Tag: Belgaum

  • ನಾಳೆ ಏನಾದ್ರೂ ಅಹಿತಕರ ಘಟನೆ ಸಂಭವಿಸಿದ್ರೆ ಅಂತವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ಸಿದ್ಧ: ಬೋರಲಿಂಗಯ್ಯ

    ನಾಳೆ ಏನಾದ್ರೂ ಅಹಿತಕರ ಘಟನೆ ಸಂಭವಿಸಿದ್ರೆ ಅಂತವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ಸಿದ್ಧ: ಬೋರಲಿಂಗಯ್ಯ

    ಬೆಳಗಾವಿ: ಅಗ್ನಿಪಥ್ ಯೋಜನೆ ಸಂಬಂಧ ಬೆಳಗಾವಿ ಬಂದ್‍ಗೆ ಯಾವುದೇ ರೀತಿ ಅನುಮತಿ ಇಲ್ಲ. ಅನುಮತಿ ಇಲ್ಲದೇ ಪ್ರತಿಭಟನೆಯಲ್ಲಿ ಭಾಗಿಯಾದ್ರೆ ಸೂಕ್ತ ಕಾನೂನುಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಎಚ್ಚರಿಸಿದರು.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಗ್ನಿಪಥ್ ಯೋಜನೆ ಸಂಬಂಧ ನಾಳೆ ಬೆಳಗಾವಿ ಚಲೋ ಹಾಗೂ ಬೆಳಗಾವಿ ಬಂದ್ ಮಾಡಲು ಹೊರಟಿದ್ದಾರೆ. ಅವರು ಯಾವುದೇ ರೀತಿ ಮನವಿ ಮಾಡಿಕೊಂಡಿಲ್ಲ. ನಾಳೆ ಏನಾದ್ರೂ ಅಹಿತಕರ ಘಟನೆಗಳು ಸಂಭವಿಸಿದ್ರೆ ಅಂತವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ನಾವು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಅಗ್ನಿಪಥ್ ಯೋಜನೆ ವಿರುದ್ಧ ಯುವಕರನ್ನು ಕಾಂಗ್ರೆಸ್‍ ಬೇಕೆಂದು ಪ್ರಚೋದಿಸುತ್ತಿದೆ: ಬಿ.ಸಿ.ಪಾಟೀಲ್ 

    ಡ್ರೋನ್ ಕ್ಯಾಮರಾ ಉಪಯೋಗಿಸಿಕೊಂಡು ರೈಲ್ವೆ ನಿಲ್ದಾಣ ಸೇರಿದಂತೆ ಪ್ರತಿಭಟನೆ ನಡೆಯುವ ಸಾಧ್ಯತೆ ಇರುವ ಸ್ಥಳಗಳಲ್ಲಿ ಕಣ್ಗಾವಲು ಇಡುತ್ತೇವೆ. ಬಂದೋಬಸ್ತ್ ಬಗ್ಗೆಯೂ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.

    ನಾವು ಎಲ್ಲವನ್ನು ಗಮನಿಸುತ್ತಿದ್ದೇವೆ. ಅವಶ್ಯಕತೆ ಕಂಡುಬಂದರೆ ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಪ್ರಚೋದನೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಯಾರು ಆಕಾಂಕ್ಷಿಗಳು ಇದ್ದಾರೆ. ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾದರೆ ಮುಂದೆ ಸರ್ಕಾರಿ ಕೆಲಸದಲ್ಲಿ ನೇಮಕಾತಿ ಪಡೆಯಲು ಅರ್ಹತೆ ಇರೋದಿಲ್ಲ ಎಂದು ಹೇಳಿದರು.

    ಅದೇ ರೀತಿ ಖಾಸಗಿ ಕೆಲಸವನ್ನು ಅಷ್ಟು ಸುಲಭವಾಗಿ ಪಡೆದುಕೊಳ್ಳಲು ಆಗೋದಿಲ್ಲ. ಇದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ನಿಮ್ಮ ಭವಿಷ್ಯವನ್ನು ಉಜ್ವಲ ಮಾಡಿಕೊಳ್ಳುವ ಸಂದರ್ಭ ಇದು. ಯಾವುದೇ ರೀತಿಯ ಪ್ರಚೋದನೆಗೆ ಕಿವಿಗೊಡದೇ ನಿಮ್ಮ ಭವಿಷ್ಯದ ಬಗ್ಗೆ ಯೋಚನೆ ಮಾಡಬೇಕು. ಏನೇ ಮಾಡೋದು ಇದ್ದರೆ ಅನುಮತಿ ಪಡೆದು, ಶಾಂತಿ ಸುವ್ಯವಸ್ಥೆಯಿಂದ ಮಾಡಬಹುದು. ಆದರೆ, ಯಾವುದೇ ಅನುಮತಿ ಪಡೆಯದೇ ಗಲಾಟೆ, ಧೋಂಬಿ ಮಾಡಲು ಬಂದರೆ ನಾವು ಯಾವುದಕ್ಕೂ ಬಿಡೋದಿಲ್ಲ ಎಂದು ಎಚ್ಚರಿಸಿದರು. ಇದನ್ನೂ ಓದಿ: ಮಕ್ಕಳನ್ನು ನೋಡಿಕೊಳ್ಳಲು ಆಗುತ್ತಿಲ್ಲವೆಂದು ಪತ್ನಿಯನ್ನ ಕೊಂದು ಬಾತ್‍ರೂಮ್‍ನಲ್ಲಿ ಬಚ್ಚಿಟ್ಟ 

