Tag: Bellandur Police

  • ಮಹಿಳೆಯ ನಗ್ನ ವಿಡಿಯೋ ರೆಕಾರ್ಡ್‌ ಮಾಡ್ಕೊಂಡು ಬ್ಲ್ಯಾಕ್‌ಮೇಲ್‌ – ಪ್ರತಿಷ್ಠಿತ ದೇವಸ್ಥಾನದ ಅರ್ಚಕ ಅರೆಸ್ಟ್‌

    ಮಹಿಳೆಯ ನಗ್ನ ವಿಡಿಯೋ ರೆಕಾರ್ಡ್‌ ಮಾಡ್ಕೊಂಡು ಬ್ಲ್ಯಾಕ್‌ಮೇಲ್‌ – ಪ್ರತಿಷ್ಠಿತ ದೇವಸ್ಥಾನದ ಅರ್ಚಕ ಅರೆಸ್ಟ್‌

    ಬೆಂಗಳೂರು: ವಾಟ್ಸಪ್‌ನಲ್ಲಿ ಮಹಿಳೆಯ ಬೆತ್ತಲೆ ವಿಡಿಯೋ ರೆಕಾರ್ಡ್‌ (Video Record) ಮಾಡಿಕೊಂಡು ಬ್ಲ್ಯಾಕ್‌ ಮಾಡುತ್ತಿದ್ದ ಕೇರಳ ತ್ರಿಶೂರ್‌ನ ಪ್ರತಿಷ್ಠಿತ ದೇವಾಲಯದ ಅರ್ಚಕನನ್ನು ಬೆಳ್ಳಂದೂರು ಪೊಲೀಸರು (Bellandur Police) ಬಂಧಿಸಿದ್ದಾರೆ.

    ಪ್ರತಿಷ್ಠಿತ ಪೆರಿಗೊಟ್ಟುಕ್ಕಾರ ದೇವಾಲಯದ ಅರ್ಚಕ (Priest) ಅರುಣ್ ಬಂಧಿತ ಆರೋಪಿ. ಪ್ರಕರಣ ಬೆಳಕಿಗೆ ಬಂದ ಬಳಿಕ ಮುಖ್ಯ ಅರ್ಚಕ ಉನ್ನಿ ದಾಮೋದರನ್ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಇರಾನ್‌-ಇಸ್ರೇಲ್‌ ಸಂಘರ್ಷ ತೀವ್ರ – ಇಸ್ರೇಲ್‌ ಮಿಸೈಲ್‌ ದಾಳಿಗೆ ಇರಾನ್‌ನ 14 ಅಧಿಕಾರಿಗಳು ಬಲಿ

    ಏನಿದು ಅರ್ಚಕನ ಕಾಮದಾಟ?
    ಮಹಿಳೆಯೊಬ್ಬರು (Bengalur Women) ತನಗೆ ಮಾಟಮಂತ್ರ ಮಾಡಿಸಿದ್ದಾರೆಂದು ದೇವಸ್ತಾನಕ್ಕೆ ತೆರಳಿದ್ದರು. ಈ ವೇಳೆ ದೇವಾಲಯದ ಅರ್ಚಕ ಅರುಣ್ ಪರಿಚಯ ಆಗಿತ್ತು. 24,000 ರೂ. ಕೊಟ್ಟರೆ ಪೂಜೆ ಮಾಡೋದಾಗಿ ಅರುಣ್ ಹೇಳಿದ್ದ. ಬಳಿಕ ಮಹಿಳೆ ನಂಬರ್ ಪಡೆದು ಹೇಳಿದ ದಿನ ಬರುವಂತೆ ಸೂಚನೆ ಕೊಟ್ಟಿದ್ದ. ಇದಾದ ಬಳಿಕ ಮಹಿಳೆಗೆ ತಡರಾತ್ರಿಯಲ್ಲಿ ನಿರಂತರ ವಾಟ್ಸಪ್ ಕರೆ ಮಾಡುತ್ತಿದ್ದ. ತಾನು ಬೆತ್ತಲೆಯಾಗಿ ನಿಂತು ವಿಡಿಯೋ ಕರೆ ಮಾಡುತ್ತಿದ್ದ. ಅಲ್ಲದೇ ನಿಮಗೆ ಮಾಡಿರುವ ಮಾಟ ಮಂತ್ರ ಪರಿಹಾರ ಆಗಬೇಕಾದ್ರೆ ಸಂಪೂರ್ಣ ಬೆತ್ತಲಾಗುವಂತೆ ಪೀಡಿಸುತ್ತಿದ್ದ. ಇದನ್ನೂ ಓದಿ: ಇಂದಿನಿಂದ ಅನಧಿಕೃತ ಬೈಕ್ ಟ್ಯಾಕ್ಸಿಗೆ ಬ್ರೇಕ್ – ರಸ್ತೆಗಿಳಿದ್ರೆ ಬೈಕ್ ಸೀಜ್

