Tag: Belgaum

  • ಆಕ್ಸಿಸ್ ಬ್ಯಾಂಕ್‍ನಿಂದ ಬೆಳಗಾವಿ ರೈತರೊಬ್ಬರಿಗೆ ಅರೆಸ್ಟ್ ವಾರೆಂಟ್

    ಆಕ್ಸಿಸ್ ಬ್ಯಾಂಕ್‍ನಿಂದ ಬೆಳಗಾವಿ ರೈತರೊಬ್ಬರಿಗೆ ಅರೆಸ್ಟ್ ವಾರೆಂಟ್

    ಬೆಳಗಾವಿ: ರಾಜ್ಯದ ರೈತರ ಜೊತೆ ಮತ್ತೆ ಆಕ್ಸಿಸ್ ಬ್ಯಾಂಕ್ ಕಣ್ಣಾ ಮುಚ್ಚಾಲೆ ಆಟ ಆರಂಭಿಸಿದ್ದು, ಈ ಬಾರಿ ಮತ್ತೆ ಜಿಲ್ಲೆಯ ರೈತರೊಬ್ಬರಿಗೆ ಬಂಧನದ ವಾರೆಂಟ್ ನೀಡಿದೆ.

    ಜಿಲ್ಲೆಯ ಸವದತ್ತಿ ತಾಲೂಕಿನ ಮಾಟೊಳಿ ಗ್ರಾಮದ ರೈತ ರುದ್ರಪ್ಪ ಛಬ್ಬಿ ಎಂಬವರಿಗೆ ಮುರಗೋಡ ಪೊಲೀಸರು ನಿನ್ನೆ ಬಂಧನ ವಾರಂಟ್ ನೀಡಿದ್ದಾರೆ. ಇದರಿಂದಾಗಿ ಗಾಬರಿಗೊಂಡ ರುದ್ರಪ್ಪ ರೈತ ಹೋರಾಟಗಾರರ ಬಳಿ ತಮ್ಮ ತನ್ನ ದುಃಖ ತೋಡಿಕೊಂಡಿದ್ದಾರೆ.

    ಈ ಹಿಂದೆಯೇ ಯಾವುದೇ ಬಂಧನ ವಾರಂಟ್ ನೀಡುವುದಿಲ್ಲ ಎಂದು ಆಕ್ಸಿಸ್ ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದರು. ಆದರೆ ಈಗ ಮತ್ತೆ ರೈತರಿಗೆ ಬಂಧನ ವಾರೆಂಟ್ ನೀಡಲಾಗುತ್ತಿದೆ. ರಾಜ್ಯದ ಕೆಲವು ಭಾಗಗಳಲ್ಲಿ ತೀವ್ರ ಬರಗಾಲ ಎದುರಾಗಿದ್ದು, ರೈತರಿಗೆ ಸಾಲ ಮರುಪಾವತಿ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಇತ್ತೀಚೆಗಷ್ಟೇ ಆಕ್ಸಿಸ್ ಬ್ಯಾಂಕ್ ನೀಡಿದ್ದ ನೋಟಿಸ್‍ಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಅಶೋಖ ಖನಗಾವಿ ಜಯಗಳಿದ್ದಾರೆ. ಈ ಮೂಲಕ ಕೋಲ್ಕತ್ತಾ ಹೈಕೊರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ಹೊರಡಿಸಿದೆ. ಅಶೋಕ ಖನಗಾವಿ ಹೋರಾಟ ರಾಜ್ಯದ ರೈತರಿಗೆ ಮಾದರಿಯಾಗಿದ್ದು, ಈ ಆದೇಶ ಬ್ಯಾಂಕ್‍ಗಳಲ್ಲಿ ಸಾಲ ಪಡೆದಿರುವ ರೈತರಿಗೆ ಅನುಕೂಲವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಎಮ್ಮೆ ಓಡಿಸೋ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಘರ್ಷಣೆ, ಕಲ್ಲು ತೂರಾಟ: ಓರ್ವ ಗಂಭೀರ ಗಾಯ

    ಎಮ್ಮೆ ಓಡಿಸೋ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಘರ್ಷಣೆ, ಕಲ್ಲು ತೂರಾಟ: ಓರ್ವ ಗಂಭೀರ ಗಾಯ

    ಬೆಳಗಾವಿ: ಎಮ್ಮೆ ಓಡಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ವಾಗ್ದಾಳಿ ನಡೆದು, ಬಳಿಕ ಕಲ್ಲು ತೂರಾಟ ನಡೆದ ಪರಿಣಾಮ ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಸರ್ದಾರ್ ಮೈದಾನದಲ್ಲಿ ನಡೆದಿದೆ.