    Live Tv

  • 30 ಸಾವಿರ ದೇವಾಲಯಗಳನ್ನು ವಾಪಸ್ ಪಡೆಯುತ್ತೇವೆ: ಮುತಾಲಿಕ್

    30 ಸಾವಿರ ದೇವಾಲಯಗಳನ್ನು ವಾಪಸ್ ಪಡೆಯುತ್ತೇವೆ: ಮುತಾಲಿಕ್

    – ನಮ್ಮ ಕವನ ಬೇಡಾ ಎಂದವರಿಗೆ ನಾಚಿಕೆಯಾಗಬೇಕು
    – ಕೇಸರಿ ಎಂದರೆ ತ್ಯಾಗ, ಭಕ್ತಿಯ ಪ್ರತೀಕ

    ಬೆಳಗಾವಿ: 30 ಸಾವಿರ ದೇವಾಲಯಗಳನ್ನು ವಾಪಸ್ ಪಡೆಯುತ್ತೇವೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಾಗ್ದಾಳಿ ಮಾಡಿದರು.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 30 ಸಾವಿರ ದೇವಾಲಯಗಳನ್ನು ವಾಪಸ್ ಪಡೆಯುತ್ತೇವೆ. ಕಾನೂನುಬದ್ಧವಾಗಿ ಹೋರಾಟ ಮಾಡಿ ವಾಪಸ್ ಪಡೆಯುತ್ತೇವೆ. ನಾವು, ನೀವು ಒಟ್ಟಾಗಿ ಇರಬೇಕು ಅದ್ರೆ ವಾಪಸ್ ಕೊಡಬೇಕು. ದೇವಾಲಯ ಅಂತ ಗೊತ್ತಾದ ಮೇಲೆ ಬಿಟ್ಟು ಕೊಡಬೇಕು. ಶಾಸಕ ಅಭಯ್ ಪಾಟೀಲ್‍ಗೂ ನಮ್ಮ ಬೆಂಬಲ ಇದೆ. ಮಾಜಿ ಶಾಸಕ ಫಿರೋಜ್ ಸೇಠ್ ಅಕ್ರಮವಾಗಿ ಜಾಗ ಕಬಳಿಕೆ ಮಾಡಿದ್ದಾರೆ. ಮೊದಲು ಅದನ್ನು ವಾಪಸ್ ಕೊಡಲಿ ಎಂದು ಸವಾಲ್ ಹಾಕಿದರು. ಇದನ್ನೂ ಓದಿ: ಆ ಮನುಷ್ಯನಿಗೆ ಮಾನ, ಮರ್ಯಾದೆ ಇದ್ರೆ ರಾಜೀನಾಮೆ ಕೊಡಲಿ: ಶ್ರೀನಿವಾಸ್ ಗೌಡ ವಿರುದ್ಧ ಹೆಚ್‌ಡಿಕೆ ಕಿಡಿ

    ರೋಹಿತ್ ಚಕ್ರತೀರ್ಥ ಅವರನ್ನ ಪಠ್ಯ ಪರಿಷ್ಕರಣಾ ಸಮಿತಿಯಿಂದ ತೆಗೆದ ವಿಚಾರವಾಗಿ ಮಾತನಾಡಿದ ಅವರು, ರೋಹಿತ್ ಚಕ್ರತೀರ್ಥ ಅವರನ್ನು ಸಮಿತಿಯಿಂದ ಕೈಬಿಟ್ಟಿದ್ದು ಸರಿಯಲ್ಲ. ನಿಜವಾದ ರಾಷ್ಟ್ರೀಯತೆ, ದೇಶಭಕ್ತಿಯ ಪಠ್ಯದಲ್ಲಿ ಹಾಕಿದ್ರೆ ಇವರಿಗೆ ಯಾಕೆ ಉರಿಯುತ್ತಿದೆ. ಕೆಲವು ಲೇಖಕರು ನಮ್ಮ ಕವನ ಪಠ್ಯದಲ್ಲಿ ಬೇಡಾ ಎಂದಿದ್ದಾರೆ. ಅವರಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ಹೊರಹಾಕಿದರು.

    ಹೆಡ್ಗೆವಾರ್ ಅವರ ಭಾಷಣ ಪಠ್ಯದಲ್ಲಿ ಹಾಕಿದ್ದೆ ಇವರಿಗೆ ಉರಿ. ಆರ್‌ಎಸ್‍ಎಸ್ ಸಂಸ್ಥಾಪಕನ ಹೆಸರು ಹಾಕಿದ್ರೇ ಕೋಮುವಾದ, ಜಾತಿವಾದ ಅಂತಾರೆ. ಕೇಸರಿ ಎಂದರೆ ತ್ಯಾಗ, ಭಕ್ತಿಯ ಪ್ರತೀಕ. ಇದನ್ನ ಕೆಟ್ಟದ್ದು ಅಂತಾ ಬೆಂಬಲಿಸುವ ಬುದ್ಧಿ ಜೀವಿಗಳನ್ನ, ಕಾಂಗ್ರೆಸ್ ಅವರನ್ನ ಧಿಕ್ಕರಿಸಬೇಕು. ಬರಗೂರ ಅವರ ಅಧ್ಯಕ್ಷತೆಯಲ್ಲಿ ಸಾಕಷ್ಟು ಲೋಪಗಳಿದ್ದರೂ ಬಾಯಿ ಮುಚ್ಚಿಕೊಂಡಿದ್ರು. ನೂರು ಸಲ ಸುಳ್ಳನ್ನು ಹೇಳಿ ಸತ್ಯ ಮಾಡುವ ಪ್ರಯತ್ನ ಮಾಡ್ತಿದ್ದಾರೆ ಎಂದು ಟೀಕಿಸಿದರು.

    ಕೆಲವು ಸ್ವಾಮೀಜಿಗಳು ಇವರಿಗೆ ಸಾಥ್ ಕೊಡುವ ಕೆಲಸ ಮಾಡ್ತಿದ್ದಾರೆ. ಸಿಎಂ, ಶಿಕ್ಷಣ ಸಚಿವರು ಚರ್ಚೆ ಮಾಡೋಣ ಬನ್ನಿ ಅದ್ರೆ ಯಾರು ಬರಲಿಲ್ಲ. ಪಠ್ಯದಲ್ಲಿ ಕೆಲವು ಸಣ್ಣಪುಟ್ಟ ತಪ್ಪುಗಳು ಆಗಿರುತ್ತವೆ. ಇದರಲ್ಲಿ ಕೋಮುವಾದವಿಲ್ಲ, ರಾಷ್ಟ್ರೀಯವಾದ ದೇಶಭಕ್ತಿ ಇದೆ. ಮುಸ್ಲಿಂ ದಾಳಿಕೋರರನ್ನ ಪಠ್ಯದಲ್ಲಿ ಕಾಂಗ್ರೆಸ್‍ನವರು ವೈಭವೀಕರಣ ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯಲ್ಲಿ ಮೊದಲ ಅಡ್ಡಮತದಾನ

    ಕಾಂಗ್ರೆಸ್ ಅವರಿಗೆ ಪಠ್ಯಪುಸ್ತಕದ ಬಗ್ಗೆ ಮಾತನಾಡಲು ನೈತಿಕತೆಯಿಲ್ಲ. ದೇಶಭಕ್ತಿ, ಹಿಂದುತ್ವವನ್ನ, ಆರ್‌ಎಸ್‍ಎಸ್ ನ ಕಾಂಗ್ರೆಸ್ ವಿರೋಧ ಮಾಡ್ತಿದೆ. ಹೋರಾಟ ಮಾಡುವ ಸ್ವಾಮೀಜಿಗಳಿಗೆ ಕೈ ಮುಗಿದು ಮನವಿ ಮಾಡುತ್ತೇನೆ. ನಾವೆಲ್ಲಾ ಒಟ್ಟಾಗಿ ದೇಶ ಉಳಿಸಬೇಕಿದೆ ಎಂದು ಕರೆ ಕೊಟ್ಟರು.

