Tag: Belgaum

  • ಅನುಮತಿ ಇಲ್ಲದೆ ವಿವಾಹ ಆಯೋಜನೆ- 25 ಸಾವಿರ ದಂಡ

    ಅನುಮತಿ ಇಲ್ಲದೆ ವಿವಾಹ ಆಯೋಜನೆ- 25 ಸಾವಿರ ದಂಡ

    ಚಿಕ್ಕೋಡಿ/ಬೆಳಗಾವಿ: ಅನುಮತಿ ಪಡೆಯದೇ ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿ ಮದುವೆ ಸಮಾರಂಭದ ಆಯೋಜಿಸಿದ್ದಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ದಾಳಿ ನಡೆಸಿ ಕುಟಂಬಕ್ಕೆ 25 ಸಾವಿರ ರೂ. ದಂಡ ವಿಧಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಮತನೂರು ಗ್ರಾಮದಲ್ಲಿ ನಡೆದಿದೆ.

    ಕಮತನೂರು ಗ್ರಾಮದ ವರ ಕಾಶಿನಾಥ ಕಾಡಿ ಹಾಗೂ ಅವರಗೋಳ ಗ್ರಾಮದ ವಧು ಕಾಂಚನಾ ಬಾಳಾಜಿ ಅವರ ಮದುವೆಯನ್ನು ಶುಕ್ರವಾರ ಕಮತನೂರು ಗ್ರಾಮದಲ್ಲಿ ಆಯೋಜಿಸಲಾಗಿತ್ತು. ಆದರೆ ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದಿರಲಿಲ್ಲ. ಸಮಾರಂಭದಲ್ಲಿ 510ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು.

    ಈ ಬಗ್ಗೆ ಮಾಹಿತಿ ಪಡೆದ ಗ್ರಾಮ ಪಂಚಾಯಿತಿ ಪಿಡಿಒ ಮಹೇಶ್ ಯಡವನ್ನವರ್ ದಾಳಿ ನಡೆಸಿದ್ದು, ಕೋವಿಡ್-19 ನಿಯಮ ಉಲ್ಲಂಘನೆ ಹಿನ್ನೆಲೆ ರಾಷ್ಟ್ರೀಯ ವಿಪತ್ತು ಕಾಯ್ದೆಯಡಿ ವಧು-ವರರ ಪೋಷಕರಿಂದ ದಂಡ ವಸೂಲಿ ಮಾಡಲಾಗಿದೆ. ದಾಳಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಫಕ್ಕಿರೇಶ್, ಸಿಬ್ಬಂದಿ ಸತೀಶ ಮಗದುಮ್ಮ, ಸಂಜು ನಿಕ್ಕಂ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದು, ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ತೌಕ್ತೆ ಚಂಡಮಾರುತದ ಅಬ್ಬರ- ಬೆಳಗಾವಿಯಲ್ಲಿ ಮನೆ ಕುಸಿದು ಅಜ್ಜಿ, ಮೊಮ್ಮಗ ಸಾವು

    ತೌಕ್ತೆ ಚಂಡಮಾರುತದ ಅಬ್ಬರ- ಬೆಳಗಾವಿಯಲ್ಲಿ ಮನೆ ಕುಸಿದು ಅಜ್ಜಿ, ಮೊಮ್ಮಗ ಸಾವು

    ಬೆಳಗಾವಿ: ತೌಕ್ತೆ ಚಂಡಮಾರುತದ ಅಬ್ಬರ ಜೋರಾಗಿದ್ದು, ರಾಜ್ಯದ ಬಹುತೇಕ ಕಡೆ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಭಾರೀ ಮಳೆಯಿಂದಾಗಿ ಜಿಲ್ಲೆಯ ಖಾನಾಪುರ ತಾಲೂಕಿನ ಇಟಗಿ ಗ್ರಾಮದಲ್ಲಿ ಮನೆ ಕುಸಿದು ಬಿದ್ದಿದ್ದು, ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ.

    ಕಳೆದ ರಾತ್ರಿಯಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಭಾರೀ ಅನಾಹುತ ಸೃಷ್ಟಿಸಿದೆ. ಎಡಬಿಡದೆ ಸುರಿಯುತ್ತಿರುವ ಮಳೆಗೆ ಮನೆ ಕುಸಿದು ಬಿದ್ದಿದ್ದು, ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ದೊಡ್ಡವ್ವಾ ರುದ್ರಪ್ಪಾ ಪಟ್ಟೆದ್(54) ಹಾಗೂ ಮೊಮ್ಮಗ ಅಭಿಷೇಕ್ ಪಟ್ಟೆದ್(3) ಸಾವನ್ನಪ್ಪಿದ್ದಾರೆ.

    ದೊಡ್ಡವ್ವ ಹಾಗೂ ಮೊಮ್ಮಗ ಮನೆಯಲ್ಲೇ ಇದ್ದರು, ಅದೃಷ್ಟವಶಾತ್ ಅಭಿಷೇಕ್ ತಂದೆ, ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರೇ ಶವಗಳನ್ನು ಹೊರ ತೆಗೆದಿದ್ದು, ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಕೊರೊನಾ ವಿಚಾರದಲ್ಲೂ ಎಂಇಎಸ್ ಪುಂಡಾಟ- ಆಸ್ಪತ್ರೆಗೆ ನುಗ್ಗಿ ವೀಡಿಯೋ

    ಕೊರೊನಾ ವಿಚಾರದಲ್ಲೂ ಎಂಇಎಸ್ ಪುಂಡಾಟ- ಆಸ್ಪತ್ರೆಗೆ ನುಗ್ಗಿ ವೀಡಿಯೋ

    ಬೆಳಗಾವಿ: ಕೊರೊನಾ ವಿಚಾರದಲ್ಲೂ ಎಂಇಎಸ್ ಪುಂಡಾಟಿಕೆ ಮೆರೆದಿದ್ದು, ಬ್ರಿಮ್ಸ್ ಆಸ್ಪತ್ರೆಗೆ ನುಗ್ಗಿ ಬೆಡ್‍ಗಳ ಬಳಿ ನೀಂತಿ ವೀಡಿಯೋ ಮಾಡಿಕೊಂಡು, ಪೋಸ್ ನೀಡಿದ್ದಾರೆ.

