ಬೆಳಗಾವಿ: ತಾಂತ್ರಿಕ ತೊಂದರೆಯಿಂದ ತರಬೇತಿ ವಿಮಾನವೊಂದು (Training Aircraft) ತುರ್ತು ಭೂಸ್ಪರ್ಶ ಆಗಿರುವ ಘಟನೆ ಬೆಳಗಾವಿ (Belgavi) ತಾಲೂಕಿನ ಹೊನ್ನಿಹಾಳ (Honnihala) ಹೊರವಲಯದಲ್ಲಿ ನಡೆದಿದೆ.
ತಾಲೂಕಿನ ಸಾಂಬ್ರಾ ಏರ್‌ಪೋರ್ಟ್‌ನಿಂದ (Sambra Airport) ಹೊರಟಿದ್ದ ತರಬೇತಿ ವಿಮಾನ ತಾಂತ್ರಿಕ ತೊಂದರೆಯಿಂದಾಗಿ ಹೊಲದಲ್ಲಿ ತುರ್ತು ಭೂಸ್ಪರ್ಶವಾಗಿದೆ. ರೆಡ್‌ಬರ್ಡ್ (Redbird) ಸಂಸ್ಥೆಗೆ ಸೇರಿದ VT- RBF ತರಬೇತಿ ವಿಮಾನ ಇದಾಗಿದ್ದು, ಘಟನೆ ನಡೆದ ವೇಳೆ ವಿಮಾನದಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದರೆಂಬ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಒಬ್ಬಂಟಿಯಾಗಿ ಸಾಗುವವರನ್ನು ಟಾರ್ಗೆಟ್ ಮಾಡುತ್ತಿದ್ದ ಕುಖ್ಯಾತ ಡಕಾಯಿತಿ ಗ್ಯಾಂಗ್ ಅರೆಸ್ಟ್
ಮಹಾರಾಷ್ಟ್ರ(Maharastra) ದ ಕರಾಡ್‍ನಲ್ಲಿ ಗೌಂಡಿ ಕೆಲಸ ಮಾಡುತ್ತಿದ್ದ ನಾಗರಾಜ್, ಸ್ವಗ್ರಾಮ ತಾರಿಹಾಳದಲ್ಲಿ ರಾಮೇಶ್ವರ ದೇವರ ಜಾತ್ರೆಗೆ ಆಗಮಿಸಿದ್ದನು. ಭಾನುವಾರ ಸ್ನೇಹಿತನ ಜೊತೆ ಬಟ್ಟೆ ತರಲು ಬೆಳಗಾವಿ ನಗರಕ್ಕೆ ಆಗಮಿಸಿದ್ದು, ಚವ್ಹಾಟ ಗಲ್ಲಿ ಕಾರ್ನರ್‍ನಲ್ಲಿ ಸ್ನೇಹಿತನ ಜೊತೆ ನಿಂತಿದ್ದನು.
ಹೀಗೆ ನಿಂತಿದ್ದವನ ಬಳಿ ಬಂದ ಮದ್ಯವ್ಯಸನಿ ಜಯಶ್ರಿ, ಮೊಬೈಲ್ (Mobile) ನೀಡುವಂತೆ ಕಿರಿಕ್ ಮಾಡಿದ್ದಾಳೆ. ಯಾಕೆ ಮೊಬೈಲ್ ಎಂದು ಪ್ರಶ್ನಿಸುತ್ತಿದ್ದಂತೆಯೇ ಜಯಶ್ರೀ ಪವಾರ್ ಚಾಕುವಿನಿಂದ ನಾಗರಾಜ್ ಎದೆಗೆ ಚುಚ್ಚಿದ್ದಾಳೆ. ಕೂಡಲೇ ಗಾಯಾಳು ನಾಗರಾಜ್‍ನನ್ನ ಸ್ನೇಹಿತ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದನು.
ಆದರೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ನಾಗರಾಜ್ ಸಾವನ್ನಪ್ಪಿದ್ದಾನೆ. ಈ ಘಟನೆ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಿಕ್ಕೋಡಿ: ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ವ್ಯಕ್ತಿಯೊಬ್ಬ ಜನ್ಮ ನೀಡಿದ ತಾಯಿ (Mother), ತಂದೆಗಾಗಿ (Father) ದೇವಸ್ಥಾನ (Temple) ನಿರ್ಮಿಸಿ ಪ್ರತಿನಿತ್ಯ ಪೂಜೆ ಮಾಡಿ ಇತರರಿಗೆ ಆದರ್ಶವಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸುಲ್ತಾನಪುರ ಗ್ರಾಮದ ಸುರೇಶ್ ತಳವಾರ ಎಂಬುವರು ತಮ್ಮ ಜಮೀನಿನಲ್ಲಿರುವ ತಂದೆ ಗುರಪ್ಪ ತಳವಾರ ಹಾಗೂ ತಾಯಿ ಪಾರ್ವತಿ ತಳವಾರ ಅವರ ಸಮಾಧಿ ಮೇಲೆ ಪುತ್ಥಳಿ ಸ್ಥಾಪಿಸಿ ದೇವಸ್ಥಾನ ನಿರ್ಮಿಸಿ ತಂದೆ ತಾಯಿಯ ಮೇಲಿನ ಪ್ರೇಮ ಮೆರೆದಿದ್ದಾರೆ.