  • ಮಹಾರಾಷ್ಟ್ರದಲ್ಲಿ ಕೊರೊನಾ ಉಲ್ಬಣ: ಬೆಳಗಾವಿ ಜಿಲ್ಲಾಡಳಿತ ಡೋಂಟ್ ಕೇರ್, ಹೆಚ್ಚಿದ ಆತಂಕ

    ಮಹಾರಾಷ್ಟ್ರದಲ್ಲಿ ಕೊರೊನಾ ಉಲ್ಬಣ: ಬೆಳಗಾವಿ ಜಿಲ್ಲಾಡಳಿತ ಡೋಂಟ್ ಕೇರ್, ಹೆಚ್ಚಿದ ಆತಂಕ

    ಬೆಳಗಾವಿ: ಮಹಾರಾಷ್ಟ್ರದಲ್ಲಿ ಮತ್ತೆ ಡೆಡ್ಲಿ ಕೋವಿಡ್ ತಾಂಡವವಾಡುತ್ತಿದ್ದರೂ ಬೆಳಗಾವಿ ಜಿಲ್ಲಾಡಳಿತ ಡೋಂಟ್ ಕೇರ್ ಎನ್ನುತ್ತಿದೆ. ಯಾವುದೇ ರೀತಿಯ ಮುಂಜಾಗ್ರತಾ ಕ್ರಮಕೈಗೊಳ್ಳದ ಪರಿಣಾಮ ಕುಂದಾನಗರಿಯಲ್ಲಿಯೂ ಕೊರೊನಾ ಆತಂಕ ಮನೆ ಮಾಡಿದೆ.

    ಬೆಳಗಾವಿ ಜಿಲ್ಲೆ ಮೂರು ರಾಜ್ಯಗಳ ಸಂಪರ್ಕಕೊಂಡಿಯಾಗಿದ್ದು, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿಗೆ ಹೊಂದಿಕೊಂಡಿದೆ. ಪ್ರಸ್ತುತ ಮಹಾರಾಷ್ಟ್ರದಲ್ಲಿ ಕೋವಿಡ್ 4ನೇ ಅಲೆಯ ಆತಂಕ ಶುರುವಾಗಿದೆ. ಕಳೆದ 24 ಗಂಟೆಯಲ್ಲಿ 2,701 ಕೋವಿಡ್ ಪ್ರಕರಣ ಪತ್ತೆಯಾಗಿದೆ. ಇದನ್ನೂ ಓದಿ: ನೂತನ ರಾಷ್ಟ್ರಪತಿ ಆಯ್ಕೆಗೆ ಚುನಾವಣೆ ದಿನಾಂಕ ಘೋಷಣೆ

    ಮುಂಬೈ ಮಹಾನಗರವೊಂದರಲ್ಲೇ 1,765 ಪ್ರಕರಣಗಳು ಪತ್ತೆಯಾಗಿವೆ. ಮುಂಬೈನಲ್ಲೂ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಈಗಾಗಲೇ ಮಹಾರಾಷ್ಟ್ರದಲ್ಲಿ ಮತ್ತೆ ಕೋವಿಡ್ ನಿಯಮ ಜಾರಿಯಾಗಿದೆ.

    ಮಹಾರಾಷ್ಟ್ರದಲ್ಲಿ ಕೋವಿಡ್ ತಾಂಡವವಾಡುತ್ತಿದ್ದರೂ, ಬೆಳಗಾವಿ ಜಿಲ್ಲಾಡಳಿತ ಯಾವುದೇ ಮುಂಜಾಗ್ರತಾ ಕ್ರಮಕೈಗೊಳ್ಳದ ಪರಿಣಾಮ ಮಹಾರಾಷ್ಟ್ರ ರಾಜ್ಯದಿಂದ ಜನರು ಬಿಂದಾಸ್ ಆಗಿ ರಾಜ್ಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇದನ್ನೂ ಓದಿ: ಎಂಟು ವರ್ಷಗಳಲ್ಲಿ ಭಾರತದ ಜೈವಿಕ ಆರ್ಥಿಕತೆ 8 ಪಟ್ಟು ಬೆಳೆದಿದೆ: ಪ್ರಧಾನಿ

    ಇದರಿಂದಾಗಿ ರಾಜ್ಯದಲ್ಲೂ ಕೊರೊನಾ ಆತಂಕ ಮನೆ ಮಾಡಿದ್ದು, ಬೆಳಗಾವಿ ಜಿಲ್ಲಾಡಳಿತ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಗಡಿಭಾಗದಲ್ಲಿ ಚೆಕ್ ಪೋಸ್ಟ್ ತೆರೆದು ಕಟ್ಟುನಿಟ್ಟಿನ ಕ್ರಮಕೈಗೊಳ್ಳಿ ಎಂದು ಸಾರ್ವಜನಿಕರು ಒತ್ತಾಯಿಸಿದರು.

  • ದಯವಿಟ್ಟು… ರಾಜ್ಯದ ಜನತೆಯ ಚಡ್ಡಿ ಉದುರಿಸಬೇಡಿ: ಹೆಚ್‍ಡಿಕೆ

    ದಯವಿಟ್ಟು… ರಾಜ್ಯದ ಜನತೆಯ ಚಡ್ಡಿ ಉದುರಿಸಬೇಡಿ: ಹೆಚ್‍ಡಿಕೆ

    ಬೆಳಗಾವಿ: ದಯವಿಟ್ಟು.. ರಾಜ್ಯದ ಜನತೆಯ ಚಡ್ಡಿ ಉದುರಿಸಬೇಡಿ ಎಂದು ಕಾಂಗ್ರೆಸ್, ಬಿಜೆಪಿ ನಾಯಕರ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.

    ಚಡ್ಡಿ ಸುಡುತ್ತೇವೆ ಎಂಬ ಕಾಂಗ್ರೆಸ್ ಹೇಳಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರಿಗೆ ಚಡ್ಡಿ ಬಿಚ್ಚಿದ್ರೇ ಏನೂ ಸಿಗುತ್ತೆ. ಕಾಂಗ್ರೆಸ್ ಅವರು ಚಡ್ಡಿ ಸುಟ್ರೂ, ಗೃಹ ಸಚಿವ ಅರಗ ಜ್ಞಾನೇಂದ್ರ ಕಾಂಗ್ರೆಸ್ ಚಡ್ಡಿ ಉದುರಿಸಿದ್ದೇವೆ ಅಂತಾರೆ. ಮೊದಲು ನಿಮ್ಮ ನಿಮ್ಮ ಚಡ್ಡಿ ಉದುರಿಸಿಕೊಳ್ಳಿ ಎಂದು ಟೀಕಿಸಿದರು. ಇದನ್ನೂ ಓದಿ: ಕಂಟೈನರ್ ಡಿಪೋದಲ್ಲಿ ಬೆಂಕಿ: 16 ಸಾವು, 450ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

    ಆದ್ರೇ ದಯವಿಟ್ಟು, ರಾಜ್ಯದ ಜನತೆಯ ಚಡ್ಡಿ ಉದುರಿಸಬೇಡಿ. ರಾಜ್ಯದ ಜನತೆ ಗೌರವವಾಗಿ ಬದುಕುವ ವಾತಾವರಣ ನಿರ್ಮಾಣ ಮಾಡಿ. ನಿಮ್ಮ ನಿಮ್ಮ ಚಡ್ಡಿ ಬಿಚ್ಚಿಕೊಳ್ಳಿ ತೊಂದರೆ ಇಲ್ಲ. ರಾಜ್ಯದ ಜನತೆಗೆ ಅವಮಾನ ಆಗದ ರೀತಿ ಜನಗಳ ಚಡ್ಡಿ ಬಿಚ್ಚಬೇಡಿ ಎಂದರು.

