Tag: belaku

  • ಬಡ ಮೆಕಾನಿಕಲ್ ಕುಟುಂಬಕ್ಕೆ ʼPublic TVʼ ಬೆಳಕು ಆಸರೆ

    ಬಡ ಮೆಕಾನಿಕಲ್ ಕುಟುಂಬಕ್ಕೆ ʼPublic TVʼ ಬೆಳಕು ಆಸರೆ

    ಹುಬ್ಬಳ್ಳಿ: ಬಡವರು, ಕಷ್ಟದಲ್ಲಿರುವವರಿಗೆ ಆಸರೆಯಾಗುವ ನಿಟ್ಟಿನಲ್ಲಿ ʼಪಬ್ಲಿಕ್ ಟಿವಿ‌‌ʼ (Public TV) ಬೆಳಕು (Belaku) ಕಾರ್ಯಕ್ರಮ ಸಾರ್ಥಕತೆಯತ್ತ ಸಾಗುತ್ತಿದೆ. ಧಾರವಾಡ (Dharawada) ಜಿಲ್ಲೆಯ ಕುಂದಗೋಳ ತಾಲೂಕಿನ ಕುಬಿಹಾಳ ಗ್ರಾಮದ ಬಡ ಮೆಕಾನಿಕ್ ಮರಿಗೌಡ ಮತ್ತು ಚೆನ್ನವ್ವ ದಂಪತಿಗೆ ಬೆಳಕು ಕಾರ್ಯಕ್ರಮ ಆಸರೆಯಾಗಿದೆ.

    ಹುಟ್ಟು ಅಂಗವಿಕಲರಾಗಿರುವ ಮರಿಗೌಡ ತಮ್ಮ ಗ್ರಾಮದಲ್ಲಿ ಪಂಚರ್ ಮತ್ತು ಮೆಕಾನಿಕ್ ಶಾಪ್ ನಡೆಸುತ್ತಿದ್ದರು. ಮರಿಗೌಡ ಪತ್ನಿ ಚೆನ್ನವ್ವ ಆರಂಭದಲ್ಲಿ ಆರೋಗ್ಯವಾಗಿದ್ದರು. ಆದರೆ ವಿಧಿ ನರ್ತನದಿಂದ ಚೆನ್ನವ್ವ ಸಹ ತಮ್ಮ ಕಾಲು ಕಳೆದುಕೊಂಡಿದ್ದರು. ಇದು ಈ ಕುಟುಂಬಕ್ಕೆ ಸಿಡಿಲು ಬಡಿದಂತಾಗಿ, ಆರ್ಥಿಕ ಸಂಕಷ್ಟಕ್ಕೀಡು ಮಾಡಿತ್ತು. ಇದನ್ನೂ ಓದಿ: ರಾಜ್ಯದ ನಾಲ್ಕು ದಿಕ್ಕುಗಳಿಂದ ಭಾಜಪ ರಥಯಾತ್ರೆಗೆ ತಯಾರಿ: ಬೊಮ್ಮಾಯಿ

    ಈ ಕುಟುಂಬ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮಕ್ಕೆ ಬಂದು ತಮ್ಮ ಸಂಕಷ್ಟ ಹೇಳಿಕೊಂಡು, ತಮ್ಮ ಮೆಕಾನಿಕ್ ಶಾಪ್‌ಗೆ ಅತ್ಯಾಧುನಿಕ ಯಂತ್ರೋಪಕರಣಗಳನ್ನು ನೀಡುವಂತೆ ಕೇಳಿಕೊಂಡಿದ್ದರು. ಇವರ ಸಮಸ್ಯೆಗೆ ಸ್ಪಂದಿಸಿರುವ ಪಬ್ಲಿಕ್ ಟಿವಿ ಮರಿಗೌಡರ ಕುಟುಂಬಕ್ಕೆ ಸಾವಿರಾರು ರೂಪಾಯಿ ಮೌಲ್ಯ ಅತ್ಯಾಧುನಿಕ ಮೆಕಾನಿಕ್ ಸಾಮಗ್ರಿಗಳನ್ನು ನೀಡಿದೆ.

    ಪಬ್ಲಿಕ್ ಟಿವಿ ಕಾರ್ಯಕ್ರಮದಿಂದ ಪ್ರೇರಣೆಗೊಂಡ ಕಾರ್ಮಿಕ ಇಲಾಖೆ ಸ್ವಪ್ರೇರಣೆಯಿಂದ ಮರಿಗೌಡ ಕುಟುಂಬಕ್ಕೆ ಕಾರ್ಮಿಕ ಇಲಾಖೆಯಿಂದ ಅಸಂಘಟಿತ ವಲಯಕ್ಕೆ ಸಿಗುವ ಸೌಲಭ್ಯಗಳನ್ನು ನೀಡುವ ಭರವಸೆ ನೀಡಿದೆ. ಇನ್ನೂ ಪಬ್ಲಿಕ್ ಟಿವಿ ಸಹಾಯದಿಂದ ಸಂತಸಗೊಂಡಿರುವ ಮರಿಗೌಡ ದಂಪತಿ ಪಬ್ಲಿಕ್ ಟಿವಿಗೆ ಮತ್ತು ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ಹಂಪಿ ಉತ್ಸವ 2023ರ ಲೋಗೋ, ಪೋಸ್ಟರ್ ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಬ್ಲಿಕ್ ಟಿವಿ ‘ಬೆಳಕು’ ಇಂಪ್ಯಾಕ್ಟ್- ಭರದಿಂದ ಸಾಗಿದ ಸರ್ಕಾರಿ ಶಾಲೆಯ ದುರಸ್ಥಿ ಕಾರ್ಯ