ಎಸ್ಸಿಎಸ್ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಹಾಗೂ ಸಮಾಜ ಸೇವಕರಾಗಿರುವ ಸುರೇಶ್ ತಳವಾರ ಹಾಗೂ ಅವರ ಸಹೋದರರಿಗೆ ಮೊದಲಿನಿಂದಲೂ ತಾಯಿ ತಂದೆ ಮೇಲೆ ಅಪಾರ ಭಕ್ತಿ ಇತ್ತು. 20 ವರ್ಷಗಳ ಹಿಂದೆ ಅವರ ತಂದೆ ಗುರಪ್ಪ ಸಾವನ್ನಪ್ಪಿದ್ದರು. ಕಳೆದ 2 ವರ್ಷದ ಹಿಂದೆ ಅವರ ತಾಯಿ ಪಾರ್ವತಿ ತೀರಿ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿವರ್ಷ ಅವರ ಪುಣ್ಯಸ್ಮರಣೆಯಂದು ಸಾವಿರಾರು ಜನರಿಗೆ ಅನ್ನಸಂತರ್ಪನೆ ಮಾಡುತ್ತಿದ್ದರು. ಇದನ್ನೂ ಓದಿ: ನಮ್ಮ ಸೊಸೈಟಿ ಬಗ್ಗೆ ಮಾತಾಡಲು ನೀನ್ಯಾರು?- ಎನ್.ಆರ್ ಸಂತೋಷ್‍ಗೆ ಗ್ರಾಮಸ್ಥರಿಂದ ತರಾಟೆ
ಆದರೆ ಈ ವರ್ಷ ತಂದೆ, ತಾಯಿಗಳು ಸದಾ ನಮ್ಮೊಂದಿಗೆ ಇರಬೇಕು ಎಂಬ ಭಾವನೆಯೊಂದಿಗೆ ಅವರ ದೇವಸ್ಥಾನ ನಿರ್ಮಿಸಿ ನಿತ್ಯ ಪೂಜಿಸುತ್ತಿದ್ದಾರೆ. ಈ ಬಗ್ಗೆ ಸುರೇಶ್ ಮಾತನಾಡಿ, ತಂದೆ ತಾಯಿಯ ಆದರ್ಶ ಮತ್ತು ಮಾರ್ಗದರ್ಶನ ಅವರು ನಮ್ಮ ಜೊತೆಗೆ ಇದ್ದರೂ ಇಲ್ಲದ್ದಿದ್ದರೂ ಸಹ ಸದಾ ನಮ್ಮ ಮೇಲೆ ಅವರ ಆಶೀರ್ವಾದ ಇರಬೇಕು ಎಂಬ ದೃಷ್ಟಿಯಿಂದ ಅವರ ದೇವಸ್ಥಾನ ನಿರ್ಮಿಸಿದ್ದೇವೆ. ನಾವಿಂದು ಏನಾದರು ಸಾಧಿಸಿದ್ದರೆ ಅದಕ್ಕೆ ಅವರ ಉತ್ತಮ ಮಾರ್ಗದರ್ಶನ ಹಾಗೂ ಆಶೀರ್ವಾದ ಕಾರಣ. ಯಾವ ಮಕ್ಕಳು ತಂದೆ, ತಾಯಿಯನ್ನು ಕಡೆಗಣಿಸಬೇಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಮೀನು ಮೃತಪಟ್ಟಿದ್ದಕ್ಕೆ ಮನನೊಂದು 13ರ ಬಾಲಕ ಆತ್ಮಹತ್ಯೆ
ಚಿಕ್ಕೋಡಿ: ಮಹಾರಾಷ್ಟ್ರ (Maharashtra) ಹಾಗೂ ಕರ್ನಾಟಕದ (Karnataka) ಗಡಿ ವಿವಾದ ಸುಪ್ರೀಂ ಕೋರ್ಟ್‍ನಲ್ಲಿ (Supreme Court) ಅಂತಿಮ ಹಂತದ ವಿಚಾರಣೆಗೆ ಬರುತ್ತಿದ್ದಂತೆ ಗಡಿ ವಿವಾದ ಕಾವೇರಿದೆ. ಒಂದು ಕಡೆ ಮಹಾರಾಷ್ಟ್ರದ ಪುಂಡರು ಕರ್ನಾಟಕದ ಬಸ್‍ಗಳಿಗೆ ಮಸಿ ಬಳಿಯುವುದು, ಕಲ್ಲು ಎಸೆಯುವ ಕಪಿಚೇಷ್ಟೆ ಮಾಡುತ್ತಿದ್ದರೆ ಮತ್ತೊಂದೆಡೆ ಮಹಾರಾಷ್ಟ್ರದ ಜನರು ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಆಗ್ರಹಿಸುತ್ತಿದ್ದಾರೆ.
ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಜನರು ನಮಗೆ ನೀರು ಕೊಡಿ ಇಲ್ಲವಾದರೆ, ನಾವು ಕರ್ನಾಟಕಕ್ಕೆ ಹೋಗುತ್ತೇವೆ ಎನ್ನುವ ನೇರ ಎಚ್ಚರಿಕೆಯನ್ನು ಮಹಾರಾಷ್ಟ್ರ ಸರ್ಕಾರಕ್ಕೆ ನೀಡಿದ್ದಾರೆ. ಜತ್ತ ತಾಲೂಕಿನ 42 ಹಳ್ಳಿಗಳ ಜನರ ಒಕ್ಕೊರಲಿನ ಘೋಷಣೆ ಇದಾಗಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಉಮದಿ ಗ್ರಾಮದಲ್ಲಿ ಸಭೆ ಸೇರಿದ ಜತ್ತ ನೀರಾವರಿ ಹೋರಾಟ ಸಮಿತಿಯ ಸದಸ್ಯರು ಮಹಾರಾಷ್ಟ್ರದ ಜತ್ತ, ಅಕ್ಕಲಕೋಟ, ಸೊಲ್ಲಾಪುರ ಕರ್ನಾಟಕಕ್ಕೆ ಸೇರಬೇಕು ಎಂಬ ಸಿಎಂ ಬಸವರಾಜ ಬೊಮ್ಮಾಯಿ (BasavarajBommai) ಹೇಳಿಕೆ ವಿಚಾರವಾಗಿ ಸಭೆ ನಡೆಸಿ ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಎಂದಿದ್ದಾರೆ. ಹೀಗಾಗಿ ಬಸವರಾಜ ಬೊಮ್ಮಾಯಿ ಮಾಸ್ಟರ್‌ಸ್ಟ್ರೋಕ್‍ಗೆ ಮಹಾರಾಷ್ಟ್ರದಲ್ಲಿ ಸಂಚಲನ ಉಂಟಾಗಿದೆ.
ಮಹಾರಾಷ್ಟ್ರದ ಜತ್ತ ತಾಲೂಕಿನ ಜನ ಕರ್ನಾಟಕ ಸಿಎಂ ಅವರಿಗೆ ಇ ಮೇಲ್ ಅಭಿಯಾನ ಆರಂಭಿಸಿದ್ದು, ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಇ ಮೇಲ್ ಮಾಡುತ್ತಿದ್ದಾರೆ. ಮಹಾರಾಷ್ಟ್ರ ಸರ್ಕಾರಕ್ಕೆ ಎಂಟು ದಿನಗಳ ಗಡುವು ನೀಡಿದ ಹೋರಾಟಗಾರರು ಎಂಟು ದಿನಗಳೊಳಗೆ ಮಹಾರಾಷ್ಟ್ರ ಸಿಎಂ, ಡಿಸಿಎಂ, ಜಲಸಂಪನ್ಮೂಲ ಸಚಿವರು ಜತ್ತ ತಾಲೂಕಿಗೆ ಬರಬೇಕು. ಜತ್ತ ತಾಲೂಕಿನ ನೀರಿನ ಸಮಸ್ಯೆ ಕುರಿತು ಪರಿಹಾರ ಕಲ್ಪಿಸಬೇಕು.
