ನವದೆಹಲಿ : ಬೆಳ್ಳಂದೂರು ಕರೆ ಮಾಲಿನ್ಯ ಪ್ರಕರಣದಲ್ಲಿ ತಮ್ಮನ್ನು ಪ್ರತ್ಯೇಕವಾಗಿ ಪರಿಗಣಿಸುವಂತೆ ರಾಜ್ಯಸಭಾ ಸಂಸದ ಕುಪೇಂದ್ರ ರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರ ಸೇರಿ ಒಂಬತ್ತು ಸರ್ಕಾರಿ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿದೆ.
ಇಂದು ಸಿಜೆಐ ಎಸ್.ಎ ಬೋಬ್ಡೆ ನೇತೃತ್ವದ ತ್ರಿ ಸದಸ್ಯ ಪೀಠ ಮುಂದೆ ವಾದ ಮಂಡಿಸಿದ ವಕೀಲ ರಾಮ್ ಪ್ರಸಾದ್, ರಾಷ್ಟ್ರೀಯ ಹಸಿರು ನ್ಯಾಯಧೀಕರಣದಲ್ಲಿ ಮೊದಲು ಅರ್ಜಿ ಸಲ್ಲಿಸಿದ್ದು ನಮ್ಮ ಕಕ್ಷಿದಾರರು ಬಳಿಕ ಎನ್ ಜಿಟಿ ಸ್ವಯಂ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಅಲ್ಲದೇ ಎನ್ ಜಿಟಿ ದಾಖಲಿಸಿರುವ ಸ್ವಯಂ ದೂರಿನಲ್ಲೆ ನಮ್ಮ ಅರ್ಜಿಯನ್ನು ಸೇರ್ಪಡೆ ಮಾಡಿಕೊಂಡು ವಿಚಾರಣೆ ನಡೆಸುತ್ತಿದೆ. ಆದರೆ ನಮ್ಮ ಅರ್ಜಿಯನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಸೂಚಿಸಬೇಕು ಎಂದು ಮನವಿ ಮಾಡಿದರು.
ವಿಚಾರಣೆ ಆಲಿಸಿದ ಪೀಠ ರಾಜ್ಯ ಸರ್ಕಾರ, ಬಿಡಿಎ, ತಮಿಳುನಾಡು ಸರ್ಕಾರ, ಕೇಂದ್ರ ಪರಿಸರ ಇಲಾಖೆ, ಬಿಬಿಎಂಪಿ, ಪರಿಸರ ನಿಯಂತ್ರಣ ಮಂಡಳಿ ಸೇರಿ 9 ಇಲಾಖೆಗಳಿಗೆ ನೋಟಿಸ್ ನೀಡಿ ವಿಚಾರಣೆ ಮುಂದೂಡಿದೆ.
ಬೆಂಗಳೂರು: ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಬೆಳ್ಳಂದೂರು ಕೆರೆಯ ಪಕ್ಕ ನಿಂತಿರುವುದು ಮತ್ತು ಮುಳುಗಿರುವ ರೀತಿ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿತ್ತು. ಯಾಕೆಂದರೆ ಬೆಳ್ಳಂದೂರು ಕೆರೆಯ ಬಳಿ ಜನರು ಹೋಗಲು ಇಷ್ಟ ಪಡುವುದಿಲ್ಲ. ಅಷ್ಟೊಂದು ಕೊಳಚೆಯಾಗಿ ವಾಸನೆ ಬರುತ್ತಿರುತ್ತದೆ. ಆದರೆ ರಶ್ಮಿಕಾ ಹೇಗೆ ಕೆರೆಯಲ್ಲಿ ಮುಳುಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ ಎಂದು ಅಭಿಮಾನಿಗಳಲ್ಲಿ ಗೊಂದಲ ಮೂಡಿತ್ತು. ಇದನ್ನೂ ಓದಿ: ಬೆಳ್ಳಂದೂರು ಕೆರೆಯೊಳಗೆ ರಶ್ಮಿಕಾ ಮಂದಣ್ಣ ಫೋಟೋಶೂಟ್!