    ದೀಪಾವಳಿ ಬಲಿಪಾಡ್ಯಮಿ ಹಿನ್ನೆಲೆಯಲ್ಲಿ ಸಂಪ್ರದಾಯದಂತೆ ಪ್ರತಿ ವರ್ಷವೂ ಎಮ್ಮೆಗಳನ್ನು ಅಲಂಕಾರ ಮಾಡಿ, ಅವುಗಳನ್ನು ಓಡಿಸಲಾಗುತ್ತದೆ. ಹೀಗಾಗಿ ಸರ್ದಾರ್ ಮೈದಾನದಲ್ಲಿ ಇಂದು ಎಮ್ಮೆ ಓಡಿಸಲಾಗುತ್ತಿತ್ತು. ಇದನ್ನು ನೋಡಲು ಬೆಳಗಾವಿ ನಗರ ಹಾಗೂ ತಾಲೂಕಿನ ವಿವಿಧ ಹಳ್ಳಿಗಳಿಂದ ಸಾವಿರಾರು ಜನರು ಬಂದಿದ್ದರು.

    ಎಮ್ಮೆಗಳಿಗೆ ಮದ್ಯ ಕುಡಿಸಿ, ತಾವೂ ಕುಡಿದು ಯುವಕರು ಎಮ್ಮೆಗಳನ್ನು ಓಡಿಸುತ್ತಿದ್ದರು. ಈ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ಉಂಟಾಗಿದ್ದು, ಕಲ್ಲು ತೂರಾಡಿಕೊಂಡಿದ್ದಾರೆ.

    ಇದರಿಂದ ಎಚ್ಚೆತ್ತುಕೊಂಡ ಪೊಲೀಸರು ಲಘು ಲಾಠಿ ಚಾರ್ಚ್ ಮಾಡಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ಹೋಗಿ 8ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.

    ಕಲ್ಲು ತಾಗಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 22 ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಹಳಿ ಮೇಲೆ ನಿಂತ ಸರ್ಕಾರಿ ಬಸ್ – ಗೇಟ್ ಮನ್ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

    ಹಳಿ ಮೇಲೆ ನಿಂತ ಸರ್ಕಾರಿ ಬಸ್ – ಗೇಟ್ ಮನ್ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

    ಬೆಳಗಾವಿ: ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸೊಂದು ಬ್ರೇಕ್ ಫೇಲ್ ಆದ ಪರಿಣಾಮ ರೈಲ್ವೇ ಹಳಿ ಮೇಲೆ ನಿಂತಿದ್ದು, ಈ ವೇಳೆ ಗೇಟ್‍ಮನ್ ಸಮಯಪ್ರಜ್ಞೆಯಿಂದಾಗಿ ನಡೆಯಬಹುದಾದ ಭಾರೀ ಅನಾಹುತ ತಪ್ಪಿದೆ.

    ಜಿಲ್ಲೆಯ ಖಾನಾಪುರ ತಾಲೂಕಿನ ಗೋದಗೇರಿ ಗ್ರಾಮದಲ್ಲಿ ಘಟನೆ ನಡೆದಿದ್ದು, ರೈಲು ಬರುವ ವೇಳೆ ಮುಚ್ಚಲಾಗಿತ್ತು. ಇದೇ ಮಾರ್ಗದಲ್ಲಿ ಬಂದ 40 ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದ ಬಸ್ಸು ಬ್ರೇಕ್ ಫೇಲ್ ಆಗಿ ರೈಲ್ವೇ ಗೇಟಿಗೆ ಡಿಕ್ಕಿ ಹೊಡೆದು ಬಳಿಕ ಹಳಿ ಮೇಲೆ ನಿಂತಿದೆ. ಇದೇ ವೇಳೆ ರೈಲು ಬರುತ್ತಿರುವುದನ್ನು ಕಂಡ ಗೇಟ್‍ಮನ್ ತಕ್ಷಣ ರೈಲ್ವೇ ಪೈಲಟ್‍ಗೆ ಕೆಂಪು ಬಾವುಟ ತೋರಿಸಿ ತಡೆದಿದ್ದಾರೆ. ಇದರಿಂದ ಬಸ್ಸಿನಲ್ಲಿದ್ದ ಅಷ್ಟು ಪ್ರಯಾಣಿಕರ ಜೀವ ಉಳಿದಿದೆ.

    ರೈಲು ಬರುವುದನ್ನು ಕಂಡು ಕರ್ತವ್ಯ ಪ್ರಜ್ಞೆಯನ್ನು ತೋರಿದ ರೈಲ್ವೇ ಗೇಟ್‍ಮನ್ ಕಾರ್ಯಕ್ಕೆ ಸದ್ಯ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಸರಿಯಾಗಿ ಬಸ್ ನಿರ್ವಹಣೆ ಮಾಡದೇ ಅವಘಡಕ್ಕೆ ಕಾರಣವಾಗುತ್ತಿದ್ದ ಸಾರಿಗೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • Exclusive: ಸಾಲ ನೋಟಿಸ್ ಪಡೆದ ರೈತರಿಗೆ ಪಬ್ಲಿಕ್ ಟಿವಿ ಮೂಲಕ ಎಚ್‍ಡಿಕೆ ಅಭಯ

    Exclusive: ಸಾಲ ನೋಟಿಸ್ ಪಡೆದ ರೈತರಿಗೆ ಪಬ್ಲಿಕ್ ಟಿವಿ ಮೂಲಕ ಎಚ್‍ಡಿಕೆ ಅಭಯ

    ಬೆಂಗಳೂರು: ರೈತರ ಸಾಲಮನ್ನಾ ಘೋಷಣೆಯಾಗಿದ್ದರೂ ಬ್ಯಾಂಕ್ ಗಳು ರೈತರಿಗೆ ನೋಟಿಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ರೈತರಿಗೆ ಅಭಯ ನೀಡಿದ್ದಾರೆ.

