Tag: Belgaum

  • ಬೆಳಗಾವಿಯಲ್ಲಿ ಬಿಜೆಪಿ ಸೋಲಿಗೆ ಕಾರಣವೇನು ಎನ್ನುವುದರ ಬಗ್ಗೆ ತನಿಖೆ ನಡೆಯುತ್ತದೆ: ಬಿಎಸ್‌ವೈ

    ಬೆಳಗಾವಿಯಲ್ಲಿ ಬಿಜೆಪಿ ಸೋಲಿಗೆ ಕಾರಣವೇನು ಎನ್ನುವುದರ ಬಗ್ಗೆ ತನಿಖೆ ನಡೆಯುತ್ತದೆ: ಬಿಎಸ್‌ವೈ

    ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಳಗಾವಿಯಲ್ಲಿ ಬಿಜೆಪಿ ಸೋಲಿಗೆ ಕಾರಣವೇನು ಎನ್ನುವುದರ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಮತ್ತು ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಮತ್ತು ಸಂಸದರು ಅಧಿಕವಾಗಿದ್ದರು. ಈ 2 ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ಭರವಸೆ ಇತ್ತು. ಈ ಸೋಲು ಅನಿರೀಕ್ಷಿತವಾಗಿದೆ. ಇದರ ಬಗ್ಗೆ ಸಮಗ್ರ ಚರ್ಚೆ ನಡೆಸಿ, ವಾಸ್ತವದಲ್ಲಿ ಏನಾಗಿದೆ ಎನ್ನುವುದರ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಿದರು.

    BSY

    ಮುಂದಿನ ದಿನಗಳಲ್ಲಿ ಬೆಳಗಾವಿ ಸೋಲಿನ ಬಗ್ಗೆ ಸಿಎಂ ಚರ್ಚೆ ನಡೆಸಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ರಮೇಶ್ ಜಾರಕಿಹೊಳಿ ಅವರ ತಮ್ಮ ಲಖನ್ ಜಾರಕಿಹೊಳಿ ಪಕ್ಷಾಂತರವಾಗಿ ನಿಲ್ಲಿಸಿರುವುದರ ಬಗ್ಗೆಯೂ ಸಿಎಂ ಅವರೇ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಸಿಎಂ ಅವರ ತೀರ್ಮಾನವೇ ಅಂತಿಮ ಎಂದು ಹೇಳಿದರು. ಇದನ್ನೂ ಓದಿ: ನಾಳೆ ಹೆಚ್‍ಡಿಕೆ ಹುಟ್ಟುಹಬ್ಬ- ಕಾರ್ಯಕರ್ತರಲ್ಲಿ ಮಾಜಿ ಸಿಎಂ ಮನವಿ

    ಇದೇ ವೇಳೆ ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಅಧೀವೇಶನದ ಕುರಿತು ಮಾತನಾಡಿದ ಅವರು, ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಯಿಂದ 2 ದಿನ ವಿಶೇಷ ಚರ್ಚೆ ನಡೆಸಬೇಕೆಂದು ಸ್ಪೀಕರ್ ಅವರು ತಿಳಿಸಿದ್ದಾರೆ. ಅದಕ್ಕೆ ಸಿಎಂ ಬೊಮ್ಮಾಯಿ ಅವರು ಒಪ್ಪಿಗೆಯನ್ನು ಸೂಚಿಸಿದ್ದಾರೆ. ರಾಜ್ಯದಲ್ಲಿರುವ ತೊಂದರೆ, ಸಮಸ್ಯೆಗಳಿಗೆ ಪರಿಹಾರವನ್ನು ನೀಡುವ ನಿಟ್ಟಿನಲ್ಲಿ ಸುದೀರ್ಘ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಸುಧಾಕರ್ ನಮ್ಮ ಲೀಡರ್ ಅಲ್ಲ, ಮಂಡ್ಯದ ಬಗ್ಗೆ ಅವರಿಗೇನ್ ಮಾಹಿತಿ ಇದೆ?: ನಾರಾಯಣ ಗೌಡ

  • ನಾನು ಹೇಳಿದ್ದು ನಿಜವಾಗಿದೆ, ಬೊಮ್ಮಾಯಿ ನಾಯಕತ್ವಕ್ಕೆ ಬೆಂಬಲ: ಬಿಎಸ್‌ವೈ

    ನಾನು ಹೇಳಿದ್ದು ನಿಜವಾಗಿದೆ, ಬೊಮ್ಮಾಯಿ ನಾಯಕತ್ವಕ್ಕೆ ಬೆಂಬಲ: ಬಿಎಸ್‌ವೈ

    ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಬಹುತೇಕ 12 ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ಹಂತದಲ್ಲಿದೆ. ಈ ಬಗ್ಗೆ ನಾನು ಮೊದಲೇ ಹೇಳಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲೇ ನಾನು ಹೇಳಿದ ಹಾಗೆ 15 ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತೇವೆ. ಒಂದು ಕ್ಷೇತ್ರ ಹೆಚ್ಚು ಕಮ್ಮಿಯಾಗಿರಬಹುದು. ಆದರೂ ನಾನು ಹೇಳಿದ್ದು ನಿಜ ಆಗುತ್ತಿದೆ. ಅಲ್ಲದೆ ಈ ಗೆಲುವಿನಿಂದಾಗಿ ನಮಗೆ ಕಾರ್ಯಕಲಾಪ ನಡೆಸಲು ಸುಗಮ ಆಗುತ್ತದೆ ಎಂದರು.