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಶ್ಮಿಕಾ, “ಆ ಕೆರೆ ನೀರನ್ನು ನೀವೇನಾದರೂ ನೋಡಿದರೆ ಹತ್ತಿರ ಹೋಗಲೂ ಭಯವಾಗುತ್ತದೆ. ಅಲ್ಲಿನ ಕೆಟ್ಟ ವಾಸನೆಯಿಂದ ರಸ್ತೆಯಲ್ಲಿ ಹೋಗುವಾಗಲೂ ಮೂಗು ಮುಚ್ಚಿಕೊಳ್ಳಬೇಕಾದ ಪರಿಸ್ಥಿತಿಯಿದೆ. ಅಲ್ಲಿಗೆ ಹೋದಾಗ ನನಗೆ ಕಾರಿನಿಂದ ಕೆಳಗೆ ಇಳಿಯಲೂ ಸಾಧ್ಯವಾಗದಂತಹ ವಾತಾವರಣವಿತ್ತು. ಅಂದಮೇಲೆ ನಾನು ಆ ನೀರಿನಲ್ಲಿ ಮುಳುಗಿ ಫೋಟೋಶೂಟ್ ಮಾಡಿಸಿಕೊಂಡಿದ್ದೇನೆ ಎಂದು ಜನರು ಹೇಗೆ ಅಂದುಕೊಂಡರೋ ಖಂಡಿತವಾಗಿಯೂ ನನಗೆ ಗೊತ್ತಾಗುತ್ತಿಲ್ಲ. ನಾನು ಬೆಳ್ಳಂದೂರು ಕೆರೆಯ ದಡದಲ್ಲಿ ನಿಂತು ಫೋಟೋಶೂಟ್ ಮಾಡಿಸಿಕೊಂಡಿದ್ದೇನೆ. ಆದರೆ ಅದರೊಳಗೆ ಇಳಿದಿಲ್ಲ. ಬೆಳ್ಳಂದೂರು ಕೆರೆ ಕೆಮಿಕಲ್‍ನಿಂದ ಆವೃತವಾದ ಕಾರಣ ಇಳಿಯೋದು ಅಸಾಧ್ಯ. ಈ ರೀತಿಯಾಗಿ ಫೋಟೋ ಮೂಲಕ ಪರಿಸರ ಕಾಳಜಿಯ ಬಗ್ಗೆ ಜಾಗೃತಿ ಮೂಡಿಸೋದಕ್ಕಾಗಿ ಸ್ವಿಮ್ಮಿಂಗ್ ಫೂಲ್‍ನಲ್ಲಿ ಈ ಫೋಟೋವೊಂದನ್ನ ಶೂಟ್ ಮಾಡಲಾಗಿದೆ” ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
Well wasn't aware of this till we had to actually go and shoot this in Bellandur lake..which like really broke my heart,and imagine few years down the line..it’s the same case everywhere else..😱 I’d rather not want to be in that space.. I just wanted to share 🤷 (2/2) pic.twitter.com/zshJLDwW6s
ಕೆಲ ದಿನಗಳ ಹಿಂದೆ ಕೆರೆಗಳ ಸಂರಕ್ಷಣೆ ಬಗ್ಗೆ ಫೋಟೋಶೂಟ್ ಮೂಲಕ ಜಾಗೃತಿ ಮೂಡಿಸಲು ಎಂದು ಸನ್ಮತಿ ಪ್ರಸಾದ್ ಅನ್ನೋರು ರಶ್ಮಿಕಾರನ್ನು ಕೇಳಿದ್ದರು. ಇದಕ್ಕೆ ಒಪ್ಪಿದ್ದ ರಶ್ಮಿಕಾ ನೊರೆ ಕೆರೆಯ ಪಕ್ಕ ನಿಂತು ಫೋಟೋಗೆ ಪೋಸ್ ನೀಡಿದ್ದರು. ಇದಕ್ಕೆ ಸಂಭಾವನೆ ಕೂಡ ಪಡೆದಿರಲಿಲ್ಲ. ಆದರೆ ಅಪ್ಪಿ ತಪ್ಪಿಯೂ ಕೆರೆಗೆ ಇಳಿದಿರಲಿಲ್ಲ. ಆದರೆ ಈ ಫೋಟೋಶೂಟ್ ರಶ್ಮಿಕಾ ಗೆಳತಿಯ ಮನೆಯಲ್ಲಿರುವ ಈಜುಕೊಳದಲ್ಲಿ ಮಾಡಲಾಗಿದೆ.
ಪ್ಲಾಸ್ಟಿಕ್ ಮತ್ತಿತರ ವಸ್ತುಗಳು ನೀರಿನಲ್ಲಿ ತೇಲುತ್ತಿರುವಾಗ ಅದರ ಮಧ್ಯದಲ್ಲಿ ರಶ್ಮಿಕಾ ಇರುವಂತೆ ಅಂಡರ್ ವಾಟರ್‍ನಲ್ಲಿ ಮಾಡಿದ್ದ ಫೋಟೋಶೂಟ್ ಇದಾಗಿದೆ. ಆದರೆ ಆ ಫೋಟೋಗಳನ್ನು ನೋಡಿ ಎಲ್ಲರೂ ರಶ್ಮಿಕಾ ಕಲುಷಿತ ಕೆರೆಯಲ್ಲಿ ಈಜಾಡಿದ್ದಾರೆ ಅಂತ ಸುದ್ದಿಯಾಗಿತ್ತು.
