ಪೊಲೀಸರ ಎಚ್ಚರಿಕೆಯನ್ನು ಕಡೆಗಣಿಸಿ, ಪರಾರಿಯಾಗಲು ಯತ್ನಿಸಿದಾಗ ಆರೋಪಿ ಕಾಲಿಗೆ ಗುಂಡು ಹಾರಿಸಲಾಗಿದೆ. ಗಾಯಗೊಂಡ ಆರೋಪಿಯನ್ನು ಹಾಗೂ ಪೊಲೀಸ್ ಸಿಬ್ಬಂದಿಯನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಳಗಾವಿ: ಭಾರೀ ಮಳೆಗೆ (Rain) ಮನೆಯ ಗೋಡೆ ಕುಸಿದು ಮೂರು ವರ್ಷದ ಮಗು ಮೃತಪಟ್ಟ ಘಟನೆ ಗೋಕಾಕ್ (Gokak) ನಗರದ ಮಹಲಿಂಗೇಶ್ವರ ಕಾಲೋನಿಯಲ್ಲಿ ಇಂದು (ಸೋಮವಾರ) ಮುಂಜಾನೆ ನಡೆದಿದೆ.
ಮೃತ ಮಗುವನ್ನು ಕೀರ್ತಿ ನಾಗೇಶ್ ಪೂಜಾರಿ (3) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ನಾಲ್ಕು ವರ್ಷದ ಬಾಲಕಿ ಗಾಯಗೊಂಡಿದ್ದಾಳೆ. ಅಕ್ಕ – ತಂಗಿ ರೂಮ್‌ನಲ್ಲಿ ಮಲಗಿದ್ದ ವೇಳೆ ಗೋಡೆ ಕುಸಿದಿದೆ. ಪರಿಣಾಮ ಒಂದು ಮಗು ಸ್ಥಳದಲ್ಲೇ ಸಾವಿಗೀಡಾಗಿದೆ. ಘಟನೆಯ ವೇಳೆ ಮನೆಯ ಮತ್ತೊಂದು ರೂಮ್‌ನಲ್ಲಿ ಮಗುವಿನ ತಂದೆ ತಾಯಿ ಮಲಗಿದ್ದರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: 2 ಮಕ್ಕಳಾದ ಬಳಿಕ ಮತ್ತೊಂದು ಲವ್ – ಸುಪಾರಿ ನೀಡಿ ಪ್ರೀತಿಸಿ ಮದುವೆಯಾದ ಗಂಡನನ್ನೇ ಕೊಂದಳು!
ರುದ್ರಪ್ಪ ಮತ್ತು ಶೈಲಾ ನಡುವಿನ ಈ ಸಂಬಂಧದ ಬಗ್ಗೆ ಪತಿ ಶಿವನಗೌಡನಿಗೆ ಗೊತ್ತಾಗಿತ್ತು. ಇದೇ ಕಾರಣಕ್ಕೆ ಆತನ ಸಹವಾಸ ಬಿಡು ಎಂದು ಶಿವನಗೌಡ ತನ್ನ ಪತ್ನಿಗೆ ಬುದ್ಧಿ ಹೇಳಿದ್ದರು.
ಶಿವನಗೌಡ ಅವರು ಪತ್ನಿಯನ್ನು ತವರು ಮನೆಗೆ ಬಿಟ್ಟು ವಾಪಾಸ್ ಆಗುತ್ತಿದ್ದಾಗ, ರುದ್ರಪ್ಪ ಎಣ್ಣೆ ಪಾರ್ಟಿ ಮಾಡಿಸಿ ಶಿವನಗೌಡರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ. ಇದನ್ನು ಪತ್ನಿ ಶೈಲಾ ವಿಡಿಯೋ ಕಾಲ್ ಮೂಲಕ ವೀಕ್ಷಣೆ ಮಾಡಿದ್ದಳು ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಇದನ್ನೂ ಓದಿ: ಪತ್ನಿಗೆ ಅಕ್ರಮ ಸಂಬಂಧ ಶಂಕೆ – ಸುತ್ತಿಗೆಯಿಂದ ಇಂಜಿನಿಯರ್ ತಲೆ ಒಡೆದು ಹತ್ಯೆಗೈದ ಪತಿ
ಗಂಡ ತೀರಿ ಹೋದಾಗ ಆತನ ಪಾರ್ಥಿವ ಶರೀರದ ಮುಂದೆ ಕುಳಿತು ಹಾಡಾಡಿ ಅತ್ತ ಪತ್ನಿಯ ಕಾಲ್ ಹಿಸ್ಟರಿಯಲ್ಲಿ ಆಕೆಯ ಕರಾಳ ಸಂಬಂಧದ ಕುರುಹುಗಳು ಪತ್ತೆಯಾಗಿವೆ. ಈ ಕುರಿತು ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಲೆಯ ಆರೋಪಿಗಳಾದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
– ವಿಪಕ್ಷಗಳೊಂದಿಗೆ ವಿಜಯೇಂದ್ರ ಹೊಂದಾಣಿಕೆ ಬಗ್ಗೆ ಸಾಕ್ಷ್ಯಾಧಾರ ಇದೆ; ಹೊಸ ಬಾಂಬ್
ಬೆಳಗಾವಿ: ಯಡಿಯೂರಪ್ಪ (BS Yediyurappa) ಅವರ ಕುಟುಂಬ ದೇಶದಲ್ಲಿಯೇ ಪ್ರಾಮಾಣಿಕ ಕುಟುಂಬ, ವಿಜಯೇಂದ್ರ ಅಂತೂ ಅಪ್ಪಟ ಚಿನ್ನ, ಬಂಗಾರ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ವ್ಯಂಗ್ಯವಾಡಿದರು.
