Tag: belaku

  • ಹುಬ್ಬಳ್ಳಿಯ ಪ್ರೀತಿಗೆ ಬೆಳಕು – ಬಟ್ಟೆ ಅಂಗಡಿ ಬೇಡಿಕೆಗೆ ನೆರವು ನೀಡಿದ ‘ಪಬ್ಲಿಕ್ ಟಿವಿ’

    ಹುಬ್ಬಳ್ಳಿಯ ಪ್ರೀತಿಗೆ ಬೆಳಕು – ಬಟ್ಟೆ ಅಂಗಡಿ ಬೇಡಿಕೆಗೆ ನೆರವು ನೀಡಿದ ‘ಪಬ್ಲಿಕ್ ಟಿವಿ’

    – ಚನ್ನಾಪುರ ಗ್ರಾಮದ ಯಲ್ಲಪ್ಪ, ಗೌರವ್ವ ದಂಪತಿ ಬಾಳಿಗೆ ಬೆಳಕಾದ ಪಬ್ಲಿಕ್ ಟಿವಿ ‘ಬೆಳಕು’ ಕಾರ್ಯಕ್ರಮ

    ಹುಬ್ಬಳ್ಳಿ: ಪಬ್ಲಿಕ್ ಟಿವಿ ‘ಬೆಳಕು’ ಕಾರ್ಯಕ್ರಮ ಸಹಾಯಕರಿಗೆ, ಬಡವರಿಗೆ ನೇರವಾಗಿ ಸಾವಿರ ಕುಟುಂಬಗಳ ಸಂಕಷ್ಟ ನಿವಾರಣೆಗೆ ಕೈಜೋಡಿಸಿದೆ. ಅದರಂತೆ ಹುಬ್ಬಳ್ಳಿ ತಾಲ್ಲೂಕಿನ ಚನ್ನಾಪುರ ಗ್ರಾಮದ ಯಲ್ಲಪ್ಪ ಮತ್ತು ಗೌರವ್ವ ದಂಪತಿ ಬಾಳಿಗೆ ‘ಪಬ್ಲಿಕ್ ಟಿವಿ’ ಬೆಳಕಾಗಿದೆ.

    ಯಲ್ಲಪ್ಪ ಮತ್ತು ಗೌರವ್ವ ದಂಪತಿಯ ಮೊದಲ ಮಗಳು ಪ್ರೀತಿ. ಅವಳಿಗೆ ಈಗ 13 ವರ್ಷ. ಈಕೆಗೆ ಹುಟ್ಟುತ್ತಲೇ ಮಾತು ಬರುವುದಿಲ್ಲ, ಕಿವಿ ಕೇಳುವುದಿಲ್ಲ. ಗಾಯದ ಮೇಲೆ ಬರೆ ಎಳೆದಂತೆ ಪ್ರೀತಿ ನಾಲ್ಕು ವರ್ಷದವಳಿದ್ದಾಗಲೇ ತೀವ್ರ ಸಕ್ಕರೆ ಕಾಯಿಲೆಗೆ ತುತ್ತಾದಳು. ಪ್ರೀತಿಗೆ ಡಯಾಲಿಸಿಸ್ ಮಾಡಿಸಲು ತಿಂಗಳಿಗೆ ಐದಾರು ಸಾವಿರ ಖರ್ಚು ಬರುತ್ತಿತ್ತು. ಯಲ್ಲಪ್ಪ ಹಮಾಲಿ ಕೆಲಸ ಮಾಡುತ್ತಿದ್ದು, ಅದರಿಂದ ಬರುವ ಹಣದಿಂದ ಜೀವನ ನಡೆಸುತ್ತಿದ್ದರು. ಮತ್ತೊಂದು ಕಡೆ ಪ್ರೀತಿಗೆ ದಿನಕ್ಕೆ ಮೂರು ಬಾರಿ ಇಂಜೆಕ್ಷನ್ ಮಾಡಿಸಬೇಕು. ಹೀಗಾಗಿ ತಾಯಿ ಗೌರವ್ವ ಮನೆಯಲ್ಲಿಯೇ ಇರಬೇಕು. ಯಲ್ಲಪ್ಪನ ಕೂಲಿ ಹಣ ಮನೆ ನಡೆಸಲು ಸಹ ಸಾಕಾಗುತ್ತಿರಲಿಲ್ಲ. ಈ ಕುರಿತು ಜು.5 ರಂದು ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮ ಪ್ರಸಾರವಾಗಿತ್ತು.ಇದನ್ನೂ ಓದಿ: Public TV | `ಬೆಳಕು’ ಫಲಶೃತಿ – ಅತ್ಯಾಡಿ ಗ್ರಾಮಕ್ಕೆ ಕಬ್ಬಿಣದ ತೂಗುಸೇತುವೆ ಭಾಗ್ಯ

    ಈ ಕುಟುಂಬ ಮನೆಯಲ್ಲಿಯೇ ಇದ್ದುಕೊಂಡು ಒಂದು ಕಡೆ ಪ್ರೀತಿಯ ಆರೋಗ್ಯ ನೋಡಿಕೊಂಡು, ಮತ್ತೊಂದು ಕಡೆ ಕುಟುಂಬ ನಿರ್ವಹಣೆಗೆ ಬಟ್ಟೆ ಅಂಗಡಿ ವ್ಯಾಪಾರ ಮಾಡುವ ಆಸಕ್ತಿ ಹೊಂದಿತ್ತು. ಹೀಗಾಗಿ ಬಟ್ಟೆ ಅಂಗಡಿಯನ್ನು ಹಾಕಿಕೊಡುವಂತೆ ಬೇಡಿಕೆಯಿಟ್ಟಿತ್ತು. ಕುಟುಂಬದ ಮನವಿಯಂತೆ ಬಟ್ಟೆ ಅಂಗಡಿ ವ್ಯವಸ್ಥೆ ಮಾಡಿದೆ. ಪಬ್ಲಿಕ್ ಟಿವಿಯಿಂದಾದ ಸಹಾಯಕ್ಕೆ ಯಲ್ಲಪ್ಪ ಅವರ ಕುಟುಂಬ ಬಟ್ಟೆ ಅಂಗಡಿಗೆ “ಪಬ್ಲಿಕ್ ಟಿವಿ ಬೆಳಕು ಬಟ್ಟೆ ಅಂಗಡಿ” ಎಂದು ಹೆಸರಿಟ್ಟಿದೆ. ಕುಟುಂಬ ಪಬ್ಲಿಕ್ ಟಿವಿಗೆ ಹಾಗೂ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಅವರಿಗೆ ಧನ್ಯವಾದ ಅರ್ಪಿಸಿದೆ.ಇದನ್ನೂ ಓದಿ:

  • ಹೊಳಲ್ಕೆರೆಯ ದೀಪಿಕಾಳ ಸಿಎ ಕನಸಿಗೆ ಪಬ್ಲಿಕ್ ಬೆಳಕು- ವಿದ್ಯಾರ್ಥಿನಿಗೆ ಸಿಕ್ತು ಆರ್ಥಿಕ ನೆರವು