8 ದಿನಗಳೊಳಗೆ ನಿರ್ಧಾರ ಕೈಗೊಳ್ಳದ್ರಿದ್ದರೆ ಕರ್ನಾಟಕ ಸಿಎಂರನ್ನು ಜತ್ತ ತಾಲೂಕಿಗೆ ಆಹ್ವಾನಿಸಲು ನಿರ್ಧಾರ ಮಾಡಲಾಗಿದೆ. ಕರ್ನಾಟಕ ಸಿಎಂರನ್ನು ಆಹ್ವಾನಿಸಿ ಕರ್ನಾಟಕ ಸೇರಲು ನಿರ್ಧಾರ ಪ್ರಕಟಿಸುತ್ತೇವೆ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ. ಮಹಾರಾಷ್ಟ್ರ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ಮಹಾ ಸರ್ಕಾರದ ವಿರುದ್ಧ ಮಹಾರಾಷ್ಟ್ರದ ಜನರೇ ಕಿಡಿಕಾರುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೆಳಗಾವಿ: ಗಡಿ ವಿವಾದದ ಬಗ್ಗೆ ಸುಪ್ರೀಂಕೋರ್ಟ್‍ನಲ್ಲಿ (Supreme Court) ತಾನೇ ಧಾವೆ ಹೂಡಿರುವ ಮಹಾರಾಷ್ಟ್ರ ಸರ್ಕಾರ ಇದೀಗ ಮತ್ತೆ ಹೊಸ ವರಸೆ ಶುರು ಮಾಡಿದ್ದು ಮಾತುಕತೆ ಮೂಲಕ ಬಗೆಹರಿಯಬೇಕು ಎಂದು ವಾದ ಮಂಡಿಸುತ್ತಿದೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಹಾರಾಷ್ಟ್ರ (Maharashtra) ಸಿಎಂ ಏಕನಾಥ ಶಿಂಧೆ (Eknath Shinde) ಅವರು, ಗಡಿ ವಿವಾದ ಕುರಿತು ನಾವು ಈಗಾಗಲೇ ಸಭೆ ನಡೆಸಿದ್ದೇವೆ. ಈ ಹಳೆಯ ವಾದವೇನಿದೆ ಅದು ನ್ಯಾಯಾಲಯದ ಮುಂದಿದೆ. ಸುಪ್ರೀಂಕೋರ್ಟ್‍ನಲ್ಲಿ ಕಾನೂನು ಹೋರಾಟ ನಡೆಯುತ್ತಿದೆ. ಆದರೆ ಇದರ ಜೊತೆಗೆ ಈ ವಿಷಯ ಮಾತುಕತೆ ಮೂಲಕ ಬಗೆಹರಿಯಬೇಕು. ಇದು ಮಹಾರಾಷ್ಟ್ರ ಸರ್ಕಾರದ ನಿಲುವಾಗಿದೆ. ಎರಡೂ ರಾಜ್ಯಗಳ ರಾಜ್ಯಪಾಲರ ಸಭೆಯಾಗಿದೆ. ಕೇಂದ್ರ ಸರ್ಕಾರ ಸಹ ಸಕಾರಾತ್ಮಕ ನಿಲುವು ವ್ಯಕ್ತಪಡಿಸಬೇಕಿದೆ. ಈ ವಿವಾದ ಸರ್ವ ಸಮ್ಮತಿ ಮೂಲಕ ಬಗೆಹರಿಯಬೇಕೆಂಬುದು ನಮ್ಮ ನಿಲುವಾಗಿದೆ. ಈ ನಿಟ್ಟಿನಲ್ಲಿ ನಾವು ಸಭೆಯನ್ನು ಸಹ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಪಕ್ಷ ಬಿಡಲ್ಲ, ಭವಿಷ್ಯ ಬಿಜೆಪಿಯಲ್ಲೇ ಇದೆ: ಯತ್ನಾಳ್
ಮಹಾರಾಷ್ಟ್ರ ಸರ್ಕಾರದ ಯೋಜನೆಯ ಲಾಭ ಗಡಿಭಾಗದ ಮರಾಠಿಗರಿಗೆ ಏನು ಸಿಗುತ್ತಿತ್ತೋ ಅದನ್ನು ಹೆಚ್ಚಿಸಿದ್ದೇವೆ. ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ಹತ್ತು ಸಾವಿರ ರೂಪಾಯಿ 20 ಸಾವಿರಕ್ಕೆ ಹೆಚ್ಚಳವಾಗಿದೆ. ಮುಖ್ಯಮಂತ್ರಿ ಧರ್ಮಾದಾಯ ಸಹಾಯ ನಿಧಿ ಯೋಜನೆಯ ಲಾಭ ಬಂದ್ ಆಗಿತ್ತು. ಅದನ್ನು ಶುರು ಮಾಡಿದ್ದೇವೆ. ಗಡಿಭಾಗದ ಮರಾಠಿಗರಿಗೆ ಆರೋಗ್ಯ ಸೌಲಭ್ಯ ನೀಡಲು ಮಹಾತ್ಮ ಜ್ಯೋತಿಬಾ ಪುಲೆ ಯೋಜನೆ ನೀಡಲು ನಿರ್ಣಯ ತೆಗೆದುಕೊಳ್ಳಲಾಗಿದೆ. ಗಡಿ ಭಾಗದ ಮರಾಠಿಗರಿಗೆ ಮಹಾರಾಷ್ಟ್ರ ಸರ್ಕಾರದಿಂದ ಸಿಗುವ ಯೋಜನೆಗಳ ಲಾಭ ಹೆಚ್ಚಿಸಿದ್ದೇವೆ. ಈ ವಿಷಯ ಮಾತುಕತೆ ಮೂಲಕ ಬಗೆಹರಿಯಬೇಕು ಎಂಬುದು ನಮ್ಮ ನಿಲುವು. ಮತ್ಯಾರೋ ವಾದ ಸೃಷ್ಟಿಸಿ ಮತ್ತಷ್ಟು ಜಟಿಲಗೊಳಿಸಬಾರದು. ನಾವು ಸಭೆ ನಡೆಸಿದಾಗ ಸಾಕಷ್ಟು ಸಲಹೆಗಳು ಬಂದಿವೆ ಎಂದಿದ್ದಾರೆ. ಇದನ್ನೂ ಓದಿ: ಎಲ್ಲಾ ಮುಸ್ಲಿಮರನ್ನ ಕೊಂದು ಹಿಂದೂ ರಾಷ್ಟ್ರ ನಿರ್ಮಾಣ ಮಾಡಿ: ಖಾಲಿದ್ ಆಕ್ರೋಶ
Live Tv
[brid partner=56869869 player=32851 video=960834 autoplay=true]
ಬೆಳಗಾವಿ: ಅಪ್ರಾಪ್ತ ಬಾಲಕಿಯನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ನಡೆದ ಗಲಾಟೆಯಲ್ಲಿ ನಾಲ್ವರಿಗೆ ಚಾಕು ಇರಿದಿರುವ ಘಟನೆ ಬೈಲಹೊಂಗಲ ಪಟ್ಟಣದ ಆಶ್ರಯ ಕಾಲೋನಿಯಲ್ಲಿ ನಡೆದಿದೆ.