ಜಿಲ್ಲೆಯಲ್ಲಿ `ಪಬ್ಲಿಕ್ ಟಿವಿ’ಯೊಂದಿಗೆ ಮಾತನಾಡಿದ ಅವರು, ನಾವು ವಕ್ಫ್ ಹೋರಾಟ ಮಾಡುತ್ತಿದ್ದೇವೆ ಹೊರತು ಯಡಿಯೂರಪ್ಪ ಕುಟುಂಬ, ಭ್ರಷ್ಟಾಚಾರದ ಬಗ್ಗೆ ನಾವು ಮಾತನಾಡುತ್ತಿಲ್ಲ. ಯಡಿಯೂರಪ್ಪ ಅವರ ಕುಟುಂಬ ದೇಶದಲ್ಲಿಯೇ ಪ್ರಾಮಾಣಿಕ ಕುಟುಂಬ, ವಿಜಯೇಂದ್ರ ಅಂತೂ ಅಪ್ಪಟ ಚಿನ್ನ, ಬಂಗಾರ ಎಂದು ಹೇಳಿದರೆ ಖುಷಿಯಾಗುತ್ತದೆ. ಅವರಿಗೆ ಭ್ರಷ್ಟಾಚಾರ ಎಂದರೆ ಗೊತ್ತಿಲ್ಲ. ವಿಜಯೇಂದ್ರ ವಿರೋಧ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡ ಬಗ್ಗೆ ಸಾಕ್ಷ್ಯಾಧಾರಗಳು ನನ್ನ ಬಳಿ ಇವೆ. ಸದ್ಯದಲ್ಲಿಯೇ ದಾಖಲೆ ಬಿಡುಗಡೆ ಮಾಡುತ್ತೇನೆ. ವಿಜಯೇಂದ್ರ ಸದನದ ಬಾವಿಯಲ್ಲಿಯೇ ಡಿಕೆಶಿ ಅವರಿಂದ ಏನೇನು ಸಹಿ ಮಾಡಿಸಿಕೊಂಡರು. ಎಂಬುವ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇನೆ. ಇಪ್ಪತ್ತು ಪತ್ರಗಳಿಗೆ ಸಹಿ ಮಾಡಿಸಿಕೊಂಡಿದ್ದೀರಿ, ವಿಡಿಯೋ ಬಿಡುಗಡೆ ಮಾಡಲಾ? ವಿಜಯೇಂದ್ರ (BY Vijayendra) ಎಂದು ಗುಡುಗಿದರು.ಇದನ್ನೂ ಓದಿ: ಯತ್ನಾಳ್ ಸಹ ಜನಪ್ರಿಯ ನಾಯಕರು – ಪ್ರತಾಪ್ ಸಿಂಹ
ರಮೇಶ್ ಜಾರಕಿಹೊಳಿ ಅವರಿಗೆ ಏನು ಅನ್ಯಾಯ ಮಾಡಿದ್ದಾರೆ? ವಿಜಯೇಂದ್ರ ಅವರು ಯಾರ ಜೊತೆ ಸೇರಿಕೊಂಡು ರಮೇಶ್ ಅವರ ಮಾನ ಹರಾಜು ಹಾಕಿದ್ದಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ. ರಮೇಶ್ ಅವರಿಗೆ ಮಾನಸಿಕ ಹಿಂಸೆ ನೀಡಿ ಅವರ ತೇಜೋವಧೆ ಮಾಡಿದ್ದು ಯಾರು? ಎಂಬುದನ್ನು ವಿಜಯೇಂದ್ರ ಹೇಳಲಿ. ಜಿಎಂ ಸಿದ್ದೇಶ್ವರ ಹಾಗೂ ಆರ್ ಅಶೋಕ್ ಅವರ ಬಗ್ಗೆ ವಿಜಯೇದ್ರ ಏನು ಹೇಳಿದ್ದಾರೆ? ಎಂಬುದರ ಬಗ್ಗೆಯೂ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದರು.
