಟುವಂತೆ (Bellary Jail) ಪೊಲೀಸ್‌ ಆಯುಕ್ತರು ಆದೇಶ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸದನದೊಳಗೆ ನಡೆಯುವ ಘಟನೆಗಳಿಗೆ ಪೊಲೀಸರು ಹಸ್ತಕ್ಷೇಪ ಮಾಡುವಂತಿಲ್ಲ: ಬಸವರಾಜ ಹೊರಟ್ಟಿ

    ಆರೋಪಿ ಸಿಕ್ಕಿಬಿದ್ದದ್ದು ಹೇಗೆ?
    ಕಳೆದ ಜನವರಿಯಲ್ಲೇ ಕೆ.ಆರ್‌ ಪುರದ ಟಿನ್‌ ಫ್ಯಾಕ್ಟರಿ ಬಳಿಯಿದ್ದ ನಿರ್ವಣ ಇಂಟರ್‌ನ್ಯಾಷನಲ್‌ ಸ್ಪಾ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಥೈಲ್ಯಾಂಡ್‌ ಮಹಿಳೆಯರು ಸೇರಿದಂತೆ 44 ಮಹಿಳೆಯರನ್ನ ರಕ್ಷಣೆ ಮಾಡಲಾಗಿತ್ತು. ದಾಳಿ ಬಳಿಕ ಸ್ಪಾ ಅನ್ನು ಬಂದ್‌ ಮಾಡಲಾಗಿತ್ತು. ಇದನ್ನೂ ಓದಿ: ವೈಟ್ ಹೌಸ್ AI ವಿಭಾಗದ ನೀತಿ ಸಲಹೆಗಾರನಾಗಿ ಭಾರತ ಮೂಲದ ಶ್ರೀರಾಮ್‌ ಕೃಷ್ಣನ್ ನೇಮಕ

    ಇನ್ನೂ ಆರೋಪಿಯು ದೆಹಲಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳದಿಂದ ಯುವತಿಯರನ್ನ ಕರೆಸುತ್ತಿದ್ದ. ಬೆಂಗಳೂರಿನಲ್ಲಿ ಕೆಲಸಕ್ಕೆಂದು ಕರೆಸಿ ಬಂದು ವೈಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ. ಅನಿಲ್‌ ರೆಡ್ಡಿ ವಿರುದ್ಧ ರೇಪ್‌ ಸೇರಿ ಇತರೇ ಪ್ರಕರಣಗಳು ದಾಖಲಾಗಿದ್ದರಿಂದ, ಮಹದೇವಪುರ ಪೊಲೀಸರು ಗೂಂಡಾ ಕಾಯ್ದೆ ರಿಪೋರ್ಟ್ ತಯಾರಿಸಿದ್ದರು. ವರದಿ ಆಧರಿಸಿ ಪೊಲೀಸ್‌ ಆಯುಕ್ತರು ಅನಿಲ್ ರೆಡ್ಡಿ ವಿರುದ್ಧ ಗೂಂಡಾ ಕಾಯ್ದೆ ಜಾರಿ ಮಾಡಿದ್ದಾರೆ ಎಂದು ಪೊಲೀಸರು ಕಂಪ್ಲೀಟ್‌ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಚಿನ್ನದಂಗಡಿ ಮಾಲೀಕರಿಗೆ ಮಹಿಳೆಯಿಂದ ವಂಚನೆ – ಇಂದು ವರ್ತೂರ್ ಪ್ರಕಾಶ್ ವಿಚಾರಣೆಗೆ ಹಾಜರು

  • ಆರ್‌.ಆರ್‌ ನಗರ ದರ್ಶನ್ ನಿವಾಸದ ಬಳಿ ಪೊಲೀಸರ ಬಿಗಿ ಭದ್ರತೆ – ನಾಳೆ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ

    ಆರ್‌.ಆರ್‌ ನಗರ ದರ್ಶನ್ ನಿವಾಸದ ಬಳಿ ಪೊಲೀಸರ ಬಿಗಿ ಭದ್ರತೆ – ನಾಳೆ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ

    ಬೆಂಗಳೂರು: ಕೊಲೆ ಆರೋಪಿ ನಟ ದರ್ಶನ್‌ಗೆ (Darshan) ಮಧ್ಯಂತರ ಜಾಮೀನು ಸಿಕ್ಕಿದ್ರೂ ನೆಮ್ಮದಿಯಿಂದ ಇರವುದಕ್ಕೆ ಸಾಧ್ಯವಾದಂತೆ ಕಾಣುತ್ತಿಲ್ಲ. ಕಾರಣ ದರ್ಶನ್ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ದರ್ಶನ್‌ನ ಪ್ರತಿಯೊಂದು ಚಲನವಲನದ ಮೇಲೆ ಪೊಲೀಸರು (Bengaluru RR Nagar Police) ತೀವ್ರ ನಿಗಾ ವಹಿಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

    ಸದ್ಯ ಬೆಂಗಳೂರಿನ ಹೊಸಕೆರೆಹಳ್ಳಿ ನಿವಾಸದಲ್ಲಿ ಬೀಡುಬಿಟ್ಟಿರುವ ನಟ ದರ್ಶನ್‌ ಇಂದು ಮಗ ವಿನೀಶ್‌ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ನಾಳೆ (ಅ.31) ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಹೊಸ ಬಟ್ಟೆ ಧರಿಸಿ ಜೈಲಿಂದ ಹೊರಬಂದ ದರ್ಶನ್; ಬಳ್ಳಾರಿ ಜೈಲಿನ ಹೊರಗೆ ‘ಅಭಿಮಾನದ ಹೊಳೆ’

    ದರ್ಶನ್‌ ಬೀಡುಬಿಟ್ಟಿರುವ ಆರ್‌.ಆರ್‌ ನಗರದ ನಿವಾಸದ ಬಳಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ. ದರ್ಶನ್‌ ಮನೆ ಸಂಪರ್ಕಿಸುವ ಎರಡೂ ಕಡೆಯ ರಸ್ತೆಗಳಲ್ಲಿ ಬ್ಯಾರಿಕೇಡ್‌ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಮನೆಯ ಬಳಿ ದರ್ಶನ್‌ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸಾಧ್ಯತೆ ಇರುವುದರಿಂದ ಬಿಗಿ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿದೆ. ಆರ್.ಆರ್ ನಗರ ದರ್ಶನ್ ಮನೆ ಬಳಿ 2 ಕೆಎಸ್‌ಆರ್‌ಪಿ ತುಕಡಿ, ಆರ್.ಆರ್ ನಗರ ಪೊಲೀಸರು ಸೇರಿದಂತೆ 55ಕ್ಕೂ ಹೆಚ್ಚು ಪೊಲೀಸರನ್ನ ಭದ್ರತೆಗೆ ನಿಯೋಜಿಸಲಾಗಿದೆ.