    ನಗರದ ಬಿಮ್ಸ್ ಆಸ್ಪತ್ರೆಗೆ ನುಗ್ಗಿ ಬೆಡ್‍ಗಳ ಪರಿಶೀಲನೆ ನಡೆಸಿದ್ದು, ಬೆಳಗಾವಿ ಲೋಕಸಭಾ ಉಪಚುನಾವಣೆ ಪರಾಜಿತ ಎಂಇಎಸ್ ಅಭ್ಯರ್ಥಿ ಶುಭಂ ಶೆಲ್ಕೆ ನೇತೃತ್ವದಲ್ಲಿ ಪುಂಡರು ಬಿಮ್ಸ್ ಆಸ್ಪತ್ರೆಗೆ ನುಗ್ಗಿದ್ದಾರೆ. ಬಿಮ್ಸ್ ಆಸ್ಪತ್ರೆಯಲ್ಲಿ ನಿರುಪಯುಕ್ತ ಬೆಡ್‍ಗಳ ಬಳಿ ನಿಂತು ವೀಡಿಯೋ ಮಾಡಿಕೊಂಡು ಪೋಸ್ ನಿಡಿದ್ದಾರೆ. ಎಂಇಎಸ್ ಪುಂಡ ಶುಭಂ ಶೆಲ್ಕೆ ಸಹ ವೀಡಿಯೋ ಮಾಡಿ ಪೋಸ್ ಕೊಟ್ಟಿದ್ದಾನೆ.
    ಎಂಇಎಸ್ ಪುಂಡರು ಆಸ್ಪತ್ರೆ ನುಗ್ಗಿದ್ದ ಬಗ್ಗೆ ಜಿಲ್ಲಾಧಿಕಾರಿ ಬಿಮ್ಸ್ ನಿರ್ದೇಶಕ ಡಾ.ವಿನಯ್ ದಾಸ್ತಿಕೊಪ್ಪ ದೂರು ನೀಡಿದ್ದಾರೆ.

    ಪುಂಡರ ವರ್ತನೆ ಬಗ್ಗೆ ಬ್ರಿಮ್ಸ್ ನಿರ್ದೇಶಕರು ಡಿಸಿಗೆ ದೂರು ನೀಡಿದ್ದು, ಯಾವ ರೀತಿ ಕ್ರಮ ಕೈಗೊಳ್ಳಿದ್ದಾರೆ ಕಾದು ನೋಡಬೇಕಿದೆ. ಹೀಗೆ ಏಕಾಏಕಿ ಆಸ್ಪತ್ರೆಗೆ ನುಗ್ಗಿ, ಪುಂಡಾಟಿಕೆ ಮೆರೆದರೆ ಐಸಿಯುನಲ್ಲಿರುವ ರೋಗಿಗಳಿಗೆ ತೊಂದರೆಯಾಗುತ್ತದೆ. ಅಲ್ಲದೆ ರೋಗಿಗಳಿಗೆ ಭಾಬರಿಯಾಗುತ್ತದೆ ಎಂದು ಸ್ಥಳೀಯರು ದೂರಿದ್ದಾರೆ.

  • ಸರ್ಕಾರಿ ಕೇರ್ ಸೆಂಟರ್‌ಗೆ 50 ಲಕ್ಷ ಸ್ವಂತ ಹಣದಿಂದ ಆಕ್ಸಿಜನ್ ಕಾನ್ಸಂಟ್ರೇಟ್ ಯಂತ್ರ ನೀಡಿದ ಸವದಿ

    ಸರ್ಕಾರಿ ಕೇರ್ ಸೆಂಟರ್‌ಗೆ 50 ಲಕ್ಷ ಸ್ವಂತ ಹಣದಿಂದ ಆಕ್ಸಿಜನ್ ಕಾನ್ಸಂಟ್ರೇಟ್ ಯಂತ್ರ ನೀಡಿದ ಸವದಿ

    ಚಿಕ್ಕೋಡಿ/ಬೆಳಗಾವಿ: ಸರ್ಕಾರಿ ಕೋವಿಡ್ ಕೇರ್ ಸೆಂಟರ್ ಗೆ 50 ಲಕ್ಷ ರೂ. ಮೌಲ್ಯದ 50 ಆಕ್ಸಿಜನ್ ಕಾನ್ಸಂಟ್ರೇಟ್ ಯಂತ್ರಗಳನ್ನು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಮ್ಮ ಸ್ವಂತ ಹಣದಿಂದ ನೀಡಿದ್ದಾರೆ.

    ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಹೊರವಲಯದಲದಲ್ಲಿ ತಾಲೂಕಾಡಳಿತ ನಿರ್ಮಿಸಿರುವ ಕೊವಿಡ್ ಕೇರ್ ಸೆಂಟರ್ ಗೆ 50 ಲಕ್ಷ ರೂ. ಮೌಲ್ಯದ ಆಕ್ಸಿಜನ್ ಕಾನ್ಸಂಟ್ರೇಟ್ ಯಂತ್ರಗಳು ಹಾಗೂ ಸಲಕರಣೆಗಳನ್ನು ನೀಡಿದ್ದಾರೆ. ತಲಾ 85 ಸಾವಿರ ರೂ.ಗಳ 50 ಆಕ್ಸಿಜನ್ ಕಾನ್ಸಂಟ್ರೇಟ್ ಯಂತ್ರಗಳನ್ನು ಅಥಣಿ ತಾಲೂಕು ದಂಡಾಧಿಕಾರಿ ದುಂಡಪ್ಪ ಕೋಮಾರ ಮೂಲಕ ಹಸ್ತಾಂತರಿಸಿದ್ದಾರೆ.

