Tag: Belgaum

  • ಅಜ್ಮೇರ್ ಪ್ರವಾಸಕ್ಕೆ ರಾಜಕೀಯ ವ್ಯಾಖ್ಯಾನ ಬೇಡ-ಸಹೋದರನ ಪರ ಬ್ಯಾಟ್ ಬೀಸಿದ ರಮೇಶ್ ಜಾರಕಿಹೊಳಿ

    ಅಜ್ಮೇರ್ ಪ್ರವಾಸಕ್ಕೆ ರಾಜಕೀಯ ವ್ಯಾಖ್ಯಾನ ಬೇಡ-ಸಹೋದರನ ಪರ ಬ್ಯಾಟ್ ಬೀಸಿದ ರಮೇಶ್ ಜಾರಕಿಹೊಳಿ

    ಬೆಳಗಾವಿ: ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದ ಶಾಸಕರು ಅಜ್ಮೇರ್ ಪ್ರವಾಸಕ್ಕೆ ರಾಜಕೀಯ ವ್ಯಾಖ್ಯಾನ ಅವಶ್ಯಕತೆ ಇಲ್ಲ ಎಂದು ಸಹೋದರನ ಪರ ಶಾಸಕ ಸತೀಶ್ ಜಾರಕಿಹೊಳಿ ಬ್ಯಾಟ್ ಬೀಸಿದ್ದಾರೆ.

    ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ಸಿನಲ್ಲಿ ಯಾವುದೇ ಗಂಪುಗಾರಿಕೆ ಬೆಳವಣಿಗೆ ಇಲ್ಲ. ಹೀಗಾಗಿ ರಮೇಶ್ ಜಾರಕಿಹೊಳಿ ಪ್ರವಾಸಕ್ಕೆ ಯಾವುದೇ ಮಹತ್ವ ಕೊಡಬೇಕಾಗಿಲ್ಲ. ನಾವು 6 ತಿಂಗಳಿಗೊಮ್ಮೆ ಶಾಸಕರ ಜೊತೆ ಪ್ರವಾಸ ಮಾಡುತ್ತೇವೆ. ಪ್ರತಿಯೊಂದಕ್ಕೂ ರಾಜಕೀಯ ಬೆರೆಸುವುದು ಸರಿಯಲ್ಲ. ನಮ್ಮದೇ ಆದ ಶಾಸಕರ ಗುಂಪುಗಳಿವೆ, ಹಾಗಂತ ಇದಕ್ಕೆ ರಾಜಕೀಯ ಥಳಕು ಹಾಕುವುದು ಸರಯಲ್ಲ ಎಂದು ಹೇಳಿದರು.

    ಗ್ರಹಣದಲ್ಲಿ ಸಂದರ್ಭದಲ್ಲಿ ಎಚ್ಚರ ವಹಿಸುವಂತೆ ವಿಪಕ್ಷ ನಾಯಕ ಬಿ.ಎಸ್.ಯಡಿಯೂಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶಾಸಕರು, ಯಾವುದು ಕೆಟ್ಟ ದಿನ ಅಂತ ಇರೋದಿಲ್ಲ. ಇಂತಹ ಮೂಢನಂಬಿಕೆ ವಿರುದ್ಧ ಕಳೆದ 30 ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ ಎಂದು ಟಾಂಗ್ ಕೊಟ್ಟಿದ್ದಾರೆ.

    ಗ್ರಹಣ ಸಂದರ್ಭದಲ್ಲಿ ಊಟ, ತಿಂಡಿ ಮಾಡುವ ಮೂಲಕ ಜನಜಾಗೃತಿ ಮೂಡಿಸಿದ್ದೇವೆ. ಸಶ್ಮಾನದಲ್ಲಿ ಜಾಗರಣೆ ಮಾಡಿದ್ದೇವೆ. ಈಗಲೂ ಮಾನವ ಬಂಧುತ್ವ ವೇದಿಕೆಯು ಮೂಢನಂಬಿಕೆ ಜಾಗೃತಿ ಕಾರ್ಯಕ್ರಮ ನಡೆಸುತ್ತಿದೆ ಎಂದು ತಿಳಿಸಿದರು.