    ಪಬ್ಲಿಕ್ ಟಿವಿ ವಿಸ್ತೃತ ವರದಿ ಮಾಡಿ ರೈತರ ಸಮಸ್ಯೆಯನ್ನು ಸಿಎಂ ಕುಮಾರ ಸ್ವಾಮಿ ಅವರ ಗಮನಕ್ಕೆ ತಂದಿತ್ತು. ಸದ್ಯ ಈ ವರದಿಗೆ ಎಚ್ಚೆತ್ತ ಸಿಎಂ ಅವರು ರೈತರ ನೆರವಿಗೆ ಧಾವಿಸಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ರೈತರಿಗೆ ಸಮಸ್ಯೆ ಆಗದಂತೆ ಸರ್ಕಾರ ಸೂಕ್ತ ಕ್ರಮಕೈಗೊಳ್ಳುತ್ತಿದೆ. ಪ್ರಕರಣದಲ್ಲಿ ನೋಟಿಸ್ ನೀಡಿದ ಬ್ಯಾಂಕ್ ಗಳಿಗೆ ರೈತರು ಚೆಕ್ ನೀಡಿದ್ದಾರೆ. ಇದರ ಹಿನ್ನೆಲೆಯಲ್ಲಿ ಅವರು ಕ್ರಮಕ್ಕೆ ಮುಂದಾಗಿದ್ದಾರೆ. ರೈತರು ಟ್ರ್ಯಾಕ್ಟರ್ ಗಳಿಗೆ ಸಾಲ ಮಾಡಿದ್ದು, ಬ್ಯಾಂಕ್ ಸಿಬ್ಬಂದಿ ಕೋಲ್ಕತ್ತಾ ಮೂಲದವರಾಗಿದ್ದು ಆದ್ದರಿಂದ ಅಲ್ಲಿಂದ ನೋಟಿಸ್ ಬಂದಿದೆ ಎಂದು ಸ್ಪಷ್ಟನೆ ನೀಡಿದರು.

    ಸದ್ಯ 23 ಲಕ್ಷ ರೈತರ ಮಾಹಿತಿಯನ್ನು ಬ್ಯಾಂಕ್ ಗಳಿಂದ ಪಡೆದಿದ್ದೇವೆ. ಬೆಳಗಾವಿ ಡಿಸಿ ಅವರಿಗೆ ಕ್ರಮಕೈಗೊಳ್ಳಲು ಸೂಚಿಸಿದ್ದೇನೆ. ಆದರೆ ರೈತರು ಬ್ಯಾಂಕ್ ನೀಡಿದ ನೋಟಿಸ್‍ಗೆ ಪ್ರತಿಕ್ರಿಯೆ ನೀಡದ ಕಾರಣ ಬಂಧನದ ವಾರೆಂಟ್ ನೀಡಿದ್ದಾರೆ. ಸದ್ಯ ಬ್ಯಾಂಕ್ ಸಿಬ್ಬಂದಿ ಜೊತೆ ಮಾತುಕತೆ ನಡೆದಿದ್ದು ಮುಂದೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂಬ ಭರವಸೆ ನೀಡಿದರು.

    ರೈತ ಸಮಾವೇಶ:
    ಇದೇ ತಿಂಗಳಲ್ಲಿ ಸರ್ಕಾರ ವತಿಯಿಂದ ರೈತ ಸಮಾವೇಶ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಈ ವೇಳೆ ರೈತರಿಗೆ ಸಾಲಮನ್ನಾ ಋಣಮುಕ್ತ ಪತ್ರ ನೀಡಲಾಗುವುದು. ಅಲ್ಲದೇ ಸದ್ಯ ಬೆಳೆ ಸಾಲಮನ್ನಾ ಮಾಡಲಾಗಿದ್ದು, 2006 ರಲ್ಲಿ ನಾನೇ ಸಾಲಮನ್ನಾ ಮಾಡಿದ್ದೇನೆ. ಬಳಿಕ ಯುಪಿಎ ಸರ್ಕಾರ ಸಾಲಮನ್ನಾ ಮಾಡಿತ್ತು. 2009ರಿಂದ ಮಾಡಿದ ಬೆಳೆಸಾಲ ಪಡೆದ ರೈತರ ಸಾಲಮನ್ನಾ ಆಗುತ್ತದೆ ಎಂದು ಸ್ಪಷ್ಟನೆ ನೀಡಿದರು.