    ಲಕ್ಷ್ಮಣ ಸವದಿ ಅವರು ತಂದೆ, ತಾಯಿ ಹೆಸರಿನಲ್ಲಿರುವ ಸತ್ಯ ಸಂಗಮ ಪ್ರತಿಷ್ಠಾನದ ಮೂಲಕ ಈ ಆಕ್ಸಿಜನ್ ಕಾನ್ಸಂಟ್ರೇಟ್ ಯಂತ್ರಗಳನ್ನು ನೀಡಿದ್ದಾರೆ. ಈ ಮೂಲಕ ಬಡ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಕೋವಿಡ್ ಕೇರ್ ಆಸ್ಪತ್ರೆಗೆ ಡಿಸಿಎಂ ಲಕ್ಷ್ಮಣ ಸವದಿ ಚಾಲನೆ ನೀಡಿದರು. ಕೋವಿಡ್ ನಿಂದ ಸಾವನ್ನಪ್ಪಿದ ಅವರ ಸಹೋದರ ಹಾಗೂ ಸಹೋದರನ ಪುತ್ರನನ್ನು ನೆನೆದು ಭಾವುಕರಾದರು. ಕೋವಿಡ್ ಕೇರ್ ಉದ್ಘಾಟನಾ ಸಮಾರಂಭದಲ್ಲಿ ಡಿಸಿಎಂ ಪುತ್ರ ಚಿದಾನಂದ ಸವದಿ, ತಾಲೂಕು ಆರೋಗ್ಯಾಧಿಕಾರಿ ಬಸವರಾಜ್ ಕಾಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • ಔಷಧಿಗೇ ಕನ್ನ ಹಾಕಿದ ಖದೀಮರು- ರೆಮ್‍ಡಿಸಿವಿರ್ ಎಂದು ಪೋಲಿಯೋ ಔಷಧಿ ಕಳ್ಳತನ

    ಔಷಧಿಗೇ ಕನ್ನ ಹಾಕಿದ ಖದೀಮರು- ರೆಮ್‍ಡಿಸಿವಿರ್ ಎಂದು ಪೋಲಿಯೋ ಔಷಧಿ ಕಳ್ಳತನ

    ಬೆಳಗಾವಿ/ಚಿಕ್ಕೋಡಿ: ಚಿನ್ನ, ಹಣ ಕದಿಯುವುದನ್ನು ನೋಡಿದ್ದೇವೆ. ಇದೀಗ ಕೊರೊನಾ ಕಾಲದಲ್ಲಿ ಕಳ್ಳರು ಔಷಧಿಗಳನ್ನೂ ಕದಿಯಲು ಆರಂಭಿಸಿದ್ದು, ರೆಮ್‍ಡಿಸಿವಿರ್ ಎಂದು ಭಾವಿಸಿ ಪೋಲಿಯೋ ಔಷಧಿ ಕದ್ದಿರುವ ಘಟನೆ ಜಿಲ್ಲೆಯ ಅಥಣಿ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.

    ಕೊರೊನಾ ಅಬ್ಬರದ ನಡುವೆ ಔಷಧಿ ಕಳ್ಳತನವಾಗುತ್ತಿದ್ದು, ಅಥಣಿ ತಾಲೂಕು ಆಸ್ಪತ್ರೆಯಲ್ಲಿ ಔಷಧಿ ಕಳ್ಳತನವಾಗಿದೆ. ರೆಮ್‍ಡಿಸಿವಿರ್ ಎಂದು ಭಾವಿಸಿ ಪೋಲಿಯೋ ಇಂಜೆಕ್ಷನ್ ಕದ್ದಿದ್ದಾರೆ. ಪೋಲಿಯೋ ಔಷಧಿ ಎಂದು ಗೊತ್ತಾಗಿ ಸಂಗಮೇಶ್ವರ್ ನಗರದ ಬಳಿಯ ರಸ್ತೆಯಲ್ಲೇ ಔಷಧಿ ಎಸೆದು ಖದೀಮರು ಪರಾರಿಯಾಗಿದ್ದಾರೆ.

    ಸ್ಥಳಕ್ಕೆ ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.

  • 24 ಗಂಟೆಗಳಲ್ಲಿ 42 ಸೋಂಕಿತರು ಬಲಿ- ಹೆಲ್ತ್ ಬುಲೆಟಿನ್‍ನಲ್ಲಿ ಕೇವಲ ಇಬ್ಬರ ಸಾವಿನ ಲೆಕ್ಕ

    24 ಗಂಟೆಗಳಲ್ಲಿ 42 ಸೋಂಕಿತರು ಬಲಿ- ಹೆಲ್ತ್ ಬುಲೆಟಿನ್‍ನಲ್ಲಿ ಕೇವಲ ಇಬ್ಬರ ಸಾವಿನ ಲೆಕ್ಕ

    – ಬೆಳಗಾವಿಯಲ್ಲಿ ಸಾವಿನಲ್ಲೂ ಸುಳ್ಳು ಲೆಕ್ಕ

    ಬೆಳಗಾವಿ: ಕಳೆದ 24 ಗಂಟೆಗಳಲ್ಲಿ ಕೊರೊನಾ ಮಹಾಮಾರಿಗೆ ಬರೋಬ್ಬರಿ 42 ಜನ ಸಾವನ್ನಪ್ಪಿದ್ದು, ಹೆಲ್ತ್ ಬುಲೆಟಿನ್ ನಲ್ಲಿ ಕೇವಲ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತೋರಿಸಲಾಗಿದೆ. ಈ ಮೂಲಕ ಸರ್ಕಾರ ಸಾವಿನಲ್ಲೂ ಸುಳ್ಳು ಲೆಕ್ಕ ನೀಡುತ್ತಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ.