    ಹೊಳಲ್ಕೆರೆಯ ದೀಪಿಕಾಳ ಸಿಎ ಕನಸಿಗೆ ಪಬ್ಲಿಕ್ ಬೆಳಕು- ವಿದ್ಯಾರ್ಥಿನಿಗೆ ಸಿಕ್ತು ಆರ್ಥಿಕ ನೆರವು

    ಚಿತ್ರದುರ್ಗ: ಆಕೆ ಪ್ರತಿಭಾವಂತ ವಿದ್ಯಾರ್ಥಿನಿ. ಪಿಯುಸಿಯಲ್ಲಿ 97% ಅಂಕ ಗಳಿಸಿದ ರಾಜ್ಯದ 7ನೇ ಟಾಪರ್. ಆದರೆ ಕುಟುಂಬದಲ್ಲಿನ ಬಡತನಿಂದಾಗಿ ಆಕೆಯ ಮುಂದಿನ ವಿದ್ಯಾಭ್ಯಾಸದ ಕನಸು ಕಮರಿಹೋಗಿತ್ತು. ಈ ವಿಷಯ ತಿಳಿದ ಪಬ್ಲಿಕ್ ಟಿವಿ ಬಡ ವಿದ್ಯಾರ್ಥಿನಿಯ ಕನಸನ್ನು ನನಸಾಗಿಸಲು ಬೆಳಕಾಗಿದೆ. ಇದು ಪಬ್ಲಿಕ್ ಟಿವಿಯ ಬೆಳಕು ಇಂಪ್ಯಾಕ್ಟ್.

    ಹೀಗೆ ತಂದೆಯೊಂದಿಗೆ ಕಾಲೇಜಿಗೆ ದಾಖಲಾಗಲು ತೆರಳುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿ ದೀಪಿಕಾ ಅಂತ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ನಿರಂಜನ ಹಾಗೂ ನಿರ್ಮಲ ದಂಪತಿ ಪುತ್ರಿ. ಈಕೆ ದ್ವಿತೀಯ ಪಿಯುಸಿಯಲ್ಲಿ 97.28%ರಷ್ಟು ಅಂಕ ಗಳಿಸಿದ್ದಾರೆ. ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಕರ್ನಾಟಕ ರಾಜ್ಯಕ್ಕೆ ಏಳನೇ ಟಾಪರ್. ಹೀಗಾಗಿ ವಿದ್ಯಾರ್ಥಿನಿಗೆ ಸಿಎ ಮಾಡಬೇಕೆಂಬ ಕನಸಿದ್ದು, ಆದರೆ ಮನೆಯ ಬಡತನದಿಂದ ಜೀವನ ಸಾಗಿಸೋದೇ ಕಷ್ಟಕರ ಆಗಿತ್ತು. ಇದನ್ನೂ ಓದಿ: ರಾಜ್ಯದ ಕರಾವಳಿಯಲ್ಲಿ ಮಳೆ, ಪ್ರವಾಹ, ಭೂಕುಸಿತ- ಗೋಕಾಕ್ ಫಾಲ್ಸ್‌ನಲ್ಲಿ ಪ್ರವಾಸಿಗರ ಹುಚ್ಚಾಟ

    ಇಬ್ಬರು ಮಕ್ಕಳನ್ನು ಓದಿಸಲಾಗದ ಸ್ಥಿತಿಯಲ್ಲಿದ್ದ ದೀಪಿಕಾ ತಂದೆ ನಿರಂಜನ್ ಮಗಳ ಉನ್ನತ ವ್ಯಾಸಂಗಕ್ಕೆ ನೆರವು ಕಲ್ಪಿಸುವಂತೆ ಪಬ್ಲಿಕ್ ಟಿವಿಗೆ ಮನವಿ ಮಾಡಿದ್ರು. ಪಬ್ಲಿಕ್ ಟಿವಿ ಮೂಲಕ ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ ಅವರ ಪುತ್ರ ರಘುಚಂದನ್ ವಿದ್ಯಾರ್ಥಿನಿ ವಿದ್ಯಾಭ್ಯಾಸಕ್ಕೆ ಕೈಜೋಡಿಸಿದ್ದಾರೆ. ತಮ್ಮ ಟ್ರಸ್ಟ್‍ನಿಂದ 3 ಬಾರಿ 50 ಸಾವಿರ ನೀಡುವ ಮೂಲಕ ವಿದ್ಯಾರ್ಥಿನಿಯ ಭವಿಷ್ಯಕ್ಕೆ ದಾರಿದೀಪವಾಗಿದ್ದಾರೆ. ಇದರಿಂದಾಗಿ ಸಂತಸಗೊಂಡ ವಿದ್ಯಾರ್ಥಿನಿ ನೆರವು ನೀಡಿದ ರಘುಚಂದನ್, ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಸರ್‍ಗೆ ಧನ್ಯವಾದ ಹೇಳಿದ್ದಾರೆ.

    ಕಡು ಬಡತನದಲ್ಲಿದ್ದ ಕುಟುಂಬಕ್ಕೆ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮ ದಾರಿದೀಪವಾಗಿದೆ. ಪ್ರತಿಭಾವಂತ ವಿದ್ಯಾರ್ಥಿನಿಯ ಭವಿಷ್ಯವನ್ನು ನಿಮ್ಮ ಪಬ್ಲಿಕ್ ಟಿವಿ ಉಜ್ವಲಗೊಳಿಸಿದೆ.

  • ಬೆಂಗಳೂರಿನ ಸರ್ಕಾರಿ ಶಾಲೆಗೆ ‘ಪಬ್ಲಿಕ್’ ಬೆಳಕು ಕಾಯಕಲ್ಪ

    ಬೆಂಗಳೂರಿನ ಸರ್ಕಾರಿ ಶಾಲೆಗೆ ‘ಪಬ್ಲಿಕ್’ ಬೆಳಕು ಕಾಯಕಲ್ಪ

    ಬೆಂಗಳೂರು: ಸರ್ಕಾರಿ ಶಾಲೆ (Govt School) ಬೆಳೆಯಬೇಕು, ಸರ್ಕಾರಿ ಶಾಲೆ ಉಳಿಬೇಕು ಅಂತಾ ಹೇಳೋ ಸರ್ಕಾರ, ಅದೇ ಸರ್ಕಾರಿ ಶಾಲೆಗಳ ನಿರ್ವಹಣೆ ಬಗ್ಗೆ ಮಾತ್ರ ಗಮನ ಇಲ್ಲ. ಇಂತಹದ್ದೆ ಪರಿಸ್ಥಿತಿ ನಡುವೆ, ಜೀವ ಭಯದಿ ಪಾಠ ಕಲಿಯುವ ಸ್ಥಿತಿಯಲ್ಲಿದ್ದ ಮಕ್ಕಳಿಗೆ ಪಬ್ಲಿಕ್ ಟಿವಿ ಮುಕ್ತಿ ನೀಡಿದ್ದು, ಈ ಮೂಲಕ ಸರ್ಕಾರಿ ಶಾಲೆಗೆ ಹೊಸ ರೂಪ ಸಿಕ್ಕಂತಾಗಿದೆ.