    ಐಎಎಸ್ ಅಧಿಕಾರಿ ನೇತೃತ್ವದ ಸಮಿತಿ ರಚಿಸಿ ಮಾಹಿತಿ ಪಡೆಯಲಾಗಿದೆ. ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನ.7ರಂದು ಡಿಸಿಗಳ ಸಭೆ ಇದೆ. ಅದ್ದರಿಂದ ಈ ಕುರಿತು ಮತ್ತಷ್ಟು ಸೂಚನೆ ನೀಡಲಾಗುವುದು. ಅಲ್ಲದೇ ಬ್ಯಾಂಕ್ ನೋಟಿಸ್ ನೀಡುವ ವೇಳೆ ಕರ್ನಾಟಕದಲ್ಲೇ ದೂರು ದಾಖಲಿಸಲು ಸೂಚನೆ ನೀಡಲಾಗುವುದು ಎಂದರು.

    ಮಾಹಿತಿ ಸಂಗ್ರಹ ತಡ:
    ಸರ್ಕಾರ ರೈತರ ಸಾಲಮನ್ನಾ ಮಾಡುವ ವೇಳೆ ಕೆಲ ರಾಷ್ಟ್ರೀಯ ಬ್ಯಾಂಕ್ ಗಳು ಸಹಕಾರ ನೀಡಲಿಲ್ಲ. ಆದರೆ ಬಳಿಕ ಸರ್ಕಾರ ದಿಟ್ಟ ತೀರ್ಮಾನ ಮಾಡಿ ಚರ್ಚೆ ನಡೆಸಿದ ಬಳಿಕ ಮಾಹಿತಿ ನೀಡಲು ಮುಂದಾಗಿದ್ದಾರೆ. ಎಲ್ಲವೂ ಅಂತಿಮ ಹಂತದಲ್ಲಿ ಇದ್ದು ರೈತರು ಆತಂಕಪಡುವ ಅಗತ್ಯವಿಲ್ಲ ಎಂದರು.

    ಸರ್ಕಾರ ಸಾಲಮನ್ನಾ ಮಾಡುತ್ತಿರುವುದು ಕೇವಲ ಬೆಳೆಸಾಲಮನ್ನಾ ಅಷ್ಟೇ. ಆದರೆ ಸದ್ಯ ರೈತರು ಟ್ರ್ಯಾಕ್ಟರ್, ಚಿನ್ನ ಸೇರಿದಂತೆ ಇತರೆ ಮೂಲಗಳ ಮೇಲೆ ಸಾಲ ಮಾಡಿರುವ ಬಡ್ಡಿಮನ್ನಾ ಮಾಡಲು ಸಿದ್ಧರಿದ್ದು, ರೈತರು ಇಂತಹ ಹಂತದಲ್ಲಿ ಪೂರ್ಣಪ್ರಮಾಣದಲ್ಲಿ ಸಾಲ ಪಾವತಿ ಮಾಡಿ ಉಪಯೋಗ ಪಡೆದುಕೊಳ್ಳಬೇಕಿದೆ ಎಂದು ಮನವಿ ಮಾಡಿದರು. ಬೆಳಗಾವಿಯಲ್ಲಿ ನಡೆಯುವ ಬ್ಯಾಂಕ್ ಅಧಿಕಾರಿಗಳ ಸಭೆ ಇಡೀ ನಾಡಿಗೆ ಅನ್ವಯಿಸುತ್ತದೆ. ನಿಮ್ಮ ವಾಹಿನಿಯ ವರದಿ ಮೇಲೆಯೇ ನಾನು ಬಹುಬೇಗ ತಕ್ಷಣ ಕ್ರಮಕೈಗೊಂಡಿದ್ದೇನೆ. ನಾಡಿನ ಎಲ್ಲಾ ರೈತರು ಸಮಸ್ಯೆ ಉಂಟಾದರೆ ಜಿಲ್ಲಾಧಿಕಾರಿಗಳಿಗೆ ನೇರ ವರದಿ ಮಾಡಿ ಎಂದು ಸಲಹೆ ನೀಡಿದರು.

    ನಾನು ರೈತರ ಸಾಲಮನ್ನಾ ಮಾಡಲು ನಾನು ಮೂರು, ನಾಲ್ಕು ವರ್ಷ ತೆಗೆದುಕೊಂಡಿಲ್ಲ. ಆದರೆ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಸಾಲಮನ್ನಾ ಯೋಜನೆ ಏನಾಗಿದೆ ನನಗೆ ಗೊತ್ತಿದೆ. ಈ ಕುರಿತು ರಾಜ್ಯ ಬಿಜೆಪಿ ಮುಖಂಡರು ಉತ್ತರಿಸಲಿ ಎಂದು ಸಿಎಂ ಸವಾಲು ಎಸೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರೈತನ ಬಾಗಿಲಿಗೆ ಕೋಲ್ಕತಾ ಕೋರ್ಟಿನಿಂದ ಅರೆಸ್ಟ್ ವಾರೆಂಟ್

    ರೈತನ ಬಾಗಿಲಿಗೆ ಕೋಲ್ಕತಾ ಕೋರ್ಟಿನಿಂದ ಅರೆಸ್ಟ್ ವಾರೆಂಟ್

    ಬೆಳಗಾವಿ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಎಚ್ಚರಿಕೆಯನ್ನು ನೀಡಿದ್ದರೂ ಅವರು ಮಾತನ್ನು ತಿರಸ್ಕರಿಸಿ ಕೋಲ್ಕತ್ತಾದ ಕೋರ್ಟ್ ರೈತರ ಮನೆ ಬಾಗಿಲಿಗೆ ಅರೆಸ್ಟ್ ವಾರೆಂಟ್ ಕಳುಹಿಸಿದೆ.