    ನಗರದಲ್ಲಿ ಕಳೆದ 24 ಗಂಟೆಗಳಲ್ಲಿ 42 ಜನ ಸೋಂಕಿತರ ಶವಗಳನ್ನು ಮಣ್ಣು ಮಾಡಲಾಗಿದ್ದು, ಸಾವಿನ ಸುದ್ದಿಗಳನ್ನು ಕೇಳಿದ ಸಂಬಂಧಿಕರು ಆಘಾತಕ್ಕೋಳಗಿದ್ದಾರೆ. ಕೋರ್ಟ್ ಆವರಣದ ಮುಂದಿರುವ ಅಂಜುಮನ್ ಸ್ಮಶಾನದಲ್ಲಿ 28 ಶವಗಳನ್ನು ಹೂತರೆ, ಸದಾಶಿವ ನಗರದ ಸ್ಮಶಾನದಲ್ಲಿ 14 ಶವಗಳನ್ನು ಸುಡಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಅಂತ್ಯ ಸಂಸ್ಕಾರ ಮಾಡುವ ಸಿಬ್ಬಂದಿ ಹಗಲಿರುಳು ಕೆಲಸ ಮಾಡುತ್ತಿದ್ದಾರೆ.

    ಒಂದೆಡೆ ಮಹಾನಗರ ಪಾಲಿಕೆಯ ಸಿಬ್ಬಂದಿ ಶವಸಂಸ್ಕಾರ ಮಾಡುತ್ತಿದ್ದು, ಇನ್ನೊಂದೆಡೆ ಅಂಜುಮನ್ ಸಂಸ್ಥೆಯ ಸ್ವಯಂ ಸೇವಕರು ನಾಲ್ಕು ಸದಸ್ಯರನ್ನು ಹೊಂದಿದ ಒಂದು ತಂಡದಂತೆ ಮೂರು ತಂಡಗಳು ಶವಸಂಸ್ಕಾರ ಮಾಡುತ್ತಿವೆ. ಬೆಳಗಾವಿ ಮಹಾನಗರದ ಸ್ಮಶಾನದಲ್ಲಿ ಶವ ಸಂಸ್ಕಾರ ಮಾಡುತ್ತಿರುವ ಅಂಜುಮನ್ ಸಂಸ್ಥೆಯ ಸಮಾಜ ಸೇವಕರು ಈ ಭಯಾನಕ ಸತ್ಯವನ್ನು ಪಬ್ಲಿಕ್ ಟಿವಿ ಮುಂದೆ ಬಿಚ್ಚಿಟ್ಟಿದ್ದಾರೆ.

    ಆರೋಗ್ಯ ಇಲಾಖೆಯ ನಿನ್ನೆಯ ಕೊರೊನಾ ಬುಲೆಟಿನ್‍ನಲ್ಲಿ ಸುಳ್ಳು ಲೆಕ್ಕ ತೋರಿಸಲಾಗಿದ್ದು, ಬೆಳಗಾವಿಯಲ್ಲಿ ಕೇವಲ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತೋರಿಸಲಾಗಿದೆ. ಆದರೆ ಸ್ಮಶಾಣಗಳ ಲೆಕ್ಕದ ಪ್ರಕಾರ 42 ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ಸರ್ಕಾರ ಸುಳ್ಳು ಲೆಕ್ಕ ಕೊಡುತ್ತಿದೆಯಾ ಎಂಬ ಅನುಮಾನ ಇದೀಗ ಎದ್ದಿದೆ. ಬರೋಬ್ಬರಿ 40 ಜನ ಸಾವಿನ ಕುರಿತು ಆರೋಗ್ಯ ಇಲಾಖೆ ಸುಳ್ಳು ಲೆಕ್ಕ ನೀಡಿದ್ದು, ಸಾರ್ವಜನಿಕರು ಭಯಪಡುವಂತಾಗಿದೆ.

  • ಸಿಡಿ ಪ್ರಕರಣದಲ್ಲಿ ಯಡಿಯೂರಪ್ಪನವರದ್ದು ಹುಳುಕಿದೆ: ಸಿದ್ದರಾಮಯ್ಯ

    ಸಿಡಿ ಪ್ರಕರಣದಲ್ಲಿ ಯಡಿಯೂರಪ್ಪನವರದ್ದು ಹುಳುಕಿದೆ: ಸಿದ್ದರಾಮಯ್ಯ

    – ಎಸ್‍ಐಟಿ ತನಿಖೆ ಮೇಲೆ ನಂಬಿಕೆ ಇಲ್ಲ

    ಬೆಳಗಾವಿ: ಸಿಎಂ ಯಡಿಯೂರಪ್ಪನವರು ಸಿಡಿ ವಿಚಾರವಾಗಿ ಮಾತನಾಡಬೇಕು. ಅವರದ್ದು ಹುಳುಕು ಇರುವ ಕಾರಣ ಮಾತನಾಡುತ್ತಿಲ್ಲ. ಸಿಡಿ ಲೇಡಿ ನಮ್ಮ ಬಳಿ ರಕ್ಷಣೆ ಕೇಳಿದ್ದಾಳೆ. ಸರ್ಕಾರ ಅವರಿಗೆ ಸೂಕ್ತ ರಕ್ಷಣೆ ನೀಡುವಂತೆ ಹೇಳಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿಯಲ್ಲಿ ಹೇಳಿದ್ದಾರೆ.

    ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣ ಕುರಿತಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯುವತಿ ನನ್ನ ಬಳಿ ರಕ್ಷಣಾ ಕೊಡಿ ಅಂತಾ ಕೇಳಿಲ್ಲ. ಆದರೆ ನನಗೆ ರಕ್ಷಣೆ ಕೊಡಿಸಿ ಅಂತಾ ಕೇಳಿದ್ದಾರೆ ಹೀಗಾಗಿ ಸರ್ಕಾರಕ್ಕೆ ರಕ್ಷಣೆ ಕೊಡಲು ಹೇಳಿದ್ದೇನೆ. ರಾಜ್ಯದ ಸಿಎಂ ಆಗಿರುವ ಯಡಿಯೂರಪ್ಪನವರು ಸಿಡಿ ಮತ್ತು ರಕ್ಷಣೆ ವಿಚಾರವಾಗಿ ಮಾತಾಡಬೇಕು. ಈ ವಿಚಾರ ರಾಷ್ಟ್ರದಾದ್ಯಂತ ಚರ್ಚೆ ಆಗುತ್ತಿದೆ. ಆದರೆ ಯಡಿಯೂರಪ್ಪ ಮೌನವಾಗಿ ಇರೋದು ನೋಡಿದ್ರೆ ಅವರಲ್ಲೇ ಹುಳುಕಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ಸಿಡಿ ಪ್ರಕರಣದಲ್ಲಿ ಎಸ್‍ಐಟಿ ತನಿಖೆ ಮೇಲೆ ನಂಬಿಕೆ ಇಲ್ಲ. ಸಿಡಿ ಪ್ರಕರಣದಲ್ಲಿ ಯಡಿಯೂರಪ್ಪನವರದ್ದು ಹುಳುಕಿದೆ. ಉಪಚುನಾವಣೆಯಲ್ಲಿ ಸಿಡಿ ಪ್ರಕರಣ ಬಿಜೆಪಿಗೆ ವಿರುದ್ಧ ಆಗುತ್ತದೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಆಗುತ್ತದೆ. ಪ್ರಕರಣ ತನಿಖೆ ಹಂತದಲ್ಲಿ ಇರೋದ್ರಿಂದ ಚುನಾವಣಾ ವಿಷಯವಾಗಿ ಬಳಸಿಕೊಳ್ಳಲ್ಲ. ಸಿಡಿ ಪ್ರಕರಣ ನಿಷ್ಪಕ್ಷಪಾತವಾಗಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

    ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಸ್ಟ್ಯಾಂಡ್ ಇಲ್ಲ, ಅದು ಬಸ್‍ಸ್ಟ್ಯಾಂಡ್ ಎಂಬ ಪ್ರಹ್ಲಾದ್ ಜೋಶಿ ಆರೋಪ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ ಬಸ್‍ಸ್ಟ್ಯಾಂಡ್ ಆಗಿರೋರು ಯಾರಪ್ಪ, ಮಿಸ್ಟರ್ ನರೇಂದ್ರ ಮೋದಿ. ಪ್ರಹ್ಲಾದ್ ಜೋಶಿ ಒಬ್ಬ ಸೈಡ್ ಆಕ್ಟರ್, ಡೈರೆಕ್ಟರ್ ಆರ್‍ಎಸ್‍ಎಸ್ ಆಗಿದೆ. ಬೆಲೆ ಏರಿಕೆ, ಕೇಂದ್ರ ಸರ್ಕಾರ ವೈಫಲ್ಯ, ರೈತ ವಿರೋಧಿ ಕಾನೂನು ತಂದಿದ್ದಾರೆ. ಬೆಲೆ ಏರಿಕೆ ನಿಯಂತ್ರಣ ಇಲ್ಲ, ಅಚ್ಛೆ ದಿನ್ ಇಲ್ಲ ನರಕ ಆಗಿಬಿಟ್ಟಿದೆ ಎಂದು ಬಿಜೆಪಿ ವಿರುದ್ಧವಾಗಿ ಕಿಡಿಕಾರಿದ್ದಾರೆ.

    ಕಾಂಗ್ರೆಸ್ ಪಕ್ಷ ಯಾವುದೇ ಜಾತಿಗೆ ಸೀಮಿತವಾದ ಪಾರ್ಟಿ ಅಲ್ಲ. ಎಲ್ಲಾ ಜಾತಿಗಳನ್ನು ಒಟ್ಟಿಗೆ ತಗೆದುಕೊಂಡು ಹೋಗುವ ಪಕ್ಷ ಕಾಂಗ್ರೆಸ್ ಆಗಿದೆ. ಸತೀಶ್ ಜಾರಕಿಹೊಳಿ ಬಹಳ ಒಳ್ಳೆಯ, ಸಮರ್ಥ ಅಭ್ಯರ್ಥಿಯಾಗಿದ್ದಾರೆ ಎಂದು ಬೆಳಗಾವಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ರಾಜ್ಯದ ಬಿಜೆಪಿ ಸಂಸದರು ಕೇಂದ್ರ ಸರ್ಕಾರದ ಗುಲಾಮರಾಗಿದ್ದಾರೆ. ಸಚಿವ ಮಾಧುಸ್ವಾಮಿ ಕೇಂದ್ರದ ಸರ್ವಾಧಿಕಾರಿ ಧೋರಣೆ ಪ್ರಸ್ತಾಪಿಸಿರುವುದು ಕೇಂದ್ರದಿಂದ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ
    ಅನುದಾನ ಸಮರ್ಪಕವಾಗಿ ಬರುತ್ತಿಲ್ಲ. ಈ ಬಗ್ಗೆ ರಾಜ್ಯದ ಬಿಜೆಪಿ ಸಂಸದರು ಧ್ವನಿ ಎತ್ತುತ್ತಿಲ್ಲ. ಈ ಎಲ್ಲಾ ಸಂಸದರಿಗೆ ಬೆಳಗಾವಿ ಚುನಾವಣೆ ಮೂಲಕ ಜನರು ಪಾಠ ಕಲಿಸಲಿದ್ದಾರೆ. ಯಡಿಯೂರಪ್ಪ ಸರ್ಕಾರ ಸಹ ಹೇಡಿ ಸರ್ಕಾರವಾಗಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

    ಬೆಳಗಾವಿಯಲ್ಲಿ ಡಿ ಕೆ ಶಿವಕುಮಾರ್ ಕಾರಿನ ಮೇಲೆ ಚಪ್ಪಲಿ ಎಸೆದಿರುವ ವಿಚಾರವಾಗಿ ಮಾತನನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಗೂಂಡಾಗಿರಿ ಮಾಡುವುದು ಸರಿಯಲ್ಲ. ಈ ಬಗ್ಗೆ ವಿಚಾರಣೆ ಮಾಡಲು ನ್ಯಾಯಾಲಯ ಇದೆ. ನ್ಯಾಯಾಲಯ ತೀರ್ಮಾನ ಮಾಡುತ್ತದೆ. ಪ್ರಚಾರಕ್ಕೆ ಬರಬೇಡಿ ಅನ್ನೋದು ಪ್ರಜಾಪ್ರಭುತ್ವ ವಿರೋಧೀ ನೀತಿಯಾಗಿದೆ. ಪ್ರಚಾರಕ್ಕೆ ಬರಬೇಡಿ ಅಂತಾ ಹೇಳಲು ಇವರು ಯಾರು? ಎಂದು ಸಿದ್ದರಾಮಯ್ಯ ಗರಂ ಆಗಿದ್ದಾರೆ.