    ಹೌದು. ಸರ್ಕಾರದಿಂದ ಪ್ರತಿ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲೂ ಮಕ್ಕಳಿಗೆ ಕ್ವಾಲಿಟಿ ಶಿಕ್ಷಣ ನೀಡುವ ನಿಟ್ಟಿನಲ್ಲಿ ಇಂಗ್ಲೀಷ್ ಮಾಧ್ಯಮದ ಪಬ್ಲಿಕ್ ಶಾಲೆಗಳನ್ನ ಆರಂಭ ಮಾಡಲಾಗಿದೆ. ಅದೇ ರೀತಿ ಈ ಶಾಲೆ ಕೂಡ. ಅತ್ತಿಗುಪ್ಪೆ ಸರ್ಕಾರಿ ಶಾಲೆಯಾಗಿದ್ದು, 350ಕ್ಕೂ ಹೆಚ್ಚು ಮಕ್ಕಳಿರುವ ಶಾಲೆಗೆ ನಿತ್ಯ ಪೋಷಕರು ಜೀವವನ್ನ ಕೈಯಲ್ಲಿಡಿದೆ ಮಕ್ಕಳನ್ನು ಶಾಲೆಗೆ ಕಳುಹಿಸಬೇಕಾದ ಸ್ಥಿತಿ ಇತ್ತು. ಕಾರಣ ಬೀಳುವ ಹಂತದಲ್ಲಿದ್ದ ಕಾಂಪೌಂಡ್, ಸ್ವಚ್ಛತೆ ಇಲ್ಲದ ಶೌಚಾಲಯ, ಒಣಗಿ ನಿಂತ ಮರ ಈ ಎಲ್ಲಾದರ ನಡುವೆಗೂ ಮಕ್ಕಳು ಪಾಠ ಕಲಿಯುವ ಸ್ಥಿತಿ ಇತ್ತು.

    ಈ ಬಗ್ಗೆ ಬೆಳಕು ಕಾರ್ಯಕ್ರಮದ ಮೂಲಕ ಸುದ್ದಿ ಪ್ರಸಾರ ಮಾಡಿದ್ದ ಪಬ್ಲಿಕ್ ಟಿವಿ ಶಿಕ್ಷಣ ಇಲಾಖೆ ಗಮನಕ್ಕೆ ತಂದು ಇದನ್ನ ಸರಿಪಡಿಸುವಂತೆ ಒತ್ತಾಯ ಮಾಡಲಾಗಿತ್ತು. ಜೊತೆಗೆ ಸ್ಥಳೀಯ ಶಾಸಕ ಕೃಷ್ಣಪ್ಪರ ಸರಿಪಡಿಸುವಂತೆ ಮನವಿ ಮಾಡಲಾಗಿತ್ತು. ಅದರಂತೆ ಸುದ್ದಿ ಪ್ರಸಾರವಾದ ಎರಡೇ ತಿಂಗಳಲ್ಲಿ ಕಾಂಪೌಂಡ್ ಕಾಮಗಾರಿ ಮುಕ್ತಾಯಗೊಳಿಸಿ, ಶೌಚಾಲಯ ದುರಸ್ತಿ ಕಾರ್ಯಕೂಡ ಆರಂಭವಾಗಿದೆ. ಇನ್ನೂ ಮಕ್ಕಳನ್ನ ಶಾಲೆಗೆ ಕಳುಹಿಸಿ ದುಗುಡದಲ್ಲೇ ಕಾಲ ಕಳೆಯುತ್ತಿದ್ದ ಪೋಷಕರು, ಸದ್ಯ ಪಬ್ಲಿಕ್ ಟಿವಿ ಇಂಪ್ಯಾಕ್ಟ್ ಗೆ (Public TV Impact) ಧನ್ಯವಾದ ತಿಳಿಸುತ್ತಿದ್ದು, ಪಬ್ಲಿಕ್ ಟಿವಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೈ ಮುಗಿದು ಕೇಳಿಕೊಳ್ತೀನಿ, ಸಿಎಂ ಹೇಳಿಕೆ ನೀಡುವುದನ್ನು ನಿಲ್ಲಿಸಿ: ನೇಹಾ ತಂದೆ ನಿರಂಜನ್‌ ಕಿಡಿ

    ಒಟ್ಟಾರೆ ಸರ್ಕಾರಿ ಶಾಲೆ ಅಂದ ತಕ್ಷಣ ಮೂಗುಮುರಿಯೋ ಸಿಟಿ ಮಂದಿ ಮಧ್ಯೆ ಒಳ್ಳೆಯ ಶಿಕ್ಷಣ ಸಿಗಲಿ ಅಂತಾ ಇಲ್ಲಿಗೆ ಮಕ್ಕಳನ್ನ ಕಳಿಸೋ ಪೆÇೀಷಕರಿಗೆ ಇನ್ಮುಂದೆಯೂ ಯಾವುದೇ ಆತಂಕ ಇಲ್ಲದೇ ತಮ್ಮ ಮಕ್ಕಳನ್ನ ಈ ಸರ್ಕಾರಿ ಶಾಲೆಗೆ ಕಳುಹಿಸಬಹದಾಗಿದ್ದು, ಸರ್ಜಾರ ಕೂಡ ಉಳಿದ ಶಾಲೆಗಳ ವಿಚಾರವಾಗಿ ಹೀಗೆ ಎಚ್ಚೆತ್ತುಕೊಂಡರೆ ಸರ್ಕಾರಿ ಶಾಲೆಗಳು ಕೂಡ ಮಕ್ಕಳ ಅಭಾವ ಎದುರಿಸೋದು ತಪ್ಪಲಿದೆ.

  • ದೃಷ್ಟಿ ಸಮಸ್ಯೆಯಿದ್ದರೂ ದೇಶಕ್ಕಾಗಿ ಕ್ರಿಕೆಟ್‌ ಆಡುವ ಯುವತಿಗೆ ಬೇಕಿದೆ ಸಹಾಯ

    ದೃಷ್ಟಿ ಸಮಸ್ಯೆಯಿದ್ದರೂ ದೇಶಕ್ಕಾಗಿ ಕ್ರಿಕೆಟ್‌ ಆಡುವ ಯುವತಿಗೆ ಬೇಕಿದೆ ಸಹಾಯ

    ಬೆಂಗಳೂರು: ಸಾಧಿಸುವ ಛಲ ಇದ್ದರೆ ಯಾವ ಸಮಸ್ಯೆಯೂ ಅಡ್ಡಿಯಾಗುವುದಿಲ್ಲ. ತಮ್ಮ ಸಮಸ್ಯೆಯನ್ನೂ ಮೆಟ್ಟಿ ನಿಂತು ಸಾಧನೆ ಮಾಡುವ ಹಲವರು ನಮ್ಮ‌ಮುಂದೆ ಇದ್ದಾರೆ. ಈ ರೀತಿಯ ಸಾಧಕರ ಸಾಲಿಗೆ ರಾಜ್ಯ ಯುವತಿ ಸೇರ್ಪಡೆಯಾಗಿದ್ದಾರೆ. ಅಂಧತ್ವ (Blind) ಇದ್ದರೂ ದೇಶಕ್ಕಾಗಿ ಏನಾದರೂ ಸಾಧಿಸಬೇಕು ಎಂದು ಕ್ರಿಕೆಟ್ ಆಡಲು ಶುರು ಮಾಡಿದವರು ಇಂದು ಟೀಂ ಇಂಡಿಯಾದ ಮಹಿಳಾ ಅಂಧರ ತಂಡದ (India’s Blind Women’s Cricket Team) ನಾಯಕಿಯಾಗಿದ್ದಾರೆ.