  • ಪಠ್ಯದಲ್ಲಿರುವ ತಮ್ಮ ಕವಿತೆ ವಾಪಸ್ ಪಡೆದ ಮತ್ತೊಬ್ಬ ಸಾಹಿತಿ

    ಪಠ್ಯದಲ್ಲಿರುವ ತಮ್ಮ ಕವಿತೆ ವಾಪಸ್ ಪಡೆದ ಮತ್ತೊಬ್ಬ ಸಾಹಿತಿ

    ಬೆಳಗಾವಿ: ಪಠ್ಯ ಪುಸ್ತಕದ ಪರಿಷ್ಕರಣೆಗೆ ಸಂಬಂಧಿಸಿ ಇತ್ತೀಚೆಗೆ ಭಾರೀ ಚರ್ಚೆಯಾಗುತ್ತಿದೆ. ಈ ಹಿನ್ನೆಲೆ ಕನ್ನಡದ ಹಲವು ಸಾಹಿತಿಗಳು, ಕವಿಗಳು ತಮ್ಮ ವಿಷಯಗಳನ್ನು ಪಠ್ಯದಿಂದ ತೆಗೆದು ಹಾಕುವಂತೆ  ಸರ್ಕಾರಕ್ಕೆ ಪತ್ರ ಬರೆಯುತ್ತಿದ್ದಾರೆ. ಈಗ ಬೆಳಗಾವಿ ಕವಿ, ಲೇಖಕ ಹಾಗೂ ಹಿರಿಯ ಪತ್ರಕರ್ತ ಡಾ.ಸರಜೂ ಕಾಟ್ಕರ್ ಅವರು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಪತ್ರ ಬರೆದಿದ್ದಾರೆ.

    9ನೇ ತರಗತಿ ಕನ್ನಡ ತೃತೀಯ ಭಾಷಾ ವಿಷಯದ ಪುಸ್ತಕದಲ್ಲಿ ಅಳವಡಿಸಲಾಗಿರುವ ‘ಶಬ್ದಗಳು’ ಕವಿತೆಗೆ ನೀಡಿರುವ ಒಪ್ಪಿಗೆಯನ್ನು ಹಿಂಪಡೆಯುವುದಾಗಿ ಸರಜೂ ಕಾಟ್ಕರ್ ಅವರು ಬಿ.ಸಿ.ನಾಗೇಶ್ ಅವರಿಗೆ ಪತ್ರ ಬರೆಯುವ ಮೂಲಕ ತಿಳಿಸಿದ್ದಾರೆ.

    TEXTBOOK

    ಪತ್ರದಲ್ಲಿ ಏನಿದೆ?
    ಈಗಿನ ಪಠ್ಯ ಪುಸ್ತಕ ಪುನರ್ ರಚನಾ ಸಮಿತಿ ಮತ್ತು ಅದರ ನಿಲುವುಗಳ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ವಿದ್ಯಾರ್ಥಿಗಳಲ್ಲಿ, ಶೈಕ್ಷಣಿಕ ಕ್ಷೇತ್ರದಲ್ಲಿ ಪಾಲಕರಲ್ಲಿ ಹಾಗೂ ಇಡೀ ಜನ ಸಮೂಹದಲ್ಲಿ ಒಂದು ರೀತಿಯ ಗೊಂದಲಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಪಠ್ಯ ಪುಸ್ತಕದ ಪರಿಷ್ಕರಣೆ- ಅನುಮತಿ ಹಿಂತೆಗೆದುಕೊಂಡ ಮತ್ತಿಬ್ಬರು ಸಾಹಿತಿಗಳು

    ಈ ಹಿಂದೆ 9ನೇ ತರಗತಿಯ ಕನ್ನಡ ತೃತೀಯ ಭಾಷೆ ಪಠ್ಯಪುಸ್ತಕದಲ್ಲಿ ನಾನು ರಚಿಸಿದ ‘ಶಬ್ದಗಳು’ ಎಂಬ ಕವಿತೆಯನ್ನು ಅಳವಡಿಸಿಕೊಳ್ಳಲಾಗಿತ್ತು. ನನ್ನ ನಂಬಿಕೆ ಮತ್ತು ಇಷ್ಟು ವರ್ಷಗಳ ಕಾಲದ ಬದ್ಧತೆಯ ಕಾರಣಕ್ಕಾಗಿ ನನ್ನ ಕವಿತೆಗೆ ಈ ಹಿಂದೆ ಕೊಟ್ಟಿರುವ ಒಪ್ಪಿಗೆಯನ್ನು ಹಿಂದೆ ಪಡೆಯುತ್ತಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.

  • ಕಪಿಲೇಶ್ವರ ಮಂದಿರ ಕೆಡವಿ ಏನು ಕಟ್ಟಿದ್ದಾರೆ ಎಂಬ ಬಗ್ಗೆಯೂ ಸರ್ವೇ ಆಗಲಿ: ಲತೀಫ್‍ಖಾನ್ ಹೊಸ ಬಾಂಬ್

    ಕಪಿಲೇಶ್ವರ ಮಂದಿರ ಕೆಡವಿ ಏನು ಕಟ್ಟಿದ್ದಾರೆ ಎಂಬ ಬಗ್ಗೆಯೂ ಸರ್ವೇ ಆಗಲಿ: ಲತೀಫ್‍ಖಾನ್ ಹೊಸ ಬಾಂಬ್

    ಬೆಳಗಾವಿ: ದಕ್ಷಿಣ ಕಾಶಿ ಎಂದು ನಮ್ಮ ಬೆಳಗಾವಿಯ ಕಪಿಲೇಶ್ವರ ಮಂದಿರಕ್ಕೆ ಪ್ರತೀತಿ ಇದೆ. ಅಷ್ಟು ದೊಡ್ಡ ದೇವಾಲಯ ಒಂದು ಸಣ್ಣ ದೇವಾಲಯವಾಗಿ ಉಳಿಯಲು ಕಾರಣವೇನು? ಆ ದೇವಸ್ಥಾನ ಕೆಡವಿ ಏನು ಕಟ್ಟಿದರು ಎಂದು ಎಂಐಎಂ ಪಕ್ಷದ ಮುಖಂಡ ಲತೀಫ್‍ಖಾನ್ ಪಠಾಣ ಹೊಸ ಬಾಂಬ್ ಸಿಡಿಸಿದರು.