  • ಅವಧಿಗೂ ಮುನ್ನವೇ ಭರ್ತಿಯಾದ ಬೆಳಗಾವಿಯ ರಕ್ಕಸಕೊಪ್ಪ ಜಲಾಶಯ

    ಅವಧಿಗೂ ಮುನ್ನವೇ ಭರ್ತಿಯಾದ ಬೆಳಗಾವಿಯ ರಕ್ಕಸಕೊಪ್ಪ ಜಲಾಶಯ

    ಬೆಳಗಾವಿ: ನಗರಕ್ಕೆ ಕುಡಿಯುವ ನೀರು ಪೂರೈಕೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ರಕ್ಕಸಕೊಪ್ಪ ಜಲಾಶಯವು ಈ ಬಾರಿ ಅವಧಿಗೂ ಮುನ್ನವೇ ಭರ್ತಿಯಾಗಿದ್ದು, ಜನತೆಯ ಮೊಗದಲ್ಲಿ ಸಂತಸಕ್ಕೆ ಕಾರಣವಾಗಿದೆ.

    ಖಾನಾಪುರದ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಜಲಾಶಯದ ಒಳ ಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಒಟ್ಟು 0.62 ಟಿಎಂಸಿ ನೀರು ಸಂಗ್ರಹ ಸಾಮಥ್ರ್ಯ ಇರುವ ರಕ್ಕಸಕೊಪ್ಪ ಜಲಾಶಯ ಇದೀಗ ಸಂಪೂರ್ಣ ಭರ್ತಿಯಾಗಿದೆ. ಹೀಗಾಗಿ ಜಲಾಶಯದ ಗೇಟ್ ಗಳ ಮೂಲಕ ಮಾರ್ಕಂಡೇಯ ನದಿಗೆ ನೀರು ಬಿಡಲಾಗುತ್ತಿದೆ.

    ಕಳೆದ ವರ್ಷ ಸೆಪ್ಟೆಂಬರ್ 15 ರಂದು ಭರ್ತಿಯಾಗಿದ್ದ ಜಲಾಶಯ ಈ ವರ್ಷ ಒಂದು ತಿಂಗಳು ಮೊದಲೇ ಭರ್ತಿಯಾಗಿದೆ. ವರ್ಷ ಪೂರ್ತಿ ಬೆಳಗಾವಿ ನಗರಕ್ಕೆ ರಕ್ಕಸಕೊಪ್ಪ ಜಲಾಶಯದಿಂದಲೇ ನೀರು ಪೂರೈಕೆಯಾಗುತ್ತದೆ. ಅಲ್ಲದೇ ಜಿಲ್ಲೆಯ ಕುಡಿಯುವ ನೀರು ಪೂರೈಕೆಗೆ ರಕ್ಕಸಕೊಪ್ಪ ಜಲಾಶಯವೇ ಮೂಲ ಆಧಾರವಾಗಿದೆ.

  • ಸರ್ಕಾರ ನಡೆಸುವುದಂದ್ರೆ ಹೂವಿನ ಹಾಸಿಗೆಯಲ್ಲ, ಅದೊಂದು ಮುಳ್ಳಿನ ಹಾಸಿಗೆ- ಸಿಎಂ ಕಣ್ಣೀರಿಗೆ ಜಾರ್ಜ್ ಸಮರ್ಥನೆ

    ಸರ್ಕಾರ ನಡೆಸುವುದಂದ್ರೆ ಹೂವಿನ ಹಾಸಿಗೆಯಲ್ಲ, ಅದೊಂದು ಮುಳ್ಳಿನ ಹಾಸಿಗೆ- ಸಿಎಂ ಕಣ್ಣೀರಿಗೆ ಜಾರ್ಜ್ ಸಮರ್ಥನೆ