    ಪೊಲೀಸರ ಹದ್ದಿನ ಕಣ್ಣು:
    ಕೊಲೆ ಆರೋಪಿ ದರ್ಶನ್‌ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಮಧ್ಯಂತರ ಜಾಮೀನು ನೀಡಿರುವ ಹೈಕೋರ್ಟ್, ಹತ್ತು ಹಲವು ಷರತ್ತುಗಳನ್ನ ವಿಧಿಸಿ ಮಧ್ಯಂತರ ಜಾಮೀನು ನೀಡಲಾಗಿದೆ. ಹಾಗಾಗಿ ಆರೋಪಿ ದರ್ಶನ್‌ಗೆ ಕೋರ್ಟ್ ವಿಧಿಸಿರುವ ಒಂದೇ ಒಂದು ಷರತ್ತು ಉಲ್ಲಂಘನೆ ಮಾಡಿದರೂ ಅಥವಾ ಮಾಡುತ್ತಿದ್ದಾರೆ ಅನ್ನೋದು ಗೋತ್ತಾದರೂ ಕೂಡಲೆ ಪೊಲೀಸರು ಕೋರ್ಟ್ ಗಮನಕ್ಕೆ ತಂದು ದರ್ಶನ್‌ಗೆ ಕೊಟ್ಟಿರುವಂತಹ ಮಧ್ಯಂತರ ಜಾಮೀನು ರದ್ದು ಮಾಡಿಸಿ ಜೈಲಿಗೆ ಕಳಿಸಿ ಕೊಡುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

    ಈ ನಡುವೆ ದರ್ಶನ್ ಚಿಕಿತ್ಸೆ ಹೊರತು ಪಡಿಸಿದಂತೆ ಸಾಕ್ಷಿದಾರರ ಮೇಲೆ ಒತ್ತಡ ಹಾಕುವ ಪ್ರಯತ್ನ ಮಾಡಿದ್ರೆ ಸಂಕಷ್ಟದಲ್ಲಿ ತಗಲಾಕಿಕೊಳ್ಳೊದು ಪಕ್ಕಾ. ಆದ್ದರಿಂದ ದರ್ಶನ್ ಚಿಕಿತ್ಸೆಗಷ್ಟೇ ಸಿಮಿತವಾಗಿದ್ದುಕೊಂಡು ಹೋದರೆ 45 ದಿನ ಮಧ್ಯಂತರ ಜಾಮೀನು ಅವದಿಯ ಒಳಗೆ ಚಿಕಿತ್ಸೆ ಮುಗಿಸಿಕೊಳ್ಳಬಹುದು ಇಲ್ಲದೇ ಹೊದ್ರೆ ಮತ್ತೆ ಬಳ್ಳಾರಿ ಜೈಲೇ ಗತಿಯಾಗುವುದು ಖಚಿತವಾಗಿದೆ. ಇದನ್ನೂ ಓದಿ: Darshan Case File | ಜೂನ್‌ 8 ರಿಂದ ಅ.30ರ ವರೆಗೆ ಏನೆಲ್ಲಾ ಆಯ್ತು? 

  • ಹೊಸ ಬಟ್ಟೆ ಧರಿಸಿ ಜೈಲಿಂದ ಹೊರಬಂದ ದರ್ಶನ್; ಬಳ್ಳಾರಿ ಜೈಲಿನ ಹೊರಗೆ ‘ಅಭಿಮಾನದ ಹೊಳೆ’

    ಹೊಸ ಬಟ್ಟೆ ಧರಿಸಿ ಜೈಲಿಂದ ಹೊರಬಂದ ದರ್ಶನ್; ಬಳ್ಳಾರಿ ಜೈಲಿನ ಹೊರಗೆ ‘ಅಭಿಮಾನದ ಹೊಳೆ’

    – ಡಿ ಬಾಸ್.. ಜೈ ಡಿ ಬಾಸ್.. ಎಂದು ಕೂಗಿದ ಫ್ಯಾನ್ಸ್
    – ಈಡುಗಾಯಿ ನೀವಳಿಸಿ ದರ್ಶನ್‌ಗೆ ದೃಷ್ಟಿ ತೆಗೆದ ಕುಟುಂಬಸ್ಥರು
    – ನಟ ಪ್ರಯಾಣಿಸುತ್ತಿದ್ದ ಕಾರು ಬೆನ್ನತ್ತಿದ ಅಭಿಮಾನಿಗಳು

    ಬಳ್ಳಾರಿ: ಸತತ 140 ದಿನಗಳ ಬಳಿಕ ಜೈಲಿನಿಂದ ಕೊಲೆ ಆರೋಪಿ ದರ್ಶನ್ (Darshan) ಬಿಡುಗಡೆ ಆಗುತ್ತಿದ್ದಂತೆ ಜೈಲ ಬಳಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತು. ‘ಡಿ ಬಾಸ್.. ಜೈ ಡಿ ಬಾಸ್..’ ಎಂದು ಫ್ಯಾನ್ಸ್ ಜಯಘೋಷ ಕೂಗಿ ಹರ್ಷ ವ್ಯಕ್ತಪಡಿಸಿದರು.

    ಬಳ್ಳಾರಿ ಜೈಲಿನ ಬಳಿ ಅಪಾರ ಸಂಖ್ಯೆಯಲ್ಲಿ ಫ್ಯಾನ್ಸ್ ನೆರೆದಿದ್ದ ಕಾರಣ, ದರ್ಶನ್ ಕುಟುಂಬಕ್ಕೆ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಐವತ್ತು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ದರ್ಶನ್ ಹೊರಡುವ ವಾಹನಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಬಳ್ಳಾರಿ ದಾಟುವ ವರೆಗೂ ಪೊಲೀಸ್ ಭದ್ರತೆ ಇರಲಿದೆ. ಇಬ್ಬರು ಸಿಪಿಐ, ನಾಲ್ವರು ಪಿಎಸ್‌ಐ ಹಾಗೂ 50 ಪೊಲೀಸರ ಭದ್ರತೆ, ಒಂದು ಪೊಲೀಸ್ ವಾಹನ ಬೆಂಗಳೂರಿನ ವರೆಗೂ ತೆರಳುವ ಸಾಧ್ಯತೆ ಇದೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ – A8 ಆರೋಪಿ ರವಿಶಂಕರ್ ಬಿಡುಗಡೆ

    ದರ್ಶನ್ ಹೊಸ ಬಟ್ಟೆ ಧರಿಸಿ ಜೈಲಿನಿಂದ ಹೊರಬಂದರು. ಬೆನ್ನುನೋವಿನ ಹಿನ್ನೆಲೆ ಕುಂಟುತ್ತಲೇ ನಡೆದು ಬಂದರು. ಪತಿಗಾಗಿ ವಿಜಯಲಕ್ಷ್ಮಿ ಅವರು ಹೊರಗಡೆ ಕಾದು ಕುಳಿತಿದ್ದರು. ದರ್ಶನ್ ಹೊರಬರುತ್ತಿದ್ದಂತೆ ಕುಟುಂಬಸ್ಥರು ಈಡುಗಾಯಿ ನೀವಳಿಸಿ ದೃಷ್ಟಿ ತೆಗೆದರು.