ಬೆಳಗಾವಿ (Belgavi) ಜಿಲ್ಲೆಯ ಬೈಲಹೊಂಗಲ ಪಟ್ಟಣದ ಆಶ್ರಯ ಕಾಲೋನಿಯಲ್ಲಿ (Ashraya Colony) ಮಂಗಳವಾರ ಸಂಜೆ ಬಾಲಕಿಯನ್ನು ಚುಡಾಯಿಸಿದ್ದಕ್ಕೆ ಪ್ರಶ್ನಿಸಲು ಹಿರಿಯರ ಸಮೇತ ಬಾಲಕಿಯ ತಂದೆ ಹೋಗಿದ್ದರು. ಈ ವೇಳೆ 17 ವರ್ಷದ ಬಾಲಕ ಹಾಗೂ ಆತನ ಸ್ನೇಹಿತರು, ಬುದ್ದಿ ಹೇಳಲು ಹೋಗಿದ್ದ ನಾಲ್ವರ ಮೇಲೆ ಹಲ್ಲೆ ಮಾಡಿ ಚಾಕು ಇರಿದಿದ್ದಾರೆ. ಇದನ್ನೂ ಓದಿ: ಗುಡ್ಡ ಹತ್ತಿ ಆಯುಷ್ಮಾನ್ ಕಾರ್ಡ್ ನೋಂದಣಿ – ಧರ್ಮಸ್ಥಳ ಸಂಘದ ಕಾರ್ಯಕ್ಕೆ ಭಾರೀ ಮೆಚ್ಚುಗೆ
ಬಾಲಕ ಮತ್ತು ಬಾಲಕಿ ಇಬ್ಬರು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದು, ಆರೋಪಿ ಕಡೆಯ ಓರ್ವ ವ್ಯಕ್ತಿಗೂ ಗಾಯವಾಗಿದೆ. ರಫೀಕ್ ಕುರಿಕೊಪ್ಪ, ಸಾಹಿದ್ ಸೌದಾಗರ್, ಅತಾಹುಲ್ಲಾ ಹುಬ್ಬಳ್ಳಿ, ಮೆಹಬೂಬ್ ಹುಬ್ಬಳ್ಳಿ ಚಾಕು ಇರಿತಕ್ಕೊಳಗಾದವರಾಗಿದ್ದಾರೆ. ಜಗಳ ಬಿಡಿಸಲು ಹೋದ ರವಿ ತಿಮ್ಮನ್ನರ್ ಅವರ ಮೇಲೂ ಕೂಡ ಹಲ್ಲೆ ನಡೆಸಲಾಗಿದೆ.
ಗಾಯಗಳುಗಳಿಗೆ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ ಬಿಮ್ಸ್ ಆಸ್ಪತ್ರೆ ಬಳಿ ಓರ್ವ ಎಸಿಪಿ, ಇಬ್ಬರು ಸಿಪಿಐ ಸೇರಿ ಇಪ್ಪತ್ತಕ್ಕೂ ಹೆಚ್ಚು ಜನ ಪೊಲೀಸರನ್ನು ಬಂದೋಬಸ್ತ್‍ಗಾಗಿ ನಿಯೋಜಿಸಲಾಗಿದೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಮೊದಲ ಬಲಿ – ಸ್ಥಳದಲ್ಲಿಯೇ ಮಹಿಳೆ ಸಾವು
Live Tv
[brid partner=56869869 player=32851 video=960834 autoplay=true]
-ಅಶ್ಲೀಲ ಪದ ಅನ್ನೋದು ಡಿಕ್ಷನರಿಯಲ್ಲಿದೆ, ನಾನು ಬರೆದಿದ್ದೀನಾ? – ನಾನು ಭಾರತೀಯ ಎಂದ ಸತೀಶ್ ಜಾರಕಿಹೊಳಿ
ಬೆಳಗಾವಿ: ಹಿಂದೂ ಪದದ ಬಗ್ಗೆ ನಾನು ತಪ್ಪು ಮಾತನಾಡಿದ್ದೇನೆ ಅಂತಾ ಪ್ರೂವ್ ಮಾಡಿದರೆ ಕ್ಷಮೆಯಷ್ಟೇ ಅಲ್ಲ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಷ್ಟು ಜನ ನಾವು ಹೇಳಿದ್ದನ್ನು ಅರ್ಥ ಮಾಡಿಕೊಂಡಿದ್ದಾರೆ. ಅಶ್ಲೀಲ ಎಂಬ ಪದದಿಂದ ತಮಗೆ ಬೇಕಾದ ಹಾಗೇ ಓದಿದ್ದಾರೆ. ಹಿಂದೂ ಶಬ್ದ ಪರ್ಷಿಯನ್ ಶಬ್ದ. ದಾಖಲೆ ಇದೆ. ವಿಕಿಪೀಡಿಯಾದಲ್ಲಿ ನೋಡಬಹುದು ಅಂತಾ ಹೇಳಿದ್ದೇನೆ. ಕೆಟ್ಟ ಶಬ್ದ ಬಳಸಿದ್ದು ಡಿಕ್ಷನರಿಯಲ್ಲಿ ಇದೆ. ಆ ಡಿಕ್ಷನರಿ 1963ರಲ್ಲಿ ಪ್ರಿಂಟ್ ಆಗಿದೆ. ನಾನು ಏನು ಹೇಳಿದ್ದೇನೋ, ಇದರ ಬಗ್ಗೆ ಚರ್ಚೆ ಆಗಬೇಕು ಅಂತ ಹೇಳಿದ್ದೇನೆ ಎಂದರು.