    ಈ ಚುನಾವಣೆ ಫಲಿತಾಂಶ ಮುಂದಿನ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ ಅಂತ ಅಲ್ಲ. ಮುಖ್ಯಮಂತ್ರಿ ಬೊಮ್ಮಾಯಿ ನಾಯಕತ್ವಕ್ಕೆ ಜನ ಬೆಂಬಲ ಕೊಟ್ಟಿದ್ದಾರೆ. ನಾನು ಮುಂದಿನ ದಿನಗಳಲ್ಲಿ ರಾಜ್ಯ ವ್ಯಾಪ್ತಿ ಪ್ರವಾಸ ಆರಂಭಿಸಿ ಪಕ್ಷ ಸಂಘಟನೆ ಮಾಡುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: 1,743 ಕೋಟಿ ಆಸ್ತಿಯ ಒಡೆಯ ಕೆಜಿಎಫ್‌ ಬಾಬುಗೆ ಸೋಲು

    ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ 140 ಸ್ಥಾನ ಗೆಲುವು ಸಾಧಿಸುತ್ತೇವೆ. ಹೊಸ ಕ್ಷೇತ್ರಗಳಲ್ಲಿ ಬಿಜೆಪಿ ಹಿನ್ನಡೆಯಾಗಿದ್ದು ನಿಜ. ಆದರೆ ಹಾಸನ ಮಂಡ್ಯ ಸೇರಿದಂತೆ ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಒತ್ತು ಕೊಡುತ್ತೆವೆ ಎಂದು ತಿಳಿಸಿದರು. ಇದನ್ನೂ ಓದಿ: ಒಳ್ಳೆಯ ಫಲಿತಾಂಶ ಬರುವ ನಿರೀಕ್ಷೆ ಇದೆ: ಬೊಮ್ಮಾಯಿ

  • ರಾಜ್ಯದಲ್ಲಿ APMC ಕಾಯ್ದೆ ವಾಪಸ್ ಇಲ್ಲ: ಸೋಮಶೇಖರ್

    ರಾಜ್ಯದಲ್ಲಿ APMC ಕಾಯ್ದೆ ವಾಪಸ್ ಇಲ್ಲ: ಸೋಮಶೇಖರ್

    ಬೆಳಗಾವಿ: ರಾಜ್ಯದಲ್ಲಿ ಎಪಿಎಂಸಿ ಕಾಯ್ದೆ ವಾಪಸ್ ಇಲ್ಲ ಎಂದು ಸಹಕಾರ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

    ಎಪಿಎಂಸಿ ಕಾಯ್ದೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಕಾಯ್ದೆಯಿಂದ ರೈತರಿಗೆ ಯಾವುದೇ ಅನಾನುಕೂಲ ಇಲ್ಲ. ರೈತರು ಎಲ್ಲಿ ಬೇಕಾದ್ರು ತಮ್ಮ ಉತ್ಪನ್ನಗಳನ್ನ ಮಾರಾಟ ಮಾಡಲು ಈ ಕಾಯ್ದೆಯಲ್ಲಿ ಅವಕಾಶ ಇರುತ್ತೆ. ಇದರಿಂದ ರೈತನಿಗೆ ಅನುಕೂಲ ಆಗುತ್ತೆ. ಈ ಮೊದಲು ಎಪಿಎಂಸಿ ಬಿಟ್ಟು ಹೊರಗೆ ಮಾರಾಟ ಮಾಡಿದ್ರೆ ದಂಡ, ಜೈಲು ಶಿಕ್ಷೆ ಇತ್ತು. ಈಗ ಹೊಸ ಕಾಯ್ದೆಯಲ್ಲಿ ಅದನ್ನ ತೆಗೆಯಲಾಗಿದೆ ಎಂದು ತಿಳಿಸಿದರು.

    ಕರ್ನಾಟಕದಲ್ಲಿ ರೈತ ತಾನು ಬೆಳೆದ ಬೆಳೆ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಇದರಿಂದ ರೈತರಿಗೆ ಯಾವುದೇ ಧಕ್ಕೆ ಆಗೊಲ್ಲ. ಹೀಗಾಗಿ ಎಪಿಎಂಸಿ ಕಾಯ್ದೆ ವಾಪಸ್ ಪಡೆಯೊಲ್ಲ. ಎಪಿಎಂಸಿಗಳನ್ನ ಯಾವುದೇ ಕಾರಣಕ್ಕೂ ಮುಚ್ಚೋದಿಲ್ಲ. ಎಪಿಎಂಸಿ ಲಾಭದಲ್ಲಿ ನಡೆಯುತ್ತಿದೆ. ಲಾಭದಿಂದ ನಡೆಯೋ ಸಂಸ್ಥೆಯನ್ನ ಯಾಕೆ ಮುಚ್ಚೋಣ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಲವ್ ಇದ್ಮೇಲೆ ಜಿಹಾದ್ ಯಾಕೆ ಬರುತ್ತೆ – ಇಬ್ರಾಹಿಂ ತಿರುಗೇಟು

    ಕಾಂಗ್ರೆಸ್ ನಿಂದ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡೋ ವಿಚಾರವಾಗಿ ಮಾತನಾಡಿದ ಅವರು, 7-8 ವರ್ಷಗಳಿಂದ ನಾವು ಅಧಿವೇಶನ ನೋಡುತ್ತಿದ್ದೇನೆ. ವಿರೋಧ ಪಕ್ಷದವರು ಇರೋದು ವಿರೋಧ ಮಾಡೋಕೆ. ವಿರೋಧ ಮಾಡೋದು ಬಿಟ್ಟು ಸಾರ್ವಜನಿಕ ಕುಂದು ಕೊರತೆ ಸರ್ಕಾರದ ಗಮನಕ್ಕೆ ತಂದು ಅದಕ್ಕೆ ಪರಿಹಾರ ಕೊಡಿಸೋ ಕೆಲಸ ವಿಪಕ್ಷ ಮಾಡಲಿ. ಇತ್ತೀಚೆಗೆ ಅಧಿವೇಶನದಲ್ಲಿ ಸಾರ್ವಜನಿಕ ವಿಷಯಗಳು ಚರ್ಚೆ ಆಗ್ತಿಲ್ಲ. ಈ ಬಗ್ಗೆ ನಾವು ಅರ್ಥ ಮಾಡಿಕೊಂಡು ಚರ್ಚೆ ಮಾಡಬೇಕು. ಬೆಳಗಾವಿ ಅಧಿವೇಶನ ಈ ಭಾಗದ ಸಮಸ್ಯೆ ಪರಿಹಾರಕ್ಕೆ ಮಾಡ್ತಿರೋದು. ಹೀಗಾಗಿ ವಿಪಕ್ಷಗಳು ವಿರೋಧ ಮಾಡೋದು ಬಿಟ್ಟು ಸಾರ್ವಜನಿಕ ವಿಷಯಗಳ ಬಗ್ಗೆ ಚರ್ಚೆ ಮಾಡಲಿ ಎಂದು ತಿರುಗೇಟು ನೀಡಿದರು.

