Tag: belathangady

  • AI ವೀಡಿಯೋಗೆ ಸಾಕ್ಷಿ ಕೊಡಲು ತಡಬಡಿಸಿದ ಬುರುಡೆ ಸಮೀರ್

    AI ವೀಡಿಯೋಗೆ ಸಾಕ್ಷಿ ಕೊಡಲು ತಡಬಡಿಸಿದ ಬುರುಡೆ ಸಮೀರ್

    – 2ನೇ ದಿನವೂ ಬೆಳ್ತಂಗಡಿ ಠಾಣೆಗೆ ವಿಚಾರಣೆಗೆ ಹಾಜರು

    ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಲಾಗಿದೆ ಎಂದು ಎಐ ವಿಡಿಯೋ ಮೂಲಕ ಸಂಚಲನ ಸೃಷ್ಟಿಸಿದ್ದ ಯೂಟ್ಯೂಬರ್ ಸಮೀರ್ (Youtuber Sameer MD) ಸೋಮವಾರ (ಆ.25) ಮತ್ತೆ ಬೆಳ್ತಂಗಡಿ ಠಾಣೆಗೆ (Belthangady Police Station) ವಿಚಾರಣೆಗೆ ಹಾಜರಾಗಿದ್ದಾನೆ.

    ಬೆಳ್ತಂಗಡಿ ಠಾಣೆಯಲ್ಲಿ ಸಮೀರ್ ವಿಚಾರಣೆ ಆರಂಭವಾಗಿದ್ದು, ಪಿಎಸ್‌ಐ ಸುಬ್ಬಾಪುರ್ ಮಠ್ ಉಪಸ್ಥಿತಿಯಲ್ಲಿ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್‌ ನಾಗೇಶ್ ಕದ್ರಿ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ.ಇದನ್ನೂ ಓದಿ: ಕೇಜ್ರಿವಾಲ್ ಪ್ರಕರಣ ಉಲ್ಲೇಖಿಸಿ ವಿಪಕ್ಷಗಳಿಗೆ ತಿರುಗೇಟು – ಪಿಎಂ, ಸಿಎಂ ವಜಾ ಮಸೂದೆ ಸಮರ್ಥಿಸಿಕೊಂಡ ಅಮಿತ್ ಶಾ

    ಕಾಲ್ಪನಿಕ ವಿಡಿಯೋ ಮೂಲಕ ದೊಂಬಿ ಸೃಷ್ಟಿಯಲು ಯತ್ನಿಸಿದ್ದಾನೆ ಎಂದು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದ ಧರ್ಮಸ್ಥಳ ಪೊಲೀಸರು ಎರಡೆರಡು ನೊಟೀಸ್ ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಭಾನುವಾರ (ಆ.24) ಬೆಳ್ತಂಗಡಿ ಠಾಣೆಯಲ್ಲಿ ನಾಲ್ವರು ವಕೀಲರ ಜೊತೆ ಸಮೀರ್ ಹಾಜರಾಗಿದ್ದ. ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ನೇತೃತ್ವದಲ್ಲಿ ಅಧಿಕಾರಿಗಳು 4:30 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು.

    ದೂತನ ಬಂಡವಾಳ ಬಯಲು
    ಇಲ್ಲ ಸಲ್ಲದ ಸುಳ್ಳು ಕತೆಗಳನ್ನು ಸೃಷ್ಟಿಸಿ ಎಲ್ಲರನ್ನೂ ಮರಳು ಮಾಡಿದ್ದವನೇ ಯೂಟ್ಯೂಬರ್ ಸಮೀರ್ ಎಂ.ಡಿ. ಯಾವುದೋ ಕೋಣೇಲಿ ಕೂತ್ಕೊಂಡು ಎಐ ವಿಡಿಯೋಗಳ ಮೂಲಕ ಜನರಿಗೆ ಮಂಕುಬೂದಿ ಎರಚಿ ಲೈಕ್ಸ್, ವೀವ್ಸ್ ಪಡೆದಿದ್ದ ದೂತನ ಬಂಡವಾಳ ಬಯಲಾಗಿದೆ. ತಾನು ಹೇಳಿದ್ದೇ ಸತ್ಯ ಅಂತ ನಂಬಿಸಿ, ಶಿವತಾಂಡವ ಶುರುವಾಗುತ್ತೆ. ನೋಡಿ ಸತ್ಯ ಹೇಗೆ ಹೊರಬರುತ್ತದೆ? ಎಲ್ಲದಕ್ಕೂ ಸಾಕ್ಷ್ಯ ಇದೆ ಅಂತಾ ಪುಂಖಾನುಪುಂಖವಾಗಿ ಸುಳ್ಳಿನ ಅರಮನೆಯನ್ನೇ ಕಟ್ಟಿದ್ದ. ದೂರುದಾರನಿಗೆ ಭೀಮ ಎಂದು ಹೆಸರಿಟ್ಟಿದ್ದೇ ಸುಳ್ಳುಕೋರ ಸಮೀರ್. ಅನನ್ಯಾ ಭಟ್ ಎನ್ನುವ ನಕಲಿ ಯುವತಿಯನ್ನು ಸೃಷ್ಟಿಸಿ ಧರ್ಮಸ್ಥಳ ಕ್ಷೇತ್ರಕ್ಕೆ, ಭಕ್ತರ ಭಾವನೆಗೆ ಚ್ಯುತಿ ಬರುವಂತೆ ಮಾಡಿದ್ದೇ ಈತ. ಬೀದಿಗೆ ಬನ್ನಿ ಹೋರಾಟ ಮಾಡಿ ಅಂತಾನೂ ಕರೆ ಕೊಟ್ಟಿದ್ದ. ಈತನ ವಿಡಿಯೋಗೆ ಫಂಡಿಂಗ್ ಬರುತ್ತಿದೆ ಅನ್ನೋ ಆರೋಪವೂ ಇದೆ.ಇದನ್ನೂ ಓದಿ: ಕನ್ನಡ ತಾಯಿ ಭುವನೇಶ್ವರಿಯನ್ನು ಒಪ್ಪದ ಬಾನು ಮುಷ್ತಾಕ್ ನಾಡದೇವತೆಯನ್ನು ಒಪ್ಪುತ್ತಾರಾ: ಪ್ರತಾಪ್ ಸಿಂಹ ಪ್ರಶ್ನೆ