    ಪಬ್ಲಿಕ್ ಟಿವಿ ‘ಬೆಳಕು’ ಇಂಪ್ಯಾಕ್ಟ್- ಭರದಿಂದ ಸಾಗಿದ ಸರ್ಕಾರಿ ಶಾಲೆಯ ದುರಸ್ಥಿ ಕಾರ್ಯ

    ಬಳ್ಳಾರಿ: ಸರ್ಕಾರ ಸರ್ಕಾರಿ ಶಾಲಾ ಮಕ್ಕಳ ಶಿಕ್ಷಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತೆ. ಆದರೆ ಬಹುತೇಕ ಶಾಲೆಗಳಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಸರಿಯಾದ ಕಟ್ಟಡ ಹಾಗೂ ಆಟದ ಮೈದಾನ ಇರಲ್ಲ. ಗಣಿ ನಾಡು ಬಳ್ಳಾರಿ (Bellary) ಯಲ್ಲಿ ಸರ್ಕಾರಿ ಶಾಲೆಗಳ ದುಸ್ಥಿತಿಯನ್ನು ಪಬ್ಲಿಕ್ ಬೆಳಕು ಕಾರ್ಯಕ್ರಮದ ಮೂಲಕ ಪ್ರಸಾರ ಮಾಡಿತ್ತು. ಪಬ್ಲಿಕ್ ಟಿವಿ ಬೆಳಕು (Public TV Belaku) ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದರು. ಆದರೆ ಇಂದು ಆ ಸಮಸ್ಯೆಗೆ ಮುಕ್ತಿ ಸಿಕ್ಕಿದೆ.

    ಹೌದು. ಗಣಿ ನಾಡು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಕುಡುತಿನಿ ಗ್ರಾಮದ ಸರ್ಕಾರಿ ಶಾಲೆ ಇಂದಲ್ಲಾ ನಾಳೆ ಬೀಳುವ ಹಂತ ತಲಯಪಿತ್ತು. ಈ ಕುರಿತು ಕಳೆದ ನವೆಂಬರ್ 18ರಂದು ಪಬ್ಲಿಕ್ ಟಿವಿಯಲ್ಲಿ ಬೆಳಕು ಕಾರ್ಯಕ್ರಮ ಪ್ರಸಾರವಾಗಿತ್ತು. ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್ ರಂಗನಾಥ್ (H R Ranganath) ಸರ್ ಬಳಿ ಶಾಲಾ ಮಕ್ಕಳು ಅಳಲು ತೋಡಿಕೊಂಡಿದ್ರು. ಶಾಲಾ ದುರಸ್ತಿ ಕಾರ್ಯಕ್ಕೆ ಮನವಿ ಮಾಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು (Sriramulu), ಕಾರ್ಯಕ್ರಮದಲ್ಲಿ ಮಾತನಾಡಿ ಶಾಲೆಯ ಸಮಸ್ಯೆಯನ್ನು ಕೂಡಲೇ ಬಗೆಹರಿಸುವ ಭರವಸೆ ನೀಡಿದ್ದರು. ಇದನ್ನೂ ಓದಿ: ಕೊರೊನಾ ಆತಂಕದ ಮಧ್ಯೆ ವೈಕುಂಠ ಏಕಾದಶಿ- ಹೊಸ ವರ್ಷದಲ್ಲಿ ದೇವಸ್ಥಾನಕ್ಕೆ ಭಕ್ತಸಾಗರ

    ಕಾರ್ಯಕ್ರಮ ಪ್ರಸಾರ ಆದ ಎರಡೇ ತಿಂಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಮುತುವರ್ಜಿ ವಹಿಸಿ ಶಾಲೆಗೆ ಕಾಂಪೌಂಡ್ ಹಾಗೂ ಒಂದು ಹಳೆಯ ಕಟ್ಟಡ ನೆಲಸಮ ಮಾಡಿಸಿದ್ದಾರೆ. ನಾಲ್ಕು ಶಾಲಾ ಕೊಠಡಿಯ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ. ಈಗಾಗಲೇ ಶಾಲಾ ದುರಸ್ತಿ ಕಾರ್ಯ ಆರಂಭ ಮಾಡಲಾಗಿದೆ. ಹೀಗಾಗಿ ಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಶಾಲಾ ಮುಖ್ಯ ಶಿಕ್ಷಕರು ಪಬ್ಲಿಕ್ ಟಿವಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

    ಅದೆಷ್ಟೋ ಸಮಸ್ಯೆಗೆ ಪರಿಹಾರ ನೀಡಿದ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮ ಗಣಿ ನಾಡಿನ ಸರ್ಕಾರಿ ಶಾಲೆಯ ಮಕ್ಕಳ ಭವಿಷ್ಯಕ್ಕೆ ಬೆಳಕು ಚೆಲ್ಲಿದೆ. ಗ್ರಾಮಸ್ಥರು, ವಿದ್ಯಾರ್ಥಿಗಳು ಪಬ್ಲಿಕ್ ಟಿವಿಗೆ ಧನ್ಯವಾದ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಬ್ಲಿಕ್‌ ಟಿವಿ ಬೆಳಕು ಇಂಪ್ಯಾಕ್ಟ್‌ – ವಿದ್ಯಾರ್ಥಿಗಳ ನೆರವಿಗೆ ಧಾವಿಸಿದ ನಾರಾಯಣಸ್ವಾಮಿ

    ಪಬ್ಲಿಕ್‌ ಟಿವಿ ಬೆಳಕು ಇಂಪ್ಯಾಕ್ಟ್‌ – ವಿದ್ಯಾರ್ಥಿಗಳ ನೆರವಿಗೆ ಧಾವಿಸಿದ ನಾರಾಯಣಸ್ವಾಮಿ

    ಚಿತ್ರದುರ್ಗ: ಮಠಾಧೀಶರು ಮಠದ ಅಭಿವೃದ್ಧಿಗೆ ಸರ್ಕಾರದ ಅನುದಾನ ಕೇಳೋದು ಸಹಜ. ಆದ್ರೆ ಚಿತ್ರದುರ್ಗದ ಸ್ವಾಮೀಜಿಯೊಬ್ಬರು ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ಹಾಗೂ ಅನ್ನದಾಸೋಹ ಮಾಡಿಸಲಾಗದೇ ಕಣ್ಣೀರಿಡ್ತಾ, ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದಲ್ಲಿ ನೆರವು ಕೋರಿದ್ದರು. ಹೀಗಾಗಿ ಕೇಂದ್ರ ಸಚಿವ ನಾರಾಯಣಸ್ವಾಮಿಯವರ ಗಮನ ಸೆಳೆದ ಪಬ್ಲಿಕ್ ಟಿವಿ ವಿದ್ಯಾರ್ಥಿಗಳ ಸಂಕಷ್ಟಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಗತ್ಯ ನೆರವು ಕೊಡಿಸಿದೆ.