    ಚಿತ್ರದುರ್ಗ ಜಿಲ್ಲೆ ಹಿರಿಯೂರು ಬಳಿಯ ಹಾದಿಹೊಲ ಗ್ರಾಮದ ವರ್ಷಾ (Varsha) ಅವರಿಗೆ 10ನೇ ತರಗತಿವರೆಗೆ ತನ್ನ ಕೆಲಸ ಮಾಡಿಕೊಳ್ಳುವಷ್ಟು ಕಣ್ಣಿನ ದೃಷ್ಟಿಯಿತ್ತು‌.‌ ಆಗ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ವರ್ಷ ಕ್ರೀಡೆಯಲ್ಲೇ ಮುಂದುವರೆಯುವ ಮನಸ್ಸು ಮಾಡಿದ್ದರು. ಆದರೆ ಎಸ್‌ಎಸ್‌ಎಲ್‌ಸಿ (SSLC) ನಂತರ ಸಂಪೂರ್ಣ ದೃಷ್ಟಿ ಕಳೆದುಕೊಂಡರು.

     

    ನಂತರ ಬ್ರೈಲ್ ಕಲಿಕೆಗಾಗಿ ಬೆಂಗಳೂರಿಗೆ ಬಂದು ಸದ್ಯ ಪದವಿ‌ ಮುಗಿಸಿರುವ ವರ್ಷ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ‌. ಅಂಧರ ಕ್ರಿಕೆಟ್‌ನಲ್ಲಿ ಕರ್ನಾಟಕದ (Karnataka) ನಾಯಕಿಯಾಗಿದ್ದ ವರ್ಷಾ 2023ರಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದು ನಾಯಕಿಯಾಗಿ ಈಗಾಗಲೇ ಎರಡು ಸಿರೀಸ್ ಆಡಿದ್ದಾರೆ. IBSA ವರ್ಲ್ಡ್ ಕಪ್ ಫೈನಲ್ ನಲ್ಲಿ‌ ಆಸ್ಟ್ರೇಲಿಯಾವನ್ನ ಸೋಲಿಸಿ ಚಿನ್ನದ ಪದಕ ಗೆದ್ದಿದ್ದಾರೆ.

    ಭಾಗಶಃ ಕುರುಡು, ರೆಟಿನಾ ಸಮಸ್ಯೆ ಇರುವುದರಿಂದ ದೃಷ್ಟಿ ಸಂಪೂರ್ಣ ಕಡಿಮೆಯಾಗಿದೆ. ಕ್ರೀಡೆಯಲ್ಲಿ ಆಸಕ್ತಿ ಇದ್ದರೂ ದೃಷ್ಟಿ ದೋಷದಿಂದ ಆಡಲು ಸಾಧ್ಯವಾಗಲಿಲ್ಲ. ಸ್ನೇಹಿತೆಯ ಮೂಲಕ ಅಂಧರ ಕ್ರಿಕೆಟ್ ಬಗ್ಗೆ ಗೊತ್ತಾಯಿತು. ಸಂಪೂರ್ಣ ಧ್ವನಿ ಕೇಳಿಸಿಕೊಂಡೆ ಬಾಲ್ ಹಿಟ್ ಮಾಡುವುದನ್ನು ಕಲಿತೆ ಎನ್ನುತ್ತಾರೆ ವರ್ಷಾ.  ಇದನ್ನೂ ಓದಿ: 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಾಕ್‌ನಲ್ಲಿ ನಡೆಯುವುದು ಅನುಮಾನ

    2019 ರಿಂದ ಕ್ರಿಕೆಟ್ ಆಡುವುದನ್ನು ಅಭ್ಯಾಸ ಮಾಡಿಕೊಂಡ ಇವರಿಗೆ ಕರ್ನಾಟಕ ತಂಡದಲ್ಲಿ ಅವಕಾಶ ಸಿಕ್ಕಿ ನಾಯಕಿಯೂ ಆದರು. ಸತತ ಮೂರ್ನಾಲ್ಕು ವರ್ಷಗಳ ಪರಿಶ್ರಮದಿಂದ ಟೀಮ್ ಇಂಡಿಯಾಗೆ ಆಯ್ಕೆ ಆಗುತ್ತಾರೆ. ಆಯ್ಕೆಯಾದ ಕೆಲ ದಿನಗಳಲ್ಲೇ ತಂಡದ ನಾಯಕಿಯಾಗಿ ಆಯ್ಕೆಯಾಗಿ ಒಂದು ಶತಕ ಸಹ ಸಿಡಿಸಿದ್ದಾರೆ. ಅಷ್ಟೇ ಅಲ್ಲದೇ ಕೇವಲ 13 ಎಸೆತಗಳಲ್ಲಿ 50 ರನ್ ಚಚ್ಚಿ ತಾನು ಅತ್ಯುತ್ತಮ ಆಟಗಾರ್ತಿ ಎಂಬುದನ್ನೂ ನಿರೂಪಿಸಿದ್ದಾರೆ.

    ಕ್ರಿಕೆಟ್‌ (Cricket) ಆಡುವಾಗ ವರ್ಷ ಹೆಲ್ಮೆಟ್ ಬಳಸುತ್ತಿರಲಿಲ್ಲ.‌ ಇದರಿಂದ ಕಳೆದ ಪಂದ್ಯದಲ್ಲಿ ತಲೆಗೆ ಪೆಟ್ಟು ಮಾಡಿಕೊಂಡಿದ್ದರು. ಮುಂದಿನ ತಿಂಗಳು ಡಿಸೆಂಬರ್‌ನಲ್ಲಿ ಮುಂಬೈನಲ್ಲಿ ನೇಪಾಳ ವಿರುದ್ಧ ಕ್ರಿಕೆಟ್ ಸೀರಿಸ್ ಇದೆ. ಆ ಸೀರಿಸ್ ನಲ್ಲಿ ಹೆಲ್ಮೆಟ್ ಧರಿಸಿ ಆಡಬೇಕು ಎಂದು‌ ನಿರ್ಧಾರ ಮಾಡಿದ್ದಾರೆ. ಹೆಲ್ಮೆಟ್ ಜೊತೆಗೆ ಪ್ರೈವೆಟ್‌ ಕಿಟ್ ಸೌಲಭ್ಯ ಸಿಕ್ಕರೆ ಮತ್ತಷ್ಟು ಪರಿಶ್ರಮದೊಂದಿಗೆ ಟೀಮ್‌ ಇಂಡಿಯಾ ಗೆಲ್ಲಿಸಲು ಸಹಾಯ ಆಗುತ್ತದೆ ಎನ್ನುತ್ತಿದ್ದಾರೆ ವರ್ಷಾ. ಜೊತೆಗೆ ಅವರ ತಾಯಿ ಯಶೋಧಾ ಸಹ ಈ ಕ್ರೀಡಾಪಟುಗಳಿಗೆ ಸರ್ಕಾರ ಸಹಾಯ ಮಾಡಬೇಕು ಎಂದು‌ ಮನವಿ‌ ಮಾಡಿದ್ದಾರೆ. ಇದನ್ನೂ ಓದಿ: ಮುಂಬೈಗೆ ಮರಳಿರುವುದು ಖುಷಿಯಾಗಿದೆ: ಹಾರ್ದಿಕ್ ಪಾಂಡ್ಯ

