Tag: Bellagavi

  • ವರದಕ್ಷಿಣೆ ಕಿರುಕುಳಕ್ಕೆ ತಂದೆಯಿಂದಲೇ ಒಂದು ವರ್ಷದ ಮಗು ಬಲಿ

    ವರದಕ್ಷಿಣೆ ಕಿರುಕುಳಕ್ಕೆ ತಂದೆಯಿಂದಲೇ ಒಂದು ವರ್ಷದ ಮಗು ಬಲಿ

    ಬೆಳಗಾವಿ: ವರದಕ್ಷಿಣೆ ಕಿರುಕುಳಕ್ಕೆ ಒಂದು ವರ್ಷದ ಮಗು ತನ್ನ ತಂದೆ ಹಾಗೂ ಅಜ್ಜಿಯಿಂದಲೇ ಕೊಲೆಯಾದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ನಡೆದಿದೆ.

    ಜೋಯೆಲ್ ನಾಮದೇವ ನಡುವಿನಕೇರಿ (1) ಮೃತ ಮಗು. ವರದಕ್ಷಿಣೆ ಕಿರುಕುಳದ ಹಿನ್ನೆಲೆಯಲ್ಲಿ ಹಣಕ್ಕಾಗಿ ಮಗುವನ್ನು ಕೊಲೆ ಮಾಡಿದ್ದರೆಂದು ತಾಯಿ ಆರೋಪಿಸಿದ್ದಾರೆ. ಕಳೆದ ಒಂದು ವರ್ಷದಿಂದ ದಾಂಡೇಲಿಯಲ್ಲಿರುವ ತವರು ಮನೆಯಲ್ಲಿ ತಾಯಿ-ಮಗು ವಾಸಿಸುತ್ತಿದ್ದರು. ಮಗುವಿನ ತಾಯಿ 10 ದಿನಗಳ ಹಿಂದೆ ಗಂಡನ ಮನೆಗೆ ಹಸುಗೂಸನ್ನು ಕರೆದುಕೊಂಡು ಹೋಗಿದ್ದರು.

    ಶುಕ್ರವಾರ ನನ್ನನ್ನು ಹೊರಗಡೆ ಕಳಿಸಿ ನನ್ನ ಗಂಡ ನಾಮದೇವ ಹಾಗೂ ಅವರ ತಾಯಿ ಮಗುವಿಗೆ ಕೀಟನಾಶಕ ಸಿಂಪಡಿಸಿ ಕೊಲೆ ಮಾಡಿದ್ದಾರೆ ಎಂದು ಮಗುವಿನ ತಾಯಿ ಆರೋಪಿಸಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಭೂತ ಹಿಡಿದಿದೆ ಎಂದು ಯುವತಿಯ ಕೈಗೆ ಹಗ್ಗ ಕಟ್ಟಿ ಹಿಂಸೆ

    ಭೂತ ಹಿಡಿದಿದೆ ಎಂದು ಯುವತಿಯ ಕೈಗೆ ಹಗ್ಗ ಕಟ್ಟಿ ಹಿಂಸೆ

    ಬೆಳಗಾವಿ: ಯುವತಿಯ ಕೈಗೆ ಹಗ್ಗ ಕಟ್ಟಿ ಸಂಬಂಧಿಕರೇ ದೈಹಿಕವಾಗಿ ಹಿಂಸೆ ನೀಡಿದ ಅಮಾನವಿಯ ಘಟನೆ ಅಥಣಿಯಲ್ಲಿ ನಡೆದಿದೆ.

    ಮೌಢ್ಯ ಮಸೂದೆ ಅಂಗೀಕಾರ ಮಾಡಿದ್ದರೂ ರಾಜ್ಯದಲ್ಲಿ ವಾಮಾಚಾರ, ಭೂತ ಬಿಡಿಸೋ ಕಾರ್ಯ ನಡಯುತ್ತಿದೆ. ಇದಕ್ಕೆ ಉದಾಹರಣೆಯೆಂಬಂತೆ ಭೂತ ಹಿಡಿದಿದೆ ಎಂದು ಯುವತಿಯ ಸಂಬಂಧಿಕರೇ ಆಕೆಯ ಕೈಗೆ ಹಗ್ಗ ಕಟ್ಟಿ ಎಳೆದಾಡಿದ್ದಾರೆ. ಯುವತಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆದರೆ ಸಂಬಂಧಿಕರು ಭೂತ ಬಿಡಿಸಲು ಹಗ್ಗ ಕಟ್ಟಿ ಮಾಂತ್ರಿಕನ ಬಳಿ ಎಳೆದೊಯ್ಯುತ್ತಿದ್ದರು ಎಂದು ತಿಳಿದುಬಂದಿದೆ.

    ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಬುದ್ಧಿಮಾಂದ್ಯ ಹೆಣ್ಮಕ್ಕಳ ಮೇಲೆ ಅತ್ಯಾಚಾರ, ಗರ್ಭಿಣಿಯಾದ್ಮೇಲೆ ಹೆರಿಗೆ ಮಾಡಿಸಿ ಮಕ್ಕಳ ಮಾರಾಟ

    ಬುದ್ಧಿಮಾಂದ್ಯ ಹೆಣ್ಮಕ್ಕಳ ಮೇಲೆ ಅತ್ಯಾಚಾರ, ಗರ್ಭಿಣಿಯಾದ್ಮೇಲೆ ಹೆರಿಗೆ ಮಾಡಿಸಿ ಮಕ್ಕಳ ಮಾರಾಟ

    ಬೆಳಗಾವಿ: ಬುದ್ಧಿಮಾಂದ್ಯ ಹೆಣ್ಣುಮಕ್ಕಳ ಅಸಹಾಯಕತೆಯನ್ನು ಬಳಸಿಕೊಂಡು ಬಾಡಿಗೆ ಗರ್ಭದ ದಂಧೆ ನಡೆಸುತ್ತಿರೋ ಸ್ಫೋಟಕ ತನಿಖಾ ವರದಿಯನ್ನು ಪಬ್ಲಿಕ್ ಟಿವಿ ಬಯಲಿಗೆಳಿದಿದೆ. ಮಾನಸಿಕ ಅಸ್ವಸ್ಥ, ಬುದ್ಧಿಮಾಂದ್ಯ ಹದಿಹರೆಯದ ಯುವತಿಯರನ್ನು ಟಾರ್ಗೆಟ್ ಮಾಡಿಕೊಂಡು ಸಾಮೂಹಿಕ ಅತ್ಯಾಚಾರವೆಸಗಿ ನಂತರ ಜನಿಸಿದ ಹಸುಗೂಸುಗಳನ್ನು ಇವರೇ ಪಡೆದು ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡುತ್ತಾರೆ.

    ಇದು ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಸ್ಫೋಟಕ ಸುದ್ದಿ. ಗೋವಾ ಹಾಗೂ ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಈ ತಾಲೂಕಿನ ಹಲವಾರು ಕಡೆ ಇಂಥ ಪ್ರಕರಣಗಳು ಎಗ್ಗಿಲ್ಲದೆ ನಡೆಯುತ್ತಿವೆ. ಮಾನಸಿಕ ಅಸ್ವಸ್ಥರನ್ನು ಟಾರ್ಗೆಟ್ ಮಾಡಿ ಅವರ ಮೇಲೆ ಅತ್ಯಾಚಾರ ಮಾಡಿದ ಮೇಲೆ ಅಂಥ ಮಹಿಳೆ, ಯುವತಿಯರ ಮೇಲೆ ನಿಗಾ ಇಡುತ್ತಾರೆ. ಅವರು ಮನೆಯಲ್ಲಿ ಹೇಳಲು ಬುದ್ಧಿಯಿಲ್ಲದ ಕಾರಣ ಹಾಗೂ ಹೊರಜಗತ್ತಿನ ಅರಿವಿಲ್ಲದ್ದರಿಂದ ಮಕ್ಕಳಿಗೆ ಜನ್ಮ ನೀಡುತ್ತಾರೆ.

    ಮಾನಸಿಕ ಅಸ್ವಸ್ಥರು ಮಗುವಿಗೆ ಜನ್ಮ ನೀಡಿದಾಗ ಪಾಲಕರು ಮಗುವನ್ನು ಏನು ಮಾಡುವುದು ಎಂದು ಚಿಂತಿಸುತ್ತಿರುವಾಗಲೇ ಇತ್ತ ಕಾಯುತ್ತ ಕುಳಿತ ಖದೀಮರು ಅಲ್ಲಿಗೆ ಸಹಾಯ ಮಾಡುವ ನೆಪದಲ್ಲಿ ಎಂಟ್ರಿ ಕೊಡುತ್ತಾರೆ. ತಾವೇ ಆಂಬುಲೆನ್ಸ್ ಗೆ ಫೋನ್ ಮಾಡಿ ತಾಯಿ-ಮಗುವನ್ನು ಚಿಕಿತ್ಸೆ ಕೊಡಿಸುವ ನೆಪದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡ್ತಾರೆ. ಈ ಮಗುವನ್ನು ನೀವು ತಗೆದುಕೊಂಡು ಹೋದರೆ ನಿಮ್ಮ ಹೆಸರು ಹಾಳಾಗುತ್ತದೆ ಎಂದು ಪಾಲಕರಿಗೆ ಹೆದರಿಸಿ, ಮಗುವನ್ನು ಇಲ್ಲಿಯೇ ಬಿಟ್ಟು ತಾಯಿಯನ್ನು ಮಾತ್ರ ಕರೆದುಕೊಂಡು ಹೋಗುವಂತೆ ಪುಸಲಾಯಿಸಿ ಅದರಲ್ಲಿ ಸಕ್ಸಸ್ ಆಗುತ್ತಾರೆ. ಮೊದಲ್ಲೇ ಮಕ್ಕಳನ್ನು ಪಡೆಯುವ ಗಿರಾಕಿಗಳನ್ನು ಗುರುತಿಸಿದ ಖದೀಮರು ಲಕ್ಷಾಂತರ ರೂಪಾಯಿಗೆ ಇಂಥ ಹಸುಗೂಸುಗಳನ್ನು ಮಾರಾಟ ಮಾಡಿಕೊಳ್ಳುತ್ತಾರೆ.

