Tag: Belgaum

  • RSS ಪಥಸಂಚಲನ – ರಸ್ತೆಯುದ್ದಕ್ಕೂ ರಂಗೋಲಿ ಬಿಡಿಸಿ ಹೂಹಾರ ಹಾಕಿ ಸ್ವಾಗತ

    RSS ಪಥಸಂಚಲನ – ರಸ್ತೆಯುದ್ದಕ್ಕೂ ರಂಗೋಲಿ ಬಿಡಿಸಿ ಹೂಹಾರ ಹಾಕಿ ಸ್ವಾಗತ

    ಬೆಳಗಾವಿ: ನಗರದಲ್ಲಿ ರಾಷ್ಟ್ರೀಯ ಸ್ವಯಂ ಸಂಘಟನೆ ವತಿಯಿಂದ ಬೃಹತ್ ಆಕರ್ಷಕ ಪಥಸಂಚಲನ ನಡೆಸಿ ಅಖಂಡ ಹಿಂದೂ ಧರ್ಮದ ಏಕತೆಯನ್ನು ಪ್ರದರ್ಶಿಸಿದರು.

    ಕಲಿಯುಗಾಬ್ಧ, ಪ್ಲವನಾಮ ಸಂವತ್ಸರ, ಪಾಲ್ಗುಣ ಮಾಸ ದಶಮಿ ಪ್ರಯುಕ್ತ ನಗರದಲ್ಲಿ RSS ಸಂಘಟನೆ ವತಿಯಿಂದ ಆಕರ್ಷಕ ಪಥಸಂಚಲನ ಕಾರ್ಯಕ್ರಮ ಜರುಗಿತು. ಸುಮಾರು ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಪ್ರತಿವರ್ಷ ಏರ್ಪಡಿಸುತ್ತಿದ್ದ ಪಥಸಂಚಲನವನ್ನು ರದ್ದುಪಡಿಸಲಾಗಿತ್ತು. ಇದನ್ನೂ ಓದಿ:  ಸಿಖ್ಖರು ಈಗ ವಿಮಾನ ನಿಲ್ದಾಣಗಳಲ್ಲಿ ಕಿರ್ಪನ್‍ಗಳನ್ನು ಒಯ್ಯಬಹುದು: ಕೇಂದ್ರದ ಹೊಸ ರೂಲ್ಸ್

    ನಗರದ ಲಿಂಗರಾಜ ಕಾಲೇಜು ಆವರಣದಿಂದ ಪ್ರಾರಂಭವಾದ ಪಥಸಂಚಲನ ಕಾಲೇಜು ರಸ್ತೆ, ಗೋಂಧಳಿ ಗಲ್ಲಿ, ಕಂಗ್ರಾಳ್ ಗಲ್ಲಿ, ಕಾಕತಿವೇಸ್ ರಸ್ತೆ, ಶನಿವಾರ ಕೂಟ, ಗಣಪತ್‍ಗಲ್ಲಿ, ಮಾರುತಿ ಗಲ್ಲಿ, ಅನ್ಸೂರ್‌ಕರ್‌ಗಲ್ಲಿ, ನ್ಯೂಕ್ಲಿಎಸ್ ಮಾಲ್ ರಸ್ತೆ, ಸಂಭಾಜಿ ಸರ್ಕಲ್, ಕಿರ್ಲೋಸ್ಕರ್ ರಸ್ತೆ, ರಾಮದೇವ ಗಲ್ಲಿ, ಖಡೆಬಜಾರ್, ಸಮಾದೇವಿ ಗಲ್ಲಿ ಮುಖಾಂತರ ಲಿಂಗರಾಜ್ ಕಾಲೇಜ್ ಆವರಣಕ್ಕೆ ಬಂದು ಪಥಸಂಚಲನ ಸಂಪನ್ನವಾಯಿತು.

    RSS meeting at Thane to discuss not only Ramjanmabhoomi but organic farming - Oneindia News

    ಎಲ್ಲ ಸ್ವಯಂಸೇವಕರು ಈ ಆಕರ್ಷಕ ಪಥಸಂಚಲದಲ್ಲಿ ಕೈಯಲ್ಲಿ ಲಾಠಿ ಹಿಡಿದು, ಶಿಸ್ತಿನಿಂದ ಸಂಚರಿಸುವಾಗ ಸ್ಥಳೀಯ ನಾಗರಿಕರು ರಂಗೋಲಿ ಹಾಕಿ ರಸ್ತೆಯುದ್ದಕ್ಕೂ ಹೂವನ್ನು ಚೆಲ್ಲಿ ಮತ್ತಷ್ಟು ಈ ಯಾತ್ರೆಗೆ ಶೋಭೆಯನ್ನು ತಂದರು. ಇದನ್ನೂ ಓದಿ: ಅದ್ದೂರಿ ಹುಟ್ಟುಹಬ್ಬ ಆಚರಿಸಿಕೊಂಡ ಉಮೇಶ್ ಕತ್ತಿ

    ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನಗರದ ಉಪಪೊಲೀಸ್ ಆಯುಕ್ತ ರವೀಂದ್ರ ಗಡಾದಿ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ವಹಿಸಲಾಗಿತ್ತು.

  • ಭೀಕರ ರಸ್ತೆ ಅಪಘಾತ ತಾಯಿ, ಮಗಳು ಸ್ಥಳದಲ್ಲೆ ಸಾವು – ತಂದೆ ಸ್ಥಿತಿ ಚಿಂತಾಜನಕ!

    ಭೀಕರ ರಸ್ತೆ ಅಪಘಾತ ತಾಯಿ, ಮಗಳು ಸ್ಥಳದಲ್ಲೆ ಸಾವು – ತಂದೆ ಸ್ಥಿತಿ ಚಿಂತಾಜನಕ!

    ಚಿಕ್ಕೋಡಿ: ರಸ್ತೆ ಬದಿ ನಿಂತಿದ್ದ ಕ್ಯಾಂಟರ್‌ಗೆ ಇನ್ನೊವಾ ಕಾರು ಡಿಕ್ಕಿಯಾದ ಪರಿಣಾಮ ತಾಯಿ ಹಾಗೂ ಮಗಳು ಸ್ಥಳದಲ್ಲಿಯೇ ಮೃತ ಪಟ್ಟಿರುವ ಧಾರುಣ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

    ಹುಕ್ಕೇರಿ ತಾಲೂಕಿನ ನರಸಿಂಗಪೂರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಬದಿ ನಿಂತಿದ್ದ ಕ್ಯಾಂಟರ್‌ಗೆ ಇನೋವಾ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಸ್ಥಳದಲ್ಲೆ ತಾಯಿ ಹಾಗೂ ಮಗಳು ಸಾವನ್ನಪ್ಪಿದ್ದು, ತಂದೆಯ ಸ್ಥಿತಿ ಚಿಂತಾಜನಕವಾಗಿದೆ. ಇದನ್ನೂ ಓದಿ: ಸೈಕಲ್ ವಿಚಾರಕ್ಕೆ ಕಾಲೇಜು ವಿದ್ಯಾರ್ಥಿ ಕಿಡ್ನಾಪ್ 

    ಮೃತರು ಸಂಕೇಶ್ವರ ಪಟ್ಟಣದ ಖ್ಯಾತ ವೈದ್ಯೆ ಶ್ವೇತಾ ಮುರಗೋಡ(41), ಶಿಯಾ(7)ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಕಾರು ಚಲಾಯಿಸುತ್ತಿದ್ದ ವೈದ್ಯ ಸಚೀನ್ ಮುರಗೋಡೆ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳು ವೈದ್ಯ ಸಚೀನ್ ಮುರಗೋಡೆ ಅವರನ್ನು ಚಿಕಿತ್ಸೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