ಹಿಂದೂ ಪದ ಅಶ್ಲೀಲವಾಗಿ ಅಂತಾ ಇದ್ದಿದ್ದು ಆ ಡಿಕ್ಷನರಿಯಲ್ಲಿ ಇದೆ. ಇವರು ತಮಗೆ ಬೇಕಾದ ಹಾಗೇ ಹೇಳಿದರೆ ನಾನು ಹೇಗೆ ಉತ್ತರ ಕೊಡಬೇಕಾಗುತ್ತದೆ. ವಿಕಿಪೀಡಿಯಾದಲ್ಲಿ ಇದ್ದಿದ್ದನ್ನು ಹೇಳಿದ್ದೇನೆ. ಅದನ್ನು ನೋಡಿ ಇಡೀ ರಾಷ್ಟ್ರದಲ್ಲಿ ಮುಂದುವರಿಸಿದ್ದಾರೆ. ವಿಕಿಪೀಡಿಯದಲ್ಲಿ ಯಾರಾದರೂ ಬರೆಯಬೇಕಿದರೂ ಕಮೀಟಿ ಇದೆ. ಹಾಗೇ ಅದನ್ನು ಅಪ್‍ಲೋಡ್ ಮಾಡಬಹುದು. ನಾವು ಯಾರ ಬಗ್ಗೆಯೂ ಮಾತನಾಡಲ್ಲ. ನಿಮ್ಮ ಪ್ಯಾನಲ್ ಡಿಸ್ಕಷನ್‍ಲ್ಲಿ ಚರ್ಚೆ ಮಾಡಬೇಕು. ಯಾರು ಬೇಕಾದರೂ ಬರಲಿ ನನ್ನ ಸ್ಟ್ಯಾಂಡ್ ಏನಿದೆ ಅದನ್ನು ಹೇಳುತ್ತೇನೆ. ಯಾರೂ ಸಹ ನಮ್ಮ ನಿಲುವು ನೋಡೇ ಇಲ್ಲ. ನ್ಯಾಷನಲ್ ಮೀಡಿಯಾದಲ್ಲಿ ಬಂದ ತಕ್ಷಣ ಒಂದ್ ಸ್ಟ್ಯಾಂಡ್ ಆಗಿದೆ. ನಾನು ತಪ್ಪು ಹೇಳೆದ್ದೇನೆ ಅಂತ ಪ್ರೂವ್ ಮಾಡಿದರೆ, ಕ್ಷಮೆ ಅಷ್ಟೇ ಅಲ್ಲ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದ ತಿಳಿಸಿದರು. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಮತ್ತೆ ಮೊಳಗಿದ `ಮುಂದಿನ ಸಿಎಂ ಸಿದ್ದರಾಮಯ್ಯ’ ಘೋಷಣೆ
ತಮಗೆ ಬೈದಿದ್ದನ್ನು ತಾವು ನೋಡಿಕೊಂಡಿಲ್ಲ. ಇದರ ಬಗ್ಗೆ ಹೀಗೆ ಹೇಳಿದ್ದೀರಿ ಅದನ್ನು ಚರ್ಚೆ ಮಾಡಿ ಅಂದಿದ್ದೇನೆ. ಡಿಕ್ಷನರಿಯಲ್ಲಿ ಹಿಂದೂ ಪದದ ಅರ್ಥ ಏನು ಅಂತಾ ಇದೆ. ಕೆಟ್ಟ ಶಬ್ದ ಉಪಯೋಗ ಮಾಡಿದ್ದಾರೆ ಎಂದರ್ಥ. ಆ ಡಿಕ್ಷನರಿಯಲ್ಲಿ ಹಿಂದೂ ಪದದ ಅರ್ಥ ಅಶ್ಲೀಲ ಎಂಬುವುದು ಇದೆ. ವಾಜಪೇಯಿಯವರು ಸಹ ಹಿಂದೂ ಪದ ಪರ್ಷಿಯನ್‍ನಿಂದ ಬಂದಿದ್ದು ಅಂತಾ ಹೇಳಿದ್ದಾರೆ. ನಾವು ಯಾವುದೇ ಜಾತಿ ನೋಡಿ ಕೆಲಸ ಮಾಡಲ್ಲ ಎಂದು ಹೇಳಿದರು.
ನೀವು ಹಿಂದೂನಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಭಾರತೀಯ ಎಂದ ಸತೀಶ್ ಜಾರಕಿಹೊಳಿ ಅವರು, ಪಕ್ಷದ ಬೇರೆ ಇದು ವೈಯಕ್ತಿಕ, ನಾನು ಪಕ್ಷದ ವೇದಿಕೆಯಲ್ಲಿ ಮಾತನಾಡಿಲ್ಲ. ಪಕ್ಷಕ್ಕೂ ನನ್ನ ಹೇಳಿಕೆಗೂ ಸಂಬಂಧ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ತಿಂಗಳಿಗೆ 655 ರೂ. ಪಾವತಿಸಿ ಟ್ವಿಟ್ಟರ್ ಬ್ಲೂಟಿಕ್ ಪಡೆದ ಭಾರತದ ಮೊದಲ ಮಹಿಳೆ
ಸತೀಶ್ ಜಾರಕಿಹೊಳಿ ಅರೆ ಬರೆ ಓದಿಕೊಂಡಿದ್ದಾರೆ ಎಂಬ ಸಿಎಂ ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಅರೆ ಬರೆ ಓದಿಕೊಂಡಿಲ್ಲ. ನಾವು ಹಿಂದೂಗೆ ಎಲ್ಲಿ ಅವಮಾನ ಮಾಡಿದ್ದೀವಿ ಅಂತ ಸಾಬೀತು ಮಾಡಬೇಕು. ಹಲವು ಬಿಜೆಪಿ ನಾಯಕರೇ ಹಿಂದೂ ಪದ ಪರ್ಷಿಯನ್‍ನಿಂದ ಬಂದಿದೆ ಅಂತಾ ಹೇಳಿದ್ದಾರೆ. ಮನುವಾದಿಗಳು ಹಾಗೂ ಸಿಸ್ಟಮ್ ಇದೆ, ವ್ಯವಸ್ಥಿತವಾಗಿ ಇದನ್ನು ಷಡ್ಯಂತ್ರ ಮಾಡುತ್ತಿದ್ದಾರೆ. ನನ್ನ ಹೇಳಿಕೆ ಸುರ್ಜೇವಾಲಾ ಖಂಡನೆ ಮಾಡಿದ್ದಾರೆ. ಅವರು ನಮಗಿಂತ ಹಿರಿಯರು ಆಕ್ಷೇಪ ಮಾಡಲ್ಲ. ನಾವು ಮಾಡಿದ್ದಾದರೂ ಏನು? ನಾವು ಕ್ಷಮೆ ಕೇಳುವ ಪ್ರಶ್ನೆ ಇಲ್ಲ. ಸಿಎಂ ಬೊಮ್ಮಾಯಿ ಬೇಕಾದರೆ ಒಂದು ಕಮಿಟಿ ಮಾಡಲಿ. ಆ ಡಿಕ್ಷನರಿಯಲ್ಲಿ ಹಿಂದೂ ಪದದ ಅಶ್ಲೀಲ ಅಂತ ಬರೆದಿದ್ದಾರೆ, ಆ ಬಗ್ಗೆ ಚರ್ಚೆ ಮಾಡಿ ಅಂತ ಹೇಳಿದ್ದೇನೆ ಎಂದರು.