    ಪ್ರತಿಯೊಬ್ಬ ಬುದ್ಧಿಮಾಂದ್ಯ ಯುವತಿಯಿಂದ ನಾಲ್ಕೈದು ಬಾರಿ ಡೆಲಿವರಿ ಮಾಡಿಸಿದ ಭೂಪರು ಯಾವುದೇ ಕಾನೂನಿನ ಅಡೆತಡೆಯಿಲ್ಲದೆ ತಾವೇ ಬುದ್ಧಿಮಾಂದ್ಯ ಯುವತಿಯರ ಕುಟುಂಬಗಳಿಗೆ ಸಹಾಯ ಮಾಡಿದ ರೀತಿ ಪೋಸ್ ನೀಡುತ್ತಿದ್ದಾರೆ. ಒರ್ವ ಬುದ್ಧಿಮಾಂದ್ಯ ಯುವತಿಗೆ ನಾಲ್ಕು ಬಾರಿ ಡೆಲಿವರಿ ಮಾಡಿಸಿದ್ದಾರೆ.

    ನಾಗರಿಕ ಸಮಾಜ ತಲೆ ತಗ್ಗಿಸುವ ಈ ಹೇಯ ಕೃತ್ಯ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಮಂತುರ್ಗಾ, ಮಾನ, ಸಡಾ ಗ್ರಾಮಗಳಲ್ಲಿ ಕಂಡುಬಂದಿದೆ. ಇಂಥ ಅನೇಕ ಪ್ರಕರಣಗಳು ಬೆಳಗಾವಿ ಜಿಲ್ಲೆಯ ಗಡಿ ತಾಲೂಕುಗಳಾದ ಚಿಕ್ಕೋಡಿ, ಬೆಳಗಾವಿ ಗ್ರಾಮೀಣ, ಅಥಣಿ, ನಿಪ್ಪಾಣಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬ ಗುಮಾನಿ ಇದೆ. ಈ ಖದೀಮರ ಜಾಲದ ಹಿಂದೆ ಕೆಲ ಇಲಾಖೆ ಹಾಗೂ ಪ್ರಭಾವಿ ವ್ಯಕ್ತಿಗಳ ಬೆಂಬಲವಿದೆ ಎಂಬ ಆರೋಪವೂ ಕೇಳಿಬಂದಿದೆ.

     

  • 12 ಸೆಕೆಂಡ್‍ನಲ್ಲಿ 100 ಮೀಟರ್ ಸ್ಕೇಟಿಂಗ್ – ಬೆಳಗಾವಿಯಲ್ಲಿ ಮಾಸ್ಟರ್ ಅಭಿಷೇಕ್ ಮ್ಯಾಜಿಕ್

    12 ಸೆಕೆಂಡ್‍ನಲ್ಲಿ 100 ಮೀಟರ್ ಸ್ಕೇಟಿಂಗ್ – ಬೆಳಗಾವಿಯಲ್ಲಿ ಮಾಸ್ಟರ್ ಅಭಿಷೇಕ್ ಮ್ಯಾಜಿಕ್

    – ಬಾಗಲಕೋಟೆ ಚಿಣ್ಣರಿಂದ ಪವರ್ ಪ್ಲಾಂಟ್ ಪ್ರಸೆಂಟ್

    ಬೆಳಗಾವಿ\ಬಾಗಲಕೋಟೆ: ಹಲವು ವಿಶ್ವ ದಾಖಲೆಗಳನ್ನು ಮಾಡಿರೋ ಗಡಿನಾಡಿನ ಖ್ಯಾತ ಸ್ಕೇಟಿಂಗ್ ಪಟು ಮಾಸ್ಟರ್ ಅಭಿಷೇಕ್ ನಾವಲೆ ಇದೀಗ ಮತ್ತೊಂದು ವಿಶ್ವ ದಾಖಲೆ ಮಾಡಿದ್ದಾರೆ. ಈ ಮೂಲಕ ಹಿಂದೆ ಇದ್ದ ಎಲ್ಲಾ ದಾಖಲೆ ಮುರಿದಿದ್ದಾರೆ. ಅತ್ತ ಬಾಗಲಕೋಟೆಯಲ್ಲಿ ಚಿಣ್ಣರ ಕೈಯಲ್ಲಿ ಅರಳಿದ ಬಗೆ ಬಗೆಯ ವಿಜ್ಞಾನ ಮಾದರಿ, ವಸ್ತುಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

    ಹೀಗೆ ಈತ ಕಾಲಿಗೆ ಚಕ್ರ ಕಟ್ಕೊಂಡು ಓಡೋಕೆ ಶುರು ಮಾಡಿದರೆ ಎಲ್ಲಾ ರೆಕಾರ್ಡ್ ಗಳು ಬ್ರೇಕ್. ಅಂದು ಕೊಂಡಿದ್ದನ್ನು ಸಾಧಿಸಿಯೇ ಬಿಡುವ ಛಲವಂತ. ಬೆಳಗಾವಿಯ ಮಾಸ್ಟರ್ ಅಭಿಷೇಕ್ ನಾವಲೆ, ಖಾನಾಪುರ ರಸ್ತೆ ಹಾಗೂ ಕೆಎಲ್‍ಇ ಸಂಸ್ಥೆಯ ಸ್ಕೇಟಿಂಗ್ ರಿಂಗ್ ನಲ್ಲಿ 100 ಮೀಟರ್ ಗುರಿಯನ್ನು ಕೇವಲ 12 ಸೆಕೆಂಡ್ ನಲ್ಲಿ ಮುಟ್ಟಿ ಸಾಧನೆ ಮಾಡಿದ್ದಾರೆ. ಈ ಮೂಲಕ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ವಿಶ್ವದಾಖಲೆಗೆ ಯತ್ನಿಸಿದ್ದಾರೆ. ಈ ದಾಖಲೆಯನ್ನು ರೆಕಾರ್ಡ್ ಮಾಡಿಕೊಂಡಿರುವ ಕೋಚ್ ಹಾಗೂ ಇತರರು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಗೆ ಕಳುಹಿಸಿದ್ದಾರೆ.

