Tag: Bellamkonda Sreenivas

  • 3 ವರ್ಷಗಳ ನಂತರ ನಟನೆಗೆ ಮರಳಿದ ಬೆಲ್ಲಂಕೊಂಡ ಶ್ರೀನಿವಾಸ್

    3 ವರ್ಷಗಳ ನಂತರ ನಟನೆಗೆ ಮರಳಿದ ಬೆಲ್ಲಂಕೊಂಡ ಶ್ರೀನಿವಾಸ್

    ತೆಲುಗು ನಟ ಬೆಲ್ಲಂಕೊಂಡ ಶ್ರೀನಿವಾಸ್ (Bellamkonda Sreenivas) ಯುಗಾದಿ ಹಬ್ಬದಂದು ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. 3 ವರ್ಷಗಳ ನಂತರ ಬೆಳ್ಳಿಪರದೆಗೆ ನಟ ಕಮ್‌ಬ್ಯಾಕ್‌ ಆಗ್ತಿದ್ದಾರೆ. ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮಾಹಿತಿ ನೀಡಿದ್ದಾರೆ.

    ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿರುವ ಬೆಲ್ಲಂಕೊಂಡ ಶ್ರೀನಿವಾಸ್ ಕಡೆಯದಾಗಿ ‘ಛತ್ರಪತಿ’ ಎಂಬ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈಗ ಮತ್ತೆ ಸಿನಿಮಾ ಬಗ್ಗೆ ಅಪ್‌ಡೇಟ್ ನೀಡಿದ್ದಾರೆ. ‘ಟೈಸನ್ ನಾಯ್ಡು’ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಕೂಡ ರಿವೀಲ್ ಆಗಿದೆ. ಇದನ್ನೂ ಓದಿ:ಯುಗಾದಿ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ಸೆಲೆಬ್ರಿಟಿಸ್

    ನನ್ನ ಕೊನೆಯ ತೆಲುಗು ಚಿತ್ರ ತೆರೆಗೆ ಬಂದು ಮೂರು ವರ್ಷಗಳಾಗಿವೆ. ನನ್ನ ಮುಂಬರುವ ಪ್ರಾಜೆಕ್ಟ್, ಟೈಸನ್ ನಾಯ್ಡು, ಸಾಗರ್ ಕೆ ಚಂದ್ರು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಪ್ರಸ್ತುತ ಪ್ರಗತಿಯಲ್ಲಿದೆ. ನಾನು ಶೈನ್ ಸ್ಕ್ರೀನ್‌ಗಳು ಮತ್ತು ಮೂನ್‌ಶೈನ್ ಪ್ರಾಜೆಕ್ಟ್‌ಗಳು ಹೊಂದಿದ್ದೇನೆ. ಶೀಘ್ರದಲ್ಲೇ ನಾನು ಬಹಿರಂಗಪಡಿಸುತ್ತೇನೆ ಎಂದು ಬೆಲ್ಲಂಕೊಂಡ ಶ್ರೀನಿವಾಸ್ ರಿವೀಲ್ ಮಾಡಿದ್ದಾರೆ. ಈ ಮೂಲಕ ಸಾಲು ಸಾಲು 3 ಸಿನಿಮಾಗಳನ್ನು ನಟ ಅನೌನ್ಸ್‌ ಮಾಡಿದ್ದಾರೆ.

    ಬೆಲ್ಲಂಕೊಂಡ ಶ್ರೀನಿವಾಸ್ ತಮ್ಮ ಮುಂಬರುವ ಸಿನಿಮಾದ ಸುದ್ದಿ ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳು ಶುಭಹಾರೈಸಿದ್ದಾರೆ. ಅವರ ಮುಂಬರುವ ಸಿನಿಮಾ ಬಗ್ಗೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.