    BJP - CONGRESS

    40% ಸರ್ಕಾರ ಎಂಬ ಕಾಂಗ್ರೆಸ್ ಆರೋಪ ಬಗ್ಗೆ ಮಾತನಾಡಿದ ಅವರು, 40% ಸರ್ಕಾರ ಅಂತ ಯಾರು ಸಾಬೀತು ಮಾಡಿದ್ದಾರೆ. ಯಾರ ಕಾಲದಲ್ಲಿ ಎಷ್ಟು ಇತ್ತು ಅಂತ ಎಲ್ಲರಿಗೂ ಗೊತ್ತಿದೆ. ಸುಮ್ಮನೆ ಆರೋಪ ಮಾಡಿದ್ರೆ ಆಗುತ್ತಾ ಸಾಬೀತು ಮಾಡಬೇಕು. ಸುಮ್ಮನೆ ಪ್ರಧಾನಿಗೆ ಪತ್ರ ಬರೆದರೆ ಆಗೊಲ್ಲ. ವಿಪಕ್ಷಗಳು ಏನೇ ಆರೋಪ ಮಾಡಲಿ, ದಾಖಲಾತಿ ಬಿಡುಗಡೆ ಮಾಡಲಿ. ನಾವು ಎಲ್ಲದ್ದಕ್ಕೂ ಸಿದ್ಧರಾಗಿದ್ದೇವೆ. ಕಾಂಗ್ರೆಸ್ ಏನು ಆರೋಪ ಮಾಡಿದ್ರು ಅದಕ್ಕೆ ಉತ್ತರ ಕೊಡೋದು ಸರ್ಕಾರ 100% ಸಿದ್ಧವಾಗಿದೆ. ಸುಮ್ಮನೆ ಆರೋಪ ಮಾಡಿದ್ರೆ ಒಪ್ಪಲು ಸಾಧ್ಯವಿಲ್ಲ. ಚರ್ಚೆ ಮಾಡಲಿ ಸರ್ಕಾರ ಸಮರ್ಥವಾಗಿ ಉತ್ತರ ನೀಡುತ್ತೆ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಪರೀಕ್ಷೆ ಬರೆದು ಬರುತ್ತಿದ್ದ ನಾಲ್ವರು ವಿದ್ಯಾರ್ಥಿಗಳ ಮೇಲೆ ಚಾಕು ಇರಿತ

  • ಡಿ.14ರಂದು ಡಿಕೆಶಿ ಪ್ರತಿ ಶಬ್ದಕ್ಕೆ ಉತ್ತರ ಸಿಗಲಿದೆ: ಜಾರಕಿಹೊಳಿ ಗುಡುಗು

    ಡಿ.14ರಂದು ಡಿಕೆಶಿ ಪ್ರತಿ ಶಬ್ದಕ್ಕೆ ಉತ್ತರ ಸಿಗಲಿದೆ: ಜಾರಕಿಹೊಳಿ ಗುಡುಗು

    ಬೆಳಗಾವಿ: ಮಾಧ್ಯಮದವರಿಗೆ ಬೇಕಿರೋ ಉತ್ತರ ಇಂದು ಸಿಗಲ್ಲ. ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ದಿನ ಡಿ.14ರಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಪ್ರತಿ ಶಬ್ದಕ್ಕೆ ಉತ್ತರ ಸಿಗಲಿದೆ. ಅಂದು ಅತ್ಯಂತ ಕಠೋರವಾಗಿ ಉತ್ತರ ಕೊಡುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಗುಡುಗಿದ್ದಾರೆ.

    ಡಿಕೆಶಿ ಹೇಳಿಕೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಗೆಲ್ಲಲೇಬೇಕು. ಇದಕ್ಕಾಗಿ ಜಿಲ್ಲೆಯ ಮೂಲೆ ಮೂಲೆಯಲ್ಲಿ ಪ್ರಚಾರ ಮಾಡುತ್ತಿದ್ದೇವೆ. ನಿಮಗೆ ಬೇಕಿರೋ ಉತ್ತರ ಇಂದು ಸಿಗಲ್ಲ. ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ದಿನ ಅಂದರೆ ಡಿ.14ರಂದು ಡಿಕೆ ಶಿವಕುಮಾರ್ ಅವರ ಪ್ರತಿ ಶಬ್ದಕ್ಕೆ ಉತ್ತರ ಸಿಗಲಿದೆ. ಅತ್ಯಂತ ಕಠೋರವಾಗಿ ಅಂದು ಉತ್ತರ ಕೊಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ತಿರುಮಲ ಘಾಟ್‍ನಲ್ಲಿ ಉರುಳಿದ ಬೃಹತ್ ಬಂಡೆ – ತಿಮ್ಮಪ್ಪನ ದರ್ಶನಕ್ಕೆ ನೋ ಎಂಟ್ರಿ