  • ಹೈ ಕಮಾಂಡ್ ಟಿಕೆಟ್ ನೀಡಿದರೆ ಸ್ಪರ್ಧಿಸಲು ಸಿದ್ಧ: ಶ್ರದ್ಧಾ ಶೆಟ್ಟರ್

    ಹೈ ಕಮಾಂಡ್ ಟಿಕೆಟ್ ನೀಡಿದರೆ ಸ್ಪರ್ಧಿಸಲು ಸಿದ್ಧ: ಶ್ರದ್ಧಾ ಶೆಟ್ಟರ್

    ಬೆಳಗಾವಿ: ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧರಿದ್ದೇವೆ, ಹೈಕಮಾಂಡ್ ಟಿಕೆಟ್ ನೀಡಿದರೆ ನಮ್ಮ ಕುಟುಂಬದವರು ಚುನಾವಣೆಗೆ ಸ್ಪರ್ಧಿಸಲು ಸಿದ್ಧ ಎಂದು ದಿ.ಸುರೇಶ್ ಅಂಗಡಿ ಪುತ್ರಿ, ಜಗದೀಶ್ ಶೆಟ್ಟರ್ ಸೊಸೆ, ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಟಿಕೆಟ್ ಆಕಾಂಕ್ಷಿಯೂ ಆಗಿರುವ ಶ್ರದ್ಧಾ ಶೆಟ್ಟರ್ ಹೇಳಿದ್ದಾರೆ.

    ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಲೋಕಭಾ ಉಪಚುನಾವಣೆಗೆ ಸ್ಪರ್ಧಿಸಲು ಮಾನಸಿಕವಾಗಿ ಸಿದ್ಧರಿದ್ದೇವೆ. ಕೋರ್ ಕಮಿಟಿ ಸಭೆಯಲ್ಲೂ ಕುಟುಂಬಕ್ಕೆ ಟಿಕೆಟ್ ನೀಡುವ ಬಗ್ಗೆ ಚರ್ಚೆಯಾಗಿದೆ. ಬೇರೆ ಅಭ್ಯರ್ಥಿಗಳ ಬಗ್ಗೆಯೂ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾಗಿದೆ. ಹೈಕಮಾಂಡ್ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಹೈಕಮಾಂಡ್ ನಿರ್ಧಾರವೇ ಅಂತಿಮ. ಚುನಾವಣೆಗೆ ಸ್ಪರ್ಧಿಸಬೇಕೆಂದು ಅಭಿಮಾನಿಗಳ ಒತ್ತಾಯ ಇದ್ದು, ಹೈಕಮಾಂಡ್‍ಗೂ ಇದನ್ನು ತಿಳಿಸಿದ್ದೇವೆ. ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ತಿಳಿಸಿದರು.

    ಇನ್ನೆರಡು ದಿನಗಳಲ್ಲಿ ಈ ಬಗ್ಗೆ ತಿಳಿಯಲಿದೆ. ನಾನು ದೆಹಲಿಗೆ ಹೋಗಿರಲಿಲ್ಲ, ಬೆಂಗಳೂರಿನಲ್ಲಿದ್ದೆ. ಹೈಕಮಾಂಡ್ ಅಥವಾ ಪಕ್ಷದ ವರಿಷ್ಠರು ಇನ್ನೂ ಈ ಬಗ್ಗೆ ನಿರ್ಧಾರ ಕೈಗೊಂಡಿಲ್ಲ, ಟಿಕೆಟ್ ಬಗ್ಗೆ ಏನೂ ಚರ್ಚೆ ಆಗಿಲ್ಲ. ಕುಟುಂಬಕ್ಕೆ ಅವಕಾಶ ಕೊಟ್ಟರೆ ಸ್ಪರ್ಧೆ ಮಾಡುತ್ತೇವೆ ಎಂದು ತಿಳಿಸಿದ್ದೇವೆ. ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧರಿದ್ದೇವೆ. ನಮ್ಮ ತಂದೆ ಜನರ ಜೊತೆ ಒಳ್ಳೆಯ ಸಂಪರ್ಕ ಹೊಂದಿದ್ದರು. ಅಭಿಮಾನಿಗಳು ಕರೆದ ಸಮಾರಂಭಗಳಿಗೆ ಹೋಗುತ್ತಿದ್ದೇನೆ. ಮುಂದೆಯೂ ಅಭಿಮಾನಿಗಳ ಜೊತೆ ಸಂಪರ್ಕ ಬೆಳೆಸಿಕೊಂಡು ಹೋಗುತ್ತೇವೆ. ತಂದೆಯವರ ಜೊತೆಗಿದ್ದ ಎಲ್ಲರ ಜೊತೆಗೂ ನಾವು ಇರುತ್ತೇವೆ ಎಂದರು.