    ಮಹಿಳೆ ಇದನ್ನ ನಿರಾಕರಿಸಿದ್ದಕ್ಕೆ ಬೆತ್ತಲಾಗಿಲ್ಲ ಅಂದ್ರೆ ನಿನ್ನ ಇಬ್ಬರು ಮಕ್ಕಳು ಸಾಯೋ ಹಾಗೆ ರಿಟರ್ನ್ ಪೂಜೆ‌ ಮಾಡ್ತೀನಿ ಅಂತ ಬೆದರಿಕೆ ಹಾಕಿದ್ದ. ಅರ್ಚಕನ ಬೆದರಿಕೆಯಿಂದ ಮಹಿಳೆ ಬೆತ್ತಲಾಗಿದ್ದಳು. ಬಳಿಕ ಬೆತ್ತಲೆ ಆಗಿರೋದನ್ನ ಅರ್ಚಕ ವಿಡಿಯೋ ರೆಕಾರ್ಡ್‌ ಮಾಡಿಕೊಂಡಿದ್ದ. ನಂತರ ಆ ವಿಡಿಯೋ ಇಟ್ಟುಕೊಂಡು ಕರೆದಾಗಲೆಲ್ಲ ಕೇರಳಕ್ಕೆ ಬರುವಂತೆ ಒತ್ತಾಯ ಮಾಡ್ತಿದ್ದ. ನೀನು ಬರುವಾಗ ಹೇಳು ರೂಂ ಬುಕ್‌ ಮಾಡ್ತೀನಿ ಅಂತ ಚಿತ್ರಹಿಂಸೆ ಕೊಟ್ತಿದ್ದ. ಇದರಿಂದ ಬೇಸತ್ತ ಮಹಿಳೆ ಅರ್ಚಕ ಅರುಣ್‌ ಹಾಗೂ ಮುಖ್ಯ ಅರ್ಚಕ ಉನ್ನಿ ದಾಮೋದರ್ ವಿರುದ್ಧ ಬೆಳ್ಳಂದೂರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು.

    ಅಸಭ್ಯ ವರ್ತನೆ ಮತ್ತು ಕಾರಿನಲ್ಲಿ ಕರೆದೊಯ್ದು ಅತ್ಯಾಚಾರಕ್ಕೆ ಯತ್ನ ಎಂದು ಆರೋಪಿಸಿ ಮಹಿಳೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅರ್ಚಕ ಅರುಣ್‌ನನ್ನ ಬಂಧಿಸಿದ್ದಾರೆ. ಮುಖ್ಯ ಅರ್ಚಕ ಉನ್ನಿ ದಾಮೋದರನ್ ಪರಾರಿಯಾಗಿದ್ದು, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ಪತನ – 80 ಜನರ ಡಿಎನ್‌ಎ ಮ್ಯಾಚ್, 33 ಮೃತದೇಹಗಳ ಹಸ್ತಾಂತರ