    ಇನ್ನು ಇತ್ತ ಬಾಗಲಕೋಟೆಯ ಬಸವೇಶ್ವರ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ನಡೆದ ಪುಟ್ಟ ಮಕ್ಕಳ ಟ್ಯಾಲೆಂಟ್ ಎಕ್ಸ್ ಪೋ ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು. ಆಟ ಪಾಠ ಎಂದು ಹಾಯಾಗಿ ದಿನಗಳನ್ನು ಕಲಿತಿದ್ದ ಮಕ್ಕಳು ಹೈಡ್ರೋ ಎಲೆಕ್ಟ್ರೀಕ್ ಪವರ್ ಪ್ಲಾಂಟ್, ಮ್ಯಾನ್ ಆಂಡ್ ರೋಬೋಟ್, ಅಗ್ರೀಕಲ್ಚರ್ ಎಲಿಮೆಂಟ್ಸ್ ಹಲವು ವಿಜ್ಞಾನಕ್ಕೆ ಸಂಬಂಧಿಸಿದ ವಸ್ತುಗಳನ್ನು ತಯಾರು ಮಾಡಿ ಪ್ರದರ್ಶನಕ್ಕಿಟ್ಟಿದ್ದರು. ಮಕ್ಕಳ ಟ್ಯಾಲೆಂಟ್ ನೋಡಿದ ಜನರು ಬೇಷ್ ಎಂದು ಹೇಳಿದ್ದಾರೆ.

    ಒಟ್ಟಿನಲ್ಲಿ ಛಲ ಮಾಡೋ ಹುಮ್ಮಸ್ಸಿದ್ದರೆ ಏನನ್ನೂ ಬೇಕಾದರೂ ಸಾಧಿಸಿ ತೋರಿಸಬಹುದು ಎನ್ನುವುದಕ್ಕೆ ಇವರೇ ಸಾಕ್ಷಿ.

  • ಹತ್ತೇ ದಿನದಲ್ಲೇ ಎರಡನೇ ಬಾರಿ ಮುಷ್ಕರ – ಬೆಳಗಾವಿ ಚಲೋಗೆ ಖಾಸಗಿ ಆಸ್ಪತ್ರೆಗಳು ಬಂದ್

    ಹತ್ತೇ ದಿನದಲ್ಲೇ ಎರಡನೇ ಬಾರಿ ಮುಷ್ಕರ – ಬೆಳಗಾವಿ ಚಲೋಗೆ ಖಾಸಗಿ ಆಸ್ಪತ್ರೆಗಳು ಬಂದ್

    ಬೆಳಗಾವಿ: ಖಾಸಗಿ ವೈದ್ಯಕೀಯ ಸಂಸ್ಥೆ ನಿಯಂತ್ರಣ ಕಾಯ್ದೆಯನ್ನು ರಾಜ್ಯ ಸರ್ಕಾರ ಜಾರಿಗೆ ತರಲು ಚಳಿಗಾಲ ಅಧಿವೇಶನದಲ್ಲಿ ಮುಂದಾಗಿದ್ದು, ಕಾಯ್ದೆಗೆ ತಿದ್ದುಪಡಿ ಒತ್ತಾಯಿಸಿ ಇಂದು ಖಾಸಗಿ ವೈದ್ಯರು ಬೆಳಗಾವಿ ಚಲೋ ಹೋರಾಟ ಹಮ್ಮಿಕೊಂಡಿದ್ದಾರೆ.

    ಇದರ ಹಿನ್ನೆಲೆ ವಿಜಯಪುರದ 120 ಖಾಸಗಿ ಆಸ್ಪತ್ರೆಗಳ ವೈದ್ಯರು ತುರ್ತು ಚಿಕಿತ್ಸೆ, ಹೊರ ರೋಗಿಗಳ ಚಿಕಿತ್ಸೆ ಸ್ಥಗಿತಗೊಳಿಸಿ ಬೆಳಗಾವಿಯಲ್ಲಿ ನಡೆಯುವ ವೈದ್ಯರ ಮುಷ್ಕರಕ್ಕೆ ತೆರಳಿದ್ದಾರೆ. ಒಟ್ಟು ಜಿಲ್ಲೆಯಿಂದ 460 ಖಾಸಗಿ ವೈದ್ಯರು ಬೆಳಗಾವಿಗೆ ತೆರಳಿದ್ದು, ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳ ಮುಂದೆ ವೈದ್ಯಕೀಯ ಸೇವೆ ಇಲ್ಲ ಎಂದು ಬೋರ್ಡ್, ಬ್ಯಾನರ್ ಹಾಕಲಾಗಿದೆ.