1963ರಲ್ಲಿ ಆ ಡಿಕ್ಷನರಿ ಪ್ರಕಟ ಆಗಿದೆ. ಅದನ್ನು ನೋಡಿ. ಯಾವುದೇ ಸಮಾಜದವರಿಗೆ ಬೈದರೆ ಹರ್ಟ್ ಆಗುತ್ತದೆ. ಅಶ್ಲೀಲ ಪದ ಅನ್ನೋದು ಡಿಕ್ಷನರಿಯಲ್ಲಿದೆ. ನಾನು ಬರೆದಿದ್ದೀನಾ? “ಹಿಂದೂ ಪದದ ಅರ್ಥ ಕೆಟ್ಟದಿದೆ ನೋಡಿ ಅದರ ಬಗ್ಗೆ ಚರ್ಚೆ ಮಾಡಿ ಅಂತಾ ಹೇಳಿದ್ದೇನೆ. ನಿಮ್ಮ ಕಡೆ ಏನಾದರೂ ಕರೆಕ್ಟ್ ಇದ್ದರೆ ಮಾಡಿ, ದಾಖಲೆ ಇದ್ದರೆ ಮುಂದುವರಿಸಿ. ಅವರದ್ದೇ ಸರ್ಕಾರ ಇದೆ. ಸಿಎಂ ತನಿಖೆ ಮಾಡಲಿ ಒಂದು ಕಮಿಟಿ ಮಾಡಿ ಸತ್ಯಾಸತ್ಯತೆ ಹೊರಗೆ ಬರುತ್ತದೆ. ಬೇರೆ ಪುಸ್ತಕಗಳಲ್ಲಿ ಉಲ್ಲೇಖ ಇದೆ. ವಿಕಿಪೀಡಿಯಾದಲ್ಲಿ ಇದೆ ಅಂತಾ ಸುರ್ಜೆವಾಲಾರಿಗೂ ತಿಳಿಸಿದ್ದೇನೆ. ನಾನು ಚುನಾವಣೆ ದೃಷ್ಟಿಯಿಂದ ಹೇಳಿದ್ದಲ್ಲ. ಈ ಬಗ್ಗೆ ಸಾಮೂಹಿಕ ಚರ್ಚೆ ಮಾಡಬೇಕು. ನಾಲ್ಕು ಜನ ಚರ್ಚೆ ಮಾಡಿದ್ದನ್ನು ನಾವು ಒಪ್ಪಿಕೊಳ್ಳಲ್ಲ. ಸತ್ಯ ಹೇಳೋದೇ ಅಪರಾಧ. ಎಲ್ಲರಿಗೂ ನ್ಯಾಯ ಕೊಡಿಸುವುದೇ ಅಪರಾಧ ಆಗಿದೆ. ನಾನು ಪರ್ಷಿಯನ್ ಪದ ಅಂತಾ ಹೇಳಿದ್ದು, ಅದರ ಬಗ್ಗೆ ಚರ್ಚೆ ಆಗಬೇಕು ಅಂತ ಹೇಳಿದ್ದೇನೆ. ಅದು ಸತೀಶ್ ಜಾರಕಿಹೊಳಿ ಸಂಶೋಧನೆ ಮಾಡಿ ಬರೆದ ಬುಕ್ ಅಲ್ಲ. ಯಾರು ಚರ್ಚೆಗೆ ಬರುತ್ತಾರೋ ಬರಲಿ, ಚರ್ಚೆಗೆ ನಾನು ಸಿದ್ಧ ಎಂದು ಕಿಡಿಕಾರಿದರು.
ಯಡಿಯೂರಪ್ಪ, ಬೊಮ್ಮಾಯಿಗೆ ಒಂದು ಕಮಿಟಿ ರಚನೆ ಮಾಡಲು ಹೇಳಿ. ಅದರಲ್ಲಿ ಪ್ರೂವ್ ಆದರೆ ಕ್ಷಮೆ ಅಲ್ಲ, ರಾಜೀನಾಮೆ ಸಹ ನೀಡುತ್ತೇನೆ. ಯಾರು ಬರೆದಿದ್ದಾರೆ ಅವರ ಮೇಲೆ ಕೇಸ್ ಹಾಕಿ ಫೈಟ್ ಮಾಡಬೇಕು. ಇಂತಹ ವಿಷಯಗಳ ಮೇಲೆ ಹಿಂದುತ್ವ ಗಟ್ಟಿ ಮಾಡುವುದು ಬಿಜೆಪಿಯವರ ಉದ್ದೇಶವಾಗಿದೆ. ಬೊಮ್ಮಾಯಿಯವರಿಗೆ ಕಮಿಟಿ ರಚಿಸಿ ಒಂದು ತಿಂಗಳಲ್ಲಿ ವರದಿ ನೀಡಿ ಅಂತ ಹೇಳಿ ಎಂದು ಹೇಳಿದರು.