    ಎಲ್ಲವೂ ಸರಿ ಇದ್ದರೂ ಹಿಂದಡಿ ಇಡುವವರ ನಡುವೆ ವರ್ಷಾ ದೇಶಕ್ಕಾಗಿ‌ ನಾನು ಆಡುತ್ತೇನೆ ಎನ್ನುತ್ತಿದ್ದಾರೆ. ತಮಗೆ‌ ಕ್ರಿಕೆಟ್ ಕಿಟ್ ಸಿಕ್ಕರೆ ಮತ್ತಷ್ಟು ಅಭ್ಯಾಸ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ ವರ್ಷಾ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಬಡ ಎಂಜಿನಿಯರಿಂಗ್ ವಿದ್ಯಾರ್ಥಿನಿ ಬಾಳಲ್ಲಿ `ಬೆಳಕು’

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಬಡ ಎಂಜಿನಿಯರಿಂಗ್ ವಿದ್ಯಾರ್ಥಿನಿ ಬಾಳಲ್ಲಿ `ಬೆಳಕು’

    ಚಿಕ್ಕಬಳ್ಳಾಪುರ: ಪಬ್ಲಿಕ್ ಟಿವಿಯ ಬೆಳಕು (PBLiC TV Belaku) ಕಾರ್ಯಕ್ರಮದ ಮತ್ತೊಂದು ಇಂಪ್ಯಾಕ್ಟ್ ಆಗಿದೆ. ಬಡ ಇಂಜಿನಿಯರಿಂಗ್ ವಿದ್ಯಾರ್ಥಿನಿ ಭವ್ಯ ಅವರಿಗೆ ಶಿಡ್ಲಘಟ್ಟ ಶಾಸಕ ರವಿಕುಮಾರ್ ನೆರವು ನೀಡಿದ್ದಾರೆ.

    ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ವರಸಂದ್ರ ಗ್ರಾಮದ ಬಡ ಕುಟುಂಬದ ಹೆಣ್ಣು ಮಗಳು ಭವ್ಯಗೆ ಬೆಂಗಳೂರಿನ ಪ್ರತಿಷ್ಠಿತ ನ್ಯೂ ಹಾರಿಜನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ 2ನೇ ವರ್ಷದ ಶುಲ್ಕ ಕಟ್ಟಲು ಕಷ್ಟವಾಗಿತ್ತು. ಅಪ್ಪ-ಅಮ್ಮನ ಬಳಿ ಹಣ ಕೇಳಿದರೆ ಓದೋದೇ ಸಾಕು ಮನೆಗೆ ಬಂದುಬಿಡು ಮದುವೆ ಮಾಡ್ತೀವಿ ಅಂದಿದ್ದರು. ದಿಕ್ಕು ತೋಚದ ಭವ್ಯಾ ಸೀದಾ ಪಬ್ಲಿಕ್ ಟಿವಿ ಕಚೇರಿಗೆ ಬಂದು ಸಂಸ್ಥೆಯ ಮುಖ್ಯಸ್ಥರಾದ ಹೆಚ್‌. ಆರ್ ರಂಗನಾಥ್ (HR Ranganath) ಅವರಿಗೆ ಪತ್ರ ಬರೆದಿದ್ದಳು.

    ನವೆಂಬರ್ 17ರಂದು ಪ್ರಸಾರಗೊಂಡ ಬೆಳಕು ಕಾರ್ಯಕ್ರಮವನ್ನು ವೀಕ್ಷಿಸಿದ ಶಿಡ್ಲಘಟ್ಟ ಶಾಸಕ ಮೇಲೂರು ರವಿಕುಮಾರ್ ಅವರು ವಿದ್ಯಾರ್ಥಿನಿಯ ಎಂಜಿನಿಯರಿಂಗ್ ಓದುವ ಸಂಪೂರ್ಣ ವೆಚ್ಚ ಭರಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಅಲ್ಲದೆ 2ನೇ ವರ್ಷದ ಕಾಲೇಜು ಶುಲ್ಕ 1 ಲಕ್ಷದ 27 ಸಾವಿರ ರೂಪಾಯಿಯ ಚೆಕ್ ನೀಡಿದ್ದಾರೆ. ಶಾಸಕರ ನೆರವು ಸಿಕ್ಕಿದ್ದರಿಂದ ಪಬ್ಲಿಕ್ ಟಿವಿಗೆ ವಿದ್ಯಾರ್ಥಿನಿ ಭವ್ಯಾ ಹಾಗೂ ಕುಟುಂಬಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.

  • ಪಬ್ಲಿಕ್ ಟಿವಿ ಪ್ರೇರಣೆ – ಇಬ್ಬರು ವಿಶೇಷ ಚೇತನರಿಗೆ ಬ್ಯಾಟರಿ ಚಾಲಿತ ಗಾಲಿ ಕುರ್ಚಿ ವಿತರಿಸಿದ ಸವದಿ

    ಪಬ್ಲಿಕ್ ಟಿವಿ ಪ್ರೇರಣೆ – ಇಬ್ಬರು ವಿಶೇಷ ಚೇತನರಿಗೆ ಬ್ಯಾಟರಿ ಚಾಲಿತ ಗಾಲಿ ಕುರ್ಚಿ ವಿತರಿಸಿದ ಸವದಿ

    ಚಿಕ್ಕೋಡಿ: ಪಬ್ಲಿಕ್ ಟಿವಿಯ (Public Tv) ‘ಬೆಳಕು’ (Belaku) ಕಾರ್ಯಕ್ರಮದ ಪ್ರೇರಣೆಯಿಂದ ಬೆನ್ನುಹುರಿ ಇಲ್ಲದ ಇಬ್ಬರು ವಿಕಲಚೇತನರಿಗೆ (Disabled Persons) ಬ್ಯಾಟರಿ ಚಾಲಿತ ಗಾಲಿ ಕುರ್ಚಿ (Wheelchair) ಬೈಕ್‌ಗಳನ್ನು ಅಥಣಿ ಶಾಸಕ ಲಕ್ಷ್ಮಣ ಸವದಿ (Laxman Savadi) ನೀಡಿದ್ದಾರೆ.

    ದೀಪಾವಳಿ (Deepavali) ಹಬ್ಬದ ನಿಮಿತ್ತ ವಿಶೇಷ ಚೇತನರಿಗೆ ವಿಶೇಷ ಕೊಡುಗೆ ನೀಡಿದ ಶಾಸಕ ಸವದಿ, ನಡೆಯಲಾಗದೇ ಹಾಸಿಗೆ ಮೇಲಿದ್ದ ಇಬ್ಬರಿಗೆ ಬ್ಯಾಟರಿ ಚಾಲಿತ ಗಾಲಿ ಕುರ್ಚಿ ಕೊಡುಗೆಯಾಗಿ ನೀಡಿದ್ದಾರೆ. ಅಥಣಿ ಪಟ್ಟಣದ ಅವರ ಸ್ವಗೃಹದಲ್ಲಿ ಹಬ್ಬದ ನಿಮಿತ್ತ ನಿಯೋ ಮೋಶನ್ ಕಂಪನಿಯ 1,05,000 ರೂ. ಬೆಲೆಯ 2 ಬ್ಯಾಟರಿ ಚಾಲಿತ ವಾಹನ ಕೊಡುಗೆಯಾಗಿ ನೀಡಿದ್ದಾರೆ. ಇದನ್ನೂ ಓದಿ: ಬಲಿಪಾಡ್ಯಮಿ; ಮಂತ್ರಾಲಯ ಮಠದಲ್ಲಿ ಶ್ರೀಗಳಿಂದ ವಿಶೇಷ ಮಹಾಭಿಷೇಕ

