Tag: Belgaum

  • 1.35 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ ಶ್ರೀಮಂತ ಪಾಟೀಲ್

    1.35 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ ಶ್ರೀಮಂತ ಪಾಟೀಲ್

    ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದ ಬಸವನಗರ ಹಾಗೂ ಸಿದ್ದೇಶ್ವರ ಕಾಲೋನಿಯಲ್ಲಿ ಶಾಸಕರ ವಿಶೇಷ ಪ್ರಯತ್ನದಿಂದ ಸುಮಾರು 1.35 ಕೋಟಿ ರೂ. ವೆಚ್ಚದ ರಸ್ತೆ ಚರಂಡಿ ಕಾಮಗಾರಿ ಮಂಜೂರುಗೊಂಡಿದೆ.

    ಇಂದು ಕಾಗವಾಡ ಗುರುದೇವಾಶ್ರಮದ ಪರಮ ಪೂಜ್ಯ ಶ್ರೀ ಯತೀಶ್ವರಾನಂದ ಸ್ವಾಮೀಜಿ ಹಾಗೂ ಕಾಗವಾಡ ಶಾಸಕ, ಮಾಜಿ ಸಚಿವ ಶ್ರೀಮಂತ ಪಾಟೀಲ್ ಭೂಮಿ ಪೂಜೆ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಈ ಸಮಯದಲ್ಲಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಕಾಗವಾಡ ಗುರುದೇವಾಶ್ರಮದ ಪ.ಪೂ. ಶ್ರೀ ಯತೀಶ್ವರಾನಂದ ಸ್ವಾಮೀಜಿ ಮಾತನಾಡಿದ್ದು, ಕಾಗವಾಡಕ್ಕೆ ಶ್ರೀಮಂತ ಪಾಟೀಲರು ಶಾಸಕರಾದ ನಂತರ ಕಾಗವಾಡ ಕ್ಷೇತ್ರವು ಎಂದೂ ಕಾಣದಂತಹ ಅಭಿವೃದ್ಧಿಯನ್ನು ಕಾಣುತ್ತಿದೆ. ಶಾಸಕರು ಕ್ಷೇತ್ರದ ಜನತೆಗೆ ಕೊಟ್ಟ ಮಾತಿನಂತೆ ಹಲವಾರು ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿರುವ ಎಲ್ಲ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಬಣ್ಣಿಸಿದರು. ಇದನ್ನೂ ಓದಿ: ಹಳ್ಳಿಯಿಂದ ಬರುತ್ತಿದ್ದ ವಿದ್ಯಾರ್ಥಿನಿಯರಿಗೆ ಹಿಜಬ್ ಬಗ್ಗೆ ಅಷ್ಟಾಗಿ ತಿಳಿದಿರಲಿಲ್ಲ: ಕಲಬುರಗಿ ಶಿಕ್ಷಕ

    ಮುಂದಿನ ದಿನಮಾನಗಳಲ್ಲಿಯೂ ಕೂಡ ಅವರ ಜನ ಸೇವೆ ನಿರಂತರವಾಗಿ ಸಾಗಲಿ ಎಂದು ಶುಭ ಹಾರೈಸಿದರು. ಶಾಸಕರು ಲೋಕೋಪಯೋಗಿ ಎಂಜಿನಿಯರ್‍ಗಳು ಹಾಗೂ ಗುತ್ತಿಗೆದಾರರಿಗೆ ವ್ಯವಸ್ಥಿತವಾಗಿ ರಸ್ತೆ ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದರು.

    ಪಾಟೀಲ್ ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಜನರ ಆಶೀರ್ವಾದದಿಂದ ನಾನು ಶಾಸಕನಾಗಿದ್ದೇನೆ. ಸಚಿವನು ಕೂಡ ಆಗಿದ್ದೆ. ಪ್ರಸ್ತುತ ನಾನು ಶಾಸಕನಾಗಿದ್ದರೂ ಕೂಡ 24 ಗಂಟೆಗಳ ಕಾಲ ನಿಮ್ಮ ಸೇವಕನಾಗಿ ಸೇವೆ ಸಲ್ಲಿಸಲು ಸದಾ ಸಿದ್ಧನಿರುವುದಾಗಿ ಹೇಳಿದರು.

    ಕ್ಷೇತ್ರದಲ್ಲಿ ಶಿಕ್ಷಣ, ನೀರಾವರಿ, ರಸ್ತೆ ಅಭಿವೃದ್ಧಿ ಹಾಗೂ ಮತ್ತಿತರ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುವುದರ ಮೂಲಕ ಕಾಗವಾಡ ಮತಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಸರ್ವಾಂಗೀಣ ಅಭಿವೃದ್ಧಿ ಪಡಿಸುವುದೇ ನನ್ನ ಮುಖ್ಯ ಗುರಿಯಾಗಿದೆ. ಆದುದ್ದರಿಂದ ತಮ್ಮೆಲ್ಲರ ಪ್ರೀತಿ ಆಶೀರ್ವಾದ ಸದಾ ನನ್ನ ಮೇಲಿರಲಿ ಎಂದು ಕೋರಿಕೊಂಡರು. ಇದನ್ನೂ ಓದಿ: ಹಿಜಬ್ ಧರಿಸಿಯೇ ಶಾಲೆಗೆ ಬಂದ ವಿದ್ಯಾರ್ಥಿನಿಯರು

    ಇದೇ ಸಮಯದಲ್ಲಿ ಕಾಗವಾಡದ ನಮ್ಮ ಶಾಸಕರ ಕೇಂದ್ರ ಕಚೇರಿಯ ವತಿಯಿಂದ ಸಾರ್ವಜನಿಕರಿಗೆ ವೃದ್ದಾಪ್ಯ ವೇತನ, ಅಂಗವಿಕಲರ ವೇತನ, ವಿಧವಾ ವೇತನದ ಫಲಾನುಭವಿಗಳಿಗೆ ಪರಮಪೂಜ್ಯರು ಹಾಗೂ ಶಾಸಕರ ಹಸ್ತದಿಂದ ಮಂಜೂರಾತಿ ಪತ್ರಗಳನ್ನು ಸಾಂಕೇತಿಕವಾಗಿ ವಿತರಿಸಿದರು.