    ಕೋಟೆನಾಡು ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಸಿದ್ದಯ್ಯನಕೋಟೆಯ ಇಳಕಲ್ ವಿಜಯ ಮಹಂತೇಶ್ವರ ಗುರುಪೀಠದಲ್ಲಿ ಇನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಇಲ್ಲಿನ ಮಕ್ಕಳಿಗೆ ಮಠದಿಂದ ಉಚಿತ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಆದ್ರೆ ಸರ್ಕಾರದಿಂದ ಕೇವಲ 100 ವಿದ್ಯಾರ್ಥಿಗಳಿಗೆ ಅನ್ನದಾಸೋಹಕ್ಕೆ ಮಾತ್ರ ಸಹಾಯಧನ ನೀಡುತ್ತಿರೋದು ಬಿಟ್ಟರೆ ಜಿಲ್ಲೆಯ ಯಾವೊಬ್ಬ ಜನಪ್ರತಿನಿಧಿಯು ಈ ಮಠದತ್ತ ತಿರುಗಿ ನೋಡಿರಲಿಲ್ಲ. ಹೀಗಾಗಿ ಆಂಧ್ರಗಡಿಭಾಗದಲ್ಲಿ ಭಕ್ತರಿಂದ ಬೇಡಿ ಕನ್ನಡ ಶಾಲೆ ಉಳುವಿಗಾಗಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದ ಸ್ವಾಮೀಜಿ, ಮಠದಲ್ಲಿನ ವಿದ್ಯಾರ್ಥಿಗಳು ನೆಲದ ಮೇಲೆ ಮಲಗೋದು ಹಾಗೂ ಪಾಠವನ್ನು ಕೇಳುವುದನ್ನು ನೋಡಲಾಗದೆ ಬೆಳಕು ಕಾರ್ಯಕ್ರಮದ ಮೊರೆಗೆ ಧಾವಿಸಿದ್ದರು. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆಯಿಂದ ಇಡೀ ಮಹಿಳಾ ಕುಲಕ್ಕೆ ಅಪಮಾನ: ಪ್ರಹ್ಲಾದ್ ಜೋಶಿ

    ಆಗ ನಾರಾಯಣಸ್ವಾಮಿಯವರ ಗಮನ ಸೆಳೆದ ಪಬ್ಲಿಕ್ ಟಿವಿ ಅವರಿಂದ ಅಗತ್ಯ ಸೌಲಭ್ಯದ ನಿರೀಕ್ಷೆ ಮಾಡಿತ್ತು. ಬೆಳಕು ಕಾರ್ಯಕ್ರಮದ ಬಳಿಕ ಈ ಮಠಕ್ಕೆ ಸ್ವತಃ ನಾರಾಯಣಸ್ವಾಮಿ ಹಾಗೂ ಚಿತ್ರದುರ್ಗ ಎಂಎಲ್‍ಸಿ ನವೀನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದೀಗ ಸಚಿವರು ಸಹ ನುಡಿದಂತೆ ನಡೆದಿದ್ದೂ, 200 ವಿದ್ಯಾರ್ಥಿಗಳಿಗೆ ಅಗತ್ಯವಿರುವ ಬೆಡ್, ಕಾಟ್, ಡೆಸ್ಕ್ ವ್ಯವಸ್ಥೆ ಕಲ್ಪಿಸಿದ್ದಲ್ಲದೇ ಮಠ ಹಾಗೂ ಶಾಲೆಯ ಕೊಠಡಿಗಳಿಗೆ ಪೈಂಟ್ ಮಾಡಿಸುವುದಾಗಿ ತಿಳಿಸಿದ್ದಾರೆ. ಹೀಗಾಗಿ ಅಲ್ಲಿನ ವಿದ್ಯಾರ್ಥಿಗಳು ಹಾಗೂ ಸ್ವಾಮೀಜಿಯವರ ಸಂತಸಕ್ಕೆ ಪಾರವೇ ಇಲ್ಲವಾಗಿದ್ದೂ, ಸಚಿವರು ಹಾಗೂ ಪಬ್ಲಿಕ್ ಟಿವಿಗೆ ಧನ್ಯವಾದ ಹೇಳಿದ್ದಾರೆ. ಇದನ್ನೂ ಓದಿ: ಇಂದಿನಿಂದ ಮೂರು ದಿನಗಳ ಕಾಲ ಹರ್ ಘರ್ ತಿರಂಗಾ ಅಭಿಯಾನ

    Live Tv
    [brid partner=56869869 player=32851 video=960834 autoplay=true]

  • ಅಂಗವೈಕಲ್ಯ ಮೆಟ್ಟಿ ನಿಂತವನಿಗೆ ಆಶ್ರಯದಾತನಾಗುವ ಕನಸು

    ಅಂಗವೈಕಲ್ಯ ಮೆಟ್ಟಿ ನಿಂತವನಿಗೆ ಆಶ್ರಯದಾತನಾಗುವ ಕನಸು

    ಹಾವೇರಿ: ಇದು ಸ್ವಾಭಿಮಾನಿ ಯುವಕನ ಕಥೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕು ಮಮದಾಪುರ ತಾಂಡಾದ ನಿವಾಸಿ ನಾಗರಾಜ್ ಲಮಾಣಿ ಅಂಗವೈಕಲ್ಯವನ್ನು ಸಹ ಮೆಟ್ಟಿನಿಂತು ಸ್ವಾಭಿಮಾನದ ಜೀವನ ನಡೆಸುತ್ತಿದ್ದಾರೆ. ನಾಗರಾಜ್ ಓದಿದ್ದು ಎಸ್.ಎಸ್.ಎಲ್.ಸಿ, ಅಂಗವಿಕಲನಾದ್ರೂ ತಾನೇ ದುಡಿಮೆ ಮಾಡಿ ತಂದೆ-ತಾಯಿಯನ್ನ ಚೆನ್ನಾಗಿ ನೋಡಿಕೊಳ್ಳಬೇಕು ಅನ್ನೋ ಛಲಗಾರ.