    ಮಂಗಳವಾರ ಬೆಳಗ್ಗಿನವರೆಗೆ ಹೊರ ರೋಗಿಗಳಿಗೆ ಚಿಕಿತ್ಸೆ ಬಂದ್ ಮಾಡಲಾಗಿದೆ. ಇನ್ನು ವೈದ್ಯರ ಮುಷ್ಕರ ಹಿನ್ನಲೆ ಸರ್ಕಾರಿ ಆಸ್ಪತ್ರೆ ವೈದ್ಯರು, ಸಿಬ್ಬಂದಿಗಳಿಗೆ ರಜೆ ರದ್ದು ಮಾಡಿ, ಜಿಲ್ಲಾ ಆರೋಗ್ಯಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಅಲ್ಲದೆ ರೋಗಿಗಳ ಆರೋಗ್ಯದ ದೃಷ್ಟಿಯಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಸೌಲಭ್ಯ ಒದಗಿಸುವುದಾಗಿ ಜಿಲ್ಲಾ ವೈದ್ಯಾಧಿಕಾರಿ ಹೇಳಿದ್ದಾರೆ.

  • ಮಗಳು ಸಾವನ್ನಪ್ಪಿದ್ದಕ್ಕೆ ವೈದ್ಯರ ಮೇಲೆ ತಾಯಿಯಿಂದ ಹಲ್ಲೆಗೆ ಯತ್ನ

    ಮಗಳು ಸಾವನ್ನಪ್ಪಿದ್ದಕ್ಕೆ ವೈದ್ಯರ ಮೇಲೆ ತಾಯಿಯಿಂದ ಹಲ್ಲೆಗೆ ಯತ್ನ

    ಬೆಳಗಾವಿ: ಸರ್ಕಾರಿ ಆಸ್ಪತ್ರೆಯಲ್ಲಿ ಬಾಲಕಿ ಸಾವನ್ನಪ್ಪಿದ್ದಕ್ಕೆ ಆಕ್ರೋಶಗೊಂಡ ಪೋಷಕರು ವೈದ್ಯರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ನಡೆದಿದೆ.

    ಕಳೆದ ಎರಡು ದಿನಗಳ ಹಿಂದೆ ತಾಯವ್ವಾ ಕಾಮಶೆಟ್ಟಿ ಎಂಬ ಬಾಲಕಿ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಳು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದಾಳೆ. ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡಿಲ್ಲ ಹಾಗೂ ಅವರ ನಿರ್ಲಕ್ಷ್ಯಕ್ಕೆ ನಮ್ಮ ಮಗಳು ಸಾವನ್ನಪಿದ್ದಾಳೆ ಎಂದು ತಾಯಿ ಹಾಗೂ ಸಂಬಂಧಿಕರು ಆಕ್ರೋಶಗೊಂಡು ವೈದ್ಯರಾದ ಡಾ. ಅಂಬಲಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.

    ಘಟನೆ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಹಿರಿಯ ವೈದ್ಯರು ಹಲ್ಲೆ ನಡೆಸುವುದನ್ನು ತಡೆದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಸದ್ಯ ನ್ಯಾಯ ಒದಗಿಸಿಕೊಡುವವರಿಗೆ ಶವವನ್ನು ತೆಗೆದುಕೊಂಡು ಹೋಗುವುದಿಲ್ಲ ಎಂದು ಪೋಷಕರು ಪಟ್ಟು ಹಿಡಿದು ಕುಳಿತಿದ್ದಾರೆ.

  • ಅಲೋಪತಿ ಚಿಕಿತ್ಸೆ ನೀಡಿ ಯುವಕನ ಜೀವಕ್ಕೆ ಕುತ್ತು ತಂದ ಹೋಮಿಯೋಪತಿ ವೈದ್ಯ!

    ಅಲೋಪತಿ ಚಿಕಿತ್ಸೆ ನೀಡಿ ಯುವಕನ ಜೀವಕ್ಕೆ ಕುತ್ತು ತಂದ ಹೋಮಿಯೋಪತಿ ವೈದ್ಯ!