    ಈ ವೇಳೆ ಸುಭಾಷ್ ಕಠಾರೆ, ರೇವಣ್ಣಾ ಪಾಟೀಲ್, ಎಮ್.ಬಿ.ಪಾಟೀಲ್, ರವಿ ಪಾಟೀಲ್, ರಾಜು ಕುಸನಾಳೆ, ಸೇರಿದಂತೆ ಮತ್ತಿತರ ಸ್ಥಳೀಯ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.

  • ಕುಂದಾನಗರಿ ಬೆಳಗಾವಿಯಲ್ಲಿ ಮತ್ತೆ ಆ್ಯಕ್ಟಿವ್ ಆಯ್ತಾ ಇರಾನಿ ಗ್ಯಾಂಗ್?

    ಕುಂದಾನಗರಿ ಬೆಳಗಾವಿಯಲ್ಲಿ ಮತ್ತೆ ಆ್ಯಕ್ಟಿವ್ ಆಯ್ತಾ ಇರಾನಿ ಗ್ಯಾಂಗ್?

    ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಮತ್ತೆ ಇರಾನಿ ಗ್ಯಾಂಗ್ ಆ್ಯಕ್ಟಿವ್ ಆಗಿದ್ದು, ಒಂದು ವಾರದ ಅಂತರದಲ್ಲಿಯೇ ಎರಡು ಸರಗಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದೆ. ಬೈಕ್‍ನಲ್ಲಿ ಬರುವ ಖದೀಮರು ವೃದ್ಧ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದ್ದಾರೆ.

    ಬೆಳಗಾವಿ ನಗರದ ಹೊರವಲಯ ಗಣೇಶಪುರದಲ್ಲಿ ಸಂಬಂಧಿಕರ ಮದುವೆಗೆ ಹೊರಟಿದ್ದ ವೃದ್ಧ ದಂಪತಿಯನ್ನ ಪೊಲೀಸರೆಂದು ಹೇಳಿ ಯಾಮಾರಿಸಿ 50 ಗ್ರಾಂ ಚಿನ್ನಾಭರಣಗಳನ್ನು ತೆಗೆದುಕೊಂಡು ಕಳ್ಳರು ಪರಾರಿ ಆಗಿದ್ದಾರೆ. ಈ ಕುರಿತು ವೃದ್ಧರು ಪೊಲೀಸರಿಗೆ ದೂರು ಕೊಟ್ಟಿದ್ದು, ಪ್ರಸ್ತುತ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: 6 ವರ್ಷಗಳ ಕಾಲ ಕುತ್ತಿಗೆಯಲ್ಲಿ ಟೈರ್ ಸಿಕ್ಕಿಸಿಕೊಂಡಿದ್ದ ಮೊಸಳೆಗೆ ಕೊನೆಗೂ ಸಿಕ್ತು ಮುಕ್ತಿ!

    ಪ್ರಕರಣ ಹಿನ್ನೆಲೆ:
    ಸೋದರಸಂಬಂಧಿ ಮದುವೆಗೆ ಪತ್ನಿ ಜೊತೆಗೆ ಹೊರಟಿದ್ದ ಗಣಪತ್ ಪಾಟೀಲ್ ಅವರನ್ನು ಪೊಲೀಸರೆಂದು ಹೇಳಿಕೊಂಡು ಬಂದ ಖದೀಮರು ತಡೆದಿದ್ದಾರೆ. ಈ ವೇಳೆ ತಾನು ಪೊಲೀಸ್ ವಿಸಲ್ ಹಾಕ್ತಿದ್ರೂ ಬೈಕ್ ಏಕೆ ನಿಲ್ಲಿಸುತ್ತಿಲ್ಲ ಎಂದು ಅವಾಜ್ ಹಾಕಿದ್ದಾರೆ. ಬಳಿಕ ನಿಮ್ಮ ದ್ವಿಚಕ್ರವಾಹನದಲ್ಲಿ ಗಾಂಜಾ, ಅಫೀಮು ಸಾಗಿಸುತ್ತಿದ್ದೀರಿ ಅಂತಾ ನಮಗೆ ಮಾಹಿತಿ ಇದೆ ಅಂತಾ ಚೆಕಿಂಗ್ ಮಾಡಿದ್ದಾರೆ.

    ಬಳಿಕ ವಾಹನ ತಪಾಸಣೆ ನಡೆಸಿದಾಗ ಮದುವೆಗೆ ಹೊರಟಿದ್ದೇವೆ ಎಂದು ವೃದ್ಧ ದಂಪತಿ ಆಮಂತ್ರಣ ಪತ್ರಿಕೆಯನ್ನು ತೋರಿಸಿದ್ದಾರೆ. ಈ ವೇಳೆ ಪಕ್ಕದಲ್ಲಿದ್ದ ವೃದ್ಧೆ ಬಂಗಾರ ಆಭರಣಗಳನ್ನು ಹಾಕಿಕೊಂಡಿದ್ದನ್ನು ಗಮನಿಸಿದ್ದಾರೆ. ಈ ಮಾರ್ಗದಲ್ಲಿ ಕಳ್ಳತನ ಪ್ರಕರಣ ಹೆಚ್ಚಳವಾಗಿದೆ. ಹೀಗಾಗಿ ಬಂಗಾರದ ಆಭರಣಗಳನ್ನು ಹಾಕಿಕೊಂಡು ಹೋಗದಂತೆ ಎಚ್ಚರಿಕೆ ನೀಡಿದ್ದಾರೆ.