    ಮಮದಾಪುರ ತಾಂಡಾದ ಗುಡ್ಡಗಾಡು ಪ್ರದೇಶದ ಬಳಿ ಎರಡುವರೆ ಎಕರೆ ಜಮೀನು ಇದ್ದು, ಕಳೆದ ಸುಮಾರು ವರ್ಷಗಳಿಂದ ಕೃಷಿಯ ಜೊತೆಗೆ ಕುರಿಸಾಕಾಣೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾನೆ. ಸುತ್ತಮುತ್ತಲಿನ ಜನರ ಬಳಿ ಕುರಿ ಸಾಕಾಣಿಕೆ ಬಗ್ಗೆ ಕೇಳಿ ದೊಡ್ಡ ಪ್ರಮಾಣದಲ್ಲಿ ಕುರಿ ಸಾಕಾಣಿಕೆಗೆ ಒಂದು ಮನೆ ಹಾಗೂ ಅದಕ್ಕೆ ಬೇಕಾಗುವ ಸಲಕರಣೆ ಖರೀದಿ ಮಾಡಲು ಬ್ಯಾಂಕ್‍ಗೆ ಸಾಲಕ್ಕಾಗಿ ಅರ್ಜಿ ಹಾಕಿದ್ದಾನೆ. ಅದ್ರೆ ಬ್ಯಾಂಕ್‍ನಿಂದ ಯಾವುದೇ ಸಾಲ ಸಿಕ್ಕಿಲ್ಲ.

    ನಾಗರಾಜ್ ಲಮಾಣಿ ಮನೆಯ ಸಮೀಪದಲ್ಲಿಯ ಮೂರು ಗುಂಟೆ ಜಮೀನಿದ್ದು, ಅದರಲ್ಲಿ ಕುರಿಗಳಿಗೆ ಶೆಡ್ ನಿರ್ಮಾಣ ಮಾಡುವ ಯೋಜನೆ ಹಾಕಿಕೊಂಡಿದ್ದಾನೆ. ಸದ್ಯ ಜಮೀನಿನಲ್ಲಿ ಸೀರೆಯನ್ನ ಕಟ್ಟಿ ಅದರ ಒಳಗೆ ಕುರಿಯನ್ನ ಬಿಟ್ಟು ಸಾಕಾಣಿಕೆ ಮಾಡುತ್ತಿರೋ ಸ್ವಾಭಿಮಾನಿ ಅಂಗವಿಕಲ ಬ್ಯಾಂಕ್‍ಗೆ ಬೇಕಾದ ಎಲ್ಲಾ ದಾಖಲೆಗಳನ್ನ ನೀಡುತ್ತೇನೆ ದಯಮಾಡಿ ಸಾಲ ಸಹಾಯ ಕಲ್ಪಿಸಿ ಎಂದು ಪಬ್ಲಿಕ್ ಟಿವಿಯ ಮೊರೆ ಬಂದಿದ್ದಾನೆ.

    ವಿಕಲಚೇತನಾದ್ರೂ ಸ್ವಾಭಿಮಾನದ ಜೀವನ ಮಾಡಲು ನಾಗರಾಜ್ ನಾನು ಕುರಿ ಸಾಕಾಣಿಕೆ ಮಾಡುವ ಮಹಾದಾಸೆಯನ್ನು ಹೊಂದಿದ್ದು, ಇತನ ಸ್ವಾಭಿಮಾನದ ಸಕಾರ್ಯಕ್ಕೆ ಸ್ಫೂರ್ತಿ ತುಂಬಲು ಈ ಸ್ಟೋರಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

    https://www.youtube.com/watch?v=k7jgNDPBpK8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಳ್ಳಿ ಮಕ್ಕಳ ಅಕ್ಷರ ಆಸಕ್ತಿಗೆ ಬೇಕಿದೆ ಸೂರು

    ಹಳ್ಳಿ ಮಕ್ಕಳ ಅಕ್ಷರ ಆಸಕ್ತಿಗೆ ಬೇಕಿದೆ ಸೂರು

    ಕೋಲಾರ: ಬಿರುಕು ಬಿಟ್ಟಿರುವ ಶಾಲಾ ಕೊಠಡಿ, ಬೀಳುವ ಸ್ಥಿತಿಯಲ್ಲಿರೋ ಕಿಟಕಿಗಳು ಇದು ಕೋಲಾರ ತಾಲೂಕಿನ ತಲಗುಂದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ. ಶಾಲೆ ಯಾವಾಗ ಬೀಳುತ್ತೋ ಎಂಬ ಭಯದಲ್ಲಿ ಶಿಕ್ಷಕರು ಪಾಠ ಮಾಡಿದ್ರೆ, ಜೀವದ ಹಂಗು ತೊರೆದು ಮಕ್ಕಳು ಪಾಠ ಕೇಳುತ್ತಾರೆ.

    ಈ ಶಾಲೆಯಲ್ಲಿ 1 ರಿಂದ 7ನೇ ತರಗತಿಯವರೆಗೆ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಬರೋಬ್ಬರಿ 65 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುದ್ದಾರೆ. ಖಾಸಗಿ ಶಾಲೆಗಳ ಪ್ರಬಲ ಪೈಪೋಟಿಯ ಮಧ್ಯೆಯೂ ಈ ಶಾಲೆಗೆ ವಿದ್ಯಾರ್ಥಿಗಳು ಉತ್ಸಾಹದಿಂದ ಬರುತ್ತಿದ್ದಾರೆ. ಕಿತ್ತು ತಿನ್ನುವ ಬಡತನವಿದ್ದರೂ ಓದಿ ಸಾಧಿಸಬೇಕೆಂಬ ಛಲವನ್ನು ಈ ಶಾಲೆಯ ವಿದ್ಯಾರ್ಥಿಗಳು ಹೊಂದಿದ್ದಾರೆ.