    ವಿದ್ಯುತ್ ಕಂಬದಿಂದ ಬಿದ್ದು ಬೆನ್ನುಹುರಿ ಅಪಘಾತಕ್ಕೆ ಒಳಗಾಗಿದ್ದ ಬಡಚಿ ಗ್ರಾಮದ ಬಸಪ್ಪ ಪೂಜಾರಿ ಹಾಗೂ ಹುಟ್ಟಿನಿಂದ ಪೋಲಿಯೋ ಪೀಡಿತ ದೇಸಾರಟ್ಟಿ ಗ್ರಾಮದ ಸಚ್ಚಿನ ಗಾಂವಕರ ಎಂಬವರಿಗೆ ಸವದಿ ಗಾಲಿ ಕುರ್ಚಿ ಹಸ್ತಾಂತರ ಮಾಡಿದರು. ಕಳೆದ ವರ್ಷ ದೀಪಾವಳಿ ಹಬ್ಬದ ನಿಮಿತ್ತ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದಡಿ ಬೆನ್ನುಹುರಿ ಅಪಘಾತಕ್ಕೆ ಒಳಗಾಗಿದ್ದ ಹನುಮಂತ ಕುರುಬರ ಎಂಬ ಯುವಕನಿಗೆ ಬ್ಯಾಟರಿ ಚಾಲಿತ ಗಾಲಿ ಕುರ್ಚಿಯನ್ನು ನೀಡಿದ್ದರು. ಇದನ್ನೂ ಓದಿ: ವಿದ್ಯುತ್‌ ಕಳ್ಳತನ ಆರೋಪ – ಹೆಚ್‌.ಡಿ.ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್‌ ದಾಖಲು

    ಈ ಬಾರಿ ಬೆಳಕು ಕಾರ್ಯಕ್ರಮವನ್ನು ಪ್ರೇರಣೆಯಾಗಿಸಿಕೊಂಡು ಮತ್ತಿಬ್ಬರಿಗೆ ಬ್ಯಾಟರಿ ಚಾಲಿತ ಗಾಲಿ ಕುರ್ಚಿ ಬೈಕ್ ನೀಡಿದ್ದಾರೆ. ವಿಶೇಷ ಚೇತನರಿಗೆ ಬೈಕ್ ನೀಡಿದ ಬಳಿಕ ಪಬ್ಲಿಕ್ ಟಿವಿ ಕಾರ್ಯವನ್ನು ಶಾಸಕ ಲಕ್ಷ್ಮಣ ಸವದಿ ಶ್ಲಾಘಿಸಿದ್ದು, ಅನೇಕ ನಿರ್ಗತಿಕರಿಗೆ ಬಡವರಿಗೆ ಪಬ್ಲಿಕ್ ಟಿವಿಯ ‘ಬೆಳಕು’ ಕಾರ್ಯಕ್ರಮ ನವಚೈತನ್ಯ ನೀಡುವ ಕಾರ್ಯ ಮಾಡುತ್ತಿದೆ ಎಂದರು. ಇದನ್ನೂ ಓದಿ: ಬಿಜೆಪಿಗೆ ವಿಜಯೇಂದ್ರ ಹಿಟ್ ಮ್ಯಾನ್: ಶ್ರೀರಾಮುಲು

  • ಪಬ್ಲಿಕ್ ಟಿವಿ ಮನವಿಗೆ ಸಚಿವರ ಸ್ಪಂದನೆ- ವೃದ್ಧಾಶ್ರಮಕ್ಕೆ ಅಗತ್ಯ ನೆರವು ನೀಡಲು ಸೂಚನೆ

    ಪಬ್ಲಿಕ್ ಟಿವಿ ಮನವಿಗೆ ಸಚಿವರ ಸ್ಪಂದನೆ- ವೃದ್ಧಾಶ್ರಮಕ್ಕೆ ಅಗತ್ಯ ನೆರವು ನೀಡಲು ಸೂಚನೆ

    ಮಡಿಕೇರಿ: ಗ್ಯಾಸ್ ಸಿಲಿಂಡರ್ (Gas Cylinder) ಸ್ಫೋಟಗೊಂಡು ದಂಪತಿ ಮೃತಪಟ್ಟ ಹಿನ್ನೆಲೆಯಲ್ಲಿ ಇದೀಗ ಅವರು ನಡೆಸುತ್ತಿದ್ದ ವೃದ್ಧಾಶ್ರಮ ಅನಾಥವಾಗಿದೆ.

    ಸದ್ಯ ಹಿರಿಜೀವಗಳ ಸಂಕಷ್ಟದ ಸ್ಥಿತಿಯನ್ನು ಕಂಡ ಪಬ್ಲಿಕ್ ಟಿವಿ, ತಕ್ಷಣವೇ ಕೊಡಗು ಉಸ್ತುವಾರಿ ಸಚಿವ ಹಾಗೂ ಸಣ್ಣ ನೀರಾವರಿ ಸಚಿವರಾಗಿರುವ ಬೋಸರಾಜ್ ಅವರಿಗೆ ಕರೆ ಮಾಡಿ ಆಶ್ರಮದ ಸ್ಥಿತಿ ಬಗ್ಗೆ ವಿವರಣೆ ನೀಡಿದೆ. ಈ ಬೆನ್ನಲ್ಲೇ ಉಸ್ತುವಾರಿ ಸಚಿವರು ಪಬ್ಲಿಕ್ ಟಿವಿ ಮನವಿಗೆ ಸ್ಪಂದಿಸಿ ಆಶ್ರಮಕ್ಕೆ ಯಾವುದೇ ನ್ಯೂನತೆಗಳು ಅಗದಂತೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ದಂಪತಿ ಸಾವು- ಅನಾಥವಾದ ವೃದ್ಧಾಶ್ರಮ

    ಬೆಂಗಳೂರಿನ ವಿಕಾಸಸೌಧದಲ್ಲಿ ಮಾತಾನಾಡಿದ ಅವರು, ಅನಿಲ ಸೋರಿಕೆಯಿಂದ ಉಂಟಾದ ಬೆಂಕಿ ಅವಘಡದಲ್ಲಿ ಪತಿ-ಪತ್ನಿ ಇಬ್ಬರು ಮೃತಪಟ್ಟಿರುವುದು ವಿಷಾದನೀಯ. ಆದರೆ ಪಬ್ಲಿಕ್ ಟಿವಿ ಅವರು ತಕ್ಷಣವೇ ಆಶ್ರಮ ಬಗ್ಗೆ ಮಾಹಿತಿ ನೀಡಿದ್ದು, ಎಲ್ಲಾ ರೀತಿಯಲ್ಲಿ ಆಶ್ರಮಕ್ಕೆ ಸ್ಪಂದಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಹೀಗಾಗಿ ಎಲ್ಲಾ ಅಧಿಕಾರಿಗಳು ಭೇಟಿ ನೀಡಿ ತಕ್ಷಣವೇ ಸ್ಪಂದಿಸುತ್ತಾರೆ ಎಂದು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 200 ಸಂಚಿಕೆ ಪೂರೈಸಿದ ಪಬ್ಲಿಕ್‌ ಟಿವಿಯ ಬೆಳಕು – ಕುಶಾಲನಗರ ಸರ್ಕಾರಿ ಶಾಲೆಯ ಕಂಪ್ಯೂಟರ್ ಕೊಠಡಿ ಉದ್ಘಾಟಿಸಿದ ಸಿಎಂ

    200 ಸಂಚಿಕೆ ಪೂರೈಸಿದ ಪಬ್ಲಿಕ್‌ ಟಿವಿಯ ಬೆಳಕು – ಕುಶಾಲನಗರ ಸರ್ಕಾರಿ ಶಾಲೆಯ ಕಂಪ್ಯೂಟರ್ ಕೊಠಡಿ ಉದ್ಘಾಟಿಸಿದ ಸಿಎಂ

    ಬೆಂಗಳೂರು: ಪಬ್ಲಿಕ್ ಟಿವಿ (PUBLiC TV) ಬೆಳಕು (Belaku) ಕಾರ್ಯಕ್ರಮ  200ನೇ ಸಂಚಿಕೆಯನ್ನು ಪೂರೈಸಿದೆ. ಈ ಸುಂದರ ಕ್ಷಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಸಾಕ್ಷಿಯಾಗಿದ್ದರು.