    ಬಳಿಕ ಆಭರಣಗಳನ್ನು ಒಂದು ಕೈವಸ್ತ್ರದಲ್ಲಿ ಕಟ್ಟಿ ಸ್ಕೂಟಿಯಲ್ಲಿ ಇಡುವಂತೆ ಹೇಳಿದ್ದಾರೆ. ಇದಾದನಂತರ ಕೈವಸ್ತ್ರದಲ್ಲಿ ಕಟ್ಟಿದ್ದ ಬಂಗಾರದ ಆಭರಣಗಳನ್ನು ತೆಗೆದುಕೊಂಡು ಬೈಕ್ ಡಿಕ್ಕಿಯಲ್ಲಿ ಇಟ್ಟಂತೆ ಮಾಡಿದ್ದಾರೆ. ಆದರೆ ಆ ಐದು ತೊಲೆ ಬಂಗಾರದ ಆಭರಣಗಳು ಎಸ್ಕೇಪ್ ಮಾಡಿಕೊಂಡು ಪರಾರಿ ಆಗಿದ್ದಾರೆ. ಈ ಕುರಿತು ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಣ್ಣ ಸುಳಿವು ಸಿಗದಂತೆ ಹತ್ಯೆ ಮಾಡಿದ್ದ ಹಂತಕ ಕೊನೆಗೂ ಖಾಕಿ ಬಲೆಗೆ!

    ಮತ್ತೊಂದೆಡೆ ಇಂದು ಬೆಳ್ಳಂಬೆಳಗ್ಗೆ ಮಹಾಂತೇಶ್ ನಗರದ ಎಸ್‍ಬಿಐ ಬ್ಯಾಂಕ್ ಬಳಿ ಹಾಲು ತರಲು ಹೋಗಿದ್ದ, ವೃದ್ಧೆ ಕವಿತಾ ಡೊಳ್ಳಿ(60) ಕೊರಳಲ್ಲಿದ್ದ 20ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣದ ದಾಖಲಾಗಿದೆ.

  • ಬೆಳಗಾವಿಯ ಮೂವರು ಯುವತಿಯರು ನಾಪತ್ತೆ!

    ಬೆಳಗಾವಿಯ ಮೂವರು ಯುವತಿಯರು ನಾಪತ್ತೆ!

    ಬೆಳಗಾವಿ: ಮೂರು ಯುವತಿಯರು ಬೆಳಗಾವಿಯಲ್ಲಿ ನಾಪತ್ತೆಯಾಗಿದ್ದಾರೆ. ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಸ್ಥಳದಲ್ಲಿ ನೆಲೆಸಿದ್ದ ಯುವತಿಯರ ಪತ್ತೆ ಕಾರ್ಯ ಆರಂಭವಾಗಿದೆ.

    ಸದಾಶಿವ ನಗರದಲ್ಲಿರುವ ಸಮೃದ್ಧಿ ಸೇವಾ ಸಂಸ್ಥೆ ಸ್ಫೂರ್ತಿ ಸ್ವಾಧಾರ ಗೃಹ ಆಶ್ರಯದಲ್ಲಿದ್ದ ಮೇಘಾ ಮಲ್ಲಪ್ಪ ಹಳಬರ(22) ಯುವತಿ ನಾಪತ್ತೆ ಆಗಿದ್ದಾಳೆ. ಮೂಲತಃ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೋಗೇರಿ ನಿವಾಸಿ ಮೇಘಾ ಹಳಬರ ಕಳೆದ ಜನವರಿ 22 ರಂದು ಬೆಳಗಿನ ಜಾವ ಯಾರಿಗೂ ಗೊತ್ತಾಗದಂತೆ ಕಂಪೌಡ್ ಹಾರಿ ನಾಪತ್ತೆ ಆಗಿದ್ದಾಳೆ. ಈ ಕುರಿತು ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬೆಳಗಾವಿ ನಗರದ ನಂದನಧಾಮದಲ್ಲಿದ್ದ ಎಚ್‍ಐವಿ ಪೀಡಿತರ ಕೇಂದ್ರದಲ್ಲಿದ್ದ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಿವಾಸಿ ಮಂಜುಳಾ ರಾಜು(17) ನಾಪತ್ತೆ ಆಗಿದ್ದಾಳೆ. ಇದನ್ನೂ ಓದಿ: ಚರಂಡಿ ವಿವಾದ ಬಗೆಹರಿಸಲು ಹೋದ ಪೊಲೀಸರಿಗೆ ದೊಣ್ಣೆಯಿಂದ ಥಳಿಸಿದ ಗ್ರಾಮಸ್ಥರು!

    ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಬರುವುದಾಗಿ ಹೇಳಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಬಿದರಿ ಗ್ರಾಮದ ಭುವನೇಶ್ವರಿ ಅಜ್ಜನ್ನವರ(19) ನಾಪತ್ತೆ ಆಗಿದ್ದಾಳೆ. ನಾಪತ್ತೆಯಾದ ಯುವತಿಯ ಸುಳಿವು ಸಿಕ್ಕವರು ಕೂಡಲೇ ಬೆಳಗಾವಿ ನಗರದ ಪೊಲೀಸ್ ಆಯುಕ್ತರು ಹಾಗೂ ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.

  • ಕರ್ನಾಟಕದಲ್ಲೂ ನಮ್ಮ ಪಕ್ಷ ಸುಭದ್ರವಾಗಿದೆ, ಸಂಘಟನೆಯಲ್ಲೂ ಗಟ್ಟಿಯಾಗಿದೆ: ಬಿ.ವೈ.ವಿಜಯೇಂದ್ರ

    ಕರ್ನಾಟಕದಲ್ಲೂ ನಮ್ಮ ಪಕ್ಷ ಸುಭದ್ರವಾಗಿದೆ, ಸಂಘಟನೆಯಲ್ಲೂ ಗಟ್ಟಿಯಾಗಿದೆ: ಬಿ.ವೈ.ವಿಜಯೇಂದ್ರ

    ಬೆಳಗಾವಿ: ಕರ್ನಾಟಕದಲ್ಲೂ ನಮ್ಮ ಪಕ್ಷ ಸುಭದ್ರವಾಗಿದೆ. ಸಂಘಟನೆಯಲ್ಲೂ ಗಟ್ಟಿಯಾಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