    ಶಾಲೆಯ ಕಟ್ಟಡ ಸಂಪೂರ್ಣ ಹಾಳಾಗಿದ್ದು, ಎರಡು ಕೊಠಡಿಗಳ ಕಿಟಕಿ ಬಾಗಿಲುಗಳು ಕಿತ್ತು ಹೋಗಿದ್ದು ಬೀಳುವ ಹಂತ ತಲುಪಿದೆ. ಮಕ್ಕಳು ಯಾವಾಗ ಗೋಡೆ ಕುಸಿಯುತ್ತೋ ಎಂಬ ಭಯದಲ್ಲೇ ದಿನ ದೂಡುತ್ತಿದ್ದಾರೆ. ಸದ್ಯ ಶಿಕ್ಷಕರು ವರಾಂಡದಲ್ಲಿ ಪಾಠ ಹೇಳಿ ಕೊಡುತ್ತಿದ್ದಾರೆ. ಮಳೆ ಬಂತೆಂದರೆ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗುತ್ತಿದೆ. ಇನ್ನೂ ಈ ಸಮಸ್ಯೆ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಿದ್ರೂ ಪ್ರಯೋಜನವಾಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

    ಹಲವೆಡೆ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ಇಲ್ಲದೇ ಶಾಲೆಯನ್ನು ಮುಚ್ಚಲಾಗುತ್ತಿದೆ. ಆದ್ರೆ ಇಲ್ಲಿ ಮೂಲಭೂತ ಸೌಕರ್ಯ ಇಲ್ಲದಿದ್ದರೂ ಕಲಿಯಬೇಕೆಂದು ಬರುವ ಈ ಬಡ ವಿದ್ಯಾರ್ಥಿಗಳಿಗೆ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಸಮಸ್ಯೆ ಪರಿಹರಿಸಿಲ್ಲ. ದಯವಿಟ್ಟು ಬೆಳಕು ಮೂಲಕವಾದ್ರೂ ನಮಗೆ ಸಹಾಯ ಮಾಡಿ ಅಂತ ಈ ಮಕ್ಕಳು ಪಬ್ಲಿಕ್ ಟಿವಿಗೆ ಬಂದಿದ್ದಾರೆ.

    https://www.youtube.com/watch?v=dVXklPj4W28

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾವಿರಾರು ಜಾನುವಾರುಗಳ ನೀರಿನ ದಾಹ ತೀರಿಸೋರು ಯಾರು?

    ಸಾವಿರಾರು ಜಾನುವಾರುಗಳ ನೀರಿನ ದಾಹ ತೀರಿಸೋರು ಯಾರು?

    ಧಾರವಾಡ: ಜಿಲ್ಲೆಯ ಗಡಿ ಭಾಗದ ಅರಣ್ಯದಲ್ಲಿ ಹುಣಶಿಕುಮರಿ ಎಂಬ ಕುಗ್ರಾಮವಿದೆ. ಕಳೆದ 70 ವರ್ಷಗಳಿಂದ ಇಲ್ಲಿ ಮನೆಗಳನ್ನು ಕಟ್ಟಿಕೊಂಡು ಗ್ರಾಮಸ್ಥರು  ಜೀವನ ಮಾಡುತ್ತಿದ್ದಾರೆ. 100 ಮನೆ ಇರುವ ಈ ಗ್ರಾಮದ ಜನರ ಕಸುಬು ಹೈನುಗಾರಿಕೆ. ಈ ಗ್ರಾಮಸ್ಥರಿಗೆ ಜಾನುವಾರುಗಳೇ ಸರ್ವಸ್ವ. ಗ್ರಾಮದಲ್ಲಿ ಸುಮಾರು 2,500 ಜಾನುವಾರುಗಳಿದ್ದು ಇವುಗಳಿಂದಲೇ ಜೀವನ ಕಟ್ಟಿಕೊಂಡಿದ್ದಾರೆ.

    ಅರಣ್ಯದಲ್ಲಿರುವ ಈ ಕುಗ್ರಾಮದಲ್ಲಿ ಮಳೆಗಾಲದಲ್ಲಿ ಅಲ್ಲಿ ಇಲ್ಲಿ ಕೆರೆಗಳಲ್ಲಿ ನಿಂತ ನೀರು ಕುಡಿದು ಮೂಖ ಜೀವಿಗಳು ಬದುಕುತ್ತಿವೆ. ಬೇಸಿಗೆ ಬಂತೆಂದರೆ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. ಆದಾಗಿ ಇರೋ ಸ್ಥಳವನ್ನು ಬಿಟ್ಟು ಸುಮಾರು 6 ತಿಂಗಳ ಕಾಲ ಅರಣ್ಯದಲ್ಲೇ ದನಗಳನ್ನ ಮೇಯಿಸುತ್ತ ಅಲೆಮಾರಿಗಳಂತೆ ಬದುಕು ಸಾಗಿಸುತ್ತಿದ್ದಾರೆ.

    ಈ ಕುಗ್ರಾಮವು ಕಲಕೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರೋದ್ರಿಂದ ನೀರಿನ ತೊಟ್ಟಿ ಮಾಡಿಸಿ ಕೊಡಲಾಗಿದೆ. ಆದ್ರೆ ಗ್ರಾಮದಲ್ಲಿ 2,500 ದನಗಳಿದ್ದು ಇಷ್ಟು ದನಗಳಿಗೆ ನೀರು ಸಂಗ್ರಹಣೆ ಅಸಾಧ್ಯವಾಗಿದೆ. ಆದಾಗಿ ಜಾನುವಾರುಗಳಿಗೆ ಸುಮಾರು 30 ಅಡಿ ಉದ್ದದ ನೀರಿನ ತೊಟ್ಟಿ ನಿರ್ಮಾಣಗೊಂಡರೆ ಜಾನುವಾರುಗಳ ದಾಹ ತೀರುತ್ತದೆ ಎಂದು ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದ ಮೂಲಕ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ನೆರವು ಬಯಸುತ್ತಿದ್ದಾರೆ.

    https://www.youtube.com/watch?v=LbsjoTuV68Y

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೂಲಭೂತ ಸೌಲಭ್ಯ ವಂಚಿತ ಗ್ರಾಮಕ್ಕೆ ಬೇಕಿದೆ ರಸ್ತೆ!

    ಮೂಲಭೂತ ಸೌಲಭ್ಯ ವಂಚಿತ ಗ್ರಾಮಕ್ಕೆ ಬೇಕಿದೆ ರಸ್ತೆ!