ಬಿಎಸ್‌ವೈ ಟೀಕೆ ಮಾಡಿದರೆ ದೊಡ್ಡವರಾಗುತ್ತಾರೆಂಬ ಭ್ರಮೆ ಇದೆ ವಿಜಯೇಂದ್ರ ಆರೋಪದ ವಿಚಾರವಾಗಿ, ಈಗ ಅವರ ಬೆಂಬಲಿಗರು ನಮ್ಮನ್ನು ಹೀನಾಯವಾಗಿ ಟೀಕೆ ಮಾಡುತ್ತಿದ್ದಾರೆ ಅವರು ದೊಡ್ಡವರಾಗುತ್ತಾರಾ? ಅವರು ಏನು ಹೇಳಿದರೂ ನಾನು ಅವರನ್ನು ಅಭಿನಂದಿಸುತ್ತೇನೆ, ನನ್ನನ್ನು ಅವರು ಈ ಮೂಲಕ ದೇಶಕ್ಕೆ ಪರಿಚಯ ಮಾಡಿಕೊಡುತ್ತಿದ್ದಾರೆ. ಒಬ್ಬ ಪ್ರಾಮಾಣಿಕ ನಾಯಕನನ್ನು ಪರಿಚಯ ಮಾಡಿಕೊಡುತ್ತಿದ್ದಾರೆ. ಒಂದು ಕುಟುಂಬಶಾಹಿ ನಾಯಕತ್ವ ವಿರುದ್ಧ ಹೋರಾಟ ಮಾಡುವ ನಾಯಕನಾಗಿ ಪರಿಚಯ ಮಾಡಿಕೊಡುತ್ತಿದ್ದಾರೆ ಎಂದು ಹೇಳಿದರು.
ಇದು ನಮ್ಮ ಪಕ್ಷದ ಸ್ವಾರ್ಥದ ಹೋರಾಟವಲ್ಲ, ಪಕ್ಷವನ್ನು ಕಟ್ಟಿದ ಅನೇಕ ನಾಯಕರು ಅಧಿಕಾರ ಅನುಭವಿಸದೇ ಇದ್ದಾರೆ. ಕರ್ನಾಟಕದಲ್ಲಿ ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರವನ್ನು ತೊಡೆದು ಹಾಕುವ ಬಿಜೆಪಿ ಪಕ್ಷವನ್ನು ಕಟ್ಟಬೇಕು ಎನ್ನುವುದು ಪ್ರಧಾನಿ ಮೋದಿಯವರ ಆಶಯವಾಗಿದೆ. ಆಶಯ ಈಡೇರಿಕೆಗಾಗಿ ಈ ಹೋರಾಟ ನಡೆದಿದೆ. ಭ್ರಷ್ಟಾಚಾರ ಮಾಡುವ ವ್ಯಕ್ತಿಗಳನ್ನು ದೂರವಿಟ್ಟು, ಪ್ರಾಮಾಣಿಕ ವ್ಯಕ್ತಿಗಳಿಗೆ ಪ್ರೋತ್ಸಾಹ ನೀಡಬೇಕು ಎನ್ನುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.