    ಅಂದು 1985ರಿಂದ ಇಲ್ಲಿಯವರೆಗೆ ನಡೆದ ಎಲ್ಲ ವಿಚಾರ ಬಹಿರಂಗವಾಗಿ ಮಾತನಾಡುತ್ತೇನೆ. ಆಗ ನನ್ನ ವ್ಯಕ್ತಿತ್ವ ಏನು? ಡಿಕೆ ಶಿವಕುಮಾರ್ ವ್ಯಕ್ತಿತ್ವ ಏನು? ಎಂದು ಹೇಳುತ್ತೇನೆ. ಅಂದು ಓಪನ್ ವಾರ್ ಆಗಲಿ. ಫಲಿತಾಂಶದ ದಿನ ಎಲ್ಲಕ್ಕೂ ಉತ್ತರ ಕೊಡುತ್ತೇನೆ ಎಂದು ಉತ್ತರಿಸಿದರು.

    ಡಿಕೆ ಶಿವಕುಮಾರ್ ಅವರ ಕುಟುಂಬ, ರಮೇಶ್ ಜಾರಕಿಹೊಳಿ ಕುಟುಂಬ ಹೇಗಿತ್ತು? ಎಲ್ಲವನ್ನೂ ಬಹಿರಂಗವಾಗಿ ಮಾತಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೆಹಲಿ ವರಿಷ್ಠರ ಆಶೀರ್ವಾದ ನನ್ನ ಮೇಲೆ ಇದೆ. ದೆಹಲಿ ವರಿಷ್ಠರು ಇದ್ದಾರೆ ಎಂದು ನಾನು ಜೀವಂತ ಇದ್ದೇನೆ. ಇಲ್ಲದ್ದಿದ್ದಲ್ಲಿ ಇಷ್ಟೊತ್ತಿಗೆ ನನ್ನ ವಿರುದ್ಧ ಷಡ್ಯಂತ್ರ ಮಾಡಿ ಮುಗಿಸಿ ಬಿಡುತ್ತಿದ್ದರು. ಸಂಘ ಪರಿವಾರದ ನಾಯಕರ ಬೆಂಬಲದಿಂದ ನಾಯಕನಾಗಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಜಗ್ಗೇಶ್ ಅಭಿಮಾನಿಗಳಿಂದ ಪುನೀತ್ ಹೆಸರಲ್ಲಿ ವೃದ್ಧೆಗೆ ಸೂರು

    bjp - congress

    ಬ್ಲ್ಯಾಕ್‍ಮೇಲ್ ಯಾರು ಮಾಡುತ್ತಾರೆ ಎಂದು ಡಿ.14ನೇ ತಾರೀಕು ಹೇಳುತ್ತೇನೆ. ಈಗ ಇದ್ದ ಎಂಎಲ್‍ಎ ಸ್ಥಾನ ಉಳಿಸಿಕೊಳ್ಳಿ. ಆಮೇಲೆ ನೋಡೋಣ. ಡಿ.14 ರಂದು ಡಿಕೆ ಶಿವಕುಮಾರ್, ರಮೇಕ್ ಜಾರಕಿಹೊಳಿ ವಾರ್ ಆಗಲಿ ನೋಡೋಣ ಎಂದು ಸವಾಲು ಹಾಕಿದ ಅವರು, 2023ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ತರಲು ನಾವು ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

  • ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ಒಂದೇ ಮತ, ಒಂದೇ ಅಭ್ಯರ್ಥಿ: ಸತೀಶ್ ಜಾರಕಿಹೊಳಿ

    ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ಒಂದೇ ಮತ, ಒಂದೇ ಅಭ್ಯರ್ಥಿ: ಸತೀಶ್ ಜಾರಕಿಹೊಳಿ

    ಬೆಳಗಾವಿ: ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ಒಂದೇ ಮತ, ಒಂದೇ ಅಭ್ಯರ್ಥಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

    ಪರಿಷತ್ ಚುನಾವಣೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿ ಚನ್ನರಾಜ್ ಹಟ್ಟಿಹೊಳಿ ನಾಮಪತ್ರ ಸಲ್ಲಿಸುತ್ತಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಅರ್ಧದಷ್ಟು ಪ್ರಚಾರ ಕಾರ್ಯ ಮಾಡಿದ್ದೇವೆ. ಬಿಜೆಪಿಯಿಂದ ಇಬ್ಬರು ಸ್ಪರ್ಧೆ ಮಾಡುತ್ತಿದ್ದಾರೆ. ಅವರಿಗೆ ಚಾಲೆಂಜ್ ಇರೋದು. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ಒಂದೇ ಮತ, ಒಂದೇ ಅಭ್ಯರ್ಥಿ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ:  ಪ್ರಾಣವನ್ನೇ ಪಣಕ್ಕಿಟ್ಟು ಅರ್ಚಕನನ್ನು ರಕ್ಷಿಸಿದ ಟ್ರಾಫಿಕ್ ಪೊಲೀಸ್ – ವೀಡಿಯೋ ವೈರಲ್