    ನಟ ದರ್ಶನ್ ಹೊರಬಂದಿದ್ದನ್ನು ಕಂಡ ಅಭಿಮಾನಿಗಳು ಕಿರುಚಾಡಿದರು. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿರುವುದನ್ನು ಕಂಡು ಒಂದುಕ್ಷಣ ದರ್ಶನ್ ಆವಕ್ಕಾದರು. ಭಾರಿ ಭದ್ರತೆಯೊಂದಿಗೆ ದರ್ಶನ್‌ರನ್ನು ಕಾರಿಗೆ ಹತ್ತಿಸಲಾಯಿತು. ಕಾರು ಏರುವಾಗಲೂ ದರ್ಶನ್ ತ್ರಾಸಪಟ್ಟರು. ಬೆನ್ನುನೋವು ಇರುವುದರಿಂದ ಕೊಂಚ ಕಷ್ಟದಲ್ಲೇ ಕಾರು ಹತ್ತಿದರು. ಬಳಿಕ ಬಳ್ಳಾರಿಯಿಂದ ಬೆಂಗಳೂರಿನ ಕಡೆ ಕಾರು ಪ್ರಯಾಣ ಬೆಳೆಸಿತು. ಇದನ್ನೂ ಓದಿ: ಜೈಲಿನಿಂದ ದರ್ಶನ್‌ ರಿಲೀಸ್‌ ಬೆನ್ನಲ್ಲೇ ಎಮೋಷನಲ್‌ ಪೋಸ್ಟ್‌ ಹಂಚಿಕೊಂಡ ಪುತ್ರ ವಿನೀಶ್

    ದರ್ಶನ್ ಕಾರು ಪ್ರಯಾಣ ಮಾರ್ಗದ ಉದ್ದಕ್ಕೂ ಅಭಿಮಾನಿಗಳು ನಿಂತು ನಟನನ್ನು ಕಂಡು ಖುಷಿಯಾದರು. ಅನೇಕ ಅಭಿಮಾನಿಗಳು ದರ್ಶನ್ ಪ್ರಯಾಣಿಸುತ್ತಿದ್ದ ಕಾರನ್ನೇ ಹಿಂಬಾಲಿಸಿದರು.

    ಅನಂತ್‌ಪುರ ಮಾರ್ಗದಲ್ಲಿ ಬೆಂಗಳೂರಿಗೆ ತಮ್ಮ ಟೊಯೋಟಾ ಕಾರಿನಲ್ಲಿ ದರ್ಶನ್ ಪ್ರಯಾಣ ಬೆಳೆಸಿದ್ದಾರೆ. ಇದನ್ನೂ ಓದಿ: ಹೊಸ ಬಟ್ಟೆ ಧರಿಸಿ ಜೈಲಿಂದ ಹೊರಬಂದ ದರ್ಶನ್; ಬಳ್ಳಾರಿ ಜೈಲಿನ ಹೊರಗೆ ‘ಅಭಿಮಾನದ ಹೊಳೆ’

  • Darshan Case File | ಜೂನ್‌ 8 ರಿಂದ ಅ.30ರ ವರೆಗೆ ಏನೆಲ್ಲಾ ಆಯ್ತು?

    Darshan Case File | ಜೂನ್‌ 8 ರಿಂದ ಅ.30ರ ವರೆಗೆ ಏನೆಲ್ಲಾ ಆಯ್ತು?

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಬಂಧನಕ್ಕೆ ಒಳಗಾಗಿದ್ದ ಆರೋಪಿ ನಟ ದರ್ಶನ್‌ಗೆ (Darshan) 140 ದಿನಗಳ ಬಳಿಕ ಹೈಕೋರ್ಟ್‌ 6 ವಾರಗಳ ಕಾಲ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.‌ ಕಳೆದ ಜೂನ್‌ 8ರಂದು ರೇಣುಕಾಸ್ವಾಮಿ ಅಪಹರಣ ಪ್ರಕರಣ ಬೆಳಕಿಗೆ ಬಂದನಂತರ ಈವರೆಗೆ ಏನೇನಾಯ್ತು ಅನ್ನೋ ಡಿಟೇಲ್ಸ್‌ ಇಲ್ಲಿದೆ…

    1. ಜೂನ್‌ 8: ರೇಣುಕಾಸ್ವಾಮಿ ಅಪಹರಣ ಆರೋಪ

    2. ಜೂನ್‌ 8: ರೇಣುಕಾಸ್ವಾಮಿ ಹತ್ಯೆ

    3. ಜೂನ್‌ 9: ರೇಣುಕಾಸ್ವಾಮಿ ಶವ ಪತ್ತೆ

    4. ಜೂನ್‌ 10: ನಾಲ್ವರು ಆರೋಪಿಗಳು ಶರಣಾಗತಿ

    5. ಜೂನ್‌ 11: ದರ್ಶನ್‌, ಪವಿತ್ರಾಗೌಡ ಬಂಧನ

    6. ಜೂನ್‌ 22: ಪರಪ್ಪನ ಅಗ್ರಹಾರ ಜೈಲಿಗೆ ದರ್ಶನ್‌ & ಗ್ಯಾಂಗ್‌

    7. ಆಗಸ್ಟ್‌ 29: ಬಳ್ಳಾರಿ ಜೈಲಿಗೆ ದರ್ಶನ್‌

    8. ಅಕ್ಟೋಬರ್‌ 15: ಸೆಷನ್‌ ಕೋರ್ಟ್‌ನಲ್ಲಿ ದರ್ಶನ್‌ ಜಾಮೀನು ಅರ್ಜಿ ತಿರಸ್ಕೃತ

    9. ಅಕ್ಟೋಬರ್‌ 30: ಹೈಕೋರ್ಟ್‌ನಿಂದ ದರ್ಶನ್‌ಗೆ 6 ವಾರಗಳ ಷರತ್ತುಬದ್ಧ ಜಾಮೀನು ಮಂಜೂರು

  • ದರ್ಶನ್‌ಗೆ ಜಾಮೀನು – ಪಾಸ್‌ಪೋರ್ಟ್‌ ಒಪ್ಪಿಸುವಂತೆ ಕೋರ್ಟ್‌ ಸೂಚಿಸಿದ್ದೇಕೆ?

    ದರ್ಶನ್‌ಗೆ ಜಾಮೀನು – ಪಾಸ್‌ಪೋರ್ಟ್‌ ಒಪ್ಪಿಸುವಂತೆ ಕೋರ್ಟ್‌ ಸೂಚಿಸಿದ್ದೇಕೆ?

    ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಆರೋಪಿ ನಟ ದರ್ಶನ್‌ಗೆ‌ (Darshan) ಗಿಫ್ಟ್‌ ಸಿಕ್ಕಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ದರ್ಶನ್‌ಗೆ ಬರೋಬ್ಬರಿ 140 ದಿನಗಳ ಬಳಿಕ ಕರ್ನಾಟಕ ಹೈಕೋರ್ಟ್‌ (Karnataka High Court) ಜಾಮೀನು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಈ ವೇಳೆ ಹಲವು ಷರತ್ತುಗಳನ್ನೂ ವಿಧಿಸಿದೆ

    ಪಾಸ್‌ಪೋರ್ಟ್‌ ಸರೆಂಡರ್‌ ಮಾಡುವಂತೆ ಹೇಳಿದ್ದು ಏಕೆ?
    ದರ್ಶನ್‌ಗೆ‌ 6 ವಾರಗಳ ಕಾಲ ಮೆಡಿಕಲ್‌ ಬೇಲ್‌ (Medical Bail) ಮಂಜೂರು ಮಾಡಿರುವ ಕೋರ್ಟ್‌ ಪಾಸ್‌ಪೋರ್ಟ್‌ ಸರೆಂಡರ್‌ ಮಾಡುವಂತೆ ಸೂಚಿಸಿದೆ. ಚಿಕಿತ್ಸೆಯನ್ನು ಎಲ್ಲಿ ಪಡೆಯಬೇಕು ಎಂದು ಕೋರ್ಟ್‌ ನಿರ್ದಿಷ್ಟವಾಗಿ ಸೂಚಿಸಿಲ್ಲ. ಇದನ್ನೂ ಓದಿ: 5 ತಿಂಗಳ ಬಳಿಕ ದರ್ಶನ್ ರಿಲೀಸ್ – ಹೈಕೋರ್ಟ್‌ನಿಂದ 6 ವಾರಗಳ ಜಾಮೀನು ಮಂಜೂರು

    ಜಾಮೀನು ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ವಿದೇಶದಲ್ಲಿ ಚಿಕಿತ್ಸೆ ಪಡೆಯುವ ಸಾಧ್ಯತೆ ಇರುವ ಕಾರಣ ಒಂದು ವೇಳೆ ಜಾಮೀನು ಮಂಜೂರು ಮಾಡಿದರೂ ಪಾಸ್‌ಪೋರ್ಟ್‌ ನ್ಯಾಯಾಲಯಕ್ಕೆ ಒಪ್ಪಿಸಬೇಕೆಂದು ಎಸ್‌ಪಿಪಿ ಪ್ರಸನ್ನ ಕುಮಾರ್‌ (SPP Prasannakumar) ಮನವಿ ಮಾಡಿದ್ದರು. ಈ ಮನವಿಗೆ ಕೋರ್ಟ್‌ ಸ್ಪಂದಿಸಿ ಪಾಸ್‌ಪೋರ್ಟ್‌ ಅನ್ನು ತನಗೆ ಒಪ್ಪಿಸುವಂತೆ ಷರತ್ತು ವಿಧಿಸಿದೆ. ಅಷ್ಟೇ ಅಲ್ಲದೇ ಆಸ್ಪತೆಗೆ ದಾಖಲಾಗುತ್ತಿದ್ದಂತೆ 1 ವಾರದೊಳಗೆ ಪ್ರಾಥಮಿಕ ವೈದ್ಯಕೀಯ ವರದಿ ಸಲ್ಲಿಸಬೇಕು ಎಂದು ಸೂಚಿಸಿದೆ.

    ದರ್ಶನ್‌ ಪರ ವಕೀಲರು ಹೇಳಿದ್ದೇನು?
    ದರ್ಶನ್‌ ಜಾಮೀನು ವಿಚಾರ ಕುರಿತು ಮಾತನಾಡಿರುವ ದರ್ಶನ್ ಪರ ವಕೀಲ ಸುನೀಲ್, ದರ್ಶನ್‌ ಅವರಿಗೆ ಬೆನ್ನುಮೂಳೆ ಶಸ್ತ್ರಚಿಕಿತ್ಸೆ ಆಗಬೇಕು ಅನ್ನೋ ವಾದವನ್ನು ಸಿ.ವಿ ನಾಗೇಶ್‌ ಕೋರ್ಟ್‌ ಮುಂದಿಟ್ಟರು. ಏಕೆಂದರೆ L5 ಮತ್ತು S1 ನರದಲ್ಲಿ ದರ್ಶನ್‌ಗೆ ಸಮಸ್ಯೆ ಇದೆ. 2022-23ರಿಂದಲೂ ಈ ಸಮಸ್ಯೆ ಇತ್ತು. ಆದ್ದರಿಂದ ಅದೇ ವಾದದಲ್ಲಿ ನಾವು ಮುಂದುವರಿದ್ವಿ. ಅದಕ್ಕೆ ಕೋರ್ಟ್‌ ಬಳ್ಳಾರಿ ಜೈಲರ್‌ ಅವರಿಂದ ವೈದ್ಯಕೀಯ ವರದಿಗಳನ್ನ ಕೇಳಿತ್ತು. ಸೀಲ್ಡ್‌ ಕವರ್‌ನಲ್ಲಿ ವೈದ್ಯಕೀಯ ವರದಿ ಸ್ವೀಕರಿಸಿದ ನಂತರ ಇಂದು 6 ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಆಸ್ಪತ್ರೆಗೆ ದಾಖಲದ ಮೊದಲ ವಾರದ ಪ್ರಾಥಮಿಕ ವೈದ್ಯಕೀಯ ವರದಿಯನ್ನ ಸಲ್ಲಿಕೆ ಮಾಡುವಂತೆ ಸೂಚಿಸಿದೆ. ನಾವೂ ಒಪ್ಪಿದ್ದೇವೆ, ಜೊತೆಗೆ ಪಾಸ್‌ಪೋರ್ಟ್‌ ರದ್ದು ಮಾಡುವಂತೆ ಸೂಚಿಸಿದೆ. ಕೋರ್ಟ್‌ನ ಷರತ್ತುಗಳನ್ನ ಫುಲ್‌ಫಿಲ್‌ ಮಾಡುತ್ತೇವೆ ಎಂದಿದ್ದಾರೆ.

    ಹೈಕೋರ್ಟ್‌ ದೃಢೀಕೃತ ಆದೇಶ ಕೊಟ್ಟ ನಂತರ ಸೆಷನ್ಸ್‌ ನ್ಯಾಯಾಲಯದಲ್ಲಿ ಅಡ್ವಾನ್ಸ್‌ಮೆಂಟ್‌ ಅಪ್ಲಿಕೇಷನ್‌ ಹಾಕಬೇಕು. ಸೆಷನ್‌ ಕೋರ್ಟ್‌ ಅರ್ಜಿಯನ್ನು ಸ್ವೀಕಾರ ಮಾಡಬೇಕು. ಆ ಬಳಿಕ ಶೂರಿಟಿ ದಾಖಲಾತಿ ನೀಡಿ, ಪಾಸ್‌ಪೋರ್ಟ್‌ ಸರೆಂಡರ್‌ ಮಾಡಿದ ನಂತರವೇ ದರ್ಶನ್‌ ರಿಲೀಸ್‌ ಆಗಲಿದ್ದಾರೆ. ಇದನ್ನೂ ಓದಿ: ದರ್ಶನ್‌ಗೆ ಜಾಮೀನು ಸಿಗುತ್ತಿದ್ದಂತೆ ಕಾಮಾಕ್ಯ ದೇವಿಗೆ ಧನ್ಯವಾದ ತಿಳಿಸಿದ ವಿಜಯಲಕ್ಷ್ಮಿ

    ಮೈಸೂರು ಅಪೋಲೋ ಆಸ್ಪತ್ರೆಯಲ್ಲಿ ದರ್ಶನ್‌ ರೆಗ್ಯುಲರ್‌ ಟ್ರೀಟ್ಮೆಂಟ್‌ ಪಡೆಯುತ್ತಿದ್ದರು. ಅವರು ರಿಲೀಸ್‌ ಆದ ಬಳಿಕ ಕುಟುಂಬದೊಂದಿಗೆ ಚರ್ಚೆ ಮಾಡಿ ಅವರಿಷ್ಟದ ಆಸ್ಪತ್ರೆಗೆ ದಾಖಲು ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