    – ಅರುಣ್ ಜೇಟ್ಲಿ ಟ್ವೀಟ್ ಗೆ ಜಾರ್ಜ್ ಟಾಂಗ್

    ಬೆಳಗಾವಿ: ಕಾಂಗ್ರೆಸ್ಸಿನವರಿಂದ ಯಾವುದೇ ಒತ್ತಡವಿಲ್ಲ ಎಂದು ಕುಮಾರಸ್ವಾಮಿ ಅವರೇ ಸ್ಪಷ್ಟಪಡಿಸಿದ್ದಾರೆ. ಸಿಎಂ ಸಮಸ್ಯೆಗಳಿಗೆ ಸ್ಪಂದಿಸುವ ವಿಚಾರದಲ್ಲಿ ಕಣ್ಣೀರು ಹಾಕಿದ್ದಾರೆ. ಕುಮಾರಸ್ವಾಮಿ ವೀಕ್ ಅಲ್ಲಾ ಅವರು ಸ್ಟ್ರಾಂಗ್ ಇದ್ದಾರೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆ, ಐಟಿ ಬಿಟಿ ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಿಎಂ ಕಣ್ಣೀರು ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಸರ್ಕಾರ ನಡೆಸುವುದಂದ್ರೆ ಹೂವಿನ ಹಾಸಿಗೆಯಲ್ಲ ಅದೊಂದು ಮುಳ್ಳಿನ ಹಾಸಿಗೆ. ಯಾರೇ ಮುಖ್ಯಮಂತ್ರಿಯಾದ್ರೂ ಸರ್ಕಾರ ನಡೆಸುವುದು ಸುಲಭವಲ್ಲ. ಸಿಎಂ ಹುದ್ದೆ ಎನ್ನುವುದು ಎಂಜಾಯ್ ಮಾಡುವ ಹುದ್ದೆಯಲ್ಲ. ಎಲ್ಲಾ ಸಿಎಂಗಳಿಗೂ ಸರ್ಕಾರ ನಡೆಸುವಾಗ ಕಷ್ಟ ಇದ್ದೇ ಇರುತ್ತೆ. ಕೆಲವೊಬ್ಬರು ನೋವು ಒಳಗಡೆ ಇಟ್ಟುಕೊಳ್ಳುತ್ತಾರೆ ಇವರು ಕಣ್ಣೀರಿನ ಮೂಲಕ ಹೊರ ಹಾಕಿದ್ದಾರೆ ಅಷ್ಟೇ ಅಂತ ಹೇಳಿದ್ರು. ಇದನ್ನೂ ಓದಿ: ದೇವೇಗೌಡರಿಗೆ ಆದ ಸ್ಥಿತಿಯೇ ಕುಮಾರಸ್ವಾಮಿಗೂ ಆಗಲಿದೆ : ಸಮ್ಮಿಶ್ರ ಸರ್ಕಾರದ ವಿರುದ್ಧ ಅರುಣ್ ಜೇಟ್ಲಿ ವ್ಯಂಗ್ಯ

    ಮಾಧ್ಯಮ ಮಿತ್ರರು ಸಿಎಂ ಅವರ ಒಂದೊಂದು ವಿಷಯ ತೆಗೆದು ಹೈಲೆಟ್ ಮಾಡುವ ಬದಲು ಮನಸ್ಸು ಮಾಡಿದ್ರೆ ಒಳ್ಳೆ ರೀತಿಯಿಂದ ತೋರಿಸಬಹುದು. ಸಿಎಂ ಜನಪರ ಇದ್ದಾರೆ. ಜನರ ನೋವು ಒಳಗಡೆ ತೆಗೆದುಕೊಂಡಿದ್ದಾರೆ ಅಂತಾ ಹೇಳಬಹುದು. ಆದ್ರೇ ನೀವು ಸಿಎಂ ಅಳ್ತಾರೆ ಅಳ್ತಾರೆ ಅಂತಾ ಹೇಳಿದ್ರೇ ಹೇಗ್ ಆಗುತ್ತೆ. ಅಳು ಅವರ ಹೃದಯದಿಂದ ಬಂದಿದ್ದು, ಅವರೇನು ಅಶಕ್ತರೇನಲ್ಲ ಶಕ್ತರೆ ಅಂತ ಅವರು ತಿಳಿಸಿದ್ರು.

    ಇದೇ ವೇಳೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಟ್ವೀಟ್ ಗೆ ಟಾಂಗ್ ಕೊಟ್ಟ ಜಾರ್ಜ್, ಜೇಟ್ಲಿಯವರು ಬಿಜೆಪಿಯವರು. ಕುಮಾರಸ್ವಾಮಿ ಸ್ಟ್ರಾಂಗ್ ಇದ್ದಾರೆ ಸಮ್ಮಿಶ್ರ ಸರ್ಕಾರ ಸ್ಟ್ರಾಂಗ್ ಆಗಿದೆ ಅಂತಾ ಬಿಜೆಪಿಯವರು ಹೇಳ್ತಾರಾ ಹೇಳಲ್ಲ. ಅವರು ರಾಜಕೀಯ ಉದ್ದೇಶ ಇಟ್ಟುಕೊಂಡೇ ಮಾತನಾಡುತ್ತಾರೆ. ಅವರ ಅಭಿಪ್ರಾಯ ಹೇಳಿದ್ದಾರೆ ಅದಕ್ಕೆಲ್ಲಾ ನಾವು ಉತ್ತರ ಕೊಡಲು ಆಗಲ್ಲ ಅಂದ್ರು. ಇದನ್ನೂ ಓದಿ: ನೀವು ಅತ್ತರೆ ನಮಗೂ ಅಳು ಬರುತ್ತೆ – ಹೆಚ್‍ಡಿಕೆಗೆ ಧೈರ್ಯ ತುಂಬಿದ ಹಾಸನ ಬಾಲಕಿ

    ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ ಚಳುವಳಿ ಸಮರ್ಥಿಸಿಕೊಂಡ ಜಾರ್ಜ್, ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷರಿದ್ದಾರೆ. ಪತ್ರದ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಸಮಸ್ಯೆಗಳನ್ನ ಪತ್ರದ ಮೂಲಕ ಹೇಳುತ್ತಿದ್ದಾರೆ ಎಂದರು.

  • 10 ವರ್ಷ ನನ್ನನ್ನು ಚುಚ್ಚಿದ್ರು, ಈಗ ಜನರೆ ನನ್ನ ಹಣೆಬರಹ ಬದಲಾಯಿಸಿದ್ರು: ಲಕ್ಷ್ಮೀ ಹೆಬ್ಬಾಳ್ಕರ್

    10 ವರ್ಷ ನನ್ನನ್ನು ಚುಚ್ಚಿದ್ರು, ಈಗ ಜನರೆ ನನ್ನ ಹಣೆಬರಹ ಬದಲಾಯಿಸಿದ್ರು: ಲಕ್ಷ್ಮೀ ಹೆಬ್ಬಾಳ್ಕರ್

    ಬೆಳಗಾವಿ: ಕಳೆದ 10 ವರ್ಷ ಕೆಲವರು ನನ್ನನ್ನು ವ್ಯಂಗ್ಯ ಮಾತುಗಳಿಂದ ಚುಚ್ಚಿದರು. ಆದರೆ ಈ ಭಾರೀ ಕ್ಷೇತ್ರ ಮತದಾರರು ನನ್ನ ಹಣೆಬರಹ ಬರೆದಿದ್ದಾರೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಶಾಸಕ ಸಂಜಯ್ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    2013ರ ವಿಧಾನಸಭೆ ಹಾಗೂ 2014ರ ಲೋಕಸಭೆ ಚುನಾವಣೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸೋತಿದ್ದು, ಈ ಬಾರಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಿಂದ ಗೆಲವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಅಭಿನಂದನಾ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

    ಅಭಿನಂದನಾ ಕಾರ್ಯಕ್ರಮದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವು ಚುನಾವಣೆಯಲ್ಲಿ ಸೋತಾಗ ಚುಚ್ಚು ಮಾತನಾಡಿದ್ದರು. ಆದರೆ ನಾನು ಹಾಗೇ ಮಾಡಲ್ಲ ಎಂದು ಪರೋಕ್ಷವಾಗಿ ಸಂಜಯ್ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದರು.

    ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ವದಂತಿಗೆ ಪ್ರತಿಕ್ರಿಯೆ ನೀಡಿದ ಶಾಸಕಿ, ಯಾವುದೇ ಕಾರಣಕ್ಕೂ ನಾನು 2019ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಬೆಳಗಾವಿ ಗ್ರಾಮೀಣ ಮತಕ್ಷೇತ್ರ ಬಿಟ್ಟು ಹೋಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

  • ಪೊಲೀಸರ ಮನೆಯ ಕಬ್ಬಿಣ ಕದ್ದು ಸಿಕ್ಕಿಬಿದ್ದ ವಕೀಲ!

    ಪೊಲೀಸರ ಮನೆಯ ಕಬ್ಬಿಣ ಕದ್ದು ಸಿಕ್ಕಿಬಿದ್ದ ವಕೀಲ!

    ಚಿಕ್ಕೋಡಿ: ಪೊಲೀಸರೊಬ್ಬರು ಮನೆ ಕಟ್ಟಲು ತಂದಿಟ್ಟಿದ್ದ ಕಬ್ಬಿಣವನ್ನು ವಕೀಲನೊಬ್ಬ ಕದ್ದ ಅಚ್ಚರಿಯ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.