    ಬೆಳಗಾವಿಯ ಬೈಲಹೊಂಗಲ ನಗರದ ಅಕ್ಸಿಸ್ ಬ್ಯಾಂಕ್‍ನಲ್ಲಿ ಸಾಲ ಪಡೆದ 180 ಕ್ಕೂ ಹೆಚ್ಚು ರೈತರ ವಿರುದ್ಧ ಅರೆಸ್ಟ್ ವಾರೆಂಟ್ ಬಂದಿದೆ. ರೈತರಿಗೆ ಯಾವುದೇ ನೋಟಿಸ್, ಅರೆಸ್ಟ್ ವಾರೆಂಟ್ ಕಳಿಸೋದಿಲ್ಲ ಎಂದು ಮೊಸಳೆ ಕಣ್ಣಿರು ಹಾಕಿದ್ದ ಅಕ್ಸಿಸ್ ಬ್ಯಾಂಕ್ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ವಚನ ನೀಡಿದ್ದು ಇದೀಗ ಮತ್ತೆ ಉಡಾಫೆ ವರ್ತನೆಯನ್ನು ತೋರಿದೆ.

    ಕಳೆದ ತಿಂಗಳ ಕೋರ್ಟ್ ಕೇಸಿಗೆ ಹಾಜರಿರದ ಸವದತ್ತಿ ತಾಲೂಕಿನ ಏಣಗಿ ಗ್ರಾಮದ ರೈತರಿಗೆ ಸವದತ್ತಿ ಠಾಣೆಯಿಂದ ಅರೆಸ್ಟ್ ವಾರೆಂಟ್ ಬಂದಿತ್ತು. ಗ್ರಾಮದಲ್ಲಿ ರೈತರಿಗಾಗಿ ಹುಡುಕಾಟ ನಡೆಯುತ್ತಿದ್ದು, ಸರ್ಕಾರದ ಆದೇಶಕ್ಕೆ ಅಕ್ಸಿಸ್ ಬ್ಯಾಂಕ್ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಪೊಲೀಸ್ ಜಿಲ್ಲಾ ವರಷ್ಠಾಧಿಕಾರಿಗಳು ನೀಡಿದ ಎಚ್ಚರಿಕೆಯನ್ನು ಮರೆತು ಅವರ ಕಚೇರಿಯಿಂದ ಅ.9 ಕ್ಕೆ ಅರೆಸ್ಟ್ ವಾರೆಂಟ್ ಹೊರಬಂದಿದೆ. ಸದ್ಯಕ್ಕೆ ಅನ್ನದಾತರಲ್ಲಿ ಬಂಧನದ ಭೀತಿ ಉಂಟಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪತ್ನಿ, ಇಬ್ಬರು ಮಕ್ಕಳನ್ನು ಹತ್ಯೆಗೈದ ಆರೋಪಿಗೆ ಗಲ್ಲು ಶಿಕ್ಷೆ

    ಪತ್ನಿ, ಇಬ್ಬರು ಮಕ್ಕಳನ್ನು ಹತ್ಯೆಗೈದ ಆರೋಪಿಗೆ ಗಲ್ಲು ಶಿಕ್ಷೆ

    ಬೆಳಗಾವಿ: ವರದಕ್ಷಿಣೆಗಾಗಿ ಪತ್ನಿ, ಇಬ್ಬರು ಮಕ್ಕಳಿಗೆ ಬೆಂಕಿ ಹಚ್ಚಿ ಹತ್ಯೆಗೈದಿದ್ದ ಆರೋಪಿ ಪತಿಗೆ ಗಲ್ಲು ಶಿಕ್ಷೆ ವಿಧಿಸಿ 6ನೇ ಅಪರ ಜಿಲ್ಲಾ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

    ಸವದತ್ತಿ ತಾಲೂಕಿನ ಅಚ್ಚಮನಟ್ಟಿ ಗ್ರಾಮದ ರವಿ ಪ್ರಜಾರ ಗಲ್ಲು ಶಿಕ್ಷೆಗೆ ಗುರಿಯಾದ ಆರೋಪಿ. ಪತ್ನಿ ಕಮಲವ್ವಾ, ಮಕ್ಕಳಾದ ಗೀತಾ (4) ಹಾಗೂ ಆಕಾಶ್ (2) ಕೊಲೆಯಾದ ದುರ್ದೈವಿಗಳು. ಕೃತ್ಯಕ್ಕೆ ಸಹಾಯ ನೀಡಿದ್ದ ರವಿ ತಾಯಿ ಹಾಗೂ ಸಹೋದರನಿಗೆ 7 ವರ್ಷ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.