    ಬೆಳಗಾವಿ ಕಡೆಯಿಂದ ಸಂಕೇಶ್ವರ ಕಡೆ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಸ್ಥಳಕ್ಕೆ ಯಮಕನಮರಡಿ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಖ್ಯಾತ ಉದ್ಯಮಿ ಪತ್ನಿ ಜೊತೆ ಸೆಕ್ಸ್ ಎಂಜಯ್ ಮಾಡಿದ್ದೆ – ಪ್ರೀಯಾಂಕಾ ಅಳಿಯನ ವಿವಾದಾತ್ಮಕ ಹೇಳಿಕೆ 

  • ಕೈ ಕಾಲು ಕಟ್ಟಿ ಹಾಕಿ ನೇಣು ಬಿಗಿದು ಯುವಕನ ಕೊಲೆ

    ಕೈ ಕಾಲು ಕಟ್ಟಿ ಹಾಕಿ ನೇಣು ಬಿಗಿದು ಯುವಕನ ಕೊಲೆ

    ಬೆಳಗಾವಿ: ಕೈ ಕಾಲು ಕಟ್ಟಿ ಹಾಕಿ ನೇಣು ಬಿಗಿದು ಯುವಕನನ್ನು ಕ್ರೂರವಾಗಿ ಕೊಲೆ ಮಾಡಿ ಎಸೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣ ಹೊರವಲಯದ ಆರ್‌ಟಿಓ ಕಛೇರಿ ಮುಂಭಾಗದಲ್ಲಿ ನಡೆದಿದೆ. ಅಥಣಿ ತಾಲೂಕಿನ ದರೂರ ಗ್ರಾಮದ ಸಿದ್ಧಾರೂಢ ಶಿರಗುಪ್ಪಿ(25) ಕೊಲೆಯಾದ ವ್ಯಕ್ತಿ.

    ಸಿದ್ಧಾರೂಢ ಶಿರಗುಪ್ಪಿ ಕಳೆದ 2 ವರ್ಷಗಳಿಂದ ಮಾಜಿ ಡಿಸಿಎಂ ಸಹೋದರ, ಕೃಷ್ಣಾ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಪರಪ್ಪಾ ಸವದಿಯ ಕಾರು ಚಾಲನಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಕಳೆದ ರಾತ್ರಿ ಪರಪ್ಪ ಸವದಿ ಜೊತೆ ಉಗಾರ ಗ್ರಾಮಕ್ಕೆ ತೆರಳಿದ್ದ ಸಿದ್ಧಾರೂಢ ರಾತ್ರಿ 11 ಗಂಟೆಗೆ ಅಥಣಿ ಪಟ್ಟಣಕ್ಕೆ ವಾಪಸ್ ಬಂದು ರಾತ್ರಿ ಮನೆಗೆ ತೆರಳುತ್ತಿದ್ದಾಗ ತಡ ರಾತ್ರಿ ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಡೀಸೆಲ್ ಕದಿಯಲು ಬಂದವರ ಕಾಲಿಗೆ ಪೊಲೀಸರಿಂದ ಗುಂಡೇಟು

    POLICE JEEP

    ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಗ MLA- ತಾಯಿ ಸರ್ಕಾರಿ ಶಾಲೆಯಲ್ಲಿ ಸ್ವೀಪರ್

     

  • ಹಾಲಿ ಎಂಎಲ್‍ಸಿ ಅರುಣ್ ಶಹಾಪುರ ವಿರುದ್ಧ ಅಸಮಾಧಾನ ಸ್ಪೋಟ…!

    ಹಾಲಿ ಎಂಎಲ್‍ಸಿ ಅರುಣ್ ಶಹಾಪುರ ವಿರುದ್ಧ ಅಸಮಾಧಾನ ಸ್ಪೋಟ…!

    ಬೆಳಗಾವಿ: ಜಿಲ್ಲೆಯವರಿಗೆ ಬಿಜೆಪಿ ಟಿಕೆಟ್ ನೀಡದಿರುವುದ್ದಕ್ಕೆ ಆಕ್ರೋಶ ಭುಗಿಲೆದ್ದಿದ್ದು, ಈ ನಡುವೆ ಹಾಲಿ ಎಂಎಲ್‍ಸಿ ಅರುಣ್ ಶಹಾಪುರ್‌ಗೆ ಟಿಕೆಟ್ ನೀಡಿದ್ದಕ್ಕೆ ಅಸಮಾಧಾನ ಸ್ಫೋಟಗೊಂಡಿದೆ. ಬೆಳಗಾವಿಯಲ್ಲಿ ಸಭೆ ಸೇರಿದ ಎರಡು ಸಾವಿರಕ್ಕೂ ಹೆಚ್ಚು ಶಿಕ್ಷಕರು, ಬೆಳಗಾವಿ ಜಿಲ್ಲೆಯವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿದ್ದಾರೆ.

    ಬೆಳಗಾವಿ ಜಿಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲಾ ಆಡಳಿತ ಮಂಡಳಿ ಹಾಗೂ ನೌಕರರ ಒಕ್ಕೂಟದಿಂದ ನಡೆದ ಸಭೆಯಲ್ಲಿ ಬೆಳಗಾವಿ ಜಿಲ್ಲೆಯವರಿಗೇ ಟಿಕೆಟ್ ನೀಡುವಂತೆ ಆಗ್ರಹ ವ್ಯಕ್ತವಾಯಿತು. ಈಗಾಗಲೇ ಘೋಷಣೆ ಮಾಡಿದ ಟಿಕೆಟ್ ವಾಪಸ್ ಪಡೆದು ಬೆಳಗಾವಿ ಜಿಲ್ಲೆಯವರಿಗೆ ಟಿಕೆಟ್ ಕೊಟ್ಟರೆ ಸ್ವಾಗತ. ಇಲ್ಲವಾದ್ರೆ ಬೆಳಗಾವಿ ಜಿಲ್ಲೆಯ ಎಲ್ಲ ಶಿಕ್ಷಕರು ಸೇರಿ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಿ ಪಕ್ಷೇತರ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಸೈಕಲ್ ವಿಚಾರಕ್ಕೆ ಕಾಲೇಜು ವಿದ್ಯಾರ್ಥಿ ಕಿಡ್ನಾಪ್ 

    ಈಗಾಗಲೇ ಐವರು ಆಕಾಂಕ್ಷಿಗಳು ಪಕ್ಷೇತರರಾಗಿ ಸ್ಪರ್ಧಿಸಲು ಇಂಗಿತ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ರಾಜ್ಯ ಪ್ರೌಢಶಾಲೆ ಸಹಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಮು ಗುಗವಾಡ, ಬೆಳಗಾವಿ ಜಿಲ್ಲಾ ಪ್ರೌಢಶಾಲೆ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಎಸ್.ಎಸ್.ಮಠದ ಸೇರಿ ಐವರು ಆಕಾಂಕ್ಷಿಗಳಿದ್ದಾರೆ.