    ಬೆಳಗಾವಿ ಬಿಜೆಪಿಯಲ್ಲಿ ಸವದಿ, ಕತ್ತಿ ವರ್ಸಸ್ ಜಾರಕಿಹೊಳಿ ಬ್ರದರ್ಸ್ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮದು ದೊಡ್ಡ ರಾಷ್ಟ್ರೀಯ ಪಕ್ಷ ಬಿಜೆಪಿ. ಕರ್ನಾಟಕದಲ್ಲೂ ನಮ್ಮ ಪಕ್ಷ ಸುಭದ್ರವಾಗಿದೆ, ಸಂಘಟನೆಯಲ್ಲೂ ಗಟ್ಟಿಯಾಗಿದೆ. ಇಂತಹ ಸಂದರ್ಭದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಇರುತ್ತೆ. ಇದನ್ನೆಲ್ಲಾ ಸರಿದೂಗಿಸುವ ಕೆಲಸ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಮಾಡ್ತಾರೆ. ಪಕ್ಷದ ಹಿರಿಯ ಮುಖಂಡರಿದ್ದು, ಎಲ್ಲವನ್ನೂ ಸರಿಪಡಿಸುವ ಕೆಲಸ ಮಾಡ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಅಂತಾರಾಜ್ಯ ಜಲ ವಿವಾದ ಕುರಿತು ಕಾನೂನು ತಜ್ಞರೊಂದಿಗೆ ಬೊಮ್ಮಾಯಿ ಸಭೆ

    ಸಂಪುಟ ಪುನರ್‍ರಚನೆ, ನಿಗಮಮಂಡಳಿ ಅಧ್ಯಕ್ಷ ಸ್ಥಾನ ಹಂಚಿಕೆ ವಿಚಾರವಾಗಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಸಿಎಂ ಆದ ಸಂದರ್ಭದಲ್ಲಿ ನಿಗಮ ಮಂಡಳಿಗಳಿಗೆ ಕಾರ್ಯಕರ್ತರಿಗೆ ಅವಕಾಶ ಕೊಟ್ಟಿದ್ದಾರೆ. ಬೇರೆ ಕಾರ್ಯಕರ್ತರಿಗೂ ಅವಕಾಶ ಕೊಡಬೇಕೆಂಬ ಸದುದ್ದೇಶ ಸಿಎಂ, ರಾಜ್ಯಾಧ್ಯಕ್ಷರು ಇಟ್ಟುಕೊಂಡಿದ್ದಾರೆ. ಸದ್ಯದಲ್ಲೇ ಅದು ಆಗುತ್ತೆ ಎಂಬ ಭರವಸೆ ನಮ್ಮೆಲ್ಲರಲ್ಲೂ ಇದೆ ಎಂದು ಹೇಳಿದರು.

    ಬೆಳಗಾವಿ ಮೇಯರ್ ಸ್ಥಾನ ಲಿಂಗಾಯತ ಸಮುದಾಯಕ್ಕೆ ನೀಡಲು ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಕುರಿತು ಜಿಲ್ಲೆಯ ಮುಖಂಡರು, ಸಚಿವರು ಕುಳಿತು ತೀರ್ಮಾನ ಮಾಡ್ತಾರೆ ಎಂದರು. ವಿಜಯೇಂದ್ರ ಸಂಪುಟ ಸೇರುತ್ತಾರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಉಪಾಧ್ಯಕ್ಷನಾಗಿ ಸಂಘಟನೆ ಕೆಲಸ ಮಾಡ್ತಿದೀನಿ. ಈ ಬಗ್ಗೆ ಪಕ್ಷ, ಸಿಎಂ, ರಾಜ್ಯಾಧ್ಯಕ್ಷರು ಕುಳಿತು ತೀರ್ಮಾನ ಮಾಡ್ತಾರೆ. ನಾನು ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಲ್ಲ ಎಂದರು. ಇದನ್ನೂ ಓದಿ: ಮಾರಿ ಕಣ್ಣು ಹೋರಿ ಮ್ಯಾಲೆ, ಸಿದ್ದರಾಮಯ್ಯ ಕಣ್ಣು ಅಲ್ಪಸಂಖ್ಯಾತರ ಮೇಲೆ: ಆರ್.ಅಶೋಕ್

  • ಸರ್ಕಾರಿ ಶಾಲೆಯ ಕಂಪ್ಯೂಟರ್ ಕದ್ದ ಕಳ್ಳರು

    ಸರ್ಕಾರಿ ಶಾಲೆಯ ಕಂಪ್ಯೂಟರ್ ಕದ್ದ ಕಳ್ಳರು

    ಚಿಕ್ಕೋಡಿ: ಸರ್ಕಾರಿ ಹಿರಿಯ ಮರಾಠಿ ಪ್ರಾಥಮಿಕ ಶಾಲೆಯಲ್ಲಿ ಬೆಲೆಬಾಳುವ ಎಲೆಕ್ಟ್ರಿಕಲ್ ವಸ್ತುಗಳನ್ನು ತಡರಾತ್ರಿ ಕಳ್ಳರು ತಮ್ಮ ಕೈಚಳಕ ತೋರಿಸಿ ದೋಚಿಕೊಂಡು ಹೋಗಿದ್ದಾರೆ.

    ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂಪ್ಯೂಟರ್ ಹಾಗೂ ವಿವಿಧ ಎಲೆಕ್ಟ್ರಿಕಲ್ ವಸ್ತುಗಳ ಜೊತೆಗೆ ಹಲವಾರು ದಾಖಲಾತಿ ಕಳ್ಳತನವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಫೆ.19 ರಿಂದ 28ವರೆಗೆ ದ.ಕ ಜಿಲ್ಲೆಯಲ್ಲಿ ಕಡತ ವಿಲೇವಾರಿ, ಕಂದಾಯ ಮೇಳ

    ತಡರಾತ್ರಿ ಘಟನೆ ನಡೆದಿದ್ದು, ಗ್ರಾಮಸ್ಥರು ಮುಂಜಾನೆ ಗಮನಿಸುತ್ತಿದ್ದಂತೆ ಕಳ್ಳತನವಾಗಿರುವುದು ತಿಳಿದುಬಂದಿದೆ. ಶಾಲೆಯ ಬೀಗ ಮುರಿದು ಕಳ್ಳರು ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾರೆ. ಸ್ಥಳಕ್ಕೆ ಅಥಣಿ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಇತ್ತೀಚಿಗೆ ಗಡಿಭಾಗದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಪೊಲೀಸರು ನಿಗಾ ಇಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ಜೈಲಿನಲ್ಲಿ ಕೈದಿಯ ಅನುಮಾನಾಸ್ಪದ ಸಾವು

    ಜೈಲಿನಲ್ಲಿ ಕೈದಿಯ ಅನುಮಾನಾಸ್ಪದ ಸಾವು

    ಬೆಳಗಾವಿ: ಕೇರಳದ ಕುಖ್ಯಾತ ರೌಡಿ ಡಾನ್ ತಸ್ಲಿಮ್ ಕೊಲೆ ಆರೋಪದ ಮೇಲೆ ಜೈಲು ಸೇರಿದ್ದ ಗುರುರಾಜ್ ದೊಡ್ಡಮನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ.