  • ಬೆಳಗಾವಿಯಲ್ಲಿ ವ್ಯಾಪಕ ಪ್ರತಿಭಟನೆ – ರಾಸಲೀಲೆ ಪ್ರಕರಣ ಸಿಐಡಿ ತನಿಖೆಗೆ ಒತ್ತಾಯ

    ಬೆಳಗಾವಿಯಲ್ಲಿ ವ್ಯಾಪಕ ಪ್ರತಿಭಟನೆ – ರಾಸಲೀಲೆ ಪ್ರಕರಣ ಸಿಐಡಿ ತನಿಖೆಗೆ ಒತ್ತಾಯ

    – ಪೆಟ್ರೋಲ್ ಬಂಕ್‍ಗೆ ನುಗ್ಗಿ ಬೆಂಬಲಿಗರಿಂದ ಗೂಂಡಾಗಿರಿ
    – ಕಾರಿಗೆ ಕೈಯಿಂದ ಗುದ್ದಿ, ಕಾಲಿನಿಂದ ಒದ್ದು ಪ್ರತಿಭಟನೆ

    ಬೆಳಗಾವಿ: ರಾಸಲೀಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಆಗ್ರಹಿಸಿ ಮಾಜಿ ಸಚಿವರ ಬೆಂಬಲಿಗರಿಂದ ರಸ್ತೆ ತಡೆದು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಸಂಬಂಧ ದೂರುದಾರ ದಿನೇಶ್ ಕಲ್ಲಹಳ್ಳಿ ಭಾವಚಿತ್ರಕ್ಕೆ ಚಪ್ಪಲಿ ಏಟು ನೀಡಿ ಅವರ ವಿರುದ್ಧ ಗೋಕಾಕ್‍ನಲ್ಲಿ ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಮಮದಾಪೂರ ಹಾಗೂ ಹಿರೇನಂದಿ ಗ್ರಾಮ ಪಂಚಾಯತ್ ವ್ಯಾಪ್ತಿಯ 11 ಗ್ರಾಮಗಳಿಂದ ಬೆಂಬಲಿಗರು ಬಂದಿದ್ದು, ಪ್ರತಿಭಟನೆ ಮಾಡುತ್ತಿದ್ದಾರೆ. ಸ್ಥಳದಲ್ಲಿ ಬಿಗಿವಿನ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೊಬಸ್ತ್ ನೀಡಲಾಗಿದೆ.

    ಮಮದಾಪೂರ ಕ್ರಾಸ್ ಬಳಿ ಬೆಂಬಲಿಗರು ಪೆಟ್ರೋಲ್ ಬಂಕ್‍ಗೆ ನುಗ್ಗಿ ಗೂಂಡಾಗಿರಿ ನಡೆಸಿದ್ದಾರೆ. ಒತ್ತಾಯಪೂರ್ವಕವಾಗಿ ಅವಾಚ್ಯವಾಗಿ ನಿಂದಿಸಿ ಬಂಕ್ ಬಂದ್ ಮಾಡಿಸಿದ್ದಾರೆ. ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಮಹಾರಾಷ್ಟ್ರ ಮೂಲದ ಕಾರ್ ಬರುತ್ತಿದ್ದಂತೆ ಆಕ್ರೋಶಭರಿತರಾದ ಪ್ರತಿಭಟನಾಕಾರರು, ಕಾರಿಗೆ ಕೈಯಿಂದ ಗುದ್ದಿ, ಕಾಲಿನಿಂದ ಒದ್ದಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

    ಅಲ್ಲದೆ ಮಾಜಿ ಸಚಿವರ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಬೆಂಬಲಿಗರು ದಿನೇಶ್ ಕಲ್ಲಹಳ್ಳಿ ಅವರ ಅಣಕು ಶವಯಾತ್ರೆಯನ್ನು ಮಾಡಿ ಸುಟ್ಟು ಹಾಕಿ ಪ್ರತಿಭಟನೆ ಮಾಡುತ್ತಿದ್ದಾರೆ. ನಮ್ಮ ನಾಯಕರು ಅಭಿವೃದ್ಧಿ ಕೆಲಸವನ್ನು ಮಾಡುತ್ತಿದ್ದರು. ಆದರೆ ಅವರ ವಿರುದ್ಧ ಸುಳ್ಳು ಸಿಡಿಯನ್ನು ಸೃಷ್ಟಿಸಿ ರಾಜಕೀಯ ಪೀತೂರಿಯನ್ನು ಮಾಡಿದ್ದಾರೆ. ಸತ್ಯ ಹೊರಬೇಕು ಎಂದರೆ ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕು. ತನಿಖೆಯಾದ ನಂತರ ಮತ್ತೆ ಅವರ ಖಾತೆಯನ್ನು ಅವರಿಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

    ಈ ಪ್ರಕರಣದಲ್ಲಿ ಕಾಣದ ಕೈಗಳು ಪಿತೂರಿ ಮಾಡುತ್ತಿವೆ. ಹೀಗಾಗಿ ಸಂಬಂಧ ಸಂಪೂರ್ಣ ತನಿಖೆಯಾಗಬೇಕು ಅಲ್ಲಿಯವರೆಗೂ ನಾವು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

  • ಆನ್‍ಲೈನ್‍ನಲ್ಲಿ ಬುಕ್ ಮಾಡಿದ್ರೆ ಗೋಕಾಕ್ ಕರದಂಟು ದುಬೈನಲ್ಲೂ ಸಿಗುತ್ತೆ- ಹೆಬ್ಬಾಳ್ಕರ್‌ಗೆ ಜಾರಕಿಹೊಳಿ ಟಾಂಗ್

    ಆನ್‍ಲೈನ್‍ನಲ್ಲಿ ಬುಕ್ ಮಾಡಿದ್ರೆ ಗೋಕಾಕ್ ಕರದಂಟು ದುಬೈನಲ್ಲೂ ಸಿಗುತ್ತೆ- ಹೆಬ್ಬಾಳ್ಕರ್‌ಗೆ ಜಾರಕಿಹೊಳಿ ಟಾಂಗ್

    ಬೆಳಗಾವಿ: ಕರದಂಟು ಬೇಕಾದರೆ ಗೋಕಾಕ್ ಮಾತ್ರವಲ್ಲ, ಬೆಳಗಾವಿ, ಮೆಜೆಸ್ಟಿಕ್ ನಲ್ಲಿಯೂ ಸಿಗುತ್ತೆ. ಆನ್‍ಲೈನ್‍ನಲ್ಲಿ ಆರ್ಡರ್ ಮಾಡಿದರೆ ದುಬೈನಲ್ಲೂ ಸಿಗುತ್ತೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ ಹಾಸ್ಯ ಚಟಾಕಿ ಹಾರಿಸಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗಾವಿ ಕುಂದಾ ಜೊತೆ ಗೋಕಾಕ್ ಕರದಂಟು ಇದ್ದರೆ ಚೆನ್ನಾಗಿರುತ್ತದೆ ಎಂಬ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದರು. ಕರದಂಟು ಬೇಕಾದರೆ ಗೋಕಾಕ್ ಮಾತ್ರವಲ್ಲ, ಬೆಳಗಾವಿ, ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿಯೂ ಸಿಗುತ್ತೆ. ಆನ್‍ಲೈನ್‍ನಲ್ಲಿ ಆರ್ಡರ್ ಮಾಡಿದರೆ ದುಬೈನಲ್ಲೂ ಸಿಗುತ್ತದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ಬಗ್ಗೆ ವ್ಯಂಗ್ಯವಾಡಿದರು.