    ಬಂಡಾಯ ಅಭ್ಯರ್ಥಿಯಾಗಿ ಕೋರೆ ಪುತ್ರಿ ಕಣಕ್ಕೆ!
    ವಾಯುವ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಡಾ.ಪ್ರಭಾಕರ್ ಕೋರೆ ಪುತ್ರಿ ಕಣಕ್ಕಿಳಿಯುವ ಕುರಿತಾದ ಚರ್ಚೆಗಳು ಗರಿಗೆದರಿವೆ. ಕೆಎಲ್‍ಇ ಕಾರ್ಯಾಧ್ಯಕ್ಷರಾಗಿರುವ ಡಾ.ಪ್ರಭಾಕರ್ ಕೋರೆ, ರಾಜ್ಯಸಭಾ ಮಾಜಿ ಸದಸ್ಯರು ಹೌದು. ಕೆಎಲ್‍ಇ ದಂತ ವಿಜ್ಞಾನ ಮಹಾವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿರುವ ಪ್ರಭಾಕರ್ ಕೋರೆ ಪುತ್ರಿ ಡಾ.ಪ್ರೀತಿ ಕೋರೆ ಅವರು, ಪರಿಷತ್ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಚರ್ಚೆಗಳು ನಡೆದಿವೆ. ಪ್ರಸ್ತುತ ಐವರು ಆಕಾಂಕ್ಷಿಗಳ ಪಟ್ಟಿಯಲ್ಲಿ ಡಾ.ಪ್ರೀತಿ ಕೋರೆ ಹೆಸರಿಲ್ಲ. ಇದನ್ನೂ ಓದಿ: ‘ಜೇಮ್ಸ್’ ಜೊತೆ ‘ಬೈರಾಗಿ’ ಟೀಸರ್ – ಪುನೀತ್ ಹುಟ್ಟುಹಬ್ಬಕ್ಕೆ ಶಿವಣ್ಣನ ಝಲಕ್

  • ಕಾಂಗ್ರೆಸ್ ಮುಳುಗುವ ಹಡಗು, ಸ್ಕ್ರ್ಯಾಪ್ ಆಗಿದೆ: ಕಾರಜೋಳ

    ಕಾಂಗ್ರೆಸ್ ಮುಳುಗುವ ಹಡಗು, ಸ್ಕ್ರ್ಯಾಪ್ ಆಗಿದೆ: ಕಾರಜೋಳ

    ಬೆಳಗಾವಿ: ಕರ್ನಾಟಕದಲ್ಲಿ ಮಾಜಿ ಸಿಎಂ ಯಡಿಯೂರಪ್ಪ 130 ರಿಂದ 140 ಸೀಟು ಬರುತ್ತದೆ ಎಂದು ಹೇಳಿದ್ದಾರೆ. ಆದರೆ, ಕರ್ನಾಟಕದಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ. ಕಾಂಗ್ರೆಸ್ ಮುಳುಗುವ ಹಡಗು, ಸ್ಕ್ರ್ಯಾಪ್ ಆಗಿದೆ ಎಂದು ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಡಳಿತ ಬಂದ ಪಕ್ಷದ ಕಾರ್ಯಕ್ರಮ, ಅಭಿವೃದ್ಧಿ ಕಾರ್ಯ ಹಾಗೂ ಸಾಮಾಜಿಕ ನ್ಯಾಯದಡಿ ಮಾಡಿದ ಕೆಲಸ ಪರಿಶೀಲನೆ ಮಾಡಿ ಮತ ಹಾಕುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಮಾಡಿದ ಕಾರ್ಯಕ್ಕೆ ಜನ ಅನುಮೋದನೆ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಯಡಿಯೂರಪ್ಪ ಅವರು 130 ರಿಂದ 140 ಸೀಟು ಬರುತ್ತದೆ ಎಂದು ಹೇಳಿದ್ದಾರೆ. ಆದರೆ, ಕರ್ನಾಟಕದಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸೋನಂ ಕಪೂರ್ ಮಾವನಿಗೆ 27 ಕೋಟಿ ರೂ. ವಂಚಿಸಿದ ಸೈಬರ್ ಕ್ರಿಮಿನಲ್ಸ್! 

    ಕಾಂಗ್ರೆಸ್ ಪರಿಸ್ಥಿತಿ ಏನು ಎಂಬುದು ಎಲ್ಲರಿಗೂ ಗೊತ್ತು. ಕಾಂಗ್ರೆಸ್ ಮುಳುಗುವ ಹಡಗು, ಸ್ಕ್ರ್ಯಾಪ್ ಆಗಿದೆ ಎಂದು ಲೇವಡಿ ಮಾಡಿದ ಅವರು, ರಾಜ್ಯದಲ್ಲಿ ಹೊಸ ನಾಯಕತ್ವದ ಅಜೆಂಡಾ ನಮ್ಮ ಮುಂದೆ ಇಲ್ಲ. ಹೈಕಮಾಂಡ್ ಮುಂದೆಯೂ ಇಲ್ಲ ಎಂದರು.

    ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಇದು ಸಚ್ಚಾರಿತ್ರ ಆಡಳಿತ, ಸಾಮಾಜಿಕ ನ್ಯಾಯಕ್ಕೆ ಸಿಕ್ಕಿರುವ ಜಯ. ನಮ್ಮ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತ ಯುವಕರಿದ್ದಾರೆ. ಯುವಕರು ಜಾತಿ ವ್ಯವಸ್ಥೆಗೆ ಅಂಟಿಕೊಂಡಿಲ್ಲ. ದೇಶದ ಘನತೆ ಗೌರವ ಎತ್ತಿ ಹಿಡಿಯುವಂತಹ ಪಕ್ಷಕ್ಕೆ ಅವರು ಬೆಂಬಲಿಸುತ್ತಿದ್ದಾರೆ. ಅವರಿಗೆ ಜಾತಿ – ಧರ್ಮ ಮುಖ್ಯವಲ್ಲ. ಯುವಕರು ದೇಶದ ಏಕತೆ, ಐಕ್ಯತೆ ಸಮಗ್ರ ಅಭಿವೃದ್ಧಿ ಬಯಸಿದ್ದಾರೆ. ಇಡೀ ದೇಶಕ್ಕೆ ಈ ಚುನಾವಣಾ ಫಲಿತಾಂಶ ದಿಕ್ಸೂಚಿ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಇತಿಹಾಸದ ಪುಟ ಸೇರುತ್ತದೆ ಎಂದರು.

    ಮಾಜಿ ಸಿಎಂ ಸಿದ್ದರಾಮಯ್ಯ ಚುನಾವಣೆ ಬರೋವರೆಗೂ ಕಾಯಲಿ. ಕಾಂಗ್ರೆಸ್ 60 ವರ್ಷ ಜಾತಿ-ಧರ್ಮದಲ್ಲಿ ಆಡಳಿತ ಮಾಡಿ ಸ್ಕ್ರ್ಯಾಪ್ ಆಗಿ ಮೂಲೆ ಗುಂಪಾಗುತ್ತಿದೆ. ಕಾಂಗ್ರೆಸ್ ಅವರಿಗೆ ಜಾತಿ ಭಾವನೆ, ಮತೀಯ ಭಾವನೆ, ಧರ್ಮದ ಭಾವನೆ ಎಬ್ಬಿಸುವುದೇ ಕೆಲಸವಾಗಿದೆ. ಬಡವರನ್ನು ಯಾವತ್ತೂ ಅವರು ನೋಡಲೇ ಇಲ್ಲ. ಬಡವರು ಬಡವರಾಗಿಯೇ ಇರಬೇಕು ಎಂಬುದು ಕಾಂಗ್ರೆಸ್ ಮನಸ್ಥಿತಿ. ಅಲ್ಪಸಂಖ್ಯಾತರು ಅವಿದ್ಯಾವಂತರಾಗಿಯೇ ಇರಬೇಕು. 403 ಸೀಟ್ ಇರುವ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‍ಗೆ 2 ಸೀಟು ಬರುತ್ತೆ ಆದರೆ ನಾಚಿಕೆ ಬರಬೇಕು ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಫಾಲ್ಸ್‌ನಲ್ಲಿ ಮುಳುಗಿ RSS ಕಾರ್ಯಕರ್ತ ಸಾವು!