ಬೆಂಗಳೂರು: ರಾಜಕಾರಣಿಗಳು ಹಾಗು ಬಿಲ್ಡರ್ ಗಳ ಒತ್ತಾಯಕ್ಕೆ ಮಣಿದ ರಾಜ್ಯ ಸರ್ಕಾರ ಇದೀಗ ಕೆರೆ ಅಭಿವೃದ್ಧಿ ಪ್ರಾಧಿಕಾರವನ್ನ ಮುಚ್ಚಲು ಹೊರಟಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಬೆಳ್ಳಂದೂರು ಕೆರೆಗೆ ಸಂಬಂಧಿಸಿದಂತೆ ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಹಲವು ಬಿಲ್ಡರ್ ಗಳಿಗೆ, ಕೈಗಾರಿಗಳಿಗೆ ಮತ್ತು ಅಪಾರ್ಟ್ ಮೆಂಟ್‍ಗಳಿಗೆ ನೋಟಿಸ್ ನೀಡಿತ್ತು. ಕೂಡಲೇ ಕೆರೆಗೆ ಹರಿಸುತ್ತಿರುವ ಮಾಲಿನ್ಯ ನೀರು ನಿಲ್ಲಿಸಿ. ಇಲ್ಲವೇ ಕಾನೂನು ಕ್ರಮಕ್ಕೆ ಮುಂದಾಗಿ ಅಂತ ಪಾಧಿಕಾರ ನೋಟಿಸ್ ನೀಡಿತ್ತು. ಇದೇ ವರದಿಯನ್ನು ಪ್ರಾಧಿಕಾರ ಎನ್‍ಜಿಟಿಗೂ ಸಹ ನೀಡಿತ್ತು. ಎನ್‍ಜಿಟ್ ಬೆಳ್ಳಂದೂರು ಕೆರೆ ಸಂಬಂದಿಸಿದ ವರದಿಗೆ ಪ್ರಶಂಸೆ ವ್ಯಕ್ತಪಡಿಸಿ ಅದನ್ನು ಜಾರಿಗೆ ತರುವ ನಿಟ್ಟಿನಲ್ಲಿ ವರದಿ ನೀಡಿ ಅಂತ ಹೇಳಿತ್ತು. ಇದರಿಂದ ಬೆಳ್ಳಂದೂರು ಕೆರೆ ಸಮೀಪವಿದ್ದ ಹಲವು ಕೈಗಾರಿಕೆಗಳು ಮುಚ್ಚುವ ಭೀತಿ ಎದುರಿಸಿದ್ದವು.
ಈ ಹಿನ್ನೆಲೆಯಲ್ಲಿ ಪ್ರಭಾವಿಗಳು ಸರ್ಕಾರದ ಮೇಲೆ ಒತ್ತಡ ತಂದಿದ್ದರಿಂದ ಕೆರೆ ಅಭಿವೃದ್ಧ ಪ್ರಾಧಿಕಾರವನ್ನ ಇತ್ತೀಚೆಗೆ ರಚನೆಯಾಗಿರೋ ಟ್ಯಾಂಕ್ ಕನ್ಸರ್ವವೇಷನ್ ಪ್ರಾಧಿಕಾರದ ಜೊತೆ ವಿಲೀನಗೊಳಿಸಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇದೇ ವಿಷಯಕ್ಕೆ ಸಂಬಂಧಿಸಿದ ಈಗಾಗಲೇ ಅಧಿಕೃತ ಆದೇಶವನ್ನ ಸರ್ಕಾರ ಹೊರಡಿಸಿದೆ. ಈಗಾಗಲೇ ಕೆರೆ ಅಭಿವೃದ್ದಿ ಪ್ರಾಧಿಕಾರಕಕ್ಕೆ ನೀಡಿರೋ ದೂರಗಳನ್ನು ಮತ್ತು ಇತರೆ ಫೈಲ್‍ಗಳನ್ನು ಹಸ್ತಾಂತರಿಸಿ ಅಂತ ಹೇಳಿದ್ದರಿಂದ ಸರಿ ಸುಮಾರು 10 ಸಾವಿರಕ್ಕೂ ಹೆಚ್ಚು ಪೈಲ್‍ಗಳನ್ನ ಸಿಬ್ಬಂದಿ ಗಂಟುಮೂಟೆ ಕಟ್ಟಿದ್ದಾರೆ.
ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿರುವ ಬೆಳ್ಳಂದೂರು ಕೆರೆಗೆ ನವ ಭಾರತ ಪ್ರಜಾ ಸತ್ತಾತ್ಮಕ ಪಕ್ಷ ಮಂಗಳವಾರ ‘ಕಾಂಗ್ರೆಸ್ ಕೆರೆ’ ಎಂದು ನಾಮಕರಣ ಮಾಡಿದೆ.
ಕಳೆದ ನಾಲ್ಕೈದು ವರ್ಷಗಳಿಂದ ಬೆಳ್ಳಂದೂರು ಕೆರೆಯಲ್ಲಿ ನೊರೆ ಸಮಸ್ಯೆ ತಾಂಡವವಾಡುತ್ತಿದ್ದರೂ ಮುಕ್ತಿ ಕಲ್ಪಿಸದ ಕಾರಣ ಕಾಂಗ್ರೆಸ್ ಸರ್ಕಾರ ಕೆರೆ ಎಂದು ನಾಮಕರಣ ಮಾಡಲಾಗಿದೆ. ನಾಮಕರಣ ಮಹೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಸಂಸದ ಪಿ.ಸಿ. ಮೋಹನ್, ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ಅವರ ವೇಷ ತೊಟ್ಟ ಮುಸುಕುದಾರಿ ಅತಿಥಿಗಳು ಭಾಗಿಯಾಗಿದ್ದಾರೆ.
ಪಕ್ಷದ ವತಿಯಿಂದ ಬೆಳ್ಳಂದೂರು ಕೊಡಿಯಿಂದ ಯಮಲೂರು ಕೋಡಿವರೆಗೆ ಮೆರವಣಿಗೆ ಮಾಡಲಾಯಿತು. ಈ ವೇಳೆ ಸರ್ಕಾರ, ಬಿಡಿಎ ಹಾಗೂ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಕಾರ್ಯಕರ್ತರು ಅಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಬೆಳ್ಳಂದೂರು ಕೆರೆ ಅಭಿವೃದ್ಧಿ ವಿಚಾರದಲ್ಲಿ ಹಸಿರು ನ್ಯಾಯ ಪೀಠಕ್ಕೆ ತಪ್ಪು ಮಾಹಿತಿ ನೀಡುತ್ತಿರುವ ಅಧಿಕಾರಿಗಳ ವಿರುದ್ಧವೂ ಜಾಥಾದಲ್ಲಿ ಕಿಡಿಕಾರಿದ್ರು.
ನ್ಯಾಯಾಧಿಕರಣದಲ್ಲಿ ಇಂದು ಏನಾಯ್ತು?: ಬೆಳ್ಳಂದೂರು ಕೆರೆಯ ಅಭಿವೃದ್ಧಿ ವಿಚಾರವಾಗಿ ಕ್ರಿಯಾವರದಿ ಸಲ್ಲಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಬೆಳ್ಳಂದೂರು ಕೆರೆ ಮಾಲಿನ್ಯ ವಿಚಾರವಾಗಿ ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಾಧಿಕರಣ, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಮಹೇಂದ್ರ ಜೈನ್ ನೇತೃತ್ವದಲ್ಲಿ ಕ್ರಿಯಾ ಯೋಜನೆ ರೂಪಿಸಲು ಸೂಚಿಸಿದೆ. ಬಿಬಿಎಂಪಿ, ಬಿಡಬ್ಲ್ಯು ಎಸ್‍ಎಸ್‍ಬಿ, ಬಿಡಿಎ, ಕೆರೆ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಒಟ್ಟಾಗಿ 10 ದಿನದಲ್ಲಿ ಕ್ರಿಯಾ ಯೋಜನೆ ತಯಾರಿಸಬೇಕು.
ವರದಿಯಲ್ಲಿ ಘನ ತಾಜ್ಯ ನಿರ್ವಹಣೆ, ಕೊಳಚೆ ನೀರು ಸಂಸ್ಕರಣೆ, ಚರಂಡಿ ನೀರು ತಡೆ ಸೇರಿದಂತೆ ಒಂದೇ ಬಾರಿ ಹೂಳು ತೆಗೆದು ಸ್ವಚ್ಛ ಮಾಡಲು ತೆಗೆದುಕೊಳ್ಳಬಹುದು ಕ್ರಮಗಳ ಕುರಿತು ಪ್ಲಾನ್ ರೂಪಿಸಿ ಅಂತ ನ್ಯಾ. ಸ್ವತಂತ್ರ ಕುಮಾರ್ ನೇತೃತ್ವದ ಪೀಠ ಅಧಿಕಾರಿಗಳಿಗೆ ಸೂಚನೆ ನೀಡಿದೆ. ವಿಚಾರಣೆ ಆರಂಭದಲ್ಲಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ನ್ಯಾಯಾಧಿಕರಣ ಇದುವರೆಗೂ ಏನೆಲ್ಲ ಕೆಲಸ ಮಾಡಲಾಗಿದೆ ಅಂತಾ ಪ್ರಶ್ನಿಸಿತು.