    ಬೀದರ್: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 60 ವರ್ಷ ಕಳೆದರೂ ಇನ್ನೂ ಗ್ರಾಮೀಣ ಪ್ರದೇಶಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ ಎನ್ನುವ ಸುದ್ದಿಗೆ ಹಳ್ಳಿ ಸಾಕ್ಷಿಯಾಗಿದೆ. ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ನೀಲಂಹಳ್ಳಿ ಗ್ರಾಮದಲ್ಲಿ 1,300 ಮಂದಿ ವಾಸವಾಗಿದ್ದು, ಸರಿಯಾದ ರಸ್ತೆ ಇಲ್ಲದೇ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ ಉಳಿದಿದ್ದಾರೆ.

    ಗ್ರಾಮದ ಜನರಿಗೆ ಕುಡಿಯುವ ನೀರು, ರಸ್ತೆ, ಒಳಚರಂಡಿ ಸೇರಿದಂತೆ ಮೂಲಭೂತ ಸೌಲಭ್ಯಗಳೇ ಇಲ್ಲ. ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಿಗೆ ಹೋಗಬೇಕಾದರೆ ನಡೆದುಕೊಂಡೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಗ್ರಾಮದ ಮಕ್ಕಳು ಶಾಲೆಗೆ ಹೋಗಬೇಕಾದರೆ 4 ರಿಂದ 5 ಕಿಲೋ ಮೀಟರ್ ದೂರ ಕಡಿದಾದ ಕಾಲುದಾರಿಯಲ್ಲಿ ನಡೆದು ಸಾಗಬೇಕಿದೆ.

    ಈ ಹಿಂದೆ ಕುಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿದ್ದರೂ ಸದ್ಯ ಗ್ರಾಮದ ರಸ್ತೆ ಸಂಪೂರ್ಣ ಹಾಳಾಗಿ ಕಚ್ಚಾ ರಸ್ತೆಯಾಗಿ ಮಾರ್ಪಟ್ಟಿದೆ. ರಸ್ತೆ ದುರಸ್ಥಿಗಾಗಿ ಅಧಿಕಾರಿಗಳು, ಜನಪ್ರತಿನಿಧಿಗಳ ಬಳಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ಧನ್ನೂರು – ರುದ್ಧನೂರ್ – ನೀಲಂಹಳ್ಳಿ ಮೂಲಕ ಮುಖ್ಯ ರಸ್ತೆಗೆ ಸಂಪರ್ಕವಾಗುವ ರಸ್ತೆಯನ್ನು ರಾಜಕೀಯ ವ್ಯಕ್ತಿಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಾಣ ಮಾಡಿದ್ದಾರೆ.

    ಇತ್ತ ಗ್ರಾಮದಲ್ಲಿ ಸಮಸ್ಯೆಗಳಿದ್ದರೂ ರಸ್ತೆ ಒತ್ತುವರಿ ತೆರವುಗೊಳಿಸಿ ಗ್ರಾಮಸ್ಥರ ನೆರವಿಗೆ ಬರಬೇಕಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಸ್ಥಳೀಯ ಶಾಸಕರೂ ಆದ ಈಶ್ವರ್ ಖಂಡ್ರೆ ಮೌನಕ್ಕೆ ಶರಣಾಗಿದ್ದಾರೆ. ಜನಪ್ರತಿನಿಧಿಗಳ ಹಾಗು ಅಧಿಕಾರಿಗಳಿಗೆ ನಿರ್ಲಕ್ಷ್ಯಕ್ಕೆ ಈ ಗ್ರಾಮದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಸದ್ಯ ಇಲ್ಲಿನ ಗ್ರಾಮಸ್ಥರು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ರಸ್ತೆ ಮಾಡಿಸಿಕೊಡಿ ಎಂದು ಮನವಿ ಮಾಡಿದ್ದಾರೆ.

    https://www.youtube.com/watch?v=QorJplaN5-w

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com

  • ಸಂಗೀತ ಕಲಿತು ಸ್ವಾಭಿಮಾನ ಜೀವನ ನಡೆಸುತ್ತಿರುವ ಅಂಧ ಕಲಾವಿದರಿಗೆ ಬೇಕಿದೆ ಸಹಾಯ

    ಸಂಗೀತ ಕಲಿತು ಸ್ವಾಭಿಮಾನ ಜೀವನ ನಡೆಸುತ್ತಿರುವ ಅಂಧ ಕಲಾವಿದರಿಗೆ ಬೇಕಿದೆ ಸಹಾಯ

    ತುಮಕೂರು: ಕಣ್ಣು ಕಾಣದಿದ್ದರೂ ಸುಶ್ರಾವ್ಯವಾಗಿ ಹಾಡುವುದು ಹಾಗೂ ಸಂಗೀತ ವಾದ್ಯಗಳನ್ನ ನುಡಿಸಲು ಕಲಿತಿರುವ ಅಂಧ ಕಲಾವಿದರಿಗೆ ಸಹಾಯ ಬೇಕಿದೆ.

    ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಗ್ರಾಮದ ಕಲಾವಿದರಾದ ಇವರು, ಹುಟ್ಟು ಅಂಧರು. ಆದರೆ ಮನೆಯವರಿಗೆ ಹೊರೆಯಾಗದೆ ಸ್ವಾಭಿಮಾನದಿಂದ ಬದುಕಬೇಕೆಂಬ ಹೆಬ್ಬಯಕೆಯನ್ನು ಹೊಂದಿದ್ದಾರೆ. ಇದಕ್ಕಾಗಿ ಕಷ್ಟಪಟ್ಟು ಅಭ್ಯಾಸ ಮಾಡಿ ಸಂಗೀತ ವಾದ್ಯ ನುಡಿಸಲು ಹಾಗೂ ಹಾಡೊಂದನ್ನು ಕಲಿತಿದ್ದಾರೆ.

