ಮೊನ್ನೆಯಷ್ಟೇ ಉತ್ತರ ಕಾಂಡ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಶಿವರಾಜ್ ಕುಮಾರ್ (Shivaraj Kumar). ಇವರ ಎಂಟ್ರಿ ಅದ್ಭುತವಾಗಿ ಇರಲೆಂದು ವಿಶೇಷ ವಿಡಿಯೋವೊಂದನ್ನು ಮಾಡಿ ಶಿವಣ್ಣನನ್ನು ಬರಮಾಡಿಕೊಂಡಿದೆ ಉತ್ತರಕಾಂಡ ಟೀಮ್. ಈಗ ಬೆಳಗಾವಿಯಲ್ಲಿ ನಡೆಯುತ್ತಿರುವ ಉತ್ತರಕಾಂಡ ಚಿತ್ರೀಕರಣದಲ್ಲಿ ಶಿವಣ್ಣ ಭಾಗಿಯಾಗಿದ್ದಾರೆ. ಜೊತೆಗೆ ಪತ್ನಿ ಗೀತಾ ಕೂಡ ಹೋಗಿದ್ದಾರೆ.
ಡಾಲಿ (Daali Dhananjay) ನಟನೆಯ ‘ಉತ್ತರಕಾಂಡ’ (Uttarakanda Film) ಸಿನಿಮಾ ತಂಡಕ್ಕೆ ಕಲಾವಿದರ ದಂಡೇ ಸೇರ್ಪಡೆಯಾಗುತ್ತಿದೆ. ಡಾಲಿಗೆ ಜೋಡಿಯಾಗೋ ಆ ನಾಯಕಿ ಯಾರು? ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಡಾಲಿಗೆ ಜೋಡಿಯಾಗಿ ಐಶ್ವರ್ಯಾ ರಾಜೇಶ್ (Aishwarya Rajesh) ಎಂಟ್ರಿ ಕೊಟ್ಟಿದ್ದಾರೆ.
ಚೈತ್ರಾ ಆಚಾರ್, ದಿಗಂತ್ ಪಾತ್ರದ ಬಗ್ಗೆ ರಿವೀಲ್ ಆದ ಬೆನ್ನಲ್ಲೇ ಐಶ್ವರ್ಯಾ ರಾಜೇಶ್ ಕೂಡ ಸಿನಿಮಾ ತಂಡ ಸೇರಿಕೊಂಡಿದ್ದಾರೆ. ಮುಖ್ಯ ಪಾತ್ರದಲ್ಲಿ ಡಾಲಿ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ನಟಿ ಸ್ಯಾಂಡಲ್‌ವುಡ್‌ಗೆ ಲಗ್ಗೆ ಇಟ್ಟಿದ್ದಾರೆ. ಬಾಲನಟಿ, ನಾಯಕಿಯಾಗಿ ತೆಲುಗು, ತಮಿಳಿನಲ್ಲಿ ಗುರುತಿಸಿಕೊಂಡಿರುವ ಐಶ್ವರ್ಯಾಗೆ ‘ಉತ್ತರಕಾಂಡ’ ಚಿತ್ರದಲ್ಲಿ ಮುಖ್ಯ ಪಾತ್ರವೇ ಸಿಕ್ಕಿದೆ.
ಕನ್ನಡ ಸಿನಿಮಾ ರಂಗದ ಹಿರಿಯ ನಟಿ, ಉಮಾಶ್ರೀ (Umashree) ಉತ್ತರಕಾಂಡ ಟೀಮ್ ಸೇರಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರು ಪಂಢರಿಬಾಯಿ (Pandharibai) ಪಾತ್ರವನ್ನು ನಿರ್ವಹಿಸಲಿದ್ದಾರೆ. ಉಮಾಶ್ರೀಯ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಸಿನಿಮಾದಲ್ಲಿ ಸಾಕಷ್ಟು ಅನುಭವಿ ಕಲಾವಿದರು ನಟಿಸುತ್ತಿರುವುದು ವಿಶೇಷ
ಈ ಹಿಂದೆ ಕನ್ನಡದ ಹೆಸರಾಂತ ನಿರ್ಮಾಣ ಸಂಸ್ಥೆಯು ಒಂದು ಪೋಸ್ಟರ್ ಹಂಚಿಕೊಂಡಿತ್ತು. ಅದರಲ್ಲು ಕರ್ನಾಟಕ ಕಿಂಗ್ ಯಾರಲೇ? ಎಂದು ಪ್ರಶ್ನೆಯನ್ನು ಮಾಡಿತ್ತು. ಈ ಪೋಸ್ಟರ್ ಕುತೂಹಲಕ್ಕೂ ಕಾರಣವಾಗಿತ್ತು. ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಟಿಸಲಿದ್ದಾರೆ ಎನ್ನುವ ಸುದ್ದಿಯೇನೂ ಗುಟ್ಟಾಗಿ ಉಳಿದಿರಲಿಲ್ಲ. ಜೊತೆಗೆ ಶಿವಣ್ಣನನ್ನು (Shivaraj Kumar) ಅಭಿಮಾನಿಗಳು ಕಿಂಗ್ (King) ಅಂತಾನೇ ಕರೆಯುತ್ತಾರೆ. ಶಿವಣ್ಣನ ಪೋಸ್ಟರ್ ರಿಲೀಸ್ ಮಾಡುವುದಕ್ಕಾಗಿ ಈ ಪೋಸ್ಟರ್ ರಿಲೀಸ್ ಮಾಡಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಈಗ ಅದು ನಿಜವಾಗಿದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಉತ್ತರಕಾಂಡ ಚಿತ್ರೀಕರಣದಲ್ಲಿ ಶಿವಣ್ಣ ಭಾಗಿಯಾಗಿದ್ದಾರೆ. ಜೊತೆಗೆ ಪತ್ನಿ ಗೀತಾ ಕೂಡ ಹೋಗಿದ್ದಾರೆ.
ಡಾಲಿ (Daali Dhananjay) ನಟನೆಯ ‘ಉತ್ತರಕಾಂಡ’ (Uttarakanda Film) ಸಿನಿಮಾ ತಂಡಕ್ಕೆ ಕಲಾವಿದರ ದಂಡೇ ಸೇರ್ಪಡೆಯಾಗುತ್ತಿದೆ. ಡಾಲಿಗೆ ಜೋಡಿಯಾಗೋ ಆ ನಾಯಕಿ ಯಾರು? ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಡಾಲಿಗೆ ಜೋಡಿಯಾಗಿ ಐಶ್ವರ್ಯಾ ರಾಜೇಶ್ (Aishwarya Rajesh) ಎಂಟ್ರಿ ಕೊಟ್ಟಿದ್ದಾರೆ.