    ಪಕ್ಷೇತರ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ಚುನಾವಣೆಯನ್ನು ಪಕ್ಷದ ಮೇಲೆ ಮಾಡುತ್ತಿದ್ದೇವೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಚುನಾವಣೆಯಲ್ಲಿ ಗೆಲ್ಲಲೇಬೇಕು. ಲೋಕಸಭಾ ಉಪಚುನಾವಣೆ ನನ್ನ ವಿರುದ್ಧ ಹಣ ಹಂಚಿ ನನ್ನನ್ನು ಸೋಲಿಸಿದ್ದಾರೆ. ಲಖನ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ದುಡ್ಡು ಕೊಟ್ಟು ನನ್ನ ಸೋಲಿಸಿದ್ದಾರೆ. ಆ ನೋವು ನಮಗೆ ಹಾಗೂ ನಮ್ಮ ಕಾರ್ಯಕರ್ತರಿಗೂ ಇದೆ. ಬಹುಶಃ ಲಖನ್ ಜಾರಕಿಹೊಳಿ ಚುನಾವಣೆ ನಿಲ್ತಾರೋ ಇಲ್ವೋ ಅನುಮಾನ. ಪಕ್ಷದ ವರಿಷ್ಠರು ಒಳ್ಳೆಯ ಅವಕಾಶ ಕೊಡ್ತಿವಿ ಅಂದ್ರೆ ವಾಪಸ್ ಪಡಿಯುವ ಅವಕಾಶ ಇದೆ. ಲಖನ್ ಜಾರಕಿಹೊಳಿ ಜೊತೆಗೆ ಮಾತನಾಡುವ ಪ್ರಶ್ನೆ ಇಲ್ಲ ಎಂದು ಕಿಡಿಕಾರಿದರು.

    ಇದು ಪಕ್ಷ ಆಧಾರದ ಮೇಲೆ ಚುನಾವಣೆ. ಕುಟುಂಬ ಆಧಾರದ ಮೇಲೆ ಚುನಾವಣೆ ಅಲ್ಲ. ಜಾರಕಿಹೊಳಿ ಕುಟುಂಬ, ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಫೈಟ್ ಅಲ್ಲ. ನಾವು ಜಾರಕಿಹೊಳಿ ಈ ಕಡೆ ಇದ್ದೇವೆ. ಸಹೋದರರ ಸವಾಲ್, ರಾಜಕೀಯ ಸವಾಲು ಇದ್ದೇ ಇರುತ್ತೆ. ರಮೇಶ್ ಜಾರಕಿಹೊಳಿ ಎಂದಿಗೂ ಸೀರಿಯಸ್ ಆಗೇ ಇರುತ್ತಾರೆ. ಅವರ ತಂಡ ಇರೋದು ನಾವು, ನೀವು ಎಂದು ನೋಡಿಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಹೈಟೆಕ್ ವಂಚನೆ

  • ಸಿಖ್, ಬೌದ್ಧರಂತೆ ಲಿಂಗಾಯತಕ್ಕೂ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕು: ಎಸ್.ಎಂ.ಜಾಮದಾರ

    ಸಿಖ್, ಬೌದ್ಧರಂತೆ ಲಿಂಗಾಯತಕ್ಕೂ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕು: ಎಸ್.ಎಂ.ಜಾಮದಾರ

    ಬೆಳಗಾವಿ: ಸಿಖ್, ಬೌದ್ಧರಂತೆ ಲಿಂಗಾಯತಕ್ಕೂ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನಕಾರ್ಯದರ್ಶಿ ಎಸ್.ಎಂ.ಜಾಮದಾರ ಆಗ್ರಹಿಸಿದರು.

    ಬೆಳಗಾವಿಯ ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆದಿದ್ದು, ಈ ಕುರಿತು ಜಾಮದಾರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆಗಾಗಿ ನಮ್ಮ ಹೋರಾಟ ನಿಂತಿಲ್ಲ. ನಮ್ಮ ಹಕ್ಕಿಗಾಗಿ ಹೋರಾಟ ಮುಂದುವರಿದಿದೆ. ಜನರಲ್ಲಿ ಅರಿವು ಮೂಡಿಸುವ ಕೆಲಸ ಭರದಿಂದ ಸಾಗಿದೆ. ಕರ್ನಾಟಕಕ್ಕಿಂತ ಮಹಾರಾಷ್ಟ್ರದಲ್ಲಿ ಜಾಗೃತಿ ಹೆಚ್ಚಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: 21 ವರ್ಷಕ್ಕೆ ಗ್ರಾಮದ ಮುಖ್ಯಸ್ಥೆಯಾಗಿ ಇತಿಹಾಸ ಸೃಷ್ಟಿಸಿದ ಯುವತಿ

    ಕರ್ನಾಟಕದಲ್ಲಿಯೂ ಜಾಗೃತಿ ಹೆಚ್ಚಿಸಲು ಬೆಳಗಾವಿಯಲ್ಲಿ ಕಾರ್ಯಾಲಯ ತೆರೆದಿದ್ದೇವೆ. ಕೊರೊನಾ ಕಾರಣಕ್ಕೆ ಸಕ್ರಿಯವಾಗಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಆದರೆ ಈ ಸಮಯದಲ್ಲಿ ಸದಸ್ಯರ ಸಂಖ್ಯೆ ಹೆಚ್ಚಿಸಿಕೊಂಡಿದ್ದೇವೆ. ಕಾನೂನು ಹೋರಾಟಕ್ಕೆ ಮೂರು ನ್ಯಾಯವಾದಿಗಳ ನೇಮಕ ಮಾಡಿಕೊಂಡಿದ್ದೇವೆ. ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಕೇಂದ್ರದಿಂದಲೂ ಉತ್ತರ ಬಂದಿದೆ. ರಾಜ್ಯದ ಪ್ರಸ್ತಾವನೆ ಒಪ್ಪಲು ಕಷ್ಟವಾಗುತ್ತಿದೆ ಎಂದು ಕೇಂದ್ರ ಒಪ್ಪಿದೆ. ಲಿಂಗಾಯತ ಸಮುದಾಯದಲ್ಲಿ ಎಸ್ಸಿ ಎಸ್ಟಿಗಳಿದ್ದಾರೆ. ಇವರು ಮೀಸಲಾತಿ ಕಳೆದುಕೊಳ್ಳಬಹುದು ಎಂದು ತಿಳಿಸಿದರು.