    ಕಳೆದ ನಾಲ್ಕು ದಿನಗಳಿಂದ ಎದೆ ನೋವಿನಿಂದ ಬಳಲುತ್ತಿರುವುದಾಗಿ ಗುರುರಾಜ್ ಹೇಳಿಕೊಂಡಿದ್ದ. ಶುಕ್ರವಾರ ಸಂಜೆಯೂ ಜೈಲಿನ ಸಿಬ್ಬಂದಿ ಬಳಿ ಎದೆನೋವು ಇದೆ, 500 ರೂ. ಕೊಡುವಂತೆ ಕೇಳಿಕೊಂಡಿದ್ದ. ಇದಾದ ಕೆಲವೇ ಗಂಟೆಗಳಲ್ಲಿ ಗುರುರಾಜ್ ಸಾವನ್ನಪ್ಪಿದ್ದಾನೆ ಎಂದು ಜೈಲು ಸಿಬ್ಬಂದಿ ತಿಳಿಸಿದ್ದಾರೆ. ಇದನ್ನೂ ಓದಿ: ಜೈಲಿನಲ್ಲಿ ಅಗ್ನಿ ಅವಘಡ – 20 ಕೈದಿಗಳು ಆಸ್ಪತ್ರೆಗೆ ದಾಖಲು

    jail

    2019ರಲ್ಲಿ ಕೊಲೆ ಕೇಸ್‌ನಲ್ಲಿ ಗುರುರಾಜ್ ಜೈಲು ಸೇರಿದ್ದ. ಹದಿನೈದು ದಿನಗಳ ಹಿಂದೆ ಗುರುರಾಜ್ ಮೇಲೆ ಜೈಲು ಸಿಬ್ಬಂದಿ ಹಲ್ಲೆ ನಡೆಸಿದ್ದ ಎಂದು ಹೇಳಲಾಗಿದೆ. ಇದಾದ ಬಳಿಕ ಗುರುರಾಜ್‌ಗೆ ಎದೆನೋವು ಕಂಡುಬಂದಿದೆ. ಗುರುರಾಜ್ ಸಾವಿಗೆ ಜೈಲು ಸಿಬ್ಬಂದಿಯೇ ಕಾರಣ ಎಂದು ಆತನ ಸಹೋದರ ಕಿರಣ್ ಆರೋಪಿಸಿದ್ದಾರೆ. ಇದನ್ನೂ ಓದಿ: ಕಳೆದುಕೊಂಡಿರುವ ಜಿಲ್ಲಾ ಕೇಂದ್ರ ಹಾಸನವನ್ನು ಮತ್ತೆ ಜೆಡಿಎಸ್ ತೆಕ್ಕೆಗೆ ತೆಗೆದುಕೊಳ್ಬೇಕು: ಸೂರಜ್

    ಗುರುರಾಜ್ ಕುಟುಂಬಸ್ಥರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಜೈಲು ಸಿಬ್ಬಂದಿಯ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.

  • ವಾಜಪೇಯಿ ನಂತರ ಮೋದಿ ಬಂದಂತೆ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಅನಿವಾರ್ಯ: ಯತ್ನಾಳ್

    ವಾಜಪೇಯಿ ನಂತರ ಮೋದಿ ಬಂದಂತೆ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಅನಿವಾರ್ಯ: ಯತ್ನಾಳ್

    ಬೆಳಗಾವಿ: ಕ್ರಿಯಾಶೀಲರಾಗಿ ಕೆಲಸ ಮಾಡಲು, ಎರಡನೇ ನಾಯಕತ್ವ ಕರ್ನಾಟಕಕ್ಕೆ ಬೇಕಾಗಿದೆ. ಯಡಿಯೂರಪ್ಪ ಅವರ ಯುಗ ಮುಗಿದಿದೆ. ಇನ್ನೂ ಮೂರ್ನಾಲ್ಕು ಜನರಿದ್ದಾರೆ. ಅವರ ಅವಧಿ ಮುಗಿಯುತ್ತಾ ಬಂದಿದೆ. ವಾಜಪೇಯಿ ನಂತರ ಮೋದಿ ಬಂದ ಹಾಗೇ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಅನಿವಾರ್ಯತೆ ಇದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

    ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎರಡನೇ ನಾಯಕತ್ವ ಪಕ್ಷಕ್ಕೆ ಬೇಕು ಅಂತಾ ಹೇಳಿದ್ದೀನಿ. ಅದಕ್ಕಾಗಿ ಹೊಸ ಪ್ರಕ್ರಿಯೆಯನ್ನ ಮಾಡುತ್ತಿದ್ದಾರೆ. ಪಕ್ಷದ ವರಿಷ್ಠರು ಮುಂದಿನ ಚುನಾವಣೆಗೆ ಒಳ್ಳೆ ಟೀಮ್ ಮಾಡಿ, ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರ್ಕಾರಕ್ಕೆ ತರುವ ಪ್ಲಾನ್ ಇಟ್ಟುಕೊಂಡು ಬದಲಾವಣೆ ಮಾಡ್ತಿದ್ದಾರೆ ಎಂದರು. ಇದನ್ನೂ ಓದಿ: ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ನರೇಗಾ ವಿಶ್ವಕ್ಕೆ ಮಾದರಿ: ಕೆ.ಎಸ್.ಈಶ್ವರಪ್ಪ