ಚೈತ್ರಾ ಆಚಾರ್, ದಿಗಂತ್ ಪಾತ್ರದ ಬಗ್ಗೆ ರಿವೀಲ್ ಆದ ಬೆನ್ನಲ್ಲೇ ಐಶ್ವರ್ಯಾ ರಾಜೇಶ್ ಕೂಡ ಸಿನಿಮಾ ತಂಡ ಸೇರಿಕೊಂಡಿದ್ದಾರೆ. ಮುಖ್ಯ ಪಾತ್ರದಲ್ಲಿ ಡಾಲಿ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ನಟಿ ಸ್ಯಾಂಡಲ್‌ವುಡ್‌ಗೆ ಲಗ್ಗೆ ಇಟ್ಟಿದ್ದಾರೆ. ಬಾಲನಟಿ, ನಾಯಕಿಯಾಗಿ ತೆಲುಗು, ತಮಿಳಿನಲ್ಲಿ ಗುರುತಿಸಿಕೊಂಡಿರುವ ಐಶ್ವರ್ಯಾಗೆ ‘ಉತ್ತರಕಾಂಡ’ ಚಿತ್ರದಲ್ಲಿ ಮುಖ್ಯ ಪಾತ್ರವೇ ಸಿಕ್ಕಿದೆ.
ಕನ್ನಡ ಸಿನಿಮಾ ರಂಗದ ಹಿರಿಯ ನಟಿ, ಉಮಾಶ್ರೀ (Umashree) ಉತ್ತರಕಾಂಡ ಟೀಮ್ ಸೇರಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರು ಪಂಢರಿಬಾಯಿ (Pandharibai) ಪಾತ್ರವನ್ನು ನಿರ್ವಹಿಸಲಿದ್ದಾರೆ. ಉಮಾಶ್ರೀಯ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಸಿನಿಮಾದಲ್ಲಿ ಸಾಕಷ್ಟು ಅನುಭವಿ ಕಲಾವಿದರು ನಟಿಸುತ್ತಿರುವುದು ವಿಶೇಷ
ಕನ್ನಡದ ಖ್ಯಾತ ನಟಿ ಪವಿತ್ರಾ ಲೋಕೇಶ್ (Pavitra Lokesh) ಇತ್ತೀಚೆಗಷ್ಟೇ ಪಿಎಚ್‌ಡಿ (Ph.D)ಮಾಡುವ ಇಂಗಿತವನ್ನು ವ್ಯಕ್ತ ಪಡಿಸಿದ್ದರು. ಕೊನೆಗೂ ಅದನ್ನು ಈಡೇರಿಸಿಕೊಳ್ಳಲು ಮುಂದಾಗಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಪ್ರವೇಶ ಪರೀಕ್ಷೆಯನ್ನು ಅವರು ಬರೆದದ್ದು ಅದರಲ್ಲಿ ಪಾಸ್ ಕೂಡ ಆಗಿದ್ದಾರೆ.
ಹಂಪಿಯ (Hampi) ಕನ್ನಡ ವಿಶ್ವವಿದ್ಯಾಲಯದ ಪಿಎಚ್‌ಡಿ ಸಾಮಾನ್ಯ ಪ್ರವೇಶ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಸೇರಿದಂತೆ 259 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಕನ್ನಡ ವಿವಿಯಲ್ಲಿ 981 ಜನರು ಸಾಮಾನ್ಯ ಪ್ರವೇಶ ಪರೀಕ್ಷೆ ಎದುರಿಸಿದ್ದರು. ಆ ಪೈಕಿ ಒಟ್ಟು 259 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ವಿವಿ ಪ್ರಕಟಿಸಿದೆ. ಇದನ್ನೂ ಓದಿ:ಮದುವೆಯಾದ ಒಂದೇ ವರ್ಷಕ್ಕೆ ಪತಿಯನ್ನು ಕಳೆದುಕೊಂಡ ನಟಿ ಶ್ರುತಿ
ಕನ್ನಡ ವಿವಿ (Kannada University) ಕುಲಸಚಿವ ಡಾ.ಸುಬ್ಬಣ್ಣ ರೈ ಈ ಕುರಿತು ಮಾಹಿತಿ ನೀಡಿದ್ದು, ಪವಿತ್ರಾ ಲೋಕೇಶ್ ಭಾಷಾ ನಿಕಾಯದಡಿ ಪ್ರವೇಶ ಪರೀಕ್ಷೆ ಬರೆದಿದ್ದರು. ಬೆಳಗಾವಿ(Belgaum) ವಿಸ್ತರಣಾ ಕೇಂದ್ರದಲ್ಲಿ ಸಂಶೋಧನೆ ಕೈಗೊಳ್ಳಲು ಪರೀಕ್ಷೆ ಬರೆದಿದ್ದರು ಪವಿತ್ರ ಲೋಕೇಶ್. ಕಳೆದ ಮೇ 30ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆದಿತ್ತು.
ಕನ್ನಡ ವಿವಿ ವ್ಯಾಪ್ತಿಯ ಅಧ್ಯಯನ ವಿಭಾಗ, ಮಾನ್ಯತ ಕೇಂದ್ರ, ಹಾಗೂ ವಿಸ್ತರಣಾ ಕೇಂದ್ರಗಳಲ್ಲಿ ಲಭ್ಯವಿರುವ ಸ್ಥಾನ ಮತ್ತು ಮಾರ್ಗದರ್ಶಕರ ಸಂಖ್ಯೆಗೆ ಅನುಗುಣವಾಗಿ ಸೀಟು ಹಂಚಿಕೆ ಮಾಡಲಾಗಿದೆ ಎಂದು ಕುಲಸಚಿವರು ತಿಳಿಸಿದ್ದಾರೆ.
ಬೆಳಗಾವಿ (Belgaum) ಮೂಲದ ಕನ್ನಡತಿ ಲಕ್ಷ್ಮೀ ರೈ (Lakshmi Rai) ಮತ್ತೊಂದು ಫೋಟೋಶೂಟ್ ನಲ್ಲಿ ಭಾಗಿಯಾಗಿದ್ದಾರೆ. ರಾಣಿಯ ಕಾನ್ಸೆಪ್ಟ್ ರೀತಿಯಲ್ಲಿ ಫೋಟೋಶೂಟ್ (Photoshoot) ಆಗಿದ್ದು, ಸಖತ್ ಹಾಟ್ ಹಾಟ್ ಆಗಿಯೇ ಲಕ್ಷ್ಮಿ ಕಂಡಿದ್ದಾರೆ.
ಲಕ್ಷ್ಮೀ ರೈ ಈ ರೀತಿಯ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದು ಇದೇ ಮೊದಲೇನೂ ಅಲ್ಲ. ಅವರು ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಹಾಕಿ ಆಗಾಗ ಪ್ರವಾಸಕ್ಕೆ ಹೋಗುತ್ತಿರುತ್ತಾರೆ. ಪ್ರವಾಸ ಹೋಗಿದ್ದ ಫೋಟೋಗಳನ್ನೂ ಅವರು ಹಂಚಿಕೊಳ್ಳುತ್ತಾರೆ. ಮೊನ್ನೆಯಷ್ಟೇ ತಮ್ಮ ಹಾಟ್ ಫೋಟೋಶೂಟ್‌ನಿಂದಾಗಿ ಗಮನ ಸೆಳೆದಿದ್ದರು.
ಕನ್ನಡದ ವಾಲ್ಮೀಕಿ, ಸ್ನೇಹನಾ ಪ್ರೀತಿನಾ, ಮಿಂಚಿನ ಓಟ, ಕಲ್ಪನಾ (Kanchana) ಸೇರಿದಂತೆ ಹಲವರು ಚಿತ್ರದಲ್ಲಿ ಬೆಳಗಾವಿ ಬ್ಯೂಟಿ ಲಕ್ಷ್ಮಿ ರೈ ನಟಿಸಿದ್ದಾರೆ. ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಾಯಕಿಯಾಗಿ ಅವಕಾಶಗಳು ಸಿಗದೇ ಇದ್ದಾಗ ಐಟಂ ಡ್ಯಾನ್ಸ್‌ಗೆ ಬೆಳಗಾವಿ ಸುಂದರಿ ಸೊಂಟ ಬಳುಕಿಸಿದ್ದರು.
ಈ ವರ್ಷ ಆನಂದ ಭೈರವಿ, ಗ್ಯಾಂಗ್‌ಸ್ಟಾರ್ 21 ಸೇರಿದಂತೆ ಹಲವು ಸಿನಿಮಾಗಳು ನಟಿ ಲಕ್ಷ್ಮಿ ರೈ ಕೈಯಲ್ಲಿದೆ. ಹೊಸ ಕಥೆ, ಪಾತ್ರಗಳನ್ನ ಆಯ್ಕೆ ಮಾಡಿಕೊಳ್ಳುವ ಮೂಲಕ ಸಿನಿಮಾರಂಗದಲ್ಲಿ ಅವರು ಆಕ್ಟೀವ್ ಆಗಿದ್ದಾರೆ. ಇದನ್ನೂ ಓದಿ:ಕರಿಹೈದ ಕೊರಗಜ್ಜ: ನಿರ್ಮಾಪಕ ತ್ರಿವಿಕ್ರಮ ಸಾಫಲ್ಯ ಬದುಕಿನ ಹಾದಿ
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಲಕ್ಷ್ಮಿ ರೈ ಆಗಾಗ ತಮ್ಮ ಹಾಟ್ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಪಿಂಕ್ ಬಣ್ಣದ ಬಿಕಿನಿ ತೊಟ್ಟು ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಬೀಚ್ ಮುಂದೆ ಕ್ಯಾಮೆರಾಗೆ ಪೋಸ್ ನೀಡಿರುವ ಫೋಟೋವನ್ನು ಲಕ್ಷ್ಮೀ ರೈ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ, ನೀವು ಅದನ್ನು ಹೇಗೆ ಮಾಡುತ್ತೀರಿ ನನಗೆ ತಿಳಿದಿಲ್ಲ ಎಂದು ಯಾರೋ ಒಬ್ಬರು ನನಗೆ ಹೇಳಿದ್ದರು. ನನಗೆ ಆಯ್ಕೆ ನೀಡಲಾಗಿಲ್ಲ ಎಂದು ಅವನಿಗೆ ಹೇಳುತ್ತೇನೆ ಅಂತ ಬರೆದುಕೊಂಡಿದ್ದಾರೆ.
32 ವರ್ಷದ ಲಕ್ಷ್ಮಿ ರೈ ಸಿನಿ ರಂಗಕ್ಕೆ ಬಂದು 14 ವರ್ಷ ಕಳೆದರೂ ಇನ್ನೂ ಹಾಟ್ ಹಾಗೂ ಬೋಲ್ಡ್ ಪಾತ್ರಗಳಿಗೆ ಮಾತ್ರ ಸೀಮಿತವಾಗಿದ್ದಾರೆ. ಮೂಲತಃ ಕನ್ನಡಿಗಳಾಗಿರುವ ಲಕ್ಷ್ಮೀ ರೈ ಹುಟ್ಟಿದ್ದು, ಬೆಳಗಾವಿಯಲ್ಲಿ. ಹೀಗಾಗಿ ಅವರನ್ನು ಕುಂದಾನಗರಿ ಸುಂದರಿ ಎಂದು ಕರೆಯಲಾಗುತ್ತದೆ.
ಲಕ್ಷ್ಮಿ ರೈ 2005ರಲ್ಲಿ ತಮಿಳು ಭಾಷೆಯ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಕನ್ನಡದಲ್ಲಿ ‘ಸ್ನೇಹನಾ ಪ್ರೀತಿನಾ’ ಮತ್ತು ‘ಕಲ್ಪನಾ’ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಲಕ್ಷ್ಮಿ ರೈ ಅವರು ‘ಜೂಲಿ’ ಚಿತ್ರದ ಮೂಲಕ ಬಾಲಿವುಡ್‍ಗೆ ಪ್ರವೇಶಿಸಿದ್ದರು. ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅವರು, ಪಿ.ವಿ.ಎಸ್ ಗುರುಪ್ರಸಾದ್ ನಿರ್ದೇಶನದ ‘ಝಾನ್ಸಿ’ ಸಿನಿಮಾದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕಿಚ್ಚ ಸುದೀಪ್ (Sudeep) ಇಂದು ಬೆಳಗಾವಿ (Belgaum) ಜಿಲ್ಲೆಯ ಬಿಜೆಪಿ (BJP) ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ತೆರಳಿದ್ದಾರೆ. ಇಂದು ಒಟ್ಟು ನಾಲ್ಕು ಕ್ಷೇತ್ರಗಳಲ್ಲಿ ಅವರು ರೋಡ್ ಶೋ (Road Show) ನಡೆಸಬೇಕಿತ್ತು. ಅದರಲ್ಲಿ ಒಂದು ರದ್ದಾಗಿದೆ (Canceled). ಬೆಳಗಾವಿ ಜಿಲ್ಲೆಯ, ಬೆಳಗಾವಿ ಗ್ರಾಮೀಣ ಕ್ಷೇತ್ರ ಪ್ರಚಾರದ ರೋಡ್ ಶೋ ತಾರೀಹಾಳದಲ್ಲಿ ನಡೆಯಬೇಕಿತ್ತು. ಅದು ರದ್ದಾಗಿದೆ.
ಬೆಳಗ್ಗೆ 11.20ಕ್ಕೆ ಕಿತ್ತೂರು ಕ್ಷೇತ್ರದ ನೇಸರಗಿಯಲ್ಲಿ ಕಿಚ್ಚ ರೋಡ್ ಶೋ ನಡೆಸಿದರು. ಅದು ಮುಗಿಯುತ್ತಿದ್ದಂತೆಯೇ ಅವರು ತಾರೀಹಾಳ ಗ್ರಾಮಕ್ಕೆ ಹೋಗಬೇಕಿತ್ತು. ಆದರೆ, ಯುವಕನೊಬ್ಬನ ಹತ್ಯೆಯಾದ ಕಾರಣದಿಂದಾಗಿ ರೋಡ್ ಶೋ ರದ್ದಾಗಿದೆ. ಕ್ಷುಲ್ಲಕ ಕಾರಣಕ್ಕಾಗಿ ಯುವಕನೊಬ್ಬನ ಮರ್ಡರ್ ಆಗಿರುವ ಕಾರಣದಿಂದಾಗಿ ರದ್ದು ಪಡಿಸಲಾಗಿದೆ. ಇದನ್ನೂ ಓದಿ:ದೇಶವು ಸುರಕ್ಷಿತರ ಕೈಯಲ್ಲಿದೆ, ಭಯಪಡಬೇಕಿಲ್ಲ ಸಲ್ಮಾನ್ ಎಂದ ಕಂಗನಾ
ಮಧ್ಯಾಹ್ನ 1 ಗಂಟೆಗೆ ತಾರೀಹಾಳದಲ್ಲಿ ರೋಡ್ ಶೋ ನಡೆಯಬೇಕಿತ್ತು. ರದ್ದಾಗಿದ್ದರಿಂದ ಆ ಸಮಯದಲ್ಲಿ ಊಟ ಮುಗಿಸಿಕೊಂಡು ಯಮಕನಮರಡಿ ಕ್ಷೇತ್ರದ ಅಭ್ಯರ್ಥಿಯ ಪರವಾಗಿ ವಂಟಮೂರಿ ಗ್ರಾಮದಲ್ಲಿ ಕಿಚ್ಚ ರೋಡ್ ಶೋ ನಡೆಸಿದ್ದಾರೆ. ಅಲ್ಲಿಂದ ಬೆಳಗಾವಿ ಉತ್ತರ ಮತ್ತು ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಸುದೀಪ್ ರೋಡ್ ಶೋ ಮಾಡಬೇಕಿದೆ.
ಎರಡು ದಿನಗಳ ಹಿಂದೆಯೂ ಎರಡು ಕ್ಷೇತ್ರಗಳ ಪ್ರಚಾರದಲ್ಲಿ ಸುದೀಪ್ ಭಾಗಿಯಾಗಲು ಆಗಿರಲಿಲ್ಲ. ನವಲಗುಂದ ಮತ್ತು ಗದಗ ಕ್ಷೇತ್ರಗಳಿಗೆ ನಿಗದಿ ಆಗಿದ್ದ ಕಾರ್ಯಕ್ರಮದಲ್ಲಿ ವ್ಯತ್ಯಾಸವುಂಟಾಗಿದ್ದರಿಂದ ಆ ಎರಡೂ ರೋಡ್ ಶೋಗಳು ಮೊನ್ನೆಯಷ್ಟೇ ರದ್ದಾಗಿದ್ದವು. ಎರಡು ದಿನಗಳ ಕಾಲ ವಿಶ್ರಾಂತಿ ಪಡೆದುಕೊಂಡು ಮತ್ತೆ ಇಂದು ಸುದೀಪ್ ಪ್ರಚಾರಕ್ಕೆ ತೆರಳಿದ್ದರು.
ಬೆಳಗಾವಿ: ಹಿಂದೂ ಶಬ್ದ ಬಗ್ಗೆ ನೀಡಿದ್ದ ಹೇಳಿಕೆಯು ವಿವಾದವಾಗುತ್ತಿದ್ದಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಅವರು ಸಿಎಂ ಬಸವರಾಜ ಬೊಮ್ಮಾಯಿಗೆ (Basavaraj Bommai) ಪತ್ರ ಬರೆದು ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ.
ನಿಪ್ಪಾಣಿ ಕಾರ್ಯಕ್ರಮದಲ್ಲಿ ಸತೀಶ್ ಜಾರಕಿಹೊಳಿ ಹಿಂದೂ ಶಬ್ದದ ಬಗ್ಗೆ ನೀಡಿದ್ದ ಮಾತು ವಿವಾದಕ್ಕೀಡಾಗಿದೆ. ಈ ಹಿನ್ನೆಲೆಯಲ್ಲಿ ಬೊಮ್ಮಾಯಿ ಪತ್ರ ಬರೆದಿರುವ ಅವರು, ನಾನು ಮಾತನಾಡಿದ್ದ ಹಿಂದೂ ಶಬ್ದದದ ಬಳಕೆ ಕುರಿತು ನನ್ನ ತೇಜೋವಧೆ ಮಾಡಲಾಗುತ್ತಿದೆ. ಅಲ್ಲದೇ ಅದನ್ನು ತಿರುಚಿ ಅಪಪ್ರಚಾರಗೊಳಿಸುತ್ತಿರುವುದರಿಂದ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗಬಾರದು ಎಂಬ ಸದುದ್ದೇಶದಿಂದ ಅಂದು ನಾನು ಹೇಳಿದ್ದ ಆ ಹೇಳಿಕೆ ಹಿಂದೆ ಪಡೆಯುತ್ತಿದ್ದೇನೆ. ಆ ಹೇಳಿಕೆಯಿಂದ ಯಾರಿಗಾದರೂ ಮನಸ್ಸಿಗೆ ನೋವಾಗಿದ್ದಲ್ಲಿ ವಿಷಾದಿಸುತ್ತೇನೆ ಎಂದು ಪತ್ರ ಬರೆದ ಜಾರಕಿಹೊಳಿ, ತಮ್ಮ ಹೇಳಿಕೆ ಬಗ್ಗೆ ತನಿಖಾ ಸಮಿತಿ ರಚಿಸುವಂತೆ ಸಿಎಂಗೆ ಮನವಿ ಮಾಡಿದ್ದಾರೆ.
ಪತ್ರದಲ್ಲಿ ಏನಿದೆ?:
ನಿಪ್ಪಾಣಿಯಲ್ಲಿ ಜರುಗಿದ ಮಾನವ ಬಂಧುತ್ವ ವೇದಿಕೆ ಕರ್ನಾಟಕ ಇದರ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈ ಕೆಳಕಂಡ ವಿಷಯಗಳನ್ನು ಪ್ರಸ್ತಾಪಿಸಿದ್ದೇನೆ. ಹಿಂದೂ ಶಬ್ದ ಪರ್ಷಿಯನ್ ಭಾಷೆಯಿಂದ ಬಂದಿದೆ. ಇದು ಭಾರತ ದೇಶಕ್ಕೆ ಹೇಗೆ ಬಂತು? ಹಲವಾರು ಲೇಖನಗಳಲ್ಲಿ ಹಿಂದೂ ಎಂಬ ಪದದ ಅರ್ಥ ಕೆಟ್ಟದಾಗಿದೆ ಎಂದು ಬರೆದಿರುತ್ತಾರೆ ಅಂತಾ ಹೇಳಿರುತ್ತೇನೆ ಮತ್ತು ಇದು ಸಾರ್ವಜನಿಕವಾಗಿ ಚರ್ಚೆ ಆಗಬೇಕಾಗಿರುವದು ಬಹಳ ಅವಶ್ಯಕತೆ ಇದೆ ಎಂದು ಸಹ ಹೇಳಿರುತ್ತೇನೆ.
ಇದನ್ನು ನಾನು ವಿಕಿಪಿಡಿಯಾ, ಪುಸ್ತಕಗಳು, ಶಬ್ದಕೋಶಗಳು ಮತ್ತು ಇತಿಹಾಸಕಾರರ ಬರಹಗಳ ಉಲ್ಲೇಖದ ಮೇಲೆ ಈ ನನ್ನ ಭಾಷಣ ಆಧಾರಿತವಾಗಿರುತ್ತದೆ. ಕೆಲವು ಪಟ್ಟಬದ್ಧ ಹಿತಾಸಕ್ತಿಗಳು ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಹೊರಟಿರುತ್ತಾರೆ. ಜೊತೆಗೆ ನನಗೆ ತೇಜೋವಧೆ ಹಾಗೂ ಹಾನಿವುಂಟು ಮಾಡುವ ವ್ಯವಸ್ಥಿತ ಪಿತೂರಿ ನಡೆದಿರುತ್ತದೆ. ಮೇಲಿನ ಎಲ್ಲ ಅಂಶಗಳನ್ನು ಪರಿಶೀಲಿಸಲು ಮತ್ತು ನೈಜ ಸ್ಥಿತಿಯನ್ನು ವಿವರಿಸದೇ ಈ ಅವಾಂತರ ಸೃಷ್ಟಿಸಿದವರ ಮೇಲೆ ತನಿಖೆ ಮಾಡುವಂತೆ ವಿನಂತಿಸಿಕೊಳ್ಳುತ್ತೇನೆ.
ಮತ್ತೊಮ್ಮೆ ತಮ್ಮಲ್ಲಿ ಕೇಳಿಕೊಳ್ಳುವದೇನೆಂದರೆ, ಈ ಕುರಿತು ತಕ್ಷಣ ತನಿಖಾ ಸಮಿತಿ ರಚಿಸಬೇಕು ಎಂದು ವಿನಂತಿಸಿಕೊಳ್ಳುತ್ತೇನೆ. ಹಾಗೂ ನಿಪ್ಪಾಣಿಯಲ್ಲಿ ಜರುಗಿದ ಮಾನವ ಬಂಧುತ್ವ ವೇದಿಕೆಯ ಮನೆ ಮನೆಗೆ ಬುದ್ಧ, ಬಸವ, ಅಂಬೇಡ್ಕರ ಕಾರ್ಯಕ್ರಮದಲ್ಲಿ ನಾನು ಮಾತನಾಡಿದ ಆ ಒಂದು ಮಾತು ವಿವಾದಕ್ಕಿಡಾಗಿದೆ. ಅಲ್ಲದೇ ಅದನ್ನು ತಿರುಚಿ ಅಪಪ್ರಚಾರ ಗೊಳಿಸುತ್ತಿರುವುದರಿಂದ, ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗಬಾರದು ಎಂಬ ಸದುದ್ದೇಶದಿಂದ ಅಂದು ನಾನು ಹೇಳಿದ್ದ ಆ ಹೇಳಿಕೆಯನ್ನು ಹಿಂಪಡೆಯುತ್ತಿದ್ದೇನೆ. ಮತ್ತು ಆ ಹೇಳಿಕೆಯಿಂದ ಯಾರಿಗಾದರೂ ಮನಸ್ಸಿಗೆ ನೋವಾಗಿದ್ದಲ್ಲಿ ವಿಷಾದಿಸುತ್ತೇನೆ ಎಂದು ತಿಳಿಸಿದ್ದಾರೆ.
ಏನಿದು ವಿವಾದ?:
ಭಾರತಕ್ಕೂ, ಪರ್ಷಿಯನ್‍ಗೂ ಏನ್ ಸಂಬಂಧ? ಹಿಂದೂ ಭಾರತೀಯ ಪದವೇ ಅಲ್ಲ, ಅದು ಪರ್ಷಿಯನ್ ಪದ. ಹಿಂದೂ ನಮ್ಮದು ಹೇಗೆ ಆಯಿತು ಅನ್ನೋದು ಚರ್ಚೆ ಆಗಬೇಕಿದೆ. ಹಿಂದೂ ಪದದ ಅರ್ಥ ಬಹಳ ಅಶ್ಲೀಲವಾಗಿದೆ. ಅದು ನಿಮಗೆ ತಿಳಿದರೆ ನಿಮಗೆ ನಾಚಿಕೆ ಆಗುತ್ತೆ. ಎಲ್ಲಿಂದಲೋ ಬಂದಿರೋ ಧರ್ಮವನ್ನು ತಂದು ಒತ್ತಾಯಪೂರ್ವಕವಾಗಿ ಹೇರಲಾಗುತ್ತಿದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದನ್ನೂ ಓದಿ:ಧರ್ಮ, ಜಾತಿ ಬಿಟ್ಟರೆ ಬಿಜೆಪಿ- ಕಾಂಗ್ರೆಸ್‌ಗೆ ಬೇರೆ ವಿಷಯ ಇಲ್ಲ: ಕುಮಾರಸ್ವಾಮಿ
ಈ ಹೇಳಿಕೆಗೆ ವಿವಿಧ ಹಿಂದೂಪರ ಸಂಘಟನೆ ಹಾಗೂ ಬಿಜೆಪಿ ಸೇರಿದಂತೆ ಅನೇಕ ರಾಜಕೀಯ ಪಕ್ಷಗಳಿಂದಲೂ ಜಾರಕಿಹೊಳಿ ಟೀಕೆಗೆ ಗುರಿಯಾಗಿದ್ದರು. ಅಷ್ಟೇ ಅಲ್ಲದೇ ಸ್ವಪಕ್ಷದ ನಾಯಕರಾದ ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ನಾಯಕರು ಈ ಹೇಳಿಕೆಯನ್ನು ವಿರೋಧಿಸಿದ್ದರು. ಇದನ್ನೂ ಓದಿ: ಸತೀಶ್ ಜಾರಕಿಹೊಳಿಯನ್ನು ಹಿಂದೂಸ್ಥಾನದಿಂದ ಗಡಿಪಾರು ಮಾಡಿ: ಬಿಜೆಪಿ ಒತ್ತಾಯ
Live Tv
[brid partner=56869869 player=32851 video=960834 autoplay=true]
– ಬಿಜೆಪಿಯವರು ಬೀಜ ಇಲ್ದೆ ಇರುವವರು – ರಾಜ್ಯದಲ್ಲಿ ಕುಮಾರಸ್ವಾಮಿ ಮತ್ತೆ ಸಿಎಂ ಆಗ್ತಾರೆ
ಬೆಳಗಾವಿ: ಬಿಜೆಪಿ (BJP) ಅವರಿಗೆ ಮಕ್ಕಳು ಹುಟ್ಟಿಸುವ ಶಕ್ತಿ ಇಲ್ಲ. ಬಿಜೆಪಿಯವರು ಬೀಜ ಇಲ್ಲದೇ ಇರುವವರು. ಇನ್ನೊಬ್ಬರ ಬೀಜ ತೆಗೆದುಕೊಂಡು ನಮ್ಮ ಬೀಜ ಅಂತಿದ್ದಾರೆ, ಅವರಿಗೆ ನಾಚಿಕೆ ಆಗಲ್ವಾ ಎಂದು ಬಿಜೆಪಿ ವಿರುದ್ಧ ಜೆಡಿಎಸ್ (JDS) ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (CM Ibrahim) ವ್ಯಂಗ್ಯವಾಡಿದ್ದಾರೆ.
ಜೆಡಿಎಸ್‍ನಿಂದ ಬಿಜೆಪಿ ಪಕ್ಷಕ್ಕೆ ಕೆಲವರು ಹೋಗುತ್ತಾರೆ ಎಂಬ ವಿಚಾರವಾಗಿ ಬೆಳಗಾವಿಯಲ್ಲಿ (Belgavi) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆ ಮಕ್ಕಳಿಗೆ ಮಕ್ಕಳನ್ನು ಹುಟ್ಟಿಸುವ ಶಕ್ತಿ ಇಲ್ಲ. ನಾವು ಹುಟ್ಟಿಸಿದ ಮಕ್ಕಳನ್ನು ತೆಗೆದುಕೊಂಡು ಹೋಗುತ್ತಾರಲ್ಲ ಅವರೆಂತಹ ಗಂಡಸರು.. ಬಿಜೆಪಿಯವರು ಬೀಜ ಇಲ್ದೆ ಇರುವವರು. ಇನ್ನೊಬ್ಬರ ಬೀಜ ತೆಗೆದುಕೊಂಡು ನಮ್ಮ ಬೀಜ ಅಂತಿದೀರಾ. ನಾಚಿಕೆ ಆಗಲ್ವಾ? ಇದೇನಾ ಮೋದಿ (Modi) ನಿಮಗೆ ಕಲಿಸಿರುವುದು. ಇನ್ನೂ ನೂರು ಜನರನ್ನು ಕರೆದುಕೊಂಡು ಹೋದರೂ ಹುಟ್ಟಿಸುವ ಶಕ್ತಿ ನಮಗಿದೆ. ಅವರು ನೂರು ಜನ ಇದ್ದಾರೆ. ನೀವು ಒಬ್ಬರೇ ಎನು ಮಾಡುತ್ತೀರಾ? ನಾವು ರೈತರು ಐವತ್ತು ಆಕಳು ಕಟ್ಟಿದರೇ ಹೋರಿ ಒಂದೇ ಕಟ್ಟುವುದು. ಈ ರಾಜ್ಯದಲ್ಲಿ ಮತ್ತೆ ಕುಮಾರಸ್ವಾಮಿ (H.D.Kumaraswamy) ಮುಖ್ಯಮಂತ್ರಿ ಆಗುತ್ತಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಸಿಬಿಐ (CBI), ಇಡಿ (ED) ಅವರಿಂದ ಬಿಜೆಪಿಯವರು ಹೆದರಿಸುತ್ತಿದ್ದಾರೆ. ಆದರೆ ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಎಲ್ಲ ಕ್ಷೇತ್ರದಲ್ಲಿಯೂ ಜೆಡಿಎಸ್ ಸ್ಪರ್ಧಿಸುತ್ತಿದೆ. 123 ಸ್ಥಾನವನ್ನು ಜೆಡಿಎಸ್ ಗೆಲ್ಲುವ ಗುರಿ ಹೊಂದಿದ್ದು, ಅಧಿಕಾರಕ್ಕೆ ಬರುತ್ತೇವೆ. ನಮ್ಮದು ರಾಷ್ಟ್ರೀಯ ಪಕ್ಷ ಅಲ್ಲ ಸ್ಥಳೀಯ ಪಕ್ಷ, ರಾಜ್ಯದ ಜನರಿಗಾಗಿ ಹುಟ್ಟಿರುವ ಪಕ್ಷ, ಅಧ್ಯಕ್ಷ ಆದ ಬಳಿಕ ಸಭೆಗಳಿಗೆ ಜನರನ್ನು ನಾವು ತರುವುದಿಲ್ಲ ತಂದ ಜನರಿಗೆ ಭಾಷಣ ಮಾಡುವುದಿಲ್ಲ. 2023 ರಲ್ಲಿ ಕುಮಾರಸ್ವಾಮಿಯವರೇ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ. ದೇವೇಗೌಡರು ಜೀವಂತವಾಗಿ ಇರುವಾಗಲೇ ರೈತರಿಗಾಗಿ ಇರುವ ಕಾರ್ಯಕ್ರಮ ಈಡೇರಿಸುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆನ್‍ಲೈನ್ ಎಡವಟ್ಟು- ಟಿಇಟಿ ಪರೀಕ್ಷೆಗೆ ಬಂದ ವಿದ್ಯಾರ್ಥಿ ಪರೀಕ್ಷೆಯಿಂದ ವಂಚಿತ
ಬಿಜೆಪಿ ಮತ್ತು ಕಾಂಗ್ರೆಸ್ (Congress) ಒಬ್ಬರನ್ನೊಬ್ಬರು ಬೈಯುತ್ತಿದ್ದಾರೆ. ನಲವತ್ತು ಪರ್ಸೆಂಟ್ ಇವರು, ಇಪ್ಪತ್ತು ಪರ್ಸೆಂಟ್ ಅವರು. ರಾಹುಲ್ ಗಾಂಧಿ ನಡೆದುಕೊಂಡು ಬಂದರು, ನಡೆದುಕೊಂಡು ಹೋದರು, ಆದರೆ ಏನು ಸಂದೇಶ ಕೊಟ್ಟರು? ನಾವು ಕಾಂಗ್ರೆಸ್‍ಗೂ ಬೈಯುತ್ತಿಲ್ಲ, ಬಿಜೆಪಿಗೂ ಬೈಯುತ್ತಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಏನು ಮಾಡುತ್ತೇವೆ ಅಂತಾ ಹೇಳುತ್ತಿದ್ದೇವೆ. ನಿಮಗೆ ಕೊಟ್ಟ ಭರವಸೆ ಐದು ವರ್ಷದಲ್ಲಿ ಈಡೇರಿಸದಿದ್ದರೆ, ರಾಜೀನಾಮೆ ನೀಡಿ ನಿಮ್ಮ ಮುಂದೆ ಬರುವುದಿಲ್ಲ ಅಂತಾ ಹೇಳುತ್ತಿದ್ದೇವೆ. ಅವರಿಗೆ ಅನೇಕ ಸಲ ಅಧಿಕಾರ ಕೊಟ್ಟಿದೀರಿ ನಮಗೆ ಒಂದು ಸಲ ಅಧಿಕಾರ ಕೊಡಿ ಅಂತಾ ಕೇಳುತ್ತಿದ್ದೇವೆ. ಜಿಲ್ಲೆ, ಜಿಲ್ಲೆಯಲ್ಲಿ ಫೈನಲ್ ಆಗಿದ್ದವರೇ ನಮ್ಮ ಅಭ್ಯರ್ಥಿಗಳು. ಹೈಕಮಾಂಡ್‍ಗೆ ಬ್ಯಾಗ್ ಕೊಡಬೇಕಾಗಿಲ್ಲ, ಚೀಲ ಕೊಡಬೇಕಾಗಿಲ್ಲ ಎಂದು ಹೇಳಿದ್ದಾರೆ.