ಈ ಕುರಿತು ಬೆಳಗಾವಿಯಲ್ಲಿ (Belagavi) ಮಾಧ್ಯಮಗಳೊಂದಿಗೆ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಮಾತನಾಡಿ, ಯತ್ನಾಳ್ ವಕ್ಫ್ ಬಗ್ಗೆ ಜಾಗೃತಿ ಮೂಡಿಸಲು ಹೋರಾಟ ಮಾಡುತ್ತಿದ್ದಾರೆ. ವಿಜಯೇಂದ್ರ ಅವರು ನಮ್ಮ ರಾಜಾಧ್ಯಕ್ಷರು, ಅವರು ನ.20ರಂದು ಸುದ್ದಿಗೋಷ್ಠಿ ಮಾಡಲು ಕರೆಕೊಟ್ಟಿದ್ದರು. ಅದರಂತೆ ಎಲ್ಲಾ ಜಿಲ್ಲೆಗಳಲ್ಲಿ ಸುದ್ದಿಗೋಷ್ಠಿ ಮಾಡಿದ್ದೇವೆ. ನ.22ರಂದು ಎಲ್ಲಾ ಜಿಲ್ಲೆಯ ಡಿಸಿ ಕಚೇರಿಗಳಿಗೆ ಮುತ್ತಿಗೆ ಹಾಕಲು ಕರೆಕೊಟ್ಟಿದ್ದರು, ಅದೇ ರೀತಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದೇವೆ. ಅದೇ ರೀತಿ ಯತ್ನಾಲ್ ಅವರು ಬಿಜಾಪುರದಿಂದ ಹೋರಾಟ ಆರಂಭ ಮಾಡಿದ್ದರು. ಆ ಹೋರಾಟದಲ್ಲಿ ಕೇಂದ್ರ ಸಚಿವರು ಭಾಗಿಯಾದ್ರು, ಹೀಗಾಗಿ ಈ ಹೋರಾಟದಲ್ಲಿ ಅಪಸ್ವರ, ಬಣ ಹೋರಾಟ ಎಂಬುದು ಅಪ್ರಸುತ್ತ ಅಗುತ್ತೆ ಎಂದು ತಿಳಿಸಿದ್ದಾರೆ.
ಯತ್ನಾಳ್ ಸಹ ಜನಪ್ರಿಯ ನಾಯಕರು:
ನಿನ್ನೆ ಸಹ ನಾನು ಹೇಳಿದ್ದೆ ಅಪ್ರಸ್ತುತ ವ್ಯಕ್ತಿಗಳು, ಜನರಿಂದ ತಿರಸ್ಕೃತವಾಗಿದ್ದವರು, ಮೂಲೆ ಗುಂಪಾಗಿದ್ದವರ ಬಗ್ಗೆ ಉತ್ತರ ಕೊಡುವ ಅಗತ್ಯವಿಲ್ಲ. ಹೋರಾಟದ ದಿಕ್ಕು ತಪ್ಪಿಸುವರ ಬಗ್ಗೆ ಮಾತನಾಡುದಿಲ್ಲ. ಇಡೀ ಬಿಜೆಪಿ ವಕ್ಫ್ ವಿರುದ್ಧ ವಿಜಯೇಂದ್ರ-ಯತ್ನಾಳ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಇದಕ್ಕಾಗಿ ಯಾಕೆ ಅಪಸ್ವರ ಬರುತ್ತಿದೆ ನನಗೆ ಗೋತ್ತಿಲ್ಲ. ಯತ್ನಾಳ್ ಕೂಡ ಜನಪ್ರಿಯ ನಾಯರಾಗಿದ್ದಾರೆ. ಅವರ ನೇತೃತ್ವದಲ್ಲಿ ಹೋರಾಟ ಆರಂಭವಾಗಿದೆ. ವಕ್ಫ್ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತೆ ಎಂದು ಹೇಳಿದ್ದಾರೆ.ಇದನ್ನೂ ಓದಿ:`ನಮ್ಮ ಮೆಟ್ರೋ’ದಿಂದ ಬಿಗ್ ಅಪ್ಡೇಟ್ – ಒಂದೂವರೆ ವರ್ಷದೊಳಗೆ ಬರಲಿದ್ಯಾ ಹೆಬ್ಬಾಳ-ಏರ್‌ಪೋರ್ಟ್ ಮೆಟ್ರೋ?
ಚಿಕ್ಕೋಡಿ (ಬೆಳಗಾವಿ): ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಯೋಧರೊಬ್ಬರ ಪತ್ನಿ (Soldier Wife) ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ((Belagavi) ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ನಡೆದಿದೆ.
ಅತ್ತೆ ಸೇವಂತಾ ಸಿದರಾಯ ರೂಪನವರ ಅವರಿಂದ ರೂಪಾಬಾಯಿ ದಿನಂಪ್ರತಿ ಕಿರಿಕಿರಿ ಅನುಭವಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಇದೇ ಕಾರಣದಿಂದ ಮನನೊಂದು ಅವರು ಆತ್ಮಹತ್ಯೆ ದಾರಿ ಹಿಡಿದಿರುವುದಾಗಿ ಮೃತಳ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
– ನೀನು ಕೀಳು ಜಾತಿಯಲ್ಲೇ ಇರುತ್ತಿ, ನಮ್ಮ ಜಾತಿಗೆ ಮತಾಂತರವಾಗು – ಕುಂಕುಮ ಹಚ್ಚಬೇಡ, 5 ಬಾರಿ ನಮಾಜ್ ಮಾಡು
ಬೆಳಗಾವಿ: ವಿವಾಹಿತ ಮಹಿಳೆಯೊಬ್ಬಳ ಖಾಸಗಿ ಫೋಟೋ ಇಟ್ಟುಕೊಂಡು ಮತಾಂತರಕ್ಕೆ ಪೀಡಿಸಿ, ಲವ್ ಜಿಹಾದ್ ಜಾಲಕ್ಕೆ ತಳ್ಳಲು ಯತ್ನಿಸಲಾಗಿದೆ ಎಂಬ ಆರೋಪ ಸವದತ್ತಿಯ (Saundatti) ಮುನವಳ್ಳಿಯಲ್ಲಿ ಕೇಳಿ ಬಂದಿದೆ.