    ಬೆಳಗಾವಿ: ಜ್ವರ ಬಂದಿದೆ ಎಂದು ವ್ಯಕ್ತಿಯೊಬ್ಬರು ಯಾರದ್ದೋ ಮಾತು ಕೇಳಿ ಡಾಕ್ಟರ್ ಹತ್ತಿರ ಹೋದರು. ಆದರೆ ಆ ಡಾಕ್ಟರ್ ಮಹಾಶಯ ಬೇಕಾಬಿಟ್ಟಿ ಇಂಜೆಕ್ಷನ್ ಕೊಟ್ಟು ವ್ಯಕ್ತಿಯ ಬದುಕಿಗೇ ಕುತ್ತು ತಂದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ರಸ್ತೆಯಿಂದ ಕುಂಟುತ್ತಾ ಇಳಿಯುತ್ತಿರುವ ಯುವಕನಿಗೆ ಇದೀಗ ಆಸ್ಪತ್ರೆಯ ಬೆಡ್‍ ನಲ್ಲಿ ಯಾರಿಗೂ ಬೇಡವಾದ ನರಳಾಟ. ಈ ಅಮಾಯಕನ ಶೋಚನಿಯ ಸ್ಥಿತಿಗೆ ಕಾರಣ ಗುರುನಾಥ್ ಪಾಟೀಲ್ ಅನೆನ್ನೋ ಹೋಮಿಯೋಪತಿ ಡಾಕ್ಟರ್ ಮಾಡಿರುವ ಮಹಾ ಎಡವಟ್ಟು.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರದ ಗೋಟೂರಿನ ನಿವಾಸಿ ಶಂಕರ್. ಕಳೆದ ತಿಂಗಳು ಸಣ್ಣ ಮಟ್ಟಿಗೆ ಜ್ವರ ಬಂದಿತ್ತು. ಆಗ ಸೀದಾ ಹೋಗಿದ್ದು ಈ ಹೋಮಿಯೋಪತಿ ವೈದ್ಯ ಗುರುನಾಥ್ ಬಳಿಗೆ. ಚೆಕ್ ಮಾಡಿದ ಡಾಕ್ಟರ್ ಭರ್ಜರಿಯಾಗಿ ಎರಡು ಇಂಜೆಕ್ಷನ್ ಚುಚ್ಚಿದ್ದರು. ಔಷಧಿ ಕೊಟ್ಟು ಇದನ್ನು ನುಂಗು, ನೀನು ನೂರಕ್ಕೆ ನೂರು ಸರಿ ಹೋಗ್ತಿಯಾ ಎಂದು ಮನೆಗೆ ಕಳಸಿಕೊಟ್ಟರು.

    ಡಾಕ್ಟರ್ ಗುರುನಾಥ್ ಅದ್ಯಾವ ನರದ ಮೇಲೆ ಸೂಜಿ ಚುಚ್ಚಿದರೋ ಗೊತ್ತಿಲ್ಲ ಚುಚ್ಚಿದ ಜಾಗದಲ್ಲಿ ಕೀವಾಗಿದ್ದು, ನಮಗೆ ನ್ಯಾಯ ಕೊಡಿಸಿ ಎಂದು ಅಂಗಲಾಚುತ್ತಿದ್ದಾರೆ. ಅಸಲಿಗೆ ಹೋಮಿಯೋಪತಿ ವೈದ್ಯರಾಗಿರೋ ಗುರುನಾಥ್ ಅಲೋಪತಿ ಚಿಕಿತ್ಸೆ ನೀಡುತ್ತಿರುವುದು ಕರ್ನಾಟಕ ಖಾಸಗಿ ವೈದ್ಯಕೀಯ ನಿಯಮಾವಳಿಗಳ ಉಲ್ಲಂಘನೆಯಾಗಿದೆ. ಸದ್ಯ ಈ ಕೇಸ್ ಸಂಕೇಶ್ವರ ಪೊಲೀಸರ ಕೈಯಲ್ಲಿದ್ದು, ನ್ಯಾಯ ಕೊಡಿಸಬೇಕಿದೆ.

  • ಕಾರಿನಲ್ಲಿ ಬಂದು ಶಾಲಾ ಮಕ್ಕಳಿಗೆ ಹಣ, ಚಾಕ್ಲೇಟ್ ನೀಡಿ ಹೋಗ್ತಾರೆ ಅಪರಿಚಿತ ಮಹಿಳೆಯರು

    ಕಾರಿನಲ್ಲಿ ಬಂದು ಶಾಲಾ ಮಕ್ಕಳಿಗೆ ಹಣ, ಚಾಕ್ಲೇಟ್ ನೀಡಿ ಹೋಗ್ತಾರೆ ಅಪರಿಚಿತ ಮಹಿಳೆಯರು

    ಬೆಳಗಾವಿ: ಅಪರಿಚಿತ ವಾಹನದಲ್ಲಿ ಮಹಿಳೆಯರು ಬಂದು ಶಾಲಾ ಮಕ್ಕಳಿಗೆ ಹಣ ಹಾಗೂ ಚಾಕ್ಲೇಟ್ ನೀಡಿ ಹೋಗುತ್ತಿರುವ ಘಟನೆ ಬೆಳಗಾವಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣ ಸಮೀಪದ ಚಿಂಚಲಿ ತೋಟದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಈ ಘಟನೆಯಿಂದ ಶಾಲಾ ಮಕ್ಕಳು, ಪಾಲಕರು ಹಾಗೂ ಶಾಲಾ ಸಿಬ್ಬಂದಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಮಹಾರಾಷ್ಟ್ರ ನೊಂದಣಿಯ ಓಮಿನಿ ವಾಹನದಲ್ಲಿ ಬರುತ್ತಿರುವ ಓರ್ವ ಚಾಲಕ ಹಾಗೂ ಇಬ್ಬರು ಮಹಿಳೆಯರು ಶಾಲಾ ಮಕ್ಕಳಿಗೆ ಚಿಲ್ಲರೆ ಹಣ ಹಾಗೂ ಚಾಕಲೇಟ್ ನೀಡಿ ಹೋಗುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