    ಜಿಲ್ಲೆಯ ಅಥಣಿ ಪಟ್ಟಣದ ಸತ್ಯಪ್ರಮೋದ ನಗರದ ಪೊಲೀಸ್ ಪೇದೆ ಮಲ್ಲಿಕಾರ್ಜುನ ಗುಟ್ಟೋಳಗಿ ಎಂಬುವರ ಮನೆ ನಿರ್ಮಾಣದ ಹಂತದಲ್ಲಿತ್ತು. ಕಟ್ಟಡ ನಿರ್ಮಾಣಕ್ಕೆ ಮನೆಯ ಪಕ್ಕದಲ್ಲಿ ಕಬ್ಬಿಣವನ್ನು ತಂದು ಹಾಕಲಾಗಿತ್ತು. ಇದನ್ನೇ ಕಾಯುತ್ತಿದ್ದ ವಕೀಲ ರಮೇಶ್ ಪಡಸಲಗಿ (38) ಪೊಲೀಸರ ಮನೆಯ 1 ಟನ್ ಕಬ್ಬಿಣವನ್ನೇ ಕಳ್ಳತನ ಮಾಡಿದ್ದಾನೆ.

    ರಾತ್ರಿ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದ ವಕೀಲನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ವಕೀಲ ಕಬ್ಬಿಣದ ಜೊತೆಗೆ ಸೋಲಾರ್ ಯಂತ್ರವನ್ನೂ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಅಥಣಿ ಪೊಲೀಸ್ ಠಾಣೆಯಲ್ಲಿ ವಕೀಲ ರಮೇಶ್ ವಿರುದ್ಧ ಐಪಿಸಿ ಸೆಕ್ಷನ್ 379 ಅಡಿ(ಕಳ್ಳತನಕ್ಕೆ ದಂಡನೆ) ಪ್ರಕರಣ ದಾಖಲಿಸಲಾಗಿದೆ.

    ಪೊಲೀಸರು ಕಳ್ಳ ವಕೀಲ ರಮೇಶ್ ಕದ್ದ 3 ಲಕ್ಷ ರೂ ಮೌಲ್ಯದ ಕಬ್ಬಿಣ ಹಾಗೂ ಸೋಲಾರ್ ಯಂತ್ರವನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ವಕೀಲನ ವಿರುದ್ಧ ಕೇಸ್ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಆರೋಪಿ ವಕೀಲ ರಮೇಶ್ ಗೆ ಅಥಣಿ ನ್ಯಾಯಾಲಯ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.

  • ಮದುವೆಯಾಗಿ ವರ್ಷ ಕಳೆದರೂ ಮಕ್ಕಳಾಗಲಿಲ್ಲ ಅಂತಾ ಕಿರುಕುಳ ನೀಡಿದ ಪತಿ: ಆತ್ಮಹತ್ಯೆ ಶರಣಾದ ಪತ್ನಿ

    ಮದುವೆಯಾಗಿ ವರ್ಷ ಕಳೆದರೂ ಮಕ್ಕಳಾಗಲಿಲ್ಲ ಅಂತಾ ಕಿರುಕುಳ ನೀಡಿದ ಪತಿ: ಆತ್ಮಹತ್ಯೆ ಶರಣಾದ ಪತ್ನಿ

    ಬೆಳಗಾವಿ: ಪತಿಯ ಮನೆಯವರ ಕಿರುಕುಳ ತಾಳಲಾರದೆ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ತಾಲೂಕಿನ ಯರಮಳಾ ಗ್ರಾಮದಲ್ಲಿ ನಡೆದಿದೆ.

    ಸುರೇಖಾ ತಳವಾರ(24) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಸುರೇಖಾ ಅವರು ಒಂದೂವರೆ ವರ್ಷದ ಹಿಂದಷ್ಟೇ ಯರಮಳಾ ಗ್ರಾಮದ ಪರಶುರಾಮ್ ಎಂಬವರ ಜೊತೆ ಮದುವೆಯಾಗಿದ್ದರು.