    ಏನಿದು ಪ್ರಕರಣ?:
    ಮದುವೆ ವೇಳೆ ಬಾಕಿ ಉಳಿದಿದ್ದ 10 ಸಾವಿರ ರೂ. ವರದಕ್ಷಿಣೆ ತರುವಂತೆ ಪತ್ನಿ ಕಮಲವ್ವಾ ಅವರಿಗೆ ರವಿ ಒತ್ತಾಯಿಸುತ್ತಿದ್ದ. ಈ ಸಂಬಂಧ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಕೊಲೆಗೆ ಸಂಚು ರೂಪಿಸಿದ್ದ ರವಿ, ಜುಲೈ 8, 2012 ರಂದು ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಇಟ್ಟಿದ್ದ. ಗಂಭೀರ ಗಾಯಗೊಂಡಿದ್ದ ಪತ್ನಿ ಹಾಗೂ ಮಕ್ಕಳು ಮೃತಪಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹುತಾತ್ಮ ಯೋಧನ ಅಂತ್ಯಕ್ರಿಯೆಗೆ ಸರ್ಕಾರಿ ಜಾಗ ನೀಡಲು ತಹಶೀಲ್ದಾರ್ ನಿರಾಕರಣೆ!

    ಹುತಾತ್ಮ ಯೋಧನ ಅಂತ್ಯಕ್ರಿಯೆಗೆ ಸರ್ಕಾರಿ ಜಾಗ ನೀಡಲು ತಹಶೀಲ್ದಾರ್ ನಿರಾಕರಣೆ!

    – ತಹಶೀಲ್ದಾರ್ ಕಚೇರಿ ಮೇಲೆ ಕಲ್ಲು ತೂರಿದ ದುಷ್ಕರ್ಮಿಗಳು

    ಬೆಳಗಾವಿ: ಹುತಾತ್ಮ ವೀರ ಯೋಧ ಉಮೇಶ್ ಹೆಳವರ್ ಅವರ ಅಂತ್ಯಕ್ರಿಯೆಗೆ ಸರ್ಕಾರಿ ಜಾಗ ನೀಡಬೇಕು ಅಂತಾ ಒತ್ತಾಯಿಸಿ ಕೆಲ ದುಷ್ಕರ್ಮಿಗಳು ಗೋಕಾಕ್ ತಹಶೀಲ್ದಾರ್ ಕಚೇರಿಗೆ ಕಲ್ಲು ತೂರಿದ್ದಾರೆ.

    ಅಂತ್ಯಸಂಸ್ಕಾರಕ್ಕೆ ಸರ್ಕಾರಿ ಜಾಗ ನೀಡದ್ದಕ್ಕೆ ಕೋಪಗೊಂಡ ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಗೂ ಮುಖಂಡರು ತಹಶೀಲ್ದಾರ್ ಕಚೇರಿ ಮುಂದೆ ಧರಣಿ ನಡೆಸಿದರು. ಈ ವೇಳೆ ಕೆಲ ದುಷ್ಕರ್ಮಿಗಳು ಕಲ್ಲು ತೂರಿ ಪರಾರಿಯಾಗಿದ್ದಾರೆ.

    ದುಷ್ಕರ್ಮಿಗಳ ಪುಂಡಾಟಕ್ಕೆ ತಹಶೀಲ್ದಾರ್ ಕಚೇರಿಯ ಕಿಟಕಿಯ ಗಾಜುಗಳು ಒಡೆದು ಬಿದ್ದಿವೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಗೋಕಾಕ್ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನು ಓದಿ: 20 ಜನರ ಪ್ರಾಣ ಉಳಿಸಿ ಗೋಕಾಕ್‍ನ ವೀರಯೋಧ ಹುತಾತ್ಮ!

    ಉಮೇಶ್ ಉಮೇಶ್ ಅವರು ಬೆಳಗಾವಿ ಜಿಲ್ಲೆಯ ಗೋಕಾಕ್ ಪಟ್ಟಣದ ನಿವಾಸಿಯಾಗಿದ್ದು, ಮಣಿಪುರ ರಾಜ್ಯದ ಇಂಫಾಲದಲ್ಲಿ ಸೇವೆ ಸಲ್ಲಿಸುತ್ತಿದ್ದರು. ನಾಗಂಪಾಲ್ ಎಂಬ ಸ್ಥಳದಲ್ಲಿ ಶನಿವಾರ ಸಂಜೆ ಹ್ಯಾಂಡ್ ಗ್ರೆನೇಡ್ ಸ್ಫೋಟಗೊಂಡು ಮೃತಪಟ್ಟಿದ್ದಾರೆ. ಉಮೇಶ್ ಗ್ರೆನೇಡ್ ಸಮೇತ ಹೊರಗೆ ಹಾರಿ 20 ಜನರ ಪ್ರಾಣ ಉಳಿಸಿ ತಾವು ಹುತಾತ್ಮರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನ್ಯಾಯ ಕೊಡಿಸಿ ಎಂದು ಎಸ್‍ಪಿ ಕಚೇರಿಯಲ್ಲೇ ವಿಷ ಕುಡಿದು ಮಹಿಳೆಯಿಂದ ಆತ್ಮಹತ್ಯೆಗೆ ಯತ್ನ!