  • ಬಸ್ ನಿಲ್ಲಿಸದ್ದಕ್ಕೆ ಬಿಎಂಟಿಸಿ ಡ್ರೈವರ್‌ಗೆ ಚಪ್ಪಲಿಯಿಂದ ಮಹಿಳೆ ಹಲ್ಲೆ- ದೂರು ದಾಖಲು

    ಬಸ್ ನಿಲ್ಲಿಸದ್ದಕ್ಕೆ ಬಿಎಂಟಿಸಿ ಡ್ರೈವರ್‌ಗೆ ಚಪ್ಪಲಿಯಿಂದ ಮಹಿಳೆ ಹಲ್ಲೆ- ದೂರು ದಾಖಲು

    ಬೆಂಗಳೂರು: ಬಸ್ ನಿಲ್ಲಿಸದ್ದಕ್ಕೆ ಬಿಎಂಟಿಸಿ ಡ್ರೈವರ್‌ಗೆ (BMTC Driver) ಮಹಿಳಾ ಪ್ರಯಾಣಿಕರೊಬ್ಬರು ಚಪ್ಪಲಿಯಿಂದ ಹಲ್ಲೆ ನಡೆಸಿದ ಘಟನೆ ಬೆಂಗಳೂರಲ್ಲಿ (Bengaluru) ನಡೆದಿದೆ.

    ಇದೇ ಬುಧವಾರ ಜೂ. 11ರಂದು ಟಿನ್ ಫ್ಯಾಕ್ಟರಿಯಿಂದ ಎಲೆಕ್ಟ್ರಾನಿಕ್ ಸಿಟಿಗೆ ಸಂಚರಿಸುತ್ತಿದ್ದ ಕೆಎ57, ಎಫ್ 0836 ಬಸ್‌ನಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ 8.40ರ ಹೊತ್ತಿಗೆ ಬಸ್ ಸರ್ಜಾಪುರ ರಸ್ತೆಯ ಕೈಕೊಂಡರಹಳ್ಳಿ ಸಮೀಪ ತಲುಪಿದಾಗ ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಕಾವ್ಯ ಎಂಬ ಮಹಿಳೆ, ಬಸ್ ಸ್ಟಾಪ್ ಇಲ್ಲದೇ ಇದ್ರೂ, ಎಲೆಕ್ಟ್ರಾನಿಕ್ ಸಿಟಿ (Electronic City) ರಸ್ತೆಯಲ್ಲಿ ಹೋಗುವಾಗ ಕಚೇರಿ ಮುಂದೆ ಬಸ್ ನಿಲ್ಲಿಸಲು ಹೇಳಿದ್ದಳು. ಇದನ್ನೂ ಓದಿ: ಗದಗ | ವರುಣನ ಆರ್ಭಟಕ್ಕೆ ಕೊಚ್ಚಿಹೋದ ಸೇತುವೆ – ಹರಿಯುವ ನೀರಿನಲ್ಲಿ ಜನರ ಹುಚ್ಚಾಟ

    ಟ್ರಾಫಿಕ್‌ನಿಂದ ಬಸ್ ಡ್ರೈವರ್ ಬಸ್ ನಿಲ್ಲಿಸಿಲ್ಲ. ಆಗ ಹೊಟ್ಟೆ ಹಿಡಿದುಕೊಂಡು ಕಿರುಚಿ, ಅವಾಚ್ಯ ಶಬ್ದಗಳಿಂದ 42 ವರ್ಷದ ಚಾಲಕ ಅತಹರ್ ಹುಸೇನ್ ಅವರನ್ನು ನಿಂದಿಸಿದ್ದಳು. ಬಳಿಕ ಮಹಿಳೆ ಬಲ ಚಪ್ಪಲಿ ತೆಗೆದುಕೊಂಡು ಹೊಡೆದಿದ್ದಾಳೆ ಎಂದು ದೂರು ದಾಖಲಾಗಿದೆ. ಈ ಬಗ್ಗೆ ಬೆಳ್ಳಂದೂರು ಪೋಲಿಸ್ ಠಾಣೆಯಲ್ಲಿ ಸೆಕ್ಷನ್ 121, 131, 132, 352 ಅಡಿಯಲ್ಲಿ ದೂರು ದಾಖಲಾಗಿದೆ.