    ಮದುವೆಯಾಗಿ ಒಂದೂವರೆ ವರ್ಷವಾದರೂ ನಿನಗೆ ಮಕ್ಕಳು ಆಗಲಿಲ್ಲ ಎಂದು ಸುರೇಖಾ ಅವರಿಗೆ ಪತಿ ಪರಶುರಾಮ್, ಅತ್ತೆ ಹಾಗೂ ಮಾವ ನಿತ್ಯವೂ ಕಿರುಕುಳ ನೀಡುತ್ತಿದ್ದರು. ಇದರಿಂದಾಗಿ ಮನನೊಂದ ಸುರೇಖಾ ಬುಧವಾರ ರಾತ್ರಿ ಪತಿಯ ಮನೆಯಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುರೇಖಾ ಸಂಬಂಧಿಕರು ಆರೋಪಿಸಿದ್ದಾರೆ.

    ಈ ಕುರಿತು ಸುರೇಖಾ ಪತಿ ಪರಶುರಾಮ್, ಅತ್ತೆ ಹಾಗೂ ಮಾವನ ವಿರುದ್ಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅನಾರೋಗ್ಯದಿಂದ ಚಿಕ್ಕೋಡಿಯ ಯೋಧ ನಿಧನ-ನಾಳೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ

    ಅನಾರೋಗ್ಯದಿಂದ ಚಿಕ್ಕೋಡಿಯ ಯೋಧ ನಿಧನ-ನಾಳೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ

    ಚಿಕ್ಕೋಡಿ: ಅನಾರೋಗ್ಯದಿಂದ ಚಿಕಿತ್ಸೆ ಫಲಕಾರಿಯಾಗದೇ ಹುಕ್ಕೇರಿ ತಾಲೂಕಿನ ಶಿರಢಾಣ ಗ್ರಾಮದ ಯೋಧರೊಬ್ಬರು ಅಸ್ಸಾಂನಲ್ಲಿ ಮೃತಪಟ್ಟಿದ್ದಾರೆ.

    ಸುನೀಲ್ ಕುಮಾರ್ ಶೆಟ್ಟಿಮನಿ (34) ಮೃತಪಟ್ಟ ಯೋಧ. ಅಸ್ಸಾಂನಲ್ಲಿ ಬಾರ್ಡರ್ ರೋಡ್ ಟಾಸ್ಕ್ ಫೋರ್ಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಸುನೀಲ್ ಕುಮಾರ್ ಒಂದು ವಾರದಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಯೋಧ ಸಾವನ್ನಪ್ಪಿದ್ದಾರೆ.

    ಕಳೆದ 15 ವರ್ಷದಿಂದ ಬಾರ್ಡರ್ ರೋಡ್ ಟಾಸ್ಕ್ ಫೋರ್ಸ್ ನಲ್ಲಿ ಯೋಧ ಸುನೀಲ್ ಕುಮಾರ್ ಸೇವೆ ಸಲ್ಲಿಸುತ್ತಿದ್ದರು. ಅರುಣಾಚಲ ಪ್ರದೇಶದಿಂದ ಸ್ವ ಗ್ರಾಮಕ್ಕೆ ಯೋಧನ ಪಾರ್ಥಿವ ಶರೀರ ತರಲಾಗುತ್ತಿದ್ದು, ಮಂಗಳವಾರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಗಳಿವೆ.

  • ತಮಾಷೆ ಮಾಡಲು ಹೋಗಿ ಗೋಕಾಕ್ ಫಾಲ್ಸ್ ನಲ್ಲಿ ಬಿದ್ದು ಮೃತಪಟ್ಟಿದ್ದ ಯುವಕನ ಶವ ಪತ್ತೆ

    ತಮಾಷೆ ಮಾಡಲು ಹೋಗಿ ಗೋಕಾಕ್ ಫಾಲ್ಸ್ ನಲ್ಲಿ ಬಿದ್ದು ಮೃತಪಟ್ಟಿದ್ದ ಯುವಕನ ಶವ ಪತ್ತೆ

    ಬೆಳಗಾವಿ: ಗೋಕಾಕ್ ಜಲಪಾತದಲ್ಲಿ ಬಿದ್ದು ಸಾವನ್ನಪ್ಪಿದ್ದ ಯುವಕನ ಶವ ಸೋಮವಾರ ಮಧ್ಯಾಹ್ನ ಪತ್ತೆಯಾಗಿದೆ.