    ಸಿಖ್, ಬೌದ್ಧ ಸಮುದಾಯದಲ್ಲಿಯೂ ಎಸ್ಸಿ, ಎಸ್ಟಿಗಳಿದ್ದಾರೆ. ಆದರೂ ಆ ಎರಡೂ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಕ್ಕಿದೆ. ಸಿಖ್, ಬೌದ್ಧರಂತೆ ಲಿಂಗಾಯತಕ್ಕೂ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕು. ಲಿಂಗಾಯತದ 102 ಉಪಪಂಗಡ ಪೈಕಿ ವೀರಶೈವ ಕೂಡ ಒಂದು ಪಂಗಡವಷ್ಟೇ. ಆ ಒಂದು ಪಂಗಡದ ಮಾತು ಕೇಳಿ ನಮಗೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವುದು ಕಷ್ಟ ಎಂದರೆ ಹೇಗೆ? ಬಸವತತ್ವವೇ ಬೇರೆ, ವೀರಶೈವರ ತತ್ವವೇ ಬೇರೆ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಮೂರ್ನಾಲ್ಕು ದಿನ ಮಳೆ ಸೂಚನೆ – ಆತಂಕದಲ್ಲಿ ಬಯಲುಸೀಮೆ ಮಂದಿ

    ಪ್ರತ್ಯೇಕ ಧರ್ಮಕ್ಕೆ 2018 ಮಾರ್ಚ್ 21 ರಂದು ಶಿಫಾರಸ್ಸು ಮಾಡಿದ್ದು, ರಾಜ್ಯ ಸರ್ಕಾರ ವೀರಶೈವರಂತೆ ನಾವೇನು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿಲ್ಲ. ರಾಜಕೀಯ ಉದ್ದೇಶಕ್ಕೆ ವೀರಶೈವರು ಏನೇನೋ ಹೇಳುತ್ತಿದ್ದಾರೆ. ವೀರಶೈವರ ಮಾತು ಕೇಳಿ ಇನ್ನುಳಿದ 101 ಪಂಗಡಕ್ಕೆ ಅನ್ಯಾಯ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಕೇಂದ್ರದ ಉತ್ತರಕ್ಕೆ ನಾವು ಕಾಯುತ್ತಿದ್ದೇವೆ. ಈ ಕುರಿತು ಹೆಚ್‍ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪ್ರತಿಕ್ರಿಯೆ ನೀಡಲಿಲ್ಲ. ನಂತರ ಬಂದ ಬಿಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ಕೂಡ ಪ್ರತಿಕ್ರಿಯೆಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

  • ಬೆಳಗಾವಿ ಜಿಲ್ಲಾ ಪೊಲೀಸರ ಭರ್ಜರಿ ಕಾರ್ಯಾಚರಣೆ – 8.58 ಕೋಟಿ ರೂ. ಮೌಲ್ಯದ ವಸ್ತುಗಳು ಜಪ್ತಿ

    ಬೆಳಗಾವಿ ಜಿಲ್ಲಾ ಪೊಲೀಸರ ಭರ್ಜರಿ ಕಾರ್ಯಾಚರಣೆ – 8.58 ಕೋಟಿ ರೂ. ಮೌಲ್ಯದ ವಸ್ತುಗಳು ಜಪ್ತಿ

    ಬೆಳಗಾವಿ: ಬೆಳಗಾವಿ ಜಿಲ್ಲಾ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ 8.58 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

    ಪ್ರಕರಣದಲ್ಲಿ ಅಂತರರಾಜ್ಯ ಕಳ್ಳರನ್ನು ಬಂಧಿಸಿದ ಪೊಲೀಸರಿಗೆ 2020-2021ನೇ ಸಾಲಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಕಳ್ಳತನವಾಗಿದ್ದ ವಸ್ತುಗಳು ದೊರಕಿದೆ. 206 ಪ್ರಕರಣ ಪತ್ತೆ ಹಚ್ಚಿ 8,58,23,999ರೂ. ಮೌಲ್ಯದ ವಸ್ತುಗಳು ಮರುಸಂದಾಯಗೊಂಡಿದೆ.ಇದನ್ನೂ ಓದಿ: ಕೋವಿಡ್-19 ಲಸಿಕೆ ಪಡೆದು 7.4 ಕೋಟಿ ರೂ. ಗೆದ್ದ ಯುವತಿ

    3.38ಕೆಜಿ ಚಿನ್ನಾಭರಣ, 18.156ಕೆಜಿ ಬೆಳ್ಳಿ ಆಭರಣ, 1,21,02,450 ರೂ. ನಗದು, 168 ಬೈಕ್, 32 ವಾಹನ ಸೇರಿ ವಿವಿಧ ಉಪಕರಣಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಬೆಳಗಾವಿ ಎಸ್‍ಪಿ ಲಕ್ಷ್ಮಣ್ ನಿಂಬರಗಿ ನೇತೃತ್ವದಲ್ಲಿ ಕಾಯಾಚರಣೆ ನಡೆದಿದ್ದು, ಕಳ್ಳತನವಾದ ವಸ್ತುಗಳು ಮರಳಿ ಸಿಕ್ಕಿದ್ದಕ್ಕೆ ಜನರು ಸಂತಸಪಟ್ಟು ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.