ಈ ವೇಳೆ ಅಧಿಕಾರಿಗಳು ನ್ಯಾಯಾಧಿಕರಣ ನೀಡಿದ ಎಲ್ಲ ಕಾರ್ಯ ಮಾಡಲಾಗಿದೆ ಅಂತ ಉತ್ತರಿಸಿದ್ರು. ಇದಕ್ಕೆ ಗರಂ ಆದ ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ಒಂದು ಕೆಜಿ ಕಸ ಇಲ್ಲವಾದ್ರೆ ನಮ್ಮ ಅಧಿಕಾರಿಗಳನ್ನು ಕಳುಹಿಸಿ ವಾಸ್ತವ ವರದಿ ತರಿಸಲಾಗುತ್ತೆ ಎಂದ್ರು. ಈ ವೇಳೆ ಅಧಿಕಾರಿಗಳು ಕೆಲಸ ಪ್ರಗತಿಯಲ್ಲಿದೆ ಅಂತಾ ಪರಿಸ್ಥಿತಿ ನಿಭಾಯಿಸಿದ್ರು.
ಇನ್ನು ಅಫಿಡವಿಟ್ ಸಲ್ಲಿಸುವುದು ಬಿಟ್ಟು ಕಾರ್ಯನ್ಮುಕರಾಗಿ ಕೆಲಸ ಮಾಡಿ. ಅಧಿಕಾರಿಗಳ ವರದಿ ತಯಾರಿಸಿ ಅವುಗಳನ್ನು ಪ್ರತಿವಾದಿಗಳಿಗೆ ನೀಡಿ. 10 ದಿನಗಳಲ್ಲಿ ಸುದೀರ್ಘ ವರದಿ ನ್ಯಾಯಧಿಕರಣ ಕ್ಕೆ ಸಲ್ಲಿಸಬೇಕು. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಅಂತ ಅಧಿಕಾರಿಗಳಿಗೆ ನ್ಯಾಯಾಧಿಕರಣ ಸೂಚಿಸಿದೆ. ಬಳಿಕ ವಿಚಾರಣೆಯನ್ನು ಸೆಪ್ಟೆಂಬರ್ 8 ಮುಂದೂಡಿದ ನ್ಯಾಯಾಧಿಕರಣ, ಮುಂದಿನ ವಿಚಾರಣೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ಮುಖ್ಯಸ್ಥ ಲಕ್ಷ್ಮಣ್ ಖುದ್ದು ಹಾಜರಾಗಬೇಕು ಎಂದು ಸೂಚಿಸಿದೆ.
ಕೆರೆ ವ್ಯಾಪ್ತಿಯಲ್ಲಿನ ಅಪಾರ್ಟ್ ಮೆಂಟ್ ಗಳಿಗೆ, ಕೆರೆಗೆ ಕೊಳಚೆ ನೀರು ಹರಿ ಬಿಡಲಾಗುವ ಅಪಾರ್ಟ್ ಮೆಂಟ್ ಗಳಿಗೆ, ಘನತಾಜ್ಯ ಸಂಸ್ಕರಣಾ ಘಟಕ ಅಳವಡಿಸದ ಅಪಾರ್ಟ್ ಮೆಂಟ್ ಗಳಿಗೆ ನೋಟಿಸ್ ಜಾರಿ ಅಂತ ಅಧಿಕಾರಿಗಳಿಗೆ ನ್ಯಾಯಾಧಿಕರಣದ ಖಡಕ್ ಸೂಚನೆ ನೀಡಿದೆ.
ಒಂದು ತಿಂಗಳೊಳಗೆ ಸಂಸ್ಕರಣಾ ಘಟಕ ಅಳವಡಿಸಿಕೊಳ್ಳಬೇಕು. ಅಳವಡಿಸಿಕೊಂಡಿರುವ ಸಂಸ್ಕರಣಾ ಘಟಕ ಚಾಲನೆಯಲ್ಲಿರಬೇಕು. ನಿಯಮ ಪಾಲಿಸದ ಅಪಾಟ್ರ್ಮೆಂಟ್‍ಗಳಿಗೆ ನೀರು ವಿದ್ಯುತ್ ಕಟ್ ಮಾಡಿ ಅಂತ ಮೌಖಿಕವಾಗಿ ಅಧಿಕಾರಿಗಳಿಗೆ ನ್ಯಾಯಾಧಿಕರಣ ಸೂಚಿಸಿದೆ.