ಮುನವಳ್ಳಿ ನಗರದಲ್ಲಿ ಸಂತ್ರಸ್ತ ಮಹಿಳೆಯ ಪತಿ ಕಿರಾಣಿ ಅಂಗಡಿ ಹೊಂದಿದ್ದರು. ಪತಿ ಇಲ್ಲದೇ ಇರುವಾಗ ಆರೀಫ್ ಬೇಪಾರಿ ಎಂಬಾತ ಅಂಡಿಗೆ ಬಂದು ಮಹಿಳೆಯನ್ನು ಪರಿಚಯ ಮಾಡಿಕೊಂಡಿದ್ದ. ಬಳಿಕ ಮೊಬೈಲ್ ನಂಬರ್ ಪಡೆದು ಇಲ್ಲ ಸಲ್ಲದ ಆಮೀಷ ಒಡ್ಡಿ ಮಹಿಳೆಗೆ ಉದ್ಯೋಗ ಕೊಡಿಸುವ ಭರವಸೆ ನೀಡಿ, ಬೆಳಗಾವಿಗೆ ಕರೆಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆರೀಫ್‍ಗೆ ಐವರು ಸಾಥ್ ಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಎಫ್ಐಆರ್ ಪ್ರತಿ
ಇಷ್ಟೇ ಅಲ್ಲದೇ ಲೈಂಗಿಕ ದೌರ್ಜನ್ಯ ಎಸಗುವ ಫೋಟೋಗಳನ್ನು ತೆಗೆದುಕೊಂಡು ದುಷ್ಕರ್ಮಿಗಳು ಮತಾಂತರಕ್ಕೆ ಪೀಡಿಸಿದ್ದಾರೆ. ಮತಾಂತರಗೊಳ್ಳದೇ ಇದ್ದರೆ ಖಾಸಗಿ ಫೋಟೋಗಳನ್ನು ವೈರಲ್ ಮಾಡುವ ಬೆದರಿಕೆ ಹಾಕಿದ್ದಾರೆ. ಹಣೆಗೆ ಕುಂಕುಮ ಹಚ್ಚುವುದನ್ನು ನಿಲ್ಲಿಸಬೇಕು, ಹಿಂದೂ ಸಂಪ್ರದಾಯ ಬಿಡಬೇಕು. ನಿತ್ಯ ಬುರ್ಖಾ ಧರಿಸಬೇಕು. ಐದು ಸಲ ನಮಾಜ್ ಮಾಡಬೇಕು ಎಂದು ಪೀಡಿಸಿದ್ದಾರೆ. ಅಲ್ಲದೇ ಒತ್ತಾಯಪೂರ್ವಕವಾಗಿ ಮಹಿಳೆಗೆ ಬುರ್ಖಾ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ದುಷ್ಕರ್ಮಿಗಳ ವಿರುದ್ಧ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಮತಾಂತರಕ್ಕೆ ಯತ್ನಿಸಿದವರ ವಿರುದ್ಧ ಪ್ರಕರಣ ದಾಖಲಿಸಿದ್ದಳು. ಈ ಸಂಬಂಧ ಬೆಳಗಾವಿ ಜಿಲ್ಲೆಯ ಸವದತ್ತಿ ಪೊಲೀಸ್ ಠಾಣೆಯಲ್ಲಿ, ಆರೀಫ್ ಬೇಪಾರಿ, ಆದೀಲ್, ಶೋಯಲ್, ಮುಕ್ತಮ್, ಉಮರ್, ಕರೆವ್ವ ಕಟ್ಟಿಮನಿ ಹಾಗೂ ಕೌಸರ್ ಎಂಬವರ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಇದೀಗ ಮತಾಂತರಕ್ಕೆ ಯತ್ನಿಸಿದ ರಫೀಕ್ ಬೇಫಾರಿ ಆತನ ಪತ್ನಿ ಕೌಸರ್ ಬೇಫಾರಿ ಬಂಧಿಸಲಾಗಿದೆ ಎಂದು ಎಸ್ಪಿ ಡಾ.ಭೀಮಾ ಶಂಕರ್ ಗುಳೇದ ಮಾಹಿತಿ ನೀಡಿದ್ದಾರೆ.