ಇಂದು ನಾಳೆ ಬೆಳಗಾವಿ, ಚಿಕ್ಕೋಡಿಯಲ್ಲಿ (Chikkodi) ಕಾರ್ಯಕರ್ತರ ಜೊತೆಗೆ ಸಭೆ ನಡೆಸುತ್ತಿದ್ದೇವೆ. ಮರಾಠ ಮತ್ತು ಲಿಂಗಾಯತ ಸಮಾಜದ ಜನರನ್ನು ನಮ್ಮೊಟ್ಟಿಗೆ ಕರೆದುಕೊಂಡು ಹೋಗುತ್ತೇವೆ. ಟಿಕೆಟ್ ಹಂಚಿಕೆಯಲ್ಲಿ ಮರಾಠ, ಲಿಂಗಾಯತ, ಹಿಂದುಳಿದವರಿಗೆ ಪ್ರಾಮುಖ್ಯತೆ ಕೊಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಟಗರು ಗುದ್ದಿ ಕೊಟ್ಟಿಗೆಯಲ್ಲಿ ಲಾಕ್ ಆದ ಚಿರತೆ – ಕೆಆರ್‌ಎಸ್‌ನ ಬೃಂದಾವನದಲ್ಲಿ ಅಂತ್ಯವಾಗದ ಆತಂಕ
ಪಂಚರತ್ನ ಕಾರ್ಯಕ್ರಮವನ್ನು ಜೆಡಿಎಸ್ ಪಕ್ಷ ಆರಂಭಿಸಲಿದೆ. ಎಲ್‍ಕೆಜಿಯಿಂದ ಪಿಜಿವರೆಗೂ ಉಚಿತ ಶಿಕ್ಷಣ, ಪ್ರತಿ ಪಂಚಾಯಿತಿಯಲ್ಲಿ ಹೈಟೆಕ್ ಆಸ್ಪತ್ರೆಗಳು, ಪ್ರತಿಯೊಬ್ಬರಿಗೂ ವಾಸಿಸಲು ಮನೆ, ರಾಜ್ಯದ ಎಲ್ಲಾ ನೀರಾವರಿ ಯೋಜನೆ ಪೂರ್ಣ, ಮಹಿಳಾ ಸಬಲೀಕರಣ ಈ ಎಲ್ಲ ಯೋಜನೆಗಳನ್ನು ಜೆಡಿಎಸ್ ಅಧಿಕಾರಕ್ಕೆ ಬಂದ ಐದು ವರ್ಷದಲ್ಲಿಯೇ ಈಡೇರಿಸುತ್ತೇವೆ ಭರವಸೆ ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೆಳಗಾವಿ: ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಧಿಕಾರ ದುರ್ಬಳಕೆ, ಕಾನೂನು, ಶಿಷ್ಟಾಚಾರ ಉಲ್ಲಂಘನೆ ಆರೋಪ ಕೇಳಿಬಂದಿದ್ದು, ನಗರದ ಡಿಸಿ ಕಚೇರಿಯಲ್ಲಿ ನಿಲಜಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಪ್ರತಿಭಟನೆ ನಡೆಸಿ ಆಕ್ರೋಶಹೊರಹಾಕಿದ್ದಾರೆ.
ಬೆಳಗಾವಿ ಡಿಸಿ ಕಚೇರಿ ಆವರಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ನಿಲಜಿ ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತಕ್ಷೇತ್ರದ ವ್ಯಾಪ್ತಿಯಲ್ಲಿರುವ ನಿಲಜಿ ಗ್ರಾಮ ಪಂಚಾಯತಿ ಶಿಂಧೋಳ್ಳಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗಳಿಗೆ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಆ.25ರಂದು ಚಾಲನೆ ನೀಡಿದ್ದಾರೆ. ಇದು ಕಾನೂನು ಬಾಹಿರವಾಗಿದೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ನೀಟ್ ಪರೀಕ್ಷೆ: ಒಳಉಡುಪು ಕಳಚಿಡುವಂತೆ ಒತ್ತಾಯಿಸಿದ್ದ ವಿದ್ಯಾರ್ಥಿನಿಯರಿಗೆ ಮರು ಪರೀಕ್ಷೆಗೆ ಅನುಮತಿ
ಯಾವುದೇ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಬೇಕಾದರೆ ಮೊದಲಿಗೆ ಟೆಂಡರ್ ಕರೆಯಬೇಕು. ಅದಕ್ಕೆ ಅನುಮೋದನೆ ಸಿಗಬೇಕು. ಆದರೆ ಇದ್ಯಾವುದನ್ನು ಪಾಲಿಸದೇ ವರ್ಕ್ ಆರ್ಡರ್ ಇಲ್ಲದೇ ಇದ್ದರೂ ಶಾಸಕಿ ಪುತ್ರನಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಇದಲ್ಲದೇ ಸಂಬಂಧಿಸಿದ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರ ಗಮನಕ್ಕೆ ತರದೇ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ಡಿಸಿಗೆ ಒತ್ತಾಯಿಸಿದರು. ಇದನ್ನೂ ಓದಿ: ಪಠ್ಯ, ಪುಸ್ತಕ ಪರಿಷ್ಕರಣೆಗೆ ಮುಂದುವರಿದ ವಿರೋಧ- ತಮ್ಮ ಕವಿತೆಯನ್ನು ಬಳಸಬೇಡಿ: ರೂಪಾ ಹಾಸನ
Live Tv
[brid partner=56869869 player=32851 video=960834 autoplay=true]
ಬೆಳಗಾವಿ: ಡಿಸೆಂಬರ್ ಒಳಗಾಗಿ ಮಹದಾಯಿ ಯೋಜನೆಗೆ ಚಾಲನೆ ಸಿಗಲಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ಮಹದಾಯಿ ಯೋಜನೆ ಜಾರಿಗೆ ತಯಾರಿ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲವೇ ದಿನಗಳಲ್ಲಿ ನಮಗೆ ಕೇಂದ್ರದಿಂದ ಅನುಮತಿ ಸಿಗುವ ವಿಶ್ವಾಸವಿದೆ. ನಮ್ಮ ಅಧಿಕಾರಿಗಳು ಕೂಡ ಯೋಜನೆ ಜಾರಿಗಾಗಿ ಕಾರ್ಯಪ್ರವೃತರಾಗಿದ್ದಾರೆ. ನಮ್ಮ ಸರ್ಕಾರ ಎಲ್ಲ ನೀರಾವರಿ ಯೋಜನೆ ಜಾರಿಗೆ ಪ್ರಯತ್ನ ಮಾಡುತ್ತಿದೆ. ಮೇಕೆದಾಟು, ಭದ್ರಾ, ಕೃಷ್ಣಾದಲ್ಲಿ ನಮಗೆ ಹಂಚಿಕೆಯಾದ ನೀರು ಬಳಕೆಗೆ ಅವಕಾಶ ಕೋರಿದ್ದೇವೆ ಎಂದು ವಿವರಿಸಿದರು. ಇದನ್ನೂ ಓದಿ: ದೇವಸ್ಥಾನದ ಶೈಲಿಯಲ್ಲಿ ಮಾಡಿ ‘ತರಕಾರಿ ಸಾಂಬಾರ್’ ಮಾಡುವ ವಿಧಾನ
ಮಹದಾಯಿ ಯೋಜನೆ ಜನರಿಗಾಗಿ ಕಾಂಗ್ರೆಸ್ ಪಾದಯಾತ್ರೆ ವಿಚಾರವಾಗಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳಾಗಿದ್ದು, ಕಾಂಗ್ರೆಸ್ಸಿಗರ ಸಾಧನೆ ಏನೆಂಬುದನ್ನು ಹೇಳಲಿ. ಡಿಸೆಂಬರ್ ಒಳಗಾಗಿ ಮಹದಾಯಿ ಯೋಜನೆಗೆ ಚಾಲನೆ ಸಿಗಲಿದೆ. ಅಂತಾರಾಜ್ಯ, ಜಲವ್ಯಾಜ್ಯಗಳಿರುವ ಕಾರಣ ಸೂಕ್ಷ್ಮತೆ ಇರಬೇಕು ಎಂದು ಹೇಳಿದರು.