  • ಬೆಂಗ್ಳೂರಲ್ಲೊಂದು ಅಮಾನವೀಯ ಘಟನೆ – ಘೋರ ದುರಂತಕ್ಕೆ ಪುಟ್ಟ ಕಂದಮ್ಮ ಬಲಿ!

    ಬೆಂಗ್ಳೂರಲ್ಲೊಂದು ಅಮಾನವೀಯ ಘಟನೆ – ಘೋರ ದುರಂತಕ್ಕೆ ಪುಟ್ಟ ಕಂದಮ್ಮ ಬಲಿ!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ (Bengaluru) ನಡೆದಿರುವ ಮತ್ತೊಂದು ಘೋರ ದುರಂತಕ್ಕೆ ಪುಟ್ಟ ಮಗುವೊಂದು ಬಲಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಅಪಾರ್ಟ್ಮೆಂಟ್‌ವೊಂದರಲ್ಲಿ (Apartment) ಕುಳಿತು ಆಟವಾಡುತ್ತಿದ್ದ ಮಗುವಿನ ಮೇಲೆಯೇ ಕಾರು ಹತ್ತಿರುವ ಘಟನೆ ಕಸುವಿನಹಳ್ಳಿಯ ಅಪಾರ್ಟ್ಮೆಂಟ್‌ವೊಂದರ ಮುಂಭಾಗ ನಡೆದಿದೆ. ಕಳೆದ 10 ದಿನಗಳ ಹಿಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಜೋಗ್ ಜುತಾರ್, ಅನಿತಾ ದಂಪತಿಗೆ ಸೇರಿದ ಅರ್ಬಿನಾ (3) ಮಗುವಿನ ಮೇಲೆ ಚಾಲಕ ಕಾರು ಹತ್ತಿಸಿ ಹತ್ಯೆಗೈದಿದ್ದಾನೆ.  ಅಮಾನವಿಯ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ರಾಮ ಮಂದಿರ ಉದ್ಘಾಟನೆಗೆ ದಿನಗಣನೆ- ಅಂತಿಮ ಹಂತದಲ್ಲಿ ತಯಾರಿ, ವಿಶೇಷ ಸಾರಿಗೆ ವ್ಯವಸ್ಥೆ

    ಮೊದಲು ತಮ್ಮ ಅರಿವಿಗೆ ಬಾರದೇ ಕಟ್ಟಡದ ಮೇಲಿಂದ ಮಗು ಬಿದ್ದಿರುವುದಾಗಿ ಪೋಷಕರು ದೂರು ಕೊಟ್ದಿದ್ದರು. ಆಸ್ಪತ್ರೆಗೆ ಕರೆತರುವ ಮಾರ್ಗಮಧ್ಯದಲ್ಲಿ ಮಗು ಮೃತಪಟ್ಟಿರುವುದಾಗಿ ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದರು. ಆದ್ರೆ ಮಗುವಿನ ದೇಹದಲ್ಲಿ ರಕ್ತಸ್ರಾವ ಆಗುತ್ತಿದ್ದುದ್ದನ್ನು ಕಂಡು ಅನುಮಾನಗೊಂಡ ಪೊಲೀಸರು ಸಿಸಿಟಿವಿ ದೃಶ್ಯ ಪರಿಶೀಲಿಸಿದ್ದಾರೆ. ನಂತರ ಎಕ್ಸ್ ಯುವಿ ಕಾರು ಮಗುವಿನ ಮೇಲೆ ಹರಿದಿರುವುದು ಗೊತ್ತಾಗಿದೆ.

    ಸದ್ಯ ಕೃತ್ಯ ಎಸಗಿದ ಅಪಾರ್ಟ್ಮೆಂನ ಸುಮನ್ ಎಕ್ಸ್ ಯುವಿ ಕಾರು ಚಾಲಕನ ವಿರುದ್ಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ (Bellandur Police Station) ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಂಜಯ್ ಸಿಂಗ್‍ಗೆ ನ್ಯಾಯಾಂಗ ಬಂಧನ- ರಾಜ್ಯಸಭೆಯ AAP ನಾಯಕನಾಗಿ ರಾಘವ್ ಛಡ್ಡಾ ಆಯ್ಕೆ