ಬೆಳಗಾವಿ: ಬೆಂಬಲ ಬೆಲೆ ಖಾತ್ರಿಪಡಿಸುವ ಕಾನೂನು ಜಾರಿ ಸೇರಿದಂತೆ ವಿವಿಧ ಬೇಡಿಕೆಗೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ರಾಜ್ಯಗಳ ರೈತರು ʻದೆಹಲಿ ಚಲೋʼ ಪ್ರತಿಭಟನೆ (Dehli Chalo) ಆರಂಭಿಸಿದ್ದಾರೆ. ಈ ಬೆನ್ನಲ್ಲೇ ರಾಜ್ಯದಲ್ಲಿಯೂ ರೈತರು (Farmers) ತಮ್ಮ ಬೇಡಿಕೆಗಳನ್ನು ಒತ್ತಾಯಿಸಿ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘಗಳ ಒಕ್ಕೂಟ ಆಶ್ರಯದಲ್ಲಿ (Farmers Association) ವಿವಿಧ ಬೇಡಿಕೆಗೆ ಆಗ್ರಹಿಸಿ ಫೆ.17ರಂದು ʻಬೆಂಗಳೂರು ಚಲೋʼ (Bengaluru Chalo) ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶಕ್ಕೆ ಬರುವ ರೈತರಿಗೆ ಆಯಾ ಜಿಲ್ಲೆಗಳಿಂದ ಉಚಿತ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘಗಳ ಒಕ್ಕೂಟ ಅಧ್ಯಕ್ಷ ಬೀರಪ್ಪ ದೇಶನೂರ ತಿಳಿಸಿದ್ದಾರೆ. ಇದನ್ನೂ ಓದಿ: ಅಜ್ಜನ ಕನಸು ನೆರವೇರಿಸಲು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಲಾಲ್ ಬಹದ್ದೂರ್ ಶಾಸ್ತ್ರಿ ಮೊಮ್ಮೊಗ
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಫೆ.17ರಂದು ರೈತರು ತಮ್ಮ ಬೇಡಿಕೆಗಳನ್ನು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಸಲ್ಲಿಸಲಿದ್ದಾರೆ. ಈ ಬೃಹತ್ ಸಮಾವೇಶದಲ್ಲಿ ರಾಜ್ಯಾದ್ಯಂತ ಸುಮಾರು 15 ಸಂಘಟನೆಗಳ ರೈತ ಮುಖಂಡರು, ರೈತ ಮಹಿಳೆಯರು, ವಿವಿಧ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಬೆಳಗಾವಿ: ಕುಂದಾ ನಗರಿ ಬೆಳಗಾವಿ (Belagavi) ಜಿಲ್ಲೆಯ ಬರ ನಿರ್ವಹಣೆಗಾಗಿ ಕರೆದ ಸಭೆಗೆ “ಶಾಸಕರ ಬರ” ಎದುರಾಗಿದ್ದು ಇಂತಹ ಜನಪ್ರತಿನಿಧಿಗಳಿಂದ ಪ್ರಜ್ಞೆಗಳು ಏನನ್ನ ನಿರೀಕ್ಷೆ ಮಾಡಬಹುದು ಎಂದು ಪ್ರಶ್ನೆ ಮೂಡಿದೆ.
ತಾಲೂಕಿನ ಹಲಗಾ ಮತ್ತು ಬಸ್ತವಾಡ್ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಸುವರ್ಣ ವಿಧಾನಸೌಧದಲ್ಲಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಬರ ನಿರ್ವಹಣಾ ಸಭೆ ಕರೆಯಲಾಗಿದೆ. ಆದರೆ ಸಚಿವರ ಸಭೆಗೆ ಬಹುತೇಕ ಶಾಸಕರು ಗೈರಾಗಿದ್ದಾರೆ. ಸಭೆಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಮಹೇಂದ್ರ ತಮ್ಮಣ್ಣವರ, ವಿಶ್ವಾಸ್ ವೈದ್ಯ ಭಾಗಿಯಾಗಿದ್ದು ಉಳಿದಂತೆ ಸಭೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಹುತೇಕ ಶಾಸಕರು ಗೈರಾಗಿದ್ದು ಜಿಲ್ಲೆಯ 18 ಶಾಸಕರ ಪೈಕಿ ಕೇವಲ 3 ಶಾಸಕರು ಮಾತ್ರ ಭಾಗಿಯಾಗಿದ್ದಾರೆ.