ಬೆಂಗಳೂರು: ಕಳೆದ ರಾತ್ರಿ ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬೆಳ್ಳಂದೂರು ಕೆರೆ ಕೋಡಿಯಲ್ಲಿ ನೊರೆಯ ಅರ್ಭಟ ಹೆಚ್ಚಾಗಿದೆ.
ಈ ನೊರೆಯನ್ನು ನಿಯಂತ್ರಿಸುವ ಸಲುವಾಗಿ ನೀರು ಸಿಂಪಡಿಸಲು ಅಳವಡಿಸಿದ್ದ ಮೋಟರ್ ರಿಪೇರಿಯಾಗಿರುವುದರಿಂದ ನೊರೆಯನ್ನು ನಿಯಂತ್ರಿಸಲು ಸಾಧ್ಯವಾಗದೆ ವಾಹನ ಸವಾರರು ಪರದಾಡುವಂತಾಗಿದೆ. ಪ್ರತಿ ಬಾರಿ ಮಳೆ ಬಂದಾಗಲು ಬೆಳ್ಳಂದೂರು ಕೆರೆ, ವರ್ತೂರು ಕೆರೆ ಸುತ್ತಮುತ್ತಲಿನ ಪ್ರದೇಶದ ಜನರು ನೊರೆಯ ಸಮಸ್ಯೆ ಜೊತೆಗೆ ದುರ್ವಾಸನೆ, ಸೊಳ್ಳೆ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಕೆರೆಯನ್ನು ಅಭಿವೃದ್ಧಿಪಡಿಸಿ ಎಂದು ಹಸಿರು ನ್ಯಾಯ ಪೀಠ ಕರ್ನಾಟಕ ಸರ್ಕಾರಕ್ಕೆ ಛೀಮಾರಿ ಹಾಕಿದ್ದರೂ ಸೂಕ್ತ ಕ್ರಮ ಕೈಗೊಳ್ಳದೆ ಕಾಟಚಾರಕ್ಕಾಗಿ ಅರ್ಧ ಕೆಲಸ ಮಾಡಿ ಬಿಟ್ಟಿರುವುದರಿಂದ ಮತ್ತೆ ನೊರೆಯ ಸಮಸ್ಯೆ ಉಲ್ಬಣವಾಗಿದೆ.
ಕಳೆದ ನಾಲ್ಕು ದಿನಗಳಿಂದ ಈ ಸಮಸ್ಯೆ ಹೆಚ್ಚಾಗಿದ್ದರೂ ಬಿಡಿಎ, ಬಿಬಿಎಂಪಿ ಹಾಗೂ ಪರಿಸರ ಮಾಲಿನ್ಯ ಮಂಡಳಿ ಅಧಿಕಾರಿಗಳು ಇತ್ತ ಸುಳಿಯದೆ ತಮಗೂ ಈ ಸಮಸ್ಯೆಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ಸುಮ್ಮನಾಗಿದ್ದಾರೆ. ಇದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ. ಇನ್ನಾದರು ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡು ನೊರೆ ಭಾಗ್ಯಕ್ಕೆ ಮುಕ್ತಿ ಕಲ್ಪಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಬೆಂಗಳೂರು: ಇಂದಿರಾ ಕ್ಯಾಂಟೀನ್ ಆರಂಭಿಸಿ ಬೀಗುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಷ್ಟ್ರಮಟ್ಟದಲ್ಲಿ ತೀವ್ರ ಟೀಕೆಗೆ ಒಳಗಾಗಿದೆ. ಬಡವರಿಗೆ ಅನ್ನ ಭಾಗ್ಯ ನೀಡಿದ್ದೇವೆ ಅಂತ ಹೇಳಿಕೊಳ್ಳುವ ಸರ್ಕಾರ, ಬೆಂಗಳೂರಿನ ನಾಗರಿಕರಿಗೆ ನೊರೆ ಭಾಗ್ಯವನ್ನು ಕರುಣಿಸಿದೆ.