  • ಪತ್ನಿಯ ಕಣ್ಣು, ಕೆನ್ನೆಯನ್ನ ಕಚ್ಚಿ ಮಾಂಸ ಹೊರ ತೆಗೆದ ಕಟುಕ ಪತಿ!

    ಪತ್ನಿಯ ಕಣ್ಣು, ಕೆನ್ನೆಯನ್ನ ಕಚ್ಚಿ ಮಾಂಸ ಹೊರ ತೆಗೆದ ಕಟುಕ ಪತಿ!

    – ಮಗಳ ತಲೆ ಭಾಗ, ಕಣ್ಣಿಗೆ ಹೊಡೆದ ಆರೋಪಿ

    ಮಂಗಳೂರು: ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ತನ್ನ ಪತ್ನಿ ಹಾಗೂ ಮಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ತಂಗಡಿ (Belthangady) ತಾಲೂಕಿನ ಶಿಶಿಲ ಗ್ರಾಮದಲ್ಲಿ ನಡೆದಿದೆ.

    ಈ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಆರೋಪಿಯನ್ನು ಶಿಶಿಲ ಕೋಟೆಬಾಗಿಲು ನಿವಾಸಿ ಸುರೇಶ್ ಗೌಡ ಎಂದು ಗುರುತಿಸಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಗೂ ಕಾಲಿಟ್ಟ ಕೊರೊನಾ ವೈರಸ್- ಗೋವಾದಿಂದ ಬಂದಿದ್ದ ಯುವಕನಲ್ಲಿ ಸೋಂಕು ಪತ್ತೆ

    ಕಂಠಪೂರ್ತಿ ಕುಡಿದು ಬಂದಿರುವ ಸುರೇಶ್ ಗೌಡ, ಪತ್ನಿ ಜೊತೆ ಜಗಳ ತೆಗೆದಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಗಲಾಟೆ ತಾರಕಕ್ಕೇರಿ ಸುರೇಶ್ ಗೌಡನು ತನ್ನ ಪತ್ನಿಯ ಕಣ್ಣು ಹಾಗೂ ಕೆನ್ನೆಯನ್ನ ಕಚ್ಚಿ ಮಾಂಸ ಹೊರ ತೆಗೆದಿದ್ದಾನೆ. ಬಳಿಕ ಕೋಲಿನಿಂದ ಹೊಡೆದು ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ಎಸಗಿದ್ದಾನೆ. ಪತಿಯ ಹಲ್ಲೆಯಿಂದಾಗಿ ಪತ್ನಿಯ ಎಡ ಕಣ್ಣಿಗೆ ಸಂಪೂರ್ಣ ಹಾನಿಯಾಗಿದೆ.

    ಇತ್ತ ತಾಯಿಯ ಮೇಲಿನ ಹಲ್ಲೆ ಬಿಡಿಸಲು ಬಂದ ಮಗಳ ತಲೆ ಭಾಗ ಹಾಗೂ ಕಣ್ಣಿಗೂ ಆರೋಪಿ ಹೊಡೆದಿದ್ದಾನೆ. ಈ ವೇಳೆ ಆಕೆ ಪ್ರಾಣ ಉಳಿಸಿಕೊಳ್ಳಲು ತಂದೆಯಿಂದ ತಪ್ಪಿಸಿ ನೆರೆ ಹೊರೆಯವರಿಗೆ ವಿಚಾರ ತಿಳಿಸಿದಳು. ಈ ಹೊತ್ತಲ್ಲೇ ಜೀವ ಉಳಿಸಿಕೊಳ್ಳಲು ಓಡಿ ಹೋಗಿ ಇಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಹಿಳೆ ಪತ್ತೆಯಾಗಿದ್ದಾರೆ.