ಜಿಲ್ಲೆಯಲ್ಲಿ 61% ರಷ್ಟು ಮಳೆ ಕೊರೆತೆಯಿಂದ ತೀವ್ರ ಬರ ತಮ್ಮ ಕ್ಷೇತ್ರದ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಬೇಕಿದ್ದ ಶಾಸಕರೇ ಸಭೆಗೆ ಗೈರಾಗಿದ್ದು ತಮ್ಮ ತಮ್ಮ ಕ್ಷೇತ್ರದಲ್ಲಿದ್ದರೂ ಬರ ನಿರ್ವಹಣೆ ಸಭೆಗೆ ಬಾರದೇ ನಿರ್ಲಕ್ಷ್ಯ ತೋರಿದ್ದಾರೆ. ಸಭೆಯಲ್ಲಿ ಪ್ರಮುಖವಾಗಿ ಶಾಸಕರು ಮಳೆ ಕೊರತೆ, ಬೆಳೆ ಹಾನಿ, ಕುಡಿಯುವ ನೀರು ಪೂರೈಕೆ ಸೇರಿ ಗಂಭೀರ ವಿಚಾರ ಚರ್ಚೆ ನಡೆಯುತ್ತಿದೆ. ಆದರೂ ಸಭೆಗೆ ಗೈರಾಗಿದ್ದು ಪ್ರಜ್ಞೆಗಳು ಇಂತಹ ಶಾಸಕರಿಂದ ಏನು ನಿರೀಕ್ಷೆ ಮಾಡಬಹುದು ಎಂದು ಪ್ರಶ್ನೆ ಮಾಡುವಂತಾಗಿದೆ. ಇದನ್ನೂ ಓದಿ; ಇಸ್ರೇಲ್, ಹಮಾಸ್ ಯುದ್ಧ – ಸಾವು ನೋವುಗಳನ್ನು ಖಂಡಿಸಿದ ಪ್ರಧಾನಿ ಮೋದಿ
ಬೆಳಗಾವಿ: ರಾಜಾರೋಷವಾಗಿ ನಡೆಸುತ್ತಿದ್ದ ಅಂದರ್ ಬಾಹರ್ ಜೂಜು ಅಡ್ಡೆ ಮೇಲೆ ಸಿಇಎನ್ ಪೊಲೀಸರು (Police) ದಾಳಿ ನಡೆಸಿ 70 ಜನರನ್ನು ಬಂಧಿಸಿದ ಘಟನೆ ಬೈಲಹೊಂಗಲದಲ್ಲಿ (Bailhongal) ನಡೆದಿದೆ.
ಖಚಿತ ಮಾಹಿತಿ ಮೇರೆಗೆ ನಗರದ ಬಾರ್ & ರೆಸ್ಟೋರೆಂಟ್ ಒಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಜೂಜು ಅಡ್ಡೆಯಲ್ಲಿ ಪ್ರಮುಖ ಆರೋಪಿ ಮಹಾಂತೇಶ್ ತುರುಮುರಿ ಸೇರಿ 70 ಜನ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ಎರಡು ಬಸ್‍ಗಳಲ್ಲಿ ಬೆಳಗಾವಿಗೆ ಕರೆತಂದಿದ್ದಾರೆ. ಇದನ್ನೂ ಓದಿ: ಸ್ನೇಹಿತರ ಭೇಟಿಗೆ ಬಂದಿದ್ದ ಯೋಧನ ಮೇಲೆ ಮಾರಣಾಂತಿಕ ಹಲ್ಲೆ- ವೀಡಿಯೋ ವೈರಲ್
ಬಂಧಿತರಿಂದ 2 ಲಕ್ಷ ರೂ. ನಗದು, 70 ಮೊಬೈಲ್ ಫೋನ್‍ಗಳನ್ನು ಜಪ್ತಿ ಮಾಡಲಾಗಿದೆ. ಸಿಇಎನ್ ಇನ್ಸ್‌ಪೆಕ್ಟರ್ ಬಿ.ಆರ್. ಗಡ್ಡೇಕರ್ ನೇತೃತ್ವದಲ್ಲಿ 10 ಜನ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಬೆಳಗಾವಿ: ಬಡ್ಡಿಗೆ ಸಾಲ ಪಡೆದು ಜರ್ಮನಿಯಲ್ಲಿ (Germany) ನಡೆದ 8ನೇ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ (World Dwarf Games) ಭಾಗವಹಿಸಿದ್ದ ಬೆಳಗಾವಿಯ (Belagavi) ಯುವತಿ ಮೂರು ಪದಕ ಗೆದ್ದು ವಿಶೇಷ ಸಾಧನೆ ಮಾಡಿದ್ದಾರೆ.