ಮಳೆಯ ಅವಾಂತರದ ಜೊತೆಗೆ ಬೆಳ್ಳಂದೂರು ಕೆರೆಯಲ್ಲಿ ಹೆಚ್ಚುತ್ತಿರುವ ನೊರೆಯಿಂದಾಗಿ ರಾಷ್ಟ್ರಮಟ್ಟದಲ್ಲಿ ಬೆಂಗಳೂರಿನ ಮಾನ ಮಾರ್ಯಾದೆ ಹರಜಾಗಿದೆ. ಗುರುವಾರ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್ ಜಿಟಿ) ಬೆಳ್ಳಂದೂರು ಕೆರೆಯ ನೊರೆಯ ವಿಚಾರ ಪ್ರಸ್ತಾಪಿಸಿ, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ನೊರೆಯ ಉತ್ಪತ್ತಿಯನ್ನು ಕಡಿಮೆ ಮಾಡಲು ಕೈಗೊಂಡಿರುವ ಕ್ರಮವೇನು ಅಂತ ಮುಖ್ಯ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡಿದೆ. ಮುಂದಿನ ಮಂಗಳವಾರದೊಳಗೆ ಈ ಬಗ್ಗೆ ವರದಿ ನೀಡುವಂತೆ ಸೂಚಿಸಿದೆ.
ಇಂದಿರಾ ಕ್ಯಾಂಟೀನ್‍ಗೆ ನೀಡಿದ್ದಷ್ಟು ಆದ್ಯತೆ, ಬೆಂಗಳೂರು ನಾಗರಿಕರ ಸುರಕ್ಷತೆಗೆ ಏಕೆ ನೀಡಿಲ್ಲ ಎನ್ನುವ ಪ್ರಶ್ನೆ ಕೂಡ ಎದ್ದಿದೆ. ಮಳೆಯಿಂದಾಗಿ ಕೆರೆಯಂತಾಗುವ ಬೆಂಗಳೂರು ಹಾಗೂ ಬೀದಿ ನಾಯಿಗಳ ಉಪಟಳದಿಂದಾಗಿ ಜನರು ಆತಂಕದಿಂದ ಬದುಕು ಬೇಕಾದ ಸ್ಥಿತಿ ಈಗ ವೈರಲ್ ಆಗಿದೆ.
ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಮಾನ ಹರಾಜು ಹಾಕಿದ್ದ ಬೆಳ್ಳಂದೂರು ಕೆರೆ ಸಮಸ್ಯೆ ಸಂಬಂಧ ಬಿಬಿಎಂಪಿ ಮತ್ತು ಬಿಡಿಎಗೆ ರಾಷ್ಟ್ರೀಯ ಹಸಿರು ನ್ಯಾಯಪೀಠ ಚಳಿಜ್ವರ ಬಿಡಿಸಿದೆ.
ಬೆಳ್ಳಂದೂರು ಕೆರೆಯ ಸುತ್ತಲಿನ ಹೆಚ್ಚು ಮಾಲಿನ್ಯಕಾರಕ ಕೈಗಾರಿಕೆಗಳನ್ನ ತಕ್ಷಣವೇ ಮುಚ್ಚಿ ಅಂತ ಟ್ರಿಬ್ಯೂನಲ್ ಮಧ್ಯಂತರ ಆದೇಶ ನೀಡಿದೆ. ಕೆರೆಗೆ ಬೆಂಕಿಬಿದ್ದ ಪ್ರಕರಣ ಸಂಬಂಧ ಇವತ್ತು ಹಾಜರಾದ ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಮತ್ತು ಅಧಿಕಾರಿಗಳಿಗೆ ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ತರಾಟೆಗೆ ತೆಗೆದುಕೊಂಡರು.
ನ್ಯಾಯಪೀಠದ ಸುತ್ತೋಲೆ ನಮ್ಮ ವ್ಯಾಪ್ತಿಗೆ ಬರೋದಿಲ್ಲ ಎಂದು ಹೇಳ್ತೀರಾ? ನ್ಯಾಯಾಂಗಕ್ಕೆ ಬೆಲೆ ಕೊಡದ ನಿಮ್ಮನ್ನ ನ್ಯಾಯಾಂಗ ನಿಂದನೆಯಡಿ ಜೈಲಿಗೆ ಕಳುಹಿಸಬಾರದೇಕೆ ಅಂತಾ ಪ್ರಶ್ನಿಸಿದ್ರು. ಜಡ್ಜ್ ಮಾತಿಗೆ ದಂಗಾದ ಅಧಿಕಾರಿಗಳು ಕ್ಷಮೆಯಾಚಿಸಿದ್ರು.
ನಿನ್ನೆಯಷ್ಟೇ ಖಾಸಗಿ ಮಾಧ್ಯಮದಲ್ಲಿ ಬೆಳಂದೂರು ಕೆರೆಯ ಪರಿಸ್ಥಿತಿ ನೋಡಿದ್ದೇವೆ. 3 ಸಾವಿರಕ್ಕೂ ಅಧಿಕ ಕೆರೆಗಳಿಂದ ತಂಪಾಗಿದ್ದ ಬೆಂಗಳೂರು ನಗರ ಈಗ ನಿಮ್ಮಂತವರ ಬೇಜವಾಬ್ದಾರಿಯಿಂದ ಏರ್ ಕಂಡಿಷನರ್ ಬಳಸುವಂತಾಗಿದೆ ಅಂತ ಕಳವಳ ವ್ಯಕ್ತಪಡಿಸಿದ್ರು.