    ಉಗ್ರರು ಹುಟ್ಟಿಕೊಂಡಿದ್ದೆ ಕಾಂಗ್ರೆಸ್ ಅವರ ಆಡಳಿತದಲ್ಲಿ. ಈಗ ಬೇರೆ-ಬೇರೆ ಪಕ್ಷಗಳು ಆಡಳಿತಕ್ಕೆ ಬಂದ ಮೇಲೆ ಉಗ್ರರು ಕಡಿಮೆ ಆಗುತ್ತಿದ್ದಾರೆ. ಕಾಂಗ್ರೆಸ್ ಅವರು ಸುಳ್ಳು ಹೇಳುವುದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಸುಸಂಸ್ಕೃತ ಭಾಷೆಯಲ್ಲಿ ಮಾತನಾಡುವುದನ್ನು ಅವರು ಕಲಿತಿಲ್ಲ. ಅವರ ಅಸಂಸ್ಕøತ ಹೇಳಿಕೆಗಳು ಮೀಡಿಯಾದಲ್ಲಿ ಇಡೀ ದಿನ ಸುದ್ದಿಯಾಗುತ್ತವೆ. ಕಾಂಗ್ರೆಸ್‍ನ ಬಂಡತನಕ್ಕೆ ಇವತ್ತು ಜನ ಪಾಠ ಕಲಿಸಿದ್ದಾರೆ ಎಂದು ಕಿಡಿಕಾರಿದರು.

  • 16 ಚಿನ್ನದ ಪದಕ ಪಡೆಯುವ ಮೂಲಕ ಹೊಸ ದಾಖಲೆ ಮಾಡಿದ ಚಿನ್ನದ ಹುಡುಗಿ!

    16 ಚಿನ್ನದ ಪದಕ ಪಡೆಯುವ ಮೂಲಕ ಹೊಸ ದಾಖಲೆ ಮಾಡಿದ ಚಿನ್ನದ ಹುಡುಗಿ!

    ಬೆಳಗಾವಿ: ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 21ನೇ ಘಟಿಕೋತ್ಸವದಲ್ಲಿ ಬಿ.ಇ.ಸಿವಿಲ್ ಎಂಜಿನಿಯರಿಂಗ್ ವಿಭಾಗದ ಬುಶ್ರಾ ಮತೀನ್ 16 ಚಿನ್ನದ ಪದಕ ಪಡೆಯುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

    ರಾಯಚೂರಿನ ಎಸ್‍ಎಲ್‍ಎನ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿನಿ ಬುಷ್ರಾ ಮತೀನ್ ಒಟ್ಟು 16 ಚಿನ್ನದ ಪದಕ ಪಡೆಯುವ ಮೂಲಕ ಅತೀ ಹೆಚ್ಚು ಚಿನ್ನದ ಪದಕ ಪಡೆದ ವಿದ್ಯಾರ್ಥಿಯಾಗಿದ್ದಾಳೆ. ಇತಿಹಾಸದಲ್ಲೇ ಅತಿಹೆಚ್ಚು ಪದಕ ಪಡೆದ ಗೌರವಕ್ಕೆ ಬುಶ್ರಾ ಮತೀನ್ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಡಿಕೆಶಿ ವಿಮಾನ ಇಳಿಸಲು ರಾಜ್ಯಗಳೇ ಇಲ್ಲ: ಸುನೀಲ್ ಕುಮಾರ್ 

    ವಿಶ್ವೇಶ್ವರಯ್ಯ ಈವರೆಗಿನ ವಿವಿ ಇತಿಹಾಸದಲ್ಲಿ ಅತಿ ಹೆಚ್ಚು ಅಂದರೆ 13 ಚಿನ್ನದ ಪದಕಗಳನ್ನು ಗಳಿಸಿದ್ದ ದಾಖಲೆಯಿತ್ತು. ಬುಶ್ರಾ ಮತೀನ್ ಅವರಿಗೆ 16 ಚಿನ್ನದ ಪದಕಗಳನ್ನು ನೀಡಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅಭಿನಂದಿಸಿದರು. ಬೆಂಗಳೂರಿನ ಬಿಎನ್‍ಎಂ ಇನ್‍ಸ್ಟಿಟ್ಯೂಟ್ ಆಪ್ ಟೆಕ್ನಾಲಜಿಯ ಎಲೆಟ್ರಿಕಲ್ ಆ್ಯಂಡ್ ಕಮ್ಯೂನಿಕೇಶನ್ ಇಂಜಿನಿಯರಿಂಗ್ ವಿದ್ಯಾರ್ಥಿ ಸ್ವಾತಿ ದಯಾನಂದ ಏಳು ಚಿನ್ನದ ಪದಕಗಳನ್ನು ಪಡೆದುಕೊಂಡರು.

    ಕರ್ನಾಟಕದ ನೂತನ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್ ನೇಮಕ: ರಾಷ್ಟ್ರಪತಿ ಭವನ ಪ್ರಕಟಣೆ- Kannada Prabha

    ಕೆಎಲ್‍ಇ ಶೇಷಗಿರಿ ಕಾಲೇಜಿನ ವಿವೇಕ ಭದ್ರಕಾಳಿ ಏಳು ಚಿನ್ನದ ಪದಕ, ಬಳ್ಳಾರಿಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮ್ಯಾನೇಜ್ಮೆಂಟ್ ನ ವಿದ್ಯಾರ್ಥಿನಿ ಚಂದನಾ.ಎಂ ಏಳು ಚಿನ್ನದ ಪದಕ, ಬೆಂಗಳೂರಿನ ಸಿಎಂಆರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕೊಂದಲ ಹಳ್ಳಿಯ ವಿಧ್ಯಾರ್ಥಿನಿ ರಮ್ಯಾ.ಟಿ ಆರು ಚಿನ್ನದ ಪದಕ, ಬೆಂಗಳೂರಿನ ಆರ್‍ಎನ್‍ಎಸ್ ನಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿನಿ ಪ್ರಜ್ಞಾ ಎನ್. ನಾಲ್ಕು ಚಿನ್ನದ ಪದಕ, ಶಿವಮೊಗ್ಗದ ಜೆಎನ್‍ಎನ್‍ಸಿಇ ವಿದ್ಯಾರ್ಥಿನಿ ಪಲ್ಲವಿ.ಪಿ ನಾಲ್ಕು ಚಿನ್ನದ ಪದಕ, ಬೆಂಗಳೂರಿನ ಆರ್‍ಎನ್‍ಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿನಿ ತೇಜಸ್ವಿನಿ.ಆರ್ ನಾಲ್ಕು ಚಿನ್ನದ ಪದಕ ಹಾಗೂ ಅಶ್ವಿತಾ.ಎನ್ ಮೂರು ಚಿನ್ನದ ಪದಕ ಮತ್ತು ದಾವಣಗೆರೆಯ ಯುಬಿಡಿಟಿ ಕಾಲೇಜಿನ ವಿದ್ಯಾರ್ಥಿನಿ ಸವಿತಾ.ಎಚ್.ಟಿ ಅವರಿಗೆ ಮೂರು ಚಿನ್ನದ ಪದಕ ಪ್ರದಾನ ಮಾಡಲಾಯಿತು.