  • ಜೈಲಲ್ಲಿ ಫಿಟ್ನೆಸ್ ಬಗ್ಗೆಯೇ ಚಿಂತೆ – ವಿಟಮಿನ್ ಪೌಡರ್‌ಗೆ ಬೇಡಿಕೆ ಇಟ್ಟ ದರ್ಶನ್

    ಜೈಲಲ್ಲಿ ಫಿಟ್ನೆಸ್ ಬಗ್ಗೆಯೇ ಚಿಂತೆ – ವಿಟಮಿನ್ ಪೌಡರ್‌ಗೆ ಬೇಡಿಕೆ ಇಟ್ಟ ದರ್ಶನ್

    – ದೇಹದಾರ್ಢ್ಯ ಉಳಿಸಿಕೊಳ್ಳದಿದ್ರೆ ಕಷ್ಟ ಎಂದು ಅಳಲು
    – ದರ್ಶನ್ ಬೇಡಿಕೆ ನಿರಾಕರಿಸಿದ ಜೈಲಾಧಿಕಾರಿ

    ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಕೇಸ್‍ನಲ್ಲಿ (Renukaswamy Murder case) ಜೈಲಲ್ಲಿರುವ ದರ್ಶನ್ (Darshan) ಜೈಲಾಧಿಕಾರಿಗಳ ಮುಂದೆ ಬಾಡಿ ಮೇಂಟೆನ್ಸ್ ಪೌಡರ್ ಹಾಗೂ ವಿಟಮಿನ್ ಪೌಡರ್‌ಗೆ ಬೇಡಿಕೆ ಇಟ್ಟಿದ್ದು, ಜೈಲಾಧಿಕಾರಿಗಳು ಸಾರಾಸಗಟಾಗಿ ಬೇಡಿಕೆ ತಿರಸ್ಕರಿಸಿದ್ದಾರೆ.

    ಜೈಲಿಲ್ಲಿ (Bellary jail) ಫಿಟ್ನೆಸ್ ಬಗ್ಗೆಯೇ ದರ್ಶನ್ ಚಿಂತೆ ಮಾಡುತ್ತಿದ್ದಾರೆ. ದೇಹದಾರ್ಢ್ಯ ಸರಿಯಾಗಿ ಉಳಿಸಿಕೊಳ್ಳದಿದ್ದರೆ ನನಗೆ ಕಷ್ಟ ಆಗುತ್ತದೆ. ವಿಟಿಮಿನ್ ಪೌಡರ್‍ನ್ನು ಕುಟುಂಬಸ್ಥರ ಮೂಲಕ ತರಿಸಿಕೊಡಿ ಎಂದು ಜೈಲಿನ ಸಿಬ್ಬಂದಿ ಹಾಗೂ ವಾರ್ಡನ್ ಬಳಿ ಪದೇ ಪದೇ ಕೇಳಿಕೊಂಡಿದ್ದಾರೆ. ದರ್ಶನ್ ಮನವಿಯನ್ನು ಜೈಲಾಧಿಕಾರಿಗಳು ತಿರಸ್ಕರಿಸಿದ್ದಾರೆ.

    ನೀವು ಏನ್ ಅಂದುಕೊಂಡಿದ್ದೀರಿ?
    ಜೈಲಲ್ಲಿ ನೀವು ಕೇಳಿದ್ದನ್ನು ಕೊಡೋಕೆ ಅವಕಾಶ ಇಲ್ಲ. ನಿಯಮದ ಅನುಸಾರ ವಿಚಾರಣಾಧೀನ ಖೈದಿಗೆ ಯಾವ ಸೌಲಭ್ಯಗಳನ್ನು ಕೊಡಲು ಅವಕಾಶ ಇದೆಯೋ ಆ ಸೌಲಭ್ಯಗಳನ್ನು ಮಾತ್ರ ಕೊಡಲು ಸಾಧ್ಯ ಎಂದು ಹೇಳಿದ್ದಾರೆ.

    ಈ ಹಿಂದೆ ದರ್ಶನ್ ಆರೋಗ್ಯದ ನೆಪ ಹೇಳಿ ಮನೆಯೂಟ ಕೇಳಿ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಹೈಕೋರ್ಟ್‍ನಲ್ಲಿ ವಿಚಾರಣೆ ಹಂತದಲ್ಲಿದೆ.

  • ಮೂರು ತಿಂಗಳಲ್ಲಿ ದರ್ಶನ್‌ ಬಿಡುಗಡೆ ಆಗ್ತಾರೆ – ಬೀರಲಿಂಗೇಶ್ವರ ದೈವ ಭವಿಷ್ಯವಾಣಿ

    ಮೂರು ತಿಂಗಳಲ್ಲಿ ದರ್ಶನ್‌ ಬಿಡುಗಡೆ ಆಗ್ತಾರೆ – ಬೀರಲಿಂಗೇಶ್ವರ ದೈವ ಭವಿಷ್ಯವಾಣಿ

    ಬಳ್ಳಾರಿ: ಕೊಲೆ ಆರೋಪಿ ದರ್ಶನ್‌ ಬಿಡುಗಡೆಗಾಗಿ ಅವರ ಅಭಿಮಾನಿಗಳು (Darshan Fans) ಫೋಟೋ ಹಿಡಿದು ದೈವದ ಮೊರೆ ಹೋಗಿರುವ ಸನ್ನಿವೇಶ ಬಳ್ಳಾರಿ (Bellary) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ಬಳ್ಳಾರಿಯ ಬಲಕಲ್ ಅನ್ನೋ ಗ್ರಾಮದ ಬೀರಲಿಂಗೇಶ್ವರ (Beeralingeshwara God) ದೈವದ ಬಳಿ ದರ್ಶನ್ ಬಿಡುಗಡೆ ಅಭಿಮಾನಿಗಳು ದಿನಾಂಕ ಕೇಳಿದ್ದಾರೆ. ಈ ವೇಳೆ ಮೂರು ತಿಂಗಳ ಬಳಿಕ ದರ್ಶನ್ ಹೊರ ಬರ್ತಾರೆ ಅಂತಾ ಬೀರಲಿಂಗೇಶ್ವರ ದೈವ ಭವಿಷ್ಯ ನುಡಿದಿದೆ. ದರ್ಶನ್ ಭಾವಚಿತ್ರದ ಮೇಲೆ ತಲೆಯಿಟ್ಟು ದೈವ ನುಡಿದ ಮಾತಿನ ವೀಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿದೆ. ಇನ್ನೂ ದರ್ಶನ್ ಬಿಡುಗಡೆ ಬಗ್ಗೆ ದೈವ ಹೇಳಿದ ಮಾತಿನ ವಿಡಿಯೋ ಮಾಡಿ ಅಭಿಮಾನಿಗಳು ತಮ್ಮ ಇನ್‌ಸ್ಟಾ ಖಾತೆಯಲ್ಲೂ ಜಂಚಿಕೊಂಡಿದ್ದಾರೆ.

    ಇಂದು ಪತ್ನಿ ವಿಜಯಲಕ್ಷ್ಮಿ ಭೇಟಿ:
    ರೇಣುಕಾಸ್ವಾಮಿ ಕೊಲೆ ಪ್ರಕರಣದ ಜಾರ್ಜ್ ಶೀಟ್ ಸಲ್ಲಿಕೆ ಬೆನ್ನಲ್ಲೇ ದರ್ಶನ್ ಭೇಟಿಗೆ ಗುರುವಾರ (ಇಂದು) ಪತ್ನಿ ವಿಜಯಲಕ್ಷ್ಮಿ (Vijayalakshmi) ಮತ್ತೆ ಬಳ್ಳಾರಿ ಜೈಲಿಗೆ ಬರಲಿದ್ದಾರೆ. ಸಂಜೆ 4.30ಕ್ಕೆ ಬರುವುದಾಗಿ ವಿಜಯಲಕ್ಷ್ಮಿ ಅವರು ಜೈಲು ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

    ಸಂಜೆ 4.30 ರಿಂದ 5.30ರ ವರೆಗೆ ಜೈಲಿನಲ್ಲಿರುವ ಖೈದಿಗಳ ಸಂದರ್ಶನಕ್ಕೆ ಭೇಟಿಯ ಸಮಯವಿರುತ್ತದೆ. ಹೀಗಾಗಿ ನಿಯಮಗಳ ಪ್ರಕಾರ ಒಬ್ಬ ಕೈದಿ ಆರ್ಧ ಗಂಟೆ ಸಂಬಂಧಿಕರ ಜೊತೆಗೆ ಮಾತನಾಡಬಹುದು. ಹೀಗಾಗಿ ಆರೋಪಿ ದರ್ಶನ್ ಪತ್ನಿಯೂ ಅದೇ ಸಮಯದಲ್ಲಿ ಬರಲಿದ್ದಾರೆ.

  • ದರ್ಶನ್‌ ಗ್ಯಾಂಗ್‌ನ ಮತ್ತಿಬ್ಬರು ಆರೋಪಿಗಳ ಜಾಮೀನು ಅರ್ಜಿ ವಜಾ

    ದರ್ಶನ್‌ ಗ್ಯಾಂಗ್‌ನ ಮತ್ತಿಬ್ಬರು ಆರೋಪಿಗಳ ಜಾಮೀನು ಅರ್ಜಿ ವಜಾ

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಗ್ಯಾಂಗ್‌ನ (Darshan Gang) ಮತ್ತಿಬ್ಬರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು (Bail application) 57ನೇ ಸಿಸಿಹೆಚ್ ನ್ಯಾಯಾಲಯ ಸೋಮವಾರ ವಜಾಗೊಳಿಸಿದೆ.

    ದರ್ಶನ್ ಗ್ಯಾಂಗ್‌ನ ಎ16 ಆರೋಪಿ ಕೇಶವಮೂರ್ತಿ ಮತ್ತು ಎ10 ಆರೋಪಿ ವಿನಯ್ ಜಾಮೀನು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿ 57ನೇ ಸಿಸಿಹೆಚ್ ನ್ಯಾಯಾಲಯ (CCH Court) ತಿರಸ್ಕರಿಸಿ ಆದೇಶಿಸಿದೆ. ಎರಡು ದಿನಗಳ ಹಿಂದೆಯಷ್ಟೇ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾಗೌಡ ಮತ್ತು ಎ7 ಆರೋಪಿ ಅನುಕುಮಾರ್ ಅವರ ಜಾಮೀನು ಅರ್ಜಿಯನ್ನು ಕೋರ್ಟ್‌ ವಜಾಗೊಳಿಸಿತ್ತು. ಇದನ್ನೂ ಓದಿ: Kolkata Horror | ಟ್ರೈನಿ ವೈದ್ಯೆ ʻಹತ್ಯಾʼಚಾರ ನಡೆದಿದ್ದ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್‌ ಘೋಷ್‌ ಅರೆಸ್ಟ್‌

    ಎ10 ಆರೋಪಿ ಆಗಿರುವ ವಿನಯ್‌ ಪಾತ್ರದ ಸಂಬಂಧ ಸಾಕ್ಷಿ ಇದೆ. ಸಿಆರ್‌ಪಿಸಿ 164 ಅಡಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಜಾಮೀನು ನೀಡಿದಲ್ಲಿ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಪ್ರಕರಣ ಇನ್ನೂ ತನಿಖೆ ಹಂತದಲ್ಲಿ ಇರುವುದರಿಂದ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್‌ ತಿರಸ್ಕರಿದೆ. ಇದನ್ನೂ ಓದಿ: Breaking: ಮುಡಾ ಹಗರಣದ ಮೊದಲ ವಿಕೆಟ್ ಪತನ – ಹಿಂದಿನ ಆಯುಕ್ತ ದಿನೇಶ್ ಕುಮಾರ್ ಸಸ್ಪೆಂಡ್‌!

    ʻದಾಸʼನಿಗೆ ಸರ್ಜಿಕಲ್‌ ಚೇರ್‌ ಭಾಗ್ಯ:
    ಬಳ್ಳಾರಿ ಜೈಲಲ್ಲಿರುವ ವಿಚಾರಣಾಧೀನ ಕೈದಿ, ನಟ ದರ್ಶನ್‌ಗೆ ಸರ್ಜಿಕಲ್ ಚೇರ್ ಬಳಸಲು ಕಾರಗೃಹ ಡಿಐಜಿ ಅನುಮತಿ ನೀಡಿದ್ದಾರೆ. ದರ್ಶನ್ ಆರೋಗ್ಯ ಕುರಿತಾಗಿ ವೈದ್ಯರು ನೀಡಿದ ವರದಿಗಳನ್ನು ಕೂಲಂಕಶವಾಗಿ ಪರಿಶೀಲಿಸಿದ ಡಿಐಜಿ, ಸರ್ಜಿಕಲ್ ಚೇರ್ ಬಳಕೆಗೆ ಸಮ್ಮತಿ ನೀಡಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದರ್ಶನ್‌ಗೆ ಸರ್ಜಿಕಲ್ ಚೇರ್ ತಲುಪಿಸಿದೆ. ಇನ್ನು, ಹೈ-ಸೆಕ್ಯೂರಿಟಿ ಸೆಲ್‌ನಲ್ಲಿ ಇರುವ ಕಾರಣ ದರ್ಶನ್‌ಗೆ ಇತರೆ ಕೈದಿಗಳನ್ನು ಸಂಪರ್ಕ ಸಾಧ್ಯವಾಗ್ತಿಲ್ಲ. ಬೆಳಗ್ಗೆ ಮತ್ತು ಸಂಜೆ ಮಾತ್ರ ವಾಕಿಂಗ್‌ಗೆಂದು ಸೆಲ್‌ನಿಂದ ಹೊರಗೆ ಕರೆದೊಯ್ಯಲಾಗ್ತಿದೆ. ದರ್ಶನ್ ಮೇಲೆ ನಿಗಾ ಇಡಲು, ಅವರನ್ನು ಇರಿಸಲಾಗಿರುವ ಸೆಲ್‌ಗೆ 3 ಸಿಸಿಟಿವಿ ಕೆಮರಾ ಅಳವಡಿಸಲಾಗಿದೆ. ಇದನ್ನೂ ಓದಿ: ಬೇಬಿ ಬಂಪ್ ಫೋಟೋ ಶೂಟ್‌ಗೆ ದೀಪಿಕಾ-ರಣವೀರ್‌ ಪೋಸ್‌; ಬಾಲಿವುಡ್‌ನ ಕ್ಯೂಟ್‌ ಕಪಲ್‌ ಫುಲ್‌ ಶೈನ್‌