ಕೆರೆ ಅಭಿವೃದ್ಧಿ ಸಮಿತಿ ರಚನೆ ಮಾಡಿ ಒಂದು ತಿಂಗಳ ಒಳಗೆ ಸ್ವಚ್ಛ ಮಾಡಬೇಕು ಅಂತಾ ಎಚ್ಚರಿಕೆ ನೀಡಿ ಮೇ 18ಕ್ಕೆ ವಿಚಾರಣೆ ಮುಂದೂಡಿದ್ರು.
ಎನ್‍ಜಿಟಿ ಮಧ್ಯಂತರ ಆದೇಶದಲ್ಲೇನಿದೆ..?
* ಬಿಬಿಎಂಪಿ, ಬಿಡಿಎ, ಬಿಡಬ್ಲ್ಯುಎಸ್‍ಎಸ್‍ಬಿ, ಕೆರೆ ಅಭಿವೃದ್ಧಿ ಪ್ರಾಧಿಕಾರ, ನಗರಾಭಿವೃದ್ಧಿ ಪ್ರಾಧಿಕಾರ ಕೆರೆ ಸ್ವಚ್ಚತಾ ಹೊಣೆ ಹೊರಬೇಕು
* ಈ ಎಲ್ಲಾ ಇಲಾಖೆಯ ಒಬ್ಬೂಬ್ಬ ಹೆಚ್ಚುವರಿ ಕಾರ್ಯದರ್ಶಿಗಳಿರುವ ಸಮಿತಿ ರಚಿಸಬೇಕು (ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಸಮಿತಿ ಅಧ್ಯಕ್ಷ)
* ಈ ಸಮಿತಿ ಬೆಳ್ಳಂದೂರು ಕೆರೆ ಸುತ್ತಮುತ್ತಲಿನ ಪ್ರದೇಶದ ಪರಿಶೀಲನೆ ನಡೆಸಬೇಕು
* ಇಂದಿನಿಂದ ಒಂದು ತಿಂಗಳ ಸಮಯದಲ್ಲಿ ಮಾಲಿನ್ಯ ತಡೆಗಟ್ಟಿ ಕೆರೆ ಸ್ವಚ್ಛ ಮಾಡಬೇಕು
* ಆರು ತಿಂಗಳ ಅವಧಿಯಲ್ಲಿ ಸಂಪೂರ್ಣ ಕೆರೆ ಅಭಿವೃದ್ಧಿಯಾಗಬೇಕು
* ಯಾವುದೇ ಟೆಂಡರ್ ನೀಡದೆ ಖುದ್ದು ಅಧಿಕಾರಿಗಳ ನೇತೃತ್ವದಲ್ಲಿ ಕೆಲಸ ನಡೆಯಬೇಕು (ಕೊಳಚೆ ನೀರನ್ನ ಬೇರ್ಪಡಿಸಿ ಶುದ್ಧನೀರನ್ನ ವಿವಿಧ ಕೆಲಸಗಳಿಗೆ ಬಳಕೆ ಮಾಡಬಹುದು)
* ಅರ್ಪಾಟ್‍ಮೆಂಟ್, ಕಾರ್ಖಾನೆ ತಾಜ್ಯ, ನೀರು ರಾಜಕಾಲುವೆ ಮೂಲಕ ಹರಿಯದಂತೆ ಕ್ರಮ ವಹಿಸಬೇಕು
* ಹೆಚ್ಚು ಮಾಲಿನ್ಯಕಾರಕ ಕಾರ್ಖಾನೆಗಳಿದ್ರೆ ಬೀಗ ಹಾಕಿ, ಅಪಾರ್ಟ್‍ಮೆಂಟ್ ನೀರಿನ ಮಾರ್ಗ ಬದಲಿಸಲು ಎಚ್ಚರಿಸಿ
* ನಿಯಮ ಪಾಲಿಸದಿದ್ದರೆ 5 ಲಕ್ಷ ರೂ. ದಂಡ ಹಾಕಿ
* ಮೇ 18ರ ವಿಚಾರಣೆಗೆ ಬರುವಾಗ ಅದುವರೆಗೂ ತೆಗೆದುಕೊಂಡ ಕ್ರಮದ ಸಂಪೂರ್ಣ ವರದಿ ಸಲ್ಲಿಸಬೇಕು.