ಹೌದು. ಗೋಕಾಕ್ ತಾಲೂಕಿನ ಚಿಕ್ಕನಂದಿ ಗ್ರಾಮದ ಯುವತಿ ಮಂಜುಳಾ ಶಿವಾನಂದ ಗೊರಗುದ್ದಿ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಸಾಧನೆ ಮಾಡಿ ತೋರಿಸಿದ್ದಾರೆ. ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ, ಚಕ್ರ ಎಸೆತದಲ್ಲಿ 2ನೇ ಸ್ಥಾನ ಪಡೆದು ಬೆಳ್ಳಿ ಪದಕ ಹಾಗೂ ಜಾವೆಲಿನ್ ಥ್ರೋದಲ್ಲಿ (Javelin Throw) 3ನೇ ಸ್ಥಾನ ಪಡೆದು ಕಂಚಿನ ಪದಕ ಬಾಚಿಕೊಂಡಿದ್ದಾರೆ. ಇದನ್ನೂ ಓದಿ: ಹೊಸ ಕೋಚ್ ನೇಮಿಸಿದ RCB – ಮುಂದಿನ ಸಲ ಕಪ್ ನಮ್ದೆ ಅಂತಿದ್ದಾರೆ ಫ್ಯಾನ್ಸ್
ಜುಲೈ 28ರಿಂದ ಆಗಸ್ಟ್ 4ರ ವರೆಗೆ ಆಯೋಜನೆಗೊಂಡಿದ್ದ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ತನ್ನ ಸಾಮರ್ಥ್ಯ ಸಾಬೀತು ಮಾಡಿರುವ ಮಂಜುಳಾ ಅವರು ಮೂರು ದಿನಗಳಲ್ಲಿ ಪದಕಗಳೊಂದಿಗೆ ತವರಿಗೆ ಮರಳಲಿದ್ದಾರೆ. ಸುಮಾರು 2.5 ಲಕ್ಷ ರೂ. ಹಣ ಹೊಂದಿಸಿ ದೂರದ ಜರ್ಮನಿಗೆ ಹೋಗಿದ್ದ ಮಂಜುಳಾ ಪದಕ ಗೆಲ್ಲುವ ತನ್ನ ಕನಸು-ನನಸು ಮಾಡಿಕೊಳ್ಳುವ ಮೂಲಕ ವಿದೇಶದಲ್ಲೂ ಬೆಳಗಾವಿ ಜಿಲ್ಲೆಯ ಕೀರ್ತಿ ಹೆಚ್ಚುವಂತೆ ಮಾಡಿದ್ದಾರೆ. ಇದನ್ನೂ ಓದಿ: T20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಸೋಲಿಗೆ ಕಾರಣವಾಗಿದ್ದ ಇಂಗ್ಲೆಂಡ್ ಬ್ಯಾಟರ್ ನಿವೃತ್ತಿ ಘೋಷಣೆ
ಈ ಬಗ್ಗೆ ವೀಡಿಯೋದಲ್ಲಿ ಹೇಳಿಕೆ ನೀಡಿರುವ ಮಂಜುಳಾ, ವಿದೇಶಿ ನೆಲದಲ್ಲಿ ಮೂರು ಪದಕ ಗೆದ್ದಿರುವುದು ತುಂಬಾ ಖುಷಿ ಕೊಟ್ಟಿದೆ. ಈ ಪದಕಗಳನ್ನ ಭಾರತ ದೇಶಕ್ಕೆ ಮತ್ತು ನನ್ನ ತಾಯಿಗೆ ಅರ್ಪಿಸುತ್ತೇನೆ. ಮುಂದೆ ಇನ್ನೂ ಹೆಚ್ಚಿನ ಸಾಧನೆ ಮಾಡುವ ಹುಮ್ಮಸ್ಸು ನನಗೆ ಬಂದಿದೆ ಎಂದಿದ್ದಾರೆ.
ಒಟ್ಟಿನಲ್ಲಿ ಸಾಧಿಸುವ ಛಲವೊಂದಿದ್ದರೆ ಏನೂ ಬೇಕಾದ್ರೂ ಮಾಡಬಹುದು ಅನ್ನೋದಕ್ಕೆ ಮಂಜುಳಾ ಉದಾಹರಣೆಯಾಗಿದ್ದಾರೆ.