    ಸದ್ಯ ಆರ್ಕೆಸ್ಟ್ರಾದಲ್ಲಿ ಸಂಗೀತ ನುಡಿಸುತ್ತಾ ಸುಶ್ರಾವ್ಯವಾಗಿ ಹಾಡುತ್ತಿರುವ ಇವರು ಬಂದ ಹಣದಿಂದ ಜೀವನ ಸಾಗಿಸುತ್ತಿದ್ದಾರೆ. ತಮ್ಮ ಸಂಗೀತದಿಂದಲೇ ಸಾಧನೆ ಮಾಡುವ ಹಂಬಲದಿಂದ ತಂಡವೊಂದನ್ನು ಕಟ್ಟಿಕೊಂಡಿದ್ದಾರೆ. ಬೆಂಗಳೂರು ಸೇರಿದಂತೆ ಮಡಿಕೇರಿ, ದಾವಣಗೆರೆ, ಉತ್ತರಕನ್ನಡದ ಅಂಧ ಕಲಾವಿದರು ಈ ತಂಡದಲ್ಲಿ ಇದ್ದು, ಆಳ್ವಾಸ್ ನುಡಿಸಿರಿ ಸೇರಿದಂತೆ ಹಲವು ಸಮಾರಂಭಗಳಲ್ಲಿ ಕಾರ್ಯಕ್ರಮಗಳನ್ನು ಕೊಟ್ಟು ಪ್ರಶಂಸೆ ಪಡೆದುಕೊಂಡಿದ್ದಾರೆ. ಆದರೆ ಬಾಡಿಗೆಗೆ ಸಂಗೀತ ಸಾಧನಗಳನ್ನು ಪಡೆದುಕೊಂಡು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದು, ಬಂದ ಅಲ್ಪ ಸ್ವಲ್ಪ ಹಣ ಬಾಡಿಗೆಗೆ ನೀಡಬೇಕಿದೆ.

    ಸಂಗೀತ ವಾದ್ಯಗಳನ್ನು ಬಾಡಿಗೆ ಪಡೆದು ಉಳಿದ ಹಣದಲ್ಲಿ ಎಲ್ಲಾ ಕಲಾವಿದರು ಜೀವನ ನಡೆಸಲು ಕಷ್ಟವಾಗುತ್ತಿದ್ದು, ಯಾರಾದ್ರೂ ದಾನಿಗಳು ಸಂಗೀತ ಸಲಕರಣೆಗಳ ನೆರವು ನೀಡಿದರೆ ತಮ್ಮ ಜೀವನಕ್ಕೆ ನೆರವಾಗುತ್ತದೆ ಎಂದು ಬೆಳಕು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.

    https://www.youtube.com/watch?v=aEApGRGIOqw

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com

  • ಕ್ಯಾನ್ಸರ್ ಪೀಡಿತ ಮಗನಿಗೆ ಚಿಕಿತ್ಸೆ, ಮತ್ತೊಬ್ಬ ಮಗನಿಗೆ ಶಿಕ್ಷಣ – ತಾಯಿಗೆ ಬೇಕಿದೆ ನೆರವು

    ಕ್ಯಾನ್ಸರ್ ಪೀಡಿತ ಮಗನಿಗೆ ಚಿಕಿತ್ಸೆ, ಮತ್ತೊಬ್ಬ ಮಗನಿಗೆ ಶಿಕ್ಷಣ – ತಾಯಿಗೆ ಬೇಕಿದೆ ನೆರವು

    ರಾಮನಗರ: ಓಡಾಡಲು ಕೂರಲು ಕಷ್ಟ ಪಡುತ್ತಾ, ಹಾಸಿಗೆ ಹಿಡಿದಿರುವ ಮಗನಿಗೆ ಚಿಕಿತ್ಸೆ ಹಾಗೂ ಮತ್ತೊಬ್ಬ ಮಗನಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಿರುವ ತಾಯಿಗೆ ನೆರವು ಬೇಕಿದೆ.

    ಕನಕಪುರ ತಾಲೂಕಿನ ರಾಚಯ್ಯನದೊಡ್ಡಿ ಗ್ರಾಮದ 16 ವರ್ಷದ ವಿಶ್ವನಾಯ್ಕ ಕ್ಯಾನ್ಸರ್ ಮಹಾಮಾರಿಯಿಂದ ಅಕ್ಷರಶಃ ನರಕಯಾತನೆ ಅನುಭವಿಸುತ್ತಿದ್ದಾನೆ. ಆತನ ತಂದೆ ಗೋವಿಂದನಾಯ್ಕ್ 10 ವರ್ಷಗಳ ಹಿಂದೆ ಮೃತಪಟ್ಟಿದ್ದು, ತಾಯಿ ಮಂಗಳಬಾಯಿ ತನ್ನ ಇಬ್ಬರು ಮಕ್ಕಳೊಂದಿಗೆ ಗ್ರಾಮದಲ್ಲಿ ವಾಸವಾಗಿದ್ದಾರೆ.

    ಓದಿನಲ್ಲಿ ಪ್ರತಿಭಾವಂತ ಬಾಲಕನಾಗಿದ್ದ ವಿಶ್ವನಾಯ್ಕ ಎಸ್‍ಎಸ್‍ಎಲ್‍ಸಿಯಲ್ಲಿ ಶೇ.77.44 ಅಂಕ ಗಳಿಸಿದ್ದು, ಮುಂದೆ ಓದಿ ತಾಯಿ ಮತ್ತು ತಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಬಯಸುತ್ತಿದ್ದ. ಆದರೆ ವಿಶ್ವನಾಯ್ಕನಿಗೆ ಕ್ಯಾನ್ಸರ್ ಕಾಣಿಸಿಕೊಂಡು ನಡೆಯಲು ಸಾಧ್ಯವಾಗದೇ ಹಾಸಿಗೆ ಹಿಡಿದಿದ್ದಾನೆ.

    ಅಂದಹಾಗೇ ವಿಶ್ವನಾಯ್ಕ ಮೆಟಲ್ ಕ್ಯಾನ್ಸರ್‍ನಿಂದ ಬಳಲುತ್ತಿದ್ದು, ಮಗನ ಚಿಕಿತ್ಸೆಗಾಗಿ ತಾಯಿ ಮಂಗಳಬಾಯಿ ಕೂಲಿ ಸಾಲ ಮಾಡಿ ಚಿಕಿತ್ಸೆ ನೀಡಿದ್ದಾರೆ. ಆದರೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಸದ್ಯ ವೈದ್ಯರು ಮಗ ಇರುವವರೆಗೆ ಚೆನ್ನಾಗಿ ನೋಡಿಕೊಳ್ಳಿ ಎಂದು ಕೈಚೆಲ್ಲಿದ್ದು, ವಿಶ್ವನಾಯ್ಕ ಜೀವನದ ಅಂತಿಮ ದಿನಗಳನ್ನ ಎಣಿಸುತ್ತಿದ್ದಾನೆ.