    ಮಾಧ್ಯಮಗಳ ಜೊತೆಗೆ ಮಾತನಾಡಿದ ಲತೀಫ್‍ಖಾನ್ ಪಠಾಣ ಅವರು, ಈಗಾಗಲೇ ಸಾಕಷ್ಟು ಬಾರಿ ನಾನು ಹೇಳಿದ್ದೇನೆ. 25-30 ವರ್ಷಕ್ಕಿಂತ ಮೊದಲು ಆರ್‌ಎಸ್‍ಎಸ್‍ನವರು ಇಡೀ ಭಾರತದಲ್ಲಿ ಈ ರೀತಿ ಸೂಕ್ಷ್ಮ ಪ್ರದೇಶಗಳ ಬಗ್ಗೆ ಬಹಳಷ್ಟು ಅಧ್ಯಯನ ಮಾಡಿದ್ದಾರೆ. ಯಾವ ಸಂದರ್ಭದಲ್ಲಿ ಯಾವ ವಿಷಯವನ್ನು ಮುನ್ನೆಲೆಗೆ ತರಬೇಕು. ಜನರ ದಾರಿ ತಪ್ಪಿಸಬೇಕು ಎಂಬುದು ಅವರ ಹಿಡನ್ ಅಜೆಂಡಾ ಆಗಿದೆ. ಆ ಪ್ರಕಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಸೆ.15ವರೆಗೆ ಪದ್ಮ ಪ್ರಶಸ್ತಿ ನಾಮನಿರ್ದೇಶನ ಮಾಡಿ 

    ಹಿರಿಯರು ಹೇಳಿದ್ದನ್ನು ಕೇಳಿದ್ದೇನೆ ಎಂದು ಅಭಯ್ ಪಾಟೀಲ್ ಹೇಳುತ್ತಾರೆ. ನಾನು ಕೂಡ ಹಿರಿಯರು ಹೇಳಿದಂತೆ ಹೇಳುತ್ತಿದ್ದೇನೆ. ದಕ್ಷಿಣ ಕಾಶಿ ಎಂದು ಕರೆಯುವ ಕಪಿಲೇಶ್ವರ ಮಂದಿರ ಎಂಬ ಮಾತಿದೆ. ಅಷ್ಟು ದೊಡ್ಡ ದೇವಾಲಯ ಒಂದು ಸಣ್ಣ ದೇವಾಲಯವಾಗಿ ಉಳಿಯಲು ಕಾರಣ ಏನು? ಆ ದೇವಸ್ಥಾನ ಕೆಡವಿ ಏನು ಕಟ್ಟಿದರು ಎಂದು ಪ್ರಶ್ನಿಸಿದರು.

    1,300 ವರ್ಷಗಳ ಹಿಂದಿನ ಬೆಳಗಾವಿಯ ಕೋಟೆಯನ್ನು ಒಮ್ಮೆ ಸರ್ವೇ ಮಾಡಿಸಬೇಕು. ಯಾವ ಸಮುದಾಯದವರು ಅದನ್ನು ಕೆಡವಿದ್ದಾರೆ ಎನ್ನುವುದನ್ನು ಸರ್ವೇ ಮಾಡಬೇಕು. ದಕ್ಷಿಣ ಕಾಶಿ ಎಂದು ಕರೆಯುವ ಕಪಿಲೇಶ್ವರ ಮಂದಿರ ಕೆಡವಿ ಕೋಟೆ ಕೊಟ್ಟಿದ್ದಾರೆ. ಸಾಕಷ್ಟು ರಾಜ ಮನೆತನಗಳು ಈ ಭಾಗವನ್ನು ಆಳಿದ್ದಾರೆ. ಅದನ್ನು ಯಾರು ಕೆಡವಿದರು ಎಂಬುದು ತನಿಖೆ ಆಗಲಿ ಎಂದು ಆಗ್ರಹಿಸಿದರು.

    Kapileshwar Temple Belgaum,Places To Visit In Kapileshwar Temple,Things To Do in Kapileshwar Temple

    ಕೊರೊನಾ ಸಂದರ್ಭದಲ್ಲಿ ಔಷಧಿ, ಆಕ್ಸಿಜನ್ ಪೂರೈಕೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ. ದೇಶದಲ್ಲಿ ಸಾಕಷ್ಟು ನಿರುದ್ಯೋಗ ಸಮಸ್ಯೆಯಿದೆ. 2023-24 ಚುನಾವಣೆಯಲ್ಲಿ ಜನರಿಗೆ ಏನು ಹೇಳಬೇಕು ಎಂಬುದು ಬಗ್ಗೆ ಅವರಿಗೆ ತಿಳಿದಿಲ್ಲ. ಹೀಗಾಗಿ ಜಾತಿ ಗದ್ದಲ ಎಬ್ಬಿಸಿದ್ರೆ ನಾವು ಇದರಿಂದ ಉಳಿದುಕೊಳ್ಳಬಹುದು ಎಂದು ತಿಳಿದುಕೊಂಡಿದ್ದಾರೆ ಎಂದು ಕಿಡಿಕಾರಿದರು.

    91ರ ಕಾನೂನು ಪ್ರಕಾರ ಹಳೆಯ ಆರಾಧನಾ ಕಟ್ಟಡಗಳು ಯಥಾಸ್ಥಿತಿಯಲ್ಲಿ ಇರಬೇಕು ಎಂಬ ಕಾನೂನು ಇದೆ. ಆದರೆ ಇದೆಲ್ಲ ಇದ್ದರೂ ಕೂಡ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ. ಸರ್ವೋಚ್ಛ ನ್ಯಾಯಾಲಯ ಯಾವ ರೀತಿ ನಿರ್ಣಯ ಕೊಡುತ್ತೋ ಅದಕ್ಕೆ ನಾವು ಬದ್ಧ. ಅದೇ ರೀತಿ ಅಯೋಧ್ಯೆ ತೀರ್ಪನ್ನು ಯಾವುದೇ ಗಲಭೆ ಇಲ್ಲದೇ ನಾವು ಒಪ್ಪಿಕೊಂಡಿದ್ದೇವೆ. ಇಷ್ಟಕ್ಕೆ ನಾವು ಸುಮ್ಮನಿದ್ದೇವೆ ಎಂದು ತಿಳಿದುಕೊಂಡು ಅದನ್ನೇ ಮುಂದುವರಿಸುತ್ತಿದ್ದಾರೆ ಎಂದು ಎಚ್ಚರಿಕೆ ಕೊಟ್ಟರು.