    ಇವರು ಮಕ್ಕಳ ಕಳ್ಳರಿರಬಹುದು ಎಂಬ ಭಯ ಪಾಲಕರು ಹಾಗೂ ಶಿಕ್ಷಕರಲ್ಲಿ ಮೂಡಿದ್ದು, ಈ ಕುರಿತು ಕುಡಚಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಒಂದೆರಡು ದಿನ ಪೊಲೀಸರು ಬಂದು ಪರಿಶೀಲನೆ ನಡೆಸಿದ ಹೋದ ಮೇಲೆ ಮತ್ತೊಮ್ಮೆ ಈ ವಾಹನ ಹಾಗೂ ಮಹೊಳೆಯರು ಕಂಡಿದ್ದು ಮತ್ತಷ್ಟು ಭಯ ಮೂಡಿಸಿದೆ.

    ಯಾರೇ ಆಮಿಷ ತೋರಿದರೂ ಅವರ ಬಳಿ ಹೋಗದಂತೆ ಮಕ್ಕಳಿಗೆ ಶಾಲಾ ಶಿಕ್ಷಕರು ಹಾಗೂ ಪೊಷಕರು ತಿಳುವಳಿಕೆ ನೀಡಿದ್ದಾರೆ. ರಾಯಬಾಗ ತಾಲೂಕಿನ ತೋಟದ ಎರಡು ಮೂರು ಶಾಲೆಗಳಲ್ಲಿ ಇಂಥ ಘಟನೆಗಳು ಸಂಭವಿಸಿದೆ. ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಅನಾಮಧೇಯ ವ್ಯಕ್ತಿಗಳಾರು ಎಂಬುದನ್ನು ಕಂಡು ಹಿಡಿಯಬೇಕಿದೆ.

  • ನಿಲ್ದಾಣದಲ್ಲಿ ಬಸ್‍ಗಳು ನಿಲುಗಡೆಯಾಗದೆ ಪರದಾಟ- ರಸ್ತೆ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ

    ನಿಲ್ದಾಣದಲ್ಲಿ ಬಸ್‍ಗಳು ನಿಲುಗಡೆಯಾಗದೆ ಪರದಾಟ- ರಸ್ತೆ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ

    ಬೆಳಗಾವಿ: ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ದಿಢೀರ್ ಅಂತ ಪ್ರತಿಭಟನೆ ನಡೆಸಿದ್ದಾರೆ. ಬೆಳಗಾವಿ ತಾಲೂಕಿನ ಸಾಂಭ್ರಾ ಗ್ರಾಮದಲ್ಲಿ ರಸ್ತೆ ತಡೆದು ವಿದ್ಯಾರ್ಥಿಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

    ಪಂತಬಾಳೇಕುಂದ್ರಿ ಹಾಗೂ ಸುಳೇಬಾವಿ ಮಾರ್ಗದ ಬಸ್‍ಗಳು ಬೆಳಗ್ಗೆ ನಿಲುಗಡೆಯಾಗುತ್ತಿಲ್ಲ. ಸಮರ್ಪಕ ಬಸ್ ವ್ಯವಸ್ಥೆಯಿಲ್ಲದೇ ಕಳೆದ ಹಲವು ತಿಂಗಳಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಇದರಿಂದ ಶಾಲಾ-ಕಾಲೇಜುಗಳಿಗೆ ತೆರಳಲು ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಒಂದು ಗಂಟೆಗಳ ಕಾಲ ರಸ್ತೆ ತಡೆಯಿಂದ ಬೆಳಗಾವಿ-ಬಾಗಲಕೋಟೆ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು.

    ನಂತರ ಮಾರಿಹಾಳ ಪೊಲೀಸರು ವಿದ್ಯಾರ್ಥಿಗಳ ಮನವೊಲಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು

  • ಲಕ್ಷ್ಮೀ ಹೆಬ್ಬಾಳ್ಕರ್ ಕನ್ನಡಿಗರ ಪಾಲಿಗೆ ಪಿಶಾಚಿ, ದೆವ್ವ: ವಾಟಾಳ್ ನಾಗರಾಜ್

    ಲಕ್ಷ್ಮೀ ಹೆಬ್ಬಾಳ್ಕರ್ ಕನ್ನಡಿಗರ ಪಾಲಿಗೆ ಪಿಶಾಚಿ, ದೆವ್ವ: ವಾಟಾಳ್ ನಾಗರಾಜ್

    ಬೆಂಗಳೂರು: ಲಕ್ಷ್ಮಿ ಹೆಬ್ಬಾಳ್ಕರ್ ಕೆಟ್ಟ ಮಹಿಳೆಯಾಗಿದ್ದು, ಕನ್ನಡಿಗರ ಪಾಲಿಗೆ ಪಿಶಾಚಿ ಮತ್ತು ದೆವ್ವ ಎಂದು ವಾಟಾಳ್ ನಾಗರಾಜ್ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

    ಮಹಾರಾಷ್ಟ್ರಕ್ಕೆ ಜೈ ಎನ್ನುತ್ತೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕನ್ನಡ ಒಕ್ಕೂಟ, ಪ್ರವೀಣ್ ಶೆಟ್ಟಿ ಬಣ, ಕರವೇ ಕಾರ್ಯಕರ್ತರು, ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ನಗರದ ಮೌರ್ಯ ಸರ್ಕಲ್‍ನಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿ ಮತ್ತು ಅವರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

    ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ವಾಟಾಳ್ ನಾಗರಾಜ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ್‍ಗೆ ಇಪ್ಪತ್ತೆಂಟು ಗಂಟೆಗಳ ಕಾಲ ಗಡುವು ನೀಡುತ್ತೇವೆ. ಹೆಬ್ಬಾಳ್ಕರ್ ಅವರನ್ನು ಮಹಿಳಾ ಅಧ್ಯಕ್ಷ ಗಿರಿಯಿಂದ ಕೆಳಗಿಳಿಸಿ ಇಲ್ಲದಿದ್ದರೆ ನಾವು ಬೆಳಗಾವಿಯಿಂದ ಗಡಿಪಾರು ಮಾಡುವುದ್ದಕ್ಕೆ ಜಿಲ್ಲಾಡಳಿತಕ್ಕೆ ಹೇಳುತ್ತೇವೆ ಎಂದು ಆಗ್ರಹಿಸಿದರು.

     

    ಒಂದು ವೇಳೆ ಹುದ್ದೆಯಿಂದ ಕೆಳಗಡೆ ಇಳಿಸದೇ ಇದ್ದಲ್ಲಿ, ಬೆಳಗಾವಿಯ ಕಿತ್ತೂರು ಚೆನ್ನಮ್ಮ ಸರ್ಕಲ್‍ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಪ್ರತಿಭಟನೆ ಮಾಡುತ್ತೇವೆ. ಆಕೆಗೆ ತಲೆ ಸರಿಯಿಲ್ಲ ಆಕೆಯನ್ನು ನಿಮ್ಹಾನ್ಸ್‍ಗೆ ಸೇರಿಸಬೇಕು ಎಂದು ವಾಟಾಳ್ ನಾಗರಾಜ್ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ ಗೋವಿಂದು ಮಾತನಾಡಿ, ಲಕ್ಷ್ಮೀ ಹೆಬ್ಬಾಳ್ಕರ್‍ಗೆ ನಾಚಿಕೆಯಾಗಬೇಕು. ಕನ್ನಡಿಗರ ಮಾನ ಮರ್ಯಾದೆ ಹರಾಜು ಹಾಕಿದ್ದಾರೆ. ಅವರ ನಾಟಕದ ಕ್ಷಮೆ ನಮಗೆ ಬೇಕಾಗಿಲ್ಲ, ಅದನ್ನು ನಾವು ಒಪ್ಪಿಕೊಳ್ಳುವುದ್ದಿಲ್ಲ. ಲಕ್ಷ್ಮೀ ಅವರನ್ನು ಗಡಿಪಾರು ಮಾಡಲಿ ಮತ್ತು ಅವರ ರಾಜೀನಾಮೆ ಪಡೆದುಕೊಳ್ಳಬೇಕು. ಮುಖ್ಯಮಂತ್ರಿಗಳೇ, ಪರಮೇಶ್ವರ್, ದಿನೇಶ್ ಗುಂಡುರಾವ್ ಹೆಬ್ಬಾಳ್ಕರ್ ವಿರುದ್ಧ ಏನ್ ಕ್ರಮ ಕೈಗೊಳ್ಳುತ್ತೀರಾ ಎಂದು ಪ್ರಶ್ನಿಸಿ ಕಿಡಿಕಾರಿದರು.

    ಇಂಧನ ಸಚಿವ ಡಿಕೆ ಶಿವಕುಮಾರ್ ಲಕ್ಷ್ಮಿ ಅವರ ಸಮರ್ಥನೆಗೆ ಇಳಿದಿದ್ದಾರೆ. ನಿಮಗೆ ಮರಾಠಿ ಬರುತ್ತಾ? ಭಾಷೆ ಬರದೆ ಇದ್ದರೆ ಹೇಗೆ ಸಮರ್ಥನೆ ಮಾಡಿಕೊಳ್ಳುತ್ತಿರಾ? ಗ್ಲಾಮರ್ ಮತ್ತು ದುಡ್ಡು ಇದೆ ಅಂತಾ ಆಟವಾಡುತ್ತಿದ್ದೀರ? ಕನ್ನಡ ಪರ ಏನು ಕೆಲಸ ಮಾಡಿದ್ದೀರಾ? ಸಂಬಾಜಿ ಪಾಟೀಲ್ ಕನ್ನಡಿಗರ ಶವ ಯಾತ್ರೆ ಮಾಡುತ್ತೀನಿ ಎಂದಾಗ ಎಲ್ಲಿ ಹೋಗಿತ್ತು ನಿಮ್ಮ ಆಕ್ರೋಶ? ಶನಿವಾರ ಬೆಳಗ್ಗೆ ಬೆಳಗಾವಿಗೆ ಹೋಗಿ ದೊಡ್ಡ ಹೋರಾಟ ಮಾಡುತ್ತೇವೆ. ಆಕೆಯನ್ನು ಪಕ್ಷದಿಂದ ಕಿತ್ತು ಹಾಕದಿದ್ದರೆ ಉಗ್ರಹೋರಾಟ ನಡೆಸುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.