    ಗೋಕಾಕ್‍ನಲ್ಲಿ ರಮೇಶ್ ಸೋಲಿಸಲು ನನ್ನದು ಹಾಗೂ ಸತೀಶ್‍ರವರ ಜಾಯಿಂಟ್ ವೆಂಚರ್ ಎಂಬ ಹೆಬ್ಬಾಳ್ಕರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ನಾವು ಹೆಚ್ಚು ಸೀಟ್ ಗೆಲ್ಲುವುದು ಜಾಯಿಂಟ್ ವೆಂಚರ್, ಗೋಕಾಕ್ ಸೇರಿ ಜಿಲ್ಲೆಯಲ್ಲಿ ಹೆಚ್ಚು ಸ್ಥಾನ ಗೆಲ್ಲೋದು ನಮ್ಮ ಪ್ಲ್ಯಾನ್. ಅದನ್ನು ಜಾಯಿಂಟ್ ವೆಂಚರ್ ಎಂದು ಹೇಳಿರಬಹುದಷ್ಟೇ, ಅದರಲ್ಲೇನು ತಪ್ಪಿದೆ ಎಂದು ಪ್ರಶ್ನಿಸಿದರು.

    ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಾಸಕರನ್ನು ಕಡೆಗಣಿಸಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಸರ್ಕಾರಿ ಸಭೆ ಮಾಡುತ್ತಾರೆ ಎಂಬ ಕುರಿತು ಮಾತಣಾಡಿದ ಅವರು, ಅಂತಹ ಯಾವುದಾದರೂ ಸಭೆ ಆಗಿದ್ದರೆ ಲಿಸ್ಟ್ ಮಾಡಿ ಕೆಡಿಪಿ ಸಭೆ ಕರೆಯುತ್ತಾರೆ. ಕೆಡಿಪಿ ಸಭೆಯಲ್ಲಿ ನಾವು ಕೇಳುವ ಅಧಿಕಾರ ಇರುತ್ತೆ. ಗೋಕಾಕ್ ಅಷ್ಟೇ ಅಲ್ಲ ಇಡೀ ಜಿಲ್ಲೆಯಲ್ಲಿ ಲಿಂಗಾಯತ ಮುಖಂಡರನ್ನು ಕಾಂಗ್ರೆಸ್‍ಗೆ ಆಹ್ವಾನ ಮಾಡುತ್ತಿದ್ದೇವೆ. ಬಹಳಷ್ಟು ಜನ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆ ಎಂದರು.

    ರಾಜ್ಯ ಕಾಂಗ್ರೆಸ್‍ನಲ್ಲಿ ಡಿಕೆಶಿ, ಸಿದ್ದರಾಮಯ್ಯ ಎರಡು ಗುಂಪುಗಳ ವಿಚಾರದ ಬಗ್ಗೆ ಮಾತನಾಡಿದ ಅವರು, ಅದು ಬೆಂಗಳೂರು ಲೆವೆಲ್, ನಮ್ಮ ಜಿಲ್ಲೆಗೆ ಸಂಬಂಧ ಇಲ್ಲ. ಗುದ್ದಾಟ ಏನೂ ಇಲ್ಲ, ಕೆಲವು ಘಟನೆ ಆಗುತ್ತಿರುತ್ತವೆ. ಇದನ್ನೇ ಅವರ ಫೇಲ್ಯೂರ್, ಇವರು ಸಕ್ಸಸ್ ಎಂದು ಹೇಳಲು ಆಗುವುದಿಲ್ಲ. ಯಾರನ್ನು ಯಾರೂ ಮೂಲೆಗುಂಪು ಮಾಡಲು ಆಗುವುದಿಲ್ಲ ಎಂದು ಸಿದ್ದರಾಮಯ್ಯ ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದರು.

    ಬೆಳಗಾವಿ ಕಾಂಗ್ರೆಸ್ ಶಾಸಕರು ಅವರವರ ಕ್ಷೇತ್ರಕ್ಕೆ ಸೀಮಿತವಾಗಿರುವುದು ನಿಜ. ಜಿಲ್ಲೆಯಲ್ಲಿ ಮೀಟಿಂಗ್ ಕರೆದಾಗ ಬರುತ್ತಾರೆ. ನಾವು ಹೋಗುತ್ತೇವೆಂದು ಅವರೂ ಬರಲಿಕ್ಕಾಗಲ್ಲ. ನಾವು ಇಡೀ ಜಿಲ್ಲೆ, ಮುಂಬೈ ಕರ್ನಾಟಕ. ರಾಜ್ಯ ಮಟ್ಟದಲ್ಲಿ ಪ್ರವಾಸ ಮಾಡುತ್ತೇವೆ. ನಮ್ಮ ರೀತಿ ಮಾಡಬೇಕೆಂದರೆ ಅವರು ಅಸಹಾಯಕರಿರುತ್ತಾರೆ. ಹೀಗಾಗಿ ತಮ್ಮ ಕ್ಷೇತ್ರಗಳಿಗೆ ಸೀಮಿತರಿರುತ್ತಾರೆ. ಅವರ ಕ್ಷೇತ್ರಗಳಿಗೆ ಹೋದರೆ ನಮ್ಮ ಜೊತೆ ಇರುತ್ತಾರೆ ಎಂದರು.