    ಐವತ್ತು ಗ್ರಾಂ ಚಿನ್ನಾಭರಣ ಕಳೆದುಕೊಂಡಿದ್ದ ಪ್ರಾಥಮಿಕ ಶಾಲಾ ಶಿಕ್ಷಕಿಯೊಬ್ಬರು ಮೂರೇ ದಿನದಲ್ಲಿ ಚಿನ್ನಾಭರಣ ಮರಳಿ ಪಡೆದಿದ್ದಾರೆ. ನನ್ನ ಜೀವಮಾನದಲ್ಲಿ ದುಡಿದ ಹಣವನ್ನು ಕೂಡಿಟ್ಟು ಚಿನ್ನಾಭರಣ ಖರೀದಿಸಿದ್ದೆ. ದೀಪಾವಳಿ ಹಬ್ಬದ ಶಾಪಿಂಗ್‍ಗೆ ಹೋದಾಗ ಘಟಪ್ರಭಾದ ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿತ್ತು. ಇದರಿಂದ ದಿಕ್ಕೇ ತೋಚದಂತಾಗಿತ್ತು. ಕಳ್ಳರ ಪತ್ತೆ ಹಚ್ಚಿ ಚಿನ್ನಾಭರಣ ಮರಳಿಸಿದ ಪೊಲೀಸರಿಗೆ ಶಾಲಾ ಶಿಕ್ಷಕಿ ಧನ್ಯವಾದ ತಿಳಿಸಿದರು.ಇದನ್ನೂ ಓದಿ: ವನ್ಯಜೀವಿ ಸಾಕ್ಷ್ಯಚಿತ್ರಕ್ಕಾಗಿ ಅಂಜನಾದ್ರಿ ಸುತ್ತ ಓಡಾಡಿದ್ದ ಅಪ್ಪು

  • ಯೋಧರಿಗೆ ಇಡೀ ದೇಶವೇ ಋಣಿಯಾಗಿರಬೇಕು: ಲಕ್ಷ್ಮಿ ಹೆಬ್ಬಾಳ್ಕರ್

    ಯೋಧರಿಗೆ ಇಡೀ ದೇಶವೇ ಋಣಿಯಾಗಿರಬೇಕು: ಲಕ್ಷ್ಮಿ ಹೆಬ್ಬಾಳ್ಕರ್

    ಬೆಳಗಾವಿ: ಯೋಧರಿಗೆ ಇಡೀ ದೇಶವೇ ಋಣಿಯಾಗಿರಬೇಕು ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

    ಬೆಳಗಾವಿ ಗ್ರಾಮೀಣ ಕ್ಷೇತ್ರದ ಮುತ್ನಾಳ ಗ್ರಾಮದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಹಾತ್ಮಾ ಗಾಂಧಿ ಮಾಜಿ ಸೈನಿಕರ ಸಂಘವನ್ನು ಬೆಳಗಾವಿ ಗ್ರಾಮೀಣ ಶಾಸಕಿ ಉದ್ಘಾಟಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶ ಸುಭದ್ರ ಸ್ಥಿತಿಯಲ್ಲಿರುವುದಕ್ಕೆ ಸೈನಿಕರೇ ಕಾರಣರಾಗಿದ್ದಾರೆ. ಸೈನಿಕರನ್ನು ಗೌರವಿಸುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಿದೆ. ಬಂಧು-ಬಳಗವನ್ನೆಲ್ಲ ಬಿಟ್ಟು ದೇಶದ ಗಡಿಭಾಗಗಳಲ್ಲಿ ಕರ್ತವ್ಯ ನಿರತರಾಗಿರುವ ಸೈನಿಕರಿಗೆ ಹಾಗೂ ಕರ್ತವ್ಯದಿಂದ ನಿವೃತ್ತಿಯಾಗಿರುವ ಎಲ್ಲ ಸೈನಿಕರಿಗೆ ನಾವೆಲ್ಲ ಋಣಿಯಾಗಿರಬೇಕು ಎಂದು ಹೇಳಿದರು. ಇದನ್ನೂ ಓದಿ: ನೀಟ್ ಪರೀಕ್ಷೆಯಲ್ಲಿ 384ನೇ ರ‍್ಯಾಂಕ್ ಪಡೆದ RLS ವಿದ್ಯಾರ್ಥಿ

    ಈ ವೇಳೆ ದಿವ್ಯ ಸಾನಿಧ್ಯವನ್ನು ಮುತ್ನಾಳ್ ಕೇದಾರಪೀಠದ ಶಿವಾನಂದ್ ಮಹಾಸ್ವಾಮಿಗಳು ವಹಿಸಿದ್ದರು.

  • ನೀಟ್ ಪರೀಕ್ಷೆಯಲ್ಲಿ 384ನೇ ರ‍್ಯಾಂಕ್  ಪಡೆದ RLS ವಿದ್ಯಾರ್ಥಿ

    ನೀಟ್ ಪರೀಕ್ಷೆಯಲ್ಲಿ 384ನೇ ರ‍್ಯಾಂಕ್ ಪಡೆದ RLS ವಿದ್ಯಾರ್ಥಿ

    ಬೆಳಗಾವಿ: ನೀಟ್ ಪರೀಕ್ಷೆಯಲ್ಲಿ RLS ಕಾಲೇಜಿನ ವಿದ್ಯಾರ್ಥಿಯ ಅತ್ಯುತ್ತಮ ಸಾಧನೆ ಮಾಡಿದ್ದು, 384ನೇ ರ‍್ಯಾಂಕ್ ಪಡೆದಿದ್ದಾನೆ.