Live Tv
[brid partner=56869869 player=32851 video=960834 autoplay=true]
ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ (Belgavi) ಮೂರು ವರ್ಷಗಳ ಬಳಿಕ ನಡೆಯುತ್ತಿರುವ ಅದ್ಧೂರಿ ಕನ್ನಡ ರಾಜ್ಯೋತ್ಸವದಲ್ಲಿ (Kannada Rajyotsava) ಭಾಗಿಯಾಗುವ 50 ಸಾವಿರ ಜನರಿಗೆ ಹುಕ್ಕೇರಿ ಹಿರೇಮಠ ವತಿಯಿಂದ 1 ಲಕ್ಷ ಹೋಳಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿದೆ ಎಂದು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ (Chandrasekhara Shivacharya Swamiji) ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯೋತ್ಸವಕ್ಕೆ ಬರುವ ಕನ್ನಡಿಗರಿಗೆ ಒಂದು ಲಕ್ಷ ಹೋಳಿಗೆ (Holige) ದಾಸೋಹ ಮಾಡಲಾಗುತ್ತಿದೆ. ರಾಜ್ಯೋತ್ಸವದಂದು ಇಡೀ ರಾಜ್ಯವೇ ಬೆಳಗಾವಿ ಕಡೆಗೆ ತಿರುಗಿ ನೋಡುತ್ತಿರುತ್ತದೆ. ಅಷ್ಟೊಂದು ವೈಭವೋಪೇತ ರಾಜ್ಯೋತ್ಸವಕ್ಕೆ ಬೆಳಗಾವಿ ಸಾಕ್ಷಿಯಾಗುತ್ತದೆ. ರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವ 50 ಸಾವಿರ ಕನ್ನಡಿಗರಿಗೆ ಹೋಳಿಗೆ ಊಟ ವ್ಯವಸ್ಥೆ ಮಾಡಿದ್ದೇವೆ. ಒಬ್ಬರಿಗೆ ತಲಾ ಎರಡು ಹೋಳಿಗೆಯಂತೆ ಒಂದು ಲಕ್ಷ ಹೋಳಿಗೆ ಸಿದ್ಧಪಡಿಸುತ್ತೇವೆ ಎಂದರು.
ಹೋಳಿಗೆ ಜೊತೆಗೆ ಊಟದಲ್ಲಿ ಬದನೆಕಾಯಿ ಪಲ್ಯ, ಅನ್ನ-ಸಾಂಬಾರು ಇರಲಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿಯ 200 ಬಾಣಸಿಗರು ಊಟ ಸಿದ್ಧಪಡಿಸಲಿದ್ದಾರೆ. 150 ಜನ ಹೆಣ್ಣುಮಕ್ಕಳಿಂದ ಹೋಳಿಗೆ, 50 ಪುರುಷರಿಂದ ಅನ್ನ-ಸಾಂಬರು, ಕಾಯಿಪಲ್ಯ ತಯಾರಿಸಲಾಗುತ್ತದೆ. ಜಿಲ್ಲಾಧಿಕಾರಿ ಸೇರಿ ಜಿಲ್ಲೆಯ ಎಲ್ಲ ಅಧಿಕಾರಿಗಳು ಹುಕ್ಕೇರಿ ಹಿರೇಮಠಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಚಂದಮಾಮ ಪುಸ್ತಕದಲ್ಲಿ ‘ದಿನಕ್ಕೊಂದು ಕತೆ’ ಎಂದು ಬರ್ತಿತ್ತು – ಬಿಜೆಪಿ ಸರ್ಕಾರದಿಂದ ‘ದಿನಕ್ಕೊಂದು ಹಗರಣ’ ಬರುತ್ತಿದೆ: ಕಾಂಗ್ರೆಸ್
ಹಿರಿಯ ನಟ ಸಾಯಿಕುಮಾರ್ (Sai Kumar) , ಉಸ್ತುವಾರಿ ಸಚಿವ ಗೋವಿಂದ ಕಾರಜೋಳರಿಂದ (Govind Karjol) ಹೋಳಿಗೆ ದಾಸೋಹಕ್ಕೆ ಚಾಲನೆ ಕೊಡುತ್ತಾರೆ. ಬೆಳಗಾವಿಯ ಸರ್ದಾರ್ ಮೈದಾನದಲ್ಲಿ ಮಧ್ಯಾಹ್ನ 1 ಗಂಟೆಯಿಂದಲೇ ಹೋಳಿಗೆ ದಾಸೋಹ ಪ್ರಾರಂಭ ಆಗಲಿದೆ. ಉತ್ತರ ಕರ್ನಾಟಕ ಭಾಗದಲ್ಲೇ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಬೆಳಗಾವಿಯಲ್ಲಿ ನಡೆಯುತ್ತದೆ. ಹೀಗಾಗಿ ಬೆಳಗಾವಿಯಲ್ಲಿ ನಡೆಯುವ ರಾಜ್ಯೋತ್ಸವಕ್ಕೆ ರಾಜ್ಯ ಸರ್ಕಾರ ವಿಶೇಷ ಅನುದಾನ ನೀಡಬೇಕು. ಹೆಚ್ಚಿನ ಅನುದಾನ ಬಿಡುಗಡೆ ಆದರೆ ರಾಜ್ಯೋತ್ಸವ ಆಚರಣೆಗೆ ಉತ್ಸಾಹವೂ ವೃದ್ಧಿ ಆಗುತ್ತದೆ ಎಂದರು.
50 ಸಾವಿರ ಜನರಿಗೆ ಸಿದ್ಧವಾಗಲಿರುವ ಊಟಕ್ಕೆ ಎಲ್ಲ ಭಾಗದಿಂದ ದಿನಸಿ ಬಳಕೆ ಮಾಡಲಾಗುತ್ತಿದೆ. ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದ ಬೆಲ್ಲ, ಗದಗ ಜಿಲ್ಲೆಯ ಕಡಲೆ, ಬೆಳಗಾವಿ ಜಿಲ್ಲೆಯ ಅಡುಗೆ ಎಣ್ಣೆ, ಗುಜರಾತ್ ರಾಜ್ಯದ ಗೋಧಿ ಹಿಟ್ಟು, ದಾವಣಗೆರೆಯ ಅಕ್ಕಿ, ಶಿವಮೊಗ್ಗದಿಂದ 50 ಸಾವಿರಕ್ಕೂ ಅಧಿಕ ಅಡಿಕೆ ಎಲೆಯನ್ನು ಸರಬರಾಜು ಮಾಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಗುಜರಾತ್‍ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ, ಹಳೆಯ ಪಿಂಚಣಿ ಯೋಜನೆ ಜಾರಿಗೆ: ರಾಹುಲ್ ಗಾಂಧಿ
Live Tv
[brid partner=56869869 player=32851 video=960834 autoplay=true]
ಬೆಳಗಾವಿ: ಸವದತ್ತಿ ಶ್ರೀರೇಣುಕಾ ಯಲ್ಲಮ್ಮನ ಕ್ಷೇತ್ರದ ಶಾಸಕ, ವಿಧಾನ ಸಭೆ ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ (Ananda Mamani) ಅವರ ಅಂತ್ಯಕ್ರಿಯೆಯನ್ನು (Funeral) ವೀರಶೈವ ಲಿಂಗಾಯತ ಸಂಪ್ರದಾಯದಂತೆ ನೆರವೇರಿಸಲಾಯಿತು.