    ಇತ್ತ ಮಗನ ಸ್ಥಿತಿ ಕಂಡ ಹೆತ್ತ ಕರುಳು ಹೆಣಗಾಟ ನಡೆಸಿದ್ದು, ಮಗನ ಚಿಕಿತ್ಸೆಗೆ ಮಾಡಿದ ಸಾಲ ಹಾಗೂ ಮತ್ತೊಬ್ಬ ಮಗನ ಭವಿಷ್ಯದ ಚಿಂತೆಯಿಂದ ದಿಕ್ಕು ತೋಚದೆ ಮಮ್ಮಲ ಮರುಗುತ್ತಿದ್ದಾರೆ. ಸದ್ಯ ಮಗ ವಿಶ್ವನಾಯ್ಕ ಇರುವಷ್ಟು ದಿನ ಚೆನ್ನಾಗಿ ನೋಡಿಕೊಳ್ಳಬೇಕು, ಮತ್ತೊಬ್ಬ ಮಗನನ್ನು ಓದಿಸಿ ಉತ್ತಮ ಜೀವನ ರೂಪಿಸುವ ಉದ್ದೇಶ ಹೊಂದಿದ್ದಾರೆ. ಇದಕ್ಕಾಗಿ ಸ್ವಾಭಿಮಾನ ಬದುಕು ಕಟ್ಟಿಕೊಳ್ಳಲು ಯಾರಾದ್ರೂ ದಾನಿಗಳು ಸಹಾಯ ಮಾಡಿ ಎಂದು ಬೆಳಕು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.

    https://www.youtube.com/watch?v=LjUzjvJsMC8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com

  • ಕಾಲು ಸ್ವಾಧೀನವಿಲ್ಲದ ಯುವಕನಿಗೆ ತಾಯಿಗಾಗಿ ದುಡಿಯುವ ಹಂಬಲ

    ಕಾಲು ಸ್ವಾಧೀನವಿಲ್ಲದ ಯುವಕನಿಗೆ ತಾಯಿಗಾಗಿ ದುಡಿಯುವ ಹಂಬಲ

    ಚಿತ್ರದುರ್ಗ: ಕಾಲು ಸ್ವಾಧೀನ ಇಲ್ಲದಿದ್ದರು ತಾಯಿಗಾಗಿ ದುಡಿಯುವ ಹಂಬಲದ ಯುವಕ ಸಹಾಯ ಯಾಚಿಸಿ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ. ಹೆಸರು ಮಂಜುನಾಥ್, ಚಿತ್ರದುರ್ಗ ತಾಲೂಕಿನ ಚಿಕ್ಕಬೆನ್ನೂರು ಗ್ರಾಮದ ನಿವಾಸಿ. ಕಳೆದ ಎರಡು ವರ್ಷಗಳ ಹಿಂದೆ ಕಂಬದ ಮೇಲೆ ಏರಿ ಕೇಬಲ್ ಕೆಲಸ ಮಾಡುವಾಗ ಉಂಟಾದ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಮೇಲಿಂದ ಕೆಳಗೆ ಬಿದ್ದು ತನ್ನ ಕಾಲುಗಳ ಸ್ವಾಧೀನ ಕಳೆದುಕೊಂಡು ನರಕಯಾತನೆ ಅನುಭವಿಸುತ್ತಿದ್ದಾರೆ.

    ಕೇಬಲ್ ಕಂಪನಿ ಹಾಗು ತನ್ನ ಕುಟುಂಬದವರ ನೆರವಿನಿಂದ ಈಗಾಗಲೇ ಮೂರು ಶಸ್ತ್ರ ಚಿಕಿತ್ಸೆಗಳನ್ನು ಮಾಡಿಸಿಕೊಂಡಿರುವ ಮಂಜುನಾಥ್ ಸಂಪೂರ್ಣ ಗುಣಮುಖವಾಗದೇ ಕಂಗಾಲಾಗಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೂ ಅರ್ಜಿ ಸಲ್ಲಿಸಿದ್ದೂ, ಸಿಎಂ ಕಚೇರಿಯಿಂದ ಪೂರಕವಾಗಿ ಸ್ಪಂದಿಸುವಂತೆ ಜಿಲ್ಲಾಡಳಿತಕ್ಕೆ ಪತ್ರ ರವಾನೆಯಾಗಿದೆ. ಅಷ್ಟೇ ಅಲ್ಲ ಸ್ವತಃ ಗ್ರಾಮಸ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳಿಂದ ಯಾವುದೇ ಪ್ರಯೋಜನವಾಗಲಿಲ್ಲ.

    ತಾಯಿಗೆ ಆಸರೆಯಾಗಬೇಕಾಗಿದ್ದ ಮಗ ಮಂಜುನಾಥ್ ತನ್ನ ಕೈಯಲ್ಲಿ ದುಡಿಯಲಾಗುತ್ತಿಲ್ಲ ಅಂತಾ ಮರುಗುತ್ತಿದ್ದರೆ, ಇತ್ತ ತಾಯಿ ಮಗನಿಗಾಗಿ ಕೂಲಿ ಕೆಲಸ ಮಾಡಿ ಮಗನ ಆರೈಕೆ ಮಾಡುತ್ತಿದ್ದಾರೆ. ತಾಯಿ ಮಗ ಸ್ವಾವಲಂಬಿಯಾಗಿ ಜೀವನ ಮಾಡಲು ಒಂದು ಸಣ್ಣದಾದ ಚಿಲ್ಲರೆ ಅಂಗಡಿಗೆ ಸಹಾಯ ಮಾಡಿ ಎಂದು ಪಬ್ಲಿಕ್ ಟಿವಿಯ ಬೆಳಕು ಮೂಲಕ ದಾನಿಗಳ ಸಹಾಯ ಬಯಸುತ್ತಿದ್ದಾರೆ.

    https://www.youtube.com/watch?v=qOKdDFVoMwk

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv