Tag: bellary. ford car

  • ಚಲಿಸುತ್ತಿದ್ದ ವೇಳೆಯಲ್ಲೇ ಧಗ ಧಗನೇ ಹೊತ್ತಿ ಉರಿದ ಕಾರ್- ಚಾಲಕ ಬಚಾವ್

    ಚಲಿಸುತ್ತಿದ್ದ ವೇಳೆಯಲ್ಲೇ ಧಗ ಧಗನೇ ಹೊತ್ತಿ ಉರಿದ ಕಾರ್- ಚಾಲಕ ಬಚಾವ್

    ಬಳ್ಳಾರಿ: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿದ್ದು, ಪರಿಣಾಮ ಕಾರ್ ಸಂಪೂರ್ಣ ಭಸ್ಮವಾದ ಘಟನೆ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಗುಂಡಮುಣಗು ಗ್ರಾಮದಲ್ಲಿ ನಡೆದಿದೆ.

    ಅನ್ವರ್ ಎಂಬವರಿಗೆ ಸೇರಿದ ಫೋರ್ಡ್ ಕಾರ್ ಇದಾಗಿದ್ದು, ಇವರು ಬೆಂಗಳೂರಿನಿಂದ ಕಲಬುರುಗಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

    ಘಟನೆಯಲ್ಲಿ ಅನ್ವರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ನಡೆದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ರವಾನಿಸಿದ್ದು, ಸಿಬ್ಬಂದಿ ಘಟನಾ ಸ್ಥಳಕ್ಕೆ ದೌಡಾಯಿಸುವ ಮುನ್ನವೇ ಕಾರ್ ಸಂಪೂರ್ಣ ಭಸ್ಮವಾಗಿದೆ.

    https://www.youtube.com/watch?v=Rgk3zRObxL8&feature=youtu.be