ಬೆಳಗಾವಿ: ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರ ತವರು ಜಿಲ್ಲೆಯಲ್ಲೇ ಮುಜರಾಯಿ ಇಲಾಖೆ ಭ್ರಷ್ಟಾಚಾರ ಬಟಾಬಯಲಾಗಿದೆ.
ಬೆಳಗಾವಿ ಜಿಲ್ಲೆ ರಾಮದುರ್ಗದ ಯಕಲಮ್ಮ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಆರಾಧನಾ ಯೋಜನೆ ಅಡಿಯಲ್ಲಿ 4 ಲಕ್ಷ ರೂಪಾಯಿ ಅನುದಾನ ಮಂಜೂರಾಗಿತ್ತು. ಈ ವೇಳೆ ಬೆಳಗಾವಿಯ ಮುಜರಾಯಿ ಇಲಾಖೆ ತಹಶೀಲ್ದಾರ್ ದಶರಥ ಜಾದವ್ ಮತ್ತು ಅಳಿಯ ಸಂತೋಷ್ ಮಂಜೂರಾದ ಹಣ ಬಿಡುಗಡೆ ಮಾಡಲು 5% ರಷ್ಟು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ದಶರಥ ಸಂತೋಷನ ಹಾಲಿನ ಡೈರಿಗೆ ತೆರಳಿ 20,000 ರೂ. ಹಣ ನೀಡಲು ತಿಳಿಸಿದ್ದ. ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮಂಡಳಿ ಸದಸ್ಯ ಸುಭಾಷ್ ಗೋಡಕೆ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಇದನ್ನೂ ಓದಿ: ಅಧಿಕಾರಿಗಳ ಮುಂದೆ ಎರಡು ಕುಟುಂಬಗಳ ನಡುವೆ ಮಾರಾಮಾರಿ
ನಿನ್ನೆ ರಾತ್ರಿ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದು ಬಂಧಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಚಿಕ್ಕೋಡಿ: ಕೊರೊನಾ ನಿಯಂತ್ರಿಸಲು ಸರ್ಕಾರ ಲಾಕ್‍ಡೌನ್ ಮಾಡದೆ ಇದ್ರೆ ಸ್ವಾಗತಾರ್ಹ ಎಂದು ಅರಣ್ಯ ಹಾಗೂ ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಹುಕ್ಕೇರಿ ಪಟ್ಟಣದ ತಾಲೂಕು ಪಂಚಾಯತಿ ಸಭಾ ಭವನದಲ್ಲಿ ವಿಕಲಚೇತನರಿಗೆ ಟ್ರೈಸಿಕಲ್ ವಾಹನ ವಿತರಿಸಿ ಮಾತನಾಡಿದ ಅವರು, ಲಾಕ್‍ಡೌನ್ ಮಾಡುವ ಬದಲು ಜನರೇ ಮುನ್ನೆಚ್ಚರಿಕೆ ಕ್ರಮ ಪಾಲಿಸಬೇಕು. ಕೊರೊನಾ ಮುನ್ನೆಚ್ಚರಿಕೆ ಪಾಲಿಸಿದರೆ ಲಾಕ್‍ಡೌನ್ ಅವಶ್ಯಕತೆ ಇಲ್ಲ. ನೂರಾರು ಜನ ಸೇರಿ ಜಾತ್ರೆ, ಹಬ್ಬ ಮಾಡುವುದನ್ನು ನಿಲ್ಲಿಸಬೇಕು. ಮಾಸ್ಕ್ ಸ್ಯಾನಿಟೈಸರ್ ಬಳಸಿ ಮುಂಜಾಗೃತೆಯಿಂದ ರಾಜ್ಯದ ಜನ ಇದ್ರೆ ಸರ್ಕಾರಕ್ಕೆ ಲಾಕ್‍ಡೌನ್ ಮಾಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಕೋವಿಡ್-19 ಪ್ರಕರಣ ಏರಿಕೆ – ಮದುವೆ ನೋಂದಣಿ ಸೇವೆ ಸ್ಥಗಿತ!
ಜೆ.ಜೆ.ಎಂ ಯೋಜನೆ ಅಡಿಯಲ್ಲಿ ಹುಕ್ಕೇರಿ ತಾಲೂಕಿನ ಪ್ರತಿ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಕೊಡುವ ಯೋಜನೆ ಜಾರಿಯಲ್ಲಿದೆ. ಶೀಘ್ರದಲ್ಲಿ ಹುಕ್ಕೇರಿ ಕ್ಷೇತ್ರದ ಪ್ರತಿ ಗ್ರಾಮಗಳಿಗೆ 24 ಗಂಟೆ ಕುಡಿಯುವ ನೀರು ದೊರೆಯಲಿದೆ. ಜನರಿಗೆ ಶುದ್ಧ ಕುಡಿಯುವ ನೀರು ಹಾಗೂ ಸ್ವಚ್ಛ ವಾತಾವರಣ ಕಲ್ಪಿಸುವುದು ನಮ್ಮ ಗುರಿ ಎಂದು ಹೇಳಿದರು.
ನಾನು ಹುಕ್ಕೇರಿ ಭಾಗದ ಶಾಸಕನಾಗಿ ಕ್ಷೇತ್ರದ ಚಿತ್ರಣ ಬದಲು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ್ರೆ ಹುಕ್ಕೇರಿ ಮಾದರಿ ವಿಧಾನಸಭಾ ಕ್ಷೇತ್ರ ಆಗುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: 12 ಕೋಟಿ ರೂ. ಬಂಪರ್ ಲಾಟರಿ ಗೆದ್ದ ಪೇಂಟರ್!
ಈ ವೇಳೆ ಹುಕ್ಕೇರಿ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ತಹಶಿಲ್ದಾರರು ಸೇರಿದಂತೆ ತಾಲೂಕಾಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಬೆಳಗಾವಿ: ಚುಚ್ಚುಮದ್ದು ಪಡೆದ ಮೂವರು ಮಕ್ಕಳು ನಿಗೂಢವಾಗಿ ಸಾವನ್ನಪ್ಪಿದ್ದು, ಮಕ್ಕಳನ್ನು ನೋಡಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಪ್ರಸ್ತುತ ರಾಮದುರ್ಗದಲ್ಲಿ ಮೃತ 14 ತಿಂಗಳ ಮಗು ಮಧು ಮರಣೋತ್ತರ ಪರೀಕ್ಷೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಮುಗಿದಿದ್ದು, ಮಗುವಿನ ಮೃತದೇಹದ ಕೈಯನ್ನು ಹಿಡಿದು ಮಗುವಿನ ಅಜ್ಜಿ ಅಂಬುಲೆನ್ಸ್ ಹತ್ತಿದ್ದಾರೆ. ಈ ವೇಳೆ ಮಗುವಿನ ಮುಖ ನೋಡಿದ ಪೋಷಕರ ಕಣ್ಣೀರು ನಿಲ್ಲುತ್ತಿರಲಿಲ್ಲ.
ಹೇಗಾಯಿತು?
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಬೋಚಬಾಳ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಜನವರಿ 13ರಂದು 14 ತಿಂಗಳ ಮಧು ಚುಚ್ಚುಮದ್ದು ಪಡೆದಿದ್ದಳು. ಮಕ್ಕಳಿಗೆ ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಸಿಬ್ಬಂದಿ ಚುಚ್ಚುಮದ್ದು ನೀಡಿದ್ದರು. ಬಳಿಕ ಮಗುವಿಗೆ ವಾಂತಿಬೇಧಿ ಕಾಣಿಸಿಕೊಂಡಿತ್ತು. ಪರಿಣಾಮ ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮಧು ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಉನ್ನತ ಶಿಕ್ಷಣ ಸಚಿವರು ನಮಗೆ ಕೊಟ್ಟಿದ್ದು ಸಿಹಿಯಲ್ಲ, ಕಹಿ: ಅತಿಥಿ ಉಪನ್ಯಾಸಕರ ಆಕ್ರೋಶ
ಮೂರು ದಿನಗಳ ಅಂತರದಲ್ಲಿ ಮೂವರು ಮಕ್ಕಳ ಸಾವು ಸಂಭವಿಸಿದೆ. ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಸಿಬ್ಬಂದಿಯಿಂದ ಚುಚ್ಚುಮದ್ದು ಪಡೆದಿದ್ದ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಮಕ್ಕಳಿಗೆ ಚುಚ್ಚುಮದ್ದು ಹಾಗೂ ವಯಸ್ಕರಿಗೆ ಕೋವಿಡ್ ವ್ಯಾಕ್ಸಿನ್ ಒಂದೇ ಕೇಂದ್ರದಲ್ಲಿ ಅಕ್ಕಪಕ್ಕವಿಟ್ಟು ಚುಚ್ಚುಮದ್ದು ನೀಡಿದ್ದಾರೆ ಎಂಬ ಆರೋಪ ಸಹ ಕೇಳಿಬರುತ್ತಿದೆ.
ಮಗುವಿನ ಸಾವಿಗೆ ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಸಹ ಕೇಳಿಬರುತ್ತಿದೆ. ಈ ಹಿನ್ನೆಲೆ ಮಕ್ಕಳ ಸಾವಿನ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಕುಟುಂಬಸ್ಥರು ಒತ್ತಾಯ ಮಾಡುತ್ತಿದ್ದಾರೆ. ಇದನ್ನೂ ಓದಿ: 4.50 ಕೋಟಿ ರೂ. ಹಳೆಯ ಕರೆನ್ಸಿಯೊಂದಿಗೆ ಸಿಕ್ಕಿಬಿದ್ದ 6 ಮಂದಿ ವಶ
ಬೆಳಗಾವಿ: ಆಟೋ ಚಾಲಕನೊಬ್ಬನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಪಕ್ಕ ನಿರ್ಜನ ಪ್ರದೇಶದಲ್ಲಿ ನಡೆದಿದೆ.
ನೋಹಾನ್ ಧಾರವಾಡಕರ್(23) ಕೊಲೆಯಾದ ಆಟೋ ಚಾಲಕ. ನೋಹಾನ್ 5 ದಿನಗಳ ಹಿಂದೆ ಆಟೋ ಸಮೇತ ಮನೆಯಿಂದ ಹೊರಗಡೆ ತೆರಳಿದ್ದ. ಆದರೆ ಆತ ನಂತರ ಮನೆಗೆ ಮರಳಿರಲಿಲ್ಲ. ಸೋಮವಾರ ಮುಂಜಾನೆ ರಾಷ್ಟ್ರೀಯ ಹೆದ್ದಾರಿ ಪಕ್ಕ ನಿರ್ಜನ ಪ್ರದೇಶದಲ್ಲಿ ಆತನ ಆಟೋ ಪತ್ತೆಯಾಗಿದೆ. ಈ ವೇಳೆ ಹುಡುಕಾಟ ನಡೆಸಿದಾಗ ಪಾಳು ಬಿದ್ದ ಮನೆಯೊಂದರ ಶೌಚಾಲಯದಲ್ಲಿ ಆತನ ಶವ ಪತ್ತೆಯಾಗಿದೆ. ಇದನ್ನೂ ಓದಿ: ಬದುಕಿನ ಪಾಠ ಹೇಳಿದ ಪತ್ನಿಯನ್ನೇ ಕೊಂದು ಮನೆಯಲ್ಲೇ ಹೂತಿದ್ದ ಪತಿರಾಯ ಅರೆಸ್ಟ್
ಘಟನೆ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೋಹಾನ್‌ನನ್ನು ಆತನ ಸ್ನೇಹಿತರೇ ಪಾರ್ಟಿಗೆಂದು ಕರೆದುಕೊಂಡು ಹೋಗಿ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ – ಭಯದಲ್ಲಿ ಗ್ರಾಮದ ಜನರು!
ಬೆಳಗಾವಿ: ಈಗ 9ನೇ ತರಗತಿವರೆಗೆ ಶಾಲೆಗಳನ್ನು ಬಂದ್ ಮಾಡಿದ್ದೇವೆ. ಪರಿಸ್ಥಿತಿ ನೋಡಿಕೊಂಡು ಮುಂದೆ ಏನು ಕ್ರಮ ವಹಿಸಬೇಕು, ಅದನ್ನ ಸರ್ಕಾರ ವಹಿಸುತ್ತೆ ಎಂದು ಸಚಿವ ಡಾ.ಅಶ್ವಥ್ ನಾರಾಯಣ್ ತಿಳಿಸಿದರು.
ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಓಮಿಕ್ರಾನ್ ವೇಗವಾಗಿ ಹರಡುವ ವೈರಸ್. ಲಾಕ್‍ಡೌನ್ ಮಾಡಬಾರದು ಅನ್ನೋದೇ ಸರ್ಕಾರದ ಮೂಲ ಉದ್ದೇಶ. ಅದಕ್ಕೆ ಪೂರ್ವಭಾವಿಯಾಗಿ ಸಣ್ಣ ಸಣ್ಣ ನಿರ್ಧಾರಗಳನ್ನ ತೆಗೆದುಕೊಂಡಿದ್ದೇವೆ ಎಂದು ವಿವರಿಸಿದರು. ಇದನ್ನೂ ಓದಿ: ದಿನದಲ್ಲಿ 50 ಸಾವಿರಕ್ಕೂ ಹೆಚ್ಚು ಕೋವಿಡ್-19 ಕೇಸ್! ಜೀವನಾಂಶಕ್ಕೆ ಸಮಸ್ಯೆ ಆಗಬಾರದು. ಬದುಕಿ ಬಾಳಲು ಅವಕಾಶ ಕೊಡಬೇಕು. ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕೇಸ್ ಹೆಚ್ಚುತ್ತಿರುವ ವಿಚಾರಕ್ಕೆ ಗಡಿಗಳನ್ನ ಬಂದ್ ಮಾಡಲು ಅವಕಾಶವಿಲ್ಲ. ನಿರ್ವಹಣೆ ಮಾಡಬಹುದು, ಟೆಸ್ಟಿಂಗ್ ಮಾಡಿ ಕಡಿವಾಣ ಹಾಕಬಹುದು ಎಂದರು.
ಡಿಕೆ ಬ್ರದರ್ಸಗೆ ಟಾಂಗ್!
ಬೆಳಗಾವಿ ಭಾಗದ ಜನರ ಧ್ವನಿಯಾಗಿ ನಾವು ಈಗಾಗಲೇ ಕೆಲಸ ಮಾಡುತ್ತಿದ್ದೇವೆ. ನಾವು ಈ ರೀತಿ ಕೆಲಸ ಮಾಡಿದ್ದೇವೆ ನೀವೇನು ಮಾಡಿದ್ದೀರಿ ಹೇಳ್ರಪ್ಪಾ. ಇಲ್ಲಿ ಬಂದು ಗಲಾಟೆ ಮಾಡುವಂತಿಲ್ಲ, ಪುಂಡಾಟಿಕೆ ಮಾಡುವಂತಿಲ್ಲ ಅಂತಾ ಕೇಳಿದ್ದೀವಿ. ಇದನ್ನ ಸಹಿಸಿಕೊಳ್ಳಲು ಅವರಿಗೆ ಆಗುತ್ತಿಲ್ಲ ಎಂದು ಡಿಕೆ ಬ್ರದರ್ಸ್ ವಿರುದ್ಧ ವಾಗ್ದಾಳಿ ಮಾಡಿದರು.
ಕೇವಲ ನಿಮ್ಮ ವರ್ಚಸ್ಸು, ಪ್ರತಿಷ್ಠೆ, ಸ್ವಾರ್ಥಕ್ಕೆ ಆದ್ಯತೆ ಕೊಟ್ಟು ಬದುಕಿ ಬಾಳುತ್ತಿದ್ದಂತವರು. ಇದು ಸಾಕಾಗಿದೆ. ನಿಮಗೆ ಸಾಧನೆ ಏನಾದ್ರೂ ಇದ್ರೇ ಕೆಲಸದಲ್ಲಿ ತೋರಿಸಬೇಕು. ನೀವು ಏನಾದ್ರೂ ಕೆಲಸ ಮಾಡಿದ್ದೀರಿ ಅಂತಾ ಕೇಳಿದ್ರೇ ಅವರಿಂದ ಉತ್ತರವಿಲ್ಲ ಎಂದು ತಿರುಗೇಟು ನೀಡಿದರು.
ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ. ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಬೆಂಕಿ ಹೊತ್ತಿಕೊಳ್ಳಲು ಕಾರಣ ಎಂದು ರೈತರು ಆರೋಪಿಸಿದ್ದು, ಘಟನೆ ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ಬೈಕ್‌ಗೆ ನಕಲಿ ನಂಬರ್ ಪ್ಲೇಟ್ – ವಿಕ್ಕಿ ಕೌಶಲ್ ವಿರುದ್ಧ ಕೇಸ್
ಬೆಳಗಾವಿ: ಹಿಂದೆ ಬ್ರಿಟಿಷರು ಮಾಡುತ್ತಿದ್ದ ಕೆಲಸವನ್ನು, ಇಂದು ಕಾಂಗ್ರೆಸ್ ಪಕ್ಷದವರು ಮಾಡ್ತಿದ್ದಾರೆ ಎಂದು ಬಿಜೆಪಿ ಮುಖಂಡ ಧನಂಜಯ್ ಜಾದವ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಹಿಂದೂಪರ ಕಾರ್ಯಕರ್ತರ ಸ್ನೇಹಮಿಲನ ಮತ್ತು ಸ್ನೇಹ ಭೋಜನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಧನಂಜಯ್ ಜಾದವ್ ಅವರು, ಮೊದಲು ಬ್ರಿಟಿಷರು ಜಾತಿ ಮಧ್ಯೆ ಭಾಷೆ ತಂದು ಜಗಳ ಹಚ್ಚುತ್ತಿದ್ರು. ಈಗ ಆ ಕೆಲಸ ಕಾಂಗ್ರೆಸ್ ಪಕ್ಷದವರು ಮಾಡ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಕೊರೊನಾದೊಂದಿಗೆ ಪ್ರತಿಪಕ್ಷಗಳು ಸ್ನೇಹ ಬೆಳೆಸುತ್ತಿದೆ: ಯೋಗಿ ಆದಿತ್ಯನಾಥ್
ಎಲ್ಲಿ ಧ್ವಜ ಹಚ್ಚಿದ್ರೆ ಬೆಂಕಿ ಹೊತ್ತುತ್ತೆ, ಯಾವ ಮೂರ್ತಿ ಇಟ್ರೆ ಬೆಂಕಿ ಹೊತ್ತುತ್ತೆ ಅನ್ನೋದು ಕಾಂಗ್ರೆಸ್ ಅವರಿಗೆ ಚೆನ್ನಾಗಿ ಗೊತ್ತು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್, ಶಿವಸೇನೆ ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟಿತು. ಬೆಂಗಳೂರಲ್ಲಿ ಜಮೀರ್ ಅಹ್ಮದ್ ಬಲಗೈ ಬಂಟ ನವೀನ್ ಗೌಡ ಛತ್ರಪತಿ ಶಿವಾಜಿ ಮಹಾರಾಜರ್ ಮೂರ್ತಿಗೆ ಕಪ್ಪು ಮಸಿ ಬಳಿದ ಎಂದು ವಿವರಿಸಿದರು.
ಮಹಾರಾಷ್ಟ್ರದಲ್ಲಿ ಕರ್ನಾಟಕ ಧ್ವಜ ಸುಟ್ಟವರು ಕಾಂಗ್ರೆಸ್ ಪಕ್ಷದವರು ಎಂದು ವಾಗ್ದಾಳಿ ಮಾಡಿದ ಅವರು, ಕೆಲ ರಾಜಕಾರಿಣಿಗಳು ಇದನ್ನ ತಮ್ಮ ಸ್ವಾರ್ಥಕ್ಕೆ ಬಳಸಿ ಕೊಂಡು ಕನ್ನಡ ಹಾಗೂ ಮರಾಠಿ ಭಾಷೆ ಮಧ್ಯೆ ಜಗಳ ಹಚ್ಚಿದ್ದಾರೆ. ಇವರಿಗೆ ನಾಚಿಕೆ ಬರಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ: ಭಾರತದ ಮಾಜಿ ಪ್ರಧಾನಿಗಳಾದ ಅಜಾತ ಶತ್ರು, ದೇಶ ಮೆಚ್ಚಿದ ನಾಯಕರು, ಭಾರತರತ್ನ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ 97ನೇ ದಿನಾಚರಣೆಯನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬೆಳಗಾವಿಯಲ್ಲಿ ಆಚರಣೆ ಮಾಡಿದರು.