  • ಜೈಲಿನಲ್ಲಿ ಕೊನೆಗೂ ದರ್ಶನ್ ಗೆ ಸಿಕ್ತು ಸರ್ಜಿಕಲ್ ಚೇರ್ ಭಾಗ್ಯ

    ಜೈಲಿನಲ್ಲಿ ಕೊನೆಗೂ ದರ್ಶನ್ ಗೆ ಸಿಕ್ತು ಸರ್ಜಿಕಲ್ ಚೇರ್ ಭಾಗ್ಯ

    ನಾರೋಗ್ಯದ ಕಾರಣದಿಂದಾಗಿ ತನಗೆ ಜೈಲಿನಲ್ಲಿ ಸರ್ಜಿಕಲ್ ಚೇರ್ (Surgical Chair) ಬೇಕು ಎಂದು ಜೈಲು ಡಿಐಜಿಗೆ ದರ್ಶನ್ (Darshan) ಮನವಿ ಮಾಡಿಕೊಂಡಿದ್ದರು. ಮನವಿಯನ್ನು ಪುರಸ್ಕರಿಸಿರೋ ಡಿಐಜಿ ಸರ್ಜಿಕಲ್ ಚೇರ್ ಕೂಲಂಕುಷವಾಗಿ ಆರೋಗ್ಯ ತಪಾಸಣೆ ಹಾಗೂ ರಿಪೋರ್ಟ್ ಪರಿಶೀಲನೆ ಬಳಿಕ ಚೇರ್ ಕೊಡಲು ಅಸ್ತು ಎಂದಿದ್ದಾರೆ. ದರ್ಶನ್ ಆರೋಗ್ಯದ ಬಗ್ಗೆ ವೈದ್ಯರು ಕೊಟ್ಟ ವರದಿ ಬಳಿಕ ಕಾರಾಗೃಹ ಇಲಾಖೆ ಡಿಐಜಿ ಸರ್ಜಿಕಲ್ ಚೇರ್ ಅನ್ನು ನೀಡಿದ್ದಾರೆ.

    ಅರ್ಥೋಪಿಡಿಕ್ ವೈದ್ಯರಿಂದ ತಪಾಸಣೆ ಹಾಗೂ ಪರಪ್ಪನ ಅಗ್ರಹಾರದಿಂದ ವರದಿ ತರಸಿಕೊಂಡು ಪರಿಶೀಲನೆ ಮಾಡಿರೋ ಡಿಐಜಿ, ಜಿಲ್ಲಾ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ದರ್ಶನ್ ಗೆ ಸರ್ಜಿಕಲ್ ಚೇರ್ ತರಿಸಿ ಕೊಡಲಾಗಿದೆ. ಜಿಲ್ಲಾ ಆಸ್ಪತ್ರೆಯಿಂದ ಈಗಾಗಲೇ ಜೈಲಿಗೆ ಆ ಚೇರ್ ಬಂದಿದೆ.

    ದರ್ಶನ್ ಮನವಿ ಮೇರೆಗೆ ಮೆಡಿಕಲ್ ರಿಪೋರ್ಟ್ ಪರಿಸೀಲಿಸುವ ಜೊತೆಗೆ ಆರೋಗ್ಯ ತಪಾಸಣೆಯನ್ನೂ ವೈದ್ಯಾಧಿಕಾರಿಗಳು ಮಾಡಿದ್ದರು. ದರ್ಶನ್ ಗೆ ಸಮಸ್ಯೆ ಇರೋದನ್ನ ಕನ್ಫರ್ಮ್ ಮಾಡಿಕೊಂಡು ಸರ್ಜಿಕಲ್ ಚೇರ್ ಗೆ ಅವಕಾಶ ಮಾಡಿಕೊಟ್ಟಿದ್ದಾರೆ ಜೈಲಾಧಿಕಾರಿಗಳು.

    ಬಳ್ಳಾರಿ ಜೈಲಿನಲ್ಲಿ (Bellary Jail)  ನಾಲ್ಕನೇ ದಿನದ ರಾತ್ರಿ ಕಳೆದಿರೋ ಕೊಲೆ ಆರೋಪಿ ದರ್ಶನ್, ಬೆಳಗ್ಗೆ ಎದ್ದು ಅರ್ಧಗಂಟೆ ವಾಕ್ ಮಾಡಿದ್ದಾರೆ. ಜೈಲಿನ ಮೆನು ಪ್ರಕಾರ ಇವತ್ತು ಟಮೋಟ್ ಬಾತ್ ನೀಡಲಾಗಿದೆ. ಕಳೆದ ಎರಡು ದಿನಗಳಿಂದ ರಿಲಾಕ್ಸ್ ಮೂಡನಲ್ಲಿರೋ ದರ್ಶನ್, ಪತ್ನಿ ವಿಜಯಲಕ್ಷ್ಮಿ ಭೇಟಿ ಬಳಿಕ ನಿರಾಳರಾಗಿದ್ದರು.

  • ಬೆಂಗಳೂರು ಜೈಲಲ್ಲಿ ರಾಜಾತಿಥ್ಯ; ‘ಡಿ’ಗ್ಯಾಂಗ್ ದಿಕ್ಕಾಪಾಲು – ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್

    ಬೆಂಗಳೂರು ಜೈಲಲ್ಲಿ ರಾಜಾತಿಥ್ಯ; ‘ಡಿ’ಗ್ಯಾಂಗ್ ದಿಕ್ಕಾಪಾಲು – ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್

    – ವಿಲ್ಸನ್ ಗಾರ್ಡನ್ ನಾಗನಿಗೂ ಶಾಕ್ ಕಾದಿದ್ಯಾ?
    – ಯರ‍್ಯಾರು ಯಾವ ಜೈಲಿಗೆ ಶಿಫ್ಟ್?

    ಬೆಂಗಳೂರು: ಜೈಲಲ್ಲಿ ವಿಶೇಷ ಪ್ರಕರಣದಲ್ಲಿ ಡಿ-ಗ್ಯಾಂಗ್‌ಗೆ ಬಿಗ್ ಶಾಕ್ ಎದುರಾಗಿದೆ. ಇಷ್ಟು ದಿನ ಪರಪ್ಪನ ಅಗ್ರಹಾರ ಜೈಲಲ್ಲಿ ಒಟ್ಟಿಗಿದ್ದ ದರ್ಶನ್ ಗ್ಯಾಂಗ್ ಈಗ ದಿಕ್ಕಾಪಾಲಾಗುತ್ತಿದೆ. ನಟ ದರ್ಶನ್‌ರನ್ನು (Darshan) ಬಳ್ಳಾರಿ ಸೆಂಟ್ರಲ್ ಜೈಲ್‌ಗೆ ಶಿಫ್ಟ್ ಮಾಡಲು 24ನೇ ಎಸಿಎಂಎಂ ಕೋರ್ಟ್ ಆದೇಶ ನೀಡಿದೆ.