    ರಮೇಶ್ ಜಾರಕಿಹೊಳಿ ಭೇಟಿ ವಿಚಾರವಾಗಿ ಸ್ಪಷ್ಟಪಡಿಸಿದ ಅವರು, ರಮೇಶ್ ಜಾರಕಿಹೊಳಿ ಎರಡು ಬಾರಿ ವಿಜಯಪುರಕ್ಕೆ ಬಂದಿದ್ದರು. ಒಂದು ಸಾರಿ ನಾವು ಅವರ ಮನೆಗೆ ಹೋಗಬಾರದಾ ಎಂದರು. ಒಮ್ಮೆಯಾದ್ರು ಬಂದು ಊಟ ಮಾಡಿ ಅಂದ್ರು, ಹೋಗಿದ್ದೆ. ಊಟಕ್ಕೆ ಹೋದಾಗ ಮಾಧ್ಯಮದವರ ಕೈಗೆ ಸಿಕ್ಕಿ ಬಿದ್ವಿ. ರಮೇಶ್ ಜಾರಕಿಹೊಳಿ ನಾವು ಏನೂ ಮಾತನಾಡಿಲ್ಲ. ಪಕ್ಷದಲ್ಲಿ ಉಳಿಯಬೇಕು ಅನ್ನೋ ಮನಸ್ಸಿದೆ ಅವರಿಗೆ. ನಾವೆಲ್ಲರೂ ಕೂಡಿ ಪಕ್ಷ ಕಟ್ಟೋಣ ಅನ್ನೋ ಮಾತು ಹೇಳಿದ್ದೀವಿ ಎಂದು ತಿಳಿಸಿದರು.

    ಪ್ರಾದೇಶಿಕ ಪಕ್ಷ ಕಟ್ಟುವಷ್ಟು ಹೊಲಸು ಕೆಲಸ ನಾನು ಮಾಡಲ್ಲ, ಅವರೂ ಮಾಡಲ್ಲ. ಈಗಿರುವ ಸಣ್ಣಪುಟ್ಟ ಗೊಂದಲ ಬಗೆಹರಿಸಿ ಒಂದಾಗಿ ಹೋಗಬೇಕು ಎನ್ನುವುದನ್ನು ಬಿಟ್ಟರೆ ಬೇರೇನೂ ಚರ್ಚೆ ಮಾಡಿಲ್ಲ. ಬೆಳಗಾವಿಯಲ್ಲಿ ಬಣ ಇಲ್ಲ. ಊಟಕ್ಕೆ ಹೋದಾಗ, ಬಣ ಅಂದ್ರೆ ಹೇಗೆ? ಸಣ್ಣಪುಟ್ಟ ಸಮಸ್ಯೆ ಇದ್ರೂ ಮುಖ್ಯಮಂತ್ರಿಗಳು ಸರಿ ಮಾಡ್ತಾರೆ. ಕೇಂದ್ರದಲ್ಲಿ ನಾಯಕರು ಎಲ್ಲರಿಗೂ ಕರೆದು ಬುದ್ಧಿ ಹೇಳುವ ಕೆಲಸ ಮಾಡ್ತಾರೆ ಎಂದರು. ಇದನ್ನೂ ಓದಿ: ಬೆಂಗಳೂರು ಜನತೆಗೆ ಮತ್ತೊಂದು ಶಾಕ್ ಕೊಟ್ಟ BBMP!

  • ಕಳ್ಳಮಾರ್ಗದ ಮೂಲಕ ರಾಜ್ಯಪ್ರವೇಶಕ್ಕೆ ಯತ್ನ – ಖಾಸಗಿ ಬಸ್‍ಗಳ ವಿರುದ್ಧ ಪ್ರಕರಣ ದಾಖಲು

    ಕಳ್ಳಮಾರ್ಗದ ಮೂಲಕ ರಾಜ್ಯಪ್ರವೇಶಕ್ಕೆ ಯತ್ನ – ಖಾಸಗಿ ಬಸ್‍ಗಳ ವಿರುದ್ಧ ಪ್ರಕರಣ ದಾಖಲು

    ಚಿಕ್ಕೋಡಿ: ಕೋವಿಡ್ ನೆಗೆಟಿವ್ ವರದಿ ಇಲ್ಲದೆ ರಾಜ್ಯ ಪ್ರವೇಶಕ್ಕೆ ಯತ್ನಿಸಿರುವ ಖಾಸಗಿ ಬಸ್ ಕಂಪನಿಗಳ ಮೇಲೆ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಈ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳಿ ಚೆಕ್ ಪೋಸ್ಟ್ ಬಳಿ ನಡೆದಿದೆ.

    ಕಳ್ಳದಾರಿಯ ಮೂಲಕ ಆರ್‍ಟಿಸಿಪಿಆರ್ ವರದಿ ಇಲ್ಲದೆ ಮುಂಬೈನಿಂದ ಬೆಂಗಳೂರಿಗೆ 17 ಜನ ಪ್ರಯಾಣಿಕರನ್ನು ಖಾಸಗಿ ಕಂಪನಿ ಬಸ್ ರಾಜ್ಯಕ್ಕೆ ಕರೆತರುತ್ತಿತ್ತು. ಈ ವೇಳೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಅಪ್ಪಾಚಿವಾಡಿ ಬಳಿ ಬಸ್‍ನನ್ನು ಪೊಲೀಸರು ತಡೆದಿದ್ದು, ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಜನರಿಗೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕೊಂಡು ಮನೆಯಲ್ಲಿ ಮಲಗಿ ಎನ್ನುವಂತಿದೆ ಈ ಬಜೆಟ್: ಹೆಚ್‍ಡಿಕೆ