    ಈ ದೇಶವನ್ನು ಹಿಂದೂ ರಾಷ್ಟ್ರ ಮಾಡುತ್ತೇವೆ ಎನ್ನುವುದು ಸಂವಿಧಾನ ವಿರೋಧವೇ?ಇದು ಕೊರೊನಾಗಿಂತ ದೊಡ್ಡ ಭಯಾನಕ ರೋಗವಾಗಿದೆ. ಕೊರೊನಾ ರೋಗಕ್ಕೆ ಜಗತ್ತಿನ ಎಲ್ಲ ವೈದ್ಯರು ಬೆನ್ನು ಹತ್ತಿ ಔಷಧಿ ಕಂಡುಹಿಡಿದರು. ಆದರೆ, ಈ ರೋಗಕ್ಕೆ ಔಷಧಿ ಕಂಡುಹಿಡಿಯುವವರು ಮಾನಸಿಕ ರೋಗಿಗಳಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

    3 ಸಾವಿರ ವರ್ಷಗಳ ಹಿಂದೆ ನೋಡಿದ್ರೆ ಬೇರೆ-ಬೇರೆ ಧರ್ಮಗಳು, ಇನ್ನೊಂದು ಧರ್ಮಗಳ ಮೇಲೆ ದಾಳಿ ಮಾಡಿ ತಮ್ಮ ಧರ್ಮಗಳನ್ನು ಪ್ರಚಾರ ಮಾಡಿದ್ದಾರೆ. ಈಗ 700-800 ವರ್ಷಗಳ ಹಳೆಯ ವಿಚಾರಗಳನ್ನು ಎತ್ತಿಕೊಂಡು ಈಗಿನ ವಾತಾವರಣ ಹದಗೆಡಿಸುವ ಕೆಲಸ ಮಾಡಲಾಗುತ್ತಿದೆ. ಇದು ಯಾರಿಗೂ ಹಿತಕರ ಬೆಳವಣಿಗೆ ಅಲ್ಲ ಎಂದು ಎಚ್ಚರಿಸಿದರು. ಇದನ್ನೂ ಓದಿ: ಮೊದಲ ಪ್ರಯತ್ನದಲ್ಲಿ UPSC ಪರೀಕ್ಷೆಯಲ್ಲಿ ಉತ್ತೀರ್ಣ

    ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ಬೆಳಗಾವಿ ಒಂದು ಕೇಂದ್ರ ಸ್ಥಳವಾಗಿದೆ. ಆದರೂ ಇಲ್ಲಿ ಯಾವ ವ್ಯಾಪಾರಿಗಳು ಇಲ್ಲಿ ಹೂಡಿಕೆ ಮಾಡಲು ಬರುತ್ತಿಲ್ಲ. ಇಂತಹ ವಿವಾದಗಳನ್ನು ಸೃಷ್ಟಿ ಮಾಡಿ ತಮ್ಮದೇಯಾದ ರಾಜಕೀಯ ಮಾಡುತ್ತಿದ್ದಾರೆ. ಇದು ರಾಜಕೀಯಕ್ಕೆ ಸಿಮೀತವಾಗಿದೆ. ಜನರ ಮನಸ್ಸಿನಲ್ಲಿ ಇದು ಯಾವುದೂ ಇಲ್ಲ. ಇದನ್ನು ಬಿಟ್ಟು 2023-24ರ ಚುನಾವಣೆ ಗೆಲ್ಲಲು ಇವರಿಗೆ ಸಾಧ್ಯವಿಲ್ಲ ಎಂದು ಆರೋಪಿಸಿದರು.

  • ಮಹಿಳಾ ಶೌಚಾಲಯ ಪ್ರವೇಶಿಸಿ ಬಾಗಿಲು ಲಾಕ್ ಮಾಡಿಕೊಂಡ

    ಮಹಿಳಾ ಶೌಚಾಲಯ ಪ್ರವೇಶಿಸಿ ಬಾಗಿಲು ಲಾಕ್ ಮಾಡಿಕೊಂಡ

    ಬೆಳಗಾವಿ: ನಗರದ ಕನ್ನಡ ಸಾಹಿತ್ಯ ಭವನ ಆವರಣದಲ್ಲಿರುವ ಮಹಿಳಾ ಶೌಚಾಲಯಕ್ಕೆ ವ್ಯಕ್ತಿಯೊಬ್ಬ ಒಳಗಡೆ ಪ್ರವೇಶಿಸಿ ಬಾಗಿಲು ಲಾಕ್ ಮಾಡಿಕೊಂಡು ಹುಚ್ಚಾಟ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ನಗರದ ಚೆನ್ನಮ್ಮ ವೃತ್ತದಲ್ಲಿರುವ ಸಾಹಿತ್ಯ ಭವನದ ಆವರಣದಲ್ಲಿ ಮಹಿಳಾ ಶೌಚಾಲಯಕ್ಕೆ ನುಗ್ಗಿದ ವ್ಯಕ್ತಿ ಕಿತ್ತೂರು ತಾಲೂಕಿನ ಖೋದಾನಪುರ ಮೂಲದವನು ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಹುಚ್ಚಾಟ ಪ್ರದರ್ಶನ ಮಾಡುತ್ತಿದ್ದವನನ್ನು ವಶಕ್ಕೆ ಪಡೆದುಕೊಂಡರು. ಇದನ್ನೂ ಓದಿ: ಯುನಿಕಾರ್ನ್‌ಗಳ ಮೌಲ್ಯ 25 ಲಕ್ಷ ಕೋಟಿಗೆ ಹೆಚ್ಚಳ – ಮೋದಿ

    ನಡೆದಿದ್ದೇನು?
    ಇಂದು ಬೆಳಗ್ಗೆ 7 ಗಂಟೆಗೆ ವ್ಯಕ್ತಿಯೊಬ್ಬ ಸಾಹಿತ್ಯ ಭವನದಲ್ಲಿರುವ ಶೌಚಾಲಯಕ್ಕೆ ಹೋಗಿ ಲಾಕ್ ಮಾಡಿಕೊಂಡಿದ್ದಾನೆ. ಈ ವೇಳೆ ಹುಚ್ಚಾಟ ಪ್ರದರ್ಶನ ಮಾಡಿದ್ದು, ಸ್ಥಳೀಯರು ಭಯಗೊಂಡಿದ್ದಾರೆ. ಪರಿಣಾಮ ಭವನದ ಸಿಬ್ಬಂದಿಗಳು ಮತ್ತು ಸ್ಥಳದಲ್ಲಿದ್ದ ಪೊಲೀಸರು ಬಾಗಿಲು ತೆಗೆಸಲು ಹರಸಾಹಸಪಟ್ಟರು.