ಬೆಳಗಾವಿ (Belgavi) ಜಿಲ್ಲೆಯ ಸವದತ್ತಿ (Savadatti) ಪಟ್ಟಣದ ಹೊರವಲಯದಲ್ಲಿರುವ ಯಡ್ರಾವಿ ರಸ್ತೆಯಲ್ಲಿರುವ ಚಂದ್ರಮಾ ಫಾರ್ಮ್ ಹೌಸ್‍ನಲ್ಲಿ ತಮ್ಮ ತಂದೆ ಚಂದ್ರಶೇಖರ ಮಾಮನಿ ಸಮಾಧಿ ಪಕ್ಕದಲ್ಲಿ, ಆನಂದ ಮಾಮನಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಈ ವೇಳೆ ಆನಂದ ಮಾಮನಿ ಇಬ್ಬರು ಧರ್ಮಪತ್ನಿಯರು, ಮಕ್ಕಳು ಸೇರಿದಂತೆ ಕುಟುಂಬಸ್ಥರು ಭಾಗಿಯಾಗಿದ್ದರು. ಇದರ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಸಿ.ಸಿ.ಪಾಟೀಲ್, ಶಂಕರಪಾಟೀಲ್, ಮನೇನಕೊಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಮಹೇಶ್ ತೆಂಗಿನಕಾಯಿ, ಕಾಂಗ್ರೆಸ್ ಮುಖಂಡ ಎನ್.ಎಚ್.ಕೋನರೆಡ್ಡಿ ಸೇರಿದಂತೆ ಇತರ ರಾಜಕೀಯ ಮುಖಂಡರು, ವಿವಿಧ ಮಠಾಧೀಶರು ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಆನಂದ ಮಾಮನಿ ನಿಧನ- ಕಿತ್ತೂರು ಉತ್ಸವ ನಾಳೆಗೆ ಮುಂದೂಡಿಕೆ
ಇದಕ್ಕೂ ಮೊದಲು ಸವದತ್ತಿ ಪಟ್ಟಣದ ರಾಮಾಪೂರ ಸೈಟ್‍ನಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಇದಾದ ಬಳಿಕ ಆನಂದ ಮಾಮನಿ ಅವರ ಪಾರ್ಥಿವ ಶರೀರವನ್ನು ಸವದತ್ತಿ ಪಟ್ಟಣದ ವಿವಿಧ ಓಣಿ, ಗಲ್ಲಿಗಳಲ್ಲಿ ಅಂತಿಮ ಯಾತ್ರೆ ನಡೆಸಲಾಗಿತ್ತು. ಇದನ್ನೂ ಓದಿ: ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ ವಿಧಿವಶ
Live Tv
[brid partner=56869869 player=32851 video=960834 autoplay=true]
ಬೆಳಗಾವಿ: ಬೀದಿ ನಾಯಿಗಳಿಗೆ (Stray Dog) ತೊಂದರೆ ಕೊಡುವುದಲ್ಲದೇ ಅವುಗಳಿಗೆ ಉಚಿತವಾಗಿ ಆಹಾರ ಕೊಡುತ್ತಿರುವ ಕುಟುಂಬದವರಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿರುವುದಾಗಿ ಬೆಳಗಾವಿ ಪೊಲೀಸರಿಗೆ ದೂರು ನೀಡಿದರೂ, ಕ್ರಮಕೈಗೊಳ್ಳದ ಹಿನ್ನೆಲೆ ಸಂತ್ರಸ್ತರು ಪ್ರಧಾನಿಗೆ (Prim Minister) ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ಪ್ರಕರಣ ಹಿನ್ನೆಲೆ: ಅನಿತಾ ದೊಡ್ಡಮನಿ ಕುಟುಂಬಸ್ಥರು ಕಳೆದ ಹಲವಾರು ವರ್ಷಗಳಿಂದ ಬೆಳಗಾವಿ ಅನಿಮಲ್ ವೇಲ್ಫೇರ್ ಅಸೋಸಿಯೇಷನ್ (ಎನ್‌ಜಿಓ) ತೆಗೆದುಕೊಂಡು ಸರ್ಕಾರದ ಅನುಮತಿ ಪಡೆದು ನಗರದಲ್ಲಿರುವ ಬೀದಿ ನಾಯಿಗಳಿಗೆ ಉಚಿತವಾಗಿ ಊಟ ಹಾಕುತ್ತಿದ್ದಾರೆ. ಆದರೆ, ಬೀದಿ ನಾಯಿಗಳಿಗೆ ಊಟ ನೀಡದಂತೆ ಅನಿತಾ ಕುಟುಂಬಸ್ಥರಿಗೆ ವಕೀಲ ವಿನಾಯಕ್ ದಬ್ಬಾಳಿಕೆ ಮಾಡುತ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ಕಳೆದ ಒಂಭತ್ತು ತಿಂಗಳ ಹಿಂದೆಯೇ ಶಾಹಾಪುರ ಪೊಲೀಸ್ ಠಾಣೆಯಲ್ಲಿ ಅನಿತಾ ಅವರು ದೂರು ದಾಖಲಿಸಿದ್ದಾರೆ.
ಆದರೆ ನಾಯಿಗಳಿಗೆ ತೊಂದರೆ ಹಾಗೂ ನಮಗೆ ಮಾನಸಿಕ ಹಿಂಸೆ ನೀಡುತ್ತಿದ್ದರೂ ಪೊಲೀಸರು ಸೂಕ್ತಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಹೀಗಾಗಿ ನಾವು ಬೀದಿ ನಾಯಿಗಳಿಗೆ ತೊಂದರೆ ಕೊಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ, ರಾಜ್ಯಪಾಲ ಹಾಗೂ ಪ್ರಧಾನಮಂತ್ರಿವರೆಗೂ ದೂರು ಸಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ. ನಾಯಿಗಳಿಗೆ ಹಾಗೂ ನಮಗೆ ಕಿರುಕುಳ ನೀಡುತ್ತಿರುವ ವಿನಾಯಕ್ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಹಿಮಾಚಲ ಪ್ರದೇಶ ಚುನಾವಣೆ – `ಕೈ’ ನಾಯಕರ ಪಟ್ಟಿ ರಿಲೀಸ್
Live Tv
[brid partner=56869869 player=32851 video=960834 autoplay=true]