    ಪ್ರಸ್ತುತ ಬಸ್ ಕಂಪನಿಯ ಮ್ಯಾನೇಜರ್, ಮೇಲ್ವಿಚಾರಕ ಅಸ್ಲಂ ಉಲ್ಖಾನ್, ನೇಮುತ್ತಮ್ ಖಾನ್, ಕ್ಲೀನರ್ ಟಿಪ್ಪು ಸುಲ್ತಾನ್ ಮೇಲೆ ರಾಷ್ಟ್ರೀಯ ವಿಪತ್ತು ನಿರ್ವಹಣೆ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಕೋವಿಡ್ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ರಾಜ್ಯಕ್ಕೆ ಪ್ರವೇಶ ಎಂಬ ನಿಯಮ ಮಾಡಿದೆ. ಆ ನಿಯಮವನ್ನು ಖಾಸಗಿ ಬಸ್ ಉಲ್ಲಂಘಿಸಿ, ಕೋವಿಡ್ ವರದಿ ಇಲ್ಲದೆ ಪ್ರಯಾಣಿಕರನ್ನು ತುಂಬಿಕೊಂಡು ಕಳ್ಳ ಮಾರ್ಗದಿಂದ ಬರುತ್ತಿತ್ತು. ಇದನ್ನೂ ಓದಿ: ನಮ್ಮಲ್ಲಿ ಪ್ರಾಣಿಗಳ ಕಾನೂನು ಕಠಿಣ ಇಲ್ಲ – ನಾಯಿ ‘ಲಾರಾ’ ಅಂತ್ಯಕ್ರಿಯೆಗೆ ಬಂದ ರಮ್ಯಾ

    ಈ ವೇಳೆ ಪೋಲಿಸರು ಬಸ್ ತಡೆಹಿಡಿದಿದ್ದು, ಪದೇ-ಪದೇ ಆದೇಶ ಉಲ್ಲಂಘನೆ ಮಾಡುತ್ತಿದ್ದ ಬಸ್ ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಶರ್ಮಾ ಟ್ರಾವೆಲ್ಸ್ ನ್ಯಾಷನಲ್ ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮರಾಠಿಯಲ್ಲಿ ಮಾಹಿತಿ ನೀಡಲು ಸೂಚಿಸಿದ ಶಾಸಕಿ ಮೇಲೆ ಕನ್ನಡಿಗರ ಆಕ್ರೋಶ

    ಮರಾಠಿಯಲ್ಲಿ ಮಾಹಿತಿ ನೀಡಲು ಸೂಚಿಸಿದ ಶಾಸಕಿ ಮೇಲೆ ಕನ್ನಡಿಗರ ಆಕ್ರೋಶ

    ಬೆಳಗಾವಿ: ಮರಾಠಿ ಭಾಷೆಯಲ್ಲಿ ಮಾಹಿತಿ ನೀಡಲು ಸೂಚನೆ ನೀಡಿದ ಖಾನಾಪುರದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ವಿರುದ್ಧ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಗ್ರಾಮ ಒನ್ ಕೇಂದ್ರದ ಉದ್ಘಾಟನೆ ವೇಳೆ ಶಾಸಕಿ ಅಂಜಲಿ ನಿಂಬಾಳ್ಕರ್ ಮರಾಠಿ ಭಾಷೆಯಲ್ಲಿ ಮಾಹಿತಿ ನೀಡಲು ಸೂಚನೆ ನೀಡಿರುವ ವೀಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ವೀಡಿಯೋ ಟ್ವೀಟ್‌ನಲ್ಲಿ ಶಾಸಕಿ ಖಾನಾಪುರ ತಾಲೂಕಿನಲ್ಲಿ ಕನ್ನಡ ಬಾರದ ಜನರಿಗೆ ಮರಾಠಿಯಲ್ಲಿ ಮಾಹಿತಿ ನೀಡಿ. ಕನ್ನಡ ಭಾಷೆಯ ನಾಮಫಲಕ ಜೊತೆ ಮರಾಠಿ ಭಾಷೆಯಲ್ಲೂ ನಾಮಫಲಕ ಅಳವಡಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದನ್ನೂ ಓದಿ: ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡುವುದು ನಮ್ಮ ಗುರಿ: ನಲಪಾಡ್ ಅಧಿಕಾರ ಸ್ವೀಕಾರ

    ಖಾನಾಪುರ ತಾಲೂಕಿನಲ್ಲಿ ಮರಾಠಿ, ಕನ್ನಡ ಎರಡು ಭಾಷೆಯ ಜನರಿದ್ದಾರೆ. ಸಾಕಷ್ಟು ಜನರಿಗೆ ಕನ್ನಡ ಭಾಷೆ ಅರ್ಥ ಆಗಲ್ಲ. ಅವರು ಈಗ ಕನ್ನಡ ಅಭ್ಯಾಸ ಮಾಡುತ್ತಿದ್ದಾರೆ, ಕಲಿಯಲು ಸಹ ಮುಂದೆ ಬಂದಿದ್ದಾರೆ. ನಾವು ಜನ ಸೇವೆ ಮಾಡುತ್ತಿದ್ದು ಜನರಿಗೆ ತಿಳಿಯುವ ಭಾಷೆಯಲ್ಲಿ ಹೇಳಬೇಕು. ಅದಕ್ಕೆ ಕನ್ನಡ ಭಾಷೆ ಜೊತೆ ಮರಾಠಿ ಭಾಷೆಗಳ ಫಲಕ ಹಾಕಿ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಆರೋಗ್ಯ ಕಾರ್ಯಕರ್ತರು ಸೇನಾನಿಗಳಂತೆ ಕೆಲಸ ಮಾಡಿದ್ದಾರೆ: ಕೋವಿಂದ್

    ಇದೀಗ ಶಾಸಕಿ ಅಂಜಲಿ ನಿಂಬಾಳ್ಕರ್ ವೀಡಿಯೋ ಟ್ವೀಟ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಶಾಸಕಿಯನ್ನು ತರಾಟೆಗೆ ತೆಗೆದುಕೊಂಡಿರುವ ಕನ್ನಡಿಗರು ಕಳೆದ 60 ವರ್ಷಗಳಿಂದ ಕರ್ನಾಟಕದಲ್ಲಿ ಇದ್ದು ಕನ್ನಡದಲ್ಲಿ ಕಲಿಯದೇ ಇರೋದು ಯಾರ ತಪ್ಪು ಎಂದು ಟೀಕಿಸಿದ್ದಾರೆ. ಮಹಾರಾಷ್ಟ್ರದ ಕನ್ನಡ ಪ್ರದೇಶಗಳಲ್ಲಿ ಮಹಾರಾಷ್ಟ್ರ ಸರ್ಕಾರ ಕನ್ನಡದಲ್ಲಿ ಸೇವೆ ನೀಡುತ್ತಿದ್ದಾರಾ? ಮಹಾರಾಷ್ಟ್ರದಲ್ಲಿ ಕನ್ನಡ ಶಾಲೆಗಳ ಮೇಲೆ ಯಾವ ರೀತಿ ದರ್ಪ ತೋರುತ್ತಿದ್ದಾರೆ ನಿಮಗೆ ಗೊತ್ತಾ ಎಂದು ಹಲವರು ಪ್ರಶ್ನಿಸಿದ್ದಾರೆ.