    ಕಾರಣವೇನು?
    ಈ ವೇಳೆ ವ್ಯಕ್ತಿ, ಪಿಎಸ್‍ಐ ಸ್ಥಳಕ್ಕೆ ಬರಬೇಕು ಅಲ್ಲಿವರೆಗೂ ನಾನು ಬಾಗಿಲು ತೆಗೆಯುವುದಿಲ್ಲ ಎಂದು ಪಟ್ಟುಹಿಡಿದಿದ್ದಾನೆ. ಈ ಹಿನ್ನೆಲೆ ಸ್ಥಳಕ್ಕೆ ಮಾರ್ಕೆಟ್ ಪಿಎಸ್‍ಐ ವಿಠ್ಠಲ ಹಾವನ್ನವರ್ ಆಗಮಿಸಿ ಆತನನ್ನು ಮನವೊಲಿಸಿ ಬಾಗಿಲು ತೆಗೆಸಿದರು. ಆದ್ರೆ, ಆ ವ್ಯಕ್ತಿಯು ಕೈಯಲ್ಲಿ ಬಕೆಟ್ ಹಿಡಿದುಕೊಂಡು ಅದರ ತುಂಬ ಗಾಜಿನ ಪುಡಿಯನ್ನು ತುಂಬಿ ಶೌಚಾಲಯದಿಂದ ಹೊರಬಂದಿದ್ದಾನೆ. ಇದನ್ನೂ ಓದಿ: ಭಾರತ ನರೇಂದ್ರ ಮೋದಿ, ಅಮಿತ್ ಶಾ ಅವರದ್ದಲ್ಲ – ಓವೈಸಿ

    ದೃಶ್ಯ ನೋಡಿದ ಎಲ್ಲರು ಒಂದು ಕ್ಷಣ ಗಾಬರಿಗೊಂಡಿದ್ದಾರೆ. ಪೊಲೀಸರು ಸಾಹಸ ಮಾಡಿ ಅವನ ಕೈಯಲ್ಲಿದ್ದ ಗಾಜಿನ ಪುಡಿಯನ್ನು ಕೆಳಗಡೆ ಚೆಲ್ಲಿಸಿದ್ದಾರೆ. ಬಳಿಕ ವ್ಯಕ್ತಿಯನ್ನ ಮನವೊಲಿಸಿದ ಬೆಳಗಾವಿ ಮಾರ್ಕೆಟ್ ಪೊಲೀಸರು ಠಾಣೆಗೆ ಕರೆದುಕೊಂಡು ಹೋದರು.

  • ಬಸವಣ್ಣನವರ ಅನುಭವ ಮಂಟಪ ಪೀರಭಾಷಾ ಬಂಗ್ಲೆಯಾಗಿದೆ: ಚಂದ್ರಶೇಖರ ಸ್ವಾಮೀಜಿ

    ಬಸವಣ್ಣನವರ ಅನುಭವ ಮಂಟಪ ಪೀರಭಾಷಾ ಬಂಗ್ಲೆಯಾಗಿದೆ: ಚಂದ್ರಶೇಖರ ಸ್ವಾಮೀಜಿ

    ಬೆಳಗಾವಿ: ಬಸವಣ್ಣನವರ ಅನುಭವ ಮಂಟಪ ಪೀರಭಾಷಾ ಬಂಗ್ಲೆ ಆಗಿದೆ ಎಂದು ಬೆಳಗಾವಿಯಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

    ಬಸವಣ್ಣನವರ ಅನುಭವ ಮಂಟಪ ಕುರಿತು ಮಾತನಾಡಿದ ಅವರು, ವಿಶ್ವದ ಮೊದಲ ಸಂಸತ್ತು ಬಸವಣ್ಣನವರ ಅನುಭವ ಮಂಟಪ. ಬಸವಣ್ಣನವರ ಮೂಲ ಅನುಭವ ಮಂಟಪ ಪೀರಭಾಷಾ ಬಂಗ್ಲೆಯಾಗಿದೆ. ನಾವೆಲ್ಲ ಇದನ್ನು ನೋಡಿ ಸುಮ್ಮನ್ನೆ ಕುಳಿತುಕೊಂಡರೆ ಹೇಗೆ? ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಸರ್ಕಾರ ಅನುಭವ ಮಂಟಪದ ಪೂರ್ತಿ ಜವಾಬ್ದಾರಿ ತೆಗೆದುಕೊಂಡು ಅಭಿವೃದ್ಧಿ ಮಾಡಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಐತಿಹಾಸಿಕ ಮುರುಘಾ ಮಠಕ್ಕೆ ನೂತನ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಸ್ವಾಮೀಜಿ ಆಯ್ಕೆ 

    ಇವತ್ತು ಸರ್ಕಾರ ಅನುಭವ ಮಂಟಪದ ನಿರ್ಮಾಣಕ್ಕೆ ಸಾಕಷ್ಟು ಖರ್ಚು ಮಾಡುತ್ತಿದ್ದಾರೆ. ಇದನ್ನು ನಾವು ಅಭಿನಂದಿಸಿಬೇಕು. ಆದರೆ ಮೊದಲು ಮೂಲ ಮಂಟಪವನ್ನು ಅಭಿವೃದ್ಧಿ ಮಾಡುವುದು ತುಂಬಾ ಮುಖ್ಯವಲ್ಲವೇ ಎಂದು ಪ್ರಶ್ನೆ ಕೇಳಿದರು.

    basavanna

    ಮುಸ್ಲಿಂ ಬಾಂಧವರು ಸೌಹಾರ್ದತೆಯಿಂದ ಚರ್ಚಿಸಿ ಮೂಲ ಅನುಭವ ಮಂಟಪ ಬಿಟ್ಟುಕೊಡಬೇಕು. ವೀರಶೈವ ಲಿಂಗಾಯತ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ್ ಕಂಕಣವಾಡಿ ವಿಶೇಷ ಗಮನ ಹರಿಸುತ್ತಿದ್ದಾರೆ. ಎಲ್ಲ ಸ್ವಾಮೀಜಿಗಳನ್ನು ಸೇರಿಸಿ ಜೂನ್ 12 ರಂದು ಅನುಭವ ಮಂಟಪ ಕಡೆಗೆ ಕರೆದೊಯ್ಯುತ್ತಿದ್ದಾರೆ. ಅದಕ್ಕೂ ಮೊದಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಮೂಲ ಅನುಭವ ಮಂಟಪ ಅಭಿವೃದ್ಧಿಪಡಿಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಹರಿಯಾಣದ ಮಾಜಿ ಸಿಎಂ ಓಂ ಪ್ರಕಾಶ್ ಚೌತಾಲಗೆ 4 ವರ್ಷ ಜೈಲು

  • ಸುನೀಲ್ ಸಂಕ್, ಪ್ರಕಾಶ್ ಹುಕ್ಕೇರಿ ಗೆಲ್ಲುವ ವಿಶ್ವಾಸವಿದೆ: ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ

    ಸುನೀಲ್ ಸಂಕ್, ಪ್ರಕಾಶ್ ಹುಕ್ಕೇರಿ ಗೆಲ್ಲುವ ವಿಶ್ವಾಸವಿದೆ: ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ

    ಬೆಳಗಾವಿ: ವಾಯುವ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಸುನೀಲ್ ಸಂಕ್ ಮತ್ತು ಶಿಕ್ಷಕರು ಪ್ರತಿನಿಧಿಯಾಗಿರುವ ಪ್ರಕಾಶ್ ಹುಕ್ಕೇರಿ ಗೆಲ್ಲುವ ವಿಶ್ವಾಸವಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ವ್ಯಕ್ತಪಡಿಸಿದರು.