     

    57,498 ಜನರಿಗೆ ಎಂಜಿನಿಯರಿಂಗ್ ಪದವಿ: ಸಂಶೋಧನಾ ಅಧ್ಯಯನ ಮುಗಿಸಿದ ಸಂಶೋಧನಾರ್ಥಿಗಳಿಗೆ 515+ಪಿಎಚ್‍ಡಿ, 04 ಎಂ.ಎಸ್ಸಿ(ಎಂಜಿನಿಯರಿಂಗ್) ಬೈ ರಿಸರ್ಚ್ ಮತ್ತು 3 ಇಂಟಿಗ್ರೇಟೆಡ್ ಡುಯಲ್ ಪದವಿ ಪ್ರದಾನ ಮಾಡಲಾಯಿತು. ವಿಶ್ವವಿದ್ಯಾಲಯ 21ನೇ ಘಟಿಕೋತ್ಸವದಲ್ಲಿ 57,498 ಬಿಇ/ಬಿಟೆಕ್ ಪದವಿ, 902 ಬಿ.ಆರ್ಕ್ ಪದವಿ, 12 ಬಿ.ಪ್ಲಾನ್:4362 ಎಂಬಿಎ ಪದವಿ, 1387 ಎಂಸಿಎ, 1292 ಎಂಟೆಕ್:73 ಎಂ.ಆರ್ಕ್; 33 ಪಿಜಿ ಡಿಪೆÇ್ಲೀಮಾ:575ಕ್ಕಿಂತ ಹೆಚ್ಚು ಪಿ.ಎಚ್.ಡಿ:3 ಇಂಟಿಗ್ರೇಟೆಡ್ ಡ್ಯೂಯಲ್ ಡಿಗ್ರಿ ಹಾಗೂ 4 ಎಂ.ಎಸ್ಸಿ(ಎಂಜಿನಿಯರಿಂಗ್) ಬೈ ರಿಸರ್ವ್ ಪದವಿಗಳನ್ನು ಪ್ರದಾನ ಮಾಡಲಾಯಿತು. ಇದನ್ನೂ ಓದಿ: ಜನರ ತೀರ್ಪನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ, ನಾವು ಕಲಿಯುತ್ತೇವೆ: ರಾಹುಲ್ ಗಾಂಧಿ

  • ನಾನು ಜನರಿಗಾಗಿ ಇದ್ರೆ, ಪ್ರಚಾರಕ್ಕೆ ಕೆಲವರು ಇರುತ್ತಾರೆ: ಹೆಬ್ಬಾಳ್ಕರ್ ವಿರುದ್ಧ ಲಖನ್ ವ್ಯಂಗ್ಯ

    ನಾನು ಜನರಿಗಾಗಿ ಇದ್ರೆ, ಪ್ರಚಾರಕ್ಕೆ ಕೆಲವರು ಇರುತ್ತಾರೆ: ಹೆಬ್ಬಾಳ್ಕರ್ ವಿರುದ್ಧ ಲಖನ್ ವ್ಯಂಗ್ಯ

    ಬೆಳಗಾವಿ: ಮಂತಾಂತರ ನಿಷೇಧ ಕಾಯ್ದೆ ಪರಿಷತ್‍ನಲ್ಲಿ ಮಂಡನೆಯಾಗಿಲ್ಲ. ಮಂಡನೆಯಾದ ಬಳಿಕ ಯಾರಿಗೆ ಬೆಂಬಲಿಸಬೇಕು ಎಂದು ನಿರ್ಧರಿಸುತ್ತೇನೆ ಎಂದು ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಹೇಳಿದರು.

    ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನೀಗ ಪಕ್ಷೇತರ ಪರಿಷತ್ ಸದಸ್ಯನಾಗಿದ್ದೇನೆ. ಹಾಗೇ ಇರುತ್ತೇನೆ. ವಿಷಯಾಧಾರಿತವಾಗಿ ನಾನು ಬಿಜೆಪಿಗೆ ಬೆಂಬಲ ಸೂಚಿಸುತ್ತೇನೆ. ಪರಿಷತ್ ನಲ್ಲಿ ಬಿಲ್ ಮಂಡನೆ ಆಗಲಿ, ನಂತರ ಈ ಬಗ್ಗೆ ನೋಡೋಣ. ಈ ಸಂಬಂಧ ನನ್ನನ್ನು ಬಿಜೆಪಿ – ಕಾಂಗ್ರೆಸ್ ನಾಯಕರು ಸಂಪರ್ಕಿಸಿಲ್ಲ. ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್ ನನ್ನ ಗುರುಗಳು ಎಂದರು. ಇದನ್ನೂ ಓದಿ: ಮಕ್ಕಳ ಹೃದಯ ಚಿಕಿತ್ಸೆಗೆ ನೆರವಾದ ಟಾಲಿವುಡ್ ಹೃದಯವಂತ ಪ್ರಿನ್ಸ್ 

    ಬೆಳಗಾವಿ ನಗರ, ಗ್ರಾಮೀಣ ಕ್ಷೇತ್ರದಲ್ಲಿ ಪ್ರವಾಸದ ವಿಚಾರವಾಗಿ ಮಾತನಾಡಿದ ಅವರು, ನಾನು ಜನರಿಗಾಗಿ, ಅವರ ಸೇವೆಗಾಗಿ ಕೆಲಸ ಮಾಡುತ್ತಿದ್ದೇನೆ. ಆದರೆ ಕೆಲವರು ಪ್ರಚಾರಕ್ಕೆ ಮಾತ್ರ ಕೆಲಸವನ್ನು ಮಾಡುತ್ತಾರೆ ಎಂದು ಪರೋಕ್ಷವಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಲಖನ್ ವ್ಯಂಗ್ಯವಾಡಿದರು.

    ಮತಾಂತರ ಕುರಿತು ಸಿದ್ದರಾಮಯ್ಯ ಹೇಳಿಕೆ ಕುರಿತು ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆಗೆ ಬೆಂಬಲಿಸಬೇಡಿ ಎಂದು ಸಿದ್ದರಾಮಯ್ಯ ಹೇಳಿದರೆ ನೋಡೋಣ. ಕಾಂಗ್ರೆಸ್ಸಿನಲ್ಲಿ ಕೆಲ ಸ್ವಯಂಘೋಷಿತ ನಾಯಕರಿದ್ದಾರೆ. ಅಂಥ ನಾಯಕರಿಂದಲೇ ಕಾಂಗ್ರೆಸ್ ಬೆಂಬಲಿಸಲು ವಿಚಾರ ಮಾಡಬೇಕಿದೆ ಎಂದು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಲಖನ್ ಪರೋಕ್ಷ ವಾಗ್ದಾಳಿ ನಡೆಸಿದರು.

    ಸಚಿವ ಸಂಪುಟ ವಿಸ್ತರಣೆ ವೇಳೆ ರಮೇಶ್ ಜಾರಕಿಹೊಳಿ ಪರಿಗಣನೆ ವಿಚಾರಕ್ಕೆ, ರಮೇಶ್ ಜಾರಕಿಹೊಳಿ ಸಂಪುಟ ಸೇರುತ್ತಾರೋ? ಇಲ್ಲವೋ ನನಗೆ ಗೊತ್ತಿಲ್ಲ. ಬಿಜೆಪಿ ಸರ್ಕಾರ ರಚನೆಯಲ್ಲಿ ರಮೇಶ್ ಜಾರಕಿಹೊಳಿ ಪಾತ್ರ ಬಹಳಷ್ಟಿದೆ. ರಮೇಶ್ ಜಾರಕಿಹೊಳಿಗೆ ಬಿಜೆಪಿ ಹೈಕಮಾಂಡ್ ಸೂಕ್ತ ಸ್ಥಾನಮಾನ ನೀಡುವ ಭರವಸೆ ಇದೆ ಎಂದರು. ಇದನ್ನೂ ಓದಿ: ದೇಶ ದ್ರೋಹಿಗಳಂದ್ರೆ ಕಾಂಗ್ರೆಸ್ಸಿಗರು, ಕಾಂಗ್ರೆಸ್ ಅಂದ್ರೆನೆ ದೇಶ ದ್ರೋಹ: ಚೈತ್ರಾ ಕುಂದಾಪುರ