  • ಬಿಜೆಪಿ ಅಧಿಕೃತ ಸಭೆ ಅಲ್ಲ ಎಂದಿದ್ದ ಬಾಲಚಂದ್ರ ಜಾರಕಿಹೊಳಿಗೆ ಕತ್ತಿ ಟಾಂಗ್

    ಬಿಜೆಪಿ ಅಧಿಕೃತ ಸಭೆ ಅಲ್ಲ ಎಂದಿದ್ದ ಬಾಲಚಂದ್ರ ಜಾರಕಿಹೊಳಿಗೆ ಕತ್ತಿ ಟಾಂಗ್

    ಚಿಕ್ಕೋಡಿ: ಬೆಳಗಾವಿ ಬಿಜೆಪಿ ಪಾಳಯದಲ್ಲಿ ಗುಂಪು ರಾಜಕಾರಣ ನಡೆಯುತ್ತಿದೆ ಎಂಬುದು ಮತ್ತೆ-ಮತ್ತೆ ಸಾಬೀತಾಗುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಸಚಿವ ಉಮೇಶ್ ಕತ್ತಿ ಮನೆಯಲ್ಲಿ ನಡೆದಿದ್ದ ಸಭೆ ಬಿಜೆಪಿ ಅಧಿಕೃತ ಸಭೆ ಅಲ್ಲ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ದರು. ಅದಕ್ಕೆ ಕತ್ತಿ ಅವರು ಟಾಂಗ್ ಕೊಟ್ಟಿದ್ದಾರೆ.

    ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣದಲ್ಲಿ 16 ಕೋಟಿ ರೂ. ಗಳ ವಿವಿಧ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಜಾರಕಿಹೊಳಿ ಸಹೋದರರನ್ನ ಬಿಟ್ಟು ನಡೆಸಿದ ರಹಸ್ಯ ಸಭೆಯ ಕುರಿತು ಸ್ಪಷ್ಟನೆ ನೀಡಿದ್ದಾರೆ. ಸಭೆಯಲ್ಲಿ ಬಿಜೆಪಿ ಅವರು ಇದ್ರೆ ಅದು ಅಧಿಕೃತ ಬಿಜೆಪಿ ಸಭೆ. ನಾನು ರಾಜ್ಯದ ಸಚಿವ, ಶಾಸಕ ಹಾಗಾಗಿ ಇದೇ ಬಿಜೆಪಿ ಅಧಿಕೃತ ಸಭೆ ಎಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಬೆಳಗಾವಿಯ ಗೌಪ್ಯ ಸಭೆ ಬಿಜೆಪಿ ಅಧಿಕೃತ ಸಭೆಯಲ್ಲ: ಬಾಲಚಂದ್ರ ಜಾರಕಿಹೊಳಿ

    ಸಭೆಯಲ್ಲಿ ಪರಿಷತ್ ಚುನಾವಣೆ ಸೋಲಿನ ಕಾರಣಕ್ಕೆ ಹುಡುಕಾಟ ಮಾಡಿದ್ದು, ನಮ್ಮ ಅಭ್ಯರ್ಥಿ ಚುನಾವಣೆಯಲ್ಲಿ ಸೋತಿದ್ದೇಕೆ ಎಂದು ಚರ್ಚೆ ಮಾಡಿದ್ದೇವೆ. ಮುಂಬರುವ ಜಿಲ್ಲೆ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿ ಅಭ್ಯರ್ಥಿಗಳ ಹುಡುಕಾಟಕ್ಕೆ ಸಭೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

    ಪಕ್ಷ ಸಂಘಟನೆ ದೃಷ್ಟಿಯಿಂದ ಸಭೆ ಮಾಡಲಾಗಿದ್ದು, ಸಭೆಯಲ್ಲಿ ಬಂದವರು, ಬಾರದೇ ಇದ್ದವರು ಯಾರೂ ದೊಡ್ಡವರಲ್ಲ. ಪರಿಷತ್ ಪರಾಜಿತ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಎಲ್ಲರನ್ನೂ ಸೇರಿಸುವ ಕೆಲಸ ಮಾಡಿದ್ದರು ಎಂದು ವಿವರಿಸಿದ್ದಾರೆ. ಇದನ್ನೂ ಓದಿ:  ಅಖಿಲೇಶ್ ಆಡಳಿತದಲ್ಲಿ ಗಲಭೆ, ಗೂಂಡಾಗಿರಿ, ವಲಸೆ ಹೆಚ್ಚಿತ್ತು: ಕೇಶವ್ ಪ್ರಸಾದ್ ಮೌರ್ಯ

    ಮಹಾಂತೇಶ್ ಅವರು ಯಾರನ್ನ ಕರೆದರು, ಯಾರನ್ನ ಬಿಟ್ಟಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಬಂದವರೆಲ್ಲ ಸೇರಿ ಪಕ್ಷ ಸಂಘಟನೆ ಕುರಿತು ಚರ್ಚೆ ಮಾಡಿದ್ದೇವೆ. ಸಂಪುಟ ವಿಸ್ತರಣೆ ಸಿಎಂ ಬೊಮ್ಮಾಯಿ ವಿವೇಚನೆಗೆ ಬಿಟ್ಟಿದ್ದು ಎಂದು ತಿಳಿಸಿದ್ದಾರೆ.