    ನೆರೆ ಹೊರೆಯವರು ಧಾಮಿಸುತ್ತಿದಂತೆ ಆರೋಪಿ ತೋಟದೊಳಗೆ ಓಡಿ ತಪ್ಪಿಸಿಕೊಂಡಿದ್ದಾನೆ. ವಿಪರೀತ ಗಾಯಗೊಂಡ ತಾಯಿ-ಮಗಳಿಗೆ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಬೆಳ್ತಂಗಡಿಯ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ (Dharmasthala Police Station) ಪ್ರಕರಣ ದಾಖಲಾಗಿದೆ.

  • ಕುಡಿದ ಮತ್ತಿನಲ್ಲಿ ಬಡಿಗೆಯಿಂದ ಹೊಡೆದು ತಂದೆಯನ್ನ ಕೊಂದ ಮಗ

    ಕುಡಿದ ಮತ್ತಿನಲ್ಲಿ ಬಡಿಗೆಯಿಂದ ಹೊಡೆದು ತಂದೆಯನ್ನ ಕೊಂದ ಮಗ

    ಮಂಗಳೂರು: ಬಡಿಗೆಯಿಂದ ಹೊಡೆದು ತಂದೆಯನ್ನೇ ಮಗ ಬರ್ಬರವಾಗಿ ಕೊಲೆಗೈದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಬಳಿಯ ಮುಂದೊಟ್ಟು ಎಂಬಲ್ಲಿ ನಡೆದಿದೆ.

    ಕೊಲೆಯಾದ ತಂದೆಯನ್ನು ಶ್ರೀಧರ್ ಎಂದು ಗುರುತಿಸಲಾಗಿದೆ. ಇವರನ್ನು ಸ್ವಂತ ಮಗ ಹರೀಶ್ ಹತ್ಯೆ ಮಾಡಿದ್ದಾನೆ. ಕುಡಿದು ಬಂದು ತಂದೆಯೊಂದಿಗೆ ಗಲಾಟೆ ಮಾಡಿದ ಹರೀಶ್, ಕುಡಿತದ ಅಮಲಿನಲ್ಲೇ ತಂದೆಯನ್ನು ಕೊಂದಿದ್ದಾನೆ.

    ಮೃತ ಶ್ರೀಧರ್ ಗೆ ಇಬ್ಬರು ಗಂಡು ಮಕ್ಕಳು, ಓರ್ವ ಹೆಣ್ಣುಮಗಳು ಇದ್ದಾಳೆ. ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಗಂಟಲಲ್ಲಿ ಚಕ್ಕುಲಿ ಸಿಲುಕಿ 1 ವರ್ಷದ ಪುಟ್ಟ ಕಂದಮ್ಮ ದುರ್ಮರಣ!

    ಗಂಟಲಲ್ಲಿ ಚಕ್ಕುಲಿ ಸಿಲುಕಿ 1 ವರ್ಷದ ಪುಟ್ಟ ಕಂದಮ್ಮ ದುರ್ಮರಣ!

    ಮಂಗಳೂರು: ಗಂಟಲಲ್ಲಿ ಚಕ್ಕುಲಿ ಸಿಕ್ಕಿ ಒಂದು ವರ್ಷದ ಪುಟ್ಟ ಕಂದಮ್ಮವೊಂದು ಮೃತಪಟ್ಟ ಆಘಾತಕಾರಿ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

    ಮೃತ ದುರ್ದೈವಿ ಗಂಡು ಮಗುವನ್ನು ಅರುಷ್ ಎಂದು ಗುರುತಿಸಲಾಗಿದ್ದು, ಈತ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ನಿವಾಸಿ ವಿಠಲ ಎಂಬವರ ಮಗ ಎನ್ನಲಾಗಿದೆ.

    ಮಗ ಅರುಷ್ ಗೆ ಪೋಷಕರು ತಿನ್ನಲು ಚಕ್ಕುಲಿ ತುಂಡೊಂದನ್ನು ನೀಡಿದ್ದರು. ಏನೂ ಅರಿಯದ ಮುಗ್ಧ ಕಂದಮ್ಮ ಈ ತುಂಡನ್ನು ನುಂಗಿದೆ. ಪರಿಣಾಮ ಚಕ್ಕುಲಿ ಪೀಸ್ ಗಂಟಲಲ್ಲಿ ಸಿಲುಕಿಕೊಂಡು ಮಗುವಿಗೆ ಉಸಿರಾಡಲು ಕಷ್ಟವಾಗಿತ್ತು. ಮಗುವನ್ನು ಗಮನಿಸಿದ ಪೋಷಕರು ಕೂಡಲೇ ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಲೆಂದು ಕರೆದೊಯ್ದರಾದ್ರೂ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಸದ್ಯ ಮಗುವಿನ ಸಾವಿನಿಂದ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

    https://www.youtube.com/watch?v=9K7p5aaTaHU