    ಪಬ್ಲಿಕ್ ಟಿವಿ ಕಚೇರಿಯಲ್ಲಿ ನಡೆದ 200ನೇ ಕಾರ್ಯಕ್ರಮದಲ್ಲಿ ಭಾಗಿಯಾದ ಮುಖ್ಯಮಂತ್ರಿ ಪಬ್ಲಿಕ್ ಟಿವಿಯ ಒಂದೊಳ್ಳೆ ಕಾರ್ಯಕ್ರಮವನ್ನು ಶ್ಲಾಘಿಸಿದರು. ಈ ವೇಳೆ ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ (Kushalnagar Govt Primary School) ನಿರ್ಮಿಸಲಾದ ಸುಸಜ್ಜಿತ ಕಂಪ್ಯೂಟರ್ ಕೊಠಡಿಯನ್ನು (Computer Room) ಮುಖ್ಯಮಂತ್ರಿಗಳು ವರ್ಚುಯಲ್ ಮೂಲಕ ಉದ್ಘಾಟಿಸಿದರು.

    ಈ ಕ್ಷಣಕ್ಕೆ ಶಾಲೆಯ 400 ಮಕ್ಕಳು, ಹಳೆಯ ವಿದ್ಯಾರ್ಥಿಗಳು, ಶಿಕ್ಷಣಾಧಿಕಾರಿಗಳು, ಕೊಡಗು ಜಿಲ್ಲಾ ಪಂಚಾಯತ್ ಸಿಇಓ ಸೇರಿ ಸಾರ್ವಜನಿಕರು ಸಾಕ್ಷಿಯಾದರು. ಇದನ್ನೂ ಓದಿ: ಕಳೆದ 14 ವರ್ಷಗಳಿಂದ ಇದ್ದು, ಭಯ ಇಲ್ಲ: ಇಸ್ರೇಲಿನಲ್ಲಿದ್ದ ಕನ್ನಡಿಗನ ಮಾತು

    ಕಂಪ್ಯೂಟರ್ ಕಲಿಯಲು ಅವಕಾಶ ಮಾಡಿಕೊಟ್ಟ ಪಬ್ಲಿಕ್ ಟಿವಿಗೆ ಮಕ್ಕಳು ಧನ್ಯವಾದ ಹೇಳಿದರು. ಕಳೆದ ಜನವರಿ ತಿಂಗಳ ಬೆಳಕು ಕಾರ್ಯಕ್ರಮದಲ್ಲಿ ಕುಶಾಲನಗರದ ಸರ್ಕಾರಿ ಶಾಲೆಯಲ್ಲಿ ಕಂಪ್ಯೂಟರ್ ಕೊಠಡಿ ಇಲ್ಲದ ಬಗ್ಗೆ ವರದಿ ಆಗಿತ್ತು. ಹಿರಿಯ ವಿದ್ಯಾರ್ಥಿಗಳು ಕಂಪ್ಯೂಟರ್ ರೂಂ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದರು. ನಾವೇ ನಿರ್ಮಿಸಿಕೊಡುತ್ತೇವೆ ಎಂಬ ಭರವಸೆಯನ್ನು ಪಬ್ಲಿಕ್‌ ಟಿವಿ ನೀಡಿತ್ತು. ಈ ಭರವಸೆಯಂತೆ ಕಂಪ್ಯೂಟರ್‌ ಕೊಠಡಿಯನ್ನು ನಿರ್ಮಿಸಿಕೊಡುವ ಮೂಲಕ ಪಬ್ಲಿಕ್ ಟಿವಿ ನಡೆದುಕೊಂಡಿದೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯಾವುದಕ್ಕೂ ಡಿಸ್ಟರ್ಬ್ ಆಗಲ್ಲ, ಮ್ಯಾನಿಪುಲೇಟ್ ಮಾಡಲ್ಲ- ಪಬ್ಲಿಕ್ ಟಿವಿಗೆ ಸಿಎಂ EXCLUSIVE ಸಂದರ್ಶನ

    ಯಾವುದಕ್ಕೂ ಡಿಸ್ಟರ್ಬ್ ಆಗಲ್ಲ, ಮ್ಯಾನಿಪುಲೇಟ್ ಮಾಡಲ್ಲ- ಪಬ್ಲಿಕ್ ಟಿವಿಗೆ ಸಿಎಂ EXCLUSIVE ಸಂದರ್ಶನ

    ಬೆಂಗಳೂರು: ಯಾವುದಕ್ಕೂ ಡಿಸ್ಟರ್ಬ್ ಆಗಲ್ಲ, ಮ್ಯಾನಿಪುಲೇಟ್ ಮಾಡಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

    ಬೆಳಕು 200ನೇ ಸಂಚಿಕೆಯ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಸಂಸ್ಥಾಪಕ ಹೆಚ್.ಆರ್ ರಂಗನಾಥ್ (H R Ranganath) ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಎಕ್ಸ್ ಕ್ಲೂಸೀವ್ ಆಗಿ ಸಂದರ್ಶನ ಮಾಡಿದ್ದಾರೆ. ಈ ಇಂಟರ್ ವ್ಯೂವ್‍ನಲ್ಲಿ ಸಿಎಂ ಅವರು ಹಲವಾರು ಸ್ಫೋಟಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

     ನಾನು ಯಾವುದಕ್ಕೂ ಡಿಸ್ಟರ್ಬ್ ಆಗಲ್ಲ. ತಲೆ ಕೆಡಿಸಿಕೊಳ್ಳಲ್ಲ, ಮ್ಯಾನಿಪುಲೇಟ್ ಮಾಡಲ್ಲ. ನನ್ನ ನಂತರವು ನನಗೆ ಜವಾಬ್ದಾರಿ ಇದೆ, ಇದ್ದೇ ಇರುತ್ತೆ. ಅಧಿಕಾರ ಇರಲಿ, ಬಿಡಲಿ ನನಗೆ ಆ ಜವಾಬ್ದಾರಿ ಇರುತ್ತೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಒಟ್ಟಿನಲ್ಲಿ ಐ ಡೋಂಟ್ ಕೇರ್ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಈ ಮಾತನ್ನು ಸಿಎಂ ಅವರು ಹೇಳಿದ್ದು ಯಾರಿಗೆ..?, ಎದುರಾಳಿಗಳಿಗಾ..? ಅಥವಾ ಹಿತಶತ್ರುಗಳಿಗಾ ಎಂಬ ಪ್ರಶ್ನೆ ಸಹಜವಾಗಿಯೇ ನಿಮ್ಮಲ್ಲಿ ಮೂಡುತ್ತದೆ. ನಿಮ್ಮ ಎಲ್ಲಾ ಕುತೂಹಲದ ಪ್ರಶ್ನೆಗಳಿಗೆ ಇಂದು ಸಂಜೆ ನಿಮ್ಮ ಪಬ್ಲಿಕ್ ಟಿವಿಯಲ್ಲಿ ಉತ್ತರ ಸಿಗಲಿದೆ. ಇದನ್ನೂ ಓದಿ: ಅಧಿಕಾರ ಬಿಡುತ್ತೇನೆ ಅಂತ ಎಲ್ಲೂ ಹೇಳಿಲ್ಲ: ಪೂರ್ಣಾವಧಿ ಸಿಎಂ ಪ್ರಶ್ನೆಗೆ ಸಿದ್ದರಾಮಯ್ಯ ಮಾತು

    ಈ ಸಂದರ್ಶನದ ಮೂಲಕ ಸಿಎಂ ಯಾರಿಗೆಲ್ಲ ರಾಜಕೀಯ ಸಂದೇಶ ಕೊಟ್ಟರು..? ರಾಜಕೀಯ ತಿರುವು ಸಿಗುತ್ತಾ..?. ಹಾಗಾದ್ರೆ ವಿಶೇಷ ಸಂದರ್ಶನದಲ್ಲಿ ಸಿಎಂ ಹೇಳಿದ್ದೇನು ಎಂಬ ಕುತೂಹಲ ನಿಮ್ಮಲ್ಲಿದ್ದರೆ ಇಂದು ಸಂಜೆ 7 ಗಂಟೆಗೆ ಸಂದರ್ಶನದ ಸಂಪೂರ್ಣ ವೀಡಿಯೋ ನಿಮ್ಮ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗಲಿದೆ. ತಪ್ಪದೇ ವೀಕ್ಷಿಸಿ..

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಧಿಕಾರ ಬಿಡುತ್ತೇನೆ ಅಂತ ಎಲ್ಲೂ ಹೇಳಿಲ್ಲ: ಪೂರ್ಣಾವಧಿ ಸಿಎಂ ಪ್ರಶ್ನೆಗೆ ಸಿದ್ದರಾಮಯ್ಯ ಮಾತು

    ಅಧಿಕಾರ ಬಿಡುತ್ತೇನೆ ಅಂತ ಎಲ್ಲೂ ಹೇಳಿಲ್ಲ: ಪೂರ್ಣಾವಧಿ ಸಿಎಂ ಪ್ರಶ್ನೆಗೆ ಸಿದ್ದರಾಮಯ್ಯ ಮಾತು

    ಬೆಂಗಳೂರು: ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನದ ಅವಧಿ ವಿಚಾರವಾಗಿ ಇದ್ದ ಗೊಂದಲಕ್ಕೆ ಸಿಎಂ ಸಿದ್ದರಾಮಯ್ಯ ಅವರು ತೆರೆ ಎಳೆದಿದ್ದಾರೆ. ಅಧಿಕಾರ ಬಿಡುತ್ತೇನೆ ಅಂತ ನಾನು ಎಲ್ಲೂ ಹೇಳಿಲ್ಲ ಎಂದು ಹೇಳುವ ಮೂಲಕ ಪೂರ್ಣಾವಧಿ ಸಿಎಂ ವಿಚಾರಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.

    ಬೆಳಕು (Belaku) 200ನೇ ಸಂಚಿಕೆಯ ವಿಶೇಷ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಈ ಹೇಳಿಕೆ ನೀಡಿದ್ದಾರೆ. ವಿಶೇಷ ಸಂದರ್ಶನದ ವೇಳೆ ಪಬ್ಲಿಕ್‌ ಟಿವಿ ಮುಖ್ಯಸ್ಥರಾದ ಹೆಚ್‌.ಆರ್‌.ರಂಗನಾಥ್‌ ಅವರು, ನಿಮ್ಮನ್ನು ಸಿಎಂ ಮಾಡಿದ ಮೇಲೆ ಸ್ಥಾನವನ್ನು ಬಿಡಲು ಹೇಗೆ ಸಾಧ್ಯ ಎಂದು ಪ್ರಶ್ನೆ ಕೇಳಿದರು. ಅದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ಅವರು, ಈ ಅವಧಿ ಮುಗಿದ ಮೇಲೆ ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿ ಆಗುತ್ತೇನೆ. ಆದರೆ ಅಧಿಕಾರ ಬಿಡುತ್ತೇನೆ ಅಂತ ಎಲ್ಲೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ನಾನು ಜನರಿಗೆ ಮತ್ತು ನಮ್ಮ ಕ್ಷೇತ್ರದಲ್ಲೂ ಹೇಳಿದ್ದೇನೆ. ಈ ಅವಧಿ ಮುಗಿದ ಮೇಲೆ ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಅಷ್ಟೆ. ಅಧಿಕಾರ ಬಿಡುತ್ತೇನೆ ಎಂದು ಹೇಳಿಲ್ಲ ಎನ್ನುವ ಮೂಲಕ ಇದುವರೆಗೆ ಇದ್ದ ಸಿಎಂ ಸ್ಥಾನದ ಗೊಂದಲಗಳಿಗೆ ಸಿದ್ದರಾಮಯ್ಯ ತೆರೆ ಎಳೆದಿದ್ದಾರೆ.

    ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಯಾರು ಸಿಎಂ ಆಗುತ್ತಾರೆ ಎಂಬ ಚರ್ಚೆ ಜೋರಾಗಿತ್ತು. ಆಗ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಹೆಸರು ಕೇಳಿಬಂದಿತ್ತು. ಈ ಇಬ್ಬರೂ ನಾಯಕರು ಸಿಎಂ ರೇಸ್‌ನಲ್ಲಿದ್ದಾರೆ ಎಂದು ಹೇಳಲಾಗಿತ್ತು. ಕೊನೆಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಪಟ್ಟ ಅಲಂಕರಿಸಿದರು. ಆಗಲೂ ಅವರು ಎರಡೂವರೆ ವರ್ಷ ಅವಧಿಗೆ ಸಿಎಂ ಆಗಿರುತ್ತಾರೆ. ಮತ್ತೆ ಇನ್ನರ್ಧ ಅವಧಿಗೆ ಡಿ.ಕೆ.ಶಿವಕುಮಾರ್‌ ಸಿಎಂ ಆಗಬಹುದು ಎಂಬ ಮಾತು ಕೂಡ ಕೇಳಿಬಂದಿತ್ತು.

    ಸಿಎಂ ಸ್ಥಾನ ಅವಧಿ ವಿಚಾರದ ಗೊಂದಲಕ್ಕೆ ಸಂಬಂಧಿಸಿದಂತೆ ಬೆಳಕು ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಶ್ನೆ ಕೇಳಲಾಯಿತು. ಈ ಅವಧಿಯಲ್ಲಿ ನಾನು ಅಧಿಕಾರ ಬಿಡಲ್ಲ ಎನ್ನುವ ಮೂಲಕ ಪೂರ್ಣಾವಧಿ ಸಿಎಂ ನಾನೇ ಎಂಬುದನ್ನು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]