  • ಪ್ರಿಯತಮೆಯ ಪತಿಯನ್ನು ಭತ್ತದ ಬಣಿವೆಯಲ್ಲಿ ಸುಟ್ಟುಹಾಕಿ ಹತ್ಯೆ- ಪ್ರಿಯಕರ ಅರೆಸ್ಟ್

    ಪ್ರಿಯತಮೆಯ ಪತಿಯನ್ನು ಭತ್ತದ ಬಣಿವೆಯಲ್ಲಿ ಸುಟ್ಟುಹಾಕಿ ಹತ್ಯೆ- ಪ್ರಿಯಕರ ಅರೆಸ್ಟ್

    ಬೆಳಗಾವಿ: ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮಹಿಳೆಯ ಪತಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಬೆಳಗಾವಿ ತಾಲೂಕಿನ ಕಣರ್ಗಿ ಗ್ರಾಮದಲ್ಲಿ ನಡೆದಿತ್ತು. ಈ ಹಿನ್ನೆಲೆ ಆರೋಪಿಯನ್ನು ಬೆಳಗಾವಿ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.

    ಬೆಳಗಾವಿ ತಾಲೂಕಿನ ಕಣರ್ಗಿ ಗ್ರಾಮದ ಪರಶುರಾಮ ಕುರುಬರ ಬಂಧಿತ ಆರೋಪಿ. ಕೊಲ್ಹಾಪುರ ಜಿಲ್ಲೆಯ ಚಂದಗಡದ ಸಂತೋಷ ನಾರಾಯಣ ಪರೀಟ್ (36) ಕೊಲೆಯಾದ ವ್ಯಕ್ತಿ.

    ಆರೋಪಿಯೊಂದಿಗೆ ಕೊಲೆಗೀಡಾದ ಸಂತೋಷ್‍ನ ಪತ್ನಿ ರೂಪಾ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಅಲ್ಲದೇ ಪತಿಯನ್ನು ಬಿಟ್ಟು ಪರಶುರಾಮನೊಂದಿಗೆ ಕಣರ್ಗಿಯಲ್ಲಿ ಇರುವ ಬಗ್ಗೆ ಮಾಹಿತಿ ಪಡೆದ ಸಂತೋಷ್ ಮಾ.1ರಂದು ಪತಿಯು ರೂಪಾಳನ್ನು ಭೇಟಿ ಮಾಡುವ ಉದ್ದೇಶದಿಂದ ಅಲ್ಲಿಗೆ ಬಂದಿದ್ದಾನೆ. ಈ ವೇಳೆ ಆರೋಪಿ ಪರಶುರಾಮ ಕುರುಬರ ಕಣರ್ಗಿ ಬಸ್ ತಂಗುದಾಣದಲ್ಲಿ ಸಂತೋಷ್‍ನನ್ನು ನೋಡಿ ತಕ್ಷಣ ಆತನನ್ನು ದ್ವಿಚಕ್ರ ವಾಹನ ಮೇಲೆ ಕೂರಿಸಿಕೊಂಡಿದ್ದಾನೆ. ನಂತರ ಸುರಭಿ ಕ್ರಾಸ್ ಬಳಿ ಇರುವ ನ್ಯೂ ರೇಣುಕಾ ನಗರ ಹತ್ತಿರವಿದ್ದ ವಂಟಮೂರಿ ಕಾಲೋನಿಯ ಯಲ್ಲಪ್ಪ ಬುಡುಗ ಎಂಬವರ ಕೃಷಿ ಜಮೀನಿಗೆ ಕರೆದುಕೊಂಡು ಹೋಗಿ ಕಂಠ ಪೂರ್ತಿ ಕುಡಿಸಿದ್ದಾನೆ. ಇದನ್ನೂ ಓದಿ: ಭಾರತಕ್ಕೆ ಗಟ್ಸ್ ಇಲ್ಲ ಅನ್ನೋರು ಮೊದಲು ಉಕ್ರೇನ್ ಗಡಿವರೆಗೆ ತಲುಪಿ ಧಮ್ ತೋರಿಸಬೇಕಿತ್ತು: ಸುಜಯ್

    ನಶೆಯಲ್ಲಿ ಆರೋಪಿ ಪರಶುರಾಮ ತನ್ನ ಬಳಿಯಿದ್ದ ಟವೆಲ್‍ನಿಂದ ಸಂತೋಷನ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಸಂತೋಷನ ಶವವನ್ನು ಭತ್ತದ ಒಣಹುಲ್ಲಿನ ಬಣವಿಗೆ ಬೆಂಕಿ ಹಚ್ಚಿ ಪರಾರಿ ಆಗಿದ್ದನು. ಇತ್ತ ಭತ್ತದ ಬಣಿವೆಯಲ್ಲಿದ್ದ ಮೃತದೇಹ ಸುಟ್ಟುಕರಕಲಾಗಿತ್ತು. ಎಂದಿನಂತೆ ತನ್ನ ಜಮೀನಿಗೆ ಮಾ. 2ರಂದು ಆಗಮಿಸಿದ್ದ ಜಮೀನಿನ ಮಾಲೀಕ ಯಲ್ಲಪ್ಪಾ ಅರೆಬೆಂದ ದೇಹವನ್ನು ನೋಡಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಇದನ್ನೂ ಓದಿ: ಆಪರೇಷನ್ ಗಂಗಾ ಯಶಸ್ಸಿಗೆ ಭಾರತದ ಜಾಗತಿಕ ಪ್ರಭಾವವೇ ಕಾರಣ: ಮೋದಿ

    ನಂತರ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಘಟನೆ ನಡೆದ ಕೇವಲ 48 ಗಂಟೆಗಳಲ್ಲಿ ಕೊಲೆಗೈದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಮಾಳಮಾರುತಿ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಸುನೀಲ್ ಪಾಟೀಲ್ ನೇತೃತ್ವದಲ್ಲಿ ಪಿಎಸ್‍ಐ ಹೊನ್ನಪ್ಪ ತಳವಾರ, ಪ್ರೋಬೆಶನರಿ ಪಿಎಸ್‍ಐ ಶ್ರೀಶೈಲ್ ಹುಳಗೇರಿ ತಂಡ ಯಶಸ್ವಿಯಾಗಿದೆ.

  • ನಕಲಿ ಛಾಪಾ ಕಾಗದ ಹಗರಣ ಬಯಲು ಮಾಡಿದ ಸಾಮಾಜಿಕ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ

    ನಕಲಿ ಛಾಪಾ ಕಾಗದ ಹಗರಣ ಬಯಲು ಮಾಡಿದ ಸಾಮಾಜಿಕ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ

    ಬೆಳಗಾವಿ: ಖಾನಾಪುರದ ಸಾಮಾಜಿಕ ಕಾರ್ಯಕರ್ತ ಜಯಂತ್ ಮುಕುಂದ್ ತಿನೇಕರ್(62) ಮೇಲೆ ದ್ವಿಚಕ್ರ ವಾಹನದಲ್ಲಿ ಬಂದ ಏಳೆಂಟು ಜನರ ಗುಂಪೊಂದು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಪರಾರಿಯಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಜಯಂತ್ ಅವರನ್ನು ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಖಾನಾಪುರ-ಬೆಳಗಾವಿ ಹೆದ್ದಾರಿಯ ಝಾಡ್ ಶಹಾಪುರ ಬಳಿ ಹಿಂಬಾಲಿಸಿಕೊಂಡು ಬಂದ ಮುಸುಕುಧಾರಿಗಳು ಜಯಂತ್ ಅವರ ಕಾರು ತಡೆದು ಕಬ್ಬಿಣದ ರಾಡ್‌ಗಳಿಂದ ಥಳಿಸಿದ್ದಾರೆ. ಈ ವೇಳೆ ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕೆಲ ಲಾರಿ ಚಾಲಕರು ಸಹಾಯಕ್ಕೆ ಧಾವಿಸಿದ್ದಾರೆ. ಇದನ್ನೂ ಓದಿ: ಯೂರೋಪ್‌ನಲ್ಲಿ ಸೈಬರ್ ಅಟ್ಯಾಕ್ – ಇಂಟರ್‌ನೆಟ್ ಇಲ್ಲದೇ ಸಾವಿರಾರು ಜನ ಪರದಾಟ

    POLICE JEEP

    ಹಲ್ಲೆ ಮಾಡಿದ ಆರೋಪಿಗಳು ಅಪರಿಚಿತರಾಗಿದ್ದು, ಮುಖಕ್ಕೆ ಸ್ಕಾರ್ಫ್ ಹಾಕಿಕೊಂಡಿದ್ದರು. ಹಲ್ಲೆ ವೇಳೆ ಜಯಂತ್ ಅವರ ಬಲಗಾಲು, ಮೊಣಕಾಲು, ಭುಜ ಹಾಗೂ ಬಲಗೈಗೆ ಗಂಭೀರ ಗಾಯಗಳಾಗಿವೆ. ಅವರಿಗೆ ಖಾನಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಬೆಳಗಾವಿ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಷ್ಯಾ ಉಕ್ರೇನ್ ಯುದ್ಧ – ಗಗನಕ್ಕೇರಿದ ಅಡುಗೆ ಎಣ್ಣೆ ದರ

    ಜಯಂತ್ ತಿನೇಕರ್ ಹಿನ್ನೆಲೆ:
    ಬೆಳಗಾವಿ ಜಿಲ್ಲೆಯ ಖಾನಾಪೂರದ ನಿವಾಸಿ ಜಯಂತ್ ಮುಕುಂದ್ ತಿನೇಕರ್ ನಕಲಿ ಛಾಪಾ ಕಾಗದ ಹಗರಣವನ್ನು ಬೆಳಕಿಗೆ ತಂದು ರಾಜ್ಯ ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ಉಳಿತಾಯ ಮಾಡುವ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದರು. ನಕಲಿ ಛಾಪಾ ಕಾಗದ ಹಗರಣದ ಕುರಿತು ಆಗಿನ ಡಿಜಿಪಿ ಸಾಂಗ್ಲಿಯಾನಾ ಅವರನ್ನು ಭೇಟಿಯಾಗಿ ಕರೀಂ ಲಾಲಾ ತೇಲಗಿ ನಡೆಸುತ್ತಿದ್ದ ನಕಲಿ ಛಾಪಾ ದಂಧೆಯ ಬಗ್ಗೆ ದೂರು ನೀಡಿದ್ದರು.

  • ಬೊಮ್ಮಾಯಿ ನಿಮ್ಮ ಅವ್ವಾನೂ ಸೀರೆ ಸೆರಗು ಹಾಕ್ತಿದ್ಳೂ ಮರಾಯಾ, ಸೆರಗು ಇಲ್ಲದ ತಲೆ ತಲೆಯಲ್ಲ: ಇಬ್ರಾಹಿಂ ಕಿಡಿ

    ಬೊಮ್ಮಾಯಿ ನಿಮ್ಮ ಅವ್ವಾನೂ ಸೀರೆ ಸೆರಗು ಹಾಕ್ತಿದ್ಳೂ ಮರಾಯಾ, ಸೆರಗು ಇಲ್ಲದ ತಲೆ ತಲೆಯಲ್ಲ: ಇಬ್ರಾಹಿಂ ಕಿಡಿ

    ಬೆಳಗಾವಿ: ರಾಜ್ಯದಲ್ಲಿ ಹಿಜಬ್ ವಿಚಾರಕ್ಕೆ ದೊಡ್ಡ ಚರ್ಚೆ ನಡೀತಿದೆ. ಆದರೆ ತಾಯಿ ಕಿತ್ತೂರು ಚೆನ್ನಮ್ಮ ಹಾಕಿರುವ ಸೆರಗನ್ನು ಹಾಕಲು ಅವಕಾಶ ಕೊಡಬೇಕು. ಸೀರೆಯ ಸೆರಗು ಹೆಣ್ಮಕ್ಕಳಿಗೆ ಕಳೆ ಇದ್ದಂತೆ. ಅದೇ ಒಂದು ರೂಪ, ಮಹಾಲಕ್ಷ್ಮಿ ಕಂಡಂತೆ ಕಾಣ್ತಾರೆ. ಸೆರಗು ಇಲ್ಲದ ತಲೆ ತಲೆಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಹೇಳಿದರು.

    Kittur Chennamma - Wikipedia

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ತಾಯಿ ಕಿತ್ತೂರು ಚೆನ್ನಮ್ಮ ಹಾಕಿರುವ ಸೆರಗು ಹಾಕಲು ಅವಕಾಶ ಕೊಡಬೇಕು. ತಲೆ ಮೇಲೆ ಸೆರಗು ಹಾಕಲು ಯಾರು ಬೇಡ ಅಂತಾರೆ ಇದು ವಿಚಿತ್ರ ಇದೆ. ಇದಕ್ಕೆ ಕೋರ್ಟ್ ಗೆ ಹೋಗಬೇಕಾ, ಕಿತ್ತೂರು ಚೆನ್ನಮ್ಮ, ಝಾನ್ಸಿರಾಣಿ ಲಕ್ಷ್ಮೀ ಬಾಯಿ, ಇಂದಿರಾಗಾಂಧಿ ಸೇರಿದಂತೆ ಮಾಜಿ ರಾಷ್ಟ್ರೀಯ ಪತ್ರಿಭಾ ಪಾಟೀಲ್ ಕೂಡ ಸೆರಗನ್ನು ಹಾಕಿದ್ದರು. ಆದರೆ, ಈಗ ನನ್ನ ಮಗಳಿಗೆ ಸೆರಗು ಹಾಕಬೇಡ ಅಂದರೆ ಹೇಗೆ? ಸೆರಗು ಹೆಣ್ಣಿಗೆ ಕಳೆ ಇದ್ದಂತೆ. ಅದೇ ಒಂದು ರೂಪ. ಸೆರಗು ಇಲ್ಲದ ತಲೆ ತಲೆಯಲ್ಲ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಉಕ್ರೇನ್‍ನಲ್ಲಿ ಭಾರತೀಯರು ಸಿಲುಕಿರುವಾಗ, ಮೋದಿ ಯುಪಿ ಚುನಾವಣಾ ಸಭೆಗಳಲ್ಲಿ ನಿರತರಾಗಿದ್ದಾರೆ: ಮಮತಾ ಬ್ಯಾನರ್ಜಿ ಕಿಡಿ

    ಸಿಎಂ ಬಸವರಾಜ್ ಬೊಮ್ಮಾಯಿ ನಿಮ್ಮ ಅವ್ವಾನೂ ಸೆರಗು ಹಾಕ್ತಿದ್ಳೂ ಮರಾಯಾ. ನೀನು ನಿನ್ನ ಸೊಸೆಗೂ ಸೆರಗು ಹಾಕಿಸು. ನನ್ನ ಮಗಳು ಸೆರಗನ್ನು ಹಾಕಿಕೊಂಡು ಹೋಗ್ಲಿ ಅಂತಾ ಹೇಳು. ಆದ್ರೆ, ಅದಕ್ಕೆ ಜಾತಿ ಬಣ್ಣ ಕಟ್ಟಬೇಡಿ ಎಂದು ನಾನು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ಬಿಜೆಪಿಯವರಿಗೆ ಕೆಲಸವಿಲ್ಲ. ಹೀಗಾಗಿ ವೋಟ್ ಬರುತ್ತೆ ಅಂತಾ ಹೀಗೆ ಮಾಡ್ತಿದ್ದಾರೆ ಎಂದು ಸಿಎಂ ವಿರೋಧ ಕಿಡಿಕಾರಿದರು.

    ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ವಿಚಾರಕ್ಕೆ ಸಂಬಂಧಿಸಿದಂತೆ, ನಿನ್ನೆ ಆಳಂದದಲ್ಲಿ ಮೂರು ಜನರು ಹೋಗಿ ಪೂಜೆ ಮಾಡಿದ್ರು ಆಗ್ತಿತ್ತು. ಆದ್ರೆ, ಬಿಜೆಪಿಯವರು ಬೇಕಂತಲೇ ಪ್ಲಾಗ್ ತೆಗೆದುಕೊಂಡು ಹೋಗಿದ್ದಾರೆ. ಇದರಿಂದಾಗಿ ಈಗಾಗಲೇ ಇಬ್ಬರು ಸಾವನ್ನಪ್ಪಿದ್ದಾರೆ. ನಾಳೆಗೆ ನಾನೂ ಅಲ್ಲಿಗೆ ಹೋಗ್ತಿದ್ದೇನೆ. ಸಮಸ್ಯೆ ಬಗೆಹರಿಸುತ್ತೇನೆ. ಶಾಂತಿ ತರಲು ಪ್ರಯತ್ನ ಮಾಡ್ತಿದ್ದೇನೆ. ಬಿಜೆಪಿಯವರು ಹುಬ್ಬಳ್ಳಿ, ಮುಧೋಳ ಹಾಗೂ ಸಿಂಧಗಿಯಲ್ಲಿ ಕೆಡಿಸಿದ್ರು, ಅದನ್ನು ಸರಿ ಮಾಡಿದ್ದೇವೆ. ಅದರಂತೆ ಆಳಂದದಲ್ಲಿರುವ ಘಟನೆಯನ್ನು ಸರಿ ಮಾಡುತ್ತೇವೆ ಎಂದು ಭರವಸೆ ಕೊಟ್ಟರು.

    ಉಕ್ರೇನ್ ವಿದ್ಯಾರ್ಥಿಗಳ ವಿಚಾರ ಕುರಿತು ಮಾತನಾಡಿದ ಅವರು, ಕೇಂದ್ರ ಸರ್ಕಾರ ಉಕ್ರೇನ್‍ನಲ್ಲಿ ಸಿಲುಕಿದ ವಿದ್ಯಾರ್ಥಿಗಳನ್ನ ತರುವಲ್ಲಿ ವಿಫಲವಾಗಿದೆ. ಮೂರು ತಿಂಗಳ ಮುಂಚೆಯೇ ಯುದ್ಧ ಆಗುತ್ತೆ ಎಂದು ಕೇಂದ್ರ ಸರ್ಕಾರಕ್ಕೆ ಗೊತ್ತಿತ್ತು. ಆದರೂ ಭಾರತೀಯರನ್ನು ಕರೆದುಕೊಂಡು ಬಂದಿಲ್ಲ. ಇತ್ತ ಏರ್ ಇಂಡಿಯಾ ಕಂಪನಿ ಮಾರಾಟ ಮಾಡಬೇಡಿ ಅಂತಾ ಹೇಳಿದ್ವಿ. ಆದರೂ ನರೇಂದ್ರ ಮೋದಿ ವಿಮಾನ ಮಾರಾಟ ಮಾಡಿದ್ರು ಎಂದು ವಿರೋಧ ವ್ಯಕ್ತಪಡಿಸಿದರು.

    ನಮ್ಮ ವಿಮಾನ ಇದ್ದಿದ್ದರೆ ಇವತ್ತು ಇಷ್ಟೋಂದು ಸಮಸ್ಯೆ ಆಗ್ತಿರಲಿಲ್ಲ. ಸದ್ಯ ನಾವು ಬಾಡಿಗೆ ತೆಗೆದುಕೊಳ್ಳುವ ದುಸ್ಥಿತಿ ಬಂದಿದೆ. ಮೋದಿ ದೇಶವನ್ನ ಮಾರಟ ಮಾಡ್ತಿದ್ದಾರೆ. ಇನ್ನಾದರೂ ಮೋದಿ ಅವರಿಗೆ ದೇವರು ಸದ್ಭುದ್ಧಿ ಕೊಡಲಿ. ಉಳಿದಿರುವ ಎರಡು ವರ್ಷಗಳ ಅವಧಿಯಲ್ಲಿ ದೇಶವನ್ನು ಆರ್ಥಿಕತೆಗೆ ತೆಗೆದುಕೊಂಡು ಹೋಗಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ವಿದೇಶಕ್ಕೆ ವಿದ್ಯಾರ್ಥಿಗಳು ಹೋಗಿರುವ ವಿಚಾರಕ್ಕೆ, ಅವನ್ಯಾವನೋ ಮಂತ್ರಿ ವಿದೇಶಕ್ಕೆ ಏಕೆ ಓದಲು ಹೋಗ್ತೀರಾ ಎಂದು ಹೇಳ್ತಾನೆ. ಅವನ ಹತ್ರ ಹಣವಿದೆ ಕೊಡ್ತಾನೆ. ನಮ್ಮ ಹತ್ತಿರ ಹಣವಿಲ್ಲ, ನಾವೇಲ್ಲಿ ಅಷ್ಟೊಂದು ಹಣವನ್ನು ಕೋಡೋಣ. ನನ್ನ ಮಗಳು ದುಬೈನಲ್ಲಿ ಓದುತಿದ್ದಾಳೆ. ನನಗೆ ಇಲ್ಲಿ ಎರಡೆರಡು ಕೋಟಿ ಕೊಡಲು ಸಾಧ್ಯವಿಲ್ಲ. ದುಬೈನಲ್ಲಿ ಕಡಿಮೆ ರೇಟ್‍ನಲ್ಲಿ ಸೀಟ್ ಸಿಕ್ಕಿದ್ದು, ಓದಲು ಹೋಗಿದ್ದಾಳೆ. ಅಲ್ಲಿಯೂ ಓದಲು ಹೋಗಬೇಡ ಅಂದ್ರೆ ಹೇಗೆ ನಮ್ಮ ದೇಶದಲ್ಲಿ ಕಡಿಮೆ ದರ ಮಾಡಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಅಪ್ಪು ಜೊತೆಗಿನ ಸುಮಧುರ ಕ್ಷಣಗಳನ್ನು ಬಿಚ್ಚಿಟ್ಟ ಜನಾರ್ದನ ರೆಡ್ಡಿ ಪುತ್ರ!

    ಪ್ರಮೋದ್ ಮುತಾಲಿಕ್ ಜೀವನದಲ್ಲಿ ಮೊದಲ ಬಾರಿಗೆ ಒಂದೊಳ್ಳೆ ಮಾತನ್ನ ಆಡಿದ್ದಾರೆ. ಕಾಲೇಜನವರು ದುಡ್ಡು ಹೊಡೆಯುತ್ತಿದ್ದಾರೆ ಅಂತಾ ಹೇಳಿದ್ದಾರೆ. ಅವರ ಹೇಳಿಕೆಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.