    ನ್ಯಾಯ ಕೊಡಿಸಿ ಎಂದು ಎಸ್‍ಪಿ ಕಚೇರಿಯಲ್ಲೇ ವಿಷ ಕುಡಿದು ಮಹಿಳೆಯಿಂದ ಆತ್ಮಹತ್ಯೆಗೆ ಯತ್ನ!

    ಬೆಳಗಾವಿ: ಆಸ್ತಿ ವಿವಾದ ಬಗೆಹರಿಸಿ ತಮಗಿರುವ ಪ್ರಾಣ ಬೆದರಿಕೆಯಿಂದ ರಕ್ಷಣೆ ನೀಡಿ ತಮಗೆ ನ್ಯಾಯ ಕೊಡಿಸಿ ಎಂದು ಮಹಿಳೆಯೊಬ್ಬಳು ಎಸ್.ಪಿ ಕಚೇರಿಯಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ಬೆಳಗಾವಿ ನಗರದ ಅನಂತಶೈನ ಗಲ್ಲಿಯ ನಿವಾಸಿ ಬಸವ್ವ ಕೊಪ್ಪದ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ತಮ್ಮ ತಂದೆಯ ಆಸ್ತಿಯನ್ನ ಬೇರೆಯವರು ಕಬ್ಜಾ ಮಾಡಿಕೊಳ್ಳುತ್ತಿದ್ದಾರೆ ಎಂದು ಕೋರ್ಟ್‌ಗೆ ಹೋಗಿದ್ದಕ್ಕೆ ಅದೇ ಗ್ರಾಮದ ನಿವಾಸಿ ರಾಜು ತಳವಾರ ಎಂಬಾತ ಇವರಿಗೆ ಕೇಸ್ ಮರಳಿ ಪಡೆದುಕೊಳ್ಳುವಂತೆ ಧಮ್ಕಿ ಹಾಕಿದ್ದನಂತೆ. ಹೀಗಾಗಿ ತಂದೆಯ ಆಸ್ತಿಯನ್ನು ಉಳಿಸಿಕೊಡಿ ಎಂದು ಎಸ್‍ಪಿ ಕಚೇರಿಯಲ್ಲಿ ದೂರು ನೀಡಲು ಬಂದಿದ್ದಳು.

    ಎಸ್‍ಪಿ ಕಚೇರಿಯಲ್ಲಿದ್ದ ಪೊಲೀಸ್ ಸಿಬ್ಬಂದಿ ನನ್ನ ದೂರಿಗೆ ಸರಿಯಾಗಿ ಸ್ಪಂದಿಸಿಲ್ಲ ಎಂಬ ಕಾರಣಕ್ಕೆ ಅಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

    ಈ ಕುರಿತು ಎಸ್.ಪಿ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟನೆ ನೀಡಿದ್ದು, ಇದು ಅಕ್ಕ ತಂಗಿಯರ ಜಗಳವಾಗಿದ್ದು ಇದನ್ನ ಬಗೆಹರಿಸಿ ಕಳುಹಿಸಿಕೊಟ್ಟಿದ್ದೆವು. ಇದಕ್ಕೆ ಒಪ್ಪದ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ನಮ್ಮ ಕಚೇರಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಹೀಗಾಗಿ ಆಕೆಯ ಮೇಲೆ ಐಪಿಸಿ ಸೆಕ್ಷನ್ 309(ಆತ್ಮಹತ್ಯೆ ಯತ್ನ) ಅಡಿಯಲ್ಲಿ ದೂರು ದಾಖಲಿಸಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಳ್ಳಂಬೆಳಗ್ಗೆ ಬೆಳಗಾವಿ, ಬಾಗಲಕೋಟೆಯಲ್ಲಿ ಎಸಿಬಿ ದಾಳಿ!

    ಬೆಳ್ಳಂಬೆಳಗ್ಗೆ ಬೆಳಗಾವಿ, ಬಾಗಲಕೋಟೆಯಲ್ಲಿ ಎಸಿಬಿ ದಾಳಿ!

    ಬೆಳಗಾವಿ/ಬಾಗಲಕೋಟೆ: ಅಕ್ರಮ ಆಸ್ತಿ ಗಳಿಕೆಯ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ಬಾಗಲಕೋಟೆ ಮತ್ತು ಬೆಳಗಾವಿಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಬಾಗಲಕೋಟೆ ಗ್ರಾಮೀಣ ಕುಡಿಯೋ ನೀರು ಸರಬರಾಜು ಇಲಾಖೆಯ ಮುಖ್ಯ ಸಹಾಯಕ ಎಂಜನಿಯರ್ ಚಿದಾನಂದ್ ಮಿಂಚನಾಳ್ ಎಂಬವರ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಕಚೇರಿ ಹಾಗೂ ವಿಜಯಪುರದಲ್ಲಿರುವ ಮನೆಯ ಮೇಲೆಯೂ ಏಕಕಾಲಕ್ಕೆ ದಾಳಿ ಮಾಡಿದ್ದಾರೆ.