    ನಟಿ ಪವಿತ್ರಾಗೌಡ ಹಾಗೂ ಇನ್ನಿಬ್ಬರನ್ನು ಹೊರತುಪಡಿಸಿ ಪರಪ್ಪನ ಅಗ್ರಹಾರ ಜೈಲಲ್ಲಿದ್ದ ದರ್ಶನ್ ಗ್ಯಾಂಗ್‌ನ ಇನ್ನಿತರೆ ಆರೋಪಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ಶಿಫ್ಟ್ ಮಾಡುವಂತೆ ನಿರ್ದೇಶನ ನೀಡಿದೆ. ಯಾವುದೇ ಕ್ಷಣದಲ್ಲಿ ನಟ ದರ್ಶನ್ ಸೇರಿ ಇತರೆ ಆರೋಪಿಗಳನ್ನು ವಿವಿಧ ಜೈಲುಗಳಿಗೆ ಶಿಫ್ಟ್ ಮಾಡುವ ಕೆಲಸ ನಡೆಯಲಿದೆ. ಇದನ್ನೂ ಓದಿ: ಜಿಂದಾಲ್‌ಗೆ ಭೂ ಮಾರಾಟ ಪ್ರಕರಣ: ಕಾಂಗ್ರೆಸ್ಸಿಗರಿಗೂ, ಹೈಕಮಾಂಡಿಗೂ ಸಂದಾಯ ಆಗಿರಬಹುದು – ಸಿ.ಟಿ ರವಿ

    ಇದಕ್ಕಾಗಿ ಬೆಂಗಳೂರಿನ ಜೈಲು, ಬಳ್ಳಾರಿ ಜೈಲು ಸೇರಿ ವಿವಿಧ ಕಾರಾಗೃಹಗಳಲ್ಲಿ ಅಗತ್ಯ ತಯಾರಿಗಳು ನಡೆದಿವೆ. ಹಗಲಿನಲ್ಲಿ ದರ್ಶನ್ ಸ್ಥಳಾಂತರ ಮಾಡಲು ಮುಂದಾದರೆ, ಅವರ ಅಭಿಮಾನಿಗಳು ದಾರಿಯುದ್ದಕ್ಕೂ ಅಡ್ಡಿ ಮಾಡಬಹುದು ಎಂಬ ಕಾರಣಕ್ಕೆ ಇಂದು ರಾತ್ರಿಯೇ ದರ್ಶನ್‌ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ಸಿದ್ದತೆಗಳು ನಡೆದಿವೆ. ಈ ಮೂಲಕ ಕೋರ್ಟ್ ಅನುಮತಿ ಪಡೆದು ಸಿಎಂ ಸಿದ್ದರಾಮಯ್ಯ ಹೇಳಿದಂತೆಯೇ ಮಾಡಿದ್ದಾರೆ.

    ಜೈಲು ನಿಯಮಗಳ ಉಲ್ಲಂಘನೆ ಆರೋಪ ಸಂಬಂಧ ನಟ ದರ್ಶನ್‌ರನ್ನು ಕಾರಗೃಹದಲ್ಲೇ ವಿಚಾರಣೆಗೆ ಒಳಪಡಿಸಲು ಪೊಲೀಸರು ಕೋರ್ಟ್ ಅನುಮತಿ ಪಡೆದುಕೊಂಡಿದ್ದಾರೆ. ಒಂದೊಮ್ಮೆ ತನಿಖೆಗೆ ಸಹಕರಿಸದಿದ್ದರೆ ವಶಕ್ಕೆ ಪಡೆದು ವಿಚಾರಣೆ ನಡೆಸಲು ಪೊಲೀಸರು ತೀರ್ಮಾನಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ನಗರ ಪೊಲೀಸ್ ಆಯುಕ್ತರು ಪರಪ್ಪನ ಅಗ್ರಹಾರಕ್ಕೆ ಭೇಟಿ ಪರಿಶೀಲಿಸಿದರು. ಇದನ್ನೂ ಓದಿ: ಬೈರತಿ ಸುರೇಶ್ ದುರ್ಯೋಧನ, ದುಶ್ಯಾಸನ ಇದ್ದಂತೆ: ಏಕವಚನದಲ್ಲೇ ಹೆಚ್.ವಿಶ್ವನಾಥ್ ವಾಗ್ದಾಳಿ

    ಡಿ-ಗ್ಯಾಂಗ್ ದಿಕ್ಕಾಪಾಲು..!
    ಎ-1 – ಪವಿತ್ರಾ ಗೌಡ – ಪರಪ್ಪನ ಅಗ್ರಹಾರ ಜೈಲು (ಈಗಾಗಲೇ ಇದ್ದಾರೆ)
    ಎ-2 – ದರ್ಶನ್ – ಬಳ್ಳಾರಿ ಜೈಲು
    ಎ-3 – ಪವನ್ – ಮೈಸೂರು ಜೈಲು
    ಎ-4 – ರಾಘವೇಂದ್ರ – ಮೈಸೂರು ಜೈಲು
    ಎ-5 – ನಂದೀಶ್ – ಮೈಸೂರು ಜೈಲು
    ಎ-6 – ಜಗದೀಶ್ – ಶಿವಮೊಗ್ಗ ಜೈಲು
    ಎ-7 – ಅನುಕುಮಾರ್ – ಪರಪ್ಪನ ಅಗ್ರಹಾರ ಜೈಲು (ಈಗಾಗಲೇ ಇದ್ದಾರೆ)
    ಎ-8 – ರವಿಶಂಕರ್ – ತುಮಕೂರು ಜೈಲು (ಈಗಾಗಲೇ ಇದ್ದಾರೆ)
    ಎ-9 – ಧನರಾಜ್ – ಧಾರವಾಡ ಜೈಲು
    ಎ-10 – ವಿನಯ್ – ವಿಜಯಪುರ ಜೈಲು
    ಎ-11 – ನಾಗರಾಜ್ – ಕಲಬುರಗಿ ಜೈಲು
    ಎ-12 – ಲಕ್ಷ್ಮಣ್ – ಶಿವಮೊಗ್ಗ ಜೈಲು
    ಎ-13 – ದೀಪಕ್ – ಪರಪ್ಪನ ಅಗ್ರಹಾರ ಜೈಲು (ಈಗಾಗಲೇ ಇದ್ದಾರೆ)
    ಎ-14 – ಪ್ರದೋಷ್ – ಬೆಳಗಾವಿ ಜೈಲು
    ಎ-15 – ಕಾರ್ತಿಕ್ – ತುಮಕೂರು ಜೈಲು (ಈಗಾಗಲೇ ಇದ್ದಾರೆ)
    ಎ-16 – ಕೇಶವಮೂರ್ತಿ – ತುಮಕೂರು ಜೈಲು (ಈಗಾಗಲೇ ಇದ್ದಾರೆ)
    ಎ-17 – ನಿಖಿಲ್‌ನಾಯಕ್ – ತುಮಕೂರು ಜೈಲು (ಈಗಾಗಲೇ ಇದ್ದಾರೆ)