ಬೆಳಗಾವಿ: ಕರ್ನಾಟಕದಲ್ಲಿ ಪುಂಡಾಟಿಕೆ ನಡೆಸಿದ ಪ್ರಮುಖರನ್ನು ಬಂಧಿಸಲಾಗಿದ್ದು, ಬೆಳಗಾವಿ ಪ್ರಕರಣವನ್ನು ನಿಯಂತ್ರಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶಶಿಕಲಾ ಜೊಲ್ಲೆಗೆ ಸೇರಿದ ಕಟ್ಟಡ ಕಾಮಗಾರಿ ಮೇಲೆ ಶಿವಸೇನೆ ಹಾಗೂ ಎಂಇಎಸ್ ದಾಳಿ ನಡೆಸಿದ ಪ್ರಕರಣದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರ ಯಾವುದೇ ರೀತಿಯ ಕೆಲಸವನ್ನು ಮಾಡುತ್ತಿರಲಿಲ್ಲ. ತಪ್ಪು ಮಾಡದವರನ್ನು ಬಂಧಿಸಿ ಸುಮ್ಮನಾಗುತ್ತಿತ್ತು. ಆದರೆ ನಮ್ಮ ಸರ್ಕಾರ ಪ್ರಮುಖರನ್ನು ಬಂಧಿಸಿ ಪ್ರಕರಣವನ್ನು ನಿಯಂತ್ರಣ ಮಾಡಲು ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು. ಇದನ್ನೂ ಓದಿ: MESಗೆ ಪಾಠ ಕಲಿಸಲು ಕಾರ್ಮಿಕ ಸಂಘಟನೆ ಪ್ಲ್ಯಾನ್- ಇಂದಿನಿಂದ್ಲೇ ಮಹಾರಾಷ್ಟ್ರ ವಸ್ತುಗಳು ಬ್ಯಾನ್
ಈ ಬಗ್ಗೆ ಮಹಾರಾಷ್ಟçದ ಸರ್ಕಾರದ ಜೊತೆಗೂ ಮಾತನಾಡಲಾಗಿದೆ. ಕನ್ನಡದ ಆಸ್ತಿ ಪಾಸ್ತಿ, ಜನರ ರಕ್ಷಣೆಗೆ ಸೂಕ್ತ ಕ್ರಮಕೈಗೊಳ್ಳುವ ಜೊತೆಗೆ ಮಹಾನಗರವನ್ನು ರಕ್ಷಿಸುವ ಕುರಿತು ತಿಳಿಸಲಾಗಿದೆ. ಕಾನೂನು ಸುವ್ಯವಸ್ಥೆಯನ್ನು ಯಾರಾದರೂ ಕೈಗೆ ತೆಗೆದುಕೊಂಡರೆ ಅತ್ಯಂತ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಈ ಬಾರಿ ಅಹಿತಕರ ಘಟನೆಯನ್ನು ಯಾವುದೇ ರೀತಿಯಲ್ಲಿ ಮುಂದುವರಿಸಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: EXCLUSIVE: ಶಶಿಕಲಾ ಜೊಲ್ಲೆಗೆ ಸೇರಿದ 50 ಕೋಟಿ ಮೌಲ್ಯದ ಕಟ್ಟಡದ ಮೇಲೆ ದಾಳಿ
ಕೋಲಾರ: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಕೃತಿ ಹಾಳು ಮಾಡಿ ವಿಕೃತಿ ಮೆರೆಯುತ್ತಿರುವ ಎಂಇಎಸ್ ಪುಂಡರ ಪುಂಡಾಟ ನಿಲ್ಲಿಸಬೇಕು ಎಂದು ನಟ ಡಾಲಿ ಧನಂಜಯ್ ಹೇಳಿದರು.
ಕೋಲಾರದ ನರಸಾಪುರದಲ್ಲಿ ಪುನೀತ್ ನಮನ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ನಡೆದಿರುವ ಘಟನೆ ಖಂಡನೀಯವಾಗಿದೆ. ಮರಾಠರು, ಕನ್ನಡಿಗರು ದೇಶದ ಮೂಲೆ ಮೂಲೆಗಳಲ್ಲಿ ನೆಲೆಸಿದ್ದಾರೆ. ಇಂತಹ ಅನಾಹುತಗಳನ್ನು ಮಾಡುವ ಮೊದಲು ಎಲ್ಲರೂ ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರ ಅಟ್ಟಹಾಸ – ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಬಸ್ ಮೇಲೆ ಕಲ್ಲು ತೂರಾಟ