ಸುಪ್ರೀಂಕೋರ್ಟ್ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈ ಸಂಬಂಧ ಸುಪ್ರೀಂಕೋರ್ಟ್‍ನಲ್ಲಿ ನಮ್ಮ ಲೀಗಲ್ ತಂಡ ಹೋರಾಟ ಮಾಡುತ್ತಿದೆ. ಮಹದಾಯಿಯ ಹೊಸ ಪ್ರಸ್ತಾವನೆಯಲ್ಲಿ ಯೋಜನಾ ವೆಚ್ಚ ಕಡಿಮೆ ಮಾಡಿದ್ದೇವೆ. ಕಾನೂನು-ತಾಂತ್ರಿಕ ಅಂಶಗಳನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ. ಈಗಾಗಲೇ ಮಹದಾಯಿ ಸಂಬಂಧ ಕೇಂದ್ರ ಸರ್ಕಾರ ಗೆಜೆಟ್ ಹೊರಡಿಸಿದೆ ಎಂದರು. ಇದನ್ನೂ ಓದಿ: ರಾಮ ಭಕ್ತರನ್ನು ಅಪಮಾನಿಸಲೆಂದೇ ಕಾಂಗ್ರೆಸ್ ಪ್ರತಿಭಟಿಸಿದೆ – ರಾಮಮಂದಿರಕ್ಕೆ ನಂಟು ಕಲ್ಪಿಸಿದ ಅಮಿತ್ ಶಾ, ಯೋಗಿ
ಮಹದಾಯಿ ಯೋಜನೆ ಜಾರಿಗೆ ನಮಗೆ ಯಾವುದೇ ಅಡೆತಡೆಯಾಗಲ್ಲ. ಹೊಸ ಡಿಪಿಆರ್‍ನಿಂದ ಹೆಚ್ಚಿನ ಅರಣ್ಯ ಭೂಮಿ ನಾಶವಾಗಲ್ಲ. ಹೊಸದಾದ ಯೋಜನಾ ವರದಿಯಲ್ಲಿ ಟೆನಲ್ ತೆಗೆದುಹಾಕಲಾಗಿದೆ. ಪೈಪ್‍ಲೈನ್ ಮೂಲಕ ನೀರನ್ನು ತರುವ ಪ್ರಯತ್ನ ನಡೆಸಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Live Tv
[brid partner=56869869 player=32851 video=960834 autoplay=true]
ಚಿಕ್ಕೋಡಿ: ಸಾಮಾನ್ಯವಾಗಿ ಜಾತ್ರೆಗಳಲ್ಲಿ ಕುದುರೆ ಗಾಡಿಯ ಶರ್ತು(ಕುದುರೆ ಓಟ) ಆಯೋಜನೆ ಮಾಡೋದು ಸಾಮಾನ್ಯವಾಗಿರುತ್ತೆ. ಆದರೆ ಇಲ್ಲೊಬ್ಬ ತಂದೆ ತನ್ನ ಮಗನ ಎರಡನೇ ವರ್ಷದ ಹುಟ್ಟುಹಬ್ಬದ ನಿಮಿತ್ತ ಕುದುರೆ ಓಟ ಆಯೋಜನೆ ಮಾಡಿ ಎಲ್ಲರ ಗಮನ ಸೆಳೆದಿದ್ದಾನೆ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕಂಕಣವಾಡಿ ಗ್ರಾಮ ಇಂತದೊಂದು ವಿಶೇಷ ಘಟನೆಗೆ ಸಾಕ್ಷಿಯಾಗಿದೆ. ತಂದೆ ಮಲಕಾರಿ ನಾಯಿಕವಾಡಿ ಅವರು ತಮ್ಮ ಮಗ ರಾಯಣ್ಣ ನಾಯಿಕವಾಡಿ ಬರ್ತ್‍ಡೇಗೆ ಶರ್ತು ಆಯೋಜನೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಅಲ್ಲದೇ ಶರ್ತು ಆಯೋಜನೆ ಮಾಡಿದ ಅವರು ಅಕ್ಕಪಕ್ಕದ ಗ್ರಾಮದ ಕುದುರೆ ಸ್ಪರ್ಧಿಗಳಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕೊನೆಗೂ ನನಸಾಯ್ತು ಅಮ್ಮ, ಮಗಳ ಕನಸು – ಒಂದೇ ವಿಮಾನಕ್ಕೆ ಇಬ್ಬರೂ ಪೈಲಟ್
20ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗಿ
ಸ್ಪರ್ಧೆಯಲ್ಲಿ ಒಟ್ಟು 20ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿ ಅದರಲ್ಲಿಯೂ ಪ್ರಥಮ, ದ್ವಿತೀಯ ಹಾಗೂ ತೃತಿಯ ಬಹುಮಾನ ನೀಡಲಾಗಿದೆ. ಪ್ರಥಮ ಬಹುಮಾನ 7,000, ದ್ವಿತೀಯ ಬಹುಮಾನ 5,000 ಮತ್ತು ತೃತಿಯ ಬಹುಮಾನ 3,000 ಸಾವಿರ ರೂ. ಜೊತೆಗೆ ಆಕರ್ಷಕ ಟ್ರೋಪಿ ನೀಡಿ ವಿಜೇತರನ್ನು ಗೌರವಿಸಲಾಗಿದೆ.
ಮಕ್ಕಳ ಬರ್ತ್‍ಡೇ ಗ್ರ್ಯಾಂಡ್ ಪಾರ್ಟಿ ಆಯೋಜನೆ ಮಾಡುವ ಜನರ ನಡುವೆ ತನ್ನ ಮಗ ಬರ್ತ್‍ಡೇಗೆ ಸ್ಪರ್ಧೆ ಆಯೋಜನೆ ಮಾಡಿದ ಮಲಕಾರಿ ಅವರ ಕಾರ್ಯಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಸಚಿವರಾಗಿ ಒಂದು ವರ್ಷ – ಆಂಜನೇಯನ ದರ್ಶನ ಪಡೆದ ಆರಗ
Live Tv
[brid partner=56869869 player=32851 video=960834 autoplay=true]