    ಜಿಲ್ಲೆಯ ಗೋಕಾಕ್ ಪಟ್ಟಣದ ಹೊರವಲಯದಲ್ಲಿರು ಫಾಲ್ಸ್ ನಲ್ಲಿ ಎರಡು ದಿನಗಳ ಹಿಂದೆ ಸ್ನೇಹಿತರೊಂದಿಗೆ ತಮಾಷೆಮಾಡಲು ಹೋಗಿ ಘಟಪ್ರಭಾ ನಿವಾಸಿ ರೆಹೆಮಾನ್ ಉಸ್ಮಾನ್ ಖಾಜಿ (35) ಎಂಬ ಯುವಕ ಜಲಪಾತದಲ್ಲಿ ಜಾರಿ ಬಿದ್ದು ಸಾವನ್ನಪ್ಪಿದ್ದ.

    ಯುವಕನ ಶವಕ್ಕಾಗಿ ಕಳೆದ ಎರಡು ದಿನಗಳಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸುತ್ತಿತ್ತು. ಆಳ ಹೆಚ್ಚಾಗಿದ್ದರಿಂದ ಶವ ಪತ್ತೆ ಕಾರ್ಯಕ್ಕೆ ಜಲಪಾತದ ಕೆಳಗೆ ಇಳಿಯಲಾಗದೇ ಸಾಕಷ್ಟು ಅಡಚಣೆಯಾಗಿತ್ತು. ಆದರೆ ಸತತ ಎರಡು ದಿನಗಳ ಕಾರ್ಯಾಚರಣೆ ನಂತರ ಶವವನ್ನು ಹೊರತೆಗೆಯುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

  • 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

    10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

    ಬೆಳಗಾವಿ: ಪ್ರೌಢಶಾಲಾ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟೆನೆ ಜಿಲ್ಲೆಯ ಅಥಣಿ ತಾಲೂಕಿನ ಚಮಕೇರಿ ಗ್ರಾಮದಲ್ಲಿ ನಡೆದಿದೆ.

    ಜಯವಂತ ಮಗದುಮ (17) ಮೃತಪಟ್ಟ ವಿದ್ಯಾರ್ಥಿಯಾಗಿದ್ದು, ಇವರು ವಿಜಯಪುರ ಜಿಲ್ಲೆಯ ಕೆಂಗಲಗುತ್ತಿ ಗ್ರಾಮದಲ್ಲಿ ನಿವಾಸಿ. ಜಯವಂತ ಚಮಕೇರಿ ಗ್ರಾಮದಲ್ಲಿರುವ ಶ್ರೀ ಶಿವಲಿಂಗೇಶ್ವರ ಪ್ರೌಢ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದಾನೆ.

    ಶಾಲೆಗೆ ಹೋಗಲು ಇಷ್ಟವಿಲ್ಲದಿದ್ದರೂ ಪೋಷಕರು ಬಲವಂತವಾಗಿ ಜುಯವಂತನನ್ನು ಶಾಲೆಗೆ ಕಳುಹಿಸಿರುವುದರಿಂದ ಮನನೊಂದಿದ್ದನು ಎನ್ನಲಾಗಿದೆ. ಹೀಗಾಗಿ ಶಾಲೆಗೆ ಹೋಗಲು ಇಷ್ಟವಿಲ್ಲದೇ ಶನಿವಾರ ಶಾಲಾ ವಸತಿನಿಲಯದ ಆವರಣದಲ್ಲಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    ಘಟನೆ ಸಂಬಂಧ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವೀರಶೈವರ ಜೊತೆಗೆ ಲಿಂಗಾಯತರು ಸೇರಲ್ಲ: ಸಿದ್ದರಾಮ ಸ್ವಾಮೀಜಿ

    ವೀರಶೈವರ ಜೊತೆಗೆ ಲಿಂಗಾಯತರು ಸೇರಲ್ಲ: ಸಿದ್ದರಾಮ ಸ್ವಾಮೀಜಿ

    ಬೆಳಗಾವಿ: ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಹಿಂದುತ್ವ ಪ್ರತಿಪಾದಕ ಪಕ್ಷದಿಂದ ವಿರೋಧ ವ್ಯಕ್ತವಾಗುತ್ತಿದೆ ಎಂದು ನಾಗನೂರು ರುದ್ರಾಕ್ಷಿ ಮಠದ ಡಾ. ಸಿದ್ದರಾಮ ಸ್ವಾಮೀಜಿಗಳು ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೈನ, ಸಿಖ್, ಬೌದ್ಧ ಧರ್ಮೀಯರು ಸ್ವತಂತ್ರವಾಗಿ ಪ್ರತ್ಯೇಕ ಧರ್ಮ ಮಾಡಿಕೊಂಡಿದ್ದಾರೆ. ಆದರೆ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಹಿಂದುತ್ವ ಪ್ರತಿಪಾದಕರು ಅಡ್ಡಿಪಡಿಸುತ್ತಿದ್ದಾರೆಂದು ಹೇಳಿದರು.