    ಬಾಗಲಕೋಟೆ ಎಸಿಬಿ ಡಿವೈಎಸ್.ಪಿ ಎಂ.ವಿ ಮಲ್ಲಾಪುರ್ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ವಿಜಯಪುರ ವಜ್ರ ಹನುಮಾನ್ ನಗರ, ಎಂ.ಬಿ ಪಾಟೀಲ್ ನಗರದಲ್ಲಿರುವ ಎರಡು ಮನೆ ಹಾಗೂ ಬಾಗಲಕೋಟೆಯ ಕಚೇರಿ ಮೇಲೆ ದಾಳಿ ಮಾಡಿ ಅಗತ್ಯ ಮಾಹಿತಿ ಕಲೆ ಹಾಕುತ್ತಿದ್ದಾರೆ.

    ಬೆಳಗಾವಿಯಲ್ಲೂ ಕೂಡ ಖಾನಾಪುರ ತಾಲೂಕಿನ ಉಪಅರಣ್ಯ ಸಂರಕ್ಷಣಾ ಅಧಿಕಾರಿಯ ಮನೆ ಮೇಲೆ ದಾಳಿ ಮಾಡಲಾಗಿದೆ. ಎಸಿಬಿ ಎಸ್.ಪಿ ಅಮರನಾಥ ರೆಡ್ಡಿ ನೇತೃತ್ವದಲ್ಲಿ ಬೆಳಗಾವಿಯ ರಾಮತೀರ್ಥ ನಗರದಲ್ಲಿರುವ ಮನೆ, ಸಿಬಿ ಪಾಟೀಲ್ ಎಸಿಎಫ್ ಅಧಿಕಾರಿಯ ಮನೆ ಹಾಗೂ ಖಾನಾಪುರದಲ್ಲಿರುವ ಕಚೇರಿ ಮತ್ತು ಬೈಲಹೊಂಗಲದಲ್ಲಿರುವ ಸಹೋದರ ಮನೆ ಸೇರಿ ಒಟ್ಟು ಮೂರು ಕಡೆ ದಾಳಿ ನಡೆಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಾಗಿಲಿನ ಬೀಗಕ್ಕೆ ಫೆವಿಕ್ವಿಕ್ ಹಾಕಿ ಹಾಡಹಗಲೇ 25 ಲಕ್ಷ ದೋಚಿದ!- ವಿಡಿಯೋ ನೋಡಿ

    ಬಾಗಿಲಿನ ಬೀಗಕ್ಕೆ ಫೆವಿಕ್ವಿಕ್ ಹಾಕಿ ಹಾಡಹಗಲೇ 25 ಲಕ್ಷ ದೋಚಿದ!- ವಿಡಿಯೋ ನೋಡಿ

    ಬೆಳಗಾವಿ: ಮಾಲೀಕನ ಗಮನ ಬೇರೆಡೆ ಸೆಳೆದು ಹಾಡಹಗಲೇ ಚಿನ್ನದಂಗಡಿಗೆ ಕನ್ನ ಹಾಕಿರುವ ಘಟನೆ ಬೆಳಗಾವಿಯ ಕಿತ್ತೂರು ಪಟ್ಟಣದಲ್ಲಿ ನಡೆದಿದೆ.

    ಮಾಲೀಕ ಆನಂದಪಟ್ಟಣ ಗೆ ಸೇರಿದ ಜ್ಯುವೆಲ್ಲರಿ ಅಂಗಡಿಯಲ್ಲಿ ಕಳ್ಳತನ ನಡೆದಿದೆ. ಅಗಂಡಿಗೆ ಎರಡು ಬಾಗಿಲುಗಳಿದ್ದು, ಆನಂದ ಅಂಗಡಿಯ ಮುಖ್ಯ ಬಾಗಿಲನ್ನು ತೆರೆದಿದ್ದಾರೆ. ಬಳಿಕ ಇನ್ನೊಂದು ಬಾಗಿಲ ಬೀಗ ತೆಗೆಯಲು ಕೀಲಿ ಕೈಯನ್ನು ತೆಗೆದುಕೊಂಡು ಹೋದ ವೇಳೆ ಅಂಗಡಿ ಒಳಗೆ ಬಂದ ಕಳ್ಳ ಚೇರ್ ಮೇಲೆ ಇಟ್ಟಿದ್ದ 25 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ಬ್ಯಾಗ್ ಅನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ.

    ಹಣ ದೋಚುವ ಮುನ್ನ ಕಳ್ಳ ಇನ್ನೊಂದು ಬಾಗಿಲ ಬೀಗ ಬೇಗ ಓಪನ್ ಆಗಬಾರದೆಂದು ಫೆವಿಕ್ವಿಕ್ ಹಾಕಿದ್ದನು. ಕಳ್ಳನ ಕೈಚಳಕದ ದೃಶ್ಯಗಳು ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸಂಪೂರ್ಣವಾಗಿ ಸೆರೆಯಾಗಿದೆ.

    ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದು, ಈ ಘಟನೆ ಸಂಬಂಧಪಟ್ಟಂತೆ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=-aGpe5Gv4LI