    ಬೆಳಗಾವಿ ನಗರದ ಮರಾಠಾ ಸಭಾಂಗಣದಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಇದೊಂದು ಅತ್ಯಂತ ಸೂಕ್ಷ್ಮ, ಬುದ್ಧಿವಂತರ ಚುನಾವಣೆಯಾಗಿದೆ. ಸ್ವತಂತ್ರ ಸಿಕ್ಕ ನಂತರ ಶಿಕ್ಷಣ ಕ್ಷೇತ್ರದಲ್ಲಿ ಮುಂದುವರೆಯಲು, ಅಭಿವೃದ್ಧಿ ಕಾಣಲು ಕಾಂಗ್ರೆಸ್ ಸರ್ಕಾರ ರೂಪಿಸಿದ ಶಿಕ್ಷಣ ನೀತಿಗೆ ಕಾರಣವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಕೊಡುಗೆ ನೀಡುವುದರ ಜೊತೆಗೆ ಕ್ರಾಂತಿಯನ್ನು ಮಾಡಿದೆ. ಸದ್ಯ ದೇಶ ಶಿಕ್ಷಣ ಕ್ಷೇತ್ರದಲ್ಲಿ ಇಷ್ಟೊಂದು ಮುಂದುವರೆಯಲು ಕಾಂಗ್ರೆಸ್ ಪಕ್ಷದ ನೀತಿ ಕಾರಣ ಎಂದರು. ಇದನ್ನೂ ಓದಿ: ಕ್ರಿಕೆಟ್ ಬ್ಯಾಟ್‍ನಿಂದ ಹೊಡೆದ ಪತ್ನಿ – ಕೋರ್ಟ್ ಮೊರೆ ಹೋದ ಪತಿ

    ಎಲ್ಲ ಕ್ಷೇತ್ರದಲ್ಲೂ ಅಪರಾ ಅನುಭವ ಹೊಂದಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಶಿಕ್ಷಕರು ಕ್ಷೇತ್ರದ ಅಭ್ಯರ್ಥಿ ಆಗಿರುವ ಪ್ರಕಾಶ್ ಹುಕ್ಕೇರಿ ಆಯ್ಕೆ ಮಾಡಲಾಗಿದ್ದು, ಅವರ ಅನುಭವದ ಉಪಯೋಗ ಮಾಡಿಕೊಳ್ಳಬೇಕಿದೆ. ಬೆಳಗಾವಿಯಲ್ಲಿ ಭೀಮ್ಸ್ ಕಾಲೇಜು ಸ್ಥಾಪನೆ ಸೇರಿದಂತೆ ಪ್ರಕಾಶ್ ಹುಕ್ಕೇರಿ ಜಿಲ್ಲೆಗೆ ಕೊಡುಗೆ ನೀಡಿದ್ದಾರೆ. ಅವರು ಮಾಡಿದ ಕೆಲಸಗಳು ನಮಗೆ ಆದರ್ಶವಾಗಿವೆ ಎಂದು ತಿಳಿಸಿದರು.

    ಇಳಿವಯಸ್ಸಿನಲ್ಲೂ ಕ್ಷೇತ್ರದಲ್ಲಿ ಓಡಾಟ ಮಾಡುವ ಮೂಲಕ ಅಭಿವೃದ್ಧಿ ಕಾರ್ಯವನ್ನು ಮಾಡ್ತಿದ್ದಾರೆ. ಹೀಗಾಗಿ ಪದವೀಧರರ ಕ್ಷೇತ್ರದ ಅಭ್ಯರ್ಥಿ ಸುನೀಲ್ ಸಂಕ್ ಮತ್ತು ಶಿಕ್ಷಕರು ಪ್ರತಿನಿಧಿ ಪ್ರಕಾಶ್ ಹುಕ್ಕೇರಿ ಗೆಲ್ಲಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು. ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಬೆಂಗಳೂರಿನಲ್ಲಿದ್ದರೆ, ಈ ದೇವಸ್ಥಾನಕ್ಕೆ ಭೇಟಿ ಪಕ್ಕಾ 

  • ಹಿಂದೆ ನಮ್ಮ ನಡುವೆ ಏನೇ ಆಗಿರಬಹುದು, ಆದರೀಗ ಒಂದಾಗಿದ್ದೇವೆ: ಲಕ್ಷ್ಮಣ ಸವದಿ

    ಹಿಂದೆ ನಮ್ಮ ನಡುವೆ ಏನೇ ಆಗಿರಬಹುದು, ಆದರೀಗ ಒಂದಾಗಿದ್ದೇವೆ: ಲಕ್ಷ್ಮಣ ಸವದಿ

    ಬೆಳಗಾವಿ: ಹಿಂದೆ ನಮ್ಮ ನಡುವೆ ಏನೇ ಆಗಿರಬಹುದು, ಆದರೀಗ ಒಂದಾಗಿದ್ದೇವೆ. ಹೀಗಾಗಿ ವಾಯುವ್ಯ ಪದವೀಧರ-ಶಿಕ್ಷಕ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವಾಗಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ ಸವದಿ ಹೇಳಿದರು.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಎರಡೂ ಕ್ಷೇತ್ರದ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇವೆ. ಹಿಂದೆ ಆಗಿರುವ ಘಟನೆಗಳ ಬಗ್ಗೆ ಚರ್ಚೆ ಮಾಡುವ ಸಮಯ ಇದಲ್ಲ. ಹಿಂದೆ ಆಗಿರುವುದು ಪುನರಾವರ್ತನೆ ಆಗಬಾರದು. ಇಬ್ಬರೂ ಅಭ್ಯರ್ಥಿಗಳು ಗೆಲ್ಲಬೇಕು. ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸುವ ನಿರ್ಣಯವನ್ನು ಇಂದಿನ ಸಭೆಯಲ್ಲಿ ತೆಗೆದುಕೊಂಡಿದ್ದೇವೆ. ಅದನ್ನು ಎಲ್ಲರೂ ಸೇರಿ ಇಂಪ್ಲಿಮೆಂಟ್ ಮಾಡುತ್ತೇವೆ. ಯಾವುದೇ ತೊಂದರೆಯಿಲ್ಲ ಎಂದರು. ಇದನ್ನೂ ಓದಿ: ಪಾಪದ ಕೊಡ ನಮ್ಮದಾ ನಿಮ್ಮದಾ?: ಅಶೋಕ್‍ಗೆ ತಿರುಗೇಟು ಕೊಟ್ಟ ಸಿದ್ದು

    ವಿಧಾನಸಭೆ ಚುನಾವಣೆ ವೇಳೆ ತಾವು ಸ್ಪರ್ಧಿಸುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುವೆ. ಪಕ್ಷಕ್ಕೆ ಮುಜುಗರ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು ಎಂದು ಹೇಳಿದರು.