    ಕೇಂದ್ರ ಸರ್ಕಾರಕ್ಕೆ ರಾಜ್ಯ ಕಳುಹಿಸಿರುವ ಶಿಫಾರಸ್ಸನ್ನು ಪ್ರಧಾನಿ ಮೋದಿ ಅವರು ಸಚಿವ ಸಂಪುಟದಲ್ಲಿ ಚರ್ಚಿಸಿ ಮಾನ್ಯತೆ ನೀಡಬೇಕು. ಈಗಾಗಲೇ ಕೇಂದ್ರ ಸರ್ಕಾರವು ವರದಿಯನ್ನು ವಾಪಸ್ ಕಳುಹಿಸಿದೆ ಎಂದು ಕೆಲವರಿಂದ ವದಂತಿ ಹರಡುತ್ತಿದೆ. ಇದರಿಂದ ಲಿಂಗಾಯತ ಪ್ರತ್ಯೆಕ ಧರ್ಮ ವಿರೋಧಿಗಳು ಸಂಭ್ರಮಿಸುತ್ತಿದ್ದಾರೆ. ಇದೆಲ್ಲ ಲಿಂಗಾಯತ ಚಳುವಳಿ ಡ್ಯಾಮೆಜ್ ಮಾಡಲು ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಒಂದು ವೇಳೆ ಕೇಂದ್ರ ಸರ್ಕಾರ ಶಿಫಾರಸ್ಸು ವಾಪಸ್ ಕಳುಹಿಸಿದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

    ಕೇಂದ್ರ ಸರ್ಕಾರ ಪ್ರತ್ಯೇಕ ಧರ್ಮ ವಿರೋಧಿಸಿದ್ರೆ, ಮುಂದೆ ಲಿಂಗಾಯತರು ಅವರನ್ನ ವಿರೋಧಿಸುತ್ತಾರೆ. ಇದಕ್ಕೆ ನಿದರ್ಶನ ಕಾಂಗ್ರೆಸ್ 79 ಸ್ಥಾನ ಪಡೆಯಲು ಲಿಂಗಾಯತ ಹೋರಾಟದ ಪ್ರತಿಫಲವಾಗಿದೆ. ಲಿಂಗಾಯತ ಹೋರಾಟದಲ್ಲಿ ಪಾಲ್ಗೊಂಡಿದ್ದ ಕಾರಣ ಕೆಲವರು ಸೋತಿದ್ದಾರೆಂದು ಹೇಳಲಾಗುತ್ತಿದೆ. ಆದರೆ ಅದು ಅವರು ವೈಯಕ್ತಿಕ ಕಾರಣದಿಂದ ಸೋಲು ಅನುಭವಿಸಿದ್ದಾರೆ ಎಂದು ತಿಳಿಸಿದರು.

    ಲಿಂಗಾಯತ ಹೋರಾಟದಲ್ಲಿ ಪಾಲ್ಗೊಂಡಿದ್ದ ಎಂ.ಬಿ. ಪಾಟೀಲ್, ಹಾಗೂ ಬಸವರಾಜ್ ಹೊರಟ್ಟಿಗೆ ಸಚಿವ ಸ್ಥಾನ ಕೈತಪ್ಪಲು ಕಾರಣವಾಗಿದೆ. ಹಿಗಾಗಿ ರಾಜ್ಯ ಸರ್ಕಾರ ಲಿಂಗಾಯತರನ್ನು ಮತ್ತು ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಬಾರದು. ಯಾವುದೇ ಕಾರಣಕ್ಕೂ ಲಿಂಗಾಯತ, ವೀರಶೈವರು ಒಂದಾಗೋದು ಸಾಧ್ಯವಿಲ್ಲ ಹೇಳಿದ್ದಾರೆ.