    ಮಹಮ್ಮದ್ ಕೈಪ್ ಗೆ ದೇಶದಲ್ಲಿಯೇ 384ನೇ ರ‍್ಯಾಂಕ್ ಪಡೆದ ಪ್ರತಿಭಾವಂತ ವಿದ್ಯಾರ್ಥಿ. ಬೆಳಗಾವಿಯ ಪ್ರತಿಷ್ಠಿತ ಕೆಎಲ್‍ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಕಾಲೇಜಿನ ಮಹಮ್ಮದ್ ಕೈಪ್ ವಿದ್ಯಾರ್ಥಿ ನೀಟ್ ಪರೀಕ್ಷೆಯಲ್ಲಿ ದೇಶದಲ್ಲಿಯೇ 384ನೇ ರ‍್ಯಾಂಕ್ ಪಡೆದುಕೊಳ್ಳುವ ಮೂಲಕ ಒಳ್ಳೆಯ ಸಾಧನೆ ಮಾಡಿದ್ದಾನೆ. ಇದನ್ನೂ ಓದಿ: ಕಬಿನಿ ಜಲಾಶಯ ಭರ್ತಿ – ಸಂತಸ ವ್ಯಕ್ತಪಡಿಸಿದ ಸಿಎಂ ಬೊಮ್ಮಾಯಿ

    ನೀಟ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ರಾಜಾ ಲಖಮಗೌಡ ವಿಜ್ಞಾನ ಕಾಲೇಜಿನ ಮಹಮ್ಮದ್ ಕೈಫ್ ಮುಲ್ಲಾ 720ರ ಪೈಕಿ 691 ಅಂಕ ಪಡೆಯುವ ಮೂಲಕ ದೇಶದಲ್ಲಿ 384 ರ‍್ಯಾಂಕ್ ಪಡೆದಿದ್ದಾನೆ. ದೇಶದ ಓಬಿಸಿ ಕೆಟಗರಿಯಲ್ಲಿ 88ನೇ ರ‍್ಯಾಂಕ್ ಪಡೆಯುವ ಮೂಲಕ ಅತ್ಯುತ್ತಮ ಸಾಧನೆಗೈದಿದ್ದಾನೆ.

  • ಬೆಳಗಾವಿ ಸುವರ್ಣಸೌಧ ಮುಂದೆ ಮಾತಾಡ್ ಮಾತಾಡ್ ಕನ್ನಡ ಗೀತೆಗಳ ಕಲರವ

    ಬೆಳಗಾವಿ ಸುವರ್ಣಸೌಧ ಮುಂದೆ ಮಾತಾಡ್ ಮಾತಾಡ್ ಕನ್ನಡ ಗೀತೆಗಳ ಕಲರವ

    ಬೆಳಗಾವಿ: ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ವಿಶ್ವದಾದ್ಯಂತ ಏಕಕಾಲದಲ್ಲಿ ಲಕ್ಷ ಕಂಠಗಳಲ್ಲಿ ಕನ್ನಡ ಗೀತ ಗಾಯನ ವಿಶೇಷ ಅಭಿಯಾನ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಬೆಳಗಾವಿಯ ಸುವರ್ಣಸೌಧದಲ್ಲೂ ಗೀತಾ ಗಾಯನ ನಡೆಯಿತು.

    ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವಕ್ಕೆ ಕ್ಷಣಗಣನೇ ಶುರುವಾಗಿದೆ. ಅದಕ್ಕೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ವಿಶೇಷವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಬೇಕು ಎಂಬ ಸದುದ್ದೇಶದಿಂದ ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಮಾತಾಡ್ ಮಾತಾಡ್ ಕನ್ನಡ, ಕನ್ನಡಕ್ಕಾಗಿ ನಾವು ಎಂಬ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯೋತ್ಸವ ಅಭಿಯಾನ ನಿಮಿತ್ತ ವಿಶ್ವದ್ಯಾಂತ ಏಕಕಾಲದಲ್ಲಿ ಕನ್ನಡ ಗೀತ ಗಾಯನ ನಡೆಸಲಾಯಿತು. ಇದನ್ನೂ ಓದಿ: ಜಮೀನು ವಿವಾದ ಎರಡು ಗ್ರಾಮಗಳ ನಡುವೆ ಮಾರಾಮಾರಿ

    ಬೆಳಗಾವಿಯ ಸುವರ್ಣಸೌಧದ ಮುಂಭಾಗದ ಆರಂಭದಲ್ಲಿ ಕನ್ನಡ ಗೀತ ಗಾಯನಕ್ಕೆ ಸಂಸದೆ ಮಂಗಲ ಅಂಗಡಿ, ಜಿಲ್ಲಾಧಿಕಾರಿ ಮಹಾಂತೇಶ್ ಹಿರೇಮಠ, ಜಿ.ಪಂ.ಸಿಇಓ ದರ್ಶನ್ ಸೇರಿದಂತೆ ಹಲವು ಅಧಿಕಾರಿಗಳು ಹಳದಿ-ಕೆಂಪು ಬಣ್ಣದ ಬಲೂನ್‍ಗಳನ್ನು ಹಾರಿಸುವ ಮೂಲಕ ಚಾಲನೆ ನೀಡಿದರು.

    ಇದೇ ವೇಳೆ ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ನಾನು ಕನ್ನಡದಲ್ಲೇ ಮಾತನಾಡುತ್ತೇನೆ. ಕನ್ನಡದಲ್ಲೇ ಬರೆಯುತ್ತೇನೆ. ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆ ಎಂಬ ಪಣ ತೊಡುತ್ತೇನೆ. ಕನ್ನಡ ನಾಡಿನಲ್ಲಿ ವಾಸವಾಗಿರುವ ಕನ್ನಡೇತರ ಬಂಧುಗಳಿಗೆ ಪ್ರೀತಿಯಿಂದ ಕನ್ನಡ ಕಲಿಸುತ್ತೇನೆ. ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಲು ಕಟಿಬದ್ಧನಾಗಿರುತ್ತೇನೆ ಎಂದು ಅಲ್ಲಿ ನೆರೆದಿದ್ದವರು ಸಂಕಲ್ಪ ಮಾಡಿದರು. ಇದನ್ನೂ ಓದಿ:  ಸೌಂದರ್ಯ ಜಗದೀಶ್ ಕುಟುಂಬದಿಂದ ಹಲ್ಲೆ ಪ್ರಕರಣ – ಇಬ್ಬರ ಹೆಸರು ಕೈಬಿಡುವಂತೆ ದೂರುದಾರೆ ಮನವಿ